Tag: Part-time job

  • ಗುತ್ತಿಗೆದಾರನಿಗೆ 18 ಲಕ್ಷ ವಂಚನೆ

    ಗುತ್ತಿಗೆದಾರನಿಗೆ 18 ಲಕ್ಷ ವಂಚನೆ

    ಕೊಪ್ಪಳ: ಪಾರ್ಟ್ ಟೈಂ ಜಾಬ್ ಹೆಸರಲ್ಲಿ 18 ಲಕ್ಷ ರೂ.ಯನ್ನು ಗುತ್ತಿಗೆದಾರನೊಬ್ಬ ಕಳೆದುಕೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

    ವಂಚನೆಗೊಳಗಾದ ವ್ಯಕ್ತಿಯನ್ನು ಕೊಪ್ಪಳದ (Koppal) ಭಾಗ್ಯನಗರದ ಅನಿಕೇತ ದೇವಪುರಕರ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಅಲ್ಲು ಅರ್ಜುನ್‌ಗೆ ಮತ್ತೆ ಸಂಕಷ್ಟ – ಜಾಮೀನು ಪ್ರಶ್ನಿಸಿ ತೆಲಂಗಾಣ ಪೊಲೀಸರು ಸುಪ್ರೀಂ ಮೆಟ್ಟಿಲೇರುವ ಸಾಧ್ಯತೆ

    ಸೈಬರ್ ವಂಚಕರು ಪಾರ್ಟ್ ಟೈಂ ಜಾಬ್ ಹೆಸರಲ್ಲಿ ಬಲೆ ಬೀಸಿದ್ದು, ಟೆಲಿಗ್ರಾಂ ಆಪ್ ಮೂಲಕ ಪರಿಚಯಿಸಿಕೊಂಡಿದ್ದಾರೆ. ಬಳಿಕ ಟಾಸ್ಕ್ಗಳನ್ನು ಪೂರ್ಣಗೊಳಿಸಿದರೆ ಪಾರ್ಟ್ ಟೈಂ ಜಾಬ್ ಕೊಡಿಸುವುದಾಗಿ ನಂಬಿಸಿದ್ದಾರೆ. ಇದನ್ನು ನಂಬಿದ ಅನಿಕೇತ, ತನ್ನ ಯೂನಿಯನ್ ಬ್ಯಾಂಕ್ ಖಾತೆಯಿಂದ 2.25 ಲಕ್ಷ ರೂ., ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ 12 ಸಾವಿರ ರೂ., ಐಡಿಎಫ್‌ಸಿ ಬ್ಯಾಂಕ್ ಖಾತೆಯಿಂದ 50 ಸಾವಿರ ರೂ., ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯಿಂದ 9.53 ಲಕ್ಷ ರೂ. ಒಟ್ಟು 12.41 ಲಕ್ಷ ರೂ.ಗಳನ್ನು ವಂಚಕರು ಹೇಳಿದ ಬ್ಯಾಂಕ್ ಖಾತೆಗೆ ಹಾಕಿದ್ದಾರೆ.

    ಇಷ್ಟಲ್ಲದೇ, ತಮ್ಮ ತಾಯಿ ಹೆಸರಿನಲ್ಲಿದ್ದ ಎಸ್‌ಬಿಐ ಬ್ಯಾಂಕ್ ಖಾತೆಯಿಂದ 1.80 ಲಕ್ಷ ರೂ., ಸಹೋದರನ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ 90 ಸಾವಿರ ರೂ., ಮಾವನ ಐಡಿಬಿಐ ಬ್ಯಾಂಕ್ ಖಾತೆಯಿಂದ 3.30 ಲಕ್ಷ ರೂ. ಹಾಗೂ ಸ್ನೇಹಿತರಿಂದ 1 ಲಕ್ಷ ರೂ. ಪಡೆದು ಅದನ್ನೂ ಹಾಕಿದ್ದಾರೆ. ಒಟ್ಟು 19.41 ಲಕ್ಷ ರೂ.ಗಳನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದಾರೆ.

    ಮೂರು ದಿನದ ಬಳಿಕ ವಂಚನೆ ಆಗಿರುವುದು ಗೊತ್ತಾಗಿದೆ. ವಂಚಕರು 1.18 ಲಕ್ಷ ರೂ. ಮರಳಿ ಖಾತೆಗೆ ಹಾಕಿದ್ದಾರೆ. ಬಾಕಿ ಹಣ ನೀಡದೇ ಯಾಮಾರಿಸಿದ್ದಾರೆ. ಬಳಿಕ ಎಚ್ಚೆತ್ತು ಕೊಪ್ಪಳ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಇದನ್ನೂ ಓದಿ: ಅಭಿವ್ಯಕ್ತಿ ಸ್ವಾತಂತ್ರ‍್ಯ ಮೊಟಕುಗೊಳಿಸಲು ಕಾಂಗ್ರೆಸ್‌ ಸಂವಿಧಾನ ತಿದ್ದುಪಡಿ – ಅಮಿತ್‌ ಶಾ ವಾಗ್ದಾಳಿ

  • ಪ್ರತಿ ವಾರ 20 ಗಂಟೆ ಟಿವಿ ನೋಡಿದ್ರೆ 65 ಸಾವಿರ ರೂ. ವೇತನ!

    ಪ್ರತಿ ವಾರ 20 ಗಂಟೆ ಟಿವಿ ನೋಡಿದ್ರೆ 65 ಸಾವಿರ ರೂ. ವೇತನ!

    ನವದೆಹಲಿ: ನೀವು ಟಿವಿ ನೋಡುವುದನ್ನು ಇಷ್ಟಪಡುತ್ತೀರಾ? ಹಾಗಿದ್ದರೆ ಟಿವಿ ನೋಡುವುದನ್ನೇ ಉದ್ಯೋಗ ಮಾಡಿಕೊಳ್ಳಬಹುದು. ಹೌದು, ಕಂಪನಿಯೊಂದು ಪ್ರತಿ ವಾರ 20 ಗಂಟೆ ಟಿವಿ ನೋಡುವುದಕ್ಕಾಗಿಯೇ 65 ಸಾವಿರ ರೂ. ವೇತನ ನೀಡುತ್ತಿದೆ.

    ಟಿವಿ ನೋಡುವ ಪಾರ್ಟ್ ಟೈಮ್ ಕೆಲಸಕ್ಕೆ ಉತ್ತಮ ಬರವಣಿಗೆಯ ಕೌಶಲ್ಯ, ಇಂಗ್ಲಿಷ್‍ನಲ್ಲಿ ಮಾತನಾಡುವವರೇ ಆಗಿರಬೇಕು. ಜೊತೆಗೆ ವಯಸ್ಸು 18 ವರ್ಷ ಮೀರಬೇಕು. ಹೀಗೆ ಕೆಲವು ನಿಯಮಗಳನ್ನು ಕಂಪನಿ ವಿಧಿಸಿದೆ. ಇದಕ್ಕೆ ಒಪ್ಪಿದರೆ ನೀವು ಪಾರ್ಟ್ ಟೈಮ್ ಜಾಬ್ ಮಾಡಬಹುದಾಗಿದೆ. ಇದನ್ನೂ ಓದಿ: ಹಾಸಿಗೆಯಲ್ಲಿ ನಿದ್ದೆ ಮಾಡಲಿರುವ 23 ಮಂದಿಗೆ ಸಿಗಲಿದೆ 1 ಲಕ್ಷ

    ಆನ್‍ಬೈ ಎಂಬ ಕಂಪನಿ ಇಂತಹ ಪಾರ್ಟ್ ಟೈಮ್ ಜಾಬ್ ಕಲ್ಪಿಸಿದೆ. ಆದರೆ ಕೆಲಸ ಮಾಡಲು ಬಯಸುವವರು ಟಿವಿ, ಕ್ಯಾಮೆರಾ, ಸ್ಮಾರ್ಟ್ ಸಾಧನ, ಹೆಡ್‍ಫೋನ್ ಮತ್ತು ಹೋಮ್ ಸಿನಿಮಾ ವ್ಯವಸ್ಥೆಗಳು ಸೇರಿದಂತೆ ಹಲವಾರು ಎಲೆಕ್ಟ್ರಾನಿಕ್ ಉತ್ಪನ್ನಗಳ ಬಗ್ಗೆ ಮಾಹಿತಿ ಹೊಂದಿಬೇಕು.

    ಒಂದು ವೇಳೆ ನೀವು ಕೆಲಸಕ್ಕೆ ಆಯ್ಕೆಯಾದರೆ ಉತ್ಪನ್ನ ಪುಟವನ್ನು ಆನ್‍ಸೈಟ್‍ನಲ್ಲಿ ಸುಧಾರಿಸಲು ಪರೀಕ್ಷಿಸಲು ಪ್ರತಿ ತಿಂಗಳು ಉತ್ಪನ್ನಗಳ ಆಯ್ಕೆಯನ್ನು ಪಡೆಯುತ್ತೀರಿ. ಉತ್ಪನ್ನಗಳ ವಿನ್ಯಾಸ, ಕಾರ್ಯಕ್ಷಮತೆ, ಬಾಳಿಕೆ, ಧ್ವನಿ, ಪ್ರದರ್ಶನ, ಕಾರ್ಯಕ್ಷಮತೆ ಮತ್ತು ಹಣದ ಮೌಲ್ಯವನ್ನು ಪರೀಕ್ಷಿಸಬೇಕು. ಬಳಿಕ ನೀವು ಪರೀಕ್ಷಿಸಿದ ಉತ್ಪನ್ನದ ಬಗ್ಗೆ 200 ಪದಗಳ ವಿಮರ್ಶೆಯನ್ನು ಬರೆಯಬೇಕು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಆನ್‍ಬೈ ಸಂಸ್ಥಾಪಕ ಕ್ಯಾಸ್ ಪ್ಯಾಟನ್, “ನಾವು ಗ್ರಾಹಕರಿಗೆ ನಿಖರವಾದ ಮಾಹಿತಿ ಮತ್ತು ಉತ್ತಮ ವಸ್ತುಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ. ಆದ್ದರಿಂದ ತಾಂತ್ರಿಕ ತಜ್ಞರಿಂದ ಪ್ರತಿಕ್ರಿಯೆಯನ್ನು ಸಂಗ್ರಹಿಸುವ ಮೂಲಕ, ಉತ್ಪನ್ನಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತದೆ. ಗ್ರಾಹಕರ ವಿಶ್ವಾಸ ಗಳಿಸಲು ಇದು ಉತ್ತಮ ವಿಧಾನವಾಗಿದೆ” ಎಂದು ತಿಳಿಸಿದ್ದಾರೆ.