Tag: passengers

  • ಬಂಗಾಳದ ಬರ್ಧಮಾನ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತ – ಹಲವರಿಗೆ ಗಾಯ

    ಬಂಗಾಳದ ಬರ್ಧಮಾನ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತ – ಹಲವರಿಗೆ ಗಾಯ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬರ್ಧಮಾನ್ ರೈಲು ನಿಲ್ದಾಣದಲ್ಲಿ (Bardhaman Railway Station) ಭಾನುವಾರ (ಇಂದು) ಸಂಜೆ ಕಾಲ್ತುಳಿತ ಸಂಭವಿಸಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

    ಹಲವು ಮಾರ್ಗಗಳಿಗೆ ತೆರಳಬೇಕಿದ್ದ ರೈಲುಗಳು ಪ್ಲಾಟ್‌ಫಾರ್ಮ್‌ಗಳಲ್ಲಿ ನಿಂತಿದ್ದವು. ರೈಲಿನಿಂದ ಜನ ಇಳಿಯುತ್ತಿದ್ದಾಗಲೇ ಹತ್ತಬೇಕಿದ್ದ ಜನರು ಒಂದೇ ಸಮನೇ ನುಗ್ಗಿದ ಪರಿಣಾಮ ಕಾಲ್ತುಳಿತ (Stampede) ಸಂಭವಿಸಿದೆ. ಫ್ಲಾಟ್‌ ಫಾರ್ಮ್‌ 4 ಮತ್ತು 5ರಲ್ಲಿ ಕಾಲ್ತುಳಿತ ಸಂಭವಸಿದ್ದು, ಕನಿಷ್ಠ 7 ಮಂದಿ ಗಾಯಗೊಂಡಿದ್ದಾರೆ.

    ಪ್ರತ್ಯಕ್ಷದರ್ಶಿಗಳ ಪ್ರಕಾರ, ಸಂಜೆ ಸುಮಾರಿಗೆ, ಮೂರು ರೈಲುಗಳು 4, 6 ಮತ್ತು 7 ಪ್ಲಾಟ್‌ಫಾರ್ಮ್‌ಗಳಲ್ಲಿ ಏಕಕಾಲದಲ್ಲಿ ಬಂದು ನಿಂತಿದ್ದವು. ಹಾಗಾಗಿ ಮೂರು ರೈಲುಗಳಿಗೆ ಹತ್ತಲು ಜನ ಏಕಕಾಲಕ್ಕೆ ನುಗ್ಗಿದರು. ಇದರಿಂದ ಕಾಲ್ತುಳಿತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಗಾಯಾಳುಗಳನ್ನ ಬುರ್ದ್ವಾನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೈಲ್ವೆ ಪ್ರಯಾಣಿಕರು ಮತ್ತು ಆರ್‌ಪಿಎಫ್ ಮೂಲಗಳ ಪ್ರಕಾರ, ಇಂದು ಸಂಜೆ 5:15 ರಿಂದ 5:25ರ ನಡುವೆ ಪ್ಲಾಟ್‌ಫಾರ್ಮ್ 4 ಮತ್ತು 5 ಅನ್ನು ಸಂಪರ್ಕಿಸುವ ಮೆಟ್ಟಿಲುಗಳಲ್ಲಿ ಘಟನೆ ಸಂಭವಿಸಿದೆ.

    ಇನ್ನೂ ಹಲ್ದಿಬರಿ ಎಕ್ಸ್‌ಪ್ರೆಸ್ (ಪ್ಲಾಟ್‌ಫಾರ್ಮ್ 5 ರಲ್ಲಿ), ಹೌರಾ ಮೇನ್ ಲೈನ್ ಸ್ಥಳೀಯ ರೈಲು (ಪ್ಲಾಟ್‌ಫಾರ್ಮ್ 4 ರಲ್ಲಿ) ಪ್ರಯಾಣಿಕರು ಹತ್ತಲು ಮತ್ತು ಇಳಿಯಲು ಏಕಕಾಲಕ್ಕೆ ಧಾವಿಸಿದ್ದೇ ಘಟನೆ ಕಾರಣ ಎಂದು ವರದಿಗಳು ತಿಳಿಸಿವೆ.

  • ರಾಯಚೂರಿನಲ್ಲಿ ಸರ್ಕಾರಿ ಬಸ್ ಪಲ್ಟಿ – ಪ್ರಯಾಣಿಕನ ಕಾಲು ಮುರಿತ, 15 ಮಂದಿಗೆ ಗಾಯ

    ರಾಯಚೂರಿನಲ್ಲಿ ಸರ್ಕಾರಿ ಬಸ್ ಪಲ್ಟಿ – ಪ್ರಯಾಣಿಕನ ಕಾಲು ಮುರಿತ, 15 ಮಂದಿಗೆ ಗಾಯ

    ರಾಯಚೂರು: ಸರ್ಕಾರಿ ಬಸ್ ಪಲ್ಟಿಯಾದ ಪರಿಣಾಮ ಓರ್ವ ಪ್ರಯಾಣಿಕನ (Passenger) ಕಾಲು ಮುರಿದಿದ್ದು, ಬಸ್‌ನಲ್ಲಿದ್ದ 15 ಜನರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ರಾಯಚೂರು (Raichur) ನಗರದ ಹೊರವಲಯದ ಸಾಥಮೈಲ್ ಕ್ರಾಸ್ ಬಳಿ ನಡೆದಿದೆ.

    ದಾವಣಗೆರೆಯಿಂದ ರಾಯಚೂರಿಗೆ ಬರುತ್ತಿದ್ದ ಸ್ಲೀಪರ್ ಕೋಚ್ ಬಸ್ (Sleeper Coach Bus) ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ನಿದ್ದೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಪಕ್ಕದ ಜಮೀನಿಗೆ ಉರುಳಿದೆ. ಬಸ್‌ನಲ್ಲಿ ಕಾಲು ಸಿಲುಕಿ ನೋವಿನಿಂದ ಒದ್ದಾಡಿದ ಪ್ರಯಾಣಿಕ ವಿಶ್ವನಾಥ್‌ನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: Bengaluru | ಮಹಿಳೆಗೆ ಥಳಿತ ಕೇಸ್‌ – ಬಟ್ಟೆ ಅಂಗಡಿ ಮಾಲೀಕ ಸೇರಿ ಇಬ್ಬರು ಆರೋಪಿಗಳು ಅರೆಸ್ಟ್

    ಜಿಟಿ ಜಿಟಿ ಮಳೆಯಲ್ಲೇ ಕ್ರೇನ್ ಮೂಲಕ ಬಸ್ ಮೇಲೆತ್ತಲಾಗಿದ್ದು, ಉಳಿದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ವಾಣಿವಿಲಾಸ ಆಸ್ಪತ್ರೆಯಲ್ಲಿ ಔಷಧಗಳ ಕೊರತೆ – ಸಿಎಂ ಅವ್ರನ್ನೇ ಕೇಳಿ ಅಂತ ಸಿಬ್ಬಂದಿ ಉಡಾಫೆ!

  • ಸಾರಿಗೆ ನೌಕರರ ಮುಷ್ಕರದ ಎಫೆಕ್ಟ್ – ನಮ್ಮ ಮೆಟ್ರೋಗೆ ಜನವೋ ಜನ

    ಸಾರಿಗೆ ನೌಕರರ ಮುಷ್ಕರದ ಎಫೆಕ್ಟ್ – ನಮ್ಮ ಮೆಟ್ರೋಗೆ ಜನವೋ ಜನ

    ಬೆಂಗಳೂರು: ವೇತನ ಹಿಂಬಾಕಿ, ಸಂಬಳ ಹೆಚ್ಚಳ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ ಸಾರಿಗೆ ನೌಕರರ ಮುಷ್ಕರಕ್ಕೆ (Transport Employees Strike) ಇಳಿದಿದ್ದಾರೆ. ಈ ಎಫೆಕ್ಟ್‌ನಿಂದಾಗಿ ನಮ್ಮ ಮೆಟ್ರೋ (Namma Metro) ನಿಲ್ದಾಣಗಳಲ್ಲಿ ಪ್ರಯಾಣಿಕರು ಸಾಲುಗಟ್ಟಿ ನಿಂತಿದ್ದಾರೆ.

    ಬಸ್ ಸರಿಯಾಗಿ ಸಿಗದೆ ಪರದಾಡುತ್ತಿರುವ ಜನರು ಮೆಟ್ರೋದ ಮೊರೆ ಹೋಗಿದ್ದಾರೆ. ಇದೀಗ ಮೆಟ್ರೋ ನಿಲ್ದಾಣಗಳಲ್ಲಿ ಎಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಓಡಾಡ್ತಿದ್ದಾರೆ. ದಿನನಿತ್ಯಕ್ಕಿಂತ ಮೆಟ್ರೋ ಪ್ರಯಾಣಿಕರು ಹೆಚ್ಚಾಗಿರುವುದರಿಂದ ತೊಂದರೆಯಾಗದಂತೆ ಮೆಟ್ರೋ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಸರ್ಕಾರಿ ಬಸ್‌ಗಳಿಲ್ಲದೇ ಪ್ರಯಾಣಿಕರ ಪರದಾಟ – ನಿಮ್ಮ ಜಿಲ್ಲೆಯ ಪರಿಸ್ಥಿತಿ ಹೇಗಿದೆ?

    ಮೆಟ್ರೋ ನಿಲ್ದಾಣದ ಹೊರಗಿನಿಂದಲೂ ಪ್ರಯಾಣಿಕರು ಕ್ಯೂ ನಿಂತಿದ್ದಾರೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಮುಂಭಾಗದಲ್ಲಿ ಕ್ಯೂ ಗಟ್ಟಲೆ ಪ್ರಯಾಣಿಕರು ಜಮಾಯಿಸಿದ್ದರಿಂದ ಮೆಟ್ರೋ ನಿಲ್ದಾಣದ ಬಳಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಸಿಡಿದ ಸಾರಿಗೆ ನೌಕರರು – ಇಂದಿನಿಂದ ಬಸ್‌ ಬಂದ್‌

    ಬಸ್‌ಗಳ ಸಂಚಾರ ಕಡಿಮೆ ಆಗಿದ್ದರಿಂದ ಹಲವರು ಸ್ವಂತ ವಾಹನಗಳಲ್ಲೇ ಸಂಚಾರ ಮಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ಸಾರಿಗೆ ನೌಕರರು ಸಿಡಿದಿದ್ದರಿಂದ ಸಾರ್ವಜನಿಕರ ಬಸ್ ಸಂಚಾರವಿಲ್ಲದೇ ಪರದಾಡುವಂತಾಗಿದೆ.

  • ನಮ್ಮ ಮೆಟ್ರೋ ಎಡವಟ್ಟು – ಮೆಟ್ರೋ ಸ್ಟೇಷನ್ ಫುಲ್ ರಷ್

    ನಮ್ಮ ಮೆಟ್ರೋ ಎಡವಟ್ಟು – ಮೆಟ್ರೋ ಸ್ಟೇಷನ್ ಫುಲ್ ರಷ್

    – ಮೆಟ್ರೋ ವಿಳಂಬದಿಂದ ಪರದಾಡಿದ ಪ್ರಯಾಣಿಕರು

    ಬೆಂಗಳೂರು: ನಮ್ಮ ಮೆಟ್ರೋ (Namma Metro) ಎಡವಟ್ಟಿಗೆ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಅಂಬೇಡ್ಕರ್ ಜಯಂತಿಯ ಸಲುವಾಗಿ ಇಂದು ರಜೆ ಎಂದು ಪ್ರತಿ ಹತ್ತು ನಿಮಿಷಕ್ಕೊಂದು ಮೆಟ್ರೋ ರೈಲಿನ ಸಂಚಾರವಿದ್ದುದರಿಂದ ಮೆಟ್ರೋ ಸ್ಟೇಷನ್‌ಗಳಲ್ಲಿ ಪ್ರಯಾಣಿಕರು ಪರದಾಡಿದ್ದಾರೆ.

    ಉಳಿದೆಲ್ಲಾ ದಿನದಲ್ಲಿ ಪ್ರತಿ 5 ನಿಮಿಷಕ್ಕೊಂದು ಮೆಟ್ರೋ ಸೇವೆ ಇರುತ್ತದೆ. ಆದರೆ ಇಂದು ಹತ್ತು ನಿಮಿಷಕ್ಕೊಂದು ಮೆಟ್ರೋ ಸೇವೆ ಇದ್ದುದರಿಂದ ಸ್ಟೇಷನ್‌ನಲ್ಲಿ ಜನದಟ್ಟಣೆಯಿಂದ ಪ್ರಯಾಣಿಕರು ಪರದಾಡುವಂತಾಯಿತು. ಇದನ್ನೂ ಓದಿ: ವಕ್ಫ್ ಹೆಸ್ರಲ್ಲಿ ಬಡವರ ಭೂಮಿ ಕಿತ್ತುಕೊಳ್ಳಲು ಸಾಧ್ಯವಿಲ್ಲ, ಲೂಟಿ ನಿಲ್ಲಲಿದೆ – ನರೇಂದ್ರ ಮೋದಿ

    ಸಾಮಾನ್ಯವಾಗಿ ಭಾನುವಾರ ಮಾತ್ರ ಈ ರೀತಿ ಮಾಡುತ್ತಿದ್ದ ಮೆಟ್ರೋ ಸಂಸ್ಥೆಯು, ಈಗ ಸಾರ್ವತ್ರಿಕ ರಜಾ ದಿನವೂ ಮೆಟ್ರೋ ಸೇವೆಯನ್ನು ವಿಳಂಬ ಮಾಡುತ್ತಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಮೆಟ್ರೋ ವಿರುದ್ಧ ಸಂಸದ ಪಿ.ಸಿ.ಮೋಹನ್ ವೀಡಿಯೋ ಟ್ಯಾಗ್ ಮಾಡಿ ಕಿಡಿಕಾರಿದ್ದಾರೆ. ಇದನ್ನೂ ಓದಿ: 4,500 ಎಕ್ರೆಗೆ ದಾಖಲೆ ಇದೆ, ಅರಮನೆ ಹೆಸರಿಗೆ ಜಮೀನು ಬಂದ್ರೂ ಗ್ರಾಮಸ್ಥರು ಆತಂಕ ಪಡಬೇಕಿಲ್ಲ: ಪ್ರಮೋದಾದೇವಿ ಒಡೆಯರ್

  • 12 ವರ್ಷಗಳಲ್ಲೇ ಬೆಂಗ್ಳೂರು ಮೆಟ್ರೋದಲ್ಲಿ ದಾಖಲೆ ಪ್ರಯಾಣ

    12 ವರ್ಷಗಳಲ್ಲೇ ಬೆಂಗ್ಳೂರು ಮೆಟ್ರೋದಲ್ಲಿ ದಾಖಲೆ ಪ್ರಯಾಣ

    – ಆ.14ರಂದು 9.17 ಲಕ್ಷ ಪ್ರಯಾಣಿಕರ ಸಂಚಾರ

    ಬೆಂಗಳೂರು: ನಮ್ಮ ಮೆಟ್ರೋ (Namma Metro) ಪ್ರಯಾಣಿಕರ ಓಡಾಟದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಲಾಲ್‌ಬಾಗ್ ಫ್ಲವರ್ ಶೋ (Lalbagh Flower Show) ಹಾಗೂ ಲಾಂಗ್ ವೀಕೆಂಡ್ ರಜೆ ಹಿನ್ನೆಲೆ ಮೆಟ್ರೋದಲ್ಲಿ ಸಂಚರಿಸುವವರ ಸಂಖ್ಯೆ ಭಾರೀ ಏರಿಕೆ ಕಂಡಿದ್ದು, ಒಂದೇ ದಿನದಲ್ಲಿ ಗರಿಷ್ಠ ಪ್ರಮಾಣ ತಲುಪಿದೆ.

    ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ನಮ್ಮ ಮೆಟ್ರೋ, ಆಗಸ್ಟ್ 14 ರಂದು ಒಂದೇ ದಿನ ಬೆಂಗಳೂರು ನಮ್ಮ ಮೆಟ್ರೋ ರೈಲಿನಲ್ಲಿ ಬರೋಬ್ಬರಿ 9.17 ಲಕ್ಷ ಮಂದಿ ಸಂಚಾರ ನಡೆಸಿದ್ದಾರೆ. ಇದು ಈವರೆಗಿನ ಅತೀ ಹೆಚ್ಚು ಪ್ರಯಾಣಿಕರು ಓಡಾಟ ಮಾಡಿದ ಸಂಖ್ಯೆಯಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ನೀರಜ್‌ ಚೋಪ್ರಾ – ಮನು ಭಾಕರ್‌ ಮದುವೆ ವದಂತಿ: ಎಲ್ಲವೂ ಆಧಾರ ರಹಿತ ಎಂದ ಮನು ಭಾಕರ್‌

    ಇತ್ತೀಚೆಗೆ ಆಗಸ್ಟ್ 06 ರಂದು ನಮ್ಮ ಮೆಟ್ರೋದಲ್ಲಿ ಒಂದೇ ದಿನ ಬರೋಬ್ಬರಿ 8.26 ಲಕ್ಷ ಮಂದಿ ಸಂಚರಿಸಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಇದೀಗ ಒಂದೇ ವಾರದಲ್ಲಿ ಆ ದಾಖಲೆ ಅಳಿದಿದ್ದು, ಇದು ಮೆಟ್ರೋ ಆರಂಭವಾದ ಕಳೆದ ಸುಮಾರು 12 ವರ್ಷಗಳ ಸಾರ್ವಕಾಲಿಕ ದಾಖಲೆ ಆಗಿದೆ ಎಂದು ನಮ್ಮ ಮೆಟ್ರೋ ಹೇಳಿದೆ.  ಇದನ್ನೂ ಓದಿ: ಆನೇಕಲ್‍ನಲ್ಲಿ ವಿದ್ಯುತ್ ಶಾಕ್‍ಗೆ ಯುವ ಇಂಜಿನಿಯರ್ ಬಲಿ

  • ಹಳಿ ತಪ್ಪಿದ ರೈಲು – ಉತ್ತರ ಪ್ರದೇಶದಲ್ಲಿ ಭೀಕರ ದುರಂತಕ್ಕೆ ನಾಲ್ವರು ದುರ್ಮರಣ

    ಹಳಿ ತಪ್ಪಿದ ರೈಲು – ಉತ್ತರ ಪ್ರದೇಶದಲ್ಲಿ ಭೀಕರ ದುರಂತಕ್ಕೆ ನಾಲ್ವರು ದುರ್ಮರಣ

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಗೋಂಡಾ ಜಿಲ್ಲೆಯಲ್ಲಿ ನಡೆದಿರುವ ಭೀಕರ ರೈಲು ದುರಂತವು ಒಡಿಶಾದ ಬಾಲಸೋರ್‌, ಪಶ್ಚಿಮ ಬಂಗಾಳದ ದಾರ್ಜಿಲಿಂಗ್‌ ನಲ್ಲಿ ನಡೆದ ಭೀಕರ ರೈಲು ಅಪಘಾತವನ್ನೇ ನೆನಪಿಸಿದೆ. ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್ ರೈಲಿನ (Chandigarh-Dibrugarh Express Train) ಹಲವು ಕೋಚ್‌ಗಳು ಹಳಿ ತಪ್ಪಿದ್ದರಿಂದ ರೈಲು ಅಪಘಾತಕ್ಕೀಡಾಗಿದ್ದು, ನಾಲ್ವರು ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಗೋಂಡಾದಲ್ಲಿ ನಡೆದಿದೆ.

    ಬುಧವಾರ ರಾತ್ರಿ 11.35ಕ್ಕೆ ಚಂಡೀಗಢ ನಿಲ್ದಾಣದಿಂದ (Chandigarh Railway Station) ಹೊರಟಿದ್ದ ರೈಲು (ರೈಲು ಸಂಖ್ಯೆ 15904) ಅಸ್ಸಾಂನ ದಿಬ್ರುಗಢಕ್ಕೆ ತೆರಳುತ್ತಿತ್ತು. ಮಾರ್ಗಮಧ್ಯೆ ಹಲವು ಕೋಚ್‌ಗಳು ಹಳಿ ತಪ್ಪಿದ ಪರಿಣಾಮ ದುರಂತರ ಸಂಭವಿಸಿದೆ. ಗೋಂಡಾ ಮತ್ತು ಜಿಲಾಹಿ ನಡುವಿನ ಪಿಕೌರಾ ಪ್ರದೇಶದಲ್ಲಿ ಅಪಘಾತ (Train Accident) ಸಂಭವಿಸಿದ್ದು, ನಾಲ್ವರು ಪ್ರಯಾಣಿಕರು ದುರ್ಮರಣಕ್ಕೀಡಾಗಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಐಇಡಿ ಸ್ಫೋಟಕ್ಕೆ ಇಬ್ಬರು ಯೋಧರು ಹುತಾತ್ಮ

    15 ಅಂಬುಲೆನ್ಸ್‌, 40 ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಹಾಜರ್‌:
    ಘಟನೆ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿವೆ. ಅಲ್ಲದೇ 15 ಅಂಬುಲೆನ್ಸ್‌ಗಳೊಂದಿಗೆ 40 ಸದಸ್ಯರ ವೈದ್ಯಕೀಯ ತಂಡ ಸ್ಥಳಕ್ಕೆ ಬಂದಿದ್ದು, ಪ್ರಯಾಣಿಕರ ರಕ್ಷಣೆಗೆ ಮುಂದಾಗಿದ್ದಾರೆ. ಹೆಚ್ಚುವರಿ ಅಂಬುಲೆನ್ಸ್‌ಗಳನ್ನು ಸ್ಥಳಕ್ಕೆ ನಿಯೋಜನೆ ಮಾಡುವಂತೆ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಗ್ನಿವೀರರಿಗೆ 10% ಮೀಸಲಾತಿ – ಸ್ವಂತ ಉದ್ಯಮ ಆರಂಭಿಸುವವರಿಗೆ 5 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ: ಸಿಎಂ ಘೋಷಣೆ

    ಸ್ಥಳಕ್ಕೆ ಸಿಎಂ ಭೇಟಿ:
    ಘಟನೆ ಸಂಭವಿಸಿದ ಕೂಡಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಸ್ಥಳಕ್ಕಾಗಮಿಸಿದ್ದಾರೆ. ಜೊತೆಗೆ ಪರಿಹಾರ ಕ್ರಮಗಳನ್ನು ತ್ವರಿತಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಸಿಎಂ ಭೇಟಿ ಬೆನ್ನಲ್ಲೇ ರಾಜ್ಯ ವಿಪತ್ತು ನಿರ್ವಹಣಾ ಪಡೆ ಸ್ಥಳಕ್ಕಾಗಮಿಸಿ ಪರಿಹಾರ ಕಾರ್ಯ ಚುರುಕುಗೊಳಿಸುವಂತೆ ಸೂಚನೆ ನೀಡಿದೆ. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಭೂಕುಸಿತ ದುರಂತ – ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದ ಕೇಂದ್ರ ಸಚಿವ ಹೆಚ್‌ಡಿಕೆ

    ರೈಲು ಅಪಘಾತ ಸಂಭವಿಸಿದ ಕಾರಣ ಇದೇ ಮಾರ್ಗವಾಗಿ ತೆರಳಬೇಕಿದ್ದ 2 ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ, 11 ರೈಲುಗಳಿಗೆ ಮಾರ್ಗಬದಲಾವಣೆಗೆ ಸೂಚಿಸಲಾಗಿದೆ. ಜೊತೆಗೆ ಪ್ರಯಾಣಿಕರಿಗಾಗಿ ಸಹಾಯವಾಣಿ ಸಹ ಸ್ಥಾಪಿಸಲಾಗಿದೆ. ಇದನ್ನೂ ಓದಿ: ಪಕ್ಷದಲ್ಲಿರುವ ಅಲ್ಪಸಂಖ್ಯಾತ ವಿಭಾಗವನ್ನು ವಿಸರ್ಜಿಸಬೇಕು – ಬಿಜೆಪಿ ನಾಯಕ ಸುವೆಂದು ಅಧಿಕಾರಿ 

  • 200 ಅಡಿ ಆಳದ ಕಮರಿಗೆ ಉರುಳಿದ ಬಸ್ – ಇಬ್ಬರು ಸಾವು, 25 ಮಂದಿಗೆ ಗಾಯ

    200 ಅಡಿ ಆಳದ ಕಮರಿಗೆ ಉರುಳಿದ ಬಸ್ – ಇಬ್ಬರು ಸಾವು, 25 ಮಂದಿಗೆ ಗಾಯ

    ಶ್ರೀನಗರ: 28 ಪ್ರಯಾಣಿಕರನ್ನು ಹೊತ್ತೊಯುತ್ತಿದ್ದ ಬಸ್‌ವೊಂದು (Bus) ಸ್ಕಿಡ್ ಆಗಿ 200 ಅಡಿ ಆಳದ ಕಮರಿಗೆ ಉರುಳಿದ ಪರಿಣಾಮ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu Kashmir) ದೋಡಾ (Doda) ಜಿಲ್ಲೆಯಲ್ಲಿ ನಡೆದಿದೆ.

    ಖಾಸಗಿ ಬಸ್ ಭಾಲೆಸ್ಸಾದಿಂದ ಥಾತ್ರಿಗೆ ತೆರಳುತ್ತಿದ್ದಾಗ ಬೆಳಗ್ಗೆ 10:30ರ ಸುಮಾರಿಗೆ ಭತ್ಯಾಸ್ ಬಳಿ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲೇ ಒಬ್ಬ ಮಹಿಳೆ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಅನಂತ್‌ ಅಂಬಾನಿ ಮದುವೆ ಸಮಾರಂಭದಲ್ಲಿ ದೀದಿ – ಹರಿದು ಬಂತು ರಾಜಕೀಯ ನಾಯಕರ ದಂಡು!

    ಘಟನೆಯಲ್ಲಿ 9 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾರತೀಯ ಸೇನೆ ಮತ್ತು ಸ್ಥಳೀಯರ ನೆರವಿನಿಂದ ಗಾಯಾಳುಗಳಿಗೆ ದೋಡಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹಿಮಾಚಲದಲ್ಲಿ ಆರ್ಥಿಕ ಸಂಕಷ್ಟ – ತೆರಿಗೆ ಪಾವತಿಸೋ ಮಂದಿಗೆ ಉಚಿತ ವಿದ್ಯುತ್‌ ಕಟ್

  • ಗುಜರಾತ್‌ನ ಸಪುತಾರಾದಲ್ಲಿ ಕಣಿವೆಗೆ ಉರುಳಿದ ಬಸ್ – ಇಬ್ಬರು ಮಕ್ಕಳು ಸಾವು

    ಗುಜರಾತ್‌ನ ಸಪುತಾರಾದಲ್ಲಿ ಕಣಿವೆಗೆ ಉರುಳಿದ ಬಸ್ – ಇಬ್ಬರು ಮಕ್ಕಳು ಸಾವು

    ಗಾಂಧಿನಗರ: ಸುಮಾರು 70 ಮಂದಿ ಪ್ರಯಾಣಿಕರನ್ನು (Passengers) ಹೊತ್ತೊಯ್ಯುತ್ತಿದ್ದ ಬಸ್ (Bus) ಕಣಿವೆಗೆ ಉರುಳಿದ ಪರಿಣಾಮ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿರುವ ಘಟನೆ ಗುಜರಾತ್‌ನ (Gujarat) ಸಪುತಾರಾದಲ್ಲಿ (Saputara) ನಡೆದಿದೆ.

    ಐಷಾರಾಮಿ ಬಸ್‌ನಲ್ಲಿ ಸುಮಾರು 70 ಮಂದಿ ಪ್ರಯಾಣಿಕರಿದ್ದರು ಎಂದು ಅಂದಾಜಿಸಲಾಗಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಸಪೂತರಾ ಪೊಲೀಸರು ಹಾಗೂ 108 ತಂಡ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಮುಡಾ ಪ್ರಕರಣ ಸಿಬಿಐ ಅಥವಾ ನ್ಯಾಯಾಧೀಶರಿಂದ ತನಿಖೆಯಾಗಲಿ: ಬೊಮ್ಮಾಯಿ

    ಭಾನುವಾರ ಬೆಳಗ್ಗೆ ಸೂರತ್ ಚೌಕ್ ಮಾರ್ಕೆಟ್‌ನಿಂದ ಸಪುತಾರಾಗೆ ಪ್ರವಾಸಿಗರನ್ನು ಹೊತ್ತ ಬಸ್ಸು ಸೂರತ್ ಕಡೆಗೆ ಹಿಂತಿರುಗುತ್ತಿತ್ತು. ಮಾರ್ಗಮಧ್ಯದಲ್ಲಿ ಓವರ್‌ಟೇಕ್ ಮಾಡುವಾಗ ಎದುರಿನಿಂದ ಬರುತ್ತಿದ್ದ ಟೆಂಪೋವನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದು ಬಸ್ ಕಣಿವೆಗೆ ಬಿದ್ದಿದೆ. ಇದನ್ನೂ ಓದಿ: ಮುಂದಿನ ಶುಕ್ರವಾರದಿಂದ ಚಾಮುಂಡಿ ಬೆಟ್ಟದಲ್ಲಿ ಆಷಾಢ ಪೂಜೆ ಆರಂಭ – ವಿಶೇಷ ಪಾಸ್ ರದ್ದು

    ಗಾಯಾಳುಗಳನ್ನು ಚಿಕಿತ್ಸೆಗೆ ಕರೆದೊಯ್ಯಲಾಗಿದೆ. ಪ್ರವಾಸಿಗರು ಸಪುತಾರಾಕ್ಕೆ ಭೇಟಿ ನೀಡಿ ಸೂರತ್‌ಗೆ ಹಿಂತಿರುಗುತ್ತಿದ್ದರು. ಸಪುತಾರಾ-ಮಲೆಗಾಂ ರಾಷ್ಟ್ರೀಯ ಹೆದ್ದಾರಿ ಘಾಟ್‌ನಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಎರಡನೇ ವಿಮಾನ ನಿಲ್ದಾಣದ ಬಗ್ಗೆ ವಿಸ್ತೃತ ಚರ್ಚೆ ಬಳಿಕ ಸೂಕ್ತ ತೀರ್ಮಾನ: ಎಂ‌.ಬಿ.ಪಾಟೀಲ್

  • ವಿಮಾನದಲ್ಲಿ ಫೈಲಟ್ ಇರಲಿಲ್ಲ- ಸ್ಪೈಸ್‍‌ಜೆಟ್ ವಿರುದ್ಧ ಪ್ರಯಾಣಿಕರು ಧಿಕ್ಕಾರ

    ವಿಮಾನದಲ್ಲಿ ಫೈಲಟ್ ಇರಲಿಲ್ಲ- ಸ್ಪೈಸ್‍‌ಜೆಟ್ ವಿರುದ್ಧ ಪ್ರಯಾಣಿಕರು ಧಿಕ್ಕಾರ

    ಬೆಂಗಳೂರು: ಸ್ಪೈಸ್‌ಜೆಟ್ ಏರ್‌ಲೈನ್ಸ್ ಎಡವಟ್ಟಿನಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ 12 ಗಂಟೆಗಳ ಕಾಲ ವಿಮಾನದಲ್ಲಿಯೇ ಲಾಕ್ ಆಗಿರುವ ಪ್ರಯಾಣಿಕರು ಕೊನೆಗೂ ಬೆಂಗಳೂರಿಗೆ ಬಂದಿಳಿದಿದ್ದಾರೆ.

    ದೆಹಲಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಬರಬೇಕಿದ್ದ SG8151 ಸ್ಪೈಸ್‌ಜೆಟ್ (SpiceJet Flight), 12 ಗಂಟೆಗಳ ಕಾಲ ಟೆಕಾಫ್ ಆಗದೇ, ದೆಹಲಿಯ ವಿಮಾನ ನಿಲ್ದಾಣದ ರನ್ ವೇ ನಲ್ಲೆ ನಿಂತುಕೊಂಡಿತ್ತು. ಹೀಗಾಗಿ ಪ್ರಯಾಣಿಕರು 12 ಗಂಟೆ ಊಟ, ನೀರು ಇಲ್ಲದೆ ವಿಮಾನದಲ್ಲಿಯೇ ಅಸ್ವಸ್ಥಗೊಂಡಿದ್ರು. ಶುಕ್ರವಾರ ಸಂಜೆ 7:40 ರ ಸಮಯಕ್ಕೆ ಟೇಕಾಫ್ ಆಗಬೇಕಿದ್ದ ವಿಮಾನ ಹಲವು ಗಂಟೆ ಕಳೆದ್ರೂ ಹಾರಾಟ ನಡೆಸಿರಲಿಲ್ಲ. ಪೈಲಟ್ ಬಂದ ಬಳಿಕ ವಿಮಾನ ಬೆಂಗಳೂರಿಗೆ ಹಾರಾಟ ಮಾಡಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಡೆಂಗ್ಯೂ ಜ್ವರಕ್ಕೆ ಬಾಲಕ ಬಲಿ

    ಇತ್ತ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಸ್ಪೈಸ್‌ಜೆಟ್ ಏರ್ ಲೈನ್ಸ್ ವಿರುದ್ಧ ಪ್ರಯಾಣಿಕರು ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ರು. ವಿಮಾನದಲ್ಲಿ ಊಟ, ನೀರು ಇಲ್ಲದೆ ಕೆಲ ಪ್ರಯಾಣಿಕರು ಅಸ್ವಸ್ಥಗೊಂಡಿದ್ರು. ಏರ್ ಲೈನ್ಸ್ ನ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡು, ಅಲ್ಲೇ ಪ್ರತಿಭಟಿಸ್ತಿದ್ದಂತೆ ತಾಂತ್ರಿಕದೋಷ ಅಂತ ಸಮಾಜಾಯಿಷಿ ನೀಡಿದ್ರು. ಆದರೆ ಅಸಲಿಗೆ ಆ ಫ್ಲೈಟ್‍ನಲ್ಲಿ ಪೈಲಟ್ ಅವರೇ ಇರಲಿಲ್ಲ ಅನ್ನೋದು ಇಂದು ಬೆಳಗ್ಗೆ ಗೊತ್ತಾಗಿದೆ. ಬೆಳಗ್ಗೆ 7 ಗಂಟೆ ಸುಮಾರಿಗೆ ಪೈಲಟ್ ಬಂದ ಬಳಿಕ ವಿಮಾನ ಬೆಂಗಳೂರಿಗೆ ಹಾರಾಡಿದೆ ಎಂದು ಪ್ರಯಾಣಿಕರು ತಿಳಿಸಿದರು.

    ವಿಮಾನದಲ್ಲಿದ್ದ ಪ್ರಯಾಣಿಕರನ್ನ ಹೊರ ಬಾರದಂತೆ ಏರ್ ಲೈನ್ಸ್ ಸಿಬ್ಬಂದಿ ತಡೆದಿದ್ರು. ಏರ್ ಲೈನ್ಸ್ ನ ನಿರ್ಲಕ್ಷ್ಯ ಹಾಗೂ ಸಿಬ್ಬಂದಿ ವರ್ತನೆಯಿಂದ ರೊಚ್ಚಿಗೆದ್ದ ಪ್ರಯಾಣಿಕರು ಗಲಾಟೆ ಮಾಡಿದ್ದಾರೆ. ಈ ವೇಳೆ ಸಿಬ್ಬಂದಿ ಕೆಲ ಪ್ರಯಾಣಿಕರ ಮೊಬೈಲ್ ಕಿತ್ತುಕೊಂಡು ಹೊಡೆದು ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೂಡ ಕೇಳಿಬಂದಿದೆ.

  • ಸ್ಪೈಸ್ ಜೆಟ್ ಏರ್‌ಲೈನ್ಸ್ ಎಡವಟ್ಟು- ಪ್ರಯಾಣಿಕರು 12 ಗಂಟೆ ವಿಮಾನದಲ್ಲೇ ಲಾಕ್

    ಸ್ಪೈಸ್ ಜೆಟ್ ಏರ್‌ಲೈನ್ಸ್ ಎಡವಟ್ಟು- ಪ್ರಯಾಣಿಕರು 12 ಗಂಟೆ ವಿಮಾನದಲ್ಲೇ ಲಾಕ್

     – ತಾಂತ್ರಿಕ ದೋಷ ಸರಿಪಡಿಸಿದ ಬಳಿಕ ಇದೀಗ ಟೇಕಾಫ್

    ಬೆಂಗಳೂರು: ಸ್ಪೈಸ್ ಜೆಟ್ ಏರ್‌ಲೈನ್ಸ್ (Spicejet‌ Airlines) ಸಿಬ್ಬಂದಿಯ ಎಡವಟ್ಟಿನಿಂದಾಗಿ ಟೇಕಾಫ್ ಆಗದ ವಿಮಾನದಲ್ಲೇ ಪ್ರಯಾಣಿಕರು ಲಾಕ್ ಆದ ಪ್ರಸಂಗ ನಡೆದಿದೆ.

    ಫ್ಲೈಟ್ ನಲ್ಲೇ 100ಕ್ಕೂ ಹೆಚ್ಚು ಪ್ರಯಾಣಿಕರು ಲಾಕ್ ಆಗಿದ್ದಾರೆ. ಹೀಗಾಗಿ ಪ್ರಯಾಣಿಕರು ಆತಂಕಗೊಂಡಿದ್ದು, ಹೈಜಾಕ್ ಮಾಡಿ ಕೂರಿಸಿದ್ದಾರೆಂದು ಆರೋಪಿಸಿದರು. ಶುಕ್ರವಾರ ಸಂಜೆ 7 ಗಂಟೆಯಿಂದ ಪ್ರಯಾಣಿಕರು ಫ್ಲೈಟ್‍ನಲ್ಲೆ ಕುಳಿತಿದ್ದರು. ವಿಮಾನದಲ್ಲಿ ಊಟ, ನಿದ್ದೆ ಇಲ್ಲದೇ ಪ್ರಯಾಣಿಕರ ಪರದಾಟ ಅನುಭವಿಸಿದರು.

    SG8151 ಸ್ಪೈಸ್ ಜೆಟ್ ದೆಹಲಿಯಿಂದ ಬೆಂಗಳೂರಿಗೆ ಬರಬೇಕಿತ್ತು. ಟರ್ಮಿನಲ್ 3 ರಿಂದ ರಾತ್ರಿ 7.40 ಕ್ಕೆ ಟೆಕಾಫ್ ಅಗಬೇಕಿತ್ತು. ಆದರೆ ವಿಮಾನ ಟೆಕಾಫ್ ಆಗದೇ ರನ್ ವೇ ನಲ್ಲೇ ನಿಲ್ಲಿಸಿಕೊಳ್ಳಲಾಗಿತ್ತು. ಇದಕ್ಕೆ ಸ್ಪೈಸ್ ಜೆಟ್ ಕಾರಣ ಕೂಡ ಕೊಡದೇ ಇರುವುದರಿಂದ ಪ್ರಯಾಣಿಕರು ವಿಮಾನದೊಳಗೆ ಕುಳಿತು ಪ್ರತಿಭಟನೆ ನಡೆಸಿದರು.

    ಕೊನೆಗೂ ಇದೀಗ ವಿಮಾನ ಟೇಕಾಫ್‌ ಆಗಿದ್ದು, ಇಂದು 9:10ಕ್ಕೆ ವಿಮಾನ ಬೆಂಗಳೂರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ತಾಂತ್ರಿಕ ದೋಷದಿಂದ ವಿಮಾನ ನಿಂತಿರುವುದಾಗಿ ಮಾಹಿತಿ ಲಭಿಸಿದೆ.