Tag: patna

  • ಕಾಲುನೋವಿನ ತಂದೆಯನ್ನು 1,200 ಕಿ.ಮೀ ಸೈಕಲ್‍ನಲ್ಲೇ ಕರ್ಕೊಂಡು ಬಂದ ಗಟ್ಟಿಗಿತ್ತಿ!

    ಕಾಲುನೋವಿನ ತಂದೆಯನ್ನು 1,200 ಕಿ.ಮೀ ಸೈಕಲ್‍ನಲ್ಲೇ ಕರ್ಕೊಂಡು ಬಂದ ಗಟ್ಟಿಗಿತ್ತಿ!

    ಪಾಟ್ನಾ: ಇದು 15 ವರ್ಷದ ಬಾಲಕಿಯ ಧೈರ್ಯ ಮತ್ತು ದಿಟ್ಟ ನಿರ್ಧಾರದ ನೈಜ ಕಥೆಯಾಗಿದೆ. ಲಾಕ್‍ಡೌನ್‍ನಿಂದಾಗಿ 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ತಂದೆಯನ್ನು ಸೈಕಲಿನಲ್ಲಿ ಕೂರಿಸಿಕೊಂಡು 1,200 ಕಿ.ಮೀ ಕ್ರಮಿಸಿ ಧೈರ್ಯ ಮೆರೆದಿದ್ದಾಳೆ.

    ದೆಹಲಿಯಿಂದ ಬಿಹಾರ ಜಿಲ್ಲೆಯ ದರ್ಭಾಂಗಕ್ಕೆ ಸೈಕಲಿನಲ್ಲಿ ಕ್ರಮಿಸಿದ ಜ್ಯೋತಿ, ಈ ಮಧ್ಯೆ ಹಲವು ಏಳು- ಬೀಳುಗಳನ್ನು ಎದುರಿಸಿಕೊಂಡು ತನ್ನ ತಂದೆಯ ಜೊತೆ ಕೊನೆಗೂ ಊರು ಸೇರಿದ್ದಾಳೆ. ಮೇ 10ರಂದು ಜ್ಯೋತಿ ದೆಹಲಿಯಿಂದ ಹೊರಟಿದ್ದಾಳೆ. ಸೈಕಲಿನಲ್ಲಿ ಹಿಂಬದಿ ಸವಾರನಾಗಿ ಜ್ಯೋತಿ ಅಪ್ಪ ಕುಳಿತಿದ್ದರು.

    ನಾವು ತುಂಬಾನೇ ಬಡವರಾಗಿದ್ದು, ನಮ್ಮ ಕೈಯಲ್ಲಿ ಅಲ್ಪ-ಸ್ವಲ್ಪ ಹಣವಿತ್ತು. ಬಾಡಿಗೆ ಮನೆಯಲ್ಲಿದ್ದ ನಮ್ಮನ್ನ ಮಾಲೀಕ ಒಂದಾ ನೀವು ಹಣ ಪಾವತಿಸಬೇಕು, ಇಲ್ಲವೆಂzಲ್ಲಿ ಮನೆ ಖಾಲಿ ಮಾಡಬೇಕು ಎಂದು ಗದರಿದ್ದಾನೆ. ಇದು ನಮ್ಮನ್ನ ಹತಾಶರನ್ನಾಗಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ನಾವು ನಮ್ಮ ಹಳ್ಳಿಗೆ ವಾಪಸ್ ಹೋಗಲು ನಿರ್ಧರಿಸಿದ್ದು, ಟ್ರಕ್ ಚಾಲಕನ ಬಳಿ ನಮ್ಮನ್ನು ಕರೆದೊಯ್ಯುವಂತೆ ಕೇಳಿಕೊಂಡೆವು. ಆಗ ಆತ 6,000 ನೀಡಬೇಕು ಎಂದು ತಿಳಿಸಿದನು. ಆದರೆ ಆತನಿಗೆ ಹಣ ಕೊಡುವಷ್ಟು ನಮ್ಮ ಬಳಿ ಹಣವಿರಲಿಲ್ಲ. ಹೀಗಾಗಿ ನನ್ನ ತಂದೆ 500 ರೂ. ನೀಡಿ ಒಂದು ಸೈಕಲ್ ಖರೀದಿಸಿದ್ದು, ಅದರಲ್ಲೇ ದರ್ಭಾಂಗಕ್ಕೆ ತಲುಪಿದೆವು ಎಂದು ಜ್ಯೋತಿ ಕುಮಾರಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾಳೆ.

    ಕೊರೊನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದ್ದರ ಪರಿಣಾಮ ಪ್ರವಾಸಿ ಕಾರ್ಮಿಕರು ತಮ್ಮ ಮನೆಗಳತ್ತ ತೆರಳಲು ಬಸ್ ಇಲ್ಲದೆ ನರಕಯಾತನೆ ಅನುಭವಿಸಿದ್ದಾರೆ. ಅನೇಕರು ಲಾರಿ, ಟ್ರಕ್ ಗಳಲ್ಲಿ ತಮ್ಮ ತಮ್ಮ ಊರುಗಳತ್ತ ತೆರಳಿದರೆ, ಇನ್ನೂ ಕೆಲವರು ಕಾಲ್ನಡಿಗೆಯಲ್ಲೇ ಸಾವಿರಾರು ಕಿ.ಮೀ ಕ್ರಮಿಸಿರುವುದನ್ನು ನಾವಿಲ್ಲಿ ಸ್ಮರಿಸಬಹುದು. ಇಂತದ್ದೇ ಕಥೆ ಜ್ಯೋತಿ ಮತ್ತು ಆಕೆಯ ತಂದೆಯದ್ದಾಗಿದೆ.

    ನಾನು ರಾತ್ರಿ ಹೊತ್ತು ಕೂಡ ಸೈಕಲ್ ಓಡಿಸಿದ್ದೇನೆ. ನನಗೆ ಯಾವುದೇ ರೀತಿಯ ಭಯವಾಗಿರಲಿಲ್ಲ. ಆದರೆ ಭಯವಾಗುತ್ತಿದ್ದಿದ್ದು ಒಂದೇ ಕಾರಣಕ್ಕಾಗಿ. ಅದೇನಂದರೆ ಯಾರಾದರೂ ಹಿಂದಿನಿಂದ ಬಂದು ನಮ್ಮ ಸೈಕಲ್ ಗೆ ಗುದ್ದಿ ಬಿಟ್ಟರೆ ಅನ್ನೋದು ಭಯವಾಗಿತ್ತು. ಆದರೆ ದೇವರ ದಯೆಯಿಂದ ಅಂತಹ ಘಟನೆ ನಡೆಯಲಿಲ್ಲ ಎಂದು ಜ್ಯೋತಿ ವಿವರಿಸಿದ್ದಾಳೆ.

    ಜ್ಯೋತಿಯ ತಂದೆ ದೆಹಲಿಯಲ್ಲಿ ಇ-ರಿಕ್ಷಾ ಚಾಲಕರಾಗಿದ್ದರು. ಆದರೆ ಮಾರ್ಚ್ 25ರಿಂದ ಲಾಕ್ ಡೌನ್ ಹೇರಲಾದ ಪರಿಣಾಮ ತನ್ನ ಬಳಿಯಿದ್ದ ರಿಕ್ಷಾವನ್ನು ಮಾಲೀಕನಿಗೆ ಕೊಟ್ಟಿದ್ದಾರೆ. ಆ ನಂತರ ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟಪಡುತ್ತಿದ್ದರು.

    ಮೊದಲೇ ಕಾಲು ನೋವಿನಿಂದ ಬಳಲುತ್ತಿದ್ದ ಜ್ಯೋತಿ ತಂದೆಗೆ ನಡೆದಾಡಲು ಕಷ್ಟವಾಗುತ್ತಿತ್ತು. ಅವರ ಬಳಿ 600 ರೂ. ಮಾತ್ರ ಇತ್ತು. ದಾನಿಗಳ ನೆರವಿನಿಂದ ಹಾಗೂ ಕ್ಯಾಂಪ್ ಗಳು ನೀಡುವ ಆಹಾರದ ಮೂಲಕ ದಿನಕಳೆಯುತ್ತಿದ್ದೆವು ಎಂದಿದ್ದಾಳೆ. ಒಟ್ಟಿನಲ್ಲಿ ಹೇಗೋ ಕಷ್ಟಪಟ್ಟು ತಾಯ್ನಾಡಿಗೆ ಬಂದು ಸೇರಿದ ಜ್ಯೋತಿ ಹಾಗೂ ಆಕೆಯ ತಂದೆಯನ್ನು ಕ್ವಾರಂಟೈನ್ ಮಾಡಲಾಯಿತು. ಆದರೆ ಕ್ವಾರಂಟೈನ್ ಕೇಂದ್ರದಲ್ಲಿ ಜ್ಯೋತಿ ಒಬ್ಬಳೇ ಹುಡುಗಿಯಾಗಿದ್ದಳು.

  • 16ರ ಬಾಲಕಿ ಮೇಲೆ ಐವರಿಂದ ಗ್ಯಾಂಗ್ ರೇಪ್ – ಬೆತ್ತಲೆ ಫೋಟೋಗಳು ಶೇರ್

    16ರ ಬಾಲಕಿ ಮೇಲೆ ಐವರಿಂದ ಗ್ಯಾಂಗ್ ರೇಪ್ – ಬೆತ್ತಲೆ ಫೋಟೋಗಳು ಶೇರ್

    – ಲಾಕ್‍ಡೌನಿಂದ ಗುಜರಾತ್‍ನಲ್ಲಿ ಸಿಲುಕಿಕೊಂಡಿದ್ದ ತಂದೆ
    – ಸಾಮಾಜಿಕ ಜಾಲತಾಣಗಳಲ್ಲಿ ಹರಿಡಾಡುತ್ತಿದ್ದ ಫೋಟೋಗಳಿಂದ ಪ್ರಕರಣ ಪತ್ತೆ

    ಪಾಟ್ನಾ: ಐವರು ಕಾಮುಕರು ಸೇರಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸೆಗಿ, ಆಕೆಯ ಬೆತ್ತಲೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಅಮಾನವೀಯ ಕೃತ್ಯ ಬಿಹಾರ್ ನಲ್ಲಿ ಬೆಳಕಿಗೆ ಬಂದಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಬಾಲಕಿಯ ಫೋಟೋಗಳನ್ನು ನೋಡಿದ ‘ಸೈಬರ್ ಸೇನಾನಿ’ ತಂಡ ಈ ಬಗ್ಗೆ ಪೊಲೀಸರಿಗೆ ದೂರು ನೀಡಿತ್ತು. ಹೀಗಾಗಿ ಏಪ್ರಿಲ್ 24ರಂದು ನಡೆದಿದ್ದ ಗ್ಯಾಂಗ್ ರೇಪ್ ಬೆಳಕಿಗೆ ಬಂದಿದ್ದು, ಐವರ ಪೈಕಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.

    ಲಾಕ್‍ಡೌನ್ ಹಿನ್ನೆಲೆ ಕೆಲಸಕ್ಕೆ ಗುಜರಾತ್‍ ನ ಅಹಮದಾಬಾದ್‍ಗೆ ಹೋಗಿದ್ದ ಬಾಲಕಿಯ ತಂದೆ ಅಲ್ಲಿಯೇ ಸಿಲುಕಿಕೊಂಡಿದ್ದರು. ಹೀಗಾಗಿ ಬಾಲಕಿ ಕುಟುಂಬಕ್ಕೆ ಸಹಾಯ ಆಗಲಿ ಎಂದು ಕೆಲಸಕ್ಕೆ ಹೋಗುತ್ತಿದ್ದಳು. ಏಪ್ರಿಲ್ 24ರಂದು ರಾತ್ರಿ ಕೆಲಸ ಮುಗಿಸಿಕೊಂಡು ಬಾಲಕಿ ಮನೆಗೆ ಬರುತ್ತಿದ್ದ ವೇಳೆ ಇಬ್ಬರು ಆಕೆಯನ್ನು ಅಡ್ಡಗಟ್ಟಿ ಮಾವಿನ ತೋಟಕ್ಕೆ ಎಳೆದುಕೊಂಡು ಹೋಗಿದ್ದಾರೆ. ಬಳಿಕ ಅಲ್ಲಿಗೆ ತಮ್ಮ ಮೂವರು ಸ್ನೇಹಿತರನ್ನು ಕರೆದು ಬಾಲಕಿ ಮೇಲೆ ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.

    ಮಾವಿನ ತೋಟದಲ್ಲಿ ಕಾಮುಕರು ಬಾಲಕಿ ಮೇಲೆ ಅಟ್ಟಹಾಸ ಮೆರೆದಿದ್ದಲ್ಲದೇ ಆಕೆಯ ಬೆತ್ತಲೆ ಫೋಟೋಗಳನ್ನು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದರು. ಅಲ್ಲದೇ ಈ ಬಗ್ಗೆ ಯಾರಿಗೂ ಹೇಳಬೇಡ ಎಂದು ಹೆದರಿಸಿ, ಬಾಲಕಿ ಬಳಿ ಪ್ರಮಾಣ ಮಾಡಿಸಿಕೊಂಡಿದ್ದರು. ಕಾಮುಕರ ದುಕೃತ್ಯಕ್ಕೆ ಹೆದರಿದ ಬಾಲಕಿ ಈ ಬಗ್ಗೆ ಯಾರಿಗೂ ಹೇಳಿರಲಿಲ್ಲ. ತಂದೆ ಅಹಮದಾಬಾದ್‍ನಲ್ಲಿ ಸಿಲುಕಿಕೊಂಡಿದ್ದ ಕಾರಣಕ್ಕೆ ಬಾಲಕಿ ತನ್ನ ತಾಯಿ, ಅಜ್ಜ, ಅಜ್ಜಿ ಜೊತೆಗೆ ವಾಸವಾಗಿದ್ದಳು. ಹೀಗಾಗಿ ಬಾಲಕಿ ಕೀಚಕರ ಬಗ್ಗೆ ಬಾಯಿಬಿಡದೆ ಸುಮ್ಮನ್ನಿದ್ದಳು.

    ಆದರೆ ಕೃತ್ಯವೆಸೆಗಿದ ಆರೋಪಿಗಳು ಬಾಲಕಿಯ ಬೆತ್ತಲೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಫೋಟೋಗಳನ್ನು ನೋಡಿದ ‘ಸೈಬರ್ ಸೇನಾನಿ’ ತಂಡ ಪೊಲೀಸರ ಗಮನಕ್ಕೆ ತಂದಿದ್ದು, ಈ ಬಗ್ಗೆ ತನಿಖೆ ನಡೆಸಿದಾಗ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎನ್ನುವುದು ತಿಳಿದಿದೆ. ಹೀಗಾಗಿ ಬಾಲಕಿಯನ್ನು ಪತ್ತೆ ಹಚ್ಚಿ ಆಕೆಯ ಹೇಳಿಕೆ ಹಾಗೂ ತಾಯಿಯ ಹೇಳಿಕೆಗಳನ್ನು ಪಡೆದು, ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡರು.

    ಹಾಗೆಯೇ ಶುಕ್ರವಾರ ರಾತ್ರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಓರ್ವ ಆರೋಪಿಗಾಗಿ ಬಲೆ ಬೀಸಲಾಗಿದೆ. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಲಾಕ್‍ಡೌನ್‍ನಿಂದ ತವರು ಮನೆಯಲ್ಲೇ ಪತ್ನಿ ಲಾಕ್ – ಮಾಜಿ ಪ್ರೇಯಸಿಯ ಜೊತೆ ಪತಿ 2ನೇ ಮದ್ವೆ

    ಲಾಕ್‍ಡೌನ್‍ನಿಂದ ತವರು ಮನೆಯಲ್ಲೇ ಪತ್ನಿ ಲಾಕ್ – ಮಾಜಿ ಪ್ರೇಯಸಿಯ ಜೊತೆ ಪತಿ 2ನೇ ಮದ್ವೆ

    – ಮನೆಗೆ ಹಿಂದಿರುಗುವಂತೆ ಪತ್ನಿಗೆ ಫೋನ್ ಮಾಡಿ ಒತ್ತಾಯ

    ಪಾಟ್ನಾ: ಕೊರೊನಾ ವೈರಸ್‍ನಿಂದ ಇಡೀ ದೇಶದಲ್ಲಿ ಲಾಕ್‍ಡೌನ್ ಆಗಿದೆ. ಹೀಗಾಗಿ ಅನೇಕರು ತಮ್ಮ ಕುಟುಂಬದವರಿಂದ ದೂರನೇ ಉಳಿದಿದ್ದಾರೆ. ಈ ಮಧ್ಯೆ ವ್ಯಕ್ತಿಯೊಬ್ಬ ತನ್ನ ಪತ್ನಿ ತವರು ಮನೆಯಿಂದ ಹಿಂದಿರುಗಲಿಲ್ಲ ಎಂದು ತನ್ನ ಮಾಜಿ ಪ್ರೇಯಸಿಯ ಜೊತೆ ಮದುವೆಯಾಗಿರುವ ಘಟನೆ ಪಾಟ್ನಾದ ಪಾಲಿಗಂಜ್ನನಲ್ಲಿ ನಡೆದಿದೆ.

    ಧೀರಜ್ ಕುಮಾರ್ ತನ್ನ ಪತ್ನಿ ಪೋಷಕರ ಮನೆಯಿಂದ ವಾಪಸ್ ಬಂದಿಲ್ಲ ಎಂದು ತನ್ನ ಮಾಜಿ ಗೆಳತಿಯನ್ನು ಮದುವೆಯಾಗಿದ್ದಾನೆ.

    ಏನಿದು ಪ್ರಕರಣ?
    ಮಾರ್ಚ್ ನಲ್ಲಿ ಲಾಕ್‍ಡೌನ್ ಘೋಷಿಸುವ ಮೊದಲು ಧೀರಜ್ ಪತ್ನಿ ದುಲ್ಹಿನ್ ಬಜಾರ್ ಪ್ರದೇಶದ ತನ್ನ ತಾಯಿಯ ಮನೆಗೆ ಹೋಗಿದ್ದರು. ಆದರೆ ಮೋದಿ ಮಾರ್ಚ್ 25 ರಂದು 21 ದಿನಗಳ ಲಾಕ್‍ಡೌನ್ ಘೋಷಿಸಿದ್ದರು. ಅಂದಿನಿಂದ ಎಲ್ಲಾ ವಾಹನಗಳ ಸಂಚಾರವೂ ಸ್ಥಗಿತವಾಗಿದೆ. ಆದರೆ ಧೀರಜ್, ಪತ್ನಿಗೆ ಅನೇಕ ಬಾರಿ ಫೋನ್ ಮಾಡಿ ಹೇಗಾದರೂ ಮಾಡಿ ಮನೆಗೆ ವಾಪಸ್ ಬರುವಂತೆ ಒತ್ತಾಯಿಸಿದ್ದಾನೆ. ಆದರೆ ವಾಹನಗಳಿಲ್ಲದೆ ಪತಿ ಮನೆಗೆ ಹೋಗಲು ಪತ್ನಿಗೆ ಸಾಧ್ಯವಾಗಿಲ್ಲ.

    ಇತ್ತ ಮತ್ತೆ ಲಾಕ್‍ಡೌನ್ ಅನ್ನು ಮೇ 3ರ ವರೆಗೆ ವಿಸ್ತರಿಸಲಾಗಿತ್ತು. ಇದರಿಂದ ಕೋಪಗೊಂಡ ಧೀರಜ್ ಕುಮಾರ್ ಪತ್ನಿ ಮನೆಗೆ ಹಿಂದಿರುಗಿಲ್ಲ ಎಂದು ತನ್ನ ಮಾಜಿ ಪ್ರೇಯಸಿಯನ್ನು ಮದುವೆಯಾಗಲು ನಿರ್ಧರಿಸಿದ್ದನು. ಅದರಂತೆಯೇ ಆಕೆಯನ್ನು ಮದುವೆಯಾಗಿದ್ದಾನೆ.

    ಪತಿಯ ಎರಡನೇ ಮದುವೆ ಬಗ್ಗೆ ತಿಳಿದು ಪತ್ನಿ ತಕ್ಷಣ ಪೊಲೀಸರನ್ನು ಸಂಪರ್ಕಿಸಿ ಪತಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಪತ್ನಿ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಧೀರಜ್‍ ಕುಮಾರ್‌ನನ್ನು ಪೊಲೀಸ್ ಠಾಣೆಗೆ ಕರೆಸಿದ್ದಾರೆ. ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

  • ಐಸೋಲೇಷನ್ ವಾರ್ಡಿನಲ್ಲಿದ್ದ ರೋಗಿಯ ಮೇಲೆ ಸತತ 2 ರಾತ್ರಿ ಅತ್ಯಾಚಾರ – ಸಂತ್ರಸ್ತೆ ಸಾವು

    ಐಸೋಲೇಷನ್ ವಾರ್ಡಿನಲ್ಲಿದ್ದ ರೋಗಿಯ ಮೇಲೆ ಸತತ 2 ರಾತ್ರಿ ಅತ್ಯಾಚಾರ – ಸಂತ್ರಸ್ತೆ ಸಾವು

    – ತೀವ್ರ ರಕ್ತಸ್ರಾವದಿಂದ ಮಹಿಳೆ ಸಾವು

    ಪಟ್ನಾ: ಒಂದುಕಡೆ ದೇಶಾದ್ಯಂತ ಕೊರೊನಾ ವೈರಸ್ ಸೋಂಕಿತರನ್ನು ಗುಣಪಡಿಸುವಲ್ಲಿ ವೈದ್ಯಕೀಯ ಇಲಾಖೆ ಹಗಲಿರುಳು ಎನ್ನದೇ ಸೇವೆ ಮಾಡುತ್ತಿದ್ದಾರೆ. ಆದರೆ ಬಿಹಾರದಲ್ಲಿ ವೈದ್ಯರು ಐಸೋಲೇಷನ್ ವಾರ್ಡಿನಲ್ಲಿದ್ದ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಬಿಹಾರದ ಗಯಾದಲ್ಲಿ ಈ ಘಟನೆ ನಡೆದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ ನಂತರ ಸಂತ್ರಸ್ತೆ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಅನುಗ್ರಹ ನಾರಾಯಣ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮೃತ ಸಂತ್ರಸ್ತೆಯ ಅತ್ತೆ ಅಧಿಕಾರಿಗಳಿಗೆ ದೂರು ನೀಡಿದ ಬಳಿಕ ಮಂಗಳವಾರ ಈ ದುಷ್ಕೃತ್ಯ ಬೆಳಕಿಗೆ ಬಂದಿದೆ.

    ಏನಿದು ಪ್ರಕರಣ?
    ಕೊರೊನಾದಿಂದ ಇಡೀ ದೇಶವೇ 21 ದಿನ ಲಾಕ್‍ಡೌನ್ ಆಗಿದೆ. 25 ವರ್ಷದ ಸಂತ್ರಸ್ತೆ ಪಂಜಾಬ್‍ನ ಲೂಧಿಯಾನದಿಂದ ಬಿಹಾರದ ಗಯಾಕ್ಕೆ ಮಾರ್ಚ್ 25ರಂದು ಪತಿಯೊಂದಿಗೆ ಬಂದಿದ್ದರು. ಮೃತ ಸಂತ್ರಸ್ತೆ ಎರಡು ತಿಂಗಳ ಗರ್ಭಿಣಿಯಾಗಿದ್ದು, ಆಕೆಗೆ ಗರ್ಭಪಾತವಾಗಿತ್ತು. ಗರ್ಭಪಾತದ ಕಾರಣದಿಂದಾಗಿ ಸಂತ್ರಸ್ತೆಗೆ ಹೆಚ್ಚು ರಕ್ತಸ್ರಾವವಾಗುತ್ತಿತ್ತು. ಹೀಗಾಗಿ ಆಕೆಯನ್ನು ಗಯಾದ ಮಾರ್ಚ್ 27ರಂದು ಅನುಗ್ರಹ ನಾರಾಯಣ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಅಲ್ಲಿ ಸಂತ್ರಸ್ತೆಯನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಬಳಿಕ ಏಪ್ರಿಲ್ 1 ರಂದು ಕೊರೊನಾ ವೈರಸ್ ಶಂಕೆ ಇದೆ ಎಂದು ಸಂತ್ರಸ್ತೆಯನ್ನು ಪ್ರತ್ಯೇಕ ವಾರ್ಡಿನಲ್ಲಿ ಇರಿಸಲಾಗಿತ್ತು. ಪ್ರತ್ಯೇಕ ವಾರ್ಡಿನಲ್ಲಿ ಸಂತ್ರಸ್ತೆ ಒಬ್ಬಂಟಿಯಾಗಿದ್ದಳು. ಇದೇ ವೇಳೆ ತಪಾಸಣೆ ಮಾಡಲು ಬರುತ್ತಿದ್ದ ವೈದ್ಯರು ಏಪ್ರಿಲ್ 2 ಮತ್ತು 3ರಂದು ಸತತ ಎರಡು ರಾತ್ರಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬದವರು ಆರೋಪಿಸಿದ್ದಾರೆ.

    ಕೊರೊನಾ ಸೋಂಕು ಇಲ್ಲದಿರುವುದು ದೃಢಪಟ್ಟ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿತ್ತು. ಆದರೆ ಆಕೆ ಮನೆಯಲ್ಲಿ ಒಬ್ಬಳೇ ಮೌನವಾಗಿ ಇರುತ್ತಿದ್ದು, ಭಯಪಡುತ್ತಿದ್ದಳು. ಆಗ ಮನೆಯವರು ಪದೇ ಪದೇ ಕೇಳಿದಾಗ ಆಸ್ಪತ್ರೆಯಲ್ಲಿ ವೈದ್ಯರು ಅತ್ಯಾಚಾರ ಎಸಗಿರುವ ವಿಚಾರವನ್ನು ಹೇಳಿದ್ದಾಳೆ. ಆದರೆ ಚಿಕಿತ್ಸೆ ಪಡೆದರೂ ರಕ್ತಸ್ರಾವ ನಿಂತಿರಲಿಲ್ಲ. ಕೊನೆಗೆ ತೀವ್ರ ರಕ್ತಸ್ರಾವದಿಂದ ಏಪ್ರಿಲ್ 6 ರಂದು ಸೊಸೆ ಮೃತಪಟ್ಟಳು ಎಂದು ಅತ್ತೆ ತಿಳಿಸಿದ್ದಾರೆ.

    ಸಂತ್ರಸ್ತೆಯ ಅತ್ತೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಸ್ಪತ್ರೆಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಆದರೆ ಸಂತ್ರಸ್ತೆಯ ಅತ್ತೆಗೆ ಆರೋಪಿಗಳನ್ನು ಗುರುತಿಸಲು ಸಾಧ್ಯವಾಗಿಲ್ಲ. ಸದ್ಯಕ್ಕೆ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

    ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ, ಆರೋಪಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಸ್ಪತ್ರೆಯ ಅಧೀಕ್ಷಕ ಡಾ.ವಿ.ಕೆ.ಪ್ರಸಾದ್ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರಂತೆ ನಟಿಸಿ ಆಸ್ಪತ್ರೆಯ ಪ್ರತ್ಯೇಕವಾದ ವಾರ್ಡಿಗೆ ಹೋಗಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

  • ಮದುವೆಯಾದ ಕೆಲವೇ ಗಂಟೆಗಳಲ್ಲಿ ಪ್ರಿಯಕರನ ಜೊತೆ ವಧು ಎಸ್ಕೇಪ್

    ಮದುವೆಯಾದ ಕೆಲವೇ ಗಂಟೆಗಳಲ್ಲಿ ಪ್ರಿಯಕರನ ಜೊತೆ ವಧು ಎಸ್ಕೇಪ್

    – ವಧು ಇಲ್ಲದೆ ಹಿಂತಿರುಗಲ್ಲ ಎಂದು ಹಠ ಹಿಡಿದ ವರ
    – ಗ್ರಾಮದ ಮತ್ತೊಬ್ಬ ಯುವತಿ ಜೊತೆ ವರನ ಮದುವೆ

    ಪಾಟ್ನಾ: ಮದುವೆಯಾದ ಕೆಲವೇ ಗಂಟೆಗಳಲ್ಲಿ ಪ್ರಿಯಕರನ ಜೊತೆ ವಧು ಎಸ್ಕೇಪ್ ಆದ ಘಟನೆ ಬಿಹಾರದ ಗೋಪಾಲ್‍ಗಂಜ್‍ನಲ್ಲಿ ನಡೆದಿದೆ.

    ವಧುವಿನ ಕಡೆಯವರು ಖುಷಿಯಿಂದ ವರನನ್ನು ಮದುವೆ ಮಂಟಪಕ್ಕೆ ಸ್ವಾಗತಿಸಿದ್ದರು. ಊಟ ಮಾಡಿದ ಬಳಿಕ ವರ ಮಂಟಪಕ್ಕೆ ಹೋಗಿ ಮದುವೆಯ ಎಲ್ಲಾ ಶಾಸ್ತ್ರವನ್ನು ನೆರವೇರಿಸಿದ್ದಾನೆ. ಮದುವೆ ಆದ ನಂತರ ವಧುವನ್ನು ಬೀಳ್ಕೊಡಲು ಎಲ್ಲ ತಯಾರಿ ನಡೆಸಲಾಗುತ್ತಿತ್ತು. ಈ ನಡುವೆ ವಧು ತನ್ನ ಪ್ರಿಯಕರನ ಜೊತೆ ಪರಾರಿ ಆಗಿದ್ದಾಳೆ ಎಂಬ ಸುದ್ದಿ ಕೇಳಿ ಬಂತು. ಈ ವಿಷಯ ತಿಳಿದ ವರ ಬೇಸರಗೊಂಡು ನಾನು ವಧು ಇಲ್ಲದೆ ಇಲ್ಲಿಂದ ಹಿಂತಿರುಗುವುದಿಲ್ಲ ಎಂದು ಹಠ ಹಿಡಿದಿದ್ದರು.

    ವಧು ತನ್ನ ಪ್ರಿಯಕರನ ಜೊತೆ ಪರಾರಿಯಾದ ನಂತರ ಇಬ್ಬರ ಕುಟುಂಬಸ್ಥರ ನಡುವೆ ದೊಡ್ಡ ವಾಗ್ವಾದವೇ ನಡೆಯಿತು. ಬಳಿಕ ವಧುವಿನ ಕುಟುಂಬಸ್ಥರು ವರನ ಕಡೆಯವರಿಗೆ ಸಮಾಧಾನ ಮಾಡಿ ಗ್ರಾಮದ ಮತ್ತೊಬ್ಬ ಯುವತಿ ಜೊತೆ ವರನಿಗೆ ಮದುವೆ ಮಾಡಲು ನಿರ್ಧರಿಸಿದ್ದರು. ಮತ್ತೊಬ್ಬ ಯುವತಿಯ ಜೊತೆ ಮದುವೆ ಮಾಡಿಸಿದಾಗ ವರ ಹಾಗೂ ಆತನ ಕುಟುಂಬಸ್ಥರು ಕೋಪ ಮರೆತು ಶಾಂತರಾದರು.

    ವರ ಹಠ ಮಾಡುತ್ತಿರುವುದನ್ನು ನೋಡಿದ ವಧುವಿನ ತಂದೆ ತನ್ನ ಪಕ್ಕದ ಮನೆಯಲ್ಲಿ ವಾಸಿಸುವ ಯುವತಿ ಜೊತೆ ವರನ ಮದುವೆ ಮಾಡಲು ನಿರ್ಧರಿಸಿದ್ದರು. ವರ ಯುವತಿಯನ್ನು ನೋಡಿ ಮದುವೆಯಾಗಲು ಒಪ್ಪಿಕೊಂಡನು. ಬಳಿಕ ವರ ಒಂದೇ ದಿನ ಎರಡು ಬಾರಿ ಮದುವೆಯಾದನು. ಮದುವೆ ಆದ ನಂತರ ಆ ಯುವತಿಯನ್ನು ಕುಟುಂಬಸ್ಥರು ಸಂತೋಷದಿಂದ ಆಕೆಯ ಪತಿಯ ಮನೆಗೆ ಕಳುಹಿಸಿಕೊಟ್ಟರು.

  • ಎರಡು ಮಕ್ಕಳ ತಾಯಿಗೆ ಯುವಕನ ಮೇಲೆ ಲವ್!

    ಎರಡು ಮಕ್ಕಳ ತಾಯಿಗೆ ಯುವಕನ ಮೇಲೆ ಲವ್!

    – ಪ್ರೀತಿಗಾಗಿ ಧರ್ಮವನ್ನೇ ತೊರೆಯಲು ರೆಡಿ

    ಪಾಟ್ನಾ: ಇಬ್ಬರು ಮಕ್ಕಳಿದ್ದೂ ಮಹಿಳೆಗೆ ಯುವಕನ ಮೇಲೆ ಪ್ರೀತಿ ಹುಟ್ಟಿದ ಪ್ರಕರಣವೊಂದು ಪಾಟ್ನಾದ ಪುಲ್ವಾರಿಶರೀಫ್ ಎಂಬಲ್ಲಿ ಬೆಳಕಿಗೆ ಬಂದಿದೆ.

    2 ಮಕ್ಕಳ ತಾಯಿ ಸೋನಮ್ ಗೆ ಶಾಹೀದ್ ಎಂಬಾತನ ಮೇಲೆ ಪ್ರೇಮಾಂಕುರವಾಗಿದೆ. ಅಲ್ಲದೆ ತನ್ನ ಪ್ರಿಯತಮನಿಗೋಸ್ಕರ ಆಕೆ ತನ್ನಿಬ್ಬರು ಮಕ್ಕಳು ಹಾಗೂ ಪತಿಯನ್ನು ಕೂಡ ಕೈ ಕೈಬಿಡಲು ತೀರ್ಮಾನ ಮಾಡಿದ್ದಾಳೆ. ಹೀಗೆ ಎಲ್ಲರನ್ನೂ ಬಿಟ್ಟು ತನ್ನ ಬಾಯ್ ಫ್ರೆಂಡ್ ಜೊತೆ ಹಾಯಾಗಿ ಹೊಸ ಜೀವನ ನಡೆಸಲು ನಿರ್ಧರಿಸಿದ್ದಾಳೆ. ಇಷ್ಟು ಮಾತ್ರವಲ್ಲದೆ ತನ್ನ ಧರ್ಮವನ್ನು ಕೂಡ ತೊರೆದು ಶಾಹೀದ್ ಜೊತೆ ಮದುವೆಯಾಗಲು ನಿರ್ಧರಿಸಿದ್ದಾಳೆ.

    ಇದೀಗ ಸೋನಮ್, ತಾನು ತನ್ನ ಗಂಡನ ಜೊತೆ ಸಂಸಾರ ನಡೆಸಲು ಹಾಗೂ ಮಕ್ಕಳನ್ನು ಕೂಡ ತನ್ನೊಂದಿಗೆ ಇಟ್ಟುಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದ್ದಾಳೆ. ಸೋನಮ್ ಪತಿ, ಪೊಲೀಸ್ ಜೀಪಿನ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಪತ್ನಿಯನ್ನು ಚೆನ್ನಾಗಿ ನೋಡುಕೊಳ್ಳುವುದಾಗಿ ಹೇಳಿದ್ದಾನೆ. ಆದರೆ ಸೋನಮ್ ಮಾತ್ರ ತನಗೆ ಗಂಡ ಬೇಡವೇ ಬೇಡ ಎಂದು ಹಠ ಹಿಡಿದಿದ್ದಾಳೆ. ಇದರಿಂದ ಚಿಂತೆಗೀಡಾದ ಪತಿ ಮಗನನ್ನು ಬಿಟ್ಟು, ಮಗಳನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು ಎಂದು ಹೇಳಿದ್ದಾನೆ.

    ಇಷ್ಟು ಮಾತ್ರವಲ್ಲದೆ ಸೋನಮ್, ನನ್ನ ಮಕ್ಕಳ ಮೇಲೆ ನನಗೆ ಯಾವುದೇ ಭಾವನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ. ಸದ್ಯ ಈ ಪ್ರಕರಣವು ನ್ಯಾಯಾಲಯದಲ್ಲಿದೆ. ತಾಯಿ ಇಲ್ಲದೆ ಮಕ್ಕಳು ತಮ್ಮ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದಾರೆ.

  • ಒಳಉಡುಪಿನಲ್ಲಿ ಮೊಬೈಲ್, ಟೋಪಿಯಲ್ಲಿ ಬ್ಲೂಟೂತ್ – ನಕಲು ಮಾಡಲು ಹೋಗಿ ಸಿಕ್ಕಿಬಿದ್ದ

    ಒಳಉಡುಪಿನಲ್ಲಿ ಮೊಬೈಲ್, ಟೋಪಿಯಲ್ಲಿ ಬ್ಲೂಟೂತ್ – ನಕಲು ಮಾಡಲು ಹೋಗಿ ಸಿಕ್ಕಿಬಿದ್ದ

    ಪಾಟ್ನಾ: ಪೊಲೀಸ್ ಕಾನ್‍ಸ್ಟೇಬಲ್ ಚಾಲಕನ ಲಿಖಿತ ಪರೀಕ್ಷೆಯಲ್ಲಿ ನಕಲು ಮಾಡುವ ಮೂಲಕ ವ್ಯಕ್ತಿಯೊಬ್ಬ ನಕಲು ಮಾಡಲು ಹೋಗಿ ಸಿಕ್ಕಿಹಾಕಿಕೊಂಡ ಘಟನೆ ಬಿಹಾರದಲ್ಲಿ ನಡೆದಿದೆ.

    ಪರೀಕ್ಷೆಯಲ್ಲಿದ್ದ ಸುನೀಲ್ ಜಮುಯಿ ಎಂಬವನು ತನ್ನ ಒಳಉಡುಪಿನಲ್ಲಿ ಮೊಬೈಲ್ ಹಾಗೂ ಟೋಪಿಯಲ್ಲಿ ಬ್ಲೂಟೂತ್ ಬಚ್ಚಿಟ್ಟುಕೊಂಡಿದ್ದನು. ಪರೀಕ್ಷಾ ಕೊಠಡಿಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ತೆಗೆದುಕೊಂಡು ಹೋಗುವ ಹಾಗಿಲ್ಲ. ಹೀಗಿದ್ದರೂ ಸಹ ಸುನೀಲ್ ಮೊಬೈಲ್ ಹಾಗೂ ಬ್ಲೂಟೂತ್ ಬಳಸಿದ್ದಾನೆ. ಸುನೀಲ್ ಬ್ಲೂಟೂತ್ ಮೂಲಕ ತನ್ನ ಸ್ನೇಹಿತನಿಗೆ ಪ್ರಶ್ನೆ ಹೇಳುತ್ತಿದ್ದನು. ಪ್ರಶ್ನೆ ಕೇಳಿ ಆತನ ಸ್ನೇಹಿತ ಉತ್ತರ ಹೇಳುತ್ತಿದ್ದನು.

    ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‍ಎಚ್‍ಒ ಮನೋಜ್ ಕುಮಾರ್, ಪರೀಕ್ಷಾರ್ಥಿ ಸುನೀಲ್ ಲಕ್ಷ್ಮಿಪುರದ ನಿವಾಸಿಯಾಗಿದ್ದು, ಮುಖ್ದಂಪುರದ ಇಂದ್ರಾಸ್ತಾಲಿ ಬಾಲಕಿಯ ಶಾಲೆಯಲ್ಲಿ ಆತನ ಎಕ್ಸಾಂ ಸೆಂಟರ್ ಆಗಿತ್ತು. ಪರೀಕ್ಷೆ ವೇಳೆ ಮೇಲ್ವಿಚಾರಕನಿಗೆ ಸುನೀಲ್ ನಡೆದುಕೊಳ್ಳುತ್ತಿದ್ದ ರೀತಿ ನೋಡಿ ಆತನ ಮೇಲೆ ಅನುಮಾನಗೊಂಡರು. ನಂತರ ಆತನನ್ನು ಪರಿಶೀಲನೆ ನಡೆಸಿದಾಗ ಆತನ ಒಳಉಡುಪಿನಲ್ಲಿ ಮೊಬೈಲ್ ಹಾಗೂ ಟೋಪಿಯಲ್ಲಿ ಬ್ಯೂಟೂತ್ ಬಚ್ಚಿಟ್ಟುಕೊಂಡಿದ್ದನು.

    ಮನೋಜ್ ಅವರ ಪ್ರಕಾರ, ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಮೊಬೈಲಿನಲ್ಲಿ ಉತ್ತರ ಹೇಳುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಲು ಮೊಬೈಲ್ ಅನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಗೇಟ್‍ನಲ್ಲಿ ಪರಿಶೀಲಿಸುವಾಗ ಅಲ್ಲಿ ಈ ಎಲೆಕ್ಟ್ರಾನಿಕ್ ವಸ್ತುಗಳನ್ನು ಹೇಗೆ ಹಿಡಿಯಲು ಸಾಧ್ಯವಾಗಲಿಲ್ಲ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಮೂರು ಬಾರಿ ನಾಸಾ ಆಫರ್ ತಿರಸ್ಕರಿಸಿದ 19ರ ಯುವಕ

    ಮೂರು ಬಾರಿ ನಾಸಾ ಆಫರ್ ತಿರಸ್ಕರಿಸಿದ 19ರ ಯುವಕ

    – ಟ್ರಂಪ್ ಆಹ್ವಾನಿಸಿದರೂ ಅಮೆರಿಕಕ್ಕೆ ತೆರಳಲಿಲ್ಲ
    – ಭಾರತದಲ್ಲೇ ರಿಸರ್ಚ್ ಮಾಡ್ತೇನೆ ಎಂದ ಗೋಪಾಲ್

    ಪಾಟ್ನಾ: ಬಿಹಾರದ ಬಾಗಲ್‍ಪುರದ ಧ್ರುವಗಂಜ್ ಗ್ರಾಮದ 19 ವರ್ಷದ ಯುವಕ ಮೂರು ಬಾರಿ ನಾಸಾ ಆಫರ್ ತಿರಸ್ಕರಿಸಿದ್ದಾರೆ. ಅಲ್ಲದೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆಹ್ವಾನಿಸಿದರೂ ಭಾರತದಲ್ಲೇ ರಿಸರ್ಚ್ ಮಾಡುತ್ತೇನೆ ಎಂದು ಹೇಳುವ ಮೂಲಕ ಯುವಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾರೆ.

    19 ವರ್ಷದ ಯುವಕ ಗೋಪಾಲ್ ಪ್ರತಿ ವರ್ಷ ದೇಶದ 100 ಮಕ್ಕಳಿಗೆ ಸಹಾಯ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. 2019ರಲ್ಲಿ ಗೋಪಾಲ್ ಈ ಕೆಲಸ ಶುರು ಮಾಡಿದ್ದು, ಈಗ 8 ಮಕ್ಕಳ ಆವಿಷ್ಕಾರಕ್ಕಾಗಿ ತಾತ್ಕಾಲಿಕ ಪೇಟೆಂಟ್ ಕೂಡ ಪಡೆದಿದ್ದಾರೆ. ಸದ್ಯ ಗೋಪಾಲ್ ಈ ಡೆಹ್ರಾಡೂನ್ ಸರ್ಕಾರಿ ಗ್ರಾಫಿಕ್ ಏರಾ ಇನ್‍ಸ್ಟಿಟ್ಯೂಟ್‍ನ ಲ್ಯಾಬ್‍ನಲ್ಲಿ ಟೆಸ್ಟಿಂಗ್ ಮಾಡುತ್ತಿದ್ದಾರೆ. ಅಲ್ಲದೆ ಜಾರ್ಖಂಡ್‍ನಲ್ಲಿ ಲ್ಯಾಬ್ ತೆರೆದು ಅಲ್ಲಿ ರಿಸರ್ಚ್ ಮಾಡಲಿದ್ದಾರೆ.

    ಗೋಪಾಲ್ ತುಳಸಿಪುರದ ಮಾಡೆಲ್ ಹೈಸ್ಕೂಲ್‍ನಲ್ಲಿ 12ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ. 2013-14ರಲ್ಲಿ ಬಯೋಸೆಲ್ ಆವಿಷ್ಕಾರಕ್ಕಾಗಿ ಗೋಪಾಲ್ ಅವರು ಇನ್‍ಸ್ಪೈಯರ್ಡ್ ಅವಾರ್ಡ್ ಕೂಡ ಪಡೆದಿದ್ದಾರೆ. ಪ್ರಶಸ್ತಿ ಪಡೆಯುವಾಗ ಅವರು ಹತ್ತನೇ ತರಗತಿಯಲ್ಲಿ ಓದುತ್ತಿದ್ದರು. 2008ರಲ್ಲಿ ಗೋಪಾಲ್ ಅವರ ಗ್ರಾಮದಲ್ಲಿ ಪ್ರವಾಹ ಬಂದಿದ್ದು, ಈ ವೇಳೆ ಸಾಕಷ್ಟು ಹಾನಿಯಾಗಿತ್ತು.

    ಪ್ರವಾಹ ಬಂದ ಸಂದರ್ಭದಲ್ಲಿ ಗೋಪಾಲ್ ಅವರ ತಂದೆ ಪ್ರೇಮ್‍ರಂಜನ್ ಕುಮಾರ್ ಅವರು ತಮ್ಮ ಮಗನಿಗೆ 10ನೇ ತರಗತಿ ನಂತರ ಮುಂದೆ ಓದಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ಗೋಪಾಲ್ ತಮ್ಮ ಛಲವನ್ನು ಬಿಟ್ಟು ಕೊಡಲಿಲ್ಲ. ಸ್ಕಾಲರ್‍ಶಿಪ್ ಪಡೆಯಲು ಏನಾದರೂ ಮಾಡಬೇಕು ಎಂದು ಗೋಪಾಲ್ ಯೋಚಿಸುತ್ತಿದ್ದರು.

    2017, ಅಗಸ್ಟ್ 31ರಂದು ಗೋಪಾಲ್ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದರು. ಆಗ ಮೋದಿ ಅವರು ಗೋಪಾಲ್‍ರನ್ನು ಅಹಮದಾಬಾದ್‍ನ ಎನ್‍ಐಎಫ್‍ಗೆ ಕಳುಹಿಸಿಕೊಟ್ಟರು. ಈ ವೇಳೆ ಗೋಪಾಲ್ 6 ಆವಿಷ್ಕಾರವನ್ನು ಮಾಡಿದ್ದರು. ಈಗ ಗೋಪಾಲ್ ಅವರ ಹೆಸರು ವಿಶ್ವದ 30 ಸ್ಟಾರ್ಟಪ್ ವಿಜ್ಞಾನಿಗಳ ಪಟ್ಟಿಯಲ್ಲಿದೆ. ಏಪ್ರಿಲ್‍ನಲ್ಲಿ ಅಬುಧಾಬಿಯಲ್ಲಿ ನಡೆಯುವ ವಿಶ್ವದ ಅತಿ ದೊಡ್ಡ ಸೈನ್ಸ್ ಫೇರ್ ನಡೆಯಲಿದೆ. ಇದರಲ್ಲಿ 6 ಸಾವಿರ ವಿಜ್ಞಾನಿಗಳು ಭಾಗವಹಿಸುತ್ತಿದ್ದು, ಗೋಪಾಲ್ ಚೀಫ್ ಸ್ಪೀಕರ್ ಆಗಿ ಭಾಗವಹಿಸಲಿದ್ದಾರೆ.

  • ವಿದ್ಯಾರ್ಥಿನಿಗೆ ಪಾಠ ಮಾಡಲು ಶಾಲೆಗೆ ಬರುತ್ತಿದ್ದಾರೆ ಇಬ್ಬರು ಶಿಕ್ಷಕರು

    ವಿದ್ಯಾರ್ಥಿನಿಗೆ ಪಾಠ ಮಾಡಲು ಶಾಲೆಗೆ ಬರುತ್ತಿದ್ದಾರೆ ಇಬ್ಬರು ಶಿಕ್ಷಕರು

    ಪಾಟ್ನಾ: ವಿದ್ಯಾರ್ಥಿನಿಗೆ ಪಾಠ ಮಾಡಲು ಪ್ರತಿದಿನ ಇಬ್ಬರು ಶಿಕ್ಷಕರು ಶಾಲೆಗೆ ಬರುತ್ತಿರುವ ಅಪರೂಪದ ಸಂಗತಿಯೊಂದು ಬಿಹಾರದ ಗಯಾದಲ್ಲಿ ನಡೆದಿದೆ.

    ಗಯಾದಿಂದ 20 ಕಿ.ಮೀ ದೂರದಲ್ಲಿರುವ ಮಾನ್ಸಾ ಬಿಘಾದಲ್ಲಿ ಸರ್ಕಾರಿ ಶಾಲೆ ಇದೆ. ಈ ಶಾಲೆಗೆ ಪ್ರತಿದಿನ ವಿದ್ಯಾರ್ಥಿನಿ ಜಾಹ್ನವಿ ಬರುತ್ತಿದ್ದಾಳೆ. ಜಾಹ್ನವಿ ಒಂದನೇ ತರಗತಿ ಓದುತ್ತಿದ್ದು, ಆಕೆಗೆ ಪಾಠ ಮಾಡಲು ಇಬ್ಬರು ಶಿಕ್ಷಕರು ಬರುತ್ತಿದ್ದಾರೆ.

    ಮಾನ್ಸಾ ಬಿಘಾದಲ್ಲಿ 35 ಕುಟುಂಬಗಳಿದ್ದು, ಈ ಕುಟುಂಬದ ಮಕ್ಕಳು ಖಿಜ್ರಸರಾಯ್‍ದಲ್ಲಿ ಇರುವ ಶಾಲೆಗೆ ಹೋಗುತ್ತಿದ್ದಾರೆ. ಈ ಸರ್ಕಾರಿ ಶಾಲೆಗೆ ಕೇವಲ ಜಾಹ್ನವಿ ಒಬ್ಬಳೇ ಹೋಗುತ್ತಿದ್ದಾಳೆ. ಮಿಡ್ ಡೇ ಮಿಲ್ ಯೋಜನೆ ಅಡಿಯಲ್ಲಿ ಜಾಹ್ನವಿಗೆ ಊಟವೂ ಕೂಡ ನೀಡಲಾಗುತ್ತಿದೆ. ಈ ಶಾಲೆಯಲ್ಲಿ ಒಟ್ಟು ನಾಲ್ಕು ಕ್ಲಾಸ್ ರೂಂಗಳಿವೆ.

    ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕ ಪ್ರತಿಕ್ರಿಯಿಸಿ, ನಾನು ಗ್ರಾಮಕ್ಕೆ ಹೋಗಿ ಮಕ್ಕಳನ್ನು ಈ ಶಾಲೆಗೆ ದಾಖಲಿಸುವಂತೆ ಪೋಷಕರ ಬಳಿ ಮನವಿ ಮಾಡಿಕೊಂಡೆ. ಆದರೆ ಯಾರೂ ಆಸಕ್ತಿ ತೋರಲಿಲ್ಲ. ಇಡೀ ಶಾಲೆಗೆ ಒಂಬತ್ತು ವಿದ್ಯಾರ್ಥಿಗಳು ದಾಖಲಾಗಿದ್ದರು. ಆದರೆ ಅವರಲ್ಲಿ ಕೇವಲ ಜಾಹ್ನವಿ ಇಲ್ಲಿ ಓದಲು ಬರುತ್ತಿದ್ದಾಳೆ. ಶಾಲೆ ಗ್ರಾಮದಿಂದ 1 ಕಿ.ಮೀಯಿರುವ ಕಾರಣ ಪೋಷಕರು ತಮ್ಮ ಮಕ್ಕಳನ್ನು ಅಲ್ಲಿಯೇ ಕಳುಹಿಸುತ್ತಿದ್ದಾರೆ ಎಂದರು.

  • ಸೊಸೆ ರೂಮಿನಲ್ಲಿದ್ದಾಗ ಮಾವನಿಂದ ನೀಚ ಕೃತ್ಯ

    ಸೊಸೆ ರೂಮಿನಲ್ಲಿದ್ದಾಗ ಮಾವನಿಂದ ನೀಚ ಕೃತ್ಯ

    – ಪೋರ್ನ್ ವಿಡಿಯೋ ತೋರಿಸಿ ಅತ್ಯಾಚಾರಕ್ಕೆ ಯತ್ನ
    – ತಂದೆಯ ಕೃತ್ಯಕ್ಕೆ ಮಗ ಸಾಥ್

    ಪಾಟ್ನಾ: ಮಾವನೊಬ್ಬ ತನ್ನ ಸೊಸೆಗೆ ಪೋರ್ನ್ ವಿಡಿಯೋ ತೋರಿಸಿ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ ಘಟನೆ ಬಿಹಾರದಲ್ಲಿ ನಡೆದಿದೆ. ಇದನ್ನೂ ಓದಿ: ಮದ್ಯಪಾನ ಮಾಡಿಸಿ ಅನೇಕ ವಿದ್ಯಾರ್ಥಿಗಳೊಂದಿಗೆ ಮಾಜಿ ಶಿಕ್ಷಕಿ ಸೆಕ್ಸ್

    ಮಹಿಳೆಯೊಬ್ಬಳು ಬಿಹಾರದ ಮುಜಾಫರ್ಪುರ ನಿವಾಸಿ ಮೊಹಮ್ಮದ್ ಜಾಫರ್ ಜೊತೆ 2012ರಲ್ಲಿ ಮದುವೆಯಾಗಿದ್ದಳು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ನಾಲ್ಕು ವರ್ಷಗಳು ಈ ದಂಪತಿ ತಮ್ಮ ಮಕ್ಕಳೊಂದಿಗೆ ಸಂತೋಷದಿಂದ ಜೀವನ ಮಾಡುತ್ತಿದ್ದರು. ಆದರೆ ನಾಲ್ಕು ವರ್ಷಗಳ ನಂತರ ಜಾಫರ್ ತಂದೆ ಸೊಸೆ ಮೇಲೆ ಕಣ್ಣಾಕಿದ್ದಾನೆ. ಇದನ್ನೂ ಓದಿ: ನನ್ನ ತಂದೆ ಜೊತೆ ಮಲಗು – ಪತಿಯಿಂದ ಪತ್ನಿಗೆ ಕಿರುಕುಳ

    ಆರೋಪಿ ಮಾವ ಸೊಸೆಗೆ ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಸೊಸೆ ರೂಮಿನಲ್ಲಿ ಒಂಟಿಯಾಗಿದ್ದಳು. ಆಗ ಆರೋಪಿ ಸೊಸೆ ರೂಮಿಗೆ ಹೋಗಿ ಆಕೆಯನ್ನು ಅಸಭ್ಯವಾಗಿ ಸ್ಪರ್ಶಿಸುತ್ತಿದ್ದನು. ಅಷ್ಟೇ ಅಲ್ಲದೇ ಪೋರ್ನ್ ವಿಡಿಯೋ ತೋರಿಸಿ ಅನೇಕ ಬಾರಿ ಸೊಸೆಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ.

    ಕೆಲ ದಿನಗಳವರೆಗೂ ಸೊಸೆ ಮಾವನ ನೀಚ ಕೃತ್ಯಗಳನ್ನು ಸಹಿಸಿಕೊಂಡು ಮೌನವಾಗಿದ್ದಳು. ಆದರೆ ದಿನದಿಂದ ದಿನ ಮಾವ ಅಸಭ್ಯವಾಗಿ ವರ್ತಿಸುತ್ತಿದ್ದನು. ಕೊನೆಗೆ ಮಾವ ನೀಡುತ್ತಿದ್ದ ಕಿರುಕುಳ ಸಹಿಸಲಾಗದೇ ಪತಿಗೆ ನಡೆದ ಘಟನೆಗಳನ್ನು ವಿವರಿಸಿದ್ದಾಳೆ.

    ಆದರೆ ಪತಿ ಜಾಫರ್ ತನ್ನ ತಂದೆಗೆ ಸಾಥ್ ಕೊಟ್ಟಿದ್ದಾನೆ. ಈಗಾಗಲೇ ನಿನಗೆ ಮದುವೆಯಾಗಿ ನಾಲ್ಕು ವರ್ಷ ಆಗಿದೆ. ಮೂವರು ಮಕ್ಕಳಿದ್ದಾರೆ, ನನ್ನ ತಂದೆ ಜೊತೆಯೂ ಸಹಕರಿಸು ಎಂದು ಪತ್ನಿಗೆ ಹೇಳಿದ್ದಾನೆ. ಇತ್ತ ಮಗನೇ ಸಪೋರ್ಟ್ ಮಾಡಿ ನಂತರ ಆರೋಪಿ ಮಾವ ಮತ್ತೆ ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದನು.

    ಕೊನೆಗೆ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಸದ್ಯಕ್ಕೆ ಪೊಲೀಸರು ಮಹಿಳೆ ನೀಡಿದ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮಾವ ಮತ್ತು ಪತಿಯನ್ನು ವಿಚಾರಣೆಗೆ ಕರೆದಿದ್ದಾರೆ.