Tag: patna

  • ಮದ್ವೆ ವೇಳೆ ವಧುವನ್ನು ನೋಡಿ ಶರ್ಟ್ ಹರಿದುಕೊಂಡು ವಿಚಿತ್ರವಾಗಿ ವರ್ತಿಸಿದ ವರ

    ಮದ್ವೆ ವೇಳೆ ವಧುವನ್ನು ನೋಡಿ ಶರ್ಟ್ ಹರಿದುಕೊಂಡು ವಿಚಿತ್ರವಾಗಿ ವರ್ತಿಸಿದ ವರ

    ಪಾಟ್ನಾ: ವೇದಿಕೆ ಮೇಲಿದ್ದ ವಧುವನ್ನು ನೋಡಿ ವರ ತನ್ನ ಶರ್ಟ್ ಹರಿದುಕೊಂಡು ವಿಚಿತ್ರವಾಗಿ ವರ್ತಿಸಿದ ಘಟನೆ ಬಿಹಾರದ ದಾನಾಪುರದಲ್ಲಿ ನಡೆದಿದೆ.

    ವರಮಾಲಾ ಕಾರ್ಯಕ್ರಮದ ಸಂದರ್ಭದಲ್ಲಿ ವರನನ್ನು ವೇದಿಕೆ ಮೇಲೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ವರ ವಧುವನ್ನು ನೋಡಿದ ತಕ್ಷಣ ತನ್ನ ಶರ್ಟ್ ಹರಿದುಕೊಂಡು ತನ್ನ ಮೂಗನ್ನು ನೆಲಕ್ಕೆ ಉಜ್ಜಿ ವಿಚಿತ್ರವಾಗಿ ವರ್ತಿಸಿದ್ದಾನೆ.

    ವಧು ವೇದಿಕೆ ಮೇಲೆ ನಿಂತು ವರನಿಗೆ ಹೂಮಾಲೆ ಹಾಕಲು ನಿಂತಿದ್ದಾಗ ವರ ವಧುವನ್ನೇ ನೋಡುತ್ತಾ ಕಳೆದು ಹೋಗಿದ್ದಾನೆ. ಅಲ್ಲದೆ ವಧುವಿನ ಸೌಂದರ್ಯ ನೋಡಿ ತನ್ನ ಶರ್ಟ್ ಹರಿದುಕೊಂಡು ವೇದಿಕೆ ಮೇಲೆ ವಿಚಿತ್ರವಾಗಿ ವರ್ತಿಸಿದ್ದಾನೆ.

    ವರ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ವಧು ಈ ಮದುವೆ ಬೇಡ ಎಂದಿದ್ದಾಳೆ. ವಧು ಮದುವೆಗೆ ನಿರಾಕರಿಸುತ್ತಿದ್ದಂತೆ ಮದುವೆ ಮನೆಯಲ್ಲಿ ಗಲಾಟೆ ಶುರುವಾಗಿದೆ. ಬಳಿಕ ಅಲ್ಲಿದ್ದ ಸಂಬಂಧಿಕರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.

    ಈ ಬಗ್ಗೆ ವಧುವಿನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ವರನ ಕುಟುಂಬದವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ವರ ಹಾಗೂ ಆತನ ತಂದೆಯನ್ನು ಬಂಧಿಸಿದ್ದಾರೆ.

  • ಪ್ರಿಯಕರನೊಂದಿಗೆ ಪತ್ನಿ ಮದ್ವೆ – ಮಗುವನ್ನೇ ಗಿಫ್ಟ್ ನೀಡಿದ ಪತಿ

    ಪ್ರಿಯಕರನೊಂದಿಗೆ ಪತ್ನಿ ಮದ್ವೆ – ಮಗುವನ್ನೇ ಗಿಫ್ಟ್ ನೀಡಿದ ಪತಿ

    ಪಾಟ್ನಾ: ವ್ಯಕ್ತಿಯೊಬ್ಬ ತನ್ನ ಪತ್ನಿ ಸಂತೋಷದಿಂದ ಇರಬೇಕು ಎಂದು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾನೆ. ಅಷ್ಟೇ ಅಲ್ಲದೇ ತಮ್ಮಿಬ್ಬರ ದಾಂಪತ್ಯದಲ್ಲಿ ಹುಟ್ಟಿದ ಎರಡೂವರೆ ವರ್ಷದ ಮಗುವನ್ನು ಉಡುಗೊರೆಯಾಗಿ ನೀಡಿರುವ ಘಟನೆ ಬಿಹಾರದ ಭಗಲ್ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಭಾಗಲ್ಪುರದ ಬಳಿಯ ಸೋಲೇಪುರ ಗ್ರಾಮದಲ್ಲಿ ಈ ಅಪರೂಪದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆ ಭಗಲ್ಪುರ ಜಿಲ್ಲೆಯ ಜಗದೀಶ್ಪುರ ಬ್ಲಾಕ್‍ನಲ್ಲಿ ಮದುವೆ ನಡೆದಿದೆ.

    ಘಟನೆಯ ವಿವರ?
    ಭಗಲ್ಪುರ ಜಿಲ್ಲೆಯ ನಿವಾಸಿ ನಾಲ್ಕು ವರ್ಷಗಳ ಹಿಂದೆ ಜಾರ್ಖಂಡನ ಗೊಡ್ಡಾ ಜಿಲ್ಲೆಯ ಗ್ರಾಮವೊಂದರ ಯುವತಿಯನ್ನು ಮದುವೆಯಾಗಿದ್ದನು. ದಂಪತಿಗೆ ಒಂದು ಮಗುವಿತ್ತು. ಕುಟುಂಬ ಸಮೇತರಾಗಿ ಪಟ್ಟಣದ ಸೋಲೇಪುರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕೆಲ ದಿನಗಳ ಬಳಿಕ ಆತ ಪ್ರಕರಣವೊಂದರಲ್ಲಿ ಸಿಲುಕಿ ಜೈಲಿಗೆ ಹೋಗಿದ್ದನು. ಈ ಸಂದರ್ಭದಲ್ಲಿ ಆತನ ಪತ್ನಿ ಮತ್ತು ಮನೆ ಮಾಲೀಕನ ಮಗ ಮೊನು ಕುಮಾರ್ ಸಿಂಗ್ ನಡುವೆ ಸ್ನೇಹ ಬೆಳೆಯಿತು.

    ಇಬ್ಬರೂ ಆಗಾಗ ಭೇಟಿಯಾಗಿ ಮಾತನಾಡಲು ಶುರುಮಾಡಿದ್ದರು. ದಿನ ಕಳೆದಂತೆ ಸ್ನೇಹ ಪ್ರೀತಿಯಾಗಿ ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರು. ಬಳಿಕ ಇಬ್ಬರು ಒಟ್ಟಿಗೆ ಜೀವಿಸಲು ನಿರ್ಧಾರ ಮಾಡಿದ್ದರು. ಇತ್ತ ಮಹಿಳೆಯ ಪತಿ ಜೈಲಿನಿಂದ ಮನೆಗೆ ಹಿಂದಿರುಗಿದ್ದಾನೆ. ಆಗ ತನ್ನ ಪತ್ನಿ ಮತ್ತು ಮೊನು ಕುಮಾರ್ ಸಿಂಗ್ ನಡುವಿನ ಸಂಬಂಧ ತಿಳಿದು ಆಘಾತಕ್ಕೊಳಗಾಗಿದ್ದನು. ಆದರೂ ಆತ ಪತ್ನಿಯ ಮನವೊಲಿಸಲು ಪ್ರಯತ್ನಿಸಿದ್ದಾನೆ. ಆದರೆ ಆಕೆ ತನ್ನ ಪ್ರಿಯಕರನ ಜೊತೆಗೆ ಜೀವಿಸಲು ನಿರ್ಧಾರ ಮಾಡಿದ್ದಳು.

    ಕೊನೆಗೆ ಪತಿ ಗ್ರಾಮ ನ್ಯಾಯಾಲಯದಲ್ಲಿ ಇಬ್ಬರು ಕುಟುಂಬದ ಒಪ್ಪಿಗೆಯೊಂದಿಗೆ ಸ್ಥಳೀಯ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಮೊನು ಕುಮಾರ್ ಸಿಂಗ್ ಜೊತೆ ತನ್ನ ಪತ್ನಿಯ ಮದುವೆ ಮಾಡಿಸಿದ್ದಾನೆ.

  • ಗ್ಯಾಂಗ್‍ ರೇಪ್‍ಗೆ ಸಹಕರಿಸದ್ದಕ್ಕೆ ಅಪ್ರಾಪ್ತೆ ಮೇಲೆ ಆ್ಯಸಿಡ್ ಸುರಿದ ಕಾಮುಕರು

    ಗ್ಯಾಂಗ್‍ ರೇಪ್‍ಗೆ ಸಹಕರಿಸದ್ದಕ್ಕೆ ಅಪ್ರಾಪ್ತೆ ಮೇಲೆ ಆ್ಯಸಿಡ್ ಸುರಿದ ಕಾಮುಕರು

    ಪಟ್ನಾ: 16 ವರ್ಷದ ಬಾಲಕಿ ಮೇಲೆ 4 ಮಂದಿ ಕಾಮುಕರು ಗ್ಯಾಂಗ್ ರೇಪ್ ಮಾಡಲು ಯತ್ನಿಸಿ, ಆ್ಯಸಿಡ್ ಸುರಿದ ಅಮಾನವೀಯ ಘಟನೆ ಬಿಹಾರದ ಭಗಲ್‍ಪುರ ಜಿಲ್ಲೆಯಲ್ಲಿ ನಡೆದಿದೆ.

    ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶುಕ್ರವಾರ ರಾತ್ರಿ ಅಪ್ರಾಪ್ತೆ ಮನೆಗೆ ನುಗ್ಗಿದ್ದ 4 ಮಂದಿ ಯುವಕರು ಬಾಲಕಿಯ ತಾಯಿಗೆ ಗನ್ ತೋರಿಸಿ ಹೆದರಿಸಿದ್ದಾರೆ. ಬಳಿಕ ತಾಯಿಯ ಎದುರೇ ಬಾಲಕಿ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದಾರೆ. ಆದ್ರೆ ಈ ವೇಳೆ ಬಾಲಕಿ ಅವರಿಗೆ ಸಹಕರಿಸದ್ದಕ್ಕೆ ಸಿಟ್ಟಿಗೆದ್ದ ಕಾಮುಕರು ಆಕೆಯ ಮೇಲೆ ಆ್ಯಸಿಡ್ ಸುರಿದು ದುಷ್ಟತನವನ್ನು ಮೆರೆದಿದ್ದಾರೆ.

    ಆ್ಯಸಿಡ್ ದಾಳಿಗೆ ತುತ್ತಾದ ಬಾಲಕಿ ಸದ್ಯ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದು, ಬಾಲಕಿಯ ತಾಯಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

    ಸದ್ಯ ನಾಲ್ವರು ಆರೋಪಿಗಳಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೆ ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಭಗಲ್‍ಪುರ ಎಸ್‍ಪಿ ಆಶೀಷ್ ಭಾರ್ತಿ ತಿಳಿಸಿದ್ದಾರೆ.

  • ಎದೆ ಮೇಲೆ ಕುಳಿತು ಕೈಗಳನ್ನು ಹಿಡಿದ ಪತ್ನಿ – ಕತ್ತು ಕತ್ತರಿಸಿದ ಲವ್ವರ್

    ಎದೆ ಮೇಲೆ ಕುಳಿತು ಕೈಗಳನ್ನು ಹಿಡಿದ ಪತ್ನಿ – ಕತ್ತು ಕತ್ತರಿಸಿದ ಲವ್ವರ್

    ಪಾಟ್ನಾ: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಿಹಾರದ ಸರ್ಹಸಾ ಜಿಲ್ಲೆಯಲ್ಲಿ ನಡೆದಿದೆ.

    ಮೊಹಮ್ಮದ್ ತಸೀರ್(30) ಪತ್ನಿಯಿಂದ ಕೊಲೆಯಾದವ ಪತಿ. ಆರೋಪಿ ಪತ್ನಿ ತನ್ನ ಪ್ರಿಯಕರ ಮೊಹಮ್ಮದ್ ಶಫೀರ್ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾಳೆ. ಈ ಘಟನೆ ಶುಕ್ರವಾರ ತಡರಾತ್ರಿ ಸರ್ಬೆಲಾ ಪಂಚಾಯತ್‍ನ ಕಸ್ಮಿಪುರ ಟೊಲ್ವಾ ಗ್ರಾಮದಲ್ಲಿ ನಡೆದಿದೆ.

    ಆರೋಪಿ ಪತ್ನಿ ಮೊದಲು ತಸೀರ್ ಎದೆ ಮೇಲೆ ಕುಳಿತು ಆತನ ಎರಡು ಕೈಗಳನ್ನು ಬಿಗಿಯಾಗಿ ಹಿಡಿದಿದ್ದಾಳೆ. ಬಳಿಕ ಆಕೆಯ ಪ್ರಿಯಕರ ಚಾಕುವಿನಿಂದ ಪತ್ನಿಯ ಮುಂದೆಯೇ ಕತ್ತನ್ನು ಕತ್ತರಿಸಿದ್ದಾನೆ. ನಂತರ ಪತ್ನಿಯೂ ಕೂಡ ಚಾಕು ತೆಗೆದುಕೊಂಡು ತಸೀರ್ ಮೇಲೆ ಹಲ್ಲೆ ಮಾಡಿದ್ದಾಳೆ. ಸದ್ಯ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಮೃತ ತಸೀರ್ ಪತ್ನಿ ತಮ್ಮ ಪಕ್ಕದ ಮನೆಯಲ್ಲಿದ್ದ ಶಫೀರ್ ನನ್ನು ಪ್ರೀತಿ ಮಾಡುತ್ತಿದ್ದಳು. ಹೀಗಾಗಿ ಇಬ್ಬರು ಸೇರಿ ತಸೀರ್ ನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಾರೆ. ಅದರಂತೆಯೇ ಶುಕ್ರವಾರ ಆರೋಪಿ ಪತಿ ಊಟದ ನಂತರ ಹಾಲಿಗೆ ನಿದ್ರೆ ಮಾತ್ರೆ ಹಾಕಿ ಕುಡಿಯಲು ತಸೀರ್ ಗೆ ಕೊಟ್ಟಿದ್ದಾಳೆ. ಅದನ್ನು ಕುಡಿದು ನಿದ್ದೆ ಮಾಡುತ್ತಿದ್ದಂತೆಯೇ ಪ್ರಿಯರಕನನ್ನು ಮನೆಗೆ ಕರೆಸಿದ್ದಾಳೆ. ಬಳಿಕ ಆಕೆ ಪತಿಯ ಎದೆ ಮೇಲೆ ಕುಳಿತು ಕೈಗಳನ್ನು ಬಿಗಿಯಾಗಿ ಹಿಡಿದಿದ್ದಾಳೆ. ಆಗ ಶಫೀರ್ ಚಾಕುವಿನಿಂದ ತಸೀರ್  ನ ಕತ್ತು ಕೊಯ್ದಿದ್ದಾನೆ. ನಂತರ ಮಹಿಳೆಯೂ ಪತಿ ಮೇಲೆ ಹಲ್ಲೆ ನಡೆಸಿದ್ದಾಳೆ.

    ಈ ಸಂದರ್ಭದಲ್ಲಿ ಮಲಗಿದ್ದ ಮಗನಿಗೆ ಎಚ್ಚರವಾಗಿದ್ದು, ಆತ ಶಫೀರ್ ಮತ್ತು ಇನ್ನೊಬ್ಬನನ್ನು ಮನೆಯಲ್ಲಿ ನೋಡಿದ್ದಾನೆ. ಇದನ್ನು ತಿಳಿದ ತಾಯಿ ಕಿರುಚಾಡಿ ನಾಟಕ ಶುರು ಮಾಡಿದ್ದಾಳೆ. ಅದನ್ನು ಕೇಳಿದ ನೆರೆಹೊರೆಯವರು ಮನೆಗೆ ಬಂದಿದ್ದಾರೆ. ತಕ್ಷಣ ರಕ್ತದ ಮಡುವಿನಲ್ಲಿದ್ದ ತಸೀರ್‍ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ತಸೀರ್ ಮೃತಪಟ್ಟಿದ್ದನು.

    ಈ ಬಗ್ಗೆ ಪೋಲಿಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬಳಿಕ ಕೊಲೆಯಾದ ಸ್ಥಳದಲ್ಲಿ ಪತ್ತೆಯಾದ ಬಟ್ಟೆ ಮತ್ತು ಚಾಕುವನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

    ಪೊಲೀಸರು ವಿಚಾರಣೆಯಲ್ಲಿ 24 ಗಂಟೆಯಲ್ಲಿಯೇ ಪತ್ನಿ ಮತ್ತು ಪ್ರಿಯಕರ ಸಿಕ್ಕಿಬಿದ್ದಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆ ಮಾಡಿದಾಗ ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಅಳ್ತಿದ್ದ ಮಗನ ತುಟಿಗೆ ಗಮ್ ಹಾಕಿದ ತಾಯಿ!

    ಅಳ್ತಿದ್ದ ಮಗನ ತುಟಿಗೆ ಗಮ್ ಹಾಕಿದ ತಾಯಿ!

    ಪಾಟ್ನಾ: ತಾಯಿಯೊಬ್ಬಳು ಯಾವಾಗಲೂ ಅಳುತ್ತಿದ್ದಾನೆ ಎಂದು ಮಗನ ತುಟಿಗಳಿಗೆ ಗಮ್ ಹಾಕಿರುವ ವಿಲಕ್ಷಣ ಘಟನೆ ಬಿಹಾರದ ಛಪ್ರಾದಲ್ಲಿ ನಡೆದಿದೆ.

    ಶೋಭಾ ಮಗುವಿನ ಬಾಯಿಗೆ ಗಮ್ ಹಾಕಿದ ತಾಯಿ. ಈಕೆ ಎಷ್ಟೇ ಸಮಾಧಾನ ಮಾಡಿದರೂ ಮಗು ಅಳುವುದನ್ನು ನಿಲ್ಲಿಸಿಲ್ಲ ಎಂದು ಕೊನೆಗೆ ಮನೆಯಲ್ಲಿಯೇ ಇದ್ದ ಗಮ್ ತೆಗೆದುಕೊಂಡು ಮಗುವಿನ ತುಟಿಗೆ ಹಾಕಿದ್ದಾಳೆ.

    ನಾನು ಕೆಲಸಕ್ಕೆ ಹೋಗಿ ಮನೆಗೆ ಮರಳಿದ್ದೆ. ಆಗ ಮಗು ಏನು ಮಾತನಾಡದೆ ಸುಮ್ಮನೆ ಕುಳಿತ್ತಿದ್ದ. ನಂತರ ಆತನನ್ನು ನೋಡಿದಾಗ ಬಾಯಿಯಿಂದ ನೊರೆ ಬರುತ್ತಿತ್ತು. ತಕ್ಷಣ ನಾನು ಮಗನಿಗೆ ಏನಾಗಿದೆ ಎಂದು ಪತ್ನಿ ಶೋಭಾಳನ್ನು ಕೇಳಿದೆ. ಆಗ ಶೋಭಾ, ಆತನೂ ಯಾವಾಗಲೂ ಅಳುತ್ತಿದ್ದನು. ಏನೇ ಮಾಡಿದರು ಅಳುವನ್ನು ನಿಲ್ಲಿಸಲಿಲ್ಲ. ಆದ್ದರಿಂದ ತುಟಿಗಳಿಗೆ ಗಮ್ ಹಾಕಿರುವುದಾಗಿ ತಿಳಿಸಿದಳು ಎಂದು ಮಗುವಿನ ತಂದೆ ಹೇಳಿದ್ದಾರೆ.

    ತುಟಿಗಳಿಗೆ ಗಮ್ ಹಾಕಿದ್ದ ಪರಿಣಾಮ ಮಗು ಅಳುವುದನ್ನು ನಿಲ್ಲಿಸಿದ್ದನು. ಆದರೆ ಗಮ್ ಅಂಟಿಕೊಂಡಿದ್ದ ಪರಿಣಾಮ ಮಗು ಬಾಯಿಯನ್ನು ತೆರೆಯಲು ಸಾಧ್ಯವಾಗಿಲ್ಲ. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ವೈದ್ಯರು ಪರೀಕ್ಷೆ ಮಾಡಿ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.

  • ವರ ಮದುವೆ ಮಂಟಪಕ್ಕೆ ಬರ್ತಿದ್ದಂತೆ ಮದ್ವೆ ಕ್ಯಾನ್ಸಲ್ ಮಾಡಿದ ವಧು..!

    ವರ ಮದುವೆ ಮಂಟಪಕ್ಕೆ ಬರ್ತಿದ್ದಂತೆ ಮದ್ವೆ ಕ್ಯಾನ್ಸಲ್ ಮಾಡಿದ ವಧು..!

    ಪಾಟ್ನಾ: ವರ ಮದುವೆ ಮಂಟಪಕ್ಕೆ ಬರುತ್ತಿದ್ದಂತೆಯೇ ವಧು ತನ್ನ ವಿವಾಹವನ್ನೇ ಕ್ಯಾನ್ಸಲ್ ಮಾಡಿದ ಘಟನೆ ಶನಿವಾರ ಬಿಹಾರದ ಚಾಪ್ರದಲ್ಲಿ ನಡೆದಿದೆ.

    ರಿಂಕಿ ಕುಮಾರಿ ಮದುವೆಯನ್ನು ಕ್ಯಾನ್ಸಲ್ ಮಾಡಿದ ವಧು. ರಿಂಕಿ ಮದುವೆ ಬಬ್ಲು ಕುಮಾರ್ ಜೊತೆ ನಿಶ್ಚಯವಾಗಿತ್ತು. ಇಬ್ಬರ ಮದುವೆ ನಡೆಯಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ವಧು ಮದುವೆಯನ್ನೇ ರದ್ದುಗೊಳಿಸಿದ್ದಾಳೆ.

    ವಧು-ವರರಿಗಾಗಿ ಮದುವೆ ಮಂಟಪದಲ್ಲಿ ಕಾಯುತ್ತಿದ್ದ ವೇಳೆ ಬಬ್ಲು ಕುಡಿದ ಮತ್ತಿನಲ್ಲಿ ಮದುವೆ ಮನೆಗೆ ಆಗಮಿಸಿದ್ದಾನೆ. ಅಲ್ಲದೆ ಅಲ್ಲಿ ನರೆದಿದ್ದ ಸಂಬಂಧಿಕರ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಇದನ್ನು ನೋಡಿದ ರಿಂಕಿ ವರ ಬಬ್ಲುನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ ಎಂದು ವಧುವಿನ ತಂದೆ ತ್ರಿಭುವನ್ ಶಾ ತಿಳಿಸಿದ್ದಾರೆ.

    ವರನ ಸ್ಥಿತಿ ನೋಡಿದ ಸಂಬಂಧಿಕರು ಆತನಿಗೆ ಮದುವೆಯ ಶಾಸ್ತ್ರಗಳನ್ನು ನೆರವೇರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಕೋಪಗೊಂಡ ರಿಂಕಿ ಮದುವೆ ಮನೆಯಿಂದ ಹೊರ ನಡೆದಿದ್ದಾಳೆ. ಬಳಿಕ ಇಬ್ಬರ ಕುಟುಂಬದವರು ರಿಂಕಿಗೆ ಈ ಮದುವೆಗೆ ಒಪ್ಪಿಸಲು ಪ್ರಯತ್ನಿಸಿದ್ದಾರೆ. ಆದರೆ ರಿಂಕಿ, ಬಬ್ಲುನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ.

    ರಿಂಕಿ ಮದುವೆಗೆ ನಿರಕಾರಿಸುತ್ತಿದ್ದಂತೆ ವಧುವಿನ ಕುಟುಂಬದವರು ವರದಕ್ಷಿಣೆಗೆ ನೀಡಿದ ಹಣವನ್ನು ಹಿಂತಿರುಗಿಸಲು ಹೇಳಿದ್ದಾರೆ. ಅಲ್ಲದೆ ಆ ಹಣ ಹಿಂತಿರುಗಿಸುವವರೆಗೂ ವರನ ಕುಟುಂಬದವರನ್ನು ಬಿಡಲಿಲ್ಲ. ಹಣ ನೀಡಿದ ಬಳಿಕ ಅವರನ್ನು ಅಲ್ಲಿಂದ ಹೋಗಲು ಅನುಮತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಹುತಾತ್ಮ ಸಿಆರ್‌ಪಿಎಫ್ ಯೋಧರ ಮಕ್ಕಳನ್ನು ದತ್ತು ಪಡೆದ ಜಿಲ್ಲಾಧಿಕಾರಿ

    ಹುತಾತ್ಮ ಸಿಆರ್‌ಪಿಎಫ್ ಯೋಧರ ಮಕ್ಕಳನ್ನು ದತ್ತು ಪಡೆದ ಜಿಲ್ಲಾಧಿಕಾರಿ

    ಪಾಟ್ನಾ: ಉದ್ಯಮಿಗಳು, ರಾಜಕಾರಣಿಗಳು ಹಾಗೂ ಸಿನಿಮಾ ಸ್ಟಾರ್ ಸೇರಿದಂತೆ ಇನ್ನೂ ಅನೇಕರು ಜಮ್ಮು ಕಾಶ್ಮೀರದ ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದಾರೆ. ಇವರ ಜೊತೆ ಬಿಹಾರದ ಜಿಲ್ಲಾಧಿಕಾರಿಯೊಬ್ಬರು ಹುತಾತ್ಮ ಯೋಧರ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದಾರೆ.

    ಬಿಹಾರದ ಶೇಕ್‍ಪುರ್ ಜಿಲ್ಲಾಧಿಕಾರಿ ಇನಾಯತ್ ಖಾನ್ ಅವರು ಇಬ್ಬರು ಹುತಾತ್ಮ ಯೋಧರ ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸುವುದಾಗಿ ಹೇಳಿದ್ದಾರೆ. ಪಾಟ್ನಾದ ಹುತಾತ್ಮ ಯೋಧ ಸಂಜಯ್ ಕುಮಾರ್ ಸಿಂಗ್ ಮತ್ತು ಬಾಗಲ್ಪುರ್ ನ ರತನ್ ಕುಮಾರ್ ಠಾಕೂರ್ ಅವರು ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದರು. ಇವರ ಇಬ್ಬರು ಹೆಣ್ಣು ಮಕ್ಕಳ ಶಿಕ್ಷಣವನ್ನು ಭರಿಸುವುದಾಗಿ ಇನಾಯತ್ ಖಾನ್ ಹೇಳಿದ್ದಾರೆ.

    ದತ್ತ ಪಡೆದಿರುವ ಎರಡು ಕುಟುಂಬಗಳಿಗೆ ಜೀವನ ನಿರ್ವಹಣೆಗೆ ಅಗತ್ಯವಾದ ಹಣ ಒದಗಿಸುತ್ತೇನೆ. ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೂ ಸಹಾಯ ಮಾಡುತ್ತೇನೆ ಎಂದು ಇನಾಯತ್ ಖಾನ್ ಅವರು ಭರವಸೆ ನೀಡಿದ್ದಾರೆ. ಎರಡು ದಿನದ ಸಂಬಳವನ್ನು ನೀಡಿದ ಅವರು ಈ ಕುಟುಂಬಗಳಿಗೆ ನೆರವಾಗಲು ಒಂದು ದಿನದ ವೇತನವನ್ನು ದಾನ ಮಾಡುವಂತೆ ತಮ್ಮ ಜಿಲ್ಲೆಯ ಸರ್ಕಾರಿ ಸಿಬ್ಬಂದಿಯ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ಎರಡು ಕುಟುಂಬಗಳಿಗೂ ಸಹ ಹಣವನ್ನು ಸಂಗ್ರಹಿಸಲು ಬ್ಯಾಂಕ್ ಖಾತೆಯನ್ನು ತೆರೆದಿದ್ದಾರೆ. ಸಹಾಯ ಮಾಡಲು ಇಚ್ಛಿಸುವವರು ಮುಂದಿನ ತಿಂಗಳು ಮಾರ್ಚ್ 10ರ ಒಳಗೆ ಹಣ ನೀಡುವಂತೆ ಹೇಳಿದ್ದಾರೆ. ಅಷ್ಟರಲ್ಲಿ ಎಷ್ಟು ಹಣ ಸಂಗ್ರಹವಾಗಿರುತ್ತದೆಯೂ ಅಷ್ಟು ಹಣವನ್ನು ಸೈನಿಕರ ಕುಟುಂಬಕ್ಕೆ ನೀಡಲಾಗುವುದು ಎಂದು ಖಾನ್ ತಿಳಿಸಿದ್ದಾರೆ.

    ಈಗಾಗಲೇ ಸರ್ಕಾರ, ಸೇನೆ, ರಾಜಕಾರಣಿಗಳು ಹುತಾತ್ಮ ಯೋಧರ ಕುಟುಂಬದವರಿಗೆ ಪರಿಹಾರ  ನಿಧಿಯ ರೂಪದಲ್ಲಿ ಹಣವನ್ನು ಸಂಗ್ರಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿ ಕೊಂದು ಮೃತದೇಹವನ್ನೇ ಬೆಡ್ ಮಾಡ್ಕೊಂಡ..!

    ಪತ್ನಿ ಕೊಂದು ಮೃತದೇಹವನ್ನೇ ಬೆಡ್ ಮಾಡ್ಕೊಂಡ..!

    ಪಾಟ್ನಾ: 30 ವರ್ಷದ ಮಹಿಳೆಯ ಮೃತದೇಹ ಪೀಸ್ ಪೀಸ್ ಆಗಿದ್ದು, ಬೆಡ್ ಕೆಳಗೆ ಪತ್ತೆಯಾಗಿರುವ ಘಟನೆ ಬಿಹಾರದ ಗಯಾದಲ್ಲಿ ನಡೆದಿದೆ.

    ಮಹಿಳೆಯನ್ನು ಬಬಿತಾ ಎಂದು ಗುರುತಿಸಲಾಗಿದೆ. ಬಬಿತಾ ಮನೆಯಿಂದ ಕೆಟ್ಟ ವಾಸನೆ ಬಂದ ನಂತರ ಮನೆ ಮಾಲೀಕ ಹೋಗಿ ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮೃತ ಬಬಿತಾ ತನ್ನ ಪತಿ ರಾಜೇಶ್ ಜೊತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಮನೆಯ ಮಾಲೀಕ ದಿನೇಶ್ ಚಹಾ ಅಂಗಡಿ ಇಟ್ಟಿದ್ದು, ಸುಮಾರು ಒಂದೂವರೆ ತಿಂಗಳಿಂದ ಮನೆ ಮಾಲೀಕನ ಕ್ಯಾಬ್ ಚಾಲಕನಾಗಿ ರಾಜೇಶ್ ಕೆಲಸ ಮಾಡುತ್ತಿದ್ದನು.

    “ನಾನು ಒಂದೆರಡು ದಿನಗಳ ಕಾಲ ಮನೆಯಲ್ಲಿ ಇರಲಿಲ್ಲ. ಆದರೆ ನನ್ನ ಕ್ಯಾಬ್ ಅನ್ನು ರಾಜೇಶ್ ಓಡಿಸುತ್ತಿದ್ದನು. ಮನೆಯ ಕೀ ಕೂಡ ಆತನ ಕೈಯಲ್ಲಿ ಇತ್ತು. ಚಹಾ ಅಂಗಡಿಯನ್ನು ಅವನೇ ನೋಡಿಕೊಳ್ಳುತ್ತಿದ್ದನು. ನಾನು ಹಿಂದಿರುಗಿ ಮನೆಗೆ ಬಂದಾಗ ರಾಜೇಶ್ ಇರಲಿಲ್ಲ. ಆದರೆ ಮನೆಯಿಂದ ಎರಡು ದಿನದಿಂದ ತುಂಬಾ ಕೆಟ್ಟ ವಾಸನೆ ಬರುತ್ತಿತ್ತು. ಕೊನೆಗೆ ನಾನೆ ಮನೆಗೆ ಹೋಗಿ ಹುಡುಕಾಡಿದೆ. ಆಗ ಬೆಡ್ ಕೆಳಗೆ ತುಂಡು ತುಂಡಾದ ಮಹಿಳೆಯ ದೇಹ ಕಂಡು ಬಂದಿದ್ದು, ನೋಡಿ ಶಾಕ್ ಆದೆ ಎಂದು ಮನೆ ಮಾಲೀಕ ಹೇಳಿದ್ದಾರೆ.

    ಪತಿಯೇ ನನ್ನ ಮಗಳನ್ನು ಕೊಲೆ ಮಾಡಿ, ಮೃತ ದೇಹವನ್ನು ಪೀಸ್ ಪೀಸ್ ಬೆಡ್ ಕೆಳಗೆ ಇಟ್ಟು 2-3 ದಿನಗಳಿಂದ ರಾಜೇಶ್ ಪರಾರಿಯಾಗಿದ್ದಾನೆ ಎಂದು ಮೃತ ಬಬಿತಾ ಪೋಷಕರು ಆರೋಪಿಸುತ್ತಿದ್ದಾರೆ.

    ಮನೆ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಾಲೀಕ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಈ ಕುರಿತು ತನಿಖೆ ಮುಂದುವರಿಸಿದ್ದು, ಆರೋಪಿ ರಾಜೇಶ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಡುಕನ ವಿಕೃತ ಕಾಮ ದಾಹಕ್ಕೆ ಗರ್ಭಿಣಿ ಮೇಕೆ ಬಲಿ

    ಕುಡುಕನ ವಿಕೃತ ಕಾಮ ದಾಹಕ್ಕೆ ಗರ್ಭಿಣಿ ಮೇಕೆ ಬಲಿ

    ಪಾಟ್ನಾ: ಕಾಮುಕನೊಬ್ಬ ಕುಡಿದ ಮತ್ತಿನಲ್ಲಿ ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರ ಎಸಗಿ ವಿಕೃತಿ ಮೆರೆದ ಪರಿಣಾಮ ಮೇಕೆ ಮೃತಪಟ್ಟಿರುವ ಆಘಾತಕಾರಿ ಘಟನೆ ಬಿಹಾರದ ಪಾರ್ಸಾ ಬಜಾರ್ ನಲ್ಲಿ ನಡೆದಿದೆ.

    ಈ ಕುರಿತು ಮೇಕೆ ಮಾಲಕಿ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದು, ಬಳಿಕ ಪೊಲೀಸರು ತನಿಖೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಮೊಹಮ್ಮದ್ ಸಿಮ್ರಾಜ್ ಎಂದು ಗುರುತಿಸಲಾಗಿದೆ.

    ಏನಿದು ಪ್ರಕರಣ:
    ಆರೋಪಿ ಸಿಮ್ರಾಜ್ ಮಧೆಪುರಾ ನಿವಾಸಿಯಾಗಿದ್ದು, ದಿನಕೂಲಿ ಕೆಲಸ ಮಾಡುತ್ತಿದ್ದನು. ಮಂಗಳವಾರ ರಾತ್ರಿ ಆರೋಪಿ ಕಂಠ ಪೂರ್ತಿ ಕುಡಿದು ತನ್ನ ಮನೆಯತ್ತ ಹೋಗಿದ್ದನು. ಆಗ ಪಕ್ಕದ ಮನೆ ಮಾಲಕಿ ತನ್ನ ಮನೆಯ ಮುಂದೆ ಮೇಕೆಯನ್ನು ಕಟ್ಟಿ ಹಾಕಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಮೇಕೆಯನ್ನು ಕರೆದುಕೊಂಡು ಹೋಗಿ ಅದರ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಮೇಕೆ ಮೂರು ತಿಂಗಳ ಗರ್ಭಿಣಿಯಾಗಿದ್ದು, ಲೈಂಗಿಕ ದೌರ್ಜನ್ಯದ ಬಳಿಕ ಮೇಕೆ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಬುಧವಾರ ಮುಂಜಾನೆ ಮಾಲಕಿ ಮೇಕೆಯನ್ನು ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಬಳಿಕ ಮನೆಯ ಹಿಂದೆ ಮೇಕೆ ಮೃತದೇಹ ಪತ್ತೆಯಾಗಿದೆ. ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಯ ದೂರಿದ ಆಧಾರದ ಮೇರೆಗೆ ಪೊಲೀಸರು ತನಿಖೆ ಮಾಡಿದಾಗ ಆರೋಪಿ ಸಿಮ್ರಾಜ್ ಸಿಕ್ಕಿಬಿದ್ದಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಆರೋಪಿ ತಾನೇ ಈ ಕೃತ್ಯ ಎಸಗಿರುವುದಾಗಿ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾನೆ. ಹೀಗಾಗಿ ಆತನ ವಿರುದ್ಧ ಐಪಿಸಿ ಸೆಕ್ಷನ್ ವನ್ಯಜೀವಿ ಸಂರಕ್ಷಣಾ ಕಾಯಿದೆ, 1971 ಸೇರಿದಂತೆ ಸಂಬಂಧಿತ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯಕ್ಕೆ ಮೇಕೆ ಮೃತದೇಹವನ್ನು ಪೊಲೀಸರು ಮರಣೋತ್ತರ ಮತ್ತು ಇತರ ವೈದ್ಯಕೀಯ ಪರೀಕ್ಷೆಗಳಿಗೆ ಪಶು ಆಸ್ಪತ್ರೆಗೆ ರವಾನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 15ರ ವಿದ್ಯಾರ್ಥಿನಿಯನ್ನೇ ಮದುವೆಯಾದ ಟ್ಯೂಷನ್ ಟೀಚರ್!

    15ರ ವಿದ್ಯಾರ್ಥಿನಿಯನ್ನೇ ಮದುವೆಯಾದ ಟ್ಯೂಷನ್ ಟೀಚರ್!

    – ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಗ್ರಾಮಸ್ಥರ ಹಿಂದೇಟು

    ಪಟ್ನಾ: ಟ್ಯೂಷನ್ ಕಲಿಸುತ್ತಿದ್ದ ಬಿಹಾರದ ಗ್ರಾಮವೊಂದರ ಶಿಕ್ಷಕನೊಬ್ಬ ತನ್ನ ಬಳಿ ಬರುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನೇ ಮದುವೆಯಾಗಿದ್ದಾನೆ.

    ನಾರಾಯಣ್‍ಪುರ ಗ್ರಾಮದಲ್ಲಿ ಶಿಕ್ಷಕ ಚಂದ್ರಪ್ರಕಾಶ್ ಮೆಹ್ತಾ(50) ವಿದ್ಯಾರ್ಥಿಗಳಿಗೆ ಖಾಸಗಿ ಟ್ಯೂಷನ್ ಕೇಂದ್ರವನ್ನು ನಡೆಸುತ್ತಿದ್ದನು. ಆತನ ಬಳಿ ಗ್ರಾಮದ ಹಲವು ಹೆಣ್ಣು ಮಕ್ಕಳು ಟ್ಯೂಷನ್‍ಗೆ ಹೋಗುತ್ತಿದ್ದರು. ಆದ್ರೆ ಕೆಲವು ದಿನಗಳ ಹಿಂದೆ ಚಂದ್ರಪ್ರಕಾಶ್ ಟ್ಯೂಷನ್‍ಗೆ ಬರುತ್ತಿದ್ದ 15 ವರ್ಷದ ವಿದ್ಯಾರ್ಥಿನಿಯೊಬ್ಬಳನ್ನು ಯಾರಿಗೂ ತಿಳಿಯದಂತೆ ವಿವಾಹವಾಗಿದ್ದನು. ಅಷ್ಟೇ ಅಲ್ಲದೆ ಅವಳ ಜೊತೆ ದೈಹಿಕ ಸಂಬಂಧವನ್ನು ಕೂಡ ಇಟ್ಟುಕೊಂಡಿದ್ದನು.

    ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಇಡೀ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ತಮ್ಮ ಮಕ್ಕಳಿಗೂ ಯಾರಾದರೂ ಮೋಡಿ ಮಾಡಿ ಮದುವೆಯಾಗಿಬಿಟ್ಟರೆ ಏನು ಗತಿ ಎಂದು ಹೆದರಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ.

    ಯಾರೋ ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ ಅಂತ ಶಿಕ್ಷಣದಿಂದ ವಂಚಿತರಾಗಿರುವ ಹೆಣ್ಣು ಮಕ್ಕಳು ಈಗ ಕಣ್ಣೀರಿಡುತ್ತಿದ್ದಾರೆ. ಘಟನೆ ಕುರಿತು ತಿಳಿಯುತ್ತಿದಂತೆ ಸ್ಥಳಕ್ಕೆ ಭೇಟಿ ನೀಡಿದ ಮಹಿಳಾ ಪರ ಸಂಘಟನೆಯ ಸದಸ್ಯರು ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೇ ಗ್ರಾಮಸ್ಥರು ಮಾತ್ರ ಯಾರ ಮೇಲೂ ನಮಗೆ ನಂಬಿಕೆ ಇಲ್ಲ. ನಮ್ಮ ಮಕ್ಕಳ ಭದ್ರತೆ ನಮಗೆ ಮುಖ್ಯ. ನಾವು ಅವರನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv