Tag: Password Sharing

  • Netflixː ಭಾರತದಲ್ಲಿ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಶೇರಿಂಗ್ ಬಂದ್

    Netflixː ಭಾರತದಲ್ಲಿ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಶೇರಿಂಗ್ ಬಂದ್

    ನವದೆಹಲಿ: ಇನ್ಮುಂದೆ ಭಾರತದಲ್ಲಿ ಪಾಸ್‌ವರ್ಡ್ (Netflix Password) ಹಂಚಿಕೆ ಮಾಡಿಕೊಳ್ಳುವುದನ್ನ ಕೊನೆಗೊಳಿಸಿರುವುದಾಗಿ ನೆಟ್‌ಫ್ಲಿಕ್ಸ್ ಗುರುವಾರ ಘೋಷಿಸಿದೆ. ನೆಟ್‌ಫ್ಲಿಕ್ಸ್ (Netflix) ಒಂದು ಖಾತೆಯನ್ನ ಒಂದು ಕುಟುಂಬದವರು ಬಳಕೆ ಮಾಡಲು ಸಾಧ್ಯವಿದೆ ಎಂದು ತಿಳಿಸಿದೆ.

    ಕಳೆದ ವರ್ಷ ನೆಟ್‌ಫ್ಲಿಕ್ಸ್ ಹೆಚ್ಚಿನ ಚಂದಾದಾರನ್ನ ಕಳೆದುಕೊಂಡ ನಂತರ ಕಂಪನಿಯ ಆದಾಯ ಹೆಚ್ಚಿಸುವ ಸಲುವಾಗಿ ಈ ಪ್ರಯತ್ನಕ್ಕೆ ಮುಂದಾಗಿದೆ. ಅದರಂತೆ ಭಾರತದಲ್ಲಿ ಪಾಸ್‌ವರ್ಡ್ ಹಂಚಿಕೆ ಮಾಡಿಕೊಳ್ಳುವುದನ್ನ ನಿಷೇಧಿಸಿದೆ. ಇದರಿಂದಾಗಿ ನೆಟ್‌ಫ್ಲಿಕ್ಸ್ ಖಾತೆಯು ಒಂದು ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ. ಅಲ್ಲದೇ ಆ ಪಾಸ್‌ವರ್ಡ್ ಅನ್ನು ಮತ್ತೊಬ್ಬರು ಬಳಸಲು ಪ್ರಯತ್ನಿಸಿದರೆ ಮುಂದೆ ಅವಕಾಶ ನೀಡುವುದಿಲ್ಲ. ಇದನ್ನೂ ಓದಿ: Twitter Monetisation: ಕಂಟೆಂಟ್‌ ಕ್ರಿಯೇಟರ್ಸ್‌ಗಳಿಗೆ ಟ್ವಿಟ್ಟರ್‌ನಿಂದ ಸಿಗುತ್ತೆ ಹಣ – ಹೇಗೆ ಅಂತೀರಾ..?

    ಕಂಪನಿಯ ಪ್ರಕಾರ, ಒಂದು ಖಾತೆಯನ್ನು ಒಂದು ಮನೆಯಲ್ಲಿ ಮಾತ್ರ ಬಳಸಬೇಕು. ಜೊತೆಗೆ ಪ್ರೊಫೈಲ್ ವರ್ಗಾವಣೆಯ (Transfer Profile) ಪ್ರಯೋಜನವನ್ನೂ ಪಡೆಯಬಹುದು ಎಂದು ಹೇಳಿದೆ. ಈ ಹಿಂದೆ ನೆಟ್‌ಫ್ಲಿಕ್ಸ್ ಭಾರತದ ಹೊರಗೆ ಪಾಸ್‌ವರ್ಡ್ ಹಂಚಿಕೆಯನ್ನ ನಿಷೇಧಿಸಿತ್ತು. ಆದ್ರೆ ಪಾಸ್‌ವರ್ಡ್ ಶೇರಿಂಗ್ ನಿಷೇಧಿಸಿದ ನಂತರ ಚಂದಾದಾರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ ಎಂದು ಕಂಪನಿ ಹೇಳಿದೆ.

    ಈಗಾಗಲೇ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಹಂಚಿಕೊಳ್ಳುವವರಿಗೆ ಇ-ಮೇಲ್ ಕಳುಹಿಸಲು ಪ್ರಾರಂಭಿಸಿದ್ದೇವೆ. ನಮ್ಮ ಚಂದಾದಾರಿಗೆ ವಿವಿಧ ಮನರಂಜನಾ ಆಯ್ಕೆಗಳನ್ನು ನೀಡಲು ಹೊಸ ಪ್ರಯತ್ನಗಳು ನಡೆದಿದೆ. ವಿವಿಧ ರೀತಿಯ ಹೊಸ ಸಿನಿಮಾಗಳು, ಟಿವಿ ಶೋಗಳಲ್ಲಿ ಹೂಡಿಕೆ ಮುಂದುವರಿಸಿದ್ದೇವೆ ಎಂದೂ ಕಂಪನಿ ಹೇಳಿದೆ. ಇದನ್ನೂ ಓದಿ: ಕೃತಕ ಬುದ್ಧಿಮತ್ತೆ ಎಂದರೇನು? ಅನುಕೂಲ, ಅನಾನುಕೂಲಗಳೇನು?

    ಅಮೆರಿಕ (USA), ಬ್ರಿಟನ್, ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾ, ಸಿಂಗಾಪುರ, ಮೆಕ್ಸಿಕೋ ಮತ್ತು ಬ್ರೆಜಿಲ್‌ನಂತಹ ಪ್ರಮುಖ ಮಾರುಕಟ್ಟೆಗಳು ಸೇರಿದಂತೆ 100ಕ್ಕೂ ಹೆಚ್ಚು ದೇಶಗಳಲ್ಲಿ ಪಾಸ್‌ವರ್ಡ್ ಹಂಚಿಕೆಯ ಮೇಲೆ ಮೇ ತಿಂಗಳಲ್ಲಿ ನೆಟ್‌ಫ್ಲಿಕ್ಸ್ ನಿರ್ಬಂಧ ವಿಧಿಸಿತ್ತು. ಇದರಿಂದ 60 ಲಕ್ಷ ಮಂದಿ ಹೊಸ ಚಂದಾದಾರರನ್ನು ಒಳಗೊಳ್ಳಲು ಸಹಾಯಕವಾಗಿದೆ. ಕಳೆದ ತ್ರೈಮಾಸಿಕ ಅಂದಾಜಿನ ಪ್ರಕಾರ 23.8 ಕೋಟಿ ಚಂದಾದಾರರನ್ನ ಒಳಗೊಂಡಿದ್ದು 1.5 ಶತಕೋಟಿ ಡಾಲರ್‌ನಷ್ಟು ಲಾಭ ಗಳಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.

    ಈ ಹಿಂದೆ ನೆಟ್‌ಫ್ಲಿಕ್ಸ್, 2020ರಲ್ಲಿ ಕೋವಿಡ್ ಕಾರಣದಿಂದ ನಮ್ಮ ಕಂಪನಿಯ ಆದಾಯ ಗಣನೀಯವಾಗಿ ಏರಿಕೆ ಕಂಡಿತ್ತು. 2021ರಲ್ಲಿ ಕೋವಿಡ್ ಇಳಿಕೆಯಿಂದಾಗಿ ನಿಧಾನಗತಿಯಲ್ಲಿ ಆದಾಯವೂ ಇಳಿಯತೊಡಗಿತು ಎಂದು ಹೇಳಿಕೊಂಡಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Netflix ಬಳಕೆದಾರರಿಗೆ ಕಹಿ ಸುದ್ದಿ – ಇನ್ಮುಂದೆ ಪಾಸ್‌ವರ್ಡ್ ಶೇರಿಂಗ್ ಆಗಲ್ಲ

    Netflix ಬಳಕೆದಾರರಿಗೆ ಕಹಿ ಸುದ್ದಿ – ಇನ್ಮುಂದೆ ಪಾಸ್‌ವರ್ಡ್ ಶೇರಿಂಗ್ ಆಗಲ್ಲ

    ವಾಷಿಂಗ್ಟನ್: ಸ್ಟ್ರೀಮಿಂಗ್ ದೈತ್ಯ ನೆಟ್‌ಫ್ಲಿಕ್ಸ್ (Netflix) 2023ರ ಆರಂಭದಿಂದ ಪಾಸ್‌ವರ್ಡ್ ಹಂಚಿಕೆ (Password Sharing) ಫೀಚರ್ ಅನ್ನು ಕೊನೆಗೊಳಿಸಲು ಯೋಜಿಸುತ್ತಿರುವುದಾಗಿ ವರದಿಯಾಗಿದೆ.

    ಹೌದು, ಕಂಪನಿ ಈ ಹಿಂದೆ ಕಳೆದ ಹಲವು ತಿಂಗಳುಗಳಿಂದಲೇ ಪಾಸ್‌ವರ್ಡ್ ಹಂಚಿಕೆ ಫೀಚರ್ ಅನ್ನು ಸ್ಥಗಿತಗೊಳಿಸುವ ಬಗ್ಗೆ ಆಗಾಗ ಸುದ್ದಿಯಾಗುತ್ತಿತ್ತು. ಆದರೆ ಇದೀಗ ನೆಟ್‌ಫ್ಲಿಕ್ಸ್ ಕೊನೆಗೂ ಈ ಬದಲಾವಣೆಯನ್ನು ಅಧಿಕೃತವಾಗಿ ಮುಂದಿನ ವರ್ಷದಿಂದ ಜಾರಿಗೆ ತರಲು ಯೋಜಿಸಿರುವುದಾಗಿ ವರದಿಯಾಗಿದೆ.

    ಪಾಸ್‌ವರ್ಡ್ ಹಂಚಿಕೆ ಫೀಚರ್ ಕಂಪನಿಯ ಗಳಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿರುವುದಾಗಿ ನೆಟ್‌ಫ್ಲಿಕ್ಸ್ ಹಿಂದಿನಿಂದಲೂ ಹೇಳಿಕೊಂಡು ಬಂದಿತ್ತು. ಆದರೆ 2022ರಲ್ಲಿ ಚಂದಾದಾರರ ಹೆಚ್ಚಳದಿಂದಾಗಿ ಕಂಪನಿ ತನ್ನ ಸಮಸ್ಯೆ ತೋರಿಸಿಕೊಳ್ಳುವುದನ್ನು ಕಡಿಮೆ ಮಾಡಿತ್ತು.

    ಈ ವರ್ಷ ನೆಟ್‌ಫ್ಲಿಕ್ಸ್ ಆದಾಯದ ಕುಸಿತ ಹಾಗೂ 10 ವರ್ಷಗಳಲ್ಲೇ ಮೊದಲ ಬಾರಿ ಚಂದಾದಾರರ ನಷ್ಟವನ್ನು ಎದುರಿಸಿದೆ. ಹೀಗಾಗಿ ಕಂಪನಿಯ ಸಿಇಒ ರೀಡ್ ಹೇಸ್ಟಿಂಗ್ಸ್ ಈ ಸಮಸ್ಯೆಗೆ ಇದೀಗ ಕ್ರಮ ತೆಗೆದುಕೊಳ್ಳಲು ಸೂಕ್ತ ಸಮಯವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಲಾಕ್‌ಡೌನ್‌ ಅಗತ್ಯವಿಲ್ಲ : IMA

    ನೆಟ್‌ಫ್ಲಿಕ್ಸ್ ಬಳಕೆದಾರರು ತಮ್ಮ ಮನೆಯಿಂದ ಹೊರಗಿನವರಿಗೆ ಖಾತೆಯ ಪಾಸ್‌ವರ್ಡ್ ಹಂಚಿಕೊಂಡಿದ್ದಲ್ಲಿ, ಅವರಿಂದಲೂ ಪಾವತಿಯನ್ನು ಕೇಳಲು ಯೋಜಿಸಿದೆ. ಇದು ಮುಂದಿನ ವರ್ಷ ಆರಂಭದಿಂದಲೇ ಜಾರಿಗೆ ಬರಲಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಟೆಲಿಕಾಂ ಆಯ್ತು ಇನ್ನು FMCG – ಮುಕೇಶ್‌ ಅಂಬಾನಿಯಿಂದ ಈಗ ಮೆಟ್ರೋ ಕ್ಯಾಶ್‌ & ಕ್ಯಾರಿ ಶಾಪಿಂಗ್‌

    ಈ ವರ್ಷ ಅಕ್ಟೋಬರ್‌ನಲ್ಲಿ ನೆಟ್‌ಫ್ಲಿಕ್ಸ್ ತನ್ನ ಎಲ್ಲಾ ಜಾಗತಿಕವಾಗಿ ಬಳಕೆದಾರರಿಗೆ ಪಾಸ್‌ವರ್ಡ್ ಹಂಚಿಕೆಯನ್ನು ತಡೆಯಲು ‘ಪ್ರೊಫೈಲ್ ಟ್ರಾನ್ಸ್‌ಫರ್’ ಫೀಚರ್ ಅನ್ನು ಘೋಷಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಪಾಸ್‌ವರ್ಡ್ ಹಂಚಿಕೆಗೆ ಶುಲ್ಕ ವಿಧಿಸಲು ನೆಟ್‌ಫ್ಲಿಕ್ಸ್ ಪರೀಕ್ಷಿಸುತ್ತಿದೆ ಹೊಸ ವಿಧಾನ

    ಪಾಸ್‌ವರ್ಡ್ ಹಂಚಿಕೆಗೆ ಶುಲ್ಕ ವಿಧಿಸಲು ನೆಟ್‌ಫ್ಲಿಕ್ಸ್ ಪರೀಕ್ಷಿಸುತ್ತಿದೆ ಹೊಸ ವಿಧಾನ

    ವಾಷಿಂಗ್ಟನ್: ನೆಟ್‌ಫ್ಲಿಕ್ಸ್ ಉಚಿತ ಪಾಸ್‌ವರ್ಡ್ ಹಂಚಿಕೆ ವ್ಯವಹಾರವನ್ನು ಕೊನೆಗೊಳಿಸಲು ಹೊಸ ವಿಧಾನವನ್ನು ಪರೀಕ್ಷಿಸುತ್ತಿದೆ. ವರದಿ ಪ್ರಕಾರ ನೆಟ್‌ಫ್ಲಿಕ್ಸ್ ತನ್ನ ಚಂದಾದಾರರು ಸ್ನೇಹಿತರೊಂದಿಗೆ ಪಾಸ್‌ವರ್ಡ್ ಹಂಚಿಕೊಳ್ಳುವುದಕ್ಕೆ ಇನ್ನು ಮುಂದೆ ಶುಲ್ಕ ವಿಧಿಸುತ್ತದೆ ಎನ್ನಲಾಗುತ್ತಿದೆ.

    ಕಂಪನಿ ಇತ್ತೀಚೆಗೆ ಚಿಲಿ, ಕೋಸ್ಟರಿಕಾ ಹಾಗೂ ಪೆರುವಿನಲ್ಲಿರುವ ಚಂದಾದಾರರಿಗೆ ಹೊಸದಾಗಿ Add Extra Member(ಹೆಚ್ಚುವರಿ ಸದಸ್ಯರನ್ನು ಸೇರಿಸಿ) ಎಂಬ ಆಯ್ಕೆಯನ್ನು ಪ್ರಾರಂಭಿಸಿತು. ಆದರೆ ಈ ಫೀಚರ್‌ನಲ್ಲಿ ಚಂದಾದಾರರು ತಮ್ಮ ಖಾತೆಯನ್ನು ಮನೆ ಹೊರಗಿನ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಲು ಹೆಚ್ಚುವರಿ ಪಾವತಿಸಬೇಕಾಗುತ್ತದೆ.

    ನೆಟ್‌ಫ್ಲಿಕ್ಸ್ ಇದೇ ರೀತಿಯಾಗಿ ಚಿಜಜ Add a Home(ಮನೆ ಸೇರಿಸಿ) ಎಂಬ ಫೀಚರ್ ಅನ್ನು ಕೆಲವು ದೇಶಗಳಲ್ಲಿ ಘೋಷಿಸಿದೆ. ಈ ಫೀಚರ್ ಅನ್ನು ಅರ್ಜೆಂಟೀನಾ, ಡೊಮಿನಿಕನ್ ರಿಪಬ್ಲಿಕ್, ಎಲ್ ಸಾಲ್ವಡಾರ್, ಗ್ವಾಟೆಮಾಲಾ ಹಾಗೂ ಹೊಂಡುರಾಸ್ ದೇಶಗಳಲ್ಲಿ ಪರೀಕ್ಷಿಸಲು ಪ್ರಾರಂಭಿಸುತ್ತಿದೆ. ಆದರೆ ಭಾರತದಲ್ಲಿ ಬಳಕೆದಾರರಿಗೆ ಶುಲ್ಕ ವಿಧಿಸುವ ಅಥವಾ ಬಳಕೆದಾರರ ಮನೆ ಹೊರಗಿನ ವ್ಯಕ್ತಿಗಳಿಗೆ ಪಾಸ್‌ವರ್ಡ್ ಹಂಚಿಕೊಳ್ಳುವ ಕುರಿತು ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ರಾಜ್ಯದಲ್ಲಿ ಸಾವಿರ ಗಡಿದಾಟಿದ ಕೊರೊನಾ – ಬೆಂಗ್ಳೂರಲ್ಲಿ 1,013 ಕೇಸ್, 1,104 ಮಂದಿ ಡಿಸ್ಚಾರ್ಜ್

    ವರ್ಷದ ಅಂತ್ಯದ ವೇಳೆಗೆ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಹಂಚಿಕೊಳ್ಳುವ ಎಲ್ಲಾ ಬಳಕೆದಾರರಿಗೂ ಶುಲ್ಕ ವಿಧಿಸಲು ಪ್ರಾರಂಭಿಸುವುದಾಗಿ ಈ ಹಿಂದೆಯೇ ಸುಳಿವು ನೀಡಿತ್ತು. ಹೀಗಾಗಿ ಮುಂಬರುವ ತಿಂಗಳುಗಳಲ್ಲಿ ಕಂಪನಿ Add a Home ಫೀಚರ್ ಅನ್ನು ಭಾರತಕ್ಕೂ ತರುವ ಸಾಧ್ಯತೆ ಇದೆ.

    Add a Home ಫೀಚರ್ ಮುಂದಿನ ತಿಂಗಳಿನಲ್ಲಿ ತಿಳಿಸಲಾದ ದೇಶಗಳಲ್ಲಿ ಪ್ರಾರಂಭವಾಗುತ್ತಿದ್ದು, ಇದು ಚಂದಾದಾರರ ಮನೆಯಲ್ಲಿರುವ ಸದಸ್ಯರಿಗೆ ಮಾತ್ರವೇ ಯಾವುದೇ ಡಿವೈಸ್‌ಗಳಲ್ಲಿ ಉಚಿತವಾಗಿ ಬಳಸಲು ಸಾಧ್ಯವಾಗಲಿದೆ. ಪ್ರಯಾಣಿಸುವ ಸಂದರ್ಭದಲ್ಲೂ ಇದನ್ನು ಬಳಸಲು ಸಾಧ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಹಳೆ ಮೈಸೂರು ಜೀವನಾಡಿ KRS ಭರ್ತಿ- ನಾಳೆ ಸಿಎಂ ಬಾಗಿನ ಅರ್ಪಣೆ

    ಮನೆ ಸದಸ್ಯರನ್ನು ಹೊರತುಪಡಿಸಿ ಹೊರಗಿನ ವ್ಯಕ್ತಿಗಳೊಂದಿಗೆ ನೆಟ್‌ಫ್ಲಿಕ್ಸ್‌ನ ಖಾತೆಯನ್ನು ಹಂಚಿಕೊಳ್ಳಲು ಬಯಸುವವರು ಇದಕ್ಕಾಗಿ ಶುಲ್ಕವನ್ನು ಭರಿಸಬೇಕಾಗುತ್ತದೆ.

    Live Tv
    [brid partner=56869869 player=32851 video=960834 autoplay=true]