Tag: parole

  • 51 ಬಾರಿ ತಿವಿದು ಹತ್ಯೆಗೈದ ಕೊಲೆಗಡುಕನಿಗೆ ಪ್ರತಿ ತಿಂಗಳು ಸಿಗುತ್ತೆ 15 ದಿನ ಪೆರೋಲ್!

    51 ಬಾರಿ ತಿವಿದು ಹತ್ಯೆಗೈದ ಕೊಲೆಗಡುಕನಿಗೆ ಪ್ರತಿ ತಿಂಗಳು ಸಿಗುತ್ತೆ 15 ದಿನ ಪೆರೋಲ್!

    ತಿರುವನಂತಪುರ: ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಸಿಪಿಐ(ಎಂ) ಪಕ್ಷದ ಮುಖಂಡ 3 ವರ್ಷದಲ್ಲಿ ಪ್ರತಿ ತಿಂಗಳು 15 ದಿನಗಳ ಕಾಲ ಪೆರೋಲ್ ಪಡೆದಿರುವ ಮಾಹಿತಿ ಬಹಿರಂಗ ಗೊಂಡಿದೆ.

    ರೆವೊಲ್ಯೂಷನರಿ ಮಾರ್ಕ್ಸಿಸ್ಟ್ ಪಕ್ಷದ (ಆರ್ ಎಂಪಿ) ಪಕ್ಷ ನಾಯಕ ಟಿಪಿ ಚಂದ್ರಶೇಖರನ್ ಎಂಬವರ ಕೊಲೆ ಪ್ರಕರಣದಲ್ಲಿ ಅಪರಾಧಿ ಪಿಕೆ ಕುನ್ಹನಂದನ್ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಆದರೆ 2015 ನಂತರ ಮೂರು ವರ್ಷದಲ್ಲಿ ಪ್ರತಿ ತಿಂಗಳು 15 ದಿನಗಳ ಕಾಲ ಪೆರೋಲ್ ಮೂಲಕ ಬಿಡುಗಡೆಯಾಗುತ್ತಿದ್ದ ವಿಚಾರ ಮಾಹಿತಿ ಹಕ್ಕಿನ ಅಡಿ ಬೆಳಕಿಗೆ ಬಂದಿದೆ.

    ಕೊಲೆಯಾದ ಚಂದ್ರಶೇಖರನ್ ಅವರ ಪತ್ನಿ ಕೆಕೆ ರೀಮಾ ಅವರಿಗೆ ಸಿಕ್ಕಿದ ಮಾಹಿತಿ ಪ್ರಕಾರ ಅಪರಾಧಿಗೆ 2017 ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳು ಹೊರತು ಪಡಿಸಿ 2015 ರಿಂದ 2018ರ ವರೆಗೆ ಪ್ರತಿ ತಿಂಗಳು ಪೆರೋಲ್ ಲಭಿಸಿದೆ.

    ಏನಿದು ಪ್ರಕರಣ: ಕೇರಳ ಸ್ಥಳೀಯ ರಾಜಕೀಯ ಮುಖಂಡರಾಗಿದ್ದ ಟಿಪಿ ಚಂದ್ರಶೇಖರ್ ಅವರನ್ನು 2012 ಮೇ 4 ರಂದು 51 ಬಾರಿ ತಿವಿದು ಕೊಲೆ ಮಾಡಲಾಗಿತ್ತು. ಚಂದ್ರಶೇಖರ್ ಮೊದಲು ಸಿಪಿಐ(ಎಂ) ಪಕ್ಷದಲ್ಲಿ ಗುರುತಿಸಿಕೊಂಡು ಬಳಿಕ ನೂತನ ರೆವೊಲ್ಯೂಷನರಿ ಮಾರ್ಕ್ಸಿಸ್ಟ್ ಪಕ್ಷದ ನಾಯಕತ್ವ ವಹಿಸಿದ್ದರು. ಚಂದ್ರಶೇಖರನ್ ಕೊಲೆ ಬಳಿಕ ಅವರ ಕ್ಷೇತ್ರದಲ್ಲಿ ಆರ್ ಎಂಪಿ ಪಕ್ಷ ಜಯಗಳಿಸಿತ್ತು.

    ಪ್ರಕರಣದ ವಿಚಾರಣೆ ಬಳಿಕ ಸಿಪಿಐ(ಎಂ) ನಾಯಕ ಕೊಲೆಯಲ್ಲಿ ಶಿಕ್ಷೆಗೆ ಗುರಿಯಾಗಿದ್ದ. ಆದರೆ ಚಂದ್ರಶೇಖರನ್ ಕೊಲೆ ನಡೆದು ಆರು ವರ್ಷ ಕಳೆದರೂ ಕೊಲೆ ನಡೆದ ಪ್ರದೇಶದಲ್ಲಿ ನಿರ್ಮಿಸಿಲಾಗಿದ್ದ ಚಂದ್ರಶೇಖರನ್ ಸ್ಮಾರಕ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. 5 ಬಾರಿ ಸ್ಮಾರಕ ನಿರ್ಮಾಣವಾಗಿದ್ದರೂ ಸಿಪಿಐ(ಎಂ) ಕಾರ್ಯಕರ್ತರು ದ್ವಂಸಗೊಳಿಸಿದ್ದಾರೆ. ಪ್ರಸ್ತುತ ನಿರ್ಮಾಣಗೊಂಡಿರುವ ಚಂದ್ರಶೇಖರನ್ ಅವರ ಸ್ಮಾರಕದ ರಕ್ಷಣೆಗೆ ಪೊಲೀಸ್ ರಕ್ಷಣೆಯನ್ನು ಕಲ್ಪಿಸಲಾಗಿದೆ.

    ಪೆರೋಲ್ ದುರ್ಬಳಕೆಯಾಗುತ್ತಿರುವ ವಿಚಾರ ತಿಳಿದು ಈಗ ಚಂದ್ರಶೇಖರನ್ ಪತ್ನಿ ರೀಮಾ ಅವರು ಕೇರಳ ಸರ್ಕಾರದ ವಿರುದ್ಧ ಕಾನೂನು ಸಮರ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ.

  • ಪತ್ನಿ ಕೊಲೆ ಮಾಡಿ ಜೈಲು ಸೇರಿ ಪೆರೋಲ್ ಪಡೆದು ಮತ್ತೊಂದು ಮದ್ವೆಯಾಗಿ 6 ವರ್ಷದ ನಂತ್ರ ಸಿಕ್ಕಿಬಿದ್ದ!

    ಪತ್ನಿ ಕೊಲೆ ಮಾಡಿ ಜೈಲು ಸೇರಿ ಪೆರೋಲ್ ಪಡೆದು ಮತ್ತೊಂದು ಮದ್ವೆಯಾಗಿ 6 ವರ್ಷದ ನಂತ್ರ ಸಿಕ್ಕಿಬಿದ್ದ!

    ಬಳ್ಳಾರಿ: ಆತ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಿ ಪರಾರಿಯಾಗಿದ್ದ ಖೈದಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪೆರೋಲ್ ಮೇಲೆ ಆಚೆಗೆ ಬಂದ ಮೇಲೆ ಮತ್ತೊಂದು ಮದುವೆಯಾಗಿ ಸಿಕ್ಕಿಬಿದ್ದಿದ್ದಾನೆ.

    ಹೆಸರು ಬದಲಿಸಿಕೊಂಡು ಪೊಲೀಸರಿಗೆ ಬರೋಬ್ಬರಿ 7 ವರ್ಷಗಳ ಕಾಲ ಚಳ್ಳೆಹಣ್ಣು ತಿನಿಸಿದ್ದ ಖೈದಿಯನ್ನು ಬಂಧಿಸುವಂತೆ ಹೈಕೋರ್ಟ್ ಛೀಮಾರಿ ಹಾಕಿದ ನಂತರ ಪೊಲೀಸರು ಎದ್ನೋ ಬಿದ್ನೋ ಎಂಬಂತೆ ಕರ್ತವ್ಯ ನಿರ್ವಹಿಸಿ ಖೈದಿಯನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

    ಹಗರಿಬೊಮ್ಮನಹಳ್ಳಿ ತಾಲೂಕಿನ ರಾಯನಾಳ ಗ್ರಾಮದ ಗೋವಿಂದ ನಾಯ್ಕ್ ಎನ್ನುವ 33 ವರ್ಷದ ವ್ಯಕ್ತಿ 2009ರಲ್ಲಿ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಕ್ಕೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿತ್ತು, ಆದರೆ ಖೈದಿ ಗೋವಿಂದನಾಯ್ಕ್ 2011ರಲ್ಲಿ ತಂದೆ ನೋಡುವ ನೆಪದಲ್ಲಿ ಪೆರೋಲ್ ಮೇಲೆ ಆಗಮಿಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದನು.

    ಪರಾರಿಯಾದ ಬಳಿಕ ಆಂಧ್ರ- ತೆಲಗಾಂಣದಲ್ಲಿ ತೆಲೆಮರೆಸಿಕೊಂಡು ಮತ್ತೊಬ್ಬಳನ್ನು ಮದುವೆಯಾಗಿ ಸಂಸಾರ ಮಾಡುತ್ತಿದ್ದ. ಆದರೆ ಖೈದಿಯನ್ನು ಪತ್ತೆ ಮಾಡುವಂತೆ ಹೈಕೋರ್ಟ್ ಛೀಮಾರಿ ಹಾಕಿದ ನಂತರ ಹಗರಿಬೊಮ್ಮನಹಳ್ಳಿ ಪೊಲೀಸ್ ತಂಡ ರಚಿಸಿಕೊಂಡು ಖೈದಿಯನ್ನು ಬಂಧಿಸಿ ಕರೆ ತಂದಿದ್ದಾರೆ.

    ತೆಲಗಾಂಣದಲ್ಲಿ ಸಂತೋಷ ಜಾಧವ ಎನ್ನುವ ಹೆಸರಿನಲ್ಲಿ ಆಧಾರ ಕಾರ್ಡ್, ರೇಷನ್ ಕಾರ್ಡ್ ಮತ್ತು ವೋಟರ್ ಐಡಿ ಮಾಡಿಸಿಕೊಂಡು ಆರಾಮ ಆಗಿ ಜೀವನ ಸಾಗಿಸುತ್ತಿದ್ದ ಗೋವಿಂದ ನಾಯ್ಕ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೊಲೆ ಮಾಡಿ ಜೀವಾವಧಿ ಶಿಕ್ಷೆ ಅನುಭವಿಸುವ ವೇಳೆಯಲ್ಲಿ ಪರಾರಿಯಾಗಿ ಮತ್ತೊಂದು ಮದುವೆ ಮಾಡಿಕೊಂಡು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಇದೀಗ ಮತ್ತೆ ಜೈಲಿಗೆ ಅಟ್ಟಿದ್ದಾರೆ.

  • ಶಶಿಕಲಾಗೆ 5 ದಿನಗಳ ಪೆರೋಲ್, ಇಂದು ತಮಿಳುನಾಡಿಗೆ

    ಶಶಿಕಲಾಗೆ 5 ದಿನಗಳ ಪೆರೋಲ್, ಇಂದು ತಮಿಳುನಾಡಿಗೆ

    ಬೆಂಗಳೂರು: ಎಐಎಡಿಎಂಕೆ ನಾಯಕಿ ವಿ.ಕೆ ಶಶಿಕಲಾಗೆ 5 ದಿನಗಳ ಪೆರೋಲ್ ಸಿಕ್ಕಿದ್ದು ಶುಕ್ರವಾರ ತಮಿಳುನಾಡಿಗೆ ಪ್ರಯಾಣ ಬೆಳೆಸಲಿದ್ದಾರೆ.

    ಈಗಾಗಲೇ ಆಪ್ತ ಟಿಟಿವಿ ದಿನಕರನ್ ಪರಪ್ಪನ ಅಗ್ರಾಹರಕ್ಕೆ ಭೇಟಿ ನೀಡಿದ್ದು, ಶಶಿಕಲಾ ಬಿಡುಗಡೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪೊಲೀಸ್ ಅಧಿಕಾರಿಗಳು ನಡೆಸುತ್ತಿದ್ದಾರೆ.

    ಪತಿ ನಟರಾಜನ್ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ 15 ದಿನಗಳ ತುರ್ತು ಪೆರೋಲ್ ರಜೆ ನೀಡಬೇಕು ಎಂದು ಶಶಿಕಲಾ ಮನವಿ ಸಲ್ಲಿಸಿದ್ದರು. ಎರಡು ದಿನಗಳ ಹಿಂದೆ ಚೆನ್ನೈ ಆಸ್ಪತ್ರೆಯಲ್ಲಿ ನಟರಾಜನ್ ಅವರಿಗೆ ಯಕೃತ್ ಕಸಿ ಮಾಡಲಾಗಿತ್ತು.

    ಜೈಲಾಧಿಕಾರಿಗಳು 15 ದಿನಗಳ ಪೆರೋಲ್ ರಜೆ ನೀಡದೇ ಐದು ದಿನಗಳ ರಜೆಯನ್ನು ಮಂಜೂರು ಮಾಡಿದ್ದಾರೆ. ಇದೇ ವೇಳೆ ಯಾವುದೇ ರಾಜಕೀಯ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಷರತ್ತು ವಿಧಿಸಿಸಲಾಗಿದ್ದು, ಒಂದು ವೇಳೆ ಭಾಗವಹಿಸಿದ್ದು ಬೆಳಕಿಗೆ ಬಂದರೆ ಮುಂದೆ ಪೆರೋಲ್ ನೀಡಲು ಸಾಧ್ಯವಿಲ್ಲ ಎಂದು ಜೈಲಾಧಿಕಾರಿಗಳು ಶಶಿಕಲಾಗೆ ಸೂಚನೆ ನೀಡಿದ್ದಾರೆ.

  • ಪೆರೋಲ್ ಮೇಲೆ ರಿಲೀಸ್‍ಗೆ ಶಶಿಕಲಾ ಪ್ಲಾನ್

    ಪೆರೋಲ್ ಮೇಲೆ ರಿಲೀಸ್‍ಗೆ ಶಶಿಕಲಾ ಪ್ಲಾನ್

    ಬೆಂಗಳೂರು: ಹಾಗೂ ಹೀಗೂ ತನ್ನ ಬಂಟನನ್ನ ಅಧಿಕಾರಕ್ಕೆ ತಂದ ಶಶಿಕಲಾ ಅಲಿಯಾಸ್ ಚಿನ್ನಮ್ಮ ತನ್ನಾಸೆಯಂತೆಯೇ ತನ್ನ ಮುಂದೆಯೇ ಅನಧಿಕೃತವಾಗಿಯಾದ್ರೂ ಸಚಿವ ಸಂಪುಟ ಸಭೆ ನಡೆಸೋ ಪ್ಲಾನ್ ಮಾಡಿದ್ದಾರೆ. ಆದ್ರೆ, ಸಿಎಂ ಆಗೋ ಕನಸು ಅರಳುವ ಮುನ್ನವೇ ಕಮರಿ ಹೋಗಿರೊದ್ರಿಂದ ಚಿನ್ನಮ್ಮ ಮತ್ತೊಂದು ಪ್ಲಾನ್ ಮಾಡಿದ್ದಾರೆ. ಅದು ಬೇರೇನೂ ಅಲ್ಲ ಪೆರೋಲ್ ಪ್ಲಾನ್.

    ಮೊನ್ನೆಯಷ್ಟೇ ಜೈಲು ಸೇರಿರೋ ಶಶಿಕಲಾ ರಾಜಕೀಯ ದಾಳವನ್ನ ಜೈಲಿನಲ್ಲಿಯೇ ಕುಳಿತು ಉರುಳಿಸ್ತಾ ಇದ್ದಾರೆ. ಇನ್ನು ಪಗಡೆಯಾಗಿರೋ ಪಳನಿಸ್ವಾಮಿ ಅಂಡ್ ಗ್ಯಾಂಗ್ ಚಿನ್ನಮ್ಮನ ಮಾತನ್ನ ಕೇಳಿಯೇ ಸರ್ಕಾರ ನಡೆಸೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ ಶಶಿಕಲಾ ಜೈಲಿನಲ್ಲಿಯೇ ಕುಳಿತು ಆಟ ಆಡೋದಕ್ಕೆ ಇಷ್ಟ ಪಟ್ಟಂತಿಲ್ಲ. ಕಣ್ಣ ಮುಂದೆಯೇ ಸರ್ಕಾರ ನಡೆಸಬೇಕು ಅಂದುಕೊಂಡಿರೋದ್ರಿಂದ ಶಶಿಕಲಾ ಹತ್ತು ದಿನ ಕಳೆದ ಬಳಿಕ ಅನಾರೋಗ್ಯದ ನೆಪ ಹೇಳಿ ಜೈಲಾಧಿಕಾರಿಯ ಮುಂದೆ ಪೆರೋಲ್ ಕೇಳುವ ಎಲ್ಲಾ ಲಕ್ಷಣಗಳೂ ಇದೆ.

    ಸಂಜಯ್ ದತ್ತ್ ಪ್ಲಾನ್ ಫಾಲೋ?!: ಸುಪ್ರೀಂ ಕೋರ್ಟ್ ಅನಿರೀಕ್ಷಿತವಾಗಿ ಆದೇಶವನ್ನು ನೀಡ್ತು. ಮೊದ್ಲೇ ನಾನು ಅನಾರೋಗ್ಯದಲ್ಲಿ ಇದ್ದೆ. ತಯಾರಿ ಮಾಡಿಕೊಳ್ಳುವ ಸಲುವಾಗಿ ನಾಲ್ಕು ವಾರ ಗಡವು ಕೇಳಿದ್ರೂ ಕೋರ್ಟ್ ನಿರಾಕರಣೆ ಮಾಡಿದ್ರಿಂದ ಪೆರೋಲ್ ನೀಡುವಂತೆ ಜೈಲಾಧಿಕಾರಿಗೆ ಚಿನ್ನಮ್ಮ ಮನವಿ ಮಾಡಿಕೊಳ್ಳಲಿದ್ದಾರೆ. ಜೈಲಾಧಿಕಾರಿಗಳು ಚೆನ್ನೈನ ಜಿಲ್ಲಾಧಿಕಾರಿಗೆ ಪತ್ರ ಬರೆದು ಶಶಿಕಲಾಗೆ ಪೆರೋಲ್ ನೀಡೋದ್ರಿಂದ ತೊಂದರೆಯಾಗೋಲ್ವಾ ಅಂತ ವರದಿಯನ್ನು ತರಿಸಿಕೊಂಡು ಬಳಿಕ ಶಶಿಕಲಾಗೆ ಪೆರೋಲ್ ನೀಡುವ ಸಾಧ್ಯತೆಗಳಿವೆ. ಈ ಹಿಂದೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಕಾರಣ ಜೈಲು ಪಾಲಾಗಿದ್ದ ಸಂಜಯ್ ದತ್ ಕೂಡ ಇದೇ ಪ್ಲಾನ್ ಮಾಡಿ ಜೈಲಿನಿಂದ ಹೊರಬಂದಿದ್ರು.

    ಜೈಲಿಗೆ ಬರೋವಾಗ ರೋಡ್ ಶೋ ಮಾಡಿ ಬಂದ ಶಶಿಕಲಾ ಪೆರೋಲ್ ಸಿಕ್ರೆ ಈ ಎಲ್ಲಾ ಅವಕಾಶಗಳಿಗೂ ಬ್ರೇಕ್ ಹಾಕಿ ವಿಶೇಷ ವಿಮಾನದಲ್ಲಿ ಚೆನ್ನೈಗೆ ಪ್ರಯಾಣ ಬೆಳಸೋ ಸಾಧ್ಯತೆಗಳಿವೆ. ಇನ್ನೊಂದು ಹತ್ತು ದಿನದ ಒಳಗೆ ಶಶಿಕಲಾ ತನ್ನ ಕಣ್ಣು ಮುಂದೆಯೇ ಅಧಿಕಾರ ನಡೆಸೋ ಎಲ್ಲಾ ಪ್ಲಾನ್ ಮಾಡಿಕೊಂಡಿದ್ದಾರೆ.