Tag: Parthiv Patel

  • ಏನಿದು ಐಪಿಎಲ್ ಮಿಡ್ ಟ್ರಾನ್ಸ್ ಫರ್- 2020ರ ಮಿಡ್ ಟ್ರಾನ್ಸ್ ಫರ್ ಆಗಬಲ್ಲ ಸಂಭಾವ್ಯ ಆಟಗಾರರ ಪಟ್ಟಿ

    ಏನಿದು ಐಪಿಎಲ್ ಮಿಡ್ ಟ್ರಾನ್ಸ್ ಫರ್- 2020ರ ಮಿಡ್ ಟ್ರಾನ್ಸ್ ಫರ್ ಆಗಬಲ್ಲ ಸಂಭಾವ್ಯ ಆಟಗಾರರ ಪಟ್ಟಿ

    ದುಬೈ: ಐಪಿಎಲ್ 2020ರ ಅರ್ಧ ಟೂರ್ನಿಯ ಅರ್ಧ ಪಂದ್ಯಗಳು ಪೂರ್ಣವಾಗುವ ಹಂತಕ್ಕೆ ತಲುಪಿದ್ದು, ಗೇಲ್, ರಹಾನೆರಂತಹ ಸ್ಟಾರ್ ಆಟಗಾರರು ಇಂದಿಗೂ ತಂಡದ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿಲ್ಲ. ಈ ಸಮಯದಲ್ಲೇ ಫ್ರಾಂಚೈಸಿಗಳು ಆಟಗಾರರನ್ನು ಬದಲಿ ಮಾಡಿಕೊಳ್ಳುವ ಅವಕಾಶ ಮಿಡ್ ಟ್ರಾನ್ಸ್ ಫರ್ ರೂಪದಲ್ಲಿ ಲಭ್ಯವಾಗಿದೆ.

    ಟೂರ್ನಿಯಲ್ಲಿ ತಮ್ಮನ್ನು ಖರೀದಿ ಮಾಡಿದ ಫ್ರಾಂಚೈಸಿ ತಂಡದ ಪರ ಆಡುವ ಅವಕಾಶ ಲಭಿಸದ ಆಟಗಾರರಿಗೆ ಮತ್ತೊಂದು ತಂಡದ ಪರ ಆಡಲು ಟೂರ್ನಿಯ ಅರ್ಧ ಪಂದ್ಯಗಳು ಮುಕ್ತಾಯವಾದ ಬಳಿಕ ‘ಮಿಡ್ ಸೀಜನ್ ಟ್ರಾನ್ಸ್ ಫರ್ ವಿಂಡೋ’ ರೂಪದಲ್ಲಿ ಅವಕಾಶ ಲಭಿಸಲಿದೆ. ಟೂರ್ನಿಯ ಸಂದರ್ಭದಲ್ಲಿ ಗಾಯಗೊಂಡ ಆಟಗಾರರ ಸ್ಥಾನದಲ್ಲಿ ಹೊಸ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಈ ಮಿಡ್ ಟ್ರಾನ್ಸ್ ಫರ್ ವಿಂಡೋ ಅವಕಾಶ ಕಲ್ಪಿಸುತ್ತದೆ.

    2018ರ ಐಪಿಎಲ್ ಆವೃತ್ತಿಯಲ್ಲಿ ಬಿಸಿಸಿಐ ಮೊದಲ ಬಾರಿಗೆ ಮಿಡ್ ಟ್ರಾನ್ಸ್ ಫರ್ ವಿಂಡೋಗೆ ಅವಕಾಶ ನೀಡಿತ್ತು. ಆದರೆ ಇದುವರೆಗೂ ಈ ಅವಕಾಶವನ್ನು ಯಾವುದೇ ತಂಡ ಬಳಕೆ ಮಾಡಿಕೊಂಡಿಲ್ಲ. ಈ ಆವೃತ್ತಿಯಲ್ಲಿ ಐಪಿಎಲ್ ಆಡಳಿತ ಮಂಡಳಿ ಕ್ಯಾಪ್ಡ್ ಪ್ಲೇಯರ್ ಗಳನ್ನು ಫ್ರಾಂಚೈಸಿಗಳು ಬದಲಿಸಿಕೊಳ್ಳಲು ಅವಕಾಶ ನೀಡಿದೆ.

    ಟೂರ್ನಿಯಲ್ಲಿ ಪ್ರತಿ ತಂಡ 7 ಪಂದ್ಯಗಳನ್ನು ಆಡಿದ ಬಳಿಕ ಆಟಗಾರರ ಬದಲಾವಣೆಗೆ ಅವಕಾಶ ಲಭಿಸಲಿದೆ. 2020ರ ಆವೃತ್ತಿಯಲ್ಲಿ ಗೇಲ್, ರಹಾನೆ, ಕ್ರಿಸ್ ಲೀನ್, ಕೌಲ್ಡರ್ ನೈಲ್, ಇಮ್ರಾನ್ ತಾಹಿರ್, ಕ್ರಿಸ್ ಮೋರಿಸ್ ರಂತಹ ಅಂತಾರಾಷ್ಟ್ರೀಯ ಆಟಗಾರರು ಮಿಡ್ ಟ್ರಾನ್ಸ್ ಫರ್ ಗೆ ಅರ್ಹರಾಗಿದ್ದಾರೆ.

    ಇತ್ತ ರಹಾನೆ ಅವರನ್ನು ತಂಡದಿಂದ ದೂರ ಮಾಡಿಕೊಳ್ಳುವುದಕ್ಕೆ ನಮಗೆ ಮನಸ್ಸಿಲ್ಲ ಎಂದು ಸ್ಪಷ್ಟಪಡಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಸುರೇಶ್ ರೈನಾ ಸ್ಥಾನದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರಾಟ್ ಸಿಂಗ್‍ರಂತಹ ಯುವ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ. 2020ರ ಟೂರ್ನಿಯಲ್ಲಿ ಮಿಡ್ ಟ್ರಾನ್ಸ್ ಫರ್ ಅವಕಾಶ ಅಕ್ಟೋಬರ್ 12ರ ಸೋಮವಾರದಿಂದ ಜಾರಿ ಆಗಲಿದೆ.

    2020ರ ಆವೃತ್ತಿಯ ಮಿಡ್ ಸೀಜನ್ ಟ್ರಾನ್ಸ್ ಫರ್ ಗೆ ಅರ್ಹರಾದ ಆಟಗಾರರ ಪಟ್ಟಿ ಇಂತಿದೆ:

    ಸನ್‍ರೈಸರ್ಸ್ ಹೈದರಾಬಾದ್: ಶ್ರೀವತ್ಸ್ ಗೋಸ್ವಾಮಿ, ಸಿದ್ಧಾರ್ಥ್ ಕೌಲ್, ವೃದ್ಧಿಮಾನ್ ಸಹಾ, ವಿಜಯ್ ಶಂಕರ್, ವಿರಾಟ್ ಸಿಂಗ್, ಬವನಕಾ ಸಂದೀಪ್, ಫ್ಯಾಬಿಯನ್ ಅಲೆನ್, ಸಂಜಯ್ ಯಾದವ್, ಬಸಿಲ್ ಥಾಂಪಿ, ಬಿಲ್ಲಿ ಸ್ಟಾನ್ಲೇಕ್, ಮೊಹಮ್ಮದ್ ನಬಿ, ಸಂದೀಪ್ ಶರ್ಮಾ, ಶಹ್ಬಾಜ್ ನದೀಮ್.

    ಮುಂಬೈ: ಆದಿತ್ಯ ತಾರೆ, ಅನುಕುಲ್ ರಾಯ್, ಮಿಚೆಲ್ ಮೆಕ್‍ಕ್ಲೆನಾಘನ್, ಕ್ರಿಸ್ ಲಿನ್, ನಾಥನ್ ಕೌಲ್ಡರ್ ನೈಲ್, ಸೌರಭ್ ತಿವಾರಿ, ಮೊಹ್ಸಿನ್ ಖಾನ್, ದಿಗ್ವಿಜಯ್ ದೇಶ್‍ಮುಖ್, ಪ್ರಿನ್ಸ್ ಬಲ್ವಂತ್ ರೈ, ಧವಲ್ ಕುಲಕರ್ಣಿ, ಜಯಂತ್ ಯಾದವ್, ಶೆರ್ಫೇನ್ ರುದರ್ ಫೋರ್ಡ್, ಅಂಮೋಲ್ ಪ್ರೀತ್ ಸಿಂಗ್.

    ಚೆನ್ನೈ: ಕೆಎಂ ಆಸಿಫ್, ಇಮ್ರಾನ್ ತಾಹಿರ್, ನಾರಾಯಣ್ ಜಗದೀಸನ್, ಕರ್ಣ್ ಶರ್ಮಾ, ಮಿಚೆಲ್ ಸ್ಯಾಂಟ್ನರ್, ಮೋನು ಕುಮಾರ್, ಋತುರಾಜ್ ಗಾಯಕವಾಡ್, ಶಾರ್ದುಲ್ ಠಾಕೂರ್, ಆರ್ ಸಾಯಿ ಕಿಶೋರ್, ಜೋಶ್ ಹೇಜಲ್‍ವುಡ್.

    ರಾಯಲ್ ಚಾಲೆಂಜರ್ಸ್ ಬೆಂಗಳೂರು: ಜೋಶ್ ಫಿಲಿಪ್, ಕ್ರಿಸ್ ಮೋರಿಸ್, ಡೇಲ್ ಸ್ಟೇನ್, ಶಹಬಾಜ್ ಅಹ್ಮದ್, ಪವನ್ ದೇಶಪಾಂಡೆ, ಆಡಮ್ ಜಂಪಾ, ಗುರ್ಕೀರತ್ ಸಿಂಗ್ ಮನ್, ಮೊಯೀನ್ ಅಲಿ, ಮೊಹಮ್ಮದ್ ಸಿರಾಜ್, ಪಾರ್ಥಿವ್ ಪಟೇಲ್, ಪವನ್ ನೇಗಿ, ಉಮೇಶ್ ಯಾದವ್,

    ಡೆಲ್ಲಿ ಕ್ಯಾಪಿಟಲ್ಸ್: ರಹಾನೆ, ಕೀಮೊ ಪಾಲ್, ಸಂದೀಪ್ ಲಮಿಚಾನೆ, ಅಲೆಕ್ಸ್ ಕ್ಯಾರಿ, ಅವೇಶ್ ಖಾನ್, ಹರ್ಷಲ್ ಪಟೇಲ್, ಇಶಾಂತ್ ಶರ್ಮಾ, ಲಲಿತ್ ಯಾದವ್, ಡೇನಿಯಲ್ ಸ್ಯಾಮ್ಸ್, ತುಷಾರ್ ದೇಶಪಾಂಡೆ, ಮೋಹಿತ್ ಶರ್ಮಾ.

    ಕಿಂಗ್ಸ್ ಇಲೆವೆನ್ ಪಂಜಾಬ್: ಮುಜೀರ್ ಉರ್ ರಹಮಾನ್, ಮುರುಗನ್ ಅಶ್ವಿನ್, ದೀಪಕ್ ಹೂಡಾ, ಇಶಾನ್ ಪೊರೆಲ್, ಕ್ರಿಸ್ ಜೋರ್ಡಾನ್, ಸಿಮ್ರಾನ್ ಸಿಂಗ್, ತಾಜಿಂದರ್ ಸಿಂಗ್, ಅರ್ಶ್ ದೀಪ್ ಸಿಂಗ್, ದರ್ಶನ್ ನಲಖಂಡೆ, ಕೃಷ್ಣಪ್ಪ ಗೌತಮ್, ಕ್ರಿಸ್ ಗೇಲ್, ಜಗದೀಶ್ ಸುಚಿತ್, ಹಪ್ರ್ರೀತ್ ಬ್ರಾರ್, ಮಂದೀಪ್ ಸಿಂಗ್.

    ಕೋಲ್ಕತ್ತಾ: ಟಾಮ್ ಬಾಂಟನ್, ನಿಖಿಲ್ ನಾಯಕ್,  ಪ್ರಸಿದ್ಧ ಕೃಷ್ಣ, ರಿಂಕು ಸಿಂಗ್, ಸಂದೀಪ್ ವಾರಿಯರ್, ಸಿದ್ದೇಶ್ ಲಾಡ್, ಕ್ರಿಸ್ ಗ್ರೀನ್, ಎಂ ಸಿದ್ದಾರ್ಥ್, ಲಾಕಿ ಫರ್ಗುಸನ್

    ರಾಜಸ್ಥಾನ: ವರುಣ್ ಆರನ್, ಕಾರ್ತಿಕ್ ತ್ಯಾಗಿ, ಓಶೇನ್ ಥಾಮಸ್, ಅನಿರುದ್ಧಾ ಜೋಶಿ, ಆಂಡ್ರ್ಯೂ ಟೈ, ಆಕಾಶ್ ಸಿಂಗ್, ಅನುಜ್ ರಾವತ್, ಯಶಸ್ವಿ ಜೈಸ್ವಾಲ್, ಮಯಾಂಕ್ ಮಾರ್ಕಂಡೆ, ಅಂಕಿತ್ ರಾಜ್‍ಪೂತ್, ಮನನ್ ವೊಹ್ರಾ, ಮಹಿಪಾಲ್ ಲೆಮೂರ್, ಶಶಾಂಕ್ ಸಿಂಗ್, ಡೇವಿಡ್ ಮಿಲ್ಲರ್.

  • ಧೋನಿ ಟ್ರೋಫಿಗಳನ್ನು ಗೆದ್ದಿರಬಹುದು, ಕಷ್ಟದ ಕಾಲದಲ್ಲಿ ತಂಡ ಕಟ್ಟಿದ್ದು ದಾದಾ: ಪಾರ್ಥಿವ್

    ಧೋನಿ ಟ್ರೋಫಿಗಳನ್ನು ಗೆದ್ದಿರಬಹುದು, ಕಷ್ಟದ ಕಾಲದಲ್ಲಿ ತಂಡ ಕಟ್ಟಿದ್ದು ದಾದಾ: ಪಾರ್ಥಿವ್

    ಮುಂಬೈ: ಭಾರತ ತಂಡದ ಕ್ರಿಕೆಟ್ ಇತಿಹಾಸದಲ್ಲಿ ಎಂಎಸ್ ಧೋನಿ ಅವರಿಗಿಂತ ಸೌರವ್ ಗಂಗೂಲಿಯವರು ಬಹಳ ಪರಿಣಾಮಕಾರಿ ನಾಯಕ ಎಂದು ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ಪಾರ್ಥಿವ್ ಪಟೇಲ್ ಹೇಳಿದ್ದಾರೆ.

    ಭಾರತದ ಕ್ರಿಕೆಟ್ ನಾಯಕತ್ವದ ವಿಚಾರಕ್ಕೆ ಬಂದರೆ ಇಬ್ಬರು ದಿಗ್ಗಜ ಕ್ಯಾಪ್ಟನ್‍ಗಳ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತದೆ. ನಾಯಕರಾಗಿ ಎಂಎಸ್ ಧೋನಿ ಮತ್ತು ಸೌರವ್ ಗಂಗೂಲಿಯವರು ಭಾರತ ತಂಡಕ್ಕೆ ತಮ್ಮದೇ ಆದ ಕೊಡುಗೆಗಳನ್ನು ಕೊಟ್ಟಿದ್ದಾರೆ. ಎಂಎಸ್ ಧೋನಿಯವರು ಐಸಿಸಿಯ ಪ್ರಮುಖ ಟೂರ್ನಿಗಳಲ್ಲಿ ತಂಡವನ್ನು ಗೆಲ್ಲಿಸಿದರೆ, ಗಂಗೂಲಿಯವರು ಕಷ್ಟದ ಕಾಲದಲ್ಲಿ ತಂಡವನ್ನು ಕಟ್ಟಿ ವಿದೇಶದಲ್ಲಿ ಸರಣಿಗಳನ್ನು ಗೆದ್ದು ತಂದಿದ್ದರು.

    ಈಗ ಈ ಇಬ್ಬರ ಬಗ್ಗೆ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿರುವ ಪಾರ್ಥಿವ್ ಪಟೇಲ್, ಇಬ್ಬರು ನಾಯಕರ ನಡುವೆ ಸ್ಪರ್ಧೆಯು ಮಾನ್ಯವಾಗಿರುತ್ತದೆ. ಇದರಲ್ಲಿ ಒಬ್ಬ ನಾಯಕ ಐಸಿಸಿಯ ಎಲ್ಲ ಟ್ರೋಫಿಗಳನ್ನು ಗೆದ್ದಿದ್ದರೆ, ಇನ್ನೊಬ್ಬ ನಾಯಕ ಕಷ್ಟದ ಕಾಲದಲ್ಲಿ ತಂಡವನ್ನು ಕಟ್ಟಿ ಬೆಳೆಸಿದ್ದಾರೆ. ಧೋನಿ ಅವರು ಟ್ರೋಫಿಗಳನ್ನು ಗೆದ್ದಿರಬಹುದು ಆದರೆ ತಂಡ ಕಟ್ಟಿದ್ದು ದಾದಾ. 2000ರ ನಂತರ ಸೌರವ್ ಗಂಗೂಲಿ ನಾಯಕರಾದಾಗ, ಭಾರತೀಯ ಕ್ರಿಕೆಟ್ ತಂಡ ಕಠಿಣ ಸಮಯವನ್ನು ಎದುರಿಸುತ್ತಿತ್ತು ಎಂದು ಪಾರ್ಥಿವ್ ಹೇಳಿದ್ದಾರೆ.

    ಈ ರೀತಿಯ ಕಠಿಣ ಪರಿಸ್ಥಿತಿಯಲ್ಲಿ ವಿದೇಶದಲ್ಲಿ ಸರಣಿ ಗೆಲ್ಲುವಂತ ತಂಡವನ್ನು ಗಂಗೂಲಿಯವರು ಕಟ್ಟಿ ಬೆಳೆಸಿದರು. ನಾವು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯಗಳನ್ನು ಗೆದ್ದೆವು. ಜೊತೆಗೆ ಪಾಕಿಸ್ತಾನಕ್ಕೆ ಹೋಗಿ ಟೆಸ್ಟ್ ಸರಣಿಯನ್ನು ಗೆದ್ದಿದ್ದೇವೆ. ಈ ತಂಡವನ್ನು ಕಟ್ಟಿದ್ದು, ಗಂಗೂಲಿಯವರ ನಾಯಕತ್ವದಲ್ಲಿ. ದಕ್ಷಿಣ ಆಫ್ರಿಕಾದಲ್ಲಿ 2003ರ ವಿಶ್ವಕಪ್‍ನಲ್ಲಿ ಭಾರತ ತಂಡವು ಫೈನಲ್ ತಲುಪುತ್ತದೆ ಎಂದು ಯಾರೂ ಯೋಚಿಸಿರಲಿಲ್ಲ. ಆದರೆ ಅಂದು ನಾವು ಫೈನಲ್ ಪ್ರವೇಶ ಮಾಡಿದ್ದೆವು. ಧೋನಿ ಎಲ್ಲ ಟ್ರೋಫಿ ಗೆದ್ದರು, ನನಗೆ ತಂಡವನ್ನು ಕಟ್ಟಿ ಬೆಳಸಿದ ಗಂಗೂಲಿಯವರು ಇಷ್ಟ ಆಗುತ್ತಾರೆ ಎಂದು ತಿಳಿಸಿದ್ದಾರೆ.

    ಧೋನಿಯವರು ವೈಟ್-ಬಾಲ್ ಕ್ರಿಕೆಟ್‍ನಲ್ಲಿ ನಾಯಕನಾಗಿ ಮೂರು ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ. 2007ರ ಚೊಚ್ಚಲ ಟಿ-20 ವಿಶ್ವಕಪ್, 2011 ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಧೋನಿ ಅವರ ನಾಯಕ್ವದಲ್ಲಿ ಗೆದ್ದಿತ್ತು. ಆದರೆ 2007ರ ಟಿ-20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್‍ನಲ್ಲಿ ಆಡಿದ ಪ್ರಮುಖ ಆಟಗಾರರು ಗಂಗೂಲಿಯವರ ಗರಡಿಯಲ್ಲಿ ಪಳಗಿದ ಆಟಗಾರರು, ಈ ಆಟಗಾರರು ತಂಡದಲ್ಲಿ ಇದ್ದ ಕಾರಣ ಧೋನಿ ಟ್ರೋಫಿಗಳನ್ನು ಗೆದಿದ್ದಾರೆ ಎಂದು ಕೆಲವರು ವಾದಿಸುತ್ತಾರೆ.

    ನಾಯಕ್ವದ ವಿಚಾರದಲ್ಲಿ ಗಂಗೂಲಿ ಮತ್ತು ಧೋನಿಯವರ ಅಂಕಿಅಂಶಗಳನ್ನು ನೋಡುವುದಾದರೆ, ಧೋನಿ 60 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 27 ಪಂದ್ಯದಲ್ಲಿ ಜಯಗಳಿಸಿ 27 ಪಂದ್ಯಗಳನ್ನು ಸೋತ್ತಿದ್ದಾರೆ. ಗಂಗೂಲಿಯವರು 50 ಟೆಸ್ಟ್ ಪಂದ್ಯಗಳಲ್ಲಿ 21 ಗೆಲುವುಗಳು ಮತ್ತು 13 ಸೋಲುಗಳನ್ನು ಕಂಡಿದ್ದಾರೆ. ಗಂಗೂಲಿಯವರು 146 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 76 ಪಂದ್ಯಗಳನ್ನು ಗೆದ್ದಿದ್ದಾರೆ. ಧೋನಿಯವರು ಬರೋಬ್ಬರಿ 200 ಏಕದಿನ ಪಂದ್ಯಗಳಲ್ಲಿ ನಾಯಕ್ವ ವಹಿಸಿ 110 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ.

  • ಟೀಂ ಇಂಡಿಯಾಗೆ ಈ ನಾಲ್ವರ ಕಮ್‍ಬ್ಯಾಕ್ ಕಷ್ಟ ಕಷ್ಟ!

    ಟೀಂ ಇಂಡಿಯಾಗೆ ಈ ನಾಲ್ವರ ಕಮ್‍ಬ್ಯಾಕ್ ಕಷ್ಟ ಕಷ್ಟ!

    ನವದೆಹಲಿ: ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಲು ಮಾಜಿ ನಾಯಕ ಎಂ.ಎಸ್.ಧೋನಿ ಸೇರಿದಂತೆ ಅನೇಕರು ಸರ್ವ ಪ್ರಯತ್ನ ನಡೆಸಿದ್ದಾರೆ. ಈ ಪೈಕಿ ನಾಲ್ವರು ಮತ್ತೆ ರಾಷ್ಟ್ರೀಯ ತಂಡ ಸೇರುವುದು ಕಷ್ಟ ಎಂಬ ಮಾತುಗಳು ಕೇಳಿ ಬಂದಿವೆ.

    ಭಾರತದ ಕ್ರಿಕೆಟ್ ತಂಡದ ಪರ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಹರ್ಭಜನ್ ಸಿಂಗ್ ಇತ್ತೀಚೆಗೆ ತಂಡಕ್ಕೆ ಕಮ್‍ಬ್ಯಾಕ್ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಐಪಿಎಲ್ ಮೂಲಕ ಟೀಂ ಇಂಡಿಯಾಗೆ ರೀ ಎಂಟ್ರಿ ಕೊಡಲು ಎಂ.ಎಸ್.ಧೋನಿ ಮುಂದಾಗಿದ್ದರು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಟೂರ್ನಿ ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.

    ಹರ್ಭಜನ್ ಸಿಂಗ್ ಸುಮಾರು 11 ವರ್ಷಗಳ ಕಾಲ ರಾಷ್ಟ್ರೀಯ ತಂಡದಲ್ಲಿ ಪ್ರಮುಖ ಆಯ್ಕೆಯಾಗಿದ್ದರು. 2011ರ ವಿಶ್ವಕಪ್ ನಂತರ ಎಂ.ಎಸ್. ಧೋನಿ ಮತ್ತು ತಂಡದ ಆಡಳಿತ ಮಂಡಳಿ ಅವರನ್ನು ಕೈಬಿಟ್ಟು ಆರ್.ಅಶ್ವಿನ್‍ಗೆ ಮಣೆ ಹಾಕಿತು. ಹೀಗಾಗಿ ಮುಂದಿನ 6 ವರ್ಷಗಳವರೆಗೆ ಎಲ್ಲಾ ಸ್ವರೂಪಗಳಲ್ಲಿ ಸ್ಪಿನ್ ದಾಳಿಯನ್ನು ಆರ್.ಅಶ್ವಿನ್ ಮುನ್ನಡೆಸಿದರು.

    ಸದ್ಯ ಐಪಿಎಲ್ ಮಾತ್ರ ಆಡುತ್ತಿರುವ ಹರ್ಭಜನ್ ಸಿಂಗ್ ಮತ್ತೆ ರಾಷ್ಟ್ರೀಯ ತಂಡದಲ್ಲಿ ಆಯ್ಕೆಯಾಗುವ ನಿರೀಕ್ಷೆಯಿಲ್ಲ. ಆದರೆ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಹೊರತಾಗಿಯೂ ಐಪಿಎಲ್ ಅಥವಾ ದೇಶೀಯ ಕ್ರಿಕೆಟ್ ಆಡುತ್ತಿದ್ದಾರೆ. ಇತ್ತ ಅಂಬಟಿ ರಾಯುಡು, ಸ್ಟುವರ್ಟ್ ಬಿನ್ನಿ, ಮನೋಜ್ ತಿವಾರಿ ಹಾಗೂ ಪಾರ್ಥಿವ್ ಪಟೇಲ್ ಅವರು ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡುವುದು ಭಾರೀ ಕಷ್ಟ ಎನ್ನಲಾಗುತ್ತಿದೆ.

    ಅಂಬಟಿ ರಾಯುಡು:
    2019ರ ವಿಶ್ವಕಪ್‍ಗೆ ಅಂಬಟಿ ರಾಯುಡು ಅವರನ್ನು ಆಯ್ಕೆ ಸಮಿತಿ ಕೈಬಿಟ್ಟಿದ್ದು ಅಚ್ಚರಿ ಮೂಡಿಸಿತ್ತು. ಅಷ್ಟೇ ಅಲ್ಲದೆ ಟೂರ್ನಿ ನಡುವೆ ಆಟಗಾರರು ಗಾಯದಿಂದ ವಿಶ್ರಾಂತಿಗೆ ಜಾರಿದಾಗ ಎರಡು ಅವಕಾಶಗಳು ಇದ್ದಾಗಲೂ ಅವರನ್ನು ಕಡೆಗಣಿಸಲಾಗಿತ್ತು. ಬದಲಾಗಿ ರಿಷಬ್ ಪಂತ್ ಮತ್ತು ಮಾಯಾಂಕ್ ಅಗರ್ವಾಲ್ ಅವರಿಗೆ ಮಣೆ ಹಾಕಲಾಗಿತ್ತು. ಈ ಮೂಲಕ ಟೀಂ ಇಂಡಿಯಾದಲ್ಲಿ ಅಂಬಟಿ ರಾಯುಡು ಕಮ್‍ಬ್ಯಾಕ್ ಕಷ್ಟ ಎನ್ನುವ ಸಂದೇಶವನ್ನು ಬಿಸಿಸಿಐ ಪರೋಕ್ಷವಾಗಿ ರವಾನಿಸಿತ್ತು. ಶ್ರೇಯಸ್ ಅಯ್ಯರ್ ಉತ್ತಮ ಫಾರ್ಮ್ ನಲ್ಲಿದ್ದು, ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದರಿಂದಾಗಿ ರಾಯುಡು ಅವರಿಗಿದ್ದ ಅವಕಾಶ ಕೈತಪ್ಪಿದೆ.

    ಸ್ಟುವರ್ಟ್ ಬಿನ್ನಿ:
    2016ರಿಂದ ಟೀಂ ಇಂಡಿಯಾದಿಂದ ಹೊರಗುಳಿದ ನಂತರ ಸ್ಟುವರ್ಟ್ ಬಿನ್ನಿ ದೇಶೀಯ ಕ್ರಿಕೆಟ್‍ನಲ್ಲಿ ಮುಂದುವರಿದಿದ್ದಾರೆ. 2018ರಲ್ಲಿ ಅವರು ಕರ್ನಾಟಕ ತಂಡದಿಂದ ಹೊರಗುಳಿದಿದ್ದರು. 2019-20ರ ಮಧ್ಯೆ ನಾಗಾಲ್ಯಾಂಡ್ ತಂಡ ಸೇರಲು ಮುಂದಾಗಿದ್ದರು. ಐಪಿಎಲ್ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ತಂಡವು ಬಿನ್ನಿ ಅವರನ್ನು 13ನೇ ಆವೃತ್ತಿಗೆ ಕೈಬಿಟ್ಟಿದೆ. ಬಳಿಕ ನಡೆದ ಹರಾಜಿನಲ್ಲಿ ಸ್ಟುವರ್ಟ್ ಬಿನ್ನಿ ಅವರನ್ನು ಯಾವುದೇ ತಂಡ ಖರೀದಿಸಲು ಮುಂದೆ ಬರಲಿಲ್ಲ.

    ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದಲ್ಲಿ ಆಲ್‍ರೌಂಡರ್ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಹೀಗಾಗಿ ಬಿನ್ನಿ ಕಮ್‍ಬ್ಯಾಕ್ ಕಷ್ಟ ಎಂದು ಹೇಳಲಾಗುತ್ತಿದೆ. 2015ರ ವಿಶ್ವಕಪ್ ತಂಡದ ಸದಸ್ಯರಾಗಿದ್ದ ಬಿನ್ನಿ 2014ರಿಂದ 2016ರವರೆಗೆ ಆರು ಟೆಸ್ಟ್, 14 ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಿದ್ದಾರೆ.

    ಮನೋಜ್ ತಿವಾರಿ:
    ಎಂ.ಎಸ್.ಧೋನಿ ಹಾಗೂ ತಂಡದ ಆಯ್ಕೆ ಸಮಿತಿಯ ಒಂದು ಕಾಲದ ಮೊದಲ ಆಯ್ಕೆಯ ಆಟಗಾರ ಮನೋಜ್ ತಿವಾರಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪರದಾಡಿದರು. ಶತಕ ಗಳಿಸಿದ ನಂತರವೂ ಅವರು ಆಡುವ ಇಲೆವನ್ ತಂಡದಿಂದ ಹೊರಗುಳಿದರು. ಟೀಂ ಇಂಡಿಯಾ ಜೊತೆಗೆ ಪ್ರಪಂಚದಾದ್ಯಂತ ಪ್ರವಾಸ ಮಾಡಿದರು ಮನೋಜ್ ತಿವಾರಿ, 2008ರಿಂದ 2015ರವರೆಗೆ ಕೇವಲ 12 ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅವರು 2018ರಿಂದ ಭಾರತ ಎ ಪರ ಆಡಿಲ್ಲ. ತಿವಾರಿ ದೇಶೀಯ ಕ್ರಿಕೆಟ್‍ನಲ್ಲಿ ಬಂಗಾಳ ಪರ ಆಡುವುದನ್ನು ಮುಂದುವರಿಸಿದ್ದಾರೆ. ಆದರೆ ರಾಷ್ಟ್ರೀಯ ತಂಡಕ್ಕೆ ಕರೆಸಿಕೊಳ್ಳುವ ಸಾಧ್ಯತೆಗಳು ವಿರಳ ಎನ್ನಲಾಗುತ್ತಿದೆ.

    ಪಾರ್ಥಿವ್ ಪಟೇಲ್:
    ಎಂ.ಎಸ್.ಧೋನಿ ಅವರ ಎಂಟ್ರಿ ಪಾರ್ಥಿವ್ ಪಟೇಲ್ ಅವರನ್ನು ಟೀಂ ಇಂಡಿಯಾದಿಂದ ದೂರವಾಗುವಂತೆ ಮಾಡಿತು ಎನ್ನಲಾಗುತ್ತಿದೆ. 2018-19ರಲ್ಲಿ ನಡೆದ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಅವರು ಟೆಸ್ಟ್ ತಂಡದ ಭಾಗವಾಗಿದ್ದರು. ಆದರೆ ರಿಷಬ್ ಪಂತ್ ಅವರು ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರಿಂದ ಅವಕಾಶ ಸಿಗಲಿಲ್ಲ. ಪಾರ್ಥಿವ್ ಪಟೇಲ್ ಐಪಿಎಲ್ ಮತ್ತು ದೇಶೀಯ ಕ್ರಿಕೆಟ್ ಆಡುವುದನ್ನು ಮುಂದುವರಿಸಿದ್ದಾರೆ. ಆದರೆ ವೃದ್ಧಿಮಾನ್ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ.

  • ಕೆಎಲ್ ಕೇವಲ ತಾತ್ಕಾಲಿಕ ಪರಿಹಾರವಷ್ಟೇ- ಪಾರ್ಥಿವ್ ಪಟೇಲ್

    ಕೆಎಲ್ ಕೇವಲ ತಾತ್ಕಾಲಿಕ ಪರಿಹಾರವಷ್ಟೇ- ಪಾರ್ಥಿವ್ ಪಟೇಲ್

    ನವದೆಹಲಿ: ಭಾರತ ಕ್ರಿಕೆಟ್ ತಂಡದ ವಿಕೆಟ್‍ಕೀಪಿಂಗ್ ಜವಾಬ್ದಾರಿಗೆ ಕೆ.ಎಲ್.ರಾಹುಲ್ ಕೇವಲ ತಾತ್ಕಾಲಿಕ ಪರಿಹಾರವಷ್ಟೇ ಎಂದು ಟೀಂ ಇಂಡಿಯಾ ಪರ ಆಡಿದ ಅತ್ಯಂತ ಕಿರಿಯ ವಯಸ್ಸಿನ ವಿಕೆಟ್‍ಕೀಪರ್, ಬ್ಯಾಟ್ಸ್‌ಮನ್‌ ಖ್ಯಾತಿಯ ಪಾರ್ಥಿವ್ ಪಟೇಲ್ ಹೇಳಿದ್ದಾರೆ.

    ‘ಲಾಕ್‍ಡೌನ್ ಬಟ್ ನಾಟೌಟ್’ ಆನ್‍ಲೈನ್ ಸರಣಿ ಕಾರ್ಯಕ್ರಮದಲ್ಲಿ ವೇಳೆ ಪಾರ್ಥಿವ್, ಟೀಂ ಇಂಡಿಯಾ ಕೀಪಿಂಗ್ ಜವಾಬ್ದಾರಿ ನಿಭಾಯಿಸಲು ಕೆ.ಎಲ್.ರಾಹುಲ್ ಮತ್ತು ರಿಷಬ್ ಪಂತ್ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಎಂದು ಅಭಿಮಾನಿಗಳ ಕೇಳಿದಾಗ ಈ ರೀತಿ ಉತ್ತರಿಸಿದ್ದಾರೆ.

    “ಕೆ.ಎಲ್.ರಾಹುಲ್ ಸದ್ಯದ ಸಂದರ್ಭದಲ್ಲಿ ವಿಕೆಟ್‍ಕೀಪಿಂಗ್ ಕೆಲಸಕ್ಕೆ ಕೇವಲ ತಾತ್ಕಾಲಿಕ ಪರಿಹಾರವಷ್ಟೇ. ಈ ವಿಚಾರವನ್ನು ಮುಂದಿನ ವಿಶ್ವಕಪ್ ಟೂರ್ನಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಬಹುದು. ವಿಶ್ವಕಪ್ ಟೂರ್ನಿನಲ್ಲಿ ಕೆ.ಎಲ್.ರಾಹುಲ್ ಭಾರತದ ಪರ ಕೀಪಿಂಗ್ ಜವಾಬ್ದಾರಿ ಅತ್ಯುತ್ತಮವಾಗಿ ನಿಭಾಯಿಸಬಲ್ಲರು. ಇದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಪಾರ್ಥಿವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇದೇ ವೇಳೆ ರಿಷಬ್ ಪಂತ್ ವಿಚಾರ ಪ್ರಸ್ತಾಪಿಸಿದ ಪಾರ್ಥಿವ್, “ದೀರ್ಘ ಅವಧಿಗೆ ಕೀಪಿಂಗ್ ಸೇವೆ ನೀಡುವ ಸಾಮರ್ಥ್ಯ ಪಂತ್‍ಗೆ ಇದೆ. ಅವರನ್ನು ಭೇಟಿಯಾದಾಗಲೆಲ್ಲ ಇದನ್ನೇ ಹೇಳಿದ್ದೇನೆ. ನಿನ್ನಲ್ಲಿರುವ ಪ್ರತಿಭೆಯಿಂದಲೇ ಜನರು ಮಾತನಾಡುತ್ತಿದ್ದಾರೆ. ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಮತ್ತೆ ಮತ್ತಮ ಫಾರ್ಮ್ ಗೆ ಮರಳಲು ದೇಶಿ ಟೂರ್ನಿಗಳಲ್ಲಿ ಆಡಬೇಕು. ಒಂದು ವೇಳೆ ನಿನ್ನ ಜಾಗದಲ್ಲಿ ನಾನಿದ್ದರೂ ಇದನ್ನೇ ಮಾಡುತ್ತಿದ್ದೆ ಎಂದು ತಿಳಿ ಹೇಳಿರುವೆ. ಪಂತ್ ಉತ್ತಮ ಫಾರ್ಮ್ ನೊಂದಿಗೆ ತಂಡಕ್ಕೆ ಮರಳುತ್ತಾರೆ ಎನ್ನುವ ಭರವಸೆ ಇದೆ ಎಂದು ತಿಳಿಸಿದ್ದಾರೆ.

    ಐಪಿಎಲ್ ಟೂರ್ನಿಯ ಆಟಗಾರರ ಹರಾಜಿನಲ್ಲಿ ಟೀಂ ಇಂಡಿಯಾ ವೇಗದ ಬೌಲರ್ ಜಸ್‍ಪ್ರೀತ್ ಬುಮ್ರಾ ಅವರನ್ನು ಖರೀದಿಸುವಂತೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ಸಲಹೆ ನೀಡಿದ್ದ ವಿಚಾರವನ್ನು ಪಾರ್ಥಿವ್ ರಿವೀಲ್ ಮಾಡಿದ್ದಾರೆ. “ಈ ಹುಡುಗನ ಬಗ್ಗೆ ಕೊಹ್ಲಿಗೆ ಹೇಳಿದ್ದೆ. ಆತನನ್ನು ನಮ್ಮ ತಂಡ (ಆರ್‌ಸಿಬಿ)ಗೆ ಖರೀದಿಸಬೇಕು ಎಂದು ಪ್ಲಾನ್ ಮಾಡಲಾಗಿತ್ತು. ಆದರೆ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಬುಮ್ರಾ ಅವರನ್ನು ತನ್ನ ತೆಕ್ಕೆಗೆ ತೆಗದುಕೊಂಡಿತ್ತು” ಹೇಳಿದ್ದಾರೆ.

    ಪಾರ್ಥಿವ್ ಪಟೇಲ್ ಅವರು ತಮ್ಮ 18 ವಯಸ್ಸಿನಲ್ಲಿ (17 ವರ್ಷ, 153 ದಿನ)ಕ್ಕೆ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದರು. 2002ರಲ್ಲಿ ಇಂಗ್ಲೆಂಟ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯದ ಆಡಿದ್ದರು. ಸದ್ಯ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್‌ ಮತ್ತು ಗುಜರಾತ್ ರಣಜಿ ತಂಡದ ನಾಯಕನಾಗಿ ಕ್ರಿಕೆಟ್ ಅಂಗಳದಲ್ಲಿ ವೃತ್ತಿ ಜೀವನ ನಡೆಸಿದ್ದಾರೆ.

  • 9 ಬೆರಳುಗಳೊಂದಿಗೆ ವಿಕೆಟ್ ಕೀಪಿಂಗ್- ಪಾರ್ಥಿವ್ ಪಟೇಲ್ ಇನ್‍ಸ್ಪೈರಿಂಗ್ ಸ್ಟೋರಿ

    9 ಬೆರಳುಗಳೊಂದಿಗೆ ವಿಕೆಟ್ ಕೀಪಿಂಗ್- ಪಾರ್ಥಿವ್ ಪಟೇಲ್ ಇನ್‍ಸ್ಪೈರಿಂಗ್ ಸ್ಟೋರಿ

    ಮುಂಬೈ: ಟೀಂ ಇಂಡಿಯಾ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ತಮ್ಮ ಜೀವನದ ಪ್ರಮುಖ ಘಟನೆಯೊಂದನ್ನು ರಿವೀಲ್ ಮಾಡಿದ್ದಾರೆ. ಆ ಮೂಲಕ ಜೀವನದಲ್ಲಿ ಕಷ್ಟಗಳನ್ನು ಎದುರಿಸಲು ಸಿದ್ಧರಾಗಿಬೇಕೆಂದು ಪ್ರೇರಣೆಯ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ಪಾರ್ಥಿವ್ ತಮ್ಮ ಎರಡು ಕೈಗಳಲ್ಲಿ 9 ಬೆರಳುಗಳು ಮಾತ್ರ ಇದೇ ಎಂದು ರಿವೀಲ್ ಮಾಡಿದ್ದು, ಆರು ವರ್ಷದ ವಯಸ್ಸಿನ ಸಂದರ್ಭದಲ್ಲಿ ಎಡಗೈ ಕಿರುಬೆರಳನ್ನು ಕಳೆದುಕೊಂಡಿದ್ದಾಗಿ ಹೇಳಿದ್ದಾರೆ. ಅಲ್ಲದೇ ಇದುವರೆಗೂ 9 ಬೆರಳುಗಳೊಂದಿಗೆ ತಾವು ಕ್ರಿಕೆಟ್ ಆಡಿದ್ದಾಗಿ ತಿಳಿಸಿದ್ದಾರೆ. ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಆಗಿರುವ ಪಾರ್ಥಿವ್, ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಪಾದಾರ್ಪಣೆ ಮಾಡುವ ಮುನ್ನ ತಂಡದ ರೆಗ್ಯುಲರ್ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಧೋನಿ ಆಗಮನದೊಂದಿಗೆ ಪಾರ್ಥಿವ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು.

    ಬಾಲ್ಯದ ಸಮಯದಲ್ಲಿ ಬಾಗಿಲಿನ ಹಿಂದೆ ಕೈ ಬೆರಳು ಸಿಕ್ಕಿಹಾಕಿಕೊಂಡ ಹಿನ್ನೆಲೆಯಲ್ಲಿ ಕೈಬೆರಳು ಕಳೆದುಕೊಂಡಿದ್ದೆ. 9 ಬೆರಳುಗಳೊಂದಿಗೆ ವಿಕೆಟ್ ಕೀಪಿಂಗ್ ಮಾಡುವುದು ತುಂಬಾ ಕಷ್ಟ. ವಿಕೆಟ್ ಕೀಪಿಂಗ್ ಮಾಡುವ ವೇಳೆ ಕಿರುಬೆರಳಿನ ಭಾಗವನ್ನು ಉಂಗುರದ ಬೆರಳಿಗೆ ಟೇಪ್‍ನಿಂದ ಕಟ್ಟಿಕೊಂಡು ಮೈದಾನಕ್ಕಿಳಿಯುತ್ತಿದೆ. ಇದರಿಂದ ಸಾಕಷ್ಟು ಸಮಸ್ಯೆ ಎದುರಿಸಿದ್ದೇನೆ ಎಂದು ಪಾರ್ಥಿವ್ ಹೇಳಿದ್ದಾರೆ.

    2002ರಲ್ಲಿ 17 ವರ್ಷದ ಪಾರ್ಥಿವ್ ಪಟೇಲ್ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದರು. ಭಾರತ ಪರ 25 ಟೆಸ್ಟ್ ಗಳಲ್ಲಿ 934 ರನ್, 38 ಏಕದಿನ ಪಂದ್ಯಗಳಿಂದ 736 ರನ್, 2 ಟಿ20 ಪಂದ್ಯಗಳಲ್ಲಿ 36 ರನ್ ಗಳಿಸಿದ್ದಾರೆ. ದೇಶೀಯ ಕ್ರಿಕೆಟ್‍ನಲ್ಲಿ 194 ಫಸ್ಟ್ ಕ್ಲಾಸ್ ಕ್ರಿಕೆಟ್, 193 ಲಿಸ್ಟ್ ‘ಎ’ ಪಂದ್ಯಗಳನ್ನು ಆಡಿರುವ ಪಾರ್ಥಿವ್ 16 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

  • ನನ್ನ ತಂದೆಗಾಗಿ ಪ್ರಾರ್ಥನೆ ಮಾಡಿ ಎಂದ ಆರ್‌ಸಿಬಿ ಆಟಗಾರ ಪಾರ್ಥಿವ್ ಪಟೇಲ್

    ನನ್ನ ತಂದೆಗಾಗಿ ಪ್ರಾರ್ಥನೆ ಮಾಡಿ ಎಂದ ಆರ್‌ಸಿಬಿ ಆಟಗಾರ ಪಾರ್ಥಿವ್ ಪಟೇಲ್

    ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಪಾರ್ಥಿವ್ ಪಟೇಲ್ ತಮ್ಮ ತಂದೆಯ ಆರೋಗ್ಯ ಗುಣಮುಖವಾಗಲು ಪ್ರಾರ್ಥನೆ ಮಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

    ಪಾರ್ಥಿವ್ ಅವರ ತಂದೆ ಫೆಬ್ರವರಿ ತಿಂಗಳಿನಿಂದ ಮೆದುಳಿನ ರಕ್ತಸ್ರಾವ ಸಮಸ್ಯೆಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂದೆ ತೀವ್ರ ಅನಾರೋಗ್ಯನಿಂದ ಬಳುತ್ತಿದ್ದರೂ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿರುವ ಪಾರ್ಥಿವ್ ಭಾವನಾತ್ಮಕವಾಗಿ ಸಂದೇಶ ನೀಡಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

    ಈ ಕುರಿತು ಮಾಹಿತಿ ನೀಡಿ ಮಾತನಾಡಿರುವ ಪಾರ್ಥಿವ್, ನನ್ನ ದಿನಚರಿ ಮನೆಗೆ ಫೋನ್ ಮಾಡಿ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುವ ಮೂಲಕ ಆರಂಭವಾಗುತ್ತಿದೆ. ಪಂದ್ಯದ ವೇಳೆ ನನಗೆ ಕುಟುಂಬದೊಂದಿಗೆ ಯಾವುದೇ ಸಂಪರ್ಕ ಇರುವುದಿಲ್ಲ. ನನ್ನ ಯೋಚನೆ ಕೂಡ ಪಂದ್ಯದ ಬಗ್ಗೆಯೇ ಕೇಂದ್ರಿಕರಿಸುತ್ತೇನೆ. ಆದರೆ ಪಂದ್ಯ ಮುಗಿಯುತ್ತಿದಂತೆ ನನ್ನ ಹೃದಯ ಸಂಪೂರ್ಣ ಮನೆಯ ಕಡೆ ಇರುತ್ತದೆ ಎಂದಿದ್ದಾರೆ.

    ತಂದೆಯ ಅನಾರೋಗ್ಯ ಕಾರಣ ನಿರಂತರವಾಗಿ ವೈದ್ಯರಿಂದ ಮಾಹಿತಿ ಪಡೆಯುವುದರೊಂದಿಗೆ ಕೆಲ ಮುಖ್ಯ ನಿರ್ಣಯಗಳನ್ನು ನಾನು ಕೈಗೊಳ್ಳಬೇಕಾಗುತ್ತದೆ. ಪತ್ನಿ ಹಾಗೂ ಅಮ್ಮ, ತಂದೆಯ ಜೊತೆಗಿದ್ದರೂ ನನ್ನ ಅಭಿಪ್ರಾಯವನ್ನೇ ಅಂತಿಮವಾಗಿ ತೆಗೆದುಕೊಳ್ಳುತ್ತಾರೆ. ತಂದೆಗೆ ನೀಡಲಾಗುತ್ತಿರುವ ಕೃತಕ ಉಸಿರಾಟವನ್ನ ಕೆಲ ದಿನಗಳ ಮಟ್ಟಿಗೆ ತೆಗೆಯುವಂತಹ ನಿರ್ಧಾರಗಳನ್ನು ವೈದ್ಯರ ಸಲಹೆ ಮೇರೆಗೆ ನಾನು ತೆಗೆದುಕೊಳ್ಳಬೇಕಾಗುತ್ತದೆ. ಅದ್ದರಿಂದ ಇದು ನನಗೆ ಬಹುಮುಖ್ಯ ಸಮಯ ಎಂದು ತಿಳಿಸಿದ್ದಾರೆ.

    ಇದ್ದಕ್ಕಿದ್ದಂತೆ ಮನೆಯಲ್ಲಿ ಪಾರ್ಥಿವ್ ಅವರ ತಂದೆ ಮನೆಯಲ್ಲಿ ಕುಸಿದ ಬಿದ್ದ ಬಳಿಕ ಅವರನ್ನು ಆಸ್ಪತ್ರೆ ದಾಖಲು ಮಾಡಲಾಗಿತ್ತು. ಪರಿಣಾಮ ಪಾರ್ಥಿವ್ ಮುಷ್ತಾಕ್ ಅಲಿ ಟ್ರೋಫಿಯಿಂದ ಹೊರ ನಡೆದಿದ್ದರು. ಆದರೆ ಐಪಿಎಲ್ ಟೂರ್ನಿಯಲ್ಲಿ ಆಡುವಂತೆ ಕುಟುಂಬ ಸದಸ್ಯರು ಪಾರ್ಥಿವ್‍ರ ಮನವೊಲಿಸಿದ್ದರು. 34 ವರ್ಷ ವಯಸ್ಸಿನ ಪಾರ್ಥಿವ್ ಪಾಟೇಲ್ ಕಳೆದ 6 ಪಂದ್ಯದಲ್ಲಿ 172 ರನ್ ಸಿಡಿಸಿದ್ದಾರೆ. ಇದರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಸಿಡಿಸಿದ ಅರ್ಧ ಶತಕವೂ ಸೇರಿದೆ. ಆರ್ ಸಿಬಿ ತಂಡ ಪ್ರತಿ ಪಂದ್ಯದ ಬಳಿಕ ತಂದೆಯನ್ನ ಭೇಟಿ ಮಾಡಲು ಅವಕಾಶವನ್ನು ನೀಡುತ್ತಿದೆ.

    ನನ್ನ ಕುಟುಂಬ ಈ ವಿಚಾರದಲ್ಲಿ ನನಗೆ ಹೆಚ್ಚಿನ ಬೆಂಬಲವನ್ನು ನೀಡುತ್ತಿದ್ದು ನನಗೆ ಪಂದ್ಯದ ವೇಳೆ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ. ಪಂದ್ಯ ಮುಗಿದ ಬಳಿಕಷ್ಟೇ ಈ ಬಗ್ಗೆ ಮಾತನಾಡುತ್ತಾರೆ. ಸದ್ಯ ನಾನು ಕಠಿಣ ಸಂದರ್ಭಗಳನ್ನು ಎದುರಿಸಲು ಸಿದ್ಧನಾಗುತ್ತಿದ್ದೇನೆ ಎಂದು ಪಾರ್ಥಿವ್ ಹೇಳಿದ್ದಾರೆ. ಅಂದಹಾಗೇ  ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಶನಿವಾರ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಲಿದೆ.