Tag: parrot

  • ಸಾಕಿದ್ದ ಮುದ್ದಿನ ಗಿಳಿ ಸಾವು – ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ

    ಸಾಕಿದ್ದ ಮುದ್ದಿನ ಗಿಳಿ ಸಾವು – ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ

    ಕೋಲ್ಕತ್ತಾ: ಪ್ರೀತಿಯಿಂದ ಸಾಕಿದ್ದ ಗಿಳಿ (Parrot) ಮೃತಪಟ್ಟ ಹಿನ್ನೆಲೆಯಲ್ಲಿ ಕೃತಜ್ಞತೆಯ ಸಂಕೇತವಾಗಿ ವ್ಯಕ್ತಿಯೊಬ್ಬ ಹಿಂದೂ ಧಾರ್ಮಿಕ ವಿಧಿಗಳ ಪ್ರಕಾರ ಅಂತಿಮ ವಿಧಿಗಳನ್ನು ನೆರವೇರಿಸಿದ ಘಟನೆ ಪಶ್ಚಿಮ ಬಂಗಾಳದಲ್ಲಿ (West Bengal) ನಡೆದಿದೆ.

    ಪಶ್ಚಿಮ ಬಂಗಾಳದ ಹೆಬ್ರಾದ ಆಯ್ರಾ ಗ್ರಾಮದ ನಿವಾಸಿ ಮಜುಂದಾರ್ ಎಂಬಾತ ಕಳೆದ 25 ವರ್ಷಗಳಿಂದ ಗಿಳಿಯೊಂದನ್ನು ಸಾಕಿದ್ದ. ಅದಕ್ಕೆ ಪ್ರೀತಿಯಿಂದ ಭಕ್ತೋ ಎಂದು ಹೆಸರಿಟ್ಟು, ಅದನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದ. ಆದರೆ ಅದು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಸಾವನ್ನಪ್ಪಿದೆ.

    ಪ್ರೀತಿಯ ಗಿಳಿಯನ್ನು ಮಗುವಿನಂತೆ ನೋಡಿಕೊಂಡಿದ್ದ ಹಿನ್ನೆಲೆಯಲ್ಲಿ ಮಜುಂದಾರ್ ಕುಟುಂಬವು ಹಿಂದೂ ಸಂಪ್ರದಾಯಗಳ ಪ್ರಕಾರ ಅದರ ಅಂತ್ಯಕ್ರಿಯೆಯನ್ನು ನಡೆಸಲು ನಿರ್ಧರಿಸಿತ್ತು. ಅಂತ್ಯಸಂಸ್ಕಾರ ನಡೆಸಲು ಸ್ಥಳೀಯರು ಸಹಾಯ ಮಾಡಿದ್ದರು. ಇದನ್ನೂ ಓದಿ: ವಿನಾಶ ಕಾಲದಲ್ಲಿ ಕಾಂಗ್ರೆಸ್‌ಗೆ ವಿಪರೀತ ಬುದ್ಧಿ: ಸದಾನಂದ ಗೌಡ ವಾಗ್ದಾಳಿ

    ಅದಾದ ಬಳಿಕ ಮಜುಂದಾರ್ ಕುಟುಂಬವು ಅರ್ಚಕರನ್ನು ಕರೆದು ಹಿಂದೂ ಸಂಪ್ರದಾಯದಂತೆ ಮನೆಯಲ್ಲಿ ತಮ್ಮ ಪ್ರೀತಿಯ ಸಾಕು ಗಿಳಿಯ ಅಂತಿಮ ವಿಧಿಗಳನ್ನು ನೆರವೇರಿಸಿದರು. ನಂತರ, ಪಾರ್ಥಿವ ಶರೀರವನ್ನು ನೈಹಟಿಯ ಹೂಗ್ಲಿ ನದಿ ಘಾಟ್‍ಗೆ ಕೊಂಡೊಯ್ಯಲಾಯಿತು. ಅಲ್ಲಿ ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು. ಈ ವೇಳೆ 25 ಜನರನ್ನು ಕರೆಸಿ ಊಟ ಹಾಕಿಸಿದ್ದಾರೆ. ಇದನ್ನೂ ಓದಿ: ನಾನು ಹಿಂದೂ, ನಾನು ಆಂಜನೇಯನ ಭಕ್ತ, ರಾಮನ ಭಕ್ತ, ಶಿವಭಕ್ತ – ಡಿಕೆಶಿ

  • ಜಾತಕ ಹೊಂದಿಸಿ ಹಿಂದೂ ಸಂಪ್ರದಾಯದಂತೆ 2 ಗಿಳಿಗಳಿಗೆ ಅದ್ಧೂರಿ ವಿವಾಹ

    ಜಾತಕ ಹೊಂದಿಸಿ ಹಿಂದೂ ಸಂಪ್ರದಾಯದಂತೆ 2 ಗಿಳಿಗಳಿಗೆ ಅದ್ಧೂರಿ ವಿವಾಹ

    ಭೋಪಾಲ್: ಹಿಂದೂ ಸಂಪ್ರದಾಯದ ವಿಧಿವಿಧಾನಗಳಂತೆ 2 ಗಿಳಿಗಳಿಗೆ (Parrot) ಅದ್ಧೂರಿಯಾಗಿ ಮದುವೆ ಮಾಡಿದ ಘಟನೆ ಮಧ್ಯಪ್ರದೇಶದ (Madhya Pradesh) ಕರೇಲಿಯಲ್ಲಿ ನಡೆದಿದೆ.

    ಮೈನಾ ಹಾಗೂ ಗಿಳಿ ವಧು ವರರು. ಮಧ್ಯಪ್ರದೇಶದ ಕರೇಲಿ ಸಮೀಪದ ಪಿಪಾರಿಯಾದಲ್ಲಿ ವಾಸಿಸುವ ರಾಮಸ್ವರೂಪ್ ಪರಿಹಾರ್ ಅವರು ಮೈನಾ ಎಂಬ ಗಿಳಿಯನ್ನು ಸ್ವಂತ ಮಗಳಂತೆ ಬೆಳೆಸಿದ್ದರು. ಅದೇ ಗ್ರಾಮಾದ ಲಾಲ್ ವಿಶ್ವಕರ್ಮ ಎಂಬುವವರ ಬಳಿಯೂ ಒಂದು ಗಿಳಿಯಿತ್ತು. ಇದರಿಂದಾಗಿ ಇಬ್ಬರು ಆ ಮೈನಾ ಹಾಗೂ ಗಿಳಿಗೆ ಮದುವೆ (marriage) ಮಾಡಲು ನಿರ್ಧರಿಸಿದ್ದಾರೆ.

    POPO PARROT

    ಅದಾದ ಬಳಿಕ ಜಾತಕ ಹೊಂದಿಸಿ, ಅದ್ಧೂರಿಯಾಗಿ ಹಿಂದೂ ಸಾಂಪ್ರದಾಯದೊಂದಿಗೆ ಮದುವೆಯನ್ನು ಮಾಡಲಾಯಿತು. ಮದುವೆ ವೇಳೆ ವರನನ್ನು ಕರೆ ತರುವಾಗ ಚಿಕ್ಕ ವಾಹನದಲ್ಲಿ ಪಂಜರವನ್ನಿರಿಸಿ ಗ್ರಾಮದುದ್ದಕ್ಕೂ ಮೆರವಣಿಗೆ ಸಾಗಿದ್ದಾರೆ. ಇದನ್ನು ವೀಕ್ಷಿಸಲು ನೆರೆಹೊರೆಯವರ ದಂಡೇ ನಿಂತಿತ್ತು. ಇದನ್ನೂ ಓದಿ: ಚುನಾವಣೆ ಹೊತ್ತಲ್ಲಿ ಡಿಕೆಶಿಗೆ ಮಾಸ್ಟರ್ ಸ್ಟ್ರೋಕ್!

    ಈ ವಿಶಿಷ್ಟ ವಿವಾಹಕ್ಕೆ ಪಿಪಾರಿಯಾ ಗ್ರಾಮದ ಜನರು ಸಾಕ್ಷಿಯಾದರು. ರಾಮಸ್ವರೂಪ ಪರಿಹಾರ್ ಅವರ ಮನೆಯಲ್ಲಿ ಮದುವೆಯ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಇದನ್ನೂ ಓದಿ: ಕೋಟೆನಾಡಲ್ಲಿ ದಂಡ ಪಾವತಿಸಲಾಗದೇ ಜೈಲು ಸೇರಿದ ಬೈಕ್ ಸವಾರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನೆರೆಮನೆ ಗಿಳಿಯ ಕಿರಿಕಿರಿ ತಾಳಲಾಗದೇ ಪೊಲೀಸರಿಗೆ ದೂರು ನೀಡಿದ ಅಜ್ಜ

    ನೆರೆಮನೆ ಗಿಳಿಯ ಕಿರಿಕಿರಿ ತಾಳಲಾಗದೇ ಪೊಲೀಸರಿಗೆ ದೂರು ನೀಡಿದ ಅಜ್ಜ

    ಮುಂಬೈ: ನೆರೆಮನೆಯ ಸಾಕು ಗಿಳಿ ನಿರಂತರವಾಗಿ ಕಿರುಚಾಡುತ್ತದೆ. ಇದರಿಂದ ನನಗೆ ಬಹಳ ಕಿರಿಕಿರಿಯಾಗುತ್ತಿದೆ. ದಯವಿಟ್ಟು ಈ ಸಮಸ್ಯೆಯನ್ನು ಬಗೆಹರಿಸಿ ಎಂದು ವೃದ್ಧರೊಬ್ಬರು ಪೊಲೀಸರ ಮೊರೆ ಹೋಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

    72 ವರ್ಷದ ವೃದ್ಧ ಸುರೇಶ್ ಶಿಂಧೆ, ತಮ್ಮ ನೆರೆಮನೆಯ ಅಕ್ಬರ್ ಅಮ್ಜದ್ ಖಾನ್ ಅವರು ಸಾಕಿರುವ ಗಿಳಿಯಿಂದ ತಮಗೆ ಬಹಳ ತೊಂದರೆಯಾಗುತ್ತಿದೆ. ಅದು ಯಾವಾಗಲೂ ಕಿರುಚಾಡುತ್ತಿರುತ್ತದೆ. ಹೀಗಾಗಿ ಅಮ್ಜದ್ ಖಾನ್ ವಿರುದ್ಧ ದೂರು ದಾಖಲಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: 75ನೇ ಸ್ವಾತಂತ್ರ್ಯ ಸಂಭ್ರಮಕ್ಕೆ 75 ಮೀ. ತಿರಂಗಾದೊಂದಿಗೆ 75 ಕಿ.ಮೀ ರ‍್ಯಾಲಿ

    ಸುರೇಶ್ ಶಿಂಧೆ ಆಗಸ್ಟ್ 5 ರಂದು ದೂರು ನೀಡಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಅವರ ದೂರಿನ ಅನ್ವಯ ಗಿಳಿಯ ಮಾಲೀಕರ ವಿರುದ್ಧ ಶಾಂತಿ ಭಂಗ ಹಾಗೂ ಕ್ರಿಮಿನಲ್ ಬೆದರಿಕೆಗಳನ್ನು ಗುರುತಿಸಲಾದ ಅಪರಾಧಗಳ ಅಡಿ ದೂರನ್ನು ದಾಖಲಿಸಿಕೊಂಡಿದ್ದೇವೆ. ನಿಯಮಗಳ ಪ್ರಕಾರ ನಾವು ಮುಂದುವರಿಯುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 18ರ ಯುವತಿ ಆರ್ಯ ವಾಲ್ವೇಕರ್‌ಗೆ ಮಿಸ್ ಇಂಡಿಯಾ USA-2022 ಕಿರೀಟ; ಈಕೆ ಯಾರು ಗೊತ್ತಾ?

    Live Tv
    [brid partner=56869869 player=32851 video=960834 autoplay=true]

  • ಬಹುಮಾನದ ಮೊತ್ತ 85 ಸಾವಿರಕ್ಕೆ ಏರಿಸಿದ ಕೆಲವೇ ಹೊತ್ತಲ್ಲಿ ಸಿಕ್ತು ಕಳೆದು ಹೋಗಿದ್ದ ಗಿಳಿ!

    ಬಹುಮಾನದ ಮೊತ್ತ 85 ಸಾವಿರಕ್ಕೆ ಏರಿಸಿದ ಕೆಲವೇ ಹೊತ್ತಲ್ಲಿ ಸಿಕ್ತು ಕಳೆದು ಹೋಗಿದ್ದ ಗಿಳಿ!

    ತುಮಕೂರು: ಜ್ಯೋತಿಷಿಯೊಬ್ಬರ ಸಲಹೆಯಂತೆ ಬಹುಮಾನದ ಮೊತ್ತವನ್ನು ಏರಿಕೆ ಮಾಡಿದಂತೆಯೇ ಕಳೆದು ಹೋಗಿದ್ದ ಗಿಳಿ ಕೆಲವೇ ಗಂಟೆಗಳಲ್ಲಿ ಮಾಲೀಕರ ಕೈ ಸೇರಿದೆ.

    ತುಮಕೂರಲ್ಲಿ ಜುಲೈ 16ರಂದು ಮಿಸ್ಸಿಂಗ್ ಆಗಿದ್ದ ಗಿಣಿ ಕೊನೆಗೂ ಮಾಲೀಕರ ಕೈ ಸೇರಿದೆ. ಜಯನಗರದ ಅರ್ಜುನ್, ರಂಜಿತಾ ದಂಪತಿಯ ರುಸ್ತುಮಾ ಎಂಬ ಹೆಸರಿನ ಗಿಳಿಯನ್ನು ಕಳೆದುಕೊಂಡಿದ್ದರು. ಗಿಳಿ ಪತ್ತೆಗಾಗಿ ತುಮಕೂರು ನಗರದ ಬೀದಿ ಬೀದಿ ಸುತ್ತುತ್ತಿದ್ದರು. ಗಿಳಿ ಹುಡುಕಿ ಕೊಟ್ಟರೆ 50 ಸಾವಿರ ಬಹುಮಾನ ನೀಡುವುದಾಗಿ ಕರಪತ್ರ ಹಂಚಿ, ಆಟೋದಲ್ಲಿ ಆನೌನ್ಸ್ ಕೂಡ ಮಾಡಿದ್ದರು. ಆದರೂ ಗಿಳಿ ಸಿಕ್ಕಿರಲ್ಲಿಲ್ಲ. ಇದನ್ನೂ ಓದಿ: ಸುರಕ್ಷತೆ ಮರೆತ ಬಿಎಂಟಿಸಿ – ಕಳ್ಳರ ಅಡ್ಡವಾದ ಬಸ್‍ಗಳು

    ಕೊನೆಗೆ ಗಿಳಿ ಮಾಲೀಕರು ಜ್ಯೋತಿಷಿಗಳ ಮೊರೆ ಹೋಗಿದ್ದರು. ಜ್ಯೋತಿಷಿಗಳು ಬಹುಮಾನದ ಮೊತ್ತವನ್ನು 50 ರಿಂದ 85 ಸಾವಿರಕ್ಕೆ ಏರಿಸಿದರೆ 5-6 ಗಂಟೆಯಲ್ಲಿ ನಿಮಗೆ ಗಿಳಿ ಸಿಗುತ್ತದೆ ಎಂದು ಭವಿಷ್ಯ ಹೇಳಿದ್ದರು. ಅದರಂತೆ ಅರ್ಜುನ ದಂಪತಿ ಬಹುಮಾನ ಮೊತ್ತ 85 ಸಾವಿರಕ್ಕೆ ಏರಿಸಿ ಅನೌನ್ಸ್ ಮಾಡಿದರು. ಕಾಕತಾಳಿಯ ಎಂಬಂತೆ ಹೀಗೆ ಘೋಷಣೆ ಮಾಡಿದ ಕೆಲವೇ ಗಂಟೆಯಲ್ಲಿ ಗಿಳಿ ಪತ್ತೆಯಾಗಿದೆ.

    ಬಂಡೇ ಪಾಳ್ಯದ ನಿವಾಸಿಗಳಾದ ಶ್ರೀನಿವಾಸ್ ಮತ್ತು ರಾಮಕೃಷ್ಣ ಎಂಬವರು ಬಸವಾಪಟ್ಟಣದ ಮರದ ಮೇಲಿದ್ದ ಗಿಳಿಯನ್ನು ರಕ್ಷಿಸಿ ಮನೆಯಲ್ಲಿಟ್ಟುಕೊಂಡಿದ್ದರು. ಕಾಣೆಯಾಗಿದ್ದ ಗಿಳಿಯ ಕರಪತ್ರ ನೋಡಿ ಮಾಲೀಕರಿಗೆ ಕಾಲ್ ಮಾಡಿ ಗಿಳಿಯನ್ನು ತಲುಪಿಸಿದ್ದಾರೆ. 85 ಸಾವಿರ ನಗದು ಬಹುಮಾನ ಪಡೆದುಕೊಂಡಿದ್ದಾರೆ. ಇಷ್ಟು ದಿನ ದುಃಖದಲ್ಲಿದ್ದ ಅರ್ಜುನ ದಂಪತಿ ಮೊಗದಲ್ಲಿ ಈಗ ಸಂತಸ ಮೂಡಿದೆ. ಇಷ್ಟು ದಿನದ ಒಂಟಿಯಾಗಿದ್ದ ಹೆಣ್ಣು ಗಿಳಿ ರಿಸ್ತಾ ಈಗ ಮತ್ತೆ ಜಂಟಿಯಾಗಿ ರುಸ್ತುಮಾ ಜೊತೆ ಡ್ಯುಯೆಟ್ ಹಾಡುತ್ತಿದೆ. ಇದನ್ನೂ ಓದಿ: ಕಸದ ವಾಹನಗಳ ಮೇಲೆ BBMP ನಾಮಫಲಕ ಹಾಕುವಂತಿಲ್ಲ – ಹೆಸರು ಹಾಕಿದ ವಾಹನಗಳ ಮೇಲೆ ಕ್ರಿಮಿನಲ್ ಕೇಸ್

    Live Tv
    [brid partner=56869869 player=32851 video=960834 autoplay=true]

  • ನಮ್ಮ ಮುದ್ದಿನ ಗಿಳಿ ಕಾಣೆಯಾಗಿದೆ – ಬ್ಯಾನರ್, ಕರಪತ್ರ ಹಂಚಿದ ದಂಪತಿ

    ನಮ್ಮ ಮುದ್ದಿನ ಗಿಳಿ ಕಾಣೆಯಾಗಿದೆ – ಬ್ಯಾನರ್, ಕರಪತ್ರ ಹಂಚಿದ ದಂಪತಿ

    ತುಮಕೂರು: ಅವರು ಆ ಗಿಳಿಯನ್ನು ಅರಗಿಣಿಯಂತೆ ಸಾಕಿದ್ದರು. ಅಪ್ಪಿ ಮುದ್ದಾಡುತ್ತಿದ್ದರು. ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದರು. ಆ ಗಿಳಿ ಕೂಡ ಅಷ್ಟೇ ಬಾಂಧ್ಯವ್ಯದಿಂದ ಈ ಕುಟುಂಬದೊಂದಿಗೆ ಬೆಸೆದಿತ್ತು. ಆದರೆ ಇದಕ್ಕಿದ್ದ ಹಾಗೆ ಕಾಣೆಯಾಗಿದೆ. ಇದೀಗ ಗಿಣಿಗಾಗಿ ಕುಟುಂಬ ಕಣ್ಣೀರಿಡುತ್ತಿದೆ.

    ತೇವಗೊಂಡಿರುವ ಕಣ್ಣಾಲೆಗಳು, ಮಡುಗಟ್ಟಿದ್ದ ದುಃಖದೊಂದಿಗೆ ನಮ್ಮ ಮುದ್ದಿನ ಗಿಣಿ ಕಾಣೆಯಾಗಿದೆ ಎಂದು ಕುಟುಂಬವೊಂದು ಕರಪತ್ರ ಹಂಚುತ್ತಾ ಬೀದಿ ಬೀದಿ ಹುಡುಕಾಟ ನಡೆಸಿರುವ ಘಟನೆ ತುಮಕೂರಿನ ಜಯನಗರದಲ್ಲಿ ನಡೆದಿದೆ. ಜಯನಗರದ ನಿವಾಸಿ ಅರ್ಜುನ್-ರಂಜನಾ ದಂಪತಿ ಕಳೆದ ಸುಮಾರು ಮೂರು ವರ್ಷದಿಂದ ಒಂದು ಕಪಲ್ ಗಿಣಿಗಳನ್ನು ಭದ್ರಾವತಿಯಲ್ಲಿ ಸಾಕುತಿದ್ದರು. ಕಳೆದ 20 ದಿನದಿಂದ ತುಮಕೂರಿನ ಜಯನಗರಕ್ಕೆ ಶಿಫ್ಟ್ ಆಗಿದ್ದರು. ಜುಲೈ 16 ರಂದು ಮನೆಯ ಬಾಗಿಲು ತೆರೆದಾಗ ಗಂಡು ಗಿಣಿ ಹಾರಿಹೋಗಿದೆ. ಪುನಃ ವಾಪಸ್ ಬರಲೇ ಇಲ್ಲ. ಗಿಣಿಯೊಂದಿಗೆ ಈ ಕುಟುಂಬ ಅತ್ಯಂತ ಬಾಂಧ್ಯವದಿಂದ ಇದ್ದು ಕಾಣೆಯಾಗಿದ್ದ ಗಿಣಿಗಾಗಿ ಕಣ್ಣಿರಿಡುತ್ತಾ ದುಃಖದಲ್ಲಿ ಹುಡುಕಾಟ ನಡೆಸುತ್ತಿರುವುದು ಅಕ್ಷರಶಃ ಮನಕಲಕುವಂತಿತ್ತು. ಇದೀಗ ಗಿಣಿ ಹುಡುಕಾಟ ಆರಂಭಿಸಿರುವ ಕುಟುಂಬಸ್ಥರು ಆಟೋದಲ್ಲಿ ಅನೌನ್ಸ್ ಮಾಡುತ್ತಾ, ಕರಪತ್ರ ಹಂಚುತ್ತಿದ್ದಾರೆ. ಇದನ್ನೂ ಓದಿ: ನಾನು ಒಪ್ಕೊಂಡಿದ್ದೀನಿ, ಅವಳೂ ಒಪ್ಕೊಂಡಿದ್ದಾಳೆ, ನನ್ನ ಪತ್ನಿಯನ್ನೂ ಒಪ್ಪಿಸ್ತೀನಿ..: ನವ್ಯಶ್ರೀಯಿಂದ ಆಡಿಯೋ ರಿಲೀಸ್

    ಗಿಣಿಗೆ ಅರ್ಜುನ್-ರಂಜನಾ ದಂಪತಿ ರುಸ್ತುಮಾ ಎಂದು ಹೆಸರಿಟ್ಟಿದ್ದು ಆಫ್ರೀಕನ್ ಗ್ರೇ ಬಣ್ಣದ ಗಿಣಿಯಾಗಿದೆ. ಗಿಣಿ ಪತ್ತೆ ಮಾಡಿಕೊಟ್ಟವರಿಗೆ 50 ಸಾವಿರ ರೂಪಾಯಿ ಬಹುಮಾನವ ಘೋಷಣೆಯನ್ನೂ ದಂಪತಿ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಗಿಣಿ ಕಾಣೆಯಾಗಿರುವ ಬಗ್ಗೆ ಕುಟುಂಬ ಮಾಹಿತಿ ಹಂಚಿಕೊಂಡು ಸಹಕರಿಸುವಂತೆ ಕೋರಿದೆ. ಉಪ್ಪಾರಳ್ಳಿ ಕೆರೆ, ಜಯನಗರ ಕೆರೆ ಹೀಗೆ ಪಕ್ಷಿಗಳು ಕೂರುವ ಎಲ್ಲಾ ಕಡೆಯೂ ಶೋಧ ನಡೆಸುತ್ತಿದ್ದಾರೆ. ಕಳೆದ ಮೂರ್ನಾಲ್ಕು ದಿನದಿಂದ ನೆಚ್ಚಿನ ಗಿಣಿಗಾಗಿ ಹಗಲು ರಾತ್ರಿ ಎನ್ನದೇ ಕುಟುಂಬ ಹುಡುಕಾಟ ನಡೆಸುತ್ತಿದೆ. ಗಿಣಿಯನ್ನು ನೋಡಿದವರು ಮಾಹಿತಿ ನೀಡುವಂತೆ ತುಮಕೂರು ನಗರದಲ್ಲಿ ಬ್ಯಾನರ್ ಹಾಕಿದ್ದಾರೆ. ಇದನ್ನೂ ಓದಿ: ಜನಾಕ್ರೋಶಕ್ಕೆ ಮಣಿದ ಕೇಂದ್ರ – ಅಕ್ಕಿ, ಮೊಸರು ಸೇರಿದಂತೆ 14 ವಸ್ತುಗಳ ಮೇಲೆ ಜಿಎಸ್‍ಟಿ ವಿನಾಯಿತಿ

    ಈ ನಡುವೆ ಅರ್ಜುನ್-ರಂಜನಾ ದಂಪತಿ ತಂದಿದ್ದ ಜೋಡಿ ಗಿಳಿಗಳ ಪೈಕಿ ಹೆಣ್ಣು ಗಿಳಿ ಮಾತ್ರ ಪಂಜರದಲ್ಲಿ ಒಂಟಿಯಾಗಿದ್ದು ವಿರಹವೇದನೆ ಅನುಭವಿಸುತ್ತಿದೆ. ಹಾಗಾಗಿ ಕೆಲ ಸಾರ್ವಜನಿಕರು ಕೂಡ ಗಿಣಿ ಹುಡುಕಲು ಸಹಕರಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಿಣಿಮರಿಗಳ ಜೊತೆಗೆ ಒಂದು ದಿನ ಕಳೆದ ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’

    ಗಿಣಿಮರಿಗಳ ಜೊತೆಗೆ ಒಂದು ದಿನ ಕಳೆದ ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’

    ಸಿನಿಮಾಗಳಿಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ ಅಷ್ಟೇ ಕುಟುಂಬಕ್ಕೂ ಕ್ವಾಲಿಟಿ ಸಮಯ ಕೊಡುತ್ತಾರೆ ನಟ ಯಶ್. ಕೆಜಿಎಫ್ 2 ಸಿನಿಮಾ ರಿಲೀಸ್ ನಂತರ ಅವರು ಹೆಚ್ಚೆಚ್ಚು ಕುಟುಂಬದೊಂದಿಗೆ ಪ್ರವಾಸ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಗೋವಾದಲ್ಲಿ ರಜಾ ದಿನಗಳನ್ನು ಕಳೆದಿದ್ದ ಯಶ್ ಮತ್ತು ರಾಧಿಕಾ ಪಂಡಿತ್, ಇದೀಗ ಮಕ್ಕಳೊಂದಿಗೆ ಪಕ್ಷಿಧಾಮಕ್ಕೆ ವಿಸಿಟ್ ನೀಡಿದ್ದಾರೆ.

    ಮಂಗಳವಾರ ಇಡೀ ದಿನ ಕನಕಪುರ ಸಮೀಪದ ಪಕ್ಷಿಧಾಮವೊಂದರಲ್ಲಿ ತಮ್ಮ ಮಕ್ಕಳು ಮತ್ತು ಪತ್ನಿಯೊಂದಿಗೆ ಸಮಯ ಕಳೆದಿರುವ ಯಶ್, ಅಲ್ಲಿನ ಪಕ್ಷಿಗಳೊಂದಿಗೆ ಆಟವಾಡಿದ್ದಾರೆ. ಅದರಲ್ಲೂ ಗಿಣಿಗಳ ಜೊತೆ ರಾಧಿಕಾ ಪಂಡಿತ್ ಮತ್ತು ಮಕ್ಕಳಾದ ಐರಾ ಮತ್ತು ಯಥರ್ವ್ ಆಟವಾಡಿದ್ದಾರೆ. ಗಿಣಿಗಳನ್ನು ಮೈಮೇಲೆ ಬಿಟ್ಟುಕೊಂಡು ನಲಿದಿದ್ದಾರೆ. ಇದನ್ನೂ ಓದಿ: ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ವಿಮರ್ಶೆ ಮಾಡಿದ ನಟ ರಮೇಶ್ ಅರವಿಂದ್

    ಒಂದು ಕಡೆ ಕುಟುಂಬಕ್ಕೆ ತಮ್ಮ ಸಮಯವನ್ನು ಯಶ್ ನೀಡುತ್ತಿದ್ದರೆ, ಮತ್ತೊಂದು ಕಡೆ ಹೊಸ ಸಿನಿಮಾಗಾಗಿಯೂ ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕೆಜಿಎಫ್ 2 ನಂತರ ಯಶ್ ಅವರಿಗೆ ಮಾರುಕಟ್ಟೆ ವಿಸ್ತಾರವಾಗಿರುವುದರಿಂದ ಅದೇ ಮಾದರಿಯ ಚಿತ್ರ ಮಾಡುವ ಜವಾಬ್ದಾರಿ ಕೂಡ ಅವರ ಹೆಗಲ ಮೇಲಿದೆ. ಹಾಗಾಗಿ ತುಂಬಾ ತಲೆಕೆಡಿಸಿಕೊಂಡು ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದಾರೆ.

    ಯಶ್ ಅವರ ಮುಂದಿನ ಸಿನಿಮಾವನ್ನು ನರ್ತನ್ ಅವರು ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಕಥೆಯನ್ನು ಫೈನಲ್ ಮಾಡಲಾಗಿದೆ ಎನ್ನುವ ಮಾಹಿತಿ ಇದೆ. ಮೂರು ನಿರ್ಮಾಣ ಸಂಸ್ಥೆಗಳು ಯಶ್ ಸಿನಿಮಾವನ್ನು ತಯಾರಿಸಲು ಮುಂದೆ ಬಂದಿದ್ದು, ಯಾವ ನಿರ್ಮಾಣ ಸಂಸ್ಥೆಯು ಇವರ ಚಿತ್ರಕ್ಕೆ ಬಂಡವಾಳ ಹಾಕಲಿದೆ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್.

  • ಮುದ್ದುಗಿಳಿ ಕಾಣೆಯಾಗಿದೆ ಹುಡುಕಿಕೊಡಿ – ನಗದು ಬಹುಮಾನ ಘೋಷಿಸಿದ ಕುಟುಂಬ

    ಮುದ್ದುಗಿಳಿ ಕಾಣೆಯಾಗಿದೆ ಹುಡುಕಿಕೊಡಿ – ನಗದು ಬಹುಮಾನ ಘೋಷಿಸಿದ ಕುಟುಂಬ

    ಪಾಟ್ನಾ: ಬಿಹಾರದ ಗಯಾ ಜಿಲ್ಲೆಯ ಕುಟುಂಬವೊಂದು ಕಳೆದ 12 ವರ್ಷಗಳಿಂದಲೂ ಮುದ್ದಾಗಿ ಸಾಕಿದ್ದ `ಪೊಪೊ’ ಗಿಳಿಯೊಂದು ಕಾಣೆಯಾಗಿದ್ದು, ಹುಡುಕಿಕೊಟ್ಟವರಿಗೆ ಆಕರ್ಷಕ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ.

    ಇಲ್ಲಿನ ಪಿಪಾರಪತಿ ರಸ್ತೆಯ ನಿವಾಸಿಗಳಾದ ಶ್ಯಾಮ್ ದೇವ್ ಪ್ರಸಾದ್‌ಗುಪ್ತಾ ಹಾಗೂ ಅವರ ಪತ್ನಿ ಸಂಗೀತಾ ಗುಪ್ತಾ ತಮ್ಮ ಗಿಳಿಯನ್ನು ಹುಡುಕಿಕೊಟ್ಟವರಿಗೆ 5,100 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ನಗರದ ಪ್ರಮುಖ ರಸ್ತೆಯ ಗೋಡೆಗಳ ಮೇಲೆ ಹಾಗೂ ಮಾರುಕಟ್ಟೆಗಳಲ್ಲಿ ಪಕ್ಷಿಯ ಫೋಟೋ ಇರುವ ಪೋಸ್ಟರ್‌ಗಳನ್ನು ಹಾಕಲಾಗಿದೆ. ಇದನ್ನೂ ಓದಿ: ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಬ್ರಿಟಿಷ್ ಮಹಿಳೆಗೆ ಮುಂಬೈ ಕ್ಲಬ್‌ನಲ್ಲಿ ಕಿರುಕುಳ

    Pet parrot

    ಪೊಪೊ ಗಿಳಿ ಒಂದು ತಿಂಗಳ ಹಿಂದೆ ಮನೆಯಿಂದ ಹಾರಿಹೋಗಿದೆ. ಅದನ್ನು ಮರಳಿ ಪಡೆಯಲು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ವಿಶೇಷ ಧ್ವನಿಯಲ್ಲಿ ಕೂಗುವುದು, ಹತ್ತಿರದ ಮರಗಳಲ್ಲಿ ಹುಡುಕುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.

    ಕೊನೆಯ ಪ್ರಯತ್ನವಾಗಿ ಪೋಸ್ಟರ್ ಮೂಲಕ ಕರೆ ಕೊಟ್ಟಿದ್ದಾರೆ. ಜೊತೆಗೆ ಫೇಸ್‌ಬುಕ್ ಹಾಗೂ ವಾಟ್ಸಾಪ್ ಮೂಲಕ ಸಂದೇಶ ರವಾನೆ ಮಾಡುವ ಮೂಲಕ ಹುಡುಕಾಟದ ಅಭಿಯಾನ ಶುರು ಮಾಡಿದ್ದಾರೆ. ಇದನ್ನೂ ಓದಿ: ಭಾವಿಪತಿಯನ್ನೇ ಅರೆಸ್ಟ್ ಮಾಡಿದ ಇನ್ಸ್‌ಪೆಕ್ಟರ್

    PARROT

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಗೀತಾ ಗುಪ್ತ ಅವರು, ಸುಮಾರು 12 ವರ್ಷಗಳಿಂದ ಗಿಳಿಯನ್ನು ಸಾಕುಪ್ರಾಣಿಯನ್ನು ಹೊಂದಿದ್ದೆವು. ಏಪ್ರಿಲ್ 5ರಂದು ಪಕ್ಷಿ ಮನೆಯಿಂದ ನಾಪತ್ತೆಯಾಗಿತ್ತು. ನಮ್ಮ ಪಕ್ಷಿಯನ್ನು ಯಾರೇ ತೆಗೆದುಕೊಂಡಿದ್ದರೂ ದಯವಿಟ್ಟು ಅದನ್ನು ನಮಗೆ ಹಿಂತಿರುಗಿಸಿ ಎಂದು ಮನವಿ ಮಾಡಿದ್ದೇವೆ. ಏಕೆಂದರೆ ಅದು ಪಕ್ಷಿ ಮಾತ್ರವಲ್ಲ ನಮ್ಮ ಕುಟುಂಬದ ಸದಸ್ಯ. ಅದಕ್ಕೆ ಪ್ರೀತಿಯಿಂದ ಪೊಪೊ ಎಂದು ಹೆಸರಿಡಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

  • ಮಕ್ಕಳ ಸ್ನೇಹ ಬೆಳೆಸಿದ ಕಾಡು ಗಿಳಿ- ಫೋಟೋ ವೈರಲ್

    ಮಕ್ಕಳ ಸ್ನೇಹ ಬೆಳೆಸಿದ ಕಾಡು ಗಿಳಿ- ಫೋಟೋ ವೈರಲ್

    ಭೋಪಾಲ್: ಪ್ರಾಣಿ, ಪಕ್ಷಿಗಳನ್ನು ಮನುಷ್ಯನು ಎಷ್ಟು ಹಚ್ಚಿಕೊಂಡು ಪ್ರೀತಿ ಮಾಡುತ್ತಾನೋ ಅಷ್ಟೇ ಪ್ರೀತಿಯನ್ನು ಮೂಕ ಪ್ರಾಣಿಗಳು ಮಾನವರ ಮೇಲೆ ತೋರಿಸುತ್ತವೆ. ಇದಕ್ಕೆ ಉತ್ತಮ ಉದಾಹರಣೆ ಎನ್ನುವಂತೆ ಕಾಡು ಗಿಳಿಯೊಂದು ಶಾಲಾ ವಿದ್ಯಾರ್ಥಿಗಳ ಸ್ನೇಹ ಬೆಳೆಸಿದ್ದು ಮಾತ್ರವಲ್ಲದೇ ಅವರೊಡನೆ ಶಾಲೆಗೂ ಈ ಮುದ್ದಾದ ಗಿಳಿ ಹೋಗುತ್ತಿರುವುದು ಮಧ್ಯಪ್ರದೇಶದಲ್ಲಿ ಕಂಡು ಬಂದಿದೆ.

    ಮಧ್ಯಪ್ರದೇಶದ ಕಾಡು ಗಿಳಿಯೊಂದು ಶಾಲಾ ವಿದ್ಯಾರ್ಥಿಗಳೊಂದಿಗೆ ಸ್ನೇಹ ಬೆಳೆಸಿದೆ. ವಿದ್ಯಾರ್ಥಿಗಳು ಶಾಲೆಗೆ ಹೊರಟಾಗ ಅವರೊಡನೆ ಈ ಮುದ್ದಾದ ಗಿಳಿಯೂ ಸಹ ಶಾಲೆಗೆ ಹೋಗುತ್ತಿದೆ. ಈ ಅನನ್ಯ ಸ್ನೇಹಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಗಿಳಿಯು ವಿದ್ಯಾರ್ಥಿಗಳ ಜತೆಗಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ:  ಚೀನಾ+ಪಾಕಿಸ್ತಾನ+ಮಿ.56 ಇಂಚು=ಚೀನಾ ಯೋಧರ ಆಕ್ರಮಣ ಹೆಚ್ಚಳ

    ನಾವು ಶಾಲೆಗೆ ಹೊರಡುವಾಗ ಪ್ರತಿದಿನ ಗಿಳಿ ನಮ್ಮ ಜೊತೆಗೆ ಬರುತ್ತದೆ. ನಮ್ಮ ಹೆಗಲೆ ಮೇಲೆ ಕುಳಿತುಕೊಂಡು ಶಾಲೆಗೆ ಹೋಗುತ್ತದೆ. ಕೆಲವು ಬಾರಿ ನಮ್ಮ ತಲೆಯ ಮೇಲೂ ಕುಳಿತುಕೊಳ್ಳುತ್ತದೆ. ಗಿಳಿಯೊಡನೆ ನಾವು ಹೆಚ್ಚು ಸಂತೋಷವಾಗಿದ್ದೇವೆ ಅದರೊಂದಿಗೆ ಆಡುತ್ತೇವೆ ಹಾಗಾಗಿ ಗಿಳಿ ನಮ್ಮ ಜತೆಯೇ ಇರುತ್ತದೆ ಎಂದು ವಿದ್ಯಾರ್ಥಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಗಿಳಿ ಮತ್ತು ವಿದ್ಯಾರ್ಥಿಗಳ ಈ ಸ್ನೇಹ ನೆಟ್ಟಿಗರಿಗೆ ಹೆಚ್ಚು ಇಷ್ಟವಾಗಿದೆ. ಇದು ಜನ್ಮ ಜನ್ಮದ ಸಂಬಂಧ ಎಂದು ಓರ್ವರು ಹೇಳಿದ್ದಾರೆ. ಇನ್ನೋರ್ವರು ಇವರ ಸ್ನೇಹ ಮೆಚ್ಚಿಗೆಯಾಗುವಂತಿದೆ, ನನಗೆ ಇಷ್ಟವಾಯಿತು ಎಂದು ಹೇಳಿದ್ದಾರೆ. ಗಿಳಿ ವಿದ್ಯಾರ್ಥಿಯ ಭುಜದ ಮೇಲೆ ಕುಳಿತಿರುವ ಫೋಟೋ ತುಂಬಾ ಚೆನ್ನಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಾ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

  • ಸಂಚಾರಿ ವಿಜಯ್ ಹೆಸರಲ್ಲಿ ಗಿಣಿ ದತ್ತು ಪಡೆದ ಬಿಗ್‍ಬಾಸ್ ಸ್ಪರ್ಧಿ ಚಂದ್ರಚೂಡ್

    ಸಂಚಾರಿ ವಿಜಯ್ ಹೆಸರಲ್ಲಿ ಗಿಣಿ ದತ್ತು ಪಡೆದ ಬಿಗ್‍ಬಾಸ್ ಸ್ಪರ್ಧಿ ಚಂದ್ರಚೂಡ್

    ಬೆಂಗಳೂರು: ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಬಳಿಕ ಇದೀಗ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅಕಾಲಿಕ ನಿಧನ ಇಡೀ ಚಿತ್ರರಂಗವನ್ನೇ ದಂಗುಬಡಿಸಿದೆ. ಸಂಚಾರ ನಿಲ್ಲಿಸಿದ ಸಂಚಾರಿಗೆ ಈಗಾಗಲೇ ಎಲ್ಲರೂ ಕಣ್ಣೀರ ವಿದಾಯ ತಿಳಿಸಿದ್ದಾರೆ. ಈ ಬೆನ್ನಲ್ಲೇ ಕನ್ನಡದ ಬಿಗ್ ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಅವರು ವಿಜಯ್ ಹೆಸರಿನಲ್ಲಿ ಮಹಾನ್ ಕಾರ್ಯವೊಂದನ್ನು ಮಾಡಿದ್ದಾರೆ.

    ಹೌದು, ಸಂಚಾರಿ ವಿಜಯ್ ಅವರ ಹೆಸರಿನಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರು ಗಿಣಿಯೊಂದನ್ನು ದತ್ತು ಪಡೆದಿದ್ದಾರೆ. ಈ ಮೂಲಕ ವಿಜಯ್ ಹೆಸರು ಸದಾ ಮನದಲ್ಲಿರುವಂತೆ ಮಾಡಿದ್ದಾರೆ. ದಾವಣಗೆರೆಯ ಇಂದಿರಾ ಪ್ರಿಯದರ್ಶಿನಿ ಪ್ರಾಣಿಸಂಗ್ರಹಾಲಯದಲ್ಲಿ ಗಿಣಿ ದತ್ತು ಪಡೆದಿರುವ ಚಂದ್ರಚೂಡ್, 1 ವರ್ಷಗಳ ಕಾಲ ಅದರ ಆರೈಕೆಯನ್ನು ಮಾಡಲಿದ್ದಾರೆ. ಇದನ್ನೂ ಓದಿ: ದಾಸನ ಮನವಿಗೆ ಸ್ಪಂದನೆ- ಪ್ರಾಣಿಗಳನ್ನು ದತ್ತು ಪಡೆದ ಅಭಿಮಾನಿಗಳು

    ತಾವು ಗಿಣಿ ದತ್ತು ಪಡೆದಿರುವ ವಿಚಾರವನ್ನು ಚಂದ್ರಚೂಡ್ ಅವರು ಸಾಮಾಜಿಕ ಜಾಲತಾನದಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತು ಇನ್ ಸ್ಟಾ ಖಾತೆಯಲ್ಲಿ ಸರ್ಟಿಫಿಕೆಟ್ ಸಹಿತ ಮಾಹಿತಿ ಶೇರ್ ಮಾಡಿಕೊಂಡಿರುವ ಚಂದ್ರಚೂಡ್, ಸಂಚಾರಿ ವಿಜಯ್ ನಿನಗೆ ಗಿಣಿ ಇಷ್ಟ, ಅದಕ್ಕೆ ನಿನ್ ಹೆಸರಲ್ಲೊಂದು ತಗೊಂಡಿದ್ದೀನಿ ನೋಡಿ ಸ್ವಾಮಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಡಿಕೆ ರವಿ ಪಾತ್ರದಲ್ಲಿ ಅಭಿನಯಿಸ್ತಾರಾ ಚಕ್ರವರ್ತಿ ಚಂದ್ರಚೂಡ್?

    ಕೆಲ ದಿನಗಳ ಹಿಂದೆ ಸ್ಯಾಂಡಲ್‍ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ಕೊರೊನಾ ಬಿಕ್ಕಟ್ಟಿನಿಂದ ಜನಸಾಮಾನ್ಯರಿಗೆ ತೊಂದರೆಯಾದಂತೆ ಪ್ರಾಣಿಗಳಿಗೂ ಅಷ್ಟೇ ತೊಂದರೆ ಉಂಟಾಗಿದೆ. ಮೃಗಾಲಯಗಳಲ್ಲಿ ಪ್ರಾಣಿಗಳ ಪೋಷಣೆ ಕಷ್ಟವಾಗಿದೆ. ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆಯುವುದರ ಮೂಲಕ ನೆರವಾಗಿ ಎಂದು ಮನವಿ ಮಾಡಿದ್ದರು. ಇದನ್ನೂ ಓದಿ: ದರ್ಶನ್ ಮಹತ್ಕಾರ್ಯಕ್ಕೆ ಕೈ ಜೋಡಿಸಿದ ಉಪೇಂದ್ರ

    ದರ್ಶನ್ ಮನವಿಯ ಬೆನ್ನಲ್ಲೇ ಅವರ ಅಭಿಮಾನಿಗಳು ಹಾಗೂ ಪ್ರಾಣಿಪ್ರಿಯರು ರಾಜ್ಯದ ಎಲ್ಲಾ ಮೃಗಾಲಯಗಳಲ್ಲಿಯೂ ಪ್ರಾಣಿಗಳನ್ನು ದತ್ತು ಪಡೆಯುವುದರ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಡಿ ಬಾಸ್ ಮನವಿ ನಂತರ ಕೇವಲ ಎರಡು ದಿನದಲ್ಲಿ 25 ಲಕ್ಷ ಮೌಲ್ಯದ ದತ್ತು ಹಣ ಸಂಗ್ರಹವಾಗಿದೆ ಎಂದು ಕರ್ನಾಟಕ ಮೃಗಾಲಯ ಮಾಹಿತಿ ನೀಡಿತ್ತು. ಸೆಲೆಬ್ರಿಟಿಗಳು ಹಾಗೂ ಅವರ ಅಭಿಮಾನಿಗಳು ಸೇರಿದಂತೆ ಹಲವು ಮಂದಿ ಈಗಲೂ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಮಾನವೀಯ ಕಾರ್ಯ ಮುಂದುವರಿದಿದೆ.

  • ಮುಂಬೈನಲ್ಲಿ ಸಿಗುತ್ತದೆ ಅತೀ ದೊಡ್ಡ ಪರೋಟ

    ಮುಂಬೈನಲ್ಲಿ ಸಿಗುತ್ತದೆ ಅತೀ ದೊಡ್ಡ ಪರೋಟ

    ಮುಂಬೈ: ಆಹಾರ ಪದ್ಧತಿಯಲ್ಲಿ ಭಾರತೀಯರು ವೈವಿಧ್ಯ ಆಹಾರವನ್ನು ಸೇವಿಸುತ್ತಾರೆ. ಮುಂಬೈನ ಹಲ್ವಾ ಪರೋಟ ಎಲ್ಲರ ಗಮನವನ್ನು ಸೆಳೆಯುತ್ತಿದೆ.

    ಮುಂಬೈನ ಮಹೀಮ್ ಹಲ್ವಾ ಪರೋಟ ಹೋಟೆಲ್ ಮಾಡಿದ್ದಾರೆ. ದೊಡ್ಡ ದೊಡ್ಡ ಗಾತ್ರದ ಪರೋಟ ಮಾಡುವುದರಿಂದಲೇ ಇವರು ಫೇಮಸ್ ಆಗಿದ್ದಾರೆ. ಇವರು ಪರೋಟವನ್ನು ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    ಈ ವೀಡಿಯೋವನ್ನು 63 ಸಾವಿರ ಜನ ಲೈಕ್ ಮಾಡಿದ್ದು, 2ಸಾವಿರ ಮಂದಿ ಕಮೇಂಟ್ ಮಾಡಿದ್ದಾರೆ. ಹಲ್ವಾ ಪರೋಟ ಮುಂಬೈನಲ್ಲಿ ಸಿಗುವ ಪರೋಟದಲ್ಲಿಯೇ ಅತ್ಯಂತ ದೊಡ್ಡ ಪರೋಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಮೈದಾಹಿಟ್ಟಿನಿಂದ ಪರೋಟವನ್ನು ಮಾಡುತ್ತಾರೆ. ವಿಶೇಷವೆಂದರೆ ಇವರು ಪರೋಟವನ್ನು ತಪ್ಪವನ್ನು ಹಾಕಿ ಚೆನ್ನಾಗಿ ಬೇಯಿಸುತ್ತಾರೆ. ದಾಲ್, ಸಾಂಬಾರ್, ಮಟ್ಟನ್ ಕೈಮಾ ಜೊತೆಗೆ ಕೊಡಲಾಗುತ್ತದೆ. ಮುಂಬೈನ ಹಲ್ವಾ ಪರೋಟ ಎಲ್ಲೆಡೆ ಸುದ್ದಿ ಮಾಡುತ್ತಿದೆ.