Tag: Partha Chatterjee

  • ಚಟರ್ಜಿ ನನ್ನ ಮನೆಯನ್ನು ಮಿನಿ ಬ್ಯಾಂಕ್ ಆಗಿ ಬಳಸಿಕೊಂಡಿದ್ದರು: ಆಪ್ತೆ ಅರ್ಪಿತಾ

    ಚಟರ್ಜಿ ನನ್ನ ಮನೆಯನ್ನು ಮಿನಿ ಬ್ಯಾಂಕ್ ಆಗಿ ಬಳಸಿಕೊಂಡಿದ್ದರು: ಆಪ್ತೆ ಅರ್ಪಿತಾ

    ಕೋಲ್ಕತ್ತಾ: ಶಿಕ್ಷಕರ ನೇಮಕಾತಿ ಹಗರಣ ಆರೋಪದ ಮೇಲೆ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಹಾಗೂ ಅವರ ಆಪ್ತೆ ಅರ್ಪಿತಾ ಮೂಖರ್ಜಿ ಬಂಧಿತರಾಗಿದ್ದಾರೆ. ವಿಚಾರಣೆ ವೇಳೆ ಅರ್ಪಿತಾ ತಮ್ಮ ಮನೆಯನ್ನು ಚಟರ್ಜಿಯವರು ಮಿನಿ ಬ್ಯಾಂಕ್‌ನಂತೆ ಬಳಸಿಕೊಂಡಿದ್ದರು ಎಂದು ಹೇಳಿಕೆ ನೀಡಿದ್ದಾರೆ.

    ಕಳೆದ ಶುಕ್ರವಾರ ಜಾರಿ ನಿರ್ದೇಶನಾಲಯ ಶಿಕ್ಷಕರ ನೇಮಕಾತಿ ಹಗರಣದ ಆರೋಪದ ಮೇಲೆ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರ ಮನೆಯಲ್ಲಿ ದಾಳಿ ನಡೆಸಿತ್ತು. ಈ ವೇಳೆ ಬರೋಬ್ಬರಿ 21 ಕೋಟಿ ರೂ. ಹಣದ ರಾಶಿ ಪತ್ತೆಯಾಗಿತ್ತು. ಇದಾದ ಮರುದಿನವೇ ಪಾರ್ಥ ಚಟರ್ಜಿ ಅವರನ್ನು ಇಡಿ ಬಂಧಿಸಿತ್ತು. ಇದನ್ನೂ ಓದಿ: ಶಿವ ಭಕ್ತರ ಮೇಲೆ ಹೂಮಳೆ ಸುರಿಸುತ್ತೀರಿ, ಮುಸ್ಲಿಮರ ಮನೆಗಳಿಗೆ ಬುಲ್ಡೋಜರ್‌ ಬಿಡ್ತೀರಿ: ಯುಪಿ ಸರ್ಕಾರದ ವಿರುದ್ಧ ಓವೈಸಿ ಕಿಡಿ

    ಮೂಲಗಳ ಪ್ರಕಾರ ಅರ್ಪಿತಾ ಮುಖರ್ಜಿ ತಮ್ಮ ಮನೆಯಲ್ಲಿ ಪತ್ತೆಯಾದ ಅಷ್ಟೂ ಹಣ ಪಾರ್ಥ ಚಟರ್ಜಿಗೆ ಸೇರಿದ್ದು ಎಂದು ತಿಳಿಸಿದ್ದಾರೆ. ಅವರು ಎಲ್ಲಾ ಹಣವನ್ನು ನನ್ನ ಮನೆಯ ಒಂದೇ ಕೋಣೆಯಲ್ಲಿಡುತ್ತಿದ್ದರು. ಪ್ರತೀ ವಾರ ಅಥವಾ 10 ದಿನಗಳಿಗೊಮ್ಮೆ ಅವರು ನನ್ನ ಮನೆಗೆ ಭೇಟಿ ನೀಡುತ್ತಿದ್ದರು. ಆದರೆ ತನ್ನ ಮನೆಯಲ್ಲಿ ಅವರು ಎಷ್ಟು ಹಣವನ್ನು ಇಟ್ಟಿದ್ದಾರೆ ಎಂಬ ಮಾಹಿತಿಯನ್ನು ತಿಳಿಸಿರಲಿಲ್ಲ ಎಂದಿದ್ದಾರೆ.

    ಚಟರ್ಜಿಯವರು ನನ್ನ ಮನೆ ಹಾಗೂ ಇನ್ನೊಬ್ಬ ಮಹಿಳೆಯ ಮನೆಯನ್ನೂ ಮಿನಿ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ. ಆ ಮಹಿಳೆ ಕೂಡಾ ಚಟರ್ಜಿಯವರ ಆಪ್ತ ಸ್ನೇಹಿತೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. ಇದನ್ನೂ ಓದಿ: ಕೊಲೆಗೆ ಕೊಲೆ ಪ್ರತಿಕಾರವಲ್ಲ – ಸರ್ಕಾರ ಹೆಣದ ರಾಜಕೀಯ ಬಿಟ್ಟು ಕಾನೂನು ಸುವ್ಯವಸ್ಥೆ ಬಿಗಿಗೊಳಿಸಲಿ: ಕಾಂಗ್ರೆಸ್

    Live Tv
    [brid partner=56869869 player=32851 video=960834 autoplay=true]

  • ಶಿಕ್ಷಕರ ನೇಮಕಾತಿ ಹಗರಣ – ಚಟರ್ಜಿ ಆಪ್ತೆಯ ಮನೆಯಲ್ಲಿ ಸ್ಫೋಟಕ ಮಾಹಿತಿಯಿರುವ ಡೈರಿ ಪತ್ತೆ

    ಶಿಕ್ಷಕರ ನೇಮಕಾತಿ ಹಗರಣ – ಚಟರ್ಜಿ ಆಪ್ತೆಯ ಮನೆಯಲ್ಲಿ ಸ್ಫೋಟಕ ಮಾಹಿತಿಯಿರುವ ಡೈರಿ ಪತ್ತೆ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರ ನಿವಾಸದಲ್ಲಿ ಜಾರಿ ನಿರ್ದೇಶನಾಲಯ(ಇಡಿ) ದಾಳಿಯ ವೇಳೆ ಕಪ್ಪು ಡೈರಿಯೊಂದನ್ನು ಪತ್ತೆ ಮಾಡಿದೆ.

    ಇಡಿ ಮೂಲಗಳ ಪ್ರಕಾರ ಡೈರಿಯು ಪಶ್ಚಿಮ ಬಂಗಾಳ ಸರ್ಕಾರದ ಉನ್ನತ ಶಿಕ್ಷಣ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ಸೇರಿದ್ದಾಗಿದೆ. ಡೈರಿಯ 40 ಪುಟಗಳಲ್ಲಿ ಬರೆಯಲಾಗಿದ್ದು, ಅದರಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಹಲವು ರಹಸ್ಯಗಳು ಸೇರಿವೆ ಎಂದಿದೆ. ಇದನ್ನೂ ಓದಿ: ನಾನು ಮುಖ್ಯಮಂತ್ರಿ ಆಗಿದ್ದರೆ ಉಮೇಶ್ ಕತ್ತಿಯನ್ನ ನಿಮ್ಹಾನ್ಸ್ ಸೇರಿಸ್ತಿದ್ದೆ: ವಾಟಾಳ್ ನಾಗರಾಜ್

    ಟಿಎಂಸಿ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರ ಮನೆಗೆ ಶುಕ್ರವಾರ ರಾತ್ರಿ ಇಡಿ ದಾಳಿ ನಡೆಸಿ, ಬರೋಬ್ಬರಿ 20 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿತ್ತು. ಮರುದಿನ ಶಿಕ್ಷಕರ ನೇಮಕಾತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಚಟರ್ಜಿ ಅವರನ್ನು ಇಡಿ ಬಂಧಿಸಿತ್ತು. ಇದನ್ನೂ ಓದಿ: ಲವ್ಲಿನಾ ಕೋಚ್‌ಗೆ ಕಾಮನ್ ವೆಲ್ತ್ ಗೇಮ್ಸ್ ಪ್ರವೇಶಿಸಲು ಮಾನ್ಯತೆ

    Live Tv
    [brid partner=56869869 player=32851 video=960834 autoplay=true]

  • ನಾಯಿಗಳಿಗೂ ಏರ್ ಕಂಡೀಷನ್ ಫ್ಲ್ಯಾಟ್ ಒದಗಿಸಿದ್ದ ಪಾರ್ಥ

    ನಾಯಿಗಳಿಗೂ ಏರ್ ಕಂಡೀಷನ್ ಫ್ಲ್ಯಾಟ್ ಒದಗಿಸಿದ್ದ ಪಾರ್ಥ

    ಕೋಲ್ಕತ್ತಾ: ಶಾಲಾ ಸೇವಾ ಆಯೋಗದ(ಎಸ್‍ಎಸ್‍ಸಿ) ಹಗರಣಕ್ಕೆ ಸಂಬಂಧಿಸಿದಂತೆ ಶನಿವಾರ ಬೆಳಗ್ಗೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಪಶ್ಚಿಮ ಬಂಗಾಳದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸಚಿವ ಪಾರ್ಥ ಚಟರ್ಜಿ ಅವರು ತಮ್ಮ ನಾಯಿಗಳಿಗೂ ಫ್ಲಾಟ್ ಹೊಂದಿದ್ದಾರೆಂದು ವರದಿಯಾಗಿದೆ.

    ಪಾರ್ಥ ಅವರು ಸಾಕಿದ ನಾಯಿಗೂ ಹವಾ ನಿಯಂತ್ರಿತ ಫ್ಲ್ಯಾಟ್ ಒದಗಿಸಿದ್ದರು. ದಕ್ಷಿಣ ಕೋಲ್ಕತ್ತಾದ ನಕ್ತಾಲಾ ಬಳಿ ಪಾರ್ಥ ಅವರು ಐಷಾರಾಮಿ ಫ್ಲ್ಯಾಟ್ ಹೊಂದಿದ್ದು, ಇದನ್ನು ಕೇವಲ ನಾಯಿಗಳಿಗಾಗಿಯೇ ಮೀಸಲಿಟ್ಟಿದ್ದರು. ಅವರು 3 ಸಾಕುನಾಯಿಗಳನ್ನು ಸಾಕುತ್ತಿದ್ದು, ಅವುಗಳನ್ನು ‘ಸಿದ್ಧಿ ಎನ್‍ಕ್ಲೇವ್’ನ 2ನೇ ಮಹಡಿಯಲ್ಲಿ ಇರಿಸಲಾಗಿದೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ 3 ಬಾರಿ ಕರೆ ಮಾಡಿದ ಬಂಧಿತ ಸಚಿವ ಪಾರ್ಥ ಚಟರ್ಜಿ

    ನಾಯಿಗಳನ್ನು ತಂಪಾಗಿಡಲು ಏರ್ ಕಂಡಿಷನರ್ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ ಎಂದು ವರದಿಯಾಗಿದೆ. ಇದಲ್ಲದೆ, ಪಾರ್ಥ ಅವರು ತಮ್ಮ ಸಾಕುಪ್ರಾಣಿಗಳನ್ನು ನೋಡಿಕೊಳ್ಳಲು ಮಹಿಳೆ ಸೇರಿದಂತೆ 2 ಕೇರ್‌ಟೇಕರ್‌ಗಳನ್ನು ಸಹ ನೇಮಿಸಿಕೊಂಡಿದ್ದಾರೆ. ಫ್ಲ್ಯಾಟ್ ನಲ್ಲಿ ಮೊದಲು ನಾಲ್ಕು ನಾಯಿಗಳಿದ್ದವು. ಆದರೆ ಸ್ವಲ್ಪ ವರ್ಷಗಳ ಹಿಂದೆ ಒಂದು ನಾಯಿ ಮೃತ ಪಟ್ಟಿದ್ದು, ಈಗ ಮೂರು ನಾಯಿಗಳಿವೆ.

    ಪಾರ್ಥ ಅವರ ಮನೆ ಮೇಲೆ ನಡೆಸಿದ ದಾಳಿ ವೇಳೆ ಶಿಕ್ಷಕ ನೇಮಕಾತಿ ಪರೀಕ್ಷೆಯ ಪ್ರವೇಶ ನೇಮಕಾತಿ ಪತ್ರ ಮತ್ತು ಆಸ್ತಿ ಪತ್ರಗಳು ಪತ್ತೆಯಾಗಿವೆ. ಗ್ರೂಪ್ ಸಿ ಮತ್ತು 2 ನೇಮಕಾತಿಗೆ ಸಂಬಂಧಿಸಿದ ದಾಖಲಾತಿಗಳು, ಅಭ್ಯರ್ಥಿಗಳ ಪತ್ರ ಸೇರಿ ಹಲವು ದಾಖಲೆಗಳನ್ನು ವಾರ್ಥ ಅವರ ಮನೆಯಲ್ಲೇ ಮಾಡಿಸಿಕೊಳ್ಳಲಾಗಿದೆ ಎಂಬುದು ಪತ್ತೆಯಾಗಿದೆ. ಈ ಹಿನ್ನೆಲೆ ಅವರನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಮನೆಯಲ್ಲಿ ಪತ್ತೆಯಾದ ಹಣ ಪಾರ್ಥ ಚಟರ್ಜಿಯವರದ್ದೇ – ತಪ್ಪೊಪ್ಪಿಕೊಂಡ ಆಪ್ತೆ ಅರ್ಪಿತಾ

    Live Tv
    [brid partner=56869869 player=32851 video=960834 autoplay=true]

  • ಮನೆಯಲ್ಲಿ ಪತ್ತೆಯಾದ ಹಣ ಪಾರ್ಥ ಚಟರ್ಜಿಯವರದ್ದೇ – ತಪ್ಪೊಪ್ಪಿಕೊಂಡ ಆಪ್ತೆ ಅರ್ಪಿತಾ

    ಮನೆಯಲ್ಲಿ ಪತ್ತೆಯಾದ ಹಣ ಪಾರ್ಥ ಚಟರ್ಜಿಯವರದ್ದೇ – ತಪ್ಪೊಪ್ಪಿಕೊಂಡ ಆಪ್ತೆ ಅರ್ಪಿತಾ

    ಕೋಲ್ಕತ್ತಾ: ತನ್ನ ಮನೆಯಲ್ಲಿ ಪತ್ತೆಯಾದ ಭಾರೀ ಮೊತ್ತದ ನಗದು ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿಗೆ ಸೇರಿದ್ದು ಎಂದು ಸಚಿವರ ಆಪ್ತೆಯೇ ಆಗಿರುವ ಅರ್ಪಿತಾ ಮುಖರ್ಜಿ ಜಾರಿ ನಿರ್ದೇಶನಾಲಯಕ್ಕೆ(ಇಡಿ) ತಿಳಿಸಿದ್ದಾರೆ.

    ಇತ್ತೀಚೆಗೆ ಇಡಿ ಶಿಕ್ಷಕರ ಅಕ್ರಮ ನೇಮಕಾತಿಯ ಆರೋಪದ ಅಡಿಯಲ್ಲಿ ಸಚಿವ ಪಾರ್ಥ ಚಟರ್ಜಿ ಹಾಗೂ ಅವರೊಂದಿಗೆ ಸಂಪರ್ಕದಲ್ಲಿರುವವರ ಮನೆಯಲ್ಲಿ ತನಿಖೆ ನಡೆಸಿತ್ತು. ಚಟರ್ಜಿಯವರ ಆಪ್ತೆ ಅರ್ಪಿತಾ ಮನೆಯಲ್ಲೂ ಇಡಿ ತನಿಖೆ ನಡೆಸಿ, ಸುಮಾರು 21 ಕೋಟಿ ರೂ. ಮೊತ್ತದ ಹಣವನ್ನು ಬಯಲಿಗೆ ತಂದಿತ್ತು. ಇದೀಗ ಅರ್ಪಿತಾ ಮುಖರ್ಜಿ ಈ ಹಣ ಚಟರ್ಜಿ ಅವರಿಗೆ ಸೇರಿದ್ದಾಗಿ ತಿಳಿಸಿದ್ದು, ಈ ಹಣವನ್ನು ತನಗೆ ಸಂಬಂಧಿಸಿದ ಕಂಪನಿಯಲ್ಲಿ ತುಂಬಿಸಬೇಕಾಗಿತ್ತು ಎಂಬ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. ಇದನ್ನೂ ಓದಿ: ಮೋದಿ-ಯೋಗಿಗೆ ಕುಟುಂಬವಿಲ್ಲ, ಆದರೆ ನಮಗಿದೆ: ಉಮೇಶ್ ಕತ್ತಿ

    ಅರ್ಪಿತಾ ವಿಚಾರಣೆಯ ಸಂದರ್ಭ ಇಡಿ ರೇಡ್‌ಗೂ ಮುನ್ನ 1-2 ದಿನಗಳಲ್ಲಿ ತನ್ನ ಮನೆಯಲ್ಲಿದ್ದ ಹಣದ ರಾಶಿಯನ್ನು ಸ್ಥಳಾಂತರಿಸುವ ಯೋಜನೆ ಮಾಡಿದ್ದಾಗಿ ಬಹಿರಂಗಪಡಿಸಿದ್ದಾರೆ. ಆದರೆ ಈ ಯೋಜನೆಯನ್ನು ಇಡಿ ವಿಫಲಗೊಳಿಸಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 939 ಮಂದಿ ಕೊರೊನಾ ಸೋಂಕು – ಓರ್ವ ಸಾವು

    Live Tv
    [brid partner=56869869 player=32851 video=960834 autoplay=true]

  • ಮಮತಾ ಬ್ಯಾನರ್ಜಿಗೆ 3 ಬಾರಿ ಕರೆ ಮಾಡಿದ ಬಂಧಿತ ಸಚಿವ ಪಾರ್ಥ ಚಟರ್ಜಿ

    ಮಮತಾ ಬ್ಯಾನರ್ಜಿಗೆ 3 ಬಾರಿ ಕರೆ ಮಾಡಿದ ಬಂಧಿತ ಸಚಿವ ಪಾರ್ಥ ಚಟರ್ಜಿ

    ನವದೆಹಲಿ: ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಬಂಧನದ ನಂತರ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಮೂರು ಬಾರಿ ಕರೆಗಳನ್ನು ಮಾಡಿದ್ದರು. ಆದರೆ ಮೂರೂ ಬಾರಿಯೂ ಅವರು ಉತ್ತರಿಸಲಿಲ್ಲ ಎಂದು ಅಧಿಕೃತ ದಾಖಲೆ ಬಹಿರಂಗಪಡಿಸಿದೆ.

    ಪಾರ್ಥ ಚಟರ್ಜಿ ಅವರನ್ನು ಮಧ್ಯರಾತ್ರಿ 1:55 ರ ಸುಮಾರಿಗೆ ಬಂಧಿಸಿದ ನಂತರ ಬ್ಯಾನರ್ಜಿ ಅವರಿಗೆ ಮೊದಲ ಕರೆಯನ್ನು 2:33ಕ್ಕೆ ಮಾಡಲಾಯಿತು. ಆದರೆ ಬ್ಯಾನರ್ಜಿ ಅವರು ಕರೆಯನ್ನು ಸ್ವೀಕರಿಸಲಿಲ್ಲ. ಮತ್ತೆ ಚಟರ್ಜಿ ಅವರು ಬೆಳಗ್ಗೆ 3:37 ಮತ್ತು 9:.35ಕ್ಕೆ ಮತ್ತೆ ಕರೆ ಮಾಡಿದ್ದಾರೆ. ಆಗಲೂ ಅವರು ಕರೆಯನ್ನು ಸ್ವೀಕರಿಸಲಿಲ್ಲ ಎಂದು ಮೆಮೊ ದಾಖಲಿಸಿದೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ಸಿಎಂ ಜೊತೆ ಚರ್ಚಿಸುವೆ ಎಂದ ಸುಧಾಕರ್ 

    ಯಾವುದೇ ಆರೋಪಿ ತಮ್ಮ ಬಂಧನದ ಬಗ್ಗೆ ತಿಳಿಸಲು ಸಂಬಂಧಿಕರು ಅಥವಾ ಸ್ನೇಹಿತರಿಗೆ ಕರೆ ಮಾಡಲು ಅವಕಾಶವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ತೃಣಮೂಲ ಕಾಂಗ್ರೆಸ್ ಪಕ್ಷದ ಫಿರ್ಹಾದ್ ಹಕೀಮ್ ಅವರು ಈ ಕುರಿತು ಮಾತನಾಡಿದ್ದು, ಚಟರ್ಜಿ ಅವರು ಕರೆ ಮಾಡಿಲ್ಲ. ಬಂಧಿತ ಸಚಿವರ ಫೋನ್ ಜಾರಿ ನಿರ್ದೇಶನಾಲಯದಲ್ಲಿ ಇರುವುದರಿಂದ ಅವರು ಮಮತಾ ಬ್ಯಾನರ್ಜಿ ಅವರಿಗೆ ಕರೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹಿಳಾ ಸಬಲೀಕರಣ ನನ್ನ ಮೊದಲ ಆದ್ಯತೆ – ಅಧಿಕಾರ ಸ್ವೀಕರಿಸಿದ ದ್ರೌಪದಿ ಮುರ್ಮು

    ಬಂಗಾಳದ ಶಿಕ್ಷಣ ಸಚಿವರಾಗಿದ್ದ ಚಟರ್ಜಿ ಅವರನ್ನು ಶನಿವಾರ ಶಾಲಾ ಉದ್ಯೋಗ ಹಗರಣಕ್ಕೆ ಸಂಬಂಧಿಸಿದ ಹಣ-ಲಾಂಡರಿಂಗ್ ಆರೋಪದ ಮೇಲೆ ಬಂಧಿಸಲಾಯಿತು. ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಪಶ್ಚಿಮ ಬಂಗಾಳದ ಪ್ರೌಢ ಶಿಕ್ಷಣ ಮಂಡಳಿಯಿಂದ ಶಾಲಾ ಶಿಕ್ಷಕರು ಮತ್ತು ಬೋಧಕ ಸಿಬ್ಬಂದಿಗಳ ನೇಮಕಾತಿಯಲ್ಲಿ ಚಟರ್ಜಿ ಅವರು ಹಗರಣ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    [brid partner=56869869 player=32851 video=960834 autoplay=true]

  • ಶಿಕ್ಷಕರ ನೇಮಕಾತಿ ಹಗರಣ – ಟಿಎಂಸಿ ಸಚಿವ ಪಾರ್ಥ ಚಟರ್ಜಿ ಅರೆಸ್ಟ್

    ಶಿಕ್ಷಕರ ನೇಮಕಾತಿ ಹಗರಣ – ಟಿಎಂಸಿ ಸಚಿವ ಪಾರ್ಥ ಚಟರ್ಜಿ ಅರೆಸ್ಟ್

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಪಾರ್ಥ ಚಟರ್ಜಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ.

    ಗ್ರೂಪ್ ಸಿ ಮತ್ತು ಡಿ ಸಿಬ್ಬಂದಿ, 9 ರಿಂದ 12ನೇ ತರಗತಿಗಳ ಸಹಾಯಕ ಶಿಕ್ಷಕರು ಹಾಗೂ ಪ್ರಾಥಮಿಕ ಶಿಕ್ಷಕರ ನೇಮಕಾತಿ ಹಗರಣದ ಬಗ್ಗೆ ತನಿಖೆ ನಡೆಸುವಂತೆ ಕಲ್ಕತ್ತಾ ಹೈಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿತ್ತು. ಈ ನಿರ್ದೇಶನದ ಮೇರೆಗೆ ನಿನ್ನೆ ಚಟರ್ಜಿ ಮನೆ ಮೇಲೆ ದಾಳಿ ನಡೆಸಿದ್ದ ಇ.ಡಿ ಇಂದು ಬಂಧನಕ್ಕೊಳಪಡಿಸಿದೆ. ಇದನ್ನೂ ಓದಿ: ಶಿವಸೇನೆಯಲ್ಲಿ ಸಿಂಬಲ್ ಫೈಟ್- ಉದ್ಧವ್, ಶಿಂಧೆ ಬಣಕ್ಕೆ ಚುನಾವಣೆ ಆಯೋಗ ನೋಟಿಸ್

    ಪ್ರಸ್ತುತ ಕೈಗಾರಿಕಾ ಮತ್ತು ವಾಣಿಜ್ಯ ಸಚಿವರಾಗಿರುವ ಪಾರ್ಥ ಚಟರ್ಜಿ ಅವರು ಈ ಹಿಂದೆ ಶಿಕ್ಷಣ ಸಚಿವರಾಗಿದ್ದಾಗ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಿಂದ (WBSSC) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ರಮ ನೇಮಕಾತಿಗಳನ್ನು ಮಾಡಿರುವುದಾಗಿ ಆರೋಪಿಸಲಾಗಿದೆ.

    ನಿನ್ನೆಯಷ್ಟೇ ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆಯೊಬ್ಬರ ಮನೆ ಮೇಲೆ ದಾಳಿ ನಡೆಸಿ, 20 ಕೋಟಿ ರೂ. ಹಣವನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿತ್ತು. ಇದನ್ನೂ ಓದಿ: ಬಹುಮಾನದ ಮೊತ್ತ 85 ಸಾವಿರಕ್ಕೆ ಏರಿಸಿದ ಕೆಲವೇ ಹೊತ್ತಲ್ಲಿ ಸಿಕ್ತು ಕಳೆದು ಹೋಗಿದ್ದ ಗಿಳಿ!

    ಅರ್ಪಿತಾ ಮುಖರ್ಜಿ ಮನೆಯಿಂದ ವಶಪಡಿಸಿಕೊಳ್ಳಲಾದ 20 ಕೋಟಿ ಹಣ ಶಿಕ್ಷಕರ ನೇಮಕಾತಿ ಹಗರಣದಿಂದ ಬಂದಿರುವ ಆದಾಯ ಎಂದು ಶಂಕಿಸಲಾಗಿತ್ತು. ED ರೇಡ್ ವೇಳೆ ಅರ್ಪಿತಾ ಮನೆ ಆವರಣದಿಂದ 20ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನೂ ವಶಪಡಿಸಿಕೊಂಡು, ಮೊಬೈಲ್ ಫೋನ್‌ಗಳನ್ನು ಹೊಂದಿರುವ ಬಗೆಗಿನ ಉದ್ದೇಶವನ್ನೂ ಖಚಿತಪಡಿಸಿಕೊಳ್ಳಲು ತನಿಖೆ ನಡೆಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ತೃಣಮೂಲ ಶಾಸಕ ಪಾರ್ಥ ಚಟರ್ಜಿ ಆಪ್ತೆ ಮನೆ ಮೇಲೆ ಇಡಿ ರೇಡ್ – 20 ಕೋಟಿ ವಶ

    ತೃಣಮೂಲ ಶಾಸಕ ಪಾರ್ಥ ಚಟರ್ಜಿ ಆಪ್ತೆ ಮನೆ ಮೇಲೆ ಇಡಿ ರೇಡ್ – 20 ಕೋಟಿ ವಶ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆಯೊಬ್ಬರ ಮನೆಯಿಂದ 20 ಕೋಟಿ ರೂ. ಹಣವನ್ನು ಜಾರಿ ನಿರ್ದೇಶನಾಲಯ ಶುಕ್ರವಾರ ವಶಪಡಿಸಿಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅರ್ಪಿತಾ ಮುಖರ್ಜಿ ಅವರ ಮನೆ ಮೇಲೆ ಇಡಿ ದಾಳಿ ನಡೆಸಿದೆ.

    ಅರ್ಪಿತಾ ಮುಖರ್ಜಿ ಮನೆಯಿಂದ ವಶಪಡಿಸಿಕೊಳ್ಳಲಾದ 20 ಕೋಟಿ ಹಣ ಶಿಕ್ಷಕರ ನೇಮಕಾತಿ ಹಗರಣದಿಂದ ಬಂದಿರುವ ಆದಾಯ ಎಂದು ಶಂಕಿಸಲಾಗಿದೆ. ಭಾರೀ ಮೊತ್ತದ ಹಣವನ್ನು ಎಣಿಕೆ ಯಂತ್ರಗಳಿಂದ ಹಾಗೂ ಬ್ಯಾಂಕ್ ಅಧಿಕಾರಿಗಳ ನೆರವಿನಿಂದ ಎಣಿಸಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: 75 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿರುವ ಮನೆಗೆ ಹೋಗಿ 90ರ ಅಜ್ಜಿ ಭಾವುಕ

    ಇಡಿ ರೇಡ್ ವೇಳೆ ಅರ್ಪಿತಾ ಮನೆ ಆವರಣದಿಂದ 20ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಇಷ್ಟೊಂದು ಸಂಖ್ಯೆಯ ಮೊಬೈಲ್ ಫೋನ್‌ಗಳನ್ನು ಹೊಂದಿರುವ ಬಗೆಗಿನ ಉದ್ದೇಶವನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ.

    ಚಟರ್ಜಿ ಅವರೊಂದಿಗೆ, ರಾಜ್ಯ ಶಿಕ್ಷಣ ಸಚಿವ ಪರೇಶ್ ಸಿ ಅಧಿಕಾರಿ, ಶಾಸಕ ಮಾಣಿಕ್ ಭಟ್ಟಾಚಾರ್ಯ ಹಾಗೂ ಇನ್ನಿತರರ ಮೇಲೂ ಇಡಿ ದಾಳಿ ನಡೆಸಿದೆ. ಇದನ್ನೂ ಓದಿ: 2-3 ತಲೆಮಾರಿಗಾಗುವಷ್ಟು ಮಾಡಿಕೊಂಡಿದ್ದೇವೆ – ವಿವಾದಿತ ಹೇಳಿಕೆಗೆ ರಮೇಶ್ ಕುಮಾರ್ ಸ್ಪಷ್ಟನೆ

    ಪ್ರಸ್ತುತ ಕೈಗಾರಿಕಾ ಮತ್ತು ವಾಣಿಜ್ಯ ಸಚಿವರಾಗಿರುವ ಪಾರ್ಥ ಚಟರ್ಜಿ ಅವರು ಈ ಹಿಂದೆ ಶಿಕ್ಷಣ ಸಚಿವರಾಗಿದ್ದಾಗ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಿಂದ (ಡಬ್ಲ್ಯುಬಿಎಸ್‌ಎಸ್‌ಸಿ) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ರಮ ನೇಮಕಾತಿಗಳನ್ನು ಮಾಡಿರುವುದಾಗಿ ಆರೋಪಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]