Tag: passports

  • ರಸ್ತೆಯಲ್ಲಿ ನಮಾಜ್ ಮಾಡಿದ್ರೆ ಪಾಸ್‌ಪೋರ್ಟ್‌, ಡ್ರೈವಿಂಗ್‌ ಲೈಸೆನ್ಸ್ ರದ್ದು: ಮಿರತ್‌ ಪೊಲೀಸರಿಂದ ಎಚ್ಚರಿಕೆ

    ರಸ್ತೆಯಲ್ಲಿ ನಮಾಜ್ ಮಾಡಿದ್ರೆ ಪಾಸ್‌ಪೋರ್ಟ್‌, ಡ್ರೈವಿಂಗ್‌ ಲೈಸೆನ್ಸ್ ರದ್ದು: ಮಿರತ್‌ ಪೊಲೀಸರಿಂದ ಎಚ್ಚರಿಕೆ

    ಲಕ್ನೋ: ಈದ್-ಉಲ್-ಫಿತರ್ ಮತ್ತು ರಂಜಾನ್‌ನ (Ramzan) ಕೊನೆಯ ಶುಕ್ರವಾರದಂದು ರಸ್ತೆಗಳಲ್ಲಿ ನಮಾಜ್ ಮಾಡಿದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ಉತ್ತರ ಪ್ರದೇಶದ (Uttar Pradesh) ಮಿರತ್‌ (Meerut) ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

    ರಸ್ತೆಗಳಲ್ಲಿ ನಮಾಜ್‌ ಮಾಡಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಅಂತಹವರ ಪಾಸ್‌ಪೋರ್ಟ್‌ (Passport) ಹಾಗೂ ಚಾಲನಾ ಪರವಾನಗಿಯನ್ನೂ (Driving Licence) ರದ್ದುಗೊಳಿಸಬಹುದು ಎಂದು ಮೀರತ್ ಪೊಲೀಸ್ ಅಧೀಕ್ಷಕ (ನಗರ) ಆಯುಷ್ ವಿಕ್ರಮ್ ಸಿಂಗ್ ಎಚ್ಚರಿಸಿದ್ದಾರೆ. ಸ್ಥಳೀಯ ಮಸೀದಿಗಳು ಅಥವಾ ಗೊತ್ತುಪಡಿಸಿದ ಈದ್ಗಾಗಳಲ್ಲಿ ಈದ್ ಪ್ರಾರ್ಥನೆ ಸಲ್ಲಿಸಬೇಕು ಮತ್ತು ಯಾರೂ ರಸ್ತೆಗಳಲ್ಲಿ ನಮಾಜ್ ಮಾಡಬಾರದು ಎಂದಿದ್ದಾರೆ.ಇದನ್ನೂ ಓದಿ: ಜಮ್ಮು-ಕಾಶ್ಮೀರದ ಕಥುವಾದಲ್ಲಿ ಎನ್‌ಕೌಂಟರ್‌ – ನಾಲ್ವರು ಪೊಲೀಸರು ಹುತಾತ್ಮ, ಇಬ್ಬರು ಉಗ್ರರ ಹತ್ಯೆ

    ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಮತ್ತು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ನಾಯಕ ಜಯಂತ್ ಸಿಂಗ್ ಚೌಧರಿ, ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರೆ ಅಂತವರ ಪಾಸ್‌ಪೋರ್ಟ್‌ ಮತ್ತು ಪರವಾನಗಿಗಳನ್ನು ರದ್ದುಗೊಳಿಸಬಹುದು. ನ್ಯಾಯಾಲಯದಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಇಲ್ಲದೆ ಹೊಸ ಪಾಸ್‌ಪೋರ್ಟ್ ಪಡೆಯುವುದು ಕಷ್ಟಕರವಾಗುತ್ತದೆ. ನ್ಯಾಯಾಲಯದಿಂದ ವ್ಯಕ್ತಿಗಳು ದೋಷಮುಕ್ತರಾಗುವವರೆಗೆ ಅಂತಹ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

    ಮೀರತ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ವಿಪಿನ್ ಟಾಡಾ ಪ್ರತಿಕ್ರಿಯಿಸಿ, ಹಬ್ಬದ ಸಮಯದಲ್ಲಿ, ಸಾಮಾಜಿಕ ಮಾಧ್ಯಮಗಳ ಮೂಲಕ ವದಂತಿಗಳನ್ನು ಹರಡಿದರೆ ಅಥವಾ ಅಶಾಂತಿಯನ್ನು ಉಂಟು ಮಾಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾವು ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇಡುತ್ತಿದ್ದೇವೆ. ಕೋಮು ಸಾಮರಸ್ಯವನ್ನು ಹಾಳು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

    ಭದ್ರತೆಗಾಗಿ ಹಿಂದಿನ ಅನುಭವಗಳ ಆಧಾರದ ಮೇಲೆ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ ಮತ್ತು ಅಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಶಾಂತಿಯನ್ನು ಕಾಪಾಡಲು ಮತ್ತು ಮುಂಬರುವ ಹಬ್ಬಗಳನ್ನು ಸುಗಮವಾಗಿ ಆಚರಿಸಲು ಆಡಳಿತವು ಪ್ರಮುಖ ನಾಗರಿಕರು ಮತ್ತು ಧಾರ್ಮಿಕ ನಾಯಕರೊಂದಿಗೆ ಸಭೆ ನಡೆಸಲಾಗಿದೆ. ಕೆಲವೆಡೆ ಡ್ರೋನ್‌ಗಳನ್ನು ನಿಯೋಜಿಸಲಾಗುವುದು. ಎಲ್ಲಾ ಸೂಕ್ಷ್ಮ ಸ್ಥಳಗಳಲ್ಲಿ ಮಫ್ತಿಯಲ್ಲಿ ಅಧಿಕಾರಿಗಳನ್ನು ಸಹ ನಿಯೋಜಿಸಲಾಗುವುದು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ 50 ಕೋಟಿ ರೂ.ನಿಗದಿ: ಸಚಿವ ರಾಜಣ್ಣ

  • ನಕಲಿ ಐಎಫ್‍ಎಸ್ ಅಧಿಕಾರಿ ಅರೆಸ್ಟ್- 4 ಪಾಸ್‍ಪೋರ್ಟ್‍ಗಳು ವಶ

    ನಕಲಿ ಐಎಫ್‍ಎಸ್ ಅಧಿಕಾರಿ ಅರೆಸ್ಟ್- 4 ಪಾಸ್‍ಪೋರ್ಟ್‍ಗಳು ವಶ

    ಚಂಡೀಗಢ: ಅಮೃತಸರದ ರಾಮ್‍ಬಾಗ್ ಪೊಲೀಸರು ನಕಲಿ ಭಾರತೀಯ ವಿದೇಶಾಂಗ ಸೇವೆ (ಐಎಫ್‍ಎಸ್) ಅಧಿಕಾರಿಯನ್ನು ಗುರುವಾರ ಬಂಧಿಸಿದ್ದಾರೆ.

    ಕಾರ್ನಾಕ್ ವರ್ಮಾ ಬಂಧಿತ ಆರೋಪಿ. ಈತ ನಕಲಿ ಐಎಫ್‍ಎಸ್ ಅಧಿಕಾರಿಯಂತೆ ನಟಿಸಿ ಪಾಸ್‍ಪೋರ್ಟ್ ವೆರಿಫಿಕೇಷನ್‍ಗೆ ಬಂದ ಜನರಿಗೆ ಬೆದರಿಕೆ ಹಾಕುತ್ತಿದ್ದನು. ಅವನ ಕಾರನ್ನು ಚೆಕ್ ಪೋಸ್ಟನಲ್ಲಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿಯಿಂದ ನಾಲ್ಕು ಪಾಸ್‍ಪೋರ್ಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದ ಮೊದಲ ಕಿಡ್ನಿ ಕಸಿಮಾಡಲು ಅನುಮತಿ ಪಡೆದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ

    ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ವ್ಯಕ್ತಿಯ ವಿರುದ್ಧ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಮರ್ಯಾದಾ ಹತ್ಯೆ – ತಹಶೀಲ್ದಾರ್ ಕಚೇರಿಯಲ್ಲೇ ಚಾಕುವಿನಿಂದ ಇರಿದು ವ್ಯಕ್ತಿ ಬರ್ಬರ ಕೊಲೆ

  • ಅಕ್ರಮವಾಗಿ ವಲಸೆ ಬಂದ ಬಾಂಗ್ಲಾ ಪ್ರಜೆಗಳಿಗೂ ಸಿಗುತ್ತೆ ಆಧಾರ್ ಕಾರ್ಡ್, 2200 ರೂ. ಕೊಟ್ರೆ ಪಾಸ್‍ಪೋರ್ಟ್

    ಅಕ್ರಮವಾಗಿ ವಲಸೆ ಬಂದ ಬಾಂಗ್ಲಾ ಪ್ರಜೆಗಳಿಗೂ ಸಿಗುತ್ತೆ ಆಧಾರ್ ಕಾರ್ಡ್, 2200 ರೂ. ಕೊಟ್ರೆ ಪಾಸ್‍ಪೋರ್ಟ್

    ಬೆಳಗಾವಿ: ಆಧಾರ್ ಕಾರ್ಡ್, ಪಾಸ್‍ಪೋರ್ಟ್, ವೋಟರ್ ಐಡಿ ಇವೆಲ್ಲ ನಮ್ಮ ಅಧಿಕೃತ ಗುರುತಿನ ದಾಖಲೆಗಳು. ನಾವು ಭಾರತೀಯರು ಅನ್ನೋದನ್ನು ಖಾತ್ರಿಪಡಿಸುವುದಕ್ಕೆ ಇರೋ ದಾಖಲೆಗಳು. ಆದ್ರೆ ಗಡಿ ನಾಡು ಬೆಳಗಾವಿಯಲ್ಲಿ ಬಾಂಗ್ಲಾದಿಂದ ಅಕ್ರಮವಾಗಿ ವಲಸೆ ಬಂದಿರುವ ಮಂದಿಗೆಲ್ಲಾ ಆಧಾರ್ ಕಾರ್ಡ್, ಪಾಸ್‍ಪೋರ್ಟ್, ವೋಟರ್ ಐಡಿ ಮಾಡಿಸಿಕೊಡುವ ದಂಧೆ ನಡೆಯುತ್ತಿದೆ.

    ಅದ್ರಲ್ಲೂ ಪಾಸ್‍ಪೋರ್ಟ್ ಪಡೆಯುವುದು ಇನ್ನೂ ಸುಲಭ. ಕೇವಲ 2200 ರೂಪಾಯಿ ಖರ್ಚು ಮಾಡಿದ್ರೆ ಸಾಕು ವಿದೇಶಿಯರಿಗೆ ನಮ್ಮ ದೇಶದ ಪಾಸ್ ಪೋರ್ಟ್ ಸಿಗುತ್ತೆ. ಇಂತಹದ್ದೊಂದು ದೊಡ್ಡ ದಂದೆ ಬೆಳಗಾವಿಯಲ್ಲಿ ತಲೆ ಎತ್ತಿದೆ. ಸ್ವತಃ ಪಾಸ್‍ಪೋರ್ಟ್ ಪಡೆದ ಬಾಂಗ್ಲಾದೇಶದ ಪ್ರಜೆಯೇ ಈ ಭಯಾನಕ ಸತ್ಯವನ್ನ ಬಾಯಿಬಿಟ್ಟಿದ್ದಾನೆ.

    ಕೆಲ ದಿನಗಳ ಹಿಂದೆಯಷ್ಟೇ ಪೊಲೀಸರು ನಕಲಿ ಪಾಸ್‍ಪೋರ್ಟ್ ಮೂಲಕ ಪುಣೆಯ ಮಾರ್ಗವಾಗಿ ದುಬೈಗೆ ಹಾರಲು ಯತ್ನಿಸಿದ್ದ 11 ಮಂದಿ ಬಾಂಗ್ಲಾ ಪ್ರಜೆಗಳನ್ನು ಬಂಧಿಸಿದ್ದರು. ಅಂಜುಬೇಗಂ (37), ಹಫೀಜುಲ್ಲಾ ಇಸ್ಲಾಂ(20), ಅಕೀಬ (20), ಅನ್ನನ್ ಸದ್ದಾರ್ (21), ರೋಹನ್ ಸೆಕ್ (21), ಅಬ್ದುಲ್ ಹಾಯ್ ನಿಹಾರ ಅಲಿ ಗಾಜಿ (60), ಮೊಹಮ್ಮದ್ ಅಲಮಿನ್ ಶೌಪಿ ಉದ್ದಿನ್ ಬೇಪಾರಿ (26) ಸೇರಿದಂತೆ 11 ಆರೋಪಿಗಳನ್ನ ಬೆಳಗಾವಿ ಪೊಲೀಸರು ಬಂಧಿಸಿದ್ದರು. ಈ ಆರೋಪಿಗಳ ಮಾಹಿತಿ ಜಾಡು ಹಿಡಿದ ಬೆಳಗಾವಿ ಪೊಲೀಸರು, ನಗರದಲ್ಲಿ ನಡೆಯುತ್ತಿರುವ ನಕಲಿ ದಾಖಲಾತಿಯ ಮಾಫಿಯ ಬಗ್ಗೆ ತನಿಖೆ ಶುರು ಮಾಡಿದ್ದಾರೆ.

    ಸ್ವತಃ ಹಬಿಬುಲ್ ಶೇಖ್ ಅನ್ನೋ ಬಾಂಗ್ಲಾದೇಶಿ ಪ್ರಜೆ ಅಕ್ರಮವಾಗಿ ಪಾಸ್‍ಪೋರ್ಟ್ ಪಡೆದು ಆರೇಳು ವರ್ಷಗಳಿಂದ ಬೆಳಗಾವಿಯಲ್ಲಿ ವಾಸಿಸುತ್ತಿರುವ ಬಗ್ಗೆ ಪಬ್ಲಿಕ್ ಟಿವಿ ಕ್ಯಾಮೆರಾ ಮುಂದೆ ಬಾಯ್ಬಿಟ್ಟಿದ್ದಾನೆ. ಈ ಪ್ರಕರಣ ಸಂಪೂರ್ಣ ತನಿಖೆಯಾದರೆ ಇನ್ನಷ್ಟು ಜನ ಬಾಂಗ್ಲಾದೇಶದ ನುಸುಳುಕೊರರು ಬಂಧಿತರಾಗಲಿದ್ದಾರೆ.

    https://www.youtube.com/watch?v=x_uURstQ6uk