ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ 93 ವರ್ಷದ ಅಜ್ಜಿ ನಾಗಮ್ಮ ಅವರನ್ನು ಕಾರಾಗೃಹ ಇಲಾಖೆ ಪರೋಲ್ ಮೇಲೆ ಬಿಡುಗಡೆಗೊಳಿಸಿದೆ.
ಇತ್ತೀಚೆಗೆ ರಾಜ್ಯದ ಉಪಲೋಕಾಯುಕ್ತ ಬಿ.ವೀರಪ್ಪ, ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಜ್ಜಿ ನಾಗಮ್ಮ ಪರಿಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಅಜ್ಜಿಗೆ ಪರೋಲ್ ನೀಡುವ ಕುರಿತು ಪರಿಶೀಲಿಸುವಂತೆ ಸಲಹೆ ನೀಡಿದ್ದರು.
ಈ ಮಧ್ಯೆ ಕಾರಾಗೃಹದ ಮುಖ್ಯ ಅಧೀಕ್ಷಕಿ ಅನಿತಾ ಅವರು ಅಜ್ಜಿಯ ಅನಾರೋಗ್ಯ ಮತ್ತು ಇಳಿವಯಸ್ಸಿನಲ್ಲಿ ಕಾಡುತ್ತಿರುವ ವಯೋಸಹಜ ಕಾಯಿಲೆಗಳ ಕುರಿತು ಇಲಾಖೆಯ ಮೇಲಾಧಿಕಾರಿಗಳಿಗೆ ವರದಿ ನೀಡಿದರು. ಈ ಹಿನ್ನೆಲೆಯಲ್ಲಿ ಈಗ ಮೂರು ತಿಂಗಳ ಅವಧಿಗಾಗಿ ಪರೋಲ್ ನೀಡಿ ಅಜ್ಜಿಯನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ ಎಂದು ಅಧೀಕ್ಷಕಿ ಅನಿತಾ ತಿಳಿಸಿದ್ದಾರೆ.
26 ವರ್ಷಗಳ ಹಿಂದೆ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳ ಶಿಕ್ಷೆ ಪ್ರಕಟಿಸಲಾಗಿತ್ತು. ಕಳೆದೊಂದು ವರ್ಷದಿಂದ ನಾಗಮ್ಮ ಜೈಲು ವಾಸ ಅನಭವಿಸುತ್ತಿದ್ದರು. ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಕಾರಣ ಮಾನವೀಯತೆ ದೃಷ್ಟಿಯಿಂದ ಪರೋಲ್ ಮಂಜೂರು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಜಾಮೀನು ಅರ್ಜಿಯಲ್ಲಿ ರಾಮ್ ರಹೀಮ್, ಜನವರಿ 25 ರಂದು ಮಾಜಿ ಡೇರಾ ಮುಖ್ಯಸ್ಥ ಷಾ ಸತ್ನಾಮ್ ಸಿಂಗ್ ಅವರ ಜನ್ಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಅವಕಾಶಕ್ಕೆ ಕೋರಿದ್ದರು.
ಸಿಂಗ್ ಕೇಕ್ ಕತ್ತರಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ಐದು ವರ್ಷಗಳ ನಂತರ ಈ ರೀತಿ ಆಚರಿಸಲು ಅವಕಾಶ ಸಿಕ್ಕಿದೆ. ಹಾಗಾಗಿ ಕನಿಷ್ಠ ಐದು ಕೇಕ್‌ಗಳನ್ನಾದರೂ ಕತ್ತರಿಸಬೇಕು. ಇದು ಮೊದಲ ಕೇಕ್” ಎಂದು ವೀಡಿಯೋ ಸಿಂಗ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸ್ಪೈಸ್ ಜೆಟ್ ಗಗನ ಸಖಿಯೊಂದಿಗೆ ಅಸಭ್ಯ ವರ್ತನೆ – ಪ್ರಯಾಣಿಕ ಅರೆಸ್ಟ್
ಸಿಂಗ್ ಕತ್ತಿಯಿಂದ ಕೇಕ್ ಕತ್ತರಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಶಸ್ತ್ರಾಸ್ತ್ರಗಳ ಕಾಯಿದೆಯ ಅಡಿಯಲ್ಲಿ ಶಸ್ತ್ರಾಸ್ತ್ರಗಳ ಸಾರ್ವಜನಿಕ ಪ್ರದರ್ಶನ (ಕತ್ತಿಯಿಂದ ಕೇಕ್ ಕತ್ತರಿಸುವುದು) ನಿಷೇಧಿಸಲಾಗಿದೆ.
ಕಳೆದ 14 ತಿಂಗಳಲ್ಲಿ ಇದು ನಾಲ್ಕನೇ ಬಾರಿ ಮತ್ತು ಮೂರು ತಿಂಗಳೊಳಗೆ ಎರಡನೇ ಬಾರಿಗೆ ರಾಮ್ ರಹೀಮ್‌ಗೆ ಪೆರೋಲ್ ನೀಡಲಾಗಿದೆ. ಇದಕ್ಕೂ ಮೊದಲು, ಹರಿಯಾಣ ಪಂಚಾಯತ್ ಚುನಾವಣೆ ಮತ್ತು ಆದಂಪುರ ವಿಧಾನಸಭಾ ಉಪಚುನಾವಣೆಗೆ ಮುಂಚಿತವಾಗಿ ಅವರನ್ನು ಅಕ್ಟೋಬರ್ 2022 ರಲ್ಲಿ 40 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಲಾಯಿತು. ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ಒಂದೇ ವಾರದಲ್ಲಿ ಕರ್ನಾಟಕದ ಟ್ಯಾಬ್ಲೋ ರೆಡಿ
ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 2017ರ ಆಗಸ್ಟ್‌ನಲ್ಲಿ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯ ಆತನಿಗೆ ಶಿಕ್ಷೆ ವಿಧಿಸಿತ್ತು. 2003 ರಲ್ಲಿ ಪಂಜಾಬ್ ಮತ್ತು ಹರಿಯಾಣದ ಹೈಕೋರ್ಟ್ ನೀಡಿದ ಆದೇಶದ ಮೇರೆಗೆ ಸಿಬಿಐ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಈ ಹಿಂದೆ ಕುರುಕ್ಷೇತ್ರದ ಪೊಲೀಸ್ ಠಾಣೆ ಸದರ್‌ನಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಆತ ಓದಿದ್ದು 8ನೇ ಕ್ಲಾಸ್, ಮಾಡಿದ್ದು ಮರ್ಡರ್, ಆದರೆ ಫೇಮಸ್ ಆಗಿದ್ದು ಮಾತ್ರ ಚೆಸ್ ಆಟದಲ್ಲಿ. ಇದನ್ನೇ ಅಡ್ವಾಂಟೇಜ್ ಮಾಡಿಕೊಂಡ ಆರೋಪಿ ಪೆರೋಲ್ (Parole) ಕೇಸ್‌ನಲ್ಲಿ ಪರಾರಿಯಾಗಿ ಬಳಿಕ ತನ್ನದೇ ಸಾವಿನ ಕತೆ ಕಟ್ಟಿ 15 ವರ್ಷಗಳ ಬಳಿಕ ಮತ್ತೆ ಸಿಕ್ಕಿಬಿದ್ದಿದ್ದಾನೆ.
ಕಣ್ಮುಚ್ಕೊಂಡೇ ಚೆಸ್ ಗೇಮ್ ಗೆಲ್ಲುತ್ತಿದ್ದ ಈತನ ಕತೆ ಕೇಳಿದರೆ ಒಂದು ಸಿನಿಮಾನೇ ಮಾಡಬಹುದು. ಜೈಲಿಗೆ (Jail) ಬಂದು, ಚೆಸ್ (Chess) ಕಲಿತು, ಎಸ್ಕೇಪ್ ಆದಮೇಲೂ ಪ್ಲಾನ್ ಹಾಕಿದ್ದು ದೊಡ್ಡ ಬ್ಯುಸಿನೆಸ್‌ಗೆ. ತ್ರಿಬಲ್ ರೋಲ್‌ನಲ್ಲಿ ಲೈಫ್ ಹ್ಯಾಂಡಲ್ ಮಾಡುತ್ತಿದ್ದ ಆರೋಪಿಯ ಹೆಸರು ಸುಹೇಲ್.
ಪೆರೋಲ್ ಕೇಸ್‌ನಲ್ಲಿ ಪರಾರಿಯಾಗಿದ್ದ ಮಲ್ಟಿ ಟ್ಯಾಲೆಂಟೆಡ್ ಆರೋಪಿ ಸುಹೇಲ್‌ನನ್ನು 15 ವರ್ಷಗಳ ಬಳಿಕ ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಆತ ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಎಂತಹ ಕಷ್ಟದ ಲೆವೆಲ್ ಚೆಸ್ ಆಟವಾದರೂ ಗೆದ್ದುಬಿಡುತ್ತಿದ್ದ. ಚಾಲಾಕಿ ಸುಹೇಲ್ 2000ದಲ್ಲಿ ಮಡಿವಾಳ ಲಿಮಿಟ್ಸ್ನಲ್ಲಿ ಮಾಜಿ ಯೋಧರೊಬ್ಬರ ಲಾರಿ ಡ್ರೈವರ್ ಆಗಿದ್ದ. ಆ ಸಂದರ್ಭ ಕೊಲೆ ಮಾಡಿ, ಡಕಾಯತಿ ಮಾಡಿದ್ದ. ಈ ಸಂಬಂಧ ಪೊಲೀಸರು ಐಪಿಸಿ ಸೆಕ್ಷನ್ 396 ಅಡಿ ಅರೆಸ್ಟ್ ಮಾಡಿ ಜೈಲಿಗೆ ತಳ್ಳಿದ್ದರು.
ಆದರೆ ಸುಹೇಲ್ ಜೈಲಿನಲ್ಲಿ ಸುಮ್ಮನೆ ಇರುತ್ತಿರಲಿಲ್ಲ. ಯಾವಾಗಲೂ ತಲೆಗೆ ಕೆಲಸ ಕೊಡುತ್ತಿದ್ದ. 4 ಗೋಡೆಗಳ ಮಧ್ಯೆ ಇದ್ದು, 7 ವರ್ಷ ಚೆಸ್ ಆಟದಲ್ಲಿ ನಿಸ್ಸೀಮನಾಗಿದ್ದ. ಜೈಲಿಗೆ ತಳ್ಳಿದ್ದೇ ತಡ ಚೆಸ್ ಆಟದ ಕಲಿಕೆಗೆ ಮುಂದಾಗಿದ್ದ ಸುಹೇಲ್ ಪುಸ್ತಕ ಓದುವುದು, ಒಬ್ಬನೇ ಕೂತು ಚೆಸ್ ಆಡುವುದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಎದುರಾಳಿ ಇಲ್ಲದಿದ್ದರೂ ಎರಡೂ ಕಡೆ ಆಟವಾಡುತ್ತಿದ್ದ.
2 ವರ್ಷದಲ್ಲಿ ಚೆಸ್ ಆಟ ಕಲಿತು ಪರ್ಫೆಕ್ಟ್ ಆಗಿದ್ದ ಸುಹೇಲ್, ಈತನ ಒಂಟಿ ಆಟ ನೋಡಿಯೇ ಜೈಲರ್‌ಗಳು ಬೆರಗಾಗಿದ್ದರು. ಈತನ ಟ್ಯಾಲೆಂಟ್ ನೋಡಿ ಜೈಲು ಎಸ್‌ಪಿ ಆತನನ್ನು ಚೆಸ್ ಟೂರ್ನಿಗಳಿಗೆ ಕಳಿಸೋಕೆ ಶುರು ಮಾಡಿದ್ದರು. ಅಂದಿನಿಂದ ಆಟ ಶುರು ಮಾಡಿದ್ದವ ಹಿಂದಿರುಗಿ ನೋಡೇ ಇಲ್ಲ. ಸತತ ದೊಡ್ಡ ದೊಡ್ಡ ಟೂರ್ನಮೆಂಟ್‌ಗಳಲ್ಲಿ ಸುಹೇಲ್ ಚೆಸ್ ಆಟ ಗೆದ್ದು ಬರುತ್ತಿದ್ದ. ಇದನ್ನೂ ಓದಿ: ರಾತ್ರಿ ಊಟ ಬಡಿಸಲು ನಿರಾಕರಿಸಿದ್ದಕ್ಕೆ ಪತ್ನಿಯನ್ನು ಕೊಡಲಿಯಿಂದ ಕೊಂದ ಪತಿ
ಸುಹೇಲ್ 2007ರ ವರೆಗೂ ಟೂರ್ನಮೆಂಟ್ ಗೆದ್ದು ತಂದಿದ್ದ. ಅದೇ ನಂಬಿಕೆಯಲ್ಲಿ ಹಿರಿಯ ಅಧಿಕಾರಿಗಳ ಬಳಿ ಪೆರೋಲ್ ಕೇಳಿದ್ದ. ನನ್ನ ಹೆಂಡತಿ, ಮಕ್ಕಳನ್ನು ನೋಡಬೇಕು ಎಂದುಕೊಂಡು ಪೆರೋಲ್ ಪಡೆದು ಹೋದಾತ ವಾಪಾಸ್ ಬರಲೇ ಇಲ್ಲ. ವಾಪಸ್ ಬರುತ್ತಾನೆ ಎಂದು ಪೊಲೀಸರಿಗೆ ಸುಹೇಲ್ ಕೈ ಕೊಟ್ಟಿದ್ದ. ಈ ವೇಳೆ ತನ್ನ ಸ್ನೇಹಿತನ ಸಹಾಯ ಪಡೆದು, ತಾನು ಸತ್ತಿರುವುದಾಗಿ ಸೀನ್ ಕ್ರಿಯೇಟ್ ಮಾಡಿದ್ದ.
ಸುಹೇಲ್ ಎಸ್ಕೇಪ್ ಆದ ಕೆಲ ತಿಂಗಳುಗಳ ನಂತರ ಹೆಣ್ಣೂರು ಲಿಮಿಟ್ಸ್‌ನಲ್ಲಿ ಒಂದು ಶವ ಸಿಕ್ಕಿತ್ತು. ಸುಹೇಲ್‌ಗೆ ಹೋಲಿಕೆಯಾಗುವಂತೆಯೇ ಇದ್ದ ಶವವಾಗಿದ್ದರಿಂದ ಈ ಬಗ್ಗೆ ಪೊಲೀಸರು ಸುಹೇಲ್ ಸ್ನೇಹಿತನನ್ನು ಕೇಳಿದ್ದರು. ಈ ವೇಳೆ ಆತನೂ ಇದು ಸುಹೇಲ್ ಶವ ಎಂದಿದ್ದ. ಅಲ್ಲಿಗೆ ಸುಹೇಲ್ ಸತ್ತುಹೋಗಿದ್ದಾನೆ ಎಂದು ಪೊಲೀಸರು ಭಾವಿಸಿದ್ದರು. ಇದನ್ನೂ ಓದಿ: ವಿವಾಹಿತೆಯೊಂದಿಗೆ ಪ್ರೇಮ- ಹೋಟೆಲ್‌ನಲ್ಲಿ ರಾತ್ರಿ ತನ್ನೊಂದಿಗೆ ಇರಲು ನಿರಾಕರಿಸಿದ್ದಕ್ಕೆ ಕೊಲೆ
ಇದೆಲ್ಲದರ ಬಳಿಕ ಕಳೆದ 15 ವರ್ಷಗಳಿಂದ ಸುಹೇಲ್ ಯಾರಿಗೂ ಗುರುತು ಸಿಗದಂತೆ ಜೀವನ ಸಾಗಿಸಿದ್ದ. ಆದರೆ ಇತ್ತೀಚೆಗೆ ಪೊಲೀಸರು ಚಿಕ್ಕಮಗಳೂರಿನ ಉಪ್ಪಿನಂಗಡಿ ಕಡೆ ಹೋಗಿದ್ದಾಗ ಕೊನೆಗೂ ಪತ್ತೆಯಾಗಿದ್ದಾನೆ. ಇದೀಗ ಚಾಲಾಕಿ ಸುಹೇಲ್‌ನನ್ನು ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.
Live Tv
[brid partner=56869869 player=32851 video=960834 autoplay=true]
ಜೈಪುರ್: ಕೊಲೆ ಮಾಡಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗೆ ರಾಜಸ್ಥಾನ ಹೈಕೋರ್ಟ್ 15 ದಿನಗಳ ಪೆರೋಲ್ (ತಾತ್ಕಾಲಿಕ ಬಿಡುಗಡೆ) ನೀಡಿದೆ. ಈ ಪರೋಲ್ ಒಬ್ಬ ಹೆಣ್ಣಿನ ತಾಯ್ತನಕ್ಕೆ ಕೋರ್ಟ್ ಕೊಟ್ಟ ಗೌರವ ಎನ್ನುವುದು ಮೆಚ್ಚುಗೆಯ ಸಂಗತಿಯಾಗಿದೆ.
ಒಬ್ಬ ಹೆಣ್ಣಿನ ತಾಯ್ತನಕ್ಕೆ ಕೋರ್ಟ್ ಕೊಟ್ಟ ಗೌರವ: ತನ್ನ ಆದೇಶದಲ್ಲಿ ನ್ಯಾಯಾಲಯವು ಧಾರ್ಮಿಕ ಪಠ್ಯಗಳನ್ನು ಉಲ್ಲೇಖಿಸಿದೆ. ವಿವಾಹಿತ ಮಹಿಳೆಗೆ, ಹೆಣ್ತನವನ್ನು ಪೂರ್ಣಗೊಳಿಸಲು ಮಗುವಿಗೆ ಜನ್ಮ ನೀಡುವ ಅಗತ್ಯವಿದೆ ಎಂದು ಗಮನಿಸಿದೆ. ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ಫಜರ್ಂದ್ ಅಲಿ ಅವರಿದ್ದ ದ್ವಿಪೀಠವು ಏಪ್ರಿಲ್ 5 ರಂದು ಅಜ್ಮೀರ್‍ನ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಭಿಲ್ವಾರಾ ಜಿಲ್ಲೆಯ ನಿವಾಸಿ ನಂದ್ ಲಾಲ್ (34)ಗೆ ಪೆರೋಲ್ ನೀಡಿದೆ.
ಅಪರಾಧಿಯ ಹಕ್ಕಿಗೆ ಸಂಬಂಧಿಸಿದಂತೆ, ಹಿಂದೂ ತತ್ತ್ವಶಾಸ್ತ್ರದೊಂದಿಗೆ ಅದೇ ಸಂಪರ್ಕವನ್ನು ಕಲ್ಪಿಸುತ್ತದೆ. ನಾಲ್ಕು ಪುರುಷಾರ್ಥಗಳಿವೆ, ಮಾನವ ಅನ್ವೇಷಣೆಯ ವಸ್ತು, ಇದು ನಾಲ್ಕು ಸರಿಯಾದ ಗುರಿಗಳು ಅಥವಾ ಮಾನವ ಜೀವನದ ಗುರಿಗಳನ್ನು ಉಲ್ಲೇಖಿಸುತ್ತದೆ. ನಾಲ್ಕು ಪುರುಷಾರ್ಥಗಳು ಧರ್ಮ (ಸದಾಚಾರ, ನೈತಿಕ ಮೌಲ್ಯಗಳು) ಅರ್ಥ (ಸಮೃದ್ಧಿ, ಆರ್ಥಿಕ ಮೌಲ್ಯಗಳು), ಕಾಮ (ಆನಂದ, ಪ್ರೀತಿ, ಮಾನಸಿಕ ಮೌಲ್ಯಗಳು) ಮತ್ತು ಮೋಕ್ಷ (ವಿಮೋಚನೆ, ಆಧ್ಯಾತ್ಮಿಕ ಮೌಲ್ಯಗಳು, ಸ್ವಯಂ ವಾಸ್ತವೀಕರಣ) ಎಂದು ನ್ಯಾಯಾಲಯ ಹೇಳಿದೆ.
ಒಬ್ಬ ಅಪರಾಧಿ ಜೈಲಿನಲ್ಲಿ ಬದುಕಲು ನರಳುತ್ತಿರುವಾಗ, ಅವನು ಅವಳ ಮೇಲೆ ತಿಳಿಸಲಾದ ಪುರುಷಾರ್ಥಗಳನ್ನು ನಿರ್ವಹಿಸಲು ವಂಚಿತನಾಗುತ್ತಾನೆ. ಅವುಗಳಲ್ಲಿ ಮೂರು ನಾಲ್ಕು ಪುರುಷಾರ್ಥಗಳು, ಅಂದರೆ ಧರ್ಮ, ಅರ್ಥ ಮತ್ತು ಮೋಕ್ಷಗಳನ್ನು ಏಕಾಂಗಿಯಾಗಿ ನಿರ್ವಹಿಸಬೇಕು. ನಾಲ್ಕನೇ ಪುರುಷಾರ್ಥವನ್ನು ನಿರ್ವಹಿಸಲು, ಅನುಸರಿಸಲು, ಅಪರಾಧಿಯು ಅವನು, ಅವಳು ಮದುವೆಯಾಗಿದ್ದರೆ ಅವನ, ಅವಳ ಸಂಗಾತಿಯ ಮೇಲೆ ಅವಲಂಬಿತನಾಗಿರುತ್ತಾನೆ.
ಅಪರಾಧಿಯ ಸಂಗಾತಿ ತಾಯಿಯಾಗಲು ಬಯಸಿದರೆ, ವಿವಾಹಿತ ಮಹಿಳೆಗೆ ರಾಜ್ಯದ ಜವಾಬ್ದಾರಿಯು ಹೆಚ್ಚು ಮುಖ್ಯವಾಗಿದೆ. ಹೆಣ್ತನವನ್ನು ಪೂರ್ಣಗೊಳಿಸಲು ಮಗುವಿಗೆ ಜನ್ಮ ನೀಡುವ ಅಗತ್ಯವಿದೆ. ಅವಳು ತಾಯಿಯಾದ ಮೇಲೆ ಅವಳ ಹೆಣ್ತನ ಮತ್ತಷ್ಟು ಹೆಚ್ಚುತ್ತದೆ. ಆಕೆಯ ಇಮೇಜ್ ವೈಭವೀಕರಿಸುತ್ತದೆ. ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಹೆಚ್ಚು ಗೌರವವನ್ನು ಪಡೆಯುತ್ತಾರೆ ಎಂದು ನ್ಯಾಯಾಲಯದ ಅಭಿಪ್ರಾಯಪಟ್ಟಿದೆ.
ಬಳ್ಳಾರಿ: ರೋಗಿ ತಾಯಿ ನೋಡಲು ಪೆರೋಲ್ ಮೇಲೆ ಹೊರಬಂದಿದ್ದ ಕೈದಿಯೊಬ್ಬ ಮಗನ ಜೊತೆಗೆ ಪರಾರಿಯಾಗಿರುವ ಘಟನೆ ಬಳ್ಳಾರಿ ತಾಲೂಕಿನ ತೆಕ್ಕಲಕೋಟೆಯಲ್ಲಿ ನಡೆದಿದೆ.
ನಾಗೇಶ ಅಲಿಯಾಸ್ ನಾಗಪ್ಪ ಪರಾರಿಯಾದವ. ತೆಕ್ಕಲಕೋಟೆ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಜಿಲ್ಲಾ ಸತ್ರ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಕೊರಚರ ಪೆರೋಲ್ ರಜೆ ಅವಧಿ ಮುಗಿದರೂ ಸಹ ವಾಪಸ್ ಜೈಲಿಗೆ ಹೋಗದೇ ತಲೆಮರೆಸಿಕೊಂಡಿದ್ದಾನೆ.
ಕೊಲೆ ಪ್ರಕರಣದಲ್ಲಿಈತನನ್ನು ತೆಕ್ಕಲಕೋಟೆ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದರು. ಜಿಲ್ಲಾ ಸತ್ರ ನ್ಯಾಯಾಲಯವು ನಾಗೇಶ್‍ಗೆ ಜೀವಾ ಅವಧಿ ಶಿಕ್ಷೆ ವಿಧಿಸಿತ್ತು. ಸುಮಾರು 8 ವರ್ಷಗಳವರೆಗೆ ಜೈಲಿನಲ್ಲಿ ಸಜಾಬಂದಿಯಾಗಿದ್ದನು. ಜ.20ರಂದು ತನ್ನ ತಾಯಿ ಆರೋಗ್ಯ ವಿಚಾರಣೆ ಸಲುವಾಗಿ 15ದಿನ ಪೆರೋಲ್ ರಜೆಯ ಮೇಲೆ ಹೋಗಿರುತ್ತಾನೆ. ಇದನ್ನೂ ಓದಿ: ಪುಷ್ಪ ಮಾಸ್ ಡೈಲಾಗ್ ಹೇಳಿದ ಡೇವಿಡ್ ವಾರ್ನರ್- Viral Video
ಮಡಿಕೇರಿ: ಕೊರೊನಾ ಕಾರಣದಿಂದ ಜೈಲುಗಳಲ್ಲಿ ಕೈದಿಗಳ ದಟ್ಟಣೆ ಕಡಿಮೆ ಮಾಡುವ ಸುಪ್ರೀಂ ಕೋರ್ಟ್ ಆದೇಶದನ್ವಯ ಮಡಿಕೇರಿ ನಗರದ ಹೋರ ಹೋಲಯದಲ್ಲಿ ಇರುವ ಜಿಲ್ಲಾ ಕಾರಾಗೃಹದಿಂದ 12 ಕೈದಿಗಳನ್ನು 90 ದಿನಗಳ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಜೈಲುಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟು ಕಳೆದ ವರ್ಷದ ಮಾರ್ಚ್‍ನಲ್ಲಿ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿ ಸಮಿತಿಯನ್ನು ರಚಿಸುವಂತೆ ಸೂಚಿಸಿತ್ತು. ಈ ಸಮಿತಿಯಲ್ಲಿ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾ ಪೊಲೀಸ್ ಅಧಿಕಾರಿ, ಜೈಲು ಸೂಪರಿಂಟೆಂಡೆಂಟ್ ಹಾಗೂ ಸರ್ಕಾರಿ ಅಭಿಯೋಜಕರು ಇದ್ದು, ಜೈಲಿನಿಂದ ಬಿಡುಗಡೆ ಆಗಬೇಕಾದ ಕೈದಿಗಳನ್ನು ಈ ಸಮಿತಿ ತೀರ್ಮಾನಿಸುತ್ತದೆ. ಸುಪ್ರೀಂ ನಿರ್ದೇಶನದನ್ವಯ 7 ವರ್ಷಗಳ ಜೈಲು ಶಿಕ್ಷೆಗಿಂತ ಕಡಿಮೆ ಪ್ರಮಾಣದ ಶಿಕ್ಷೆ ವಿಧಿಸಲಾಗುವ ಪ್ರಕರಣಗಳ ಅಡಿಯಲ್ಲಿ ಅಪರಾಧ ಎಸಗಿ ವಿಚಾರಣಾಧೀನ ಕೈದಿಗಳಾಗಿರುವವರನ್ನು ಪೆರೋಲ್‍ಗೆ ಪರಿಗಣಿಸಲಾಗುತ್ತದೆ.
ಈ ಕುರಿತು ಮಾಹಿತಿ ನೀಡಿದ ಮಡಿಕೇರಿ ಜೈಲು ಸೂಪರಿಂಟೆಂಡೆಂಟ್ ರವಿ ಅವರು ಮೂರು ದಿನಗಳ ಹಿಂದೆ ಸಮಿತಿಯು 12 ಕೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಿದೆ. ಪ್ರಸ್ತುತ ಜೈಲಿನಲ್ಲಿ 123 ಖೈದಿಗಳಿದ್ದು ಒಟ್ಟು 270 ಖೈದಿಗಳನ್ನು ಇರಿಸಲು ಸ್ಥಳಾವಕಾಶ ಇದೆ ಎಂದು ಹೇಳಿದರು.
ಚೆನ್ನೈ: ಮಗಳ ಮದುವೆಯ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತೈಗೈದ ಪ್ರಕರಣದಲ್ಲಿ ಜೀವಾವಾಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್‍ಗೆ 30 ದಿನಗಳ ಪೆರೋಲ್ ಮಂಜೂರಾಗಿದ್ದು, ಜೈಲಿನಿಂದ ಬಿಡುಗಡೆಯಾಗಿದ್ದಾಳೆ.
ಕಳೆದ 28 ವರ್ಷದಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ನಳಿನಿ ಶ್ರೀಹರನ್‍ಗೆ ಇದೇ ಮೊದಲ ಬಾರಿಗೆ ಮದ್ರಾಸ್ ಹೈಕೋರ್ಟ್ ದೀರ್ಘ ಕಾಲದ ಪೆರೋಲ್ ನೀಡಿದೆ. ಮಗಳ ಮದುವೆಯ ಸಿದ್ಧತೆಗಾಗಿ 6 ತಿಂಗಳು ಪೆರೋಲ್ ನೀಡುವಂತೆ ನಳಿನಿ ಮನವಿ ಮಾಡಿದ್ದಳು. ಆದರೆ ಕೋರ್ಟ್ ಈ ಮನವಿಯನ್ನು ತಿರಸ್ಕರಿಸಿ ಜುಲೈ 5 ರಂದು ಕೋರ್ಟ್ ಒಂದು ತಿಂಗಳು ಮಾತ್ರ ಪೆರೋಲ್ ಮಂಜೂರು ಮಾಡಿದೆ.
ಪೆರೋಲ್ ಮಂಜೂರು ಮಾಡುವಾಗ, ಮಾಧ್ಯಮಗಳಿಗೆ ಸಂದರ್ಶನ ನೀಡಬಾರದು ಮತ್ತು ಯಾವುದೇ ಮಾಧ್ಯಮಗಳನ್ನು ಭೇಟಿ ಮಾಡಬಾರದು ಎಂದು ಕೋರ್ಟ್ ಷರತ್ತು ವಿಧಿಸಿದೆ.
28 ವರ್ಷದಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿಯನ್ನು ಇದೇ ಮೊದಲ ಬಾರಿಗೆ ದೀರ್ಘಾವದಿ ಪೆರೋಲ್ ಮೇಲೆ ಹೊರಗೆ ಕಳುಹಿಸಲಾಗಿದೆ. ಇದಕ್ಕೂ ಮೊದಲು 2016ರಲ್ಲಿ ಆಕೆಯ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೇವಲ 12 ಗಂಟೆಗಳ ಕಾಲ ಪೆರೋಲ್ ನೀಡಲಾಗಿತ್ತು.
ವೆಲ್ಲೂರು ಜೈಲಿನಿಂದ ಹೊರಬಂದ ನಳಿನಿಯನ್ನು ಆಕೆಯ ಸಂಬಂಧಿಕರು ಬಂದು ಕರೆದುಕೊಂಡು ಹೋಗಿದ್ದಾರೆ. ನಳಿನಿಯ ಮಗಳು ವೆಲ್ಲೂರಿನ ಜೈಲಿನಲ್ಲೇ ಹುಟ್ಟಿದ್ದು, ಆಕೆ ಇಂಗ್ಲೆಂಡಿನಲ್ಲಿ ಬೆಳೆದು ವೈದ್ಯಶಾಸ್ತ್ರ ಓದಿದ್ದಾಳೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿಯನ್ನು 1991 ರಲ್ಲಿ ಬಂಧಿಸಲಾಯಿತು. ಕೋರ್ಟ್ ಈಕೆಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದಾದ ನಂತರ ಮರಣದಂಡನೆ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಯಿತು. 1991 ಮೇ 21 ರಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ತಮಿಳುನಾಡಿನ ಶ್ರೀಪೆರಂಬದೂರು ಬಳಿ ಆತ್ಮಹುತಿ ಬಾಂಬ್ ದಾಳಿ ಮೂಲಕ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ 7 ಮಂದಿ ದೋಷಿಗಳು ಜೀವಾವಾದಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಪಟ್ನಾ : ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರಿಗೆ ನ್ಯಾಯಾಲಯ ಐದು ದಿನ ಪೆರೋಲ್ ಮಂಜೂರು ಮಾಡಿದ್ದು, ಪುತ್ರ ತೇಜ್ ಪಾಲ್ ವಿವಾಹದಲ್ಲಿ ಭಾಗವಹಿಸಲು ಅವಕಾಶ ನೀಡಿದೆ.
ಬಿಹಾರ ಮಾಜಿ ಆರೋಗ್ಯ ಸಚಿರಾಗಿರುವ ಲಾಲು ಪುತ್ರ ತೇಜ್ ಪ್ರತಾಪ್ ಯಾದವ್ ಹಾಗೂ ಎಂಬಿಎ ಪದವೀಧರೆ ಐಶ್ವರ್ಯ ರೈ ಅವರ ನಿಶ್ಚಿತಾರ್ಥ ಏಪ್ರಿಲ್ 18 ರಂದು ನಡೆದಿದ್ದು, ಮೇ 12ರಂದು ಅದ್ಧೂರಿ ಮದುವೆ ಸಮಾರಂಭ ನಡೆಯಲಿದೆ. ತೇಜ್ ಪ್ರತಾಪ್ ಹಾಗೂ ಐಶ್ವರ್ಯ ನಿಶ್ಚಿತಾರ್ಥ ಸಮಾರಂಭ ಲಾಲು ಜೈಲಿನಲ್ಲಿ ಇರುವ ಸಂದರ್ಭದಲ್ಲಿ ನಡೆದಿತ್ತು.
Former #Bihar CM Lalu Prasad Yadav granted parole of five days for son Tej Pratap Yadav's wedding; he is currently admitted in Rajendra Institute of Medical Sciences in Ranchi (File pic) pic.twitter.com/V3aicHrxWO
ಲಾಲು ಪ್ರಸಾದ್ ಯಾದವ್ 1990 ರಿಂದ 1944 ವರೆಗೂ ಮುಖ್ಯಮಂತ್ರಿ ಆಗಿದ್ದರು. ಈ ವೇಳೆ ನಡೆದ ಮೇವು ಹಗರಣದಲ್ಲಿ ಪ್ರಮುಖ ಅಪರಾಧಿಯಾಗಿದ್ದು, ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರೆ. ಆದ್ರೆ ಅನಾರೋಗ್ಯದ ಕಾರಣ ಮಾರ್ಚ್ 29 ರಂದು ಲಾಲು ಪ್ರಸಾದ್ ಯಾದವ್ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮಗನ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಲಾಲು ಪ್ರಸಾದ್ ಪೆರೋಲ್ ಗೆ ಅರ್ಜಿ ಸಲ್ಲಿಸಿದ್ದದರು.
ಸದ್ಯ ಲಾಲು ಅವರು ಮೇ 10 ರಿಂದ ಮೇ 14 ರವರೆಗೆ ಹೊರ ಬರುವ ಸಾಧ್ಯತೆ ಇದೆ. ಮೇ 12 ರಂದು ಪಾಟ್ನಾದಲ್ಲಿ ವಿವಾಹ ಸಮಾರಂಭ ನಡೆಯಲಿದೆ.
ಚಿಕ್ಕಮಗಳೂರು: ಪೆರೋಲ್ ಮೇಲೆ ಹೊರಬಂದು 11 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿಕೊಂಡು ಮರುಮದುವೆಯಾಗಿ ಮೂರು ಮಕ್ಕಳ ತಂದೆಯಾಗಿದ್ದ ಅಪರಾಧಿಯನ್ನು ಇದೀಗ ಬಂಧಿಸುವಲ್ಲಿ ಚಿಕ್ಕಮಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
2007ರಲ್ಲಿ ಹೆಂಡತಿಯನ್ನು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಆರೋಪದಡಿ ಶಿವಮೊಗ್ಗ ಸಾಗರ ಮೂಲದ ಅಬ್ದಲ್ ಘನಿ ಪೆರೋಲ್ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದನು. ಆ ನಂತ್ರ ಆತ ಪೆರೋಲ್ ಮೇಲೆ ಹೊರಬಂದಿದ್ದ. ಬಂದವನು ವಾಪಸ್ ಹೋಗದೆ ತನ್ನ ಇತಿಹಾಸವನ್ನೆಲ್ಲಾ ಬದಲಿಸಿಕೊಂಡು, ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬೈಕಿನ ಲೈಸನ್ಸ್ ಎಲ್ಲವನ್ನೂ ಮಾಡಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಿದ್ದನು. ಆದರೆ ಈತ ತನ್ನ ದ್ವಿಚಕ್ರವನ್ನು ಸ್ನೇಹಿತನಿಗೆ ನೀಡಿದ್ದನು.
ಕುರಿ ಕದ್ದು ಸಿಕ್ಕಿಬಿದ್ದ:
ಕುರಿ ಕದಿಯುವಾಗ ಸಿಕ್ಕಿಬಿದ್ದ ಅಬ್ದುಲ್ ಘನಿ, ದಕ್ಷಿಣ ಕನ್ನಡದ ಕಡಬ ಠಾಣೆ ಮೆಟ್ಟಿಲೇರಿದ್ದ. ಅಲ್ಲಿನ ಪೊಲೀಸರು ಈತನ ಫಿಂಗರ್ ಪ್ರಿಂಟ್ ಅನ್ನು ಪೊಲೀಸ್ ಇಲಾಖೆಯ ಕ್ರೈಂ ವಿಭಾಗದ ಡಾಟಾಸ್‍ಗೆ ಅಪ್‍ಲೋಡ್ ಮಾಡಿದ್ದಾರೆ. 11 ವರ್ಷದ ಹಿಂದೆ ಇದೇ ಅಬ್ದುಲ್ ಘನಿ ನೀಡಿದ್ದ ಫಿಂಗರ್ ಪ್ರಿಂಟ್ ಮ್ಯಾಚ್ ಆಗಿ ಪೂರ್ವಪರ ಕೆದಕಿದಾಗ ಸಿಕ್ಕಿ ಬಿದ್ದಿದ್ದಾನೆ.
ಜಾಮೀನು ಫೋರ್ಜರಿ:
ಈತನ ಮೂಲ ಶಿವಮೊಗ್ಗ. ಪೆರೋಲ್ ಮೇಲೆ ಬಂದವನು ತನ್ನ ಜೀವನದ ಸತ್ಯವನ್ನೆಲ್ಲಾ ಬದಲಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಿದ್ದನು. ಆದ್ರೆ ಇದೀಗ ಈತನನ್ನು ಬಂಧಿಸಿದ್ದು ಮಾತ್ರ ಚಿಕ್ಕಮಗಳೂರಿನ ಪೊಲೀಸರು. ಯಾಕಂದ್ರೆ ಈತ 2007ರಲ್ಲಿ ಪೆರೋಲ್ ಮೇಲೆ ಹೊರಬರುವಾಗ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಜ್ಜಂಪುರ ಹೋಬಳಿಯ ಸೊಲ್ಲಾಪುರ ಗ್ರಾಮ ಪಂಚಾಯತಿಯ ಅಧ್ಯಕ್ಷ ಪೆರೋಲ್ ಗೆ ಜಾಮೀನಾಗಿದ್ದನು. ಆದರೆ ಈತ ಜೈಲಿಗೆ ವಾಪಸ್ ಬರದಾಗ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಜಾಮೀನು ಫೋರ್ಜರಿ ಎಂದು ತಿಳಿದು ಪೊಲೀಸರು ಕೈಚೆಲ್ಲಿದ್ರು. ಆದರೆ ಸದ್ಯ ಅಪರಾಧಿಯ ಫಿಂಗರ್ ಪ್ರಿಂಟ್ ಬರೋಬ್ಬರಿ 11 ವರ್ಷಗಳ ಬಳಿಕ ಈತನನ್ನು ಬಂಧಿಸುವಲ್ಲಿ ಸಹಾಯ ಮಾಡಿದೆ.
ಬೆಂಗಳೂರು: ಪತಿಯ ನಿಧನದ ಹಿನ್ನೆಲೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುವ ಸಲುವಾಗಿ 15 ದಿನಗಳ ಪೆರೋಲ್ ಪಡೆದಿದ್ದ ಎಐಎಂಡಿಕೆ ನಾಯಕಿ ಶಶಿಕಲಾ ಮೂರು ದಿನಗಳ ಮುಂಚೆಯೇ ಜೈಲಿಗೆ ವಾಪಸ್ ಆಗಿದ್ದಾರೆ.
ಇದೇ ಮಾರ್ಚ್ 20 ರ ಮಧ್ಯರಾತ್ರಿ ಶಶಿಕಲಾ ಪತಿ ನಟರಾಜನ್ ಅನಾರೋಗ್ಯದ ಹಿನ್ನೆಲೆ ಮೃತಪಟ್ಟಿದ್ದರು. ಅವರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುವ ಹಿನ್ನೆಲೆ 15 ದಿನಗಳ ತುರ್ತು ಪೆರೋಲ್ ಪಡೆದು ಮಾರ್ಚ್ 21 ರಂದು ತಂಜಾವೂರಿಗೆ ತೆರಳಿದ್ದರು. ಆದರೆ ಇನ್ನೂ 5 ದಿನಗಳ ಪೆರೋಲ್ ಅವಧಿ ಇರುವಂತೆಯೇ ಶಶಿಕಲಾ ಪರಪ್ಪನ ಆಗ್ರಹಾರಕ್ಕೆ ಅಗಮಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮೂಲಗಳ ಪ್ರಕಾರ ಶಶಿಕಲಾ ಕುಟುಂಬದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವೈಮಸ್ಸು ಮೂಡಿದ್ದು, ಈ ಹಿನ್ನೆಲೆಯಲ್ಲಿ ಅವಧಿಗೂ ಮುನ್ನವೇ ಶಶಿಕಲಾ ಜೈಲಿಗೆ ಆಗಮಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಶಶಿಕಲಾ ಜೈಲಿಗೆ ವಾಪಸ್ಸಾಗುವ ವೇಳೆ ತಂಜಾವೂರಿನಿಂದ ನೂರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗು ಬೆಂಬಲಿಗರು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್, ಶಶಿಕಲಾ ಅವರಿಗೆ ಕಳೆದ ಹತ್ತು ದಿನಗಳಿಂದಲೂ ಡೆಂಗ್ಯು ಜ್ವರ ಬಾಧಿಸಿದ್ದು, ಮನೆಯಲ್ಲೆ ವೈದ್ಯರಿಂದ ಅವರಿಗೆ ಚಿಕಿತ್ಸೆ ಕೊಡಿಸಲಾಯಿತು ಎಂದು ತಿಳಿಸಿದರು. ಶಶಿಕಲಾರ ಪತಿಯ ಎಲ್ಲಾ ಅಂತಿಮ ಕಾರ್ಯಗಳು ಶುಕ್ರವಾರವೇ ಮುಗಿದ ಕಾರಣ ಇಂದು ಪರಪ್ಪನ ಅಗ್ರಹಾರಕ್ಕೆ ಮರಳಿದರು ಎಂದರು.