Tag: Parvathamma

  • ನಿರ್ದೇಶಕಿಯರಿಗೆ ಹೆಚ್ಚು ಅವಕಾಶ: ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್

    ನಿರ್ದೇಶಕಿಯರಿಗೆ ಹೆಚ್ಚು ಅವಕಾಶ: ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್

    ಪುನೀತ್ ರಾಜ್ ಕುಮಾರ್ (Puneeth Rajkumar) ಕನಸಿನ ‘ಪಿ.ಆರ್.ಕೆ’ ಪ್ರೊಡಕ್ಷನ್ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar). ತಮ್ಮ ಮುಂದಿನ ಯೋಚನೆ ಹಾಗೂ ಯೋಜನೆಗಳೇನು ಎನ್ನುವುದರ ಬಗ್ಗೆ ಸಾಕಷ್ಟು ವಿಚಾರಗಳನ್ನು ಬಹಿರಂಗೊಳಿಸಿದ್ದಾರೆ. ಅದರಲ್ಲೂ ಮಹಿಳೆಯರಿಗೆ ಹೆಚ್ಚು ಪ್ರಾಶಸ್ತ್ಯ ನೀಡುವುದಾಗಿಯೂ ಅವರು ತಿಳಿಸಿದ್ದಾರೆ. ನಿರ್ದೇಶಕಿಯರಿಗೆ ಹೆಚ್ಚು ಸಿನಿಮಾ ಮಾಡುವ ಕುರಿತು ಅವರು ಮಾತನಾಡಿದ್ದಾರೆ.

    ಭಾರತದಲ್ಲೇ ಅತೀ ಹೆಚ್ಚು ಕಾದಂಬರಿ ಆಧರಿಸಿದ ಸಿನಿಮಾಗಳನ್ನು ಮಾಡಿದವರು ಡಾ.ರಾಜ್ ಕುಮಾರ್ (Rajkumar). ಈ ಕಾದಂಬರಿಗಳ ಆಯ್ಕೆಯಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಶ್ರಮ ಹೆಚ್ಚಿತ್ತು. ಸ್ವತಃ ಪಾರ್ವತಮ್ಮನವರೇ ಕಾದಂಬರಿಗಳನ್ನು ಓದಿ ಸಿನಿಮಾ ಮಾಡುವಂತೆ ಪತಿ ರಾಜ್ ಕುಮಾರ್ ಅವರಿಗೆ ಸಲಹೆ ನೀಡುತ್ತಿದ್ದರು. ಕಾದಂಬರಿ ಆಧರಿಸಿದ ಸಿನಿಮಾಗಳಲ್ಲಿ ನಟಿಸುವಂತೆ ಮಕ್ಕಳಿಗೂ ಪಾರ್ವತಮ್ಮನವರು (Parvathamma) ಸಲಹೆ ನೀಡುತ್ತಿದ್ದರು.

    ಇದೀಗ ಅಂಥದ್ದೇ ಹಾದಿಯಲ್ಲಿ ನಡೆಯುತ್ತಿದ್ದಾರೆ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್. ಕಾದಂಬರಿ ಆಧರಿಸಿದ ಸಿನಿಮಾಗಳನ್ನು ನಿರ್ಮಾಣ ಮಾಡಬೇಕು ಎನ್ನುವುದು ಅವರಿಗೂ ಆಸೆಯಂತೆ. ಹಾಗಾಗಿ ಅವರು ಕೂಡ ಪುಸ್ತಕ ಓದಲು ಶುರು ಮಾಡಿದ್ದಾರೆ. ಈಗಾಗಲೇ ಒಂದು ಕಾದಂಬರಿಯನ್ನು ಅವರು ಓದುತ್ತಿದ್ದಾರಂತೆ. ಇದನ್ನೂ ಓದಿ:ಗರುಡ ಪಕ್ಷಿಗೆ ಮುತ್ತಿಟ್ಟ ನಟಿ- ಮರಳುಗಾಡಿನಲ್ಲಿ ದೀಪಿಕಾ ದಾಸ್

    ಹೊಸ ನಿರ್ದೇಶಕರಿಗೆ, ಕಲಾವಿದರಿಗೆ ತಮ್ಮ ಬ್ಯಾನರ್ ನಲ್ಲಿ ಸಿನಿಮಾ ಮಾಡಬೇಕು ಎನ್ನುವುದು ಪುನೀತ್ ಅವರ ಗುರಿಯಾಗಿತ್ತು. ಅದನ್ನು ಅವರು ಚಾಚೂ ತಪ್ಪದೇ ಮಾಡುತ್ತಿದ್ದರು. ಪುನೀತ್ ಅವರು ಕಾಲವಾದನಂತರ ಅವರ ಕನಸನ್ನು ಪತ್ನಿ ಅಶ್ವಿನಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಹೊಸಬರಿಗೆ, ಅದರಲ್ಲೂ ಮಹಿಳಾ ನಿರ್ದೇಶಕಿಯರಿಗೆ ಹೆಚ್ಚು ಅವಕಾಶ ನೀಡುವುದಾಗಿ ಹೇಳಿಕೊಂಡಿದ್ದಾರೆ.

     

    ಮೊದಲಿನಿಂದಲೂ ಪುಸ್ತಕಗಳನ್ನು ಓದುವ ಹವ್ಯಾಸವಿತ್ತು. ಇದೀಗ ಸಿನಿಮಾಗಾಗಿ ಹೊಸ ಹೊಸ ಕಾದಂಬರಿಗಳನ್ನು ಓದುತ್ತಿದ್ದೇನೆ. ಈಗ ಸಿನಿಮಾವಾಗುವಂತಹ ಒಂದು ಕಾದಂಬರಿ ಓದುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಅದು ಯಾವುದು? ಯಾರ ಕಾದಂಬರಿ ಎನ್ನುವ ಕುರಿತು ಮಾತನಾಡುತ್ತೇನೆ ಎಂದಿದ್ದಾರೆ ಅಶ್ವಿನಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾರ್ವತಮ್ಮ ರಾಜ್ ಕುಮಾರ್ ಹಾದಿಯಲ್ಲೇ ಸೊಸೆ ಅಶ್ವಿನಿ: ಕಾದಂಬರಿ ಆಧರಿಸಿ ಸಿನಿಮಾ

    ಪಾರ್ವತಮ್ಮ ರಾಜ್ ಕುಮಾರ್ ಹಾದಿಯಲ್ಲೇ ಸೊಸೆ ಅಶ್ವಿನಿ: ಕಾದಂಬರಿ ಆಧರಿಸಿ ಸಿನಿಮಾ

    ಭಾರತದಲ್ಲೇ ಅತೀ ಹೆಚ್ಚು ಕಾದಂಬರಿ ಆಧರಿಸಿದ ಸಿನಿಮಾಗಳನ್ನು ಮಾಡಿದವರು ಡಾ.ರಾಜ್ ಕುಮಾರ್. ಈ ಕಾದಂಬರಿಗಳ ಆಯ್ಕೆಯಲ್ಲಿ ಪಾರ್ವತಮ್ಮ ರಾಜ್ ಕುಮಾರ್  (Parvathamma) ಶ್ರಮ ಹೆಚ್ಚಿತ್ತು. ಸ್ವತಃ ಪಾರ್ವತಮ್ಮನವರೇ ಕಾದಂಬರಿಗಳನ್ನು ಓದಿ ಸಿನಿಮಾ ಮಾಡುವಂತೆ ಪತಿ ರಾಜ್ ಕುಮಾರ್ ಅವರಿಗೆ ಸಲಹೆ ನೀಡುತ್ತಿದ್ದರು. ಕಾದಂಬರಿ (Novel) ಆಧರಿಸಿದ ಸಿನಿಮಾಗಳಲ್ಲಿ ನಟಿಸುವಂತೆ ಮಕ್ಕಳಿಗೂ ಪಾರ್ವತಮ್ಮನವರು ಸಲಹೆ ನೀಡುತ್ತಿದ್ದರು.

    ಇದೀಗ ಅಂಥದ್ದೇ ಹಾದಿಯಲ್ಲಿ ನಡೆಯುತ್ತಿದ್ದಾರೆ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar). ಕಾದಂಬರಿ ಆಧರಿಸಿದ ಸಿನಿಮಾಗಳನ್ನು (Cinema) ನಿರ್ಮಾಣ ಮಾಡಬೇಕು ಎನ್ನುವುದು ಅವರಿಗೂ ಆಸೆಯಂತೆ. ಹಾಗಾಗಿ ಅವರು ಕೂಡ ಪುಸ್ತಕ ಓದಲು ಶುರು ಮಾಡಿದ್ದಾರೆ. ಈಗಾಗಲೇ ಒಂದು ಕಾದಂಬರಿಯನ್ನು ಅವರು ಓದುತ್ತಿದ್ದಾರಂತೆ. ಇದನ್ನೂ ಓದಿ:‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಧನುಷ್-ಶಿವಣ್ಣ ಕಾಳಗ?

    ಹೊಸ ನಿರ್ದೇಶಕರಿಗೆ, ಕಲಾವಿದರಿಗೆ ತಮ್ಮ ಬ್ಯಾನರ್ (P.R.K) ನಲ್ಲಿ ಸಿನಿಮಾ ಮಾಡಬೇಕು ಎನ್ನುವುದು ಪುನೀತ್ ಅವರ ಗುರಿಯಾಗಿತ್ತು. ಅದನ್ನು ಅವರು ಚಾಚೂ ತಪ್ಪದೇ ಮಾಡುತ್ತಿದ್ದರು. ಪುನೀತ್ ಅವರು ಕಾಲವಾದನಂತರ ಅವರ ಕನಸನ್ನು ಪತ್ನಿ ಅಶ್ವಿನಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಹೊಸಬರಿಗೆ, ಅದರಲ್ಲೂ ಮಹಿಳಾ ನಿರ್ದೇಶಕಿಯರಿಗೆ ಹೆಚ್ಚು ಅವಕಾಶ ನೀಡುವುದಾಗಿ ಹೇಳಿಕೊಂಡಿದ್ದಾರೆ.

     

    ಮೊದಲಿನಿಂದಲೂ ಪುಸ್ತಕಗಳನ್ನು ಓದುವ ಹವ್ಯಾಸವಿತ್ತು. ಇದೀಗ ಸಿನಿಮಾಗಾಗಿ ಹೊಸ ಹೊಸ ಕಾದಂಬರಿಗಳನ್ನು ಓದುತ್ತಿದ್ದೇನೆ. ಈಗ ಸಿನಿಮಾವಾಗುವಂತಹ ಒಂದು ಕಾದಂಬರಿ ಓದುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಅದು ಯಾವುದು? ಯಾರ ಕಾದಂಬರಿ ಎನ್ನುವ ಕುರಿತು ಮಾತನಾಡುತ್ತೇನೆ ಎಂದಿದ್ದಾರೆ ಅಶ್ವಿನಿ. ಕೆಲ ತಿಂಗಳ ಹಿಂದೆಯಷ್ಟೇ ಲೇಖಕಿ ಕುಸುಮಾ ಆಯಾರಳ್ಳಿ (ಕುಸುಮಬಾಲೆ) ಅವರು ಅಶ್ವಿನಿ ಅವರನ್ನು ಭೇಟಿ ಮಾಡಿ ತಮ್ಮ ‘ದಾರಿ’ ಕಾದಂಬರಿಯನ್ನು ನೀಡಿದ್ದರು. ಬಹುಶಃ ಅದೇನಾದರೂ ಸಿನಿಮಾ ಆಗತ್ತಾ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಗ್ಗೇಶ್ ಕನ್ನಡದ ರಜನಿಕಾಂತ್ ಎಂದು ಅಪ್ಪುಗೆ ಪರಿಚಯಿಸಿದ್ದರಂತೆ ಅಣ್ಣಾವ್ರು

    ಜಗ್ಗೇಶ್ ಕನ್ನಡದ ರಜನಿಕಾಂತ್ ಎಂದು ಅಪ್ಪುಗೆ ಪರಿಚಯಿಸಿದ್ದರಂತೆ ಅಣ್ಣಾವ್ರು

    ಪುನೀತ್ ರಾಜ್ ಕುಮಾರ್ (Puneeth Raj Kumar) ಕಂಡೆ ಜಗ್ಗೇಶ್ ಅವರಿಗೆ ಎಲ್ಲಿಲ್ಲದ ಪ್ರೀತಿ. ಅಪ್ಪು ಸಾಯುವ ಮೂರು ದಿನದ ಮುಂಚೆ ಈ ಇಬ್ಬರೂ ಕಲಾವಿದರು ಬೆಂಗಳೂರಿನ ಮಲ್ಲೇಶ್ವರದಲ್ಲಿ ಸಿಕ್ಕು ಸಾಕಷ್ಟು ಮಾತನಾಡಿದ್ದಿದೆ. ಅನೇಕ ಸಾರಿ ರಾಯರ ದರ್ಶನಕ್ಕೆ ಒಟ್ಟಿಗೆ ಹೋಗಿದ್ದೂ ಇದೆ. ಅಲ್ಲದೇ, ಡಾ.ರಾಜ್ ಕುಮಾರ್ ಕಂಡರೆ ಜಗ್ಗೇಶ್ ಗೆ ಸಾಕಷ್ಟು ಗೌರವ. ಅಣ್ಣಾವ್ರು ಕೂಡ ಜಗ್ಗೇಶ್ (Jaggesh) ಅವರನ್ನು ಪ್ರೀತಿಯಿಂದ ನೋಡಿಕೊಂಡಿದ್ದು ಇದೆ. ಇಂತಹ ಜಗ್ಗೇಶ್ ತಮ್ಮ ಮನದಾಳದಿಂದ ಪುನೀತ್ ಮತ್ತು ಡಾ.ರಾಜ್ ಕುಟುಂಬದ ಬಗ್ಗೆ ಬರೆದುಕೊಂಡಿದ್ದಾರೆ. ಅದರ ಯಥಾವತ್ತು ಬರಹ ಇಲ್ಲಿದೆ.

    ರಾಘಣ್ಣನ ಮದುವೆಗೆ ವಜ್ರೇಶ್ವರಿ ಮ್ಯಾನೇಜರ್ ಕಂಠೀರವ ಕುಮಾರ್ ಬರಬೇಕು ಎಂದು ತಿಳಿಸಿದ. ಅಣ್ಣನ (Raj Kumar) ಮನೆಯ ಮದುವೆ ಸಡಗರದಲ್ಲಿ ಭಾಗಿಯಾಗುವ ಸೌಭಾಗ್ಯ. ಪರಿಮಳಗೆ ತಯಾರಾಗಲು ಹೇಳೀದೆ. ಆಗ ನನ್ನ ಬಳಿ ಇದ್ದದ್ದು ಬುಲೆಟ್. ಅದನ್ನು ಏರಿ ಪುನೀತ್ ಫಾರ್ಮಗೆ ಹೋದೆವು. ಅಣ್ಣನ ಪ್ರೀತಿಗೆ ಏನು ಹೇಳಬೇಕೋ. ‘ಬಾಯ್ಯ ಬಾ’ ಎಂದು ಕೂಗಿ ಮೈಸವರಿ ಅವರೇ ಕುಡಿಯಲು ಪಾನಿಯ ನೀಡಿದರು. ಬಂದವರಿಗೆಲ್ಲಾ ನನ್ನ ಪರಿಚಯಿಸಿದರು. ಅದರಲ್ಲಿ ನನ್ನ ವಿಶೇಷ ಪುನೀತ್. ‘ಕಂದಾ ಇದು ಯಾರು ಗೊತ್ತಾ? ನಮ್ಮ ರಜನಿಕಾಂತ’ (Rajinikanth) ಎಂದರು. ಬಾಲಕ ಪುನೀತ್ ಆಶ್ವರ್ಯದಿಂದ ನನ್ನ ನೋಡಿದ. ನನಗು ಆತನ ನೋಡಿ ಆನಂದವಾಯಿತು. ಇದನ್ನೂ ಓದಿ:ನಗೋದಕ್ಕೂ ನಿನ್ನ ಪರ್ಮಿಷನ್ ಕೇಳಬೇಕಾ ಎಂದು ರಾಕಿ ವಿರುದ್ಧ ಕಾವ್ಯ ಗರಂ

    ಕೆಲ ದಿನದ ನಂತರ ರಣರಂಗ ಶಿವಣ್ಣನ ಚಿತ್ರದ ಕ್ಲೈಮ್ಯಾಕ್ಸ್ ಸಮಯದಲ್ಲಿ ವೆಂಕಟೇಶ ಎಂಬ ಜ್ಯೂನಿಯರ್ ಆರ್ಟಿಸ್ಟ್ ಲೋ ತಗಳೋ ರಾಜಣ್ಣನ ಜೊತೆ ಫೋಟೋ ಎಂದು ನೀಡಿದ. ಆನಂದ ತಡೆಯಲಾಗಲಿಲ್ಲ. ಕಾರಣ ಆ ಕಾಲದಲ್ಲಿ ರಾಜಣ್ಣನ ಜೊತೆ ಫೋಟೋ ಅಸಾಧ್ಯ. ನೋಡಿದರೆ ಅದು ನನ್ನ ಹುಡುಕಿ ಬಂತು. ವೆಂಕಟೇಶ್ ಹೊಟ್ಟೆಪಾಡಿಗೆ ಸಣ್ಣ ಕ್ಯಾಮೆರಾ ಇಟ್ಟುಕೊಂಡಿದ್ದ. ಒಂದು ಫೋಟೋಗೆ 5 ರೂಪಾಯಿ ಪಡೆಯುತ್ತಿದ್ದ. ಬಡವ ಎಂದು ಅಣ್ಣನೆ ಸಹಕರಿಸಿದ್ದರು.

    ಕೆಲ ವರ್ಷದ ನಂತರ ಪುನೀತ್, ಅಣ್ಣನ ಜೊತೆ ಕಲಾವಿದರ ಸಂಘದ ಕಾರ್ಯಕ್ರಮದಲ್ಲಿ ನರ್ತಿಸಿದ. ಆಗ ಅಮ್ಮ (Parvathamma), ‘ಜಗ್ಗೇಶ್ ಅವನು ಪ್ರೀತಿಸುವ ಹುಡುಗಿ ಬಂದಿದ್ದಾಳೆ’ ಎಂದರು. ಜನರ ಮಧ್ಯೆ ನನ್ನ ಕಣ್ಣಿಗೆ ಅಶ್ವಿನಿ ಕಾಣಲಿಲ್ಲ. ನಂತರ ಮದುವೆ. ಸೂಪರ್  ಸ್ಟಾರ್ ಎಲ್ಲ ಆದರು. ಅದೇನು ವಿಪರೀತ ಇಷ್ಟಪಡುತ್ತಿದ್ದ. ನಮ್ಮ ಸ್ನೇಹ ವರ್ಣಿಸಲಾಗದ ಸಂಕೋಲೆ.

    ಕಡೆದಿನಗಳು ಎಂದು ಭಾವಿಸಲಿಲ್ಲ. ನಿರ್ದೇಶಕ ಸಂತೋಷ, ಪುನೀತ್ ಜೊತೆ ಮಂತ್ರಾಲಯಕ್ಕೆ ಕರೆದುಕೊಂಡು ಹೋದ ಆ ದಿನ ಮನಬಿಚ್ಚಿ ಮಾತಾಡಿ, ನಕ್ಕು ಸಮಯ ಕಳೆದೆವು. ಕಡೆ 3 ದಿನದ ಹಿಂದೆ ಯೋಗಿಯು ಪುನೀತ್ ಮಲ್ಲೇಶ್ವರಕ್ಕೆ ಬಂದ ವಿಷಯ ತಿಳಿಸಿದ. ಕರೆಮಾಡಿದೆ. ಅಣ್ಣ ಮಲ್ಲೇಶ್ವರದಲ್ಲೇ ಇರುವೆ ಎಂದ. ಹಾಗೆ ಎದ್ದು ಕಾರು ಡ್ರೈವ್ ಮಾಡಿಕೊಂಡು ಹೋಡೆ. ಪೂಜೆಗೆ ಕುಳಿತು ತೊಡೆ ನೋವಾಗಿದೆ. ಹಾಗಾಗಿ ಚಿಕಿತ್ಸೆಗೆ ಬಂದೆ ಎಂದ. ಚಿಕಿತ್ಸೆ ಮುಗಿದ ಮೇಲೆ ಸತೀಶ್ ಮತ್ತು ನಾನು ಪುನೀತ್ ಜೊತೆ ಕೆಲ ಸಮಯ ಮಾತಾಡಿ ನಿರ್ಗಮಿಸಿದೆವು.

    ಇದಾದ ಮೂರು ದಿನಕ್ಕೆ ಪುನೀತ್ ಹೋಗಿ ಬಿಟ್ಟ ಅಂದರು. ಹೃದಯ ಒಡೆದು ಚೂರಾಯಿತು. ಜೀವನದ ಆಸಕ್ತಿ, ಬದುಕಿನ ಮೇಲೆ ನಂಬಿಕೆ. ನಾವು ಯಾರು. ಈ ಭೂಮಿಗೆ ಏಕೆ ಬಂದೆವು. ಎಲ್ಲಾ ಇದೆ. ಮುಂದೆ ಇರದು. ಯಾವುದು ಸತ್ಯ, ಯಾವುದು ಮಿತ್ಯ, ನಾನು ಹೇಗೆ ಇರಬೇಕು, ಏನು ಮಾಡಬೇಕು? ಬದುಕು ನಶ್ವರ ಎಂಬ ಅನೇಕ ಪ್ರಶ್ನೆ ನನ್ನ ಕಾಡುತ್ತಿದೆ. ನನ್ನೊಳಗೆ ನಾನು ಬಚ್ಚಿಕೊಂಡು ಸುಮ್ಮನೆ ಇರುವಂತೆ ನಟಿಸಿ ಬದುಕುತ್ತಿರುವೆ. ನನ್ನವರು ಎಂದು ಸಿಕ್ಕಾಗ ಮನಬಿಚ್ಚೆ ಮಾತಾಡುವೆ. ಕೆಲಸ ಇದ್ದಾಗ ಮಾಡುವೆ. ಮಿಕ್ಕಂತೆ ಯಾರಿಗು ಸಿಗದೆ ಏಕಾಂತಕ್ಕೆ ಜಾರುವೆ. ಇದು ಪುನೀತ್ ಸಿಕ್ಕಾಗ, ಇದ್ದಾಗ, ಹೋದ ಮೇಲೆ ನನ್ನ ಹೃದಯದ ಅನಿಸಿಕೆ.

    ಕಡೆಯ ಮಾತು ಪುನೀತ್ ಅವರ ತಂದೆಯ ಮೀರಿ ಬೆಳೆದು ಉಳಿದ ದೇವಮಾನವ.

    Live Tv
    [brid partner=56869869 player=32851 video=960834 autoplay=true]

  • ವೈರಲ್ ಆಯ್ತು ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಫೋಟೋ

    ವೈರಲ್ ಆಯ್ತು ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಫೋಟೋ

    ಪುನೀತ್ ರಾಜ್ ಕುಮಾರ್ ನಿಧನದ ನಂತರ ಆ ಕುಟುಂಬ ಮತ್ತು ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವುದು ಪುನೀತ್ ಪತ್ನಿ ಅಶ್ವಿನಿ ಅವರು. ಅಪ್ಪು ಬದುಕಿದ್ದಾಗಲೇ ಪಿ.ಆರ್.ಕೆ ಪ್ರೊಡಕ್ಷನ್ ಹೌಸ್ ಮತ್ತು ಆಡಿಯೋ ಕಂಪೆನಿಗಳ ವ್ಯವಹಾರವನ್ನು ಅಶ್ವಿನಿ ಅವರೇ ನೋಡಿಕೊಳ್ಳುತ್ತಿದ್ದರು. ಇದೀಗ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಪುನೀತ್ ಅವರ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದಿನವೂ ಹೊಸ ಹೊಸ ನಿರ್ದೇಶಕರನ್ನು ಭೇಟಿ ಮಾಡುತ್ತಲೇ ಇರುತ್ತಾರಂತೆ ಅಶ್ವಿನಿ.

    ಹೊಸ ಸಿನಿಮಾಗಳ ತಯಾರಿ, ಸಿನಿಮಾ ಸಂಬಂಧಿ ಚಟುವಟಿಕೆಗಳಲ್ಲಿ ಭಾಗಿಯಾಗಲು ಅಶ್ವಿನಿ ಅವರು ಬೆಂಗಳೂರಿನ ಗಾಂಧಿನಗರದಲ್ಲಿರುವ ತಮ್ಮ ಆಫೀಸಿಗೆ ನಿತ್ಯವೂ ಬರುತ್ತಾರೆ. ಆ ಆಫೀಸಿನಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರ ಫೋಟೋವನ್ನು ತಮ್ಮ ಪಕ್ಕದಲ್ಲೇ ಇಟ್ಟುಕೊಂಡಿದ್ದಾರೆ. ಹೀಗಾಗಿ ಡಾ.ರಾಜ್ ಕುಟುಂಬದ ಅಭಿಮಾನಿಗಳು ‘ಸೊಸೆ ಆಫ್ ಪಾರ್ವತಮ್ಮ’ ಟ್ಯಾಗ್ ಲೈನ್ ನಲ್ಲಿ ಆ ಫೋಟೋವನ್ನು ವೈರಲ್ ಮಾಡಿದ್ದಾರೆ. ಇದನ್ನೂ ಓದಿ : ಚಾಮುಂಡಿ ದರ್ಶನ ಮುಗಿಸಿ ಮೈಸೂರಿನಲ್ಲಿ ಉಪಾಧ್ಯಕ್ಷನನ್ನು ಭೇಟಿಯಾದ ಶಿವರಾಜ್ ಕುಮಾರ್

    ಡಾ.ರಾಜ್ ಕುಮಾರ್ ಅವರ ಶಕ್ತಿಯಾಗಿ ನಿಂತುಕೊಂಡು ಪೂರ್ಣಿಮಾ ಎಂಟರ್ ಪ್ರೈಸಸ್ ಮೂಲಕ ಸಾಕಷ್ಟು ಸಿನಿಮಾಗಳನ್ನು ಮಾಡಿದರು ಪಾರ್ವತಮ್ಮ ರಾಜ್ ಕುಮಾರ್. ಕನ್ನಡ ಸಿನಿಮಾಗಳಿಗೆ ಒಂದು ಘನತೆ ತಂದುಕೊಟ್ಟರು. ಪುನೀತ್ ರಾಜ್ ಕುಮಾರ್ ಅವರಿಗೂ ಅಶ್ವಿನಿ ಅವರು ಶಕ್ತಿಯಾಗಿಯೇ ನಿಂತುಕೊಂಡು ಪಿ.ಆರ್.ಕೆ ಪ್ರೊಡಕ್ಷನ್ ನಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸಬರನ್ನು ಪರಿಚಯಿಸಿದರು. ಹೀಗಾಗಿ ಪಾರ್ವತಮ್ಮನವರನ್ನು ಅಶ್ವಿನಿ ಅವರಲ್ಲಿ ಕಾಣುತ್ತಿದ್ದಾರೆ ಅಭಿಮಾನಿಗಳು.

    Live Tv

  • ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಸಹೋದರಿ ನಿಧನ

    ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಸಹೋದರಿ ನಿಧನ

    ನ್ನಡದ ಖ್ಯಾತ ನಿರ್ಮಾಪಕಿ, ಡಾ.ರಾಜ್ ಕುಮಾರ್ ಪತ್ನಿ ಪಾರ್ವತಮ್ಮನವರ ಸಹೋದರಿ ಎಸ್.ವಿ. ನಾಗಮ್ಮನವರು ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. 81ರ ವಯಸ್ಸಿನ ನಾಗಮ್ಮನವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಮನೆಯಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

    ಪಾರ್ವತಮ್ಮನವರಿಗೆ ಬೆನ್ನೆಲುಬಾಗಿಯೂ ನಿಂತಿದ್ದ ನಾಗಮ್ಮನವರು ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ತಮ್ಮ ಮಗನ ಮನೆಯಲ್ಲಿದ್ದರು. ಸಹೋದರಿಯನ್ನು ಕಳೆದುಕೊಂಡ ನಂತರ ಕೊಂಚ ಅವರು ಬಳಲಿದ್ದರು. ಸಹೋದರ ಎಸ್.ಎ. ಚಿನ್ನೇಗೌಡ, ಎಸ್.ಎ. ಗೋವಿಂದರಾಜು, ಎಸ್.ಎ. ಶ್ರೀನಿವಾಸ್ ಹಾಗೂ ತಂಗಿ ಜಯಮ್ಮ ಮತ್ತು ಮಗ ಮಹೇಶ್ ಮೊಮ್ಮಕ್ಕಳನ್ನು ಅವರು ಅಗಲಿದ್ದು, ಸಂಜೆ ಇಳಂದೂರಿನ ಕೆಸ್ತೂರಿನಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಯಿತು.

  • ಅಪ್ಪು ಡೋಂಟ್‍ವರಿ, ನೀವು ಓದಿಲ್ಲ ಆದ್ರೂ ನೀವೊಬ್ಬರು ಐಕಾನ್: ಬೊಮ್ಮಾಯಿ

    ಅಪ್ಪು ಡೋಂಟ್‍ವರಿ, ನೀವು ಓದಿಲ್ಲ ಆದ್ರೂ ನೀವೊಬ್ಬರು ಐಕಾನ್: ಬೊಮ್ಮಾಯಿ

    ಬೆಂಗಳೂರು: ಅಪ್ಪು ನೀವು ಫಾರ್ಮಲ್ ಎಜುಕೇಶನ್ ಬಗ್ಗೆ ಕಲಿಯಲಿಲ್ಲ ಅಂದರೂ ಪರವಾಗಿಲ್ಲ. ಫಾರ್ಮಲ್ ಎಜುಕೇಶನ್ ಮುಖ್ಯವಲ್ಲ. ಜ್ಞಾನ ಬಹಳ ಮುಖ್ಯ. ಜ್ಞಾನದಿಂದಲೇ ವಿದ್ಯೆ. ನೀವೊಬ್ಬರು ಐಕಾನ್ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪುನೀತ್ ರಾಜ್ ಕುಮಾರ್ ಅವರನ್ನು ಹೊಗಳಿದ್ದಾರೆ.

    ನಗರದ ಖಾಸಗಿ ಹೋಟೆಲ್‍ನಲ್ಲಿ ಡಾ ರಾಜ್ ಕುಮಾರ್ ಅಕಾಡೆಮಿಯಿಂದ ಡಾ. ರಾಜ್‍ಕುಮಾರ್ ಲರ್ನಿಂಗ್ ಆಪ್‍ನನ್ನು ಲೋಕಾರ್ಪಣೆ ಮಾಡಿ ಬಸವರಾಜ್ ಬೊಮ್ಮಾಯಿ ಮಾತನಾಡಿದರು.

    ಪುನೀತ್ ರಾಜ್‌ಕುಮಾರ್‌ರವರು ಈ ಆ್ಯಪ್‍ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ನಿನ್ನ ರೆಕ್ಕೆ ನಿಮ್ಮನ್ನು ಎತ್ತರಕ್ಕೆ ಕರೆದೊಯ್ಯುತ್ತದೆ. ಮಾನಸ ಸರೋವರದಲ್ಲಿ ನಿಮ್ಮ ಪರಮಹಂಸಕ್ಕೆ, ನಿಮ್ಮ ಆ್ಯಪ್‍ಗೆ ನಮ್ಮ ಅಪ್ಪಾಜಿ, ನಮ್ಮ ಅಮ್ಮ ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದರು.

    ಡಾ. ರಾಜ್ ಕುಮಾರ್ ಎಂದರೆ ಒಬ್ಬ ಸಾಧಕ. ಸ್ವಾಮಿ ವಿವೇಕನಂದರವರು ಒಬ್ಬ ಸಾಧಕನಿಗೆ ಸಾವು ಅಂತ್ಯವಲ್ಲ ಎಂದು ಹೇಳಿದ್ದಾರೆ. ಒಬ್ಬ ಸಾಧಕ ಸಾವಿನ ನಂತರವೂ ಬದುಕಬಲ್ಲ. ನಾವು ಎಂತಹ ಶ್ರೀಮಂತ ಬದುಕನ್ನು ಬದುಕಬೇಕು ಮತ್ತು ಎಂತಹ ಮೌಲಿಕ ಬದುಕನ್ನು ಬದುಕಬೇಕು ಎಂದರೆ ಸಾವಿನ ನಂತರವೂ ನಮ್ಮ ಬದುಕಿರಬೇಕು. ಜನ ಅದನ್ನು ನೆನಪಿಸಿಕೊಳ್ಳಬೇಕು. ಅಂತವರನ್ನು ಸಾಧಕರು ಎಂದು ಕರೆಯುತ್ತಾರೆ. ಅಂತಹ ಸಾಧನೆ ಮಾಡಿರುವಂತಹ ಸ್ಟಾರ್ ಅಂದರೆ ಆಕಾಶದಲ್ಲಿರುವಂತಹ ನಕ್ಷತ್ರ ಡಾ.ರಾಜ್‍ಕುಮಾರ್ ಎಂದು ಹೊಗಳಿದ್ದಾರೆ. ಇದನ್ನೂ ಓದಿ:ಸೈಫ್ ಅಲಿ ಖಾನ್ ಹುಟ್ಟುಹಬ್ಬದ ದಿನ ಮಗನ ಫೋಟೋ ವೈರಲ್

    ಆಕಾಶದಲ್ಲಿ ಹಲವಾರು ನಕ್ಷತ್ರಗಳಿರಬಹುದು. ಆದರೆ ಒಂದೇ ಒಂದು ನಕ್ಷತ್ರ ಹೆಚ್ಚಾಗಿ ಮಿಂಚುತ್ತಿರುತ್ತದೆ. ಮಿಲಿಯನ್ ಗಟ್ಟಲೇ ಮಿಂಚುತ್ತಿರುವ ತಾರೆಗಳ ನಡುವೆ ಹೆಚ್ಚು ಮಿನುಗುವ ತಾರೆಯೇ ಡಾ. ರಾಜ್ ಕುಮಾರ್. ಅವರ ನುಡಿ, ಮೌಲ್ಯ, ಸರಳತನ ನಾವೆಲ್ಲರೂ ಕಲಿಯಬೇಕು. ಅದರಲ್ಲಿಯೂ ಅಧಿಕಾರದಲ್ಲಿರುವವರು, ಬಹಳಷ್ಟು ಜನಪ್ರಿಯರಾಗಿರುವವರು ಯಾವ ರೀತಿ ಸರಳವಾಗಿರಬೇಕೆಂದು ಹಾಗೂ ಮಾನವೀಯತೆಯನ್ನು ಕಲಿಯಬೇಕು. ಡಾ ರಾಜ್ ಕುಮಾರ್‍ರವರು ಎಷ್ಟು ಎತ್ತರಕ್ಕೆ ಸ್ಟಾರ್ ಆಗಿದ್ದಾರೋ, ಅವರಷ್ಟು ವಿಶಾಲಹೃದಯತೆ ಯಾರಿಗೂ ಇರಲು ಸಾಧ್ಯವಿಲ್ಲ ಅಂತ ಭಾವಿಸುತ್ತೇನೆ ಎಂದಿದ್ದಾರೆ.

    ಒಂದು ಚಿಕ್ಕ ಮಗುವಿನಲ್ಲಿರುವ ಮುಗ್ದತೆ ರಾಜ್‌ಕುಮಾರ್‌ರವರಲ್ಲಿ ಇತ್ತು. ಒಂದು ಮಗುವಿನಲ್ಲಿ ತಿಳಿದುಕೊಳ್ಳುವಂತಹ ಹಂಬಲವಿರುತ್ತದೆ. ಆ ಹಂಬಲಕ್ಕೆ ನಾವು ಜ್ಞಾನ, ಅರ್ಥವನ್ನು ನೀಡಬೇಕು. ರಾಜ್‌ಕುಮಾರ್‌ರವರಿಗೆ ಪ್ರತಿಯೊಂದನ್ನು ಕಲಿಯುವ ಹಂಬಲ ಇತ್ತು. ಆದರೆ ಅವರಲ್ಲಿ ಮುಗ್ಧತೆ ಎಂದು ಕೂಡ ಕಡಿಮೆಯಾಗಲಿಲ್ಲ. ಅವರೊಬ್ಬರು ಸ್ಫೂರ್ತಿದಾಯಕ ಮನುಷ್ಯ. ತದ್ವಿರುದ್ಧವಾದಂತಹ ಗುಣಗಳನ್ನು ಕಾಪಾಡಿಕೊಂಡು ಯಶಸ್ವಿಯಾಗುವಂತಹದು ಬಹಳ ಕಷ್ಟ. ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಬಹಳ ಕಷ್ಟ. ಯಾವ ವ್ಯಕ್ತಿ ಎಲ್ಲವನ್ನು ಕಲಿಯುವ ಸಾಮರ್ಥ್ಯ ಹಾಗೂ ಮುಗ್ಧತೆಯನ್ನು ಹೊಂದಿರುವುದು ಬಹಳ ಕಷ್ಟ. ಆದರೆ ಅದನ್ನು ಅವರು ಸಾಧಿಸಿದ್ದಾರೆ. ಈ ಮಾತಗಳನ್ನು ನಾನು ಎಲ್ಲ ಸಿನಿಮಾ ತಾರೆಯರಿಗೆ, ಎಲ್ಲಾ ನಾಯಕರಿಗೆ ಹೇಳಲು ಸಾಧ್ಯವಿಲ್ಲ. ಈ ಗುಣ ಆತ್ಮ ಶುದ್ಧಿ ಇದ್ದಾಗ ಮಾತ್ರ ಬರುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಮದುವೆಯ ಫೋಟೋ ಹಂಚಿಕೊಂಡ ರಿಯಾ ಕಪೂರ್, ಕರಣ್ ಬೂಲಾನಿ

    ರಾಘಣ್ಣ ನನ್ನ ಆತ್ಮೀಯರು, ಪಾರ್ವತಮ್ಮನವರಿಗೂ ನನ್ನ ಮೇಲೆ ಬಹಳ ಪ್ರೀತಿ, ಅವರು ಒಂದು ದಿನ ನನಗೆ ಗ್ಯಾಸ್ ಕನೆಕ್ಷನ್ ಕಡಿಮೆಯಾಗಿದೆ ಏನಾದರೂ ಮಾಡಿಕೊಡಿಸಲು ಆಗುತ್ತಾ ಎಂದು ನನ್ನ ಬಳಿ ಕೇಳಿದ್ದರು. ಆಗ ಎಂಪಿ ಎಲೆಕ್ಷನ್ ನಡೆಯುತ್ತಿತ್ತು. ಆಗ ನಮ್ಮ ತಂದೆಯ ಕೋಟಾದಲ್ಲಿ ಒಂದು ಗ್ಯಾಸ್ ಕನೆಕ್ಷನ್ ಕೊಡಿಸಿದ್ದೆ. ಆ ಗ್ಯಾಸ್ ಕನೆಕ್ಷನ್ ಕೊಡಿಸಿದ ಎರಡು ದಿನಕ್ಕೆ ಪಾರ್ವತಮ್ಮನವರು ನೀನು ಕೊಡಿಸಿದ ಗ್ಯಾಸ್‍ನಲ್ಲಿ ಅಡುಗೆ ಮಾಡಿದ್ದೇನೆ ನಮ್ಮ ಮನೆಗೆ ಊಟಕ್ಕೆ ಬರಬೇಕು ಎಂದಿದ್ದರು. ಜೊತೆಗೆ ಹುಬ್ಬಳ್ಳಿಯಲ್ಲಿರುವ ಆಫೀಸ್ ನೋಡಿಕೊಳ್ಳಲು ರಾಘವೇಂದ್ರ ರಾಜ್‍ಕುಮಾರ್ ಹುಬ್ಬಳ್ಳಿಗೆ ಬರುತ್ತಾರೆ. ನೀವು ಅವರನ್ನು ನೋಡಿಕೊಳ್ಳಬೇಕು ಎಂದಿದ್ದರು. ಹಾಗೆಯೇ ಅಪ್ಪು ಹಾಗೂ ಶಿವಣ್ಣ ಕೂಡ ಬಹಳ ಆತ್ಮೀಯರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ನಾಳೆ ಬಹುದೊಡ್ಡ ಘೋಷಣೆ ಮಾಡಲಿದ್ದೇನೆ: ಅರವಿಂದ್ ಕೇಜ್ರಿವಾಲ್