Tag: party

  • 2019ಕ್ಕೆ ಪಾರ್ಟಿ ಮೂಡ್‍ನಲ್ಲಿರುವವರು ಈ ಸುದ್ದಿ ಓದಲೇಬೇಕು

    2019ಕ್ಕೆ ಪಾರ್ಟಿ ಮೂಡ್‍ನಲ್ಲಿರುವವರು ಈ ಸುದ್ದಿ ಓದಲೇಬೇಕು

    ಬೆಂಗಳೂರು: 2018 ಮುಗಿತು 2019ಕ್ಕೆ ವೆಲ್‍ಕಮ್ ಮಾಡಲು ಪಾರ್ಟಿ ಮೂಡ್‍ನಲ್ಲಿ ಇರುವವರು ಈ ಸುದ್ದಿ ಓದಲೇ ಬೇಕು. ನ್ಯೂಯರ್ ಕಿಕ್‍ನಲ್ಲಿ ಗಲಾಟೆ ಮಾಡಿದರೆ ಎಚ್ಚರವಾಗಿರಿ. ಏಕೆಂದರೆ ಪೊಲೀಸರಿಗೆ ಮಾರ್ಷಲ್ ಸಾಥ್ ಕೊಡುತ್ತಿದ್ದಾರೆ.

    ಬೆಂಗಳೂರಿನ ಪಾಲಿಕೆಯ ಮಾರ್ಷಲ್ ಗಳು ಕಸ ವಿಲೇವಾರಿ ವಿಚಾರದಲ್ಲಿ ನಗರದ ಹಲವೆಡೆ ಗಸ್ತು ಕಾಯಲಿದ್ದಾರೆ. ನ್ಯೂ ಇಯರ್ ದಿನ ಎಲ್ಲೆಂದರಲ್ಲಿ ಕುಡಿದು ಬಾಟೆಲ್ ಎಸೆದರೆ, ಸಿಕ್ಕ ಸಿಕ್ಕ ಕಡೆ ಪಾಲಿಕೆ ಗೋಡೆಯನ್ನು ಶೌಚಾಲಯದಂತೆ ಬಳಸಿದರೆ ಮುಗಿತು. ತಿಂಡಿ ಪ್ಯಾಕೆಟ್ ತಿಂದು ರಸ್ತೆ, ಕಂಬ, ಫುಟ್ ಪಾತ್ ಮೇಲೆ ಸಿಕ್ಕ ಕಡೆ ಎಸೆದರೆ ಶಿಕ್ಷೆಗೆ ಗುರಿಯಾಗುತ್ತಿರಿ.

    ಮೋಜು ಮಸ್ತಿ ಅಂತ ಕಸ ಹಾಕಿದರೆ 500 ರೂ. ನಿಂದ 50 ಸಾವಿರವರೆಗೂ ದಂಡ ಹಾಕಲು ಪಾಲಿಕೆ ಸಜ್ಜಾಗಿದೆ. ಈ ನಿಟ್ಟಿನಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ ಅಂತ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಇಂದಿರಾ ನಗರ, ಕೋರಮಂಗಲ ಎಲ್ಲೆಲ್ಲಿ ಪಾರ್ಟಿ ಮಾಡುತ್ತಿರಾ ಅಲ್ಲಿ ಮಾರ್ಷಲ್ ಹಾಜರಿರುತ್ತಾರೆ. ಬೆಂಗಳೂರಿನ 50 ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಮಾರ್ಷಲ್ ಸಜ್ಜಾಗಿರುತ್ತಾರೆ. ಫೈನ್ ಹಾಕಲು ಬೆತ್ತ ಹಿಡಿದು ನಾಳೆ ಸಂಜೆ 4 ಗಂಟೆಯಿಂದಲೇ ಗಲ್ಲಿ ಗಲ್ಲಿಗಳಲ್ಲಿ ಗಸ್ತು ಕಾಯುತ್ತಾ ನಿಂತಿರುತ್ತಾರೆ.

    ಹೊಸ ವರ್ಷದ ಕಿಕ್ ನಲ್ಲಿ ನಗರದ ಸೌಂದರ್ಯಕ್ಕೆ ಧಕ್ಕೆ ತರುವ ಮುನ್ನ ಎಚ್ಚರವಾಗಿರಿ. ನಗರದ ಸ್ವಚ್ಚತೆ ಕಾಪಾಡಲು ಮಾರ್ಷಲ್ ಗಳನ್ನು ನೇಮಕ ಮಾಡಲಾಗಿದೆ. ಮಾರ್ಷಲ್ ಗಳು ಸಮವಸ್ತ್ರ ಹಾಗೂ ಬೆತ್ತದ ಆಯುಧ ಹೊಂದಿರುತ್ತಾರೆ. ನ್ಯೂ ಇಯರ್ ದಿನ ಸದ್ದು ಮಾಡಿ ಕುಣಿಯಿರಿ, ಮಸ್ತಿ ಅಂತ ಮ್ಯೂಸಿಕ್ ಕೇಳಿ, ಸುತ್ತಾಡಿ, ಓಡಿ, ಹಾಡು ಹೇಳಿಕೊಳ್ಳಿ ಆದರೆ ಗಲೀಜು ಮಾಡಬೇಡಿ. ಹೊಸ ವರ್ಷವನ್ನು ಸ್ವಚ್ಚತೆಯೊಂದಿಗೆ ವೆಲ್‍ಕಮ್ ಮಾಡಿ ಎಂದು ಬಿಬಿಎಂಪಿ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತೋಟದ ಮನೆಯಲ್ಲಿ ಗಾಂಜಾ ಗಮ್ಮತ್ತು? ನಶೆಯಲ್ಲಿ ಯುವಕ-ಯುವತಿಯರ ತೇಲಾಟ!

    ತೋಟದ ಮನೆಯಲ್ಲಿ ಗಾಂಜಾ ಗಮ್ಮತ್ತು? ನಶೆಯಲ್ಲಿ ಯುವಕ-ಯುವತಿಯರ ತೇಲಾಟ!

    ಚಿಕ್ಕಬಳ್ಳಾಪುರ: ಜಿಲ್ಲೆಯ ಹನುಮಂತಪುರ ಗ್ರಾಮದ ತೋಟದ ಮನೆಯೊಂದರಲ್ಲಿ ಮದ್ಯದ ಪಾರ್ಟಿ ಜೋರಾಗಿ ನಡೆದಿದ್ದು, ಭಾಗಿಯಾಗಿದ್ದವರು ಗಾಂಜಾ ಸೇವನೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ಬೆಂಗಳೂರಿನಿಂದ ಬಂದಿರುವ ಯುವಕ-ಯುವತಿಯರು ಮದ್ಯದ ಪಾರ್ಟಿ ಆಯೋಜನೆ ಮಾಡಿದ್ದು, ತೋಟದ ಮನೆಯ ಬಳಿ ಸುತ್ತಲೂ ರಾಶಿ ರಾಶಿ ಮದ್ಯದ ಬಾಟಲಿಗಳು ಬಿದ್ದಿವೆ. ಮದ್ಯದ ಪಾರ್ಟಿಯಲ್ಲಿ ಯುವಕ-ಯುವತಿಯರು ತೇಲಾಡುತ್ತಾ ನೃತ್ಯ ಮಾಡಿರುವ ವಿಡಿಯೋ ಈಗ ಬೆಳಕಿಗೆ ಬಂದಿದೆ. ವಿಡಿಯೋದಲ್ಲಿ ಯುವಕ-ಯುವತಿಯರು ನಶೆಯಲ್ಲಿ ತೇಲಾಡ್ತಾ ನೃತ್ಯ ಮಾಡಿದ್ದು, ಮದ್ಯದ ಜೊತೆ ಗಾಂಜಾ ಕೂಡ ಸೇವಿಸಿರಬಹುದು ಅನ್ನೋ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಮಾಹಿತಿ ತಿಳಿದ ವೃತ್ತ ನಿರೀಕ್ಷಕ ಸುದರ್ಶನ್ ತೋಟದ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಈ ವೇಳೆ ತೋಟದ ಮಾಲೀಕ ಕೃಷ್ಣಪ್ಪ ನವರನ್ನು ವಿಚಾರಣೆ ನಡೆಸಿದ್ದು, ನಮ್ಮ ಅಣ್ಣನ ಮಕ್ಕಳಾದ ಇಬ್ಬರ ಯುವಕರ ಜೊತೆ ಅವರ ಸ್ನೇಹಿತರು ಗಿಡಮೂಲಿಕೆಗಳ ಬಗ್ಗೆ ರಿಸರ್ಚ್ ಮಾಡಲೆಂದು ತೋಟಕ್ಕೆ ಬಂದಿದ್ದರು. ಒಂದು ದಿನ ಮದ್ಯದ ಪಾರ್ಟಿ ಆಯೋಜನೆ ಮಾಡಿದ್ದರು. ಆದರೆ ಗಾಂಜಾ ಸೇವನೆ ಮಾಡಿಲ್ಲ ಅಂತ ಸ್ಪಷ್ಟನೆ ನೀಡಿದರು. ಆದರೆ ಕೆಲ ಸ್ಥಳೀಯರ ಮಾಹಿತಿ ಪ್ರಕಾರ ವಿಕೇಂಡ್‍ಗಳಲ್ಲಿ ತೋಟದ ಮನೆಯಲ್ಲಿ ಮದ್ಯದ ಪಾರ್ಟಿಗಳನ್ನು ಆಯೋಜನೆ ಮಾಡಲಾಗುತ್ತಿದೆ ಅಂತ ಹೇಳುತ್ತಿದ್ದಾರೆ. ಬೆಂಗಳೂರಿನಿಂದ ಬರುವ ಯುವಕ-ಯುವತಿಯರು ಕುಡಿದು ತೂರಾಡಿತ್ತುತ್ತಾರೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.

    ಘಟನಾ ಸ್ಥಳದಲ್ಲಿ ರಾಶಿ ರಾಶಿ ಮದ್ಯದ ಬಾಟಲಿಗಳು ಪತ್ತೆಯಾಗಿರುವುದು ಪಾರ್ಟಿ ಆಯೋಜನೆ ಮಾಡಿರುವುದು ಧೃಡವಾಗುತ್ತಿದೆ. ಆದರೆ ಗಾಂಜಾ ಸೇವೆನೆ ಬಗ್ಗೆ ಧೃಡಪಟ್ಟಿಲ್ಲ. ಅಂತಹ ಯಾವುದೇ ಕುರುಹುಗಳು ಸ್ಥಳದಲ್ಲಿ ಪತ್ತೆಯಾಗಿಲ್ಲ. ಮುಂದೆ ಈ ರೀತಿಯ ಮದ್ಯದ ಪಾರ್ಟಿಗಳನ್ನು ಆಯೋಜನೆ ಮಾಡದಂತೆ ಸಿಪಿಐ ಸುದರ್ಶನ್ ತೋಟದ ಮಾಲೀಕ ಕೃಷ್ಣಪ್ಪಗೆ ತಾಕೀತು ಮಾಡಿದ್ದಾರೆ.

    ಬೆಟ್ಟ ಗುಡ್ಡಗಳ ಪಕ್ಕದಲ್ಲೇ ಇರುವ ತೋಟದಲ್ಲಿ ಮದ್ಯದ ಪಾರ್ಟಿಗಳು ಜೋರಾಗಿ ನಡೆದಿದ್ದು, ಈ ಭಾಗದಲ್ಲಿ ಚಿರತೆ ಸಹ ಇದೆಯಂತೆ. ಹೀಗಾಗಿ ಇಂತಹ ಸ್ಥಳಗಳಲ್ಲಿ ಮದ್ಯದ ಪಾರ್ಟಿ ಮಾಡಿ ಅನಾಹುತ ಸಂಭವಿಸಿದರೆ ಯಾರು ಹೊಣೆ ಅನ್ನೋ ಪ್ರಶ್ನೆ ಸಹ ಕಾಡುತ್ತೆ. ಹೀಗಾಗಿ ಪೊಲೀಸರು ಗಾಂಜಾ ಗಮ್ಮತ್ತು ನಡೆದಿದಿಯಾ ಅನ್ನೋ ಸತ್ಯ ಬಯಲಿಗೆ ತರುವುದರ ಜೊತೆಗೆ ಮುಂದೆ ಆಗಬಹುದಾದ ಅನಾಹುತಗಳಿಗೆ ಬ್ರೇಕ್ ಹಾಕಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ವೆಲ್’ಕಂ 2019- ಆರೋಗ್ಯಕರ ರೀತಿಯಲ್ಲಿ ವರ್ಷಾಚರಣೆ

    ‘ವೆಲ್’ಕಂ 2019- ಆರೋಗ್ಯಕರ ರೀತಿಯಲ್ಲಿ ವರ್ಷಾಚರಣೆ

    – ಹ್ಯಾವ್ ಎ ಹ್ಯಾಪಿ ಅಂಡ್ ಸೇಫ್ ನ್ಯೂ ಇಯರ್ ಸೆಲಬ್ರೆಷನ್

    -ಸುನಿತಾ ಎ.ಎನ್.

    ನ್ನೇನು 2018ಕ್ಕೆ ಬೈ ಬೈ ಹೇಳಿ.. 2019ಕ್ಕೆ ಹಾಯ್.. ಹಲೋ ಹೇಳೋ ಕಾಲ ಬಂದೇ ಬಿಡ್ತು.. ನ್ಯೂ ಇಯರ್ ನ ಗ್ರ್ಯಾಂಡ್ ಆಗಿ ವೆಲ್‍ಕಂ ಮಾಡಲು ಈಗಾಗಲೇ ಸಾಕಷ್ಟು ತಯಾರಿ ನಡೆಸಿದ್ದೀರಿ ಅಲ್ವಾ. ಈ ಬಾರಿ ಹಲವು ಪಬ್, ರೆಸ್ಟೋರೆಂಟ್, ಹೋಟೆಲ್‍ಗಳು ಪ್ರೋಗ್ರಾಂ ಅರೆಂಜ್ ಮಾಡಿವೆ. ಸಾವಿರಾರು ರೂಪಾಯಿಗೆ ಎಂಟ್ರಿ ಟಿಕೆಟ್ ಅನ್ನು ನೀಡ್ತಿದೆ. ಆನ್‍ಲೈನ್ ಬುಕ್ಕಿಂಗ್‍ನಲ್ಲೂ ಟಿಕೆಟ್‍ಗಳು ಸೇಲ್ ಆಗ್ತಿವಿ. ನೀವು ನ್ಯೂ ಇಯರ್ ಆಚರಣೆ ಮಾಡ್ಬೇಡಿ ಅಂತ ನಾವ್ ಹೇಳ್ತಿಲ್ಲ. ಬದಲಿಗೆ ಆರೋಗ್ಯಕರ ರೀತಿಯಲ್ಲಿ ಆಚರಣೆ ಮಾಡಿ ಎನ್ನುವುದೇ ನಮ್ಮ ಕಳಕಳಿ.

    ನ್ಯೂ ಇಯರ್ ಆಚರಿಸಿ ರಾತ್ರಿ ನಿದ್ದೆಗೆಟ್ಟು ಹಗಲು ಮನೆಗೆ ಹೋಗೋಕೆ ಆಗದೇ ವೆಹಿಕಲ್‍ಗಳು ಅಪಘಾತವಾಗಿ ಸಾವು-ನೋವು ಸಂಭವಿಸುತ್ತಲೇ ಇರುತ್ತದೆ. ಇದರಿಂದ ಆಚರಣೆ ಇನ್ನೊಂದು ಸಲ ಬೇಕಾದರೆ ಮಾಡಬಹುದು. ನಿಮ್ಮ ಜೀವ ಎಲ್ಲಕ್ಕಿಂತಲೂ ಅತ್ಯಮೂಲ್ಯವಾಗಿದ್ದು, ಬೆಲೆ ಕಟ್ಟಲು ಸಾಧ್ಯವಿಲ್ಲದ ರತ್ನ. ಎಲ್ಲಕ್ಕೂ ಮಿಗಿಲಾಗಿ ಒಮ್ಮೆ ಕಳೆದುಕೊಂಡರೆ ಮತ್ತೆಂದೂ ಸಿಗಲ್ಲ. ವರ್ಷದ ಕೊನೆ ದಿನ. ಹೊಸ ವರ್ಷದ ಆರಂಭದ ದಿನ ನೆನಪಿನಲ್ಲಿ ಉಳಿಯಬೇಕು ಅಂದುಕೊಳ್ಳುವುದು ನಿಜ. ಅದೇ ಆಚರಣೆಯಿಂದ ಜೀವ, ಜೀವನ ಅಂತ್ಯವಾಗದಿರಲಿ. ಆರೋಗ್ಯಕರ ಆಚರಣೆಯಿಂದ ಜೀವನದಲ್ಲಿ ನಗು ತುಂಬಿರಲಿ. ಹೀಗಾಗಿ ನ್ಯೂ ಇಯರ್ ಈವ್. ಹೊಸ ವರ್ಷಾಚರಣೆ ಮಾಡುವ ಮುನ್ನ ಒಂದಲ್ಲ ನೂರು ಬಾರಿ ಯೋಚಿಸಿ ನೋಡಿ.

    ಬೆಂಗಳೂರಿನ ಬಿಗ್ರೇಡ್ ರೋಡ್. ಎಂ. ಜಿ ರೋಡ್‍ನಲ್ಲಿ ರಾತ್ರಿ ವೇಳೆ ಕತ್ತಲೆ ಬೆಳಕಿನ ಆಟದಲ್ಲಿ ಮೈ ಮರೆತು ಕುಣಿದು ಕುಪ್ಪಳಿಸುವುದು. ಮದ್ಯ, ಕೂಲ್ ಡ್ರಿಂಕ್ಸ್ ಕುಡಿದು ಮಜಾ ಮಾಡೋದು. ಪರಸ್ಪರ ವಿಶ್ ಮಾಡೋದು.. ಓ.. ಎಂದು ಕೂಗೋದು ನೋಡ್ತೀರಿ, ಕೇಳ್ತೀರಿ.. ಮಿಗಿಲಾಗಿ ಹಲವರು ಭಾಗಿ ಆಗಿ ಎಂಜಾಯ್ ಮಾಡಿರ್ತೀರಿ. ಈ ರೀತಿ ಮಾಡಿದ್ರೆನೇ ಮಾತ್ರ ನ್ಯೂ ಇಯರ್ ಸೆಲೆಬ್ರಿಷನ್ ಅಲ್ಲ. ನಾವು ಹೇಳುವ ರೀತಿಯಲ್ಲಿ ಮಾಡಿನೋಡಿ.. ಡಬಲ್ ಖುಷಿ ನಿಮ್ಮದಾಗುತ್ತೆ.. ಅದಕ್ಕೂ ಮುನ್ನ ನಾವ್ ಯಾಕೆ ಈ ರೀತಿ ಹೇಳ್ತೀದ್ದಿವಿ ಅಂತಾ ನೋಡ್ಬಿಡಿ..

    ಮೈ ಮರೆತರೆ ಅನಾಹುತ ಕಟ್ಟಿಟ್ಟ ಬುತ್ತಿ..!
    * ಈಗಿನ ಕಾಲದ ಯುವಕ ಯುವತಿಯರಿಗೆ ಲೇಟ್ ನೈಟ್ ಪಾರ್ಟಿ ಅಂದ್ರೆ ಫುಲ್ ಕ್ರೇಜ್. ಅದೇ ಲೇಟ್ ನೈಟ್‍ನಲ್ಲಿ ಮೈ ಮರೆತರೆ ನೀವು `ಲೇಟ್’ ಆಗ್ಬಹುದು.. ಎಚ್ಚರ ಇರಲಿ..
    * ಮಬ್ಬು ಬೆಳಕು.. ಕಲರ್ ಕಲರ್ ಲೈಟಿಂಗ್ಸ್.. ಮೈ ಮನ ಕುಣಿಸುವ ಮ್ಯೂಸಿಕ್ ನಡುವೆ ನಾವೂ ಹುಚ್ಚೆದ್ದು ಕುಣಿಯಬೇಕು ಅನ್ನಿಸುತ್ತೆ. ನಿಮಗೆ ನಿಮ್ಮ ಮೇಲೆ ಎಚ್ಚರ ಇರಲಿ. ಕಂಟ್ರೋಲ್ ಇರಲಿ
    * ಯುವತಿಯರು ಪಾರ್ಟಿಗೆ ಹೋಗುವ ಮುನ್ನ ತಮ್ಮ ಉಡುಗೆ- ತೊಡುಗೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ನಿಮಗೆ ಯಾವುದು ಕಂಫರ್ಟ್ ಆಗಿರೊತ್ತೋ ಅಂತಹ ಡ್ರೆಸ್ ಧರಿಸಿ. ಇಲ್ಲವಾದಲ್ಲಿ ಪಾರ್ಟಿ ತುಂಬೆಲ್ಲಾ ಇರಿಸು ಮುರಿಸು ಖಚಿತ. ಹೀಗಾಗಿ ಡ್ರೆಸ್ ಸೆನ್ಸ್ ಬಗ್ಗೆ ಎಚ್ಚರ ಇರಲಿ.

    * ಪಾರ್ಟಿಯಲ್ಲಿ ಪರಸ್ಪರ ವಿಶ್ ಎಕ್ಸ್ ಚೇಂಜ್ ಮಾಡಿಕೊಳ್ಳುವಾಗ, ಮಾತಾಡುವಾಗ, ಖುಷಿ ವ್ಯಕ್ತಪಡಿಸುವ ವೇಳೆ ನಿಮ್ಮ ಮಾತಿನ ಮೇಲೆ ಎಚ್ಚರ ಇರಲಿ.
    * ತಡರಾತ್ರಿಯ ಪಾರ್ಟಿಯಲ್ಲಿ ಡ್ರಿಂಕ್ಸ್ ಕಾಮನ್. ನೀವು ಡ್ರಿಂಕ್ಸ್ ಮಾಡುವಾಗ ಎಚ್ಚರದಿಂದಿರಿ. ನಿಮ್ಮ ಡ್ರಿಂಕ್ಸ್ ಲಿಮಿಟ್ ಮೀರಿದ್ರೇ ನಿಮಗೆ ಅಪಾಯ.
    * ನ್ಯೂ ಇಯರ್ ಪಾರ್ಟಿ ಮಧ್ಯರಾತ್ರಿ 12 ಗಂಟೆಗೆ ಶುರುವಾದರೂ 12 ಗಂಟೆ ದಾಟಿದ ಮೇಲೆ ಪಾರ್ಟಿ ಡಲ್ ಹೊಡೆಯುತ್ತೆ. ಹೀಗಾಗಿ ಮಧ್ಯರಾತ್ರಿ 1, 2, 3 ಅಂತ ತಡರಾತ್ರಿವರೆಗೂ ಇರಲೇಬೇಡಿ.

    * ಪಾರ್ಟಿ ಅಂದ ಮೇಲೆ ಪರಿಚಯ ಇರೋರು, ಇಲ್ಲದೇ ಇರೋರು, ಫ್ರೆಂಡ್ಸ್ ಸೇರಿದಂತೆ ಎಲ್ಲರೂ ಬರ್ತಾರೆ. ಹಾಗಂತ ಎಲ್ಲರನ್ನೂ ಮಾತಾಡಿಸಿ. ಫ್ರೆಂಡ್ಸ್ ಮಾಡಿಕೊಳ್ಳೋಕೆ ಹೋಗಬೇಡಿ. ಅಪರಿಚಿತರೊಂದಿಗೆ ಮಾತಾಡುವಾಗ ಎಚ್ಚರ ಇರಲಿ.
    * ಪಾರ್ಟಿ ಮುಗಿಸಿಕೊಂಡು ಹೋಗುವಾಗ ತಡ ಆಗೋದು ಗ್ಯಾರಂಟಿ. ಹಾಗಂತ ಫ್ರೆಂಡ್ಸ್ ಡ್ರಾಪ್ ಮಾಡ್ತಾರೆ. ನನ್ನ್ ಫ್ರೆಂಡ್‍ನ ಫ್ರೆಂಡ್ ಬಿಡ್ತಾರೆ.. ನನ್ನ ಮನೆ ಬಳಿಯೇ ಈತ/ಈಕೆ ಇರೋದು ಅಂತೆಲ್ಲಾ ಹೋಗಲೇಬೇಡಿ.
    * ನೀವು ಡ್ರಿಂಕ್ಸ್ ಮಾಡಿ ವಾಹನ ಚಲಾಯಿಸಲು ಯೋಗ್ಯರಿದ್ದರೇ ಮಾತ್ರ ನಿಮ್ಮ ವಾಹನವನ್ನು ಚಲಾಯಿಸಿಕೊಂಡು ಹೋಗಿ. ಇಲ್ಲವಾದಲ್ಲಿ ಸುರಕ್ಷೆಗಾಗಿ ಸಾರ್ವಜನಿಕ ವಾಹನ ಬಳಸಿ.

    * ಈ ಲೇಟ್ ನೈಟ್ ಪಾರ್ಟಿಗೆ ಸ್ಟಾರ್ಟ್ ಅನ್ನೋದು ಇರಲ್ಲ. ಎಂಡ್ ಅನ್ನೋದು ಇರಲ್ಲ. ಆವರೆಡನ್ನೂ ನಾವೇ ಪ್ಲಾನ್ ಮಾಡಬೇಕು. ಹೀಗಾಗಿ ಮಧ್ಯರಾತ್ರಿಯಿಂದ ತಡರಾತ್ರಿ ಅಥವಾ ತಡರಾತ್ರಿಯಿಂದ ಮುಂಜಾನವರೆಗೂ ಅಂತಾ ಪಾರ್ಟಿಯಲ್ಲಿರಬೇಡಿ. ನಿಮ್ಮ ಸುರಕ್ಷೆಗಾಗಿ ಆದಷ್ಟೂ ಬೇಗ ಮನೆ ಸೇರಿಕೊಳ್ಳಿ.
    * ಯಾವುದೇ ಅನಾಹುತ ಆಗುವ ಮುನ್ನ ಎಚ್ಚೆತ್ತುಕೊಂಡರೆ ಲೈಫ್ ಇಸ್ ಸೇಫ್. ಅದೇ ವೈಸ್.

    ಹಾಗಾದ್ರೆ, ಯಾವೆಲ್ಲಾ ರೀತಿಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಬಹುದು..
    * ಸಿಂಪಲ್ ಆಗಿ ಮನೆಯಲ್ಲೇ ಕೇಕ್ ಕಟ್ ಮಾಡಿ.. ಮನೆ ಮಂದಿ ಎಲ್ಲಾ ಸಂಭ್ರಮಿಸಿ.
    * ಕುಟುಂಬಸ್ಥರೊಂದಿಗೆ ಸಂತೋಷದಿಂದ ಕಾಲ ಕಳೆಯಿರಿ.
    * ಕಲ್ಚರಲ್ ಪ್ರೋಗ್ರಾಂನಲ್ಲಿ ಆಸಕ್ತಿ ಇರೋರು ಮ್ಯೂಸಿಕ್ ಕೇಳಿ, ಡ್ಯಾನ್ಸ್ ಮಾಡಿ ಸಂಭ್ರಮಿಸಿ.
    * ರಾತ್ರಿ ನೀವು ವಾಸ ಇರುವ ಕಡೆ ಕೇಕ್ ಕಟ್ ಮಾಡಿ. ಬೆಳಗ್ಗೆ ಎದ್ದು ದೇಗುಲಗಳಿಗೆ ಭೇಟಿ ನೀಡಿ. ಇದ್ರಿಂದ ಮನಃಶಾಂತಿ ಸಿಗುತ್ತೆ. ದೇವರ ಆಶೀರ್ವಾದವೂ ಸಿಗುತ್ತದೆ.


    * ಹೋಟೆಲ್‍ನಲ್ಲಿ ಕ್ಯಾಂಡಲ್‍ಲೈಟ್ ಡಿನ್ನರ್ ಮಾಡಿ.
    * ಫ್ರೆಂಡ್ಸ್ ಜೊತೆ ಮನೆಯಲ್ಲಿ ಗೆಟ್ ಟು ಗೆದರ್ ಮಾಡಿ ಸಂತಸ ಹಂಚಿಕೊಳ್ಳಿ.
    * ಒಂದೆಡೆ ಸೇರಿ ನಿಮ್ಮ ಜೀವನದ ಖುಷಿ ಕ್ಷಣಗಳನ್ನು ಶೇರ್ ಮಾಡಿ ಸಂಭ್ರಮಿಸಿ.

    ಟೋಟಲಿ.. ನಾವ್ ಹೇಳೋದು ಇಷ್ಟೇ.. ಹ್ಯಾವ್ ಎ ಹ್ಯಾಪಿ ಅಂಡ್ ಸೇಫ್ ನ್ಯೂ ಇಯರ್ ಸೆಲಬ್ರೆಷನ್. ಅಂಡ್ ಹ್ಯಾಪಿ ನ್ಯೂ ಇಯರ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬರ್ತ್ ಡೇ ಪಾರ್ಟಿ ಮುಗಿಸಿ ಬೈಕಿನಲ್ಲಿ ಬರುತ್ತಿದ್ದ ವಿದ್ಯಾರ್ಥಿ ಸಾವು

    ಬರ್ತ್ ಡೇ ಪಾರ್ಟಿ ಮುಗಿಸಿ ಬೈಕಿನಲ್ಲಿ ಬರುತ್ತಿದ್ದ ವಿದ್ಯಾರ್ಥಿ ಸಾವು

    ಬೆಂಗಳೂರು: ಬರ್ತ್ ಡೇ ಪಾರ್ಟಿ ಮುಗಿಸಿ, ಕುಡಿತದ ಅಮಲಿನಲ್ಲೇ ಬೈಕ್ ಚಲಾಯಿಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ನಗರದ ಉತ್ತರಹಳ್ಳಿಯ ಚನ್ನಸಂದ್ರದ ಬಳಿ ನಡೆದಿದೆ.

    ಶಿವಶಂಕರ್ ಚೌದರಿ ಮೃತ ವಿದ್ಯಾರ್ಥಿ. ಭಾನುವಾರ ಮೃತ ಶಿವಶಂಕರ್ ತನ್ನ ಹುಟ್ಟುಹಬ್ಬದ ನಿಮಿತ್ತ ಬೊಮ್ಮನಹಳ್ಳಿಯಲ್ಲಿರುವ ಸ್ನೇಹಿತನ ಮನೆಗೆ ತೆರಳಿದ್ದ. ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಉತ್ತರಹಳ್ಳಿಯ ಚನ್ನಸಂದ್ರದ ಬಳಿ ಬೈಕಿನ ನಿಯಂತ್ರಣ ತಪ್ಪಿ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಮೃತ ಶಿವಶಂಕರ್ ಕುಡಿದ ಮತ್ತಿನಲ್ಲೇ ವೇಗವಾಗಿ ಬೈಕ್ ಚಲಾಯಿಸಿದ್ದ. ತಲೆಗೆ ಹೆಲ್ಮೆಟ್ ಕೂಡ ಹಾಕಿರಲಿಲ್ಲ. ಬಿದ್ದ ರಭಸಕ್ಕೆ ತಲೆಗೆ ಗಂಭೀರವಾಗಿ ಪೆಟ್ಟಾದ ಕಾರಣ ಸ್ಥಳದಲ್ಲೇ ಅಸುನೀಗಿದ್ದಾನೆ.

    ಶಿವಶಂಕರ್ ಮೂಲತಃ ಜಾರ್ಖಂಡ್ ರಾಜ್ಯದ ರಾಂಚಿ ಜಿಲ್ಲೆಯವನಾಗಿದ್ದಾನೆ. ವಿದ್ಯಾಭ್ಯಾಸ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ. ಕಳೆದ ಮೂರು ವರ್ಷಗಳಿಂದ ಅಪಾರ್ಟ್ ಮೆಂಟ್‍ನಲ್ಲಿ ನೆಲೆಸಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆರ್.ಆರ್.ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬರ್ತ್ ಡೇ ಪಾರ್ಟಿಗೆ ತೆರಳ್ತಿದ್ದಾಗ ಏರ್ ಪೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತ – ನಾಲ್ವರ ದುರ್ಮರಣ

    ಬರ್ತ್ ಡೇ ಪಾರ್ಟಿಗೆ ತೆರಳ್ತಿದ್ದಾಗ ಏರ್ ಪೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತ – ನಾಲ್ವರ ದುರ್ಮರಣ

    ಚಿಕ್ಕಬಳ್ಳಾಪುರ: ಚಲಿಸುತ್ತಿದ್ದ ಓಮ್ನಿ ಕಾರಿಗೆ ಹಿಂಬದಿಯಿಂದ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ವಿಮಾನ ನಿಲ್ದಾಣ ರಸ್ತೆಯಲ್ಲಿ ನಡೆದಿದೆ.

    ಮಧ್ಯರಾತ್ರಿ ಸುಮಾರು 1.30ಗಂಟೆಗೆ ಅಪಘಾತ ಸಂಭವಿಸಿದ್ದು, ವೆಂಕಟೇಶ್, ಸತೀಶ್, ವಿಕಾಸ್ ಮತ್ತು ಸುಂದರ್ ಮೃತ ದುರ್ದೈವಿಗಳು. ಓಮ್ನಿ ಕಾರಿನಲ್ಲಿದ್ದವರು ಬೆಂಗಳೂರಿನ ಆರ್.ಟಿ ನಗರದಲ್ಲಿ ಫ್ಲವರ್ ಡೆಕೋರೇಷನ್ ಕೆಲಸ ಮಾಡುತ್ತಿದ್ದವರು ಎಂದು ತಿಳಿದು ಬಂದಿದೆ.

    ಪ್ಲವರ್ ಡೆಕೋರೇಷನ್ ಮಾಡುತ್ತಿದ್ದ ಯುವಕರು ತಮ್ಮ ಸ್ನೇಹಿತನ ಬರ್ತ್ ಡೇ ಪಾರ್ಟಿಗೆ ಅಂತ ನಂದಿ ಬೆಟ್ಟದ ಕಡೆಗೆ ತೆರಳುತ್ತಿದ್ದು, ಈ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಓಮ್ನಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಹೀಗಾಗಿ ಓಮ್ನಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋವಾ ಕಾರಿನಲ್ಲಿದ್ದ ಮೂವರು ಸಹ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಈ ಅಪಘಾತಕ್ಕೆ ಅವೈಜ್ಞಾನಿಕವಾಗಿ ಹೆದ್ದಾರಿ ನಿರ್ಮಾಣ ಮಾಡಿರುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಗಳ ಬೇಜವಾಬ್ದಾರಿತನವೇ ಕಾರಣ ಅಂತ ಹೇಳಲಾಗುತ್ತಿದೆ. ಪ್ರಮುಖವಾಗಿ ಬೆಂಗಳೂರು ನಗರದಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಸುಸಜ್ಜಿತ ಹೆದ್ದಾರಿ ನಿರ್ಮಾಣ ಮಾಡಿರುವ ಅಧಿಕಾರಗಳು ಏರ್ ಪೋರ್ಟ್ ಟೋಲ್ ಮುಗಿದ ನಂತರ ಉತ್ತಮ ರಸ್ತೆ ಮಾಡಿಲ್ಲ. ಹೈದರಾಬಾದ್ ಕಡೆಯ ಟೋಲ್ ಮುಗಿದ ನಂತರ ಕನ್ನಮಂಗಲಪಾಳ್ಯ ಗೇಟ್ ಬಳಿ ಸೇತುವೆ ನಿರ್ಮಿಸಲಾಗಿದ್ದು, ಈ ಸೇತುವೆ ಮೇಲೆ ನೂತನವಾಗಿ ಡಾಂಬರೀಕರಣ ಮಾಡಲಾಗಿದೆ. ಹೀಗಾಗಿ ಡಾಂಬರೀಕರಣ ಮಾಡಿರುವ ಪರಿಣಾಮ ಹೆದ್ದಾರಿ ಮಧ್ಯದ ಡಿವೈಡರ್ ಸಮತಟ್ಟಾಗಿದ್ದು ಎರಡು ಬದಿಯ ರಸ್ತೆಗಳು ಒಂದೇ ಸಮನಾಗಿವೆ.

    ಮೇಲ್ಸುತುವೆ ಮೇಲೆ 6 ಪಥದ ರಸ್ತೆ ಇದಾಗಿದ್ದು ಸಾಕಷ್ಟು ವಿಶಾಲವಾಗಿದೆ. ಡಾಂಬರೀಕರಣ ಕಡು ಕಪ್ಪಾಗಿದ್ದು, ವಾಹನಗಳ ಹೆಡ್ ಲೈಟ್ ಎಷ್ಟೇ ಇದ್ದರೂ ಮುಂದಿನ ವಾಹನಗಳು ಬಹಳ ಹತ್ತಿರ ಬರುವವರೆಗೂ ಬಹುಬೇಗ ಕಾಣುವುದಿಲ್ಲ. ಇದರ ಜೊತೆಗೆ ಕತ್ತಲಲ್ಲಿ ಹೊಳೆಯುವ ರೇಡಿಯಂ ಸ್ಟಿಕರ್ ಮಾರ್ಗ ಸೂಚಿಗಳನ್ನ ಸಹ ಇಲ್ಲಿ ಅಳವಡಿಸಿಲ್ಲ. ಹೀಗಾಗಿ ಈ ಸ್ಥಳದಲ್ಲೇ ಪದೇ ಪದೇ ಅಪಘಾತಗಳು ಸಂಭವಿಸುತ್ತಿರುತ್ತವೆ.

    ಕಳೆದ ರಾತ್ರಿಯೂ ಸಹ ಇದೇ ರೀತಿ ಮುಂದೆ ಚಲಿಸುತ್ತಿದ್ದ ಓಮ್ನಿ ಕಾರು ಕಾಣದೆ ಹಿಂಬದಿಯಲ್ಲಿ ವೇಗವಾಗಿ ಬಂದ ಇನ್ನೋವಾ ಕಾರು ಡಿಕ್ಕಿಯಾಗಿದೆ. ಈ ಸಂಬಂಧ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾರೂಕ್ ಬರ್ತ್ ಡೇ ಪಾರ್ಟಿಯನ್ನು ತಡೆದ ಪೊಲೀಸರು

    ಶಾರೂಕ್ ಬರ್ತ್ ಡೇ ಪಾರ್ಟಿಯನ್ನು ತಡೆದ ಪೊಲೀಸರು

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಶುಕ್ರವಾರ ತಮ್ಮ 53ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅಲ್ಲದೇ ಶುಕ್ರವಾರ ರಾತ್ರಿ ಸ್ನೇಹಿರಿಗೆ ಪಾರ್ಟಿ ನೀಡಿದರು. ಆದರೆ ಶಾರೂಕ್ ಅವರ ಪಾರ್ಟಿಯನ್ನು ಪೊಲೀಸರು ತಡೆದಿದ್ದಾರೆ.

    ಶಾರೂಕ್ ಮುಂಬೈನ್ ಬಾಂದ್ರಾದಲ್ಲಿರುವ ‘ಅರ್ತ್’ ನೈಟ್‍ಕ್ಲಬ್‍ನಲ್ಲಿ ತನ್ನ ಸ್ನೇಹಿತರಿಗೆ ಲೇಟ್‍ನೈಟ್ ಪಾರ್ಟಿ ಆಯೋಜಿಸಿದ್ದರು. ಮುಂಬೈನ ರೆಸ್ಟೋರೆಂಟ್‍ಗಳು ಶುಕ್ರವಾರ ನಸುಕಿನ ಜಾವದವರೆಗೂ ತೆರೆದಿರುವುದಿಲ್ಲ. ಆದರೆ ಶಾರೂಕ್ ಹುಟ್ಟುಹಬ್ಬಕ್ಕಾಗಿ ಅರ್ತ್ ಕ್ಲಬ್ ನಸುಕಿನ ಜಾವ 3 ಗಂಟೆವರೆಗೂ ತೆರೆದಿತ್ತು ಹಾಗೂ ಜೋರಾಗಿ ಮ್ಯೂಸಿಕ್ ಹಾಕಲಾಗಿತ್ತು.

    ಈ ವಿಚಾರ ತಿಳಿದು ಮುಂಬೈ ಪೊಲೀಸರು ರೆಸ್ಟೋರೆಂಟ್‍ಗೆ ಭೇಟಿ ನೀಡಿ ಮ್ಯೂಸಿಕ್ ಆಫ್ ಮಾಡಿಸಿದ್ದಾರೆ. ಪೊಲೀಸರು ರೆಸ್ಟೋರೆಂಟ್‍ಗೆ ಹೋಗಿದ್ದಾಗ ಶಾರೂಕ್ ತನ್ನ ಸ್ನೇಹಿತರ ಜೊತೆ ನೈಟ್‍ಕ್ಲಬ್‍ನಿಂದ ಹೊರಬರುತ್ತಿದ್ದರು. ಪೊಲೀಸರು ರೆಸ್ಟೋರೆಂಟ್ ಹೋಗಿ ಎಚ್ಚರಿಕೆ ಕೊಡುವ ಮೊದಲೇ ಕೆಲ ತಾರೆಯರು ಅಲ್ಲಿಂದ ಹೊರಟು ಹೋಗಿದ್ದರು.

    ಸಾಮಾನ್ಯ ಜನರಿಗಾಗಿ ಕ್ಲಬ್ 1 ಗಂಟೆಯವರೆಗೂ ತೆರೆದಿರುತ್ತದೆ. ಆದರೆ ಶಾರೂಕ್ ಹುಟ್ಟುಹಬ್ಬಕ್ಕಾಗಿ ತಮ್ಮ ಸ್ನೇಹಿತರನ್ನು ಪಾರ್ಟಿಗೆ ಆಹ್ವಾನಿಸಿದ ಕಾರಣ ಶುಕ್ರವಾರ ರಾತ್ರಿ ಕ್ಲಬ್‍ಗೆ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನನ್ನ ಪರವಾಗಿ ಯಾವುದೇ ಪ್ರತಿಭಟನೆ ಮಾಡಬೇಡಿ: ಕೈ ಕಾರ್ಯಕರ್ತರಲ್ಲಿ ಡಿಕೆಶಿ ಮನವಿ

    ನನ್ನ ಪರವಾಗಿ ಯಾವುದೇ ಪ್ರತಿಭಟನೆ ಮಾಡಬೇಡಿ: ಕೈ ಕಾರ್ಯಕರ್ತರಲ್ಲಿ ಡಿಕೆಶಿ ಮನವಿ

    ಬೆಂಗಳೂರು: ಜಲ ಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಅವರನ್ನು ಇಡಿ ಹಾಗೂ ಐಟಿ ಇಲಾಖೆ ಟಾರ್ಗೆಟ್ ಮಾಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಸಚಿವ ಡಿಕೆ ಶಿವಕುಮಾರ್, ನನ್ನ ಪರ ಯಾರು ಪ್ರತಿಭಟನೆ ಮಾಡಬೇಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

    ಈ ಕುರಿತು ತಮ್ಮ ಟ್ವಿಟ್ಟರ್ ನಲ್ಲಿ ಡಿಕೆಶಿ, ನನ್ನ ಪರವಾಗಿ ಯಾವುದೇ ಪ್ರತಿಭಟನೆ, ಚಳವಳಿ, ಹೋರಾಟ ಮಾಡಬಾರದು ಎಂದು ಯುವ ಕಾಂಗ್ರೆಸ್ ಮುಖಂಡರಲ್ಲಿ ಮನವಿ ಮಾಡಿದ್ದಾರೆ.

    ನನಗೆ ಈ ನೆಲದ ಕಾನೂನಿನ ಮೇಲೆ ಅಪಾರ ಗೌರವ ಮತ್ತು ನಂಬಿಕೆ ಇದೆ. ನನಗೆ ಎದುರಾಗಿರುವ ಸವಾಲು ಹಾಗೂ ಸಮಸ್ಯೆಗಳನ್ನು ಕಾನೂನಾತ್ಮಾಕವಾಗಿ ಹಾಗೂ ರಾಜಕೀಯವಾಗಿ ಎದುರಿಸುವ ಶಕ್ತಿಯೂ ಇದೆ. ರಾಜಕೀಯ ಎದುರಾಳಿಗಳಿಗೆ ರಾಜಕೀಯವಾಗಿಯೇ ಉತ್ತರ ನೀಡುತ್ತೇನೆ. ಹೀಗಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಯಾವುದೇ ಚಳವಳಿಯಲ್ಲಿ ನಡೆಸುವುದಾಗಲಿ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವುದಾಗಲಿ ಮಾಡುವುದು ಬೇಡ. ಇಂಥ ಹೋರಾಟಗಳಿಂದ ಜನಸಾಮಾನ್ಯರಿಗೂ ತೊಂದರೆ ಆಗುತ್ತದೆ ಎಂದು ತಿಳಿಸಿದ್ದಾರೆ.

    ಇಂದು ನಗರದ ಆದಾಯ ತೆರಿಗೆ ಇಲಾಖೆ ಎದುರು ಶಿವಕುಮಾರ್ ವಿರುದ್ಧದ ವಿಚಾರಣೆಯನ್ನು ವಿರೋಧಿಸಿ ನೂರಕ್ಕೂ ಹೆಚ್ಚು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಯಾಗಿರುವ ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಕೂಡ ಭಾಗಿಯಾಗಿದ್ದರು. ಇದನ್ನೂ ಓದಿ:  ಡಿಕೆಶಿ ಮೇಲಿನ ಐಟಿ ವಿಚಾರಣೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಆರೋಪಿ ನಲಪಾಡ್ ಪ್ರತ್ಯಕ್ಷ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಿಯಲ್ ಸ್ಟಾರ್ ಬರ್ತ್ ಡೇ ಪಾರ್ಟಿಯಲ್ಲಿ ಮಿಂಚಿದ ಶಿಲ್ಪಾ ಗಣೇಶ್: ವಿಡಿಯೋ

    ರಿಯಲ್ ಸ್ಟಾರ್ ಬರ್ತ್ ಡೇ ಪಾರ್ಟಿಯಲ್ಲಿ ಮಿಂಚಿದ ಶಿಲ್ಪಾ ಗಣೇಶ್: ವಿಡಿಯೋ

    ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರು ಸೆಪ್ಟೆಂಬರ್ 18ರಂದು ತಮ್ಮ 51ನೇ ಹುಟ್ಟುಹಬ್ಬವನ್ನು ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರು. ಈ ವೇಳೆ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್, ಉಪೇಂದ್ರ ಅವರ ಬರ್ತ್ ಡೇ ಪಾರ್ಟಿಯಲ್ಲಿ ಮಿಂಚಿದ್ದಾರೆ.

    ಉಪೇಂದ್ರ ತಮ್ಮ ಹುಟ್ಟುಹಬ್ಬದ ದಿನದಂದು ಬೆಳಗ್ಗೆ ಹಾಗೂ ಮಧ್ಯಾಹ್ನ ಅಭಿಮಾನಿಗಳ ಜೊತೆ ಹಾಗೂ ಪಕ್ಷದ ಕಾರ್ಯಕರ್ತರ ಜೊತೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಬಳಿಕ ಸಂಜೆ ವೇಳೆ ಚಿತ್ರರಂಗದ ಸ್ನೇಹಿತರಿಗಾಗಿ ಬರ್ತ್ ಡೇ ಪಾರ್ಟಿಯನ್ನು ಆಯೋಜಿಸಿದ್ದರು.

    ನಗರದ ಕತ್ರಿಗುಪ್ಪೆಯಲ್ಲಿರುವ ತಮ್ಮ ನಿವಾಸದಲ್ಲೇ ಉಪೇಂದ್ರ ತಮ್ಮ ಬರ್ತ್ ಡೇ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಶಿಲ್ಪಾ ಗಣೇಶ್, ನಟಿ ಹರ್ಷಿಕಾ ಪೂಣಚ್ಚ ಸೇರಿದಂತೆ ಹಲವಾರು ಚಿತ್ರದ ಗಣ್ಯರು ಭಾಗಿಯಾಗಿದ್ದರು.

    ಉಪೇಂದ್ರ ಅವರ ಬರ್ತ್ ಡೇ ಪಾರ್ಟಿಯಲ್ಲಿ ಗಣೇಶ್, ಶಿಲ್ಪಾ ಗಣೇಶ್, ಹರ್ಷಿಕಾ ಪೂಣಚ್ಚ, ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಹಲವು ಕಲಾವಿದರು ಕುಣಿದು ಕುಪ್ಪಳಿಸಿದ್ದಾರೆ. ಸದ್ಯ ಈ ಡ್ಯಾನ್ಸ್ ವಿಡಿಯೋವನ್ನು ನಟಿ ಹರ್ಷಿಕಾ ಪೂಣಚ್ಚ ಸ್ವತಃ ತಮ್ಮ ಇನ್‍ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಉಪೇಂದ್ರ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿನಿಮಾಕ್ಕೆ ಸೇರಿ ಬಳಿಕ ಇದೂವರೆಗೂ ನಾನು ಬರ್ತ್ ಡೇ ಆಚರಿಸಿಕೊಂಡಿಲ್ಲ. ಅಭಿಮಾನಿಗಳೇ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬಂದಿದ್ದರು. ಹೀಗಾಗಿ ಇದು ಅಭಿಮಾನಿಗಳ ದಿನವೆಂದು ನಾನು ಯಾವತ್ತೂ ಹೇಳುತ್ತೇನೆ. ಇಂದು ಉಪ್ಪಿ ಬರ್ತ್ ಡೇ ಆಗಿದೆ. ಇನ್ನು ಮುಂದೆ ಯುಪಿಪಿ ಬರ್ತ್ ಡೇ ಆಗಬೇಕು. ಈಗಿನ ಜನಾಂಗ ಇನ್ನು 50 ವರ್ಷಗಳ ಕಾಲ ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೊಬೈಲ್ ಒಡೆದಿದ್ದಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿದ್ರು

    ಮೊಬೈಲ್ ಒಡೆದಿದ್ದಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿದ್ರು

    ಬಾಗಲಕೋಟೆ: ಮೊಬೈಲ್ ಒಡೆದ ಅನ್ನೋ ಕಾರಣಕ್ಕೆ ಕುಡಿದ ಮತ್ತಿನಲ್ಲಿ ಸ್ನೇಹಿತರೇ ಸೇರಿಕೊಂಡು ಇನ್ನೊಬ್ಬ ಸ್ನೇಹಿತನೋರ್ವನನ್ನ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಬಂಟನೂರ ಗ್ರಾಮದಲ್ಲಿ ನಡೆದಿದೆ.

    ವೀರಹಣಮಪ್ಪ ನಾಯಕ್ ರಂಗಣ್ಣನವರ (23) ಕೊಲೆಯಾದ ಯುವಕ. ಗುರುವಾರ ತಡರಾತ್ರಿ ಕೆಲ ಸ್ನೇಹಿತರೆಲ್ಲ ಸೇರಿಕೊಂಡು ಬಂಟನೂರಿನ ನೀಲಗಿರಿ ಗುಡ್ಡದಲ್ಲಿ ಗುಂಡು ಪಾರ್ಟಿ ಮಾಡಿದ್ದಾರೆ. ಈ ವೇಳೆ ತಮ್ಮ ತಮ್ಮಲ್ಲೇ ಜಗಳ ಶುರುವಾಗಿದೆ. ಈ ಮಧ್ಯೆ ವೀರಹಣಮಪ್ಪ ಗೆಳೆಯನೊಬ್ಬನ ಮೊಬೈಲ್ ಒಡೆದು ಹಾಕಿದ್ದಾನೆ. ಇದರಿಂದ ಜಗಳ ಮತ್ತಷ್ಟು ತಾರಕಕ್ಕೇರಿದೆ.

    ಆಗ ಕೆಲವರು ವೀರಹಣಮಪ್ಪನನ್ನು ವೈರ್ ನಿಂದ ಕತ್ತು ಬಿಗಿದಿದ್ದಾರೆ. ಪರಿಣಾಮ ವೀರಹಣಮಪ್ಪ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಬಳಿಕ ಶವವನ್ನು ಅಲ್ಲೇ ಬಿಟ್ಟು ಮನೆಗೆ ವಾಪಸ್ ಆಗಿದ್ದಾರೆ. ಬೆಳಗ್ಗಿನವರೆಗೂ ವಿಷಯ ಗೊತ್ತಾಗಿರಲಿಲ್ಲ. ಬೆಳಗ್ಗೆಯಾದರೂ ಮಗ ಮನೆಗೆ ಬಾರದಿದ್ದಾಗ ಪೋಷಕರು ಸ್ನೇಹಿತರನ್ನ ವಿಚಾರಿಸಿದ್ದಾರೆ. ಆಗ ಈ ಘಟನೆ ಬೆಳಕಿಗೆ ಬಂದಿದೆ.

    ಈ ಬಗ್ಗೆ ಮಾಹಿತಿ ತಿಳಿದು ಲೋಕಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಯುವಕನ ಪೋಷಕರ ಹೇಳಿಕೆ ಮೇರೆಗೆ ಮೂವರು ಯುವಕರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಲೋಕಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಾವಣಗೆರೆ ಸರ್ಕಾರಿ ಕಚೇರಿಯಲ್ಲಿ ಬ್ಯಾಂಕ್ ಅಧ್ಯಕ್ಷರಿಂದ್ಲೇ ಗುಂಡು-ತುಂಡು ಪಾರ್ಟಿ!

    ದಾವಣಗೆರೆ ಸರ್ಕಾರಿ ಕಚೇರಿಯಲ್ಲಿ ಬ್ಯಾಂಕ್ ಅಧ್ಯಕ್ಷರಿಂದ್ಲೇ ಗುಂಡು-ತುಂಡು ಪಾರ್ಟಿ!

    ದಾವಣಗೆರೆ: ಸರ್ಕಾರಿ ಅಧಿಕಾರಿಗಳಿಗೆ ಕಚೇರಿಗಳೇ ಬಾರ್ ಅಂಡ್ ರೆಸ್ಟೋರೆಂಟ್ ಆಗಿದೆ. ಅಧಿಕಾರಿಗಳು ಸರ್ಕಾರಿ ಕಚೇರಿಯಲ್ಲಿಯೇ ತಡರಾತ್ರಿ ಗುಂಡು ತುಂಡು ಪಾರ್ಟಿ ಮಾಡಿದ್ದು, ಪ್ರಶ್ನಿಸಿದ ಮಾಧ್ಯಮದವರಿಗೇ ಅವಾಜ್ ಹಾಕಿದ್ದಾರೆ.


    ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕರ ಕಚೇರಿಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ನೇತೃತ್ವದಲ್ಲಿ ಗುಂಡು ತುಂಡು ಪಾರ್ಟಿ ಬಡೆದಿದೆ. ಈ ಪಾರ್ಟಿಯಲ್ಲಿ  ಡಿಸಿಸಿ ಬ್ಯಾಂಕ್ ಅಧಿಕಾರಿಗಳು, ಆಹಾರ ಇಲಾಖೆ ಸಿಬ್ಬಂದಿ ಸೇರಿ ಇತರ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ. ಆದ್ರೆ ಈ ಬಗ್ಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ್ ಅವರನ್ನು ಕೇಳಿದ್ರೆ ಇದಕ್ಕೂ ನನಗೆ ಸಂಬಂಧವೇ ಇಲ್ಲ ಅಂತ ಹಾರಿಕೆಯ ಉತ್ತರ ನೀಡಿದ್ದಾರೆ.

    ಅಲ್ಲದೇ ಆಷಾಢ ಹಾಗಾಗಿ ಇಲ್ಲಿ ಬಂದು ಅಧಿಕಾರಿಗಳು ಗುಂಡು ತುಂಡು ಸೇವಿಸುತ್ತಾರೆ ಅಂತ ಹೇಳಿದ್ದಾರೆ. ಕ್ಯಾಮೆರಾ ಕಂಡ ತಕ್ಷಣ ಸ್ಥಳದಿಂದ ಹೊರಟ್ರು. ಇದೇ ವೇಳೆ ಸಿಬ್ಬಂದಿ ಸರ್ಕಾರಿ ಕಚೇರಿಯಲ್ಲಿ ಗುಂಡು ತುಂಡು ತಿನ್ನಬಾರದಾ ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳಲ್ಲಿದ್ದ ಅಧ್ಯಕ್ಷರ ಆಪ್ತನೊಬ್ಬ ಕ್ಯಾಮರಾ ಆಫ್ ಮಾಡುವಂತೆ ತಾಕೀತು ಮಾಡಿದ್ದಾನೆ.