Tag: Pathan

  • ‘ಪಠಾಣ್’ ಬಾಯ್ಕಾಟ್ ಗ್ಯಾಂಗ್ ಬಗ್ಗೆ ಅನುಮಾನವಿದೆ :  ವಿವೇಕ್ ಅಗ್ನಿಹೋತ್ರಿ

    ‘ಪಠಾಣ್’ ಬಾಯ್ಕಾಟ್ ಗ್ಯಾಂಗ್ ಬಗ್ಗೆ ಅನುಮಾನವಿದೆ : ವಿವೇಕ್ ಅಗ್ನಿಹೋತ್ರಿ

    ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ (Pathan) ಸಿನಿಮಾದ ಗೆಲುವನ್ನು ಅನೇಕರು, ಅನೇಕ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಬಾಲಿವುಡ್ ಸಿನಿಮಾ ರಂಗಕ್ಕೆ ಚೈತನ್ಯ ತುಂಬಿದ ಸಿನಿಮಾವಿದು ಎಂದು ಕೆಲವರು ಪ್ರಶಂಸೆ ಮಾಡುತ್ತಿದ್ದರೆ, ಶಾರುಖ್ ವಿರೋಧಿಗಳು ಈ ಗೆಲುವನ್ನು ಅರ್ಥೈಸುತ್ತಿರುವ ಪರಿಯೇ ವಿಚಿತ್ರವಿದೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಬಾಯ್ಕಾಟ್ (Boycott) ಪರಿಯನ್ನೇ ಅವರು ಪ್ರಶ್ನೆ ಮಾಡಿದ್ದಾರೆ.

    ಪಠಾಣ್ ಸಿನಿಮಾ ಅತೀ ಹೆಚ್ಚು ಜನರಿಗೆ ತಲುಪುವಂತೆ ಮಾಡಿದ್ದು, ಸಿನಿಮಾದ ಕಂಟೆಂಟ್ ಗಿಂತಲೂ ವಿರೋಧಿಗಳು ನಡೆಸಿದ ಬಾಯ್ಕಾಟ್ ಎನ್ನುವ ಮಾತಿದೆ. ಪಠಾಣ್ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎಂದು ಹಲವು ಪ್ರತಿಭಟನೆಗಳು ಕೂಡ ನಡೆದವು. ಈ ಬಾಯ್ಕಾಟ್ ಸಿನಿಮಾಗೆ ವರವಾಯಿತು ಎಂದು ಹೇಳಲಾಗುತ್ತಿದೆ. ಇದೀಗ ಆ ಬಾಯ್ಕಾಟ್ ಬಗ್ಗೆಯೇ ಅಗ್ನಿಹೋತ್ರಿ ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಸಮಂತಾ ಬಳಿಕ ವಿಚಿತ್ರ ಕಾಯಿಲೆ ಬಗ್ಗೆ ಬಾಯ್ಬಿಟ್ಟ ಅನುಷ್ಕಾ ಶೆಟ್ಟಿ

    ‘ನಿಜವಾಗಿಯೂ ಬಾಯ್ಕಾಟ್ ಮಾಡಿದ್ದು ಯಾರು? ಶಾರುಖ್ ಖಾನ್ ಅವರ ಗ್ಯಾಂಗೇ ಈ ರೀತಿಯಲ್ಲಿ ಪ್ರಚಾರ ಮಾಡಿತಾ ಎನ್ನುವ ಅನುಮಾನ ನನ್ನದು. ಬಾಯ್ಕಾಟ್ ಎನ್ನುವುದು ಸಿನಿಮಾ ಪ್ರಚಾರದ ಒಂದು ಭಾಗ ಆಗಿತ್ತಾ? ‘ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಪಠಾಣ್ ಗೆಲುವನ್ನು ತಾವು ಗೆಲುವು ಎಂದು ಕರೆಯುವುದಿಲ್ಲ ಎಂದೂ ಅವರು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಪಠಾಣ್’ ಗಳಿಕೆ 901 ಕೋಟಿ : ಚಿತ್ರತಂಡದಿಂದ ಅಧಿಕೃತ ಘೋಷಣೆ

    ‘ಪಠಾಣ್’ ಗಳಿಕೆ 901 ಕೋಟಿ : ಚಿತ್ರತಂಡದಿಂದ ಅಧಿಕೃತ ಘೋಷಣೆ

    ಶಾರುಖ್ ಖಾನ್ (Shahrukh Khan) ನಟನೆಯ ‘ಪಠಾಣ್’ (Pathan) ಸಿನಿಮಾ ಅಚ್ಚರಿ ಎನ್ನುವಂತೆ ಬಾಕ್ಸ್ ಆಫೀಸಿನಲ್ಲಿ ಗೆಲುವು ದಾಖಲಿಸುತ್ತಿದೆ. ಜನವರಿ 25ರಂದು ವಿಶ್ವದಾದ್ಯಂತ ಬಿಡುಗಡೆ ಆಗಿರುವ ಸಿನಿಮಾ, ಈವರೆಗೂ 901 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಭಾರತವೊಂದರಲ್ಲೇ 558.40  ಕೋಟಿ ಹಣ ಬಾಚಿದ್ದರೆ, ವಿದೇಶಗಳಲ್ಲಿ 342.60 ಕೋಟಿ ಲಾಭ ಮಾಡಿದೆಯಂತೆ. ಈ ಮಾಹಿತಿಯನ್ನು ಸ್ವತಃ ನಿರ್ಮಾಣ ಸಂಸ್ಥೆಯೇ ನೀಡಿದೆ. ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

    ನಾನಾ ಕಾರಣಗಳಿಂದ ಈ ಸಿನಿಮಾ ಬಾ‍ಕ್ಸ್ ಆಫೀಸಿನಲ್ಲಿ ಸೋಲಲಿದೆ ಎಂದು ವಿಶ್ಲೇಷಣೆ ಮಾಡಲಾಗಿತ್ತು. ಈ ಸಿನಿಮಾದ ಹಾಡೊಂದರಲ್ಲಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಹಿಂದೂಪರ ಸಂಘಟನೆಗಳು ‘ಬಾಯ್ಕಾಟ್ ಪಠಾಣ್’ ಅಭಿಯಾನ ಶುರು ಮಾಡಿದ್ದವು. ದೇಶವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದವರ ಜೊತೆ ದೀಪಿಕಾ ಪಡುಕೋಣೆ  (Deepika Padukone) ಕಾಣಿಸಿಕೊಂಡಿದ್ದರು ಎನ್ನುವ ಕಾರಣಕ್ಕೂ ಸಿನಿಮಾವನ್ನು ವಿರೋಧಿಸಲಾಯಿತು. ಶಾರುಖ್ ವಿರುದ್ಧವೂ ಪ್ರತಿಭಟನೆಗಳು ನಡೆದಿದ್ದವು. ಈ ಎಲ್ಲ ಕಾರಣದಿಂದಾಗಿ ಸಿನಿಮಾ ಮಕಾಡೆ ಮಲಗಲಿದೆ ಎಂದು ಹೇಳಲಾಗಿತ್ತು. ಇದನ್ನೂ ಓದಿ:`ಕಾಂತಾರ’ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿ ಗೆಲ್ಲಲು ಅಸಲಿ ಕಾರಣ ಬಿಚ್ಚಿಟ್ಟ ರಿಷಬ್ ಶೆಟ್ಟಿ

    ಆದರೆ, ಎಲ್ಲರ ನಿರೀಕ್ಷೆಯನ್ನೂ ಮೀರಿ ಈ ಸಿನಿಮಾ ಗೆದ್ದಿದೆ. ಬಿಡುಗಡೆಯಾದ ಬಹುತೇಕ ಚಿತ್ರಮಂದಿರಗಳಲ್ಲಿ ಈಗಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರಮಾಣದಲ್ಲಿ  ಹಣ ಗಳಿಕೆ ಮಾಡಿದ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಯೂ ಇದರದ್ದು. ಈ ಕುರಿತು ಶಾರುಖ್ ಕೂಡ ಮಾತನಾಡಿದ್ದು, ಒಳ್ಳೆಯ ಸಿನಿಮಾಗಳಿಗೆ ಜಯ ಇದ್ದೆ ಇರುತ್ತದೆ ಎಂದಿದ್ದಾರೆ. ಸಿನಿಮಾ ಗೆಲ್ಲಿಸಿದವರಿಗೆ ಧನ್ಯವಾದ ಕೂಡ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಂಸತ್ ನಲ್ಲಿ ‘ಪಠಾಣ್’ ಸಿನಿಮಾ ಹೊಗಳಿದ್ರಾ ಪ್ರಧಾನಿ ಮೋದಿ?

    ಸಂಸತ್ ನಲ್ಲಿ ‘ಪಠಾಣ್’ ಸಿನಿಮಾ ಹೊಗಳಿದ್ರಾ ಪ್ರಧಾನಿ ಮೋದಿ?

    ಪ್ರಧಾನಿ ನರೇಂದ್ರ ಮೋದಿ (Narendra Modi) ‘ಪಠಾಣ್’ (Pathan) ಸಿನಿಮಾವನ್ನು ಪರೋಕ್ಷವಾಗಿ ಸಂಸತ್ ನಲ್ಲಿ ಹೊಗಳಿದ್ದಾರೆ ಎನ್ನುವ ವಿಡಿಯೋ ಸಖತ್ ವೈರಲ್ ಆಗಿದೆ.  ಸಂಸತ್ ನಲ್ಲಿ ಅವರು ಮಾತನಾಡುತ್ತಾ, ‘ದಶಕಗಳ ನಂತರ ಶ್ರೀನಗರದಲ್ಲಿ ಥಿಯೇಟರ್ (Theatre) ಹೌಸ್ ಫುಲ್ ಕಂಡಿದೆ’ ಎಂದು ಹೇಳಿದ್ದಾರೆ. ಸದ್ಯ ಶ್ರೀನಗರದಲ್ಲಿ (Srinagar) ಪಠಾಣ್ ಸಿನಿಮಾ ಪ್ರದರ್ಶನ ಆಗುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ ಎಂದು ಬಣ್ಣಿಸಲಾಗುತ್ತಿದೆ.

    ಶಾರುಖ್ (Shah Rukh Khan) ಅಭಿಮಾನಿಗಳು ಮೋದಿ ಅವರ ಮಾತುಗಳನ್ನು ‘ಪಠಾಣ್’ ಸಿನಿಮಾ ಹಿನ್ನೆಲೆಯಲ್ಲೇ ಆಡಿದ್ದು ಎಂದು ಚರ್ಚೆ ಮಾಡುತ್ತಿದ್ದರೆ, ಮೋದಿ ಹಿಂಬಾಲಕರು ಶ್ರೀನಗರ ಇದೀಗ ಶಾಂತವಾಗಿ, ನೆಮ್ಮದಿಯಾಗಿ ಸಿನಿಮಾ ನೋಡುವಂತಹ ವಾತಾವರಣ ನಿರ್ಮಾಣವಾಗಿದೆ ಎನ್ನುವ ಅರ್ಥ ವಿವರಿಸುತ್ತಿದ್ದಾರೆ. ಮೋದಿ ಆಡಿದ ಆ ಮಾತು ಪಠಾಣ್ ಸಿನಿಮಾಗಿಂತಲೂ ಸಖತ್ ಫೇಮಸ್ ಕೂಡ ಆಗಿದೆ. ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ನಡುವೆ ಕಾವಿತೊಟ್ಟು ಅಚ್ಚರಿ ಮೂಡಿಸಿದ ಮಿಲ್ಕಿ ಬ್ಯೂಟಿ

    ಪಠಾಣ್ ಸಿನಿಮಾದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ ಎನ್ನುವ ಕಾರಣಕ್ಕಾಗಿ ಬಾಯ್ಕಾಟ್ ಪಠಾಣ್ ಅಭಿಯಾನ ಶುರುವಾಗಿತ್ತು. ಕೆಲವು ಕಡೆ ಸಿನಿಮಾ ಪ್ರದರ್ಶನಕ್ಕೂ ಅಡೆತಡೆ ನೀಡಲಾಯಿತು. ಎಲ್ಲವನ್ನೂ ದಾಟಿಕೊಂಡು ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಗೆದ್ದಿದೆ. ಇನ್ನೂ ಹಲವು ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಬಾಯ್ಕಾಟ್ ನಡುವೆಯೂ ಸಿನಿಮಾ ಗೆದ್ದಿರುವುದಕ್ಕೆ ಮತ್ತೊಂದು ಸುತ್ತಿನ ಚರ್ಚೆ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರಕಾಶ್ ರೈ ‘ಅರ್ಬನ್ ನಕ್ಸಲ್’ : ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್

    ಪ್ರಕಾಶ್ ರೈ ‘ಅರ್ಬನ್ ನಕ್ಸಲ್’ : ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್

    ಹೆಸರಾಂತ ನಟ ಪ್ರಕಾಶ್ ರೈ (Prakash Rai) ಗೆ ದಿ ಕಾಶ್ಮೀರ್ ಫೈಲ್ಸ್ (The Kashmir Files)ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅರ್ಬನ್ ನಕ್ಸಲ್ (Urban Naxal) ಎಂದು ಕರೆದಿದ್ದಾರೆ. ಅಲ್ಲದೇ, ಅಂಧಕಾರ್ ರಾಜ್ ಎಂದೂ ಅವರನ್ನು ಸಂಬೋಧಿಸಿದ್ದಾರೆ. ಈ ಹಿಂದಿ ಪ್ರಕಾಶ್ ರೈ ಪಠಾಣ್ (Pathan) ಸಿನಿಮಾದ ಬಗ್ಗೆ ಮಾತನಾಡುತ್ತಾ, ‘ಪಠಾಣ್ ಸಿನಿಮಾ 700 ಕೋಟಿ ಸಂಪಾದಿಸಿದೆ. ಕೆಲವರು ಈ ಸಿನಿಮಾವನ್ನು ಬ್ಯಾನ್ ಮಾಡಲು ಹೊರಟಿದ್ದರು. ಮೂರ್ಖರು, ಮತಾಂಧರು ಪಠಾಣ್ ಸಿನಿಮಾಗೆ ತೊಂದರೆ ಕೊಟ್ಟರು. ಮೋದಿ (Modi) ಸಿನಿಮಾ 30 ಕೋಟಿಯೂ ಕಲೆಕ್ಷನ್ ಮಾಡಲಿಲ್ಲ. ಅವರು ಬೊಗಳುತ್ತಾರೆ ಕಚ್ಚುವುದಿಲ್ಲ’ ಎಂದು ಟೀಕೆ ಮಾಡಿದ್ದರು.

    ಮುಂದುವರೆದು ಮಾತನಾಡಿದ್ದ ಪ್ರಕಾಶ್ ರೈ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನೂ ಟೀಕಿಸಿದ್ದರು. ಭಾಸ್ಕರ್ ಪ್ರಶಸ್ತಿಯನ್ನೂ ಪಡೆಯದವರು ಆಸ್ಕರ್ ಪ್ರಶಸ್ತಿ ಕೇಳುತ್ತಿದ್ದಾರೆ ಎಂದು ಪರೋಕ್ಷವಾಗಿ ವಿವೇಕ್ ಅಗ್ನಿಹೋತ್ರಿಯನ್ನು ಕಾಲೆಳೆದಿದ್ದರು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಅಂತಾರಾಷ್ಟ್ರೀಯ ಜ್ಯೂರಿಗಳು ತೆಗಳಿದ್ದರು ಎಂದು ನೆನಪಿಸಿದ್ದರು. ಹೀಗಾಗಿ ಅಗ್ನಿಹೋತ್ರಿ ಮತ್ತೆ ಪ್ರಕಾಶ್ ರೈಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾ ರ್ಥ್ -ಕಿಯಾರಾ ಜೋಡಿ

    ಸೋಷಿಯಲ್ ಮೀಡಿಯಾದಲ್ಲಿ ಪ್ರಕಾಶ್ ರೈ ಅವರ ಬಗ್ಗೆ ಬರೆದಿರುವ ವಿವೇಕ್ ಅಗ್ನಿಹೋತ್ರಿ, ‘ಅರ್ಬನ್ ನಕ್ಸಲ್ ಗಳ ನಿದ್ದೆ ಕೆಡಿಸಿದೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ. ಚಿತ್ರವು ಬಿಡುಗಡೆಯಾಗಿ ಒಂದು ವರ್ಷ ಕಳೆದರೂ, ಓರ್ವ ವ್ಯಕ್ತಿಯ ನಿದ್ದೆ ಕೆಡಿಸಿದೆ ಆ ಸಿನಿಮಾ. ಭಾಸ್ಕರ್ ಪ್ರಶಸ್ತಿಯು ನಿಮ್ಮ ಬಳಿಯೇ ಇರುವಾಗ  ಅದನ್ನು ನಾನು ಪಡೆಯಲು ಸಾಧ್ಯವಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

    ಪಠಾಣ್ ಸಿನಿಮಾದ ಗೆಲುವಿನ ಹಿನ್ನೆಲೆಯಲ್ಲಿ ಶಾರುಖ್ ಖಾನ್ ಪರವಾಗಿ ಪ್ರಕಾಶ್ ರೈ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಭಕ್ತರು ಎಷ್ಟೇ ಚೀರಾಡಿದರೂ ಸಿನಿಮಾ ಗೆದ್ದಿತು. ಆದರೆ, ಮೋದಿ ಸಿನಿಮಾ ಮೂವತ್ತು ಕೋಟಿ ರೂಪಾಯಿಯನ್ನೂ ಮಾಡಲಿಲ್ಲ ಎಂದು ಕಾಲೆಳೆದಿದ್ದರು. ಪ್ರಕಾಶ್ ರೈ ಅವರ ಈ ಬರಹ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು. ಇದೀಗ ವಿವೇಕ್ ಅಗ್ನಿಹೋತ್ರಿ ತಿರುಗೇಟು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಾಕಿಸ್ತಾನದಲ್ಲಿ ‘ಪಠಾಣ್’ ಕ್ರೇಜ್ : ಅಕ್ರಮವಾಗಿ ಪ್ರದರ್ಶನ, ಕಾನೂನು ಕ್ರಮ

    ಪಾಕಿಸ್ತಾನದಲ್ಲಿ ‘ಪಠಾಣ್’ ಕ್ರೇಜ್ : ಅಕ್ರಮವಾಗಿ ಪ್ರದರ್ಶನ, ಕಾನೂನು ಕ್ರಮ

    ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಕ್ರೇಜ್ ಬರೀ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಹಲವು ದೇಶಗಳಲ್ಲಿ ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸಿಗೆ ಕೋಟಿ ಕೋಟಿ ಹಣ ಹರಿದು ಬರುತ್ತಿದೆ. ಈವರೆಗೂ ಏಳುನೂರು ಕೋಟಿ ಹಣ ಬಂದಿದೆ ಎಂದು ಅಂದಾಜಿಸಲಾಗಿದೆ. ಈ ಸಿನಿಮಾವನ್ನು ಪಾಕಿಸ್ತಾನದಲ್ಲಿ ನೋಡಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿತ್ತು. ಆದರೆ, ಅಲ್ಲಿ ಚಿತ್ರ ಬಿಡುಗಡೆ ಆಗದೇ ಇರುವ ಕಾರಣಕ್ಕಾಗಿ ಅಭಿಮಾನಿಗಳು ನಿರಾಸೆಯಾಗಿದ್ದರು.

    ಅಭಿಮಾನಿಗಳ ತುಡಿತವನ್ನು ಗಮನಿಸಿದ್ದ ಕರಾಚಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಪಠಾಣ್ ಸಿನಿಮಾದ ಪ್ರದರ್ಶನಕ್ಕೆ ಮುಂದಾಗಿದ್ದರು. ಆನ್ ಲೈನ್ ನಲ್ಲಿ ಟಿಕೆಟ್ ಒಂದಕ್ಕೆ 900 ರೂಪಾಯಿ ದರ ನಿಗಧಿ ಮಾಡಿ, ಪ್ರದರ್ಶನ ಕೂಡ ನಡೆಸಿದ್ದರು. ಈ ಮಾಹಿತಿ ಅಲ್ಲಿನ ಸೆನ್ಸಾರ್ ಮಂಡಳಿಗೆ ಗೊತ್ತಾಗುತ್ತಿದ್ದಂತೆಯೇ ಪ್ರದರ್ಶನ ನಿಲ್ಲಿಸಿ, ಅವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಆಶಿಕಾ ರಂಗನಾಥ್‌ಗೆ ಮನಸಾರೆ ಹಾರೈಸಿದ ಜ್ಯೂ.ಎನ್‌ಟಿಆರ್‌

    ಹೊರ ದೇಶಗಳ ಚಿತ್ರಗಳು ಅಲ್ಲಿನ ಸೆನ್ಸಾರ್ ಮಂಡಳಿ ಮುಂದೆ ಬಾರದೇ ಪ್ರದರ್ಶನ ಆಗುವಂತಿಲ್ಲ. ಅಕ್ರಮವಾಗಿ ಪ್ರದರ್ಶಿಸಿದರೆ ದಂಡ ಮತ್ತು ಜೈಲು ಶಿಕ್ಷೆ ಕೂಡ ಇದೆ. ಕೆಲವು ವರ್ಷಗಳಿಂದ ಭಾರತದ ಸಿನಿಮಾಗಳು ಪಾಕಿಸ್ತಾನದಲ್ಲಿ ಬಿಡುಗಡೆ ಆಗುತ್ತಿಲ್ಲ. ಅಲ್ಲಿನ ಸೆನ್ಸಾರ್ ಮಂಡಳಿಯು ಭಾರತದ ಚಿತ್ರಗಳಿಗೆ ಅನುಮತಿ ನೀಡುತ್ತಿಲ್ಲ. ಹೀಗಾಗಿ ಇವರ ಕಣ್ಣು ತಪ್ಪಿಸಿ ಪಠಾಣ್ ಸಿನಿಮಾವನ್ನು ಪ್ರದರ್ಶನ ಮಾಡಲಾಗಿದೆ.

    ಈ ಸಿನಿಮಾ ಬಾಂಗ್ಲಾದೇಶದಲ್ಲೂ ರಿಲೀಸ್ ಆಗದೇ ಇರುವ ಕಾರಣಕ್ಕಾಗಿ, ಅಲ್ಲಿನ ಶಾರುಖ್ ಅಭಿಮಾನಿಗಳು ಭಾರತದ ತ್ರಿಪುರಕ್ಕೆ ಬಂದು ಪಠಾಣ್ ಸಿನಿಮಾ ನೋಡಿಕೊಂಡು ಹೋಗಿದ್ದಾರೆ. ಈ ವಿಷಯವನ್ನು ತ್ರಿಪುರದ ಥಿಯೇಟರ್ ಮಾಲೀಕರೇ ಮಾಹಿತಿಯನ್ನು ಹಂಚಿಕೊಂಡಿದ್ದರು. ಶಾರುಖ್ ಅಭಿಮಾನಿಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಬಾಂಗ್ಲಾದಿಂದ ಬಂದ ಅಭಿಮಾನಿಗಳ ಆ ಪ್ರೀತಿಯನ್ನು ಅವರು ಪ್ರಶಂಸಿಸಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಯಶ್ ಮುಂದಿಟ್ಟುಕೊಂಡು ಶಾರುಖ್ ಗೆ ಟಾಂಗ್ ಕೊಟ್ಟ ರಾಮ್ ಗೋಪಾಲ್ ವರ್ಮಾ

    ಯಶ್ ಮುಂದಿಟ್ಟುಕೊಂಡು ಶಾರುಖ್ ಗೆ ಟಾಂಗ್ ಕೊಟ್ಟ ರಾಮ್ ಗೋಪಾಲ್ ವರ್ಮಾ

    ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ (Pathan) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಧೂಳ್ ಎಬ್ಬಿಸಿದೆ. ಸಿನಿಮಾ ರಿಲೀಸ್ ಆಗಿ ಒಂದೇ ವಾರಕ್ಕೆ ಐನೂರು ಕೋಟಿ ರೂಪಾಯಿ ಗಳಿಕೆ ಮಾಡಿದೆ. ಬಾಲಿವುಡ್ ಗೆ ಒಂದು ರೀತಿಯಲ್ಲಿ ಜೀವ ತುಂಬಿದ ಸಿನಿಮಾ ಕೂಡ ಇದಾಗಿದೆ. ಪಠಾಣ್ ವಿಷಯದಲ್ಲಿ ಬಾಲಿವುಡ್ ಸಂಭ್ರಮದಲ್ಲಿದ್ದರೆ, ದಕ್ಷಿಣದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Verma) ವ್ಯಂಗ್ಯವಾಡಿದ್ದಾರೆ. ತಮ್ಮ ಮಾತಿನಲ್ಲಿ ಕೆಜಿಎಫ್ 2 ಚಿತ್ರವನ್ನು ಎಳೆತಂದಿದ್ದಾರೆ.

    ಪಠಾಣ್ ಗಳಿಕೆಯ ವಿಚಾರದಲ್ಲಿ ಕೆಜಿಎಫ್ 2 (KGF 2) ಸಿನಿಮಾವನ್ನು ಹಿಂದಿಕ್ಕಿದೆ ಎಂದು ಬಣ್ಣಿಸಲಾಗಿತ್ತು. ಕೆಜಿಎಫ್ 2 ಚಿತ್ರಕ್ಕಿಂತಲೂ ಪಠಾಣ್ ಹಿಂದಿಯಲ್ಲಿ ಹೆಚ್ಚು ಹಣ ಗಳಿಕೆ ಮಾಡಿದೆ ಎಂದು ಸಿನಿ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಆದರೆ, ಈ ಲೆಕ್ಕಾಚಾರ ವರ್ಮಾಗೆ ಸರಿ ಬಂದಂತೆ ಕಾಣುತ್ತಿಲ್ಲ. ಹಾಗಾಗಿಯೇ ಶಾರುಖ್ ಮತ್ತು ಯಶ್ ಗೆ (Yash) ಹೋಲಿಕೆ ಮಾಡಿ, ಪಠಾಣ್ ಚಿತ್ರಕ್ಕೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಟಾಲಿವುಡ್ ನಟ ನಾನಿಗೆ ಮೃಣಾಲ್ ಠಾಕೂರ್ ನಾಯಕಿ

    ಶಾರುಖ್ ಖಾನ್ ಬಾಲಿವುಡ್ ನಲ್ಲಿ ಬೇರೂರಿರುವ ನಟ. ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಯಶ್ ಬಾಲಿವುಡ್ ಗೆ ಏನೂ ಅಲ್ಲ. ಹೊಸಬ. ಬಾಲಿವುಡ್ ಗೆ ಪರಿಚಯವೇ ಇಲ್ಲದ ಯಶ್ ಐನೂರು ಕೋಟಿ ಗಳಿಕೆ ಮಾಡಿದ್ದಾರೆ. ಹಾಗಾಗಿ ಶಾರುಖ್ ಗೆಲುವು ನನಗೆ ಗೆಲುವು ಅನಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ನನಗೆ ಅದೊಂದು ಗೆಲುವೂ ಅನಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಠಾಣ್ ಸೋತಿದ್ದರೆ ಹೋಟೆಲ್ ನಲ್ಲಿ ಅಡುಗೆ ಮಾಡ್ತಿದ್ದೆ : ಶಾರುಖ್ ಖಾನ್

    ಪಠಾಣ್ ಸೋತಿದ್ದರೆ ಹೋಟೆಲ್ ನಲ್ಲಿ ಅಡುಗೆ ಮಾಡ್ತಿದ್ದೆ : ಶಾರುಖ್ ಖಾನ್

    ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಪಠಾಣ್ (Pathan) ಸಿನಿಮಾದ ಸಕ್ಸಸ್ (Success) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠಾಣ್ ಸಿನಿಮಾ ಒಂದು ವೇಳೆ ಸೋತಿದ್ದರೆ ತಾವು ಅಡುಗೆ (Cooking) ಭಟ್ಟ ಆಗುತ್ತಿದ್ದೆ ಎನ್ನುವ ಮಾತುಗಳನ್ನು ಆಡಿದ್ದಾರೆ. ಅದಕ್ಕಾಗಿಯೇ ಅವರು ಹೋಟೆಲ್ (Hotel) ಉದ್ಯಮಕ್ಕೆ ಕಾಲಿಡುತ್ತಿದ್ದ ಸಂಗತಿಯನ್ನೂ ತಿಳಿಸಿದ್ದಾರೆ.

    ಸತತ ನಾಲ್ಕು ವರ್ಷಗಳಿಂದ ಶಾರುಖ್ ಖಾನ್ ಅವರಿಗೆ ಯಾವುದೇ ಗೆಲುವು ಸಿಕ್ಕಿಲ್ಲ. ಪಠಾಣ್ ಸಿನಿಮಾದ ಬಗ್ಗೆ ನಿರೀಕ್ಷೆ ಇದ್ದರೂ, ಅದಕ್ಕೆ ಆದ ಅಡೆತಡೆಯಿಂದಾಗಿ ಸ್ವತಃ ಶಾರುಖ್ ಗಲಿಬಿಲಿಗೊಂಡಿದ್ದರಂತೆ. ಬಾಯ್ಕಾಟ್ ಹಾಗೂ ಮತ್ತಿತರ ಕಾರಣದಿಂದಾಗಿ ಪಠಾಣ್ ಸೋತಿದ್ದರೆ ತಾವು ತಮ್ಮದೇ ಹೋಟೆಲ್ ನಲ್ಲಿ ಅಡುಗೆ ಮಾಡುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಅಡುಗೆ ಮಾಡುವುದಕ್ಕಾಗಿಯೇ ಅವರು ತರಬೇತಿಯನ್ನು ಕೂಡ ಪಡೆದಿದ್ದರಂತೆ. ಇದನ್ನೂ ಓದಿ: ಟಾಲಿವುಡ್ ನಟ ನಾನಿಗೆ ಮೃಣಾಲ್ ಠಾಕೂರ್ ನಾಯಕಿ

    ಆದರೆ, ಪಠಾಣ್ ಅವರನ್ನು ಅಡುಗೆ ಮಾಡುವುದಕ್ಕೆ ಬಿಟ್ಟಿಲ್ಲ. ಕೇಳರಿಯದ ರೀತಿಯಲ್ಲಿ ಗೆಲುವು ತಂದುಕೊಟ್ಟಿದೆ. ಬಿಡುಗಡೆಯಾದ ಬಹುತೇಕ ಕಡೆ ಬಾಕ್ಸ್ ಆಫೀಸನ್ನು ಭರ್ತಿ ಮಾಡಿಸಿದೆ. ಈವರೆಗೂ ಅಂದಾಜು 500 ಕೋಟಿ ರೂಪಾಯಿ ಆದಾಯವನ್ನು ಅದು ತಂದುಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಅಧಿಕೃತವಾಗಿ ಚಿತ್ರತಂಡದಿಂದ ಲಾಭದ ವಿಚಾರ ಬಹಿರಂಗವಾಗದೇ ಇದ್ದರೂ, ಸಿನಿ ಪಂಡಿತರು ಮಾತ್ರ ದಿನದ ಲೆಕ್ಕವನ್ನು ಕೊಡುತ್ತಲೇ ಇದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮುಖಮುಚ್ಚಿಕೊಂಡು ‘ಪಠಾಣ್’ ಸಿನಿಮಾಗೆ ಬಂದ ದೀಪಿಕಾ ಪಡುಕೋಣೆ

    ಮುಖಮುಚ್ಚಿಕೊಂಡು ‘ಪಠಾಣ್’ ಸಿನಿಮಾಗೆ ಬಂದ ದೀಪಿಕಾ ಪಡುಕೋಣೆ

    ಬಾಲಿವುಡ್ ಪಠಾಣ್ (Pathan) ಸಿನಿಮಾ ಬಿಡುಗಡೆಯಾದ ಬಹುತೇಕ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಯ್ಕಾಟ್ ನಡುವೆಯೂ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಕುಣಿದು ಕುಪ್ಪಳಿಸುತ್ತಿದ್ದಾರೆ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ನಟಿ ದೀಪಿಕಾ ಪಡುಕೋಣೆ (Deepika Padukone) ಮಾರುವೇಷದಲ್ಲಿ ಚಿತ್ರಮಂದಿರಕ್ಕೆ (Theatre) ಹೋಗಿದ್ದಾರೆ. ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ (Shah Rukh Khan) ಕಾಂಬಿನೇಷನ್ ನ ಸಿನಿಮಾ ಪಠಾಣ್. ಈ ಸಿನಿಮಾದ ಹಾಡೊಂದರಲ್ಲಿ ದೀಪಿಕಾ ಕೇಸರಿ ಬಿಕಿನಿ ಧರಿಸಿದ್ದರು ಎನ್ನುವ ಕಾರಣಕ್ಕಾಗಿ ವಿವಾದ ಎದ್ದಿತ್ತು. ಕೇಸರಿ ಬಣ್ಣವನ್ನು ಅವಮಾನಿಸಲಾಗಿದೆ ಎಂದು ಹಲವರು ತಗಾದೆ ತಗೆದಿದ್ದರು. ಸೆನ್ಸಾರ್ ಮಂಡಳಿ ಕೂಡ ಮಧ್ಯ ಪ್ರವೇಶ ಮಾಡಿತ್ತು. ಆದರೂ, ಕೇಸರಿ ಬಿಕಿನಿ ತಗೆಯುವಂತಹ ಸಾಹಸವನ್ನು ಚಿತ್ರತಂಡ ಮಾಡಿಲ್ಲ. ಆದರೂ, ಸಿನಿಮಾ ಗೆದ್ದಿದೆ. ಇದನ್ನೂ ಓದಿ: `ಗಟ್ಟಿಮೇಳ’ ನಟಿ ಪ್ರಿಯಾ ಜೊತೆ ಸಿದ್ದು ಮದುವೆ ಡೇಟ್ ಫಿಕ್ಸ್ 

    ಅಂಗರಕ್ಷಕರೊಂದಿಗೆ ದೀಪಿಕಾ ಪಡುಕೋಣೆ ಥಿಯೇಟರ್ ಗೆ ಬಂದಿದ್ದಾರೆ. ಮುಖ ಕವರ್ ಮಾಡಿಕೊಂಡು ಪ್ರೇಕ್ಷಕರ ಮಧ್ಯೆ ಸಿನಿಮಾ ನೋಡಿದ್ದಾರೆ. ಆ ಅನುಭವವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರೇಕ್ಷಕರು ಸಿನಿಮಾ ಗೆಲ್ಲಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ, ಥಿಯೇಟರ್ ನಲ್ಲಿ ನೋಡುಗರು ಸಂಭ್ರಮಿಸುತ್ತಿರುವ ರೀತಿ ಕಂಡು ತುಂಬಾ ಖುಷಿಯಾಗಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಪಠಾಣ್ ಸಿನಿಮಾ ರಿಲೀಸ್ ಆಗಿ ಐದು ದಿನಗಳಾಗಿವೆ. ಬಾಕ್ಸ್ ಆಫೀಸ್ ಭರ್ತಿಯಾಗಿದೆ. ನಾಲ್ಕು ನೂರು ಕೋಟಿಗೂ ಅಧಿಕ ಹಣವನ್ನು ಅದು ಬಾಚಿದೆ. ಕಳೆದ ಎರಡ್ಮೂರು ವರ್ಷಗಳಲ್ಲಿ ಈ ಪ್ರಮಾಣದಲ್ಲಿ ಹಣ ಹರಿದು ಬಂದ ಮೊದಲ ಸಿನಿಮಾ ಇದಾಗಿದೆ. ಈ ವರ್ಷದ ಮೊದಲ ಸೂಪರ್ ಹಿಟ್ ಸಿನಿಮಾಗಳ ಸಾಲಿಗೂ ಪಠಾಣ್ ಸೇರಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಖಾನ್ ಗಳನ್ನು ದೇಶ ಪ್ರೀತಿ ಮಾಡುತ್ತೆ, ಹಾಗಾಗಿ ಪಠಾಣ್ ಗೆದ್ದಿದೆ : ಕಂಗನಾ ರಣಾವತ್

    ಖಾನ್ ಗಳನ್ನು ದೇಶ ಪ್ರೀತಿ ಮಾಡುತ್ತೆ, ಹಾಗಾಗಿ ಪಠಾಣ್ ಗೆದ್ದಿದೆ : ಕಂಗನಾ ರಣಾವತ್

    ಠಾಣ್ (Pathan) ಸಿನಿಮಾದ ಗೆಲುವನ್ನು ದಿನಕ್ಕೊಂದು ರೀತಿಯಲ್ಲಿ ಬಣ್ಣಿಸುತ್ತಿದ್ದಾರೆ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut). ಶಾರುಖ್ ಖಾನ್ (Shah Rukh Khan) ನಟನೆಯ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ನಾಲ್ಕು ದಿನದಲ್ಲಿ ಮುನ್ನೂರೈವತ್ತು ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿದೆ. ಇದಕ್ಕೆಲ್ಲ ಕಾರಣ ಖಾನ್ ಗಳನ್ನು ದೇಶ ಪ್ರೀತಿ ಮಾಡುತ್ತೆ. ಹಾಗಾಗಿ ಪಠಾಣ್ ಸಿನಿಮಾ ಗೆದ್ದಿದೆ ಎಂದು ಟಾಂಗ್ ಕೊಟ್ಟಿದ್ದಾರೆ ಕಂಗನಾ.

    ಮೊನ್ನೆಯಷ್ಟೇ ಈ ಸಿನಿಮಾ ಗೆಲುವಿನ ಕುರಿತು ಭಿನ್ನವಾಗಿ ಪ್ರತಿಕ್ರಿಯೆ ನೀಡಿದ್ದರು ಇದೇ ಕಂಗನಾ. ಪಠಾಣ್ ಸಿನಿಮಾ ಈ ಪ್ರಮಾಣದಲ್ಲಿ ಗೆಲ್ಲಲು ಐ.ಎಸ್.ಐ ಕಾರಣವೆಂದು ಹೇಳಿದ್ದರು. ಈ ಸಿನಿಮಾದಿಂದ ಬಂದ ಹಣವನ್ನು ಐಎಸ್ಐಗೆ ನೀಡಲಾಗುತ್ತದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದರು. ಈ ಮಾತು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಗೆಲುವನ್ನು ಖಾನ್ ಗಳ ಪ್ರೀತಿಗೆ ಹೋಲಿಸಿ ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: ಸಾನಿಯಾ ಅಯ್ಯರ್ ಕೈ ಹಿಡಿದು ಎಳೆದು, ಧರ್ಮದೇಟು ತಿಂದ ಅಭಿಮಾನಿ

    ಪಠಾಣ್ ಸಿನಿಮಾ ಬಾಯ್ಕಾಟ್ ಕಾರಣದಿಂದಾಗಿ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಲಿದೆ ಎಂದು ಹೇಳಲಾಗಿತ್ತು. ಹಿಂದೂಪರ ಸಂಘಟನೆಗಳು ಅಲ್ಲಲ್ಲಿ ಗಲಾಟೆ ಮಾಡಿ, ಚಿತ್ರಕ್ಕೆ ಅಡ್ಡಿ ಪಡಿಸಿದರು. ಕೆಲವು ಕಡೆ ಸಿನಿಮಾ ರಿಲೀಸ್ ಆಗದಂತೆ ನೋಡಿಕೊಂಡರು. ಕೆಲವು ರಾಜ್ಯಗಳು ಸಿನಿಮಾ ರಿಲೀಸ್ ಆಗದಂತೆ ನೋಡಿಕೊಂಡವು. ಆದರೆ, ಪಠಾಣ್ ಚಿತ್ರವನ್ನು ಕಟ್ಟಿಹಾಕುವುದಕ್ಕೆ ಸಾಧ್ಯವಾಗಲೇ ಇಲ್ಲ.

    ನಿರೀಕ್ಷೆಗೂ ಮೀರಿ ಪಠಾಣ್ ಸಿನಿಮಾ ಗೆದ್ದಿರುವುದಕ್ಕೆ ದಿನಕ್ಕೊಂದು ಕಾರಣವನ್ನು ಕೊಡುತ್ತಿದ್ದಾರೆ ಕಂಗನಾ ರಣಾವತ್. ಐಎಸ್ಐ ಕೈವಾಡ ಸೇರಿದಂತೆ ಅನೇಕ ಆರೋಪಗಳನ್ನು ಅವರು ಮಾಡಿದ್ದಾರೆ. ಆದರೆ, ಶಾರುಖ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗೆಲುವಿಗೆ ಕಾರಣರಾದ ಎಲ್ಲರಿಗೂ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ತಾನೊಂದು ದೇಶಭಕ್ತಿ ಸಾರುವಂತಹ ಚಿತ್ರ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಪಠಾಣ್’ ಗೆಲುವಿನ ಹಿಂದೆ ಐಎಸ್ಐ ಕೈವಾಡವಿದೆ : ನಟಿ ಕಂಗನಾ ರಣಾವತ್

    ‘ಪಠಾಣ್’ ಗೆಲುವಿನ ಹಿಂದೆ ಐಎಸ್ಐ ಕೈವಾಡವಿದೆ : ನಟಿ ಕಂಗನಾ ರಣಾವತ್

    ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ (Pathan) ಸಿನಿಮಾ ಎಲ್ಲ ಅಡೆತಡೆಗಳನ್ನು ನೂಕಿಕೊಂಡು ಭಾರೀ ಗೆಲುವಿನತ್ತ ಹೆಜ್ಜೆ ಹಾಕಿದೆ. ರಿಲೀಸ್ ಆದ ಮೂರೇ ಮೂರು ದಿನಕ್ಕೆ 150 ಕೋಟಿಗೂ ಅಧಿಕ ಹಣವನ್ನು ಬಾಕ್ಸ್ ಆಫೀಸಿನಿಂದ ಕೊಳ್ಳೆ ಹೊಡೆದಿದೆ. ಈ ಹೊತ್ತಿನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ (Kangana Ranaut) ಶಾಕಿಂಗ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಪಠಾಣ್ ಸಿನಿಮಾ ಈ ಪ್ರಮಾಣದಲ್ಲಿ ಗೆಲ್ಲಲು ಐ.ಎಸ್.ಐ (ISI) ಕಾರಣವೆಂದು ಮಾತನಾಡಿದ್ದಾರೆ.

    ಪಠಾಣ್ ಸಿನಿಮಾ ಬಾಯ್ಕಾಟ್ ಕಾರಣದಿಂದಾಗಿ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಲಿದೆ ಎಂದು ಹೇಳಲಾಗಿತ್ತು. ಹಿಂದೂಪರ ಸಂಘಟನೆಗಳು ಅಲ್ಲಲ್ಲಿ ಗಲಾಟೆ ಮಾಡಿ, ಚಿತ್ರಕ್ಕೆ ಅಡ್ಡಿ ಪಡಿಸಿದರು. ಕೆಲವು ಕಡೆ ಸಿನಿಮಾ ರಿಲೀಸ್ ಆಗದಂತೆ ನೋಡಿಕೊಂಡರು. ಕೆಲವು ರಾಜ್ಯಗಳು ಸಿನಿಮಾ ರಿಲೀಸ್ ಆಗದಂತೆ ನೋಡಿಕೊಂಡವು. ಆದರೆ, ಪಠಾಣ್ ಚಿತ್ರವನ್ನು ಕಟ್ಟಿಹಾಕುವುದಕ್ಕೆ ಸಾಧ್ಯವಾಗಲೇ ಇಲ್ಲ. ಇದನ್ನೂ ಓದಿ: ನಂದಮೂರಿ ತಾರಕ ರತ್ನಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

    ನಿರೀಕ್ಷೆಗೂ ಮೀರಿ ಪಠಾಣ್ ಸಿನಿಮಾ ಗೆದ್ದಿರುವುದಕ್ಕೆ ದಿನಕ್ಕೊಂದು ಕಾರಣವನ್ನು ಕೊಡುತ್ತಿದ್ದಾರೆ ಕಂಗನಾ ರಣಾವತ್. ಐಎಸ್ಐ ಕೈವಾಡ ಸೇರಿದಂತೆ ಅನೇಕ ಆರೋಪಗಳನ್ನು ಅವರು ಮಾಡಿದ್ದಾರೆ. ಆದರೆ, ಶಾರುಖ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗೆಲುವಿಗೆ ಕಾರಣರಾದ ಎಲ್ಲರಿಗೂ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ತಾನೊಂದು ದೇಶಭಕ್ತಿ ಸಾರುವಂತಹ ಚಿತ್ರ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k