Tag: party

  • ಮಂಗಳೂರು ನೈತಿಕ ಪೊಲೀಸ್‍ಗಿರಿ ಪ್ರಕರಣಕ್ಕೆ ಟ್ವಿಸ್ಟ್!

    ಮಂಗಳೂರು ನೈತಿಕ ಪೊಲೀಸ್‍ಗಿರಿ ಪ್ರಕರಣಕ್ಕೆ ಟ್ವಿಸ್ಟ್!

    ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ಬಳಿ ತಣ್ಣೀರುಬಾವಿಯ ಬೀಚ್ ಬಳಿ ನಡೆದಿದೆ ಎನ್ನಲಾದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

    ತಣ್ಣೀರುಬಾವಿಯ ಫಾತಿಮಾ ಬೀಚ್ ಬಳಿಯ ಗ್ರಾಮಸ್ಥರು ಮಂಗಳೂರು ಆಯುಕ್ತರನ್ನು ಭೇಟಿಯಾಗಿದ್ದು, ವಿದ್ಯಾರ್ಥಿಗಳು ಸ್ಥಳೀಯರ ಜೊತೆ ಅಸಹ್ಯವಾಗುವಂತೆ ವರ್ತಿಸಿದ್ದಾರೆ. ಇದನ್ನು ಪ್ರಶ್ನಿಸಿ ಅಲ್ಲಿಂದ ತೆರಳುವಂತೆ ಸ್ಥಳೀಯರು ಸೂಚಿಸಿದ್ದನ್ನೇ ತಿರುಚಿ ರಾತ್ರಿ ಯಾರದ್ದೋ ಒತ್ತಡಕ್ಕೆ ಮಣಿದು ಪೊಲೀಸ್ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ.

    ಅಮಾಯಕ ಹುಡುಗರ ವಿರುದ್ಧ ಪೊಲೀಸರು ಡಕಾಯಿತಿ, ದರೋಡೆ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸ್ಥಳೀಯ ಮಹಿಳೆಯರು ಆರೋಪಿಸಿದ್ದಾರೆ. ಈ ನಡುವೆ ಹಲ್ಲೆಗೊಳಗಾದ ಹುಡುಗರಿಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಇದರೊಂದಿಗೆ ಹಿಂದು ಸಂಘಟನೆ ಕಾರ್ಯಕರ್ತರ ಮೇಲಿದ್ದ ನೈತಿಕ ಪೊಲೀಸ್ ಗಿರಿ ಆರೋಪ ಬೇರೆಯದ್ದೇ ರೂಪ ಪಡೆದುಕೊಂಡಿದೆ. ಬರ್ತ್ ಡೇ ಆಚರಣೆ ಮಾಡಿದ್ದಕ್ಕೆ ತಮಗೆ ಹೊಡೆದಿದ್ದಲ್ಲ. ಮುಸ್ಲಿಮರು ಎಂಬ ಕಾರಣಕ್ಕೆ ಹೊಡೆದಿದ್ದಾರೆ. ತಮ್ಮ ಜೊತೆಗಿದ್ದ ನಿತೇಶ್ ಬಳಿ ನೀನು ಮುಸ್ಲಿಮರಿಗೆ ಯಾಕೆ ಸಪೋರ್ಟ್ ಮಾಡ್ತೀಯಾ ಎಂದು ಕೇಳಿ ಹೊಡೆದಿದ್ದಾರೆ ಅಂತಾ ಪೆಟ್ಟು ತಿಂದ ಹುಡುಗರು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಬೀಚ್ ಬಳಿ ಬರ್ತ್‍ಡೇ ಆಚರಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಿಂದೂ ಕಾರ್ಯಕರ್ತರಿಂದ ಹಲ್ಲೆ!

     

  • ಬರ್ತ್ ಡೇ ಪಾರ್ಟಿಗೆಂದು ಕರೆದುಕೊಂಡು ಹೋಗಿ ಮದ್ಯಪಾನ ಮಾಡ್ಸಿ ಸ್ನೇಹಿತನಿಂದಲೇ ಅತ್ಯಾಚಾರ!

    ಬರ್ತ್ ಡೇ ಪಾರ್ಟಿಗೆಂದು ಕರೆದುಕೊಂಡು ಹೋಗಿ ಮದ್ಯಪಾನ ಮಾಡ್ಸಿ ಸ್ನೇಹಿತನಿಂದಲೇ ಅತ್ಯಾಚಾರ!

    ಬೆಂಗಳೂರು: ಮದ್ಯಪಾನ ಮಾಡಿಸಿ ಸ್ನೇಹಿತನ ಹೆಂಡತಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಗರದ ಹೆಚ್‍ಎಸ್‍ಆರ್ ಲೇಔಟ್ ನ ಸರ್ಜಾಪುರ ರಸ್ತೆಯಲ್ಲಿ ನಡೆದಿದೆ.

    ಎಚ್‍ಎಸ್‍ಆರ್ ಲೇಔಟ್ ನ ಹೂಡ್ ರೆಸ್ಟೋರೆಂಟ್ ನಲ್ಲಿ ಪಾರ್ಟಿ ನಡೆದಿದ್ದು, ಭುವನೇಶ್ವರದಿಂದ ಬೆಂಗಳೂರಿಗೆ ಚಿಕಿತ್ಸೆಗೆಂದು ಬಂದಿದ್ದ ಸಂತ್ರಸ್ತೆಯನ್ನು ಬರ್ತ್ ಡೇ ಪಾರ್ಟಿಗೆಂದು ಕರೆದುಕೊಂಡು ಹೋಗಿ ಮದ್ಯಪಾನ ಮಾಡಿಸಿ ಅತ್ಯಾಚಾರ ಎಸಗಿದ್ದಾರೆ.

    ದೂರಿನಲ್ಲಿ ಏನಿದೆ?
    ಆಸ್ಪತ್ರೆಗೆಂದು ಬೆಂಗಳೂರಿಗೆ ಬಂದಿದ್ದೆ. ಈ ವೇಳೆ ಸ್ನೇಹಿತ ಹಿಮಾಂಶು ಭಟ್ ಕರೆ ಮಾಡಿ ಆತನ ಬಾವನ ಬರ್ತ್ ಡೇ ಎಂದು ರೆಸ್ಟೊರೆಂಟ್ ಗೆ ಕರೆದಿದ್ದನು. ನಂತರ ನಾನು ಪಾರ್ಟಿಗೆ ಹೋದೆ. ಅಲ್ಲಿ ಹಿಮಾಂಶು ಭಟ್, ಆತನ ಸಹೋದರಿ ಹಾಗು ಪತಿ, ಜೊತೆಗೆ ಆತನ ಸ್ನೇಹಿತ ರವಿರಂಜನ್ ಇದ್ದರು.

    ನನಗೆ ಪಾರ್ಟಿಯಲ್ಲಿ ಡ್ರಿಂಕ್ಸ್ ಕುಡಿಯಬೇಕು ಎಂದು ಒತ್ತಾಯಿಸಿ ಬಿಯರ್ ಕುಡಿಸಿದ್ರು. ಬಳಿಕ ಬಲವಂತವಾಗಿ ಹೆಚ್ಚಿನ ಡ್ರಿಂಕ್ಸ್ ಕುಡಿಸಿದರು. ಪಾರ್ಟಿಯಲ್ಲಿ ಸಹೋದರಿಯ ಪತಿ ಕೆಳಗೆ ಬಿದ್ದು ಗಾಯ ಮಾಡಿಕೊಂಡರು. ಅವರನ್ನು ಆಸ್ಪತ್ರೆಗೆಂದು ಹಿಮಾಂಶು ಭಟ್ ಮತ್ತು ಆತನ ಸಹೋದರಿ ಕರೆದುಕೊಂಡು ಹೋದರು. ಈ ವೇಳೆ ನನ್ನ ಫೋನ್ ತೆಗೆದುಕೊಂಡು ಹೋಗಿದ್ದರು.

    ಇದೇ ಸಂದರ್ಭದಲ್ಲಿ ರವಿರಂಜನ್ ಫೋನ್ ತೆಗೆದುಕೊಂಡು ಬರುದಾಗಿ ಹೇಳಿ ಕ್ಯಾಬಿನ್ ನಲ್ಲಿ ಕರೆದುಕೊಂಡು ಹೋದನು. ಆದರೆ ದಾರಿ ಮಧ್ಯೆ ಬೆದರಿಕೆ ಹಾಕಿ ಕ್ಯಾಬ್ ಚಾಲಕನ ಮನೆಗೆ ಕರೆದುಕೊಂಡು ಹೋಗಿ ಬಲವಂತವಾಗಿ ನನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ದೂರಿನಲ್ಲಿ ಸಂತ್ರಸ್ತೆ ಉಲ್ಲೇಖಿಸಿದ್ದಾರೆ.

    ಈ ಸಂಬಂಧ ಹೆಚ್‍ಎಸ್‍ಆರ್ ಲೇಔಟ್ ನಲ್ಲಿ ಪ್ರಕರಣ ದಾಖಲಾಗಿದೆ.

  • ಬೀಚ್ ಬಳಿ ಬರ್ತ್‍ಡೇ ಆಚರಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಿಂದೂ ಕಾರ್ಯಕರ್ತರಿಂದ ಹಲ್ಲೆ!

    ಬೀಚ್ ಬಳಿ ಬರ್ತ್‍ಡೇ ಆಚರಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಿಂದೂ ಕಾರ್ಯಕರ್ತರಿಂದ ಹಲ್ಲೆ!

    ಮಂಗಳೂರು: ದಕ್ಷಿಣ ಕನ್ನಡದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ನಡೆದಿದ್ದು, ತಣ್ಣೀರುಬಾವಿ ಬೀಚ್ ಬಳಿ ಬರ್ತ್ ಡೇ ಆಚರಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಿಂದೂ ಸಂಘಟನೆ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.

    ತಣ್ಣೀರು ಬಾವಿಯ ಫಾತಿಮಾ ಚರ್ಚ್ ಬಳಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ಇಬ್ಬರು ವಿದ್ಯಾರ್ಥಿನಿಯರ ಜೊತೆಗಿದ್ದ ಸಬಿತ್, ಸಮೀರ್ ಮತ್ತು ನಿತೇಶ್ ಎಂಬ ಮೂವರು ಹುಡುಗರ ಮೇಲೆ ಹಲ್ಲೆ ನಡೆಸಲಾಗಿದೆ.

    ಐವರು ಯುವಕರ ತಂಡವೊಂದು ಅಡ್ಡಗಟ್ಟಿ ಹಲ್ಲೆ ನಡೆಸಿದ್ದು, ಬಳಿಕ ವಿದ್ಯಾರ್ಥಿನಿಯರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರೆಂಬುದನ್ನು ತಿಳಿದು ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಹಲ್ಲೆಗೊಳಗಾದ ಯುವಕರಿಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪರೀಕ್ಷೆ ಬಳಿಕ ಹಾಸ್ಟೆಲ್‍ನಲ್ಲಿ ಪಾರ್ಟಿ-ಆಳ್ವಾಸ್ ಕಾಲೇಜು ಸಿಬ್ಬಂದಿಯಿಂದ ವಿದ್ಯಾರ್ಥಿಗಳಿಗೆ ಥಳಿತ

    ಪರೀಕ್ಷೆ ಬಳಿಕ ಹಾಸ್ಟೆಲ್‍ನಲ್ಲಿ ಪಾರ್ಟಿ-ಆಳ್ವಾಸ್ ಕಾಲೇಜು ಸಿಬ್ಬಂದಿಯಿಂದ ವಿದ್ಯಾರ್ಥಿಗಳಿಗೆ ಥಳಿತ

    ಮಂಗಳೂರು: ಮೂಡುಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಮತ್ತೊಂದು ಎಡವಟ್ಟು ಮರುಕಳಿಸಿದೆ. ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿಗಳಿಗೆ ಕಾಲೇಜು ಸಿಬ್ಬಂದಿ ಸೇರಿ ಯದ್ವಾತದ್ವಾ ಹೊಡೆದಿದ್ದಾರೆ.

    ಶನಿವಾರ ರಾತ್ರಿ ಕಾಲೇಜಿನ ಪುಷ್ಪಗಿರಿ ಹಾಸ್ಟೆಲ್ ನಲ್ಲಿ ಘಟನೆ ನಡೆದಿದ್ದು, ಸಿಬ್ಬಂದಿ ಕೃತ್ಯ ವಿರೋಧಿಸಿ ವಿದ್ಯಾರ್ಥಿಗಳು ಇಂದು ಬೆಳಗ್ಗಿನಿಂದಲೇ ಪ್ರತಿಭಟನೆ ಆರಂಭಿಸಿದ್ದಾರೆ.

    ಪರೀಕ್ಷೆ ಮುಗಿದ ಹಿನ್ನೆಲೆಯಲ್ಲಿ ಕೆಲವು ವಿದ್ಯಾರ್ಥಿಗಳು ಸೇರಿ ಹಾಸ್ಟೆಲ್ ನಲ್ಲಿ ಸಂಭ್ರಮಾಚರಣೆ ನಡೆಸುತ್ತಿದ್ದರು. ಆದರೆ ಇದಕ್ಕೆ ವಾರ್ಡನ್ ಮತ್ತು ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಮತ್ತೊಬ್ಬ ವಿದ್ಯಾರ್ಥಿಯ ಮಾಹಿತಿ ಪ್ರಕಾರ, ಊಟದ ವಿಚಾರದಲ್ಲಿ ವಿದ್ಯಾರ್ಥಿಗಳು ಸಿಬ್ಬಂದಿಯನ್ನು ಪ್ರಶ್ನೆ ಮಾಡಿದ್ದರಂತೆ. ಇದೇ ನೆಪ ಇಟ್ಟುಕೊಂಡು ವಾರ್ಡನ್ ಮತ್ತು ಇತರೇ ಕಾಲೇಜು ಸಿಬ್ಬಂದಿ ಸೇರಿ ರಾತ್ರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.

    20ಕ್ಕಿಂತಲೂ ಹೆಚ್ವು ವಿದ್ಯಾರ್ಥಿಗಳ ಮೇಲೆ ತೀವ್ರವಾಗಿ ಥಳಿಸಿದ್ದಾರೆ. ಥಳಿಸುವ ವಿಡಿಯೋವನ್ನು ಸ್ವತಃ ವಿದ್ಯಾರ್ಥಿಗಳೇ ತಮ್ಮ ಮೊಬೈಲಿನಲ್ಲಿ ಚಿತ್ರೀಕರಿಸಿ, ಮಾಧ್ಯಮಕ್ಕೆ ನೀಡಿದ್ದಾರೆ. ಘಟನೆ ಬಗ್ಗೆ ವಿದ್ಯಾರ್ಥಿಗಳ ಹೆತ್ತವರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಥಳಿಸಿದ ವಿಚಾರದಲ್ಲಿ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಕಾಲೇಜು ಕ್ಯಾಂಪಸ್ ನಲ್ಲಿ ಜಟಾಪಟಿ ನಡೀತಿದೆ.

  • ಕೆಪಿಜೆಪಿಗೆ ನಟ ಉಪೇಂದ್ರ ರಾಜೀನಾಮೆ – ಹೊಸ ಪಕ್ಷ ಸ್ಥಾಪನೆಗೆ ನಿರ್ಧಾರ

    ಕೆಪಿಜೆಪಿಗೆ ನಟ ಉಪೇಂದ್ರ ರಾಜೀನಾಮೆ – ಹೊಸ ಪಕ್ಷ ಸ್ಥಾಪನೆಗೆ ನಿರ್ಧಾರ

    ಬೆಂಗಳೂರು: ಕೆಪಿಜೆಪಿ ಪಕ್ಷಕ್ಕೆ ನಟ ಉಪೇಂದ್ರ ರಾಜೀನಾಮೆ ನೀಡಿದ್ದಾರೆ. ಇಂದು ನಗರದ ರುಪ್ಪೀಸ್ ರೆಸಾರ್ಟ್‍ನಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನಮಗೂ ಕೆಪಿಜೆಪಿಗೂ ಇನ್ಮುಂದೆ ಸಂಬಂಧ ಇರಲ್ಲ. ಪ್ರಜಾಕೀಯ ಹೆಸರಲ್ಲಿ ಹೊಸ ಪಕ್ಷ ಕಟ್ಟಲು ತೀರ್ಮಾನ ಮಾಡಿರುವುದಾಗಿ ತಿಳಿಸಿದರು. ಇಂದಿನಿಂದಲೇ ಹೊಸ ಪಕ್ಷ ಸ್ಥಾಪನೆ ಕಾರ್ಯ ಆರಂಭಿಸುತ್ತೇವೆ ಎಂದು ಹೇಳಿದ್ರು.

    ಕೆಪಿಜೆಪಿಗೆ ನಾವೆಲ್ಲರೂ ರಾಜೀನಾಮೆ ನೀಡುತ್ತೇವೆ. ಪ್ರಜಾಕೀಯದ ಸಿದ್ಧಾಂತ ಇಟ್ಟುಕೊಂಡೇ ಹೊಸ ಪಕ್ಷ ಕಟ್ಟುತ್ತೇವೆ. ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತೇವೆ. ಎಲ್ಲರೂ ಸೇರಿ ಒಮ್ಮತದ ತಿರ್ಮಾನಕ್ಕೆ ಬಂದ್ದಿದ್ದೇವೆ. ನಾನು ಹಾಗೂ ನನ್ನ ಜೊತೆ ನಾಲ್ಕೈದು ಜನ ಸೇರಿ ಎಲ್ಲರೂ ರಾಜಿನಾಮೆ ನೀಡುತ್ತಿದ್ದೇವೆ ಎಂದು ಹೇಳಿದ್ರು.

    ಪ್ರಜಾಕೀಯ ವಿಷಯವನ್ನು ಜನರಿಗೆ ತಿಳಿಸುತ್ತೇವೆ. ಅದಷ್ಟು ಬೇಗ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡುತ್ತೇವೆ. ಇದೇ ವಿಧಾನಸಭೆ ಚುನಾವಣೆಗೆ ಸ್ಫರ್ಧೆ ಮಾಡುತ್ತೇವೆ. ಇಲ್ಲವಾದ್ರೆ ಪಾಲಿಕೆ ಚುನಾವಣೆ ಅಥವಾ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ಪ್ರಜಾಕೀಯ ಬಿಟ್ಟು ರಾಜಕೀಯ ಮಾಡಲ್ಲ. ಪಕ್ಷ ಸ್ಥಾಪನೆ ಬಗ್ಗೆ ವಕೀಲರೊಂದಿಗೆ ಮಾತನಾಡುತ್ತೇವೆ ಎಂದು ತಿಳಿಸಿದ್ರು.  ಇದನ್ನೂ ಓದಿ: ಕೆಪಿಜೆಪಿಯಲ್ಲಿ ಏನ್ ಆಗ್ತಿದೆ? ಗೊಂದಲ ಆಗಿದ್ದು ಎಲ್ಲಿ? – ಉಪ್ಪಿ ಮಾತಲ್ಲಿ ಕೇಳಿ

    ನಮಗೆ ಅಭ್ಯರ್ಥಿಗಳು ರೆಡಿ ಇದ್ದಾರೆ. ಈಗ ಪಕ್ಷ ಒಂದೇ ನಮಗೆ ಬೇಕು. ಇಂತಹ ಕಷ್ಟ ಗಳು ಸಾಕಷ್ಟು ಬರುತ್ತವೆ. ಇಂತಹ ಕಷ್ಟಗಳಿಂದ ಇನ್ನಷ್ಟು ಬಲಗೊಳ್ಳುತ್ತೇವೆ ಎಂದು ಹೇಳಿದ್ರು. ಮಹೇಶ್ ಗೌಡ ಮನವೊಲಿಸುವ ಕೆಲಸ ಮಾಡಿದೆವು, ಅದ್ರೆ ಅದು ಸಾಧ್ಯವಾಗಿಲ್ಲ. ಅವರಿಗೆ ಪಬ್ಲಿಸಿಟಿ ಅವಶ್ಯಕತೆ ಇದೆ. ಪ್ರಜಾಕೀಯ ವಿಷಯವನ್ನು ಕೊಲೆ ಮಾಡಲು ಹೋಗಿದ್ರು. ಅವರಿಗೆ ಪ್ರಜಾಕೀಯದ ಪರಿಕಲ್ಪನೆಯೇ ಅರ್ಥವಾಗಿಲ್ಲ ಎಂದು ಉಪೇಂದ್ರ ಹೇಳಿದ್ರು.

  • ಫರ್ಜಿ ಕೆಫೆಯಲ್ಲಿ ನಲಪಾಡ್ ಗುಂಡಾಗಿರಿ ಪ್ರಕರಣಕ್ಕೆ ಮೆಗಾ ಟ್ವಿಸ್ಟ್

    ಫರ್ಜಿ ಕೆಫೆಯಲ್ಲಿ ನಲಪಾಡ್ ಗುಂಡಾಗಿರಿ ಪ್ರಕರಣಕ್ಕೆ ಮೆಗಾ ಟ್ವಿಸ್ಟ್

    ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ವಿರುದ್ಧದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಹುಡುಗಿಯರ ಮುಂದೆ ನಡೆದ ಪ್ರತಿಷ್ಠೆಗಾಗಿ ಅಂದು ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.

    ಘಟನೆ ನಡೆದ ನಗರದ ಫರ್ಜಿ ಕೆಫೆ ಯಲ್ಲಿ ಅಂದು ರಾತ್ರಿ ನಡೆದ ಪಾರ್ಟಿ ಆಯೋಜನೆಗೊಂಡಿತ್ತು. ನಗರದ ಶ್ರೀಮಂತ ಮನೆತನದ ಯುವಕ, ಯುವತಿಯರು ಪಾಲ್ಗೊಂಡಿದ್ದ ಕೆಫೆಯಲ್ಲಿ ವಿದ್ವತ್ ಹಾಗೂ ನಲ್ಪಾಡ್ ಮತ್ತು ಆತನ ಗ್ಯಾಂಗ್ ಕಾಣಿಸಿಕೊಂಡಿತ್ತು. ಈ ಪಾರ್ಟಿ ಆರಂಭದ ಸಮಯದಿಂದ ನಲಪಾಡ್ ನನ್ನು ಆತನ ಸ್ನೇಹಿತರು “ಪ್ರಿನ್ಸ್ ಪ್ರಿನ್ಸ್” ಎಂದು ಕೂಗಿ ಪಾರ್ಟಿಯಲ್ಲಿ ನೆರೆದಿದ್ದ ಯುವಕ ಯುವತಿಯರ ಮುಂದೇ ಪ್ರತಿಷ್ಠೆ ತೋರಿಸುತ್ತಿದ್ದರು ಎನ್ನಲಾಗಿದೆ.

    ಈ ಸಂದರ್ಭದಲ್ಲಿ ಗಾಯಗೊಂಡಿದ್ದ ವಿದ್ವತ್ ಕಾಲು ಚಾಚಿ ಕುಳಿತ್ತಿದ್ದರು. ಇದನ್ನು ಕಂಡ ನಲಪಾಡ್ ನನ್ನ ಮುಂದೆ ದರ್ಪದಿಂದ ಕಾಲು ಚಾಚಿಕೊಂಡು ಕೂತಿದ್ದೀಯಾ ಎಂದು ವಿದ್ವತ್ ಮೇಲೆ ಜಗಳಕ್ಕೆ ನಿಂತಿದ್ದಾನೆ. ಅನಂತರ ಕ್ಷಮೆ ಕೇಳುವಂತೆ ಹೇಳಿದ್ದಕ್ಕೆ ವಿದ್ವತ್ ನಿರಾಕರಿಸಿದ್ದಾರೆ. ಇದರಿದ ರೊಚ್ಚಿಗೆದ್ದ ನಲಪಾಡ್ ಮೊದಲು ವಿದ್ವತ್ ಹೊಟ್ಟೆ ಮತ್ತು ಮುಖದ ಭಾಗಕ್ಕೆ ಏಟು ಹೊಡೆದಿದ್ದಾನೆ. ಇದನ್ನೂ ಓದಿ: ಮೈಮೇಲೆ ಕುರ್ಚಿಗಳನ್ನು ಎಸೆದ್ರು, sorry ಎಂದರೂ ಬಿಯರ್ ಬಾಟಲಿಯಿಂದ ಬಾಯಿಗೆ ಹೊಡೆದ್ರು- ನಲಪಾಡ್ ದಾಳಿ ಬಗ್ಗೆ ವಿದ್ವತ್ Exclusive ಮಾತು

    ನಲಪಾಡ್ ಹೊಡೆದ ಬಳಿಕ ಆತನ ಗ್ಯಾಂಗ್ ನವರು ವಿದ್ವತ್ ಮೇಲೆ ಮನಸೋ ಇಚ್ಚೇ ಹಲ್ಲೆ ನಡೆಸಿದ್ದಾರೆ. ಪಾರ್ಟಿಯಲ್ಲಿ ಹಲ್ಲೆ ನಡೆಸುವ ವೇಳೆ ಸಾಕಷ್ಟು ಜನ ಅಲ್ಲಿ ನೆರೆದಿದ್ದರೂ ಯಾರು ಗಲಾಟೆ ತಡೆಯುವ ಪ್ರಯತ್ನ ನಡೆಸಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಖಾಸಗಿ ವಿಮಾನ ಖರೀದಿಸಲು ಮುಂದಾಗಿದ್ದ ರೌಡಿ ನಲಪಾಡ್!

    https://www.youtube.com/watch?v=TIPtfcxi6O4

  • ವಧುವಿನ ತಂದೆ ಹಾರಿಸಿದ ಗುಂಡಿಗೆ ಟೆರೇಸ್ ಮೇಲಿದ್ದ ನೆರೆಮನೆಯ ಯುವತಿ ಬಲಿ!

    ವಧುವಿನ ತಂದೆ ಹಾರಿಸಿದ ಗುಂಡಿಗೆ ಟೆರೇಸ್ ಮೇಲಿದ್ದ ನೆರೆಮನೆಯ ಯುವತಿ ಬಲಿ!

    ಚಂಡೀಗಢ: ಮಗಳ ವಿವಾಹದ ಸಂಭ್ರಮದಲ್ಲಿ ವಧುವಿನ ತಂದೆ ಹಾರಿಸಿದ ಗುಂಡಿಗೆ ನೆರೆಮನೆಯ ಯುವತಿ ಬಲಿಯಾದ ದಾರುಣ ಘಟನೆ ಪಂಜಾಬ್ ನ ಹೋಶಿಯಾರ್ಪುರ್ ನಲ್ಲಿ ನಡೆದಿದೆ.

    ಹೋಶಿಯಾರ್ಪುರ್ ನಿವಾಸಿ 22 ವರ್ಷದ ಸಾಕ್ಷಿ ಅರೋರಾ ಮೃತಪಟ್ಟ ದುರ್ದೈವಿ. ಈಕೆ ಜಲಂದರ್ ನ ಕಾಲೇಜೊಂದರಲ್ಲಿ ಎಂಬಿಎ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಹೋಶಿಯಾರ್ಪುರದ ಅಶೋಕ್ ಖೋಸ್ಲಾ ಎಂಬಾತ ತನ್ನ ಮಗಳ ಮದುವೆ ಸಂಭ್ರಮಕ್ಕಾಗಿ ಮನೆಯಲ್ಲಿ ಶನಿವಾರ ಡಿಜೆ ಪಾರ್ಟಿ ಏರ್ಪಡಿಸಿದ್ದರು. ತಡರಾತ್ರಿ 11.30 ಗಂಟೆಯಾದರೂ ಈ ಪಾರ್ಟಿ ನಡೆಯುತ್ತಿದ್ದು, ಸಾಕ್ಷಿ ಅರೋರಾ ತನ್ನ ಮನೆಯ ಮಹಡಿ ಮೇಲೆ ನಿಂತು ನೋಡುತ್ತಿದ್ದಳು.

    ಇದೇ ಸಂದರ್ಭದಲ್ಲಿ ವಧುವಿನ ತಂದೆ ಇದ್ದಕ್ಕಿದ್ದಂತೆ ಗುಂಡು ಹಾರಿಸಿದ್ದಾರೆ. ಆ ಗುಂಡು ಸಾಕ್ಷಿ ಅರೋರಾ ಹಣೆಗೆ ಹೊಕ್ಕಿದ್ದು, ಆಕೆ ತಕ್ಷಣ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮದ್ಯದ ಅಮಲಿನಲ್ಲಿದ್ದ ಅಶೋಕ್ ಖೋಸ್ಲಾ ಹಾಗೂ ಆತನ ಸ್ನೇಹಿತ ಅಶೋಕ್ ಸೇಥಿ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಮ್ಮ ನೆರೆಮನೆಯವರು ಆಯೋಜಿಸಿದ್ದ ಡಿಜೆ ಪಾರ್ಟಿಯನ್ನು ನನ್ನ ಮಗಳು ಟೆರೇಸ್ ಮೇಲೆ ನಿಂತು ನೋಡುತ್ತಿದ್ದಳು. ಇದ್ದಕ್ಕಿದ್ದಂತೆ ಗುಂಡು ಬಂದು ಆಕೆಯ ಹಣೆಗೆ ತಗುಲಿದೆ. ತಕ್ಷಣ ಅವಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ ಎಂದು ಮೃತಾಳ ತಂದೆ ಚರಣಿತ್ ಅರೋರಾ ಹೇಳಿದ್ದಾರೆ.

    ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಶೋಕ್ ಖೋಸ್ಲಾನನ್ನು ಬಂಧಿಸಿ ಆತನಿಂದ ಲೈಸೆನ್ಸ್ ಹೊಂದಿದ್ದ 32 ಬೋರ್ ರಿವಾಲ್ವರ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ)ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಡಬ್ಬಲ್ ಬ್ಯಾರೆಲ್ ಗನ್ ನಿಂದ ಗುಂಡು ಹಾರಿಸುತ್ತಿದ್ದ ಆತನ ಸ್ನೇಹಿತ ಅಶೋಕ್ ಸೇಥಿ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಬಲೆ ಬೀಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಜಗ್‍ದೀಶ್ ಹೇಳಿದ್ದಾರೆ.

  • ಪಾರ್ಟಿ ಮಾಡಲೆಂದು ಕರೆದೊಯ್ದು ಸ್ನೇಹಿತನ ಕೊಲೆ

    ಪಾರ್ಟಿ ಮಾಡಲೆಂದು ಕರೆದೊಯ್ದು ಸ್ನೇಹಿತನ ಕೊಲೆ

    ರಾಮನಗರ: ಪಾರ್ಟಿ ಮಾಡಲೆಂದು ಕರೆದೊಯ್ದು ಸ್ನೇಹಿತನನ್ನೇ ಕೊಲೆ ಮಾಡಿ ಶವವನ್ನು ಕಾರಿನಲ್ಲಿಟ್ಟು ಪರಾರಿಯಾಗಿರುವ ಘಟನೆ ಮಾಗಡಿಯ ಕೊಂಡಳ್ಳಿ ಗ್ರಾಮದಲ್ಲಿ ನಡೆದಿದೆ.

    ರಾಮನಗರದ ಪುಟ್ಟರಾಜು ಎಂಬಾತನನ್ನು ಕೊಲೆ ಮಾಡಿದ ಸ್ನೇಹಿತರು ಬಳಿಕ ತಾವೇ ಪುಟ್ಟರಾಜುವಿನ ಸಹೋದರನಿಗೆ ಕರೆ ಮಾಡಿ, ಕೊಂಡಳ್ಳಿಯ ಬಳಿ ಸ್ವಿಫ್ಟ್ ಕಾರಿನ ಹಿಂಬದಿ ಸೀಟಿನಲ್ಲಿ ಪುಟ್ಟರಾಜುವಿನ ಶವವನ್ನ ಇಟ್ಟಿರುವುದಾಗಿ ತಿಳಿಸಿದ್ದಾರೆ.

    ಮಾಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

  • ಹೊಸ ವರ್ಷದ ಪಾರ್ಟಿ ವೇಳೆ ಯುವಕರ ಮಧ್ಯೆ ಘರ್ಷಣೆ- ಓರ್ವ ಸಾವು

    ಹೊಸ ವರ್ಷದ ಪಾರ್ಟಿ ವೇಳೆ ಯುವಕರ ಮಧ್ಯೆ ಘರ್ಷಣೆ- ಓರ್ವ ಸಾವು

    ಮಂಡ್ಯ: ಹೊಸ ವರ್ಷದ ಪಾರ್ಟಿ ಮಾಡುವ ವೇಳೆ ಯುವಕರ ಮಧ್ಯೆ ಘರ್ಷಣೆ ನಡೆದು ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹೊನಗಾನಹಳ್ಳಿ ಗ್ರಾಮದ ಹೊರವಲಯದ ಕೆರೆಯ ಬಳಿ ನಡೆದಿದೆ.

    ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಗ್ರಾಮದ 26 ವರ್ಷದ ಯುವಕ ಶಿವಕುಮಾರ್ ಮೃತ ದುರ್ದೈವಿ. ಶಶಿ ಎಂಬ ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಕುಮಾರ್ ಮತ್ತು ಶಶಿ ಹೊನಗಾನಹಳ್ಳಿ ಗ್ರಾಮದ ಹೊರವಲಯದ ಕೆರೆಯ ಬಳಿ ಹೊಸ ವರ್ಷದ ಪಾರ್ಟಿ ಮಾಡುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಕೆಲ ಯುವಕರು ಹಳೇ ದ್ವೇಷದ ಕಾರಣಕ್ಕೆ ಗಲಾಟೆ ಮಾಡಿದ್ದಾರೆ.

    ಈ ವೇಳೆ ಶಿವಕುಮಾರ್ ಹಾಗೂ ಶಶಿಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ತೀವ್ರ ರಕ್ತಸ್ರಾವಗೊಂಡ ಶಿವಕುಮಾರ ಹಾಗೂ ಶಶಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಮಾರ್ಗ ಮಧ್ಯೆ ಶಿವಕುಮಾರ್ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಶಶಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸ್ಥಳಕ್ಕೆ ಪಾಂಡವಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮಂಗಳೂರು: ಮನೆಯಲ್ಲಿ ಕ್ರಿಸ್‍ಮಸ್ ಪಾರ್ಟಿ ಮಾಡ್ತಿದ್ದ ರೌಡಿಶೀಟರ್ ನನ್ನು ಅಟ್ಟಾಡಿಸಿ ಬರ್ಬರ ಹತ್ಯೆ

    ಮಂಗಳೂರು: ಮನೆಯಲ್ಲಿ ಕ್ರಿಸ್‍ಮಸ್ ಪಾರ್ಟಿ ಮಾಡ್ತಿದ್ದ ರೌಡಿಶೀಟರ್ ನನ್ನು ಅಟ್ಟಾಡಿಸಿ ಬರ್ಬರ ಹತ್ಯೆ

    ಮಂಗಳೂರು: ನಗರದಲ್ಲಿ ಮತ್ತೆ ನೆತ್ತರು ಹರಿದಿದ್ದು, ಕ್ರಿಸ್ಮಸ್ ಹಬ್ಬದ ಗುಂಗಿನಲ್ಲಿದ್ದ ರೌಡಿಶೀಟರ್ ಓರ್ವನನ್ನು ಮನೆಗೆ ನುಗ್ಗಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

    ಮಂಗಳೂರಿನ ವೆಲೆನ್ಸಿಯಾದ ಗೋರಿಗುಡ್ಡದಲ್ಲಿ ಘಟನೆ ನಡೆದಿದ್ದು, 25 ವರ್ಷದ ಮೆಲ್ರಿಕ್ ಡಿಸೋಜ ಹತ್ಯೆಯಾದ ಯುವಕ. ಈ ಗೋರಿಗುಡ್ಡದ ಮನೆಯಲ್ಲಿ ತಡರಾತ್ರಿ ಕ್ರಿಸ್ಮಸ್ ಪಾರ್ಟಿಯಲ್ಲಿದ್ದ ವೇಳೆ ಐವರು ದುಷ್ಕರ್ಮಿಗಳ ತಂಡ ಮನೆಗೆ ನುಗ್ಗಿದ್ದು, ಮನೆಯ ಆವರಣದಲ್ಲಿ ಅಟ್ಟಾಡಿಸಿ ಕೊಲೆ ಮಾಡಿದ್ದಾರೆ.

    ಮೆಲ್ರಿಕ್ ಡಿಸೋಜ ವಿರುದ್ಧ ಎರಡು ಕೊಲೆ ಯತ್ನ ಪ್ರಕರಣ ಸೇರಿದಂತೆ ಪಾಂಡೇಶ್ವರ ಮತ್ತು ಬಂದರು ಠಾಣೆಗಳಲ್ಲಿ ಪ್ರಕರಣ ಎದುರಿಸುತ್ತಿದ್ದ. ಕಳೆದ ವರ್ಷ 2016 ಆಗಸ್ಟ್ ತಿಂಗಳಲ್ಲಿ ವೆಲೆನ್ಸಿಯಾ ಸಮೀಪದ ಮಾರ್ನಮಿಕಟ್ಟೆ ಎಂಬಲ್ಲಿ ಸಂದೀಪ್ ಶೆಟ್ಟಿ ಎಂಬಾತನ ಕೊಲೆ ಯತ್ನ ನಡೆದಿತ್ತು. ಆ ಪ್ರಕರಣದಲ್ಲಿಯೂ ಮೆಲ್ರಿಕ್ ಡಿಸೋಜ ಆರೋಪಿಯಾಗಿದ್ದ.

     

    ಇದೀಗ ಸೇಡು ತೀರಿಸಿದ ಮಾದರಿಯಲ್ಲಿ ಈ ಕೊಲೆ ನಡೆದಿದ್ದು, ಯಾರು ಕೃತ್ಯ ನಡೆಸಿದ್ದಾರೆಂದು ಇನ್ನಷ್ಟೆ ಗೊತ್ತಾಗಬೇಕು. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.