Tag: party

  • ಗಂಡು ಮಗುವಾಯ್ತು ಅಂತ ಪಾರ್ಟಿ ಕೊಡಿಸಿದವನ ತಲೆ ಬುರುಡೆ ಓಪನ್ ಮಾಡಿದ ಸ್ನೇಹಿತರು!

    ಗಂಡು ಮಗುವಾಯ್ತು ಅಂತ ಪಾರ್ಟಿ ಕೊಡಿಸಿದವನ ತಲೆ ಬುರುಡೆ ಓಪನ್ ಮಾಡಿದ ಸ್ನೇಹಿತರು!

    ಬೆಂಗಳೂರು: ವ್ಯಕ್ತಿಯೊಬ್ಬ ತನಗೆ ಗಂಡು (Boy Baby) ಮಗುವಾಯಿತು ಎಂದು ಸ್ನೇಹಿತರಿಗೆ ಪಾರ್ಟಿ ಕೊಡಿಸಿದ. ಆದರೆ ಆ ಸ್ನೇಹಿತರು ಆತನ ತಲೆ ಬರುಡೆಯನ್ನೇ ಓಪನ್ ಮಾಡಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿ (Bengaluru) ನಲ್ಲಿ ನಡೆದಿದೆ.

    ರಂಗನಾಥ್ ಹಲ್ಲೆಗೊಳಗಾದ ವ್ಯಕ್ತಿ. ತನಗೆ ಗಂಡು ಮಗು ಆದ ಎಂಬ ಖುಷಿಯಲ್ಲಿ ಸ್ನೇಹಿತರಾದ ಮನೋಜ್, ಮಧುಸೂದ್, ಪ್ರಸಾದ್‍ಗೆ ಪಾರ್ಟಿ ಕೊಡಿಸಿದ್ದನು. ಈ ಪಾರ್ಟಿಯಲ್ಲಿ ರಾಜಕೀಯ ಪಕ್ಷದ ವಿಚಾರವಾಗಿ ಭಾರೀ ಚರ್ಚೆ ನಡೆದಿದೆ.

    ಪಾರ್ಟಿ ವೇಳೆ ರಂಗನಾಥ್ ಹಾಗೂ ಸ್ನೇಹಿತರ ನಡುವೆ ರಾಜಕೀಯ ಮಾತನಾಡುವಾಗ ಗಲಾಟೆ ಆಗಿದೆ. ಕಾಂಗ್ರೆಸ್ (Congress) ಪರ ಮಾತನಾಡುತ್ತಿದ್ದ ರಂಗನಾಥ್‍ಗೆ ಸ್ನೇಹಿತರು ಬಿಜೆಪಿ (BJP) ಪರ ಮಾತನಾಡಿಕೊಂಡು ಕಿಚಾಯಿಸಿದ್ದಾರೆ. ಆಗ ರಂಗನಾಥ್ ಹಾಗೂ ಸ್ನೇಹಿತರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ. ಜಗಳ ತಾರಕಕ್ಕೇರಿ ಪಕ್ಕದಲ್ಲಿದ್ದ ಬಿಯರ್ ಬಾಟ್ಲಿಯಿಂದ ರಂಗನಾಥ್ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆಯಿಂದ ತೀವ್ರ ರಕ್ತಸ್ರಾವ ಹಿನ್ನೆಲೆ ರಂಗನಾಥ್‍ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರಂಗನಾಥ್ ಹಾಗೂ ಸ್ನೇಹಿತರು ಸ್ವಿಗ್ಗಿ ಡೆಲಿವರಿ ಬಾಯ್ (Swiggy Deliver Boy) ಆಗಿ ಕೆಲಸ ಮಾಡಿಕೊಂಡಿದ್ದು, ಅಮೃತಹಳ್ಳಿ ಬಳಿ ಇರುವ ಈಶ್ವರ ದೇವಸ್ಥಾನದ ಬಳಿ ರೂಂ ಮಾಡಿಕೊಂಡಿದ್ದರು. ಸದ್ಯ ಹಲ್ಲೆ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಾನು ರಾಜಕಾರಣಕ್ಕೆ ಹೋಗಲಾರೆ : ನಟ ಶಿವರಾಜ್ ಕುಮಾರ್

    ನಾನು ರಾಜಕಾರಣಕ್ಕೆ ಹೋಗಲಾರೆ : ನಟ ಶಿವರಾಜ್ ಕುಮಾರ್

    ತ್ನಿ ಗೀತಾ ಜೊತೆ ಚುನಾವಣಾ (Election) ಪ್ರಚಾರದಲ್ಲಿ ತೊಡಗಿರುವ ನಟ ಶಿವರಾಜ್ ಕುಮಾರ್ (Shivaraj Kumar), ಯಾವುದೇ ಕಾರಣಕ್ಕೂ ಸಕ್ರೀಯ ರಾಜಕಾರಣಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಪತ್ನಿ ಗೀತಾ ಅವರದ್ದು ರಾಜಕಾರಣಿ ಕುಟುಂಬ. ಹಾಗಾಗಿ ಅವರೊಂದಿಗೆ ಪ್ರಚಾರದಲ್ಲಿ ಪಾಲ್ಗೊಂಡಿರುವೆ. ಆಪ್ತರಿಗಾಗಿ ಪ್ರಚಾರ ಮಾಡುವೆ. ಅದರ ಹೊರತಾಗಿ ಅಧಿಕೃತವಾಗಿ ಯಾವುದೇ ಪಕ್ಷವನ್ನು ಸೇರಲಾರೆ ಮತ್ತು ಚುನಾವಣೆಗೂ ನಿಲ್ಲಲಾರೆ ಎಂದಿದ್ದಾರೆ ಶಿವರಾಜ್ ಕುಮಾರ್.

    ಡಾ.ರಾಜ್ ಕುಟುಂಬಕ್ಕೂ ರಾಜಕಾರಣಿಗಳಿಗೂ ನಂಟಿದ್ದರೂ ನೇರವಾಗಿ ಯಾವತ್ತೂ ಅವರು ರಾಜಕಾರಣಿಗಳೊಂದಿಗೆ ಮತ್ತು ಪಕ್ಷದೊಂದಿಗೆ  ಗುರುತಿಸಿಕೊಂಡವರಲ್ಲ. ಸ್ವತಃ ರಾಜ್ ಕುಮಾರ್ ಅವರಿಗೆ ಚುನಾವಣೆಗೆ ನಿಲ್ಲುವಂತೆ ಒತ್ತಡವಿದ್ದರೂ, ಅವರು ಒಪ್ಪಿಕೊಳ್ಳಲಿಲ್ಲ. ಯಾವುದೇ ಪಕ್ಷದ (Party) ಪರವಾಗಿಯೂ ಪ್ರಚಾರ ಮಾಡಿದವರಲ್ಲ. ಅದೇ ಮಾರ್ಗದಲ್ಲೇ ರಾಘವೇಂದ್ರ ರಾಜ್ ಕುಮಾರ್ (Raghavendra Rajkumar) ಮತ್ತು ಪುನೀತ್ (Puneeth) ರಾಜ್ ಕುಮಾರ್ ನಡೆದುಕೊಂಡು ಬಂದವರು. ಆದರೆ, ಗೀತಾ ಅವರನ್ನು ಮದುವೆಯಾದ ನಂತರ ಶಿವಣ್ಣ ಚುನಾವಣೆ ಪ್ರಚಾರಕ್ಕೆ ಇಳಿದಿದ್ದಾರೆ.

    ದೊಡ್ಮನೆ ಸೊಸೆಯಾಗಿ ಬಂಗಾರಪ್ಪನವರ ಪುತ್ರಿ ಗೀತಾ (Geeta) ಬಂದ ನಂತರ, ಸಹೋದರನ ಪರವಾಗಿ ಅವರು ಪ್ರಚಾರಕ್ಕೆ ಹೋದರು. ಸ್ವತಃ ಗೀತಾ ಅವರೇ ಚುನಾವಣೆಗೂ ನಿಂತರು. ಹೀಗಾಗಿ ಅನಿವಾರ್ಯ ಕಾರಣದಿಂದಾಗಿ ಶಿವರಾಜ್ ಕುಮಾರ್ ‍ಪ್ರಚಾರದಲ್ಲಿ ತೊಡಗಲೇಬೇಕಾಯಿತು. ಆದರೆ, ಡಾ.ರಾಜ್ ಕುಟುಂಬ ಮಾತ್ರ ಚುನಾವಣೆಯ ಉಸಾಬರಿಗೆ ಹೋಗಲಿಲ್ಲ. ಸ್ವತಃ ಗೀತಾ ಅವರೇ ಚುನಾವಣೆಗೆ ಸ್ಪರ್ಧಿಸಿದಾಗ ಪುನೀತ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಕೂಡ ಪ್ರಚಾರ ಮಾಡಲಿಲ್ಲ. ಇದನ್ನೂ ಓದಿ:ಹೊಸ ಹೇರ್‌ ಸ್ಟೈಲ್‌ ಮಾಡಿಸಿಕೊಂಡ ನಟಿ ಮೇಘನಾ ರಾಜ್

    ಮೊನ್ನೆಯಷ್ಟೇ ರಾಘವೇಂದ್ರ ರಾಜ್ ಕುಮಾರ್ ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿ, ‘ಶಿವರಾಜ್ ಕುಮಾರ್ ನನ್ನ ಅಣ್ಣ, ಗೀತಾ ನನ್ನ ಅತ್ತಿಗೆ. ಉಳಿದಂತೆ ನನಗೇನೂ ಗೊತ್ತಿಲ್ಲ’ ಎಂದು ಹೇಳುವ ಮೂಲಕ ರಾಜಕಾರಣದಿಂದ ದೂರ ಇದ್ದೇವೆ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದರು. ಹಾಗಾಗಿ ಶಿವರಾಜ್ ಕುಮಾರ್ ಕೂಡ ಸಕ್ರೀಯ ರಾಜಕಾರಣದಲ್ಲಿ ಇರಲಾರೆ ಎನ್ನುವ ಸಂದೇಶ ನೀಡಿದ್ದಾರೆ.

  • ‘ದಿ ಕೇರಳ ಸ್ಟೋರಿ’ ಸಿನಿಮಾಗೆ ಕಾಂಗ್ರೆಸ್ ವಿರೋಧ

    ‘ದಿ ಕೇರಳ ಸ್ಟೋರಿ’ ಸಿನಿಮಾಗೆ ಕಾಂಗ್ರೆಸ್ ವಿರೋಧ

    ಸುದಿಪ್ಟೋ ಸೆನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರಕ್ಕೆ ಕೇರಳದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಮೇ 5 ರಂದು ದೇಶದಾದ್ಯಂತ ರಿಲೀಸ್ ಆಗುತ್ತಿರುವ ಈ ಸಿನಿಮಾವನ್ನು ತಡೆಯುವಂತೆ ಕೇರಳ ಕಾಂಗ್ರೆಸ್ (Congress) ಪಕ್ಷ ಸರಕಾರವನ್ನು ಒತ್ತಾಯಿಸಿದೆ. ಹಸಿ ಸುಳ್ಳುಗಳೇ ತುಂಬಿರುವ ಈ ಸಿನಿಮಾ ಸಮಾಜವನ್ನು ಹಾದಿ ತಪ್ಪಿಸುವುದರಿಂದ ಚಿತ್ರವನ್ನು ರಿಲೀಸ್ ಮಾಡಲು ಬಿಡಬಾರದು ಎಂದು ಮನವಿ ಸಲ್ಲಿಸಿದೆ.

    ಕಾಂಗ್ರೆಸ್ ಜೊತೆಗೆ ಡೆಮಾಕ್ರೆಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (DYFI) ಕೂಡ ವಿರೋಧವನ್ನು ವ್ಯಕ್ತ ಪಡಿಸಿದ್ದು, ಸಂಘ ಪರಿವಾರದವರು ಸೇರಿಕೊಂಡು, ಒಂದು ಸಮುದಾಯದ ವಿರುದ್ಧ ಕೆಟ್ಟ ಅಭಿಪ್ರಾಯ ಹುಟ್ಟುವಂತೆ ಈ ಸಿನಿಮಾವನ್ನು ತೋರಿಸಲು ಹೊರಟಿದ್ದಾರೆ. ಇದು ಕೇರಳ ರಾಜ್ಯಕ್ಕೂ ಅಪಮಾನ ಮಾಡುವಂತಹ ಚಿತ್ರ. ಹಾಗಾಗಿ ಕೂಡಲೇ ಬಿಡುಗಡೆಯನ್ನು ತಡೆಯಬೇಕು ಎಂದು ಮನವಿ ಮಾಡಿವೆ. ಇದನ್ನೂ ಓದಿ:ಛತ್ರಪತಿ ಶಿವಾಜಿಯ ಸೊಸೆ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಫೈನಲ್?‌

    ಎರಡು ದಿನಗಳ ಹಿಂದೆಯಷ್ಟೇ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಲವ್ ಜಿಹಾದ್ ಸುತ್ತಾ ಹೆಣೆದಿರುವ ಕಥಾ ಹಂದರ ಬಿಜೆಪಿಗೆ ಚುನಾವಣೆ ಅಸ್ತ್ರವಾಗಲಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಮೇ 05 ರಂದು ದೇಶದಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಹಲವು ಕಡೆ ವಿಶೇಷ ಪ್ರದರ್ಶನವನ್ನೂ ಆಯೋಜಿಸಲಾಗಿದೆ.

    ಈ ಸಿನಿಮಾದಲ್ಲಿ ಲವ್ ಜಿಹಾದ್ ಜೊತೆಗೆ ಐಸಿಸ್ ಸೇರುವ ಮುನ್ನ ಮಾಡಲಾಗುವ ಬ್ರೈನ್ ವಾಷ್ ಸೇರಿದಂತೆ ಹತ್ತಾರ ವಿಷಯಗಳನ್ನು ಕಥಾಹಂದರದಲ್ಲಿ ಜೋಡಿಸಲಾಗಿದೆಯಂತೆ. ಕೇರಳದ ಯುವತಿಯರ ನಾಪತ್ತೆ ಆದ ಬಳಿಕ ಲವ್ ಜಿಹಾದ್ ಬಲೆ, ಐಸಿಸ್ ಸೇರಿದ ಕಾಲೇಜು ಯುವತಿಯರ ರಿಯಲ್ ಸ್ಟೋರಿಯನ್ನು ತೆರೆಯ ಮೇಲೆ ತಂದಿರೋದಾಗಿ ನಿರ್ದೇಶಕರು ಹೇಳಿದ್ದಾರೆ. ಹೀಗಾಗಿ ಬಿಜೆಪಿ ಪಕ್ಷವು ಈ ವಿಷಯವನ್ನು ಇಟ್ಟುಕೊಂಡು ಹಲವು ಲಾಭಗಳನ್ನು ಪಡೆದುಕೊಳ್ಳಲಿದೆ ಎನ್ನುವುದು ಲೆಕ್ಕಾಚಾರ.

    ಕೇರಳದಿಂದ ವಿದೇಶಕ್ಕೆ ಉದ್ಯೋಗ ಅರಸಿಕೊಂಡು ಹೋದ ಮಹಿಳೆಯ ಕಥೆಯನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ವಿವಾದಿತ (Controversy) ಅಂಶಗಳು ಇವೆ ಎಂದು ವಿರೋಧ ವ್ಯಕ್ತವಾಗಿತ್ತು. ಬುರ್ಖಾ ಧರಿಸಿದ ಪ್ರಧಾನ ಪಾತ್ರಧಾರಿ ‘ನಾನು ಶಾಲಿನಿ, ನರ್ಸ್ ಆಗಿ ಜನಸೇವೆ ಮಾಡಬೇಕು ಅಂತಿದ್ದೆ. ಆದರೆ, ನಾನು ಫಾತಿಮಾ ಆಗಿ ಐಸಿಎಸ್ ಉಗ್ರಸಂಘಟನೆಗೆ ಸೇರಿಕೊಂಡು ಭಯೋತ್ಪಾದಕಿ ಆಗಿದ್ದೇನೆ’ ಈ ರೀತಿಯ ಸಂಭಾಷಣೆ ಇತ್ತು. ಇಂತಹ ಮಾತು ಮತ್ತು ಕಥೆ ವಿವಾದಕ್ಕೀಡಾಗಿತ್ತು.

  • ಸೆಲ್ಫಿ ತೆಗೆದುಕೊಳ್ಳಲು ಮಹಿಳೆಯರಿಗೆ ಒತ್ತಾಯ- 2 ಗುಂಪುಗಳ ನಡುವೆ ಮಾರಾಮಾರಿ

    ಸೆಲ್ಫಿ ತೆಗೆದುಕೊಳ್ಳಲು ಮಹಿಳೆಯರಿಗೆ ಒತ್ತಾಯ- 2 ಗುಂಪುಗಳ ನಡುವೆ ಮಾರಾಮಾರಿ

    ಲಕ್ನೋ: ಹೊಸ ವರ್ಷ (New Year) ಆಚರಣೆ ವೇಳೆ ಕೆಲವು ಪುಂಡರು ಸೆಲ್ಫಿಗಾಗಿ ಮಹಿಳೆಯರನ್ನು (Women) ಬಲವಂತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ (Noida) ಹೌಸಿಂಗ್ ಸೊಸೈಟಿಯಲ್ಲಿ ನಡೆದಿದೆ.

    ಗೌರ್ ಸಿಟಿ ಫಸ್ಟ್ ಅವೆನ್ಯೂ ಸೊಸೈಟಿಯಲ್ಲಿ ನಡೆದ ಹೊಸ ವರ್ಷದ (New Year) ಸಂಭ್ರಮಾಚರಣೆಯಲ್ಲಿ ಗುಂಪೊಂದು ಮಹಿಳೆಯರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದೆ. ಇದರಿಂದಾಗಿ ಕೋಪಗೊಂಡ ಮಹಿಳೆಯ ಪತಿ ಹಾಗೂ ಪುಂಡರ ನಡುವೆ ತೀವ್ರ ವಾಗ್ವಾದ ನಡೆದಿದೆ. ಅಷ್ಟೇ ಅಲ್ಲದೇ ಪುಂಡರಿಂದ ಹಲ್ಲೆಯೂ ನಡೆದಿದೆ.

    ಈ ವೇಳೆ ಅಲ್ಲಿನ ಅಧಿಕಾರಿಗಳು ಮಧ್ಯಪ್ರವೇಶಿಸಿ ಗಲಾಟೆಯನ್ನು ನಿಲ್ಲಿಸಿದರು. ಈ ವೇಳೆ ಇತರ ಕೆಲವು ನಿವಾಸಿಗಳು ಮತ್ತು ಭದ್ರತಾ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಇನ್ನು 15 ದಿನಗಳಲ್ಲಿ ಪಕ್ಷದ ಪ್ರಣಾಳಿಕೆ ರಿಲೀಸ್ – ಜನಾರ್ದನ ರೆಡ್ಡಿ

    ಘಟನೆಗೆ ಸಂಬಂಧಿಸಿ ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ಇದನ್ನೂ ಓದಿ: ಇನ್ನು 15 ದಿನಗಳಲ್ಲಿ ಪಕ್ಷದ ಪ್ರಣಾಳಿಕೆ ರಿಲೀಸ್ – ಜನಾರ್ದನ ರೆಡ್ಡಿ

    Live Tv
    [brid partner=56869869 player=32851 video=960834 autoplay=true]

  • ನ್ಯೂ ಇಯರ್ ಪಾರ್ಟಿ ವೇಳೆ ಕಿರಿಕ್ – ಸ್ನೇಹಿತರಿಂದಲೇ ಯುವಕನ ಕೊಲೆ

    ನ್ಯೂ ಇಯರ್ ಪಾರ್ಟಿ ವೇಳೆ ಕಿರಿಕ್ – ಸ್ನೇಹಿತರಿಂದಲೇ ಯುವಕನ ಕೊಲೆ

    ಚಿಕ್ಕಬಳ್ಳಾಪುರ:  ನ್ಯೂ ಇಯರ್ ಸೆಲೆಬ್ರೇಷನ್ (New Year) ಪಾರ್ಟಿ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಸ್ನೇಹಿತನನ್ನು ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚಿಂತಾಮಣಿ ತಾಲೂಕು ಐಮರೆಡ್ಡಿಹಳ್ಳಿ ಬಳಿ ನಡೆದಿದೆ.

    ದೊಡ್ಡ ಗಂಜೂರು ಗ್ರಾಮದ ನವೀನ್ (30) ಕೊಲೆಯಾದ ಯುವಕ. ಸ್ನೇಹಿತರೆಲ್ಲಾ ಸೇರಿ ಕಳೆದ ರಾತ್ರಿ ದೊಡ್ಡ ಗಂಜೂರು ಗ್ರಾಮದ ಬಳಿ ನ್ಯೂ ಇಯರ್ ಸೆಲೆಬ್ರೇಷನ್ ಸಂಬಂಧ ಕೇಕ್ ಕಟ್ ಮಾಡಿ ಕಂಠಪೂರ್ತಿ ಕುಡಿದು ಮೋಜಿ ಮಸ್ತಿ ಮಾಡಿದ್ದಾರೆ. ಕೇಕ್ ಕಟ್ ಮಾಡಿದ ನಂತರ ಐಮರೆಡ್ಡಿಹಳ್ಳಿ ಗ್ರಾಮದ ಬಳಿ ಇರುವ ಡಾಬಾ ಒಂದರಲ್ಲಿ ಮತ್ತೆ ಮದ್ಯಪಾನ ಮಾಡಿ ಪಾರ್ಟಿ (Party) ಮಾಡಿಕೊಂಡಿದ್ದಾರೆ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದ್ದು ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಪುನೀತ್ ಬಿಯರ್ ಬಾಟಲಿಯಿಂದ ನವೀನ್ ತಲೆಗೆ ಹಲ್ಲೆ ಮಾಡಿದ್ದು ತೀವ್ರ ರಕ್ತಸ್ರಾವವಾಗಿ ನವೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಹೊಸ ವರ್ಷ ಪಾರ್ಟಿ – ಕಟ್ಟಡದಿಂದ ಬಿದ್ದು ಯುವಕ ಸಾವು

    ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮೃತದೇಹವನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಮೂವರು ಆರೋಪಿಗಳಾದ ದೊಡ್ಡ ಗಂಜೂರು ಗ್ರಾಮದ ಅರ್ಜುನ್, ಚೇತನ್, ಹಾಗೂ ಪುನೀತ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಹೊಸ ವರ್ಷಾಚರಣೆ ನಡುವೆ ಮೈಮರೆತ ಪ್ರೇಮಿಗಳು – ರಸ್ತೆ ಬ್ಲಾಕ್‍ಮಾಡಿ ನೋಡ್ಕೊಂಡು ನಿಂತಿದ್ದವರ ಮೇಲೆ ಲಾಠಿಚಾರ್ಜ್

    Live Tv
    [brid partner=56869869 player=32851 video=960834 autoplay=true]

  • ಸ್ನೇಹಿತರನ್ನು ಮೆಚ್ಚಿಸಲು ಪಾರ್ಟಿಗೆ ಗನ್ ತೆಗೆದುಕೊಂಡು ಹೋದ ವ್ಯಕ್ತಿ ಪೊಲೀಸರಿಗೆ ಅತಿಥಿಯಾದ

    ಸ್ನೇಹಿತರನ್ನು ಮೆಚ್ಚಿಸಲು ಪಾರ್ಟಿಗೆ ಗನ್ ತೆಗೆದುಕೊಂಡು ಹೋದ ವ್ಯಕ್ತಿ ಪೊಲೀಸರಿಗೆ ಅತಿಥಿಯಾದ

    ನವದೆಹಲಿ: ಸ್ನೇಹಿತರನ್ನು (Friends) ಮೆಚ್ಚಿಸಲು ವ್ಯಕ್ತಿಯೊಬ್ಬ ತನ್ನ ತಂದೆಯ (Father) ಲೋಡ್ ಮಾಡಿದ್ದ ಗನ್ ಅನ್ನು ಪಾರ್ಟಿಗೆ (Party) ತೆಗೆದುಕೊಂಡು ಹೋಗಿ ಪೊಲೀಸರಿಗೆ ಅತಿಥಿಯಾದ ಘಟನೆ ಉತ್ತರ ದೆಹಲಿಯ ರೂಪ್ ನಗರ ಪ್ರದೇಶದಲ್ಲಿ ನಡೆದಿದೆ.

    ಆರೋಪಿಯನ್ನು ಮೌಜ್‍ಪುರ ನಿವಾಸಿ ಹರ್ಷ (22) ಎಂದು ಗುರುತಿಸಲಾಗಿದೆ. ಹರ್ಷ ತನ್ನ ತಂದೆಯ ಬಳಿ ಇದ್ದ ಗನ್ ಅನ್ನು ಕದ್ದು ತನ್ನ ಸ್ನೇಹಿತರನ್ನು ಮೆಚ್ಚಿಸಲು ಅದರೊಂದಿಗೆ ಪಾರ್ಟಿಗೆ ಹೋಗಿದ್ದ. ಈ ವೇಳೆ ಹರ್ಷ ಗನ್ ಅನ್ನು ಹಿಡಿದುಕೊಂಡು ಓಡಾಡುತ್ತಿರುವುದನ್ನು ಕೆಲವರು ಗಮನಿಸಿ, ಪೊಲೀಸರಿಗೆ ತಿಳಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹರ್ಷನನ್ನು ಬಂಧಿಸಿದ್ದಾರೆ. ಆತನ ಬಳಿಯಿದ್ದ ಗನ್ ಅನ್ನು ವಶಪಡಿಸಿಕೊಂಡಿದ್ದಾರೆ. ಹರ್ಷ ತನ್ನ ಮನೆಯಲ್ಲಿದ್ದ ಗನ್ ಕದ್ದು ತನ್ನ ಸ್ನೇಹಿತರೊಂದಿಗೆ ಶಕ್ತಿ ನಗರದಲ್ಲಿ ಪಾರ್ಟಿಗೆ ಬಂದಿದ್ದ. ಅದಾದ ಬಳಿಕ ಅವರು ಮನೆಗೆ ತೆರಳುತ್ತಿದ್ದಾಗ ಕೆಲವರು ಗಮನಿಸಿ ತಿಳಿಸಿದ್ದಾರೆ ಎಂದು ಎಂದು ಡಿಸಿಪಿ ಹೇಳಿದರು. ಇದನ್ನೂ ಓದಿ: ಇನ್ಮುಂದೆ ಅಫ್ಘಾನ್‌ ವಿದ್ಯಾರ್ಥಿನಿಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣಕ್ಕೂ ಅವಕಾಶವಿಲ್ಲ

    ಹರ್ಷನ ತಂದೆ ಸಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಆತ ಗನ್ ಅನ್ನು ಇಟ್ಟುಕೊಂಡಿದ್ದ. ಘಟನೆಗೆ ಸಂಬಂಧಿಸಿ ಹರ್ಷನ ವಿರುದ್ಧ ಜಾಫ್ರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. (Arrest) ಇದನ್ನೂ ಓದಿ: ಆಸ್ಪತ್ರೆಗೆ ಹೋಗೋ ದಾರಿಯಲ್ಲಿ ಗಾಯಾಳುಗೆ ಮದ್ಯ ನೀಡಿ, ತಾನೂ ಕುಡಿದ ಅಂಬುಲೆನ್ಸ್ ಚಾಲಕ

    Live Tv
    [brid partner=56869869 player=32851 video=960834 autoplay=true]

  • ನ್ಯೂ ಇಯರ್ ಪಾರ್ಟಿಗೆ ಹೋಗಲು ಅಪ್ರಾಪ್ತರಿಂದ ನಕಲಿ ಆಧಾರ್ ಕಾರ್ಡ್

    ನ್ಯೂ ಇಯರ್ ಪಾರ್ಟಿಗೆ ಹೋಗಲು ಅಪ್ರಾಪ್ತರಿಂದ ನಕಲಿ ಆಧಾರ್ ಕಾರ್ಡ್

    ಬೆಂಗಳೂರು: ನ್ಯೂ ಇಯರ್ (New Year) ಸೆಲೆಬ್ರೇಶನ್‍ಗೆ ಈಗಾಗಲೇ ತಯಾರಿ ಶುರುವಾಗಿದ್ದು, ಪಬ್‍ಗಳು ಸಹ ತಯಾರಿ ನಡೆಸಿದೆ. ಈ ಮಧ್ಯೆ 18 ವರ್ಷ ತುಂಬದ ಅಪ್ರಾಪ್ತರು ಪಾರ್ಟಿ ಎಂಜಾಯ್ ಮಾಡಲು ಕಳ್ಳದಾರಿ ಹಿಡಿದಿದ್ದು, ಕಲರ್ ಝೆರಾಕ್ಸ್‌ನ ಫೇಕ್ ಆಧಾರ್ ಕಾರ್ಡ್‍ಗಳನ್ನು (Aadhar Card) ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

    ಬೆಂಗಳೂರಿನಲ್ಲಿ (Bengaluru) ನ್ಯೂ ಇಯರ್ ಸೆಲೆಬ್ರೇಶನ್ ಎಂದ್ರೆ ಎಣ್ಣೆ, ಎಣ್ಣೆ ಜೊತೆಗೆ ಡಿಜೆ ಬೇಕೇ ಬೇಕು. ಇದಕ್ಕಂತಲೇ ಸಿಲಿಕಾನ್ ಸಿಟಿಯ ಪಬ್‍ಗಳು ಈ ವರ್ಷ ಹೊಸ ಹೊಸ ಡಿಜೆ ಪಾರ್ಟಿಗಳನ್ನು ಆಯೋಜನೆ ಮಾಡಿದೆ. ಆದರೆ ಕಳೆದೆರಡು ವರ್ಷದಿಂದ ನ್ಯೂ ಇಯರ್ ಸೆಲೆಬ್ರೇಶನ್ ಮಾಡದ ಕಾರಣ ಈ ವರ್ಷ ನ್ಯೂ ಇಯರ್‌ಗೆ ಯಾವುದೇ ಅಡೆ ತಡೆಗಳು ಇಲ್ಲ. ಹೀಗಾಗಿ ಎಲ್ಲರೂ ಪಾರ್ಟಿ ಮೂಡ್‍ನಲ್ಲಿದ್ದಾರೆ. ಹೀಗೆ ಪಾರ್ಟಿ ಮೂಡ್‍ನಲ್ಲಿ ಇರೋರ ಪೈಕಿ 20 ವರ್ಷದೊಳಗಿನವರು ಕೂಡಾ ಇದ್ದಾರೆ. ಸರ್ಕಾರದ ರೂಲ್ಸ್ ಪ್ರಕಾರ 18 ವರ್ಷದೊಳಗಿನ ಮಕ್ಕಳಿಗೆ ಪಬ್ ಹಾಗೂ ಬಾರ್‌ನೊಳಗೆ ಪ್ರವೇಶ ಇಲ್ಲ. ಒಂದೊಮ್ಮೆ ಪ್ರವೇಶ ನೀಡಿದರೆ ಪಬ್ ಮಾಲೀಕರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ.

    20 ವರ್ಷದ ಮೇಲ್ಪಟ್ಟವರು ಅಂತಾ ಖಾತರಿ ಪಡಿಸಿಕೊಳ್ಳಲು ಪಬ್ ಮಾಲೀಕರು ಆಧಾರ್ ಕಾರ್ಡ್ ಪರಿಶೀಲನೆ ಮಾಡಬೇಕು. ಇದೇ ಕಾರಣಕ್ಕೆ ಈ ಬಾರಿ ನ್ಯೂ ಇಯರ್ ಸೆಲೆಬ್ರೆಶನ್ ಮಾಡಲು ಪಬ್‍ನೊಳಗೆ ಎಂಟ್ರಿ ನೀಡಲು ಬೆಂಗಳೂರಿನ ಮಕ್ಕಳು ಫೇಕ್ ಆಧಾರ್ ಕಾರ್ಡ್‍ಗಳನ್ನು ಮಾಡಿಕೊಂಡಿದ್ದಾರೆ. ಅದನ್ನೇ ಕಲರ್ ಝೆರಾಕ್ಸ್ ಮಾಡಿಸಿಕೊಂಡು ಪಬ್‍ನೊಳಗೆ ಎಂಟ್ರಿ ನೀಡುತ್ತಿದ್ದಾರಂತೆ. ಇದಕ್ಕೆ ಸಂಬಂಧಿಸಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಬಂದಿದ್ದು, ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆಗೆ ಎಚ್ಚರ ವಹಿಸಲು ಸೂಚನೆ ನೀಡಿದೆ.

    ಚರ್ಚ್ ಸ್ಟ್ರೀಟ್ ಹಾಗೂ ಕೋರಮಂಗಲ, ಇಂದಿರಾ ನಗರ ಸೇರಿದಂತೆ ಹಲವೆಡೆ ಸ್ಕೂಲ್ ಹಾಗೂ ಕಾಲೇಜು ಮಕ್ಕಳು ಸ್ಕೂಲ್ ಮುಗಿಸಿಕೊಂಡು ಪಬ್‍ಗಳತ್ತ ಮುಖ ಮಾಡುತ್ತಿದ್ದಾರೆ. ಪಬ್‍ನೊಳಗೆ ಎಂಟ್ರಿ ಕೊಡಲು ಆಧಾರ್ ಕಾರ್ಡ್ ಫೇಕ್ ಮಾಡಿಕೊಂಡು 22-23 ವಯಸ್ಸಿನವರು ಎಂದು ಹೇಳಿಕೊಂಡು ಎಂಟ್ರಿ ಕೊಡುತ್ತಿದ್ದಾರೆ. ಅದರಲ್ಲೂ ನ್ಯೂ ಇಯರ್ ಪಾರ್ಟಿಯೊಳಗೆ ಎಂಟ್ರಿ ಕೊಡುವುದಕ್ಕೆ ಹೆಚ್ಚು ಮಕ್ಕಳು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಪೊಲೀಸ್ ಇಲಾಖೆ ಹಲವು ಪಬ್‍ಗಳ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಇತ್ತ ಅಬಕಾರಿ ಇಲಾಖೆಯ ಅಧಿಕಾರಿಗಳು ಕೂಡಾ 18 ವರ್ಷದೊಳಗಿನ ಮಕ್ಕಳಿಗೆ ಪಬ್‍ನೊಳಗೆ ಎಂಟ್ರಿ ಕೊಟ್ಟರೇ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಹೆಚ್ಚಾಗ್ತಿದೆ ನಕಲಿ ವೈದ್ಯರ ಹಾವಳಿ – ಸಾವಿರಕ್ಕೂ ಹೆಚ್ಚು ಡೂಪ್ಲಿಕೇಟ್ ಡಾಕ್ಟರ್ಸ್!

    ಸ್ಕೂಲ್‍ಗೆ ಹೋಗಿ ಮನೆಗೆ ಬರುವ ಮಕ್ಕಳು ಎಣ್ಣೆ ಹೊಡೆದುಕೊಂಡು ಬರುತ್ತಿರುವ ಬಗ್ಗೆ ಪೋಷಕರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಕೂಡಾ ಬಂದಿದೆ. ಹೀಗಾಗಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆಗೆ ಪಬ್ ಹಾಗೂ ಬಾರ್‌ಗಳ ಮೇಲೆ ಹದ್ದಿನಕಣ್ಣಿಡಲು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ಅಧಿಕಾರಿಗಳಿಗೆ ಮಚ್ಚು ತೋರಿಸಿದ ಪ್ರಕರಣ – ದಂಪತಿ ವಿರುದ್ಧ ರೌಡಿಶೀಟರ್ ಕೇಸ್ ಹಾಕಿ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ಪಾರ್ಟಿ ಪ್ರಿಯರಿಗಾಗಿ ‘ಶುಗರ್ ಫ್ಯಾಕ್ಟರಿ’ಯಲ್ಲಿ ಒಂದು ಸಾಂಗ್

    ಪಾರ್ಟಿ ಪ್ರಿಯರಿಗಾಗಿ ‘ಶುಗರ್ ಫ್ಯಾಕ್ಟರಿ’ಯಲ್ಲಿ ಒಂದು ಸಾಂಗ್

    ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ “ಶುಗರ್ ಫ್ಯಾಕ್ಟರಿ” ಚಿತ್ರ  ಆರಂಭದ ದಿನದಿಂದಲೂ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಇತ್ತೀಚಿಗೆ ಈ ಚಿತ್ರದ ಟೈಟಲ್ ಟ್ರ್ಯಾಕ್  ಮಂತ್ರಿಮಾಲ್ ನಲ್ಲಿ ಬಿಡುಗಡೆಯಾಯಿತು. ಅಲ್ಲಿ ನೆರದಿದ್ದ ಅಪಾರ ಜನಸ್ತೋಮ ಶೀರ್ಷಿಕೆ ಹಾಡು ಬಿಡುಗಡೆಗೆ ಸಾಕ್ಷಿಯಾದರು. ಅಲ್ಲಿದ್ದ ಆರು ಜನ ಸಿನಿಪ್ರೇಕ್ಷಕರೆ, ಈ ಹಾಡನ್ನು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.  ಚಿತ್ರದಲ್ಲಿ ನಾಯಕ ಹಾಗೂ ನಾಯಕಿ ಪಾರ್ಟಿಯಲ್ಲಿ ಹಾಡಿ, ಕುಣಿಯುವ ಈ ಹಾಡು,‌ ಪಾರ್ಟಿ ಪ್ರಿಯರಿಗೆ ಸರ್ವಕಾಲಕ್ಕೂ ಮೆಚ್ಚುಗೆಯ ಗೀತೆಯಾಗಲಿದೆ. ತಮ್ಮ ವಿಶಿಷ್ಟ ಕಂಠದ ಮೂಲಕ ಜನಪ್ರಿಯರಾಗಿರುವ ಚಂದನ್ ಶೆಟ್ಟಿ, ಈ ಹಾಡನ್ನು ಬರೆದು ಹಾಡಿದ್ದಾರೆ. ರುಚಿರ ವೈದ್ಯ English rap ಗೆ ದ್ವನಿಯಾಗಿದ್ದಾರೆ.  ಕಬೀರ್ ರಫಿ ಸಂಗೀತ ನೀಡಿದ್ದಾರೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಹಾಡು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ನಟಿ ಅಮೂಲ್ಯ, ಜಗದೀಶ್ (ಅಮೂಲ್ಯ ಪತಿ) ಹಾಗೂ ರಾಜಕೀಯ ಮುಖಂಡರಾದ ರಾಮಚಂದ್ರಪ್ಪ ಅವರು ಸಮಾರಂಭಕ್ಕೆ ಆಗಮಿಸಿ, ಚಿತ್ರತಂಡಕ್ಕೆ ಶುಭ ಕೋರಿದರು.

    ಇದು ನನ್ನ ಸಿನಿ ಜರ್ನಿಯ ಬಿಗ್ ಬಜೆಟ್ ಚಿತ್ರ ಎನ್ನಬಹುದು. ನಿಜಜೀವನದಲ್ಲಿ ಪಾರ್ಟಿ ಮಾಡದ ನನ್ನ ಹತ್ತಿರ, ಈ ಚಿತ್ರದಲ್ಲಿ ಭರ್ಜರಿ ಪಾರ್ಟಿ ಮಾಡಿಸಿ, ಸಖತಾಗಿ ಕುಣಿಸಿದ್ದಾರೆ. ಚಂದನ್ ಶೆಟ್ಟಿ ಅವರ ಗಾಯನ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು ನಾಯಕ ಡಾರ್ಲಿಂಗ್ ಕೃಷ್ಣ. ಇದನ್ನೂ ಓದಿ:  ಹಿರಿಯ ನಿರ್ದೇಶಕ ಭಗವಾನ್ ಆರೋಗ್ಯ ಸ್ಥಿತಿ ಗಂಭೀರ: ಆಸ್ಪತ್ರೆಗೆ ದಾಖಲು

    “ಶುಗರ್ ಫ್ಯಾಕ್ಟರಿ” ಈಗಿನ‌ ಜನರೇಶನ್ ಗೆ ಹೇಳಿಮಾಡಿಸಿದ ಕಥೆ. ಕಾಲೇಜು ವಿದ್ಯಾರ್ಥಿಗಳಿಗೆ ಈ ಚಿತ್ರ ಮತ್ತಷ್ಟು ಹತ್ತಿರವಾಗಲಿದೆ. ನಾವು ಆರಂಭದಲ್ಲಿ ಅಂದು ಕೊಂಡಿದ್ದೆ ಬೇರೆ. ಈಗ ಆಗಿರುವ ಬಜೆಟ್ ಬೇರೆ. ನನ್ನ ಈ ಕನಸನ್ನು ನನಸು ಮಾಡಿದ ನಿರ್ಮಾಪಕ ಗಿರೀಶ್ ಅವರಿಗೆ ಹಾಗೂ ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ನನ್ನ ಇಡೀ ತಂಡಕ್ಕೆ ತುಂಬು ಹೃದಯದ ಧನ್ಯವಾದ ಎಂದರು ನಿರ್ದೇಶಕ ದೀಪಕ್ ಅರಸ್.

    ನಿರ್ಮಾಪಕ ಗಿರೀಶ್ ಅವರು ಹಾಡು ಹಾಗೂ ಚಿತ್ರ ಚೆನ್ನಾಗಿ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಸಂಗೀತ ನಿರ್ದೇಶಕ ಕಬೀರ್ ರಫಿ ಹಾಡುಗಳ ಬಗ್ಗೆ ಮಾಹಿತಿ ನೀಡಿದರು. ನಾಯಕಿಯರಾದ ಸೋನಾಲ್ ಮೊಂತೆರೊ, ಅದ್ವಿತಿ ಶೆಟ್ಟಿ , ಶಿಲ್ಪ ಶೆಟ್ಟಿ ಮತ್ತು ಚಿತ್ರದಲ್ಲಿ ನಟಿಸಿರುವ ಶಶಿ ಹಾಗೂ ಮಹಂತೇಶ್ “ಶುಗರ್ ಫ್ಯಾಕ್ಟರಿ” ಬಗ್ಗೆ ಮಾತನಾಡಿದರು.

    Live Tv
    [brid partner=56869869 player=32851 video=960834 autoplay=true]

  • ಜೊತೆಯಲ್ಲೇ ಪಾರ್ಟಿ – ಸ್ನೇಹಿತರಿಂದಲೇ ಯುವಕನ ಬರ್ಬರ ಹತ್ಯೆ?

    ಜೊತೆಯಲ್ಲೇ ಪಾರ್ಟಿ – ಸ್ನೇಹಿತರಿಂದಲೇ ಯುವಕನ ಬರ್ಬರ ಹತ್ಯೆ?

    ಬೆಂಗಳೂರು/ನೆಲಮಂಗಲ: ಜೊತೆಯಲ್ಲಿಯೇ ಪಾರ್ಟಿ ಮಾಡಿ ಯುವಕನೋರ್ವನನ್ನು ಸ್ನೇಹಿತರೇ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರು (Bengaluru) ಹೊರವಲಯ ಉತ್ತರ ತಾಲೂಕಿನ ಮಾಗಡಿ (Magadi) ರಸ್ತೆಯ ಮಾಚೋಹಳ್ಳಿಯಲ್ಲಿ (Machohalli) ನಡೆದಿದೆ.

    ಮೃತ ದುರ್ದೈವಿಯನ್ನು ತಮಿಳುನಾಡು (Tamilnadu) ಮೂಲದ ನಟರಾಜು (35) ಎಂದು ಗುರುತಿಸಲಾಗಿದೆ. ಮಹದೇವ್ ಎಂಬವರ ಬಿಲ್ಡಿಂಗ್ ಮೇಲೆ ನಟರಾಜು ಹತ್ಯೆಗೈಯಲಾಗಿದೆ. ಮೃತ ನಟರಾಜು ಇತ್ತೀಚಿಗೆ ಅಷ್ಟೇ ತಮಿಳುನಾಡಿನಿಂದ ಬೆಂಗಳೂರಿಗೆ ಉದ್ಯೋಗ ಹರಸಿ ಬಂದಿದ್ದರು ಎನ್ನಲಾಗುತ್ತಿದೆ. ಲಾರಿ ಪಾರ್ಕಿಂಗ್‍ನಲ್ಲಿ ಕ್ಯಾರಿಯರ್ ಕೆಲಸ ಮಾಡಿಕೊಂಡಿದ್ದು ರಾತ್ರಿ ಸ್ನೇಹಿತರೊಂದಿಗೆ ನಟರಾಜು ಪಾರ್ಟಿ ಮಾಡಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಅವರನ್ನು ಸ್ನೇಹಿತರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಕೇಸರಿ ರಾಜಕೀಯ ಬಣ್ಣವಾಗೋದು ಬೇಡ – ಸರ್ಕಾರಕ್ಕೆ ಶ್ರೀನಿವಾಸ್ ಪ್ರಸಾದ್ ಸಲಹೆ

    ಮೃತದೇಹವನ್ನು ಕಂಡ ಜನ ಮಾದನಾಯಕನಹಳ್ಳಿ (Madanayakanahalli) ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಕೂಡಲೇ ನೆಲಮಂಗಲ ಉಪವಿಭಾಗ ಡಿವೈಎಸ್‍ಪಿ. ಕೆ.ಸಿ.ಗೌತಮ್ ಹಾಗೂ ಮಾದನಾಯಕನಹಳ್ಳಿ ಇನ್ಸ್‌ಪೆಕ್ಟರ್ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಟಿಕೆಟ್‍ಗಾಗಿ ಕಾಂಗ್ರೆಸ್‍ನಲ್ಲಿ ಬಣ ಬಡಿದಾಟ – ಪ್ರಮುಖ ಕ್ಷೇತ್ರಗಳಿಗೆ ಸಿದ್ದು, ಡಿಕೆ ಬೆಂಬಲಿಗರ ಅರ್ಜಿ

    Live Tv
    [brid partner=56869869 player=32851 video=960834 autoplay=true]

  • ಹೊಸ ರಾಜಕೀಯ ಪಕ್ಷದ ಹೆಸರು ಘೋಷಿಸಿದ ಗುಲಾಂ ನಬಿ ಅಜಾದ್

    ಹೊಸ ರಾಜಕೀಯ ಪಕ್ಷದ ಹೆಸರು ಘೋಷಿಸಿದ ಗುಲಾಂ ನಬಿ ಅಜಾದ್

    ಶ್ರೀನಗರ: ಹಿರಿಯ ರಾಜಕೀಯ ಮುಖಂಡ, ಜಮ್ಮು ಮತ್ತು ಕಾಶ್ಮೀರದ (Jammu And Kashmir) ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ (Ghulam Nabi Azad) ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದಾರೆ. ‘ಡೆಮಾಕ್ರಟಿಕ್ ಆಜಾದ್ ಪಾರ್ಟಿ’ (Democratic Azad Party) ಹೆಸರಿನ ಪಕ್ಷವನ್ನು ಘೋಷಣೆ ಮಾಡಿ ಅದರ ಧ್ವಜವನ್ನು ಇಂದು ಬಿಡುಗಡೆ ಮಾಡಿದ್ದಾರೆ.

    ಜಮ್ಮುವಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷದ ಸಿದ್ಧಾಂತವು ಅವರ ಹೆಸರಿನಂತೆ ಇರುತ್ತದೆ. ಇಲ್ಲಿ ಎಲ್ಲಾ ಜಾತ್ಯತೀತ ಜನರು ಸೇರಬಹುದು ಎಂದು ಪಕ್ಷದ ಕಾರ್ಯಸೂಚಿಯನ್ನು ಸ್ಪಷ್ಟಪಡಿಸಿದ್ದರು. ಹೊಸ ಪಕ್ಷ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯತ್ವವನ್ನು ಮರುಸ್ಥಾಪಿಸುವುದು, ಸ್ಥಳೀಯ ಜನರಿಗೆ ಭೂಮಿ ಮತ್ತು ಉದ್ಯೋಗದ ಹಕ್ಕುಗಳನ್ನು ಪಡೆಯಲು ಹೋರಾಟವನ್ನು ಮುಂದುವರಿಸುವುದನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಮ್ಮನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ: ಅಮೆರಿಕಗೆ ನೇರವಾಗಿ ಜೈಶಂಕರ್ ತಿರುಗೇಟು

    ತಮ್ಮ ಧ್ವಜದಲ್ಲಿರುವ ಹಳದಿ ಬಣ್ಣವು ಸೃಜನಶೀಲತೆ ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ಸೂಚಿಸುತ್ತದೆ. ಬಿಳಿ ಶಾಂತಿಯನ್ನು ಸೂಚಿಸುತ್ತದೆ ಮತ್ತು ನೀಲಿ ಸ್ವಾತಂತ್ರ್ಯ, ಮುಕ್ತ ಸ್ಥಳ, ಕಲ್ಪನೆ ಮತ್ತು ಸಮುದ್ರದ ಆಳದಿಂದ ಆಕಾಶದ ಎತ್ತರದವರೆಗಿನ ಮಿತಿಗಳನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇಶದ ಬಹುದೊಡ್ಡ ಭಯೋತ್ಪಾದಕ ಸಂಘಟನೆ RSS : ಭಾಸ್ಕರ್ ಪ್ರಸಾದ್

    Congress

    ಕಳೆದ ಅಗಸ್ಟ್ 26 ರಂದು ಕಾಂಗ್ರೆಸ್ (Congress) ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಗುಲಾಂ ನಬಿ ಆಜಾದ್ ಐದು ದಶಕಕ್ಕೂ ಹೆಚ್ಚಿನ ಹಳೆಯ ಸಂಬಂಧವನ್ನು ಕಡಿದುಕೊಂಡಿದ್ದರು. ರಾಜೀನಾಮೆ ಬಳಿಕ ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುವುದಾಗಿ ಹೇಳಿದ್ದರು. ಅಂತೆಯೇ ಇಂದು ಹೊಸ ಪಕ್ಷದ ಹೆಸರನ್ನು ಘೋಷಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]