Tag: patients

  • ಗ್ರಾಮೀಣ ಭಾಗದ ಆಸ್ಪತ್ರೆಯಲ್ಲಿ ವೈದ್ಯರ ಉತ್ತಮ ಸೇವೆ, ರೋಗಿಗಳ ಪ್ರಮಾಣ ಹೆಚ್ಚಳ: ರುದ್ರಪ್ಪ ಲಮಾಣಿ

    ಗ್ರಾಮೀಣ ಭಾಗದ ಆಸ್ಪತ್ರೆಯಲ್ಲಿ ವೈದ್ಯರ ಉತ್ತಮ ಸೇವೆ, ರೋಗಿಗಳ ಪ್ರಮಾಣ ಹೆಚ್ಚಳ: ರುದ್ರಪ್ಪ ಲಮಾಣಿ

    ಹಾವೇರಿ:  ತಾಲೂಕಿನ ಗುತ್ತಲ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ರುದ್ರಪ್ಪ ಲಮಾಣಿ (Rudrappa Lamani) ಅವರು ಆಸ್ಪತ್ರೆಯಲ್ಲಿರುವ ಆರೋಗ್ಯ ಸೇವೆಗೆ ಪ್ರಶಂಸೆ ವ್ಯಕ್ತಪಡಿಸಿದರು.

    ವೈದ್ಯರ (Doctors) ಉತ್ತಮ ಸೇವೆ ಪರಿಣಾಮ ರೋಗಿಗಳು (Patients) ಇದೇ ಆಸ್ಪತ್ರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು 50 ಬೆಡ್ ಶೀಟ್‌ಗಳಿಗೆ ಒತ್ತಾಯಿಸಿದ್ದರು. ಕೋರಿಕೆ ಪರಿಗಣಿಸಿರುವ ಸರ್ಕಾರ 60 ಬೆಡ್ ಶೀಟ್ ಒದಗಿಸಲು ಒಪ್ಪಿದೆ. ಹಾವೇರಿ ನಗರದಲ್ಲಿ ಎರಡು ಕಡೆ ನಮ್ಮ ಕ್ಲಿನಿಕ್ ಆರಂಭಿಸಿದ್ದರಿಂದ ಜಿಲ್ಲಾಸ್ಪತ್ರೆ ಮೇಲಿನ ಒತ್ತಡ ಕಡಿಮೆಯಾಗಿದೆ ಎಂದು ರುದ್ರಪ್ಪ ಲಮಾಣಿ ಹೇಳಿದರು. ಇದನ್ನೂ ಓದಿ: ಭಾರತದ ಸಿಂಧೂರ ದಾಳಿಗೆ ಮಸೂದ್ ಕುಟುಂಬ ಕಳೆದುಕೊಂಡ – ಪಾಕ್ ಉಗ್ರ ಇಲ್ಯಾಸ್ ಸಾಕ್ಷ್ಯ

    ಈ ವೇಳೆ ಡಾ.ಮಹೇಶ ಹಾವನೂರ, ಸಿ.ಬಿ.ಕುರವತ್ತಿಗೌಡ್ರ, ನಾಗಮ್ಮಗೊರವರ, ಶಿವಯೋಗೆಪ್ಪ ಹಾಲಗಿ, ಗುರುರಾಜ ನೆಗಳೂರ, ಹನುಮಂತ ಅಗಸಿಬಾಗಿಲ ಸೇರಿದಂತೆ ಪಟ್ಟಣ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಇದನ್ನೂ ಓದಿ: UKP 3ನೇ ಹಂತ| ಮುಳುಗಡೆ ಸಂತ್ರಸ್ತರಿಗೆ 40 ಲಕ್ಷ ಪರಿಹಾರ – ಯಾರಿಗೆ ಎಷ್ಟು ಸಿಗುತ್ತೆ?

  • ಕೋಲ್ಕತ್ತಾ ಆಸ್ಪತ್ರೆಯಲ್ಲಿ ಭಾರಿ ಬೆಂಕಿ ಅವಘಡ: ಐಸಿಯುನಲ್ಲಿದ್ದ ರೋಗಿ ಸಾವು

    ಕೋಲ್ಕತ್ತಾ ಆಸ್ಪತ್ರೆಯಲ್ಲಿ ಭಾರಿ ಬೆಂಕಿ ಅವಘಡ: ಐಸಿಯುನಲ್ಲಿದ್ದ ರೋಗಿ ಸಾವು

    – 20 ನಿಮಿಷದಲ್ಲಿ 80 ರೋಗಿಗಳ ರಕ್ಷಣೆ

    ಕೋಲ್ಕತ್ತಾ: ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ (ESI Hospital) ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಐಸಿಯುನಲ್ಲಿದ್ದ (ICU) ಓರ್ವ ರೋಗಿ ಸಾವನ್ನಪ್ಪಿದ್ದಾನೆ.

    ಕೋಲ್ಕತ್ತಾದ ಸೀಲ್ದಾಹ್ (Sealdah) ಪ್ರದೇಶದಲ್ಲಿರುವ ಇಎಸ್‌ಐ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು (ಅ.18) ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಥಳಕ್ಕೆ 10 ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡರು. ಈ ವೇಳೆ ಕೇವಲ 20 ನಿಮಿಷದಲ್ಲಿ 80 ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಐಸಿಯುನಲ್ಲಿದ್ದ ಓರ್ವ ರೋಗಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಬಿಬಿಎಂಪಿ ಬಂಡವಾಳ ಬಯಲು- ಎರಡು ದಿನದ ಮಳೆಗೆ ಕಿತ್ತು ಬಂತು ಹೊಸದಾಗಿ ಹಾಕಿದ್ದ ಡಾಂಬರು ರಸ್ತೆ

    ಮೊದಲು ಆಸ್ಪತ್ರೆಯ ಒಂದು ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೇರೆ ಕೋಣೆಗಳಿಗೆ ಹರಡುವ ಮುನ್ನ ಬೆಂಕಿಯನ್ನು ಹತೋಟಿಗೆ ತರಲಾಯಿತು. ಆದರೆ ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ.

    ಕೆಲವು ರೋಗಿಗಳು ಬೆಂಕಿ ಕಾಣಿಸಿಕೊಂಡ ಬಳಿಕ ತಮ್ಮ ಆರೈಕೆದಾರರ ಜೊತೆ ಹೊರಗೆ ಬಂದಿದ್ದು, ಇನ್ನುಳಿದ ಕೆಲವರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಯಿತು. ಸದ್ಯ ಚಿಕಿತ್ಸೆಗಾಗಿ ರೋಗಿಗಳನ್ನು ಬೇರೆ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ.

    ಸ್ಥಳಕ್ಕೆ ಪಶ್ಚಿಮ ಬಂಗಾಳದ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಸಚಿವ ಸುಜಿತ್ ಬೋಸ್ (Sujit Bose) ಭೇಟಿ ನೀಡಿದರು.

    ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಟಿ.ಕೆ.ದತ್ತಾ (TK Dutta) ಮಾತನಾಡಿ, ಇದೊಂದು ಭಯಾನಕ ಅಗ್ನಿ ಅವಘಡ. ಐಸಿಯುನಲ್ಲಿ ದಾಖಲಾಗಿದ್ದ ಓರ್ವ ರೋಗಿಯ ಹೊರತಾಗಿ, ಕೇವಲ 20 ನಿಮಿಷದಲ್ಲಿ ಎಲ್ಲಾ ರೋಗಿಗಳನ್ನು ಪ್ರಾಣಾಪಾಯದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ. ಐಸಿಯುನಲ್ಲಿದ್ದ ಓರ್ವ ರೋಗಿಯ ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಇನ್ನಿತರ ಯಾವುದೇ ಗಾಯಗಳಾಗಿಲ್ಲ. ಕೋಣೆಯಲ್ಲಿ ಹೊಗೆ ಕಾಣಿಸಿದ್ದನ್ನು ಕಂಡ ಕೆಲ ರೋಗಿಗಳು ಕಿಟಕಿಯಿಂದ `ನಮ್ಮನ್ನು ಉಳಿಸಿ’ ಎಂದು ಕಿರುಚುತ್ತಿದ್ದರು ಎಂದು ನಡೆದ ಅವಘಡದ ಕುರಿತು ವಿವರಿಸಿದರು.ಇದನ್ನೂ ಓದಿ: ಬೆಂಗಳೂರು ಕಾಲೇಜಿಗೆ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿ ಬಂಗಾಳದಲ್ಲಿ ಅರೆಸ್ಟ್‌

  • ‘ಮಿಂಟೋ’ ಆಸ್ಪತ್ರೆಯ ಕರ್ಮಕಾಂಡ – ಆಸ್ಪತ್ರೆಗೆ ಬೀಗ ಹಾಕಿ ರಸ್ತೆಯಲ್ಲೇ ರೋಗಿಗಳಿಗೆ ಚಿಕಿತ್ಸೆ

    ‘ಮಿಂಟೋ’ ಆಸ್ಪತ್ರೆಯ ಕರ್ಮಕಾಂಡ – ಆಸ್ಪತ್ರೆಗೆ ಬೀಗ ಹಾಕಿ ರಸ್ತೆಯಲ್ಲೇ ರೋಗಿಗಳಿಗೆ ಚಿಕಿತ್ಸೆ

    – ಊಟದ ಸಮಯ ಎಂದು ರೋಗಿಗಳನ್ನು ಹೊರಗಡೆ ಕಳುಹಿಸಿ ಆಸ್ಪತ್ರೆಗೆ ಬೀಗ

    ಬೆಂಗಳೂರು: ಇಲ್ಲಿನ ಮಿಂಟೋ ಆಸ್ಪತ್ರೆ (Minto Hospital) ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಾಗಿದೆ. ಆದರೆ ಈಗ ಊಟದ ಸಮಯ ಎಂದು ಆಸ್ಪತ್ರೆಗೆ ಬೀಗ ಹಾಕಿ ರಸ್ತೆಯಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡಿ ಅಮಾನವೀಯ ವರ್ತನೆ ತೋರಿದ್ದಾರೆ. ಇದರಿಂದ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಸಿಗದೆ ಆಸ್ಪತ್ರೆ ಮುಂಭಾಗ ರೋಗಿಗಳು ನರಳಾಡುತ್ತಿದ್ದಾರೆ.

    ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇರುವ ಅತಿದೊಡ್ಡ ಕಣ್ಣಿನ ಆಸ್ಪತ್ರೆ (Eye Hospital) ಎಂದರೆ ಅದು ಮಿಂಟೋ ಆಸ್ಪತ್ರೆ. ಉಚಿತವಾಗಿ ಚಿಕಿತ್ಸೆ ಸಿಗುತ್ತದೆ ಎಂದು ದೂರದ ಊರುಗಳಿಂದ ಜನ ಬರುತ್ತಾರೆ. ಎಂತಹದ್ದೇ ಸಂದರ್ಭದಲ್ಲೂ ಆದರೂ ಸೂಕ್ತ ಸಮಯಕ್ಕೆ ಚಿಕಿತ್ಸೆ ಕೊಡುವುದು ಆಸ್ಪತ್ರೆಗಳ ಕರ್ತವ್ಯ. ಆದರೆ ಕೆ.ಆರ್ ಮಾರ್ಕೆಟ್ ಬಳಿಯ ಮಿಂಟೋ ಆಸ್ಪತ್ರೆಯಲ್ಲಿ ವೈದ್ಯರು ತಮ್ಮ ಕರ್ತವ್ಯವನ್ನು ಮರೆತು ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ವೈದ್ಯರು ಊಟ ಮಾಡುವ ಸಮಯ ಎಂದು ರೋಗಿಗಳನ್ನು ಹೊರಗಡೆ ಕಳುಹಿಸಿ ಆಸ್ಪತ್ರೆಗೆ ಬೀಗ ಹಾಕಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ 2, ಜೆಡಿಎಸ್‌ನಿಂದ 4 ಮಂದಿ ಕಾಂಗ್ರೆಸ್‌ಗೆ ಮತ ಹಾಕಲು ಸಿದ್ದರಿದ್ದಾರೆ: ಡಿಕೆಶಿ

    ಮಿಂಟೋ ಆಸ್ಪತ್ರೆಗೆ ಬೀಗ ಹಾಕಿದ ಸಮಯದಲ್ಲಿ ಸಂಜಯ್ ಗಾಂಧಿ ಆಸ್ಪತ್ರೆಯಿಂದ ಎಮರ್ಜೆನ್ಸಿ ಕೇಸ್ ಬಂದರೂ ಸಹ ಆಸ್ಪತ್ರೆಯ ಬೀಗ ತೆಗೆದು ಚಿಕಿತ್ಸೆ ಕೊಟ್ಟಿಲ್ಲ. ಬದಲಾಗಿ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿಯೇ ಅಂಬುಲೆನ್ಸ್ ಒಳಗಡೆಯೇ ಚಿಕಿತ್ಸೆ ಕೊಟ್ಟಿದ್ದಾರೆ. ಆಸ್ಪತ್ರೆಗೆ ಬೀಗ ಹಾಕಿದ ಕಾರಣ ನೂರಾರು ರೋಗಿಗಳು ಆಸ್ಪತ್ರೆ ಮುಂಭಾಗ ಗೇಟ್ ಬಳಿ ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ. ವೈದ್ಯರ ಬೇಜವಾಬ್ದಾರಿ ನಿರ್ಲಕ್ಷ್ಯಕ್ಕೆ ರೋಗಿಗಳು ನಲುಗಿ ಹೋಗಿದ್ದಾರೆ. ಇದನ್ನೂ ಓದಿ: ಲೋಕಸಭೆ ಚುನಾವಣೆ: RSS ಹಿನ್ನೆಲೆಯುಳ್ಳ ಅಭ್ಯರ್ಥಿಗಳು ಬಿಜೆಪಿಯಿಂದ ಕಣಕ್ಕೆ?

    ಆಸ್ಪತ್ರೆಗೆ ಬೀಗ ಹಾಕಿರುವ ಕಾರಣ ನೂರಾರು ರೋಗಿಗಳು ಚಿಕಿತ್ಸೆಗಾಗಿ ಹಂಬಲಿಸುತ್ತಾ ಇದ್ದ ಹಿನ್ನೆಲೆಯಲ್ಲಿ ‘ಪಬ್ಲಿಕ್ ಟಿವಿ’ ವೈದ್ಯರ ನಿರ್ಲಕ್ಷ್ಯ, ಬೇಜವಾಬ್ದಾರಿತನವನ್ನು ಪ್ರಶ್ನೆ ಮಾಡಿದ ಬಳಿಕ ಗೇಟ್ ಓಪನ್ ಮಾಡಿ ರೋಗಿಗಳನ್ನು ಒಳಗಡೆ ಬಿಟ್ಟಿದ್ದಾರೆ. ಇನ್ನು ಈ ಕುರಿತು ರೋಗಿಗಳು ಹಾಗೂ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ರೋಗಿಗಳಿಗಿಂತ ಇವರಿಗೆ ಊಟನೇ ಹೆಚ್ಚಾಗಿದೆ. ಊಟದ ಸಮಯ ಎಂದು ಒಂದೂವರೆ ಗಂಟೆ ಆಸ್ಪತ್ರೆಗೆ ಬೀಗ ಹಾಕಿಕೊಂಡರೆ ಎಮರ್ಜೆನ್ಸಿ ಇರುವ ರೋಗಿಗಳ ಪರಿಸ್ಥಿತಿ ಏನಾಗಬೇಡ? ರಸ್ತೆಯಲ್ಲೇ ಚಿಕಿತ್ಸೆ ಕೊಡುತ್ತಿದ್ದಾರೆ. ಐಸಿಯು, ಬೆಡ್ ಬೇಡವೇ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಮ ಮಂದಿರಕ್ಕೆ 11 ಕೋಟಿ ದೇಣಿಗೆ ನೀಡಿದ್ದ ವಜ್ರ ಉದ್ಯಮಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್‌

    ಸರ್ಕಾರ ಮತ್ತು ವೈದ್ಯಕೀಯ ಶಿಕ್ಷಣ ನಿಜಕ್ಕೂ ಈ ಆಸ್ಪತ್ರೆ ಮೇಲೆ ನಿಗಾ ವಹಿಸಬೇಕಿದೆ. ಸುಸಜ್ಜಿತ ಕಟ್ಟಡ, ವೈದ್ಯಕೀಯ ಸೌಲಭ್ಯ ಇದ್ದರೂ ಈ ರೀತಿ ನಿರ್ಲಕ್ಷ್ಯ ಮಾಡಿ ಬೀಗ ಹಾಕಿ ರಸ್ತೆಯಲ್ಲೆ ಚಿಕಿತ್ಸೆ ಕೊಡೋದು ಎಷ್ಟು ಸರಿ? ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರು ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ರೈತರನ್ನು ಹಿಮ್ಮೆಟ್ಟಿಸಲು ʻಶಬ್ದಾಸ್ತ್ರʼ ಪ್ರಯೋಗ – ಇದು ಹೇಗೆ ಕೆಲಸ ಮಾಡುತ್ತೆ?

  • ಆಸ್ಪತ್ರೆಯಲ್ಲಿ ಬೆಂಕಿ ಅವಘಡ – 125 ರೋಗಿಗಳ ಸ್ಥಳಾಂತರ

    ಆಸ್ಪತ್ರೆಯಲ್ಲಿ ಬೆಂಕಿ ಅವಘಡ – 125 ರೋಗಿಗಳ ಸ್ಥಳಾಂತರ

    ಗಾಂಧೀನಗರ: ಗುಜರಾತ್‌ನ ಅಹಮದಾಬಾದ್ (Ahmedabad Hospital) ನಗರದ 10 ಅಂತಸ್ತಿನ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 125 ರೋಗಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಶಾಹಿಬಾಗ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಂ.ಡಿ ಚಂಪಾವತ್ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ನವೀಕರಣ ಕಾರ್ಯ ನಡೆಯುತ್ತಿರುವುದರಿಂದ ನೆಲಮಾಳಿಗೆಯಲ್ಲಿ ಸಂಗ್ರಹಿಸಲಾಗಿದ್ದ ಹಲವಾರು ವಸ್ತುಗಳಿಗೆ ಬೆಂಕಿ ತಗುಲಿ ಭಾರೀ ಹೊಗೆ ಉಂಟಾಯಿತು ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಶ್ರೀಹರಿಕೋಟಾದಿಂದ ಸಿಂಗಾಪುರದ 7 ಉಪಗ್ರಹಗಳ ಉಡಾವಣೆ – ಯಶಸ್ವಿಯಾಗಿ ಕಕ್ಷೆ ಸೇರಿಸಿದ ISRO ರಾಕೆಟ್‌

    ನಗರದ ಸಾಹಿಬಾಗ್ ಪ್ರದೇಶದಲ್ಲಿರುವ ರಾಜಸ್ಥಾನ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಬೆಳಗಿನ ಜಾವ 4:30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ತಂಡಗಳು ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿವೆ.

    ಚಾರಿಟಬಲ್‌ ಟ್ರಸ್ಟ್‌ಗೆ ಸೇರಿದ ಆಸ್ಪತ್ರೆ ಇದಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 125 ರೋಗಿಗಳನ್ನು ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ. ಇದನ್ನೂ ಓದಿ: Instagram ಪ್ರಿಯಕರನನ್ನ ಭೇಟಿಯಾಗಲು ಪಾಕಿಸ್ತಾನಕ್ಕೆ ಹೊರಟಿದ್ದ ರಾಜಸ್ಥಾನದ 16ರ ಹುಡುಗಿ ಅರೆಸ್ಟ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ – ಒಂದೇ ಬೆಡ್ ಮೇಲೆ ಇಬ್ಬರು ರೋಗಿಗಳ ನರಳಾಟ

    ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ – ಒಂದೇ ಬೆಡ್ ಮೇಲೆ ಇಬ್ಬರು ರೋಗಿಗಳ ನರಳಾಟ

    ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ (KIMS Hospital) ಸಿಬ್ಬಂದಿ ನಿರ್ಲಕ್ಷ್ಯದಿಂದ ಬೇಡ್ ಇಲ್ಲದೆ ಇಬ್ಬರು ಮಹಿಳೆಯರು ಒಂದೇ ಬೆಡ್ ಮೇಲೆ ಮಲಗಿ ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆದ ವೀಡಿಯೋ ವೈರಲ್ ಆಗಿದೆ.

    ಕಿಮ್ಸ್ ಪ್ರಸೂತಿ, ಮಹಿಳಾ ಮತ್ತು ಮಕ್ಕಳ ಘಟಕದ ವಾರ್ಡ್‌ನಲ್ಲಿ ಹುಬ್ಬಳ್ಳಿ (Hubballi) ನಿವಾಸಿ ಸರಳಾ ಮತ್ತು ಗ್ರಾಮೀಣ ಭಾಗದ ಮಂಜುಳಾ ಎಂಬ ಮಹಿಳೆಯರು ಚಿಕಿತ್ಸೆ ಪಡೆಯುತ್ತಿದ್ದರು. ಸರಳಾ ಬೆಡ್ ಮೇಲೆ ಮಲಗಿದ್ದು, ಎಚ್ಚರವಾಗಿ ಮೂತ್ರ ವಿಸರ್ಜನೆಗಾಗಿ ಶೌಚಾಲಯಲಕ್ಕೆ ತೆರಳಿದ್ದರು. ಅವರು ವಾಪಸ್‌ ಬರುವಷ್ಟರಲ್ಲಿ ಮಂಜುಳಾ ಎಂಬವರು ಬೆಡ್ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರು. ಇದನ್ನು ಗಮನಿಸಿದ ಸರಳಾ ವಾರ್ಡ್ ನರ್ಸ್‌ಗೆ ತಿಳಿಸಿದ್ದಾರೆ. ನರ್ಸ್ ಬೇರೆ ಬೆಡ್ ವ್ಯವಸ್ಥೆ ಮಾಡುವುದಾಗಿ ತಿಳಿಸಿ, ಬೆಡ್ ಸಿಗುವವರೆಗೂ ನೆಲೆದ ಮೇಲೆ ಮಲಗುವಂತೆ ತಿಳಿಸಿದ್ದಾರೆ.

    ಅದರಂತೆ ಸುಮಾರು 2 ಗಂಟೆ ಸರಳಾ ನೆಲದ ಮೇಲೆ ವಿಶ್ರಾಂತಿ ಪಡೆದು, ಬಳಿಕ ನರ್ಸ್ ಬಳಿ ಹೋಗಿದ್ದಾರೆ. ಆಗ ನರ್ಸ್ ಬೆಡ್ ಸಿಕ್ಕಿಲ್ಲ ಸಿಕ್ಕಾಗ ಕರೆಯುತ್ತೇನೆಂದು ಗದರಿಸಿದ್ದಾರೆ.‌ ಆದರೆ ಸರಳಾಗೆ ಆಪರೇಷನ್ ಆಗಿರುವ ಹಿನ್ನೆಲೆ ಜಾಸ್ತಿ ಹೊತ್ತು ನೆಲದ ಮೇಲೆ ಮಲಗಲು ಆಗಿಲ್ಲ. ಹೀಗಾಗಿ ತಮ್ಮ ಬೆಡ್‌ಗೆ ಹೋಗಿ ಮಂಜುಳಾ ಅನುಮತಿ ಪಡೆದು ಇಬ್ಬರು ಒಂದೇ ಬೆಡ್‌ನಲ್ಲಿ ಮಲಗಿದ್ದಾರೆ.

    ಒಂದೇ ಬೆಡ್‌ನಲ್ಲಿ ಒಬ್ಬರ ಕಾಲ ಬಳಿ ಮತ್ತೊಬ್ಬರ ಮುಖ ಮಾಡಿ ಮಧ್ಯವಯಸ್ಕ ಮಹಿಳೆಯರು ವಿಶ್ರಾಂತಿ ಪಡೆದಿದ್ದಾರೆ. ಸ್ವಲ್ಪ ಆಚೆ, ಈಚೆ ಆದ್ರೆ ನೆಲಕ್ಕೆ ಬೀಳುವ ಸ್ಥಿತಿ, ಆತಂಕದಲ್ಲಿಯೇ ಮೈ ಬಿಗಿ ಹಿಡಿದುಕೊಂಡು ಮಲಗಿದ್ದಾರೆ. ಒಂದೇ ಬೆಡ್‌ನಲ್ಲಿ ಇಬ್ಬರು ನರಳಾಡುವ ದೃಶ್ಯ ಕಂಡು ಸಹ ರೋಗಿ ಸಂಬಂಧಿ ಈ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವೀಡಿಯೋ ಈಗ ಫುಲ್ ವೈರಲ್ ಆಗಿದೆ.

    ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚರವಾಗದ ಕಿಮ್ಸ್ ಆಸ್ಪತ್ರೆಯ ಆಡಳಿತ ಮಂಡಳಿ ಪ್ರಕರಣಕ್ಕೆ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದೆ. ಆ ಸಮಯದಲ್ಲಿ ಹೆಚ್ಚು ಜನ ರೋಗಿಗಳು ದಾಖಲಾದ ಹಿನ್ನೆಲೆ ಬೆಡ್ ಅಭಾವ ಸೃಷ್ಟಿಯಾಗಿತ್ತು. ಇದರಲ್ಲಿ ನಮ್ಮ ಸಿಬ್ಬಂದಿಯದ್ದು ತಪ್ಪಾಗಿದೆ. ಮುಂದೆ ಈ ರೀತಿಯಲ್ಲಿ ಆಗದಂತೆ ಎಚ್ಚರ ವಹಿಸುತ್ತೇವೆ ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಸ್ಪಷ್ಟನೆ ನೀಡಿದ್ದಾರೆ.

    ಒಟ್ಟಿನಲ್ಲಿ ಕಿಮ್ಸ್ ಆಸ್ಪತ್ರೆಯಲ್ಲಿ ಬಡರೋಗಿಗಳ ಆರೈಕೆಗೆ ನೇಮಕ ಮಾಡಿರುವ ಸಿಬ್ಬಂದಿ ನಿರ್ಲಕ್ಷ್ಯದಿಂದ ರೋಗಿಗಳು ನಿತ್ಯ ನರಕದರ್ಶನ ಮಾಡುವಂತಾಗಿದೆ. ಮೊನ್ನೆ ನೆಲದ ಮೇಲೆ ವೃದ್ಧೆಗೆ ಚಿಕಿತ್ಸೆ ನೀಡಿ ಸುದ್ದಿಯಾಗಿದ್ದ ಕಿಮ್ಸ್ ಆಡಳಿತ ಮಂಡಳಿ, ಈಗ ಮತ್ತೆ ಅಂತಹದ್ದೇ ತಪ್ಪು ಮಾಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

  • ಒಂದೇ ಡ್ರಿಪ್ ಸೆಟ್‍ ಸೂಜಿಯನ್ನು ಮೂರ್ನಾಲ್ಕು ರೋಗಿಗಳಿಗೆ ಚುಚ್ಚಿದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ

    ಒಂದೇ ಡ್ರಿಪ್ ಸೆಟ್‍ ಸೂಜಿಯನ್ನು ಮೂರ್ನಾಲ್ಕು ರೋಗಿಗಳಿಗೆ ಚುಚ್ಚಿದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ

    ಹಾಸನ: ಒಂದೇ ಡ್ರಿಪ್ ಸೆಟ್‍ನ್ನು (Drip Set) ಮೂರ್ನಾಲ್ಕು ರೋಗಿಗಳಿಗೆ (Patients) ಹಾಕುತ್ತಿರುವ ಘಟನೆ ಹಾಸನ (Hassana) ಜಿಲ್ಲೆ, ಅರಸೀಕೆರೆ ತಾಲೂಕಿನ, ಜಾವಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (Government Hospital) ಬೆಳಕಿಗೆ ಬಂದಿದೆ.

    ಒಂದು ಸೂಜಿಯನ್ನು ಮತ್ತೊಬ್ಬರಿಗೆ ಹಾಕಬಾರದು. ಹಾಗೆ ಸೂಜಿ ಚುಚ್ಚಿದರೆ ಒಬ್ಬರಿಂದ ಮತ್ತೊಬ್ಬರಿಗೆ ರೋಗ ಹರಡುವ ಸಾಧ್ಯತೆಯಿರುತ್ತದೆ ಎಂದು ತಿಳಿದಿದ್ದರೂ ಸರ್ಕಾರಿ ಆಸ್ಪತ್ರೆಯ ಕಾಂಪೌಂಡರ್ ಒಂದೇ ಡ್ರಿಪ್ ಸೆಟ್‍ನ್ನು ಮೂರು ಜನರಿಗೆ ಹಾಕಿ ನಿರ್ಲಕ್ಷ್ಯ ತೋರಿದ್ದಾರೆ. ಈ ಕುರಿತಂತೆ ರೋಗಿಯೊಬ್ಬರ ಸಂಬಂಧಿಕರೊಂದಿಗೆ ಕಾಂಪೌಂಡರ್ ಮಾತನಾಡುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದನ್ನೂ ಓದಿ: ಎಲ್ಲರ ಕಣ್ತಪ್ಪಿಸಿ ಸ್ಯಾಂಟ್ರೋ ರವಿ ಶಿಫ್ಟ್ – ವಿಐಪಿ ಗೇಟ್‍ನಲ್ಲಿ ಕರೆದೊಯ್ದ ಬಗ್ಗೆ ಹೆಚ್‍ಡಿಕೆ ಕಿಡಿ

    ಒಂದು ಡ್ರಿಪ್ ಸೆಟ್ ಸೂಜಿಯನ್ನು ಮೂರು ರೋಗಿಗಳಿಗೆ ಹಾಕ್ತೇವೆ. ಒಂದು ಗ್ಲೂಕೋಸ್ ಹಾಕೋದಕ್ಕೆ 50 ರೂ. ತೆಗೆದುಕೊಳ್ಳುತ್ತೇವೆ. ವೈದ್ಯರೇ ಈ ರೀತಿ ಮಾಡು ಎಂದು ಹೇಳಿದ್ದಾರೆ ಎಂದು ಕಾಂಪೌಂಡರ್ ವೀಡಿಯೋದಲ್ಲಿ ಹೇಳಿದ್ದಾರೆ. ಇದೀಗ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಕಾರ್ಯವೈಖರಿಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ವೇಳೆ ಹೃದಯಾಘಾತ – ಸಂಸದ ಸಂತೋಖ್ ಸಿಂಗ್ ಚೌಧರಿ ನಿಧನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಿಮ್ಸ್ ಆಸ್ಪತ್ರೆಯಲ್ಲಿ ಬೀದಿ ನಾಯಿಗಳ ದರ್ಬಾರ್ – ಸಿಬ್ಬಂದಿ ನಿರ್ಲಕ್ಷ್ಯಕ್ಕೆ ರೋಗಿಗಳಿಂದ ಆಕ್ರೋಶ

    ರಿಮ್ಸ್ ಆಸ್ಪತ್ರೆಯಲ್ಲಿ ಬೀದಿ ನಾಯಿಗಳ ದರ್ಬಾರ್ – ಸಿಬ್ಬಂದಿ ನಿರ್ಲಕ್ಷ್ಯಕ್ಕೆ ರೋಗಿಗಳಿಂದ ಆಕ್ರೋಶ

    ರಾಯಚೂರು: ನಗರದ ರಿಮ್ಸ್ (RIMS) ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆ ಈಗ ಬೀದಿನಾಯಿಗಳ ನೆಚ್ಚಿನ ತಾಣವಾಗಿದೆ.

    ಆಸ್ಪತ್ರೆಯ ನಾಲ್ಕನೇ ಅಂತಸ್ತಿನವರೆಗೂ ಯಾರ ಭಯವಿಲ್ಲದೇ ನಾಯಿಗಳು ಓಡಾಡಿಕೊಂಡಿವೆ. ನವಜಾತ ಶಿಶು ಕೊಠಡಿ, ಬಾಣಂತಿಯರ ಲೇಬರ್ ರೂಂ ಬಳಿಯೇ ನಾಯಿಗಳು ಮಲಗುವುದರಿಂದ ಆಸ್ಪತ್ರೆಗೆ ಬರುವವರಲ್ಲಿ ಆತಂಕ ಹೆಚ್ಚಾಗಿದೆ. ರಾತ್ರಿಯಾದರೆ ರೋಗಿಗಳ ಹಾಸಿಗೆಯ ಮೇಲೆ ಬಂದು ನಾಯಿಗಳು ಮಲಗುತ್ತಿವೆ ಅಂತ ರೋಗಿಗಳ ಕಡೆಯವರು ಆರೋಪಿಸಿದ್ದಾರೆ.

    ನವಜಾತ ಶಿಶುಗಳಿಗೆ ಅಪಾಯ ಮಾಡಿದರೆ, ರಾತ್ರಿ ವೇಳೆ ಹೊತ್ತೊಯ್ದರೆ ಜವಾಬ್ದಾರಿ ಯಾರು? ಈ ಬಗ್ಗೆ ಸಾಕಷ್ಟು ಬಾರಿ ರಿಮ್ಸ್ ಆಡಳಿತ ಮಂಡಳಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ಬಾಣಂತಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶ್ರದ್ಧಾರಂಥ ಹೆಣ್ಣುಮಕ್ಕಳು ಒಳ್ಳೆ ಹುಡುಗರನ್ನ ಆಯ್ಕೆ ಮಾಡ್ಕೋಬೇಕು; ಅಫ್ತಾಬ್‌ನ ನೇಣಿಗೆ ಹಾಕಿ – ರಾವತ್‌

    ಶ್ವಾನಗಳು ನೇರವಾಗಿ ಆಸ್ಪತ್ರೆ ಒಳಗಡೆ ಬಂದು ಅಲ್ಲಲ್ಲಿ ಬೀಸಾಡಿರುವ ವಸ್ತುಗಳಲ್ಲಿ ಆಹಾರ ಹುಡುಕಾಟ ನಡೆಸುತ್ತವೆ. ಕೊನೆಗೆ ಅಲ್ಲಿಯೇ ಮಲಗುತ್ತಿವೆ. ಒಂದು ವೇಳೆ ನಾಯಿ ಕಚ್ಚಿದರೆ ಕೊಡಲು ಔಷಧಿಯ ಕೊರತೆಯೂ ಇದೆ. ಪರಿಸ್ಥಿತಿ ಹೀಗಿದ್ದರೂ ರಿಮ್ಸ್‌ನ ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳರು – ಅಂಗಡಿಯಲ್ಲಿದ್ದ ವೃದ್ಧೆಯ ಚಿನ್ನದ ಸರ ಕಿತ್ತು ಎಸ್ಕೇಪ್

    Live Tv
    [brid partner=56869869 player=32851 video=960834 autoplay=true]

  • ಇದು ಸರ್ಕಾರಿ ಪ್ರಾಯೋಜಿತ ಕೊಲೆ – ವಿಮ್ಸ್‌ ದುರಂತಕ್ಕೆ ಸಿದ್ದು ಕಿಡಿ

    ಇದು ಸರ್ಕಾರಿ ಪ್ರಾಯೋಜಿತ ಕೊಲೆ – ವಿಮ್ಸ್‌ ದುರಂತಕ್ಕೆ ಸಿದ್ದು ಕಿಡಿ

    ಬೆಂಗಳೂರು: ವಿಮ್ಸ್ ಆಸ್ಪತ್ರೆಯಲ್ಲಿ(VIMS) ಮೂವರು ರೋಗಿಗಳು ದಾರುಣವಾಗಿ ಸಾವನ್ನಪ್ಪಿದ್ದು, ಇದೊಂದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಬಿಜೆಪಿ(BJP) ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ವಾಗ್ದಾಳಿ ನಡೆಸಿದ್ದಾರೆ.

    ಬಳ್ಳಾರಿಯ(Bellay) ವಿಮ್ಸ್ ಆಸ್ಪತ್ರೆಯಲ್ಲಿ ಮೂವರು ರೋಗಿಗಳ(Patients) ಸಾವಿನ ಪ್ರಕರಣ ಕುರಿತಂತೆ ವಿಧಾನಸಭೆಯಲ್ಲಿ(Vidhana sabhe) ಮಾತನಾಡಿದ ಅವರು, ಜನರೇಟರ್ ಕೆಟ್ಟು, ಕರೆಂಟಿಲ್ಲದೇ ಐಸಿಯುನಲ್ಲಿದ್ದ ಮೂವರು ರೋಗಿಗಳು ಮೃತಪಟ್ಟಿದ್ದಾರೆ. ಇದಕ್ಕೆ ಯಾರು ಜವಾಬ್ದಾರಿ? ಆ ಆಸ್ಪತ್ರೆಯವರ ಬಳಿ ಹಣ ಇದೆ, ಜನರೇಟರ್ ವ್ಯವಸ್ಥೆ ಮಾಡಬಹುದಿತ್ತು. ಇದಕ್ಕೆ ಆಸ್ಪತ್ರೆಯವರು ಹೊಣೆಗಾರರಾ? ಸರ್ಕಾರ ಹೊಣೆನಾ? ಈ ಸಾವಿಗೆ ಸರ್ಕಾರವೇ ಹೊಣೆ ಹೊರಬೇಕು. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದರ ಜವಾಬ್ದಾರಿ ಆರೋಗ್ಯ ಇಲಾಖೆ(Health Department) ಹೊರಬೇಕು. ಮೃತರ ಕುಟುಂಬಗಳಿಗೆ ಕನಿಷ್ಟ 25 ಲಕ್ಷ ಪರಿಹಾರ ಕೊಡಿ. ಇದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಕಿಡಿಕಾರಿದ್ದಾರೆ.

    ವಿಮ್ಸ್ ಆಸ್ಪತ್ರೆಯಲ್ಲಿ ಮೂರು ಸಾವು ಪ್ರಕರಣಕ್ಕೆ ಸರ್ಕಾರ ಕಾರಣ ಎಂಬ ಸಿದ್ದರಾಮಯ್ಯ ಅವರ ಈ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾನೂನು ಸಚಿವ ಮಾಧುಸ್ವಾಮಿ(Madhuswamy), ಸಿದ್ದರಾಮಯ್ಯ ಅವರಿಂದ ಈ ಭಾಷೆ ನಿರೀಕ್ಷೆ ಮಾಡಿರಲಿಲ್ಲ. ಆಕಸ್ಮಿಕವಾಗಿ ಆದ ಮರಣವನ್ನು ಸರ್ಕಾರಿ ಪ್ರಾಯೋಜಿತ ಕೊಲೆ ಎನ್ನುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾವು ಕತ್ತೆ ಕಾಯೋಕೆ ಇಲ್ಲಿ ಬಂದಿಲ್ಲ- ಸದನದಲ್ಲಿ ಮಾಧುಸ್ವಾಮಿ ಗರಂ

    ಬಳ್ಳಾರಿ ವಿಮ್ಸ್ ಆಸ್ಪತ್ರೆ ಸಾವಿನ ವಿಚಾರವಾಗಿ ವಿಪಕ್ಷ ನಾಯಕರು ಪತ್ರ ಕೊಟ್ಟಿದ್ದಾರೆ. ಇದೆಲ್ಲದಕ್ಕೂ ಸರ್ಕಾರವೇ ಹೊಣೆ ಅಂತ ಪತ್ರ ಕೊಟ್ಟಿದ್ದಾರೆ. ಪತ್ರದಲ್ಲಿ ಮರ್ಡರ್(Murder) ಅಂತ ಬಳಕೆ ಮಾಡಿದ್ದಾರೆ. ಪತ್ರ ಕೊಡುವಾಗ ನೋಡಿ ಕೊಡಬೇಕಿತ್ತು. ಅವರು ಸರ್ಕಾರ ನಡೆಸಿದ್ದಾರೆ, ನಾವೆಲ್ಲೂ ಅವರೇ ಮರ್ಡರ್ ಮಾಡಿದ್ದಾರೆ ಅಂತ ಯಾವತ್ತೂ ಹೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ನನ್ನ ಆರೋಗ್ಯ ಸ್ಥಿರವಾಗಿದೆ: ಆನಂದ್ ಮಾಮನಿ

    ಕಿಡ್ನಿ ವೈಫಲ್ಯ ಒಂದು, ಹಾವು ಕಚ್ಚಿ ಮತ್ತೊಂದು ಸಾವಾಗಿದೆ. ವೆಂಟಿಲೇಟರ್ ಒಂದು ಆಸ್ಪತ್ರೆಯಲ್ಲಿ ಇದೆ ಅಂದರೆ ಅದಕ್ಕೆ ಬ್ಯಾಕ್‍ಅಪ್ ಇದ್ದೆ ಇರುತ್ತದೆ. ಸರ್ಕಾರದ ವರದಿ ತಪ್ಪಿದೆ ಅಂತಾದರೆ ತನಿಖೆ ಮಾಡಿ ವರದಿ ಕೊಡಿಸುತ್ತೇವೆ. ಆಸ್ಪತ್ರೆಯವರ ನಿರ್ಲಕ್ಷ್ಯ ಇದ್ದರೆ ಕ್ರಮ ತೆಗೆದುಕೊಳ್ಳುತೇವೆ. ನಮ್ಮ ತಪ್ಪಿದ್ದರೆ ಪರಿಹಾರದ ಬಗ್ಗೆಯೂ ಪರಿಶೀಲನೆ ಮಾಡುತ್ತೇವೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.

    ಇದೇ ವೇಳೆ ಸದನದಲ್ಲಿ ಮಾತನಾಡಿದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು(Sriramulu), ಮುಲ್ಲಾ ಹುಸೇನ್ ಅನ್ನೋ ರೋಗಿ 11 ರಂದು ದಾಖಲಾಗಿರುತ್ತಾರೆ. 14 ರಂದು ಅವರು ಸಾವನ್ನಪ್ಪಿದ್ದಾರೆ. ಅವರಿಗೆ ಎರಡೂ ಕಿಡ್ನಿಗಳು ಹೋಗಿದ್ವು, ಬೇರೆ ಬೇರೆ ಕಾಯಿಲೆ ಇದ್ದವು. ಇದರಿಂದ ಮುಲ್ಲಾ ಹುಸೇನ್ ಸತ್ತಿದ್ದಾರೆ. ವಿಮ್ಸ್ ಡೈರೆಕ್ಟರ್ ಜೊತೆ ನಿನ್ನೆ ರಾತ್ರಿಯಿಂದ ಸಂಪರ್ಕದಲ್ಲಿದ್ದೇನೆ. ಕರೆಂಟ್ ಪದೇ, ಪದೇ ಹೋಗುತ್ತಿರುತ್ತದೆ ಅಂತ ಡೈರೆಕ್ಟರ್ ಹೇಳಿದ್ದಾರೆ. ಕರೆಂಟ್ ಹೋದಾಗ ಒಂದೂವರೆ ಗಂಟೆ ಜನರೇಟರ್ ಬ್ಯಾಕಪ್ ಇರುತ್ತದೆ. ರೋಗಿಗಳು ಸತ್ತಿದ್ದು ಕರೆಂಟ್ ಹೋಯಿತು, ಜನರೇಟರ್ ಇರಲಿಲ್ಲ ಎನ್ನುವ ಕಾರಣದಿಂದ ಅಲ್ಲ. ಆಸ್ಪತ್ರೆಯಲ್ಲಿ ಜನರೇಟರ್ ಬ್ಯಾಕ್ ಅಪ್ ಇದೆ. ಯಾವಾಗಲೂ ಬ್ಯಾಕ್ ಅಪ್ ಇರುತ್ತದೆ. ವಿಮ್ಸ್ ರೋಗಿಗಳ ಸಾವಿಗೆ ಆಸ್ಪತ್ರೆ ನಿರ್ಲಕ್ಷ್ಯ ಕಾರಣ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ನಡೆದಿದ್ದೇನು..?: ಕಳೆದ ರಾತ್ರಿ ವಿಮ್ಸ್‍ನ ಹಳೆಯ ಕಟ್ಟಡದಲ್ಲಿರುವ ಐಸಿಯುವಿನಲ್ಲಿ ಮೂವರು ರೋಗಿಗಳು ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಬುಧವಾರ ರಾತ್ರಿ ಐಸಿಯುನಲ್ಲಿ(ICU) ವಿದ್ಯುತ್ ಸಂಪರ್ಕ ಕಟ್ ಆಗಿದೆ. ಬೆಳಗ್ಗೆವರೆಗೂ ಕರೆಂಟ್(Current) ಬಂದಿಲ್ಲ. ಇದರಿಂದ ಐಸಿಯುನಲ್ಲಿ ದಾಖಲಾಗಿದ್ದ ಬಳ್ಳಾರಿಯ ಚೆಟ್ಟೆಮ್ಮಾ, ಹುಸೇನ್ ಸೇರಿದಂತೆ ಮೂವರು ಸಾವಿಗೀಡಾಗಿದ್ದರು.

    ಆಸ್ಪತ್ರೆ ನಿರ್ದೇಶಕರು ಹೇಳಿದ್ದೇನು..?: ಈ ದುರಂತದ ಬಗ್ಗೆ ಪ್ರತಿಕ್ರಿಯಿಸಿರುವ ವಿಮ್ಸ್ ನಿರ್ದೇಶಕ ಗಂಗಾಧರ್ ಗೌಡ, ರೋಗಿಗಳ ಸಾವು ಸಹಜವಾಗಿದೆ. ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಂದ ಸಂಭವಿಸಿವೆ. ಒಬ್ಬ ರೋಗಿ ವಿಷಪೂರಿತ ಹಾವಿನ ಕಡಿತದಿಂದ ದೇಹದಲ್ಲಿ ಆಂತರಿಕ ರಕ್ತಸ್ರಾವವಾಗಿ ಸಾವಿಗೀಡಾಗಿದ್ದರೆ, ಇನ್ನೊಬ್ಬ ಮೃತರು ಬಹು ಅಂಗಾಗ ವೈಫಲ್ಯದಿಂದ ನಮ್ಮ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ, ಕೊನೆಗೆ ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟಿರುತ್ತಾರೆ. ಹಾಗೆಯೇ ಮತ್ತೊಬ್ಬ ರೋಗಿಯು ಹಲವಾರು ದಿನಗಳಿಂದ ಮೂತ್ರಕೋಶ ವೈಫಲ್ಯದಿಂದ ಬಳಲುತ್ತಿದ್ದು ಕೊನೆಗೆ ಬಹು ಅಂಗಾಗಳ ಸೋಂಕಿನಿಂದ ಸಹಜವಾಗಿ ಸಾವನ್ನಪ್ಪಿದ್ದಾರೆ. ಆದರೆ ವಿಮ್ಸ್ ಆಸ್ಪತ್ರೆಯು ಉನ್ನತ ಚಿಕಿತ್ಸಾ ಕೇಂದ್ರವಾಗಿದ್ದು, ಎಲ್ಲಾ ಕೇಂದ್ರಗಳಲ್ಲಿ ಚಿಕಿತ್ಸೆ ಫಲಕಾರಿಯಾಗದಿದ್ದಲ್ಲಿ ಕೊನೆಗೆ ಪರಿಸ್ಥಿತಿ ಉಲ್ಬಣಗೊಂಡ ನಂತರ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಬರುವುದರಿಂದ ಸಾವುಗಳು ಆಗುವ ಸಂಭವನೀಯತೆ ಹೆಚ್ಚಾಗುತ್ತದೆ. ನಿನ್ನೆ ಬೆಳಗ್ಗೆ ಅದೇ ಸಮಯದಲ್ಲಿ ವಿದ್ಯುತ್ ಸಂಪರ್ಕ ಕೈಕೊಟ್ಟಿರುವುದು ಕಾಕತಾಳೀಯವಾಗಿದೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯುತ್ ಕಡಿತ – ಮೊಬೈಲ್ ಟಾರ್ಚ್ ಬಳಸಿ ವೈದ್ಯರಿಂದ ರೋಗಿಗೆ ಚಿಕಿತ್ಸೆ

    ವಿದ್ಯುತ್ ಕಡಿತ – ಮೊಬೈಲ್ ಟಾರ್ಚ್ ಬಳಸಿ ವೈದ್ಯರಿಂದ ರೋಗಿಗೆ ಚಿಕಿತ್ಸೆ

    ಲಕ್ನೋ: ಉತ್ತರಪ್ರದೇಶ(Uttar Pradesh) ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ವಿದ್ಯುತ್ ಕಡಿತಗೊಳಿಸಿದ್ದ ಹಿನ್ನೆಲೆ ವೈದ್ಯರು ಮೊಬೈಲ್ ಟಾರ್ಚ್ (Mobile Torch) ಬಳಸಿ ರೋಗಿಗೆ ಚಿಕಿತ್ಸೆ ನೀಡಿದ್ದಾರೆ.

    ಧಾರಾಕಾರ ಮಳೆ ಸುರಿದ ಹಿನ್ನೆಲೆ ಬಲಿಯಾ(Balia) ಜಿಲ್ಲೆಯ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತಗೊಳಿಸಲಾಗಿತ್ತು. ಹೀಗಾಗಿ ರೋಗಿಗಳಿಗೆ ಒಂದು ಗಂಟೆಗೂ ಹೆಚ್ಚು ಕಾಲ ಮೊಬೈಲ್ ಟಾರ್ಚ್ ಲೈಟ್‍ನಲ್ಲಿಯೇ ಚಿಕಿತ್ಸೆ ನೀಡಿದ್ದಾರೆ. ಇದನ್ನೂ ಓದಿ: ಬಾರ್‌ನಲ್ಲಿ ಝಳಪಿಸಿದ ಲಾಂಗ್-ಮಚ್ಚು: ಕುಡಿಯಲು ಬಂದವರಿಂದ ಏಕಾಏಕಿ ಅಟ್ಯಾಕ್

    ಹಲವಾರು ಜನರು ಮಹಿಳೆಯರು ಕತ್ತಲೆಯಲ್ಲಿ ಸ್ಟ್ರೆಚರ್ ಮೇಲೆ ಕುಳಿತಿದ್ದು, ವ್ಯಕ್ತಿಯೋರ್ವ ಮೊಬೈಲ್ ಫೋನ್ ಅನ್ನು ಹಿಡಿದಿಟ್ಟುಕೊಂಡಿದ್ದರೆ, ವೈದ್ಯರು ಮಹಿಳೆಯನ್ನು ಚೆಕ್‍ಆಪ್ ಮಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಬ್ರಿಟನ್ ರಾಣಿಯ ಕಿರೀಟದಲ್ಲಿದ್ದ ಕೊಹಿನೂರು ವಜ್ರದ ಮೂಲ ಯಾದಗಿರಿ!

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಕ ಮತ್ತು ಪ್ರಭಾರ ಮುಖ್ಯಾಧಿಕಾರಿ ಡಾ.ಆರ್.ಡಿ.ರಾಮ್ ಜನರೇಟರ್‌ಗಾಗಿ(Generator) ಬ್ಯಾಟರಿಗಳನ್ನು ಪಡೆಯುತ್ತಿದ್ದರಿಂದ 15-20 ನಿಮಿಷಗಳ ಕಾಲ ವ್ಯತ್ಯಯವಾಗಿದೆ. ಆಸ್ಪತ್ರೆಯಲ್ಲಿ ಬ್ಯಾಕ್‍ಅಪ್‍ಗಾಗಿ ಜನರೇಟರ್ ಇದೆ. ಆದರೆ ಬ್ಯಾಟರಿಗಳನ್ನು ಪಡೆಯಲು ಸಮಯ ತೆಗೆದುಕೊಳ್ಳುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಜನರೇಟರ್ ಬ್ಯಾಟರಿ ಇಲ್ಲದೇ ಇರಲು ಕಾರಣವೇನು ಎಂಬ ಪ್ರಶ್ನಿಸಿದಾಗ, ಯಾವಾಗಲೂ ಬ್ಯಾಟರಿಗಳು ಕಳ್ಳತನವಾಗುವ ಭಯ ಇದ್ದೇ ಇರುತ್ತದೆ. ಹಾಗಾಗಿ ತೆಗೆದಿಡಲಾಗಿತ್ತು ಎಂದಿದ್ದಾರೆ. ಆದರೆ ಈ ಘಟನೆ ಬಗ್ಗೆ ರಾಜ್ಯ ಸರ್ಕಾರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

    Live Tv
    [brid partner=56869869 player=32851 video=960834 autoplay=true]

  • ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ

    ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ

    ಚೆನ್ನೈ: ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯ ಟವರ್ 2 ರಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿದ್ದು, ಟವರ್‍ನಲ್ಲಿದ್ದ ಎಲ್ಲಾ ರೋಗಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

    ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಆರಂಭದಲ್ಲಿ ಬೆಂಕಿಯಿಂದ ತೀವ್ರ ಹೊಗೆ ಕಾಣಿಸಿಕೊಂಡಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ರೋಗಿಗಳನ್ನು ಸ್ಥಳದಿಂದ ಸ್ಥಳಾಂತರಿಸಲು ಹರಸಾಹಸ ಪಡಬೇಕಾಯಿತು. ಇದನ್ನೂ ಓದಿ: ಹಂಪಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಿಂತನೆ: ವಚನಾನಂದ ಮಹಾಸ್ವಾಮೀಜಿ

    ತಮಿಳುನಾಡಿನ ಆರೋಗ್ಯ ಪ್ರಧಾನ ಕಾರ್ಯದರ್ಶಿ ಜೆ ರಾಧಾಕೃಷ್ಣನ್ ಪ್ರಕಾರ, ಹಳೆಯ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮುಂದಿನ ಮೂರು ಬ್ಲಾಕ್‍ಗಳು ಸುರಕ್ಷಿತವಾಗಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಿರುದ್ಯೋಗ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಹೆಚ್ಚು ಗಮನಹರಿಸಬೇಕು: ರಾಹುಲ್ ಸಲಹೆ

    ಇಲ್ಲಿಯವರೆಗೆ ಯಾವುದೇ ಸಾವು, ನೋವು ಅಥವಾ ಗಾಯಗಳ ವರದಿಯಾಗಿಲ್ಲ. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.