Tag: Pat Cummins

  • ಆಸೀಸ್‌ ಲಕ್ಕಿ ಚಾರ್ಮ್‌ಗಳಿಗೆ ಸೋಲಿನ ರುಚಿ ತೋರಿಸಿದ ಹರಿಣರು – ಹೇಜಲ್ವುಡ್‌ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌

    ಆಸೀಸ್‌ ಲಕ್ಕಿ ಚಾರ್ಮ್‌ಗಳಿಗೆ ಸೋಲಿನ ರುಚಿ ತೋರಿಸಿದ ಹರಿಣರು – ಹೇಜಲ್ವುಡ್‌ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌

    ಲಂಡನ್‌: ಐತಿಹಾಸಿಕ ಲಾರ್ಡ್ಸ್‌ ಕ್ರಿಕೆಟ್‌ ಅಂಗಳದಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್‌ (WTC 2025) ಫೈನಲ್‌ ಪಂದ್ಯದಲ್ಲಿ ಆಸೀಸ್‌ ವಿರುದ್ಧ ಗೆದ್ದು ದಕ್ಷಿಣ ಆಫ್ರಿಕಾ (South Africa) ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಈ ಮೂಲಕ 27 ವರ್ಷಗಳ ಬಳಿಕ ಚೋಕರ್ಸ್‌ ಹಣೆಪಟ್ಟ ಕಳಚಿದ್ದು, ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿದೆ. ಇದರೊಂದಿಗೆ ಐಸಿಸಿ (ICC) ಟೂರ್ನಿಯ ಫೈನಲ್‌ ಪಂದ್ಯಗಳಲ್ಲಿ ಸೋಲೇ ನೋಡದ ಸರದಾರರಿಗೂ ʻಲಾರ್ಡ್ಸ್‌ ಬವುಮಾʼ ತಂಡ ಸೋಲಿನ ರುಚಿ ತೋರಿಸಿದೆ.

    ಹೌದು. ಕಳೆದ ಒಂದು ದಶಕದಿಂದ ಫೈನಲ್​ನಲ್ಲಿ ಸೋಲು ಕಾಣದ ಜೋಶ್ ಹೇಜಲ್ವುಡ್‌ (Josh Hazlewood) ಹಾಗೂ ಮಿಚೆಲ್‌ ಸ್ಟಾರ್ಕ್‌ ಗೆಲುವಿನ ನಾಗಾಲೋಟಕ್ಕೆ ಕೊನೆಗೂ ಬ್ರೇಕ್‌ ಬಿದ್ದಿದೆ. ಇದನ್ನೂ ಓದಿ: ದ. ಆಫ್ರಿಕಾ ಈಗ ʻವಿಶ್ವ ಟೆಸ್ಟ್‌ ಚಾಂಪಿಯನ್‌ʼ – 27 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಂಡ ಹರಿಣರು

    ಹೇಜಲ್ವುಡ್‌ 2012ರಿಂದಲೂ ಫೈನಲ್‌ನಲ್ಲಿ ಒಂದೇ ಒಂದು ಬಾರಿಯೂ ಸೋತಿರಲಿಲ್ಲ ಅನ್ನೋದು ಗಮನಾರ್ಹ. 2012ರ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಫೈನಲ್ ಆಡಿದ್ದ ಹೇಜಲ್ವುಡ್‌ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಇದಾದ ಬಳಿಕ 2015 ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಕಣಕ್ಕಿಳಿದಿದ್ದ ಜೋಶ್‌ ಆಸ್ಟ್ರೇಲಿಯಾ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

    ಇನ್ನೂ 2020ರ ಬಿಗ್ ಬ್ಯಾಷ್ ಲೀಗ್​ನಲ್ಲಿ ಸಿಡ್ನಿ ಸಿಕ್ಸರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದಾಗಲೂ ಜೋಶ್ ತಂಡದಲ್ಲಿದ್ದರು. ಹಾಗೆಯೇ 2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಐಪಿಎಲ್​ ಟ್ರೋಫಿ ಮುಡಿಗೇರಿಸಿದಾಗಲೂ ಹೇಝಲ್​ವುಡ್ ಪ್ಲೇಯಿಂಗ್‌-11ನಲ್ಲಿದ್ದರು. ಅದಾದ ಬಳಿಕ ಅದೇ ವರ್ಷ ಟಿ20 ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಜೋಶ್ ಹೇಝಲ್​ವುಡ್ ಪ್ರಮುಖ ಪಾತ್ರವಹಿಸಿದ್ದರು. ಇದನ್ನೂ ಓದಿ: `ಬನ್ನಿ ಹಾಪ್ ಕ್ಯಾಚ್’ ರೂಲ್ಸ್‌ಗೆ ಐಸಿಸಿ ಬ್ರೇಕ್ – ಶೀಘ್ರವೇ ಹೊಸ ರೂಲ್ಸ್

    ಇನ್ನೂ 2023 ರಲ್ಲಿ ಆಸ್ಟ್ರೇಲಿಯಾ ತಂಡದ ಏಕದಿನ ವಿಶ್ವಕಪ್ ಗೆಲ್ಲುವಲ್ಲಿಯೂ ಹೇಜಲ್ವುಡ್‌ ಪಾತ್ರ ಅಪಾರವಾಗಿತ್ತು. ಅಷ್ಟೇ ಅಲ್ಲ 18 ವರ್ಷಗಳ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸುವಲ್ಲಿ ಜೋಶ್‌ ನಿರ್ಣಾಯಕ ಪಾತ್ರ ವಹಿಸಿದ್ದರು. ಆರ್‌ಸಿಬಿ ಪರ ಅತಿಹೆಚ್ಚು ಹಾಗೂ ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ 2ನೇ ಆಟಗಾರನಾಗಿದ್ದರು.

    ಹೀಗೆ ಕಳೆದ 1 ದಶಕದಿಂದ ಜೋಶ್ ಹೇಜಲ್ವುಡ್‌ ಫೈನಲ್‌ ಪಂದ್ಯಗಳಲ್ಲಿ ಸೋಲಿನ ರುಚಿ ನೋಡಿಯೇ ಇರಲಿಲ್ಲ. ಹೀಗಾಗಿಯೇ ಹೇಝಲ್​ವುಡ್ ಅವರನ್ನು ಅಂತಿಮ ಪಂದ್ಯದ ಲಕ್ಕಿ ಚಾರ್ಮ್​ ಎಂದು ಪರಿಗಣಿಸಲಾಗಿತ್ತು. ಅಲ್ಲದೇ ಮಿಚೆಲ್‌ ಸ್ಟಾರ್ಕ್‌ ಕೂಡ ಫೈನಲ್‌ ಪಂದ್ಯದಲ್ಲಿ ಸೋಲೇ ನೋಡದಿರುವುದು ಮತ್ತೊಂದು ವಿಶೇಷ ಎನಿಸಿತ್ತು. ಆದ್ರೆ ಈ ಬಾರಿ ಫೈನಲ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫಿಕ್ರಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ ಕಿರೀಟಕ್ಕೆ ಮುತ್ತಿಟ್ಟಿದೆ.

    ಫೈನಲ್‌ ಪಂದ್ಯದಲ್ಲಿ ಗೆಲವಿಗೆ 282 ರನ್‌ ಗುರಿ ಪಡೆದ ಆಫ್ರಿಕಾ 5 ವಿಕೆಟ್‌ಗಳ ಗೆಲುವು ಸಾಧಿಸಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – ಆರ್‌ಸಿಬಿ ಮಾರ್ಕೆಟಿಂಗ್‌ ಹೆಡ್‌ ಸೇರಿ ನಾಲ್ವರಿಗೆ ಷರತ್ತುಬದ್ಧ ಜಾಮೀನು

  • ದ. ಆಫ್ರಿಕಾ ಈಗ ʻವಿಶ್ವ ಟೆಸ್ಟ್‌ ಚಾಂಪಿಯನ್‌ʼ – 27 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಂಡ ಹರಿಣರು

    ದ. ಆಫ್ರಿಕಾ ಈಗ ʻವಿಶ್ವ ಟೆಸ್ಟ್‌ ಚಾಂಪಿಯನ್‌ʼ – 27 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಂಡ ಹರಿಣರು

    ಲಂಡನ್‌: ಕೊನೆಗೂ ದಕ್ಷಿಣ ಆಫ್ರಿಕಾ (South Africa) ತಂಡ ಚೋಕರ್ಸ್‌ ಹಣೆಪಟ್ಟಿ ಕಳಚಿದ್ದು ಐಸಿಸಿ ಟ್ರೋಫಿ ಗೆಲ್ಲಬೇಕೆಂಬ ದಶಕಗಳ ಕನಸು ನನಸು ಮಾಡಿಕೊಂಡಿದೆ. ಇಲ್ಲಿನ ಐತಿಹಾಸಿಕ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (WTC 2025) ಫೈನಲ್‌ನಲ್ಲಿ ಆಸೀಸ್‌ ವಿರುದ್ಧ 5 ವಿಕೆಟ್‌ಗಳ‌ ಅಮೋಘ ಜಯ ಸಾಧಿಸಿ ವಿಶ್ವ ಟೆಸ್ಟ್‌ ಚಾಂಪಿಯನ್ಸ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

    2019ರಲ್ಲಿ ವಿಶ್ವ ಟೆಸ್ಟ್‌ ಚಾಂಪಿಯನ್ಸ್‌ ಶಿಪ್‌ ಆರಂಭಿಸಲಾಯಿತು. ಚೊಚ್ಚಲ ಆವೃತ್ತಿಯಲ್ಲೇ ನ್ಯೂಜಿಲೆಂಡ್‌ ಚಾಂಪಿಯನ್‌ ಆದ್ರೆ 2021-25ರ 2ನೇ ಆವೃತ್ತಿಯಲ್ಲಿ ಆಸ್ಟ್ರೇಲಿಯಾ (Australia) ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಈ ಎರಡೂ ಆವೃತ್ತಿಗಳಲ್ಲೂ ಟೀಂ ಇಂಡಿಯಾ ರನ್ನರ್‌ ಅಪ್‌ ಪ್ರಶಸ್ತಿಗೆ ಪಾತ್ರವಾಗಿತ್ತು. ಇದೀಗ ಮೂರನೇ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

    ಗೆಲುವಿಗೆ 282 ರನ್‌ಗಳ ಗುರಿ ಪಡೆದಿದ್ದ ಆಫ್ರಿಕಾ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು. ಗೆಲುವಿಗೆ ಇನ್ನೂ 69 ರನ್‌ಗಳಷ್ಟೇ ಬೇಕಿತ್ತು. ಈ ನಡುವೆ ಮಿಚೆಲ್‌ ಸ್ಟಾರ್ಕ್‌, ಪ್ಯಾಟ್‌ ಕಮ್ಮಿನ್ಸ್‌ (Pat Cummins) ಅವರ ಮ್ಯಾಜಿಕ್‌ನಿಂದ ವಿಕೆಟ್‌ ಪಡೆದ ಹೊರತಾಗಿಯೂ ಏಡನ್‌ ಮಾರ್ಕ್ರಂ ಅವರ ಏಕಾಂಗಿ ಹೋರಾಟ ಫಲ ಕೊಟ್ಟಿತು. ಅಂತಿಮವಾಗಿ ದಕ್ಷಿಣ ಆಫ್ರಿಕಾ 5 ವಿಕೆಟ್‌ಗಳ ಗೆಲುವು ಸಾಧಿಸಿ ಟ್ರೋಫಿಗೆ ಮುತ್ತಿಟ್ಟಿತು.

    4ನೇ ದಿನದಾಟದಲ್ಲಿ 69 ರನ್‌ಗಳ ಹಿನ್ನಡೆಯೊಂದಿಗೆ ಕ್ರೀಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ಆಸಿಸ್‌ ಬೌಲರ್‌ಗಳ ಬಿಗಿ ಹಿಡಿತದ ನಡುವೆಯೂ ರನ್‌ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಟೆಂಬ ಬವುಮಾ, ಮಾರ್ಕ್ರಂ ವಿಕೆಟ್‌ ಕಳೆದುಕೊಂಡ ಹೊರತಾಗಿಯೂ 69 ರನ್‌ ಪೇರಿಸಿ ಗೆಲುವಿನ ದಡ ಸೇರಿತು.

    ಮಾರ್ಕ್ರಂ-ಬವುಮಾ ಶತಕದ ಜೊತೆಯಾಟ:
    70 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ದ. ಆಫ್ರಿಕಾ ಸಂಕಷ್ಟಕ್ಕೀಡಾಗಿತ್ತು. ಈ ವೇಳೆ ಜೊತೆಯಾದ ಟೆಂಬಾ, ಮಾರ್ಕ್ರಂ (Aiden Markram) ಜೋಡಿ 3ನೇ ವಿಕೆಟಿಗೆ ಬರೋಬ್ಬರಿ 147 ರನ್‌ಗಳ ಜೊತೆಯಾಟ ನೀಡಿತು. ಆಸೀಸ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಟೆಂಬಾ (Temba Bavuma) 116 ಎಸೆತಗಳಲ್ಲಿ 69 ರನ್‌ ಗಳಿಸಿ ಔಟಾದರು. ಈ ಬೆನ್ನಲ್ಲೇ ಕೊನೆಯವರೆಗೂ ಹೋರಾಡಿದ ಮಾರ್ಕ್ರಂ 207 ಎಸೆತಗಳಲ್ಲಿ 136 ರನ್‌ ಬಾರಿಸಿ ಔಟಾದರು. ರಾಯಲ್‌ ರಿಕಲ್ಟನ್‌ 6 ರನ್‌, ಮುಲ್ಡರ್‌ 27 ರನ್‌, ಸ್ಟಬ್ಸ್‌ 8 ರನ್‌, ಗಳಿಸಿ ಔಟಾದ್ರೆ, ಡೇವಿಡ್ ಬೆಡಿಂಗ್ಹ್ಯಾಮ್ ಅಜೇಯ 21 ರನ್‌, ಕೈಲ್ ವೆರ್ರೆನ್ ಅಜೇಯ 4 ರನ್‌ ಕೊಡುಗೆ ನೀಡಿದರು.

    ಇದಕ್ಕೂ ಮೊದಲು ಬ್ಯಾಟ್‌ ಬೀಸಿದ್ದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 207 ರನ್‌ಗಳಿಗೆ ಆಲೌಟ್‌ ಆಗಿತ್ತು. ಮಿಚೆಲ್‌ ಸ್ಟ್ರಾರ್ಕ್‌ 58 ರನ್‌ ಹೊಡೆದರೆ ಹೇಜಲ್‌ವುಡ್‌ 17 ರನ್‌ ಹೊಡೆದು ಔಟಾದರು. ಕಗಿಸೊ ರಬಾಡ 4 ವಿಕೆಟ್‌, ಲುಂಗಿ ಎನ್‌ಗಿಡಿ 3 ವಿಕೆಟ್‌ ಪಡೆದರು. ಜಾನ್‌ಸೆನ್‌, ಮುಲ್ಡರ್‌, ಮಾರ್ಕ್ರಾಮ್ ತಲಾ ಒಂದೊಂದು ವಿಕೆಟ್‌ ಪಡೆದರು.

    ಚೋಕರ್ಸ್ ಪಟ್ಟ ಕಳಚಿದ ಹರಿಣರು
    ದಕ್ಷಿಣ ಆಫ್ರಿಕಾ ತಂಡ ಇಲ್ಲಿಯವರೆಗೆ ವಿಶ್ವಕಪ್‌, ಟಿ20 ಲೀಗ್‌ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಸೆಮಿಫೈನಲ್‌ ಪ್ರವೇಶಿಸುತ್ತಿತ್ತು. ಆದ್ರೆ ಪ್ರತಿ ಬಾರಿಯೂ ಪ್ರತಿ ಬಾರಿಯೂ ಸೆಮಿಫೈನಲ್‌, ಫೈನಲ್‌ನಲ್ಲಿ ಸೋತು ಕಣ್ಣೀರಿನ ವಿದಾಯ ಹೇಳುತ್ತಿತ್ತು.

    ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ 5 ಬಾರಿ ಸೆಮಿಫೈನಲ್‌ನಲ್ಲೇ ಸೋತಿತ್ತು. 1992, 1999, 2007, 2015, 2023 ರಲ್ಲಿ ಸೋಲು ಕಂಡಿತ್ತು. ಇತ್ತೀಚಿನ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲೂ ಸೆಮಿಸ್‌ನಲ್ಲಿ ಕಿವೀಸ್‌ ವಿರುದ್ಧ ಸೋತಿತ್ತು. ಕಳೆದ ವರ್ಷ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತದ ವಿರುದ್ಧ ಸೋತಿತ್ತು. ವಿಶ್ವಕಪ್‌ನ ಲೀಗ್‌ ಹಂತದಲ್ಲಿ ಅದ್ಭುತ ಪ್ರದರ್ಶನ ತೋರಿ ಪದೇ ಪದೆ ನಾಕೌಟ್ ಪಂದ್ಯಗಳಲ್ಲಿ ಎಡವುತ್ತಿರುವ ಕಾರಣ ಆಫ್ರಿಕಾಗೆ ಚೋಕರ್ಸ್ ಪಟ್ಟ ಅಂಟಿಕೊಂಡಿತ್ತು.

  • ಸನ್‌ ರೈಸರ್ಸ್‌ ಆರ್ಭಟಕ್ಕೆ ಆರ್‌ಸಿಬಿ ಬರ್ನ್‌ – ಹೈದರಾಬಾದ್‌ಗೆ 42 ರನ್‌ಗಳ ಜಯ, 3ನೇ ಸ್ಥಾನಕ್ಕೆ ಕುಸಿದ ಬೆಂಗಳೂರು

    ಸನ್‌ ರೈಸರ್ಸ್‌ ಆರ್ಭಟಕ್ಕೆ ಆರ್‌ಸಿಬಿ ಬರ್ನ್‌ – ಹೈದರಾಬಾದ್‌ಗೆ 42 ರನ್‌ಗಳ ಜಯ, 3ನೇ ಸ್ಥಾನಕ್ಕೆ ಕುಸಿದ ಬೆಂಗಳೂರು

    ಲಕ್ನೋ: ಸಂಘಟಿತ ಬೌಲಿಂಗ್‌, ಬ್ಯಾಟಿಂಗ್‌ ಪ್ರದರ್ಶನದ ನೆರವಿನಿಂದ ಸನ್‌ ರೈಸರ್ಸ್‌ ಹೈದರಾಬಾದ್‌ (SRH) ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ವಿರುದ್ಧ 42 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಆರ್‌ಸಿಬಿ 3ನೇ ಸ್ಥಾನಕ್ಕೆ ಕುಸಿದಿದೆ. 12 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ 17 ಅಂಕ ಗಳಿಸಿರುವ ಪಂಜಾಬ್‌ ಕಿಂಗ್ಸ್‌ 2ನೇ ಸ್ಥಾನಕ್ಕೆ ಜಿಗಿದಿದೆ.

    ಗೆಲುವಿಗೆ 232 ರನ್‌ಗಳ ಬೃಹತ್‌ ಗುರಿ ಪಡೆದಿದ್ದ ಆರ್‌ಸಿಬಿ ಆರಂಭದಿಂದಲೇ ಕೌಂಟರ್‌ ಅಟ್ಯಾಕ್‌ ಮಾಡಲು ಶುರು ಮಾಡಿತ್ತು. ವಿರಾಟ್‌ ಕೊಹ್ಲಿ-ಫಿಲ್‌ ಸಾಲ್ಟ್‌ (Virat Kohli-Phil Salt) ಅವರ ಆರಂಭಿಕ ಜೊತೆಯಾಟದಿಂದ 43 ಎಸೆತಗಳಲ್ಲಿ 80 ರನ್‌ ತಂಡಕ್ಕೆ ಸೇರ್ಪಡೆಯಾಯಿತು. ಈ ಬೆನ್ನಲ್ಲೇ ಮಯಾಂಕ್‌ ಅಗರ್ವಾಲ್‌ ಫಿಲ್‌ ಸಾಲ್ಟ್‌ ಜೋಡಿ 2ನೇ ವಿಕೆಟಿಗೆ 22 ಎಸೆತಗಳಲ್ಲಿ 40 ರನ್‌ ಕಲೆಹಾಕಿತ್ತು. 4ನೇ ವಿಕೆಟಿಗೆ ಜಿತೇಶ್‌ ಶರ್ಮಾ, ರಜತ್‌ ಪಾಟಿದಾರ್‌ ಜೋಡಿ 26 ಎಸೆತಗಳಲ್ಲಿ 44 ರನ್‌ ಕಲೆಹಾಕಿತ್ತು.

    ಟರ್ನಿಂಗ್‌ ಸಿಕ್ಕಿದ್ದೆಲ್ಲಿ?
    ಒಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಿದ್ದ ಹೊರತಾಗಿಯೂ ಸ್ಫೋಟಕ ಪ್ರದರ್ಶನ ನೀಡುತ್ತಿದ್ದ ಆರ್‌ಸಿಬಿ 14 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 163 ರನ್‌ ಗಳಿಸಿತ್ತು. ಇದರಿಂದ ಗೆಲುವು ಸುಲಭ ಎಂದೇ ಭಾವಿಸಲಾಗಿತ್ತು. ಆದ್ರೆ 15-16ನೇ ಓವರ್‌ ದುಬಾರಿಯಾಯಿತು. 15ನೇ ಓವರ್‌ ಬೌಲಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸಿದ ನಿತೀಶ್‌ ಕುಮಾರ್‌ ರೆಡ್ಡಿ ಕೇವಲ 4 ರನ್‌ ಬಿಟ್ಟುಕೊಟ್ಟರು. 16ನೇ ಓವರ್‌ನಲ್ಲಿ ಎಶಾನ್ ಮಾಲಿಂಗ 7 ರನ್‌ ಬಿಟ್ಟುಕೊಟ್ಟು 2 ಪ್ರಮುಖ ವಿಕೆಟ್‌ ಕಿತ್ತರು. ಮುಂದಿನ 17, 18ನೇ ಓವರ್‌ನಲ್ಲೂ ಆರ್‌ಸಿಬಿ ತಲಾ ಒಂದೊಂದು ಪ್ರಮುಖ ವಿಕೆಟ್‌ ಕಳೆದುಕೊಂಡಿತು. ಹೀಗಾಗಿ ಗೆಲುವಿನ ಓಟದಲ್ಲಿ ಮುನ್ನುಗ್ಗುತ್ತಿದ್ದ ಆರ್‌ಸಿಬಿ ಸೋಲಿನ ರುಚಿ ಕಂಡಿತು.

    ಆರ್‌ಸಿಬಿ ಪರ ಫಿಲ್‌ ಸಾಲ್ಟ್‌ 62 ರನ್‌ (32 ಎಸೆತ, 5 ಸಿಕ್ಸರ್‌, 4 ಬೌಂಡರಿ), ವಿರಾಟ್‌ ಕೊಹ್ಲಿ 43 ರನ್‌ (25 ಎಸೆತ, 1 ಸಿಕ್ಸರ್‌, 7 ಬೌಂಡರಿ), ರಜತ್‌ ಪಾಟಿದಾರ್‌ 18 ರನ್‌, ಜಿತೇಶ್‌ ಶರ್ಮಾ 24 ರನ್‌, ಮಯಾಂಕ್‌ ಅಗರ್ವಾಲ್‌ 11 ರನ್‌, ಟಿಮ್‌ ಡೇವಿಡ್‌ 1 ರನ್‌, ಭುವನೇಶ್ವರ್‌ ಕುಮಾರ್‌, ಯಶ್‌ ದಯಾಳ್‌ ತಲಾ 3 ರನ್‌, ಕೃನಾಲ್‌ ಪಾಂಡ್ಯ 8 ರನ್‌ ಗಳಿಸಿ ಔಟಾದರು.

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಹೈದರಾಬಾದ್‌ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿತ್ತು. ಮೊದಲ ಓವರ್‌ನಿಂದಲೇ ಸ್ಪೋಟಕ ಪ್ರದರ್ಶನ ನೀಡಲು ಮುಂದಾದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಮೊದಲ ವಿಕೆಟ್‌ಗೆ 25 ಎಸೆತಗಳಲ್ಲಿ 54 ರನ್ ಜೊತೆಯಾಟ ನೀಡಿತ್ತು. ಅತ್ತ ಅಭಿಷೇಕ್ ಶರ್ಮಾ 17 ಎಸೆತಗಳಲ್ಲಿ 34 ರನ್ ಗಳಿಸಿ ಔಟಾಗುತ್ತಿದ್ದಂತೆ ಇತ್ತ ಟ್ರಾವಿಸ್ ಹೆಡ್ ಕೂಡ 10 ಎಸೆತಗಳಲ್ಲಿ 17 ರನ್ ಬಾರಿಸಿ ಪೆವಿಲಿಯನ್‌ಗೆ ಮರಳಿದರು.

    3ನೇ ವಿಕೆಟ್‌ಗೆ ಇಶಾನ್ ಕಿಶನ್ ಮತ್ತು ಕ್ಲಾಸೆನ್ ಜೋಡಿ 27 ಎಸೆತಗಳಲ್ಲಿ 48 ರನ್, 4ನೇ ವಿಕೆಟಿಗೆ ಕಿಶನ್-ಅನಿಕೇತ್ ವರ್ಮಾ ಜೋಡಿ 17 ಎಸೆತಗಳಲ್ಲಿ ಸ್ಫೋಟಕ 43 ರನ್ ಚಚ್ಚಿ ತಂಡದ ಮೊತ್ತ ಹೆಚ್ಚಿಸಿತು. ಇನ್ನೂ ಕೊನೆಯಲ್ಲಿ ನ್ಯಾಯಕ ಪ್ಯಾಟ್ ಕಮ್ಮಿನ್ಸ್ ಹಾಗೂ ಇಶಾನ್ ಕಿಶನ್ ಜೋಡಿ ಕೇವಲ 18 ಎಸೆತಗಳಲ್ಲಿ 43 ರನ್ ಚಚ್ಚಿ ತಂಡದ ಮೊತ್ತವನ್ನು 200 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾಯಿತು. ಹೈದರಾಬಾದ್ ಪರ 195.83 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಇಶಾನ್ ಕಿಶನ್ ಅಜೇಯ 94 ರನ್ (48 ಎಸೆತ, 5 ಸಿಕ್ಸರ್, 7 ಬೌಂಡರಿ) ಚಚ್ಚಿದ್ರೆ , ಅಭಿಷೇಕ್ ಶರ್ಮಾ 34 ರನ್, ಟ್ರಾವಿಸ್ ಹೆಡ್ 17 ರನ್, ಹೆನ್ರಿಕ್ ಕ್ಲಾಸೆನ್ 24 ರನ್, ಅನಿಕೇತ್ ವರ್ಮಾ 26 ರನ್, ಅಭಿನವ್ ಮನೋಹರ್ 12 ರನ್, ಪ್ಯಾಟ್ ಕಮ್ಮಿನ್ಸ್ ಅಜೇಯ 13 ರನ್ ಗಳಿಸಿದರು.

    ಇನ್ನೂ ಆರ್‌ಸಿಬಿ ಪರ ರೊಮಾರಿಯೊ ಶೆಫರ್ಡ್ 2 ವಿಕೆಟ್ ಕಿತ್ತರೆ, ಭುವನೇಶ್ವರ್ ಕುಮಾರ್, ಲುಂಗಿ ಎನ್‌ಗಿಡಿ, ಸುಯಶ್ ಶರ್ಮಾ, ಕೃನಾಲ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.

  • ಇಶಾನ್‌ ಕಿಶನ್‌ ಸಿಡಿಲಬ್ಬರದ ಬ್ಯಾಟಿಂಗ್‌ – ಆರ್‌ಸಿಬಿ ಗೆಲುವಿಗೆ 232 ರನ್‌ಗಳ ಕಠಿಣ ಗುರಿ

    ಇಶಾನ್‌ ಕಿಶನ್‌ ಸಿಡಿಲಬ್ಬರದ ಬ್ಯಾಟಿಂಗ್‌ – ಆರ್‌ಸಿಬಿ ಗೆಲುವಿಗೆ 232 ರನ್‌ಗಳ ಕಠಿಣ ಗುರಿ

    ಲಕ್ನೋ: ಇಶಾನ್‌ ಕಿಶನ್‌ (Ishan Kishan) ಸಿಡಿಲಬ್ಬರದ ಬ್ಯಾಟಿಂಗ್‌ ನೆರವಿನಿಂದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 231 ರನ್‌ ಗಳಿಸಿದೆ. ಈ ಮೂಲಕ ಎದುರಾಳಿ ಆರ್‌ಸಿಬಿಗೆ 232 ರನ್‌ಗಳ ಕಠಿಣ ಗುರಿ ನೀಡಿದೆ.

    ಲಕ್ನೋದ ಏಕನಾ ಕ್ರೀಡಾಂಗಣದಲ್ಲಿಂದು ಜಿತೇಶ್‌ ಶರ್ಮಾ (Jitesh Sharma) ನಾಯಕತ್ವದಲ್ಲಿ ಕಣಕ್ಕಿಳಿದ ಆರ್‌ಸಿಬಿ (RCB) ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿತು. ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಹೈದರಾಬಾದ್‌ ತಂಡಕ್ಕೆ ಬಿಟ್ಟುಕೊಟ್ಟಿತು.

    ಮೊದಲ ಓವರ್‌ನಿಂದಲೇ ಸ್ಪೋಟಕ ಪ್ರದರ್ಶನ ನೀಡಲು ಮುಂದಾದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಮೊದಲ ವಿಕೆಟ್‌ಗೆ 25 ಎಸೆತಗಳಲ್ಲಿ 54 ರನ್‌ ಜೊತೆಯಾಟ ನೀಡಿತ್ತು. ಅತ್ತ ಅಭಿಷೇಕ್‌ ಶರ್ಮಾ 17 ಎಸೆತಗಳಲ್ಲಿ 34 ರನ್‌ ಗಳಿಸಿ ಔಟಾಗುತ್ತಿದ್ದಂತೆ ಇತ್ತ ಟ್ರಾವಿಸ್‌ ಹೆಡ್‌ ಕೂಡ 10 ಎಸೆತಗಳಲ್ಲಿ 17 ರನ್‌ ಬಾರಿಸಿ ಪೆವಿಲಿಯನ್‌ಗೆ ಮರಳಿದರು. ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಏಂಜೆಲೊ ಮ್ಯಾಥ್ಯೂಸ್

    3ನೇ ವಿಕೆಟ್‌ಗೆ ಇಶಾನ್‌ ಕಿಶನ್‌ ಮತ್ತು ಕ್ಲಾಸೆನ್‌ ಜೋಡಿ 27 ಎಸೆತಗಳಲ್ಲಿ 48 ರನ್‌, 4ನೇ ವಿಕೆಟಿಗೆ ಕಿಶನ್‌-ಅನಿಕೇತ್‌ ವರ್ಮಾ ಜೋಡಿ 17 ಎಸೆತಗಳಲ್ಲಿ ಸ್ಫೋಟಕ 43 ರನ್‌ ಚಚ್ಚಿ ತಂಡದ ಮೊತ್ತ ಹೆಚ್ಚಿಸಿತು. ಇನ್ನೂ ಕೊನೆಯಲ್ಲಿ ನ್ಯಾಯಕ ಪ್ಯಾಟ್‌ ಕಮ್ಮಿನ್ಸ್‌ ಹಾಗೂ ಇಶಾನ್‌ ಕಿಶನ್‌ ಜೋಡಿ ಕೇವಲ 18 ಎಸೆತಗಳಲ್ಲಿ 43 ರನ್‌ ಚಚ್ಚಿ ತಂಡದ ಮೊತ್ತವನ್ನು 200 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: IPL 2025 | ಮೋದಿ ಸ್ಟೇಡಿಯಂನಲ್ಲೇ ಫೈನಲ್‌ ಮ್ಯಾಚ್‌

    ಹೈದರಾಬಾದ್‌ ಪರ 195.83 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಇಶಾನ್‌ ಕಿಶನ್‌ ಅಜೇಯ 94 ರನ್‌ (48 ಎಸೆತ, 5 ಸಿಕ್ಸರ್‌, 7 ಬೌಂಡರಿ) ಚಚ್ಚಿದ್ರೆ ,‌ ಅಭಿಷೇಕ್‌ ಶರ್ಮಾ 34 ರನ್‌, ಟ್ರಾವಿಸ್‌ ಹೆಡ್‌ 17 ರನ್‌, ಹೆನ್ರಿಕ್‌ ಕ್ಲಾಸೆನ್‌ 24 ರನ್‌, ಅನಿಕೇತ್‌ ವರ್ಮಾ 26 ರನ್‌, ಅಭಿನವ್‌ ಮನೋಹರ್‌ 12 ರನ್‌, ಪ್ಯಾಟ್‌ ಕಮ್ಮಿನ್ಸ್‌ ಅಜೇಯ 13 ರನ್‌ ಗಳಿಸಿದರು. ಇದನ್ನೂ ಓದಿ: ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಉದ್ಧಟತನ – ಒಂದು ಪಂದ್ಯಕ್ಕೆ ದಿಗ್ವೇಶ್ ಅಮಾನತು, ಭಾರೀ ದಂಡ

    ಇನ್ನೂ ಆರ್‌ಸಿಬಿ ಪರ ರೊಮಾರಿಯೊ ಶೆಫರ್ಡ್‌ 2 ವಿಕೆಟ್‌ ಕಿತ್ತರೆ, ಭುವನೇಶ್ವರ್‌ ಕುಮಾರ್‌, ಲುಂಗಿ ಎನ್‌ಗಿಡಿ, ಸುಯಶ್‌ ಶರ್ಮಾ, ಕೃನಾಲ್‌ ಪಾಂಡ್ಯ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು. ಇದನ್ನೂ ಓದಿ: ಫ್ಯಾಂಟಸಿ ಕ್ರಿಕೆಟ್‌ನಲ್ಲಿ ಗೆದ್ದ ಅಭಿಮಾನಿಗೆ ಲ್ಯಾಂಬೊರ್ಗಿನಿ ಕಾರು ಗಿಫ್ಟ್‌ ಕೊಟ್ಟ ರೋಹಿತ್‌ ಶರ್ಮಾ

  • ತವರಿನಲ್ಲಿ ಮತ್ತೆ ಸೋತ ಚೆನ್ನೈ – ಸನ್‌ ರೈಸರ್ಸ್‌ಗೆ ಚೆಪಾಕ್‌ನಲ್ಲಿ ಐತಿಹಾಸಿಕ ಜಯ!

    ತವರಿನಲ್ಲಿ ಮತ್ತೆ ಸೋತ ಚೆನ್ನೈ – ಸನ್‌ ರೈಸರ್ಸ್‌ಗೆ ಚೆಪಾಕ್‌ನಲ್ಲಿ ಐತಿಹಾಸಿಕ ಜಯ!

    – ಸಿಎಸ್‌ಕೆ ಬಹುತೇಕ ಪ್ಲೇ ಆಫ್‌ನಿಂದ ಹೊರಕ್ಕೆ

    ಚೆನ್ನೈ: ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಮತ್ತೆ ಹೀನಾಯ ಸೋಲು ಕಂಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಬಹುತೇಕ ಈ ಆವೃತ್ತಿಯಲ್ಲಿ ಪ್ಲೇ ಆಫ್‌ ಪ್ರವೇಶಿಸುವ ಅವಕಾಶ ಕಳೆದುಕೊಂಡಿದೆ. ಆದ್ರೆ ಸನ್‌ ರೈಸರ್ಸ್‌ ಹೈದರಾಬಾದ್‌ ಇದೇ ಮೊದಲ ಬಾರಿಗೆ ಸಿಎಸ್‌ಕೆ ವಿರುದ್ಧ ಚೆಪಾಕ್‌ ಮೈದಾನದಲ್ಲಿ ಗೆದ್ದು ಇತಿಹಾಸ ನಿರ್ಮಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ 19.5 ಓವರ್‌ಗಳಲ್ಲಿ 154 ರನ್‌ಗಳಿಗೆ ಆಲೌಟ್‌ ಆಯಿತು. 155 ರನ್‌ಗಳ ಸವಾಲಿನ ಮೊತ್ತ ಗುರಿ ಬೆನ್ನಟ್ಟಿದ ಸನ್‌ ರೈಸರ್ಸ್‌ ಹೈದರಾಬಾದ್‌‌ 18.4 ಓವರ್‌ಗಳಲ್ಲೇ ಗುರಿ ಪೂರೈಸಿ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಜಿಗಿತ ಕಂಡಿತು.

    ಸಿಎಸ್‌ಕೆ ಪರ ದೇವಾಲ್‌ ಬ್ರೇವಿಸ್‌ ಸ್ಫೋಟಕ 42 ರನ್‌, ಆಯುಷ್‌ ಮಾತ್ರೆ 30 ರನ್‌, ಜಡೇಜಾ 21 ರನ್‌, ದೀಪಕ್‌ ಹೂಡ 22 ರನ್‌ ಹೊರತುಪಡಿಸಿದ್ರೆ ಉಳಿದವರು ಅಲ್ಪಮೊತ್ತಕ್ಕೆ ನೆಲಕಚ್ಚಿದರು.

    ಹೈದರಾಬಾದ್‌ ಪರ ಹರ್ಷಲ್‌ ಪಟೇಲ್‌ ಪ್ರಮುಖ 4 ವಿಕೆಟ್‌ ಕಿತ್ತರೆ, ಪ್ಯಾಟ್ ಕಮ್ಮಿನ್ಸ್‌, ಜಯದೇವ್‌ ಉನದ್ಕಟ್‌ 2 ವಿಕೆಟ್‌ ಹಾಗೂ ಶಮಿ, ಕಮಿಂಡು ಮೆಂಡೀಸ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಇನ್ನೂ 155 ರನ್‌ಗಳ ಗುರಿ ಬೆನ್ನಟ್ಟಿದ ಹೈದರಾಬಾದ್‌ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಬಳಿಕ ಇಶಾನ್‌ ಕಿಶನ್‌ ತಾಳ್ಮೆಯ ಆಟ, ಕೊನೆಯಲ್ಲಿ ಕಮಿಂಡು ಮೆಂಡೀಸ್‌, ನಿತೀಶ್‌ ರೆಡ್ಡಿ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನಿಂದ ತಂಡಕ್ಕೆ ಗೆಲುವು ಒಲಿದು ಬಂದಿತು.

    ಹೈದರಾಬಾದ್‌ ಪರ ಟ್ರಾವಿಸ್‌ ಹೆಡ್‌ 19ರನ್‌, ಇಶಾನ್‌ ಕಿಶನ್‌ 44 ರನ್‌, ಅನಿಕೇತ್‌ 19 ರನ್‌, ಕಮಿಂಡು ಮೆಂಡೀಸ್‌ 32 ರನ್‌, ನಿತೀಶ್‌ ರೆಡ್ಡಿ 19ರನ್‌ ಗಳಿಸಿದ್ರೆ ವೈಡ್‌, ನೋಬಾಲ್‌, ಬೈಸ್‌ನಿಂದಲೇ 15 ರನ್‌ ತಂಡಕ್ಕೆ ಸೇರ್ಪಡೆ ಆಯ್ತು.

  • ಪೂರನ್‌ ಬೆಂಕಿ ಆಟಕ್ಕೆ ಸನ್‌ರೈಸರ್ಸ್‌ ಬರ್ನ್‌ – ಲಕ್ನೋಗೆ 5 ವಿಕೆಟ್‌ಗಳ ಜಯ

    ಪೂರನ್‌ ಬೆಂಕಿ ಆಟಕ್ಕೆ ಸನ್‌ರೈಸರ್ಸ್‌ ಬರ್ನ್‌ – ಲಕ್ನೋಗೆ 5 ವಿಕೆಟ್‌ಗಳ ಜಯ

    ಹೈದರಾಬಾದ್: ನಿಕೋಲಸ್ ಪೂರನ್ ಬೆಂಕಿ ಬ್ಯಾಟಿಂಗ್‌ಗೆ ಸನ್‌ರೈಸರ್ಸ್‌ ಬರ್ನ್‌ ಆಗಿದೆ. ಹೈದರಾಬಾದ್‌ ವಿರುದ್ಧ ಲಕ್ನೋ 5 ವಿಕೆಟ್‌ಗಳ (SRH vs LSG) ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌ 20 ಓವರ್‌ಗೆ 9 ವಿಕೆಟ್‌ ನಷ್ಟಕ್ಕೆ 190 ರನ್‌ ಗಳಿಸಿತು. ಲಕ್ನೋ ಸೂಪರ್‌ ಜೈಂಟ್ಸ್‌ 16.1 ಓವರ್‌ಗೆ 5 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿ ಗೆದ್ದು ಬೀಗಿತು. ಇದನ್ನೂ ಓದಿ: ಸಿಕ್ಸರ್‌, ಬೌಂಡರಿಗಳ ಸುರಿಮಳೆ – ಈ ಐಪಿಎಲ್‌ನಲ್ಲಿ ಪೂರನ್‌ ದಾಖಲೆ

    ಪ್ಯಾಟ್‌ ಕಮ್ಮಿನ್ಸ್‌ ಪಡೆ ಬ್ಯಾಟಿಂಗ್‌ನಲ್ಲಿ ಅಷ್ಟಾಗಿ ಅಬ್ಬರಿಸಿದಂತೆ ಕಾಣಲಿಲ್ಲ. ಉತ್ತಮ ಫಾರ್ಮ್‌ನಲ್ಲಿರುವ ಟ್ರಾವಿಸ್‌ ಹೆಡ್‌ ಆರಂಭಿಕ ಆಟ ಭರವಸೆ ಮೂಡಿಸಿತ್ತು. ಆದರೆ, ಅವರಿಗೆ ಸಾಥ್‌ ನೀಡುವಲ್ಲಿ ಇತರೆ ಬ್ಯಾಟರ್‌ಗಳು ವಿಫಲರಾದರು. ಹೆಡ್‌ 28 ಬಾಲ್‌ಗೆ 5 ಫೋರ್‌, 3 ಸಿಕ್ಸರ್‌ಗಳೊಂದಿಗೆ 47 ರನ್‌ ಗಳಿಸಿ ಔಟಾದರು. ಇದಕ್ಕೂ ಮುನ್ನ ಅಭಿಷೇಕ್‌ ಶರ್ಮಾ (6), ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಇಶಾನ್‌ ಕಿಶನ್‌ ಸೊನ್ನೆ ಸುತ್ತಿ ನಿರ್ಗಮಿಸಿದ್ದು, ನಿರಾಸೆ ಮೂಡಿಸಿತು.

    ನಿತೀಶ್ ಕುಮಾರ್ ರೆಡ್ಡಿ 32, ಹೆನ್ರಿಕ್ ಕ್ಲಾಸೆನ್ 26, ಅನಿಕೇತ್ ವರ್ಮಾ 36, ಪ್ಯಾಟ್ ಕಮ್ಮಿನ್ಸ್ 18, ಹರ್ಷಲ್ ಪಟೇಲ್ 12 ರನ್‌ ಗಳಿಸಿದರು. ಲಕ್ನೋ ಪರ ಶಾರ್ದೂಲ್ ಠಾಕೂರ್ 4 ವಿಕೆಟ್‌ ಕಿತ್ತು ಗಮನ ಸೆಳೆದರು. ಆವೇಶ್ ಖಾನ್, ದಿಗ್ವೇಶ್ ರಥಿ, ರವಿ ಬಿಷ್ಣೋಯ್‌, ಪ್ರಿನ್ಸ್ ಯಾದವ್ ತಲಾ 1 ವಿಕೆಟ್‌ ಕಿತ್ತರು.

    ಹೈದರಾಬಾದ್‌ ನೀಡಿದ 191 ರನ್‌ ಗುರಿ ಬೆನ್ನತ್ತಿದ ಲಕ್ನೋಗೆ 4 ರನ್‌ ಇರುವಾಗಲೇ ಐಡೆನ್ ಮಾರ್ಕ್ರಾಮ್ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿದ್ದು, ಆರಂಭಿಕ ಆಘಾತ ನೀಡಿತು. ಮಿಚೆಲ್ ಮಾರ್ಷ್ ಮತ್ತು ನಿಕೋಲಸ್ ಪೂರನ್ ಸ್ಫೋಟಕ ಬ್ಯಾಟಿಂಗ್‌ ತಂಡದ ಗೆಲುವನ್ನು ಖಚಿತಪಡಿಸಿತು. ಮಾರ್ಷ್‌ 31 ಬಾಲ್‌ಗೆ 52 ರನ್‌ (7 ಫೋರ್‌, 2 ಸಿಕ್ಸರ್)‌ ಸಿಡಿಸಿ ತಂಡಕ್ಕೆ ನೆರವಾದರು. ಪೂರನ್‌ ಹೊಡಿಬಡಿ ಆಟದಿಂದ ಗಮನ ಸೆಳೆದರು. ಕೇವಲ 26 ಬಾಲ್‌ಗೆ 6 ಫೋರ್‌ ಮತ್ತು 6 ಸಿಕ್ಸರ್‌ನೊಂದಿಗೆ 70 ರನ್‌ ಕಲೆಹಾಕಿ ಅಬ್ಬರಿಸಿದರು.

    ಕಳೆದ ಪಂದ್ಯದಲ್ಲಿ ಸೊನ್ನೆ ಸುತ್ತಿ ನಿರಾಸೆ ಮೂಡಿಸಿದ್ದ ಕ್ಯಾಪ್ಟನ್‌ ರಿಷಬ್‌ ಪಂತ್‌ (15) ಇಂದು ಸಾಮಾಧಾನಕರ ಆಟ ಆಡದರು. ಡೇವಿಡ್ ಮಿಲ್ಲರ್ 13, ಅಬ್ದುಲ್ ಸಮದ್ 22 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

  • ಆಸೀಸ್‌ಗೆ ಬಹುದೊಡ್ಡ ಆಘಾತ – ಚಾಂಪಿಯನ್ಸ್‌ ಟ್ರೋಫಿಯಿಂದ ಹೊರಗುಳಿದ ಸ್ಟಾರ್ಕ್‌

    ಆಸೀಸ್‌ಗೆ ಬಹುದೊಡ್ಡ ಆಘಾತ – ಚಾಂಪಿಯನ್ಸ್‌ ಟ್ರೋಫಿಯಿಂದ ಹೊರಗುಳಿದ ಸ್ಟಾರ್ಕ್‌

    – ದೈತ್ಯ ಆಸೀಸ್‌ ತಂಡದಲ್ಲೀಗ `Five Star’ ಕೊರತೆ

    ಕ್ಯಾನ್ಬೆರಾ: 2025ರ ಚಾಂಪಿಯನ್ಸ್‌ (Champions Trophy 2025) ಟ್ರೋಫಿ ಟೂರ್ನಿಗೆ ಇನ್ನೂ ಒಂದು ವಾರವಷ್ಟೇ ಬಾಕಿ ಉಳಿದಿದೆ. ಈ ಹೊತ್ತಿನಲ್ಲೇ ಆಸ್ಟ್ರೇಲಿಯಾ ತಂಡಕ್ಕೆ ಬಹುದೊಡ್ಡ ಆಘಾತವಾಗಿದೆ.

    ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಮಾರ್ಕಸ್‌ ಸ್ಟೋಯ್ನಿಸ್‌ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಸ್ಟಾರ್‌ ವೇಗಿ ಮಿಚೆಲ್‌ ಸ್ಟಾರ್ಕ್‌ (Mitchell Starc) ಚಾಂಪಿಯನ್ಸ್‌ ಟ್ರೋಫಿಯಿಂದ ಹೊರಗುಳಿದಿದ್ದಾರೆ. ಇದನ್ನೂ ಓದಿ: ಚಾಂಪಿಯನ್ಸ್‌ ಟ್ರೋಫಿ ಹೊತ್ತಲ್ಲೇ ಆಸೀಸ್‌ಗೆ ದೊಡ್ಡ ಆಘಾತ – ಏಕದಿನ ಕ್ರಿಕೆಟ್‌ಗೆ ಸ್ಟೋಯ್ನಿಸ್‌ ಗುಡ್‌ಬೈ

    ಬಲಿಷ್ಠ ತಂಡದಲ್ಲಿ ಸ್ಟಾರ್‌ಗಳ ಕೊರತೆ:
    2025ರ ಚಾಂಪಿಯನ್ಸ್‌ ಟ್ರೋಫಿಟೂರ್ನಿಗೆ 7 ದಿನಗಳು ಬಾಕಿಯಿದೆ. ಈಗಾಗಲೇ ನಾಯಕ ಪ್ಯಾಟ್‌ ಕಮ್ಮಿನ್ಸ್‌ (Pat Cummins), ವೇಗಿ ಜೋಶ್‌ ಹ್ಯಾಜಲ್‌ವುಡ್‌, ಮಿಚೆಲ್‌ ಮಾರ್ಷ್‌ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಅಲ್ಲದೇ ಏಕದಿನ ಕ್ರಿಕೆಟ್‌ಗೆ ಮಾರ್ಕಸ್‌ ಸ್ಟೋಯ್ನಿಸ್‌ ಏಕದಿನ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ. ಈ ಬೆನ್ನಲ್ಲೇ ಮಿಚೆಲ್‌ ಸ್ಟಾರ್ಕ್‌ ವೈಯಕ್ತಿಕ ಕಾರಣಗಳಿಂದ ಹೊರಗುಳಿದಿದ್ದಾರೆ. ಇದು ಅಸ್ಟ್ರೇಲಿಯಾ ತಂಡಕ್ಕೆ ನುಂಗಲಾರದ ತುತ್ತಾಗಿದೆ. ಪ್ಯಾಟ್‌ ಕಮ್ಮಿನ್ಸ್‌ ಹೊರಬಿದ್ದ ಬೆನ್ನಲ್ಲೇ ಸ್ಟೀವ್‌ ಸ್ಮಿತ್‌ಗೆ ಚಾಂಪಿಯನ್ಸ್‌ ಟ್ರೋಫಿ ನಾಯಕತ್ವ ನೀಡಲಾಗಿದೆ. ಆದ್ರೆ ಮೂವರು ಸ್ಟಾರ್‌ ಬೌಲರ್‌ (ಸ್ಟಾರ್ಕ್‌, ಕಮ್ಮಿನ್ಸ್‌, ಹ್ಯಾಜಲ್‌ವುಡ್‌), ಆಲ್‌ರೌಂಡರ್‌ ಸ್ಟೋಯ್ನಿಸ್‌ ಹೊರಗುಳಿದಿರುವುದು ಆಸೀಸ್‌ಗೆ ಆಘಾತವಾಗಿದೆ. ಈ ಐವರಿ ಬದಲೀ ಆಟಗಾರರಾಗಿ ಯಾರನ್ನ ಆಯ್ಕೆ ಮಾಡಬೇಕೆಂಬುದು ಚಿಂತೆಯಾಗಿದೆ.

    ಫೆ.19ರಿಂದ ಚಾಂಪಿಯನ್ಸ್‌ ಟ್ರೋಫಿ ಆರಂಭವಾಗುತ್ತಿದ್ದು, ಸ್ಟಾರ್ಕ್‌, ಕಮ್ಮಿನ್ಸ್‌, ಹ್ಯಾಜಲ್‌ವುಡ್‌ ಮೇಲೆ ಆಸೀಸ್‌ ಬಹುದೊಡ್ಡ ನಿರೀಕ್ಷೆ ಹೊಂದಿತ್ತು. ಆದ್ರೆ ಒಬ್ಬರಾದ ಮೇಲೆ ಒಬ್ಬರು ತಂಡದಿಂದ ಹೊರಗುಳಿಯುತ್ತಿರುವುದು ಕ್ರಿಕೆಟ್‌ ಲೋಕದಲ್ಲಿ ಚರ್ಚೆ ಹುಟ್ಟುಹಾಕಿದೆ. ಇದನ್ನೂ ಓದಿ:IND vs ENG, 2nd ODI: ರೋಹಿತ್‌ ಅಬ್ಬರದ ಶತಕ, ಜಡೇಜಾ ಸ್ಪಿನ್‌ ಜಾದು – ಆಂಗ್ಲರ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ಜಯ

    ಏಕದಿನ ಕ್ರಿಕೆಟ್‌ನಲ್ಲಿ ಸ್ಟೋಯ್ನಿಸ್‌ ಸಾಧನೆ:
    2015ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಸ್ಟೋಯ್ನಿಸ್‌, ಈವರೆಗೂ 74 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ಅವಧಿಯಲ್ಲಿ 93.96 ಸ್ಟ್ರೈಕ್ ರೇಟ್‌ನಲ್ಲಿ 1,495 ರನ್ ಗಳಿಸಿದ್ದಾರೆ. ಕೋಲ್ಕತ್ತಾದ ಈಡನ್ ಗಾರ್ಡನ್​ನಲ್ಲಿ ನ್ಯೂಜಿಲೆಂಡ್ ವಿರುದ್ಧದ ನಡೆದಿದ್ದ ಪಂದ್ಯದಲ್ಲಿ ಅಜೇಯ 146 ರನ್​ ಗಳಿಸಿದ್ದು ಏಕದಿನ ಸ್ವರೂಪದಲ್ಲಿ ಅತ್ಯಧಿಕ ಸ್ಕೋರ್​ ಆಗಿತ್ತು.

    ಜೊತೆಗೆ 74 ಪಂದ್ಯಗಳಲ್ಲಿ 43.12 ಸರಾಸರಿಯಲ್ಲಿ 48 ವಿಕೆಟ್‌ಗಳನ್ನು ಪಡೆದಿದ್ದಾರೆ. 2024ರ ನವೆಂಬರ್‌ 10ರಂದು ಪರ್ತ್‌ನಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. 2019ರಲ್ಲಿ ಕ್ರಿಕೆಟ್​ ಆಸ್ಟ್ರೇಲಿಯಾ ನೀಡುವ ವರ್ಷದ ಏಕದಿನ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು.

  • ಚಾಂಪಿಯನ್ಸ್‌ ಟ್ರೋಫಿ ಹೊತ್ತಲ್ಲೇ ಆಸೀಸ್‌ಗೆ ದೊಡ್ಡ ಆಘಾತ – ಏಕದಿನ ಕ್ರಿಕೆಟ್‌ಗೆ ಸ್ಟೋಯ್ನಿಸ್‌ ಗುಡ್‌ಬೈ

    ಚಾಂಪಿಯನ್ಸ್‌ ಟ್ರೋಫಿ ಹೊತ್ತಲ್ಲೇ ಆಸೀಸ್‌ಗೆ ದೊಡ್ಡ ಆಘಾತ – ಏಕದಿನ ಕ್ರಿಕೆಟ್‌ಗೆ ಸ್ಟೋಯ್ನಿಸ್‌ ಗುಡ್‌ಬೈ

    ಕ್ಯಾನ್ಬೆರಾ: 2025ರ ಚಾಂಪಿಯನ್ಸ್‌ ಟ್ರೋಫಿ (Champions Trophy 2025) ಟೂರ್ನಿಗೆ 13 ದಿನಗಳು ಬಾಕಿಯಿರುವಾಗಲೇ ಆಸೀಸ್‌ಗೆ ದೊಡ್ಡ ಆಘಾತ ಎದುರಾಗಿದೆ. ಆಸೀಸ್‌ ನಾಯಕ ಪ್ಯಾಟ್‌ ಕಮ್ಮಿನ್ಸ್‌ (Pat Cummins), ವೇಗಿ ಜೋಶ್‌ ಹ್ಯಾಜಲ್‌ವುಡ್‌ ಈಗಾಗಲೇ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಮಿಚೆಲ್‌ ಮಾರ್ಷ್‌ ಸಹ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಈ ನಡುವೆ ಸ್ಟಾರ್‌ ಆಲ್‌ರೌಂಡರ್‌ ಮಾರ್ಕಸ್‌ ಸ್ಟೋಯ್ನಿಸ್‌ (Marcus Stoinis) ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಬಿಗ್‌ ಶಾಕ್‌ ಕೊಟ್ಟಿದ್ದಾರೆ.

    ಫೆ.19ರಿಂದ ಚಾಂಪಿಯನ್ಸ್‌ ಟ್ರೋಫಿ ಆರಂಭವಾಗುತ್ತಿದ್ದು, ಸ್ಟಾರ್‌ ಆಲ್‌ರೌಂಡರ್‌ ಆಗಿ ಗುರುತಿಸಿಕೊಂಡಿದ್ದ ಸ್ಟೋಯ್ನಿಸ್‌ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಹೊಂದಿದ್ದರು. ಆದ್ರೆ ಏಕಾಏಕಿ ನಿವೃತ್ತಿ ಘೋಷಿಸಿರುವುದು ಕ್ರಿಕೆಟ್‌ ಲೋಕದಲ್ಲಿ ಚರ್ಚೆ ಹುಟ್ಟುಹಾಕಿದೆ. ಗಾಯದ ಸಮಸ್ಯೆಯಿಂದ ಹೊರಗುಳಿದಿರುವವರ ಪೈಕಿ ಹ್ಯಾಜಲ್‌ವುಡ್‌ ಸ್ವಲ್ಪ ಚೇತರಿಕೆ ಕಂಡಿದ್ದಾರೆ. ಆದ್ರೆ ಪ್ಯಾಟ್‌ ಕಮ್ಮಿನ್ಸ್‌ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣದ ಹಿನ್ನೆಲೆ ಅವರನ್ನು ತಂಡದಿಂದ ಕೈಬಿಡಲಾಗಿದೆ. ಹೀಗಿರುವಾಗಲೇ ಸ್ಟೋಯ್ನಿಸ್‌ ಶಾಕ್‌ ಕೊಟ್ಟಿದ್ದಾರೆ.

    ಏಕದಿನ ಕ್ರಿಕೆಟ್‌ನಲ್ಲಿ ಸ್ಟೋಯ್ನಿಸ್‌ ಸಾಧನೆ:
    2015ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಸ್ಟೋಯ್ನಿಸ್‌, ಈವರೆಗೂ 74 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ಅವಧಿಯಲ್ಲಿ 93.96 ಸ್ಟ್ರೈಕ್ ರೇಟ್‌ನಲ್ಲಿ 1,495 ರನ್ ಗಳಿಸಿದ್ದಾರೆ. ಕೋಲ್ಕತ್ತಾದ ಈಡನ್ ಗಾರ್ಡನ್​ನಲ್ಲಿ ನ್ಯೂಜಿಲೆಂಡ್ ವಿರುದ್ಧದ ನಡೆದಿದ್ದ ಪಂದ್ಯದಲ್ಲಿ ಅಜೇಯ 146 ರನ್​ ಗಳಿಸಿದ್ದು ಏಕದಿನ ಸ್ವರೂಪದಲ್ಲಿ ಅತ್ಯಧಿಕ ಸ್ಕೋರ್​ ಆಗಿತ್ತು.

    ಜೊತೆಗೆ 74 ಪಂದ್ಯಗಳಲ್ಲಿ 43.12 ಸರಾಸರಿಯಲ್ಲಿ 48 ವಿಕೆಟ್‌ಗಳನ್ನು ಪಡೆದಿದ್ದಾರೆ. 2024ರ ನವೆಂಬರ್‌ 10ರಂದು ಪರ್ತ್‌ನಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. 2019ರಲ್ಲಿ ಕ್ರಿಕೆಟ್​ ಆಸ್ಟ್ರೇಲಿಯಾ ನೀಡುವ ವರ್ಷದ ಏಕದಿನ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು.

  • ಆಸೀಸ್‌ಗೆ ರಿಷಬ್‌ ʻಪಂಚ್‌ʼ – ಭಾರತಕ್ಕೆ 145 ರನ್‌ಗಳ ಮುನ್ನಡೆ

    ಆಸೀಸ್‌ಗೆ ರಿಷಬ್‌ ʻಪಂಚ್‌ʼ – ಭಾರತಕ್ಕೆ 145 ರನ್‌ಗಳ ಮುನ್ನಡೆ

    ಸಿಡ್ನಿ: ಇಲ್ಲಿ ನಡೆಯುತ್ತಿರುವ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ (BGT Test Series) ಅಂತಿಮ ಪಂದ್ಯದ 2ನೇ ದಿನದಾಟದಲ್ಲಿ ಟೀಂ ಇಂಡಿಯಾ ವೇಗಿಗಳು ಹಿಡಿತ ಸಾಧಿಸಿದ್ದಾರೆ.

    ಮತ್ತೊಂದೆಡೆ ರಿಷಬ್‌ ಪಂತ್‌ (Rishabh Pant) ಅವರ ಸಿಡಿಲಬ್ಬರದ ಅರ್ಧಶತಕ ಬ್ಯಾಟಿಂಗ್‌ ನೆರವಿನಿಂದ ದಿನಾಂತ್ಯಕ್ಕೆ 32 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 141 ರನ್‌ ಗಳಿಸಿರುವ ಭಾರತ 145 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

    ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ಮೊದಲ ದಿನದ ಅಂತ್ಯಕ್ಕೆ 3 ಓವರ್‌ಗಳಲ್ಲಿ 9 ರನ್‌ಗಳಿಗೆ 1 ವಿಕೆಟ್‌ ಕಳೆದುಕೊಂಡಿತು. ಇಂದು 2ನೇ ದಿನದ ಆಟ ಆರಂಭಿಸಿದ ಆಸೀಸ್‌ 181 ರನ್‌ಗಳಿಗೆ ಆಲೌಟ್‌ ಆಯಿತು. ಬಳಿಕ 4 ರನ್‌ಗಳ ಅಲ್ಪ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ ದಿನದ ಅಂತ್ಯಕ್ಕೆ 32 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 141 ರನ್‌ ಗಳಿಸಿದೆ. ಈ ಮೂಲಕ 145 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

    ರಿಷಬ್‌ ಸ್ಫೋಟಕ ಫಿಫ್ಟಿ – ವಿಶೇಷ ಸಾಧನೆ:
    ಸಂಕಷ್ಟದಲ್ಲಿದ್ದ ಭಾರತಕ್ಕೆ ರಿಷಬ್‌ ಪಂತ್‌ ಅವರ ಸ್ಫೋಟಕ ಅರ್ಧಶತಕ ಬಲ ತುಂಬಿದೆ. ಆಸೀಸ್‌ ಬೌಲರ್‌ಗಳನ್ನು ಚೆಂಡಾಡಿದ ಪಂತ್‌‌ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ವಿಶೇಷ ಸಾಧನೆಗೂ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ವೇಗಿಗಳ ಅಬ್ಬರಕ್ಕೆ ಆಸಿಸ್‌ ತತ್ತರ; 181 ರನ್‌ಗಳಿಗೆ ಆಲೌಟ್‌

    ಹೌದು. 2022ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ 28 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಪಂತ್‌, ಇದೀಗ ಆಸೀಸ್‌ ವಿರುದ್ಧ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಇದರೊಂದಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ ನಂ.1 ಹಾಗೂ ನಂ.2 ಭಾರತೀಯ ಬ್ಯಾಟರ್‌ ರಿಷಬ್‌ ಪಂತ್‌ ಅವರೇ ಆಗಿದ್ದಾರೆ. 1982ರಲ್ಲಿ ಪಾಕ್‌ ವಿರುದ್ಧ ಕಪಿಲ್‌ ದೇವ್‌ (30 ಎಸೆತ), 2021ರಲ್ಲಿ ಇಂಗ್ಲೆಂಡ್‌ ವಿರುದ್ಧ ಶಾರ್ದೂಲ್‌ ಠಾಕೂರ್‌ (31 ಎಸೆತ), 2024ರಲ್ಲಿ ಬಾಂಗ್ಲಾ ವಿರುದ್ಧ ಯಶಸ್ವಿ ಜೈಸ್ವಾಲ್‌ (31 ಎಸೆತ) ಕ್ರಮವಾಗಿ 3, 4, 5ನೇ ಸ್ಥಾನದಲ್ಲಿದ್ದಾರೆ.

    ಇನ್ನುಳಿದಂತೆ ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್‌ 22ರನ್‌, ಕೆ.ಎಲ್‌ ರಾಹುಲ್‌ ಮತ್ತು ಶುಭಮನ್‌ ಗಿಲ್‌ ತಲಾ 13 ರನ್‌, ವಿರಾಟ್‌ ಕೊಹ್ಲಿ 6 ರನ್‌, ನಿತೀಶ್‌ ರೆಡ್ಡಿ 4 ರನ್‌ ಗಳಿಸಿದರು. ರವೀಂದ್ರ ಜಡೇಜಾ ಅಜೇಯ 8 ರನ್‌, ವಾಷಿಂಗ್ಟನ್‌ ಸುಂದರ್‌ ಅಜೇಯ 6 ರನ್‌ ಗಳಿಸಿದ್ದು, 3ನೇ ದಿನಕ್ಕೆ ಕ್ರೀಸ್‌ ಕಾಯ್ದಿರಿಸಿದ್ದಾರೆ. ಇದನ್ನೂ ಓದಿ: ಸಿಡ್ನಿ ಪಂದ್ಯದಿಂದ ರೋಹಿತ್‌ ಔಟ್‌? – ಗೌತಮ್‌ ಗಂಭೀರ್‌ ಹೇಳಿದ್ದೇನು?

    ಬೊಲ್ಯಾಂಡ್‌ ಬೊಂಬಾಟ್‌ ಬೌಲಿಂಗ್‌:
    ಇದೇ ಚೊಚ್ಚಲ ಟೆಸ್ಟ್‌ ಸರಣಿಯನ್ನಾಡುತ್ತಿರುವ ಸ್ಕಾಟ್‌ ಬೊಲ್ಯಾಂಡ್‌ ಅಂತಿಮ ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳ ವಿರುದ್ಧ ಹಿಡಿತ ಸಾಧಿಸಿದ್ದಾರೆ. 2ನೇ ದಿನದ ಅಂತ್ಯಕ್ಕೆ 13 ಓವರ್‌ಗಳಲ್ಲಿ 42 ರನ್‌ ಬಿಟ್ಟುಕೊಟ್ಟ ಬೊಲ್ಯಾಂಡ್‌ 4 ವಿಕೆಟ್‌ ಕಿತ್ತರೆ, ಪ್ಯಾಟ್‌ ಕಮ್ಮಿನ್ಸ್‌, ಬಿಯು ವೆಬ್‌ಸ್ಟರ್‌ ತಲಾ ಒಂದೊಂದು ವಿಕೆಟ್‌ ಕಿತ್ತರು. ಇದನ್ನೂ ಓದಿ:  ಚಹಲ್‌, ಧನಶ್ರೀ ದಾಂಪತ್ಯದಲ್ಲಿ ಬಿರುಕು – ಮದ್ವೆಯಾಗಿ 4 ವರ್ಷದ ಬಳಿಕ ಡಿವೋರ್ಸ್?

  • ಮತ್ತೆ ಕೈಕೊಟ್ಟ ಟಾಪ್‌ ಬ್ಯಾಟರ್ಸ್‌ – ಮೊದಲ ದಿನವೇ ಭಾರತ 185ಕ್ಕೆ ಆಲೌಟ್‌; ಆಸೀಸ್‌ 9ಕ್ಕೆ 1 ವಿಕೆಟ್‌

    ಮತ್ತೆ ಕೈಕೊಟ್ಟ ಟಾಪ್‌ ಬ್ಯಾಟರ್ಸ್‌ – ಮೊದಲ ದಿನವೇ ಭಾರತ 185ಕ್ಕೆ ಆಲೌಟ್‌; ಆಸೀಸ್‌ 9ಕ್ಕೆ 1 ವಿಕೆಟ್‌

    ಸಿಡ್ನಿ: ಬಾರ್ಡರ್‌ ಗವಾಸ್ಕರ್‌ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿಯ ಅಂತಿಮ ಪಂದ್ಯದ ಮೊದಲ ದಿನವೇ ಭಾರತ 185 ರನ್‌ಗಳಿಗೆ ಆಲೌಟ್‌ ಆಗಿದೆ. ಬಳಿಕ ತನ್ನ‌ ಸರದಿಯ ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ಆಸ್ಟ್ರೇಲಿಯಾ (Australia) ದಿನಾಂತ್ಯಕ್ಕೆ 3 ಓವರ್‌ಗಳಲ್ಲಿ 9 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿದೆ.

    ಸಿಡ್ನಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ-ಆಸೀಸ್‌ (Ind vs Aus) ನಡುವಿನ 5ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯ ಆರಂಭಗೊಂಡಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿಕೊಂಡ ಟೀಂ ಇಂಡಿಯಾ 72.2 ಓವರ್‌ಗಳಲ್ಲಿ 185 ರನ್‌ಗಳಿಗೆ ಆಲೌಟ್‌ ಆಯಿತು. ಇದನ್ನೂ ಓದಿ: ಭಾರತಕ್ಕೆ ಹೀನಾಯ ಸೋಲು – ಆಸ್ಟ್ರೇಲಿಯಾಗೆ 184 ರನ್‌ಗಳ ಭರ್ಜರಿ ಗೆಲುವು

    ಅಗ್ರ ಬ್ಯಾಟರ್‌ಗಳ ವೈಫಲ್ಯ:
    ಅಂತಿಮ ಪಂದ್ಯದಲ್ಲೂ ಟೀಂ ಇಂಡಿಯಾದ (Team India) ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಕೈಕೊಟ್ಟರು. ಯಶಸ್ವಿ ಜೈಸ್ವಾಲ್‌, ಕೆ.ಎಲ್‌ ರಾಹುಲ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ ಅಲ್ಪಮೊತ್ತಕ್ಕೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಪರೇಡ್‌ ನಡೆಸಿದರು. ಮಧ್ಯಮ ಕ್ರಮಾಂಕದಲ್ಲಿ ರಿಷಬ್‌ ಪಂತ್‌, ರವೀಂದ್ರ ಜಡೇಜಾ ಅವರಿಂದ 48 ರನ್‌ಗಳ ಸಣ್ಣ ಜೊತೆಯಾಟ ಬಂದರೂ ಭಾರತ 200 ರನ್‌ಗಳ ಗಡಿ ದಾಟುವಲ್ಲಿ ವಿಫಲವಾಯಿತು.

    ಭಾರತದ ಪರ ರಿಷಬ್ ಪಂತ್ 40 ರನ್‌, ರವೀಂದ್ರ ಜಡೇಜಾ 26 ರನ್‌, ಜಸ್ಪ್ರೀತ್ ಬುಮ್ರಾ 22 ರನ್, ಶುಭಮನ್‌ ಗಿಲ್‌ 20 ರನ್‌, ವಿರಾಟ್‌ ಕೊಹ್ಲಿ 17 ರನ್‌, ವಾಷಿಂಗ್ಟನ್‌ ಸುಂದರ್‌ 14 ರನ್‌, ಯಶಸ್ವಿ ಜೈಸ್ವಾಲ್‌ 10 ರನ್‌, ಕೆ.ಎಲ್‌ ರಾಹುಲ್‌ 4 ರನ್‌, ಪ್ರಸಿದ್ಧ್‌ ಕೃಷ್ಣ 3 ರನ್‌, ಸಿರಾಜ್‌ ಅಜೇಯ 3 ರನ್‌ ಗಳಿಸಿದ್ರೆ, ನಿತೀಶ್‌ ರೆಡ್ಡಿ ಶೂನ್ಯ ಸುತ್ತಿದರು. ಇದನ್ನೂ ಓದಿ: ಮನು ಭಾಕರ್‌, ಗುಕೇಶ್‌ ಸೇರಿದಂತೆ ನಾಲ್ವರಿಗೆ ಖೇಲ್‌ ರತ್ನ ಘೋಷಣೆ

    ಆರಂಭಿಸಿದ ಆಸೀಸ್‌ ಪರ ಉಸ್ಮಾನ್‌ ಖವಾಜ 2 ರನ್‌ ಗಳಿಸಿ,‌ ದಿನಾಂತ್ಯದ ಕೊನೇ ಎಸೆತದಲ್ಲಿ ಜಸ್ಪ್ರೀತ್‌ ಬುಮ್ರಾಗೆ ವಿಕೆಟ್‌ ಒಪ್ಪಿಸಿದರು. ಇನ್ನೂ ಸ್ಯಾಮ್‌ ಕಾನ್ಸ್‌ಸ್ಟಾಸ್‌ 7 ರನ್‌ ಗಳಿಸಿದ್ದು, 2ನೇ ದಿನಕ್ಕೆ ಕ್ರೀಸ್‌ ಕಾಯ್ದಿರಿಸಿದ್ದಾರೆ.

    ಆಸ್ಟ್ರೇಲಿಯಾ ಪರ ವೇಗದ ಬೌಲರ್ ಸ್ಕಾಟ್ ಬೋಲೆಂಡ್ 31 ರನ್ ಗಳಿಗೆ 4 ವಿಕೆಟ್ ಕಿತ್ತರೆ, ಮಿಚೆಲ್ ಸ್ಟಾರ್ಕ್ 49 ರನ್ ಗಳಿಗೆ 3 ವಿಕೆಟ್ ಗಳಿಸಿದರು. ನಾಯಕ ಪ್ಯಾಟ್ ಕಮಿನ್ಸ್ 37 ರನ್ ಗಳಿಗೆ 2 ವಿಕೆಟ್ ಕಬಳಿಸಿದರು. ಉಳಿದೊಂದು ವಿಕೆಟ್ ಸ್ಪಿನ್ನರ್ ನಥಾನ್‌ ಲಿಯೋನ್ ಪಾಲಾಯಿತು. ಇದನ್ನೂ ಓದಿ: ಸಿಡ್ನಿ ಪಂದ್ಯದಿಂದ ರೋಹಿತ್‌ ಔಟ್‌? – ಗೌತಮ್‌ ಗಂಭೀರ್‌ ಹೇಳಿದ್ದೇನು?