Tag: party

  • ಯುವಿ ಪಾರ್ಟಿಗೆ ಆಗಮಿಸಿ ಟ್ವಿಸ್ಟ್ ಕೊಟ್ಟ ಮಾಜಿ ಗೆಳತಿ

    ಯುವಿ ಪಾರ್ಟಿಗೆ ಆಗಮಿಸಿ ಟ್ವಿಸ್ಟ್ ಕೊಟ್ಟ ಮಾಜಿ ಗೆಳತಿ

    ಮುಂಬೈ: ಇತ್ತೀಚೆಗೆ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಹೇಳಿದ್ದ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ತಮ್ಮ ನಿವಾಸದಲ್ಲಿ ಆಪ್ತರಿಗೆ ಪಾರ್ಟಿಯನ್ನ ಏರ್ಪಡಿಸಿದ್ದರು. ಈ ಪಾರ್ಟಿಗೆ ಯುವಿ ತಮ್ಮ ಮಾಜಿ ಗೆಳತಿ ಕಿಮ್ ಶರ್ಮಾ ಅವರಿಗೂ ಆಹ್ವಾನ ನೀಡಿದ್ದರು.

    ಯುವರಾಜ್ ಸಿಂಗ್‍ರೊಂದಿಗೆ ಪ್ರೀತಿಯಲ್ಲಿದ್ದ ಕಿಮ್ ಶರ್ಮಾ 2007ರ ಬಳಿಕ ಅವರಿಂದ ದೂರವಾಗಿದ್ದರು. ಪಾರ್ಟಿಯಲ್ಲಿ ಭಾಗವಹಿಸಿದ್ದ ಕಿಮ್, ಯುವಿ ಹಾಗೂ ಪತ್ನಿಯೊಂದಿಗೆ ಫೋಟೋಗೆ ಪೋಸ್ ನೀಡಿ ಟ್ವಿಸ್ಟ್ ನೀಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

    ತಮ್ಮ ನಿವೃತ್ತಿಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿ ಭಾವುಕರಾಗಿದ್ದ ಯುವರಾಜ್ ಸಿಂಗ್, ಅಂದು ಪತ್ನಿ ಹಾಜೆಲ್ ಕೀಚ್‍ರೊಂದಿಗೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗೆ ಪ್ರತಿಕ್ರಿಯೆ ನೀಡಿ ಕಿಮ್ ಕಮೆಂಟ್ ಮಾಡಿ, ‘ಇನ್ನಷ್ಟು ಪ್ರಕಾಶಿಸಿ ಲವ್ಲಿ ಜೋಡಿ’ ಎಂದು ಬರೆದುಕೊಂಡಿದ್ದರು.

    ಯುವರಾಜ್ ಸಿಂಗ್ ನೀಡಿದ್ದ ಪಾರ್ಟಿಯಲ್ಲಿ ಹಲವು ಬಾಲಿವುಡ್ ನಟ, ನಟಿಯರು ಭಾಗವಹಿಸಿದ್ದರು. ಪಾರ್ಟಿಯಲ್ಲಿ ಸ್ಟ್ರೈಲಿಸ್ ಆಗಿ ಕಾಣಿಸಿಕೊಂಡಿದ್ದ ಕಿಮ್ ಶರ್ಮಾ ಎಲ್ಲರ ಗಮನ ಸೆಳೆದಿದ್ದರು. ವಿಶೇಷ ಎಂದರೆ ಕಿಮ್ ರಿಂದ ದೂರವಾದ ಬಳಿಕ ಪತಿಕ್ರಿಯೆ ನೀಡಿದ್ದ ಯವಿ, ನಾನು ಮದುವೆಯಾಗುತ್ತಿದ್ದೇನೆ. ನನ್ನ ಜೀವನದ ಪ್ರೀತಿಯಾಗಿದ್ದಳು. ಈಗ ಅವರಿಗೆ ಮದುವೆಯಾಗಿದೆ. ಅವರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದಿದ್ದರು.

     

    View this post on Instagram

     

    Bollywood actress Kim Sharma at Yuvraj Singh Retirement Party. ????#KimSharma #YuvrajSingh #RetirementParty

    A post shared by Filmyhaiboss (@filmyhaiiboss) on

  • ಕಚೇರಿಯಲ್ಲಿಯೇ ಅಧಿಕಾರಿಗಳಿಂದ ಗುಂಡು, ತುಂಡು ಪಾರ್ಟಿ

    ಕಚೇರಿಯಲ್ಲಿಯೇ ಅಧಿಕಾರಿಗಳಿಂದ ಗುಂಡು, ತುಂಡು ಪಾರ್ಟಿ

    ಕೋಲಾರ: ಮೀನುಗಾರಿಕಾ ಕಚೇರಿಯಲ್ಲಿ ಅಧಿಕಾರಿಗಳು ಮದ್ಯಪಾನ ಪಾರ್ಟಿ ಮಾಡಿದ್ದು ಭಾರೀ ಟೀಕೆಗೆ ಗುರಿಯಾಗಿದೆ.

    ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಬೂದಿಕೋಟೆಯ ಮಾರ್ಕಂಡೇಯ ಅಚ್ಚುಕಟ್ಟು ಪ್ರದೇಶದಲ್ಲಿರುವ ಮಹಾರಾಜರ ಕಾಲದ ಮೀನುಮರಿ ಸಾಕಾಣಿಕಾ ಕೇಂದ್ರದಲ್ಲಿ ಅಧಿಕಾರಿಗಳು ಡ್ರಿಂಕ್ಸ್ ಪಾರ್ಟಿ ಮಾಡಿದ್ದಾರೆ.

    ಉಪನಿರ್ದೇಶಕ ಮಹೇಶ್ ಹಾಗೂ ಸಹಾಯಕ ನಿರ್ದೇಶಕ ಪೆದ್ದಣ್ಣ ಹಾಗೂ ಕೆಲಸ ಅಧಿಕಾರಿ ಸಿಬ್ಬಂದಿ ಕಚೇರಿಯಲ್ಲಿ, ಗುಂಡು ತುಂಡು ಪಾರ್ಟಿ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಉಪನಿರ್ದೇಶಕ ಮಹೇಶ್ ಇತ್ತೀಚೆಗೆ ಪದೇ ಪದೇ ಮೀನು ಮರಿ ಸಾಕಾಣಿಕಾ ಕೇಂದ್ರದಲ್ಲಿ ಕುಡಿದು ಅಲ್ಲಿನ ಸಿಬ್ಬಂದಿಯನ್ನು ವಿನಾಕಾರಣ ವೈಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳುವುದು ಹೆಚ್ಚಾಗಿದ್ದು, ಇದರಿಂದ ಬೇಸತ್ತಿರುವ ಸಿಬ್ಬಂದಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

    ಕಚೇರಿಯಲ್ಲಿ ಗುಂಡು ತುಂಡು ಪಾರ್ಟಿ ಮಾಡುವ ಮೂಲಕ ಸರ್ಕಾರಿ ಕಚೇರಿಯನ್ನು ದುರುಪಯೋಗ ಪಡಿಸಿಕೊಂಡಿರುವ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ತುಮಕೂರಲ್ಲಿ ಸೋತಿದ್ದಕ್ಕೆ ಹೆಮ್ಮೆ ಇದೆ, ಮತ್ತೆ ಪಕ್ಷ ಕಟ್ತೀನಿ – ದೇವೇಗೌಡ

    ತುಮಕೂರಲ್ಲಿ ಸೋತಿದ್ದಕ್ಕೆ ಹೆಮ್ಮೆ ಇದೆ, ಮತ್ತೆ ಪಕ್ಷ ಕಟ್ತೀನಿ – ದೇವೇಗೌಡ

    ಬೆಂಗಳೂರು: ಲೋಕಸಭಾ ಕ್ಷೇತ್ರ ತುಮಕೂರಿನಲ್ಲಿ ಸೋತಿದಕ್ಕೆ ಹೆಮ್ಮೆ ಇದೆ. ಆದರೆ ನಾನು ಮತ್ತೆ ಪಕ್ಷ ಕಟ್ಟುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.

    ಬೆಂಗಳೂರಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದವರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ದೇವೇಗೌಡರು, ನಿನ್ನೆ ರಾತ್ರಿಯಿಂದ ಆರೋಗ್ಯ ಸರಿಯಿಲ್ಲ. ನನ್ನ ಆರೋಗ್ಯ ನೋಡಿಕೊಳ್ಳುವುದಕ್ಕೆ ನಮ್ಮ ಮನೆಯಲ್ಲಿ 9 ಜನ ಡಾಕ್ಟರ್ಸ್ ಇದ್ದಾರೆ. ಆದರೆ ನಮ್ಮ ಪಕ್ಷದ ಆರೋಗ್ಯ ಸರಿ ಮಾಡುವುದು ನನ್ನ ಕೆಲಸವಾಗಿದೆ ಎಂದು ಹೇಳಿದ್ದಾರೆ.

    ತಾಲೂಕು ಮಟ್ಟದಲ್ಲಿ ಗೆದ್ದ ನಿಮ್ಮಿಂದಲೇ ನಾನು ಮತ್ತೆ ಪಕ್ಷ ಕಟ್ಟುತ್ತೇನೆ. ಪಕ್ಷದ ಸಂಘಟನೆ ಮಾಡುವುದಕ್ಕೆ ನಿಮ್ಮಿಂದಲೇ ಸಲಹೆ ಪಡೆದುಕೊಳ್ಳುತ್ತೇನೆ. ಚುನಾವಣೆಯಲ್ಲಿ ಸೋತಿದ್ದಕ್ಕೆ ಹೆಮ್ಮೆ ಇದೆ. ಎಲ್ಲಿ ಪೆಟ್ಟು ಬಿದ್ದಿದೆ ಎಂದು ಗೊತ್ತಾಯಿತು. ನಮ್ಮ ಸೋಲನ್ನ ಒಪ್ಪಿಕೊಳ್ಳೋಣ. ಆದರೆ ಸೋಲು ಒಪ್ಪಿಕೊಂಡು ಮನೆಯಲ್ಲಿ ಕೂರಲು ಆಗುವುದಿಲ್ಲ. ಪಕ್ಷ ಮತ್ತೆ ಕಟ್ಟುತ್ತೇನೆ. ಸರ್ಕಾರವನ್ನು ಕುಮಾರಸ್ವಾಮಿ ನಡೆಸಿಕೊಂಡು ಹೋಗುತ್ತಾರೆ ಎಂದು ದೇವೇಗೌಡರು ತಿಳಿಸಿದರು.

  • ನಾವೇನ್ ತಪ್ಪು ಮಾಡಿದ್ದೇವೆ: ರಾಮಲಿಂಗಾ ರೆಡ್ಡಿ ಪ್ರಶ್ನೆ

    ನಾವೇನ್ ತಪ್ಪು ಮಾಡಿದ್ದೇವೆ: ರಾಮಲಿಂಗಾ ರೆಡ್ಡಿ ಪ್ರಶ್ನೆ

    – ನನಗಿಂತ ಸೀನಿಯರ್ಸ್ ಕ್ಯಾಬಿನೆಟ್‍ನಲ್ಲಿದ್ದಾರೆ
    – ಯುವಕರಿಗೆ ಆದ್ಯತೆ ಕೊಟ್ಟು ಹಿರಿಯರನ್ನು ಕಡೆಗಣಿಸಬಾರ್ದು
    – ನಮ್ಮನ್ನ ಮೂಲೆಯಲ್ಲಿಡಲು ಕೆಲವರ ಪ್ರಯತ್ನ

    ಬೆಂಗಳೂರು: ಸಚಿವ ಡಿ.ಕೆ ಶಿವಕುಮಾರ್ 4ನೇ ಬಾರಿ ಸಚಿವರಾಗಿದ್ದಾರೆ. ಪರಮೇಶ್ವರ್ ಅವರು ಕೂಡ 4 ಬಾರಿ, ದೇಶಪಾಂಡೆ ಅವರು ಐದಾರು ಬಾರಿ ಮಂತ್ರಿ ಆಗಿದ್ದಾರೆ. ನಾವೇನು ತಪ್ಪು ಮಾಡಿದ್ದೇವೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅಸಾಮಾಧಾನ ಹೊರಹಾಕಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಿಶ್ರ ಸರ್ಕಾರ ಆದಾಗ ನಾನು 6 ತಿಂಗಳಿನಿಂದ ಏನೂ ಮಾತನಾಡಿರಲಿಲ್ಲ. ಡಿಸೆಂಬರ್ ನಲ್ಲಿ ಕೊನೆಯದಾಗಿ ಮಾಧ್ಯಮಗಳ ಜೊತೆ ಮಾತನಾಡಿದೆ. ಪಕ್ಷದಲ್ಲಿ ತಾರತಮ್ಯ ಆಗುತ್ತಿದೆ ಎಂದು ಹೇಳಿದ್ದೆ. ಯಾವ ರೀತಿ ತಾರತಮ್ಯ ಎಂದು ಹೇಳಿದರೆ, ಈಗ ನಾವೆಲ್ಲ ಸಿನಿಯರ್ಸ್ ಆಗಿದ್ರೂ ಮಂತ್ರಿ ಸ್ಥಾನ ಕೊಡಲಿಲ್ಲ. ನಮಗೆ ಮಂತ್ರಿ ಸ್ಥಾನ ಕೊಡಿ ಎಂದು ನಾವು ಅವರಿಗೆ ಕೇಳೂ ಇಲ್ಲ. ಅದಕ್ಕಾಗಿ ಮನೆ ಬಾಗಿಲಿಗೆ ಹೋಗಿಲ್ಲ ಎಂದರು.

    ಸೀನಿಯಾರಿಟಿ ಮೇಲೆ ಸಚಿವ ಸ್ಥಾನ ಕೊಡಬೇಕು ಎಂದು ಮೊದಲಿನಿಂದಲೂ ಇದೆ. ಆದರೆ ಈಗ ಹೊಸಬರಿಗೆ ಅವಕಾಶ ಕೊಡಬೇಕು. ಹಾಗಾಗಿ ನಿಮಗೆ ಕೊಡುವುದಕ್ಕೆ ಆಗಲ್ಲ ಎಂದು ಹೇಳಿದ್ದರು. ಆದರೆ ನನಗಿಂತ ಹೆಚ್ಚು ಸೀನಿಯರ್ಸ್ ಆಗಿರುವವರು ಈಗ ಕ್ಯಾಬಿನೆಟ್‍ನಲ್ಲಿ ಇದ್ದಾರೆ. ಅವರಿಗೊಂದು ನೀತಿ ನಮಗೊಂದು ನೀತಿನಾ ಎಂದು ಕೇಳಿದೆ. ರೆಡ್ಡಿ ಕಮ್ಯೂನಿಟಿಗೆ ಈಗಾಗಲೇ ಕೊಡಲಾಗಿದೆ. ನಾಲ್ವರು ಬ್ರಾಹ್ಮಣರಿಗೆ ಸ್ಥಾನ ಕೊಟ್ಟಿದ್ದಾರೆ. ಇಬ್ಬರು ಲಿಂಗಾಯತರಿಗೆ ಸಚಿವ ಸ್ಥಾನ ಕೊಡಲಾಗಿದೆ. ಈ ತಾರತ್ಯಮ ಏಕೆ ಎಂದು ಈ ಹಿಂದೆ ಕೇಳಿದ್ದೆ ಎಂದರು.

    ಈ ಚುನಾವಣೆ ಆದ ಮೇಲೆ ಪಕ್ಷದಲ್ಲಿ ಸಾಕಷ್ಟು ವಿಧಿಮಾನಗಳು ಆಗಿದೆ. ಈ ರೀತಿ ಆಗುತ್ತಿರುವಾಗ ನನಗೆ ತಪ್ಪು ಎನಿಸಿದಾಗ ನಾನು ಹೇಳದೇ ಹೋದರೆ ಅದು ತಪ್ಪಾಗುತ್ತದೆ. ಯುವಕರಿಗೆ ಆದ್ಯತೆ ಕೊಡಬೇಕು. ಅದೇ ರೀತಿ ಹಿರಿಯರನ್ನು ಕಡೆಗಣಿಸಬಾರದು. ಮತ್ತೆ ಕೆಲವರನ್ನು ಬಿಟ್ಟು ಕೆಲವರನ್ನು ಮಾತ್ರ ಹಿಡಿದುಕೊಳ್ಳುತ್ತಾರೆ. ಅದಕ್ಕೆ ನಾನು ತಾರತಮ್ಯ ಎಂದು ಹೇಳಿದ್ದೇನೆ. ಈಗ ಡಿ.ಕೆ ಶಿವಕುಮಾರ್, ಪರಮೇಶ್ವರ್, ಜಾರ್ಜ್, 4 ಬಾರಿ ಸಚಿವರಾಗಿದ್ದಾರೆ. ಅವರಿಗೊಂದು ಮಾನದಂಡ, ನನಗೊಂದು ಮಾನದಂಡನಾ ಎಂದು ರಾಮಲಿಂಗಾ ರೆಡ್ಡಿ ಪ್ರಶ್ನಿಸಿದರು.

    ನಾನು 1973ರಲ್ಲಿ ಕಾಂಗ್ರೆಸ್ ಸೇರಿದೆ. ನಮ್ಮ ಪಕ್ಷದಲ್ಲಿ 5-6 ಜನ ಸೀನಿಯರ್ಸ್ ಇದ್ದಾರೆ. ಈವಾಗ ನಮ್ಮನೆಲ್ಲ ಮೂಲೆಯಲ್ಲಿ ಇಟ್ಟು ನಮಗೆ ಸಬ್‍ಜೂನಿಯರ್ಸ್, ಹೊಸಬರಿಗೆ ಮಂತ್ರಿ ಸ್ಥಾನ ಕೊಟ್ಟರೆ ಸಹಜವಾಗಿ ನಮಗೆ ಬೇಸರ ಎನಿಸುತ್ತದೆ. ನಮಗೇನು ಆ ಸಾಮಥ್ರ್ಯ ಇಲ್ವಾ ಅಥವಾ ನಮ್ಮ ಮೇಲೆ ಏನಾದರೂ ಆರೋಪಗಳಿದ್ದೀಯಾ?. ಈ ತಾರತಮ್ಯ ಏಕೆ ಎಂದು ನನಗೆ ಗೊತ್ತಾಗುತ್ತಿಲ್ಲ ಎಂದು ಕಿಡಿಕಾರಿದರು. ನನ್ನ ಪಕ್ಷ ಸರಿಯಾಗಿ ನಡೆಸಿಕೊಂಡಿದ್ದರೆ ನಾನು ಮಾಧ್ಯಮದ ಮುಂದೆ ಬರುತ್ತಿರಲಿಲ್ಲ ಎಂದು ಹೇಳಿದರು.

    ನಮ್ಮನ್ನು ಕಾರ್ನರ್ ಮಾಡಲು ಕೆಲವು ಮಂದಿ ಪ್ರಯತ್ನಿಸುತ್ತಿದ್ದಾರೆ. ನಾನು ವೈಯಕ್ತಿಕವಾಗಿ ಯಾರ ಹೆಸರು ಹೇಳಲ್ಲ, ಅಲ್ಲದೆ ಯಾರ ವಿರುದ್ಧವೂ ಟೀಕೆ ಮಾಡುವುದಿಲ್ಲ. ಪಕ್ಷದಲ್ಲಿ ಕೆಲವು ಕೂತು ತೀರ್ಮಾನ ತೆಗೆದುಕೊಳ್ಳುತ್ತಾರೆ. ಬಳಿಕ ಎಲ್ಲರ ಮೇಲೂ ಹೇರುತ್ತಾರೆ ಎಂದು ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

  • ಇಫ್ತಾರ್ ಕೂಟಕ್ಕೆ ಆಹ್ವಾನಿಸಿಲ್ಲ ಎಂದು ಗುಂಡಿಕ್ಕಿ ಮೂವರು ಮಕ್ಕಳ ಹತ್ಯೆ

    ಇಫ್ತಾರ್ ಕೂಟಕ್ಕೆ ಆಹ್ವಾನಿಸಿಲ್ಲ ಎಂದು ಗುಂಡಿಕ್ಕಿ ಮೂವರು ಮಕ್ಕಳ ಹತ್ಯೆ

    ಲಕ್ನೋ: ರಂಜಾನ್‍ನ ಇಫ್ತಾರ್ ಪಾರ್ಟಿಗೆ ಆಹ್ವಾನಿಸಿಲ್ಲ ಎಂದು ವ್ಯಕ್ತಿಯೊಬ್ಬ ಒಂದೇ ಕುಟುಂಬದ ಮೂವರು ಮಕ್ಕಳನ್ನು ಗುಂಡಿಕ್ಕಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಬುಲಂದ್‍ಶಹರ್ ನಲ್ಲಿ ನಡೆದಿದೆ.

    ಆಸ್ಮಾ, ಅಲೀಮಾ ಮೋಹೆ ಹಾಗೂ ಅಬ್ದುಲ್ಲಾ ಮೃತ ದುರ್ದೈವಿಗಳು. ಮೂವರು ಮಕ್ಕಳು 7ರಿಂದ 8 ವರ್ಷದವರು ಎಂದು ಹೇಳಲಾಗಿದ್ದು, ಇವರ ಕುಟುಂಬದವರು ಶುಕ್ರವಾರ ಇಫ್ತಾರ್ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಗೆ ತನ್ನನ್ನು ಆಹ್ವಾನಿಸಿಲ್ಲ ಎಂದು ಬೇಸರದಿಂದ ವ್ಯಕ್ತಿ ಮೂವರು ಮಕ್ಕಳನ್ನು ಕೊಲೆ ಮಾಡಿದ್ದಾನೆ.

    ವ್ಯಕ್ತಿ ಬೇಸರದಿಂದ ಮೂವರನ್ನು ಮಕ್ಕಳನ್ನು ಗುಂಡಿಕ್ಕಿ ಕೊಲೆ ಮಾಡಿದಲ್ಲದೇ ಅವರ ಮೃತದೇಹವನ್ನು ದುತೂರಿ ಗ್ರಾಮದ ಅರಣ್ಯದಲ್ಲಿದ್ದ ಬಾವಿಯಲ್ಲಿ ಎಸೆದಿದ್ದನು. ಮಕ್ಕಳು ಕಾಣಿಸದೇ ಇದ್ದಾಗ ಪೋಷಕರು ಶುಕ್ರವಾರ ರಾತ್ರಿ ಸುಮಾರು 9.22ಕ್ಕೆ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದಾರೆ ಎಂದು 100ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದರು.

    ಪೊಲೀಸರು ಈ ಪ್ರಕರಣದ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ ಹಾಗೂ ದೂರು ಕೂಡ ದಾಖಲಿಸಿಲ್ಲ. ಈ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದ ಕಾರಣ ಧೃವ್ ಭುಷಣ್ ದುಬೆ ಹಾಗೂ ಮುಂಶಿಯ ಎಸ್‍ಎಸ್‍ಪಿಯನ್ನು ಕೆಲಸದಿಂದ ಸಸ್ಪೆಂಡ್ ಮಾಡಲಾಗಿದೆ.

  • ನಾನು ಜೆಡಿಎಸ್ ಬಿಟ್ಟಿರಲಿಲ್ಲ, ದೇವೇಗೌಡರೇ ನನ್ನನ್ನು ಹೊರಹಾಕಿದ್ರು – ಸಿದ್ದರಾಮಯ್ಯ

    ನಾನು ಜೆಡಿಎಸ್ ಬಿಟ್ಟಿರಲಿಲ್ಲ, ದೇವೇಗೌಡರೇ ನನ್ನನ್ನು ಹೊರಹಾಕಿದ್ರು – ಸಿದ್ದರಾಮಯ್ಯ

    ಕಲಬುರಗಿ: ನಾನು ಜೆಡಿಎಸ್ ಪಕ್ಷವನ್ನು ಬಿಡಲಿಲ್ಲ. ದೇವೇಗೌಡ ಅವರೇ ನನ್ನನ್ನು ಪಕ್ಷದಿಂದ ಹೊರ ಹಾಕಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಕಲಬುರಗಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ, “ನಾನು ಜೆಡಿಎಸ್ ಬಿಟ್ಟದ್ದು ಯಾಕೆ ಎಂದು ಬಿಜೆಪಿಯ ಆರ್. ಅಶೋಕ್ ಕೇಳುತ್ತಿದ್ದಾರೆ. ನಾನು ಜೆಡಿಎಸ್ ಬಿಟ್ಟಿರಲಿಲ್ಲ. ಅಹಿಂದ ಚಟುವಟಿಕೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ದೇವೇಗೌಡ ಅವರು ನನ್ನನ್ನು ಉಚ್ಚಾಟನೆ ಮಾಡಿದ್ದರು. ಡಾ. ಉಮೇಶ್ ಜಾಧವ್ ಪಕ್ಷ ಬಿಟ್ಟಿರುವುದಕ್ಕೂ ನಾನು ಜೆಡಿಎಸ್ ಬಿಟ್ಟಿರೋದಕ್ಕೂ ವ್ಯತ್ಯಾಸವಿದೆ” ಎಂದು ಹೇಳಿದರು.

    ಮೈತ್ರಿಯಿಂದಾಗಿ ಪ್ಲಸ್‍ಗಿಂತ ಮೈನಸ್ ಆಗ್ತಿದೆ ಎಂದು ಕೆಆರ್ ಪೇಟೆ ಶಾಸಕ ನಾರಾಯಣಗೌಡ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ನಾವೇನು ನಾರಾಯಣಗೌಡನನ್ನು ಕೇಳಿಕೊಂಡು ಮೈತ್ರಿ ಮಾಡಿಕೊಂಡಿದ್ದೇವಾ? ಅವನ ಮಾತಿಗೆಲ್ಲ ಬೆಲೆ ಕೊಡುವುದ್ದಕ್ಕೆ ಆಗಲ್ಲ ರೀ. ಹೈಕಮಾಂಡ್ ತೀರ್ಮಾನದಂತೆ ಕುಮಾರಸ್ವಾಮಿ, ದೇವೇಗೌಡರ ಜೊತೆ ಮಾತುಕತೆ ಮಾಡಿ ಸರ್ಕಾರ ರಚನೆ ಮಾಡಿದ್ದೇವೆ” ಎಂದರು.

    ಮಿಸ್ಟರ್ ಯಡಿಯೂರಪ್ಪ ನಿನ್ನಿಂದ ಸರ್ಕಾರ ಬೀಳಿಸಲು ಆಗುವುದಿಲ್ಲ ಹಾಗೂ ಕೇಂದ್ರದಲ್ಲಿ ಎನ್‍ಡಿಎ ಸರ್ಕಾರ ಸಹ ಬರುವುದಿಲ್ಲ. ಅಷ್ಟಕ್ಕೂ ಶಾಸಕರನ್ನು ಖರೀದಿ ಮಾಡಲು ನಿಮ್ಮ ಹತ್ತಿರ ದುಡ್ಡು ಎಲ್ಲಿಂದ ಬರುತ್ತದೆ ಎಂದು ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

    ಇತ್ತೀಚೆಗೆ ಆರ್. ಅಶೋಕ್ ಚಿಂಚೋಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಉಮೇಶ್ ಜಾಧವ್ ಅಪರೇಶನ್ ಕಮಲಕ್ಕೆ ಒಳಗಾಗಿದ್ದಾರೆ. ಹಣ ಪಡೆದು ಪಕ್ಷ ಬಿಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರೆ. ಹಾಗಾದರೆ ಈ ಹಿಂದೆ ಸಿದ್ದರಾಮಯ್ಯ ಅವರು ಕೂಡ ಕಾಂಗ್ರೆಸ್‍ನಿಂದ ಹಣ ಪಡೆದು ಜೆಡಿಎಸ್ ಪಕ್ಷವನ್ನು ಬಿಟ್ಟಿದ್ದಾರಾ ಎಂದು ಪ್ರಶ್ನಿಸಿದ್ದರು.

  • ಬರ್ತ್ ಡೇ ಪಾರ್ಟಿ ಮುಗ್ಸಿ ಬರುವಾಗ ಸ್ವಿಫ್ಟ್ ಕಾರ್ ಅಪಘಾತ – ಇಬ್ಬರ ದುರ್ಮರಣ

    ಬರ್ತ್ ಡೇ ಪಾರ್ಟಿ ಮುಗ್ಸಿ ಬರುವಾಗ ಸ್ವಿಫ್ಟ್ ಕಾರ್ ಅಪಘಾತ – ಇಬ್ಬರ ದುರ್ಮರಣ

    ಚಿಕ್ಕಬಳ್ಳಾಪುರ: ಸ್ವಿಫ್ಟ್ ಕಾರು ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಾಯಗೊಂಡು ಆಸ್ಪತ್ರೆ ಸೇರಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಅಪೋಲೋ ಪೆಟ್ರೋಲ್ ಬಂಕ್ ಬಳಿ ನಡೆದಿದೆ.

    ನಗರ ಹೊರವಲಯದ ಎಸ್‍ಜೆಸಿಐಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಹನುಮೇಶ್ (22) ಹಾಗೂ ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯ ಎಂಜಿ ಬೇಕರಿ ಮಾಲೀಕ ಪುನೀತ್ (23) ಮೃತ ದುರ್ದೈವಿಗಳು. ಅಪಘಾತದಲ್ಲಿ ಎಸ್‍ಜೆಸಿಐಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಯಶ್ವಂತ್ ಹಾಗೂ ನಂದೀಶ್ ಗಾಯಗೊಂಡಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಗಾಯಾಳು ನಂದೀಶ್ ಬರ್ತ್ ಡೇ ಪ್ರಯುಕ್ತ ನಂದಿ ಕ್ರಾಸ್‍ಗೆ ನಾಲ್ವರು ಯುವಕರು ಪುನೀತ್ ಸ್ವಿಫ್ಟ್ ಕಾರಿನಲ್ಲಿ ಹೋಗಿದ್ದರು. ನಂತರ ಪಾರ್ಟಿ ಮುಗಿಸಿ ಚಿಕ್ಕಬಳ್ಳಾಪುರ ನಗರಕ್ಕೆ ಆಗಮಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸ್ವಿಫ್ಟ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

    ಮಾಹಿತಿ ತಿಳಿದು ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪಿಎಸ್‍ಐ ಚೇತನ್ ಹಾಗೂ ಸಂಚಾರಿ ಠಾಣಾ ಪಿಎಸ್‍ಐ ಬಂದು ಮೃತದೇಹಗಳನ್ನ ಶವಾಗಾರಕ್ಕೆ ರವಾನಿಸಿದ್ದಾರೆ. ಜೊತೆಗೆ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೇಳಿದಷ್ಟು ದುಡ್ಡು ಕೊಡ್ತಿವಿ ಸಹಕರಿಸು ಎಂದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ

    ಕೇಳಿದಷ್ಟು ದುಡ್ಡು ಕೊಡ್ತಿವಿ ಸಹಕರಿಸು ಎಂದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ

    ಬೆಂಗಳೂರು: ಬರ್ತ್ ಡೇ ಪಾರ್ಟಿ ಹೆಸರಲ್ಲಿ ಮದ್ಯಪಾನ ಮಾಡಿಸಿ ಕೇಳಿದಷ್ಟು ದುಡ್ಡು ಕೊಡ್ತಿವಿ ಸಹಕರಿಸು ಎಂದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ಏಪ್ರಿಲ್ 24ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ವೇಲು ಹಾಗೂ ಆತನ ಸ್ನೇಹಿತರು ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗಳು. ವೇಲು ತನ್ನ ಗೆಳೆಯನ ಹುಟ್ಟುಹಬ್ಬದ ಪಾರ್ಟಿ ಇದೆ ಎಂದು ಜೀವನ್ ಭೀಮಾನಗರದ ಕ್ಲೌಡ್ ನೈನ್ ಪಬ್ ನಲ್ಲಿ ಆಯೋಜಿಸಿದ್ದ ಬರ್ತ್ ಡೇ ಪಾರ್ಟಿಗೆ ಮಹಿಳೆಯನ್ನು ಕರೆದುಕೊಂಡು ಹೋಗಿದ್ದನು.

    ತನ್ನ ಗೆಳೆಯ ವೇಲು ಕರೆದ ಎಂದು ಮಹಿಳೆ ಬರ್ತ್ ಡೇ ಪಾರ್ಟಿಗೆ ಹೋಗಿದ್ದಾಳೆ. ಪಾರ್ಟಿಯಲ್ಲಿ ವೇಲು ಹಾಗೂ ಆತನ ಸ್ನೇಹಿತರು ಮಹಿಳೆಗೆ ಮದ್ಯಪಾನ ಮಾಡಿಸಿ ಆಕೆ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೆ ಆರೋಪಿಗಳು ರಾತ್ರಿ 11ಕ್ಕೆ ಪಾರ್ಟಿ ಶುರು ಮಾಡಿ ತಡರಾತ್ರಿ 1ರವರೆಗೂ ಹುಟ್ಟುಹಬ್ಬ ಪಾರ್ಟಿ ಮಾಡಿದ್ದಾರೆ.

    ಮಹಿಳೆ ರಾತ್ರಿ 1 ಗಂಟೆ ಆಯ್ತು ಮನೆಗೆ ತೆರಳಬೇಕು ಎಂದು ಓಲಾ ಕ್ಯಾಬ್‍ಗಾಗಿ ಕಾಯುತ್ತ ಪಬ್‍ನ ಹೊರಗೆ ನಿಂತಿದ್ದಾಳೆ. ಈ ವೇಳೆ ವೇಲು ನಾನೇ ಡ್ರಾಪ್ ಕೊಡ್ತಿವಿ ಬಾ ಎಂದು ಕಾರಿಗೆ ಹತ್ತಿಸಿಕೊಂಡಿದ್ದಾರೆ. ಆಗ ವೇಲು ಜೊತೆಗೆ ಕಾರಿನಲ್ಲಿದ್ದ ಇಬ್ಬರು ಸ್ನೇಹಿತರು ಕೇಳಿದಷ್ಟು ದುಡ್ಡು ಕೊಡ್ತಿವಿ ಸಹಕರಿಸು ಎಂದು ಕೇಳಿದ್ದಾರೆ.

    ಇದಕ್ಕೆ ಮಹಿಳೆ ಒಪ್ಪದಿದ್ದಾಗ ಕಾರಿನಲ್ಲಿ ಆಕೆಯ ಮುಖದ ಮೇಲೆ ಹಲ್ಲೆ ಮಾಡಿದ್ದಲ್ಲದ್ದೇ, ಮೈ-ಕೈ ಮುಟ್ಟಿ ಕಿರುಕುಳ ನೀಡಿದ್ದಾರೆ. ಈ ವೇಳೆ ಮಹಿಳೆ ಸೇವ್ ಮೀ.. ಸೇವ್ ಮಿ.. ಎಂದು ಕಿರುಚಲು ಶುರು ಮಾಡಿದಾಗ ಆರೋಪಿಗಳು ಆಕೆಯನ್ನು ಕಾರಿನಿಂದ ಕೆಳಕ್ಕೆ ತಳ್ಳಿದ್ದಾರೆ.

    ಈ ಘಟನೆಯಲ್ಲಿ ಮಹಿಳೆಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 34, 504, 354 ಅಡಿ ಪ್ರಕರಣ ದಾಖಲಾಗಿದೆ.

  • ತೆನೆ ತೊರೆದು ಕಮಲ ಹಿಡಿದ ಸಿಎಂ ಆಪ್ತ

    ತೆನೆ ತೊರೆದು ಕಮಲ ಹಿಡಿದ ಸಿಎಂ ಆಪ್ತ

    ತುಮಕೂರು: ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಆಪ್ತರೊಬ್ಬರು ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ.

    ಸಿಎಂ ಕುಮಾರಸ್ವಾಮಿ ಆಪ್ತ ಚಿದಾನಂದ ಗೌಡ ಜೆಡಿಎಸ್ ಪಕ್ಷ ತೊರೆದು ಎಲ್ಲರಿಗೂ ಬಿಗ್ ಶಾಕ್ ಕೊಟ್ಟಿದ್ದಾರೆ. ಚಿದಾನಂದ ಇಂದು ವಿ. ಸೋಮಣ್ಣ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದಾರೆ.

    ಚಿದಾನಂದ ಗೌಡ ಶಿರಾ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಚಿದಾನಂದ ಗೌಡ ಶಿರಾ ತಾಲೂಕಿನಲ್ಲಿ ಜೆಡಿಎಸ್ ಪ್ರಬಲ ನಾಯಕನಾಗಿದ್ದು, ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರಿಗೆ ಆಪ್ತರಾಗಿದ್ದರು.

  • ಬಾಲಿವುಡ್ ಬಾದ್‍ಶಾ ಪಾರ್ಟಿಗೆ ಟಿಫಿನ್ ಒಯ್ದ ಆಮೀರ್

    ಬಾಲಿವುಡ್ ಬಾದ್‍ಶಾ ಪಾರ್ಟಿಗೆ ಟಿಫಿನ್ ಒಯ್ದ ಆಮೀರ್

    ಮುಂಬೈ: ಬಿಟೌನ್ ಸ್ಟಾರ್ ಬಾಲಿವುಡ್ ಬಾದ್‍ಶಾ ಶಾರುಕ್ ಖಾನ್ ಆಯೋಜಿಸಿದ್ದ ಪಾರ್ಟಿಯೊಂದಕ್ಕೆ ನಟ ಆಮೀರ್ ಖಾನ್ ಟಿಫನ್ ಒಯ್ದಿದ್ದ ಕಥೆಯನ್ನು ಸ್ವತಃ ತಾವೇ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

    ಹೌದು, ಮಿಸ್ಟರ್ ಪರ್ಫೆಕ್ಟ್ ಎಂದೇ ಖ್ಯಾತಿ ಪಡೆದಿರುವ ಆಮೀರ್ ಖಾನ್ ಬರೀ ಸಿನಿಮಾರಂಗದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಎಷ್ಟು ಪರ್ಫೆಕ್ಟ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಬಾಲಿವುಡ್ ಅಂಗಳದಲ್ಲಿ ತನ್ನದೆಯಾದಂತಹ ಚಾಪು ಮೂಡಿಸಿದ್ದ ಆಮೀರ್ ಖಾನ್ ಪೋಷಕ ಪಾತ್ರದಲ್ಲಿ ನಟಿಸಿದ್ದ ಸಿನಿಮಾ `ದಂಗಲ್’, ಈ ಚಿತ್ರಕ್ಕಾಗಿ ಬರೋಬ್ಬರಿ 30 ಕೆ.ಜಿ ತೂಕವನ್ನು ಹೆಚ್ಚಿಸಿಕೊಂಡು, ತಮ್ಮ ದೇಹವನ್ನು ತಾವು ನಿರ್ವಹಿಸುತ್ತಿದ್ದ ಪಾತ್ರಕ್ಕೆ ಒಪ್ಪುವಂತೆ ಮಾಡಿಕೊಂಡಿದ್ದರು. ಬಳಿಕ ಈ ತೂಕವನ್ನು ಇಳಿಸಲು ಸಾಕಷ್ಟು ವ್ಯಾಯಾಮ, ಡಯೆಟ್ ಅಂತ ಶುರು ಮಾಡಿದ್ದರು.

    ಇದೇ ವೇಳೆ ಒಮ್ಮೆ ಶಾರುಕ್ ಖಾನ್ ಅವರು ತಮ್ಮ ಮನೆಯಲ್ಲಿ ಆಯೋಜಿಸಿದ್ದ ಪಾರ್ಟಿಗೆ ಆಮೀರ್ ಹಾಗೂ ಇತರೇ ಬಿಟೌನ್ ಗಣ್ಯರನ್ನು ಆಮಂತ್ರಿಸಿದ್ದರು. ಆಗ ಪಾರ್ಟಿಗೆ ಆಮೀರ್ ಟಿಫಿನ್ ಬಾಕ್ಸ್ ಒಯ್ದಿದ್ದರಂತೆ. ಹೌದು, ಯಾವುದೇ ಕೆಲಸವಾಗಲಿ ಆಮೀರ್ ಸಂಪೂರ್ಣ ಪರಿಶ್ರಮ ಪಡುತ್ತಾರೆ. ತಾವು ಮಾಡುವ ಕೆಲಸಕ್ಕೆ ಯಾರು ಬೆರಳು ಮಾಡಬಾರದು ಅಂತ ಎಚ್ಚರಿಕೆಯಿಂದ ಮನಸ್ಸಿಟ್ಟು ಕೆಲಸ ಮಾಡುತ್ತಾರೆ. ಈ ಪಾರ್ಟಿ ವೇಳೆ ಡಯೆಟ್‍ನಲ್ಲಿದ್ದ ಅಮೀರ್ “ನಾನು ನನ್ನ ಡಯೆಟ್‍ಗೆ ಮೋಸ ಮಾಡಲ್ಲ. ಅದಕ್ಕೆ ಮನೆಯಿಂದ ಟಿಫನ್ ತಂದಿದ್ದೆ ಎಂದು ಪಾರ್ಟಿಯಲ್ಲಿ ಹೇಳಿದ್ದೆ” ಎಂದು ಟಿಫನ್ ಬಾಕ್ಸ್ ಕಥೆಯನ್ನ ಹಂಚಿಕೊಂಡಿದ್ದಾರೆ.

    ಸದ್ಯ ಈ ಟಿಫಿನ್ ಬಾಕ್ಸ್ ಕಥೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಆಮೀರ್ ಅವರ ಬದ್ಧತೆಯನ್ನು ಮೆಚ್ಚಿದ್ದಾರೆ.

    https://www.instagram.com/p/Bvhq-rshISS/?utm_source=ig_embed