ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ (First Phase Election) ನಡೆಯುತ್ತಿದ್ದು, ಮತದಾನ ಅತ್ಯಂತ ಬೆಂಗಳೂರಿನಲ್ಲಿ ಪೇಷೆಂಟ್ ಒಬ್ಬರು ಮತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
39 ವರ್ಷದ ಹೆಚ್.ಎನ್ ಮುರಳೀಧರ್ ಅವರು ಇಂದು ಮಧ್ಯಾಹ್ನ ಶಸ್ತ್ರಚಿಕಿತ್ಸೆ ನಡೆಯುವುದಿತ್ತು. ಆದಾಗ್ಯೂ ಅವರು ತಾನು ತನ್ನ ಹಕ್ಕು ಚಲಾಯಿಸಬೇಕು ಎಂಬ ಬಯಕೆ ವ್ಯಕ್ತಪಡಿಸಿದರು. ಮುರಳೀದರ್ ಇಚ್ಛೆಯಂತೆ ಆಸ್ಪತ್ರೆಯ ವೈದ್ಯರು ಮತ ಹಾಕಲು ಅನುವು ಮಾಡಿಕೊಟ್ಟರು. ವೈದ್ಯರ ತಂಡವು ಮುರಳೀಧರ್ ಅವರು ಗೊತ್ತುಪಡಿಸಿದ ಮತಗಟ್ಟೆಗೆ ಪ್ರಯಾಣಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಯಿತು.
ವೈದ್ಯರ ಸಲಹೆ ಪಡೆದ ಬಳಿಕ ಮುರಳೀಧರ್ ಅವರು ಅಂಬುಲೆನ್ಸ್ ನಲ್ಲಿ ಬಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಹೊಸಕೋಟೆಯಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದನ್ನೂ ಓದಿ: ಕಲ್ಯಾಣ ಮಂಟಪಕ್ಕೆ ತೆರಳೋ ಮುನ್ನ ಮತ ಚಲಾಯಿಸಿದ ಮದುಮಗಳು
ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿರುವ 14 ಕ್ಷೇತ್ರಗಳಲ್ಲಿ 11 ಗಂಟೆಯವರೆಗೆ ಒಟ್ಟು 22.34% ರಷ್ಟು ಮತದಾನವಾಗಿದೆ.
ಮುಂಬೈ: ಮಹಾರಾಷ್ಟ್ರದಲ್ಲಿರುವ ನಾಂದೆಡ್ ಸರ್ಕಾರಿ ಆಸ್ಪತ್ರೆಯಲ್ಲಿ (Maharastra Govt Hospital) ಕಳೆದ 8 ದಿನಗಳಲ್ಲಿ 108 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಈ ಘಟನೆ ಇದೀಗ ಭಾರೀ ಸಂಚಲನ ಮೂಡಿಸಿದೆ.
ವರದಿಗಳ ಪ್ರಕಾರ, 24 ಗಂಟೆಯಲ್ಲಿ ನವಜಾತ ಶಿಶು (Infant babies) ಸೇರಿ 11 ಮಂದಿ ರೋಗಿಗಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಆಸ್ಪತ್ರೆಯ ಡೀನ್ ಡಾ. ಶಂಕರ್ ರಾವ್ ಚವಾಣ್ ಮಾತನಾಡಿ, ಆಸ್ಪತ್ರೆಯಲ್ಲಿ ಔಷಧಿ ಕೊರತೆ ಇಲ್ಲ ಎಂದು ಹೇಳಿದ್ದಾರೆ. ಆದರೆ ರೋಗಿಗಳು ಮಾತ್ರ ಸಾವನ್ನಪ್ಪುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
24 ಗಂಟೆಗಳಲ್ಲಿ ಸರಾಸರಿ ಸಾವಿನ ಪ್ರಮಾಣ 13 ಆಗಿತ್ತು. ಈ ಹಿಂದೆ ಔಷಧಿ ಕೊರತೆಯೇ ರೋಗಿಗಳ ಸಾವಿಗೆ ಕಾರಣ ಎಂದು ವೈದ್ಯರು ಹೇಳುತ್ತಿದ್ದರು. ಆದರೆ ಇದೀಗ ಡೀನ್ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಯಾವುದೇ ರೋಗಿಯೂ ಔಷಧಿ ಕೊರತೆಯಿಂದ ಸಾವನ್ನಪಿಲ್ಲ. ಬದಲಿಗೆ ಅವರ ಸ್ಥಿತಿ ಹದಗೆಟ್ಟಿದ್ದರಿಂದ ಮೃತಪಟ್ಟಿದ್ದಾರೆ ಎಂದು ಡೀನ್ ಸ್ಪಷ್ಟನೆ ನೀಡಿದ್ದಾರೆ. ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ 60ಕ್ಕೂ ಹೆಚ್ಚು ಶಿಶುಗಳು ದಾಖಲಾಗಿದೆ. ಈ ಶಿಶುಗಳನ್ನು ನೋಡಿಕೊಳ್ಳಲು ಕೇವಲ ಮೂವರು ದಾದಿಯರು ಮಾತ್ರ ಇದ್ದಾರೆ ಎಂದು ಸಿಎಂ ಅಶೋಕ್ ಚೌಹಾಣ್ ತಿಳಿಸಿದರು.
ಕ್ಯಾನ್ಸರ್ (Cancer) ಎಂಬ ಮಹಾಮಾರಿ ರೋಗ ಸದ್ಯ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕಾಡುತ್ತಿದೆ. ಕೆಲವು ಮಕ್ಕಳಿಗೆ ಹುಟ್ಟಿದ ಕೆಲವು ದಿನಗಳು, ತಿಂಗಳಲ್ಲಿ ಕ್ಯಾನ್ಸರ್ ರೋಗ ಅಂಟಿಕೊಂಡರೆ ಇನ್ನುಳಿದವರಿಗೆ ಯಾವಾಗ ಬರುತ್ತದೆ? ಹೇಗೆ ಬರುತ್ತದೆ ಎಂಬುದನ್ನು ಹೇಳಲು ಅಸಾಧ್ಯ. ಕ್ಯಾನ್ಸರ್ ರೋಗದಲ್ಲಿ ಅನೇಕ ರೀತಿಯ ವಿಧಗಳಿದ್ದು, ನಾಲ್ಕು ಹಂತಗಳಲ್ಲಿರುತ್ತದೆ. ಈ ರೋಗ ಮೊದಲನೆಯ ಹಂತ ಮತ್ತು ಎರಡನೆಯ ಹಂತದಲ್ಲಿದ್ದರೆ ಅದನ್ನು ಆಪರೇಷನ್ ಅಥವಾ ಔಷಧಿಗಳ ಮೂಲಕ ಸರಿಪಡಿಸಬಹುದು ಎಂದು ಡಾಕ್ಟರ್ ಹೇಳುತ್ತಾರೆ. ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ (Chemotherapy) ಎಂಬ ಚಿಕಿತ್ಸೆಯನ್ನು ನೀಡುತ್ತಾರೆ ಎಂಬುದನ್ನು ನೀವೆಲ್ಲರೂ ತಿಳಿದಿರಬಹುದು. ಆದರೆ ಇದು ಮಾನವ ದೇಹದಲ್ಲಿ ಹೇಗೆ ಕೆಲಸ ಮಾಡುತ್ತದೆ ಎನ್ನುವುದರ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ.
ಕಿಮೋಥೆರಪಿ ಎಂದರೆ ಮಾನವ ದೇಹದಲ್ಲಿ ಉಂಟಾಗುವ ಕ್ಯಾನ್ಸರ್ ಜೀವಕೋಶವನ್ನು ನಾಶಪಡಿಸಲು ಬಳಸುವ ಒಂದು ಔಷಧಿಯಾಗಿದೆ. ಈ ಚಿಕಿತ್ಸೆಯನ್ನು ನೀಡುವುದರಿಂದ ದೇಹದಲ್ಲಿ ಕ್ಯಾನ್ಸರ್ ಕೋಶ ಬೆಳೆಯದಂತೆ ಹಾಗೂ ಕೋಶ ಬೆಳೆದು ವಿಭಜನೆಯಾಗದಂತೆ ಕಿಮೋಥೆರಪಿ ತಡೆಗಟ್ಟುತ್ತದೆ. ಇದು ರಕ್ತದ ಮುಖಾಂತರ ಮಾನವ ದೇಹಕ್ಕೆ ಹೊಕ್ಕು, ದೇಹದ ಎಲ್ಲಾ ಭಾಗವನ್ನು ಆವರಿಸಿಕೊಳ್ಳುತ್ತದೆ. ಕಿಮೋಥೆರಪಿಯಲ್ಲಿ ಅನೇಕ ರೀತಿಯ ವಿಧಗಳಿವೆ. ಈ ಚಿಕಿತ್ಸೆಗೆ ಬಳಸುವ ಔಷಧಿಗಳು ಪವರ್‌ಫುಲ್ ಆಗಿದ್ದು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುತ್ತದೆ. ಕ್ಯಾನ್ಸರ್ ಜೀವಕೋಶಗಳು ಅತಿವೇಗವಾಗಿ ಮಾನವ ದೇಹದಲ್ಲಿ ಹರಡಿಕೊಳ್ಳುತ್ತದೆ. ಆದ್ದರಿಂದ ಕಿಮೋಥೆರಪಿ ಇದನ್ನು ತಡೆಗಟ್ಟುವಲ್ಲಿ ಅತ್ಯಂತ ಸಹಕಾರಿಯಾಗಿದೆ.
ಕಿಮೋಥೆರಪಿ ಚಿಕಿತ್ಸೆ ರಕ್ತದ ಮೂಲಕ ಇಡೀ ದೇಹವನ್ನು ಆವರಸಿಕೊಳ್ಳುವ ಸಂದರ್ಭ ಸಾಮಾನ್ಯ ಜೀವಕೋಶಗಳಿಗೆ ಹಾನಿಯುಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದಾಗಿ ಕ್ಯಾನ್ಸರ್ ರೋಗಿ ಹಲವು ಅಡ್ಡ ಪರಿಣಾಮವನ್ನು ಎದರಿಸುತ್ತಾರೆ. ಅಂದರೆ ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗುವ ರೋಗಿಯ ತಲೆ ಕೂದಲು ಸಂಪೂರ್ಣವಾಗಿ ಉದುರುತ್ತದೆ. ಅಲ್ಲದೇ ವಾಕರಿಕೆ, ತಲೆಸುತ್ತು, ಸುಸ್ತು ಮುಂತಾದ ಅಡ್ಡಪರಿಣಾಮಗಳನ್ನು ಎದುರಿಸುತ್ತಾರೆ. ಈ ಥೆರಪಿಯನ್ನು ಕೆಲವು ಡಾಕ್ಟರ್‌ಗಳು ಆಪರೇಷನ್ ಬಳಿಕ ಮಾಡುತ್ತಾರೆ. ಇನ್ನೂ ಕೆಲವರು ಆಪರೇಷನ್‌ಗೂ ಮುನ್ನ ಚಿಕಿತ್ಸೆ ನೀಡಿ ಕ್ಯಾನ್ಸರ್ ಕೋಶಗಳು ಹರಡದಂತೆ ತಡೆಗಟ್ಟಿ ನಂತರ ಆಪರೇಷನ್‌ಗೆ ಮುಂದಾಗುತ್ತಾರೆ.
ಕಿಮೋಥೆರಪಿ ಚಿಕಿತ್ಸೆಯನ್ನು ಎರಡು ರೀತಿಯಲ್ಲಿ ನೀಡಬಹುದಾಗಿದೆ. ಮೊದಲನೆಯದು ಇಂಜೆಕ್ಷನ್ ರೂಪದಲ್ಲಿ ಇದನ್ನು ನೀಡಬಹುದು. ಪ್ರಸ್ತುತ ಇದು ಮಾತ್ರೆಗಳ ರೂಪದಲ್ಲಿ ಕೂಡಾ ಲಭ್ಯವಿದೆ. ಕ್ಯಾನ್ಸರ್ ರೋಗಕ್ಕೆ ಮಾತ್ರವಲ್ಲದೇ ಬೇರೆ ರೋಗಗಳಿಗೂ ಈ ಕಿಮೋಥೆರಪಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಕಿಮೋಥೆರಪಿ ಎಂಬುದು ಸುಮಾರು 40-50 ವರ್ಷಗಳ ಹಿಂದೆ ಆವಿಷ್ಕಾರವಾಗಿರುವಂತಹ ಚಿಕಿತ್ಸೆಯಾಗಿದೆ.
ಕಿಮೋಥೆರಪಿ ಎಂಬುದು ಕೇವಲ ಒಂದು ಡ್ರಗ್ಸ್ ಅನ್ನು ಒಳಗೊಂಡಿಲ್ಲ. ಇದು ಸುಮಾರು ಎರಡರಿಂದ ಮೂರು ಹೈ ಡೋಸೇಜ್ ಡ್ರಗ್ಸ್ ಅನ್ನು ಒಳಗೊಂಡಿದ್ದು, ಮಾನವ ದೇಹದಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದನ್ನು ನಾಲ್ಕನೇ ಹಂತದಲ್ಲಿರುವ ಕ್ಯಾನ್ಸರ್ ರೋಗಿಗಳಿಗೆ ಅಗತ್ಯವಾಗಿ ಕೊಡಲಾಗುತ್ತದೆ. ಕಿಮೋಥೆರಪಿ ಚಿಕಿತ್ಸೆ ಸುಮಾರು 90% ಕ್ಯಾನ್ಸರ್ ರೋಗವನ್ನು ಗುಣಪಡಿಸುತ್ತದೆ. ಕಿಡ್ನಿ ಕ್ಯಾನ್ಸರ್ ಮತ್ತು ಚರ್ಮ ಕ್ಯಾನ್ಸರ್‌ಗಳಂತಹ ರೋಗಗಳಿಗೆ ಇದು ಹೆಚ್ಚು ಪರಿಣಾಮಕಾರಿಯಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಸ್ತನ ಕ್ಯಾನ್ಸರ್, ಧ್ವನಿಪೆಟ್ಟಿಗೆ ಕ್ಯಾನ್ಸರ್‌ನಂತಹ ಕೆಲವು ಕ್ಯಾನ್ಸರ್ ರೋಗಗಳಿಗೆ ಕಿಮೋಥೆರಪಿ ಚಿಕಿತ್ಸೆ ನೀಡಿದರೆ ಆಪರೇಷನ್ ಮಾಡುವ ಅಗತ್ಯವಿಲ್ಲ. ಇದರಲ್ಲಿಯೇ ಕ್ಯಾನ್ಸರ್ ರೋಗ ವಾಸಿಯಾಗುತ್ತದೆ. ಕಿಮೋಥೆರಪಿಯೊಂದಿಗೆ ರೇಡಿಯೇಷನ್ ಚಿಕಿತ್ಸೆಯನ್ನು ಕೊಡುವುದರಿಂದ ಕೆಲವು ಕ್ಯಾನ್ಸರ್ ರೋಗಿಗಳಿಗೆ ಆಪರೇಷನ್ ಮಾಡುವುದನ್ನು ತಪ್ಪಿಸಬಹುದಾಗಿದೆ.
ಕಿಮೋಥೆರಪಿ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಇನ್ಫೆಕ್ಷನ್ ಆಗದ ರೀತಿಯಲ್ಲಿ ಎಚ್ಚರವಹಿಸುವುದು ತುಂಬಾ ಅಗತ್ಯವಾಗಿರುತ್ತದೆ. ಈ ರೀತಿಯಾದಲ್ಲಿ ರೋಗಿ ತುಂಬಾ ಸೀರಿಯಸ್ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಸಮಯದಲ್ಲಿ ತುಂಬಾ ಜಾಗೃತರಾಗಿರಬೇಕು. ಕಿಮೋಥೆರಪಿ ಚಿಕಿತ್ಸೆಯಿಂದ ಬಿಳಿ ರಕ್ತಕಣ, ಕೆಂಪು ರಕ್ತಕಣ ಅಥವಾ ಪ್ಲೇಟ್‌ಲೆಟ್ ಕೌಂಟ್ ಕೂಡಾ ಕಡಿಮೆಯಾಗುವ ಸಂಭವವಿದೆ. ಕಿಮೋಥೆರಪಿ ಚಿಕಿತ್ಸೆ ಎಂಬುದು ದಿನಾ ನೀಡುವ ಚಿಕಿತ್ಸೆಯಲ್ಲ. ಇದನ್ನು ಎರಡರಿಂದ ಮೂರು ವಾರಗಳಿಗೊಮ್ಮೆ ನೀಡಲಾಗುತ್ತದೆ. ಮಾತ್ರೆಗಳು ಕೂಡಾ ಎರಡು ವಾರಗಳಿಗೊಮ್ಮೆ ನೀಡಲಾಗುತ್ತದೆ.
ಸುಮಾರು 30ರಿಂದ 40%ನಷ್ಟು ಕ್ಯಾನ್ಸರ್ ರೋಗಗಳು ಕೇವಲ ಕಿಮೋಥೆರಪಿ ಚಿಕಿತ್ಸೆಯಿಂದ ಗುಣವಾದರೆ 60ರಿಂದ 70%ನಷ್ಟು ಕ್ಯಾನ್ಸರ್ ರೋಗಗಳು ಆಪರೇಷನ್, ಕಿಮೋಥೆರಪಿ ಮತ್ತು ರೇಡೀಯೇಷನ್ ಚಿಕಿತ್ಸೆಯನ್ನು ನೀಡುವ ಮೂಲಕ ಗುಣಪಡಿಸಬಹುದು. ಕಿಮೋಥೆರಪಿ ಎಂದಾಗ ಜನರು ಭಯಬೀಳುವುದು ಜಾಸ್ತಿ. ಕಿಮೋಥೆರಪಿ ಚಿಕಿತ್ಸೆಗೆ ಯಾರೂ ಭಯಪಡಬೇಕಾದ ಅಗತ್ಯವಿಲ್ಲ. ಇದು ಕ್ಯಾನ್ಸರ್ ರೋಗವನ್ನು ಗುಣಪಡಿಸುತ್ತದೆ ಮತ್ತು ಕಿಮೋಥೆರಪಿ ಚಿಕಿತ್ಸೆಯಿಂದ ಉಂಟಾಗುವ ಸೈಡ್ ಎಫೆಕ್ಟ್ಸ್‌ಗೂ ಚಿಕಿತ್ಸೆಗಳು ಆಸ್ಪತ್ರೆಗಳಲ್ಲಿ ಲಭ್ಯವಿದೆ. ಆದ್ದರಿಂದ ಭಯಪಡದೇ ಚಿಕಿತ್ಸೆಯನ್ನು ಪಡೆದುಕೊಂಡು ಕಾಯಿಲೆಗಳನ್ನು ಬಗೆಹರಿಸಿಕೊಳ್ಳುವುದು ಉತ್ತಮ. ಇದನ್ನೂ ಓದಿ: ಅಮೆರಿಕದ ಟಾಪ್ ಸೀಕ್ರೆಟ್ ಪ್ಲೇಸ್ – ಅಂಥಾದ್ದೇನಿದೆ ಏರಿಯಾ 51ರಲ್ಲಿ?
ಜೈಪುರ: ಆಸ್ಪತ್ರೆಯಲ್ಲಿ (Hospital) ವೀಲ್‌ಚೇರ್‌ಗಳು ಹಾಗೂ ಸ್ಟ್ರೆಚರ್‌ಗಳ ಕೊರತೆಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಸ್ಕೂಟಿ (Scooty) ಮೂಲಕ ಕಾಲು ಮುರಿದ ರೋಗಿಯನ್ನು (Patient) ಮೂರನೇ ಅಂತಸ್ತಿಗೆ ಕರೆದೊಯ್ದಿದಿದ್ದಾರೆ. ಸ್ಕೂಟಿ ಮೂಲಕ ಆಸ್ಪತ್ರೆ ಪ್ರವೇಶಿಸಿ ಲಿಫ್ಟ್ ಮೂಲಕ ತೆರಳುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ರಾಜಸ್ಥಾನದ (Rajasthan) ಕೋಟಾದಲ್ಲಿ (Kota) ಈ ಘಟನೆ ನಡೆದಿದ್ದು ಸ್ಕೂಟಿ ಚಲಾಯಿಸಿದ ವ್ಯಕ್ತಿಯ ಪ್ರಕಾರ, ಕಾಲು ಮುರಿದ ಮಗನಿಗೆ ಪ್ಲಾಸ್ಟರ್ ಮಾಡಿಸಲು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ವೀಲ್‌ಚೇರ್‌ಗಳು, ಸ್ಟ್ರೆಚರ್‌ಗಳ ಕೊರತೆಯ ಹಿನ್ನೆಲೆಯಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಅನುಮತಿ ಪಡೆದು ಮೂರನೇ ಮಹಡಿಗೆ ತೆರಳಲು ಸ್ಕೂಟರ್ ಮೂಲಕ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದ್ದಾರೆ.
ವೈರಲ್ ವೀಡಿಯೋದಲ್ಲಿ ವ್ಯಕ್ತಿ ಸ್ಕೂಟರ್‌ನಲ್ಲಿ ಹೋಗುವಾಗ ಲಿಫ್ಟ್ ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದು. ಅವರ ಮಗ ಸ್ಕೂಟರ್‌ನ ಹಿಂಭಾಗದಲ್ಲಿ ಪ್ಲಾಸ್ಟೆಡ್ ಪಾದದೊಂದಿಗೆ ಕುಳಿತಿರುವುದು ಗಮನಿಸಬಹುದು. ಇದನ್ನೂ ಓದಿ: ಉಚಿತ ಪ್ರಯಾಣ ಹಿನ್ನೆಲೆ ಒಂದು ಇಡೀ ಬಸ್ ಬುಕ್ ಮಾಡೋಕೆ ಬಂದ ಅಜ್ಜಿ
ಈ ಘಟನೆ ಬಳಿಕ ವ್ಯಕ್ತಿಯ ನಡೆಯ ಬಗ್ಗೆ ಆಕ್ಷೇಪ ಕೇಳಿ ಬಂದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ವ್ಯಕ್ತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ವೀಲ್‌ಚೇರ್‌ಗಳು, ಸ್ಟ್ರೆಚರ್‌ಗಳ ಕೊರತೆಯಿಂದ ಅನುಮತಿ ಪಡೆದು ಈ ಕೆಲಸ ಮಾಡಿದೆ. ರೋಗಿಗಳಿಗೆ ಸಮಸ್ಯೆಯಾದರೆ ದೇವರು ಬರುವುದಿಲ್ಲ, ಸಂಬಂಧಿಕರೇ ಬರಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆ ಸಿಬ್ಬಂದಿ, ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ವೈದ್ಯರು ಆಸ್ಪತ್ರೆ ಆವರಣದೊಳಗೆ ಸ್ಕೂಟರ್ ಬಿಡಲು ಅನುಮತಿ ನೀಡಿಲ್ಲ. ಆದರೆ ಸ್ಟ್ರೆಚರ್‌ಗಳ ಕೊರತೆ ಇರುವುದು ನಿಜ. ಆಸ್ಪತ್ರೆಯಿಂದ ಕಳುಹಿಸಿದ ಗಾಲಿಕುರ್ಚಿಗಳ ಪ್ರಸ್ತಾಪವನ್ನು ಉನ್ನತ ಅಧಿಕಾರಿಗಳು ರದ್ದುಗೊಳಿಸಿದ್ದಾರೆ. ಶೀಘ್ರದಲ್ಲಿ ಸಮಸ್ಯೆ ಪರಿಹರಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಶವಯಾತ್ರೆ ವೇಳೆ ವಿದ್ಯುತ್ ಸ್ಪರ್ಶದಿಂದ 3 ಸಾವು; ಶವ ಹೊತ್ತಿದ್ದವರೇ ಹೆಣವಾದ್ರು
ಲಕ್ನೋ: ಮೆಡಿಕಲ್ ಸ್ಟೋರ್ (Medical Store) ಮಾಲಿಕನೊಬ್ಬ (Owner) ಶಸ್ತ್ರಚಿಕಿತ್ಸೆ (Surgery) ನಡೆಸಿದ ಪರಿಣಾಮ ರೋಗಿ (Patient) ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಉತ್ತರಪ್ರದೇಶದ ಖೇಜೂರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೆಡಿಕಲ್ ಸ್ಟೋರ್ ನಡೆಸುತ್ತಿದ್ದ ರೆಹಮಾನ್ ಬಂಧಿತ ವ್ಯಕ್ತಿ. ಈತ ವೃಷಣದಲ್ಲಿ ಉಂಟಾಗುವ ಊತದ ಸಮಸ್ಯೆಯಿಂದ ಬಳಲುತ್ತಿದ್ದ ಮುನ್ನಾ ಗುಪ್ತಾಗೆ ಶಸ್ತ್ರಚಿಕಿತ್ಸೆ ನಡೆಸಿದ್ದ. ಆದರೆ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಮುನ್ನಾ ಗುಪ್ತಾನ ಆರೋಗ್ಯ ಇನ್ನಷ್ಟು ಹದಗೆಟ್ಟಿದೆ. ಅದಾದ ಬಳಿಕ ಮುನ್ನಾ ಗುಪ್ತಾನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಅಮೃತ್‍ಪಾಲ್‍ಗೆ ಆಶ್ರಯ ಕೊಟ್ಟಿದ್ದ ಮಹಿಳೆ ಅರೆಸ್ಟ್
ಘಟನೆಗೆ ಸಂಬಂಧಿಸಿದಂತೆ ಗುಪ್ತಾ ಪುತ್ರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಘಟನೆಗೆ ಸಂಬಂಧಿಸಿ ರೆಹಮಾನ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿ ಮುನ್ನಾ ಗುಪ್ತಾನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ:ಸಿಧು ಪತ್ನಿಗೆ ಸ್ತನ ಕ್ಯಾನ್ಸರ್- ನಿಮ್ಮ ಬರುವಿಕೆಗಾಗಿ ಕಾಯ್ತಿದ್ದೇನೆಂದು ಭಾವುಕ ಪತ್ರ
ಮುಂಬೈ: ಸರ್ಕಾರಿ ಆಸ್ಪತ್ರೆಯೊಂದರಲ್ಲಿ (Government Hospital) ದಾಖಲಾಗಿದ್ದ ರೋಗಿಯೊಬ್ಬ (Patient) ಚಿಕಿತ್ಸೆ ನೀಡಲು ಬಂದ ವೈದ್ಯರಿಗೆ (Doctor) ಚಾಕುವಿನಿಂದ ಇರಿದಿರುವ (Stabbing) ಘಟನೆ ಮಹಾರಾಷ್ಟ್ರದ (Maharashtra) ಯವತ್ಮಾಲ್ ಜಿಲ್ಲೆಯ ಶ್ರೀ ವಸಂತರಾವ್ ನಾಯಕ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಹಲ್ಲೆ ನಡೆಸಿದ ವ್ಯಕ್ತಿ ಬುಧವಾರ ತನಗೆ ತಾನೇ ಚಾಕುವಿನಿಂದ ಇರಿದು ಆಸ್ಪತ್ರೆ ದಾಖಲಾಗಿದ್ದ. ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ದಾಖಲಾಗಿದ್ದ ವ್ಯಕ್ತಿ ಗುರುವಾರ ರಾತ್ರಿ ತನ್ನನ್ನು ಪರೀಕ್ಷಿಸಲು ಬಂದಿದ್ದ ವೈದ್ಯನಿಗೆ ಚಾಕುವಿನಿಂದ ಇರಿದಿದ್ದಾನೆ. ಅವರನ್ನು ರಕ್ಷಿಸಲು ಮುಂದಾದ ಮತ್ತೊಬ್ಬ ವೈದ್ಯರ ಮೇಲೂ ರೋಗಿ ಹಲ್ಲೆ ನಡೆಸಿದ್ದಾನೆ.
ವರದಿಗಳ ಪ್ರಕಾರ, ಹಣ್ಣುಗಳನ್ನು ಕತ್ತರಿಸಲು ಪಕ್ಕದಲ್ಲಿಟ್ಟಿದ್ದ ಚಾಕುವಿನಿಂದ ವ್ಯಕ್ತಿ ಹಲ್ಲೆ ನಡೆಸಿದ್ದಾನೆ. ಆತನನ್ನು ಪರೀಕ್ಷಿಸಲು ವೈದ್ಯರೊಬ್ಬರು ಬಂದಿದ್ದು, ಈ ವೇಳೆ ಹಣ್ಣು ತಿನ್ನಲು ಬಯಸುತ್ತೀರಾ? ಎಂದು ಕೇಳಿದ್ದಾರೆ. ಬಳಿಕ ತನಗೆ ತಾನೇ ಇರಿದುಕೊಂಡಿರುವ ಗಾಯವನ್ನು ಪರೀಕ್ಷಿಸಲು ವೈದ್ಯ ಮುಂದಾದಾಗ ಆತ ನಿರಾಕರಿಸಿದ್ದಾನೆ. ಬಳಿಕ ಆತ ಚಾಕುವಿನಿಂದ ವೈದ್ಯನಿಗೆ ಇರಿದಿದ್ದಾನೆ. ಇದನ್ನೂ ಓದಿ: ಚಾಮುಂಡಿಬೆಟ್ಟದ ಸಮೀಪ 50ಕ್ಕೂ ಹೆಚ್ಚು ಮಂದಿ ಪ್ರವಾಸಿಗರಿದ್ದ ಬಸ್‍ನಲ್ಲಿ ಬೆಂಕಿ!
ಇದನ್ನು ಗಮನಿಸಿದ ಮತ್ತೊಬ್ಬ ವೈದ್ಯ ಅವರನ್ನು ರಕ್ಷಿಸಲು ಬಂದಾಗ ಅವರ ಮೇಲೂ ವ್ಯಕ್ತಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗುತ್ತಿದೆ ಎಂದಿದ್ದಾರೆ.
ಜೈಪುರ: ರೋಗಿಯನ್ನು (Patient) ಆಸ್ಪತ್ರೆಗೆ (Hospital) ಕರೆದೊಯ್ಯುತ್ತಿದ್ದ ವೇಳೆ ಸರ್ಕಾರದ 108 ಅಂಬುಲೆನ್ಸ್‌ನಲ್ಲಿ (108 Ambulance) ಇಂಧನ (Fuel) ಖಾಲಿಯಾಗಿ ದಾರಿ ಮಧ್ಯೆ ರೋಗಿ ಮೃತಪಟ್ಟ ಘಟನೆ ರಾಜಸ್ಥಾನದ (Rajasthan) ಬಾನಸ್‌ವಾರದಲ್ಲಿ ನಡೆದಿದೆ.
ಬಾನಸ್‌ವಾರ ಜಿಲ್ಲೆಯ ದಾನಪುರ್‌ನಲ್ಲಿ ರೋಗಿಯೊಬ್ಬರು ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದರು. ಈ ವೇಳೆ ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗಲು 108ಕ್ಕೆ ಕರೆ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ 108 ರೋಗಿಯನ್ನು ಕರೆದುಕೊಂಡು ಹೊರಟಿದ್ದು, ನಂತರ ದಾರಿ ಮಧ್ಯೆ ಡೀಸೆಲ್ ಖಾಲಿಯಾಗಿ ನಿಂತಿದೆ. ತಕ್ಷಣ ರೋಗಿಯ ಸಂಬಂಧಿಕರು ಅಂಬುಲೆನ್ಸ್ ಅನ್ನು ತಳ್ಳಿಕೊಂಡು ಹೊರಟಿದ್ದಾರೆ. ಈ ಮಧ್ಯೆ ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದ ರೋಗಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದಕ್ಕೆ ಜನ ನನ್ನ ಸೋಲಿಸಿಬಿಟ್ರು: ಎಂಟಿಬಿ ನಾಗರಾಜ್
Ambulance ran out of diesel in Banswara, patient died on the road.
ಇದೀಗ ಡೀಸೆಲ್ ಖಾಲಿಯಾಗಿ ಸಾರ್ವಜನಿಕರು ತಳ್ಳಿಕೊಂಡು ಹೋಗುತ್ತಿರುವ 108 ಅಂಬುಲೆನ್ಸ್‌ನ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಘಟನೆ ಕುರಿತಾಗಿ ಆರೋಗ್ಯ ಅಧಿಕಾರಿ ಜೊತೆ ಕೇಳಿದಾಗ, ಘಟನೆಯ ಬಗ್ಗೆ ನಮಗೆ ತಿಳಿದುಬಂದಿದ್ದು, ವಿಚಾರಣೆ ಆರಂಭಿಸಿದ್ದೇವೆ. ನಾವು ಮೃತಪಟ್ಟ ರೋಗಿಯ ಸಂಬಂಧಿಕರನ್ನು ಭೇಟಿ ಮಾಡುತ್ತೇವೆ. 108 ಅಂಬುಲೆನ್ಸ್ ಅನ್ನು ಖಾಸಗಿ ಏಜೆನ್ಸಿ ನಡೆಸುತ್ತಿದೆ. ಅಂಬುಲೆನ್ಸ್‌ಗಳ ನಿರ್ವಹಣೆಯ ಜವಾಬ್ದಾರಿ ಅವರ ಮೇಲಿದೆ ನಮ್ಮ ಕೈಯಲ್ಲಿ ಏನು ಇಲ್ಲ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಜ್ಯೋತಿಷಿ ಮಾತು ಕೇಳಿ ರೈತನೊಬ್ಬ ನಾಲಿಗೆಗೆ ಹಾವಿನಿಂದ ಕಚ್ಚಿಸಿಕೊಂಡ
Live Tv
[brid partner=56869869 player=32851 video=960834 autoplay=true]
ಡೆಹ್ರಾಡೂನ್: ಶಸ್ತ್ರ ಚಿಕಿತ್ಸೆಗೂ ಮುನ್ನ ರಕ್ತದ ಅನಿವಾರ್ಯವಿದ್ದ ರೋಗಿಗೆ ಡೆಹ್ರಾಡೂನ್‍ನ (Dehradun) ಡೂನ್ ಪಿಜಿ ವೈದ್ಯಕೀಯ ಕಾಲೇಜಿನ (Doon PG Medical College) ಮೂಳೆ ಶಸ್ತ್ರಚಿಕಿತ್ಸಕ (Orthopedic surgeon) ವೈದ್ಯರೊಬ್ಬರು ತಮ್ಮ ರಕ್ತವನ್ನೇ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಗುಂಡಿಯೊಂದಕ್ಕೆ ಬಿದ್ದು, ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಡೆಹ್ರಾಡೂನ್‍ನ ಡೂನ್ ಪಿಜಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಎದೆ, ಎಡಗೈ ಮತ್ತು ತೊಡೆಯ ಮೂಳೆ ಮುರಿದುಕೊಂಡು ರೋಗಿ ನೋವಿನಿಮದ ನರಳುತ್ತಿದ್ದರು. ಹೀಗಾಗಿ ವ್ಯಕ್ತಿಯನ್ನು ಮೂರು ದಿನಗಳ ಕಾಲ ಐಸಿಯುನಲ್ಲಿ ಇರಿಸಿದ ವೈದ್ಯರು ನಂತರ ಅವರಿಗೆ ತೊಡೆಯ ಮೂಳೆ ಶಸ್ತ್ರ ಚಿಕಿತ್ಸೆ ಮಾಡಲು ನಿರ್ಧರಿಸಿದರು. ಆದರೆ ರೋಗಿಗೆ ರಕ್ತದ ಕೊರತೆ ಇದ್ದಿದ್ದರಿಂದ ಆಪರೇಷನ್ ಮಾಡಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಬೇರೆಯವಳು ಕಾಲ್ ಪಿಕ್ ಮಾಡಿದ್ದಕ್ಕೆ ಬಾಯ್‍ಫ್ರೆಂಡ್ ಮನೆಗೆ ಬೆಂಕಿ ಇಟ್ಲು
ನಂತರ ರಕ್ತ ನೀಡಲು ರೋಗಿಯ ಮಗಳು ಮುಂದಾದರು. ಆದರೆ ಕೆಲವು ಆರೋಗ್ಯ ಸಮಸ್ಯೆಗಳಿದ್ದಿದ್ದರಿಂದ ಆಕೆಯಿಂದ ರಕ್ತವನ್ನು ಪಡೆಯಲು ಸಾಧ್ಯವಾಗಲಿಲ್ಲ. ಆಗ ಅದೇ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಕ ಡಾ.ಶಶಾಂಕ್ ಸಿಂಗ್ ತಮ್ಮ ರಕ್ತವನ್ನು ರೋಗಿಗೆ ದಾನ ಮಾಡಲು ನಿರ್ಧರಿಸಿದರು. ಇದರ ಬೆನ್ನಲ್ಲೇ ಆಪರೇಷನ್ ಮಾಡಿ ರೋಗಿಯ ಪ್ರಾಣ ಉಳಿಸಿದ್ದಾರೆ. ಇದನ್ನೂ ಓದಿ: ಸುರೇಶ್ ಗೌಡ ಕೊಲೆಗೆ ಸುಪಾರಿ ಆರೋಪ- 5 ಕೋಟಿ ಡೀಲ್ ನಡೆದಿದೆ ಎಂದ ಮಾಜಿ ಶಾಸಕ
Live Tv
[brid partner=56869869 player=32851 video=960834 autoplay=true]
ರಾಯ್ಪುರ: ಮದ್ಯದ ಅಮಲಿನಲ್ಲಿ ವೈದ್ಯನೊಬ್ಬ (Doctor) ಮಹಿಳಾ (Woman) ರೋಗಿಗೆ (Patient) ಚಿಕಿತ್ಸೆ ನೀಡಿದ್ದಲ್ಲದೇ ಆಕೆಗೆ ಥಳಿಸಿರುವ ಘಟನೆ ಛತ್ತೀಸ್‌ಗಢದ (Chhattisgarh) ಕೋರ್ಬಾ ಜಿಲ್ಲೆಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ. ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆಯ ಆಡಳಿತ ಮಂಡಳಿ ವೈದ್ಯನ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಮಹಿಳೆ ಸುಖಮತಿ ಅವರ ಆರೋಗ್ಯ ತಡರಾತ್ರಿ ಹದಗೆಟ್ಟಿದ್ದ ಕಾರಣ ಅವರ ಮಗ ಶ್ಯಾಮ್ ಕುಮಾರ್ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ಯಲು 108 ಹಾಗೂ 112 ಸಹಾಯವಾಣಿಗೆ ಕರೆ ಮಾಡಿದ್ದರು. ಆದರೆ ಅವರು ಸ್ಥಳ ತಲುಪುವಾಗ ತಡವಾಗುತ್ತದೆ ಎಂದಿದ್ದಾರೆ. ತಮ್ಮ ತಾಯಿಯ ಆರೋಗ್ಯ ಕ್ಷೀಣಿಸುತ್ತಿದ್ದರಿಂದ ಗಾಬರಿಗೊಳಗಾದ ಕುಮಾರ್ ಆಟೋ ರಿಕ್ಷಾದ ಮೂಲಕ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
Korba, Chhattisgarh | A doctor was seen beating a patient allegedly in an inebriated state at the district medical college in Korba. (09.11)
We came to know that doctor was inebriated & have issued a show-cause notice to him: Dean, District Medical college, Korba pic.twitter.com/3QDhYOaxF0
ತಾಯಿಯನ್ನು ಆಸ್ಪತ್ರೆಗೆ ಸೇರಿಸಿದಾಗ ವೈದ್ಯ ಕುಡಿದ ಮತ್ತಿನಲ್ಲಿದ್ದು, ಈ ವೇಳೆ ಆತ ಅನಾರೋಗ್ಯ ಪೀಡಿತ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಕೋಪಗೊಂಡ ಕುಮಾರ್ ವೈದ್ಯನ ನಡೆಯನ್ನು ಪ್ರಶ್ನಿಸಿದ್ದಾನೆ. ಆದರೆ ವೈದ್ಯ ಸುಮ್ಮನಿರುವಂತೆ ಹೇಳಿ ಕುಮಾರ್‌ನ ಬಾಯಿ ಮುಚ್ಚಿಸಿದ್ದಾನೆ. ಇದನ್ನೂ ಓದಿ: ಪ್ಯಾಂಟ್ ಜಿಪ್ ತೆಗೆದು ಬಸ್‍ನಲ್ಲಿ ವೈದ್ಯೆ ಜೊತೆ ಅಸಭ್ಯ ದುರ್ವತನೆ – ಕ್ಲೀನರ್ ಅರೆಸ್ಟ್
ವೈದ್ಯ ಮಹಿಳಾ ರೋಗಿಗೆ ಥಳಿಸುತ್ತಿರುವುದನ್ನು ಅಲ್ಲೇ ಇದ್ದವರೊಬ್ಬರು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ. ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಘಟನೆ ಬೆಳಕಿಗೆ ಬಂದಿದೆ.
ವೈದ್ಯ ಕುಡಿದ ಅಮಲಿನಲ್ಲಿ ರೋಗಿಗೆ ಥಳಿಸಿರುವ ವಿಚಾರ ತಮ್ಮ ಗಮನಕ್ಕೆ ಬಂದಿದ್ದು, ವೈದ್ಯನ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಡೀನ್ ಡಾ. ಅವಿನಾಶ್ ಮೆಶ್ರಾಮ್ ತಿಳಿಸಿದ್ದಾರೆ. ಇದನ್ನೂ ಓದಿ: ಮಾಟಗಾರ್ತಿ ನೀನು, ನನಗೆ ಮದ್ವೆ ಆಗಲು ಬಿಡಲ್ಲ- ಮಗನಿಂದ ತಾಯಿಯ ಹತ್ಯೆ
Live Tv
[brid partner=56869869 player=32851 video=960834 autoplay=true]
ಪಾಟ್ನಾ: ಥೈರಾಯ್ಡ್‌ನಿಂದ (hyroid gland) ಬಳಲುತ್ತಿದ್ದ ಬಿಹಾರದ 72 ವರ್ಷದ ರೈತನ ಗಂಟಲಿನಿಂದ “ತೆಂಗಿನಕಾಯಿ (Coconut) ಗಾತ್ರದ” ಗೆಡ್ಡೆಯನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಿದ್ದಾರೆ.
ಬೇಗುಸರಾಯ್ (Begusarai) ಜಿಲ್ಲೆಯ ನಿವಾಸಿಯಾಗಿರುವ ರೋಗಿ ಕಳೆದ ಆರು ತಿಂಗಳಿನಿಂದ ಉಸಿರಾಟವಾಡಲು ಮತ್ತು ಆಹಾರವನ್ನು ನುಂಗಲು ತೊಂದರೆ ಅನುಭವಿಸುತ್ತಿದ್ದರು. ಸಮಸ್ಯೆ ಎಷ್ಟರಮಟ್ಟಿಗೆ ಉಲ್ಬಣಗೊಂಡಿತು ಎಂದರೆ ಥೈರಾಯ್ಡ್ ಅವರ ಜೀವನದ ಮೇಲೆಯೇ ಅಡ್ಡ ಪರಿಣಾಮ ಬೀರಿತು. ಹೀಗಾಗಿ ಕಳೆದ ತಿಂಗಳು ರೋಗಿಯನ್ನು ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ (Sir Ganga Ram Hospital) ಇಎನ್‍ಟಿ ಮತ್ತು ಹೆಡ್, ನೆಕ್ ಆಂಕೊ ಸರ್ಜರಿ ವಿಭಾಗಕ್ಕೆ ಕರೆದೊಯ್ಯಲಾಯಿತು. ಇದನ್ನೂ ಓದಿ: ಏರ್‌ಬಸ್ ಜೊತೆಗೂಡಿ ವಾಯುಸೇನೆಗೆ ವಿಮಾನ ತಯಾರಿಸಲಿದೆ ಟಾಟಾ ಸಮೂಹ
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಹೆಡ್ ಮತ್ತು ನೆಕ್ ಆಂಕೊ ಸರ್ಜರಿ ತಜ್ಞ ಡಾ ಸಂಗೀತ್ ಅಗರ್ವಾಲ್ ಅವರು, ಹಲವಾರು ವರ್ಷಗಳಿಂದ ನಾನು ಇಂತಹ 250ಕ್ಕೂ ಹೆಚ್ಚು ಬೃಹತ್ ಥೈರಾಯ್ಡ್ ಗೆಡ್ಡೆಗಳ ಪ್ರಕರಣಗಳನ್ನು ನಿಭಾಯಿಸಿದ್ದೇನೆ. ಆದರೆ ತೂಕದ ವಿಚಾರಕ್ಕೆ ಬಂದರೆ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಗಡ್ಡೆಯನ್ನು ಹೊರತೆಗೆದಿದ್ದೇನೆ. ಸಾಮಾನ್ಯವಾಗಿ ಚಿಟ್ಟೆ-ಆಕಾರದ ಥೈರಾಯ್ಡ್ ಗ್ರಂಥಿ 10-15 ಗ್ರಾಂ ತೂಕವಿರುತ್ತದೆ ಮತ್ತು 3-4 ಸೆಂ ಗಾತ್ರವನ್ನು ಹೊಂದಿರುತ್ತದೆ. ಆದರೆ ಈ ವ್ಯಕ್ತಿಯ ಗಂಟಲಿನಿಂದ ತೆಗೆದ ಗಡ್ಡೆ 18-20 ಸೆಂ.ಮೀ ಗಾತ್ರದ ತೆಂಗಿನಕಾಯಿಗಿಂತ ದೊಡ್ಡದಾಗಿದೆ. ಗಡ್ಡೆ ತೆಗೆಯುವಾಗ ರೋಗಿಯ ಧ್ವನಿಯನ್ನು ಉಳಿಸುವುದು ಹೇಗೆ ಎಂಬುವುದು ದೊಡ್ಡ ಸವಾಲಾಗಿತ್ತು. ಆದರೆ ಅದೃಷ್ಟವಶಾತ್ ಧ್ವನಿ ವ್ಯಕ್ತಿಗೆ ಮತ್ತೆ ಮರಳಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಸ್ಕ್ ತೆಕ್ಕೆಗೆ ಟ್ವಿಟ್ಟರ್ – ಸಿಇಒ ಪರಾಗ್ ಅಗರ್‌ವಾಲ್ ಸೇರಿದಂತೆ ಪ್ರಮುಖರು ವಜಾ
Live Tv
[brid partner=56869869 player=32851 video=960834 autoplay=true]