Tag: patna

  • ಸಾಸಿವೆ ಹೊಲಕ್ಕೆ ಹೋಗುವುದಾಗಿ ಹೇಳಿ ಕರೆದುಕೊಂಡು ಹೋಗಿ ಅತ್ಯಾಚಾರ

    ಸಾಸಿವೆ ಹೊಲಕ್ಕೆ ಹೋಗುವುದಾಗಿ ಹೇಳಿ ಕರೆದುಕೊಂಡು ಹೋಗಿ ಅತ್ಯಾಚಾರ

    – 16ರ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಪರಾರಿ
    – 24 ಗಂಟೆಯ ಒಳಗಾಗಿ ಆರೋಪಿ ಪೊಲೀಸರ ಬಲೆಗೆ

    ಪಾಟ್ನಾ: ಅಪ್ರಾಪ್ತೆಯನ್ನ ನೆರೆಮನೆಯ ಬಾಲಕ ಹೊಲಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವ ಘಟನೆ ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಕಳೆದ ಶನಿವಾರ ನಡೆದಿದೆ.

    ಅತ್ಯಾಚಾರಕ್ಕೊಳಗಾದ ಹುಡುಗಿ 16 ವರ್ಷದವಳಾಗಿದ್ದಾಳೆ. ಹೊಲಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಆರೋಪಿ ಜಿಂಗಾ ಖಾರ್ವಾರ್ ಆಗಿದ್ದಾನೆ. ಈತ ಅತ್ಯಾಚಾರ ಎಸಗಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಪ್ರಕರಣದಲ್ಲಿ ಸಂತ್ರಸ್ತೆ ಕಡೆಯವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಹುಡುಗಿ ಒಬ್ಬಳೆ ತನ್ನ ಮನೆಯಲ್ಲಿ ಇದ್ದಳು. ಆ ವೇಳೆ ನೆರೆಮನೆಯ ಹುಡುಗ ಬಂದು ಆಕೆಯನ್ನು ಸಾಸಿವೆ ಹೊಲಕ್ಕೆ ಕೆಲಸಕ್ಕೆ ಹೋಗೋಣ ಎಂದು ಹೇಳಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಅವಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಹುಡುಗಿ ಮನೆಗೆ ಬಂದು ತನ್ನ ಕುಟುಂಬಕ್ಕೆ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಪೋಷಕರು ಕುಂದ್ರಾ ಪೊಲೀಸ್ ಠಾಣೆಗೆ ಬಂದು ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ.

    ಕುಂದ್ರಾ ಪೊಲೀಸ್ ಠಾಣೆಯ ಪೊಲೀಸರು ಹುಡುಗಿಗೆ ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಿದ್ದಾರೆ. ಆರೋಪಿ ಹುಡುಗನನ್ನು ಪ್ರಕರಣ ದಾಖಲಿಸಿಕೊಂಡ 24 ಗಂಟೆಯ ಒಳಗಾಗಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಜಿಂಗಾ ಖಾರ್ವಾರ್ ಪೊಲೀಸರ ಕಸ್ಟಡಿಯಲ್ಲಿ ವಿಚಾರಣೆಯಲ್ಲಿದ್ದಾನೆ. ನ್ಯಾಯಾಲಕ್ಕೆ ಒಪ್ಪಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮೊದಲು ಮೋದಿ ಲಸಿಕೆ ತೆಗೆದುಕೊಳ್ಳಲಿ, ನಂತ್ರ ನಾವು ಪಡೆದುಕೊಳ್ತೀವಿ: ತೇಜ್ ಪ್ರತಾಪ್ ಯಾದವ್

    ಮೊದಲು ಮೋದಿ ಲಸಿಕೆ ತೆಗೆದುಕೊಳ್ಳಲಿ, ನಂತ್ರ ನಾವು ಪಡೆದುಕೊಳ್ತೀವಿ: ತೇಜ್ ಪ್ರತಾಪ್ ಯಾದವ್

    ಪಾಟ್ನಾ: ಇನ್ನೇನು ಕೆಲವೇ ದಿನಗಳಲ್ಲಿ ಕೊರೊನಾ ಲಸಿಕೆ ಭಾರತೀಯರ ಕೈ ಸೇರಲಿದೆ. ಈ ಲಸಿಕೆ ಬಗ್ಗೆ ಪ್ರತಿಪಕ್ಷದವರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಅಂತೆಯೇ ಇದೀಗ ಆರ್‍ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಕೂಡ ಟೀಕಿಸಿ, ಸವಾಲೆಸೆದಿದ್ದಾರೆ.

    ಈ ಸಂಬಂಧ ಮಾಧ್ಯಮದ ಜೊತೆ ಮಾತನಾಡಿದ ಯಾದವ್, ಮೊದಲು ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ಲಸಿಕೆ ತೆಗೆದುಕೊಳ್ಳಲಿ. ನಂತರವಷ್ಟೇ ನಾವು ಲಸಿಕೆ ಪಡೆದುಕೊಳ್ಳುವುದಾಗಿ ಚಾಲೆಂಜ್ ಹಾಕಿದ್ದಾರೆ.

    ಕೋವಿಡ್ 19 ನಿರೋಧಕ ದೇಸೀ ಲಸಿಕೆ ಕುರಿತಂತೆ ಯಾವುದೇ ಅಪಪ್ರಚಾರ ಮಾಡಬೇಡಿ ಎಂದು ಬಿಜೆಪಿ ನಾಯಕರು ಮನವಿ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ಆರ್‍ಜೆಡಿ ನಾಯಕ ಈ ರೀತಿ ಹೇಳಿರುವುದು ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದೆ.

    ಒಟ್ಟಿನಲ್ಲಿ ಕೊರೊನಾ ಲಸಿಕೆ ವಿತರಣೆಗೆ ಸಿದ್ಧತೆ ನಡೆಯುತ್ತಿದ್ದಂತೆಯೇ ಇತ್ತ ಅದರಲ್ಲಿ ರಾಜಕೀಯ ಕೂಡ ಆರಂಭವಾಗಿದೆ. ಈ ಹಿಂದೆ ಭಾರತ್ ಬಯೋಟೆಕ್ ಸಂಸ್ಥೆಯ ಲಸಿಕೆ ಕೋವ್ಯಾಕ್ಸಿನ್ ಗೆ ಅನುಮತಿ ನೀಡಿರುವ ಬಗ್ಗೆ ಮಾಜಿ ಕೇಂದ್ರ ಸಚಿವರಾದ ಶಿಶಿ ತರೂರ್ ಹಾಗೂ ಜಯರಾಮ್ ರಮೇಶ್ ಪ್ರಶ್ನೆ ಮಾಡಿದ್ದರು.

    ಇನ್ನು ಸಮಾಜವಾದಿ ಪಕ್ಷದ ನಾಯಕ, ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಬಿಜೆಪಿ ಲಸಿಕೆಯಲ್ಲಿ ನನಗೆ ನಂಬಿಕಲೆ ಇಲ್ಲ ಎಂದು ಹೇಳುವ ಮೂಲಕ ಭಾರೀ ಚರ್ಚೆಗೆ ಗ್ರಾಸವಾಗಿದ್ದರು. ಸದ್ಯಕ್ಕೆ ನಾನು ಲಸಿಕೆ ಹಾಕಲು ಹೋಗುತ್ತಿಲ್ಲ. ಬಿಜೆಪಿಯ ಲಸಿಕೆಯನ್ನು ನಾನು ಹೇಗೆ ನಂಬುವುದು ಎಂದು ಪ್ರಶ್ನಸಿದ್ದರು. ನಮ್ಮ ಸರ್ಕಾರ ರಚನೆಯಾದಾಗ ಎಲ್ಲರಿಗೂ ಉಚಿತ ಲಸಿಕೆ ಸಿಗುತ್ತದೆ. ನಾವು ಬಿಜೆಪಿಯ ಲಸಿಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.

  • 4ರ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಮರವೇರಿ ಕುಳಿತ ಯುವಕ

    4ರ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಮರವೇರಿ ಕುಳಿತ ಯುವಕ

    – ಬಾಲಕಿಯ ಕುಟುಂಬಸ್ಥರಿಂದ ಯುವಕನ ಹತ್ಯೆ

    ಪಾಟ್ನಾ: 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಮರವೇರಿ ಕುಳಿತ ಯುವಕನನ್ನು ಬಾಲಕಿಯ ಕುಟುಂಬಸ್ಥರು ಕ್ರೂರವಾಗಿ ಕೊಂದಿರುವ ಘಟನೆ ಬಿಹಾರ್‍ ನ ಕೈಮೂರ್ ನಲ್ಲಿ ನಡೆದಿದೆ.

    ಕೊಲೆಯಾದ ಯುವಕನನ್ನು ಸಿಪು ಕುಮಾರ್ ಎಂದು ಗುರುತಿಸಲಾಗಿದೆ. ಈತ ಕಬರ್ ಗ್ರಾಮದ ನಿವಾಸಿಯಾಗಿದ್ದಾನೆ. ಈತ ಟ್ಯಾಪ್ ವಾಟರ್ ಸ್ಕೀಮ್‍ನಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದನು.

    ಚಾಕ್ಲೇಟ್ ನೀಡುವ ನೆಪದಲ್ಲಿ ಸಿಪು ಕುಮಾರ್ ಬಾಲಕಿಯನ್ನು ಹತ್ತಿರದ ಪಂಚಾಯತ್ ಭವನಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ಈ ವಿಷಯವನ್ನು ತಿಳಿದ ಬಾಲಕಿಯ ಕುಟುಂಬಸ್ಥರು ಯುವಕನನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಆದರೆ ಆರೋಪಿ ಮರದ ಮೇಲೆ ಅಡಗಿ ಕುಳಿತುಕೊಂಡಿದ್ದನು. ಅವನನ್ನು ಕೆಳಕ್ಕೆ ಇಳಿಸಿ ಕ್ರೂರವಾಗಿ ಕೊಂದು ಹಾಕಿದ್ದಾರೆ. ಈ ಕೊಲೆ ಆರೋಪದ ಮೇಲೆ ಬಾಲಕಿಯ ಚಿಕ್ಕಪ್ಪ ಜೈಲಿಗೆ ಹೋಗಿದ್ದಾರೆ. ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯಿಂದ ಎಫ್‍ಐಆರ್ ದಾಖಲಿಸಲಾಗಿದೆ.

    ಮೃತ ಕುಮಾರ್ ಕುಟುಂಬ ಹೇಳುವ ಪ್ರಕಾರ, ಬಾಲಕಿ ಆಟವಾಡುತ್ತಿದ್ದಾಗ ಗಾಯಗೊಂಡಿದ್ದಳು. ಬಾಲಕಿಗೆ ಚಾಕ್ಲೇಟ್ ಕೊಟ್ಟು ಸಮಾಧಾನ ಮಾಡುತ್ತಿರುವಾಗ ತಪ್ಪಾಗಿ ತಿಳಿದ ಜನರು ಅವನನ್ನು ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

    ಈ ಘಟನೆಯ ಕುರಿತಾಗಿ ಎರಡೂ ಕಡೆಯಿಂದಲೂ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ದಿಲ್ನಾವಾಜ್ ಅಹ್ಮದ್ ತಿಳಿಸಿದ್ದಾರೆ.

  • ಕಣ್ಣು ಕಿತ್ತು, ಕುತ್ತಿಗೆ, ತಲೆಗೆ ಹೊಡೆದು 13ರ ಬಾಲಕನ ಬರ್ಬರ ಹತ್ಯೆ

    ಕಣ್ಣು ಕಿತ್ತು, ಕುತ್ತಿಗೆ, ತಲೆಗೆ ಹೊಡೆದು 13ರ ಬಾಲಕನ ಬರ್ಬರ ಹತ್ಯೆ

    – ಶವವನ್ನು ಕಾಲುವೆಯಲ್ಲಿ ಎಸೆದು ಹೋದ್ರು

    ಪಾಟ್ನಾ: 13 ವರ್ಷದ ಬಾಲಕನ ಕಣ್ಣು ಕಿತ್ತು, ಕುತ್ತಿಗೆ ಮತ್ತು ತಲೆಗೆ ಹೊಡೆದು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿ ಕಾಲುವೆಗೆ ಎಸೆದು ಹೋಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ಹತ್ಯೆಯಾದ ಬಾಲಕನನ್ನು ಸೌರಭ್ ಕುಮಾರ್(13) ಎಂದು ಗುರುತಿಸಲಾಗಿದೆ. ಕಾಶಾ ವಾರ್ಡ್ 3ರ ನಿವಾಸಿಯಾಗಿದ್ದಾನೆ. ಬಾಲಕನ ಶವವನ್ನು ವಾರ್ಡ್ 5ರ ಮುಟ್ಕರಿಯಾ ಕಾಲುವೆಯ ದಂಡೆಯಿಂದ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

    ಸೌರಭ್ ನಿನ್ನೆ ಸಂಜೆ ವಾರ್ಡ್ 4ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಊಟ ಮಡುತ್ತಿದ್ದನು. ಈ ವೇಳೆ ದುಷ್ಕರ್ಮಿಗಳು ಅಲ್ಲಿಂದ ಬಾಲಕನನ್ನು ಅಪಹರಿಸಿದ್ದಾರೆ. ಬಾಲಕನ ಕುತ್ತಿಗೆ ಮತ್ತು ತಲೆಗೆ ಇರಿದು ನಂತರ ಕಣ್ಣು ಕಿತ್ತು ಅತ್ಯಂತ ಕ್ರೂರವಾಗಿ ಬಾಲಕನನ್ನು ಕೊಂದು ಮುಟ್ಕರಿಯಾ ಕಾಲುವೆ ಬಳಿ ಎಸೆದಿದ್ದಾರೆ.

    ಬಾಲಕ ಕಾಣದೇ ಇರುವುದನ್ನು ಗಮನಿಸಿದ ಪೋಷಕರು ಎಲ್ಲೆಡೆ ಹುಡುಕಲು ಪ್ರಾರಂಭಿಸಿದ್ದಾರೆ. ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಬಾಲಕ ನಿನ್ನೆ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ. ಅಲ್ಲಿ ಊಟ ಮಾಡಲು ಹೋದವ ನಂತರ ಕಾಣೆಯಾಗಿದ್ದಾನೆ ಎಂದು ಪೋಷಕರು ಠಾಣೆಯಲ್ಲಿ ದೂರು ನೀಡಿದ್ದಾರೆ.

    ಬೆಳಗ್ಗೆ ದಾರಿಹೋಕರೊಬ್ಬರು ಕಾಲುವೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕನ ದೇಹವನ್ನು ನೋಡಿ ಕುಟುಂಬದವರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಬಾಲಕನ ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಪ್ರಕರಣ ಬಿಹಾರ್ ಸುಪಾಲ್ ಜಿಲ್ಲೆಯ ತ್ರಿವೇಣಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಮಹಿಳಾ ಪೊಲೀಸ್ ಮೇಲೆ ಪೇದೆಯಿಂದ ರೇಪ್

    ಮಹಿಳಾ ಪೊಲೀಸ್ ಮೇಲೆ ಪೇದೆಯಿಂದ ರೇಪ್

    ಪಾಟ್ನಾ: ಮಹಿಳಾ ಪೊಲೀಸ್ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಿಹಾರದ ಪೇದೆಯನ್ನು ಬಂಧಿಸಿರುವ ಘಟನೆ ನಡೆದಿದೆ.

    ಆರೋಪಿ ಪೊಲೀಸ್‍ನನ್ನು ರಾಜೀವ್ ಕುಮಾರ್ ಎಂದು ಗುರುತಿಸಲಾಗಿದೆ. ಈತನು ಪ್ರಸ್ತುತ ಸಹರ್ಸಾ ಜಿಲ್ಲೆಯ ಪೊಲೀಸ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದನು. ಸಂತ್ರಸ್ತೆ ಮಹಿಳೆ ಪೊಲೀಸ್ ಸಸಾರಂನ ಮಹಿಳಾ ಬೆಟಾಲಿಯನ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

    ಕಳೆದ ಕೆಲವು ದಿನಗಳಿಂದ ಮಹಿಳಾ ಪೊಲೀಸ್ ಪಾಟ್ನಾದ ಗಾಡ್ರ್ನಿಬಾಗ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಜೆ ವೇಳೆಗೆ ಆರೋಪಿ ರಾಜೀವ್ ಕುಮಾರ್ ಮಹಿಳಾ ಪೊಲೀಸ್‍ನನ್ನು ರಾಜೀವ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹೋಟೆಲ್‍ಗೆ ಕರೆದು ಅತ್ಯಾಚಾರ ನಡೆಸಿದ್ದಾನೆ. ಈ ವಿಚಾರವನ್ನು ತಿಳಿದ ಮಹಿಳೆಯ ಪತಿ ರಾಜೀವ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಸಂತ್ರಸ್ತೆ ಮಹಿಳಾ ಪೊಲೀಸ್ ಪತಿ ಕೂಡ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ. ಇವರು ಬಿಹಾರದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋಪಿ ವಿರುದ್ಧ ರಾಜೀವ್ ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣದ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

    ತಕ್ಷಣ ಪೊಲೀಸರು ರಾಜೀವ್ ನಗರದಲ್ಲಿರುವ ಹೋಟೆಲ್ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

  • ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ ಮಹಿಳೆಗೆ ವೈದ್ಯರಿಂದ ಕಿರುಕುಳ

    ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ ಮಹಿಳೆಗೆ ವೈದ್ಯರಿಂದ ಕಿರುಕುಳ

    ಪಾಟ್ನಾ: ಮಗುವಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದುಕೊಂಡು ಹೋದ ಮಹಿಳೆಗೆ ವೈದ್ಯರು ಕಿರುಕುಳ ನೀಡಿರುವ ಘಟನೆ ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ನಡೆದಿದೆ.

    ಮಗುವಿನ ಚಿಕಿತ್ಸೆಗಾಗಿ ಆಗಮಿಸಿದ ಮಹಿಳೆಗೆ ವೈದ್ಯರು ಕಿರುಕುಳ ನೀಡಿದ್ದಾರೆ. ಈ ವಿಚಾರವನನು ಮಹಿಳೆ ತನ್ನ ಮನೆಗೆ ಬಂದು ಕುಟುಂಬದವರಲ್ಲಿ ವಿವರಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಸಂತ್ರಸ್ತ ಮಹಿಳೆ ಕುಟುಂಬವು ವೈದ್ಯರ ಚಿಕಿತ್ಸಾಲಯಕ್ಕೆ ಹೋಗಿ ಗಲಾಟೆ ಮಾಡಿದ್ದಾರೆ. ನಂತರ ಸಂತ್ರಸ್ತ ಮಹಿಳೆಯ ಕುಟುಂಬ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದೆ.

    ದೂರು ಸ್ವೀಕರಿಸಿದ ಪೊಲೀಸರು ವೈದ್ಯರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಇದರಿಂದ ಕೋಪಗೊಂಡ ಗ್ರಾಮಸ್ಥರು ಸಮಸ್ತಿಪುರ- ಪಾಟ್ನಾ ಮುಖ್ಯ ರಸ್ತೆಯನ್ನು ಬಂದ್ ಮಾಡಿ ಹತ್ತಿರದ ಅಂಗಡಿಗಳನ್ನು ಧ್ವಂಸ ಮಾಡಿದ್ದಾರೆ.

    ಈ ಘಟನೆಯ ವರದಿಯಾದ ಕೂಡಲೇ ಸ್ಥಳೀಯ ಪೊಲೀಸರು ಮತ್ತು ಡಿಎಸ್‍ಪಿ ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಎರಡೂ ಕಡೆಯಿಂದ ಎಫ್‍ಐಆರ್ ದಾಖಲಾಗಿದೆ.

  • ಪ್ರಿಯಕರನ ಮದ್ವೆ- ವಧುವಿನ ಕೂದಲು ಕತ್ತರಿಸಿ, ಮುಖಕ್ಕೆ ಫೆವಿಕ್ವಿಕ್ ಹಚ್ಚಿದ್ಳು!

    ಪ್ರಿಯಕರನ ಮದ್ವೆ- ವಧುವಿನ ಕೂದಲು ಕತ್ತರಿಸಿ, ಮುಖಕ್ಕೆ ಫೆವಿಕ್ವಿಕ್ ಹಚ್ಚಿದ್ಳು!

    – ಕೈ ಕೊಟ್ಟ ಹುಡುಗನ ಪತ್ನಿಗೆ ಶಾಕ್ ಕೊಟ್ಟ ಮಾಜಿ ಪ್ರೇಯಸಿ

    ಪಾಟ್ನಾ: ತಾನು ಪ್ರೀತಿಸಿದ ಹುಡುಗ ಬೇರೆ ಯುವತಿ ಜೊತೆ ಮದುವೆ ಆಗಿದ್ದಕ್ಕೆ ಕೋಪಗೊಂಡ ಯುವತಿ ಆತನ ಪತ್ನಿಯ ಕೂದಲು ಕತ್ತರಿಸಿ, ಮುಖಕ್ಕೆ ಫೆವಿಕ್ವಿಕ್ ಹಚ್ಚಿದ್ದಾಳೆ. ಬಿಹಾರದ ನಳಂದಾದ ಮೋರಾ ತಾಲಾಬ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕುಟುಂಬಸ್ಥರು ಯುವತಿಯನ್ನ ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.

    ಡಿಸೆಂಬರ್ 1ರಂದು ಗೋಪಾಲ್ ರಾಮ್ ಮದುವೆ ನಡೆದಿತ್ತು. ಮದುವೆಗೂ ಮುನ್ನ ಗೋಪಾಲ್ ಬೇರೆ ಯುವತಿಯನ್ನ ಪ್ರೀತಿಸುತ್ತಿದ್ದನು. ಆದ್ರೆ ಆಕೆಗೆ ಕೈ ಕೊಟ್ಟಿದ್ದ ಗೋಪಾಲ್ ಕುಟುಂಬಸ್ಥರ ಇಚ್ಛೆಯಂತೆ ಮದುವೆ ಆಗಿದ್ದನು. ಇದರಿಂದ ಗೋಪಾಲ್ ಗೆಳತಿ ಕೋಪಗೊಂಡಿದ್ದಳು.

    ಡಿಸೆಂಬರ್ 1ರ ರಾತ್ರಿ ಮದುವೆ ಮನೆಗೆ ಯುವತಿ ಎಂಟ್ರಿ ಕೊಟ್ಟಿದ್ದಳು. ಎರಡು ದಿನ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕುಟುಂಬಸ್ಥರು ಗಾಢ ನಿದ್ರೆಗೆ ಜಾರಿದ್ದರು. ವಧು ಕುಳಿತಿದ್ದ ಕೋಣೆಗೆ ಎಂಟ್ರಿ ಕೊಟ್ಟ ಯುವತಿ ಮೊದಲಿಗೆ ಕೂದಲು ಕತ್ತರಿಸಿದ್ದಾಳೆ. ನಂತ್ರ ಆಕೆಯ ಕಣ್ಣು ಸೇರಿದಂತೆ ಮುಖಕ್ಕೆ ಫೆವಿಕ್ವಿಕ್ ಹಚ್ಚಿದ್ದಾಳೆ. ಕಣ್ಣಿಗೆ ಫೆವಿಕ್ವಿಕ್ ಬೀಳುತ್ತಿದ್ದಂತೆ ಎಚ್ಚರಗೊಂಡ ವಧು ನೋವಿನಿಂದ ಕಿರುಚಿದ್ದಾಳೆ. ವಧುವಿನ ಧ್ವನಿ ಕೇಳುತ್ತಿದ್ದಂತೆ ಬಂದ ಮನೆಯವರು ಯುವತಿಯನ್ನ ಹಿಡಿದಿದ್ದಾರೆ.

    ಸೊಸೆಯ ಜೋರಾಗಿ ಸಹಾಯಕ್ಕೆ ಕೂಗುತ್ತಿದ್ದಂತೆ ನಾನು ಆಕೆಯ ಕೋಣೆಗೆ ಬಂದೆ. ಅಷ್ಟರಲ್ಲಿಯೇ ಆ ಯುವತಿ ಕೂದಲು ಕತ್ತರಿಸಿ, ಫೆವಿಕ್ವಿಕ್ ಹಚ್ಚಿದ್ದಳು. ಫೆವಿಕ್ವಿಕ್ ಕಣ್ಣಿನೊಳಗೆ ಹೋಗಿದ್ದರಿಂದ ಸೊಸೆ ಅಳುತ್ತಿದ್ದಳು. ಕೂಡಲೇ ಆಕೆಯನ್ನ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಗೋಪಾಲ್ ತಾಯಿ ಉಮಾದೇವಿ ಹೇಳಿದ್ದಾರೆ. ಎರಡು ದಿನಗಳಿಂದು ಮದುವೆಯಲ್ಲಿ ಭಾಗಿಯಾಗಿದ್ದರಿಂದ ನಾನು ನಿದ್ದೆಗೆ ಜಾರಿದ್ದೆ. ಅಷ್ಟರಲ್ಲೇ ಕೋಣೆಗೆ ನುಗ್ಗಿ ಪತ್ನಿಯ ಕೂದಲು ಕತ್ತರಿಸಿದ್ದಾಳೆ ಎಂದು ಗೋಪಾಲ್ ಹೇಳಿದ್ದಾನೆ. ಇದನ್ನೂ ಓದಿ: ತಾಳಿ ಕಟ್ಟೋ ಕೊನೆ ಕ್ಷಣದಲ್ಲಿ ಮದ್ವೆ ಬೇಡ ಎಂದ ವಧು- ಸಿನಿಮಾ ಸ್ಟೈಲ್‍ನಲ್ಲಿ ಯುವತಿಯ ಡೈಲಾಗ್

  • ನಿತೀಶ್ ಮತ್ತೆ ಸಿಎಂ – 4ನೇ ಬೆರಳು ಕಟ್ ಮಾಡ್ಕೊಂಡ ಅಪ್ಪಟ ಅಭಿಮಾನಿ

    ನಿತೀಶ್ ಮತ್ತೆ ಸಿಎಂ – 4ನೇ ಬೆರಳು ಕಟ್ ಮಾಡ್ಕೊಂಡ ಅಪ್ಪಟ ಅಭಿಮಾನಿ

    ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಪ್ಪಟ ಅಭಿಮಾನಿಯೊಬ್ಬ ತನ್ನ ನಾಲ್ಕನೇಯ ಕೈಬೆರಳನ್ನು ಕತ್ತರಿಸಿಕೊಂಡಿದ್ದಾನೆ. ನಿತೀಶ್ ಕುಮಾರ್ ಅವರು ಸಿಎಂ ಆಗಿ ಮತ್ತೆ ಅಧಿಕಾರದ ಗದ್ದುಗೆ ಏರುವ ಹಿನ್ನೆಲೆಯಲ್ಲಿ ತನ್ನ 4ನೇ ಬೆರಳನ್ನು ಕಟ್ ಮಾಡಿಕೊಂಡಿದ್ದಾನೆ. ಅಲ್ಲದೆ ಅದನ್ನು ದೇವರಿಗೆ ಅರ್ಪಿಸಿದ್ದಾನೆ.

    ವ್ಯಕ್ತಿಯನ್ನು ಅನಿಲ್ ಶರ್ಮಾ ಅಲಿಯಾಸ್ ಅಲಿಯಾ ಬಾಬಾ(45) ಎಂದು ಗುರುತಿಸಲಾಗಿದೆ. ಈತ ಬಿಹಾರದ ಜೆಹಾನಾಬಾದ್ ಜಿಲ್ಲೆಯ ಘೋಸಿ ಪೊಲೀಸ್ ಠಾಣಾ ವ್ಯಾಪ್ತಿಯ ವೈನಾ ಗ್ರಾಮದ ನಿವಾಸಿ. ಅನಿಲ್ ಸುಮಾರು 15 ವರ್ಷಗಳಿಂದ ಈ ವಿಲಕ್ಷಣ ಆಚರಣೆಯನ್ನು ನಡೆಸುತ್ತಿದ್ದಾನೆ. ಪ್ರತಿ ಬಾರಿ ನಿತೀಶ್ ಕುಮಾರ್ ಸಿಎಂ ಆಗುವಾಗಲೂ ಅನಿಲ್ ತಮ್ಮ ಎಡಗೈಯ ಒಂದು ಬೆರಳನ್ನು ಕತ್ತರಿಸಿ ದೇವರಿಗೆ ಅರ್ಪಿಸುತ್ತಾ ಬಂದಿದ್ದಾನೆ. ಇದೀಗ ಮತ್ತೆ ನಿತೀಶ್ ಸಿಎಂ ಆಗಿದ್ದರಿಂದ 4 ನೇ ಬೆರಳನ್ನು ಕಟ್ ಮಾಡಿ ದೇವರಿಗೆ ಒಪ್ಪಿಸಿದ್ದಾನೆ.

    ನಿತೀಶ್ ಕುಮಾರ್ ಅವರು 2005ರಲ್ಲಿಯೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗಿನಿಂದ ಅನಿಲ್ ಈ ಆಚರಣೆಯನ್ನು ಪ್ರಾರಂಭಿಸಿದ್ದಾನೆ. 2010 ಹಾಗೂ 2015ರಲ್ಲಿ ಸಿಎಂ ಆಗಿ ಆಯ್ಕೆಯಾದಾಗಲೂ ಒಂದೊಂದು ಬೆರಳನ್ನು ಕತ್ತರಿಸಿಕೊಂಡಿದ್ದನು. ಇದೀಗ ಇತ್ತೀಚೆಗಷ್ಟೇ ಮತ್ತೆ ನಿತೀಶ್ ಸಿಎಂ ಅಧಿಕಾರದ ಗದ್ದುಗೆ ಏರುವಾಗಲೂ ಈತ ಅನಿಲ್ ತನ್ನ ಆಚರಣೆ ಮುಂದುವರಿಸಿ ಸುದ್ದಿಯಾಗಿದ್ದಾನೆ.

    ಈ ಸಂಬಂಧ ಮಧ್ಯಮದವರು ಅನಿಲ್ ನನ್ನು ಪ್ರಶ್ನಿಸಿದರೆ, ನಿತೀಶ್ ಕುಮಾರ್ ಅವರ ವಿಜಯವನ್ನು ಆಚರಿಸಲು ತನ್ನದೇ ಆದ ಮಾರ್ಗವಿದೆ. ನಾನು ಅವರ ಬಹುದೊಡ್ಡ ಅಭಿಮಾನಿಯಾಗಿದ್ದು, ಸಿಎಂ ನನ್ನನ್ನು ಭೇಟಿಯಾಗಲು ಬರುವುದಿಲ್ಲ ಎಂದು ನನಗೆ ತಿಳಿದಿತ್ತು. ಆದರೂ ಅವರ ಮೇಲೆ ಇರುವ ಗೌರವ ಕಿಂಚಿತ್ತೂ ಕಡಿಮೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

    ಇನ್ನು ಘೋಸಿ ಪೊಲೀಸ್ ಠಾಣೆಯ ಎಸ್‍ಎಚ್‍ಒ ಸತ್ಯೇಂದ್ರ ಕುಮಾರ್ ಪ್ರತಿಕ್ರಿಯಿಸಿ, ನಾವು ಈ ಘಟನೆಯ ಬಗ್ಗೆ ಮೊದಲ ಬಾರಿಗೆ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇವೆ ಮತ್ತು ತಕ್ಷಣ ತಂಡವನ್ನು ತನಿಖೆಗೆ ಗ್ರಾಮಕ್ಕೆ ಕಳುಹಿಸಿದ್ದೇವೆ. ನಾವು ಅವರ ಹೇಳಿಕೆಯನ್ನು ದಾಖಲಿಸುತ್ತೇವೆ ಮತ್ತು ಮುಂದಿನ ಕ್ರಮಕ್ಕಾಗಿ ನಮ್ಮ ಹಿರಿಯರನ್ನು ಸಂಪರ್ಕಿಸುತ್ತೇವೆ ಎಂದು ತಿಳಿಸಿದ್ದಾರೆ.

    ಕೈ ಬೆರಳು ಕಟ್ ಮಾಡಿಕೊಂಡ ಕುರಿತು ಮಾಧ್ಯಮಗಳು ವರದಿ ಮಾಡುತ್ತಿದ್ದಂತೆಯೇ ಅನಿಲ್ ಮನೆ ಮುಂದೆ ಸ್ಥಳೀಯರು ಜಮಾಯಿಸಿದ್ದಾರೆ. ಅಲ್ಲದೆ ಅನಿಲ್ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

  • ಎನ್‍ಡಿಎ ಮೈತ್ರಿಕೂಟಕ್ಕೆ ಮತ್ತೆ ಬಿಹಾರ – ನಿತೀಶ್‍ಗೆ ಒಲಿದ ಸಿಎಂ ಪಟ್ಟ

    ಎನ್‍ಡಿಎ ಮೈತ್ರಿಕೂಟಕ್ಕೆ ಮತ್ತೆ ಬಿಹಾರ – ನಿತೀಶ್‍ಗೆ ಒಲಿದ ಸಿಎಂ ಪಟ್ಟ

    – ಮಧ್ಯರಾತ್ರಿ ಪ್ರಕಟವಾಯ್ತು ಫಲಿತಾಂಶ

    ಪಾಟ್ನಾ: ರಾಷ್ಟ್ರ ರಾಜಕಾರಣದಲ್ಲಿ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಭಾರೀ ಕುತೂಹಲ ಕೆರಳಿಸಿತು. ಸಾಮಾನ್ಯವಾಗಿ ಬೇಗನೆ ಪ್ರಕಟವಾಗುತ್ತಿದ್ದ ಫಲಿತಾಂಶ ಈ ಬಾರಿ ರೋಚಕ ಟ್ವಿಸ್ಟ್ ಕಂಡು ಕೊನೆಗೂ ಎನ್‍ಡಿಎ ಮೈತ್ರಿಕೂಟ ಭರ್ಜರಿಯಾಗಿ ಗೆಲುವು ಕಂಡಿತು.

    ಎಲ್ಲಾ ಸಮೀಕ್ಷೆಗಳನ್ನು ತಲೆಕೆಳಗಾಗಿಸಿ ಎನ್‍ಡಿಎ ಮೈತ್ರಿಕೂಟ ಬಿಹಾರದಲ್ಲಿ ಗೆಲುವಿನ ಹಾರವನ್ನ ತನ್ನ ಕೊರಳಿಗೆ ಹಾಕಿಕೊಂಡಿದೆ. ಮಂಗಳವಾರ ಬೆಳಗ್ಗಿನಿಂದ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಭಾರೀ ಕುತೂಹಲಕ್ಕೆ ಕಾರಣವಾಗಿ ಕೊನೆಗೆ ಮಧ್ಯರಾತ್ರಿ 2 ಗಂಟೆ ವೇಳೆಗೆ ಎನ್‍ಡಿಎ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮತಎಣಿಕೆ ಆರಂಭವಾದಾಗಿನಿಂದಲೂ ತೂಗುಯ್ಯಾಲೆಯಲ್ಲಿ ಕುಳಿತಿದ್ದ ವಿಜಯಲಕ್ಷ್ಮೀ ಕೊನೆಗೂ ಎನ್‍ಡಿಎ ಕಡೆ ಒಲಿದಿದ್ದಾಳೆ.

    243 ವಿಧಾನಸಭಾ ಕ್ಷೇತ್ರದಲ್ಲಿ ಎನ್‍ಡಿಎ ಮ್ಯಾಜಿಕ್ ನಂಬರ್ 122ನ್ನು ದಾಟಿ 125 ಕ್ಷೇತ್ರಗಳಲ್ಲಿ ಸ್ಪಷ್ಟ ಬಹುಮತವನ್ನು ಪಡೆದಿದೆ. ಮಹಾಘಟಬಂಧನ್ 110 ಸ್ಥಾನಗಳಲ್ಲಿ ಗೆದ್ದಿದ್ದು, ಇತರರು 8ರಲ್ಲಿ ವಿಜಯದ ನಗೆ ಬೀರಿದ್ದಾರೆ. ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿಯ ಏಕಾಂಗಿ ಹೋರಾಟದ ಹೊರತಾಗಿಯೂ ಮಹಾಘಟಬಂಧನ್ ಅಧಿಕಾರ ವಂಚಿತವಾಗಿದೆ.

    ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಆರ್‌ಜೆಡಿ:
    ಬಿಹಾರದಲ್ಲಿ ಮತದಾರ ಮೋದಿ-ನಿತೀಶ್ ಜೋಡಿಗೆ ಜೈ ಅಂದಿದ್ದಾನೆ. ಯಾವ್ಯಾವ ಪಕ್ಷದ ಎಷ್ಟೆಷ್ಟು ಸಾಧನೆ ಅಂತ ನೋಡೋದಾದ್ರೆ, ಬಿಜೆಪಿ 74 ಕ್ಷೇತ್ರಗಳಲ್ಲಿ ವಿಜಯದ ನಗೆ ಬೀರುವ ಮೂಲಕ ಎನ್‍ಡಿಎ ಮೈತ್ರಿಕೂಟದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

    ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು, ಲೋಕ ಜನಶಕ್ತಿ ಪಾರ್ಟಿಯ ಚಿರಾಗ್ ಪಾಸ್ವಾನ್ ನೀಡಿದ ಏಟಿನಿಂದಾಗಿ ಮೂರನೇ ಸ್ಥಾನಕ್ಕೆ ಕುಸಿದಿದ್ದು 43 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ತೇಜಸ್ವಿ ಯಾದವ್ ನೇತೃತ್ವದ ಆರ್‍ಜೆಡಿ 75 ಕ್ಷೇತ್ರದಲ್ಲಿ ಗೆದ್ದು ಬಿಹಾರದ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

    70 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್‍ನಿಂದ ನಿರೀಕ್ಷಿತ ಬೆಂಬಲ ಸಿಗದೇ ಅಧಿಕಾರದಿಂದ ದೂರ ಉಳಿಯಬೇಕಾಗಿದೆ. ಇನ್ನು ಇನ್ನು, ವಿಕಾಸಶೀಲ ಇನ್ಸಾನ್ ಪಾರ್ಟಿ ಮತ್ತು ಜೀತನ್ ರಾಮ್ ಮಾಂಝಿ ಅವರ ಎಚ್‍ಎಎಂ ತಲಾ 4 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಹೀಗಾಗಿ ಜೆಡಿಯು ಕಳಪೆ ಸಾಧನೆಯ ಹೊರತಾಗಿಯೂ ಎಚ್‍ಎಎಂ ಮತ್ತು ವಿಐಪಿ ಉತ್ತಮ ಪ್ರದರ್ಶನದಿಂದ ಎನ್‍ಡಿಎ ತನ್ನಲ್ಲಿಯೇ ಅಧಿಕಾರ ಉಳಿಸಿಕೊಂಡಿದೆ.

    ಸಾಮಾನ್ಯವಾಗಿ ಬೇಗನೆ ಪ್ರಕಟವಾಗುತ್ತಿದ್ದ ಫಲಿತಾಂಶ ಈ ಬಾರಿ ವಿಳಂಬವಾಗಿದ್ದಂತೆ ಪ್ರಕ್ಷಗಳ ನಡುವೆ ಟೀಕೆಗಳು ಶುರುವಾದವು. ಈ ಟೀಕೆಗಳಿಗೆ ಚುನಾವಣಾ ಆಯೋಗ ಸ್ಪಷ್ಟ ಎಚ್ಚರಿಕೆಯನ್ನು ನೀಡಿತು. ಮರು ಮತ ಎಣಿಕೆಯ ಬಗ್ಗೆ ಭರವಸೆ ನೀಡಿತು. ಒಟ್ಟಿನಲ್ಲಿ ಭಾರೀ ಕುತೂಹಲಕ್ಕೆ ಕಾರಣವಾದ ಮ್ಯಾರಥಾನ್ ಚುನಾವಣಾ ಫಲಿತಾಂಶ ಎನ್‍ಡಿಎ ಮೈತ್ರಿಕೂಟ ಪಾಲಾಗಿದೆ. ಕೊರೊನಾ ಸಂಕಷ್ಟದ ನಡುವೆ ಬಿಹಾರ ಚುನಾವಣೆ ಹಿಂದೆಂದೂ ಕಾಣದ ಜಿದ್ದಾಜಿದ್ದಿಗೆ ಸಾಕ್ಷಿಯಾಯ್ತು.

  • ಮತದಾನದಂದೇ ಯುವ ಆರ್‌ಜೆಡಿ ನಾಯಕನ ಸಹೋದರನಿಗೆ ಗುಂಡಿಕ್ಕಿ ಕೊಲೆ!

    ಮತದಾನದಂದೇ ಯುವ ಆರ್‌ಜೆಡಿ ನಾಯಕನ ಸಹೋದರನಿಗೆ ಗುಂಡಿಕ್ಕಿ ಕೊಲೆ!

    ಪಾಟ್ನಾ: ಚುನಾವಣೆಯ ಮತದಾನದಂದೇ ಆರ್‌ಜೆಡಿ ನಾಯಕನೊಬ್ಬನ ಸಹೋದರನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆಗೈದ ಘಟನೆ ಬಿಹಾರದ ಪುರ್ನಿಯಾ ಗ್ರಾಮದಲ್ಲಿ ನಡೆದಿದೆ.

    ಈ ಘಟನೆ ಶನಿವಾರ ಧರ್ದಾಹ ವಿಧಾನಸಭಾ ಕ್ಷೇತ್ರದ ಮಿತಿಯಲ್ಲಿ ಪುರ್ನಿಯಾದ ಸಾರ್ಸಿ ಪ್ರದೇಶದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಬೆನಿ ಸಿಂಗ್ ಎಂದು ಗುರುತಿಸಲಾಗಿದೆ. ಈತನ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

    ಮೃತ ಯುವಕ ಕಳೆದ ತಿಂಗಳು ಎಸ್‍ಟಿಎಫ್ ನಿಂದ ಬಂಧನಕ್ಕೊಳಗಾದ ಆರ್‌ಜೆಡಿ ನಾಯಕ ಬಿಟ್ಟು ಸಿಂಗ್ ಅಲಿಯಾಸ್ ಅನಿಕೇತ್ ಸಿಂಗ್ ಸಹೋದರನಾಗಿದ್ದಾನೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷಗೆ ಕಳುಹಿಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಉಸ್ತುವಾರಿ ತಿಳಿಸಿದ್ದಾರೆ.

    ಯುವ ಆರ್‌ಜೆಡಿ ಮುಖಂಡ ಅನಿಕೇತ್ ಸಿಂಗ್ ಅವರನ್ನು ಪುರ್ನಿಯಾದ ಮ್ಯಾಕ್ಸ್-7 ಆಸ್ಪತ್ರೆಯ ಹೊರಗಡೆಯೇ ಎಸ್‍ಟಿಎಫ್ ಬಂಧಿಸಿತ್ತು. ಬಂಧನಕ್ಕೊಳಗಾದ ಸಿಂಗ್ ಅವರ ವಾಹನದಿಂದ ಎಕೆ-47, ಕಾರ್ಬೈನ್ ಮತ್ತು 66 ಸುತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಂಡಿತ್ತು.