Tag: patna

  • ರಾತ್ರೋ ರಾತ್ರಿ ಬಿಹಾರದಲ್ಲಿ ನಿವೃತ್ತ ಆಯುಕ್ತ, ಪತ್ನಿಯ ಕೊಲೆ!

    ರಾತ್ರೋ ರಾತ್ರಿ ಬಿಹಾರದಲ್ಲಿ ನಿವೃತ್ತ ಆಯುಕ್ತ, ಪತ್ನಿಯ ಕೊಲೆ!

    ಪಾಟ್ನಾ: ನಿವೃತ್ತ ಆಯುಕ್ತ ಹಾಗೂ ಅವರ ಪತ್ನಿಯನ್ನು ಕೊಲೆ ಮಾಡಿದ ಘಟನೆ ಗುರುವಾರ ರಾತ್ರಿ ಬಿಹಾರ ರಾಜಧಾನಿ ಪಾಟ್ನಾ ಸಮೀಪದ ಬುದ್ಧ ಕಾಲೊನಿಯಲ್ಲಿ ನಡೆದಿದೆ.

    ನೀರಾವರಿ ಇಲಾಖೆಯ ನಿವೃತ್ತ ಆಯುಕ್ತ ಹರೇಂದ್ರ ಪ್ರಸಾದ್ (82) ಹಾಗೂ ಅವರ ಪತ್ನಿ ಸಾಧನಾ ಗುಪ್ತಾ ಕೊಲೆಯಾದವರು. ಶುಕ್ರವಾರ ಬೆಳಗ್ಗೆ ತನಿಖೆ ಆರಂಭಿಸಿದ ಪೊಲೀಸರು ಚಾಲಕ ಸೇರಿದಂತೆ ಒಟ್ಟು 4 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಹರೇಂದ್ರ ಪ್ರಸಾದ್ ಹಾಗೂ ಅವರ ಪತ್ನಿಯನ್ನು ಸಂಬಂಧಿಕರು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಆಸ್ಪತ್ರೆಗೆ ತರುವ ಮುನ್ನವೇ ಅವರು ಮೃತಪಟ್ಟಿದ್ದಾರೆ ಅಂತ ವೈದ್ಯರು ಖಚಿತಪಡಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಮನು ಮಹಾರಾಜ್ ಮಾಹಿತಿ ನೀಡಿದ್ದಾರೆ.

    ಪ್ರಾಥಮಿಕ ವರದಿಯ ಪ್ರಕಾರ ದಂಪತಿಯನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದ್ದು, ಮೃತ ದೇಹಗಳ ಮೇಲೆ ಹಲ್ಲೆ ಮಾಡಿರುವ ಗುರುತುಗಳಿವೆ ಹಾಗೂ ಇಬ್ಬರ ತಲೆಗೂ ಬಲವಾಗಿ ಹೊಡೆಯಲಾಗಿದೆ ಎಂದು ಮಹಾರಾಜನ್ ತಿಳಿಸಿದ್ದಾರೆ.

    ತನಿಖೆ ಆರಂಭವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ ಚಾಲಕ ಸೇರಿದಂತೆ ನಾಲ್ವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸಂಬಂಧಿಕರು ಕೂಡಾ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ ಎಂದು ವರದಿಯಾಗಿದೆ.

    ಕೊಲೆಯಿಂದಾಗಿ ಸ್ಥಳೀಯರು ಬೆಚ್ಚಿಬಿದ್ದಿದ್ದು, ಬುದ್ಧ ಕಾಲೊನಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಖಿ ಕಟ್ಟಲು ಬಂದಾಕೆಯನ್ನೇ 2 ದಿನ ಕೂಡಿಟ್ಟು ರೇಪ್ ಮಾಡ್ದ!

    ರಾಖಿ ಕಟ್ಟಲು ಬಂದಾಕೆಯನ್ನೇ 2 ದಿನ ಕೂಡಿಟ್ಟು ರೇಪ್ ಮಾಡ್ದ!

    ಪಾಟ್ನಾ: ಸಂಬಂಧಿಯೊಬ್ಬ ರಾಖಿ ಕಟ್ಟಲು ಬಂದಿದ್ದ 15 ವರ್ಷದ ಹುಡುಗಿಯನ್ನು ಎರಡು ದಿನ ಕೂಡಿ ಹಾಕಿ ಅತ್ಯಾಚಾರ ಎಸಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ಈ ಘಟನೆ ಬಿಹಾರದ ಬಾಂದಾದ ತಿಂಡ್ವಾರಿ ಪ್ರದೇಶದಲ್ಲಿ ಆಗಸ್ಟ್ 26 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

    ಆಗಸ್ಟ್ 26ರಂದು ರಾಖಿ ಹಬ್ಬದ ಪ್ರಯುಕ್ತ ರಾಖಿ ಕಟ್ಟಲು ಸಂತ್ರಸ್ತೆ ತನ್ನ 21 ವರ್ಷದ ಸಂಬಂಧಿಕನಾದ ಆರೋಪಿ ಮೋಹಿತ್‍ನ ಮನೆಗೆ ಹೋಗಿದ್ದಾಳೆ. ಆದರೆ ಆತ ಸಂತ್ರಸ್ತೆಯನ್ನು ತನ್ನ ಮನೆಯಲ್ಲಿಯೇ ಕೂಡಿ ಹಾಕಿಕೊಂಡು ಎರಡು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾನೆ. ಇತ್ತ ಎರಡು ದಿನಗಳಾದರು ಮಗಳು ಬಂದಿಲ್ಲ ಎಂದು ಹುಡುಕಾಡಿದ್ದಾರೆ. ಕೊನೆಗೆ ಮೋಹಿತ್ ಮೇಲೆ ಅನುಮಾನಗೊಂಡು ಈ ಕುರಿತು ಸಂತ್ರಸ್ತೆಯ ಕುಟುಂಬದವರು ಮೋಹಿತ್ ವಿರುದ್ಧ ಭಾನುವಾರ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಈ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪೊಲೀಸರು ಸಂತ್ರಸ್ತೆಯ ಕುಟುಂಬದವರು ನೀಡಿದ್ದ ದೂರನ್ನಾಧರಿಸಿ ಆರೋಪಿ ಮೋಹಿತ್ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿ ಮೋಹಿತ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 15 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ: ಬೌದ್ಧ ಸನ್ಯಾಸಿ ಅರೆಸ್ಟ್

    15 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ: ಬೌದ್ಧ ಸನ್ಯಾಸಿ ಅರೆಸ್ಟ್

    ಪಾಟ್ನಾ: ಬಿಹಾರದ ಬೋಧ್ ಗಯಾದಲ್ಲಿ 15 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ಬೌದ್ಧ ಸನ್ಯಾಸಿಯನ್ನು ಬುಧವಾರ ಪೋಲಿಸರು ಬಂಧಿಸಿದ್ದಾರೆ.

    ಬೋಧ್‍ಗಯಾದಲ್ಲಿನ ಮಾಸ್ತಿಪುರ್ ಗ್ರಾಮದಲ್ಲಿ ಸನ್ಯಾಸಿ, ಪ್ರಸನ್ನ ಜ್ಯೋತಿ ಬೌದ್ಧ ಶಾಲೆ ಮತ್ತು ಧ್ಯಾನ ಕೇಂದ್ರ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದನು. ಆ ಕೇಂದ್ರದಲ್ಲಿ ಅಸ್ಸಾಂನ ಕರ್ಬಿ ಆಂಗ್ಲೋಂಗ್ ಜಿಲ್ಲೆಯ ಮಕ್ಕಳು ಅಧ್ಯಯನ ಮಾಡುತ್ತಿದ್ದರು. ಸನ್ಯಾಸಿ ಈ ಬಾಲಕರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಡೆಪ್ಯೂಟಿ ಎಸ್ಪಿ ರಾಜ್ಕುಮಾರ್ ಷಾ ಅವರು ಈ ಘಟನೆ ಕುರಿತು ಸನ್ಯಾಸಿಯನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ಅನಿಲ್ ಕುಮಾರ್ ಹೇಳಿದ್ದಾರೆ.

    6 ರಿಂದ 12 ವರ್ಷದ ಚಿಕ್ಕ ಮಕ್ಕಳನ್ನು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವಂತೆ ಸನ್ಯಾಸಿ ಒತ್ತಡ ಹಾಕುತ್ತಿದ್ದ ಎಂದು ಬಾಲಕರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬೌದ್ಧ ಶಾಲೆ ಮತ್ತು ಧ್ಯಾನ ಕೇಂದ್ರವನ್ನು ನಡೆಸುತ್ತಿದ್ದ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಿಳೆಯನ್ನ ನಗ್ನಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ್ರು!

    ಮಹಿಳೆಯನ್ನ ನಗ್ನಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ್ರು!

    ಪಾಟ್ನಾ: ಯುವಕನೊಬ್ಬನ ಕೊಲೆಗೈದಿದ್ದಾಳೆ ಎಂದು ಆರೋಪಿಸಿ ಮಹಿಳೆಯೊಬ್ಬರನ್ನು ಬೆತ್ತಲೆ ಮಾಡಿ ಆಕೆಯ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ಮಾಡಿರುವ ಘಟನೆ ಬಿಹಾರದ ಬೈಯ್ಯಾ ಪಟ್ಟಣದಲ್ಲಿ ನಡೆದಿದೆ.

    ವಿಮ್ಲೇಶ್ ಸಾವ್ ಕೊಲೆಯಾದ ಯುವಕ. ಈತನ ಮೃತದೇಹ ಇಂದು ಬೆಳಗ್ಗೆ ರೈಲ್ವೆ ಟ್ರ್ಯಾಕ್ ಬಳಿ ಪತ್ತೆಯಾಗಿದೆ. ಯುವಕನ ಕೊಲೆ ವಿಚಾರಕ್ಕೆ ಭೋಜ್ಪರಿ ಜಿಲ್ಲೆಯ ಗ್ರಾಮದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಜನರು ಅಂಗಡಿಗಳು ಮತ್ತು ಪೊಲೀಸ್ ವಾಹನಗಳು ಸೇರಿದಂತೆ ಅನೇಕ ವಾಹನಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದ್ದಾರೆ.

    ಗ್ರಾಮಸ್ಥರು ಈ ಯುವಕನ ಕೊಲೆ ಕೇಸಿನಲ್ಲಿ ಮಹಿಳೆಯ ಕೈವಾಡವಿದೆ ಎಂದು ಶಂಕಿಸಿ, ಆಕೆಯನ್ನು ಮನೆಯಿಂದ ಹೊರಗೆ ಎಳೆದು ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಆಕೆಯನ್ನು ನಗ್ನಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೆಷನ್ ಆಫೀಸರ್, ಸರ್ಕಾರಿ ರೈಲ್ವೆ ಇನ್ ಚಾರ್ಚ್ ಆಫೀಸರ್ ಸೇರಿದಂತೆ ಒಟ್ಟು 8 ಪೊಲೀಸ್ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಲಾಗಿದ್ದು, ಪ್ರಕರಣದ ತನಿಖೆಯನ್ನು ಭೋಜ್ಪುರ ಪೊಲೀಸ್ ಠಾಣೆಯ ಮೇಲ್ವಿಚಾರಕ ಅವಕಾಶ್ ಕುಮಾರ್ ಅವರಿಗೆ ವಹಿಸಿದ್ದಾರೆ.

    ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಇದೇ ವೇಳೆ ತನ್ನ ಮೇಲೆ ಕೇಳಿ ಬಂದಿರುವ ಆರೋಪವನ್ನ ಮಹಿಳೆ ತಳ್ಳಿಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಳವೆ ಬಾವಿಯೊಳಗೆ ಬಿದ್ದ 3 ವರ್ಷದ ಬಾಲಕಿ ಸಾವು ಗೆದ್ದಳು!

    ಕೊಳವೆ ಬಾವಿಯೊಳಗೆ ಬಿದ್ದ 3 ವರ್ಷದ ಬಾಲಕಿ ಸಾವು ಗೆದ್ದಳು!

    – 30 ಗಂಟೆಗಳ ಕಾರ್ಯಾಚರಣೆ ಯಶಸ್ವಿ

    ಪಾಟ್ನಾ: ಮನೆಯ ಬಳಿ ಆಟವಾಡುತ್ತಾ 110 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕಿಯನ್ನು ಯಶಸ್ವಿ ಕಾರ್ಯಾಚರಣೆ ನಡೆಸಿ ರಕ್ಷಿಸಿರುವ ಘಟನೆ ಬಿಹಾರ್‍ನ ಮುಂಗೇರಾ ಜಿಲ್ಲೆಯಲ್ಲಿ ನಡೆದಿದೆ.

    ಮೂರು ವರ್ಷದ ಸನ್ನೊ ಮಂಗಳವಾರ ಸಂಜೆ 4 ಗಂಟೆ ವೇಳೆ ಮನೆಯ ಬಳಿ ಇದ್ದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು. ವಿಷಯ ತಿಳಿದ ಪೋಷಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ರಾಷ್ಟ್ರಿಯ ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯವನ್ನು ಆರಂಭಿಸಿತ್ತು. ಸತತ 30 ಗಂಟೆಗಳ ಕಾರ್ಯಾಚರಣೆ ಬಳಿಕ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.

    ಕೊಳವೆ ಬಾವಿಯಿಂದ ಸನ್ನೋಳನ್ನು ರಕ್ಷಿಸಿದ ಬಳಿಕ ತಜ್ಞ ವೈದ್ಯರು ಬಾಲಕಿಯ ಆರೋಗ್ಯ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಾಲಕಿಯ ಆರೋಗ್ಯ ಉತ್ತಮವಾಗಿದ್ದು, ಬಳಿಕ ಸನ್ನೋಳನ್ನು ಪೋಷಕರ ವಶಕ್ಕೆ ನೀಡಿದ್ದಾರೆ.

    ಕಾರ್ಯಾಚರಣೆ ವೇಳೆ ರಕ್ಷಣಾ ತಂಡ ಬಾಲಕಿ ಉಸಿರಾಟಕ್ಕೆ ಆಮ್ಲಜನಕವನ್ನು ಪೂರೈಸಿತ್ತು. ಅಲ್ಲದೇ ಬಾಲಕಿಯು ಇನ್ನೂ ಕೆಳಗೆ ಕುಸಿಯದಂತೆ ಮುಂಜಾಗ್ರತೆ ವಹಿಸಿದ್ದರು. ಬಳಿಕ ಕೊಳವೆಬಾವಿಯ ಪಕ್ಕದಲ್ಲಿ ಜೆಸಿಬಿ ಯಂತ್ರಗಳ ಸಹಾಯದಿಂದ ಬೃಹತ್ ಹೊಂಡ ನಿರ್ಮಿಸಿ ಬಾಲಕಿಯನ್ನು ಆದಷ್ಟು ಬೇಗ ರಕ್ಷಿಸುವ ಕಾರ್ಯ ನಡೆಸಿದ್ದರು.

    ಬಾಲಕಿ ಮಂಗಳವಾರ ತನ್ನ ಪೋಷಕರೊಂದಿಗೆ ಮುಂಗೇರಾದ ಮುರ್ಗಿಚಕ್ ಎಂಬಲ್ಲಿರುವ ಅಜ್ಜನ ಮನೆಗೆ ಬಂದಿದ್ದಳು. ಈ ವೇಳೆ ಮನೆಯ ಹತ್ತಿರ ಆಟವಾಡುತ್ತಿರುವಾಗ ಕೊಳವೆ ಬಾವಿಗೆ ಬಿದ್ದಿದ್ದಳು. ಕೊಳವೆಬಾವಿಯಲ್ಲಿ ಬಾಲಕಿಯು ಅಳುತ್ತಿರುವ ಧ್ವನಿ ಕೇಳಿದ ಬಳಿಕ ಬಾಲಕಿ ಜೀವಂತವಾಗಿದ್ದು ಖಚಿತವಾಗಿತ್ತು. ಕೂಡಲೇ ಎಚ್ಚೆತ್ತ ರಕ್ಷಣಾ ಪಡೆಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು.

  • ಆಟವಾಡುತ್ತಾ 110 ಅಡಿ ಆಳದ ಕೊಳವೆಬಾವಿಗೆ ಬಿದ್ದ ಬಾಲಕಿ

    ಆಟವಾಡುತ್ತಾ 110 ಅಡಿ ಆಳದ ಕೊಳವೆಬಾವಿಗೆ ಬಿದ್ದ ಬಾಲಕಿ

    ಪಾಟ್ನಾ: ಆಟವಾಡುತ್ತಾ ಮೂರು ವರ್ಷದ ಬಾಲಕಿಯು 110 ಅಡಿ ಆಳದ ಬೋರ್‍ವೆಲ್‍ಗೆ ಬಿದ್ದ ಘಟನೆ ಬಿಹಾರ್‍ನ ಮುಂಗೇರಾ ಜಿಲ್ಲೆಯಲ್ಲಿ ನಡೆದಿದೆ.

    ಮೂರು ವರ್ಷದ ಸನ್ನೊ ಕೊಳವೆಬಾವಿಗೆ ಬಿದ್ದ ಬಾಲಕಿ. ಮಂಗಳವಾರ ತನ್ನ ಪೋಷಕರೊಂದಿಗೆ ಸನ್ನೊ ಅಜ್ಜನಾದ ಉಮೇಶ್ ನಂದನ್ ರವರನ್ನು ನೋಡಲು ಮುಂಗೇರಾದ ಮುರ್ಗಿಚಕ್ ಏರಿಯಾಕ್ಕೆ ಬಂದಿದ್ದಳು. ಈ ವೇಳೆ ಮನೆಯ ಹತ್ತಿರ ಆಟವಾಡುತ್ತಿರುವಾಗ ಸಂಜೆ 4ರ ಸುಮಾರಿಗೆ ಮನೆಯ ಬಳಿಯಿದ್ದ ಸುಮಾರು 110 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದಾಳೆ.

    ವಿಷಯ ತಿಳಿದ ಪೋಷಕರು ಕೂಡಲೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಕೊಳವೆಬಾವಿಯಲ್ಲಿ ಬಾಲಕಿಯು ಅಳುತ್ತಿರುವ ಧ್ವನಿ ಕೇಳಿದೆ. ಕೂಡಲೇ ಎಚ್ಚೆತ್ತ ರಕ್ಷಣಾ ಪಡೆಯ ಅಧಿಕಾರಿಗಳು ಕೊಳವೆಬಾವಿಯ ಸುತ್ತ ಬಿಗಿಭದ್ರತೆ ಕೈಗೊಂಡಿದ್ದಾರೆ.

    ಘಟನೆ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ರಾಜ್ಯ ವಿಪತ್ತು ನಿರ್ವಹಣ ತಂಡದ ಅಧಿಕಾರಿಯಾದ ಸಂಜೀವ್ ಕುಮಾರ್ ರವರು, ಬಾಲಕಿಗೆ ಈಗಾಗಲೇ ಆಮ್ಲಜನಕವನ್ನು ಪೂರೈಕೆ ಮಾಡಿದ್ದು, ಬಾಲಕಿಯು ಇನ್ನೂ ಕೆಳಗೆ ಕುಸಿಯದಂತೆ ಮುಂಜಾಗ್ರತೆ ವಹಿಸಿದ್ದೇವೆ. ಅಲ್ಲದೇ ಕೂಡಲೇ ಆಕೆಯನ್ನು ಕೊಳವೆಬಾವಿಯಿಂದ ಹೊರತೆಗೆಯುತ್ತೇವೆ ಎಂದು ಹೇಳಿದ್ದಾರೆ.

    ರಾಜ್ಯ ವಿಪತ್ತು ನಿರ್ವಹಣಾ ತಂಡ ಈಗಾಗಲೇ ಕೊಳವೆಬಾವಿಯ ಪಕ್ಕದಲ್ಲಿ ಜೆಸಿಬಿ ಯಂತ್ರಗಳ ಸಹಾಯದಿಂದ 40 ಅಡಿಗೂ ಹೆಚ್ಚಿನ ಬೃಹತ್ ಹೊಂಡ ನಿರ್ಮಿಸಿದ್ದು, ಬಾಲಕಿಯನ್ನು ಆದಷ್ಟು ಬೇಗ ರಕ್ಷಿಸುವುದಾಗಿ ತಿಳಿಸಿವೆ.

    ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ವರಿಷ್ಠಾಧಿಕಾರಿಯಾದ ಹರಿಶಂಕರ್ ಕುಮಾರ್ ರವರು, ಈಗಾಗಲೇ ಘಟನಾ ಸ್ಥಳದಲ್ಲಿ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದು, 2 ಪೊಲೀಸ್ ತಂಡಗಳನ್ನು ಸ್ಥಳದಲ್ಲಿ ನಿಯೋಜಿಸಿದ್ದೇವೆ. ರಕ್ಷಣಾ ಕಾರ್ಯಚರಣೆಗೆ ಪೊಲೀಸ್ ಇಲಾಖೆಯಿಂದ ಬೇಕಾಗುವ ಸಹಾಯವನ್ನು ಮಾಡಲಾಗುತ್ತದೆ ಎಂದು ಹೇಳಿದರು.

  • ಫಸ್ಟ್ ನೈಟಿನಲ್ಲೇ ವರ, ಕುಟುಂಬಕ್ಕೆ ಶಾಕ್ ಕೊಟ್ಟ ವಧು!

    ಫಸ್ಟ್ ನೈಟಿನಲ್ಲೇ ವರ, ಕುಟುಂಬಕ್ಕೆ ಶಾಕ್ ಕೊಟ್ಟ ವಧು!

    ಪಾಟ್ನಾ: ಮೊದಲ ರಾತ್ರಿಯಂದೇ ನವವಿವಾಹಿತೆ ಪರಾರಿಯಾಗಿ ಕುಟುಂಬದವರಿಗೆ ಶಾಕ್ ಕೊಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ಈ ಘಟನೆಯು ಬಿಹಾರದ ಭಬುವಾದಲ್ಲಿ ಕೆಲವು ದಿನಗಳ ಹಿಂದೆ ನಡೆದಿದ್ದು, ಶುಕ್ರವಾರ ಬೆಳಕಿಗೆ ಬಂದಿದೆ. ಸಂಗೀತಾ ಕುಮಾರಿ ಪರಾರಿಯಾಗಿರುವ ನವವಿವಾಹಿತೆ. ಈಕೆ ಮದುವೆಯಾಗಿ ಮೊದಲ ರಾತ್ರಿಯಂದೇ ಆಭರಣಗಳು ಸೇರಿದಂತೆ 20 ಸಾವಿರ ರೂ. ನಗದು ಮತ್ತು ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ.

    ಇತ್ತ ನಾಪತ್ತೆಯಾದ ವಧುನಿಂದ ಆಘಾತಗೊಂಡ ವರ ಮತ್ತು ವರನ ತಾಯಿ, ಹುಡುಗಿ ಮತ್ತು ಹುಡುಗಿಯ ಕುಟುಂಬದವರು ನಮಗೆ ಮೋಸ ಮಾಡಿ ಮದುವೆ ಮಾಡಿಕೊಟ್ಟಿದ್ದಾರೆ. ಅವರು ನಮಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈಗ ನಮಗೆ ನ್ಯಾಯ ಬೇಕು ಎಂದು ಪೊಲೀಸ್ ಮೆಟ್ಟಿಲೀರಿದ್ದಾರೆ.

    ಘಟನೆಯ ವಿವರ?:
    ವರ ತಾಯಿ ತನ್ನ ಮಗ ಪಂಕಜ್ ಕುಮಾರ್ ಗೆ ಹುಡುಗಿಯನ್ನು ಹುಡುಕುತ್ತಿದ್ದರು. ಅದೇ ರೀತಿ ಸಂಗೀತಾ ಕುಮಾರಿಗೂ ಹುಡುಗನನ್ನು ಹುಡುಕುತ್ತಿದ್ದರು. ಬಳಿಕ ಅವರ ಸಂಬಂಧಿಕರು ಸಂಗೀತಾ ಸಂಬಂಧವನ್ನು ತಂದಿದ್ದಾರೆ. ಬಳಿಕ ಎರಡು ಕುಟುಂಬದವರು ಒಪ್ಪಿ ಸೋಮವಾರ ಭಬುವಾ ಹೊರವಲಯದಲ್ಲಿರುವ ಒಂದು ದೇವಾಲಯದಲ್ಲಿ ಇಬ್ಬರಿಗೂ ಸರಳವಾಗಿ ಮದುವೆ ಮಾಡಿದ್ದಾರೆ.

    ಸೋಮವಾರ ರಾತ್ರಿಯೇ ಕುಟುಂಬದವರು ಮೊದಲ ರಾತ್ರಿಗೆ ಸಿದ್ಧಪಡಿಸಿದ್ದಾರೆ. ಆಗ ಸಂಗೀತಾ ತನಗೆ ಮುಟ್ಟಾಗಿದೆ ಅಂತ ಕಾರ್ಯಕ್ರಮವನ್ನು ರದ್ದು ಮಾಡಿಸಿದ್ದಾಳೆ. ಬಳಿಕ ತನಗೆ ಬೇರೆ ರೂಮ್ ಬೇಕೆಂದು ಕೇಳಿ ಒಬ್ಬಳೇ ಕೊಠಡಿಯಲ್ಲಿ ಮಲಗಿದ್ದಾಳೆ. ರಾತ್ರಿ ಎಲ್ಲರೂ ಮಲಗಿಕೊಳ್ಳುವರೆಗೂ ಕಾದು ಬಳಿ ಆಭರಣ, ಹಣ, ಮೌಲ್ಯ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾಳೆ.

    ಮಂಗಳವಾರ ಬೆಳಗ್ಗೆ ಸಂಗೀತಾಳನ್ನು ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಇತ್ತ ಹಣ, ಚಿನ್ನ ಮತ್ತು ವಸ್ತುಗಳು ಕಾಣಲಿಲ್ಲ. ಕೊನೆಗೆ ಎಲ್ಲವನ್ನು ಕದ್ದು ಪರಾರಿಯಾಗಿದ್ದಾಳೆ ಎಂದು ತಿಳಿದು ಪಂಕಜ್ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

    ವರ ಪಂಕಜ್ ಮತ್ತು ತಾಯಿ ನೀಡಿದ ದೂರಿನ ಆಧಾರದ ಮೇಲೆ ನಾವು ದೂರು ಸ್ವೀಕರಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ವರನ ಕುಟುಂಬದವರು ವಧು ಸೇರಿದಂತೆ ಹುಡುಗಿಯನ್ನು ತೋರಿಸಿದ ಸಂಬಂಧಿಕರ ಮೇಲೆ ದೂರು ನೀಡಿದ್ದಾರೆ. ಸದ್ಯಕ್ಕೆ ಪರಾರಿಯಾಗಿರುವ ಹುಡುಗಿಯನ್ನು ಹುಡುಕುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಸತ್ಯೇಂದ್ರ ರಾಮ್ ತಿಳಿಸಿದ್ದಾರೆ.

  • ಭಾರೀ ಮಳೆಯಿಂದಾಗಿ ಆಸ್ಪತ್ರೆಯ ಐಸಿಯುನಲ್ಲೇ ಹರಿದಾಡಿದ ಮೀನುಗಳು- ವಿಡಿಯೋ ನೋಡಿ

    ಭಾರೀ ಮಳೆಯಿಂದಾಗಿ ಆಸ್ಪತ್ರೆಯ ಐಸಿಯುನಲ್ಲೇ ಹರಿದಾಡಿದ ಮೀನುಗಳು- ವಿಡಿಯೋ ನೋಡಿ

    ಪಾಟ್ನಾ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬಿಹಾರದ ಪಾಟ್ನಾದಲ್ಲಿನ ನಳಂದ ಮೆಡಿಕಲ್ ಕಾಲೇಜ್ ಆಸ್ಪತ್ರೆಯೊಳಗೆ ಮಳೆನೀರಿನ ಜೊತೆಗೆ ಮೀನುಗಳು ಬಂದಿದ್ದು, ಐಸಿಯುನಲ್ಲಿ ಹರಿದಾಡುತ್ತಿವೆ.

    ನಳಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ರೋಗಿಗಳು ಹಾಸಿಗೆ ಮೇಲೆ ಮಲಗಿದ್ದರೆ ಕೊಠಡಿಯಲ್ಲಿ ಸುಮಾರು ಒಂದು ಅಡಿಯಷ್ಟು ನೀರು ತುಂಬಿಕೊಂಡಿದೆ. ಅಲ್ಲದೇ ಈ ನೀರಿನಲ್ಲಿ ಮೀನುಗಳು ಈಜಾಡುತ್ತಿರುವುದು ಭಾರಿ ಸುದ್ದಿ ಮಾಡುತ್ತಿದೆ.

    ಪಾಟ್ನಾದ ಎರಡನೇ ದೊಡ್ಡ ಆಸ್ಪತ್ರೆಗೆ ಮಳೆ ನೀರು ನುಗ್ಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಆರೋಗ್ಯಾಧಿಕಾರಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಮಳೆನೀರನ್ನು ಆಸ್ಪತ್ರೆಯಿಂದ ಹೊರಹಾಕುವ ಕಾರ್ಯ ನಡೆಯುತ್ತಿದೆ. ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದಿದ್ದಾರೆ.

    ಶುಕ್ರವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದೆ. ಆಗಸ್ಟ್ 1ರವರೆಗೂ ಬಿಹಾರದ ಹಲವೆಡೆ ಇನ್ನೂ ಹೆಚ್ಚಿನ ಪ್ರಮಾಣದ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

  • ರ್‍ಯಾಲಿ ವೇಳೆ ಸೈಕಲ್‍ನಿಂದ ಕೆಳಕ್ಕೆ ಬಿದ್ದ ತೇಜ್ ಪ್ರತಾಪ್ ಯಾದವ್ – ಬೀಳುವುದು ಮೇಲೆಳಲಿಕ್ಕೆ ಎಂದ್ರು

    ರ್‍ಯಾಲಿ ವೇಳೆ ಸೈಕಲ್‍ನಿಂದ ಕೆಳಕ್ಕೆ ಬಿದ್ದ ತೇಜ್ ಪ್ರತಾಪ್ ಯಾದವ್ – ಬೀಳುವುದು ಮೇಲೆಳಲಿಕ್ಕೆ ಎಂದ್ರು

    ಪಟ್ನಾ: ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಇಂದು ಹಮ್ಮಿಕೊಂಡಿದ್ದ ಸೈಕಲ್ ಯಾತ್ರೆಯ ವೇಳೆ ಉರುಳಿಬಿದ್ದು ಎಡವಟ್ಟು ಮಾಡಿಕೊಂಡಿದ್ದಾರೆ. ತೇಜ್ ಪ್ರತಾಪ್ ಯಾದವ್ ಸೈಕಲ್ ಮೇಲಿಂದ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    29 ವರ್ಷದ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಪಕ್ಷದ ಪ್ರಮುಖ ನಾಯಕರಾಗಿರುವ ತೇಜ್ ಪ್ರತಾಪ್, ರಾಜ್ಯ ಸರ್ಕಾರದ ವಿರುದ್ಧ ಪತ್ರಿಭಟನೆ ನಡೆಸಲು ಸೈಕಲ್ ಯಾತ್ರೆಯನ್ನು ಕೈಗೊಂಡಿದ್ದರು. ಯಾತ್ರೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ ಸಹ ಅಂತಿಮ ಹಂತದಲ್ಲಿ ಸೈಕಲ್ ಮೇಲಿಂದ ಉರುಳಿ ಬೀಳುವ ಮೂಲಕ ಎಡವಟ್ಟು ಮಾಡಿಕೊಂಡರು. ಈ ವೇಳೆ ಸ್ಥಳದಲ್ಲಿದ್ದ ಬೆಂಬಲಿಗರು ತೇಜ್ ಪ್ರತಾಪ್ ನೆರವಿಗೆ ಬಂದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯಗಳು ವೈರಲ್ ಆಗುತ್ತಿದಂತೆ ಸ್ಪಷ್ಟನೆ ನೀಡಿರುವ ತೇಜ್ ಪ್ರತಾಪ್, ಜೀವನದಲ್ಲಿ ಜನರು ಬೀಳುವುದು ಮತ್ತೆ ಹೆಚ್ಚಿನ ಶಕ್ತಿಯೊಂದಿದೆ ಮೇಲೆಳಲಿಕ್ಕೆ ಎಂದು ಹೇಳಿದ್ದಾರೆ.

    ಲಾಲು ಪ್ರಸಾದ್ ಯಾದವ್ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ತೇಜ್ ಪ್ರತಾಪ್ ಪಕ್ಷದಲ್ಲಿ ಹೆಚ್ಚು ಸಕ್ರೀಯರಾಗಿದ್ದಾರೆ. ಅಲ್ಲದೇ ಕಳೆದ ಕೆಲ ದಿನಗಳ ಹಿಂದೆ ತೇಜ್ ಪ್ರತಾಪ್ ಯಾದವ್ ಅಭಿನಯದ `ರುದ್ರ ಅವತಾರ’ ಎಂಬ ಸಿನಿಮಾದ ಟೀಸರ್ ಬಿಡುಗಡೆಗೊಳಿಸಿ ಸುದ್ದಿಯಾಗಿದ್ದರು. ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತೇಜ್ ಪ್ರತಾಪ್ ಯಾದವ್ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

  • `ರಸಗುಲ್ಲಾ’ಗಾಗಿ ರಣರಂಗವಾದ ಮದುವೆಮನೆ!

    `ರಸಗುಲ್ಲಾ’ಗಾಗಿ ರಣರಂಗವಾದ ಮದುವೆಮನೆ!

    ಪಾಟ್ನಾ: ಮದುವೆಮನೆಯಲ್ಲಿ ಊಟ ಮಾಡುವಾಗ ರಸಗುಲ್ಲಾ ಸಿಗಲಿಲ್ಲವೆಂದು ವಧುವಿನ ಕುಟುಂಬದ ಮೇಲೆ ಹಲ್ಲೆ ನಡೆಸಿ ಮದುವೆ ನಿಲ್ಲಿಸಿದ ಘಟನೆ ಬಿಹಾರದ ನಂಲದಾ ಜಿಲ್ಲೆಯಲ್ಲಿ ನಡೆದಿದೆ.

    ಮೂಲಗಳ ಪ್ರಕಾರ ಹಲ್ಲೆ ನಡೆಸಿದವರು ಶೋಕ್ಪುರ ಜಿಲ್ಲೆಯ ಮಂಡಪ್‍ಸೌನಾ ಗ್ರಾಮದವರಾಗಿದ್ದು, ಮದುವೆಗಾಗಿ ಮಣಿರಾಮ್‍ಗೆ ಬಂದಿದ್ದರು. ಆಗ ವರನ ಕಡೆಯವರು ಊಟ ಮಾಡುವಾಗ ರಸಗುಲ್ಲ ಕೇಳಿದ್ದರು. ಮೊದಲ ಬಾರಿಗೆ ನೀಡಿದ್ದಾಗ ಪುನಃ ಸಿಹಿ ಕೇಳಿದರು. ಆಗ ವಧು ಕಡೆಯವರು ವರದ ಸಂಬಂಧಿಕರಿಗೆ 5ಕ್ಕೂ ಹೆಚ್ಚೂ ಸಿಹಿಯನ್ನು ನೀಡಿದ್ದಾರೆ.

    5ಕ್ಕೂ ಹೆಚ್ಚೂ ರಸಗುಲ್ಲ ಪಡೆದ ನಂತರವೂ ಅವರು ಮತ್ತಷ್ಟು ರಸಗುಲ್ಲ ಬೇಕೆಂದು ಕೇಳಿದ್ದರು. ಆಗ ವಧು ಕಡೆಯವರು ರಸಗುಲ್ಲ ನೀಡಲು ನಿರಾಕರಿಸಿದ್ದಾರೆ. ಇದ್ದರಿಂದ ಕೋಪಗೊಂಡ ವರನ ಕಡೆಯವರು ವಧುವಿನ ಸಂಬಂಧಿಕರ ಜೊತೆ ಜಗಳವಾಡಲು ಶುರು ಮಾಡಿದ್ದಾರೆ.

    ಇದಾದ ಸ್ವಲ್ಪ ಸಮಯದಲ್ಲೇ ವರನ ಕಡೆಯವರು ಕೈಯಲ್ಲಿ ದೊಣ್ಣೆ ಹಾಗೂ ರಾಡ್ ಹಿಡಿದು ಮದುವೆಮನೆಗೆ ಬಂದಿದ್ದಾರೆ. ಮದುವೆಮನೆಗೆ ಬಂದ ತಕ್ಷಣ ಅವರು ವಧುವಿನ ತಂದೆ, ಸಹೋದರ, ತಾಯಿ, ಸಹೋದರಿ ಹಾಗೂ ಆಕೆಯ ಸ್ನೇಹಿತೆ ಮೇಲೆ ಹಲ್ಲೆ ನಡೆಸಿದ್ದಾರೆ.

    ಮದುವೆಮನೆಯಲ್ಲಿ ಯಾರೇ ಎಲ್ಲೇ ಕಂಡರೂ ಅವರ ಮೇಲೆ ಹಲ್ಲೆ ನಡೆಸುತ್ತಿದ್ದರು. ಮಹಿಳೆ ಹಾಗೂ ಮಕ್ಕಳೆಂದು ನೋಡದೇ ಅವರನ್ನು ಥಳಿಸಿದ್ದಾರೆ. ವರನ ಕಡೆಯವರ ಹಲ್ಲೆಯಿಂದ ತಪ್ಪಿಸಿಕೊಂಡು ವಧು ಕಡೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಬಂದ ಪೊಲೀಸರು ಎಲ್ಲರನ್ನೂ ಶಾಂತಿಗೊಳಿಸಿದ್ದಾರೆ. ಈ ಘಟನೆ ಆದ ಬಳಿಕ ಮದುವೆಯನ್ನು ನಿಲ್ಲಿಸಿ, ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.