Tag: party

  • ರಾತ್ರಿ ಫುಲ್ ಪಾರ್ಟಿ- ಎಣ್ಣೆ ಮತ್ತಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

    ರಾತ್ರಿ ಫುಲ್ ಪಾರ್ಟಿ- ಎಣ್ಣೆ ಮತ್ತಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

    ಬೆಂಗಳೂರು: ಸ್ನೇಹಿತರಿಬ್ಬರು ರಾತ್ರಿ ಫುಲ್ ಪಾರ್ಟಿ ಮಾಡಿದ್ದು, ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಡಿಜೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಪ್ರಶಾಂತ್ ತನ್ನ ಸ್ನೇಹಿತ ನಿತೇಶ್ ನನ್ನು ಕೊಲೆ ಮಾಡಿದ್ದಾನೆ. ರಾತ್ರಿ ಇಬ್ಬರೂ ಒಟ್ಟಿಗೆ ಪಾರ್ಟಿ ಮಾಡಿದ್ದು, ಪಾರ್ಟಿ ಬಳಿಕ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿದೆ. ಈ ವೆಳೆ ನಿತೇಶ್ ಸ್ನೇಹಿತ ಪ್ರಶಾಂತ್ ಗೆ ಕಾಲಿನಿಂದ ಒದ್ದಿದ್ದ. ಕಾಲಿನಿಂದ ಒದ್ದ ಬಳಿಕ ಇಬ್ಬರು ಒಟ್ಟಿಗೆ ಮಲಗಿದ್ದರು. ಮಲಗಿ ಸ್ವಲ್ಪ ಸಮಯದ ನಂತರ ಕೋಪಗೊಂಡು ಮತ್ತೆ ಎಚ್ಚರಗೊಂಡಿದ್ದ ಪ್ರಶಾಂತ್, ನನಗೇ ಒದೆಯುತ್ತೀಯಾ ಎಂದು ಹಾಲೊ ಬ್ರಕ್ಸ್ ಎತ್ತಿ ನಿತೇಶ್ ತಲೆಮೇಲೆ ಹಾಕಿದ್ದಾನೆ. ಪರಿಣಾಮ ನಿತೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಕಾಮುಕ ವೃದ್ಧನಿಂದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ

    ಸ್ಥಳಕ್ಕೆ ಡಿಜೆಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪರಾರಿಯಾಗುತ್ತಿದ್ದ ಪ್ರಶಾಂತ್ ನನ್ನು ಡಿಜೆಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

  • ರಾಜಕಾರಣದಲ್ಲಿ ಸಿದ್ದರಾಮಯ್ಯ ನನ್ನ ಬದ್ಧ ವಿರೋಧಿ, ವೈಯುಕ್ತಿಕವಾಗಿ ಗೌರವವಿದೆ: ಶ್ರೀರಾಮುಲು

    ರಾಜಕಾರಣದಲ್ಲಿ ಸಿದ್ದರಾಮಯ್ಯ ನನ್ನ ಬದ್ಧ ವಿರೋಧಿ, ವೈಯುಕ್ತಿಕವಾಗಿ ಗೌರವವಿದೆ: ಶ್ರೀರಾಮುಲು

    ಚಿತ್ರದುರ್ಗ: ರಾಜಕಾರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನನ್ನ ಬದ್ಧ ವಿರೋಧಿ. ಆದರೆ ವೈಯುಕ್ತಿಕವಾಗಿ ಅವರೊಬ್ಬ ಹಿಂದುಳಿದ ವರ್ಗಗಳ ನಾಯಕ ಎಂಬ ಗೌರವವಿದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

    ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು ಹಿರೇಹಳ್ಳಿ ಗ್ರಾಮದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಕುರಿತ ಸಭೆ ಬಳಿಕ ಮಾತನಾಡಿದ ಶ್ರೀರಾಮುಲು ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ನಾವೆಲ್ಲಾ ಹಿಂದುಳಿದ ಸಮಾಜದಿಂದ ಬಂದವರು. ಸಿದ್ದರಾಮಯ್ಯ ಹಿಂದುಳಿದ ಸಮಾಜದ ದೊಡ್ಡ ನಾಯಕರು. ಅನೇಕ ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿರುವಂತಹ ವ್ಯಕ್ತಿ. ಅಂಥವರಿಗೆ ಗೌರವ ಕೊಡುವುದು ನಮ್ಮ ಸಂಪ್ರದಾಯ. ನಾನು ಸಿದ್ದರಾಮಯ್ಯ ಅವರನ್ನು ಗೌರವಿಸುತ್ತೇನೆ. ಆದರೆ ರಾಜಕಾರಣ ಅಂತ ಬಂದ ಸಮಯದಲ್ಲಿ ವಿರೋಧಿಸುತ್ತೇನೆ. ಅದರಲ್ಲಿ ಬೇರೆ ಪ್ರಶ್ನೆ ಇಲ್ಲ, ರಾಜಕಾರಣದಲ್ಲಿ ನಮ್ಮ ಪಕ್ಷ ಸಿದ್ಧಾಂತ ನಮ್ಮದು, ಅವರ ಪಕ್ಷ ಸಿದ್ಧಾಂತ ಅವರದ್ದು. ಆದರೆ ವ್ಯಕ್ತಿತ್ವ ಮತ್ತು ಹಿಂದುಳಿದ ಸಮಾಜದ ವಿಚಾರದಲ್ಲಿ ಅವರಿಗೆ ಆತ್ಮೀಯವಾಗಿ ಗೌರವ ನೀಡುತ್ತೇವೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಬಾದಾಮಿ ಜನ ಒಳ್ಳೆಯವರು, ಚಾಮುಂಡೇಶ್ವರಿ ಜನ ಸೋಲಿಸಿಬಿಟ್ರು: ಸಿದ್ದರಾಮಯ್ಯ

    ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಾಮಾನ್ಯವಾಗಿ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದು ಸಿಎಂ ಅಭ್ಯರ್ಥಿಗಳು. ಇಲ್ಲ ಅಂದ್ರೆ ನೆಹರು ಕುಟುಂಬದವರು ಅಥವಾ ದೊಡ್ಡ ದೊಡ್ಡ ವ್ಯಕ್ತಿಗಳು ಮಾತ್ರ ಸ್ಪರ್ಧಿಸುತ್ತಾರೆ. ಆದರೆ ಭಾರತೀಯ ಜನತಾ ಪಾರ್ಟಿಯು ಒಬ್ಬ ಸಾಮಾನ್ಯ ಕಾರ್ಯಕರ್ತ ಹಾಗೂ ವಾಲ್ಮೀಕಿ ಸಮಾಜದ ನನಗೆ ಎರಡು ಕಡೆ ಸ್ಪರ್ಧೆ ಮಾಡಲು ನನಗೆ ಅವಕಾಶ ನೀಡಿತ್ತು. ಆದರೆ ಬಾದಾಮಿಯಲ್ಲಿ ಬಹಳ ಕಡಿಮೆ ಮತಗಳಿಂದ ನಾನು ಸೋತಿದ್ದು, ಯಾರು ಯಾವಾಗ ಎಲ್ಲಿ ಜಯಶೀಲರು ಆಗುತ್ತಾರೆ ಎಂದು ಹೇಳೊಕೆ ಆಗುವುದಿಲ್ಲ. ಅಲ್ಲಿ ಸಿದ್ದರಾಮಯ್ಯ ಅವರ ನಸೀಬು ಚೆನ್ನಾಗಿತ್ತು. ಅವರ ಕ್ಷೇತ್ರದಲ್ಲಿ ಸೋತು ಬಾದಾಮಿಯಲ್ಲಿ ಗೆದ್ದರು. ಈಗ ಮತ್ತೆ ಬಾದಾಮಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಲಿ, ಆದರೆ ನಾನು ಸ್ಪರ್ಧೆ ಮಾಡುವ ವಿಚಾರವನ್ನು ಆಯಾ ಸಂದರ್ಭದಲ್ಲಿ ನಮ್ಮ ಪಕ್ಷ ನಿರ್ಧರಿಸಲಿದೆ ಎಂದು ಸ್ಪಷ್ಟನೆ ನೀಡಿದರು.

  • ಕೋವಿಡ್ ರೂಲ್ಸ್ ಬ್ರೇಕ್ ಮಾಡಿ ಪಾರ್ಟಿ – 37 ಮಂದಿ ಬಂಧನ

    ಕೋವಿಡ್ ರೂಲ್ಸ್ ಬ್ರೇಕ್ ಮಾಡಿ ಪಾರ್ಟಿ – 37 ಮಂದಿ ಬಂಧನ

    ಕೋಲ್ಕತ್ತಾ: ಕೋವಿಡ್ ನಿಯಮವನ್ನು ಉಲ್ಲಂಘಿಸಿ ನಗರದ ಫೈ ಸ್ಟಾರ್ ಹೋಟೆಲ್‍ನಲ್ಲಿ ಪಾರ್ಟಿ ಮಾಡುತ್ತಿದ್ದ 37 ಮಂದಿಯನ್ನು ಕೋಲ್ಕತಾ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಗಳು ಕೋವಿಡ್ ನಿಯಮವನ್ನು ಮರೆತು ಹೋಟೆಲ್‍ನ ಎರಡನೇ ಹಾಗೂ ಮೂರನೇ ಮಹಡಿಯಲ್ಲಿ ತಡರಾತ್ರಿ 1.15ಕ್ಕೆ ಪಾರ್ಟಿ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿದ್ದಾರೆ.

    ಈ ವೇಳೆ ಪೊಲೀಸರು ಆರೋಪಿಗಳಿಂದ ಎರಡು ಕಾರು, ಗಾಂಜಾ, ಮದ್ಯದ ಬಾಟಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಘಟನೆ ವೇಳೆ ವ್ಯಕ್ತಿಯೋರ್ವ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಘಟನೆ ಸಂಬಂಧ ಭಾರತೀಯ ದಂಡ ಸಂಹಿತೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಪಶ್ಚಿಮ ಬಂಗಾಳ ಸರ್ಕಾರವು ರಾಜ್ಯವ್ಯಾಪ್ತಿ ಜುಲೈ 15ರವರೆಗೆ ಕೋವಿಡ್ ನಿರ್ಬಂಧಗಳನ್ನು ವಿಸ್ತರಿಸಿದ್ದು, ರಾತ್ರಿ 9ರಿಂದ ಬೆಳಗ್ಗೆ 5ರವರೆಗೂ ಕರ್ಫ್ಯೂ ವಿಧಿಸಿದೆ. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಯಾವುದೇ ಚಟುವಟಿಕೆಗಳಿಗೆ ಅನುಮತಿ ನೀಡಲು ಆಗುತ್ತಿಲ್ಲ ಎಂದು ಸೂಚಿಸಿದೆ. ಇದನ್ನೂ ಓದಿ: ಫೇಸ್‍ಬುಕ್ ನಲ್ಲಿ ಪರಿಚಯ – 2.50 ಲಕ್ಷ ರೂ. ಯುವಕನಿಗೆ ಪಂಗನಾಮ

  • ಬಿಜೆಪಿ ಮಾಜಿ ಶಾಸಕ ಎಚ್.ಡಿ ಬಸವರಾಜು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ

    ಬಿಜೆಪಿ ಮಾಜಿ ಶಾಸಕ ಎಚ್.ಡಿ ಬಸವರಾಜು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ

    ಬೆಂಗಳೂರು: ಆಮ್ ಆದ್ಮಿ ಪಕ್ಷದ ತತ್ವ, ಸಿದ್ಧಾಂತಗಳು ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ರವರ ಜನಪರ ಆಡಳಿತವನ್ನು ಮೆಚ್ಚಿ, ಸ್ವಪಕ್ಷ ಬಿಜೆಪಿಯಲ್ಲಿನ ಭ್ರಷ್ಟಾಚಾರ, ಆಂತರಿಕ ಕಿತ್ತಾಟದಿಂದ ಬೇಸತ್ತು ವಿರಾಜಪೇಟೆ ಕ್ಷೇತ್ರದ ಮಾಜಿ ಬಿಜೆಪಿ ಶಾಸಕರಾದ ಎಚ್.ಡಿ ಬಸವರಾಜುರವರು ಇಂದು ಎಎಪಿಯನ್ನು ಸೇರಿದ್ದಾರೆ.

    ಆಮ್ ಆದ್ಮಿ ಪಾರ್ಟಿಯು ಆರಂಭದ ದಿನದಿಂದಲೂ ಪ್ರಾಮಾಣಿಕತೆಯೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದೇ ಮುನ್ನಡೆಯುತ್ತಿದೆ. ಕಳಂಕರಹಿತ ಹಾಗೂ ಪಾರದರ್ಶಕ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಸಾಮಾನ್ಯ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕಾರಣದಿಂದ ಅನೇಕರು ಎಎಪಿಯತ್ತ ಆಕರ್ಷಿತರಾಗುತ್ತಿದ್ದಾರೆ. ದೇಶಾದ್ಯಂತ ಅನೇಕ ಸಾಧಕರು, ಗಣ್ಯ ವ್ಯಕ್ತಿಗಳು ಹಾಗೂ ವಿವಿಧ ಪಕ್ಷಗಳು ಮುಖಂಡರು ನಮ್ಮ ಪಕ್ಷವನ್ನು ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಮಗೆ ಬೆಂಬಲ ವ್ಯಕ್ತವಾಗಲಿದ್ದು, ಕರ್ನಾಟಕದ ಅನೇಕ ಶಾಸಕರು, ಮಾಜಿ ಶಾಸಕರು ಎಎಪಿಯನ್ನು ಸೇರಲಿದ್ದಾರೆ ಎಂದು ಬಸವರಾಜು ತಿಳಿಸಿದರು.

    ಎಚ್.ಡಿ ಬಸವರಾಜುರವರು 1994 ಮತ್ತು 2004ರಲ್ಲಿ ವಿರಾಜಪೇಟೆಯ ಶಾಸಕರಾಗಿ ಉತ್ತಮ ಕೆಲಸಗಳನ್ನು ಮಾಡಿದ ಅನುಭವ ಹೊಂದಿದ್ದಾರೆ. 2005ರಿಂದ 2007ರವರೆಗೆ ಕರ್ನಾಟಕ ಸರ್ಕಾರ ಭರವಸೆಗಳ ಸಮಿತಿಯ ಅಧ್ಯಕ್ಷರಾಗಿ, 2003ರಿಂದ 2005ರ ತನಕ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆರ್ಥಿಕ ಹಾಗೂ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ, 2005ರಿಂದ 2007ರವರೆಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾವಲು ಹಾಗೂ ನಿರ್ವಹಣೆ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವಸ್ಕುಲಾರ್ ಸೈನ್ಸಸ್ ಆ್ಯಂಡ್ ರಿಸರ್ಚ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿ ಹಾಗೂ ಚಿಕ್ಕಮಗಳೂರು ಮತ್ತು ಕೊಡಗು ಗ್ರಾಮೀಣ ಬ್ಯಾಂಕಿನ ನಿರ್ದೇಶಕರಾಗಿ ಕೂಡ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ನಮ್ಮ ತಂದೆಯ ಸಾವನ್ನು ರಾಜಕೀಯ ಮಾಡಬೇಡಿ: ಅಭಿಷೇಕ್ ಅಂಬರೀಶ್ 

    ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಕರ್ನಾಟಕ ಅಹಿಂದ ಪರಿಷತ್‍ನ ಅಧ್ಯಕ್ಷರಾಗಿ ಬಸವರಾಜುರವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮಸ್ತ ಅಹಿಂದ ವರ್ಗದ, ವಿಶೇಷವಾಗಿ ಪರಿಶಿಷ್ಟ ಪಂಗಡದ ಆಶಾಕಿರಣವಾಗಿದ್ದಾರೆ. ದಲಿತರು, ಶೋಷಿತರು, ಬಡವರು, ನೊಂದವರ ಸಹಾಯಕ್ಕಾಗಿ ಜೀವನವನ್ನು ಮುಡಿಪಾಗಿಟ್ಟಿರುವ ಇಂತಹ ಅನುಭವಿ ಹಾಗೂ ಪ್ರಾಮಾಣಿಕ ನಾಯಕ ಎಎಪಿಯನ್ನು ಸೇರಿರುವುದರಿಂದ ಪಕ್ಷಕ್ಕೆ ಆನೆಬಲ ಬಂದಂತಾಗಿದೆ ಎಂದು ಎಎಪಿ ಪಕ್ಷದ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.

  • ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಕಾಂಗ್ರೆಸ್‍ಗೆ ಹೋದ ಗಿರಾಕಿ: ಎಸ್‍ಟಿಎಸ್

    ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಕಾಂಗ್ರೆಸ್‍ಗೆ ಹೋದ ಗಿರಾಕಿ: ಎಸ್‍ಟಿಎಸ್

    ಮೈಸೂರು: ಪಕ್ಷಕ್ಕೆ ದ್ರೋಹ ಬಗೆದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಎಸ್.ಟಿ. ಸೋಮಶೇಖರ್ ಮೈಸೂರಿನಲ್ಲಿ ತಿರುಗೇಟು ನೀಡಿದ್ದಾರೆ.

    ನಾವು 17 ಜನ ಪಕ್ಷ ಸೇರುತ್ತೇವೆ ಎಂದು ಅಪ್ಲಿಕೇಶನ್ ಹಾಕಿದ್ವಾ? ಸಿದ್ದರಾಮಯ್ಯ ಮನೆ ಬಾಗಿಲಿಗೆ ಹೋಗಿದ್ವಾ? ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಕಾಂಗ್ರೆಸ್‍ಗೆ ಹೋದ ಗಿರಾಕಿ, ನಾವು ಯಾರ ಹತ್ತಿರವಾದರು ಪಕ್ಷಕ್ಕೆ ಬರುತ್ತೇವೆ ಅಂತಾ ಹೇಳಿದ್ದೀವಾ ಎಂದು ಪ್ರಶ್ನಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್‍ಟಿಎಸ್, ಬಿಜೆಪಿ ಪಕ್ಷ ನಮ್ಮನ್ನು ಗೌರವಯುತವಾಗಿ ನಡೆಸಿಕೊಂಡಿದೆ. ನಾವು ಗೌರವಯುತವಾಗಿ ಸರ್ಕಾರ ಮತ್ತು ಪಕ್ಷದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ಡಿಕೆಶಿ, ಸಿದ್ದರಾಮಯ್ಯ ಅವರಿಬ್ಬರ ನಡುವೆ ಸಮನ್ವಯತೆ ಇಲ್ಲ. ಒಬ್ಬರು ಹೊಡೆದ ರೀತಿ ಒಬ್ಬರು ಅಳುವ ರೀತಿ ಮಾಡುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಎರಡು ವರ್ಷ ಬಿಟ್ಟು ಡಿಕೆಶಿ ಸಿಎಂ ಆಗ್ತಾರೆ: ನಲಪಾಡ್

    ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಎಸ್.ಟಿ. ಸೋಮಶೇಖರ್ ನನ್ನ ಸಂಪರ್ಕದಲ್ಲಿದ್ದಾರೆ ಹೇಳಿಕೆಗೆ ಉತ್ತರಿಸಿ, ನಾನು ಯಾವತ್ತು ಡಬಲ್ ಗೇಮ್ ರಾಜಕಾರಣ ಮಾಡಿಲ್ಲ. ಹಾದಿಯಲ್ಲಿ ಬೀದಿಯಲ್ಲಿ ಗೌರವಯುತವಾಗಿ ನಡೆದುಕೊಳ್ಳಬೇಕು, ಇದಷ್ಟೇ ನಾನು ಹೇಳಿದ್ದೇನೆ. ಒಂದು ಸೀಟು ಇದ್ದಾಗಲಿಂದಲೂ ಯಡಿಯೂರಪ್ಪ ಹೋರಾಟ ಮಾಡಿದ್ದಾರೆ. ಅದಕ್ಕೆ ಗೌರವ ಕೊಡಿ ಎಂದು ಹೇಳಿದ್ದೇನೆ ಎಂದು ಅಭಿಪ್ರಾಯಪಟ್ಟರು.

  • ಸುಳ್ಳು ಹೇಳುವ ಮಂತ್ರಿ ಸುರೇಶ್ ಕುಮಾರ್: ರೇವಣ್ಣ ಕಿಡಿ

    ಸುಳ್ಳು ಹೇಳುವ ಮಂತ್ರಿ ಸುರೇಶ್ ಕುಮಾರ್: ರೇವಣ್ಣ ಕಿಡಿ

    ಹಾಸನ: ಈ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಬಡವರ ಮಕ್ಕಳಿಗೆ ಶಿಕ್ಷಣ ಕೊಡಲು ಆಗುತ್ತಿಲ್ಲ. ಪ್ರಾಥಮಿಕ ಶಿಕ್ಷಣ ಕುಸಿದು ಹೋಗುತ್ತಿದೆ. ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ವಿರುದ್ಧ ಮಾಜಿ ಸಚಿವ ಹೆಚ್‍ಡಿ ರೇವಣ್ಣ ಕಿಡಿಕಾರಿದ್ದಾರೆ.

    ಸುಳ್ಳು ಹೇಳುವ ಮಂತ್ರಿ ಸುರೇಶ್ ಕುಮಾರ್, ಬರಿ ಬೂರಿ ಬುಡ್ಕಂಡು ಇದ್ದಾರೆ. ನಾವು ಮೊಸಳೆ ಹೊಸಳ್ಳಿ ಶಾಲೆಯನ್ನು ದತ್ತು ಪಡೆಯುತ್ತೇನೆ. ಎಷ್ಟೇ ಖರ್ಚಾಗಲಿ, ಎಲ್ಲಾ ಮಕ್ಕಳಿಗೂ ಎರಡು ಜೊತೆ ಸಮವಸ್ತ್ರ, ಟ್ಯಾಬ್ ಕೊಡುತ್ತೇನೆ. ವಿದ್ಯೆ ದಾನವಾಗಿಲ್ಲ, ವಿದ್ಯೆ ಮಾರಾಟವಾಗಿದೆ ಎಂದು ಹೇಳಿದ್ದಾರೆ.

    ನೊಂದು ಹೇಳುತ್ತಿದ್ದೇನೆ ಇಂದು ವಿದ್ಯಾ ಸಂಸ್ಥೆಗಳು ಮಾರಾಟ ಕೇಂದ್ರವಾಗಿವೆ. ಯಡಿಯೂರಪ್ಪ ಅವರಿಗೆ ಕಣ್ಣು ಕಾಣಲ್ಲ. ಪಾಪ ಅವರ ಪರಿಸ್ಥಿತಿಯೇ ಬೇರೆ ಇದೆ. ಎರಡು ವರ್ಷ ಇರುತ್ತೇನೋ, ಎರಡೂವರೆ ವರ್ಷ ಇರುತ್ತೇನೋ ಅಷ್ಟರೊಳಗೆ ದುಡ್ಡು ಮಾಡ್ಕಂಡು ಹೋಗೋಣ ಎಂಬ ಚಿಂತೆಯಲ್ಲಿ ಯಡಿಯೂರಪ್ಪ ಇದ್ದಾರೆ ಎಂದು ರೇವಣ್ಣ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಆಡಿಯೋ, ವೀಡಿಯೋ, ಫೋನ್ ಟ್ಯಾಪಿಂಗ್ ಕುಮಾರಸ್ವಾಮಿಗೆ ಅಭ್ಯಾಸ ಆಗಿದೆ: ಸುಮಲತಾ

    ಭವಾನಿ ರೇವಣ್ಣ ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಮಾತನಾಡಿದ ಅವರು, ನಾನು ಚುನಾವಣೆಗೆ ಸ್ಪರ್ಧಿಸಲ್ಲ, ಬೇರೆಯವರಿಗೆ ಟಿಕೆಟ್ ಕೊಡಿ ಎಂದಿದ್ದಾರೆ ಭವಾನಿ ರೇವಣ್ಣ. ಪ್ರತಿ ತಾಲೂಕಿಗೆ ಹೋಗಿ ಕಾರ್ಯಕರ್ತರನ್ನು ಕೇಳುತ್ತೇನೆ. ಅವರು ಏನು ಹೇಳುತ್ತಾರೋ ಅವರಿಗೆ ಟಿಕೆಟ್ ಕೊಡುತ್ತೇವೆ. ಈ ಬಗ್ಗೆ ಪಕ್ಷದ ಮುಖಂಡರು ತೀರ್ಮಾನ ಮಾಡುತ್ತಾರೆ ಎಂದರು.

  • ಭ್ರಷ್ಟಾಚಾರಿಗಳ ಪರ ಸಿಎಂ ನಿಂತಿದ್ದಾರೆ: ಎಎಪಿ ಆರೋಪ

    ಭ್ರಷ್ಟಾಚಾರಿಗಳ ಪರ ಸಿಎಂ ನಿಂತಿದ್ದಾರೆ: ಎಎಪಿ ಆರೋಪ

    ಬೆಂಗಳೂರು: ರಾಜ್ಯದ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ರವರ ಆಪ್ತ ಸಹಾಯಕನನ್ನು ಕೋಟ್ಯಾಂತರ ರೂಪಾಯಿಗಳ ಆರ್ಥಿಕ ಅಪರಾಧದಲ್ಲಿ ಬಂಧಿಸಿ ನಂತರ ಮುಖ್ಯಮಂತ್ರಿಗಳ ಒತ್ತಡದಿಂದ ಆರೋಪಿಯನ್ನು ಗೃಹ ಇಲಾಖೆಯ ಬಿಡುಗಡೆ ಮಾಡಿದೆ ಎಂದು ಆಮ್ ಆದ್ಮಿ ಪಕ್ಷ ಸಿಸಿಬಿ ಕಚೇರಿ ಎದುರು ಪ್ರತಿಭಟನೆ ಮಾಡಿದೆ.

    ಮುಖ್ಯಮಂತ್ರಿಗಳು ಹಾಗೂ ಪ್ರಭಾವಿ ಮಂತ್ರಿಗಳು ತಮ್ಮ ಸ್ವೇಚ್ಛಾಚಾರಕ್ಕೆ ಗೃಹ ಇಲಾಖೆಯನ್ನು ದುರ್ಬಳಕೆ ಮಾಡುತ್ತಿರುವುದನ್ನು ಖಂಡಿಸಿ ಸಿಸಿಬಿ ಎದುರು ನಡೆಸಿದ ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಯಿತು.

    ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ ಅವರು ಮಾತನಾಡಿ, ರಾಜ್ಯದಲ್ಲಿ ಜನಸಾಮಾನ್ಯರಿಗೊಂದು ನ್ಯಾಯ ಅಧಿಕಾರಸ್ಥರಿಗೆ ಒಂದು ನ್ಯಾಯ. ಭ್ರಷ್ಟರನ್ನು ಬಂಧಿಸಬೇಕಾದ ಪೊಲೀಸ್ ಇಲಾಖೆಯನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡು ಸಾಂವಿಧಾನಿಕವಾಗಿ ಪ್ರತಿಭಟನೆ ಮಾಡುವ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇದು ಖಂಡನೀಯ ಎಂದು ಕಿಡಿಕಾರಿದರು.

    ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದ ಪಕ್ಷದ ಹಿಂದುಳಿದ ವರ್ಗಗಳ ಅಧ್ಯಕ್ಷ ರಾಜಶೇಖರ್ ದೊಡ್ಡಣ್ಣ ಅವರು ಮಾತನಾಡಿ, ಆರೋಪಿ ಶ್ರೀರಾಮುಲು ಆಪ್ತ ಸಹಾಯಕ ರಾಜಣ್ಣ ಮರು ಬಂಧನ ಆಗಲೇಬೇಕು, ಇದರ ಜೊತೆಗೆ ಮುಖ್ಯಮಂತ್ರಿಗಳ ಮಗ ವಿಜಯೇಂದ್ರರವರ ವಿಚಾರಣೆಯು ಸಹ ಮಾಡಬೇಕು. ನಾವು ಶಾಂತಿಯುತವಾದ ಪ್ರತಿಭಟನೆಯ ಮೂಲಕ ಅಗ್ರಹಿಸಿದರೆ ರಾಜ್ಯ ಸರ್ಕಾರ ಸರ್ವಾಧಿಕಾರಿ ನೀತಿಯನ್ನು ಅನುಸರಿಸಿ ನಾಚಿಕೆ ಬಿಟ್ಟು ಪ್ರತಿಭಟನಾಕಾರರನ್ನು ಬಂಧಿಸಿದೆ ಎಂದು ಆರೋಪಿಸಿದರು. ಇದನ್ನೂ ಓದಿ : ಸಚಿವ ರಾಮುಲು ಪಿಎ ರಾಜಣ್ಣ ಅರೆಸ್ಟ್

    ಆದಾಯ ತೆರಿಗೆ ಇಲಾಖೆ ಜಾರಿ ನಿರ್ದೇಶನಾಲಯಗಳ ಮೂಲಕವೂ ಸಹ ಪ್ರಭಾವಿಗಳ ಅಕ್ರಮಗಳು ಹೊರಬರಬೇಕಿದೆ. ಈ ರೀತಿಯ ಬೃಹತ್ ಹಗರಣವನ್ನು ಮುಚ್ಚಿಹಾಕಲು ಪ್ರಭಾವಿಗಳು ಯತ್ನಿಸುತ್ತಿದ್ದಾರೆ. ಈ ಹಗರಣವದ ನಿಷ್ಪಕ್ಷಪಾತವಾದ ತನಿಖೆಯಾಗಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಘಟಕದ ಅಧ್ಯಕ್ಷ ಬಿ.ಟಿ ನಾಗಣ್ಣ ಆಗ್ರಹಿಸಿದರು.

    ಬೆಂಗಳೂರು ನಗರದ ಮೈಸೂರು ರಸ್ತೆಯಲ್ಲಿ ಇರುವ ಸಿಸಿಬಿ (ಕೇಂದ್ರ ಅಪರಾಧ ದಳ) ಕಚೇರಿಯ ಎದುರು ನಡೆದ ಈ ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಮುಖ್ಯ ವಕ್ತಾರ ಶರತ್ ಖಾದ್ರಿ , ಉಷಾ ಮೋಹನ್, ಪ್ರಕಾಶ್ ನಾಗರಾಜ್, ಶಿಲ್ಪ ಬಿ, ಗೋಪಿನಾಥ್ ಮೊದಲಾದ ಮುಖಂಡರ ಜೊತೆಗೆ ನೂರಾರು ಮಂದಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ಪ್ರತಿಭಟನಾಕಾರರನ್ನು ಈ ಸಂದರ್ಭದಲ್ಲಿ ಬಂಧಿಸಲಾಯಿತು.

  • ಹೊಸ ಪಕ್ಷ ಆರಂಭಿಸುವ ದಿನಾಂಕ ಪ್ರಕಟಿಸಿದ ಜಗನ್ ಸಹೋದರಿ

    ಹೊಸ ಪಕ್ಷ ಆರಂಭಿಸುವ ದಿನಾಂಕ ಪ್ರಕಟಿಸಿದ ಜಗನ್ ಸಹೋದರಿ

    ಹೈದರಾಬಾದ್: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಸಹೋದರಿ ವೈ.ಎಸ್ ಶರ್ಮಿಳಾ ಅವರು ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷ ಆರಂಭವನ್ನು ಘೋಷಣೆ ಮಾಡುವ ದಿನಾಂಕವನ್ನು ಹೇಳಿದ್ದಾರೆ.

    ಜುಲೈ 8 ರಂದು ಹೊಸ ಪಕ್ಷವನ್ನು ತೆಲಂಗಾಣದಲ್ಲಿ ಉದ್ಘಾಟಿಸಲಿದ್ದೇನೆ. ಜುಲೈ 8 ರಂದು ತಂದೆ ದಿ.ವೈ ಎಸ್ ರಾಜಶೇಖರ ರೆಡ್ಡಿಯವರ ಜನ್ಮದಿನದ ವಾರ್ಷಿಕೋತ್ಸವಿದೆ. ಇದೇ ದಿನದಂದು ನಮ್ಮ ಹೊಸ ಪಕ್ಷವನ್ನು ಉದ್ಘಾಟಿಸಲಿದ್ದೇನೆ ಎಂದು ಶರ್ಮಿಳಾ ಖಮ್ಮಂನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ.

    ಭರವಸೆ ನೀಡಿರುವ ಪ್ರಕಾರ, ಸರ್ಕಾರಿ ಉದ್ಯೋಗ ನೀಡುವುದಕ್ಕೆ ಅಧಿಸೂಚನೆ ಹೊರಡಿಸದಿದ್ದಲ್ಲಿ ಏಪ್ರಿಲ್ 15ರಿಂದ ಮೂರು ದಿನಗಳ ಕಾಲ ಹೈದರಾಬಾದ್‍ನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ. ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರದ ಭ್ರಷ್ಟಾಚಾರ ಆರೋಪಗಳನ್ನು ಪ್ರಶ್ನೆ ಮಾಡುವುದಕ್ಕಾಗಿ ನಮ್ಮ ಪಕ್ಷ ಅಗತ್ಯ ಇದೆ. ತೆಲಂಗಾಣ ರಾಜ್ಯ ಸ್ಥಾಪನೆಯಾಗಿ 7 ವರ್ಷ ಆಗಿರಬಹುದು. ಜನರ ಆಶೋತ್ತರಗಳನ್ನು ಈಡೇರಿಸಿಲ್ಲ ಎಂದು ಹೇಳಿದ್ದಾರೆ.

    ತೆಲಂಗಾಣ ರಾಜ್ಯ ಸ್ಥಾಪನೆಗಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ತೆಲಂಗಾಣ ಅಸ್ತಿತ್ವಕ್ಕೆ ಬಂದ ನಂತರವೂ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳನ್ನು ಎಮ್‍ಎಲ್‍ಎಗಳು ಅಥವಾ ಎಂಪಿಗಳು ಭೇಟಿಯಾಗುವ ಅವಕಾಶವೇ ಇಲ್ಲ. ಕಾಂಗ್ರೆಸ್ ಪಾರ್ಟಿ ಕೆಸಿಆರ್ ಜೊತೆಗೆ ಫೈಟ್ ಮಾಡಲು ತಯಾರಿಲ್ಲ. ಬಿಜೆಪಿ ನೀಡಿದ ಭರವಸೆಗಳು ಏನಾದವು? ಅವರು ರೈಲು, ಫ್ಯಾಕ್ಟರಿಯ ಭರವಸೆ ನೀಡಿದ್ದರು. ಅದಿನ್ನೂ ಜಾರಿಗೆ ಬಂದಿಲ್ಲ ಎಂದು ಕಿಡಿಕಾರಿದ್ದಾರೆ.

  • ಪಂಚಾಯಿತಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ, ಫುಲ್ ಟೈಟ್, ಬಾಗಿಲು ಹಾಕದೆ ನಿದ್ದೆಗೆ ಜಾರಿದ್ರು

    ಪಂಚಾಯಿತಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ, ಫುಲ್ ಟೈಟ್, ಬಾಗಿಲು ಹಾಕದೆ ನಿದ್ದೆಗೆ ಜಾರಿದ್ರು

    – ಗ್ರಾಮಸ್ಥರೇ ಕಚೇರಿಗೆ ಬೀಗ ಹಾಕಿದ್ರು

    ಚಿಕ್ಕಮಗಳೂರು: ಗ್ರಾಮ ಪಂಚಾಯಿತಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿ ಬಾಗಿಲನ್ನೂ ಹಾಕದೆ ಬಾಗಿಲ ಬಳಿಯೇ ನಿದ್ದೆಗೆ ಜಾರಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

    ಮಾರ್ಚ್ 7 ಭಾನುವಾರವಾದ್ದರಿಂದ ಗ್ರಾಮ ಪಂಚಾಯಿತಿಯ ವಾಟರ್ ಮ್ಯಾನ್ ಅರುಣ್ ಹಾಗೂ ಅಟೆಂಡರ್ ಅವಿನಾಶ್ ಗ್ರಾಮ ಪಂಚಾಯಿತಿಯಲ್ಲೇ ಸಂಡೇ ಸ್ಪೆಷಲ್ ಡ್ರಿಂಕ್ಸ್ ಪಾರ್ಟಿ ಮಾಡಿದ್ದಾರೆ. ಪಾರ್ಟಿಯ ಬಳಿಕ ಫುಲ್ ಟೈಟ್ ಆದ ಇಬ್ಬರೂ ಗ್ರಾಮ ಪಂಚಾಯಿತಿ ಕಚೇರಿಯ ಬಾಗಿಲನ್ನೂ ಹಾಕಿಲ್ಲ. ಗ್ರಾಮ ಪಂಚಾಯಿತಿಯ ಆವರಣದಲ್ಲಿ ನಿದ್ದೆಗೆ ಜಾರಿದ್ದಾರೆ.

    ರಾತ್ರಿ 11 ಗಂಟೆಯಾದರೂ ಗ್ರಾಮ ಪಂಚಾಯಿತಿ ಬಾಗಿಲು ಹಾಕದ್ದನ್ನ ಗಮನಿಸಿದ ಸ್ಥಳೀಯರು, ಹೋಗಿ ನೋಡಿದ್ದಾರೆ. ಸಿಬ್ಬಂದಿ ನಶೆಯಲ್ಲಿ ತೇಲುತ್ತಿದ್ದು, ಗಾಢ ನಿದ್ದೆಗೆ ಜಾರಿದ್ದರು. ಇದನ್ನು ಕಂಡ ಸ್ಥಳಿಯರೇ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿಕೊಂಡು ಬಂದಿದ್ದಾರೆ. ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಇಬ್ಬರನ್ನೂ ಕೆಲಸದಿಂದ ವಜಾಗಿಳಿಸುವಂತೆ ಆಗ್ರಹಿಸಿದ್ದಾರೆ.

  • ವೈಯಕ್ತಿಕ ಜೀವನದ ಗುಟ್ಟು ಬಿಚ್ಚಿಟ್ಟ ಮಾಧುರಿ ದೀಕ್ಷಿತ್

    ವೈಯಕ್ತಿಕ ಜೀವನದ ಗುಟ್ಟು ಬಿಚ್ಚಿಟ್ಟ ಮಾಧುರಿ ದೀಕ್ಷಿತ್

    ಮುಂಬೈ: ಬಾಲಿವುಡ್ ಎವರ್ ಗ್ರೀನ್ ನಟಿ ಮಾಧುರಿ ದೀಕ್ಷಿತ್ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಮಕ್ಕಳು, ಮೊಮ್ಮಕ್ಕಳಿದ್ದರೂ ಕೂಡ ಮಾಧುರಿ ದೀಕ್ಷಿತ್ ಇಂದಿನ ನಟಿಯರಿಗೆ ಪೈಪೋಟಿ ನೀಡುವಂತ ಸುಂದರ ನಟಿ. ಅಲ್ಲದೆ ಮಾಧುರಿ ದೀಕ್ಷಿತ್ ಫಿಟ್ ನೆಸ್ ಬಗ್ಗೆ ಹೇಳುವುದಾದರೆ ಇಂದಿನ ಯುವತಿಯರು ನಾಚುವಂತೆ ಮೆಂಟೇನ್ ಮಾಡಿದ್ದಾರೆ. ಸಾಮಾಜಿಕ ಜಾಲಾತಾಣಗಳಲ್ಲಿ ಅಷ್ಟಾಗಿ ಹೆಚ್ಚು ಸುದ್ದಿಯಲ್ಲಿರದಿದ್ದರೂ, ಮಾಧುರಿ ತಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನ ಕುರಿತಂತೆ ಅಭಿಮಾನಿಗಳ ಕೆಲ ಪ್ರಶ್ನೆಗಳಿಗೆ ಇನ್‍ಸ್ಟಾಗ್ರಾಮ್ ಮೂಲಕ ಉತ್ತರಿಸಿದ್ದಾರೆ. ಈ ಕುರಿತಂತೆ ನನ್ನ ಬಗ್ಗೆ ತಿಳಿದುಕೊಳ್ಳಬೇಕಾ? ಎಂದು ಕ್ಯಾಪ್ಷನ್ ಹಾಕಿ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಮೊಡಾಕ್‍ನಿಂದ ಸಬುದಾನ ಕಿ ಖಿಚ್ಡಿವರೆಗೂ ನಿಮ್ಮ ಫೇವರಿಟ್ ಫುಡ್ ಯಾವುದು ಎಂದು ಅಭಿಮಾನಿಯೊಬ್ಬರು ಕೇಳಿದ ಮೊದಲ ಪ್ರಶ್ನೆಗೆ, ನಾನು ಮಹಾರಾಷ್ಟ್ರಿಯನ್ ಫುಡ್‍ನನ್ನು ಬಹಳ ಪ್ರೀತಿಸುತ್ತೇನೆ ಎಂದು ಉತ್ತರಿಸಿದ್ದಾರೆ. ನೀವು ಇತ್ತೀಚೆಗೆ ನೋಡಿದ ಸಿನಿಮಾ ಯಾವುದು ಎಂದು ಕೇಳಿದ ಎರಡನೇ ಪ್ರಶ್ನೆಗೆ, ನಾನು ನೆಟ್‍ಫ್ಲಿಕ್ಸ್ ಸಿರಿಸ್‍ನಲ್ಲಿ ಬರುವ ಕ್ವೀನ್ಸ್ ಗ್ಯಾಂಬಿಟ್‍ನನ್ನು ನೋಡಿದೆ ಅದು ನನಗೆ ತುಂಬಾ ಇಷ್ಟವಾಯಿತು ಎಂದರು.

    ಕೊನೆಯದಾಗಿ ನಿಮ್ಮ ಪತಿ ಶ್ರೀರಾಮ್‍ರಲ್ಲಿ ನೀವು ಬಹಳ ಇಷ್ಟಪಡುವ ವಿಚಾರ ಯಾವುದು ಎಂದು ಕೇಳಿದ ಕೊನೆಯ ಪ್ರಶ್ನೆಗೆ, ಮಾಧುರಿ ನಾಚಿ ನಗುತ್ತಾ ನನಗೆ ಅವರಲ್ಲಿರುವ ಪ್ರಾಮಾಣಿಕತೆ ಬಹಳ ಇಷ್ಟ ಎಂದು ಪ್ರತಿಕ್ರಿಯಿಸಿದರು. ಇನ್ನೂ ಏನಾದರೂ ತಿಳಿದುಕೊಳ್ಳಬೇಕಾ? ಎಂದು ಪ್ರಶ್ನಿಸುವ ಮೂಲಕ ಕ್ಯಾಪ್ಷನ್ ಹಾಕಿ ಮಾಧುರಿ ವೀಡಿಯೋವನ್ನು ತಮ್ಮ ಇನ್ ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Madhuri Dixit (@madhuridixitnene)

    ನಟಿ ಮಾಧುರಿ ದೀಕ್ಷಿತ್ ಅಭಿನಯಿಸಿದ್ದ ರಾಮ್ ಲಖಾನ್ ಸಿನಿಮಾ ಬಿಡುಗೆಡೆಯಾಗಿ ಜನವರಿ 27ಕ್ಕೆ 32 ವರ್ಷ ತುಂಬಿದ್ದು, ಹಿಂದೆ ಚಿತ್ರತಂಡದೊಂದಿಗೆ ಕ್ಲಿಕ್ಕಿಸಿಕೊಂಡಿದ್ದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ಅನಿಲ್ ಕಪೂರ್, ಜಾಕಿ ಶ್ರಾಫ್, ಅನುಪಮ್ ಖೇರ್, ಸತೀಶ್ ಕೌಶಿಕ್, ಗುಲ್ಶನ್ ಗ್ರೋವರ್, ಮಾಧುರಿ ಮತ್ತು ರಾಮ್ ಲಖನ್ ಸೇರಿದಂತೆ ನಿರ್ದೇಶಕ ಸುಭಾಷ್ ಘೈ ಕಾಣಿಸಿಕೊಂಡಿದ್ದರು.

     

    View this post on Instagram

     

    A post shared by Madhuri Dixit (@madhuridixitnene)

    ಜೊತೆಗೆ 32 ವರ್ಷ ಪೂರೈಸಿರುವ ಹಿನ್ನೆಲೆ ಪಾರ್ಟಿ ಮಾಡಿರುವ ರಾಮ್ ಲಖನ್ ಸಿನಿಮಾ ತಂಡ, ಈ ಫೋಟೋವನ್ನು ಹಿಂದಿನ ಫೋಟೋ ಜೊತೆ ಕೊಲಾಜ್ ಮಾಡಿ ಶೇರ್ ಮಾಡಿಕೊಂಡಿದೆ.