ಪಾಟ್ನಾ: ಪ್ರಧಾನಿ ನರೇಂದ್ರ ಮೋದಿಯವರ ದಿವಂಗತ ತಾಯಿ ಹೀರಾಬೆನ್ ಮೋದಿ ಅವರ ಕುರಿತಾದ ಎಐ ಆಧಾರಿತ ವೀಡಿಯೊವನ್ನು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ತೆಗೆದುಹಾಕುವಂತೆ ಪಾಟ್ನಾ ಹೈಕೋರ್ಟ್ ಕಾಂಗ್ರೆಸ್‌ಗೆ ಸೂಚಿಸಿದೆ.
ಬಿಹಾರ ಕಾಂಗ್ರೆಸ್ ಪೋಸ್ಟ್ ಮಾಡಿದ ಕೃತಕ ಬುದ್ಧಿಮತ್ತೆ ಆಧಾರಿತ ವೀಡಿಯೊ ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಕಾಂಗ್ರೆಸ್‌ಗೆ ಸೂಚನೆ ನೀಡಿದೆ.
ವಿರೋಧ ಪಕ್ಷವು ಪ್ರಧಾನಿಯವರ ದಿವಂಗತ ತಾಯಿಗೆ ಅಗೌರವ ತೋರಿದೆ ಎಂದು ಬಿಜೆಪಿ ಆರೋಪಿಸಿತ್ತು. ವೀಡಿಯೊದಲ್ಲಿ ಎಲ್ಲಿಯೂ ಹೀರಾಬೆನ್ ಮೋದಿಗೆ ಅಗೌರವ ತೋರಿಲ್ಲ ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿತ್ತು.
ಪಾಟ್ನಾ: 2013ರ ಪಾಟ್ನಾದಲ್ಲಿ ಸಂಭವಿಸಿದ್ದ ಸರಣಿ ಸ್ಫೋಟ (Patna Serial Blasts) ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳ ಗಲ್ಲು ಶಿಕ್ಷೆಯನ್ನು ಪಾಟ್ನಾ ಹೈಕೋರ್ಟ್ (Patna High Court) ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದೆ.
ವಿಶೇಷ ಎನ್‍ಐಎ ನ್ಯಾಯಾಲಯದ ಹಿಂದಿನ ತೀರ್ಪನ್ನು ಪರಿಶೀಲಿಸಿ, ಹೈಕೋರ್ಟ್ ನ್ಯಾಯಮೂರ್ತಿ ಅಶುತೋಷ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ. ಆರೋಪಿಗಳ ಪರ ವಾದ ಮಂಡಿಸಿದ ವಕೀಲ ಇಮ್ರಾನ್ ಘನಿ, ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವ ಹೈಕೋರ್ಟ್‍ನ ತೀರ್ಪನ್ನು ದೃಢಪಡಿಸಿದ್ದಾರೆ.
ಅಕ್ಟೋಬರ್ 27, 2013 ರಂದು ಸಂಭವಿಸಿದ ಸರಣಿ ಸ್ಫೋಟಗಳು ವ್ಯಾಪಕ ಭೀತಿಯನ್ನು ಉಂಟುಮಾಡಿತ್ತು. ಹಲವಾರು ಸಾವುನೋವುಗಳಿಗೆ ಕಾರಣವಾಗಿತ್ತು. 2014ರ ಲೋಕಸಭೆ ಚುನಾವಣೆಗೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿಯವರು (Narendra Modi) ಚುನಾವಣಾ ರ‍್ಯಾಲಿಯಲ್ಲಿ ಮಾತನಾಡುತ್ತಿದ್ದ ವೇಳೆ ಪಾಟ್ನಾದ ಗಾಂಧಿ ಮೈದಾನದಲ್ಲಿ ಸ್ಫೋಟ ಸಂಭವಿಸಿತ್ತು. ಅಲ್ಲದೇ ಪಾಟ್ನಾ ರೈಲು ನಿಲ್ದಾಣವನ್ನು ಗುರಿಯಾಗಿಸಿಕೊಂಡು ಸ್ಫೋಟಗೊಳಿಸಲಾಗಿತ್ತು. ಈ ಸ್ಫೋಟದಿಂದ 6 ಜನ ಸಾವನ್ನಪ್ಪಿ, 80 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಮೊದಲ ಬಾಂಬ್ ಸ್ಫೋಟ ಪಾಟ್ನಾ ರೈಲು ನಿಲ್ದಾಣದ 10ನೇ ಫ್ಲಾಟ್‍ಫಾರ್ಮ್‍ನಲ್ಲಿ ಸಂಭವಿಸಿತ್ತು. ಇನ್ನುಳಿದ ಸ್ಫೋಟ ಗಾಂಧಿ ಮೈದಾನದಲ್ಲಿ ನಡೆದಿತ್ತು. ಮೋದಿ ಭಾಷಣ ಮಾಡಲಿದ್ದ ಕೆಲವೇ ಕ್ಷಣಗಳ ಮೊದಲು ಬಾಂಬ್ ಸ್ಫೋಟಿಸಲಾಗಿತ್ತು. ಆದರೆ ಮೋದಿ ರ್ಯಾಲಿ ಮುಂದುವರಿಸಿದ್ದರು.
ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಪಾಟ್ನಾ ಪೊಲೀಸರು ಮಾಡಿದ್ದರು. ಬಳಿಕ ಎನ್‍ಐಎಗೆ ಹಸ್ತಾಂತರಿಸಲಾಗಿತ್ತು. ಪ್ರಕರಣದ ಒಂಬತ್ತು ಆರೋಪಿಗಳನ್ನು ಇಮ್ತಿಯಾಜ್ ಅನ್ಸಾರಿ, ಹೈದರ್ ಅಲಿ, ನವಾಜ್ ಅನ್ಸಾರಿ, ಮುಜ್ಮುಲ್ಲಾ, ಉಮರ್ ಸಿದ್ದಿಕಿ, ಅಜರ್ ಕುರೇಸಿ, ಅಹ್ಮದ್ ಹುಸೇನ್, ಫಿರೋಜ್ ಅಸ್ಲಾಂ ಮತ್ತು ಇಫ್ತಿಕರ್ ಆಲಂ ಎಂದು ಗುರುತಿಸಲಾಗಿತ್ತು. ಇನ್ನೋರ್ವ ಆರೋಪಿ ಫಕ್ಯುದ್ದೀನ್‍ನನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಎನ್‍ಐಎ ಖುಲಾಸೆಗೊಳಿಸಿತ್ತು.
ಶಿಕ್ಷೆಗೊಳಗಾದ ವ್ಯಕ್ತಿಗಳು ಇಂಡಿಯನ್ ಮುಜಾಹಿದ್ದೀನ್ ಮತ್ತು ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾದ ಸದಸ್ಯರು ಎಂದು ತಿಳಿದು ಬಂದಿದೆ. ಆರೋಪಿಗಳು ಪ್ರಸ್ತುತ ಪಾಟ್ನಾದ ಬ್ಯೂರ್ ಜೈಲಿನಲ್ಲಿದ್ದಾರೆ.
ನವದೆಹಲಿ: ಬಿಹಾರದಲ್ಲಿ (Bihar) ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು (SC/ST) ,ಹಿಂದುಳಿದ ವರ್ಗಗಳು ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಮೀಸಲಾತಿಯನ್ನು 50% ನಿಂದ 65% ಕ್ಕೆ ಏರಿಸಿದ್ದನ್ನು ರದ್ದುಗೊಳಿಸಿದ ಪಾಟ್ನಾ ಹೈಕೋರ್ಟ್‌ನ (Patna High Court) ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ.
ತಡೆ ನೀಡದೇ ಇದ್ದರೂ ಪಾಟ್ನಾ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ 10 ಅರ್ಜಿಗಳ ವಿಚಾರಣೆಯನ್ನು ಸೆಪ್ಟೆಂಬರ್‌ನಲ್ಲಿ ನಡೆಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾ. ಜೆ ಬಿ ಪರ್ದಿವಾಲಾ ಮತ್ತು ನ್ಯಾ. ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಹೇಳಿದೆ.
ಬಿಹಾರ ರಾಜ್ಯದ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, ಛತ್ತೀಸ್‌ಗಢದ ಪ್ರಕರಣವನ್ನು ಉಲ್ಲೇಖಿಸಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ನಮಗೂ ಅದೇ ರೀತಿಯ ಆದೇಶ ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಕೋರ್ಟ್ ತಡೆ ನೀಡಲು ಸಾಧ್ಯವಿಲ್ಲ. ಸೆಪ್ಟೆಂಬರ್‌ನಲ್ಲಿ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಸಿಜೆಐ ಹೇಳಿದರು. ಇದನ್ನೂ ಓದಿ: Valmiki Corporation Scam | ಹೈದರಾಬಾದ್‌ನಲ್ಲೇ ಬೀಡುಬಿಟ್ಟ ಎಸ್‌ಐಟಿ – ಒಟ್ಟು 16 ಕೆಜಿ ಚಿನ್ನ ಜಪ್ತಿ
ಹಿಂದುಳಿದ ವರ್ಗಗಳು, ಅತೀ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮೀಸಲಾತಿಯನ್ನು 50% ರಿಂದ 65%ಗೆ ಸರ್ಕಾರ ಹೆಚ್ಚಿಸಿತ್ತು. ಖಾಲಿ ಹುದ್ದೆಗಳ ಬಿಹಾರ ಮೀಸಲಾತಿ (Amendment) ಕಾಯ್ದೆ 2023 ಮತ್ತು ಬಿಹಾರ (ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ) ಮೀಸಲಾತಿ (ತಿದ್ದುಪಡಿ) ಕಾಯ್ದೆ 2023 ಸಂವಿಧಾನ 14ನೇ ವಿಧಿಯ ಅಡಿಯಲ್ಲಿ ನೀಡಲಾದ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಪಾಟ್ನಾ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಹಾಗೂ ಹರೀಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟು ರದ್ದುಗೊಳಿಸಿತ್ತು.
ಬಿಹಾರ ಸರ್ಕಾರದ ನಿರ್ಧಾರವು ಸಂವಿಧಾನದ ವ್ಯಾಪ್ತಿಯನ್ನು ಮೀರಿದೆ. ಅಲ್ಲದೇ ಸಂವಿಧಾನ (Constitution) ವಿಧಿ 14, 15 ಮತ್ತು 16ನೇ ವಿಧಿಗಳ ಅಡಿಯಲ್ಲಿ ಇದು ಸಮಾನತೆಯ ಷರತ್ತನ್ನು ಉಲ್ಲಂಘಿಸುತ್ತವೆ ಎಂದು ಕೋರ್ಟ್ ಹೇಳಿತ್ತು. ಇದನ್ನೂ ಓದಿ: ಕೆಆರ್‌ಎಸ್ ಭರ್ತಿ: ಮೂರನೇ ಬಾರಿ ಬಾಗಿನ ಅರ್ಪಿಸಿದ ಸಿಎಂ
2023ರ ನವೆಂಬರ್ ತಿಂಗಳಲ್ಲಿ ಬಿಹಾರ ವಿಧಾನಸಭೆಯು ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿತ್ತು. ತಿದ್ದುಪಡಿ ಮಾಡಲಾದ ಮೀಸಲಾತಿ ಕೋಟಾವು ಪರಿಶಿಷ್ಟ ಜಾತಿಗಳಿಗೆ 20%, ಪರಿಶಿಷ್ಟ ಪಂಗಡಗಳಿಗೆ 2% , ಇತರೇ ಹಿಂದುಳಿದ ವರ್ಗಗಳಿಗೆ ಮತ್ತು ಅತ್ಯಂತ ಹಿಂದುಳಿದ ವರ್ಗಗಳಿಗೆ 43% ಮೀಸಲಾತಿ ಒಳಗೊಂಡಿತ್ತು.
ಪಾಟ್ನಾ: ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಹಾರ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ. OBC, SC, ST ವರ್ಗಗಳ ಮೀಸಲಾತಿ (OBC Reservation) 65%ಗೆ ಹೆಚ್ಚಿಸುವ ಸರ್ಕಾರದ ನಿರ್ಧಾರವನ್ನು ಪಾಟ್ನಾ ಹೈಕೋರ್ಟ್ ರದ್ದು ಮಾಡಿದೆ.
ಹಿಂದುಳಿದ ವರ್ಗಗಳು, ಅತೀ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮೀಸಲಾತಿಯನ್ನು 50% ರಿಂದ 65%ಗೆ ಸರ್ಕಾರ ಹೆಚ್ಚಿಸಿತ್ತು. ಖಾಲಿ ಹುದ್ದೆಗಳ ಬಿಹಾರ ಮೀಸಲಾತಿ (Amendment) ಕಾಯ್ದೆ 2023 ಮತ್ತು ಬಿಹಾರ (ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ) ಮೀಸಲಾತಿ (ತಿದ್ದುಪಡಿ) ಕಾಯ್ದೆ 2023 ಸಂವಿಧಾನ 14ನೇ ವಿಧಿಯ ಅಡಿಯಲ್ಲಿ ನೀಡಲಾದ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಮುಖ್ಯನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಹಾಗೂ ಹರೀಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟು ರದ್ದುಗೊಳಿಸಿದೆ.
2023ರ ನವೆಂಬರ್ ತಿಂಗಳಲ್ಲಿ ಬಿಹಾರ ವಿಧಾನಸಭೆಯು ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿತ್ತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅನುಪಸ್ಥಿತರಾಗಿದ್ದರು. ತಿದ್ದುಪಡಿ ಮಾಡಲಾದ ಮೀಸಲಾತಿ ಕೋಟಾವು ಪರಿಶಿಷ್ಟ ಜಾತಿಗಳಿಗೆ 20%, ಪರಿಶಿಷ್ಟ ಪಂಗಡಗಳಿಗೆ 2% , ಇತರೇ ಹಿಂದುಳಿದ ವರ್ಗಗಳಿಗೆ ಮತ್ತು ಅತ್ಯಂತ ಹಿಂದುಳಿದ ವರ್ಗಗಳಿಗೆ 43% ಮೀಸಲಾತಿ ಒಳಗೊಂಡಿತ್ತು.
ನವದೆಹಲಿ: ದರೋಡೆಕೋರ, ರಾಜಕಾರಣಿ ಆನಂದ್ ಮೋಹನ್‍ನನ್ನು ಅವಧಿ ಮುನ್ನವೇ ಜೈಲಿನಿಂದ ಬಿಡುಗಡೆ ಮಾಡಿದ್ದಕ್ಕೆ ಸುಪ್ರೀಂ ಕೋರ್ಟ್ (Supreme Court) ಬಿಹಾರ (Bihar) ಸರ್ಕಾರಕ್ಕೆ ಸೋಮವಾರ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ಸರ್ಕಾರ ಎರಡು ವಾರಗಳಲ್ಲಿ ಉತ್ತರಿಸಬೇಕು ಎಂದು ನ್ಯಾಯಾಲಯ ಎಚ್ಚರಿಸಿದೆ.
ಐಎಎಸ್ (IAS) ಅಧಿಕಾರಿ ಜಿ ಕೃಷ್ಣಯ್ಯ ಅವರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಆನಂದ್ ಮೋಹನ್‍ನನ್ನು ಬಿಹಾರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಇದನ್ನು ಪ್ರಶ್ನಿಸಿ ಕೃಷ್ಣಯ್ಯ ಪತ್ನಿ ಉಮಾ ಕೃಷ್ಣಯ್ಯ ಸುಪ್ರೀಂ ಕೋರ್ಟ್‍ಗೆ ಮನವಿ ಸಲ್ಲಿಸಿದ್ದರು. ಸುಪ್ರೀಂ ಪ್ರತಿಕ್ರಿಯೆಯಿಂದ ನನಗೆ ಸಂತಸವಾಗಿದೆ. ನ್ಯಾಯ ಸಿಗುವ ಭರವಸೆ ಇದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಬಂಧನ ಭೀತಿ – ಸುಪ್ರೀಂ ಮೊರೆ ಹೋದ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್
ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಜೈಲು ಕೈಪಿಡಿಯನ್ನು ಇತ್ತೀಚೆಗೆ ತಿದ್ದುಪಡಿ ಮಾಡಿತ್ತು. ಇದಾದ ನಂತರ 27 ಅಪರಾಧಿಗಳ ಬಿಡುಗಡೆಯಾಗಿತ್ತು. ಏ. 27 ರಂದು ಆನಂದ್ ಮೋಹನ್‍ನನ್ನು ಬಿಡುಗಡೆ ಮಾಡಲಾಗಿತ್ತು. ಇದನ್ನು ಸುಪ್ರೀಂ ಗಮನಕ್ಕೆ ತಂದಿದ್ದ ಅರ್ಜಿದಾರರು ಆನಂದ್‍ನನ್ನು ಬಿಡುಗಡೆ ಮಾಡುವ ಉದ್ದೇಶದಿಂದ ಕೈಪಿಡಿ ತಿದ್ದುಪಡಿ ಮಾಡಲಾಗಿದೆ ಎಂದು ಆರೋಪಿಸಿದ್ದರು.
1994ರಲ್ಲಿ ಅಂದಿನ ಗೋಪಾಲಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ (District Magistrate) ಜಿ. ಕೃಷ್ಣಯ್ಯ ಅವರ ಹತ್ಯೆ ಪ್ರಕರಣದಲ್ಲಿ ಆನಂದ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಈ ಹಿಂದೆ ಪುತ್ರ ಚೇತನ್ ಆನಂದ್ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು 15 ದಿನಗಳ ಪೆರೋಲ್‍ನಲ್ಲಿದ್ದ. ಪೆರೋಲ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಏ.26 ರಂದು ಸಹರ್ಸಾ ಜೈಲಿಗೆ ಮರಳಿದ್ದ. ಆದರೆ ಏ.27 ರಂದು ಬಿಡುಗಡೆಯಾಗಿದ್ದ.
ಪ್ರಕರಣದ ಹಿನ್ನೆಲೆ ಏನು?
1994 ರ ಡಿಸೆಂಬರ್ 5 ರಂದು ಮುಜಾಫರ್‍ಪುರ್‍ನಲ್ಲಿ ಕೃಷ್ಣಯ್ಯ ಅವರನ್ನು ಆನಂದ್ ಮೋಹನ್‍ನ ಪ್ರಚೋದನೆಗೆ ಒಳಗಾದ ಗುಂಪು ಥಳಿಸಿ ಕೊಂದಿತ್ತು. 2007 ರಲ್ಲಿ ವಿಚಾರಣಾ ನ್ಯಾಯಾಲಯವು ಆನಂದ್ ಮೋಹನ್‍ಗೆ ಮರಣದಂಡನೆ ವಿಧಿಸಿತ್ತು. ಒಂದು ವರ್ಷದ ನಂತರ ಪಾಟ್ನಾ ಹೈಕೋರ್ಟ್ (Patna High Court) ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತ್ತು. ನಂತರ ಮೋಹನ್ ಸುಪ್ರೀಂ ಕೋರ್ಟ್‍ನಲ್ಲಿ ತೀರ್ಪನ್ನು ಪ್ರಶ್ನಿಸಿದ್ದ. ಆದರೆ ಈ ಅರ್ಜಿಯ ಯಾವುದೇ ವಿಚಾರಣೆ ನಡೆಯದೇ 2007 ರಿಂದ ಸಹರ್ಸಾ (Saharsa) ಜೈಲಿನಲ್ಲಿದ್ದ. ಇದನ್ನೂ ಓದಿ: ಸಿಹಿ ಹಂಚಿ ರೇಪ್ – 30 ಮಕ್ಕಳ ಮೇಲೆ ಅತ್ಯಾಚಾರಗೈದವ ಕೊನೆಗೂ ದೋಷಿಯಾದ