Tag: Parvesh Verma

  • ಯಾರಾಗುತ್ತಾರೆ ದೆಹಲಿ ಸಿಎಂ? ರೇಸ್‌ನಲ್ಲಿ ಯಾರಿದ್ದಾರೆ?

    ಯಾರಾಗುತ್ತಾರೆ ದೆಹಲಿ ಸಿಎಂ? ರೇಸ್‌ನಲ್ಲಿ ಯಾರಿದ್ದಾರೆ?

    ನವದೆಹಲಿ: ದೇಶವನ್ನು ಸುದೀರ್ಘ ಕಾಲ ಪಾಲನೆ ಮಾಡಿದ್ದ ಕಾಂಗ್ರೆಸ್ ಪಕ್ಷವನ್ನು ಹಿಂದಿಕ್ಕಿ ಗೆಲುವಿನ ಪಥದಲ್ಲಿ ಮುನ್ನಡೆಯುತ್ತಿರುವ ಬಿಜೆಪಿಗೆ ದಕ್ಷಿಣ ರಾಜ್ಯಗಳ ಜೊತೆಗೆ ದೆಹಲಿ ಅಸೆಂಬ್ಲಿ ಕೂಡ ಇಷ್ಟು ದಿನ ಕಬ್ಬಿಣದ ಕಡಲೆಯಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಮತದಾರರು ಬಿಜೆಪಿ ಪರ ನಿಂತರೂ ಅಸೆಂಬ್ಲಿ ಚುನಾವಣೆ ವಿಚಾರಕ್ಕೆ ಬಂದರೆ ಕಳೆದ 25 ವರ್ಷದಿಂದ ಕೇಸರಿ ಪಕ್ಷವನ್ನು ದೂರ ಇಟ್ಟಿದ್ರು. ಆದ್ರೆ ಈ ಬಾರಿ ದೆಹಲಿ ಗದ್ದುಗೆ ಹಿಡಿಯಲು ಕಮಲ ನಾಯಕರು ಹೂಡಿದ ತಂತ್ರ ಫಲಿಸಿದೆ.

    ದೆಹಲಿ ಪೀಠದಲ್ಲಿ ಕೇಸರಿ ಪತಾಕೆ ಹಾರಿದೆ. ಬಿಜೆಪಿಯ 27 ವರ್ಷಗಳ ಸುದೀರ್ಘ ನಿರೀಕ್ಷಣೆ ಫಲಿಸಿದೆ. ಆಪ್ ಹ್ಯಾಟ್ರಿಕ್ ಆಸೆಗೆ ತಣ್ಣೀರು ಎರಚಿದ ಕಮಲ ಪಕ್ಷ ಗೆಲುವಿನ ನಗಾರಿ ಬಾರಿಸಿದೆ. ಆಪ್ ಜಗಜಟ್ಟಿಗಳನ್ನು ಮಕಾಡೆ ಮಲಗಿಸಿ ಪ್ರಚಂಡ ಗೆಲುವು ಕಂಡಿದೆ. ಮತ ಎಣಿಕೆ ಆರಂಭದಿಂದಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತ್ತು. ಸುಲಭವಾಗಿ ಮ್ಯಾಜಿಕ್ ಸಂಖ್ಯೆ ದಾಟಿತು.

    ಮತಗಟ್ಟೆ ಸಮೀಕ್ಷೆಗಳು ಸುಳ್ಳಾಗಲಿಲ್ಲ. ಕಾಂಗ್ರೆಸ್ ಹ್ಯಾಟ್ರಿಕ್ ಶೂನ್ಯ ಸಂಪಾದನೆ ಮಾಡಿತು. ಈ ಬೆನ್ನಲ್ಲೇ ದೆಹಲಿ ಸಚಿವಾಲಯವನ್ನು ಸೀಜ್ ಮಾಡಿ ಲೆಫ್ಟಿನೆಂಟ್‌ ಗವರ್ನರ್‌ ಆದೇಶ ಹೊರಡಿಸಿದರು. ಅನುಮತಿ ಇಲ್ಲದೇ ಯಾವುದೇ ಕಡತ ಮುಟ್ಟದಂತೆ ಆದೇಶ ನೀಡಿದರು. ಇದನ್ನೂ ಓದಿ: ಲೋಕಸಭೆಯಲ್ಲಿ ಅಯೋಧ್ಯೆ ಸೋಲಿನ ಸೇಡನ್ನು ತೀರಿಸಿದ ಬಿಜೆಪಿ

    ಯಾರಾಗುತ್ತಾರೆ ಸಿಎಂ?
    ದೆಹಲಿ ಗದ್ದುಗೆಯನ್ನು ಬಿಜೆಪಿ ಗೆದ್ದಾಗಿದೆ. ಈಗ ಮುಖ್ಯಮಂತ್ರಿ ಯಾರಾಗಬಹುದು ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ. ಸಿಎಂ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ನಿರ್ಣಯವೇ ಫೈನಲ್. ಮುಖ್ಯಮಂತ್ರಿ ಆಯ್ಕೆ ನಮಗೆ ದೊಡ್ಡ ಸಮಸ್ಯೆ ಅಲ್ಲ ಅದನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ತಿಳಿಸಿದ್ದಾರೆ.

    ಮುಂದಿನ ಒಂದು ವಾರದೊಳಗೆ ಸಿಎಂ ಆಯ್ಕೆ ಆಗಬಹುದು ಎನ್ನಲಾಗಿದೆ. ಜೈಂಟ್ ಕಿಲ್ಲರ್ ಪರ್ವೇಶ್ ವರ್ಮಾ ಅವರು ಅಮಿತ್‌ಶಾರನ್ನು ಭೇಟಿ ಮಾಡಿ ಚರ್ಚೆ ನಡೆಸಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದಿದ್ದಾರೆ.  ಇದನ್ನೂ ಓದಿ: ಮುಸ್ಲಿಮ್‌ ಬಾಹುಳ್ಯ ಇರೋ ಮುಸ್ತಫಾಬಾದ್‌ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

    ಪರ್ವೇಶ್ ವರ್ಮಾ
    ಕೇಜ್ರಿವಾಲ್ ಸೋಲಿಸಿದ ದೈತ್ಯ. ಮಾಜಿ ಸಿಎಂ ಸಾಹೀಬ್ ಸಿಂಗ್ ವರ್ಮಾ ಪುತ್ರ. ಜಾಟರ ಪ್ರಭಾವಿ ನಾಯಕ ಇದನ್ನೂ ಓದಿ: ದೆಹಲಿಯಲ್ಲಿ ಕಾಂಗ್ರೆಸ್ ಸೋಲಿಗೆ ಇವಿಎಂ ಕಾರಣ: ಪ್ರಿಯಾಂಕಾ ಜಾರಕಿಹೊಳಿ

    ವಿಜೇಂದರ್ ಗುಪ್ತಾ
    ಪಕ್ಷದ ಹಿರಿಯ ನಾಯಕ. 2015, 2020ರಲ್ಲಿ ಆಪ್ ಹವಾ ನಡುವೆಯೂ ಗೆದ್ದಿದ್ದರು. ವಿಪಕ್ಷ ನಾಯಕನಾಗಿ, ಪಕ್ಷದ ಅಧ್ಯಕ್ಷರಾಗಿ ಸೇವೆ.

     

    ಸತೀಶ್ ಉಪಾಧ್ಯಾಯ್
    ಮೊದಲ ಬಾರಿ ಸ್ಪರ್ಧಿಸಿ ಮಾಳವೀಯ ನಗರದಿಂದ ಆಯ್ಕೆಯಾಗಿದ್ದಾರೆ. ಮೂಲತಃ ಉದ್ಯಮಿಯಾಗಿದ್ದಾರೆ.

    ವೀರೇಂದ್ರ ಸಚ್‌ದೇವ್
    ಹಾಲಿ ಬಿಜೆಪಿ ಅಧ್ಯಕ್ಷ. ಕಿಂಗ್ ಮೇಕರ್ ಅಂದ್ರೂ ತಪ್ಪಾಗಲಾರದು. ಚುನಾವಣೆಯಲ್ಲಿ ಸ್ಪರ್ಧಿಸದೇ ಆಪ್ ತಂತ್ರಗಳಿಗೆ ಗಟ್ಟಿ ಕೌಂಟರ್ ನೀಡಿದವರು.

    ದುಷ್ಯಂತ್ ಕುಮಾರ್ ಗೌತಮ್
    ಕರೋಲ್‌ಬಾಗ್‌ನಲ್ಲಿ ಸೋತಿದ್ದಾರೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಪ್ರಮುಖ ದಲಿತ ನಾಯಕರಾಗಿದ್ದಾರೆ.

     

  • ಯಮುನಾ ನದಿ ಸ್ವಚ್ಛಗೊಳಿಸುತ್ತಿದ್ದ ಅಧಿಕಾರಿ ಮೇಲೆ ಬಿಜೆಪಿ ಸಂಸದರ ದರ್ಪ

    ಯಮುನಾ ನದಿ ಸ್ವಚ್ಛಗೊಳಿಸುತ್ತಿದ್ದ ಅಧಿಕಾರಿ ಮೇಲೆ ಬಿಜೆಪಿ ಸಂಸದರ ದರ್ಪ

    ನವದೆಹಲಿ: ದೆಹಲಿ ಜಲ ಮಂಡಳಿ (ಡಿಜೆಬಿ) ಅಧಿಕಾರಿಗಳೊಂದಿಗೆ (Delhi Jal Board (DJB) officials) ಅನುಚಿತವಾಗಿ ವರ್ತಿಸಿದ ಬಿಜೆಪಿ ಸಂಸದ ಪರ್ವೇಶ್ ವರ್ಮಾ (BJP MP Parvesh Verma) ವಿರುದ್ಧ ಎಎಪಿ (AAP) ನಾಯಕ ವಾಗ್ದಾಳಿ ನಡೆಸಿದ್ದಾರೆ.

    ಪಶ್ಚಿಮ ದೆಹಲಿಯ (Delhi) ಬಿಜೆಪಿ ಸಂಸದ ಪರ್ವೇಶ್ ವರ್ಮಾ ಮತ್ತು ಪಕ್ಷದ ಸಹೋದ್ಯೋಗಿ ತಜಿಂದರ್ ಪಾಲ್ ಸಿಂಗ್ ಬಗ್ಗಾ (Tajinder Pal Singh Bagga) ಅವರು ಯಮುನಾದ (Yamuna) ಕಾಳಿಂದಿ ಕುಂಜ್ ಘಾಟ್‍ಗೆ ಭೇಟಿ ನೀಡಿದ್ದ ವೇಳೆ ಈ ಘಟನೆ ನಡೆದಿದೆ. ಛತ್ (Chhath)ಪೂಜೆಗೂ ಮುನ್ನ ಡಿಜೆಬಿ ಅಧಿಕಾರಿಗಳು ನದಿಗೆ ಡಿಫೋಮರ್ ಕೆಮಿಕಲ್ ಅನ್ನು ಸಿಂಪಡಿಸುತ್ತಿದ್ದರು. ಆಗ ಕೆಲವು ರಾಸಾಯನಿಕಗಳನ್ನು ಬಳಸಿದ್ದರಿಂದ ಯಮುನಾ ನದಿ ಕಲುಷಿತಗೊಂಡಿದೆ. ಇದರಿಂದ ಛತ್ ಪೂಜಾವನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ ಪರ್ವೇಶ್ ವರ್ಮಾ ಅವರು ಜಲ ಮಂಡಳಿ (ಡಿಜೆಬಿ) ಅಧಿಕಾರಿಗೆ ನಿಂದಿಸಿದ್ದರು. ಇದನ್ನೂ ಓದಿ: ಸಿಲಿಂಡರ್ ಸೋರಿಕೆಯಾಗಿ ಬೆಂಕಿ- ನರ್ಸಿಂಗ್ ಓದುತ್ತಿದ್ದ ವಿದ್ಯಾರ್ಥಿ ಸಾವು

    ಈ ವಿಚಾರವಾಗಿ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಎಎಪಿಯ ರಾಷ್ಟ್ರೀಯ ವಕ್ತಾರ ಸೌರಭ್ ಭಾರದ್ವಾಜ್ ಅವರು, ದೆಹಲಿ ಸರ್ಕಾರ ಛಠ್ ಪೂಜೆಗೆ ತಯಾರಿ ನಡೆಸುತ್ತಿತ್ತು. ಈ ವೇಳೆ ಬಿಜೆಪಿ ನಾಯಕರು ಮಧ್ಯ ಪ್ರವೇಶಿಸಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೇ ಜಲ ಮಂಡಳಿ (ಡಿಜೆಬಿ) ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಪೂರ್ವಾಂಚಲಿ ಸಹೋದರರು ಕಷ್ಟಪಡಬೇಕು ಮತ್ತು ಹಬ್ಬವನ್ನು ಹಾಳು ಮಾಡಬೇಕೆಂಬುವುದೇ ಬಿಜೆಪಿಯ ಬಯಕೆಯಾಗಿದೆ ಎಂದು ಕಿಡಿಕಾರಿದ್ದಾರೆ.

    ಟ್ವೀಟ್ ಜೊತೆಗೆ ಘಟನೆಯ ವೀಡಿಯೋವನ್ನು ಸೌರಭ್ ಭಾರದ್ವಾಜ್ ಅವರು ಹಂಚಿಕೊಂಡಿದ್ದು, ವೀಡಿಯೋದಲ್ಲಿ ಬಿಜೆಪಿ ಪರ್ವೇಶ್ ವರ್ಮಾ ಬ್ಯಾರೆಲ್‍ಗಳ ಸೆಟ್ ಅನ್ನು ತೋರಿಸಿ, “ವಿಷಕಾರಿ” ರಾಸಾಯನಿಕವನ್ನು ಸಿಂಪಡಿಸಿದ್ದಕ್ಕಾಗಿ ಅಧಿಕಾರಿಯ ಮೇಲೆ ಕಿರುಚಾಡಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಅಪ್ಪು `ಗಂಧದಗುಡಿ’ ತೊರೆದು 1 ವರ್ಷ- ನೋವು, ಕಣ್ಣೀರಿನ ಮಧ್ಯೆ ಪುಣ್ಯಸ್ಮರಣೆ

    8 ವರ್ಷಗಳ ಬಳಿಕ ಈಗ ಇದನ್ನು ಸ್ವಚ್ಛಗೊಳಿಸಬೇಕು ಎಂದು ನೆನಪಾಗಿದ್ಯಾ? ಇಲ್ಲಿ ನೀವು ಸಾಕಷ್ಟು ಜನರನ್ನು ಕೊಲ್ಲುತ್ತಿದ್ದೀರಾ. ಎಂಟು ವರ್ಷಗಳಿಂದ ಯಮುನಾ ನದಿಯನ್ನು ಸ್ವಚ್ಛಗೊಳಿಸಲು ನಿಮಗೆ ಸಾಧ್ಯವಾಗಲಿಲ್ಲ. ಈಗ ಬಂದು ಇಲ್ಲಿ ಸ್ನಾನ ಮಾಡಿ ಎಂದು ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ಕೂಡ ಅಧಿಕಾರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರೀಯತೆ ಕಲಿಯಲು ಕೇಜ್ರಿವಾಲ್ RSS ಕಚೇರಿಗೆ ಭೇಟಿ ನೀಡಬೇಕು: ಬಿಜೆಪಿ ಸಂಸದ

    ರಾಷ್ಟ್ರೀಯತೆ ಕಲಿಯಲು ಕೇಜ್ರಿವಾಲ್ RSS ಕಚೇರಿಗೆ ಭೇಟಿ ನೀಡಬೇಕು: ಬಿಜೆಪಿ ಸಂಸದ

    ನವದೆಹಲಿ: ಅರವಿಂದ್ ಕೇಜ್ರಿವಾಲ್ ಅವರು ಆರ್‌ಎಸ್‍ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಬೇಕು ಜೊತೆಗೆ ಅಲ್ಲಿ ರಾಷ್ಟ್ರೀಯತೆಯ ಬಗ್ಗೆ ಕಲಿಯಲು 3 ವರ್ಷಗಳ ಕೋರ್ಸ್‍ಗೆ ಸೇರಿಕೊಳ್ಳಬೇಕು ಎಂದು ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅಭಿಪ್ರಾಯ ಪಟ್ಟರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ 10,000 ತಿರಂಗ ಶಾಖೆಗಳನ್ನು ತೆರೆಯಲಿರುವ ಬಗ್ಗೆ ಆಪ್‌ ಪಕ್ಷ ನೀಡಿರುವ ಹೇಳಿಕೆಯನ್ನು ಟೀಕಿಸಿ ಕೇವಲ ರಾಷ್ಟ್ರಧ್ವಜ ಹಿಡಿದುಕೊಂಡರೆ ರಾಷ್ಟ್ರವಾದಿಯಾಗುವುದಿಲ್ಲ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಷ್ಟ್ರೀಯತೆಯ ಬಗ್ಗೆ ಕಲಿಯಲು ಆರ್‌ಎಸ್‍ಎಸ್ ಕಚೇರಿಗೆ ಭೇಟಿ ನೀಡಬೇಕು ಎಂದು ತಿಳಿಸಿದರು.

    ಕೇಜ್ರಿವಾಲ್ ಅವರು ಆರ್‌ಎಸ್‍ಎಸ್ ಸಿದ್ಧಾಂತದ ಮನೋಭಾವವನ್ನು ಅನುಸರಿಸಿದರೆ ಒಳ್ಳೆಯ ಮನುಷ್ಯರಾಗುತ್ತಾರೆ. ಇದರಿಂದಾಗಿ ಅವರನ್ನು ದೆಹಲಿಯ ಜಾಂಡೆವಾಲನ್ ಮತ್ತು ನಾಗ್ಪುರದಲ್ಲಿರುವ ಆರ್‌ಎಸ್‍ಎಸ್ ಕಚೇರಿಗೆ ಭೇಟಿ ನೀಡಲು ಹಾಗೂ ರಾಷ್ಟ್ರೀಯತೆಯ ಬಗ್ಗೆ ಕಲಿಯಲು ಆರ್‌ಎಸ್‍ಎಸ್‍ನ ಮೂರು ವರ್ಷಗಳ ಕೋರ್ಸ್‍ಗೆ ಹಾಜರಾಗಲು ಆಹ್ವಾನಿಸುತ್ತೇನೆ ಎಂದರು.

    ಭಾರತದ ಸರ್ಜಿಕಲ್ ಸ್ಟ್ರೈಕ್ ಮತ್ತು ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಪ್ರಶ್ನಿಸಿದ ನಂತರ ಕೇಜ್ರಿವಾಲ್ ಹೇಗೆ ರಾಷ್ಟ್ರೀಯತಾವಾದಿಯಾಗುತ್ತಾರೆ ಎಂದ ಅವರು, ರಾಷ್ಟ್ರೀಯತೆ ವ್ಯಕ್ತಿಯ ಹೃದಯ ಮತ್ತು ಮನಸ್ಸಿನಲ್ಲಿದೆ. ಇದು ಇತ್ತೀಚಿನ ಉತ್ತರ ಪ್ರದೇಶ, ಗೋವಾ ಮತ್ತು ಉತ್ತರಾಖಂಡದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ನಂತರ ಆಪ್ ಹಾಗೂ ಕೇಜ್ರಿವಾಲ್‍ನ ನಕಲಿ ರಾಷ್ಟ್ರೀಯತೆಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕ್ಯಾಂಪಸ್‌ ಪ್ರವೇಶಕ್ಕೆ ರಾಹುಲ್‌ಗೆ ಅನುಮತಿ ನೀಡದ ವಿವಿ – ಉಸ್ಮಾನಿಯಾ ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಈ ಹಿಂದೆ ದೆಹಲಿ ಸಚಿವ ಸಂಜಯ್ ಸಿಂಗ್ ಮಾತನಾಡಿ, ಬಿಜೆಪಿಯ ಒಡೆದು ಆಳುವ ನೀತಿಯ ಬಗ್ಗೆ ಜನರಿಗೆ ತಿಳಿಸಲು ಆಮ್ ಆದ್ಮಿ ಪಕ್ಷ(ಆಪ್)ವು ಮುಂದಿನ ಆರು ತಿಂಗಳಲ್ಲಿ ರಾಜ್ಯದಲ್ಲಿ 10,000 ತಿರಂಗ ಶಾಖೆಗಳನ್ನು ತೆರೆಯಲಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಖಲೀಸ್ತಾನ ಬೇಡಿಕೆ ಸಾಂವಿಧಾನಿಕ ಹಕ್ಕು ಎಂದ ಆಪ್ ನಾಯಕ ಹರ್‌ಪ್ರೀತ್‌ಸಿಂಗ್