Tag: Path hole

  • ದಾಸರಹಳ್ಳಿಯಲ್ಲಿ ತಲೆಯೆತ್ತಿದ್ದ ಗುಂಡಿ ಸಮಸ್ಯೆ – ಡೆಡ್‌ಲೈನ್ ಮುಗಿದರೂ ದುರಸ್ತಿಯಿಲ್ಲ

    ದಾಸರಹಳ್ಳಿಯಲ್ಲಿ ತಲೆಯೆತ್ತಿದ್ದ ಗುಂಡಿ ಸಮಸ್ಯೆ – ಡೆಡ್‌ಲೈನ್ ಮುಗಿದರೂ ದುರಸ್ತಿಯಿಲ್ಲ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Silicon City) ಇತ್ತೀಚಿಗಷ್ಟೇ ಗುಂಡಿಯನ್ನು ಮುಚ್ಚಬೇಕು ಎನ್ನುವ ಡೆಡ್‌ಲೈನ್ (DeadLine) ಮುಗಿದಿದ್ದು, ನಗರದ ಹೊರವಲಯದಲ್ಲಿರುವ ಚಿಕ್ಕಸಂದ್ರ (Chikkasandra) ಮುಖ್ಯ ರಸ್ತೆಯಿಂದ ಹೆಸರುಘಟ್ಟ (Hesaraghatta) ರಸ್ತೆಯ ಸಾಕಷ್ಟು ಮುಖ್ಯ ರಸ್ತೆಗಳ ಗುಂಡಿಗಳು ಮುಚ್ಚದೇ ಹಾಗೇ ಉಳಿದಿವೆ.

    ಡಿಸಿಎಂ ಡಿ.ಕೆ.ಶಿವಕುಮಾರ್‌ರವರು (DCM DKShivakumar) ಬೆಂಗಳೂರು ನಗರವನ್ನು ಬ್ರಾಂಡ್ ಬೆಂಗಳೂರು (Brand Bengaluru) ಮಾಡಲು ಮುಂದಾಗಿದ್ದಾರೆ. ಹೀಗಾಗಿ ಈ ನಡುವೆ ಬಿಬಿಎಂಪಿ (BBMP) ಅಧಿಕಾರಿಗಳಿಗೆ ನಗರದ ಗುಂಡಿಗಳನ್ನು ಮುಚ್ಚಲು ಗಡುವು ನೀಡಿದ್ದರು. ಈಗಾಗಲೇ ಗಡುವು ಮುಗಿದು ಹಲವು ದಿನಗಳು ಕಳೆದಿವೆ. ಆದರೆ ಟಿ.ದಾಸರಹಳ್ಳಿ (T Dasarahalli) ವಿಧಾನಸಭಾ ಕ್ಷೇತ್ರದ ಚಿಕ್ಕಸಂದ್ರ ಮುಖ್ಯ ರಸ್ತೆಯಿಂದ ಹೆಸರುಘಟ್ಟ ರಸ್ತೆಯ ಸಾಕಷ್ಟು ಮುಖ್ಯ ರಸ್ತೆಗಳು ಗುಂಡಿ ಗಂಡಾಂತರಗಳಿಂದ ಕೂಡಿದ್ದು, ಅವ್ಯವಸ್ಥೆಯಾಗಿ ಉಳಿದಿದೆ.ಇದನ್ನೂ ಓದಿ: 2027ರ ವೇಳೆಗೆ ಚಂದ್ರಯಾನ-4ರ ಸುಳಿವು ಕೊಟ್ಟ ಇಸ್ರೋ; ಚಂದ್ರನಲ್ಲಿಗೆ ಗಗನಯಾತ್ರಿಗಳು ಹೆಜ್ಜೆ ಇಡಲು ಹೇಗೆ ಸಹಕಾರಿ?

    ಗಡುವು ನೀಡಿದ್ದರೂ ಈ ವಿಧಾನಸಭಾ ಕ್ಷೇತ್ರದಲ್ಲಿ ಜನರ ಪಾಡು ಕೇಳುವವರೇ ಇಲ್ಲದಂತಾಗಿದೆ. ಸಾಕಷ್ಟು ಬಾರಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಈ ಸಮಸ್ಯೆ ಹಾಗೆಯೇ ಉಳಿದಿದೆ. ಹೀಗಾಗಿ ರಸ್ತೆ ದುರಸ್ತಿಗಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.

    ಮಂಡಿಯುದ್ದದ ಗುಂಡಿಗಳು ವಾಹನ ಸವಾರರಲ್ಲಿ ಮೃತ್ಯು ಕೂಪವಾಗಿ ಪರಿಣಮಿಸಿವೆ. ಯಮಸ್ವರೂಪಿ ಗುಂಡಿ ಗಂಡಾಂತರದಿಂದ ಎದ್ದು ಬಿದ್ದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು ತಮ್ಮ ಮಕ್ಕಳನ್ನು ಶಾಲೆಗೆ, ಶಾಲೆಯಿಂದ ಮನೆಗೆ ಕರೆತರಬೇಕಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇನ್ನೂ ಮಳೆಗಾಲದಲ್ಲಿ ಎಲ್ಲಿ ಗುಂಡಿ ಇದೆಯೋ, ಎಲ್ಲಿ ಮಳೆಯ ನೀರು ಇದೆಯೋ ಎಂಬುದು ತಿಳಿಯದ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ತಮ್ಮ ಅಳಲನ್ನು ಆಕ್ರೋಶದ ರೀತಿಯಲ್ಲಿ ದುರಸ್ತಿ ಮಾಡಲು ಮನವಿ ಮಾಡಿದ್ದಾರೆ.

    ಒಟ್ಟಾರೆ ಬೃಹತ್ ಮಹಾನಗರ ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆಗಳು ಈ ವರ್ಷದಲ್ಲಿ ದುರಸ್ತಿಯಾಗುತ್ತದೆಯಾ? ಎಂಬ ಅನುಮಾನವಿದ್ದು, ಬಿಬಿಎಂಪಿ ಅಧಿಕಾರಿಗಳು ಡಿಸಿಎಂ ಆದೇಶಕ್ಕೆ ದುರಸ್ತಿ ಮಾಡುತ್ತಾರಾ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ತೋರಿಸಿ ಕಿರುಕುಳ – ಕಾಮುಕ ಶಿಕ್ಷಕ ಅರೆಸ್ಟ್‌

    &

  • ಬಿಬಿಎಂಪಿ ಮಾಡಬೇಕಿದ್ದ ಕೆಲ್ಸವನ್ನು ಸಂಚಾರಿ ಪೊಲೀಸ್ರು ಮಾಡಿದ್ರು!

    ಬಿಬಿಎಂಪಿ ಮಾಡಬೇಕಿದ್ದ ಕೆಲ್ಸವನ್ನು ಸಂಚಾರಿ ಪೊಲೀಸ್ರು ಮಾಡಿದ್ರು!

    ಬೆಂಗಳೂರು: ನಗರ ಸಂಚಾರ ವಿಭಾಗ ಪೊಲೀಸರು ಸ್ವಯಂ ಪ್ರೇರಿತರಾಗಿ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ.

    ನಗರದ ಗುಂಡಿಗಳ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕಾ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಬಿಬಿಎಂಪಿಗೆ ಚಾಟಿ ಬೀಸಿತ್ತು. ಹೈಕೋರ್ಟ್ ಬಿಸಿ ಮುಟ್ಟಿಸಿದರೂ ಬಿಬಿಎಂಪಿ ಮಾತ್ರ ತನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲದಂತೆ ನಡೆದುಕೊಂಡಿತ್ತು.

    ಸಂಚಾರಿ ಪೊಲೀಸರು ಈಗ ವಾಹನ ಸವಾರರ ಪರದಾಟ ನೋಡಿ ಸ್ವಯಂ ಪ್ರೇರಿತವಾಗಿ ಗುಂಡಿಗಳನ್ನು ಮುಚ್ಚುತ್ತಿದ್ದಾರೆ. ಬೆಂಗಳೂರು ನಗರದ 44 ಪೋಲೀಸ್ ಠಾಣಾ ವತಿಯಿಂದ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ.

    ನಗರದಾದ್ಯಂತ 221 ದೊಡ್ಡ ದೊಡ್ಡ ಗುಂಡಿಗಳು ಸೇರಿದಂತೆ 300ಕ್ಕೂ ಹೆಚ್ಚು ಗುಂಡಿಗಳಿಗೆ ಸಿಮೆಂಟ್ ಕಾಂಕ್ರೀಟ್ ಹಾಕಲಾಗಿದೆ. ಸಂಚಾರ ಪೋಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

  • ಬೆಂಗ್ಳೂರಲ್ಲಿ ಮುಂದುವರೆದ ಸಾವಿನ ರಸ್ತೆಗುಂಡಿಗಳ ವ್ಯಥೆ-ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರ

    ಬೆಂಗ್ಳೂರಲ್ಲಿ ಮುಂದುವರೆದ ಸಾವಿನ ರಸ್ತೆಗುಂಡಿಗಳ ವ್ಯಥೆ-ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರ

    ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳ ಕಥೆ-ವ್ಯಥೆ ಮುಗಿಯುವಂತೆ ಕಾಣುತ್ತಿಲ್ಲ. ಸೋಮವಾರ ರಾತ್ರಿ ಬೈಕ್ ಸವಾರರೊಬ್ಬರು ರಸ್ತೆ ಗುಂಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಣ್ಣೂರಿನ ಮೂರನೇ ಕ್ರಾಸ್‍ನಲ್ಲಿ ಈ ಘಟನೆ ನಡೆದಿದೆ.

    ಸೋಮವಾರ ರಾತ್ರಿ ಸುಮಾರು 10 ಗಂಟೆ ವೇಳೆಗೆ ಬೈಕ್ ನಲ್ಲಿ ಬಂದ ವ್ಯಕ್ತಿ ಸುಮಾರು ಎರಡು ಆಡಿ ಆಳದ ಗುಂಡಿಗೆ ಬಿದ್ದು ಪ್ರೆಜ್ಞೆ ಕಳೆದುಕೊಂಡಿದ್ದರು. ಈ ವೇಳೆ ಸ್ಥಳೀಯರು ಬೈಕ್ ಸವಾರನನ್ನು 108 ಅಂಬ್ಯುಲೆನ್ಸ್ ಗೆ ಕರೆ ಮಾಡಿ ಖಾಸಗಿ ಆಸ್ಪತ್ರೆ ಸೇರಿಸಿದ್ದಾರೆ.

    ದುರಂತ ಅಂದರೆ ಅಪಘಾತ ಆದ ಜಾಗ ಬೆಂಗಳೂರು ಅಭಿವೃದ್ದಿ ಸಚಿವ ಕೆ.ಜೆ ಜಾರ್ಜ್ ಪ್ರತಿನಿಧಿಸುವ ಕ್ಷೇತ್ರ. ಇದೇ ರಸ್ತೆಯಲ್ಲಿ ಸ್ಕೂಲ್, ಕಾಲೇಜ್‍ಗಳಿವೆ. ಪ್ರತಿದಿನ ಐದಾರು ಜನವಾದರೂ ಇದೇ ಹಳ್ಳಕ್ಕೆ ಬಿದ್ದು ಗಾಯಮಾಡಿಕೊಂಡು ಹೋಗ್ತಿದ್ದಾರೆ. ಈ ಬಗ್ಗೆ ಸಚಿವ ಜಾರ್ಜ್ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಅಂತಾ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಗುದ್ದಲಿ, ಪಿಕಾಸಿ ಹಿಡಿದು ರಸ್ತೆ ದುರಸ್ತಿ ಮಾಡಿ ಸರ್ಕಾರಕ್ಕೆ ಸೆಡ್ಡು ಹೊಡೆದ ರೈತರು!

    ಗುದ್ದಲಿ, ಪಿಕಾಸಿ ಹಿಡಿದು ರಸ್ತೆ ದುರಸ್ತಿ ಮಾಡಿ ಸರ್ಕಾರಕ್ಕೆ ಸೆಡ್ಡು ಹೊಡೆದ ರೈತರು!

    ಬೆಳಗಾವಿ: ಮಹಾಮಳೆಗೆ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿ ಬಿದ್ದು ಹಲವರನ್ನು ಬಲಿ ಪಡೆದಿದೆ. ಗುಂಡಿ ಮುಚ್ಚಿಸಿ ಎಂದು ಸರ್ಕಾರಕ್ಕೆ ಗೋಗೆರೆದು ಸಾಕಾಗಿ ಹೋಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ರೈತರು ತಮ್ಮ ಕಾಯಕದ ಮೂಲಕವೇ ಉತ್ತರ ಕೊಟ್ಟಿದ್ದಾರೆ.

    ಎಷ್ಟೇ ಮನವಿ ಮಾಡಿದರು ಸರ್ಕಾರವೇ ನಿರ್ಮಿಸಿದ ರಸ್ತೆಯನ್ನು ತಾವೇ ದುಡ್ಡು ಹಾಕಿ ರಿಪೇರಿ ಮಾಡಿದ್ದಾರೆ. ಅಥಣಿ ತಾಲೂಕಿನ ರಡ್ಡೇರಟ್ಟಿಯ ಕರ್ಲಾಳ ತೋಟದ ವಸತಿಯಲ್ಲಿ ಇರುವ ರೈತ ಕುಟುಂಬಗಳ ಸದಸ್ಯರು ಸೇರಿ ಎರಡು ನೂರು ಮನೆಗಳಿಂದ ಮನೆಗೆ ಒಂದು ಸಾವಿರದಂತೆ ಹಣ ಸಂಗ್ರಹ ಮಾಡಿದ್ದಾರೆ. ಬಳಿಕ ತಾವೇ ಸ್ವತಃ ಗುದ್ದಲಿ, ಪಿಕಾಸಿ ಹಿಡಿದು ರಸ್ತೆ ದುರಸ್ತಿ ಮಾಡಿದ್ದಾರೆ.

    ಈ ಮೂಲಕ ಜನಸಾಮಾನ್ಯರ ಹಿತಾಶಕ್ತಿಯನ್ನೇ ಮರೆತ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳಿಗೆ ನೀವಿಲ್ಲಂದ್ರೂ ನಡೆಯುತ್ತೆ ಅನ್ನೋ ಸಂದೇಶ ರವಾನಿಸಿದ್ದಾರೆ.