Tag: parvatamma rajkumar

  • ಅಮ್ಮನನ್ನು ನೆನೆದು ಭಾವುಕರಾದ್ರು ಪುನೀತ್ ರಾಜ್ ಕುಮಾರ್

    ಅಮ್ಮನನ್ನು ನೆನೆದು ಭಾವುಕರಾದ್ರು ಪುನೀತ್ ರಾಜ್ ಕುಮಾರ್

    ಬೆಂಗಳೂರು: ಇಂದು ತಮ್ಮ 43ನೇ ವರ್ಷದ ಹುಟ್ಟುಹಬ್ಬದ ಸಂಭ್ರದಲ್ಲಿರೋ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಮ್ಮನನ್ನು ನೆನೆದು ಭಾವುಕರಾಗಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಮ್ಮ ಪಾರ್ವತಮ್ಮ ಅವರನನ್ನು ನೆನೆದು ಬೇಸರ ವ್ಯಕ್ತಪಡಿಸಿದ್ರು. ಅಭಿಮಾನಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ತಿರೋದಕ್ಕೆ ಖುಷಿಯಾಗ್ತಿದೆ. ಆದ್ರೆ ಈ ಬಾರಿ ನನ್ನ ಹುಟ್ಟುಹಬ್ಬ ಆಚರಣೆಯಲ್ಲಿ ಅಮ್ಮ ಇಲ್ಲ ಅನ್ನೋದೇ ಬೇಜಾರಿನ ಸಂಗಂತಿಯಾಗಿದೆ ಅಂದ್ರು. ಇದನ್ನೂ ಓದಿ: ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ಹ್ಯಾಟ್ರಿಕ್ ಹೀರೋ ವಿಶ್- ಅಪ್ಪು ನಂಗೆ ಮಗ ಇದ್ದಂಗೆ ಅಂದ್ರು ಶಿವಣ್ಣ

    ಈ ಬಾರಿ ನನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಅದು ಅವರ ಪ್ರೀತಿ, ವಿಶ್ವಾಸ ಹಾಗೂ ಅಭಿಮಾನ. ಆದ್ರೆ ಈ ಬಾರಿ ನಾನು ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ಈ ಎರಡು ದಿನ ನಾನು ಅಭಿಮಾನಿಗಳಿಗೋಸ್ಕರ ಅಂತಾನೇ ಇಟ್ಟಿದ್ದೇನೆ. ಈ ಬಾರಿ ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ಬಾರಿ ಅವರು ನಮ್ಮ ಜೊತೆ ಇಲ್ಲ. ಜೀವನದಲ್ಲಿ ಏನೇ ಸಾಧಿಸಿದ್ರೂ, ಅದಕ್ಕೆ ಅವರೇ ಕಾರಣ. ಹೀಗಾಗಿ ತುಂಬಾ ವಿಚಾರಗಳಲ್ಲಿ ಅಪ್ಪ-ಅಮ್ಮನ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅಪ್ಪ-ಅಮ್ಮ ನಮ್ಮ ಜೊತೆ ಇಲ್ಲ ಆದ್ರೆ ಅಭಿಮಾನಿಗಳು ಬೇರೆ ಬೇರೆ ಊರುಗಳಿಂದ ಬರುತ್ತಿದ್ದಾರೆ. ಹೀಗಾಗಿ ಅವರನ್ನು ನಿರಾಸೆ ಮಾಡಕ್ಕಾಗಲ್ಲ ಅಂತ ಹೇಳಿದ್ರು.

    ರಾಜ್ ಕುಮಾರ್ ಅವರನ್ನು ಯಾರಿಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅವರಿಗೆ ಅವರೇ ಸಾಟಿ. ಅವರ ಮಗನಾಗಿರುವುದು ನನ್ನ ಪುಣ್ಯ. ಆ ಪ್ರೀತಿ, ವಿಶ್ವಾಸ, ಅಭಿಮಾನ ನಮ್ಮ ಕುಟುಂಬದಲ್ಲಿ ಎಲ್ಲರೂ ನೋಡುತ್ತಿದ್ದಾರೆ. ಅದಕ್ಕೆ ನಾವು ಅವರಿಗೆ ಯಾವತ್ತೂ ಚಿರಋಣಿ ಅಂದ್ರು.

    ಅಭಿಮಾನಿಗಳು ರಾಜರತ್ಸೋತ್ಸವ ಹೆಸರಲ್ಲಿ ಅದ್ಧೂರಿಯಾಗಿಯೇ ನನ್ನ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ನಟಸಾರ್ವಭೌಮ ಅಂತ ಸಿನಿಮಾಗೆ ಹೆಸರಿಟ್ಟಿರೋದಕ್ಕೆ ಭಯ ಆಗ್ತಿದೆ. ಯಾಕಂದ್ರೆ ಈ ಹಿಂದೆ ರಾಜಕುಮಾರ ಅಂತ ಸಿನಿಮಾಗೆ ಹೆಸರಿಟ್ಟಾಗಲೂ ಭಯವಾಗಿತ್ತು ಅಂತ ಹೇಳಿದ್ರು. ಇದನ್ನೂ ಓದಿ: ದೊಡ್ಮನೆ ರಾಜಕುಮಾರನಿಗೆ ಹುಟ್ಟು ಹಬ್ಬದ ಸಂಭ್ರಮ- ನಟಸಾರ್ವಭೌಮ ತಂಡದಿಂದ ಫಸ್ಟ್ ಟೀಸರ್ ಗಿಫ್ಟ್

    ಇದೇ ವೇಳೆ ತಮ್ಮ ಹೇರ್ ಸ್ಟೈಲ್ ಬಗ್ಗೆ ಮಾತನಾಡಿದ ಅವರು, ಹೇರ್ ಸ್ಟೈಲ್ ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿರೋದಕ್ಕೆ ಖುಷಿಯಿದೆ. ಜುಲೈಗೆ ಸಂತೋಷ್ ಆನಂದ್ ರಾಮ್ ನಿರ್ದೇಶನದ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗಲಿದೆ ಅಂತ ತಿಳಿಸಿದ್ರು.

  • ಮೈಸೂರಿನ ಅನಾಥಾಶ್ರಮದಲ್ಲಿ ಪಾರ್ವತಮ್ಮ ರಾಜ್‍ಕುಮಾರ್ ಹುಟ್ಟುಹಬ್ಬ- ಮಕ್ಕಳಿಗೆ ಸಿಹಿ, ಬಟ್ಟೆ ಹಂಚಿದ ಪುನೀತ್ ದಂಪತಿ

    ಮೈಸೂರಿನ ಅನಾಥಾಶ್ರಮದಲ್ಲಿ ಪಾರ್ವತಮ್ಮ ರಾಜ್‍ಕುಮಾರ್ ಹುಟ್ಟುಹಬ್ಬ- ಮಕ್ಕಳಿಗೆ ಸಿಹಿ, ಬಟ್ಟೆ ಹಂಚಿದ ಪುನೀತ್ ದಂಪತಿ

    ಮೈಸೂರು: ದಿವಂಗತ ಪಾರ್ವತಮ್ಮ ರಾಜ್‍ಕುಮಾರ್‍ರವರ 78 ನೇ ಜನ್ಮದಿನದ ಪ್ರಯುಕ್ತವಾಗಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಗರದ ಶಕ್ತಿಧಾಮ ಅನಾಥಾಶ್ರಮಕ್ಕೆ ಭೇಟಿ ನೀಡಿದ್ದಾರೆ.

    ಡಿಸೆಂಬರ್ 6 ಬುಧವಾರ ಪಾರ್ವತಮ್ಮ ರಾಜ್‍ಕುಮಾರ್ ಹುಟ್ಟುಹಬ್ಬ. ಹೀಗಾಗಿ ಗುರುವಾರ ತಾಯಿ ಹುಟ್ಟುಹಬ್ಬಕ್ಕಾಗಿ ಪುನೀತ್ ಮತ್ತು ಪತ್ನಿ ಅಶ್ವಿನಿ ನಗರದ ಶಕ್ತಿಧಾಮಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಪಾರ್ವತಮ್ಮ ರಾಜ್‍ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಕೆ ಮಾಡಿದ್ದು, ನಂತರ ಮಕ್ಕಳಿಗೆ, ಮಹಿಳೆಯರಿಗೆ ಹೊಸ ಬಟ್ಟೆ ಹಾಗೂ ಸಿಹಿ ಹಂಚಿ ಅವರೊಂದಿಗೆ ಸಂತಸದ ಕ್ಷಣಗಳನ್ನು ಕಳೆದಿದ್ದಾರೆ.

    ಅಷ್ಟೇ ಅಲ್ಲದೇ ಪುನೀತ್ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಹ್ಯಾಪಿ ಬರ್ತಡೇ ಅಮ್ಮಾ ಎಂದು ಬರೆದುಕೊಂಡಿದ್ದು, ಅಮ್ಮನ ಜೊತೆಗೆ ಇರುವ ಹಳೆಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

      

    https://www.facebook.com/PuneethRajkumar/photos/a.1376049972424859.1073741828.1375142069182316/1866485516714633/?type=3&theater

  • ಅಮ್ಮನ ಆರೋಗ್ಯದ ಬಗ್ಗೆ ಮುಚ್ಚಿಡೋ ಅಗತ್ಯ ನಮಗಿಲ್ಲ: ಶಿವರಾಜ್ ಕುಮಾರ್

    ಅಮ್ಮನ ಆರೋಗ್ಯದ ಬಗ್ಗೆ ಮುಚ್ಚಿಡೋ ಅಗತ್ಯ ನಮಗಿಲ್ಲ: ಶಿವರಾಜ್ ಕುಮಾರ್

    – ಆಸ್ಪತ್ರೆಗೆ ಬಿಎಸ್ ಯಡಿಯೂರಪ್ಪ ಭೇಟಿ

    ಬೆಂಗಳೂರು: ಪಾರ್ವತಮ್ಮ ರಾಜ್‍ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅವರ ಆರೋಗ್ಯದ ಬಗ್ಗೆ ಮುಚ್ಚಿಡುವ ಅಗತ್ಯ ನಮಗಿಲ್ಲ. ಆದ್ರೆ ದಯವಿಟ್ಟು ಸುಳ್ಳು ಸುದ್ದಿ ಹರಡಿಸಬೇಡಿ ಅಂತಾ ನಟ ಶಿವರಾಜ್ ಕುಮಾರ್ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ.

    ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊನ್ನೇ ತಾನೇ ಉಸಿರಾಟದ ತೊಂದರೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ಪಾರ್ವತಮ್ಮ ಅವರಿಗೆ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟಕ್ಕೆ ಅವಕಾಶಕೊಡಲಾಗಿತ್ತು. ಅಲ್ಲದೇ ಡಯಾಲಿಸಿಸ್ ನಿಲ್ಲಿಸಲಾಗಿದೆ. ಅವರ ಆರೋಗ್ಯದಲ್ಲಿ ಗುಣಮುಖರಾಗೋ ಲಕ್ಷಣ ಕಂಡುಬಂದಿದೆ ಅಂತಾ ಅವರು ಹೇಳಿದ್ದಾರೆ.

    ಅಮ್ಮನ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹರಡಬೇಡಿ. ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾದ್ರೆ ಖಂಡಿತಾ ನಿಮಗೆ ತಿಳಿಸುತ್ತೇವೆ. ಯಾಕಂದ್ರೆ ಏನೇನೊ ಮೆಸೇಜ್ ಗಳು ಹರಿದಾಡುತ್ತಿವೆ. ಹಾಗಂತ ಒಂದು ವೇಳೆ ಆಗಿದ್ರೆ ನಾವು ಇಂದು ಈ ರೀತಿ ಇರ್ತಿದ್ವಾ?. ಸುಮ್ನೆ ಇಂತಹ ವಿಷಯಗಳಲ್ಲಿ ಹುಡುಗಾಟ ಆಡಕ್ಕಾಗಲ್ಲ. ಅಮ್ಮನ ಆರೋಗ್ಯದ ಬಗ್ಗೆ ಜನಗಳ ಮುಂದೆ ಮುಚ್ಚುಮರೆ ಮಾಡೋ ಅಗತ್ಯವಿಲ್ಲ. ಯಾಕಂದ್ರೆ ಅಪ್ಪಾಜೀನೇ ನಿಮ್ಮ ಮುಂದೆ ಇಟ್ಟಿದ್ದೇವೆ. ನಮ್ಮ ಇಡೀ ಕುಟುಂಬಕ್ಕೇ ನೀವೆಲ್ಲರೂ ಬೆಂಬಲ ನೀಡಿದ್ದೀರಿ. ಈ ರೀತಿ ಇರಬೇಕಾದ್ರೆ ಮುಚ್ಚು ಮರೆ ಯಾಕ್ ಮಾಡ್ಬೇಕು ಅಂತಾ ಶಿವಣ್ಣ ಸ್ಪಷ್ಟಪಡಿಸಿದ್ದಾರೆ.

    ಈ ವೇಳೆ ರಾಘವೇಂದ್ರ ರಾಜ್ ಕುಮಾರ್, ಡಾ.ಸಂಜಯ್ ಕುಲಕರ್ಣಿ, ಡಾ. ನಳಿನಿ ಕಿಲಾರ, ಮೂತ್ರಪಿಂಡ ತಜ್ಞೆ ಡಾ. ಮಹೇಶ್, ಫಿಜಿಷಿಯನ್ ಡಾ ಕಾರ್ತಿಕ್, ಐಸಿಯು ಮುಖ್ಯಸ್ಥೆ ಡಾ.ರತ್ನ ಹಾಗೂ ಮುಖ್ಯ ವೈದ್ಯ ಡಾ.ನರೇಶ್ ಶೆಟ್ಟಿ ಉಪಸ್ಥಿತರಿದ್ದರು.

    ಆಸ್ಪತ್ರೆಗೆ ಬಿಎಸ್‍ವೈ ಭೇಟಿ: ಪಾರ್ವತಮ್ಮ ರಾಜ್ ಕುಮಾರ್ ಅವರ ಆರೊಗ್ಯ ವಿಚಾರಿಸಲೆಂದು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಎಂ ಎಸ ರಾಮಯ್ಯ ಆಸ್ಪತ್ರೆಗೆ ಭೇಟಿ ನಿಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾರ್ವತಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಕಳೆದ 2-3 ದಿವಸಕ್ಕೆ ಹೋಲಿಕೆ ಮಾಡಿದ್ರೆ ಸ್ವಲ್ಪ ನಗುಮುಖದಲ್ಲಿದ್ದಾರೆ. ಮಾತನಾಡಿದ್ರೆ ಪ್ರತಿಕ್ರಿಯಿಸುತ್ತಾರೆ. ಹೀಗೆ ಅವರ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದೆ ಅಂತಾ ಹೇಳಿದ್ರು.

  • ಗಾಬರಿ ಸಹಜ, ಆದ್ರೆ ಬೇರೆ ರೀತಿ ಸುದ್ದಿ ಕೊಡಬೇಡಿ: ಶಿವರಾಜ್ ಕುಮಾರ್

    ಗಾಬರಿ ಸಹಜ, ಆದ್ರೆ ಬೇರೆ ರೀತಿ ಸುದ್ದಿ ಕೊಡಬೇಡಿ: ಶಿವರಾಜ್ ಕುಮಾರ್

    ಬೆಂಗಳೂರು: ಅಮ್ಮ ವೆಂಟಿಲೇಟರ್‍ನಲ್ಲಿದ್ದಾರೆ ಅಂದ್ರೆ ನಮ್ಗೂ ಭಯ ಇದೆ. ಗಾಬರಿ ಸಹಜ, ಆದ್ರೇ ಬೇರೆ ರೀತಿ ಸುದ್ದಿ ಕೊಡಬೇಡಿ ಅಂತಾ ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.

    ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು, ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆಗಿಂತ ಇಂದು ಅಮ್ಮಾ ಬೆಟರ್ ಇದ್ದಾರೆ ಅಂತಾ ವೈದ್ಯರು ಹೇಳಿದ್ದಾರೆ. ಆದ್ರೆ ವೆಂಟಿಲೇಟರ್‍ನಿಂದ ಹೊರಗೆ ಬಂದ ಮೇಲೆ ಔಟ್ ಆಫ್ ಡೇಂಜರಸ್ ಅನ್ನಬಹುದು ಅಂತಾ ಅವರು ಹೇಳಿದ್ರು.

    ಕೃತಕ ಉಸಿರಾಟಕ್ಕಾಗಿ ವೆಂಟಿಲೇಟರ್ ನಲ್ಲಿ ಅಮ್ಮನಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ವೆಂಟಿಲೇಟರ್ ಅಂದ್ರೆ ನಮಗೂ ಗಾಬರಿಯಾಯಿತು. ಯಾಕಂದ್ರೆ ಎಷ್ಟಾದ್ರೂ ನಮ್ಮಮ್ಮ ತಾನೇ ಅಂತಾ ಭಾವುಕರಾದ್ರು.

    ವೆಂಟಿಲೇಟರ್ ನಿಂದ ಹೊರಬಂದ ಬಳಿಕ ಅಮ್ಮನ ಆರೋಗ್ಯದ ಬಗ್ಗೆ ಖಚಿತವಾಗಿ ಹೇಳಬಹುದು. ಅದಕ್ಕಿಂತ ಮೊದಲು ಯಾವುದೇ ಕಾರಣಕ್ಕೂ ಸುದ್ದಿಗಳನ್ನು ಹರಡಿಸಬೇಡಿ ಅಂತಾ ಹೇಳಿದ್ರು.

    ಅಮ್ಮನ ಆರೋಗ್ಯದ ಬಗ್ಗೆ ನಿಮ್ಮ ಪ್ರಾರ್ಥನೆ ಅಗತ್ಯ ಅಂತಾ ರಾಘವೇಂದ್ರ ರಾಜ್ ಕುಮಾರ್ ಇದೇ ವೇಳೆ ತಿಳಿಸಿದ್ರು.

    ಉಸಿರಾಟದ ತೊಂದರೆಯಿಂದಾಗಿ ದಿವಂಗತ ಡಾ. ರಾಜ್ ಕುಮಾರ್ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಅವರನ್ನು ಸೋಮವಾರ ನಗರದಲ್ಲಿ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಇಂದು ಅವರ ಆರೋಗ್ಯ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

    https://www.youtube.com/watch?v=hzotf2i2ehw

  • ಪಾರ್ವತಮ್ಮ ರಾಜ್‍ಕುಮಾರ್ ಆರೋಗ್ಯದಲ್ಲಿ ಚೇತರಿಕೆ- ಜನರಲ್ ವಾರ್ಡ್‍ಗೆ ಶಿಫ್ಟ್

    ಪಾರ್ವತಮ್ಮ ರಾಜ್‍ಕುಮಾರ್ ಆರೋಗ್ಯದಲ್ಲಿ ಚೇತರಿಕೆ- ಜನರಲ್ ವಾರ್ಡ್‍ಗೆ ಶಿಫ್ಟ್

    ಬೆಂಗಳೂರು: ಪಾರ್ವತಮ್ಮ ರಾಜ್‍ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಜನರಲ್ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ.

    ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಪಾರ್ವತಮ್ಮ ಅವರಿಗೆ ಮಂಗಳವಾರ ರಾತ್ರಿ 12 ಗಂಟೆ ಸುಮಾರಿಗೆ ತಲೆಸುತ್ತು ಕಾಣಿಸಿಕೊಂಡಿತ್ತು. ಹೀಗಾಗಿ ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಪಾರ್ವತಮ್ಮ ರಾಜ್‍ಕುಮಾರ್ ಅವರನ್ನು ತುರ್ತು ನಿಗಾ ಘಟಕದಲ್ಲಿರಿಸಿ ಡಾ. ಸಂಜಯ್ ಕುಲಕರ್ಣಿ ಚಿಕಿತ್ಸೆ ನೀಡಿದ್ದರು. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ.

    ಶಿವಣ್ಣ, ರಾಘವೇಂದ್ರ ರಾಜ್‍ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ತಾಯಿ ಜೊತೆ ಆಸ್ಪತ್ರೆಯಲ್ಲಿದ್ದಾರೆ. ಈ ವೇಳೆ ಮಾತನಾಡಿದ ಶಿವರಾಜ್‍ಕುಮಾರ್, ಅಮ್ಮನಿಗೆ ರಾತ್ರಿ ಸ್ವಲ್ಪ ಸುಸ್ತಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಈಗ ಚೆನ್ನಾಗಿದ್ದಾರೆ ಅಂದ್ರು.