Tag: patient

  • ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರುವ ಮೊದಲ ಓಮಿಕ್ರಾನ್ ಸೋಂಕಿತ

    ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರುವ ಮೊದಲ ಓಮಿಕ್ರಾನ್ ಸೋಂಕಿತ

    ಮುಂಬೈ: ಕೊರೊನಾ ರೂಪಾಂತರಿ ತಳಿ ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದ ಪುಣೆಯ ವ್ಯಕ್ತಿಗೆ ನೆಗಟಿವ್ ವರದಿ ಬಂದಿದ್ದು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಾರೆ.

    ಗುರುವಾರ ಸವೆನ್ ಹಿಲ್ ಆಸ್ಪತ್ರೆಯಲ್ಲಿ ನಡೆಸಿದ ಕೊರೊನಾ ಪರೀಕ್ಷೆಯಲ್ಲಿ ರೋಗಿಗೆ ನೆಗೆಟಿವ್ ವರದಿ ಬಂದಿದ್ದು, ಓಮಿಕ್ರಾನ್‍ನಿಂದ ಗುಣಮುಖರಾಗಿ ಶೀಘ್ರ ಮನೆಗೆ ಹಿಂದಿರುಗುತ್ತಿದ್ದಾರೆ ಎಂದು ಮಹಾರಾಷ್ಟ್ರದ ಪುಣೆ ಮಹಾನಗರ ಪಾಲಿಕೆಯ ಸಹಾಯಕ ವೈದ್ಯಾಧಿಕಾರಿ ಡಾ.ಸಂಜೀವ್ ವಾವರೆ ಹೇಳಿದ್ದಾರೆ. ಇದನ್ನೂ ಓದಿ: ಮೆಕ್ಸಿಕೋ ಅಪಘಾತ – 49 ಮಂದಿ ಸಾವು, 58 ಮಂದಿಗೆ ಗಾಯ

    ರೋಗಿಗೆ 40 ವರ್ಷ ವಯಸ್ಸಾಗಿದ್ದು, ಇವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರುವ ಮೊದಲ ಓಮಿಕ್ರಾನ್ ಸೋಂಕಿತರಾಗಿದ್ದಾರೆ. ಸದ್ಯ ಮನೆಗೆ ಹಿಂದಿರುಗುತ್ತಿರುವ ಬಗ್ಗೆ ರೋಗಿ ಸಂತಸ ವ್ಯಕ್ತಪಡಿಸಿದ್ದಾರೆ ಮತ್ತು ರೋಗಿಯ ಜೊತೆಗೆ ಸಂಪರ್ಕ ಹೊಂದಿದ್ದ 40 ಮಂದಿಯಲ್ಲಿ ಯಾರಿಗೂ ಸಹ ಕೊರೊನಾ ದೃಢಪಟ್ಟಿರಲಿಲ್ಲ. ರೋಗಿ ಜೂನ್‍ನಲ್ಲಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದ ಎಂದು ತಿಳಿಸಲಾಗಿದೆ. ಸದ್ಯ ರೋಗಿ ಯಾವುದೇ ಗುಣಲಕ್ಷಣಗಳಿಲ್ಲದೇ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಾರೆ. ಇದನ್ನೂ ಓದಿ:  ಕೇರಳದ ಆಲಪ್ಪುಳದಲ್ಲಿ ಹಕ್ಕಿಜ್ವರ – ಕೋಳಿ, ಮೊಟ್ಟೆ ನಾಶಕ್ಕೆ ಸರ್ಕಾರ ಆದೇಶ

    ಪುಣೆಯಲ್ಲಿ ಪತ್ತೆಯಾದ ಮೊದಲ ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದ ಇವರಿಗೆ 10 ದಿನಗಳ ಕ್ವಾರಂಟೈನ್ ಬಳಿಕ ಗುರುವಾರ ಕೊರೊನಾ ನೆಗೆಟಿವ್ ಬಂದಿದೆ. ಸದ್ಯ ಮಹಾರಾಷ್ಟ್ರದಲ್ಲಿ ಗುರುವಾರ ಯಾವುದೇ ಕೊರೊನಾ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಅದನ್ನು ಹೊರತುಪಡಿಸಿ ರಾಜ್ಯದಲ್ಲಿ ಒಟ್ಟು 10 ಓಮಿಕ್ರಾನ್ ಪ್ರಕರಣಗಳು ದಾಖಲಾಗಿದೆ. ಇನ್ನೂ ಓಮಿಕ್ರಾನ್ ಭೀತಿಯಿಂದ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿದೇಶಿಗರನ್ನು ಕ್ವಾರಂಟೈನ್‍ಗೊಳಿಸಲಾಗುತ್ತಿದೆ.

  • ಚಿಕಿತ್ಸೆ ನೆಪದಲ್ಲಿ ರೋಗಿಗೆ ಲೈಂಗಿಕ ಕಿರುಕುಳ – ಸರ್ಕಾರಿ ವೈದ್ಯನ ಅಮಾನತು

    ಚಿಕಿತ್ಸೆ ನೆಪದಲ್ಲಿ ರೋಗಿಗೆ ಲೈಂಗಿಕ ಕಿರುಕುಳ – ಸರ್ಕಾರಿ ವೈದ್ಯನ ಅಮಾನತು

    ಚೆನ್ನೈ: ಚಿಕಿತ್ಸೆ ಹೆಸರಿನಲ್ಲಿ ವೈದ್ಯನೊಬ್ಬ ರೋಗಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಮಿಳುನಾಡಿನ ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ನಡೆದಿದೆ.

    24 ವರ್ಷದ ರೋಗಿಯೊಬ್ಬರು ವೈದ್ಯ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿದ್ದಾರೆ. ಈ ಪ್ರಕರಣ ಕುರಿತಂತೆ ತನಿಖೆ ನಡೆಸಲು ಆಸ್ಪತ್ರೆಯು ಆಂತರಿಕ ಸಮಿತಿಯನ್ನು ರಚಿಸಿತು. ಸಮಿತಿಯ ಪ್ರಾಥಮಿಕ ಫಲಿತಾಂಶದ ಆಧಾರದ ಮೇಲೆ ಇದೀಗ ಆರೋಪಿ ವೈದ್ಯರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಮತ್ತು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ:  ಅಫ್ಘಾನ್ ಹುಡುಗಿಯರ ಪರ ನಿಂತ ಮಲಾಲಾ ಯೂಸುಫ್ ಝಾಯಿ

    ಕಿಡ್ನಿ ಕಸಿ ಮಾಡಿಸಿಕೊಂಡಿರುವ ರೋಗಿ ಸ್ಕ್ಯಾನಿಂಗ್‍ಗಾಗಿ ಆಸ್ಪತ್ರೆಗೆ ಹೋಗಿದ್ದ ವೇಳೆ ವೈದ್ಯ ತನಗೆ ರೇಡಿಯಾಲಜಿಸ್ಟ್ ಪರೀಕ್ಷೆಯ ಹೆಸರಿನಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ನವೆಂಬರ್ 27ರಂದು ಆಸ್ಪತ್ರೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ನೇಪಾಳದಲ್ಲಿ ಮೊದಲ ಬಾರಿಗೆ ಓಮಿಕ್ರಾನ್ ಪ್ರಕರಣ ಪತ್ತೆ – ಇಬ್ಬರಿಗೆ ಸೋಂಕು

    ಆಕೆಯ ದೂರಿನ ಆಧಾರದ ಮೇಲೆ ಆರೋಪಿ ಡಾ. ಚಕ್ರವರ್ತಿ ವಿರುದ್ಧ ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ ಎಂದು ಆಸ್ಪತ್ರೆಯ ಡೀನ್ ಹೇಳಿದ್ದಾರೆ. ಆಸ್ಪತ್ರೆಯ ಸಮಿತಿಯು ಶುಕ್ರವಾರ ಸಂಜೆ ಪ್ರಾಥಮಿಕ ವರದಿ ಸಲ್ಲಿಸಿದ್ದು, ಬಳಿಕ ವೈದ್ಯರನ್ನು ಅಮಾನತುಗೊಳಿಸಲಾಗಿದೆ.

  • ಮೊಬೈಲ್ ಕದಿಯಲು ರೋಗಿಯಾದ ಕಳ್ಳ – ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆ

    ಮೊಬೈಲ್ ಕದಿಯಲು ರೋಗಿಯಾದ ಕಳ್ಳ – ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆ

    ಚಿತ್ರದುರ್ಗ: ರೋಗಿಯ ನೆಪದಲ್ಲಿ ಕಳ್ಳನೋರ್ವ ಆಸ್ಪತ್ರೆಗೆ ದಾಖಲಾಗಿ ಮೊಬೈಲ್ ಕದ್ದು ಎಸ್ಕೇಪ್ ಆಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.

    ರಾತ್ರಿ ವೇಳೆ ಹಿರಿಯೂರಿನ ಸರ್ಕಾರಿ ಆಸ್ಪತ್ರೆಗೆ ಅನಾರೋಗ್ಯದ ನೆಪದಲ್ಲಿ ದಾಖಲಾಗಿದ್ದ ಕಳ್ಳ ರೋಗಿಯಂತೆ ಬೆಡ್ ಮೇಲೆ ಮಲಗಿ ಪಕ್ಕದ ಬೆಡ್‍ನಲ್ಲಿದ್ದ ರೋಗಿಯ ಮೊಬೈಲ್ ಕದ್ದು ಪರಾರಿಯಾಗಿದ್ದಾನೆ. ಕಳ್ಳನ ಬೆಡ್ ಪಕ್ಕದಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಯೋಗೇಶ್  ಮಲಗಿದ್ದ ವೇಳೆ‌ ಬೆಳಗಿನ ಜಾವ ಮೊಬೈಲ್ ಎಗರಿಸಿ ಕಳ್ಳ ಎಸ್ಕೇಪ್ ಆಗಿದ್ದಾನೆ. ಆದರೆ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ಇದನ್ನೂ ಓದಿ: ಮನೆಯಲ್ಲಿದ್ರೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತೆ ಅನ್ನೋ ಭಯವಿದೆ: ಸೈಫ್ ಆಲಿ ಖಾನ್

    ಸರ್ಕಾರಿ ಆಸ್ಪತ್ರೆಯ ಚಿಕಿತ್ಸೆ ಹಾಗೂ ಸೌಲಭ್ಯಗಳ ಬಗ್ಗೆ ಮೂಗು ಮುರಿಯುತ್ತಿದ್ದ ರೋಗಿಗಳಿಗೆ ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿ ಕಳ್ಳರ ಹಾವಳಿ ಶುರುವಾಗಿದೆ. ಕಳ್ಳನ ಕೈಚಳಕದಿಂದ ರೋಗಿಗಳಲ್ಲಿ ಭಾರೀ ಆತಂಕ ಮನೆ ಮಾಡಿದೆ. ಈ ಪ್ರಕರಣ ಹಿರಿಯೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ:  ವಿದ್ಯಾರ್ಥಿನಿಯರಿಗೆ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯವೆಸಗಲು ಶಿಕ್ಷಕ ಯತ್ನ

  • ಅಂಬ್ಯುಲೆನ್ಸ್ ಇಲ್ಲದೆ ರಿಮ್ಸ್ ಆಸ್ಪತ್ರೆ ಮುಂದೆ ನರಳಾಡಿದ ರೋಗಿ

    ಅಂಬ್ಯುಲೆನ್ಸ್ ಇಲ್ಲದೆ ರಿಮ್ಸ್ ಆಸ್ಪತ್ರೆ ಮುಂದೆ ನರಳಾಡಿದ ರೋಗಿ

    ರಾಯಚೂರು: ನಗರದ ಪ್ರತಿಷ್ಠಿತ ರಿಮ್ಸ್ ವೈದ್ಯಕೀಯ ಬೋಧಕ ಆಸ್ಪತ್ರೆ ಮುಂದೆ ಅಂಬ್ಯುಲೆನ್ಸ್ ಇಲ್ಲದೆ ರೋಗಿಯೊಬ್ಬ ಸುಮಾರು ಅರ್ಧಗಂಟೆ ಕಾಲ ಫುಟ್‍ಪಾತ್ ಮೇಲೆ ನರಳಾಡಿದ ಘಟನೆ ನಡೆದಿದೆ.

    ಯಾದಗಿರಿ ಜಿಲ್ಲೆಯಿಂದ ರಿಮ್ಸ್‌ಗೆ ಬಂದಿದ್ದ ಸುಮಾರು 38 ವರ್ಷ ಪ್ರಾಯದ ನಾಗರಾಜ್ ವೈದ್ಯರ ಸಲಹೆ ಮೇರೆಗೆ ಬೇರೆ ಆಸ್ಪತ್ರೆಗೆ ಹೋಗಲು ಅಂಬ್ಯುಲೆನ್ಸ್ ಇಲ್ಲದೆ ಆಸ್ಪತ್ರೆ ಹೊರಗಡೆಯೇ ಸುಮಾರು ಹೊತ್ತು ನರಳಾಡಬೇಕಾಯಿತು. ಇದನ್ನೂ ಓದಿ: ನಾನು 35 ಅಂಕ ಕೆಟಗೆರಿಯವರು ಅದಕ್ಕೆ ಕೈಗಾರಿಕಾ ಸಚಿವನಾದೆ: ಮುರುಗೇಶ್ ನಿರಾಣಿ

    ರಕ್ತದೊತ್ತಡ ಸಮಸ್ಯೆಯಿಂದ ಆಸ್ಪತ್ರೆಗೆ ಬಂದಿದ್ದ ರೋಗಿ ರಿಮ್ಸ್ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದ, ಓಪೆಕ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ತೆರಳುವಂತೆ ವೈದ್ಯರು ಸೂಚಿಸಿದ್ದರು. ಆದರೆ ರೋಗಿಗೆ ಹೋಗಲು ಸಾಧ್ಯವಾಗಿಲ್ಲ, ಆಸ್ಪತ್ರೆ ಹೊರಗೆ ಅರ್ಧ ಗಂಟೆಗೂ ಹೆಚ್ಚು ಹೊತ್ತು ಕಾದರೂ ಕೂಡ ಅಂಬ್ಯುಲೆನ್ಸ್ ಬಾರದ ಹಿನ್ನೆಲೆ ರೋಗಿ ಫುಟ್‍ಪಾತ್ ಮೇಲೆ ಮಲಗಿದ್ದ. ಇದನ್ನು ಗಮನಿಸಿ ಸಾರ್ವಜನಿಕರು ಆಕ್ರೋಶ ಹೊರಹಾಕಿದ ಬಳಿಕ ಎಚ್ಚೆತ್ತ ವೈದ್ಯಾಧಿಕಾರಿಗಳು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ರೋಗಿಯನ್ನು ಓಪೆಕ್ ಆಸ್ಪತ್ರೆಗೆ ರವಾನಿಸಿದರು. ಇದನ್ನೂ ಓದಿ: ನಮ್ಮ ಹಾಜರಿ ಕ್ಯಾಂಟೀನ್‍ನಲ್ಲೇ ಹೆಚ್ಚಾಗಿರುತ್ತಿತ್ತು ಕಾಲೇಜು ದಿನಗಳನ್ನು ನೆನಪಿಸಿಕೊಂಡ ಸಿಎಂ ಬೊಮ್ಮಾಯಿ

  • ಸರ್ಕಾರಿ ಆಸ್ಪತ್ರೆಯಲ್ಲಿ ಬೀದಿ ಶ್ವಾನಗಳ ಹಾವಳಿ – ರೋಗಿಗಳಲ್ಲಿ ಆತಂಕ

    ಸರ್ಕಾರಿ ಆಸ್ಪತ್ರೆಯಲ್ಲಿ ಬೀದಿ ಶ್ವಾನಗಳ ಹಾವಳಿ – ರೋಗಿಗಳಲ್ಲಿ ಆತಂಕ

    ಬೆಂಗಳೂರು/ನೆಲಮಂಗಲ: ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯೊಂದರಲ್ಲಿ ಬೀದಿ ಶ್ವಾನಗಳ ಹಾವಳಿಯಿಂದಾಗಿ ರೋಗಿಗಳು ಹಾಗೂ ಸಾರ್ವಜನಿಕರು ಆತಂಕಗೊಂಡಿದ್ದಾರೆ.

    hospital dog

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ಅವ್ಯವಸ್ಥೆ ಕಂಡುಬಂದಿದೆ. ಈ ಆಸ್ಪತ್ರೆಯಲ್ಲಿ ಬೀದಿ ಶ್ವಾನಗಳ ಉಪಟಳ ತಾಳಲಾರದೇ ರೋಗಿಗಳು ತಮ್ಮ ಮೊಬೈಲ್ ಫೋನ್ ಮೂಲಕ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಇನ್ನೂ ಬೀದಿಯ ಶ್ವಾನಗಳು ಆಸ್ಪತ್ರೆಯಲ್ಲಿ ರೋಗಿಗಳು ಬಳಸುವ ಬೆಡ್ ಗಳ ಮೇಲೆ ಬಂದು ಮಲಗಿ, ಗಲೀಜು ಮಾಡಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.  ಇದನ್ನೂ ಓದಿ: ಫಸಲಿಗೆ ಬಂದಿದ್ದ 700 ಅಡಿಕೆ ಮರ ಕಡಿದು ಹಾಕಿದ ದುಷ್ಕರ್ಮಿಗಳು

    hospital dog

    ಈ ಶ್ವಾನಗಳು ಆಸ್ಪತ್ರೆಯಲ್ಲಿ ಬರುವ ಪುಟಾಣಿ ಮಕ್ಕಳು, ಮಹಿಳೆಯರು ಹಾಗೂ ವೃದ್ಧರ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಕೂಡಲೇ ಆಸ್ಪತ್ರೆಯ ಆಡಳಿತ ಮಂಡಳಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಾಗೂ ಬೀದಿ ಶ್ವಾನಗಳಿಗೆ ಬ್ರೇಕ್ ಹಾಕುವಂತೆ ಮನವಿ ಮಾಡಿದ್ದಾರೆ.  ಇದನ್ನೂ ಓದಿ: ಹೆಣ್ಣು ಬಳೆ ತೊಟ್ಟಿದ್ದಾಳೆ ಅಂದರೆ ಅಬಲೆ ಅಂತಾನಾ? – ತನ್ವೀರ್ ಸೇಠ್ ವಿರುದ್ಧ ಪ್ರತಾಪ್ ಸಿಂಹ ಕಿಡಿ

  • ರೋಗಿಗೆ ಇಂಜೆಕ್ಷನ್ ನೀಡಿದ ಸೆಕ್ಯೂರಿಟಿ ಗಾರ್ಡ್

    ರೋಗಿಗೆ ಇಂಜೆಕ್ಷನ್ ನೀಡಿದ ಸೆಕ್ಯೂರಿಟಿ ಗಾರ್ಡ್

    ಭುವನೇಶ್ವರ: ಒಡಿಶಾದ ಅಂಗುಲ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ರೋಗಿಗಳಿಗೆ ಇಂಜೆಕ್ಷನ್ ನೀಡುತ್ತಿರುವ ವಿಚಾರ ಬಹಿರಂಗಗೊಂಡಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಈ ವೀಡಿಯೋವನ್ನು ಆಸ್ಪತ್ರೆಗೆ ಭೇಟಿ ನೀಡಿದ್ದ ರೋಗಿಯ ಸಂಬಂಧಿಯೊಬ್ಬರು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಸಣ್ಣ ಅಪಘಾತದಿಂದಾಗಿ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ವೈದ್ಯರ ಬದಲಾಗಿ ಸೆಕ್ಯೂರಿಟಿ ಗಾರ್ಡ್ ಇಂಜೆಕ್ಷನ್ ನೀಡಿದ್ದಾರೆ. ಇದನ್ನೂ ಓದಿ: ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಅನ್ನಲು ಸಂಬರ್ಗಿ ಬಳಿ ದಾಖಲೆ ಏನಿದೆ..?: ಚಂದ್ರಚೂಡ್

    ಇನ್ನೂ ವೈದ್ಯರು ಮತ್ತು ನರ್ಸ್ ಏಕೆ ರೋಗಿಗೆ ಇಂಜೆಕ್ಷನ್ ನೀಡಲಿಲ್ಲ ಎಂಬ ಪ್ರಶ್ನೆಗೆ, ಸಹಾಯಕ ಮುಖ್ಯ ವೈದ್ಯಕೀಯ ಅಧೀಕ್ಷಕ ಮಾನಸ್ ರಂಜನ್ ಬಿಸ್ವಾಲ್ ನಾವು ಈ ಬಗ್ಗೆ ವಿಚಾರಣೆ ಆರಂಭಿಸಿದ್ದೇವೆ ಮತ್ತು ತನಿಖೆಯ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಅರವಿಂದ್ ವೀಡಿಯೋ ಮಾಡಿ ಅದನ್ನು ಟ್ರೋಲಿಗನಿಗೆ ಸಂಬರ್ಗಿ ಕೊಟ್ಟ: ಚಂದ್ರಚೂಡ್

    ಈ ಮುನ್ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರದೀಪ್ತ ಕುಮಾರ್ ಮೊಹಾಪಾತ್ರ, ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ಸಹಾಯ ಮಾಡಲು ಆರೋಗ್ಯೇತರ ಸಿಬ್ಬಂದಿಯನ್ನು ನಿಯೋಜಿಸಲಾಗುವುದಿಲ್ಲ ಎಂದು ನಿರ್ದೇಶಿಸಿದ್ದರು.

  • ಕುರಿ ಸಂತೆಯಿಂದ ಟ್ರಾಫಿಕ್ ಜಾಮ್ – ಅಂಬುಲೆನ್ಸ್ ಗೂ ಜಾಗ ಬಿಡದ ಜನ

    ಕುರಿ ಸಂತೆಯಿಂದ ಟ್ರಾಫಿಕ್ ಜಾಮ್ – ಅಂಬುಲೆನ್ಸ್ ಗೂ ಜಾಗ ಬಿಡದ ಜನ

    ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ಎಪಿಎಂಸಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರಾಜ್ಯ ಹೆದ್ದಾರಿ ಬಂದ್ ಆಗಿದ್ದು, ಟ್ರಾಫಿಕ್ ಜಾಮ್‍ನಲ್ಲಿ ಅಂಬುಲೆನ್ಸ್ ಸಿಲುಕಿ ರೋಗಿ ಪರದಾಡಿದ ಘಟನೆ ಸಿಂಧನೂರಿನ ಕುಷ್ಟಗಿ ಮುಖ್ಯ ಹೆದ್ದಾರಿಯಲ್ಲಿ ನಡೆದಿದೆ.

    ನಗರದ ಹೊರವಲಯದಲ್ಲಿ ಪ್ರತೀ ಸೋಮವಾರ ಕುರಿ ಸಂತೆ ನಡೆಯುತ್ತದೆ. ಸಂತೆಗೆ ಬಂದವರು ವಾಹನಗಳನ್ನೆಲ್ಲಾ ಯದ್ವಾತದ್ವಾ ರಸ್ತೆ ಮೇಲೆ ನಿಲ್ಲಿಸಿದ್ದರ ಪರಿಣಾಮ ಸುಮಾರು ಒಂದು ಕಿಮೀವರೆಗೆ ಟ್ರಾಫಿಕ್ ಜಾಮ್ ಆಗಿತ್ತು. ಈ ವೇಳೆ ಅದೇ ದಾರಿಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಕರೆತರುತ್ತಿದ್ದ ಅಂಬುಲೆನ್ಸ್ ಗೂ ದಾರಿ ಸಿಗದೇ ಪರದಾಡಬೇಕಾಯಿತು.

    ಕೆಲ ಹೊತ್ತು ಅಂಬುಲೆನ್ಸ್ ಟ್ರಾಫಿಕ್‍ನಲ್ಲೇ ಸಿಕ್ಕಾಕಿಕೊಂಡಿತ್ತು, ಹೀಗಾಗಿ ಅಂಬ್ಯುಲೆನ್ಸ್ ನಲ್ಲಿದ್ದ ರೋಗಿ ನರಳಾಡುವಂತಾಯಿತು. ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಿದ್ದರೂ ಕೇಳುವವರು ಇರಲಿಲ್ಲ. ಇದನ್ನೂ ಓದಿ: ಜೇಬಿನಲ್ಲೇ ಸದಾ ಕಾಂಡೋಮ್ ಇಟ್ಕೊಂಡು ತಿರುಗಾಡುತ್ತಿದ್ದ ಕಾಮುಕ

    ಸ್ಥಳದಲ್ಲಿ ಇಷ್ಟೆಲ್ಲಾ ಅವಾಂತರವಾದ್ರೂ ಸಂಚಾರಿ ಠಾಣೆ ಪೊಲೀಸರು ಸ್ಥಳದಲ್ಲಿರಲಿಲ್ಲ. ಪ್ರತೀ ವಾರ ಸಂತೆ ನಡೆಯುವುದರಿಂದ ಪೊಲೀಸರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕೆಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಾಕಿಂಗ್ ಹೋಗಿದ್ದ ಪಾದಚಾರಿ ಮೇಲೆ ಹರಿದ ಲಾರಿ – ಸ್ಥಳದಲ್ಲಿಯೇ ಮಹಿಳೆ ಸಾವು

  • ಹೊಟ್ಟೆ ನೋವಿನಿಂದ ರೋಗಿ ಸಾವು – ರಿಮ್ಸ್ ತರಬೇತಿ ವೈದ್ಯರ ಮೇಲೆ ಹಲ್ಲೆ

    ಹೊಟ್ಟೆ ನೋವಿನಿಂದ ರೋಗಿ ಸಾವು – ರಿಮ್ಸ್ ತರಬೇತಿ ವೈದ್ಯರ ಮೇಲೆ ಹಲ್ಲೆ

    – ವೈದ್ಯರಿಂದ ಆಸ್ಪತ್ರೆ ಮುಂದೆ ಪ್ರತಿಭಟನೆ

    ರಾಯಚೂರು: ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಹೊಟ್ಟೆ ನೋವಿನಿಂದ ದಾಖಲಾಗಿದ್ದ ರೋಗಿಯೊಬ್ಬ ನಿನ್ನೆ ತಡರಾತ್ರಿ ಸಾವನ್ನಪ್ಪಿದ್ದರು. ಬಳಿಕ ರೋಗಿಯ ಕಡೆಯವರು ವೈದ್ಯರ ಮೇಲೆ ಹಲ್ಲೆ ಮಾಡಿದ್ದರು. ಇಂದು ರೋಗಿಯ ಕಡೆಯವರು ಹಲ್ಲೆ ಮಾಡಿರುವುದನ್ನು ಖಂಡಿಸಿ ಆಸ್ಪತ್ರೆಯ ತರಬೇತಿ ವೈದ್ಯರು ಕರ್ತವ್ಯಕ್ಕೆ ಗೈರಾಗಿ ಹೋರಾಟ ನಡೆಸಿದ್ದಾರೆ.

    ರಿಮ್ಸ್ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದ ಹಿನ್ನೆಲೆ ರೋಗಿ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ತರಬೇತಿ ವೈದ್ಯರ ಮೇಲೆ ರೋಗಿ ಸಂಬಂಧಿಕರು ಹಲ್ಲೆ ಮಾಡಿದ್ದರು. ಹಲ್ಲೆ ಖಂಡಿಸಿ ರಿಮ್ಸ್ ಆಸ್ಪತ್ರೆ ಎದುರು ತರಬೇತಿ ವೈದ್ಯರು ಪ್ರತಿಭಟನೆ ನಡೆಸಿದ್ದಾರೆ. ರೋಗಿಗೆ ಚಿಕಿತ್ಸೆ ನೀಡುವಾಗಲೇ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಆಗ್ರಹಿಸಿದ್ದಾರೆ.

    ಹಲ್ಲೆ ಮಾಡಿದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಕೈಗಳಿಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡುತ್ತಿದ್ದ ವೈದ್ಯರನ್ನು ಸಮಾಧಾನ ಪಡಿಸಲು ಬಂದ ರಿಮ್ಸ್ ನಿರ್ದೇಶಕ ಡಾ.ಬಸವರಾಜ್ ಪೀರಾಪುರ ಜೊತೆ ವೈದ್ಯರು ವಾಗ್ವಾದ ನಡೆಸಿ, ಆಸ್ಪತ್ರೆಯಲ್ಲಿ ವೈದ್ಯರಿಗೆ ರಕ್ಷಣೆ ಇಲ್ಲದಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವೈದ್ಯರಿಗೆ ಕೋವಿಡ್ ಕರ್ತವ್ಯ ನೆಪ – ಚಿಕಿತ್ಸೆ ಸಿಗದೆ ವಂಚಿತರಾಗುತ್ತಿರೋ ರೋಗಿಗಳು

    ತರಬೇತಿ ವೈದ್ಯರ ಒತ್ತಾಯಕ್ಕೆ ಮಣಿದ ರಿಮ್ಸ್ ಆಸ್ಪತ್ರೆಯ ನಿರ್ದೇಶಕ ಬಸವರಾಜ್ ಪೀರಾಪುರ ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ಠಾಣೆ ದೂರು ನೀಡಲು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆ ವೈದ್ಯರು ತಾತ್ಕಾಲಿಕವಾಗಿ ಹೋರಾಟ ಹಿಂಪಡೆದಿದ್ದಾರೆ.

  • ಅಂಬುಲೆನ್ಸ್ ಚಾಲಕನ ಅಜಾಗರೂಕತೆಗೆ ವ್ಯಕ್ತಿ ಬಲಿ – ಸಂಬಂಧಿಕರಿಂದ ಆರೋಪ

    ಅಂಬುಲೆನ್ಸ್ ಚಾಲಕನ ಅಜಾಗರೂಕತೆಗೆ ವ್ಯಕ್ತಿ ಬಲಿ – ಸಂಬಂಧಿಕರಿಂದ ಆರೋಪ

    ಧಾರವಾಡ: ಅಂಬುಲೆನ್ಸ್ ಚಾಲಕನ ಅಜಾಗರೂಕತೆಯಿಂದ ರೋಗಿಯೊಬ್ಬರು ಸಾವನ್ನಪ್ಪಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

    ಧಾರವಾಡ ತಾಲೂಕಿನ ಕೋಟೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಖುತಬುದ್ದಿನ್ ನನ್ನೆಸಾಬನವರ (50) ಮೃತಪಟ್ಟ ವ್ಯಕ್ತಿ. ಕಳೆದ ರಾತ್ರಿ ಖುತಬುದ್ದಿನರಿಗೆ ಎದೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ಕೋಟೂರು ಗ್ರಾಮದಿಂದ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

    ಮೃತ ವ್ಯಕ್ತಿಯ ಕುಟುಂಬದವರು ವೀಡಿಯೋವೊಂದನ್ನು ಮಾಡಿ, ಅಂಬುಲೆನ್ಸ್ ಚಾಲಕ ಆಕ್ಸಿಜನ್ ನೀಡದೇ ಅಜಾಗರೂಕತೆ ತೋರಿಸಿದ್ದಾನೆ. ಅಲ್ಲದೇ ಅಂಬುಲನ್ಸ್‍ನಲ್ಲಿ ಚಾಲಕನೊಬ್ಬನೇ ರೋಗಿಗೆ ಆಕ್ಸಿಜನ್ ಹಾಕಿದ್ದ, ಅಂಬುಲನ್ಸ್‍ನಲ್ಲಿ ನರ್ಸ್ ಕೂಡಾ ಇರಲಿಲ್ಲ ಎಂದು ಆರೋಪಿಸಿದ್ದಾರೆ. ಜಿಲ್ಲಾ ಆಸ್ಪತ್ರೆಗೆ ಬರುತಿದ್ದಂತೆಯೇ ಅಂಬುಲನ್ಸ್ ಚಾಲಕ ವಾಹನ ನಿಲ್ಲಿಸಿ ಪರಾರಿಯಾದ್ದಾನೆ ಎಂದು ತಿಳಿಸಿದ್ದಾರೆ.

    ಆಸ್ಪತ್ರೆಗೆ ದಾಖಲಿಸಲು ರೋಗಿಯನ್ನು ಗ್ರಾಮದಿಂದ ಅರ್ಧ ದಾರಿಗೆ ಟಮ್ ಟಮ್ ವಾಹನದಲ್ಲಿ ಮನೆಯವರೇ ಕರೆದೊಯ್ದಿದ್ದರು. ನಂತರ ಅರ್ಧ ದಾರಿಗೆ ಬಂದ ಮೇಲೆ ಅಂಬುಲನ್ಸ್ ಬಂದಿತ್ತು. ಇದನ್ನೂ ಓದಿ: ಡ್ರೋನ್ ಮೂಲಕ ಔಷಧಿಗಳ ರವಾನೆಯ ಪರೀಕ್ಷಾರ್ಥ ಹಾರಾಟ

  • ದೆಹಲಿ ಆಸ್ಪತ್ರೆಯ 80 ಮಂದಿ ವೈದ್ಯರಿಗೆ ಕೊರೊನಾ

    ದೆಹಲಿ ಆಸ್ಪತ್ರೆಯ 80 ಮಂದಿ ವೈದ್ಯರಿಗೆ ಕೊರೊನಾ

    ನವದೆಹಲಿ: ದೆಹಲಿಯ ಸರೋಜ್ ಆಸ್ಪತ್ರೆಯಲ್ಲಿ 80 ಮಂದಿ ವೈದ್ಯರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆದರೂ ರೋಗಿಗಳಿಗೆ ಆಸ್ಪತ್ರೆ ಚಿಕಿತ್ಸೆ ನೀಡುವುದನ್ನು ಮುಂದುವರೆಸಿದೆ. ಸುಮಾರು ಮೂರು ದಶಕಗಳ ಕಾಲ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ್ದ ಹಿರಿಯ ವೈದ್ಯರೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.

    ಕೋವಿಡ್-19 ರೋಗಕ್ಕೆ ಚಿಕಿತ್ಸೆ ನೀಡುತ್ತಿದ್ದ 80 ವೈದ್ಯರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇದರಲ್ಲಿ 12 ಮಂದಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಉಳಿದ ವೈದ್ಯರು ಹೋಂ ಐಸೋಲೇಶನ್‍ನಲ್ಲಿದ್ದಾರೆ.

    ಆಸ್ಪತ್ರೆಯ ಹಿರಿಯ ಸರ್ಜನ್ ಡಾ.ಎ.ಕೆ ರಾವತ್ ಕೋವಿಡ್ ಸೋಂಕಿಗೆ ಬಲಿಯಾಗಿದ್ದು, ಇವರು 27 ವರ್ಷಗಳ ಕಾಲ ಸರೋಜ್ ಆಸ್ಪತ್ರೆಗೆ ಸೇವೆ ಸಲ್ಲಿಸಿದ್ದರು. ಇದೀಗ ಇವರ ಸಾವಿನಿಂದ ಆಸ್ಪತ್ರೆಯ ಸಿಬ್ಬಂದಿಗೆ ಭಾರಿ ಆಘಾತವನ್ನುಂಟು ಮಾಡಿದೆ.

    ದೆಹಲಿ ಆಸ್ಪತ್ರೆಗಳಲ್ಲಿ ಇಲ್ಲಿಯವರೆಗೂ 300ಕ್ಕೂ ಹೆಚ್ಚು ವೈದ್ಯರು ಹಾಗೂ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸರೋಜ್ ಕೋವಿಡ್ ಆಸ್ಪತ್ರೆಯಲ್ಲಿ ಸದ್ಯ ಹೊರ ರೋಗಿಗಳ ವಿಭಾಗವನ್ನು ಮುಚ್ಚಲಾಗಿದೆ. ಅಲ್ಲದೆ ಭಾನುವಾರ ದೆಹಲಿಯ ಗುರು ತೇಜ್ ಬಹದ್ದೂರ್(ಜಿಟಿಬಿ) ಆಸ್ಪತ್ರೆಯ ಯುವ ವೈದ್ಯರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಕೆಲವೇ ಗಂಟೆಗಳಲ್ಲಿ ಕೋವಿಡ್‍ಗೆ ಬಲಿಯಾಗಿದ್ದಾರೆ.

    ದೆಹಲಿಯಲ್ಲಿ ಭಾನುವಾರ ಕೊರೊನಾದಿಂದ 273 ಮಂದಿ ಮೃತಪಟ್ಟಿದ್ದು, 13,336 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ.