Tag: Part 2

  • ‘ಅನಿಮಲ್’ ಗೆಲುವು, ಪಾರ್ಟ್ 2 ಮಾಡ್ತಾರಾ ನಿರ್ದೇಶಕ ವಂಗ?

    ‘ಅನಿಮಲ್’ ಗೆಲುವು, ಪಾರ್ಟ್ 2 ಮಾಡ್ತಾರಾ ನಿರ್ದೇಶಕ ವಂಗ?

    ಣ್ ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನ ‘ಅನಿಮಲ್’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡುತ್ತಿದೆ. ಎಲ್ಲ ಭಾಷೆಯಲ್ಲೂ ಚಿತ್ರವನ್ನು ಅದ್ಭುತವಾಗಿ ಸ್ವೀಕರಿಸಿದ್ದಾರೆ ಪ್ರೇಕ್ಷಕರು. ಹಾಗಾಗಿಯೇ ಈ ಸಿನಿಮಾದ ಮುಂದಿನ ಭಾಗ ಕೂಡ ಬರಲಿದೆ ಎಂದು ಹೇಳಲಾಗುತ್ತಿದೆ. ಸಿನಿಮಾ ಟೈಮ್ ಇನ್ನೂ ಈ ಕುರಿತು ಮಾಹಿತಿ ನೀಡದೇ ಇದ್ದರೂ, ಪಾರ್ಟ್ 2 (Part 2) ಹಾಗೂ ಆ ಭಾಗದಲ್ಲಿ ಇನ್ನೂ ರಕ್ತಸಿಕ್ತ ಅಧ್ಯಾಯ ಇರಲಿದೆ ಎಂದು ಚರ್ಚೆ ನಡೆಯುತ್ತಿದೆ.

    ಸಿನಿಮಾ ರಿಲೀಸ್ ಆದ ಒಂದೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿತ್ತು. ಜೊತೆಗೆ ರಿಲೀಸ್ ದಿನದಿಂದ ಈವರೆಗೂ ಬಾಕ್ಸ್ ಆಫೀಸ್ (Box Office) ಕಲೆಕ್ಷನ್ ಏರುತ್ತಲೇ ಇದೆ. ಮೂರು ದಿನದ ಒಟ್ಟು ಕಲೆಕ್ಷನ್ ಮುನ್ನೂರು ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿತ್ತು. ಈ ಮೂಲಕ ಜವಾನ್ ನಂತರ ಬಾಲಿವುಡ್ ನ ಮತ್ತೊಂದು ಚಿತ್ರ ಕೋಟಿ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಮಾಡಿದೆ.

    ಸಂದೀಪ್ ರೆಡ್ಡಿ ವಂಗ ನಿರ್ದೇಶನದ  ಹಾಗೂ ರಣ್ ಬೀರ್ ಕಪೂರ್ (Ranbir Kapoor) , ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna),  ಪ್ರಮುಖಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಅನಿಮಲ್ (Animal) ಡಿಸೆಂಬರ್ 1 ರಂದು ತೆರೆಗೆ ಬಂದಿದೆ. ಚಿತ್ರಕ್ಕೆ ಸೆನ್ಸಾರ್ (Censor) ಮಂಡಳಿಯು ‘ಎ’ ಪ್ರಮಾಣ ಪತ್ರ ನೀಡಿದ್ದರೂ, ಜೊತೆಗೆ ರಶ್ಮಿಕಾ ಮತ್ತು ರಣಬೀರ್ ಜೋಡಿಯ ಹಸಿಬಿಸಿ ದೃಶ್ಯಗಳನ್ನು ಸಿನಿಮಾ ಒಳಗೊಂಡಿದ್ದರೂ ಪ್ರೇಕ್ಷಕನಿಗೆ ಚಿತ್ರ ಹಿಡಿಸಿದೆ.

     

    ಈ ಚಿತ್ರದ ಬಗ್ಗೆ ಚಿತ್ರತಂಡಕ್ಕೆ ಸಾಕಷ್ಟು ನಿರೀಕ್ಷೆ ಇತ್ತು. ನಟ ರಣಬೀರ್ ಕಪೂರ್ ಸಿನಿಮಾದ ಬಗ್ಗೆ ಮಾತನಾಡುತ್ತಾ, ‘ಇದು ವಿಭಿನ್ನವಾದ ಸಿನಿಮಾ. ತಂದೆ – ಮಗನ ಬಾಂಧವ್ಯದ ಜೊತೆ ಜೊತೆಗೆ ಹಿಂಸೆ ಮತ್ತು ಕ್ರೌರ್ಯಕ್ಕೆ ಒತ್ತು ನೀಡಿದ್ದಾರೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ. ಸೆಂಟೆಮೆಂಟ್ ಅಥವಾ ಹಿಂಸೆಗೆ ಎಷ್ಟು ಪ್ರಾಧಾನ್ಯತೆ ನೀಡಲಾಗಿದೆ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು. ಹಿರಿಯ ನಟರಾದ ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಅವರ ಜೊತೆ ನಟನೆ ಮಾಡಿದ್ದು ಒಳ್ಳೆಯ ಅನುಭವ. ಜೊತೆಗೆ ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಜೀವ  ತುಂಬಿದ್ದಾರೆ’ ಎಂದಿದ್ದರು.

  • ದಿ ಕಾಶ್ಮೀರ್ ಫೈಲ್ಸ್ 2 ಬರುತ್ತಾ? ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಉತ್ತರವೇನು?

    ದಿ ಕಾಶ್ಮೀರ್ ಫೈಲ್ಸ್ 2 ಬರುತ್ತಾ? ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಉತ್ತರವೇನು?

    ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ದೇಶಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. 1990ರ ಕಾಶ್ಮೀರಿ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಯನ್ನು ಆಧರಿಸಿದ ಸಿನಿಮಾ ಇದಾಗಿದ್ದರಿಂದ ಚಿತ್ರಕ್ಕೆ ಭಾರೀ ಬೆಂಬಲ ಕೂಡ ವ್ಯಕ್ತವಾಯಿತು. ಹಲವು ರಾಜ್ಯಗಳು ಈ ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಣೆ ಮಾಡಿ, ಜನರೂ ನೋಡುವಂತೆ ಮಾಡಿದರು. ಹೀಗಾಗಿ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಈ ಸಿನಿಮಾ ರಿಲೀಸ್ ಆಯಿತು. ಇದನ್ನೂ ಓದಿ : ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾ ಸೋಲು : ಹೊಣೆಹೊತ್ತು ಹಣ ಮರಳಿಸಿದ್ರಾ ನಿರ್ದೇಶಕ ಶಿವ

    ಸಿಂಗಪುರ್ ಸೇರಿದಂತೆ ಹಲವು ರಾಷ್ಟ್ರಗಳು ಈ ಸಿನಿಮಾವನ್ನು ತಮ್ಮ ದೇಶದಲ್ಲಿ ರಿಲೀಸ್ ಮಾಡದಂತೆ ನಿರ್ಬಂಧ ಹೇರಿದವು. ಅಲ್ಲದೇ, ವಿವೇಕ್ ಅಗ್ನಿಹೋತ್ರಿ ಅವರ ಭಾಷಣಕ್ಕೂ ಅಡೆತಡೆ ಮಾಡಲಾಯಿತು. ಇವೆಲ್ಲವೂ ನಡೆಯುತ್ತಿರುವ ಸಂದರ್ಭದಲ್ಲಿ ವಿವೇಕ್ ಅವರಿಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ ಅಭಿಮಾನಿಗಳು.  ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಪಾರ್ಟ್ 2 ಆಗಿ ಮೂಡಿ ಬರಲಿದೆಯಾ? ಎನ್ನುವ ಪ್ರಶ್ನೆಗೆ ವಿವೇಕ್ ಅಗ್ನಿಹೋತ್ರಿ ಉತ್ತರಿಸಿದ್ದಾರೆ. ಇದನ್ನೂ ಓದಿ : ನಿಖಿಲ್ ಕುಮಾರ್ ಸ್ವಾಮಿ ಪುತ್ರನಿಗೆ ಇಟ್ಟ ಹೆಸರೇನು? ಆ ಹೆಸರಿನ ಅರ್ಥ ಏನು?

    ಈಗಾಗಲೇ ಫೈಲ್ಸ್ ಸರಣಿಯ ಚಿತ್ರಗಳನ್ನು ಮಾಡುತ್ತಾ ಬಂದಿದ್ದಾರೆ ವಿವೇಕ್. ದಿ ಕಾಶ್ಮೀರ್ ಫೈಲ್ಸ್ ನಂತರ, ದಿ ಡೆಲ್ಲಿ ಫೈಲ್ಸ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾವನ್ನೇ ಮುಂದುವರೆದ ಭಾಗ ಎಂದುಕೊಳ್ಳಿ ಎಂದು ಉತ್ತರಿಸಿದ್ದಾರೆ. ಅಂದರೆ, ಕಾಶ್ಮೀರಿ ಪಂಡಿತರ ಹತ್ಯೆಯ ಸಿನಿಮಾ ಇದಲ್ಲವಾದರೂ, ಡೆಲ್ಲಿ ಫೈಲ್ಸ್ ನಲ್ಲೂ ಹತ್ಯಾಕಾಂಡವೇ ಪ್ರಧಾನ ಕಥೆಯಾಗಿ ಮೂಡಿ ಬರಲಿದೆಯಂತೆ.

  • ಏಕ್, ದೋ, ತೀನ್..! ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ಸರೋಜ್ ಖಾನ್

    ಏಕ್, ದೋ, ತೀನ್..! ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ಸರೋಜ್ ಖಾನ್

    ಮುಂಬೈ: ಹಿರಿಯ ನೃತ್ಯ ನಿರ್ದೇಶಕಿ ಸರೋಜ್ ಖಾನ್‍ರವರು ಏಕ್ ದೋ ತೀನ್ ಗೀತೆಯ ವಿವಾದದ ಬಗ್ಗೆ ಮಾತನಾಡಿದ್ದಾರೆ. ನೃತ್ಯ ನಿರ್ದೇಶಕರಾದ ಅಹ್ಮದ್ ಖಾನ್ ಮತ್ತು ಗಣೇಶ್ ಆಚಾರ್ಯರ ಪರಿಶ್ರಮದ ಬಗ್ಗೆ ಹೆಮ್ಮೆ ಹಾಗೂ ಸಂತಸ ವ್ಯಕ್ತಪಡಿಸಿದ್ದಾರೆ ಮತ್ತು ಅವರಿಗೆ ನನ್ನ ಆಶೀರ್ವಾದ ಎಂದಿಗೂ ಇರುತ್ತದೆ ಎಂದು ಹೇಳಿದ್ದಾರೆ.

    ಏಕ್, ದೋ, ತೀನ್,  ಚಾರ್ ಹಾಡಿನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ನನ್ನ ಮತ್ತು ಅಹ್ಮದ್ ಖಾನ್ ನಡುವೆ ಗುರು ಶಿಷ್ಯರ ಸಂಬಂಧವಿದೆ. ಇಲ್ಲಿ ಒಬ್ಬರಿಗಿಂತ ಒಬ್ಬರು ಭಿನ್ನವಾಗಿದ್ದು, ಯಾವುದೇ ರೀತಿಯ ಸ್ಪರ್ಧೆ ಇರುವುದಿಲ್ಲ. ಹಳೆ ಗೀತೆಗಿಂತ ಹೊಸ ಹಾಡು ಉತ್ತಮವೆಂಬ ಅಂಶ ತಪ್ಪು ಏಕೆಂದರೆ ಈ ಗೀತೆಯನ್ನು ಏಕ್ ದೋ ತೀನ್ ತಂಡಕ್ಕೆ ಸಮರ್ಪಿಸಿದ್ದಾರೆ ಮತ್ತು ಬಾಘೀ-2 ಚಿತ್ರ ತಂಡವು ಬಹಳ ಶ್ರಮಪಟ್ಟಿದೆ ಅಂತಾ ಸರೋಜ್ ಖಾನ್ ಅಂದಿದ್ದಾರೆ.

    ಈ ಹಿಂದೆ ಸರೋಜ್ ಖಾನ್ ಇದೇ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದರು. ಅಂದು ಇದೇ ಗೀತೆಗೆ ಅಹ್ಮದ್ ಖಾನ್‍ರವರು ಸಹಾಯಕ ನೃತ್ಯ ನಿರ್ದೇಶಕರಾಗಿ ಮತ್ತು ಗಣೇಶ್ ಆಚಾರ್ಯರವರು ಗೀತೆಯ ಹಿನ್ನೆಲೆ ನರ್ತಕರಾಗಿ ಕಾಣಿಸಿಕೊಂಡಿದ್ದರು. ಬಾಘೀ-2 ಚಿತ್ರದಲ್ಲಿ ಸಾಜಿದ್ ನಾಡಿಯದ್ವಾಲ ಮತ್ತು ನಿರ್ದೇಶಕ ಅಹ್ಮದ್ ಖಾನ್ ಈ ಗೀತೆಯನ್ನು ಅಳವಡಿಸಿಕೊಂಡಿದ್ದಾರೆ.

    ಏನಿದು ವಿವಾದ: ಮಾಧುರಿ ದೀಕ್ಷಿತ್ ನರ್ತಿಸಿದ ಹಾಡಿನ ನ್ಯೂ ವರ್ಷನ್ ಗೆ ಮರ್ಡರ್-2 ಖ್ಯಾತಿಯ ಸುಂದರಿ ಜಾಕ್ವೇಲಿನ್ ತುಂಬಾ ಸೆಕ್ಸಿಯಾಗಿ ಕಾಣಿಸಿಕೊಂಡಿದಕ್ಕೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನವನ್ನ ಹೊರಹಾಕಿದ್ರು. ಮಾಧುರಿ ದೀಕ್ಷಿತ್ ಸಹ ತಮ್ಮ ಹಾಡಿಗೆ ಜಾಕ್ವೇಲಿನ್ ಮಾಡಿರುವ ಡ್ಯಾನ್ಸ್ ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜಾಕ್ವೇಲಿನ ‘ಏಕ್ ದೋ ತೀನ್ ಚಾರ್’ ಹಾಡಿನ ಮೂಲಕ ನಾನು ನಿಮಗೆ ಗೌರವ ಸಲ್ಲಿಸುತ್ತಿದ್ದೇನೆ ಎಂಬ ಸಂದೇಶವನ್ನು ಸಹ ರವಾನೆ ಮಾಡಿದ್ದು, ಮಾಧುರಿ ಮಾತ್ರ ಯಾವುದಕ್ಕೂ ಉತ್ತರ ನೀಡಿಲ್ಲ ಅಂತಾ ಹೇಳಲಾಗುತ್ತಿದೆ.