Tag: party

  • ಸ್ನೇಹಿತನ ಪತ್ನಿ ಬರ್ತ್ ಡೇ ಪಾರ್ಟಿ- ಕುಡಿದ ಮತ್ತಿನಲ್ಲಿ ತನ್ನನ್ನು ತಾನೇ ಶೂಟ್ ಮಾಡ್ಕೊಂಡ

    ಸ್ನೇಹಿತನ ಪತ್ನಿ ಬರ್ತ್ ಡೇ ಪಾರ್ಟಿ- ಕುಡಿದ ಮತ್ತಿನಲ್ಲಿ ತನ್ನನ್ನು ತಾನೇ ಶೂಟ್ ಮಾಡ್ಕೊಂಡ

    – ಡಮ್ಮಿ ಪಿಸ್ತೂಲ್ ಎಂದು ತಲೆಗೆ ಗುಂಡು ಹಾರಿಸ್ಕೊಂಡ

    ಮುಂಬೈ: ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ಡಮ್ಮಿ ಗನ್ ಎಂದು ಭಾವಿಸಿ ತಲೆಗೆ ಶೂಟ್ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

    ಸಾವನ್ನಪ್ಪಿದ ವ್ಯಕ್ತಿಯನ್ನು ಸಿಧೇಶ್ ಜಂಗಮ್ ಎಂದು ಗುರುತಿಸಲಾಗಿದೆ. ಸಿಧೇಶ್ ತಂದೆ ಪ್ರಕಾಶ್ ಜಂಗಮ್ ಜೊತೆ ನೆರೆ ಮನೆಯ ಭಾರತ್ ಶೇರ್ ಅವರ ಹೆಂಡತಿಯ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದರು. ಪಾರ್ಟಿಯಲ್ಲಿ ಮದ್ಯಪಾನ ಮಾಡಿದ ನಂತರ ಇಸ್ಪೀಟ್ ಆಡಿಕೊಂಡು ಸಮಯ ಕಳೆಯುತ್ತಿದ್ದರು. ಇದೇ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

    ಪಾರ್ಟಿಗೆ ಬಂದಿದ್ದ ಸಿಧೇಶ್ ಜಂಗಮ್ ತಂದೆ ಪ್ರಕಾಶ್ ಜಂಗಮ್ ಸಂಜೆಯ ವೇಳೆಗೆ ಮನೆಗೆ ಹೋಗಿದ್ದರು. ಈ ವೇಳೆ ಸಿಧೇಶ್ ಜೊತೆ ಇಸ್ಪೀಟ್ ಆಡುತ್ತಿದ್ದ ಭಾರತ್ ತನ್ನ ಬೆಡ್ ರೊಂಗೆ ಹೋಗಿದ್ದಾನೆ. ಇತ್ತ ಮನೆಯಲ್ಲಿ ಗನ್ ಇರುವುದು ಸಿಧೇಶ್ ಕಣ್ಣಿಗೆ ಬಿದ್ದಿದೆ. ಮೊದಲೇ ಕುಡಿದ ಅಮಲಿನಲ್ಲಿ ಇದ್ದ ಸಿಧೇಶ್ ಡಮ್ಮಿ ಗನ್ ಅನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ತೆಗೆದುಕೊಂಡು ತಲೆಗೆ ಶೂಟ್ ಮಾಡಿಕೊಂಡಿದ್ದಾನೆ.

    ಈ ಘಟನೆ ನಡೆದಾಗ ಸಿಧೇಶ್ ಐವರು ಸ್ನೇಹಿತರು ಜೊತೆಯಲ್ಲೇ ಇದ್ದು, ತಂದೆ ಪ್ರಕಾಶ್ ಜಂಗಮ್‍ನನ್ನು ಕರೆಸಿದ್ದಾರೆ. ಅಷ್ಟರಲ್ಲಿ ಸಿಧೇಶ್ ತಲೆಗೆ ಗುಂಡು ಬಿದ್ದು, ತಲೆ, ಮೂಗಿನಲ್ಲಿ ರಕ್ತ ಬಂದಿದೆ. ಇದನ್ನು ಕಂಡು ಭಯಗೊಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ವಿಚಾರವಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳದಲ್ಲಿ ಇದ್ದ ಐವರು ಸ್ನೇಹಿತರನ್ನು ವಿಚಾರಣೆ ಮಾಡಿದ್ದಾರೆ. ಜೊತೆಗೆ ಲೈಸನ್ಸ್ ಇಲ್ಲದೇ ಅಕ್ರಮವಾಗಿ ಪಿಸ್ತೂಲ್ ಅನ್ನು ಮನೆಯಲ್ಲಿ ಇಟ್ಟುಕೊಂಡ ಕಾರಣ ಭಾರತ್ ಶೇರ್ ಮೇಲೆ ಪ್ರಕರಣ ದಾಖಲಿಸಿದ್ದಾರೆ.

  • ಸೋಂಕಿತ ವ್ಯಕ್ತಿ ಜೊತೆ ಪಾರ್ಟಿ – 16 ಮಂದಿ ಕ್ವಾರಂಟೈನ್

    ಸೋಂಕಿತ ವ್ಯಕ್ತಿ ಜೊತೆ ಪಾರ್ಟಿ – 16 ಮಂದಿ ಕ್ವಾರಂಟೈನ್

    ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿಗೆ ಕೋಲಾರದ ಕೊರೊನಾ ನಂಟು ಅಂಟಿದೆ. ಕೋಲಾರದ ಮಾಲೂರಿನಲ್ಲಿ ವಾಸವಾಗಿದ್ದ ಶಿಡ್ಲಘಟ್ಟ ತಾಲೂಕು ಮಳ್ಳೂರು ಗ್ರಾಮದ 27 ವರ್ಷದ ಯುವಕನಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.

    ಮೂಲತಃ ಚಾಲಕನಾಗಿದ್ದ ಸೋಂಕಿತ ಕಳೆದ ಶನಿವಾರ ಸ್ವಗ್ರಾಮ ಮಳ್ಳೂರಿಗೆ ಆಗಮಿಸಿ ವಾಪಾಸ್ಸಾಗಿದ್ದರು. ಸ್ವಗ್ರಾಮಕ್ಕೆ ಬಂದಿದ್ದ ಸೋಂಕಿತ ಸ್ನೇಹಿತರ ಜೊತೆ ಸೇರಿ ಮದ್ಯದ ಪಾರ್ಟಿ ಸಹ ನಡೆಸಿದ್ದರು. ಹೀಗಾಗಿ ಅವರ ಜೊತೆ ಮದ್ಯದ ಪಾರ್ಟಿಯಲ್ಲಿ ಭಾಗಿಯಾಗಿದ್ದ 07 ಮಂದಿ ಸ್ನೇಹಿತರು ಹಾಗೂ 09 ಮಂದಿ ಕುಟುಂಬಸ್ಥರು ಸೇರಿ ಒಟ್ಟು 16 ಮಂದಿಯನ್ನ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ವೆಂಕಟೇಶ್ ಮೂರ್ತಿ ತಿಳಿಸಿದ್ದಾರೆ.

    16 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಇಷ್ಟು ದಿನ ಶಿಡ್ಲಘಟ್ಟ ತಾಲೂಕಿನಲ್ಲಿ ಯಾವುದೇ ಸೋಂಕಿತ ಪ್ರಕರಣ ಪತ್ತೆಯಾಗಿರಲಿಲ್ಲ. ಈಗ ಈ ಸೋಂಕಿತ ಯುವಕ ಸ್ವಗ್ರಾಮಕ್ಕೆ ಬಂದು ಹೋಗಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ. ಇದರಿಂದ ಶಿಡ್ಲಘಟ್ಟಕ್ಕೂ ಕೊರೊನಾ ಸೋಂಕಿನ ನಂಟು ಅಂಟಿದೆ.

  • ಪಾರ್ಟಿಯಲ್ಲಿ ಕುಡಿದು ಯುವಕರಿಗೆ ಕಾನೂನು ಪಾಠ ಮಾಡಿದ ಪೇದೆ

    ಪಾರ್ಟಿಯಲ್ಲಿ ಕುಡಿದು ಯುವಕರಿಗೆ ಕಾನೂನು ಪಾಠ ಮಾಡಿದ ಪೇದೆ

    ಚಿತ್ರದುರ್ಗ: ಪೊಲೀಸ್ ಪೇದೆ ಕರ್ತವ್ಯ ಮರೆತು ಸಮವಸ್ತ್ರದಲ್ಲೇ ಎಣ್ಣೆ ಪಾರ್ಟಿ ಮಾಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಪಲ್ಲವಗೆರೆ ಗ್ರಾಮದಲ್ಲಿ ನಡೆದಿದೆ.

    ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೇದೆ ರಾಜು ಚವ್ಹಾಣ್ ಅವರನ್ನು ಭರಮಸಾಗರದ ಚೆಕ್ ಪೋಸ್ಟ್ ಗೆ ಪರಿಶೀಲನೆಗಾಗಿ ಹಾಕಲಾಗಿತ್ತು. ಕೊರೊನಾ ಭೀತಿ ಹಿನ್ನೆಲೆ 40 ದಿನಗಳ ಕಾಲ ಲಾಕ್‍ಡೌನ್ ಮಾಡಲಾಗಿತ್ತು. ಇದೀಗ ಲಾಕ್‍ಡೌನ್ ಸಡಿಲಿಕೆ ಮಾಡಿದ್ದು, ಎಲ್ಲಡೆ ಮದ್ಯ ಮಾರಟಕ್ಕೆ ಅವಕಾಶ ಸಿಕ್ಕಿದೆ. ಇದರಿಂದ ಫುಲ್ ಖುಷಿಯಾದ ಪೇದೆ ರಾಜು ಚವ್ಹಾಣ್ ಕರ್ತವ್ಯ ಮರೆತು ತಮ್ಮ ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ನಡೆಸಿದ್ದಾರೆ.

    ಲಾಕ್‍ಡೌನ್ ಸಡಲಿಕೆಯಿಂದಾಗಿ ನಿನ್ನೆ ಪಲ್ಲವಗೆರೆ ಗ್ರಾಮದ ಸುತ್ತ ಬೀಟ್‍ಗೆ ಹಾಕಲಾಗಿತ್ತು. ಅದರಂತೆ ಕರ್ತವ್ಯ ನಿರ್ವಹಿಸಲು ಹೋಗಿದ್ದ ರಾಜು ಈರುಳ್ಳಿ ಜಮೀನಿನ ಮರದ ಕೆಳಗೆ ಕುಳಿತು ಗ್ರಾಮದ ಸ್ನೇಹಿತರ ಜೊತೆ ಪೋಲಿಸ್ ಸಮವಸ್ತ್ರದಲ್ಲಿಯೇ ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪಾರ್ಟಿಯಲ್ಲಿ ಕುಡಿದು ಅಲ್ಲಿನ ಯುವಕರಿಗೆ ಕಾನೂನಿನ ಪಾಠ ಮಾಡಿದ್ದಾರೆ. ನಿವೃತ್ತ ಯೋಧರಾಗಿರುವ ರಾಜು, 2017ರಲ್ಲಿ ಸೇನೆಯಿಂದ ಬಂದು ಪೊಲೀಸ್ ಇಲಾಖೆಗೆ ಸೇರಿದ್ದರು ಎಂದು ಹೇಳಲಾಗುತ್ತಿದೆ. ಇವರ ಕೃತ್ಯದಿಂದಾಗಿ ಖಡಕ್ ಪೊಲೀಸರಿಗೆ ಇರಿಸುಮುರಿಸು ಉಂಟಾಗಿದ್ದು, ರಾಜು ಅವರ ನಿರ್ಲಕ್ಷ್ಯ ಹಾಗೂ ಬೇಜಾವಬ್ದಾರಿತನಕ್ಕೆ ಸಿಬ್ಬಂದಿ ತಲೆತಗ್ಗಿಸುವಂತಾಗಿದೆ. ಲೇಡಿ ಸಿಂಗಂ ಎಂದೇ ಖ್ಯಾತಿ ಪಡೆದಿರುವ ಚಿತ್ರದುರ್ಗ ಎಸ್ಪಿ ರಾಧಿಕಾ.ಜಿ ಪೇದೆ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಾರೆ ಎಂಬ ಚರ್ಚೆ ಸಾಮಾಜಿಕ ಜಾಲಾತಾಣಗಳಲ್ಲಿ ನಡೆದಿದೆ.

  • ಎಣ್ಣೆ ಪಾರ್ಟಿಯಲ್ಲಿ ಲವ್ ಮ್ಯಾಟರ್- ಚಾಕುವಿನಿಂದ ಇರಿದು ಸ್ನೇಹಿತನನ್ನೇ ಕೊಂದ್ರು

    ಎಣ್ಣೆ ಪಾರ್ಟಿಯಲ್ಲಿ ಲವ್ ಮ್ಯಾಟರ್- ಚಾಕುವಿನಿಂದ ಇರಿದು ಸ್ನೇಹಿತನನ್ನೇ ಕೊಂದ್ರು

    ಮೈಸೂರು: ಎಣ್ಣೆ ಪಾರ್ಟಿಯಲ್ಲಿ ಲವ್ ವಿಚಾರದಿಂದ ಮೂವರು ಸ್ನೇಹಿತರ ನಡುವೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಜಿಲ್ಲೆಯ ಕ್ಯಾತಮಾರನಹಳ್ಳಿಯಲ್ಲಿ ಕೊಲೆ ನಡೆದಿದೆ.

    ಸೋಮವಾರ ಮದ್ಯ ಸಿಕ್ಕ ಖುಷಿಯಲ್ಲಿ ಯುವಕರು ಪಾರ್ಟಿ ಮಾಡಿದ್ದರು. ಕ್ಯಾರಮಾರನಹಳ್ಳಿಯ ಮಧು, ಕಿರಣ್ ಮತ್ತು ಸತೀಶ್ ಮೂವರು ಎಣ್ಣೆ ಪಾರ್ಟಿ ಮಾಡಿದ್ದಾರೆ. ಪಾರ್ಟಿ ವೇಳೆ ಗೆಳೆಯರ ಮಧ್ಯೆ ಪ್ರೇಮ ವಿಷಯಗಳು ಪ್ರಸ್ತಾಪವಾಗಿ ಜಗಳ ಉಂಟಾಗಿದೆ. ನಶೆಯಲ್ಲಿದ್ದ ಮಧು ಮತ್ತು ಕಿರಣ್ ಇಬ್ಬರು ಚಾಕುವಿನಿಂದ ಇರಿದು ಸತೀಶ್ ನನ್ನು ಕೊಲೆಗೈದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಕೊಲೆಯ ಬಳಿಕ ಮಧು ಮತ್ತು ಕಿರಣ್ ಪರಾರಿಯಾಗಿದ್ದಾರೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತೋಟದ ಮನೆಯಲ್ಲಿ ಪಾರ್ಟಿ ಮಾಡ್ತಿದ್ದೋರು ಕೊರೊನಾ ಘಟಕಕ್ಕೆ ಶಿಫ್ಟ್

    ತೋಟದ ಮನೆಯಲ್ಲಿ ಪಾರ್ಟಿ ಮಾಡ್ತಿದ್ದೋರು ಕೊರೊನಾ ಘಟಕಕ್ಕೆ ಶಿಫ್ಟ್

    ಚಿಕ್ಕಮಗಳೂರು: ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮಹಾಮಾರಿ ಕೊರೊನ ಸೋಂಕಿತರ ಸಂಖ್ಯೆ ಹಾಗೂ ಶಂಕಿತರ ಸಂಖ್ಯೆ ಬೆಳೆಯುತ್ತಲೇ ಇದೆ. ಸರ್ಕಾರ ಮನೆಯಿಂದ ಹೊರಬರಬೇಡಿ ಎಂದು ಮನವಿ ಮಾಡುತ್ತಲೇ ಇದೆ. ಆದರೆ ಜನರಿಗೆ ಬುದ್ಧಿ ಬರುತ್ತಿಲ್ಲ. ಮಾಡಬೇಡಿ ಅಂದಿದ್ದನ್ನೇ ಜಾಸ್ತಿ ಮಾಡುತ್ತಿದ್ದಾರೆ.

    ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಗುಂಪು ಸೇರಬೇಡಿ ಎಂದು ಜಿಲ್ಲಾಡಳಿತ, ಪೊಲೀಸರು ಹಾಗೂ ಆರೋಗ್ಯ ಇಲಾಖೆ ಎಷ್ಟೇ ಮನವಿ ಮಾಡಿದರು ಜನ ಮತ್ತದ್ದನ್ನೇ ಮಾಡುತ್ತಿದ್ದಾರೆ. ಇಂದು ಕೂಡ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮಡಬೂರು ಗ್ರಾಮದ ತೋಟದ ಮನೆಯಲ್ಲಿ ಪೂಜೆ ಮಾಡಿ ನಾನ್‍ವೆಜ್ ಅಡುಗೆ ಮಾಡಿ ಪಾರ್ಟಿ ಮಾಡುತ್ತಿದ್ದವರನ್ನು ಎನ್.ಆರ್.ಪೊಲೀಸರು ಬಂಧಿಸಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದಾಗ, 14 ಹೆಂಗಸರು ಹಾಗೂ ಇಬ್ಬರು ಗಂಡಸರು ತೋಟದ ಮನೆಯಲ್ಲಿ ಪೂಜೆ ಮಾಡಿ ಅಡುಗೆ ಮಾಡಿದ್ದಾರೆ. ಕರ್ಫ್ಯೂ ಮಾದರಿಯ 144 ಸೆಕ್ಷನ್ ಲಾಕ್‍ಡೌನ್ ಜಾರಿ ಇದ್ದರೂ ಗುಂಪು ಸೇರಿದ ಆರೋಪದಡಿ 16 ಜನರನ್ನೂ ಬಂಧಿಸಿರೋ ಪೊಲೀಸರು ಎಲ್ಲರ ವಿರುದ್ಧ ದೂರು ದಾಖಲಿಸಿ, ವೈದ್ಯರ ಬಳಿ ಪರೀಕ್ಷೆಗೊಳಪಡಿಸಿದ್ದಾರೆ. ಬಳಿಕ ಎನ್.ಆರ್.ಪುರದ ಸರ್ಕಾರಿ ಆಸ್ಪತ್ರೆಯ ಆವರಣದ ಕೊರೊನ ವಿಶೇಷ ಚಿಕಿತ್ಸಾ ಘಟಕಕ್ಕೆ ಬಿಟ್ಟಿದ್ದು ಊಟ-ವಸತಿ ಸೌಲಭ್ಯ ಕಲ್ಪಿಸಿದ್ದಾರೆ.

  • ಕೊರೊನಾ ನಿರ್ಲಕ್ಷ್ಯ- ಕನ್ನಿಕಾ ಕಪೂರ್ ವಿರುದ್ಧ ಎಫ್‍ಐಆರ್

    ಕೊರೊನಾ ನಿರ್ಲಕ್ಷ್ಯ- ಕನ್ನಿಕಾ ಕಪೂರ್ ವಿರುದ್ಧ ಎಫ್‍ಐಆರ್

    ನವದೆಹಲಿ: ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿರುವ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ವಿರುದ್ಧ ಲಕ್ನೋ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಮಾರ್ಚ್ ಆರಂಭದಲ್ಲಿ ಲಂಡನ್‍ನಿಂದ ಭಾರತಕ್ಕೆ ವಾಸಪ್ ಆಗಿದ್ದ ಕನ್ನಿಕಾ ಅವರಿಗೆ ಡೆಡ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಸೋಂಕು ಇತರರಿಗೆ ಹರಡದಂತೆ ಅಗತ್ಯವಾದ ನಿರ್ದೇಶನಗಳನ್ನು ಪಾಲಿಸದ ಹಿನ್ನೆಲೆ ಲಕ್ನೋ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಶುಕ್ರವಾರ ಕನ್ನಿಕಾ ಅವರ ಕೋವಿಡ್-19 ಪರೀಕ್ಷೆಯ ವರದಿ ಬಂದಿದ್ದು, ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಇದಕ್ಕೂ ಮೊದಲು ಹಲವು ವಿಐಪಿಗಳನ್ನು ಕನ್ನಿಕಾ ಪಾರ್ಟಿಯಲ್ಲಿ ಭೇಟಿಯಾಗಿದ್ದರು. ಹೀಗಾಗಿ ಪಾರ್ಟಿಯಲ್ಲಿ ಭಾಗಿಯಾಗಿದ್ದವರಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಕನ್ನಿಕಾ ಅವರಿ ಸೋಂಕು ತಗುಲಿರುವುದು ದೃಢಪಟ್ಟ ಬಳಿಕ ಅವರಿಗೆ ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವವಿದ್ಯಾಲಯ (ಕೆಜಿಎಂಯು)ನ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

    ಆದರೆ ಲಕ್ನೋ ಮುಖ್ಯ ವೈದ್ಯಕೀಯ ಅಧಿಕಾರಿಯೊಬ್ಬರು ಕನ್ನಿಕಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಮೆರೆದಿದ್ದಾರೆ ಎಂದು ದೂರಿದ್ದು, ಈ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 188, 269, 270ರ ಅಡಿಯಲ್ಲಿ ಲಕ್ನೋನ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಕನ್ನಿಕಾ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

    ಹಜರತ್‍ಗಂಜ್ ಮತ್ತು ಗೋಮ್ಟಿನಗರ ಪೊಲೀಸ್ ಠಾಣೆಗಳಲ್ಲಿಯೂ ಕನ್ನಿಕಾ ವಿರುದ್ಧ ಇನ್ನೂ ಎರಡು ಎಫ್‍ಐಆರ್ ದಾಖಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಪ್ರದೇಶದ ಮೂರು ವಿಭಿನ್ನ ಪಾರ್ಟಿಗಳಲ್ಲಿ ಕನ್ನಿಕಾ ಮಾರ್ಚ್ 11ರಂದು ಲಂಡನ್‍ನಿಂದ ವಾಪಸ್ ಬಂದ ಬಳಿಕ ಭಾಗಿಯಾಗಿದ್ದರು. ಈ ಹಿನ್ನೆಲೆ ಇನ್ನೂ ಅವರ ಮೇಲೆ ಇನ್ನೂ ಎರಡು ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಕಾನಿಕಾ ಕಪೂರ್ ಬೇರೆ ಬೇರೆ ದಿನಗಳಲ್ಲಿ ಒಟ್ಟು ಮೂರು ಪಾರ್ಟಿಗಳಲ್ಲಿ ಭಾಗಿಯಾಗಿದ್ದರು. ಉನ್ನತ ರಾಜಕಾರಣಿಗಳು ಸೇರಿದಂತೆ ಹಲವಾರು ವಿಐಪಿಗಳನ್ನು ಭೇಟಿ ಮಾಡಿದ್ದರು. ಪಾರ್ಟಿಯಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ, ಬಿಜೆಪಿ ಸಂಸದ ದುಶ್ಯಂತ್ ಸಿಂಗ್ ಮತ್ತು ಅವರ ತಾಯಿ ಅವರು ಕನ್ನಿಕಾರ ಸಂಪರ್ಕಕ್ಕೆ ಬಂದಿದ್ದರು. ಈ ಹಿನ್ನೆಲೆ ಈ ನಾಯಕರು ತಮ್ಮನ್ನು ತಾವು ಪ್ರತ್ಯೇಕವಾಗಿರಿಸಿಕೊಂಡಿದ್ದಾರೆ.

    ಲಂಡನ್‍ನಿಂದ ಬಂದ ಬಳಿಕ ಕನ್ನಿಕಾ ಐಷಾರಾಮಿ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದರು, ಅಲ್ಲದೇ ಕಾನ್ಪುರದ ಸಂಬಂಧಿಕರ ಮನೆಗೆ ಕನ್ನಿಕಾ ಭೇಟಿ ಕೊಟ್ಟಿದ್ದರು ಎಂದು ಲಕ್ನೋನ ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದಾರೆ.

    ಭಾರತದಲ್ಲಿ ಕೊರೊನಾ ಹಬ್ಬಿದ್ದು ಹೇಗೆ?
    ಭಾರತದಲ್ಲಿ ಇದುವರೆಗೆ ಸೋಂಕಿತ ಪ್ರಕರಣ 246 (ಅಧಿಕೃತ ಪಟ್ಟಿ, ನಿನ್ನೆ ರಾತ್ರಿ 12 ಗಂಟೆಯವರೆಗೆ) ವರದಿಯಾಗಿದೆ. ಇದರಲ್ಲಿ ವಿದೇಶದಿಂದ ಬಂದ 136 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ವಿದೇಶದಿಂದ ಬಂದವರ ಜೊತೆ ಸಂಪರ್ಕದಿಂದ 105 ಮಂದಿಗೆ ಸೋಂಕು ತಗುಲಿದೆ.

    ಜನವರಿ 30 ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿತ ಮೊದಲ ಕೇಸ್ ವರದಿಯಾಗಿತ್ತು. ಆದರೆ ಮಾರ್ಚ್ 10ರಂದು ದೇಶದಲ್ಲಿ ಸೋಂಕಿತರ ಸಂಖ್ಯೆ 50ಕ್ಕೆ ಮುಟ್ಟಿತ್ತು. ಸದ್ಯ ಮಾರ್ಚ್ 20ರವರೆಗೆ ಸೋಂಕಿತರ ಸಂಖ್ಯೆ 249ಕ್ಕೆ ತಲುಪಿದೆ.

    24 ಗಂಟೆಗಳಲ್ಲಿ ಪತ್ತೆಯಾದ ಹೊಸ ಪ್ರಕರಣಗಳು:
    ಭಾರತದಲ್ಲಿ 55 ಹೊಸ ಪ್ರಕರಣ ದಾಖಲಾಗಿದೆ. ಇತ್ತ ಇಟಲಿಯಲ್ಲಿ 5986, ಸ್ಪೇನ್‍ನಲ್ಲಿ 3494, ಜರ್ಮನಿಯಲ್ಲಿ 4528, ಅಮೆರಿಕದಕಲ್ಲಿ 5861, ಇರಾನ್‍ನಲ್ಲಿ 1237, ಫ್ರಾನ್ಸ್ ನಲ್ಲಿ 1617 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ.

  • ಸ್ನೇಹಿತನೊಂದಿಗೆ ಬಿಯರ್ ಕುಡಿಯಲು ಹೋದವ ಶವವಾದ

    ಸ್ನೇಹಿತನೊಂದಿಗೆ ಬಿಯರ್ ಕುಡಿಯಲು ಹೋದವ ಶವವಾದ

    ಮೈಸೂರು: ಪಾರ್ಟಿ ಮಾಡಲೆಂದು ಸ್ನೇಹಿತನ ಜೊತೆ ಮನೆ ಬಿಟ್ಟು ಹೋದ ಯುವಕ ಶವವಾಗಿ ಪತ್ತೆಯಾಗಿದ್ದಾನೆ.

    ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬಿಳಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮನೋಜ್ ಕುಮಾರ್ ಮೃತ ದುರ್ದೈವಿ. ತಗಡೂರು ಗ್ರಾಮದ ನಿವಾಸಿ ಮನೋಜ್ ಕುಮಾರ್, ಗುರುವಾರ ಸಂಜೆ ಸ್ನೇಹಿತ ವಿಜಯ್ ಕುಮಾರ್ ಜೊತೆ ಬೈಕಿನಲ್ಲಿ ತೆರಳಿದ್ದ. ಇದೀಗ ನಾಲೆಯ ತೂಬಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

    ಸೋನಹಳ್ಳಿ ಗ್ರಾಮದ ತಗಡೂರು ರಾಮಚಂದ್ರರಾವ್ ನಾಲೆ ಬಳಿ ಇಬ್ಬರೂ ಬಿಯರ್ ಕುಡಿಯುತ್ತಿದ್ದರು. ಬಿಯರ್ ಪಾರ್ಟಿಗೆ ಇಬ್ಬರು ಅಪರಿಚಿತರು ಸೇರಿಕೊಂಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಹೊಡೆದಾಟವಾಗಿ ವಿಜಯ್ ಕುಮಾರ್ ಬೈಕನ್ನು ನಾಲೆಗೆ ತಳ್ಳಿದ್ದು, ನಂತರ ಅಲ್ಲಿಂದ ಪರಾರಿಯಾಗಿದ್ದಾನೆ.

    ಸ್ವಲ್ಪ ಸಮಯದ ನಂತರ ಹಿಂದಿರುಗಿ ಬಂದಾಗ ಮನೋಜ್ ಕುಮಾರ್ ಕೂಡ ಅಲ್ಲಿ ಇರಲಿಲ್ಲ. ಆಗ ವಿಜಯಕುಮಾರ್, ಮನೋಜ್ ಕುಮಾರ್ ಪೋಷಕರಿಗೆ ಸುದ್ದಿ ಮುಟ್ಟಿಸಿದ್ದಾನೆ. ನಾಲೆ ಬಳಿ ಹುಡುಕಾಡಿದಾಗ ಮನೋಜ್ ಶವ ಪತ್ತೆಯಾಗಿದೆ. ಮನೋಜ್‍ನ ಕಿವಿ, ಮರ್ಮಾಂಗ ಹಾಗೂ ಹುಬ್ಬುಗಳ ಮೇಲೆ ಗಾಯವಾಗಿದ್ದು, ಪೋಷಕರು ಕೊಲೆ ಆರೋಪದ ದೂರು ದಾಖಲಿಸಿದ್ದಾರೆ.

    ಈ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

  • ಬಿಯರ್ ಬಾಟಲಿನಿಂದ ಚುಚ್ಚಿ ಬಿಜೆಪಿ ಮುಖಂಡನ ಬರ್ಬರ ಕೊಲೆ

    ಬಿಯರ್ ಬಾಟಲಿನಿಂದ ಚುಚ್ಚಿ ಬಿಜೆಪಿ ಮುಖಂಡನ ಬರ್ಬರ ಕೊಲೆ

    – ಬರ್ತ್ ಡೇ ದಿನವೇ ಪಾರ್ಟಿಯಲ್ಲಿ ಹೆಣವಾದ ರೌಡಿ ಶೀಟರ್
    – ಕೊಲೆಗೈದ ಸ್ನೇಹಿತರು ಪರಾರಿ

    ಮೈಸೂರು: ಬಿಯರ್ ಬಾಟಲಿನಿಂದ ಚುಚ್ಚಿ ಹುಟ್ಟುಹಬ್ಬದ ದಿನವೇ ಬಿಜೆಪಿ ಮುಖಂಡನನ್ನು ಆತನ ಸ್ನೇಹಿತರೇ ಕೊಲೆ ಮಾಡಿರುವ ಘಟನೆ ಮೈಸೂರಿನ ಕುವೆಂಪುನಗರದಲ್ಲಿ ನಡೆದಿದೆ.

    ಕೊಲೆಯಾದ ವ್ಯಕ್ತಿಯನ್ನು ಬಿಜೆಪಿಯ ಮೈಸೂರು ನಗರ ಸ್ಲಂ ಮೋರ್ಚಾ ಉಪಾಧ್ಯಕ್ಷ ಆನಂದ್ ಎಂದು ಗುರುತಿಸಲಾಗಿದೆ. ಗುರುವಾರ ಆನಂದ್ ಹುಟ್ಟುಹಬ್ಬವಿದ್ದು, ಕುವೆಂಪು ನಗರದ ಲವಕುಶ ಪಾರ್ಕ್ ಬಳಿಯ ಸರ್ವಿಸ್ ಅಪಾರ್ಟ್‍ಮೆಂಟ್‍ನಲ್ಲಿ ರೂಮ್ ಮಾಡಿಕೊಂಡು ಪಾರ್ಟಿ ಮಾಡುತ್ತಿದ್ದಾಗ ಸ್ನೇಹಿತರಿಂದಲೇ ಭೀಕರವಾಗಿ ಹತ್ಯೆಯಾಗಿದ್ದಾನೆ.

    ಉತ್ತನಹಳ್ಳಿ ಸಮೀಪ ಖಾಸಗಿ ಕಲ್ಯಾಣ ಮಂಟಪದಲ್ಲಿ ಪಾರ್ಟಿ ಮುಗಿಸಿ ಬಂದಿದ್ದ ಆನಂದ್, ನಂತರ ವಾಪಸ್ ಬಂದು ಸರ್ವಿಸ್ ಅಪಾರ್ಟ್‍ಮೆಂಟ್ ನಲ್ಲಿ ರೂಮ್ ಫಿಕ್ಸ್ ಮಾಡಿ ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದ. ಪಾರ್ಟಿ ನಡೆಯುವಾಗಲೇ ಸ್ನೇಹಿತರೊಂದಿಗೆ ಮಾತಿನ ಚಕಮಕಿಯಾಗಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಬಿಯರ್ ಬಾಟಲಿಯಿಂದ ಸ್ನೇಹಿತರೇ ಆನಂದನಿಗೆ ಚುಚ್ಚಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

    ಕೊಲೆ ಮಾಡಿದ್ದ ಆನಂದ್
    ಬಿಜೆಪಿ ಮುಖಂಡ ರಾಜೀವ್ ಬೆಂಬಲಿಗನಾಗಿದ್ದ ಆನಂದ್, ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ನಡೆಸುತ್ತಿದ್ದ. ಕಳೆದ 13 ವರ್ಷಗಳ ಹಿಂದೆ ಜನತಾನಗರದ ಮಾರುತಿ ಟೆಂಟ್ ರಸ್ತೆಯಲ್ಲಿ ಕುಮಾರಸ್ವಾಮಿ ಎಂಬಾತನನ್ನು ಮರ್ಡರ್ ಮಾಡಿದ್ದ. ನಂತರ ಜೈಲು ಶಿಕ್ಷೆ ಅನುಭವಿಸಿ ವಾಪಸ್ ಆಗಿದ್ದ. ಆತನ ಮೇಲೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಓಪನ್ ಮಾಡಲಾಗಿತ್ತು. ಆದ್ದರಿಂದ ಹಳೇ ವೈಷಮ್ಯದ ಮೇಲೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕುವೆಂಪುನಗರ ಪೊಲೀಸರು, ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಓರ್ವ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.

  • ದೀಪಿಕಾ ಬರ್ತ್ ಡೇ ಪಾರ್ಟಿಯಲ್ಲಿ ಬಿಗ್ ಮಂದಿ ಎಂಜಾಯ್

    ದೀಪಿಕಾ ಬರ್ತ್ ಡೇ ಪಾರ್ಟಿಯಲ್ಲಿ ಬಿಗ್ ಮಂದಿ ಎಂಜಾಯ್

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಸ್ಪರ್ಧಿ ದೀಪಿಕಾ ದಾಸ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಬಿಗ್‍ಬಾಸ್ ಸ್ಪರ್ಧಿಗಳು ಭಾಗಿಯಾಗಿ ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ.

    ಇತ್ತೀಚೆಗಷ್ಟೆ ದೀಪಿಕಾ ದಾಸ್ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡಿದ್ದರು. ಇದೀಗ ಮತ್ತೆ ಬಿಗ್‍ಬಾಸ್ ಸ್ಪರ್ಧಿಗಳ ಜೊತೆ ತಮ್ಮ ಬರ್ತ್ ಡೇ ಪಾರ್ಟಿಯನ್ನು ಮಾಡಿಕೊಂಡಿದ್ದಾರೆ. ಈ ಬಾರಿ ದೀಪಿಕಾ ಹುಟ್ಟುಹಬ್ಬ ತುಂಬಾ ವಿಶೇಷವಾಗಿತ್ತು. ಯಾಕೆಂದರೆ ಹುಟ್ಟುಹಬ್ಬದ ಪಾರ್ಟಿಯಲ್ಲಿ ‘ಬಿಗ್‍ಬಾಸ್-7’ ನ ಸ್ಪರ್ಧಿಗಳೆಲ್ಲರೂ ಭಾಗಿಯಾಗಿ ಸಂಭ್ರಮಿಸಿದ್ದಾರೆ.

    https://www.instagram.com/p/B9JC2TkFPg1/

    ಪಾರ್ಟಿಯಲ್ಲಿ ಜೈ ಜಗದೀಶ್, ಅವರ ಪತ್ನಿ ವಿಜಯಲಕ್ಷ್ಮಿ, ಸುಜಾತ, ಶೈನ್ ಶೆಟ್ಟಿ, ಚಂದನ್ ಆಚಾರ್, ಕಿಶನ್, ವಾಸುಕಿ, ಚಂದನಾ, ಹರೀಶ್ ರಾಜ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಬಿಗ್‍ಬಾಸ್ ನಂತರ ದೀಪಿಕಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ಎಲ್ಲರೂ ಮತ್ತೆ ಒಟ್ಟಾಗಿ ಸೇರಿ ಸಖತ್ ಆಗಿ ಎಂಜಾಯ್ ಮಾಡಿದ್ದಾರೆ.

    https://www.instagram.com/p/B9JCrOCFxZA/

    ದೀಪಿಕಾ ದಾಸ್ ಪಾರ್ಟಿಯಲ್ಲಿ ಕ್ಲಿಕ್ಕಿಸಿಕೊಂಡಿದ್ದ ಕೆಲವು ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಕೇಕ್ ಮಾಡಿ ಎಲ್ಲರಿಗೂ ತಿನ್ನಿಸಿದ ವಿಡಿಯೋವನ್ನು ಅಪ್ಲೋಡ್ ಮಾಡಿಕೊಂಡಿದ್ದು, ಎಲ್ಲರೀಗೂ ಧನ್ಯವಾದ ತಿಳಿಸಿದ್ದಾರೆ. ದೀಪಿಕಾ ದಾಸ್ ಧಾರಾವಾಹಿ ಮೂಲಕ ಖ್ಯಾತಿಗಳಿಸಿದ್ದರು. ಅಲ್ಲಿಂದ ಬಿಗ್‍ಬಾಸ್ ಮನೆಗೆ ಹೋಗಿ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.

  • ಇನ್ಮುಂದೆ ಮೆಟ್ರೋ ಬೋಗಿಗಳಲ್ಲೂ ಪಾರ್ಟಿ ಮಾಡಬಹುದು

    ಇನ್ಮುಂದೆ ಮೆಟ್ರೋ ಬೋಗಿಗಳಲ್ಲೂ ಪಾರ್ಟಿ ಮಾಡಬಹುದು

    ನವದೆಹಲಿ: ದೊಡ್ಡ ಹೋಟೆಲ್‍ಗಳು, ರೆಸ್ಟೋರೆಂಟ್‍ಗಳಲ್ಲಿ ಪಾರ್ಟಿ ಮಾಡಿ ಬೋರ್ ಆಗಿದ್ರೆ,  ಇನ್ಮುಂದೆ ನೀವೂ ಮೆಟ್ರೋ ರೈಲು ಬೋಗಿಗಳಲ್ಲೂ ಶುಭ ಸಮಾರಂಭಗಳು, ಸಣ್ಣಪುಟ್ಟ ಪಾರ್ಟಿಗಳನ್ನು ಮಾಡಬಹುದು. ಅಚ್ಚರಿ ಎನಿಸಿದರೂ ಇಂತಹದೊಂದು ವಿನೂತನ ಪ್ರಯತ್ನಕ್ಕೆ ನೊಯ್ಡಾ ಮೆಟ್ರೋ ರೈಲು ನಿಗಮ ಮುಂದಾಗಿದೆ.

    ನೊಯ್ಡಾ ಮೆಟ್ರೋ ರೈಲು ನಿಗಮ (ಎನ್‌ಎಂಆರ್‌ಸಿ) ಬರ್ತ್ ಡೇ ಪಾರ್ಟಿ, ಪ್ರೀ ವೆಡ್ಡಿಂಗ್ ಪಾರ್ಟಿ ಇತರೆ ಚಿಕ್ಕಪುಟ್ಟ ಶುಭ ಕಾರ್ಯಕ್ರಮಗಳನ್ನು ರೈಲು ಬೋಗಿಯಲ್ಲಿ ಆಯೋಜಿಸಲು ಮುಂದಾಗಿದೆ. ಗಂಟೆಗಳ ಲೆಕ್ಕದಲ್ಲಿ ಸಾರ್ವಜನಿಕರಿಗೆ ಬಾಡಿಗೆ ಕೊಡಲು ಎನ್‌ಎಂಆರ್‌ಸಿ ನಿರ್ಧರಿಸಿದೆ.

    ಹೊಸ ಆದಾಯದ ಮೂಲ ಹುಡುಕಲು ಪ್ರಯತ್ನಿಸಿರುವ ಎನ್‌ಎಂಆರ್‌ಸಿ ಪ್ರತಿ ಗಂಟೆಗೆ 5 ರಿಂದ 10 ಸಾವಿರಕ್ಕೆ ಮೆಟ್ರೋ ಬೋಗಿಗಳನ್ನು ಬಾಡಿಗೆ ನೀಡಲು ನಿರ್ಧರಿಸಿದೆ. ಸಂಚಾರಿ ಮೆಟ್ರೋ ಅಥವಾ ನಿಗದಿತ ಸ್ಥಳದಲ್ಲಿ ನಿಂತ ಮೆಟ್ರೋ ಬೋಗಿಗಳನ್ನು ಬಾಡಿಗೆ ನೀಡಲು ಸಿದ್ಧವಾಗಿದ್ದು ಪಾರ್ಟಿಯಲ್ಲಿ ಗರಿಷ್ಠ 50 ಮಂದಿಗೆ ಮಾತ್ರ ಭಾಗವಹಿಸಲು ಷರತ್ತು ವಿಧಿಸಿದೆ.

    ನಿಗದಿತ ಸ್ಥಳದಲ್ಲಿ ನಿಂತ ಮೆಟ್ರೋದಲ್ಲಿ ಪಾರ್ಟಿ ಮಾಡಲು 5,000, ಸಂಚಾರಿ ಮೆಟ್ರೋ ಬೋಗಿ ಬಳಕೆಗೆ 8,000, ಅಲಂಕೃತ ಸಂಚಾರಿ ಮೆಟ್ರೋಗಾಗಿ 10,000 ಹಾಗೂ ಅಲಂಕೃತ ಸಂಚಾರ ರಹಿತ ಮೆಟ್ರೋ ಬೋಗಿಗಾಗಿ 7,000 ಬಾಡಿಗೆ ನಿಗದಿ ಮಾಡಿದೆ. ಮೆಟ್ರೋ ಬೋಗಿ ಬಾಡಿಗೆ ಪಡೆಯಲು ಇಚ್ಛಿಸುವವರು 15 ದಿನಗಳ ಮೊದಲು ಕಾರ್ಯಕ್ರಮದ ವಿವರಗಳೊಂದಿಗೆ ಬುಕ್ ಮಾಡಬೇಕಿದೆ.

    ಸಂಚಾರಿ ಮೆಟ್ರೋ ಬೋಗಿಗಾಗಿ ಯಾವುದೇ ಸಮಯವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಸ್ಥಿರ ಮೆಟ್ರೋ ಬೋಗಿಗಾಗಿ ರಾತ್ರಿ 11 ರಿಂದ 2 ಗಂಟೆಯ ನಡುವೆ ಬುಕ್ಕಿಂಗ್ ಮಾಡಿಕೊಳ್ಳಬಹುದು. ಮೆಟ್ರೋ ಬೋಗಿ ಕಾಯ್ದಿರಿಸಲು 20,000 ರೂಪಾಯಿ ಮುಂಗಡ ಹಣ ಪಾವತಿಸಬೇಕಿದ್ದು ಕಾರ್ಯಕ್ರಮದ ಬಳಿಕ ಎನ್‌ಎಂಆರ್‌ಸಿ ವಾಪಸ್ ನೀಡಲಿದೆ.