Tag: parvathy menon

  • ಸೈಲೆಂಟ್ ಆಗಿ ಮದುವೆಯಾದ್ರಾ ‘ಮಿಲನಾ’ ನಟಿ ಪಾರ್ವತಿ?

    ಸೈಲೆಂಟ್ ಆಗಿ ಮದುವೆಯಾದ್ರಾ ‘ಮಿಲನಾ’ ನಟಿ ಪಾರ್ವತಿ?

    ‘ಮಿಲನಾ’ (Milana) ನಟಿ ಪಾರ್ವತಿ ಮೆನನ್  (Parvathy Menon) ದಕ್ಷಿಣ ಸ್ಟಾರ್ ನಟಿಯರಲ್ಲಿ ಒಬ್ಬರು. ತಮ್ಮ ಸಹಜ ನಟನೆಯ ಮೂಲಕ ಪಾರ್ವತಿ ಗಮನ ಸೆಳೆದಿದ್ದಾರೆ. ಸದ್ಯ ಖಾಸಗಿ ಬದುಕಿನ ವಿಚಾರವಾಗಿ ನಟಿ ಸುದ್ದಿಯಲ್ಲಿದ್ದಾರೆ. ಗುಟ್ಟು ಗುಟ್ಟಾಗಿ ನಟಿ ಮದುವೆಯಾದ್ರಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿವೆ. ಪಾರ್ವತಿ ಮದುವೆಯಾಗಿರುವ (Wedding) ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ಅಂಬಾನಿ ಮನೆ ಮಗನ ಪ್ರಿ ವೆಡ್ಡಿಂಗ್‌ನಲ್ಲಿ ಸೆಲೆಬ್ರಿಟಿಗಳ ದಂಡು

    ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಪಾರ್ವತಿಗೆ ಈಗ 36 ವರ್ಷ. ಸಾಮಾನ್ಯವಾಗಿ ಏಲ್ಲೇ ಹೋದರೂ ಮೊದಲು ಎದುರಾಗುವ ಪ್ರಶ್ನೆಯೇ ಮದುವೆ ಯಾವಾಗ? ಎಂದೇ ಕೇಳುತ್ತಾರೆ. ಸಿನಿಮಾಗಳಲ್ಲಿ ಬ್ಯುಸಿಯಿರುವ ನಟಿ ದಿಢೀರ್ ಎಂದು ಮದುವೆ ಫೋಟೋ ಹರಿಬಿಟ್ಟಿದಕ್ಕೆ ಫ್ಯಾನ್ಸ್ ದಂಗಾಗಿದ್ದಾರೆ. ಅಸಲಿಗೆ ಇದು ರಿಯಲ್ ಮದುವೆನಾ? ಅಲ್ಲವೇ ಅಲ್ಲ. ರೀಲ್ ಮದುವೆ ಅಂದರೆ ನೀವು ನಂಬಲೇಬೇಕು.‌

    ‘ಉಲ್ಲೋಜುಕ್ಕು’ (Ullozhukku) ಎಂಬ ಸಿನಿಮಾದಲ್ಲಿ ಪಾರ್ವತಿ ನಟಿಸಿದ್ದಾರೆ. ಪ್ರಶಾಂತ್ ಮುರಳಿ ಈ ಚಿತ್ರದ ನಾಯಕ. ಸದ್ಯ ಈ ಚಿತ್ರದ 45 ಸೆಕೆಂಡಿನ ಪ್ರೋಮೋವೊಂದು ರಿಲೀಸ್‌ ಮಾಡಿದ್ದಾರೆ. ಪಾರ್ವತಿ ಮತ್ತು ಪ್ರಶಾಂತ್ ಮುರಳಿ ದಂಪತಿಗಳ ಪಾತ್ರ ನಿರ್ವಹಿಸುತ್ತಿದ್ದಾರೆ. ರೀಲ್‌ನಲ್ಲಿ ಆಗಷ್ಟೇ ಮದುವೆಯಾಗಿರುವ ನವಜೋಡಿ ದೋಣಿಯಲ್ಲಿ ಕುಳಿತು ಕ್ಯಾಮೆರಾಗಳಿಗೆ ಪೋಸ್ ನೀಡಿದ್ದಾರೆ. ಸದ್ಯ ಪ್ರೋಮೋ ಎಲ್ಲರ ಗಮನ ಸೆಳೆದಿದೆ. ಅಂದಹಾಗೆ, ಇದೇ ಜೂನ್‌ 21ಕ್ಕೆ ಸಿನಿಮಾ ರಿಲೀಸ್‌ ಆಗಲಿದೆ.

    ಇನ್ನೂ ಮಾಲಿವುಡ್ (Mollywood) ನಟಿ ಪಾರ್ವತಿ ಅವರು ಕನ್ನಡದ ಮಿಲನಾ, ಪೃಥ್ವಿ, ಮಳೆ ಬರಲಿ ಮಂಜು ಇರಲಿ, ಅಂದರ್ ಬಾಹರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  • ಪ್ರೆಗ್ನೆನ್ಸಿ ಟೆಸ್ಟಿಂಗ್ ಕಿಟ್ ಪೋಸ್ಟ್ ಮಾಡಿ ಶಾಕ್ ಮೂಡಿಸಿದ ಸ್ಟಾರ್ ನಟಿಯರು

    ಪ್ರೆಗ್ನೆನ್ಸಿ ಟೆಸ್ಟಿಂಗ್ ಕಿಟ್ ಪೋಸ್ಟ್ ಮಾಡಿ ಶಾಕ್ ಮೂಡಿಸಿದ ಸ್ಟಾರ್ ನಟಿಯರು

    ಲಯಾಳಂ ಸಿನಿಮಾ ರಂಗಕ್ಕೆ ಈ ಇಬ್ಬರು ಸ್ಟಾರ್ ನಟಿಯರು ಇಂದು ಶಾಕ್ ಮೂಡಿಸಿದ್ದಾರೆ. ಮದುವೆ ಆಗದೇ ಇರುವ ಈ ಖ್ಯಾತ ತಾರೆಯರು ಪ್ರಗ್ನೆನ್ಸಿ ಕಿಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಪ್ರೆಗ್ನೆನ್ಸಿ ಕಿಟ್ ಹಾಕಿ ಶಾಕ್ ಮೂಡಿಸಿರುವ ಇಬ್ಬರೂ ನಟಿಯರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

    ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಪಾರ್ವತಿ ಮೆನನ್ ಮತ್ತು ನಿತ್ಯಾ ಮೆನನ್ ಈ ರೀತಿ ಪೋಸ್ಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.  ಪುನೀತ್ ರಾಜ್ ಕುಮಾರ್ ನಟನೆಯ ಮಿಲನಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದ ಮಲಯಾಳಿ ಚೆಲುವೆ ಪಾರ್ವತಿ ಮೆನನ್, ನಂತರ ಅನೇಕ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನೂ ಮದುವೆಯಾಗದ ಈ ತಾರೆ ಪ್ರೆಗ್ನೆನ್ಸಿ ಕಿಟ್ ಅನ್ನು ಇನ್ಸಸ್ಟಾದಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ಪೋಸ್ಟ್ ಹಾಕಿರುವ ಉದ್ದೇಶವನ್ನು ಹೇಳದೇ ಇರುವ ಕಾರಣಕ್ಕಾಗಿ ಸಖತ್ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ:ಗಂಧದ ಗುಡಿ ಅಬ್ಬರದ ನಡುವೆಯೂ ‘ಕಾಂತಾರ’ ಹೌಸ್ ಫುಲ್

    ಜೋಶ್ ಸಿನಿಮಾದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ನಿತ್ಯಾ ಮೆನನ್ ಕೂಡ ಇಂಥದ್ದೇ ಪೋಸ್ಟ್ ಮಾಡಿದ್ದಾರೆ. ಇವರೂ ಕೂಡ ಪ್ರೆಗ್ನೆನ್ಸಿ ಕಿಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.  ನಿತ್ಯಾ ಕೂಡ ಮದುವೆ ಆಗದೇ ಇರುವ ಕಾರಣಕ್ಕಾಗಿ ಈ ಪೋಸ್ಟ್ ಮತ್ತಷ್ಟು ಗೊಂದ ಸೃಷ್ಟಿ ಮಾಡಿದೆ. ನಿತ್ಯಾ ಕೂಡ ಈ ಕುರಿತು ಸವಿವರವಾಗಿ ಏನನ್ನೂ ಹೇಳಿಲ್ಲ. ಹಾಗಾಗಿ ಮೆನನ್ ಚೆಲುವಿಯರ ನಿಗೂಢ ನಡೆ ಕುತೂಹಲ ಮೂಡಿಸಿದೆ.

    ಪಾರ್ವತಿ ಮೆನನ್ ಮತ್ತ ನಿತ್ಯಾ ಮೆನನ್ ಪೋಸ್ಟ್ ಒಂದೇ ಆಗಿರುವುದರಿಂದ ಇದೊಂದು ಜಾಹೀರಾತಾ ಅಥವಾ ಸಿನಿಮಾ ಬಗೆಗಿನ ಪ್ರಮೋಷನ್ನಾ? ಎನ್ನುವ ಅನುಮಾನ ಕೂಡ ಮೂಡಿದೆ. ಮದುವೆ ಆಗದೇ ಇರುವ ಕಾರಣಕ್ಕಾಗಿ ಇವರು ಇಂತಹ ಜಾಹೀರಾತಿನಲ್ಲಿ ನಟಿಸಬೇಕಿತ್ತಾ ಎನ್ನುವ ಪ್ರಶ್ನೆಯನ್ನೂ ಅಭಿಮಾನಿಗಳು ಹಾಕಿದ್ದಾರೆ. ಒಟ್ಟಿನಲ್ಲಿ ಈ ನಟಿಯರು ಏನು ಹೇಳುವುದಕ್ಕೆ ಹೊರಟಿದ್ದಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

    Live Tv
    [brid partner=56869869 player=32851 video=960834 autoplay=true]

  • ಮಿಲನ ನಟಿಯಿಂದ ಈಗ ಮೀಟೂ ಆರೋಪ

    ಮಿಲನ ನಟಿಯಿಂದ ಈಗ ಮೀಟೂ ಆರೋಪ

    ಬೆಂಗಳೂರು: ಭಾರತೀಯ ಸಿನಿಮಾ ರಂಗದಲ್ಲಿಯೇ ಮೀಟೂ ಅಭಿಯಾನವೂ ಸುದ್ದಿಯಾಗುತ್ತಿದೆ. ಈಗ ಸ್ಯಾಂಡಲ್‍ವುಡ್ ನಲ್ಲಿ ಶೃತಿ ಹರಿಹರನ್ ಬೆನ್ನಲ್ಲೇ ಮಿಲನ ಸಿನಿಮಾದ ನಟಿ ಪಾರ್ವತಿ ಮೆನನ್ ಮೀಟೂ ಆರೋಪ ಮಾಡಿದ್ದಾರೆ.

    ನಾನೀಗ ಮಾತನಾಡಿದರೆ ಮಹಿಳೆ ಅನ್ನೋ ಕಾರಣಕ್ಕೆ ಹೀಗಳೆಯಬಹುದು. ಎಂದೋ ಆದ ಘಟನೆ ಕಿರುಕುಳವನ್ನು  ಈಗ ಯಾಕೆ ಹೇಳುತ್ತಿದ್ದಾರೆ ಅಂದುಕೊಳ್ಳಬಹುದು. ಆದರೆ ಸಂತ್ರಸ್ತರ ಸ್ಥಿತಿ, ನೋವು ಅವರಿಗಷ್ಟೇ ಗೊತ್ತಿರುತ್ತೆ. ಆ ಒಂದು ಕಿರುಕುಳ, ಆ ಒಂದು ಘಟನೆ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತೆದೆ. ನನಗೂ ಹಾಗೇ ಆಗಿತ್ತು. 12 ವರ್ಷಗಳ ನಂತರ ನನಗೆ ಆದ ಕಿರುಕುಳ ಅರಿವಿಗೆ ಬಂದಿದೆ ಎಂದು ಪಾರ್ವತಿ ಹೇಳಿಕೊಂಡಿದ್ದಾರೆ.

    ಪಾರ್ವತಿ ಮೆನನ್ ಅವರಿಗೆ ಮೂರರ ಪ್ರಾಯದಲ್ಲಿ ಲೈಂಗಿಕ ಕಿರುಕುಳದ ಅನುಭವವಾಗಿತ್ತಂತೆ. ಆದರೆ 13 ವರ್ಷಗಳ ನಂತರ ಆ ಬಗ್ಗೆ ಅವರಿಗೆ ಬಂದಿದೆ. ಆದ್ದರಿಂದ ಈಗ ಪಾರ್ವತಿ ಅವರು ತಮಗಾದ ಮೀಟೂ ಅನುಭವವನ್ನು ಹೇಳಿಕೊಂಡಿದ್ದಾರೆ. ಆದರೆ ಅವರಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದು ಯಾರು ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

    ಪಾರ್ವತಿ ಮೆನನ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಮಿಲನ’ ಮತ್ತು ಸೆಂಚುರಿ ಸ್ಟಾರ್ ಶಿವಣ್ಣ ಅಭಿನಯದ ‘ಅಂದರ್ ಬಾಹರ್’ ಸಿನಿಮಾದಲ್ಲಿ ಅಭಿನಯಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv