Tag: Party Members

  • ಪ್ರತಿ ತಿಂಗಳ 2ನೇ ಮಂಗಳವಾರ ಕಾರ್ಯಕರ್ತರ ಕುಂದುಕೊರತೆ ಆಲಿಸುತ್ತೇನೆ: ಮುನಿರತ್ನ

    ಪ್ರತಿ ತಿಂಗಳ 2ನೇ ಮಂಗಳವಾರ ಕಾರ್ಯಕರ್ತರ ಕುಂದುಕೊರತೆ ಆಲಿಸುತ್ತೇನೆ: ಮುನಿರತ್ನ

    ಬೆಂಗಳೂರು: ಪ್ರತಿ ತಿಂಗಳ ಎರಡನೇ ಮಂಗಳವಾರ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಕುಂದುಕೊರತೆಗಳನ್ನು ಆಲಿಸಲಾಗುವುದು ಎಂದು ತೋಟಗಾರಿಕಾ, ಸಚಿವ ಮುನಿರತ್ನ ಹೇಳಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿರತ್ನ, ಪಕ್ಷದ ಕಚೇರಿಗೆ ನಾಯಕರ ಸೂಚನೆ ಮೇರೆಗೆ ಭೇಟಿ ನೀಡಿದ್ದೇನೆ. ಕಚೇರಿಯಲ್ಲಿ ಇಲಾಖೆಗೆ ಸಂಬಂಧಿಸಿದ ಹಾಗೂ ಕಾರ್ಯಕರ್ತರ ಸಮಸ್ಯೆಗಳ ಪರಿಹಾರ ಕುರಿತು ವಿಚಾರ ಚರ್ಚೆ ಮಾಡಲಾಯಿತು ಎಂದರು.ಇದನ್ನೂ ಓದಿ: ಲಾಲ್‍ಬಾಗ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ಮತ್ತೊಂದು ಉದ್ಯಾನವನ: ತೋಟಗಾರಿಕೆ ಸಚಿವ ಮುನಿರತ್ನ

    ಪ್ರತಿ ತಿಂಗಳ ಎರಡನೇ ಮಂಗಳವಾರ ಬಿಜೆಪಿ ಕಾರ್ಯಕರ್ತರ ಸಮಸ್ಯೆ ಆಲಿಸಲು ಪಕ್ಷದ ಪ್ರಧಾನ ಕಚೇರಿ ಜಗನ್ನಾಥ ಭವನಕ್ಕೆ ಭೇಟಿ ನೀಡುತ್ತೇನೆ. ಅಲ್ಲದೇ ಆಗಸ್ಟ್ 26ರಂದು ಕೋಲಾರ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಕೋಲಾರದಲ್ಲಿಯೂ ಸಹ ಪಕ್ಷದ ಕಾರ್ಯಕರ್ತರು ಇಲಾಖೆ ಸಂಬಂಧ ಸಮಸ್ಯೆಗಳನ್ನು ನೀಡಬಹುದು ಎಂದು ಮಾಹಿತಿ ಹಂಚಿಕೊಂಡರು.

    ಯಶವಂತಪುರದಲ್ಲಿ ಎಲ್ಲಿಯೂ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಗೋಡೆ ನಿರ್ಮಿಸಿಲ್ಲ. ಆಸ್ಪತ್ರೆಗಾಗಿ ತಡೆಗೋಡೆ ಕಟ್ಟಲಾಗಿದೆ. ಇದರಿಂದ ರೈಲ್ವೇ ನಿಲ್ದಾಣ ಹಾಗೂ ಆಸ್ಪತ್ರೆಗೆ ಹೋಗಲು ಹಾಗೂ ವ್ಯಾಪಾರಿಗಳಿಗೂ ಅನುಕೂಲ ಆಗುವಂತೆ ವ್ಯವಸ್ಥೆ ಮಾಡಿದ್ದೇವೆ ಎಂದು ಸಚಿವರು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಗಣೇಶ ಚತುರ್ಥಿ ಆಚರಣೆಗೆ 10 ದಿನದಲ್ಲಿ ಹೊಸ ಮಾರ್ಗಸೂಚಿ: ಶಿವರಾಮ್ ಹೆಬ್ಬಾರ್

    ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುನಿರತ್ನ, ಪಕ್ಷದ ವರಿಷ್ಠರು ಈ ಬಗ್ಗೆ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವೆಲ್ಲ ಬದ್ಧ ಎಂದು ಉತ್ತರಿಸಿದರು.

  • ಮುನಿಯಪ್ಪ ವಿರುದ್ಧ ಆಕ್ರೋಶ – ಕೈ ಸಭೆಯಲ್ಲಿ ಮಾರಾಮಾರಿ

    ಮುನಿಯಪ್ಪ ವಿರುದ್ಧ ಆಕ್ರೋಶ – ಕೈ ಸಭೆಯಲ್ಲಿ ಮಾರಾಮಾರಿ

    ಕೋಲಾರ: ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಹೊಡೆದಾಡಿಕೊಂಡ ಘಟನೆ ಇಂದು ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ನಡೆದಿದೆ.

    ಚುನಾವಣೆ ವೇಳೆ ಮಾತ್ರ ಮತ ಕೇಳಲು ಬರುತ್ತೀರಿ? ಮೂಲ ಕಾಂಗ್ರೆಸ್ಸಿಗರನ್ನು ಪರಿಗಣಿಸದೇ ಸಭೆ ಮಾಡಲಾಗುತ್ತಿದೆ. ಕೆ.ಎಚ್.ಮುನಿಯಪ್ಪನವರು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ಗೌನಿಪಲ್ಲಿ ಗ್ರಾಮದ ಕಾಂಗ್ರೆಸ್ ಮುಖಂಡರು, ಸಂಸದರ ಪ್ರಚಾರಕ್ಕೆ ಬಂದಿದ್ದವರ ವಿರುದ್ಧ ನೇರವಾಗಿ ಅಸಮಾಧಾನ ಹೊರ ಹಾಕಿದರು.

    ಸಂಸದ ಕೆ.ಎಚ್.ಮುನಿಯಪ್ಪ ಪರ ಪ್ರಚಾರಕ್ಕೆ ಹೋಗಿದ್ದ ಮ್ಯಾಂಗೋ ಬೋರ್ಡ್ ಮಾಜಿ ಅಧ್ಯಕ್ಷ ದಳಸನೂರು ಗೋಪಾಲಕೃಷ್ಣ ಸೇರಿದಂತೆ ಅನೇಕ ಮುಖಂಡರು ಸ್ಥಳೀಯ ಕಾಂಗ್ರೆಸ್ಸಿಗರ ಜೊತೆ ಸಭೆ ನಡೆಸಿದ್ದರು. ಶಾಂತವಾಗಿ ಆರಂಭಗೊಂಡಿದ್ದ ಸಭೆಯಲ್ಲಿ ಸ್ಥಳೀಯರು ಒಬ್ಬೊಬ್ಬರಾಗಿ ಅಸಮಾಧಾನವನ್ನು ಹೊರಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಎರಡೂ ಗುಂಪುಗಳ ಮಧ್ಯೆ ವಾಗ್ದಾಳಿ ನಡೆದಿದ್ದು, ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ.

    ಮಾರಾಮಾರಿಯಿಂದಾಗಿ ಎಚ್ಚೆತ್ತುಕೊಂಡ ಕೆಲ ಸ್ಥಳೀಯ ಮುಖಂಡರು ಪ್ರಚಾರಕ್ಕೆ ಬಂದಿದ್ದ ನಾಯಕರನ್ನು ರಕ್ಷಿಸಿ ಸಭೆಯಿಂದ ಹೊರಗೆ ಕಳುಹಿಸಿದರು.