Tag: Party Organization

  • ಪತ್ನಿ ಜೊತೆ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ಡಿಕೆಶಿ

    ಪತ್ನಿ ಜೊತೆ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ಡಿಕೆಶಿ

    ಬೆಂಗಳೂರು: ಉತ್ತರಾಖಂಡದ ಜಗತ್ಪ್ರಸಿದ್ಧ ಕೇದಾರನಾಥ ದೇಗುಲಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪತ್ನಿ ಉಷಾ ಅವರ ಜತೆ ಸೋಮವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

    ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತಿರುವ ಡಿಕೆ ಶಿವಕುಮಾರ್ ಈ ತಿಂಗಳಿನಲ್ಲಿ ತೀರ್ಥಯಾತ್ರೆ ಕೈಗೊಂಡಿದ್ದಾರೆ. ಮೇ 13, 14, 15 ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತಕರ ಸಭೆಯಲ್ಲಿ ಡಿಕೆಶಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ, ನಂದಿ ವಿಗ್ರಹ ಪತ್ತೆ

    ಪಕ್ಷದ ಕಾರ್ಯಕ್ರಮ ಮುಗಿದ ಬಳಿಕ ಡಿಕೆಶಿ ಉತ್ತರಾಖಂಡದಲ್ಲಿರುವ ಪವಿತ್ರ ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ. ಬದರೀನಾಥ, ಹರಿದ್ವಾರಕ್ಕೆ ಡಿಕೆ ಶಿವಕುಮಾರ್ ತೆರಳಲಿದ್ದು, ಎರಡು ದಿನ ಪ್ರವಾಸ ಕೈಗೊಂಡ ಬಳಿಕ ಅವರು ಕರ್ನಾಟಕಕ್ಕೆ ಮರಳಲಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಪರಿಸರವಾದಿಗಳ ತೀವ್ರ ವಿರೋಧ

  • ಕಳೆದ ಎರಡು ತಿಂಗಳಲ್ಲಿ ಪಕ್ಷ ಸಂಘಟನೆ ಎಷ್ಟಾಗಿದೆ: ವರದಿ ಕೇಳಿದ ಅಮಿತ್ ಶಾ

    ಕಳೆದ ಎರಡು ತಿಂಗಳಲ್ಲಿ ಪಕ್ಷ ಸಂಘಟನೆ ಎಷ್ಟಾಗಿದೆ: ವರದಿ ಕೇಳಿದ ಅಮಿತ್ ಶಾ

    ಬೆಂಗಳೂರು: ನಾನು ಬೆಂಗಳೂರಿಗೆ ಬಂದು ಹೋದ ಬಳಿಕ ಪಕ್ಷ ಸಂಘಟನೆ ಸಂಪೂರ್ಣ ವರದಿಯನ್ನು ನೀಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ.

    ಮಂಗಳೂರಿನಲ್ಲಿ ಅಕ್ಟೋಬರ್ 4 ರಂದು ವಿಶೇಷ ಕೋರ್ ಕಮಿಟಿ ಸಭೆ ನಡೆಯಲಿದ್ದು, ಈ ವೇಳೆ ಎರಡು ತಿಂಗಳ ಪಕ್ಷ ಸಂಘಟನೆ ವರದಿ ಕೊಡಿ, ವಿಸ್ತಾರಕರು ಏನು ಕೆಲಸ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿ ಎಂದು ಸೂಚಿಸಿದ್ದಾರೆ.

    ಮೂರು ದಿನಗಳ ಭೇಟಿ ವೇಳೆ ಕೊಟ್ಟಿದ್ದ ಸಲಹೆ ಮತ್ತು ನಿರ್ದೇಶನಗಳು ಎಷ್ಟು ಅನುಷ್ಠಾನ ಆಗಿದೆ ಇದರ ಬಗ್ಗೆ ವಿವರ ನೀಡುವಂತೆ ಅಮಿತ್ ಶಾ ತಾಕೀತು ಮಾಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

    ಪಾದಯಾತ್ರೆ ಇಲ್ಲ: ಮಂಗಳೂರಿನಲ್ಲಿ ಅಮಿತ್ ಶಾ ಪಾದಯಾತ್ರೆ ಮಾಡುವುದಿಲ್ಲ. ಮಂಗಳೂರಿನಲ್ಲಿ ರಾಜ್ಯ ನಾಯಕರ ಜೊತೆ ಮಾತುಕತೆಯಷ್ಟೇ ನಡೆಸಲಿದ್ದಾರೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.