Tag: Patiala Jail

  • ಸರ್ವಾಧಿಕಾರದ ವಿರುದ್ಧ ರಾಹುಲ್‌ ಗಾಂಧಿ ಕ್ರಾಂತಿ – ಜೈಲಿನಿಂದ ಬರ್ತಿದ್ದಂತೆ ಬಿಜೆಪಿ ವಿರುದ್ಧ ಸಿಧು ಕಿಡಿ

    ಸರ್ವಾಧಿಕಾರದ ವಿರುದ್ಧ ರಾಹುಲ್‌ ಗಾಂಧಿ ಕ್ರಾಂತಿ – ಜೈಲಿನಿಂದ ಬರ್ತಿದ್ದಂತೆ ಬಿಜೆಪಿ ವಿರುದ್ಧ ಸಿಧು ಕಿಡಿ

    ಚಂಡೀಗಢ: 34 ವರ್ಷದ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ 1 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಪಂಜಾಬ್‌ ಕಾಂಗ್ರೆಸ್‌ (Punjab Congress) ಮಾಜಿ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು (Navjot Singh Sidhu) 10 ತಿಂಗಳ ನಂತರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಶನಿವಾರ ಜೈಲಿನಿಂದ ಹೊರಬರುತ್ತಿದ್ದಂತೆಯೇ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಧು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ʻʻಪ್ರಜಾಪ್ರಭುತ್ವವು ಸರಪಣಿಯಲ್ಲಿ ಬಂಧಿತವಾಗಿದೆʼʼ ಎಂದು ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಕಿಡಿಕಾರಿದ್ದಾರೆ. ಮುಂದುವರಿದು ಈ ದೇಶದಲ್ಲಿ ಸರ್ವಾಧಿಕಾರ ಬಂದಾಗಲೆಲ್ಲಾ ಒಂದು ಕ್ರಾಂತಿಯೂ ಬಂದಿದೆ. ಈ ಬಾರಿ ರಾಹುಲ್‌ ಗಾಂಧಿ (Rahul Gandhi) ಅವರ ರೂಪದಲ್ಲಿ ಕ್ರಾಂತಿ ಬಂದಿದೆ, ಅವರು ಸರ್ಕಾರವನ್ನ ಸಮರ್ಥವಾಗಿ ಎದುರಿಸಲಿದ್ದಾರೆ’ ಎಂದು ಹೊಗಳಿದ್ದಾರೆ. ಇದನ್ನೂ ಓದಿ: ಅತ್ಯಂತ ವೇಗದಲ್ಲಿ ಚಲಿಸುವ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಮೋದಿ ಚಾಲನೆ

    ಆಮ್ ಆದ್ಮಿ ಪಕ್ಷದ ಸರ್ಕಾರವಿರುವ ಪಂಜಾಬ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ. ಬಿಜೆಪಿಯವರು ಪಂಜಾಬ್ ಅನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ನಾನು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಎಲ್ಲ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಗೋಡೆಯಂತೆ ನಿಲ್ಲುತ್ತೇನೆ ಎಂದು ಸಿಧು ಹೇಳಿದ್ದಾರೆ. ಇದನ್ನೂ ಓದಿ: 10 ತಿಂಗಳ ನಂತ್ರ ನವಜೋತ್‌ ಸಿಂಗ್‌ ಸಿಧು ಜೈಲಿನಿಂದ ಬಿಡುಗಡೆ – ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ

    ನೀವು ಪಂಜಾಬ್‌ನ ಜನತೆಯನ್ನು ಏಕೆ ಮೂರ್ಖರನ್ನಾಗಿ ಮಾಡುತ್ತಿದ್ದೀರಿ? ಎಂದು ನನ್ನ ಕಿರಿಯ ಸಹೋದರ ಭಗವಂತ್ ಮಾನ್ (ಪಂಜಾಬ್ ಸಿಎಂ) ಅವರನ್ನು ಕೇಳಲು ಬಯಸುತ್ತೇನೆ. ಅನೇಕ ದೊಡ್ಡ-ದೊಡ್ಡ ಭರವಸೆಗಳನ್ನು ನೀಡಿದ್ದೀರಿ, ಹಾಸ್ಯ ಚಟಾಕಿಗಳನ್ನ ಸಿಡಿಸಿದ್ದೀರಿ. ಆದರೆ ಇಂದು ನೀವು ಕೇವಲ ಕಾಗದದ ಮೇಲಿನ ಸಿಎಂ ಅಷ್ಟೇ ಎಂದು ಟೀಕಿಸಿದ್ದಾರೆ.

    ಸಿಧು ಜೈಲಿಗೆ ಹೋಗಿದ್ದು ಏಕೆ?
    1988ರಲ್ಲಿ ವೃದ್ಧರೊಬ್ಬರ ಮೇಲೆ ರಸ್ತೆಯಲ್ಲಿ ದಾಂಧಲೆ ನಡೆಸಿ ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಗುರ್ನಮ್ ಮೃತಪಟ್ಟಿದ್ದರು. ಸ್ಥಳೀಯ ಕೋರ್ಟ್‌, ಹೈಕೋರ್ಟ್‌ ಬಳಿಕ ಈ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಸುಪ್ರೀಂ ನ್ಯಾಯಮೂರ್ತಿಗಳಾದ ಜೆ.ಚೆಲಮೇಶ್ವರ ಮತ್ತು ಸಂಜಯ್ ಕಿಶನ್ ಕೌಲ್ ಅವರನ್ನೊಳಗೊಂಡ ನ್ಯಾಯಪೀಠ 2018ರಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 323ರ ಅಡಿಯಲ್ಲಿ ಅಪರಾಧಿ ಎಂದು ತೀರ್ಪು ನೀಡಿ 1,000 ರೂಪಾಯಿ ದಂಡ ವಿಧಿಸಿತ್ತು. ಆದರೆ ಜೈಲು ಶಿಕ್ಷೆಯಿಂದ ಸಿಧುಗೆ ವಿನಾಯಿತಿ ನೀಡಲಾಗಿತ್ತು. ಜೈಲು ಶಿಕ್ಷೆಯಿಂದ ವಿನಾಯಿತಿ ನೀಡಿದ್ದನ್ನು ಪ್ರಶ್ನಿಸಿ ಸಂತ್ರಸ್ತನ ಕುಟುಂಬದ ಸದಸ್ಯರು ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ 1 ವರ್ಷ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿತ್ತು. ಆದರೆ ಉತ್ತಮ ನಡವಳಿಕೆ ಕಾರಣದಿಂದಾಗಿ ಸಿಧು 2 ತಿಂಗಳು ಮುಂಚಿತವಾಗಿಯೇ ಬಿಡುಗಡೆಗೊಂಡಿದ್ದಾರೆ.

  • 10 ತಿಂಗಳ ನಂತ್ರ ನವಜೋತ್‌ ಸಿಂಗ್‌ ಸಿಧು ಜೈಲಿನಿಂದ ಬಿಡುಗಡೆ – ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ

    10 ತಿಂಗಳ ನಂತ್ರ ನವಜೋತ್‌ ಸಿಂಗ್‌ ಸಿಧು ಜೈಲಿನಿಂದ ಬಿಡುಗಡೆ – ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ

    ನವದೆಹಲಿ: 34 ವರ್ಷದ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ 1 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಕ್ರಿಕೆಟಿಗ, ಪಂಜಾಬ್‌ ಕಾಂಗ್ರೆಸ್‌ (Punjab Congress) ಮಾಜಿ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು (Navjot Singh Sidhu) 10 ತಿಂಗಳ ನಂತರ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ.

    ಸಿಧು ಶನಿವಾರ ಬಿಡುಗಡೆಯಾಗುವುದಾಗಿ ಪಂಜಾಬ್‌ ಅಧಿಕಾರಿಗಳು ತಿಳಿಸಿದ್ದು, ಬೆಳಗ್ಗೆ ಸಿಧು ಅಧಿಕೃತ ಟ್ಬಿಟ್ಟರ್‌ ಖಾತೆಯಿಂದ ಟ್ವೀಟ್‌ ಮಾಡಲಾಗಿದೆ. ಸಿಧು ಜೈಲಿನಿಂದ ಹೊರಗೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ ಟ್ವೀಟ್‌ ಮೂಲಕ ತಿಳಿಸಲಾಗಿದೆ. ಇದನ್ನೂ ಓದಿ: ಸಿಧು ಈಗ ಖೈದಿ ನಂ.241383 – 8 ಕೊಲೆ ಪಾತಕಿಗಳಿರುವ ಸೆಲ್‍ನಲ್ಲಿ ವಾಸ

    ಈಗಾಗಲೇ ಸಿಧು ಬೆಂಬಲಿಗರು ಪಟಿಯಾಲ ಜೈಲಿನ (Patiala Jail) ಮುಂಭಾಗದಲ್ಲಿ ಭವ್ಯ ಸ್ವಾಗತ ಕೋರಲು ಕಾದು ಕುಳಿತಿದ್ದಾರೆ. ಡೋಲು ವಾದ್ಯಗಳ ಸಿದ್ಧತೆ ಮಾಡಿಕೊಂಡಿದ್ದು, ವಿವಿಧೆಡೆ ಪೋಸ್ಟರ್‌ ಸಹ ಅಳವಡಿಸಿದ್ದಾರೆ.

    1988ರಲ್ಲಿ ವೃದ್ಧರೊಬ್ಬರ ಮೇಲೆ ರಸ್ತೆಯಲ್ಲಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ (Supreme Court) 1 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಸಿಧು ಅವರನ್ನು ಉತ್ತಮ ನಡವಳಿಕೆಯ ಕಾರಣದಿಂದ ಬೇಗ ಬಿಡುಗಡೆ ಮಾಡುತ್ತಿದ್ದಾರೆ ಎನ್ನಲಾಗಿದೆ.

    ಈ ಸಂಬಂಧ ಸಿಧು ಪರ ವಕೀಲ ಹೆಚ್‌.ಪಿ.ಎಸ್‌ ವರ್ಮಾ ಮಾತನಾಡಿ, ರಾಜ್ಯದ ಸಾಮಾನ್ಯ ಉಪಶಮನ ನೀತಿ ಅಡಿಯಲ್ಲಿ ಕಾಂಗ್ರೆಸ್‌ ನಾಯಕ ಸಿಧು ಅವರನ್ನ ಬಿಡುಗಡೆ ಮಾಡಲಾಗುತ್ತಿದೆ. ಸಿಧು ಅವರ ಬಿಡುಗಡೆ ಅವಧಿ ಮೇ ತಿಂಗಳಿಗೆ ನಿಗದಿಯಾಗಿತ್ತು. ಆದರೆ ಉತ್ತಮ ನಡವಳಿಕೆ ಹೊಂದಿರುವ ಎಲ್ಲಾ ಕೈದಿಗಳಿಗೆ ಶಿಕ್ಷೆಯ ಅವಧಿಯನ್ನ ಕಡಿತಗೊಳಿಸಲಾಗುತ್ತದೆ. ಹಾಗಾಗಿ ಸಿಧು ಅವರು 2 ತಿಂಗಳು ಮುಂಚಿತವಾಗಿಯೇ ಬಿಡುಗಡೆಯಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಏನಿದು ಪ್ರಕರಣ?
    1988ರಲ್ಲಿ ವೃದ್ಧರೊಬ್ಬರ ಮೇಲೆ ರಸ್ತೆಯಲ್ಲಿ ದಾಂಧಲೆ ನಡೆಸಿ ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಗುರ್ನಮ್ ಮೃತಪಟ್ಟಿದ್ದರು. ಸ್ಥಳೀಯ ಕೋರ್ಟ್‌, ಹೈಕೋರ್ಟ್‌ ಬಳಿಕ ಈ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಸುಪ್ರೀಂ ನ್ಯಾಯಮೂರ್ತಿಗಳಾದ ಜೆ.ಚೆಲಮೇಶ್ವರ ಮತ್ತು ಸಂಜಯ್ ಕಿಶನ್ ಕೌಲ್ ಅವರನ್ನೊಳಗೊಂಡ ನ್ಯಾಯಪೀಠ 2018ರಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 323ರ ಅಡಿಯಲ್ಲಿ ಅಪರಾಧಿ ಎಂದು ತೀರ್ಪು ನೀಡಿ 1,000 ರೂಪಾಯಿ ದಂಡ ವಿಧಿಸಿತ್ತು. ಆದರೆ ಜೈಲು ಶಿಕ್ಷೆಯಿಂದ ಸಿಧುಗೆ ವಿನಾಯಿತಿ ನೀಡಲಾಗಿತ್ತು. ಇದನ್ನೂ ಓದಿ: ಕಾಂಗ್ರೆಸ್‌ ಸೇರಲು ಪ್ರಶಾಂತ್‌ ಕಿಶೋರ್‌ ನನ್ನ 70 ಬಾರಿ ಭೇಟಿಯಾಗಿದ್ದಾರೆ: ನವಜೋತ್‌ ಸಿಧು

    ಜೈಲು ಶಿಕ್ಷೆಯಿಂದ ವಿನಾಯಿತಿ ನೀಡಿದ್ದನ್ನು ಪ್ರಶ್ನಿಸಿ ಸಂತ್ರಸ್ತನ ಕುಟುಂಬದ ಸದಸ್ಯರು ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ 1 ವರ್ಷ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿತ್ತು.