Tag: Parscel

  • ವಿಡಿಯೋ: ಮೂರು ವರ್ಷದ ಮಗುವಿನ ಮೇಲೆ ಕಾರು ಹರಿದರೂ ಜೀವಂತವಾಗಿ ಎದ್ದು ಬಂದ ಮಗು

    ವಿಡಿಯೋ: ಮೂರು ವರ್ಷದ ಮಗುವಿನ ಮೇಲೆ ಕಾರು ಹರಿದರೂ ಜೀವಂತವಾಗಿ ಎದ್ದು ಬಂದ ಮಗು

    ಬೀಜಿಂಗ್: ಮನೆ ಮುಂದೆ ಬಂದಿದ್ದ ಪಾರ್ಸೆಲ್ ನನ್ನು ಮಹಿಳೆ ತೆಗೆದುಕೊಳ್ಳುವಾಗ 3 ವರ್ಷದ ಮಗು ಕಾರಿನ ಮುಂದೆ ನಿಂತಿರುವುದನ್ನು ಗಮಿನಿಸದೇ ಚಾಲಕ ಕಾರು ಚಲಾಯಿಸಿದ್ದರೂ ಮಗು ಜೀವಂತವಾಗಿ ಎದ್ದು ಬಂದ ಘಟನೆ ಚೀನಾದಲ್ಲಿ ನಡೆದಿದೆ.

    ಚೀನಾದ ಕ್ವಾನ್‍ಝೋ ನಗರದ ಫೂಜೇನ್ ನಲ್ಲಿ ಮನೆ ಮುಂದೆ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಗು, ಮಗುವಿನ ತಾಯಿ ಹಾಗೂ ಕುಟುಂಬದವರು ಮನೆಯ ಮುಂದೆ ಕುಳಿತಿದ್ದರು. ಆಗ ಬಂದ ಡೆಲಿವರ್ ಮ್ಯಾನ್ ಮಹಿಳೆಗೆ ಪಾರ್ಸೆಲ್ ನೀಡುತ್ತಿದ್ದರು. ಮಹಿಳೆಯನ್ನು ಹಿಂಬಾಲಿಸಿ ಹೋದ ಮಗು ಕಾರಿನ ಮುಂದೆ ನಿಂತಿತ್ತು. ಪಾರ್ಸೆಲ್ ನೀಡಿದ ಬಳಿಕ ಡೆಲಿವರ್ ಮ್ಯಾನ್ ಮಗುವಿನ ಮೇಲೆಯೇ ಕಾರನ್ನು ಚಲಾಯಿಸಿದ್ದಾರೆ.

    ಅದೃಷ್ಟವಶಾತ್ ಮಗುವಿಗೆ ಯಾವುದೇ ಗಾಯವಾಗಿಲ್ಲ. ನಂತರ ಮಗು ಕಾರಿನ ಕೆಳಗೆ ಇರುವುದನ್ನು ಗಮನಿಸಿದ ತಾಯಿ ಹಾಗೂ ಸ್ಥಳೀಯರು ಗಾಬರಿಯಾಗಿ ನಂತರ ಮಗುವನ್ನು ಎತ್ತಿಕೊಂಡು ಹೋದ ದೃಶ್ಯ ಸೆರೆಯಾಗಿದೆ.