Tag: party

  • ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರಿಂದ ಲತಾ ಮಂಗೇಶ್ಕರ್ ಭೇಟಿ!

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರಿಂದ ಲತಾ ಮಂಗೇಶ್ಕರ್ ಭೇಟಿ!

    ಮುಂಬೈ: ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸಂಗೀತ ಲೋಕದ ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್ ಅವರನ್ನು ಭಾನುವಾರ ಭೇಟಿ ಮಾಡಿದ್ದಾರೆ.

    ಅಮಿತ್ ಶಾ ಪಕ್ಷದ ಸಭೆ ಉದ್ದೇಶಿಸಿ ಮುಂಬೈಗೆ ಒಂದು ದಿನ ಭೇಟಿ ನೀಡಿದ್ದರು. ಈ ವೇಳೆ ಭಾನುವಾರ ಸಂಜೆ ಮಂಗೇಶ್ಕರ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಅಮಿತ್ ಶಾ ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಲು ಬೆಂಬಲ ನೀಡುವಂತೆ ಮಂಗೇಶ್ಕರ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಅಮಿತ್ ಶಾ ಜೊತೆಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ರಾಜ್ಯ ಬಿಜೆಪಿ ಮುಖ್ಯಸ್ಥ ರಾಸ್ಸಾಬೆಬ್ ಡಾನ್ವೆ ಮತ್ತು ಮುಂಬೈನ ಯುನಿಟ್ ಪಕ್ಷದ ಅಧ್ಯಕ್ಷ ಆಶಿಶ್ ಶೆಲರ್ ಅವರು ಇದ್ದರು.

    ಜೂನ್ 6 ರಂದು, ಮಂಗೇಶ್ಕರ್ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು. `ಶಾ ಅವರು ಭೇಟಿ ಕುರಿತು ನನ್ನ ಜೊತೆ ಫೋನಿನಲ್ಲಿ ಮಾತನಾಡಿದ್ದಾರೆ. ಆದ್ರೆ ಆರೋಗ್ಯದ ಸಮಸ್ಯೆಯಿಂದ ಭೇಟಿಯಾಗಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಜೊತೆಗೆ ಮತ್ತೆ ಮುಂಬೈಗೆ ಬಂದಾಗ ತನ್ನನ್ನು ಭೇಟಿ ಮಾಡುವಂತೆ ಮನವಿ’ ಕೂಡ ಮಾಡಿದ್ದರು.

    ಭಾನುವಾರ ನಡೆದ ಸಭೆಯಲ್ಲಿ, ಕಳೆದ ನಾಲ್ಕು ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳ ಬಗ್ಗೆ ಪುಸ್ತಕವೊಂದನ್ನು ಶಾ ಅವರು ಮಂಡಿಸಿದ್ದಾರೆ.

    ಜೂನ್ 6 ರಂದು ನಟಿ ಮಾಧುರಿ ದೀಕ್ಷಿತ್ ಮತ್ತು ಕೈಗಾರಿಕೋದ್ಯಮಿ ರತನ್ ಟಾಟಾ ಅವರನ್ನು ಭೇಟಿ ಮಾಡಿದ್ದು, ಅವರಲ್ಲಿಯೂ ಕೂಡ “ಸಂಪರ್ಕ್ ಫಾರ್ ಸಮರ್ಥನ್” ಅಭಿಯಾನಕ್ಕೆ ಭಾಗಿಯಾಗುವಂತೆ ಕರೆ ನೀಡಿದ್ದರು. ಬಳಿಕ ಅದೇ ದಿನ ಮಂಗೇಶ್ಕರ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದರು. ಆದರೆ ಮಂಗೇಶ್ಕರ್ ಅವರಿಗೆ ಫುಡ್ ಪಾಯಿಷನ್ ಆಗಿದ್ದು, ಆರೋಗ್ಯ ಸಮಸ್ಯೆಯಾಗಿತ್ತು. ಆದ್ದರಿಂದ ಅಂದಿನ ಭೇಟಿಯನ್ನು ಅಮಿತ್ ಶಾ ಅವರು ಕ್ಯಾನ್ಸಲ್ ಮಾಡಿದ್ದರು.

  • ಕುಡುಕರ ಅಡ್ಡೆಯಾದ ನೊಣವಿನಕೆರೆ ಕಾಲೇಜು – ಪ್ರತಿದಿನ ಎಣ್ಣೆ ಪಾರ್ಟಿ

    ಕುಡುಕರ ಅಡ್ಡೆಯಾದ ನೊಣವಿನಕೆರೆ ಕಾಲೇಜು – ಪ್ರತಿದಿನ ಎಣ್ಣೆ ಪಾರ್ಟಿ

    ತುಮಕೂರು: ವಿದ್ಯಾರ್ಥಿಗಳ ವಿದ್ಯಾರ್ಜನೆಯ ಕೇಂದ್ರವಾಗಿ ಜ್ಞಾನ ದೇಗುಲವಾಗ ಬೇಕಿದ್ದ ಕಾಲೇಜು ಆವರಣ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ.

    ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಸ್ಥಿತಿ ನಿರ್ಮಾಣವಾಗಿದೆ. ಬಿಎ ಮತ್ತು ಬಿಕಾಂ ತರಗತಿಗಳಲ್ಲಿ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಹಾಡಹಗಲೆನ್ನದೆ, ರಾತ್ರಿಯೆನ್ನದೆ ಆವರಣ ಒಳಗೆಯೇ ಕುಡುಕರು ಎಣ್ಣೆ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಿದ್ದಾರೆ.

    ನೋಣವಿನಕೆರೆಯ ಕೆಲ ಪುಂಡ-ಪೋಲಿಗಳು ನಿರಂತರವಾಗಿ ಇಲ್ಲೆ ಎಣ್ಣೆ ಪಾರ್ಟಿ ಮಾಡುತಿದ್ದಾರೆ. ಸ್ವಲ್ಪ ಗಿಡಗಂಟೆಗಳು ಬೆಳೆದಿದ್ದರಿಂದ ಇನ್ನೂ ಅನುಕೂಲವಾಗಿದೆ. ಆವರಣದ ತುಂಬಾ ಮದ್ಯದ ಬಾಟಲಿಗಳೇ ತುಂಬಿ ಹೋಗಿದೆ. ಅಷ್ಟೇ ಅಲ್ಲದೇ ಎಣ್ಣೆ ಕುಡಿದ ನಶೆಯಲ್ಲಿದ್ದ ಕುಡುಕರು ಕಾಲೇಜಿನ ಕಿಟಕಿ ಗಾಜು, ನೀರಿನ ಟ್ಯಾಂಕ್ ಗಳನ್ನು ಒಡೆದು ಹಾಕಿ ಅವಾಂತರ ಸೃಷ್ಟಿಸಿದ್ದಾರೆ.

  • ಬರ್ತ್ ಡೇ ಪಾರ್ಟಿಗೆ ಹೋಗಿ ಬಾವಿಯಲ್ಲಿ ಮುಳುಗಿ ಎಂಜಿನಿಯರಿಂಗ್ ವಿದ್ಯಾರ್ಥಿ ದುರ್ಮರಣ

    ಬರ್ತ್ ಡೇ ಪಾರ್ಟಿಗೆ ಹೋಗಿ ಬಾವಿಯಲ್ಲಿ ಮುಳುಗಿ ಎಂಜಿನಿಯರಿಂಗ್ ವಿದ್ಯಾರ್ಥಿ ದುರ್ಮರಣ

    ಬೆಂಗಳೂರು: ಈಜು ಬಾರದಿದ್ದರೂ ಬಾವಿಯಲ್ಲಿ ಈಜಲು ಹೋಗಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ಮೂಲದ ಪ್ರವೀಣ್(24) ನೀರಿನಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿ. ಆನೇಕಲ್ ಪಟ್ಟಣದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಪ್ರವೀಣ್ ಸ್ನೇಹಿತನ ಬರ್ತ್ ಡೇ ಪಾರ್ಟಿಗೆ ಹೋಗಿದ್ದನು.

    ಪಾರ್ಟಿ ಮುಗಿಸಿಕೊಂಡು ತಾಲೂಕಿನ ಜಿಗಣಿ ಹೋಬಳಿಯ ಸಿತನಾಯಕನಹಳ್ಳಿಯಲ್ಲಿನ ತೆರೆದ ಬಾವಿಯಲ್ಲಿ ಐವರು ಸ್ನೇಹಿತರೊಂದಿಗೆ ಈಜಲು ತೆರಳಿದ್ದನು. ಈ ವೇಳೆ ಈಜು ಬಾರದ ಪ್ರವೀಣ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಬಳಿಕ ಸ್ನೇಹಿತರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ನಂತರ ಗ್ರಾಮಸ್ಥರ ಸಹಾಯದೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಮೃತ ಶವವನ್ನು ಹೊರತೆಗೆದಿದ್ದಾರೆ.

    ಈ ಘಟನೆ ಕುರಿತು ಜಿಗಣಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಹೌದು, ಕಾಂಗ್ರೆಸ್ಸಿಗೆ ಈಗ ಹಣದ ಕೊರತೆಯಿದೆ: ಶಶಿ ತರೂರ್

    ಹೌದು, ಕಾಂಗ್ರೆಸ್ಸಿಗೆ ಈಗ ಹಣದ ಕೊರತೆಯಿದೆ: ಶಶಿ ತರೂರ್

    ನವದೆಹಲಿ: ಕಾಂಗ್ರೆಸ್ ಈಗ ಹಣದ ಕೊರತೆಯನ್ನು ಎದುರಿಸುತ್ತಿದೆ ಎಂದು ಮಾಜಿ ಸಚಿವ, ಸಂಸದ ಶಶಿ ತರೂರ್ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವೂ ಸೇರಿದಂತೆ ದೇಶದಲ್ಲಿ ಎಲ್ಲಾ ವಿರೋಧ ಪಕ್ಷಗಳು ಹಣದ ಕೊರತೆಯನ್ನು ಎದುರಿಸುತ್ತಿವೆ ಎಂದು ಅವರು ಹೇಳಿದ್ದಾರೆ.

    ಪಕ್ಷ ಹಣದ ಕೊರತೆಯನ್ನು ಎದುರಿಸುತ್ತಿದ್ದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಚಂದಾ ಹಣವನ್ನು ನೀಡಬೇಕು. ಪಕ್ಷಕ್ಕೆ ಹಣವನ್ನು ಕೊಡುವುದರ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.ಇದನ್ನೂ ಓದಿ:ಕಾಂಗ್ರೆಸ್ ಖಜಾನೆಯಲ್ಲಿ ಈಗ ದುಡ್ಡಿಲ್ಲ- ಲೋಕ ಚುನಾವಣೆಯ ವೇಳೆ ಸಂಕಷ್ಟ!

    ಇದಕ್ಕೆ ಪ್ರತಿಕ್ರಿಯಿಸಿರುವ ಶಶಿ ತರೂರ್ ಯಾವ ಪಕ್ಷ ಅಧಿಕಾರದಲ್ಲಿ ಇರುತ್ತದೋ ಅವರಿಗೆ ಸಾಕಷ್ಟು ನಿಧಿ ಹರಿದು ಬರುತ್ತದೆ. ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ ಅದರ ಲಾಭ ಪಡೆಯುತ್ತಿದೆ. ವಿರೋಧ ಪಕ್ಷಗಳು ಹಣದ ಸಮಸ್ಯೆಯನ್ನು ಎದುರಿಸುತ್ತಿವೆ. ಅದರಲ್ಲೂ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಹೆಚ್ಚಿನ ಕೊರತೆಯನ್ನು ಅನುಭವಿಸುತ್ತಿದೆ ಎಂದು ಹೇಳಿ ಚಂದ ಎತ್ತಲು ಜನರ ಬಳಿ ಹೋಗುವ ಪಕ್ಷದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

    ಮುಂಬರುವ ದಿನಗಳಲ್ಲಿ ಜನರಿಂದ ನಿಧಿಯನ್ನು ಸಂಗ್ರಹಿಸುವುದು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಉತ್ತಮ ನಡೆಯಾಗಲಿದೆ. ಕರ್ನಾಟಕದಲ್ಲಿ ಬಹಳಷ್ಟು ನಾಯಕರು ಚುನಾವಣಾ ಪ್ರಚಾರಕ್ಕೆ ತಮ್ಮ ಹಣವನ್ನೇ ಬಳಸಿದ್ದಾರೆ. ಒಂದು ಕ್ಷೇತ್ರದಲ್ಲಿ ಜನರಿಂದಲೇ ನಿಧಿ ಸಂಗ್ರಹಿಸುವ ಪ್ರಯತ್ನ ಮಾಡಿ ಯಶಸ್ವಿಯಾದೆವು. ಇದನ್ನು ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಮುಂದುವರಿಸಬಹುದಾಗಿದೆ ಎಂದು ಹೇಳಿದರು.

     

  • SSLC ಯಲ್ಲಿ ಮಗ ಫೇಲ್ ಆಗಿದ್ದಕ್ಕೆ ಪಟಾಕಿ ಸಿಡಿಸಿ, ಸಿಹಿ ಹಂಚಿ ತಂದೆಯಿಂದ ಪಾರ್ಟಿ!

    SSLC ಯಲ್ಲಿ ಮಗ ಫೇಲ್ ಆಗಿದ್ದಕ್ಕೆ ಪಟಾಕಿ ಸಿಡಿಸಿ, ಸಿಹಿ ಹಂಚಿ ತಂದೆಯಿಂದ ಪಾರ್ಟಿ!

    ಭೋಪಾಲ್: ಸಾಮಾನ್ಯವಾಗಿ ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಅಥವಾ ರ್ಯಾಂಕ್ ಪಡೆದುಕೊಂಡರೆ ಪೋಷಕರು ಸಂಭ್ರಮಿಸಿ ಎಲ್ಲರಿಗೂ ಸಿಹಿ ಹಂಚುತ್ತಾರೆ. ಆದರೆ ಇಲ್ಲೊಬ್ಬರು ತಂದೆ, ತನ್ನ ಮಗ ಫೇಲ್ ಆಗಿದಕ್ಕೆ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ.

    ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸುರೇಂದ್ರ ಕುಮಾರ್ ವ್ಯಾಸ್ ತನ್ನ ಮಗ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಬೀದಿಯಲ್ಲಿ ಪೆಂಡಾಲ್ ಹಾಕಿಸಿ, ಪಟಾಕಿ ಸಿಡಿಸಿ ಹಾಗೂ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

    ಮಕ್ಕಳು ಪರೀಕ್ಷೆಯಲ್ಲಿ ಫೇಲ್ ಆದರೆ ಸಾಕು ಅವರು ಖಿನ್ನತೆಗೆ ಒಳಗಾಗುತ್ತಾರೆ. ಕೆಲವರಂತು ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಾರೆ. ಆದ್ದರಿಂದ ಈ ಪರೀಕ್ಷೆಯಲ್ಲಿ ನನ್ನ ಮಗ ಕೂಡ ಫೇಲ್ ಆಗಿದ್ದಾನೆ. ಮಕ್ಕಳು ಉತ್ತೀರ್ಣರಾದಾಗ ಮಾತ್ರ ಸಂಭ್ರಮಿಸಬಾರದು. ಅವರು ಫೇಲ್ ಆದಾಗಲೂ ನಾವು ಸಂಭ್ರಮಿಸಬೇಕು. ಇದರಿಂದ ಅವರನ್ನು ನಾವು ಪ್ರೇರೇಪಿಸಿದಂತಾಗುತ್ತದೆ ಎಂದು ತಂದೆ ಹೇಳಿದ್ದಾರೆ.

    ಫೇಲ್ ಆದಾಗ ನಾವು ಈ ರೀತಿಯಲ್ಲಿ ಅವರಿಗೆ ಉತ್ತೇಜನ ನೀಡಿದರೆ ಮುಂದೆ ಅವರು ತಮ್ಮ ಜೀವನದಲ್ಲಿ ಗೆಲುವು ಸಾಧಿಸುತ್ತಾರೆ. ಆದ್ದರಿಂದ ನನ್ನ ಮಗನನ್ನು ಪ್ರೇರೇಪಿಸುವ ಉದ್ದೇಶದಿಂದ ಈ ರೀತಿ ಸಂಭ್ರಮಿಸುತ್ತಿದ್ದೇನೆ ಎಂದು ತಿಳಿದರು. ಮಧ್ಯಪ್ರದೇಶದ ಇದೇ ಮೊದಲ ಬಾರಿಗೆ ಮಗ ಫೇಲ್ ಆಗಿದ್ದಕ್ಕೆ ಪಾರ್ಟಿ ಮಾಡಿ ಸಂಭ್ರಮಿಸಿರುವುದು.

    ಮಧ್ಯಪ್ರದೇಶದಲ್ಲಿ ಸೋಮವಾರ 10ನೇ ಹಾಗೂ 12 ನೇ ತರಗತಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಈ ಪರೀಕ್ಷೆಯ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಮಧ್ಯಪ್ರದೇಶದಲ್ಲಿ ಸುಮಾರು 11 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿದ್ದರು. ಅವರಲ್ಲಿ ಆರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

  • ಬಾಲಿವುಡ್ ನಟಿ ಜಾಕ್ವೇಲಿನ್ ಫರ್ನಾಂಡಿಸ್ ಕಾರು ಅಪಘಾತ!

    ಬಾಲಿವುಡ್ ನಟಿ ಜಾಕ್ವೇಲಿನ್ ಫರ್ನಾಂಡಿಸ್ ಕಾರು ಅಪಘಾತ!

    ಮುಂಬೈ: ಕಳೆದ ರಾತ್ರಿ ಬಾಲಿವುಡ್ ಬೆಡಗಿ ಜಾಕ್ವೇಲಿನ್ ಫರ್ನಾಂಡಿಸ್ ಪ್ರಯಾಣಿಸುತ್ತಿದ್ದ ಕಾರು ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಸಲ್ಮಾನ್ ಖಾನ್ ಮನೆಯಲ್ಲಿ ಪಾರ್ಟಿ ಮುಗಿಸಿಕೊಂಡು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು ಜಾಕ್ವೇಲಿನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ರೇಸ್- 3 ಚಿತ್ರದ ಶೂಟಿಂಗ್ ಮುಗಿದು, ಬಿಡುಗಡೆಗೆ ಸಿದ್ಧವಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡಕ್ಕೆ ಸಲ್ಮಾನ್ ಖಾನ್ ಮನೆಯಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಜಾಕ್ವೇಲಿನ್ ಕೂಡ ಭಾಗಿಯಾಗಿದ್ದರು.

    ವರದಿಗಳ ಪ್ರಕಾರ ಗುರುವಾರ ರಾತ್ರಿ 10.30ಕ್ಕೆ ಪಾರ್ಟಿ ಆರಂಭವಾಗಿತ್ತು. ಜಾಕ್ವೇಲಿನ್ ಪಾರ್ಟಿ ಮುಗಿಸಿ ಮಧ್ಯರಾತ್ರಿ 2.00 ಗಂಟೆಗೆ ಸಲ್ಮಾನ್ ಖಾನ್ ಮನೆಯಿಂದ ಕಾರಿನಲ್ಲಿ ಹೊರಟಿದ್ದು, ಮಧ್ಯರಾತ್ರಿ ಸುಮಾರು 2.45ಕ್ಕೆ ಬಾಂದ್ರಾದ ಕಾರ್ಟರ್ ರೋಡ್‍ನಲ್ಲಿ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದೆ.

    ಸದ್ಯ ಈ ಅಪಘಾತದಲ್ಲಿ ಜಾಕ್ವೇಲಿನ್ ಕಾರಿನ ಹೆಡ್‍ಲೈಟ್ಸ್ ಹೊಡೆದು ಹೋಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

    ರೆಮೋ ಡಿಸೋಜಾ ನಿರ್ದೇಶನದಲ್ಲಿ ರೇಸ್-3 ಚಿತ್ರ ಮೂಡಿ ಬರುತ್ತಿದ್ದು, ರಮೇಶ್ ಎಸ್.ತೌರಾನಿ ಮತ್ತು ಸಲ್ಮಾನ್ ಖಾನ್ ಬಂಡವಾಳ ಹಾಕಿದ್ದಾರೆ. ಸಲ್ಮಾನ್ ಖಾನ್, ಅನಿಲ್ ಕಪೂರ್, ಸನ್ನಿ ಡಿಯೋಲ್, ಜಾಕ್ವೇಲಿನ್ ಫರ್ನಾಂಡೀಸ್, ಡೈಸಿ ಶಾ ಮತ್ತು ಸಖೀಬ್ ಸಲೀಂ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರ ಹೊಂದಿದೆ. ಸಿನಿಮಾ ಈ ಬಾರಿ ಈದ್ ಗೆ ರಿಲೀಸ್ ಆಗಲಿದೆ.

  • ಒಟ್ಟಾಗಿ ಸಂಭ್ರಮಿಸಿದ ದರ್ಶನ್, ಆದಿತ್ಯ, ರಾಗಿಣಿ

    ಒಟ್ಟಾಗಿ ಸಂಭ್ರಮಿಸಿದ ದರ್ಶನ್, ಆದಿತ್ಯ, ರಾಗಿಣಿ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಗಿಣಿ ದ್ವಿವೇದಿ ಇತರೆ ಸ್ಯಾಂಡಲ್ ವುಡ್ ನಟರು ಒಟ್ಟಾಗಿ ಸೇರಿ ನಟ ಆದಿತ್ಯ ಸಿಂಗ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

    ಇತ್ತೀಚೆಗಷ್ಟೆ ಆದಿತ್ಯ ಅವರು ತಮ್ಮ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆದಿತ್ಯ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾರಂಗದ ಸ್ನೇಹಿತರಿಗೆಲ್ಲಾ ಒಂದು ವಿಶೇಷ ಪಾರ್ಟಿಯನ್ನು ಆಯೋಜನೆ ಮಾಡಿದ್ದರು.

    ಬರ್ತ್ ಡೇ ಪಾರ್ಟಿಗೆ ಹಿರಿಯ ನಟ ಅಂಬರೀಶ್, ಸೃಜನ್ ಲೋಕೇಶ್, ನಟಿ ರಾಗಿಣಿ ದ್ವಿವೇದಿ, ಅರ್ಜುನ್ ಸರ್ಜಾ, ದರ್ಶನ್ ಮತ್ತು ರಿಷಿಕಾ ಸಿಂಗ್ ಪಾಲ್ಗೊಂಡಿದ್ದರು. ಎಲ್ಲರೂ ಒಂದೆಡೆ ಸೇರಿ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿದ್ದಾರೆ.

    ಸಿನಿಮಾರಂಗದ ಸ್ನೇಹಿತರೆಲ್ಲಾ ಪಾರ್ಟಿಯಲ್ಲಿ ಸೇರಿ ಸಂಭ್ರಮಿಸಿದ ಅಪರೂಪದ ಕ್ಷಣಗಳನ್ನು ಫೋಟೋಗಳಲ್ಲಿ ಸೆರೆಹಿಡಿದಿದ್ದು, ಆ ಫೋಟೋಗಳನ್ನು ಆದಿತ್ಯ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದ ಸ್ನೇಹಿತರಿಗೆ ಧನ್ಯವಾದ ತಿಳಿಸಿದ್ದಾರೆ.

    ದರ್ಶನ್ ಗೆ ಆದಿತ್ಯ ತುಂಬಾ ಹತ್ತಿರದ ಸ್ನೇಹಿತರಾಗಿದ್ದು, ಇವರಿಬ್ಬರು ಜೊತೆಯಾಗಿ ಕೆಲವು ಸಿನಿಮಾಗಳನ್ನು ಸಹ ಮಾಡಿದ್ದಾರೆ. ಸದ್ಯಕ್ಕೆ ಆದಿತ್ಯ ಕೈನಲ್ಲಿ ನಾಲ್ಕೈದು ಸಿನಿಮಾಗಳಿದ್ದು, ರಾಗಿಣಿ ಮತ್ತು ಆದಿತ್ಯ ಕಾಂಬಿನೇಶನ್ ನಲ್ಲಿ ಕೂಡ ಒಂದು ಸಿನಿಮಾ ಮೂಡಿಬರುತ್ತಿದೆ.

    https://www.instagram.com/p/Bijej61Atuj/?utm_source=ig_embed

  • ಸ್ನೇಹಿತನ ಬರ್ತ್ ಡೇಯಂದು ಡಿಜೆ ಸಾಂಗಿಗಾಗಿ ಯುವಕನ ಹೆಣ ಬಿತ್ತು!

    ಸ್ನೇಹಿತನ ಬರ್ತ್ ಡೇಯಂದು ಡಿಜೆ ಸಾಂಗಿಗಾಗಿ ಯುವಕನ ಹೆಣ ಬಿತ್ತು!

    ನವದೆಹಲಿ: ಸ್ನೇಹಿತನ ಹುಟ್ಟುಹಬ್ಬದಂದು ಡಿಜೆ ಹಾಡಿಗಾಗಿ ಜಗಳ ಶುರುವಾಗಿ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಪಶ್ಚಿಮ ದೆಹಲಿಯ ಪಂಜಾಬಿ ಬಾಗ್ ರಾಫ್ಟಾರ್ ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ವಿಜಯ್ ದೀಪ್ ಮೃತ ದುರ್ದೈವಿ.

    ಘಟನೆಯ ವಿವರ?: ಇಶ್ಮಿತ್, ಈತ ಬಾರಿನಲ್ಲಿ ತನ್ನ 10 ಮಂದಿ ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದನು. ಈತನ ಸ್ನೇಹಿತರಲ್ಲಿ ಒಬ್ಬನಾದ ವಿಜಯ್ ದೀಪ್ ಡಿಜೆ, ದೀಪಕ್ ಬಿಶ್ತ್ ಅವನ ಬಳಿ ಹೋಗಿ ಹಾಡನ್ನು ಬದಲಿಸುವಂತೆ ಹೇಳಿದ್ದಾನೆ. ಆಗ ಬಿಶ್ತ್ ಹಾಡು ಬದಲಾಯಿಸಲು ನಿರಾಕರಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಇಶ್ಮಿತ್, ಆತನ ಸ್ನೇಹಿತರು, ಡಿಜೆ ಮತ್ತು ಇತರ ಬಾರ್ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ. ಆಗ ಬಾರಿನ ಕುರ್ಚಿಗಳನ್ನು ಎಸೆದು ಬಿಯರ್ ಬಾಟಲಿಗಳನ್ನು ಹೊಡೆದಿದ್ದು, ಶಸ್ತ್ರಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದಾರೆ.

    ಗಲಾಟೆಯ ಮಧ್ಯದಲ್ಲಿ ಡಿಜೆ ಚಾಕು ತೆಗೆದು ವಿಜಯ್ ದೀಪ್ ಇರಿದಿದ್ದಾನೆ. ಪರಿಣಾಮ ಹುಟ್ಟುಹಬ್ಬದ ಪಾರ್ಟಿಯಲ್ಲಿದ್ದ ವಿಜಯ್ ದೀಪ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಳಿಕ ಈ ಘಟನೆ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆದರೆ ಅಷ್ಟರಲ್ಲಿ ಬಾರಿನ ಸಿಬ್ಬಂದಿಗಳು ಸೇರಿದಂತೆ ಎಲ್ಲರೂ ಪರಾರಿಯಾಗಿದ್ದಾರೆ.

    ಪಬ್ ನಲ್ಲಿ ಯುವತಿಯೊಬ್ಬಳು ಇದ್ದು, ಗಲಾಟೆಯಲ್ಲಿ ಆಕೆಯ ತಲೆಗೆ ಪೆಟ್ಟಾಗಿದೆ. ನಂತರ ಆಕೆಯನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ರವಾನಿಸಿದ್ದೇವೆ. ಈ ಘಟನೆಗೆ ಸಂಬಂಧಿಸಿದಂತೆ ಡಿಜೆಯನ್ನು ಬಂಧಿಸಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ನಾವು ಬಾರಿನ ಸಿಸಿಟಿವಿ ಕ್ಯಾಮೆರಾವನ್ನು ವಶಪಡಿಸಿಕೊಂಡಿದ್ದು, ವಿಜಯ್ ದೀಪ್ ಗೆ ಇರಿದ ಚಾಕುವಿನ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಜೊತೆಗೆ ಈ ಕೊಲೆ ನಡೆದಾಗ ಬಾರಿನಲ್ಲಿದ್ದವರನ್ನು ವಿಚಾರಣೆ ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ರಿಯಲ್ ಸ್ಟಾರ್ ಉಪೇಂದ್ರರಿಂದ ಹೊಸ ಪಕ್ಷ ಸ್ಥಾಪನೆ

    ರಿಯಲ್ ಸ್ಟಾರ್ ಉಪೇಂದ್ರರಿಂದ ಹೊಸ ಪಕ್ಷ ಸ್ಥಾಪನೆ

    ಬೆಂಗಳೂರು: ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಕೆಪಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಈಗ ತಾವೇ ಹೊಸ ಪಕ್ಷವನ್ನು ಸ್ಥಾಪಿಸಿ ನೋಂದಣಿ ಮಾಡಿಸುತ್ತಿದ್ದಾರೆ.

    ದೆಹಲಿಯ ಚುನಾವಣಾ ಕಚೇರಿಗೆ ಹೋಗಿ ತನ್ನ ಉತ್ತಮ ಪ್ರಜಾಕೀಯ ಪಕ್ಷವನ್ನು ನೋಂದಣಿ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ದೆಹಲಿಯ ಚುನಾವಣಾ ಕಚೇರಿಯ ಮುಂಭಾಗ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋವನ್ನು ಟ್ವೀಟ್ ಮಾಡಿ ಉತ್ತಮ ಪ್ರಜಾಕೀಯ ಪಕ್ಷ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕೆಪಿಜೆಪಿಗೆ ನಟ ಉಪೇಂದ್ರ ರಾಜೀನಾಮೆ – ಹೊಸ ಪಕ್ಷ ಸ್ಥಾಪನೆಗೆ ನಿರ್ಧಾರ

    ಕೆಪಿಜೆಪಿಗೆ ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮಗೂ ಕೆಪಿಜೆಪಿಗೂ ಇನ್ಮುಂದೆ ಸಂಬಂಧ ಇರಲ್ಲ. ಪ್ರಜಾಕೀಯ ಹೆಸರಲ್ಲಿ ಹೊಸ ಪಕ್ಷ ಕಟ್ಟಲು ತೀರ್ಮಾನ ಮಾಡಿದ್ದೇವೆ. ಇಂದಿನಿಂದಲೇ ಹೊಸ ಪಕ್ಷ ಸ್ಥಾಪನೆ ಕಾರ್ಯ ಆರಂಭಿಸುತ್ತೇವೆ. ಪ್ರಜಾಕೀಯದ ಸಿದ್ಧಾಂತ ಇಟ್ಟುಕೊಂಡೇ ಹೊಸ ಪಕ್ಷ ಕಟ್ಟುತ್ತೇವೆ. ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತೇವೆ. ಎಲ್ಲರೂ ಸೇರಿ ಒಮ್ಮತದ ತೀರ್ಮಾನಕ್ಕೆ ಬಂದ್ದಿದ್ದೇವೆ. ನಾನು ಹಾಗೂ ನನ್ನ ಜೊತೆ ನಾಲ್ಕೈದು ಜನ ಸೇರಿ ಎಲ್ಲರೂ ರಾಜೀನಾಮೆ ನೀಡುತ್ತಿದ್ದೇವೆ ಎಂದು ಹೇಳಿದ್ದರು.

    ಪ್ರಜಾಕೀಯ ವಿಷಯವನ್ನು ಜನರಿಗೆ ತಿಳಿಸುತ್ತೇವೆ. ಅದಷ್ಟು ಬೇಗ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡುತ್ತೇವೆ. ಇದೇ ವಿಧಾನಸಭೆ ಚುನಾವಣೆಗೆ ಸ್ಫರ್ಧೆ ಮಾಡುತ್ತೇವೆ. ಇಲ್ಲವಾದ್ರೆ ಪಾಲಿಕೆ ಚುನಾವಣೆ ಅಥವಾ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ಪ್ರಜಾಕೀಯ ಬಿಟ್ಟು ರಾಜಕೀಯ ಮಾಡಲ್ಲ ಎಂದು ಅಂದು ತಿಳಿಸಿದ್ದರು.

     

     

  • ಕೊಪ್ಪಳದಲ್ಲಿ ಕೈ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ – ವಿಡಿಯೋ ವೈರಲ್

    ಕೊಪ್ಪಳದಲ್ಲಿ ಕೈ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ – ವಿಡಿಯೋ ವೈರಲ್

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಈಳಿಗನೂರ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಬಾಡೂಟ ಹಾಕಿಸಿದ್ದಾರೆ.

    ಬುಧವಾರ ಶಾಸಕ ಶಿವರಾಜ್ ತಂಗಡಗಿ ಬೆಂಬಲಿಗರು ಸಭೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಈಳಿಗನೂರ್ ಕ್ಯಾಂಪ್ ಹೊರವಲಯದಲ್ಲಿ ಭರ್ಜರಿ ಬಾಡೂಟ ಏರ್ಪಡಿಸಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರ ಸಭೆ ಬಳಿಕ ಭರ್ಜರಿ ಬಾಡೂಟ ಹಾಕಿಸಿದ್ದಾರೆ.

    ಶಾಸಕ ಶಿವರಾಜ್ ತಂಗಡಗಿ ಬೆಂಬಲಿಗರಿಂದ ಸಭೆ ಆಯೋಜಿಲಾಗಿದ್ದು, ಈಳಿಗನೂರ್ ಕ್ಯಾಂಪ್ ಹೊರವಲಯದ ಜಮೀನೊಂದರಲ್ಲಿ ಎಣ್ಣೆ ಮತ್ತು ಬಾಡೂಟ ಹಂಚಿದ್ದಾರೆ.

    https://www.youtube.com/watch?v=QEHTOV2-_qU