Tag: Parvatamma Rajkumara

  • `ಅಪ್ಪು’ ಸಿನಿಮಾಗೆ 20 ವರ್ಷ: ಪುನೀತ್ ನೆನಪಿನಲ್ಲಿ ಕ್ರೇಜಿ ಕ್ವೀನ್

    `ಅಪ್ಪು’ ಸಿನಿಮಾಗೆ 20 ವರ್ಷ: ಪುನೀತ್ ನೆನಪಿನಲ್ಲಿ ಕ್ರೇಜಿ ಕ್ವೀನ್

    ಪುನೀತ್ ರಾಜ್‌ಕುಮಾರ್ ಮತ್ತು ರಕ್ಷಿತಾ ನಟನೆಯ `ಅಪ್ಪು’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸೌಂಡ್ ಮಾಡಿತ್ತು. ಪುನೀತ್ ನಟಿಸಿದ ಮೊದಲ ಚಿತ್ರದಲ್ಲೇ ಸೈ ಎನಿಸಿಕೊಂಡಿದ್ರು. ಇದೀಗ `ಅಪ್ಪು’ ಸಿನಿಮಾ ತೆರೆಕಂಡು ಇಂದಿಗೆ 20 ವರ್ಷಗಳಾಗಿದೆ. ಇದೇ ವೇಳೆ ನಟಿ ರಕ್ಷಿತಾ ಪುನೀತ್ ನಪಿನಲ್ಲಿ `ಅಪ್ಪು’ ಚಿತ್ರದ ಕುರಿತು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ಪವರ್ ಸ್ಟಾರ್ ಪುನೀತ್ `ಅಪ್ಪು’ ಚಿತ್ರದ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ವಿಭಿನ್ನ ಪ್ರೇಮಕಥೆಯೊಂದಿಗೆ ಸಿನಿಪ್ರಿಯರಿಗೆ ಪುನೀತ್ ಮತ್ತು ರಕ್ಷಿತಾ ಮೋಡಿ ಮಾಡಿದ್ರು. ಪುರಿ ಜಗನ್ನಾಥ್ ನಿರ್ದೇಶನದ `ಅಪ್ಪು’ ಚಿತ್ರ ತೆರೆಕಂಡು ಬರೋಬ್ಬರಿ ಇಂದಿಗೆ 20 ವರ್ಷಗಳು ಕಳೆದಿದೆ. ಇದೇ ವೇಳೆ ‌ʻಅಪ್ಪುʼ ಚಿತ್ರದ ನೆನಪಿನ ಬುತ್ತಿಯನ್ನ ಬರವಣಿಗೆಯ ಮೂಲಕ ನಟಿ ರಕ್ಷಿತಾ  ಎಮೋಷನಲ್ ಆಗಿ ಪೋಸ್ಟ್‌ವೊಂದನ್ನು ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Rakshitha ???? (@rakshitha__official)

    `ಅಪ್ಪು’ ಸಿನಿಮಾ ಎಂತಹ ಸುಂದರ ಮತ್ತು ಅದ್ಭುತ ಸಿನಿಮಾ, ಈ ಮೂಲಕ ಎಂತಹ ಸ್ಟ್ರಾಂಗ್ ಮತ್ತು ಮಾದರಿ ವ್ಯಕ್ತಿಯನ್ನ  ಪಾರ್ವತಮ್ಮ ರಾಜ್‌ಕುಮಾರ್ ಭೇಟಿಯಾದೆ, ಅವರಿಲ್ಲದೇ ನಾನಿಲ್ಲ. ಇಂದು ಅಪ್ಪು ಅವರನ್ನು ಮಿಸ್ ಮಾಡಿಕೊಳ್ಳತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ಪುನೀತ್ ಅವರ ನಗು. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್: ಯುವರಾಜ್ ಕುಮಾರ್ ಹೊಸ ಸಿನಿಮಾ ಘೋಷಣೆ?

    ಇನ್ನೂ ಈ ವೇಳೆ ನಿರ್ದೇಶಕ ಪುರಿ ಜಗನ್ನಾಥ್‌ ಮತ್ತು ಅಸೋಸಿಯೇಟ್‌ ಆಗಿದ್ದ ದಿನೇಶ್ ಬಾಬು ಅವರಿಗೆ ನನ್ನ ಕಲಿಕೆಗೆ ನೆರವಾಗಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಇನ್ನು ಈ ಚಿತ್ರ ಅರ್ಧ ಜೀವನದ ಅನುಭವ ತಿಳಿಸಿಕೊಟ್ಟಿದೆ. ನನ್ನ ಅಭಿಮಾನಿಗಳಿಗೂ, ಸ್ನೇಹಿತರಿಗೂ ಧನ್ಯವಾದಗಳು ಎಂದು ಎಮೋಷನಲ್ ಆಗಿ `ಅಪ್ಪು’ ಚಿತ್ರದ ಕುರಿತು ಪುನೀತ್ ಅವರ ನೆನಪಿನಲ್ಲಿ ನಟಿ ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  • ಪಾರ್ವತಮ್ಮ ರಾಜ್ ಕುಮಾರ್ ಮತ್ತು ಬೆಳ್ಳಿ ಬಟ್ಟಲು ಸ್ಟೋರಿ ಹೇಳಿದ ರಂಗಾಯಣ ರಘು

    ಪಾರ್ವತಮ್ಮ ರಾಜ್ ಕುಮಾರ್ ಮತ್ತು ಬೆಳ್ಳಿ ಬಟ್ಟಲು ಸ್ಟೋರಿ ಹೇಳಿದ ರಂಗಾಯಣ ರಘು

    ಡಾಲಿ ಧನಂಜಯ್ ನಟನೆಯ ‘ಬಡವ ರಾಸ್ಕಲ್’ ಸಿನಿಮಾ ಐವತ್ತನೇ ದಿನ ಪೂರೈಸಿದೆ. ಈ ಖುಷಿಯನ್ನು ಹಂಚಿಕೊಳ್ಳಲು ಚಿತ್ರತಂಡ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ನಟ ರಂಗಾಯಘ ರಘು, ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ನೀಡಿದ ಬೆಳ್ಳಿ ಬಟ್ಟಲು ಘಟನೆಯನ್ನು ಹೇಳಿ ಭಾವುಕರಾದರು.
    “ಈ ಹಿಂದೆ ಪಾರ್ವತಮ್ಮ ರಾಜಕುಮಾರ್ ಅವರು ಈ ರೀತಿಯ ಸಮಾರಂಭ ಆಯೋಜಿಸಿ, ಎಲ್ಲರಿಗೂ ಬೆಳ್ಳಿಯ ಲೋಟ ನೀಡುತ್ತಿದ್ದರು. ನನ್ನ ಬಳಿ ಅವರು ನೀಡಿರುವ ಮೂರು ಬೆಳ್ಳಿಯ ಲೋಟಗಳಿವೆ. ಇತ್ತೀಚಿಗೆ ಇಂತಹ ಸಮಾರಂಭ ಕಡಿಮೆಯಾಗಿತ್ತು‌.‌ ಧನಂಜಯ್ ಮತ್ತೆ ಆರಂಭ ಮಾಡಿದ್ದಾರೆ ಒಳ್ಳೆಯದಾಗಲಿ” ಎಂದರು ರಂಗಾಯಣ ರಘು. ಇದನ್ನೂ ಓದಿ : ರಾಮ್ ಪೋತಿನೇನಿ ಸಿನಿಮಾಗೆ ಅಖಂಡ ಡೈರೆಕ್ಟರ್ ನಿರ್ದೇಶನ

    ಕೇವಲ ನಟರಾಗಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದ ಡಾಲಿ ಧನಂಜಯ, “ಬಡವ ರಾಸ್ಕಲ್” ಚಿತ್ರದಿಂದ ನಿರ್ಮಾಪಕರಾದರು. ಈ ಸಂಭ್ರಮಕ್ಕಾಗಿ ಅವರು ಈ ಸಿನಿಮಾದಲ್ಲಿ ದುಡಿದ ಕಾರ್ಮಿಕರು, ತಂತ್ರಜ್ಞರು, ಕಲಾವಿದರು, ಪ್ರದರ್ಶಕರು, ಸ್ನೇಹಿತರು ಹೀಗೆ ಸುಮಾರು 220 ಕ್ಕೂ ಅಧಿಕ ಜನರಿಗೆ ಸ್ಮರಣಿಕೆ ಹಾಗೂ ಬೆಳ್ಳಿನಾಣ್ಯ ನೀಡಿ ಸತ್ಕರಿಸಿದರು.  ಇದನ್ನೂ ಓದಿ : ಹಿರಿಯ ನಟ ರಾಜೇಶ್ ಅವರ ಅಪರೂಪದ ಫೋಟೋಗಳು


    ಈ ಸಂದರ್ಭದಲ್ಲಿ ಮಾತನಾಡಿದ ಧನಂಜಯ್, “ನಾನು ಈ ಸಿನಿಮಾವನ್ನು ಹಳೆಯ ನಿರ್ಮಾಪಕರಿಂದ ಪಡೆದುಕೊಳ್ಳಲು ಸ್ವಲ್ಪ ಹೆಚ್ಚಿನ ಹಣ ಬೇಕಿತ್ತು.‌ ಸುಮ್ಮನೆ ಕೆಲವು ಸ್ನೇಹಿತರಿಗೆ ಫೋನ್ ಮಾಡಿದೆ.‌ ಎಲ್ಲರೂ ಏನು ಅಪೇಕ್ಷೆ ಇಲ್ಲದೆ ಸಹಾಯ ಮಾಡಿದ್ದಾರೆ. ಇನ್ನೂ ನಾನು ಹಿಂದಿರುಗಿಸಿಲ್ಲ.‌ ಸದ್ಯದಲ್ಲೇ ಕೊಡುತ್ತೇನೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯಿಂದ ಹೊಸ ‌ಪ್ರತಿಭೆಗಳಿಗೆ ಅವಕಾಶ ಕೊಡುವ ಯೋಚನೆಯಿದೆ” ಎಂದರು. ಇದನ್ನೂ ಓದಿ : ರಾಜೇಶ್ ನಟನೆಯ ಸೂಪರ್ ಹಿಟ್ ಹಾಡುಗಳಿವು


    ಈ ಸಮಾರಂಭಕ್ಕೆ ವಸಿಷ್ಠ ಸಿಂಹ ಅತಿಥಿಯಾಗಿ ಆಗಮಿಸಿದ್ದರೆ, ನಿರ್ದೇಶಕ ಶಂಕರ್ ಗುರು, ನಾಯಕಿ ಅಮೃತ ಅಯ್ಯಂಗಾರ್, ನಟ ನಾಗಭೂಷಣ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮುಂತಾದ ಚಿತ್ರತಂಡದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
    ನಿರ್ಮಾಪಕರಾದ ಕರಿಸುಬ್ಬು, ಸುಧೀಂದ್ರ, ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಮುಂತಾದ ಗಣ್ಯರು ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಅಂದಹಾಗೆ ಈ ಚಿತ್ರ‌ ಸದ್ಯದಲ್ಲೇ ತೆಲುಗಿನಲ್ಲೂ ತೆರೆ ಕಾಣಲಿದೆ ಎನ್ನುವುದು ವಿಶೇಷ.

  • ಪಾರ್ವತಮ್ಮರನ್ನು ಕಳೆದುಕೊಂಡು ಕಣ್ಣೀರಿಟ್ಟ ಬಾಲ್ಯದ ಗೆಳತಿ ಜಾನಕಮ್ಮ

    ಪಾರ್ವತಮ್ಮರನ್ನು ಕಳೆದುಕೊಂಡು ಕಣ್ಣೀರಿಟ್ಟ ಬಾಲ್ಯದ ಗೆಳತಿ ಜಾನಕಮ್ಮ

    ಮೈಸೂರು: ಪಾರ್ವತಮ್ಮ ರಾಜ್‍ಕುಮಾರ್ ಅವರ ಬಾಲ್ಯದ ಗೆಳತಿ ಜಾನಕಮ್ಮ, ಪಾರ್ವತಮ್ಮ ಅವರ ಸಾವಿನ ಸುದ್ದಿ ಕೇಳಿ ಕಣ್ಣೀರಿಟ್ಟಿದ್ದಾರೆ.

    ಪಾರ್ವತಮ್ಮ ಅವರಿಗೆ ಇದ್ದಿದ್ದು ಒಬ್ಬರೇ ಬಾಲ್ಯದ ಗೆಳತಿ. ಆ ಬಾಲ್ಯದ ಗೆಳತಿ ಹೆಸರು ಜಾನಕಮ್ಮ. ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮ ಪಾರ್ವತಮ್ಮ ಅವರ ಹುಟ್ಟೂರು. ಅಲ್ಲಿ ಅವರು ಪ್ರಾಥಮಿಕ ಶಾಲೆ ಕಲಿಯುವಾಗ ಜೊತೆಗಾತಿ ಆಗಿದ್ದವರು ಜಾನಕಮ್ಮ. ಇವತ್ತು ಪಾರ್ವತಮ್ಮ ಅವರ ಸಾವಿನ ಸುದ್ದಿ ಕೇಳಿ ಕಣ್ಣೀರಿಟ್ಟಿದ್ದಾರೆ. ಗೆಳತಿಯನ್ನು ಕಳೆದಕೊಂಡ ದುಃಖ ಅವರಲ್ಲಿ ತುಂಬಿದೆ.

    ಪಾರ್ವತಮ್ಮ ಅವರೊಂದಿಗಿನ ಬಾಲ್ಯದ ಒಡನಾಟದ ಬಗ್ಗೆ ಮಾತನಾಡಿದ ಜಾನಕಮ್ಮ, ನನಗೂ, ಅವರಿಗೂ(ಪಾರ್ವತಮ್ಮ) 5ನೇ ಕ್ಲಾಸ್‍ಗೆ ಪರಿಚಯವಾಯಿತು. ಅಂದಿನಿಂದ 8ನೇ ತರಗತಿವರೆಗೂ ನಾವು ಜೊತೆಯಲ್ಲಿಯೇ ಓದಿದ್ದು. 8ನೇ ಕ್ಲಾಸ್ ನಂತರ ನನ್ನನ್ನು ಶಾಲೆ ಬಿಡಿಸಿದ್ರು. ಅವರು ಹೈಸ್ಕೂಲ್ ಹೋಗಿ ತಮ್ಮ ಶಿಕ್ಷಣವನ್ನು ಮುಂದುವರೆಸಿದರು. ಮದುವೆಯಾಗುವವರೆಗೂ ಪ್ರತಿದಿನ ನಮ್ಮ ಮನೆಗೆ ಬರ್ತಿದ್ರು. ಅವರ ಮದುವೆಗೆ ಹೋಗೋಕೆ ಅಗ್ಲಿಲ್ಲ. ರಾಜ್‍ಕುಮಾರ ಅವರನ್ನು ವಿವಾಹವಾದ ನಂತರವೂ ಕೆಲವು ಬಾರಿ ನಮ್ಮ ಮನೆಗೆ ಬಂದಿದ್ದರು. ಒಮ್ಮೆ ರಾಜ್‍ಕುಮಾರ್ ಅವರು ಬಸ್ ಸ್ಟಾಪ್‍ನಲ್ಲಿ ಕುಳಿತು ನಿನ್ನ ಸ್ನೇಹಿತೆಯನ್ನು ಮಾತನಾಡಿಸಿಕೊಂಡು ಬಾ ಅಂತ ಪಾರ್ವತಮ್ಮರನ್ನ ನಮ್ಮ ಮನೆಗೆ ಕಳಿಸಿದ್ರು. ಅಷ್ಟು ಜೊತೆಯಲ್ಲಿದ್ದವರು ಈಗ ಇಲ್ಲ. ತುಂಬಾ ಬೇಜಾರಾಗುತ್ತದೆ ಎಂದು ಗದ್ಗದಿತರಾದ್ರು.

    ಪಾರ್ವತಮ್ಮ ರಾಜಕುಮಾರ್ ಹುಟ್ಟಿದ್ದು ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮದಲ್ಲಿ. 1953 ಡಿಸೆಂಬರ್ 6 ರಂದು ಅಪ್ಪಾಜಿಗೌಡರ ಎರಡನೇ ಮಗಳಾಗಿ ಜನ್ಮ ತಾಳುತ್ತಾರೆ. ಮದುವೆ ಆಗುವವರೆಗೂ ಅವರು ಸಾಲಿಗ್ರಾಮದಲ್ಲೆ ಇರುತ್ತಾರೆ. ಇವತ್ತಿಗೂ ಸಾಲಿಗ್ರಾಮದಲ್ಲಿ ಅವರು ಹುಟ್ಟಿ ಬೆಳೆದ ಮನೆ ಇದೆ. ಇಡೀ ಗ್ರಾಮಕ್ಕೆ ಆ ಮನೆಯೂ ಒಂದು ರೀತಿ ದೊಡ್ಮನೆ.