Tag: passanger

  • 40 ರೂ. ಬದಲಿಗೆ 34,000 ರೂ. ಪೇ ಮಾಡಿದ ಪ್ರಯಾಣಿಕ – ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

    40 ರೂ. ಬದಲಿಗೆ 34,000 ರೂ. ಪೇ ಮಾಡಿದ ಪ್ರಯಾಣಿಕ – ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

    ಮಡಿಕೇರಿ: ಪ್ರಯಾಣಿಕರೊಬ್ಬರು 40 ರೂ. ಬದಲಿಗೆ 34 ಸಾವಿರ ರೂ. ಗೂಗಲ್ ಪೇ ಮಾಡಿದ್ದರು. 34 ಸಾವಿರ ಹಣವನ್ನು ಹಿಂತಿರುಗಿಸುವ ಮೂಲಕ ಮಡಿಕೇರಿಯ ಆಟೋ ಚಾಲಕ (Auto Driver) ಸತೀಶ್ ಹಾಗೂ ಆಟೋ ಮಾಲೀಕರ, ಚಾಲಕರ ಸಂಘದವರು ಪ್ರಾಮಾಣಿಕತೆ ಮೆರೆದಿದ್ದಾರೆ.

    ಜೂ. 11ರಂದು ಎಮ್ಮೆಮಾಡು ನಿವಾಸಿ ಆಲಿ ಎಂಬವರು ಮಡಿಕೇರಿಯ (Madikeri) ಕಾನ್ವೆಂಟ್ ಜಂಕ್ಷನ್ ಬಳಿಯಿಂದ ಆಟೋ ಏರಿದ್ದು, ಸಬ್ ರಿಜಿಸ್ಟ್ರಾರ್ ಕಛೇರಿ ಬಳಿ ಇಳಿದಿದ್ದರು. ಅವರು ಆಟೋ ಬಾಡಿಗೆಯ ಹಣ 40 ರೂ. ನೀಡಬೇಕಿತ್ತು. ಆದರೆ ಅವರ ಕೈಯಲ್ಲಿ ಹಣವಿರದ ಕಾರಣ ಬಾಡಿಗೆಯ ಹಣ ಸೇರಿಸಿ 500 ರೂ. ಗೂಗಲ್ ಪೇ ಮಾಡುವುದಾಗಿ ಹೇಳಿ, ಬಾಡಿಗೆ ಹಣ ಕಳೆದು ಉಳಿದ 460 ರೂ. ನಗದನ್ನು ನೀಡುವಂತೆ ಕೇಳಿಕೊಂಡಿದ್ದರು. ಇದನ್ನೂ ಓದಿ: ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದ 12ರಲ್ಲಿ 9 ಸಿಬ್ಬಂದಿ ಮುಂಬೈ ವಾಸಿಗಳು

    ಆಟೋ ಚಾಲಕ ಸತೀಶ್ ಅವರು ತಮ್ಮ ಬಳಿ ಅಷ್ಟು ಹಣ ಇಲ್ಲದಿರುವುದರಿಂದ 340 ರೂ. ಗೂಗಲ್ ಪೇ ಮಾಡುವಂತೆ ಹೇಳಿ, ಆಲಿ ಅವರಿಗೆ 300 ರೂ. ಕೊಟ್ಟಿದ್ದರು. ಆದರೆ ಆಲಿಯವರು 340 ರೂ.ಗಳನ್ನು ಗೂಗಲ್ ಪೇ ಮಾಡುವ ಬದಲಾಗಿ ಅರಿವಿಲ್ಲದೆ 34,000 ರೂ.ಗಳನ್ನು ಚಾಲಕನ ಸ್ಕ್ಯಾನರ್ ಮೂಲಕ ಗೂಗಲ್ ಪೇ ಮಾಡಿದ್ದರು. ನಂತರ ಇದ್ಯಾವುದರ ಅರಿವಿಲ್ಲದೆ ಇಬ್ಬರೂ ಅವರವರ ಪಾಡಿಗೆ ಹೊರಟು ಹೋಗಿದ್ದರು. ಇದನ್ನೂ ಓದಿ: 1.57 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ಕೇರ್ ಟೇಕರ್ ಲೇಡಿ ಅರೆಸ್ಟ್

    ಇದಾದ ಸ್ವಲ್ಪ ಹೊತ್ತಿನ ಬಳಿಕ ಟ್ರಾನ್ಸಾಕ್ಷನ್ ಹಿಸ್ಟರಿ ಪರಿಶೀಲಿಸಿದ ಚಾಲಕ ಸತೀಶ್ ಅವರಿಗೆ ವಿಷಯ ಗಮನಕ್ಕೆ ಬಂದಿದೆ. ಹೆಚ್ಚು ಹಣ ಜಮೆ ಮಾಡಿದ ಆಲಿಯವರನ್ನು ಸಂಪರ್ಕಿಸಲು ಯಾವುದೇ ಸಂಪರ್ಕ ಸಂಖ್ಯೆ ಸ್ಕ್ಯಾನರ್‌ನಲ್ಲಿ ಕೂಡ ಸಿಗದ ಕಾರಣ ಅವರನ್ನು ಸಂಪರ್ಕಿಸಲು ಕಷ್ಟವಾಗಿತ್ತು. ಹಾಗೆಯೇ ಹೆಚ್ಚುವರಿ ಹಣ ನೀಡಿದ ಆಲಿಯವರಿಗೆ ಜೂ. 12ರ ಮಧ್ಯಾಹ್ನದವರೆಗೂ ವಿಷಯ ಗಮನಕ್ಕೆ ಬಂದಿರಲಿಲ್ಲ.

    ಬಳಿಕ ಬ್ಯಾಂಕಿಗೆ ಬಂದು ಪಾಸ್ ಪುಸ್ತಕವನ್ನು ಪರಿಶೀಲಿಸಿದಾಗ 34,000 ರೂ.ಗಳನ್ನು ಹಿಂದಿನ ದಿನ ಆಟೋ ಚಾಲಕನಿಗೆ ನೀಡಿರುವುದು ಗೋಚರಿಸಿದೆ. ಈ ಕುರಿತು ಆಟೋ ಮಾಲೀಕರ, ಚಾಲಕರ ಸಂಘಕ್ಕೆ ಮಾಹಿತಿ ನೀಡಿದ ಮೇರೆಗೆ ಸಂಘದ ಮೂಲಕ ಮಾಹಿತಿಯನ್ನು ಗ್ರೂಪ್‌ನಲ್ಲಿ ಶೇರ್ ಮಾಡಲಾಗಿತ್ತು. ಇತರೆ ಚಾಲಕರು ಜೂ. 11ರಂದು ನಡೆದ ಘಟನೆಯ ಬಗ್ಗೆ ಚಾಲಕ ಸತೀಶ್ ತಿಳಿಸಿರುವುದಾಗಿ ಸಂಘದವರಲ್ಲಿ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಭದ್ರತಾ ವೈಫಲ್ಯ?- ಡ್ಯಾಂನ ಕ್ರಸ್ಟ್ ಗೇಟ್ ಬಳಿ ಓಡಾಡುತ್ತ ಸೆಲ್ಫಿ ವೀಡಿಯೋ

    ಸಂಘದಿಂದ ಚಾಲಕ ಸತೀಶ್ ಅವರನ್ನು ಸಂಪರ್ಕಿಸಿ, ಘಟನೆಯ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಲಾಗಿತ್ತು. ಜೂ. 11ರಂದೇ ಆಲಿರವರ ಖಾತೆಗೆ 1 ರೂ. ಗೂಗಲ್ ಪೇ ಮಾಡಿ ಅವರದ್ದೇ ಖಾತೆ ಎಂಬ ಬಗ್ಗೆ ಖಾತರಿ ಪಡಿಸುವಂತೆ ಮೆಸೇಜ್ ಮಾಡಿರುವುದಾಗಿ ಚಾಲಕ ಸತೀಶ್ ಸ್ಪಷ್ಟಪಡಿಸಿದ್ದರು. ಆದರೆ ಆಲಿ ಅವರು ಅದನ್ನು ಗಮನಿಸಿರಲಿಲ್ಲ. ಇದನ್ನೂ ಓದಿ: ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಳ – ಕೃಷ್ಣಾ ನದಿಗೆ 29,226 ಕ್ಯೂಸೆಕ್ ನೀರು ಬಿಡುಗಡೆ

    ಜೂ. 12ರಂದು ಚಾಲಕ ಸತೀಶ್ ಅವರು ಆಲಿರವರಿಗೆ ಸಂಘದ ಮಧ್ಯಸ್ಥಿಕೆಯಲ್ಲಿ ಹಣವನ್ನು ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ. ಹಣ ಕಳೆದುಕೊಂಡಿದ್ದ ಆಲಿ ಅವರು ಸಂಘದ ಈ ಸೇವೆಯನ್ನು ಮೆಚ್ಚಿ ಸಂಘಕ್ಕೆ ಧನ ಸಹಾಯ ನೀಡಲು ಮುಂದಾದರು. ಆದರೆ ಇದಕ್ಕೆ ಸಂಘವು ನಿರಾಕರಿಸಿರುವುದಾಗಿ ಸಂಘದ ಪ್ರಧಾನ ಕಾರ್ಯದರ್ಶಿ ದಿನು ಬಾರನ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಬ್ಲ್ಯಾಕ್‌ಬಾಕ್ಸ್‌ನಲ್ಲಿ ಅಡಗಿದೆ ವಿಮಾನ ದುರಂತದ ರಹಸ್ಯ – ನಾಳೆಯೊಳಗೆ ಅಪಘಾತಕ್ಕೆ ಅಸಲಿ ಕಾರಣ ಸಿಗುತ್ತಾ?

    ಇಂತಹ ಪ್ರಾಮಾಣಿಕ ಸೇವೆಯ ಪ್ರತಿಫಲವಾಗಿ ಆಟೋ ಚಾಲಕರ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿರುವುದು ದೊಡ್ಡ ಕೊಡುಗೆಯಾಗಿದೆ. ಯಾವುದೇ ವಸ್ತು ಆಗಿರಲಿ, ಕಳೆದುಕೊಂಡವರು ಯಾರೇ ಆಗಿರಲಿ ವಾಸ್ತವ ಅರಿತಲ್ಲಿ ಈ ರೀತಿ ಸಹಕರಿಸಲು ಸಂಘ ಸದಾ ಸಿದ್ಧವಾಗಿರುತ್ತದೆ ಎಂದು ಇತರೆ ಚಾಲಕರಿಗೆ ಮಾದರಿಯಾಗಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಸತೀಶ್ ಅವರಿಗೆ ಸಂಘದ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

  • ಬೆಳಗಾವಿಯಲ್ಲಿ 35 ಜನರಿದ್ದ ಬಸ್ ಪಲ್ಟಿ

    ಬೆಳಗಾವಿಯಲ್ಲಿ 35 ಜನರಿದ್ದ ಬಸ್ ಪಲ್ಟಿ

    ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಇಲಾಖೆ ಬಸ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿ ಆಗಿರುವ ಘಟನೆ ತಾಲೂಕಿನ ಬಡೇಕೊಳ್ಳಿಮಠ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.

    ಕಳೆದ ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಮಳೆ ಆರ್ಭಟ ಜೋರಾಗಿದ್ದು, ಭಾರಿ ಮಳೆಯಿಂದಾಗಿ ರಾಷ್ಟ್ರೀಯ 4ರಲ್ಲಿ ರಸ್ತೆ ಕಾಣದೇ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿ ಆಗಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಸ್ ಬೆಳಗಾವಿಯಿಂದ ಹಾವೇರಿ ಜಿಲ್ಲೆಯ ಹಿರೇಕೆರೂರು ಕಡೆಗೆ ಹೋಗುತ್ತಿತ್ತು.

    ಅದೃಷ್ಟವಶಾತ್ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ 35 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 5 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಹಳಿ ತಪ್ಪಿದ 8 ಬೋಗಿಗಳು- ರೈಲು ಸಂಚಾರಕ್ಕೆ ಅಡ್ಡಿ

    Live Tv
    [brid partner=56869869 player=32851 video=960834 autoplay=true]

  • ನಾನ್-ವೆಜ್ ಊಟ ಕೊಟ್ಟಿದ್ದಕ್ಕೆ ಬಿತ್ತು ಬರೋಬ್ಬರಿ 1.54 ಲಕ್ಷ ದಂಡ!

    ನಾನ್-ವೆಜ್ ಊಟ ಕೊಟ್ಟಿದ್ದಕ್ಕೆ ಬಿತ್ತು ಬರೋಬ್ಬರಿ 1.54 ಲಕ್ಷ ದಂಡ!

    ನವದೆಹಲಿ: ಧಾರ್ಮಿಕ ಭಾವನೆಗಳನ್ನು ಕಡೆಗಣಿಸಿ ಪ್ರಯಾಣಿಕರಿಗೆ ನಾನ್-ವೆಜ್ ಊಟ ನೀಡಿದ್ದಕ್ಕೆ ಏರ್ ಏಷ್ಯಾ ವಿಮಾನ ಕಂಪನಿಗೆ ಗ್ರಾಹಕರ ನ್ಯಾಯಾಲಯ 1.54 ಲಕ್ಷ ರೂ. ರೂಪಾಯಿ ದಂಡ ವಿಧಿಸಿದೆ.

    ನಾನ್ ವೆಜ್ ಊಟ ನೀಡಿ ನಮ್ಮನ್ನು ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಪ್ರಯಾಣಿಕ ವಿಜಯ್ ಕುಮಾರ್ ಟ್ರೆಹನ್ ಏರ್ ಏಷ್ಯಾ ವಿರುದ್ಧ ಹರ್ಯಾಣದ ಪಂಚಕುಲ ನ್ಯಾಯಾಲಯಲ್ಲಿ ದೂರು ನೀಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಏರ್ ಏಷ್ಯಾ ಕಂಪನಿಗೆ 1.54 ಲಕ್ಷ ರೂ. ದಂಡ ಕಟ್ಟುವಂತೆ ಆದೇಶಿಸಿದೆ.

    ಏನಿದು ಪ್ರಕರಣ?
    ಅಕ್ಟೋಬರ್ 2018ರಲ್ಲಿ ವಿಜಯ್ ಕುಮಾರ್ ಕುಟುಂಬ ಮಲೇಷ್ಯಾದ ಕೌಲಾಲಂಪುರ್ ನಿಂದ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಆಗಮಿಸುವ ಮೊದಲ ದಿನವೂ ಕೂಡ ಸಿಬ್ಬಂದಿಯ ಅಸಹಕಾರದಿಂದ ವಿಮಾನ ಮಿಸ್ ಆಗಿತ್ತು. ಆ ಬಳಿಕ ಎರಡನೇ ದಿನ ನಾನ್ ವೆಜ್ ಊಟ ನೀಡಿ ನಮ್ಮನ್ನು ಏರ್ ಏಷ್ಯಾ ಸಿಬ್ಬಂದಿ ಹಿಂಸಿಸಿದ್ದಾರೆ. ನಾವು ಹಿಂದೂ ಕುಟುಂಬದವರಾಗಿದ್ದು, ಆದರಲೂ ಇಸ್ಕಾನ್ ಭಕ್ತರಾಗಿದ್ದು, ನವರಾತ್ರಿಯ ವೇಳೆ ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

    ವಿಜಯ್ ಕುಮಾರ್ ಹಾಗೂ ಕುಟುಂಬದ ಐವರು ಕೌಲಾಲಂಪುರ್ ನಿಂದ ಅಮೃತಸರಕ್ಕೆ ಮರಳುತ್ತಿದ್ದರು. ಈ ವೇಳೆ ಸಂಜೆ 5:15 ಗಂಟೆಗೆ ತಮ್ಮ ಕುಟುಂಬದವರ ಜೊತೆ ವಿಜಯ್ ಕುಮಾರ್ ಕೌಲಾಲಂಪುರ್ ವಿಮಾನ ನಿಲ್ದಾಣಕ್ಕೆ ತಲುಪಿ, ಲಗೇಜ್ ತೆರವು ಮತ್ತು ಬೋರ್ಡಿಂಗ್ ಪಾಸುಗಳನ್ನು ಪಡೆದಿದ್ದರು. ಸುಮಾರು 7:20ರ ಹೊತ್ತಿಗೆ ವಿಮಾನದ ಸಮಯ ನಿಗದಿಯಾಗಿತ್ತು.

    ವಲಸೆ ಕೌಂಟರ್ ನಲ್ಲಿ ಬಹಳ ಪ್ರಯಾಣಿಕರು ಇದ್ದ ಕಾರಣಕ್ಕೆ ವಿಜಯ್ ಅವರ ಕುಟುಂಬದ ಲಗೇಜ್ ಪರಿಶೀಲನೆ ಮಾಡುವುದು ತಡವಾಗಿತ್ತು. ಇದರಿಂದ ಅವರು ತಮ್ಮ ವಿಮಾನವನ್ನು ಮಿಸ್ ಮಾಡಿಕೊಂಡಿದ್ದರು. ಹೀಗಾಗಿ ಅವರು ಮಾರನೇ ದಿನಕ್ಕೆ ಹೊಸ ಟಿಕೆಟ್ ಬುಕ್ ಮಾಡಿಕೊಂಡು 1 ದಿನ ಹೋಟೆಲ್‍ನಲ್ಲಿ ಇರಬೇಕಾಯ್ತು.

    ಮರು ದಿವಸ ಕುಟುಂಬದೊಡನೆ ವಿಜಯ್ ಕುಮಾರ್ ಅದೇ ವಿಮಾನದಲ್ಲಿ ಭಾರತಕ್ಕೆ ವಾಪಸ್ ಆಗುತ್ತಿದ್ದರು. ಪ್ರಯಾಣದ ಮಧ್ಯೆ ಸಿಬ್ಬಂದಿ ಬಳಿ ಸಸ್ಯಾಹಾರ ಊಟ ನೀಡುವಂತೆ ವಿಜಯ್ ಹಾಗೂ ಅವರ ಕುಟುಂಬ ತಿಳಿಸಿತ್ತು. ಆದರೆ ಸಿಬ್ಬಂದಿ ಮಾಂಸಾಹಾರ ಊಟವನ್ನು ನೀಡಿದ್ದಾರೆ. ಇದಕ್ಕೆ ಕೋಪಗೊಂಡ ವಿಜಯ್ ಕುಮಾರ್ ವಿಮಾನ ಕಂಪನಿ ವಿರುದ್ಧ ದೂರು ನೀಡಿದ್ದರು.

    ದೂರು ಆಧರಿಸಿ ವಿಚಾರಣೆ ಮಾಡಿದ ಗ್ರಾಹಕ ವೇದಿಕೆ ಏರ್ ಏಷ್ಯಾಕ್ಕೆ ಮೊದಲು ಸೂಚನೆ ನೀಡಿತ್ತು. ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಹೀಗಾಗಿ ಹೊಸ ಟಿಕೆಟ್, ಹೋಟೆಲ್ ಕೊಠಡಿ ಬಾಡಿಗೆಗಳು, 9% ರಷ್ಟು ಆಹಾರದ ಬಿಲ್ ಸೇರಿಸಿ 1.54 ಲಕ್ಷವನ್ನು ಪ್ರಯಾಣಿಕ ಕುಟುಂಬಕ್ಕೆ ನೀಡುವಂತೆ ಸೂಚಿಸಿದೆ. ಕಿರುಕುಳ, ನೋವು ಮತ್ತು ಮಾನಸಿಕ ಸಂಕಟಕ್ಕೆ 30,000 ರೂ. ಹಣವನ್ನು ನೀಡುವಂತೆ ಆದೇಶಿಸಲಾಯಿತು. ಅಲ್ಲದೆ ನ್ಯಾಯಾಲಯ ಶುಲ್ಕವಾಗಿ 5,500 ರೂ. ದಂಡ ಕಟ್ಟುವಂತೆ ಸೂಚಿಸಿದೆ.

  • ಬಳ್ಳಾರಿ: ಮಂಜು ಮುಸುಕಿದ ವಾತಾವರಣ- ಲ್ಯಾಂಡಿಂಗ್ ಮಾಡಲು ಪರದಾಡಿ ವಾಪಸ್ಸಾದ ಟ್ರೂಜೆಟ್

    ಬಳ್ಳಾರಿ: ಮಂಜು ಮುಸುಕಿದ ವಾತಾವರಣ- ಲ್ಯಾಂಡಿಂಗ್ ಮಾಡಲು ಪರದಾಡಿ ವಾಪಸ್ಸಾದ ಟ್ರೂಜೆಟ್

    ಬಳ್ಳಾರಿ: ದಟ್ಟವಾದ ಮಂಜು ಆವರಿಸಿದ ಹಿನ್ನಲೆಯಲ್ಲಿ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಪರದಾಡಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಇತ್ತೀಚಿಗಷ್ಟೆ ಬಳ್ಳಾರಿಯ ತೋರಣಗಲ್ ನಿಂದ ಹೈದರಾಬಾದ್ ಗೆ ಟ್ರೂ ಜೆಟ್ ವಿಮಾನಯಾನ ಸೇವೆ ಆರಂಭವಾಗಿತ್ತು. ಆದ್ರೆ ಇಂದು ಮುಂಜಾನೆ ಮಂಜು ಇದ್ದ ಕಾರಣ ಲ್ಯಾಂಡಿಗ್ ವೇಳೆ ತೊಡಕುಂಟಾಯಿತು. ಇದರಿಂದ ಕೆಲಕಾಲ ಪ್ರಯಾಣಿಕರಲ್ಲಿ ಆತಂಕ ಮನೆ ಮಾಡಿತ್ತು.

    ಇಂದು ಮಂಜಾನೆ 7:30ಕ್ಕೆ ಎಂದಿನಂತೆ ಹೈದರಾಬಾದ್ ನಿಂದ ತೋರಣಗಲ್ ಗೆ ಆಗಮಿಸಿದ ಟ್ರೂ ಜೆಟ್ ವಿಮಾನವನ್ನು ಲ್ಯಾಂಡಿಂಗ್ ಮಾಡುವ ವೇಳೆ ಮಂಜು ಕವಿದ ಪರಿಣಾಮ ಕೆಲಕಾಲ ಪೈಲಟ್ ಲ್ಯಾಂಡಿಂಗ್ ಮಾಡಲು ಪರದಾಡಿದರು. ಮೂರು ಬಾರಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದ್ರೂ ಸಫಲವಾಗಲಿಲ್ಲ. ಹೀಗಾಗಿ ಮಂಜು ಸಾಕಷ್ಟು ಕವಿದ ಪರಿಣಾಮ ಪೈಲಟ್ ಮರಳಿ ವಿಮಾನದಲ್ಲಿ ಹೈದರಾಬಾದ್ ಗೆ ವಾಪಾಸ್ ಹೋದ್ರು.

    ಹೀಗಾಗಿ ಜಿಂದಾಲ್ ಏರ್ಪೋರ್ಟ್ ನಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

  • ದೀಪಾವಳಿ ಪ್ರಯುಕ್ತ ಊರಿಗೆ ಹೊರಟ ಪ್ರಯಾಣಿಕರಿಂದ ಬಸ್, ರೈಲು ನಿಲ್ದಾಣ ಜಾಮ್

    ದೀಪಾವಳಿ ಪ್ರಯುಕ್ತ ಊರಿಗೆ ಹೊರಟ ಪ್ರಯಾಣಿಕರಿಂದ ಬಸ್, ರೈಲು ನಿಲ್ದಾಣ ಜಾಮ್

    ಬೆಂಗಳೂರು: ದೇಶಾದ್ಯಂತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಸಿಲಿಕಾನ್ ಸಿಟಿಯಿಂದ ಜನರು ಊರಿನ ಕಡೆ ಹೊರಟ ಪರಿಣಾಮ ನಗರದ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ತುಂಬಿದ್ದರು.

    ಪ್ರಯಾಣಿಕರು ಹಾಗೂ ಬಸ್ ಗಳಿಂದ ನಗರದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೀಗಾಗಿ ಜನರು ನಿಲ್ದಾಣ ತಲುಪಲು ಹರಸಾಹಸ ಪಡಬೇಕಾಯಿತು. ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಮಂಗಳವಾರ ರಾತ್ರಿ ಮಳೆ ಇಲ್ಲದಿದ್ದರಿಂದ ಪ್ರಯಾಣಿಕರು ನೆಮ್ಮದಿಯ ನಿಟ್ಟಿಸುರು ಬಿಟ್ಟಿದ್ದರು. ಆದ್ರೆ ಸಂಜೆಯಿಂದಲೇ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಮುಗಿಬೀಳೂತ್ತಿದ್ದು, ಇದರಿಂದ ಸಂಚಾರ ದಟ್ಟಣೆ ಅಧಿಕವಾಗಿತ್ತು.

    ಮೈಸೂರು ರಸ್ತೆಯ ಬಾಪೂಜಿನಗರ, ಯಶವಂತಪುರ, ಪೀಣ್ಯ, ಹೊಸೂರು ರಸ್ತೆ ಹಾಗೂ ಶಾಂತಿನಗರ ಆನಂದರಾವ್ ಸರ್ಕಲ್ ಸೇರಿದಂತೆ ಮೆಜೆಸ್ಟಿಕ್ ಸುತ್ತಮುತ್ತ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಹಬ್ಬದ ಹಿನ್ನೆಲೆಯಲ್ಲಿ ಸುಮಾರು 1500 ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಕೆಎಸ್‍ಆರ್‍ಟಿಸಿ ಮಾಡಿದೆ. ಸರ್ಕಾರಿ ಬಸ್ ಮಾತ್ರವಲ್ಲದೇ ಖಾಸಗಿ ಬಸ್ ಗಳು ಕೂಡ ಅಧಿಕವಾಗಿದ್ದವು. ಈ ಹಿನ್ನೆಲೆಯಲ್ಲಿ ವಾಹನ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಲು ಕಾರಣವಾಗಿತ್ತು. ಕೆ.ಜಿ ರಸ್ತೆ, ಯಶವಂತಪುರ, ಆನಂದ ರಾವ್ ಸರ್ಕಲ್, ಮೌರ್ಯ ವೃತ್ತ, ಶಾಂತಿ ನಗರ, ವಿಜಯನಗರ ಮೊದಲಾದ ಕಡೆಗಳಲ್ಲಿ ಖಾಸಗಿ ಬಸ್ ಏಜೆನ್ಸಿಗಳ ಕಚೇರಿ ಬಳಿ ಪ್ರಯಾಣಿಕರ ದಂಡೇ ನೆರೆದಿತ್ತು.

    ಖಾಸಗಿ ಬಸ್‍ಗಳು ರಸ್ತೆಯಲ್ಲಿಯೇ ನಿಂತಿದ್ದರಿಂದ ಪಾದಾಚಾರಿಗಳ ಓಡಾಟಕ್ಕೂ ತೊಂದರೆಯಾಗಿತ್ತು. ಅಲ್ಲದೇ ಇದರಿಂದ ವಾಹನ ಸವಾರರು ಕೂಡ ಪರದಾಡಬೇಕಾಯಿತು. ಒಟ್ಟಿನಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಟ್ರಾಫಿಕ್ ಪೊಲೀಸರು ಹರಸಾಹಸಪಡಬೇಕಾಯಿತು.

    ಇನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಯಶವಂತಪುರ ರೈಲು ನಿಲ್ದಾಣ, ಬೆಂಗಳೂರು ದಂಡು ನಿಲ್ದಾಣ, ಕೆಆರ್ ಪುರ ರೈಲು ನಿಲ್ದಾಣ ಸೇರಿದಂತೆ ಸಿಲಿಕಾನ್ ಸಿಟಿಯಲ್ಲಿರೋ ಎಲ್ಲಾ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು.