Tag: Pat Cummins

  • IPL Retention | ಸಂಭಾವನೆ ಹೆಚ್ಚಿಸಿಕೊಂಡ ಕ್ಲಾಸೆನ್‌ – ಬರೋಬ್ಬರಿ 23 ಕೋಟಿ ರೂ.ಗೆ ರೀಟೆನ್‌

    IPL Retention | ಸಂಭಾವನೆ ಹೆಚ್ಚಿಸಿಕೊಂಡ ಕ್ಲಾಸೆನ್‌ – ಬರೋಬ್ಬರಿ 23 ಕೋಟಿ ರೂ.ಗೆ ರೀಟೆನ್‌

    ಮುಂಬೈ: 2024ರ ಐಪಿಎಲ್‌ನಲ್ಲಿ ಬಲಿಷ್ಠ ತಂಡವಾಗಿ ಹೊರಹೊಮ್ಮಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡ ಈ ಬಾರಿಗೂ ಟಾಪ್‌-5 ಆಟಗಾರರನ್ನ ಉಳಿಸಿಕೊಂಡಿದೆ. ಸಹಜವಾಗಿಯೇ ಆರ್‌ಟಿಎಂ ಕಾರ್ಡ್‌ ಆಯ್ಕೆಯನ್ನು ಮೆಗಾ ಹರಾಜಿಗಾಗಿ ಉಳಿಸಿಕೊಂಡಿದೆ.

    ನಿರೀಕ್ಷೆಯಂತೆ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು ಹೆನ್ರಿಚ್‌ ಕ್ಲಾಸೆನ್‌ (Heinrich Klaasen) ಅವರನ್ನು 23 ಕೋಟಿ ರೂ.ಗಳಿಗೆ ಧಾರಣೆ ಮಾಡಿಕೊಂಡಿದೆ. ಇದರೊಂದಿಗೆ ಪ್ಯಾಟ್‌ ಕಮ್ಮಿನ್ಸ್‌, ನಿತೀಶ್‌ ರೆಡ್ಡಿ, ಟ್ರಾವಿಸ್‌ ಹೆಡ್‌ ಅವರಿಗೆ ದುಬಾರಿ ಸಂಭಾವನೆ ನೀಡಿ ತನ್ನಲ್ಲೇ ಉಳಿಸಿಕೊಂಡಿದೆ. ಈ ಮೂಲಕ ಐಪಿಎಲ್‌ನಲ್ಲೇ 2ನೇ ಅತಿಹೆಚ್ಚು ಸಂಭಾವನೆ ಪಡೆದ ಆಟಗಾರನಾಗಿ ಹೊರಹೊಮ್ಮಿದ್ದಾರೆ. 2024 ಐಪಿಎಲ್‌ ಮಿನಿ ಹರಾಜಿನಲ್ಲಿ ಮಿಚೆಲ್‌ ಸ್ಟಾರ್ಕ್‌ 24.50 ಕೋಟಿ ರೂ.ಗೆ ಕೆಕೆಆರ್‌ಗೆ ಬಿಕರಿಯಾಗಿದ್ದು, ಈವರೆಗಿನ ದಾಖಲೆ.

    2024ರ ಐಪಿಎಲ್‌ನಲ್ಲಿ 2ನೇ ದಾಖಲೆಯ ಬೆಲೆಗೆ (20 ಕೋಟಿ ರೂ.) ಗೆ ಬಿಕರಿಯಾಗಿದ್ದ ಪ್ಯಾಟ್‌ ಕಮ್ಮಿನ್ಸ್‌ ಸಂಭಾವನೆ ಈ ಬಾರಿ 18 ಕೋಟಿಗೆ ಇಳಿಕೆಯಾಗಿದೆ. ಇದನ್ನೂ ಓದಿ: IPL Retention | ಲಕ್ನೋದಿಂದ ರಾಹುಲ್‌ ಔಟ್‌ – ಪೂರನ್‌, ರಾಕೆಟ್‌ ವೇಗಿ ಮಯಾಂಕ್‌ಗೆ ಬಂಪರ್‌ ಗಿಫ್ಟ್‌

    SRH ರೀಟೆನ್‌ ಆಟಗಾರ ಲಿಸ್ಟ್‌ ಹೇಗಿದೆ?
    * ಪ್ಯಾಟ್‌ ಕಮ್ಮಿನ್ಸ್‌ – 18 ಕೋಟಿ ರೂ.
    * ಅಭಿಷೇಕ್‌ ಶರ್ಮಾ – 14 ಕೋಟಿ ರೂ.
    * ನಿತೀಶ್‌ ರೆಡ್ಡಿ – 6 ಕೋಟಿ ರೂ.
    * ಟ್ರಾವಿಸ್‌ ಹೆಡ್‌ – 14 ಕೋಟಿ ರೂ.
    * ಹೆನ್ರಿಚ್‌ ಕ್ಲಾಸೆನ್‌ – 23 ಕೋಟಿ ರೂ.

    2025 ರಿಂದ 2027ರ ಐಪಿಎಲ್‌ ಆವೃತ್ತಿಗಳಿಗೆ ಹೊಸ ನಿಯಮ ಘೋಷಣೆ ಮಾಡಿರುವ ಬಿಸಿಸಿಐ, ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮೆಗಾ ಹರಾಜು ನಡೆಸಲು ತೀರ್ಮಾನಿಸಿದೆ. ಇದನ್ನೂ ಓದಿ:  IPL Retention | ಕೆಕೆಆರ್‌ನಿಂದ ಸ್ಟಾರ್ಕ್‌, ಶ್ರೇಯಸ್‌ ಔಟ್‌ – ರಿಂಕು ಸಂಭಾವನೆ ಕೋಟಿ ಕೋಟಿ ಏರಿಕೆ!

  • ನನಗೆ ಐಪಿಎಲ್‌ಗಿಂತಲೂ ಟೆಸ್ಟ್‌ ಕ್ರಿಕೆಟ್‌ ಮುಖ್ಯ: ಬಿಸಿಸಿಐ ಹೊಸ ನಿಯಮದ ಕುರಿತು ಕಮ್ಮಿನ್ಸ್‌ ರಿಯಾಕ್ಷನ್‌

    ನನಗೆ ಐಪಿಎಲ್‌ಗಿಂತಲೂ ಟೆಸ್ಟ್‌ ಕ್ರಿಕೆಟ್‌ ಮುಖ್ಯ: ಬಿಸಿಸಿಐ ಹೊಸ ನಿಯಮದ ಕುರಿತು ಕಮ್ಮಿನ್ಸ್‌ ರಿಯಾಕ್ಷನ್‌

    ಮುಂಬೈ: 2025ರಿಂದ 2027 ಆವೃತ್ತಿಗಳಿಗೆ ಬಿಸಿಸಿಐ ವಿಧಿಸಿರುವ ಹೊಸ ನಿಯಮಗಳ (BCCI IPL Rules) ಕುರಿತು ಆಸೀಸ್‌ ತಂಡದ ನಾಯಕ ಪ್ಯಾಟ್‌ ಕಮ್ಮಿನ್ಸ್‌ (Pat Cummins) ಪ್ರತಿಕ್ರಿಯೆ ನೀಡಿದ್ದು, ನನಗೆ ಐಪಿಎಲ್‌ಗಿಂತಲೂ ಟೆಸ್ಟ್‌ ಕ್ರಿಕೆಟ್‌ ಮುಖ್ಯ ಎಂದು ಹೇಳಿದ್ದಾರೆ.

    ಹೌದು. ಬಿಸಿಸಿಐ ಹೊಸ ನಿಯಮದ ಫ್ರಾಂಚೈಸಿಗಳು ಖರೀದಿ ಮಾಡಿದ ನಂತರ ವಿದೇಶಿ ಆಟಗಾರರು ಲೀಗ್‌ನಿಂದ ಹಿಂದೆ ಸರಿದರೆ 2 ವರ್ಷಗಳ ಕಾಲ ನಿಷೇಧ ಹೇರಲಾಗುತ್ತದೆ. ವೈದ್ಯಕೀಯ ಮತ್ತು ಫಿಟ್‌ನೆಸ್‌ ಸಮಸ್ಯೆ ಇರುವ ಆಟಗಾರರಿಗೆ ಮಾತ್ರ ಟೂರ್ನಿಯಿಂದ ಹೊರಗುಳಿಯಲು ಅವಕಾಶವಿರುತ್ತದೆ ಎಂದು ಹೇಳಿದೆ. ಈ ನಿಮಯದ ಬಗ್ಗೆ ಕಮ್ಮಿನ್ಸ್‌ ಪ್ರತಿಕ್ರಿಯೆ ನೀಡಿದ್ದು, ಇದು ತನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕಮ್ಮಿನ್ಸ್ ಹೇಳಿದ್ದಾರೆ.

    ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಈಗಿನ ಐಪಿಎಲ್‌ ನಿಯಮಗಳು ಬದಲಾಗಿವೆ. ಈ ಹಿಂದೆಯೂ ನಾನು ಹರಾಜಿನ ನಂತರ ಐಪಿಎಲ್‌ನಿಂದ (IPL 2025) ಹಿಂದೆ ಸರಿದಿಲ್ಲ. ಹಾಗಾಗಿ ಈ ನಿಯಮ ನನ್ನ ಮೇಲೆ ಪರಿಣಾಮ ಬೀರುವುದಿಲ್ಲ. ಆದರೂ ಐಪಿಎಲ್‌ಗೆ ಸಂಬಂಧಿಸಿದ ಒಂದು ಅಂಶವನ್ನು ಪರಿಗಣಿಸುವುದಾದ್ರೆ, ನನಗೆ ಐಪಿಎಲ್‌ಗಿಂತ ಟೆಸ್ಟ್‌ ಕ್ರಿಕೆಟ್‌ ತುಂಬಾ ಮುಖ್ಯ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಆರ್ಭಟಕ್ಕೆ ದಾಖಲೆಗಳು ಧೂಳಿಪಟ – ನಿಜಕ್ಕೂ ಇದು ಬೆಂಕಿ ಟೀಂ ಎಂದ ಸೂರ್ಯ!

    2024ರ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಪ್ಯಾಟ್‌ ಕಮ್ಮಿನ್ಸ್‌ ಅವರನ್ನು 20.50 ಕೋಟಿ ರೂ.ಗೆ ಖರೀದಿ ಮಾಡಿತು. ಬಳಿಕ ಹೈದರಾಬಾದ್‌ ತಂಡದ ನಾಯಕನಾಗಿ ಮುನ್ನಡೆಸಿದ ಪ್ಯಾಟ್‌ ಕಮ್ಮಿನ್ಸ್‌ ತಂಡವನ್ನು ಫೈನಲ್‌ವರೆಗೆ ಕೊಂಡೊಯ್ದಿದ್ದರು. 31 ವರ್ಷ ವಯಸ್ಸಿನ ಕಮ್ಮಿನ್ಸ್‌ 2027ರ ವರೆಗೆ ಟೆಸ್ಟ್‌ ಮತ್ತು ಏಕದಿನ ಪಂದ್ಯಗಳಲ್ಲಿ ಆಸೀಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ಇದನ್ನೂ ಓದಿ: ಟಿ20 ಕ್ರಿಕೆಟ್‌ನಲ್ಲಿ ವಿಶೇಷ ಸಾಧನೆ -‌ ಕಿಂಗ್‌ ಕೊಹ್ಲಿಗೆ ಸರಿಸಮನಾಗಿ ನಿಂತ ಮಿಸ್ಟರ್‌ 360

    ನ.22ರಿಂದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ:
    ಮುಂದಿನ ನವೆಂಬರ್‌ನಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ನ.22 ರಿಂದ 2025ರ ಜನವರಿ 7ರ ವರೆಗೆ ಭಾರತ ಮತ್ತು ಆಸೀಸ್‌ ನಡುವೆ ಬಾರ್ಡರ್‌ ಗವಾಸ್ಕರ್‌ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿ ನಡೆಯಲಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ನಡೆದ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಸರಣಿ ಗೆದ್ದುಕೊಂಡಿತ್ತು. ಆ ಬಳಿಕ ನಡೆದ ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಪ್ಯಾಟ್‌ ಕಮ್ಮಿನ್ಸ್‌ ನಾಯಕತ್ವದ ಆಸೀಸ್‌ ತಂಡ ಭಾರತ ತಂಡವನ್ನು ಸೋಲಿಸಿ WTC ಟ್ರೋಫಿ ಎತ್ತಿ ಹಿಡಿದಿತ್ತು. ಇದನ್ನೂ ಓದಿ: ಸಂಜು, ಸೂರ್ಯ ಬ್ಯಾಟಿಂಗ್‌ ಅಬ್ಬರ – ಬಾಂಗ್ಲಾ ವಿರುದ್ಧ ಭಾರತಕ್ಕೆ 133 ರನ್‌ ಭರ್ಜರಿ ಜಯ; 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌

    ಐಪಿಎಲ್‌ನ ಹೊಸ ನಿಯಮಗಳೇನು?
    * ಫ್ರಾಂಚೈಸಿಯೊಂದು ಆರ್‌ಟಿಎಂ ಕಾರ್ಡ್‌ನೊಂದಿಗೆ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಬಹುದು.
    * ಅಲ್ಲದೇ ಪ್ರತಿ ಫ್ರಾಂಚೈಸಿ 5 ಕ್ಯಾಪ್ಡ್‌ (ಭಾರತೀಯ ಮತ್ತು ಸಾಗರೋತ್ತರ) ಮತ್ತು 2 ಅನ್‌ಕ್ಯಾಪ್ಡ್‌ಪ್ಲೇಯರ್‌ಗಳನ್ನು ಹೊಂದಬಹುದು.
    * ಫ್ಯಾಂಚೈಸಿಗಳ ಪರ್ಸ್‌ ಮೊತ್ತವನ್ನು 100 ಕೋಟಿ ರೂ. ನಿಂದ 120 ಕೋಟಿ ರೂ. ಹೆಚ್ಚಿಸಲಾಗಿದೆ. ಹಾಗಾಗಿ 2025ರ ಐಪಿಎಲ್‌ ಋತುವಿನಲ್ಲಿ ಸಂಬಳ ಮಿತಿ ಸೇರಿ ಒಟ್ಟು ಪರ್ಸ್‌ ಮೊತ್ತ 146 ಕೋಟಿ ರೂ., 2026ಕ್ಕೆ 151 ಕೋಟಿ ರೂ., 2027ಕ್ಕೆ 157 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.
    * ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಪಂದ್ಯ ಶುಲ್ಕವನ್ನು ಪರಿಚಯಿಸಲಾಗಿದೆ. ಈ ಮೂಲಕ ಪ್ರತಿ ಆಟಗಾರನು ಲೀಗ್‌ ಪಂದ್ಯವೊಂದಕ್ಕೆ 7.5 ಲಕ್ಷ ರೂ. ಹೆಚ್ಚುವರಿ ಪಡೆದುಕೊಳ್ಳಲಿದ್ದಾರೆ.
    * ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ವಿದೇಶಿ ಆಟಗಾರರು ಮೆಗಾ ಹರಾಜಿಗೆ ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಮುಂದಿನ ವರ್ಷ ಅವರು ಹರಾಜಿನಲ್ಲಿ ನೋಂದಾಯಿಸಲು ಅನರ್ಹರಾಗುತ್ತಾರೆ.
    * ಹರಾಜಿನಲ್ಲಿ ಆಯ್ಕೆಯಾದ ಯಾವುದೇ ವಿದೇಶಿ ಆಟಗಾರ, ಬಳಿಕ ಐಪಿಎಲ್‌ ಆರಂಭಕ್ಕೂ ಮುನ್ನ ತನ್ನನ್ನು ಅಲಭ್ಯಗೊಳಿಸಿದ್ರೆ, ಮುಂದಿನ 2 ಸೀಸನ್‌ಗಳಿಗೆ ನಿಷೇಧಿಸಲಾಗುತ್ತದೆ.
    * ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿ 5 ವರ್ಷ ಪೂರೈಸಿದ ಭಾರತೀಯ ಕ್ರಿಕೆಟ್‌ ಆಟಗಾರರನ್ನ ಅನ್‌ಕ್ಯಾಪ್ಡ್‌ ಪ್ಲೇಯರ್‌ ಎಂದು ಪರಿಗಣಿಸಲಾಗುತ್ತದೆ. ಇದು ಭಾರತೀಯ ಆಟಗಾರರಿಗೆ ಮಾತ್ರ ಅನ್ವಯಿಸುತ್ತದೆ.
    * 2025 ರಿಂದ 2027ರ ಆವೃತ್ತಿಗಳಲ್ಲಿಯೂ ಇಂಪ್ಯಾಕ್ಟ್‌ ಪ್ಲೇಯರ್‌ ರೂಲ್ಸ್‌ ಮುಂದುವರಿಯುತ್ತದೆ.

  • 2024ರ ಟಿ20 ವಿಶ್ವಕಪ್‍ನಲ್ಲಿ ಮೊದಲ ಹ್ಯಾಟ್ರಿಕ್ – ಪ್ಯಾಟ್ ಕಮ್ಮಿನ್ಸ್ ಸಾಧನೆ!

    2024ರ ಟಿ20 ವಿಶ್ವಕಪ್‍ನಲ್ಲಿ ಮೊದಲ ಹ್ಯಾಟ್ರಿಕ್ – ಪ್ಯಾಟ್ ಕಮ್ಮಿನ್ಸ್ ಸಾಧನೆ!

    ಆಂಟಿಗುವಾ: ಆಸ್ಟ್ರೇಲಿಯಾದ (Australia) ಸ್ಟಾರ್ ಕ್ರಿಕೆಟರ್ ಪ್ಯಾಟ್ ಕಮ್ಮಿನ್ಸ್ ಟಿ20 ವಿಶ್ವಕಪ್‍ನಲ್ಲಿ (T20 World Cup 2024) ಮತ್ತೊಮ್ಮೆ ಬೌಲಿಂಗ್‍ನಲ್ಲಿ ಮಿಂಚಿದ್ದಾರೆ. ಜೂ.20 ರಂದು ನಡೆದ ಸೂಪರ್-8 ಪಂದ್ಯದಲ್ಲಿ ಬಾಂಗ್ಲಾ (Bangladesh) ತಂಡದ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದಾರೆ. ಈ ಮೂಲಕ 17 ವರ್ಷಗಳ ಬಳಿಕ ಈ ಸಾಧನೆಗೈದ ಆಸ್ಟ್ರೇಲಿಯಾದ 2ನೇ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

    ಆಂಟಿಗುವಾದ ಸರ್ ವಿವಿಯನ್ ರಿಚಡ್ರ್ಸ್ ಸ್ಟೇಡಿಯಂನಲ್ಲಿ ನಡೆದ 4ನೇ ಸೂಪರ್ 8 ಪಂದ್ಯದಲ್ಲಿ ಮೊದಲು ಬ್ಯಾಟ್ ಬೀಸಿದ ಮಾಡಿದ ಬಾಂಗ್ಲಾದೇಶದ ತಂಡ 140 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ತೌಹಿದ್ ಹೃದೋಯ್ (40) ಹಾಗೂ ನಾಯಕ ಶಂಟೋ 41 ರನ್‍ಗಳಿಸಿದರು.

    ಈ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳಾದ ಮೊಹಮ್ಮದುಲ್ಲಾ, ಮಹೇದಿ ಹಸನ್ ಮತ್ತು ತೌಹಿದ್ ಹೃದಯ್ ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡಿ ಹ್ಯಾಟ್ರಿಕ್ ವಿಕೆಟ್ ಕಿತ್ತರು. ಪ್ರಸಕ್ತ ವಿಶ್ವಕಪ್‍ನಲ್ಲಿ ಇದು ಮೊದಲ ಹ್ಯಾಟ್ರಿಕ್ ಆಗಿದ್ದು, ಟಿ-20 ವಿಶ್ವಕಪ್‍ನಲ್ಲಿ ಈ ದಾಖಲೆ ಬರೆದ ಏಳನೇ ಬೌಲರ್ ಅವರಾಗಿದ್ದಾರೆ. ಕಮ್ಮಿನ್ಸ್ ಆಸ್ಟ್ರೇಲಿಯಾ ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ. 2007 ರಲ್ಲಿ, ಬ್ರೆಟ್ಲಿ ಬಾಂಗ್ಲಾದೇಶದ ವಿರುದ್ಧವೇ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಬೌಲರ್ ಆಗಿದ್ದರು.

    ಟಾಸ್ ಸೋತ ಬಾಂಗ್ಲಾದೇಶ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿತು. ನಾಯಕ ಶಾಂಟೊ (41) ಮತ್ತು ತೌಹಿದ್ (40) ಭರ್ಜರಿ ಬ್ಯಾಟಿಂಗ್ ಮಾಡಿ ಉತ್ತಮ ಮೊತ್ತ ಕಲೆ ಹಾಕಿಕೊಟ್ಟಿದ್ದರು. ಇವರಿಬ್ಬರನ್ನು ಹೊರತುಪಡಿಸಿ ಉಳಿದವರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡದ ಕಾರಣ ಬಾಂಗ್ಲಾ ಸಾಧಾರಣ ಸ್ಕೋರ್‍ಗೆ ಕುಸಿಯಿತು. ಕಮ್ಮಿನ್ಸ್ (3/29) ಜೊತೆಗೆ ಆಡಮ್ ಝಂಪಾ (2/24) ಎದುರಾಳಿ ತಂಡವನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮ್ಯಾಕ್ಸ್‍ವೆಲ್, ಸ್ಟೊಯಿನಿಸ್ ಮತ್ತು ಮಿಚೆಲ್ ಸ್ಟಾರ್ಕ್ ತಲಾ ಒಂದೊಂದು ವಿಕೆಟ್ ಪಡೆದರು.

    ಬಾಂಗ್ಲ ನೀಡಿದ ಗುರಿ ಬೆನ್ನಟ್ಟಿದ ಆಸೀಸ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆಸ್ಟ್ರೇಲಿಯಾ 11.2 ಓವರ್‍ಗಳಲ್ಲಿ 2 ವಿಕೆಟ್‍ಗಳ ನಷ್ಟಕ್ಕೆ 100 ರನ್‍ಗಳನ್ನು ಕಲೆ ಹಾಕಿತ್ತು. ಡೇವಿಡ್ ವಾರ್ನರ್ (55*) ಮತ್ತು ಗ್ಲೆನ್ ಮ್ಯಾಕ್ಸ್‍ವೆಲ್ (14*) ಕ್ರೀಸ್‍ನಲ್ಲಿದ್ದರು. ಈ ವೇಳೆ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತು. ಬಳಿಕ ಡಿಎಲ್‍ಎಸ್ ನಿಯಮದ ಅಡಿ ಅಂಪೈರ್‌ಗಳು ಆಸೀಸ್ ತಂಡಕ್ಕೆ 28 ರನ್‍ಗಳ ಜಯ ಘೋಷಿಸಿದರು.

    ಟಿ20 ವಿಶ್ವಕಪ್‍ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತ ಬೌಲರ್‌ಗಳು
    ಬ್ರೆಟ್ ಲೀ (ಆಸ್ಟ್ರೇಲಿಯಾ) – ಬಾಂಗ್ಲಾದೇಶ, ಕೇಪ್‍ಟೌನ್, 2007
    ಕರ್ಟಿಸ್ ಕ್ಯಾಂಫರ್ (ಐರ್ಲೆಂಡ್)- ನೆದಲೆರ್ಂಡ್, ಅಬುಧಾಬಿ, 2021
    ವನಿಂದು ಹಸರಂಗ (ಶ್ರೀಲಂಕಾ)- ದಕ್ಷಿಣ ಆಫ್ರಿಕಾ, ಶಾರ್ಜಾ, 2021
    ಕಗಿಸೊ ರಬಾಡ (ದಕ್ಷಿಣ ಆಫ್ರಿಕಾ)- ಇಂಗ್ಲೆಂಡ್, ಶಾರ್ಜಾ, 2021
    ಕಾರ್ತಿಕ್ ಮೇಯಪ್ಪನ್ (ಯುಎಇ)- ಶ್ರೀಲಂಕಾ, ಗೀಲಾಂಗ್, 2022
    ಜೋಶುವಾ ಲಿಟಲ್ (ಐರ್ಲೆಂಡ್)- ನ್ಯೂಜಿಲೆಂಡ್, ಅಡಿಲೇಡ್, 2022
    ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ)- ಬಾಂಗ್ಲಾದೇಶ, ಆಂಟಿಗುವಾ, 2024

  • ಕೆಕೆಆರ್‌ ಗೆಲುವು ಬಂಗಾಳದಾದ್ಯಂತ ಸಂಭ್ರಮ ತಂದಿದೆ – ನೂತನ ಚಾಂಪಿಯನ್ಸ್‌ಗೆ ದೀದಿ ವಿಶ್‌

    ಕೆಕೆಆರ್‌ ಗೆಲುವು ಬಂಗಾಳದಾದ್ಯಂತ ಸಂಭ್ರಮ ತಂದಿದೆ – ನೂತನ ಚಾಂಪಿಯನ್ಸ್‌ಗೆ ದೀದಿ ವಿಶ್‌

    ಚೆನ್ನೈ: 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಚಾಂಪಿಯನ್‌ (IPL 2024 Champions) ಪಟ್ಟ ಮುಡಿಗೇರಿಸಿಕೊಂಡ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee )ಅಭಿನಂದನೆ ಸಲ್ಲಿಸಿದ್ದಾರೆ.

    ಕೆಕೆಆರ್‌ ತಂಡ ಗೆಲುವು ಸಾಧಿಸುತ್ತಿದ್ದಂತೆ ಮಮತಾ ಬ್ಯಾನರ್ಜಿ ತಮ್ಮ ಎಕ್ಸ್‌ ಖಾತೆ ಮೂಲಕ ವಿಜೇತ ತಂಡಕ್ಕೆ ತುಂಬು ಹೃದಯದ ಅಭಿನಂದನೆ ಸಲ್ಲಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ಗೆಲುವು ಬಂಗಾಳದಾದ್ಯಂತ ಸಂಭ್ರಮ ತಂದಿದೆ. ಐಪಿಎಲ್‌ನ ಈ ಋತುವಿನಲ್ಲಿ ದಾಖಲೆಯ ಪ್ರದರ್ಶನ ನೀಡಿದ್ದಕ್ಕಾಗಿ ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಫ್ರಾಂಚೈಸಿಗೆ ನಾನು ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಇಂತಹ ಮೋಡಿಮಾಡುವ ಗೆಲುವು ಸಿಗಲೆಂದು ಹಾರೈಸುತ್ತೇನೆ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಶುಭ ಹಾರೈಸಿದ್ದಾರೆ.

    10 ವರ್ಷಗಳ ಬಳಿಕ ಐಪಿಎಲ್‌ ಕಿರೀಟ:
    17ನೇ ಆವೃತ್ತಿಯ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 2012 ಮತ್ತು 2014ರಲ್ಲಿ ಗೌತಮ್‌ ಗಂಭೀರ್‌ (Gautam Gambhir) ನಾಯಕತ್ವದಲ್ಲಿ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡ 10 ವರ್ಷಗಳ ಬಳಿಕ ಶ್ರೇಯಸ್‌ ಅಯ್ಯರ್‌ ಅವರ ನಾಯಕತ್ವದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಅಲ್ಲದೇ ಹಿಂದೆ ತಂಡದ ನಾಯಕನಾಗಿ ಟ್ರೋಫಿ ಗೆದ್ದುಕೊಟ್ಟಿದ್ದ ಗೌತಮ್‌ ಗಂಭೀರ್‌ ಈ ಬಾರಿ ತಂಡದ ಕೋಚ್‌ ಆಗಿ ಟ್ರೋಫಿ ತಂದುಕೊಟ್ಟಿರುವುದು ವಿಶೇಷ.

    ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ 18.3 ಓವರ್‌ಗಳಲ್ಲಿ 113 ರನ್‌ಗಳಿಗೆ ಸರ್ವಪತನ ಕಂಡಿತ್ತು. ಅಲ್ಪ ಮೊತ್ತ ಗುರಿ ಪಡೆದ ಕೆಕೆಆರ್‌ ಕೇವಲ 10.3 ಓವರ್‌ಗಳಲ್ಲೇ 114 ರನ್‌ ಗಳಿಸಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

  • ಕೆಕೆಆರ್‌ ಬೌಲರ್‌ಗಳ ಅಬ್ಬರಕ್ಕೆ ಕರಗಿದ ಸನ್‌ ತಾಪ – 113ಕ್ಕೆ ಹೈದರಾಬಾದ್‌ ಆಲೌಟ್‌; ಕೋಲ್ಕತ್ತಾಗೆ 114 ರನ್‌ಗಳ ಗುರಿ!

    ಕೆಕೆಆರ್‌ ಬೌಲರ್‌ಗಳ ಅಬ್ಬರಕ್ಕೆ ಕರಗಿದ ಸನ್‌ ತಾಪ – 113ಕ್ಕೆ ಹೈದರಾಬಾದ್‌ ಆಲೌಟ್‌; ಕೋಲ್ಕತ್ತಾಗೆ 114 ರನ್‌ಗಳ ಗುರಿ!

    ಚೆನ್ನೈ: ಕೋಲ್ಕತ್ತಾ ನೈಟ್‌ರೈಡರ್ಸ್‌ (Kolkata Knight Riders) ಬೌಲರ್‌ಗಳ ಅಬ್ಬರಕ್ಕೆ ತತ್ತರಿಸಿದ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡ ಕೇವಲ 113 ರನ್‌ಗಳಿಗೆ ಆಲೌಟ್‌ ಆಗಿದೆ. ಈ ಮೂಲಕ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಗೆಲುವಿಗೆ 114 ರನ್‌ಗಳ ಗುರಿ ನೀಡಿದೆ.

    ಚೆನ್ನೈನ ಎಂ.ಎ ಚಿದಂಬರಂ (ಚೆಪಾಕ್‌) ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು ಫೀಲ್ಡಿಂಗ್ ‌ಮಾಡುವ ಅವಕಾಶವನ್ನು ಕೆಕೆಆರ್‌ಗೆ ಬಿಟ್ಟುಕೊಟ್ಟಿತ್ತು.

    ಕ್ವಾಲಿಫೈಯರ್‌ 1ನಲ್ಲಿ ಕೋಲ್ಕತ್ತಾ ವಿರುದ್ಧ ಹೀನಾಯ ಸೋಲು ಕಂಡಿದ್ದ ಹೈದರಾಬಾದ್‌ ತಂಡವಿಂದು ಸ್ಫೋಟಕ ಆರಂಭ ಪಡೆಯುವ ನಿರೀಕ್ಷೆಯಲ್ಲಿತ್ತು. ಆದ್ರೆ ಮೊದಲ ಓವರ್‌ನಿಂದಲೇ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಯಿತು.

    ಸ್ಫೋಟಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ (Abhishek Sharma) 2 ರನ್‌ಗಳಿಗೆ ಔಟಾದರೆ ಟ್ರಾವಿಸ್‌ ಹೆಡ್‌ ತಾವು ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಈ ಬೆನ್ನಲ್ಲೇ ರಾಹುಲ್‌ ತ್ರಿಪಾಠಿ, ಏಡನ್‌ ಮಾರ್ಕ್ರಮ್‌, ನಿತೀಶ್‌ ಕುಮಾರ್‌ ಸೇರಿದಂತೆ ಇತರ ಬ್ಯಾಟರ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದರು.

    ಅಭಿಷೇಕ್‌ ಕೇವಲ 2 ರನ್‌ ಗಳಿಸಿದ್ರೆ, ತ್ರಿಪಾಠಿ 9 ರನ್‌, ಮಾರ್ಕ್ರಮ್‌ 20 ರನ್‌, ನಿತೀಶ್‌ ಕುಮಾರ್‌ ರೆಡ್ಡಿ 13 ರನ್‌, ಹೆನ್ರಿಚ್‌ ಕ್ಲಾಸೆನ್‌ 16 ರನ್‌, ಶಹಬಾಜ್‌ ಅಹ್ಮದ್‌ 8 ರನ್‌, ಅಬ್ದುಲ್‌ ಸಮದ್‌, ಜಯದೇವ್‌ ಉನದ್ಕಟ್‌ ತಲಾ 4 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರೆ ಪ್ಯಾಟ್‌ ಕಮ್ಮಿನ್ಸ್‌ (Pat Cummins) 19 ಎಸೆತಗಳಲ್ಲಿ 24 ರನ್‌ಗಳಿಸಿ ಔಟಾದರು. ಅಂತಿಮವಾಗಿ ಹೈದರಾಬಾದ್‌ ತಂಡ 113 ರನ್‌ಗಳಿಗೆ ಆಲೌಟ್‌ ಆಯಿತು.

    ಕೆಕೆಆರ್‌ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಆಂಡ್ರೆ ರಸ್ಸೆಲ್‌ 3 ವಿಕೆಟ್‌ ಕಿತ್ತರೆ, ಮಿಚೆಲ್‌ ಸ್ಟಾರ್ಕ್‌, ಹರ್ಷಿತ್‌ ರಾಣಾ, ತಲಾ 2 ವಿಕೆಟ್‌, ವರುಣ್‌ ಚಕ್ರವರ್ತಿ, ವೈಭವ್‌ ಅರೋರಾ, ಸುನೀಲ್‌ ನರೇನ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • IPL 2024 Final: ಟಾಸ್‌ ಗೆದ್ದ ಸನ್‌ ರೈಸರ್ಸ್‌ ಬ್ಯಾಟಿಂಗ್‌ ಆಯ್ಕೆ!

    IPL 2024 Final: ಟಾಸ್‌ ಗೆದ್ದ ಸನ್‌ ರೈಸರ್ಸ್‌ ಬ್ಯಾಟಿಂಗ್‌ ಆಯ್ಕೆ!

    ಚೆನೈ: 2024ರ ಐಪಿಎಲ್‌ ಆವೃತ್ತಿಯು ಮುಕ್ತಾಯ ಹಂತಕ್ಕೆ ಬಂದಿದೆ. ಇಲ್ಲಿನ ಎಂ.ಎ ಚಿದಂಬರಂ (ಚೆಪಾಕ್‌) ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌ (Kolkata Knight Riders) ವಿರುದ್ಧ ನಡೆಯುತ್ತಿರುವ 17ನೇ ಆವೃತ್ತಿಯ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದೆ.

    2016ರಲ್ಲಿ ಡೇವಿಡ್‌ ವಾರ್ನರ್‌ ನಾಯಕತ್ವದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ (SRH) ತಂಡ 3ನೇ ಬಾರಿಗೆ ಐಪಿಎಲ್‌ ಫೈನಲ್‌ (IPL 2024 Final) ಪ್ರವೇಶಿಸಿದೆ. ಇನ್ನೂ 2012 ಮತ್ತು 2014ರ ಐಪಿಎಲ್‌ ಆವೃತ್ತಿಯಲ್ಲಿ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿದ್ದ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ 4ನೇ ಬಾರಿಗೆ ಫೈನಲ್‌ ಪ್ರವೇಶಿಸಿದೆ. ಇಂದಿನ ಗೆಲುವು ಯಾರ ಕೈ ಹಿಡಿಯಲಿದೆ ಎಂಬುದನ್ನು ಕಾದುನೋಡಬೇಕಿದೆ.

    ಉಭಯ ತಂಡಗಳ ಪ್ಲೇಯಿಂಗ್ XI:
    ಕೋಲ್ಕತಾ ನೈಟ್‌ ರೈಡರ್ಸ್‌:
    ಸುನೀಲ್‌ ನರೇನ್‌, ರೆಹಮಾನುಲ್ಲಾ ಗುರ್ಬಾಝ್ (ವಿಕೆಟ್‌ ಕೀಪರ್‌), ವೆಂಕಟೇಶ್‌ ಅಯ್ಯರ್‌, ಶ್ರೇಯಸ್‌ ಅಯ್ಯರ್‌ (ನಾಯಕ), ರಿಂಕು ಸಿಂಗ್‌, ಆಂಡ್ರೆ ರಸೆಲ್‌, ರಮಣ್‌ದೀಪ್ ಸಿಂಗ್‌, ಮಿಚೆಲ್ ಸ್ಟಾರ್ಕ್‌, ವೈಭವ್‌ ಅರೋರಾ, ಹರ್ಷಿತ್‌ ರಾಣಾ, ವರುಣ್‌ ಚಕ್ರವರ್ತಿ

    ಸನ್‌ರೈಸರ್ಸ್‌ ಹೈದರಾಬಾದ್‌:
    ಟ್ರಾವಿಸ್‌ ಹೆಡ್‌, ಅಭಿಷೇಕ್‌ ಶರ್ಮಾ, ರಾಹುಲ್‌ ತ್ರಿಪಾಠಿ, ಏಡನ್‌ ಮಾರ್ಕ್ರಮ್‌. ನಿತೀಶ್‌ ಕುಮಾರ್‌ ರೆಡ್ಡಿ, ಹೆನ್ರಿಕ್‌ ಕ್ಲಾಸೆನ್‌ (ವಿಕೆಟ್‌ ಕೀಪರ್‌), ಶಹಬಾಜ್‌ ಅಹ್ಮದ್‌, ಪ್ಯಾಟ್‌ ಕಮ್ಮಿನ್ಸ್‌ (ನಾಯಕ), ಭುವನೇಶ್ವರ್‌ ಕುಮಾರ್‌, ಜಯದೇವ್‌ ಉನದ್ಕಟ್‌, ಟಿ ನಟರಾಜನ್.

  • 16 ಬೌಂಡರಿ, 14 ಸಿಕ್ಸರ್‌; ನೋ ಲಾಸ್‌ನಲ್ಲಿ ಸನ್‌ ರೈಸರ್ಸ್‌ ಪಾಸ್‌ – ಹೈದರಾಬಾದ್‌ಗೆ 10 ವಿಕೆಟ್‌ಗಳ ಅದ್ಧೂರಿ ಜಯ!

    16 ಬೌಂಡರಿ, 14 ಸಿಕ್ಸರ್‌; ನೋ ಲಾಸ್‌ನಲ್ಲಿ ಸನ್‌ ರೈಸರ್ಸ್‌ ಪಾಸ್‌ – ಹೈದರಾಬಾದ್‌ಗೆ 10 ವಿಕೆಟ್‌ಗಳ ಅದ್ಧೂರಿ ಜಯ!

    – ಹೆಡ್‌, ಅಭಿಷೇಕ್‌ ಸ್ಫೋಟಕ ಅರ್ಧಶತಕಗಳ ಬ್ಯಾಟಿಂಗ್‌
    – ಲಕ್ನೋ ಸೂಪರ್‌ ಜೈಂಟ್ಸ್‌ಗೆ ಪ್ಲೇ ಆಫ್‌ ಹಾದಿ ಕಠಿಣ

    ಹೈದರಾಬಾದ್‌: ಮತ್ತೊಮ್ಮೆ ಅಭಿಷೇಕ್‌ ಶರ್ಮಾ, ಟ್ರಾವಿಸ್‌ ಹೆಡ್‌ (Travis Head) ಅವರ ಸ್ಫೋಟಕ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಸನ್‌ ರೈಸರ್ಸ್‌ ಹೈದರಾಬಾದ್‌ (SRH) ತಂಡವು ಲಕ್ನೋ ವಿರುದ್ಧ 10 ವಿಕೆಟ್‌ಗಳ ಅದ್ಧೂರಿ ಜಯ ಸಾಧಿಸಿದೆ. ಈ ಮೂಲಕ ಪ್ಲೇ ಆಫ್‌ಗೆ ಮತ್ತಷ್ಟು ಹತ್ತಿರವಾಗಿದೆ. ಆದ್ರೆ ಹೀನಾಯ ಸೋಲಿನೊಂದಿಗೆ ಲಕ್ನೋ ಸೂಪರ್‌ ಜೈಂಟ್ಸ್‌ (LSG) ಪ್ಲೇ ಆಫ್‌ ಹಾದಿಯನ್ನು ಕಠಿಣವಾಗಿಸಿಕೊಂಡಿದೆ.

    ಕೋಲ್ಕತ್ತಾ ನೈಟ್‌ರೈಡರ್ಸ್‌ (KKR), ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಈಗಾಗಲೇ ತಲಾ 16 ಅಂಕಗಳೊಂದಿಗೆ ಪ್ಲೇ ಆಫ್‌ ಸಮೀಪದಲ್ಲಿವೆ. ಇದೀಗ 12 ರಲ್ಲಿ 7ನೇ ಗೆಲುವಿನೊಂದಿಗೆ 14 ಅಂಕ ಗಳಿಸಿ ಸನ್‌ ರೈಸರ್ಸ್‌ ಸಹ ಪ್ಲೇ ಆಫ್‌ ಪ್ರವೇಶಿಸಲು ಹತ್ತಿರವಾಗಿದೆ. 11 ಪಂದ್ಯಗಳಲ್ಲಿ ತಲಾ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಸಿಎಸ್‌ಕೆ, ಡೆಲ್ಲಿ ಕ್ಯಾಪಿಟಲ್ಸ್‌ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದ್ದು, ಲಕ್ನೋ 6ನೇ ಸ್ಥಾನದಲ್ಲೇ ಉಳಿಯುವಂತಾಗಿದೆ. ಮುಂದಿನ 2 ಪಂದ್ಯಗಳಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಗೆಲುವು ಸಾಧಿಸಿದರೆ ಮಾತ್ರವೇ ಲಕ್ನೋಗೆ ಪ್ಲೇ ಆಫ್‌ ತಲುಪುವ ಹಾದಿ ಸಲೀಸಾಗಲಿದೆ. ಇದೇವೇಳೆ ಡೆಲ್ಲಿ, ಸಿಎಸ್‌ಕೆ ತಂಡಗಳೂ ಗೆಲುವು ಕಾಯ್ದುಕೊಂಡರೆ ಲಕ್ನೋ ತಂಡ ಪ್ಲೇ ಆಫ್‌ನಿಂದ ಹೊರಬೀಳಲಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಲಕ್ನೋ ಸೂಪರ್‌ ಜೈಂಟ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 165 ರನ್‌ ಗಳಿಸಿತ್ತು. 166 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಹೈದರಾಬಾದ್‌ ಸ್ಫೋಟಕ ಬ್ಯಾಟಿಂಗ್‌ನೊಂದಿಗೆ 9.4 ಓವರ್‌ಗಳಲ್ಲೇ 167 ರನ್‌ ಸಿಡಿಸಿ ಗೆಲುವು ದಾಖಲಿಸಿತು. ಇದನ್ನೂ ಓದಿ: 7 ದಿನಗಳ ಒಳಗಡೆ ವಿಚಾರಣೆಗೆ ಹಾಜರಾಗಿ – ನಡ್ಡಾ, ವಿಜಯೇಂದ್ರಗೆ ಬೆಂಗಳೂರು ಪೊಲೀಸರಿಂದ ಸಮನ್ಸ್‌

    ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್‌ ಶರ್ಮಾ (Abhishek Sharma) ಹಾಗೂ ಟ್ರಾವಿಸ್‌ ಹೆಡ್‌ ಲಕ್ನೋ ತಂಡ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ಚೆಂಡಾಡಿದರು. ಇದರಿಂದಾಗಿ ಹೈದರಾಬಾದ್‌ ಪವರ್‌ ಪ್ಲೇ ನಲ್ಲೇ ಯಾವುದೇ ವಿಕೆಟ್‌ ನಷ್ಟವಿಲ್ಲದೇ 107 ರನ್‌ ಕಲೆಹಾಕಿತ್ತು. ಬಳಿಕವೂ ವಿಕೆಟ್‌ ಬಿಟ್ಟುಕೊಡದೇ ಬ್ಯಾಟಿಂಗ್‌ ಅಬ್ಬರ ನಿಲ್ಲಿಸದ ಬ್ಯಾಟರ್ಸ್‌ ಕೇವಲ 9.4 ಓವರ್‌ಗಳಲ್ಲೇ 167 ರನ್‌ ಚಚ್ಚಿ ಗೆಲುವಿನ ಮೆಟ್ಟಿಲೇರಿದರು.

    ಸನ್‌ ರೈಸರ್ಸ್‌ ಪರ 296.66 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಟ್ರಾವಿಸ್‌ ಹೆಡ್‌ 30 ಎಸೆತಗಳಲ್ಲಿ ಸ್ಫೋಟಕ 89 ರನ್‌ (8 ಸಿಕ್ಸರ್‌, 8 ಬೌಂಡರಿ) ಚಚ್ಚಿದರೆ, 267.85 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅಭಿಷೇಕ್‌ ಶರ್ಮಾ 28 ಎಸೆತಗಳಲ್ಲಿ 75 ರನ್‌ (6 ಸಿಕ್ಸರ್), 8 ಬೌಂಡರಿ) ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇದನ್ನೂ ಓದಿ: ಚೆನ್ನೈ ಕಂಪನಿಯಲ್ಲಿ 3 ಕೋಟಿ ರೂ. ಕೊಟ್ಟು ಪೆನ್‌ಡ್ರೈವ್‌ ಖರೀದಿಸಿದ್ದಾರೆ: ಜಿ.ಟಿ ದೇವೇಗೌಡ ಗಂಭೀರ ಆರೋಪ

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ನಿಧಾನಗತಿಯ ಬ್ಯಾಟಿಂಗ್‌ನೊಂದಿಗೆ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. 11.2 ಓವರ್‌ಗಳಲ್ಲೇ 4 ವಿಕೆಟ್‌ ನಷ್ಟಕ್ಕೆ ಕೇವಲ 66 ರನ್‌ ಗಳಿಸಿತ್ತು. ಬಳಿಕ ಮುರಿಯದ 5ನೇ ವಿಕೆಟ್‌ಗೆ ಜೊತೆಗೂಡಿದ ನಿಕೋಲಸ್‌ ಪೂರನ್‌ ಹಾಗೂ ಆಯುಷ್‌ ಬದೋನಿ ಜೋಡಿ 52 ಎಸೆತಗಳಲ್ಲೇ 99 ರನ್‌ಗಳ ಜೊತೆಯಾಟ ನೀಡಿತು.

    ಇದರಿಂದ ಲಕ್ನೋ ತಂಡ 160 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಗಿತು. ಜೊನೆಯವರೆಗೂ ಹೋರಾಡಿದ ಆಯುಷ್‌ ಬದೋನಿ 30 ಎಸೆತಗಳಲ್ಲಿ 9 ಬೌಂಡರಿಯೊಂದಿಗೆ 55 ರನ್‌ ಚಚ್ಚಿದರೆ, ನಿಕೋಲಸ್‌ ಪೂರನ್‌ 26 ಎಸೆತಗಳಲ್ಲಿ 1 ಸಿಕ್ಸರ್‌, 6 ಬೌಂಡರಿಯೊಂದಿಗೆ 48 ರನ್‌ ಬಾರಿಸಿದರು. ಇದರೊಂದಿಗೆ ಕೆ.ಎಲ್‌ ರಾಹುಲ್‌ 29, ಕೃನಾಲ್‌ ಪಾಂಡ್ಯ 24, ಕ್ವಿಂಟನ್‌ ಡಿಕಾಕ್‌ 2 ರನ್‌, ಸ್ಟೋಯ್ನಿಸ್‌ 3 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಹೈದರಾಬಾದ್‌ ಪರ ಭುವನೇಶ್ವರ್‌ ಕುಮಾರ್‌ 2 ವಿಕೆಟ್‌ ಕಿತ್ತರೆ, ಪ್ಯಾಟ್‌ ಕಮ್ಮಿನ್ಸ್‌ 1 ವಿಕೆಟ್‌ ಪಡೆದರು.

  • ರೈಸ್‌ ಆಗಿದ್ದ ಸನ್‌ ತಾಪ ಇಳಿಸಿದ ಚೆನ್ನೈ; ಸಿಎಸ್‌ಕೆಗೆ 78 ರನ್‌ಗಳ ಭರ್ಜರಿ ಜಯ – 3ನೇ ಸ್ಥಾನಕ್ಕೆ ಜಿಗಿದ ಹಾಲಿ ಚಾಂಪಿಯನ್ಸ್‌!

    ರೈಸ್‌ ಆಗಿದ್ದ ಸನ್‌ ತಾಪ ಇಳಿಸಿದ ಚೆನ್ನೈ; ಸಿಎಸ್‌ಕೆಗೆ 78 ರನ್‌ಗಳ ಭರ್ಜರಿ ಜಯ – 3ನೇ ಸ್ಥಾನಕ್ಕೆ ಜಿಗಿದ ಹಾಲಿ ಚಾಂಪಿಯನ್ಸ್‌!

    ಚೆನ್ನೈ: ನಾಯಕ ರುತುರಾಜ್‌ ಗಾಯಕ್ವಾಡ್‌ (Ruturaj Gaikwad), ಡೇರಿಲ್‌ ಮಿಚೆಲ್‌ ಅವರ ಸ್ಫೋಟಕ ಬ್ಯಾಟಿಂಗ್‌, ಸಂಘಟಿತ ಬೌಲಿಂಗ್‌ ಪ್ರದರ್ಶನದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಸನ್‌ ರೈಸರ್ಸ್‌ ಹೈದರಾಬಾದ್‌ (CSK vs SRH) ವಿರುದ್ಧ 78 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ 9 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ.

    ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್‌ಕೆ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 212 ರನ್‌ ಬಾರಿಸಿತ್ತು. ಈ ಗುರಿ ಬೆನ್ನತ್ತಿದ ಸನ್‌ ರೈಸರ್ಸ್‌ ಹೈದರಾಬಾದ್‌ (SRH) ತಂಡ 18.5 ಓವರ್‌ಗಳಲ್ಲೇ 134 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: T20 ವಿಶ್ವಕಪ್‌ಗೆ ಶೀಘ್ರದಲ್ಲೇ ಭಾರತ ತಂಡ ಪ್ರಕಟ; ರೋಹಿತ್‌ ಜೊತೆಗೆ ಆರಂಭಿಕ ಯಾರಾಗ್ತಾರೆ ಅನ್ನೋದೇ ಸಸ್ಪೆನ್ಸ್‌!

    ಚೇಸಿಂಗ್‌ ಆರಂಭಿಸಿದ ಸನ್‌ ರೈಸರ್ಸ್‌ ತಂಡ ಆರಂಭದಿಂದಲೇ ವಿಕೆಟ್‌ ಕಳೆದುಕೊಂಡಿತು. ಸಿಕ್ಸರ್‌-ಬೌಂಡರಿ ಸಿಡಿಸುತ್ತಿದ್ದ ಅಗ್ರ ಕ್ರಮಾಂಕದ ಟಾಪ್‌ ಬ್ಯಾಟರ್ಸ್‌ಗಳು ಅಲ್ಪ ಮೊತ್ತಕ್ಕೆ ನೆಲ ಕಚ್ಚಿದರು. ಇದು ಚೆನ್ನೈ ತಂಡಕ್ಕೆ ಲಾಭವಾಯಿತು. ಟ್ರಾವಿಸ್‌ ಹೆಡ್‌, ಅಭಿಷೇಕ್‌ ಶರ್ಮಾ, ಏಡನ್‌ ಮಾರ್ಕ್ರಮ್‌ ಬ್ಯಾಕ್‌ ಟು ಬ್ಯಾಕ್‌ ಪೆವಿಲಿಯನ್‌ ಪರೇಡ್‌ ನಡೆಸಿದರು. ಹಾಗಾಗಿ ಸಹಜವಾಗಿಯೇ ಗೆಲುವು ಚೆನ್ನೈ ತಂಡದ ಪಾಲಾಯಿತು.

    ಸನ್‌ ರೈಸರ್ಸ್‌ ತಂಡದ ಪರ ಟ್ರಾವಿಸ್‌ ಹೆಡ್‌ (Travis Head) 13 ರನ್‌, ಅಭಿಷೇಕ್‌ ಶರ್ಮಾ 15 ರನ್‌, ಏಡನ್‌ ಮಾರ್ಕ್ರಮ್‌ 32 ರನ್‌, ನಿತೀಶ್‌ ಕುಮಾರ್‌ ರೆಡ್ಡಿ 15 ರನ್‌, ಹೆನ್ರಿಕ್‌ ಕ್ಲಾಸೆನ್‌ 20 ರನ್‌, ಅಬ್ದುಲ್‌ ಸಮದ್‌ 19 ರನ್‌, ಪ್ಯಾಟ್‌ ಕಮ್ಮಿನ್ಸ್‌ 5 ರನ್‌, ಶಹಬಾಜ್‌ 7 ರನ್‌, ಜಯದೇವ್‌ ಉನದ್ಕಟ್‌ 1 ರನ್‌ ಗಳಿಸಿದ್ರೆ, ಭುವನೇಶ್ವರ್‌ ಕುಮಾರ್‌ 4 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಸಿಎಸ್‌ಕೆ ಮತ್ತೊಬ್ಬೆ ಬೌಲಿಂಗ್‌ ಪಿಚ್‌ನಲ್ಲಿ ರನ್‌ ಹೊಳೆ ಹರಿಸಿತ್ತು. 20 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ನಷ್ಟಕ್ಕೆ 212 ರನ್‌ ಗಳಿಸಿತ್ತು. ಆರಂಭಿಕ ಅಜಿಂಕ್ಯಾ ರಹಾನೆ 9 ರನ್‌ಗಳಿಗೆ ವಿಕೆಟ್‌ ಕೈ ಚೆಲ್ಲಿದರೂ ಇತರ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಸಹಾಯದಿಂದ ಬೃಹತ್‌ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: 10 ಸಿಕ್ಸರ್‌ನೊಂದಿಗೆ ಸ್ಫೋಟಕ ಶತಕ – ಆರ್‌ಸಿಬಿಗೆ ವಿಲ್‌ ಪವರ್‌; ಟೈಟಾನ್ಸ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

    ಕೊನೇ ಓವರ್‌ನಲ್ಲಿ ಕೈತಪ್ಪಿದ ಶತಕ:
    ಆರಂಭಿಕನಾಗಿ ಕಣಕ್ಕಿಳಿದಿದ್ದ ರುತುರಾಜ್‌ ಗಾಯಕ್ವಾಡ್‌ 54 ಎಸೆತಗಳಲ್ಲಿ 98 ರನ್‌ ಗಳಿಸಿದ್ದರು. ಇಂದು ತಮ್ಮ 2ನೇ ಐಪಿಎಲ್‌ ಶತಕ ದಾಖಲಿಸುವ ಉತ್ಸಾಹದಲ್ಲಿದ್ದರು. ಆದ್ರೆ 20ನೇ ಓವರ್‌ನ 2ನೇ ಎಸೆತದಲ್ಲೇ ಸಿಕ್ಸರ್‌ ಸಿಡಿಸಲು ಯತ್ನಿಸಿ ಬೌಂಡರಿ ಲೈನ್‌ ಬಳಿಕ ಕ್ಯಾಚ್‌ಗೆ ತುತ್ತಾದರು.

    ಸಿಎಸ್‌ಕೆ ಪರ ರುತುರಾಜ್‌ ಗಾಯಕ್ವಾಡ್‌ 54 ಎಸೆತಗಳಲ್ಲಿ 98 ರನ್‌ (3 ಸಿಕ್ಸರ್‌, 10 ಬೌಂಡರಿ), ಡೇರಿಲ್‌ ಮಿಚೆಲ್‌ 52 ರನ್‌ (32 ಎಸೆತ, 7 ಬೌಂಡರಿ, 1 ಸಿಕ್ಸರ್‌), ಶಿವಂ ದುಬೆ 39 ರನ್‌ (20 ಎಸೆತ, 4 ಸಿಕ್ಸರ್‌, 1 ಬೌಂಡರಿ), ಅಜಿಂಕ್ಯಾ ರಹಾನೆ 9 ರನ್‌, ಎಂ.ಎಸ್‌ ಧೋನಿ 5 ರನ್‌ ಗಳಿಸಿದರು.

    ಸನ್‌ ರೈಸರ್ಸ್‌ ಹೈದರಾಬಾದ್‌ ಪರ ಭುವನೇಶ್ವರ್‌ ಕುಮಾರ್‌, ಟಿ ನಟರಾಜನ್‌ ಹಾಗೂ ಜಯದೇವ್‌ ಉನಾದ್ಕಟ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

  • ಮತ್ತೆ ಕಳಪೆ ಸ್ಟ್ರೈಕ್‌ರೇಟ್‌ ಮುಂದುವರಿಸಿದ ಕೊಹ್ಲಿ – ಹಿರಿಯ ಕ್ರಿಕೆಟಿಗರಿಂದ ವ್ಯಾಪಕ ಟೀಕೆ

    ಮತ್ತೆ ಕಳಪೆ ಸ್ಟ್ರೈಕ್‌ರೇಟ್‌ ಮುಂದುವರಿಸಿದ ಕೊಹ್ಲಿ – ಹಿರಿಯ ಕ್ರಿಕೆಟಿಗರಿಂದ ವ್ಯಾಪಕ ಟೀಕೆ

    – ವಿರಾಟ್‌ ಪರ ಬ್ಯಾಟ್‌ ಬೀಸಿದ ಫಾಫ್‌ ಡು ಪ್ಲೆಸಿಸ್‌

    ಹೈದರಾಬಾದ್‌: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ (Virat kohli) ಐಪಿಎಲ್‌ನಲ್ಲಿ ಮತ್ತೆ ಕಳಪೆ ಸ್ಟ್ರೈಕ್‌ರೇಟ್‌ ಮುಂದುವರಿಸಿದ್ದಾರೆ. ಇದರಿಂದ ಹಿರಿಯ ಕ್ರಿಕೆಟಿಗರೂ ವಿರಾಟ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಕೊಹ್ಲಿಯನ್ನು ಟಿ20 ವಿಶ್ವಕಪ್‌ನಿಂದ ಕೈಬಿಡುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

    ಹೌದು. ಇತ್ತೀಚೆಗೆ ರಾಜಸ್ಥಾನ್‌ ರಾಯಲ್ಸ್‌ (RR) ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 67 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಐಪಿಎಲ್‌ ಇತಿಹಾಸದಲ್ಲೇ ಅತ್ಯಂತ ನಿಧಾನಗತಿಯ ಶತಕವಾಗಿತ್ತು. ಗುರುವಾರ ಹೈದರಾಬಾದ್‌ (SRH) ವಿರುದ್ಧ ನಡೆದ ಪಂದ್ಯದಲ್ಲೂ 118.60 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಕೊಹ್ಲಿ 43 ಎಸೆತಗಳಲ್ಲಿ ಕೇವಲ 51 ರನ್‌ ಸಿಡಿಸಿದ್ದಾರೆ. ಇದರಲ್ಲಿ 4 ಬೌಂಡರಿ, ಒಂದೇ ಒಂದು ಸಿಕ್ಸರ್‌ ದಾಖಲಾಗಿದೆ. ಇದು ಕೆಲ ಅಭಿಮಾನಿಗಳ ಅಸಮಾಧಾನಕ್ಕೂ ಕಾರಣವಾಗಿದೆ.

    ಹೈದರಾಬಾದ್‌ ವಿರುದ್ಧ ಕೊಹ್ಲಿಯೊಂದಿಗೆ ಕಣಕ್ಕಿಳಿದಿದ್ದ ರಜತ್‌ ಪಾಟಿದಾರ್‌ ಕೇವಲ 20 ಎಸೆತಗಳಲ್ಲಿ ಸ್ಫೋಟಕ ಫಿಫ್ಟಿ ಸಿಡಿಸಿದ್ದರು. ನಂತರ ಬಂದ ಕ್ಯಾಮರೂನ್‌ ಗ್ರೀನ್‌ 185 ಸ್ಟ್ರೈಕ್‌ರೇಟ್‌ನಲ್ಲಿ 37 ರನ್‌ ಚಚ್ಚಿದ್ದರು. ಆದ್ರೆ ಆರಂಭಿಕನಾಗಿ ಕಣಕ್ಕಿಳಿದ ಕೊಹ್ಲಿ 51 ರನ್‌ ಗಳಿಸಲು 43 ಎಸೆತಗಳನ್ನು ತೆಗೆದುಕೊಂಡರು. ಹಾಗಾಗಿ ಕೊಹ್ಲಿ ಕಳಪೆ ಸ್ಟ್ರೈಕ್‌ರೇಟ್‌ ವಿರುದ್ಧ ಸುನೀಲ್‌ ಗವಾಸ್ಕರ್‌, ಇರ್ಫಾನ್‌ ಪಠಾಣ್‌ ಅಸಮಾಧಾನ ಹೊರಹಾಕಿದ್ದಾರೆ.

    ಕೊಹ್ಲಿ ಬೆನ್ನಿಗೆ ನಿಂತ ಕ್ಯಾಪ್ಟನ್‌:
    ವಿರಾಟ್‌ ಕೊಹ್ಲಿ ಸದ್ಯ ಅಗ್ರ ಸ್ಕೋರರ್‌ ಆಗಿದ್ದಾರೆ. ಇತರ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಪರೇಡ್‌ ನಡೆಸುತ್ತಿದ್ದರೂ ಕೊಹ್ಲಿ ರನ್‌ ಕಲೆಹಾಕುತ್ತಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ನಮ್ಮ ಹೋರಾಟ ಉತ್ತಮವಾಗಿತ್ತು. ಕೆಕೆಆರ್‌ ವಿರುದ್ಧ ತೀವ್ರ ಪೈಪೋಟಿ ನೀಡಿದ ಹೊರತಾಗಿಯೂ 1 ರನ್‌ನಿಂದ ಸೋಲಬೇಕಾಯಿತು. ಆರಂಭಿಕ ಪಂದ್ಯಗಳಲ್ಲಿ ಕೊಹ್ಲಿ ಮಾತ್ರ ರನ್‌ ಗಳಿಸುತ್ತಿದ್ದರು. ಈಗ ಇತರ ಆಟಗಾರರು ರನ್‌ ಗಳಿಸುತ್ತಿದ್ದಾರೆ. ಕ್ಯಾಮರೂನ್‌ ಗ್ರೀನ್‌ ಸಹ ಫಾರ್ಮ್‌ಗೆ ಮರಳಿದ್ದಾರೆ ಎಂದು ಶ್ಲಾಘಿಸಿದ್ದಾರೆ.

    ತವರಿನಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್‌ 287 ರನ್‌ ಗಳಿಸಿದ್ದಾಗ ನಮ್ಮ ತಂಡ 262 ರನ್‌ ಗಳಿಸಿತ್ತು. ಇದು ಸಹ ಉತ್ತಮ ಪೈಪೋಟಿ ಆಗಿತ್ತು. ಏಕೆಂದರೆ ಆ ಸಮಯದಲ್ಲಿ ಪ್ರಮುಖ ವಿಕೆಟ್‌ ಕಳೆದುಕೊಂಡಿದ್ದ ಕಾರಣ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಹೈದರಾಬಾದ್‌ನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 206 ರನ್‌ ಬಾರಿಸಿತ್ತು. 207 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಸನ್‌ ರೈಸರ್ಸ್‌ ಹೈದರಾಬಾದ್‌ 8 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.

  • IPL 2024: ತವರಿನಲ್ಲೇ ಸನ್‌ ರೈಸರ್ಸ್‌ಗೆ ಚೊಂಬು – ಅಬ್ಬರಿಸಿ ಬೊಬ್ಬರಿದ ಆರ್‌ಸಿಬಿಗೆ 35 ರನ್‌ಗಳ ಭರ್ಜರಿ ಜಯ

    IPL 2024: ತವರಿನಲ್ಲೇ ಸನ್‌ ರೈಸರ್ಸ್‌ಗೆ ಚೊಂಬು – ಅಬ್ಬರಿಸಿ ಬೊಬ್ಬರಿದ ಆರ್‌ಸಿಬಿಗೆ 35 ರನ್‌ಗಳ ಭರ್ಜರಿ ಜಯ

    ಹೈದರಾಬಾದ್‌: ಕೊನೆಗೂ ತವರಿನಲ್ಲಿ ಅನುಭವಿಸಿದ ವಿರೋಚಿತ ಸೋಲಿಗೆ ಆರ್‌ಸಿಬಿ, ಸನ್‌ ರೈಸರ್ಸ್‌ ಹೈದರಾಬಾದ್‌ (SRH) ವಿರುದ್ಧ ಸೇಡು ತೀರಿಸಿಕೊಂಡಿದೆ. ಇಲ್ಲಿನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಹೈದರಾಬಾದ್‌ ವಿರುದ್ಧ 35 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 206 ರನ್‌ ಬಾರಿಸಿತ್ತು. 207 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಸನ್‌ ರೈಸರ್ಸ್‌ ಹೈದರಾಬಾದ್‌ 8 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.

    ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ್ದ ಸನ್‌ ರೈಸರ್ಸ್‌ ತಂಡ ಆರಂಭದಿಂದಲೇ ಪ್ರಮುಖ ವಿಕೆಟ್‌ಗಳನ್ನ ಕಳೆದುಕೊಂಡಿತು. ಆರ್‌ಸಿಬಿ ತವರು ಕ್ರೀಡಾಂಗಣದಲ್ಲಿ ಅಬ್ಬರಿಸಿ ಬೊಬ್ಬರಿದಿದ್ದ ಸನ್‌ ರೈಸರ್ಸ್‌ ಬ್ಯಾಟರ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದರು. 5 ಓವರ್‌ಗಳಲ್ಲಿ 56 ರನ್‌ಗಳಿಗೆ ಹೈದರಾಬಾದ್‌ ತಂಡ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡಿತ್ತು. ನಂತರ ಕ್ರೀಸ್‌ಗಿಳಿದ ಬ್ಯಾಟರ್ಸ್‌ಗಳು ಆರ್‌ಸಿಬಿ ಎದುರು ನೆಲಕಚ್ಚಿದ್ದರಿಂದ ಸನ್‌ರೈಸರ್ಸ್‌ ತಂಡ ಸೋಲು ಎದುರಿಸಬೇಕಾಯಿತು.

    ಹೈದರಾಬಾದ್‌ ಪರ ಅಭಿಷೇಕ್‌ ಶರ್ಮಾ (Abhishek Sharma) 31 ರನ್‌, ನಾಯಕ ಪ್ಯಾಟ್‌ ಕಮ್ಮಿನ್ಸ್‌ (Pat Cummins) 31 ರನ್‌, ನಿತೀಶ್‌ ಕುಮಾರ್‌ ರೆಡ್ಡಿ 13 ರನ್‌, ಟ್ರಾವಿಸ್‌ ಹೆಡ್‌ 1 ರನ್‌, ಹೆನ್ರಿಕ್‌ ಕ್ಲಾಸೆನ್‌, ಏಡನ್‌ ಮಾರ್ಕ್ರಮ್‌ ತಲಾ 7 ರನ್‌, ಅಬ್ದುಲ್‌ ಸಮದ್‌ 10 ರನ್‌, ಭುವನೇಶ್ವರ್‌ ಕುಮಾರ್‌ 13 ರನ್‌, ಶಹಬಾಜ್‌ ಅಹ್ಮದ್‌ 40 ರನ್‌, ಜಯದೇವ್‌ ಉನಡ್ಕಟ್‌ 8 ರನ್‌ ಗಳಿಸಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಆರ್‌ಸಿಬಿ ಪರ ನಾಯಕ ಫಾಫ್‌ ಡು ಪ್ಲೆಸಿಸ್‌ ಹಾಗೂ ವಿರಾಟ್‌ ಕೊಹ್ಲಿ (Virat Kohli) ಸ್ಪೋಟಕ ಆರಂಭ ತಂದುಕೊಟ್ಟಿದ್ದರು. ಮೊದಲ ವಿಕೆಟ್‌ಗೆ ಈ ಜೋಡಿ 3.5 ಓವರ್‌ಗಳಲ್ಲೇ ಬರೋಬ್ಬರಿ 48 ರನ್‌ಗಳ ಜೊತೆಯಾಟ ನೀಡಿತ್ತು. ಡುಪ್ಲೆಸಿಸ್‌ (Faf du Plessis) 12 ಎಸೆತಗಳಲ್ಲಿ 25 ರನ್‌ ಚಚ್ಚಿ ಔಟಾದರು. ಈ ಬೆನ್ನಲ್ಲೇ ವಿಲ್‌ ಜಾಕ್ಸ್‌ ಕೇವಲ 6 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ನಂತರ ಕ್ರೀಸ್‌ಗೆ ಬಂದ ರಜತ್‌ ಪಾಟೀದಾರ್‌ ಆರೆಂಜ್‌ ಆರ್ಮಿ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಬೆಂಡೆತ್ತಿದರು. ಬ್ಯಾಕ್‌ ಟು ಬ್ಯಾಕ್‌ ಸಿಕ್ಸಸ್‌ ಸಿಡಿಸುವ ಮೂಲಕ ಕೇವಲ 20 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು. ಇದರೊಂದಿಗೆ ಪವರ್‌ ಪ್ಲೇನಲ್ಲಿ ಸ್ಫೋಟಕ ಇನ್ನಿಂಗ್ಸ್‌ ಕಟ್ಟಿದ್ದ ಕೊಹ್ಲಿ ನಿಧಾಗತಿಯ ಅರ್ಧಶತಕ ಪೂರೈಸಿದರು. ಕೊನೆಯಲ್ಲಿ ಗ್ರೀನ್‌ ಮತ್ತಿತರ ಬ್ಯಾಟರ್‌ಗಳ ಸಂಘಟಿತ ಪ್ರದರ್ಶನದಿಂದ ಆರ್‌ಸಿಬಿ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಆರ್‌ಸಿಬಿ ಪರ ರಜತ್‌ ಪಾಟೀದಾರ್‌ 20 ಎಸೆತಗಳಲ್ಲಿ 50 ರನ್‌ (5 ಸಿಕ್ಸರ್‌, 2 ಬೌಂಡರಿ), ವಿರಾಟ್‌ ಕೊಹ್ಲಿ 51 ರನ್‌ (43 ಎಸೆತ, 4 ಬೌಂಡರಿ, 1 ಸಿಕ್ಸರ್‌), ಡುಪ್ಲೆಸಿಸ್‌ 25 ರನ್‌, ಕ್ಯಾಮರೂನ್‌ ಗ್ರೀನ್‌ 37 ರನ್‌, ಮಹಿಪಾಲ್‌ ಲೋಮ್ರೋರ್‌ 7ರನ್‌, ದಿನೇಶ್‌ ಕಾರ್ತಿಕ್‌ 11 ರನ್‌, ಸ್ವಪ್ನಿಲ್ ಸಿಂಗ್‌ 12 ರನ್‌ ಗಳಿಸಿದರು.