Tag: parvathy

  • ಪಾರ್ವತಿ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ: ಶಿವನ ಪಾತ್ರದಲ್ಲಿ ಶಿವಣ್ಣ

    ಪಾರ್ವತಿ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ: ಶಿವನ ಪಾತ್ರದಲ್ಲಿ ಶಿವಣ್ಣ

    ವಿಷ್ಣು ಮಂಚು ನಟನೆಯ ಕಣ್ಣಪ್ಪ (Kannappa) ಸಿನಿಮಾ ಕುರಿತಂತೆ ದಿನಕ್ಕೊಂದು ಸುದ್ದಿ ಹೊರ ಬರುತ್ತಿವೆ. ಈ ಸಿನಿಮಾದಲ್ಲಿ ಹೆಸರಾಂತ ಕಲಾವಿದರೇ ತುಂಬಿದ್ದು, ಆ ಸಾಲಿಗೆ ಅನುಷ್ಕಾ ಶೆಟ್ಟಿ (Anushka Shetty) ಸೇರಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅನುಷ್ಕಾ ಅವರು ಪಾರ್ವತಿಯ ಪಾತ್ರ ಮಾಡಲಿದ್ದಾರೆ. ಶಿವನಾಗಿ ಕನ್ನಡದ ನಟ ಶಿವರಾಜ್ ಕುಮಾರ್ ನಟಿಸಲಿದ್ದಾರೆ.

    ಅನುಷ್ಕಾ ಶೆಟ್ಟಿ ಮಾತ್ರವಲ್ಲ, ಬಾಲಿವುಡ್ (Bollywood) ಹೆಸರಾಂತ ಹೀರೋ ಅಕ್ಷಯ್ ಕುಮಾರ್‌ ಕೂಡ ವಿಷ್ಣು ಮಂಚು ನಟನೆಯ ‘ಕಣ್ಣಪ್ಪ’ ಸಿನಿಮಾಗೆ ಸಾಥ್‌ ನೀಡಲಿದ್ದಾರೆ. ಸಹಜವಾಗಿಯೇ ಅಕ್ಷಯ್ ಅಭಿಮಾನಿಗಳು ಸಂಭ್ರಮದಲ್ಲಿದ್ದಾರೆ.

    ಸದ್ಯ ವಿಷ್ಣು ಮಂಚು (Vishnu Manchu) ನಟನೆಯ ಸಿನಿಮಾ ಕಣ್ಣಪ್ಪ ಚಿತ್ರದಲ್ಲಿ ಪ್ರಭಾಸ್, ಮೋಹನ್ ಲಾಲ್, ಶರತ್ ಕುಮಾರ್ ಈಗಾಗಲೇ ಚಿತ್ರತಂಡವನ್ನು ಸೇರಿದ್ದಾರೆ. ಅಕ್ಷಯ್ ಕುಮಾರ್ ಕೂಡ ಈ ಪ್ರಾಜೆಕ್ಟ್‌ಗಳಲ್ಲಿ ನಟಿಸಲಿದ್ದಾರೆ. ಬಹುಮುಖ್ಯ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಪಾತ್ರದ ಕುರಿತು ಮುಂದಿನ ದಿನಗಳಲ್ಲಿ ತಂಡದ ಕಡೆಯಿಂದ ಮಾಹಿತಿ ಸಿಗಲಿದೆ.

     

    ಬಿಗ್ ಬಜೆಟ್‌ನಲ್ಲಿ ಕಣ್ಣಪ್ಪ ಸಿನಿಮಾ ಮೂಡಿ ಬರಲಿದೆ. ಮಲ್ಟಿ ಸ್ಟಾರ್‌ಗಳು ಈ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

  • ಪ್ರೈಮ್ ವೀಡಿಯೋದಿಂದ ಹೀಗೊಂದು ಹೊಸ ಯೋಜನೆ: ಫೀಮೇಲ್ ಫಸ್ಟ್ ಕಲೆಕ್ಟಿವ್’ ಬಿಡುಗಡೆ

    ಪ್ರೈಮ್ ವೀಡಿಯೋದಿಂದ ಹೀಗೊಂದು ಹೊಸ ಯೋಜನೆ: ಫೀಮೇಲ್ ಫಸ್ಟ್ ಕಲೆಕ್ಟಿವ್’ ಬಿಡುಗಡೆ

    ಭಾರತದ ಅತ್ಯಂತ ಪ್ರೀತಿಪಾತ್ರವಾದ ಮತ್ತು ಅತೀ ಹೆಚ್ಚು ವೀಕ್ಷಣೆಯಾಗುವ ಓಟಿಟಿಯಾದ ಅಮೇಜಾನ್​ ಪ್ರೈಮ್​ ಇಂದು ಹೊಸ ಸೀರೀಸ್​ ಬಿಡುಗಡೆ ಮಾಡಿದೆ. ‘ಮೈತ್ರಿ: ಫೀಮೇಲ್​ ಫಸ್ಟ್​ ಕಲೆಕ್ಟಿವ್​’ ಎಂಬ ಮಹಿಳಾ ಪ್ರಧಾನವಾದ ಈ ಸೀರೀಸ್​ನಲ್ಲಿ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಒಂಬತ್ತು ಮಹಿಳೆಯರು ಒಂದೇ ವೇದಿಕೆಯಲ್ಲಿ, ಈ ಕ್ಷೇತ್ರದಲ್ಲಿ ತಾವು ಎದುರಿಸಿದ ಸವಾಲುಗಳು, ಪಡೆದ ಯಶಸ್ಸುಗಳು ಸೇರಿದಂತೆ ಹಲವು ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ, ಅಗತ್ಯವಿರುವವರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನೂ ಅವರು ನೀಡಲಿದ್ದಾರೆ.

    ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಅಪರ್ಣಾ ಪುರೋಹಿತ್ (ಮೈತ್ರಿ ಮತ್ತು ಇಂಡಿಯಾ ಒರಿಜಿನಲ್ಸ್​ ಮುಖ್ಯಸ್ಥೆ), ಇಂಧು ವಿ.ಎಸ್​ (ಬರಹಗಾರ್ತಿ ಮತ್ತು ನಿರ್ದೇಶಕಿ), ರತೀನಾ ಪ್ಲತ್ತೋತ್ತಿಲ್​ (ಬರಹಗಾರ್ತಿ, ನಿರ್ದೇಶಕಿ ಮತ್ತು ನಿರ್ಮಾಪಕಿ), ಇಲಾಹೆ ಹಿಪ್ತೂಲ (ನಿರ್ಮಾಪಕಿ), ಪಾರ್ವತಿ ತಿರುವೋತ್ತು (ನಟಿ, ನಿರ್ದೇಶಕಿ) ರೀಮಾ ಕಲ್ಲಿಂಗಳ್​ (ನಟಿ ಮತ್ತು ನಿರ್ದೇಶಕಿ, ಶ್ರೇಯಾ ದೇವ್​ ದೂಬೆ (ನಿರ್ದೇಶಕಿ ಮತ್ತು ಛಾಯಾಗ್ರಾಹಕಿ) ಮತ್ತು ನೇಹಾ ಪಾರ್ತಿ ಮತಿಯಾನಿ (ಛಾಯಾಗ್ರಾಹಕಿ) ಈ ಸೀಸನ್​ನಲ್ಲಿ ಭಾಗವಹಿಸಲಿದ್ದಾರೆ. ಅವರನ್ನು ಕೂರಿಸಿ ಮಾತನಾಡಿಸುವುದರ ಜತೆಗೆ, ಅವರಿಂದ ಹಲವು ಮುಖ್ಯ ವಿಷಯಗಳನ್ನು ಹೊರ ತೆಗೆಯಲಿದ್ದಾರೆ ಮೈತ್ರಿಯ ಕ್ಯೂರೇಟರ್​ ಆದ ಸ್ಮೃತಿ ಕಿರಣ್.

    ಈ ಸೀರೀಸ್​ನಲ್ಲಿ ಮನರಂಜನಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು ಹೇಗೆ ಎಂಬುದರ ಜತೆಗೆ ಅವರಿಗೆ ಸೂಕ್ತ ಪ್ರಾತಿನಿಧ್ಯ ನೀಡುವುದು ಮತ್ತು ಅವರಿಗೆ ಭಯಮುಕ್ತ ವಾತಾವರಣವನ್ನು ನಿರ್ಮಿಸುವುದು ಹೇಗೆ ಎಂಬ ವಿಷಯಗಳನ್ನು ಚರ್ಚಿಸಲಾಗುತ್ತದೆ. ಇದನ್ನೂ ಓದಿ: ಮಂಜು ಪಾವಗಡ ಮೇಲೆ ಅಮೂಲ್ಯ ಲವ್: ರಾಕೇಶ್ ಅಡಿಗ ಕಕ್ಕಾಬಿಕ್ಕಿ

    ಈ ಸೀಸನ್​ನಲ್ಲಿ ಭಾಗವಹಿಸಿರುವ ವೃತ್ತಿಪರ ಮಹಿಳೆಯರು, ಈ ವೃತ್ತಿಯಲ್ಲಿ ತಾವು ಎದುರಿಸುತ್ತಿರುವ ಸವಾಲುಗಳ ಜತೆಗೆ, ತಮ್ಮ ವೈಯಕ್ತಿಕ ಅನುಭವಗಳನ್ನು ಸಹ ಹಂಚಿಕೊಂಡಿದ್ದಾರೆ. ಕಷ್ಟದ ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಮಾತನಾಡಿದ್ದಾರೆ. ಈ ಆಧುನಿಕ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಪುರುಷರಿಗೆ ಸಮನಾಗಿ ಮಹಿಳೆಯರು ಹೇಗೆ ಭಾಗವಹಿಸಬಹುದು ಎಂಬುದನ್ನು ಚರ್ಚಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕೊನೆಗೂ ರಿವೀಲ್ ಆಯ್ತು ನಿತ್ಯಾ ಮೆನನ್- ಪಾರ್ವತಿ ಪ್ರೆಗ್ನೆನ್ಸಿ ಸೀಕ್ರೆಟ್‌

    ಕೊನೆಗೂ ರಿವೀಲ್ ಆಯ್ತು ನಿತ್ಯಾ ಮೆನನ್- ಪಾರ್ವತಿ ಪ್ರೆಗ್ನೆನ್ಸಿ ಸೀಕ್ರೆಟ್‌

    ಹುಭಾಷಾ ನಟಿ ಪಾರ್ವತಿ(Parvathy) ಇತ್ತೀಚೆಗಷ್ಟೇ ಪ್ರೆಗ್ನೆನ್ಸಿ(Pregancy) ಪೋಸ್ಟ್ ಹಾಕಿ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಈ ಬೆನ್ನಲ್ಲೇ ಇದೇ ರೀತಿ ನಿತ್ಯಾ ಮೆನನ್(Nithya Menon) ಕೂಡ ಪೋಸ್ಟ್ ಮಾಡಿದ್ದರು. ಇದೀಗ ಈ ಬಗ್ಗೆ ಇಬ್ಬರೂ ನಟಿಯರು ಗುಡ್ ನ್ಯೂಸ್ ಕೊಟ್ಟಿದ್ದಾರೆ.

     

    View this post on Instagram

     

    A post shared by Parvathy Thiruvothu (@par_vathy)

    ಕನ್ನಡದ `ಮಿಲನ'(Milana) ಮತ್ತು `ಮೈನಾ’ (Myna) ಚಿತ್ರದ ನಾಯಕಿಯರಾದ ನಿತ್ಯಾ ಮೆನನ್(Nithya Menon) ಮತ್ತು ಪಾರ್ವತಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಇಬ್ಬರೂ ಪ್ರೆಗ್ನೆನ್ಸಿ ಪೋಸ್ಟ್ ಹಾಕಿದ ಮೇಲಂತೂ ಇವರದ್ದೇ ಸಮಾಚಾರ. ಮದುವೆಯಾಗದೇ ಗರ್ಭಿಣಿಯಾದ್ರಾ ಎಂಬ ಚರ್ಚೆ ಕೂಡ ನಡೆದಿತ್ತು. ಇದೀಗ ಈ ಗಾಸಿಪ್‌ಗೂ ತೆರೆ ಬಿದ್ದಿದೆ. ನಿತ್ಯಾ ಮತ್ತು ಪಾರ್ವತಿ `ವಂಡರ್ ವುಮೆನ್’ ಚಿತ್ರಕ್ಕಾಗಿ ಜೊತೆಯಾಗಿದ್ದಾರೆ. ಇದನ್ನೂ ಓದಿ:ಅಮಿತಾಭ್ ಮೊಮ್ಮಗಳ ಜೊತೆಗಿನ ಡೇಟಿಂಗ್ ಬಗ್ಗೆ ಬಾಯ್ಬಿಟ್ಟ ನಟ ಸಿದ್ಧಾಂತ್

     

    View this post on Instagram

     

    A post shared by Nithya Menen (@nithyamenen)

    ಅಂಜಲಿ ಮೆನನ್ ನಿರ್ದೇಶನದ `ವಂಡರ್ ವುಮೆನ್’ನಲ್ಲಿ(Wonder Women) ನಿತ್ಯಾ, ಪಾರ್ವತಿ, ಪದ್ಮ ಪ್ರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ಚಿತ್ರದ ಟ್ರೈಲರ್ ಕೂಡ ರಿಲೀಸ್ ಆಗಿ ಹೈಪ್ ಕ್ರಿಯೇಟ್ ಮಾಡಿದೆ. ಇದೊಂದು ಪ್ರೆಗ್ನೆನ್ಸಿ ಕಥೆಯಾಗಿದ್ದು, ಜೀವನದಲ್ಲಿ ಮಹಿಳೆಯರು ಎದುರಿಸುವ ಸವಾಲಿನ ಬಗ್ಗೆ ತೆರೆಯ ಮೇಲೆ ತೋರಿಸಲು ಚಿತ್ರತಂಡ ರೆಡಿಯಾಗಿದ್ದಾರೆ.

     

    View this post on Instagram

     

    A post shared by Nithya Menen (@nithyamenen)

    `ವಂಡನ್ ವುಮೆನ್’ ಗರ್ಭಿಣಿಯರ ಕುರಿತ ಈ ಕಥೆ,  ನವೆಂಬರ್ 18ರಂದು ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]