Tag: parmeshwar

  • ಶಾಸಕರಿಗೆ ಡಿನ್ನರ್‌ – ಡಿಕೆಶಿ ಜೊತೆ ಮೂವರು ಸಚಿವರು ಮುನಿಸು?

    ಶಾಸಕರಿಗೆ ಡಿನ್ನರ್‌ – ಡಿಕೆಶಿ ಜೊತೆ ಮೂವರು ಸಚಿವರು ಮುನಿಸು?

    ಬೆಂಗಳೂರು: ಡಿಕೆ ಶಿವಕುಮಾರ್‌ (DK Shivakumar) ಜೊತೆ ಮೂವರು ಸಚಿವರು ಮುನಿಸು ಮುಂದುರಿಸಿದ್ದಾರಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಡಿಕೆಶಿ ಆಯೋಜಿಸಿದ್ದ ಭೋಜನ ಕೂಟದಿಂದ ಈ ಪ್ರಶ್ನೆ ಈಗ ಸೃಷ್ಟಿಯಾಗಿದೆ.

    ಡಿಸಿಎಂ ಡಿ.ಕೆ.ಶಿವಕುಮಾರ್ ಕೆಪಿಸಿಸಿ (KPCC) ಅಧ್ಯಕ್ಷರಾಗಿ 5 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಹೋಟೆಲಿನಲ್ಲಿ ಗುರುವಾರ ರಾತ್ರಿ ಭೋಜನ ಕೂಟ (Dinner) ಆಯೋಜಿಸಿದ್ದರು.

    ಈ ಡಿನ್ನರ್‌ಗೆ ಸಿದ್ದರಾಮಯ್ಯ (Siddaramaiah) ಸೇರಿದಂತೆ ಹಲವು ಸಚಿವರು ಭಾಗಿಯಾಗಿದ್ದರು. ಆದರೆ ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿ ಪವರ್‌ಫುಲ್‌ ಮಂತ್ರಿಗಳಾಗಿರುವ ಮೂವರು ಈ ಸಭೆಗೆ ಗೈರಾಗಿದ್ದರು. ಇದನ್ನೂ ಓದಿ: ಗ್ಯಾರಂಟಿಗಳಿಗೆ SCSP – TSP ಹಣ ಬಳಕೆ – ದಲಿತರ ಎಷ್ಟು ಕೋಟಿ ಹಣ ಬಳಕೆ? ಇಲ್ಲಿದೆ ಲೆಕ್ಕ..

     

    ಡಿಕೆಶಿ ಜೊತೆ ದೊಡ್ಡ ಮಟ್ಟದ ಬಂಡಾಯದ ಬಾವುಟ ಹಾರಿಸಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಡಿನ್ನರ್‌ನಲ್ಲಿ ಭಾಗಿಯಾಗಿದ್ದರು. ಸತೀಶ್ ಜಾರಕಿಹೋಳಿ ಜೊತೆ ಡಿಕೆಶಿ ವಿರುದ್ದ ಬಂಡಾಯ ಸಾರಿದ್ದ ಗೃಹ ಸಚಿವ ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಮಹದೇವಪ್ಪ, ಸಹಕಾರಿ ಸಚಿವ ಕೆಎನ್‌ ರಾಜಣ್ಣ ಆಗಮಿಸರಲಿಲ್ಲ.  ಇದನ್ನೂ ಓದಿ: ನಡು ರಸ್ತೆಯಲ್ಲೇ ಹೊತ್ತಿ ಉರಿದ ಮಹೀಂದ್ರಾ ಥಾರ್

    ಈ ಮೂಲಕ ಭೋಜನ ಕೂಟದಲ್ಲೂ ಡಿಕೆಶಿಯಿಂದ ಮೂವರು ಸಚಿವರು ಅಂತರ ಕಾಯ್ದುಕೊಂಡಿದ್ದಾರೆ. ಕಳೆದ ವಾರ ಡಿಕೆ ಶಿವಕುಮಾರ್‌ ಅವರು ಕೆಎನ್‌ ರಾಜಣ್ಣ ಅವರ ಭೇಟಿಗಾಗಿ ಕಚೇರಿಗೆ ಬಂದಿದ್ದರು. ಆದರೆ ಡಿಕೆಶಿ ಬರುತ್ತಿರುವ ವಿಷಯ ತಿಳಿದಿದ್ದರೂ ರಾಜಣ್ಣ ಅವರು ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಕಚೇರಿಯಿಂದ ಬೇಗನೇ ಹೊರ ನಡೆದಿದ್ದರು.

     

  • ಮೂವರಲ್ಲಿ ಒಬ್ಬರಿಗೆ ಸಿಎಂ ಚಾನ್ಸ್‌ – ಡಿನ್ನರ್ ಮೀಟಿಂಗ್‌ನಲ್ಲಿ ತ್ರಿಮೂರ್ತಿಗಳು ಚರ್ಚಿಸಿದ್ದೇನು?

    ಮೂವರಲ್ಲಿ ಒಬ್ಬರಿಗೆ ಸಿಎಂ ಚಾನ್ಸ್‌ – ಡಿನ್ನರ್ ಮೀಟಿಂಗ್‌ನಲ್ಲಿ ತ್ರಿಮೂರ್ತಿಗಳು ಚರ್ಚಿಸಿದ್ದೇನು?

    ಮೈಸೂರು/ಬೆಂಗಳೂರು: ಡಿನ್ನರ್‌ ನೆಪದಲ್ಲಿ ಚಾಮರಾಜನಗರದಲ್ಲಿರುವ ಸುನಿಲ್‌ ಬೋಸ್‌ ನಿವಾಸದಲ್ಲಿ ಸಿದ್ದರಾಮಯ್ಯ (Siddaramaiah) ಸರ್ಕಾರದ ಪ್ರಭಾವಿ ಸಚಿವರಾದ ಸತೀಶ್‌ ಜಾರಕಿಹೊಳಿ (Satish Jarkiholi), ಪರಮೇಶ್ವರ್‌ (Parmeshwar) ಮತ್ತು ಮಹಾದೇವಪ್ಪ (Mahadevappa) ಮಂಗಳವಾರ ರಾತ್ರಿ ರಹಸ್ಯ ಸಭೆ ನಡೆಸಿದ್ದಾರೆ.

    ಮೂವರು ಅಹಿಂದ ನಾಯಕರು ಸಿಎಂ ಬದಲಾವಣೆಯ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೂ ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಿಸಿದಂತೆಯೇ ಸಭೆ ನಡೆಸಿದ್ದಾರೆ ಎನ್ನುವುದು ಮೂಲಗಳಿಂದ ಪಬ್ಲಿಕ್‌ ಟಿವಿಗೆ ಸಿಕ್ಕಿದೆ. ಇದನ್ನೂ ಓದಿ: 5 ಸ್ಟಾರ್‌ ಹೋಟೆಲ್‌ಗಳಲ್ಲೇ ಇರುವವರು ಜಾತಿ ಆಧಾರದಲ್ಲಿ ಬಡವರನ್ನ ಒಡೆಯುತ್ತಿದ್ದಾರೆ: ರಾಗಾಗೆ ಮೋದಿ ಚಾಟಿ

    ಸಭೆಯಲ್ಲಿ ಏನು ಚರ್ಚೆ ನಡೆದಿದೆ?
    ಹೈಕಮಾಂಡ್‌ (Congress High Command) ಸಿದ್ದರಾಮಯ್ಯ ಅವರನ್ನು ಪಟ್ಟದಿಂದ ಇಳಿಸಿದರೆ ಮೂವರಲ್ಲಿ ಒಬ್ಬರಿಗೆ ಮುಖ್ಯಮಂತ್ರಿಯಾಗುವ ಒಳ್ಳೆಯ ಅವಕಾಶ ಇದೆ. ಯಾರಿಗೆ ಅವಕಾಶ ಸಿಕ್ಕಿದರೂ ಒಗ್ಗಟ್ಟಾಗಿಯೇ ಇರೋಣ.

    ಸಿದ್ದರಾಮಯ್ಯ ಇಳಿಸುವ ಪ್ರಯತ್ನಕ್ಕೆ ಯಾರೇ ಕೈ ಹಾಕಿದರೂ ನಾವು ಮೂವರು ತಡೆಯಬೇಕು. ಅನಿವಾರ್ಯವಾಗಿ ಸಿದ್ದರಾಮಯ್ಯ ಇಳಿಯುವ ಸಂದರ್ಭ ಬಂದರೇ ನಾವು ಒಟ್ಟಾಗಿ ಸಿಎಂ ಸ್ಥಾನಕ್ಕಾಗಿ ಪ್ರಯತ್ನಿಸಬೇಕು. ಈ ಬಾರಿ ನಾವೇ ಕಚ್ಚಾಡಿಕೊಂಡು ಇನ್ನೊಬ್ಬರಿಗೆ ಅವಕಾಶ ಸಿಗಬಾರದು.  ಇದನ್ನೂ ಓದಿ: ಡಿನ್ನರ್ ಮೀಟಿಂಗ್‌ನಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆ ನಡೆದಿಲ್ಲ: ಪರಮೇಶ್ವರ್

    2023ರ ಚುನಾವಣೆಯಲ್ಲಿ ಅಹಿಂದ ಮತಗಳಿಂದ ಕಾಂಗ್ರೆಸ್ ಸಾಕಷ್ಟು ಸ್ಥಾನ ಗೆದ್ದುಕೊಂಡಿದೆ. ಇದೇ ಕಾರ್ಡ್ ಹೈಕಮಾಂಡ್ ಮುಂದೆ ಪ್ಲೇ ಮಾಡಬೇಕು. ಬಹಿರಂಗವಾಗಿ ಯಾರ ಪರವಾಗಿ ಮತ್ತು ಯಾರ ವಿರುದ್ಧವೂ ಹೇಳಿಕೆ ನೀಡುವುದು ಬೇಡ. ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂಬ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

     

  • ಪಾಕ್‌ ಪರ ಘೋಷಣೆ – FSL ವರದಿ ಇನ್ನೂ ಬಂದಿಲ್ಲ, ಬಂದ ನಂತರ ಕ್ರಮ : ಪರಮೇಶ್ವರ್‌

    ಪಾಕ್‌ ಪರ ಘೋಷಣೆ – FSL ವರದಿ ಇನ್ನೂ ಬಂದಿಲ್ಲ, ಬಂದ ನಂತರ ಕ್ರಮ : ಪರಮೇಶ್ವರ್‌

    ಬೆಂಗಳೂರು: ವಿಧಿ ವಿಜ್ಞಾನ ಪ್ರಯೋಗಾಲಯದ (FSL) ವರದಿ ಇನ್ನೂ ಬಂದಿಲ್ಲ. ವರದಿ ಬಂದ ನಂತರ ಕ್ರಮ ಜರುಗಿಸುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್‌ (G Parmeshwar) ಹೇಳಿದ್ದಾರೆ.

    ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ (RameshwaramCafeBlast) ಪ್ರಕರಣ ಸೇರಿದಂತೆ ಪರಮೇಶ್ವರ್‌ ಇಂದು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿದರು.

     

    ಸಭೆಯ ಬಳಿಕ ವಿಧಾನಸೌಧದಲ್ಲಿ ಪಾಕಿಸ್ತಾನ (Pakistan) ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಎಫ್‌ಎಸ್‌ಎಲ್‌ ವರದಿಗೆ ಕಾಯುತ್ತಿದ್ದೇವೆ. ವರದಿಯಲ್ಲಿ ಕೃತ್ಯ ಎಸಗಿದ್ದು ಸಾಬೀತಾದರೇ ಅವರ ವಿರುದ್ಧ ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇವೆ. ವರದಿ ಬರುವವರೆಗೂ ಏನನ್ನು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.  ಇದನ್ನೂ ಓದಿ: ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗಕ್ಕೆ ಪೂಜೆ – ರಥಯಾತ್ರೆಗೆ ಹೈಕೋರ್ಟ್ ಅಸ್ತು

    ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತನಿಖಾ ತಂಡದ ಇನ್ಸ್‌ಪೆಕ್ಟರ್‌, ಎಸಿಪಿ, ಡಿಸಿಪಿ ಸೇರಿದಂತೆ ಎಲ್ಲ ಸದಸ್ಯರು ಹಾಜರಿರಬೇಕೆಂದು ಸೂಚಿಸಲಾಗಿತ್ತು. ಇದನ್ನೂ ಓದಿ: ಒತ್ತುವರಿ ತೆರವು – ಮದ್ಯದ ಉದ್ಯಮಿಯ 400 ಕೋಟಿ ರೂ. ಮೌಲ್ಯದ ಫಾರ್ಮ್‌ಹೌಸ್‌ ಧ್ವಂಸ

     

    ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲೇ ಕಾಂಗ್ರೆಸ್ಸಿನ ನಾಸೀರ್ ಹುಸೇನ್ (Naseer Hussain) ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್‌ ಘೋಷಣೆ ಕೂಗಿದ್ದರು. ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಜೈಕಾರ ಕೂಗಿದ್ದು ವಿವಾದಕ್ಕೆ ಕಾರಣವಾಗಿದೆ.

  • ಗ್ಯಾರಂಟಿಗಳಿಗೆ ಷರತ್ತಲ್ಲ, ಮಾನದಂಡ: ಉಲ್ಟಾ ಹೊಡೆದ ಪರಮೇಶ್ವರ್‌

    ಗ್ಯಾರಂಟಿಗಳಿಗೆ ಷರತ್ತಲ್ಲ, ಮಾನದಂಡ: ಉಲ್ಟಾ ಹೊಡೆದ ಪರಮೇಶ್ವರ್‌

    ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ (Congress Guarantee Scheme) ಷರತ್ತು ವಿಧಿಸಲಾಗುವುದು ಎಂದು ಮಂಗಳವಾರ ಹೇಳಿಕೆ ನೀಡಿದ್ದ ಮಾಜಿ ಡಿಸಿಎಂ ಪರಮೇಶ್ವರ್‌ ( G Parmeshwar) ಇಂದು ಉಲ್ಟಾ ಹೊಡೆದಿದ್ದಾರೆ. ಷರತ್ತು ವಿಧಿಸುವುದಿಲ್ಲ ಕೆಲ ಮಾನದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗ್ಯಾರಂಟಿ ಘೋಷಣೆ ಮಾಡುವ ಮುನ್ನ ಹಣಕಾಸಿನ ಸ್ಥಿತಿಯನ್ನು ವರ್ಕೌಟ್ ಮಾಡಿದ್ದೇವೆ. ಅದಕ್ಕೆ ಬೇಕಾದ ಮಾನದಂಡ ರೂಪಿಸಬೇಕು. ಅ ಮಾನದಂಡ ರೂಪಿಸಿ ಜಾರಿ ಮಾಡುತ್ತೇವೆ ಎಂದು ಪರಮೇಶ್ವರ್ ತಿಳಿಸಿದ್ದಾರೆ. ಇದನ್ನೂ ಓದಿ: ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಐದು ಗ್ಯಾರಂಟಿ ಜಾರಿ : ಸಿದ್ದರಾಮಯ್ಯ

     

    ಈಗಾಗಲೇ ವಿಧವಾ ವೇತನ ಪಡೆಯುತ್ತಿರುವವರಿಗೆ 2 ಸಾವಿರ ಕೊಟ್ಟರೆ ಡಬಲ್ ಆಗುತ್ತದೆ. ಹೀಗೆ ಕೆಲವೊಂದು ವಿಚಾರಗಳಿವೆ. ಇವೆಲ್ಲವನ್ನು ವರ್ಕೌಟ್ ಮಾಡಿ ಜಾರಿ ಮಾಡಲಾಗುವುದು ಎಂದು ವಿವರಿಸಿದರು.

    ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಪರಮೇಶ್ವರ್‌, ಆಯಾ ಇಲಾಖೆಯ ಸಚಿವರು ಕೂತು ಗ್ಯಾರಂಟಿ ಜಾರಿ ಮಾಡುವ ಬಗ್ಗೆ ಕೆಲಸ ಮಾಡುತ್ತೇವೆ. ಹಾಗೆಯೇ ನೀಡಿದರೆ ಸುಮ್ಮನೆ ಎಲ್ಲರೂ ತೆಗೆದುಕೊಳ್ಳುತ್ತಾರೆ. ಗ್ಯಾರಂಟಿಗಳಿಗೆ ಷರತ್ತುಗಳನ್ನು ನಿಗದಿ ಮಾಡಲಾಗುವುದು ಎಂದು ತಿಳಿಸಿದ್ದರು.

  • ಸಿದ್ದರಾಮೋತ್ಸವ ನಡೆಸುವುದು ತಪ್ಪಲ್ಲ: ಜಿ. ಪರಮೇಶ್ವರ್

    ಸಿದ್ದರಾಮೋತ್ಸವ ನಡೆಸುವುದು ತಪ್ಪಲ್ಲ: ಜಿ. ಪರಮೇಶ್ವರ್

    ರಾಮನಗರ: ಸಿದ್ದರಾಮೋತ್ಸವ ನಡೆಸುವುದು ತಪ್ಪಲ್ಲ ಎಂದು ಮಾಜಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

    ಆಗಸ್ಟ್ 12ಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮೋತ್ಸವ ಎಂಬ ಸಮಾವೇಶ ಆಯೋಜಿಸಲಾಗಿದೆ. ಸಿದ್ದರಾಮಯ್ಯ ಅವರ ಅನುಯಾಯಿಗಳು ದಾವಣಗೆರೆಯಲ್ಲಿ ಮೂರು ದಿನಗಳ ಕಾಲ ಈ ಸಮಾವೇಶ ಆಯೋಜಿಸಲಿದ್ದು, ಮುಖ್ಯಮಂತ್ರಿ ಅಭ್ಯರ್ಥಿ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಶೀತಲ ಸಮರ ನಡೆಯುತ್ತಿರುವಾಗಲೇ ಈ ಸಂಭ್ರಮಾಚರಣೆ ನಡೆಯಲಿದೆ. ಈಗಾಗಲೇ 2023ರ ವಿಧಾನಸಭೆ ಚುನಾವಣೆಗೆ ಮುನ್ನವೇ ಸಿಎಂ ಪಟ್ಟಕ್ಕಾಗಿ ಹಗ್ಗ ಜಗ್ಗಾಟ ನಡೆಯುತ್ತಿದೆ. ಈ ನಡುವೆ ಸಿದ್ದರಾಮೋತ್ಸವ ಸಮಾರಂಭಕ್ಕೆ ಡಿ.ಕೆ. ಶಿವಕುಮಾರ್ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಬದಲಾಗುತ್ತಿದೆ ವಾತಾವರಣ- ಉಗ್ರರನ್ನು ಸದೆಬಡೆದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

    ಈ ಕುರಿತಂತೆ ರಾಮನಗರದ ಜಯಪುರ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್ ಅವರು,  ಒಬ್ಬ ವ್ಯಕ್ತಿ 75 ವರ್ಷ ಪೂರೈಸುವುದು ಸುಲಭವಲ್ಲ. ಅವರ ಅಭಿಮಾನಿಗಳು ಅವರ ಹೆಸರಿನಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ, ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಿಎಂ ವಿಚಾರವಾಗಿ ಗೊಂದಲ ಹಿನ್ನೆಲೆ, ಕಾಂಗ್ರೆಸ್‌ನಲ್ಲಿ ಯಾವತ್ತು ಗುಂಪುಗಾರಿಕೆ ಇಲ್ಲ. ಸಿಎಂ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ. ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು. ನಂತರ ಸಿಎಂ ಯಾರು ಎಂದು ಕರೆದು ನಿರ್ಧಾರ ಮಾಡುತ್ತಾರೆ. ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಹೋಗಲಿದೆ. ಕಾಂಗ್ರೆಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ. ಬಿಜೆಪಿಯ ಜನವಿರೋಧಿ ಆಡಳಿತಕ್ಕೆ ಜನ ಬೇಸತ್ತಿದ್ದಾರೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲ್ಲ, ಜನ ಮತ ಹಾಕಲ್ಲ ಎಂದಿದ್ದಾರೆ.

    ಕಾಂಗ್ರೆಸ್‍ನಲ್ಲಿ ದಲಿತ ಸಿಎಂ ವಿಚಾರವಾಗಿ ಚರ್ಚೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಬೇಕು. ಮೊದಲು ಅಧಿಕಾರಕ್ಕೆ ಬರುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಮಹಾರಾಷ್ಟ್ರ ಸ್ಪೀಕರ್ ಆಗಿ ಆಯ್ಕೆಯಾದ ರಾಹುಲ್ ನಾರ್ವೇಕರ್ ಯಾರು?

  • Exclusive: ಪ್ರಮಾಣ ವಚನ ಸಮಾರಂಭಕ್ಕೆ ಪರಮೇಶ್ವರ್ ಗೈರಾಗಿದ್ದು ಯಾಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ!

    Exclusive: ಪ್ರಮಾಣ ವಚನ ಸಮಾರಂಭಕ್ಕೆ ಪರಮೇಶ್ವರ್ ಗೈರಾಗಿದ್ದು ಯಾಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ!

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರದ ಸಂಪುಟ ವಿಸ್ತರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಗೈರಾಗಿದ್ದು ಯಾಕೆ ಎನ್ನುವ ಪ್ರಶ್ನೆಗೆ ಈಗ ಕಾಂಗ್ರೆಸ್ ಉನ್ನತ ಮೂಲಗಳು ಉತ್ತರ ನೀಡಿವೆ.

    ಹೌದು. ಸಿಎಂ ಮತ್ತು ಪರಮೇಶ್ವರ್ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ತೋರಿಸದೇ ಇದ್ದರೂ ಇಬ್ಬರ ನಡುವೆ ಮನಸ್ತಾಪ ಇರುವುದು ರಾಹುಲ್ ಗಾಂಧಿ ಸಮ್ಮುಖದಲ್ಲೇ ಬಹಿರಂಗವಾಗಿತ್ತು ಎನ್ನುವ ವಿಚಾರವನ್ನು ಪಕ್ಷದ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಆಗಸ್ಟ್ 16 ರಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿಗೆ ಬಂದಿದ್ದರು. ಕ್ಯಾಂಟೀನ್ ಉದ್ಘಾಟನೆಯ ಬಳಿಕ ವಿಶೇಷ ವಿಮಾನದಲ್ಲಿ ರಾಹುಲ್ ಗಾಂಧಿ ಜೊತೆ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್, ರಾಜ್ಯ ಉಸ್ತುವಾರಿ ವೇಣುಗೋಪಾಲ್ ದೆಹಲಿಗೆ ಪ್ರಯಾಣಿಸಿದ್ದರು. ಈ ವೇಳೆ ಪರಮೇಶ್ವರ್,ಸಿಎಂ ರಾಹುಲ್ ಗಾಂಧಿ ಮತ್ತು ವೇಣುಗೋಪಾಲ್ ಮುಂದೆ ಏರು ಧ್ವನಿಯಲ್ಲೇ ಜಗಳವಾಡಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.

    ಫ್ಲೈಟ್‍ನಲ್ಲಿ ಎಂಎಲ್‍ಸಿ ಚುನಾವಣೆ ಮತ್ತು ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆದಿದ್ದು ಸಿಎಂ ಮಾತಿಗೆ ‘ಎಸ್‍ಎಸ್’ ಎಂದು ರಾಹುಲ್ ಗಾಂಧಿ ತಲೆ ಅಡಿಸುತ್ತಿದ್ದರು. ಸಿದ್ದರಾಮಯ್ಯ ಮಾತಿಗೆ ಪರಮೇಶ್ವರ್ ಆಕ್ಷೇಪ ವ್ಯಕ್ತಪಡಿಸಿ ತಮ್ಮ ನಿಲುವು ವ್ಯಕ್ತಪಡಿಸಿದ್ದರು. ಆದರೆ ತನ್ನ ಮಾತಿಗೆ ಬೆಲೆ ಸಿಗದ ಹಿನ್ನೆಲೆಯಲ್ಲಿ ಸಿಎಂ ವರಸೆಗೆ ಬೇಸತ್ತು ದೆಹಲಿಯಿಂದ ಪರಮೇಶ್ವರ್ ದಿಢೀರ್ ಎಂಬಂತೆ ಬೆಂಗಳೂರಿಗೆ ವಾಪಸ್ ಆಗಿದ್ದರು. ಅಷ್ಟೇ ಅಲ್ಲದೇ ಈ ವಿಮಾನದಲ್ಲೇ ನಾನು ಯಾವುದೇ ಕಾರಣಕ್ಕೆ ಸಂಪುಟ ವಿಸ್ತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ ಎಂದು ಶಪಥ ಮಾಡಿದ್ದರು. ಇದಾದ ನಂತರ 2 ದಿನಗಳ ಕಾಲ ರಾಹುಲ್ ಗಾಂಧಿ ಹಾಗೂ ವೇಣುಗೋಪಾಲ್ ಕರೆಗೂ ಪರಮೇಶ್ವರ್ ಕ್ಯಾರೇ ಎನ್ನಲಿಲ್ಲ. ಕೊನೆಗೆ ಪರಿಸ್ಥಿತಿ ತಿಳಿಗೊಳಿಸಲು ಇಂಧನ ಸಚಿವ ಡಿಕೆ ಶಿವಕುಮಾರ್ ರಾಜಿ ಸಂಧಾನ ನಡೆಸಿದ್ದಾರೆ.

    ವಿಮಾನದಲ್ಲಿ  ಚರ್ಚೆ ಆಗಿದ್ದೇನು?
    ಪಕ್ಷಕ್ಕೆ ನಿಷ್ಠಾವಂತರಾಗಿರುವ ಜಿ.ಸಿ.ಚಂದ್ರಶೇಖರ್ ಅವರಿಗೆ ಟಿಕೆಟ್ ನೀಡಬೇಕು ಎಂದ ಪರಮೇಶ್ವರ್ ವಾದವನ್ನು ಮಂಡಿಸಿದ್ದರು. ಆದರೆ ಯಾವ ಕಾರಣಕ್ಕೆ ಸಿ.ಎಂ ಇಬ್ರಾಹಿಂ ರನ್ನ ಪರಿಷತ್ತಿಗೆ ಆಯ್ಕೆ ಮಾಡಬೇಕು ಎಂದು ಸಿಎಂ ಮನಮುಟ್ಟುವಂತೆ ವಿವರಿಸಿದ್ದರು. ಸಿಎಂ ವಿವರಣೆ ಕೇಳಿ ರಾಹುಲ್ ಗಾಂಧಿ ಎಸ್ ಎಸ್ ಎಂದು ಸಮ್ಮತಿ ಸೂಚಿಸಿದರು. ಹೀಗಾಗಿ ಪೂರ್ವ ಸಿದ್ಧತೆ ಇಲ್ಲದೆ ವಿಷಯ ಪ್ರಸ್ತಾಪಿಸಿದ ಪರಮೇಶ್ವರ್ ಅವರಿಗೆ ಹಿನ್ನಡೆ ಆಗಿತ್ತು.

    ಸಂಪುಟ ವಿಸ್ತರಣೆಯಲ್ಲಿ ದಲಿತ ಕೊಟಾದಲ್ಲಿ ಮೋಟಮ್ಮರನ್ನು ಸಚಿವರನ್ನಾಗಿ ಮಾಡಬೇಕು ಎಂದ ಪರಮೇಶ್ವರ್ ಹೇಳಿದ್ದರು. ಇದಕ್ಕೆ ಇದಕ್ಕೆ ಸಿಎಂ ಆಕ್ಷೇಪ ವ್ಯಕ್ತಪಡಿಸಿ ಎಡಗೈ ಸಮುದಾಯದ ತಿಮ್ಮಾಪುರ್ ಅವರನ್ನು ಯಾಕೆ ಸಚಿವರನ್ನಾಗಿ ಮಾಡಬೇಕು? ಸದಾಶಿವ ಆಯೋಗದ ವರದಿ ಜಾರಿ ವಿಚಾರದಲ್ಲಿ ಏನು ಮಾಡಬೇಕು? ರಾಜ್ಯದಲ್ಲಿ ಎಡಗೈ ಹಾಗೂ ಬಲಗೈ ಸಮುದಾಯದ ದಲಿತರ ನಡುವಿನ ಭಿನ್ನಾಭಿಪ್ರಾಯ ಹೇಗೆ ಸರಿಪಡಿಸಬೇಕು ಎಂದು ವಿವರವಾಗಿ ತಿಳಿಸಿದರು. ಸಿದ್ದರಾಮಯ್ಯ ಮಾತಿಗೆ ವೇಣುಗೋಪಾಲ್ ಹಾಗೂ ರಾಹುಲ್ ಗಾಂಧಿ ತಲೆದೂಗುತ್ತಿದ್ದರು.

    ತಮ್ಮ ವಾದಕ್ಕೆ ಹಿನ್ನಡೆ ಆಗುತ್ತಿದ್ದಂತೆ ನೀವು ಮೂಲ ಕಾಂಗ್ರೆಸ್ಸಿಗರೊಂದಿಗೆ ಯಾವಾಗಲು ಹೀಗೆ ನಡೆದುಕೊಳ್ಳುತ್ತೀರಾ ಎಂದ ಪರಮೇಶ್ವರ್ ಪ್ರಶ್ನಿಸಿದರು. ಈ ಮಾತು ಕೇಳಿ, ಮೂಲ ಹಾಗೂ ವಲಸಿಗ ಎಂಬ ಭೇದ ಭಾವವನ್ನು ಹುಟ್ಟುಹಾಕಿದ್ದೆ ನೀವು ಎಂದು ಸಿಎಂ ರೇಗಿದ್ದಾರೆ. ಫ್ಲೈಟ್‍ನಲ್ಲೇ ಸಿಎಂ ಹಾಗೂ ಪರಮೇಶ್ವರ್ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಇಬ್ಬರ ಮಾತಿನ ಚಕಮಕಿಯನ್ನು ಹೇಗೆ ನಿಲ್ಲಿಸಬೇಕೆಂದು ತಿಳಿಯದೇ ವೇಣುಗೋಪಾಲ್ ಹಾಗೂ ರಾಹುಲ್ ಗಾಂಧಿ ಮೌನಕ್ಕೆ ಶರಣಾಗಿದ್ದರು.

    ಇಬ್ಬರು ನಾಯಕರು ಮೌನಕ್ಕೆ ಶರಣಾಗಿ, ಸಿಎಂ ಮಾತಿಗೆ ಬೆಲೆ ನೀಡಿದ್ದಕ್ಕೆ ಗರಂ ಆದ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷರ ಮಾತಿಗೆ ಬೆಲೆ ಇಲ್ಲಾ ಎಂದರೆ ನಾನ್ಯಾಕೆ ಆ ಸ್ಥಾನದಲ್ಲಿ ಮುಂದುವರಿಯಬೇಕು. ರಾಜೀನಾಮೆ ಕೊಡುತ್ತೇನೆ ಎಂದ ಹೇಳಿ ಅಸಮಾಧಾನವನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಜೆಡಿಎಸ್ ಬಂಡಾಯ ಶಾಸಕರ ಹೈಕಮಾಂಡ್ ಭೇಟಿ ಸಂದರ್ಭದಲ್ಲಿ ದೆಹಲಿಯಲ್ಲಿ ಇರದೇ ಮುನಿಸಿಕೊಂಡು ಬೆಂಗಳೂರಿಗೆ ವಾಪಾಸ್ ಬಂದಿದ್ದಾರೆ.

    ಈ ಘಟನೆ ನಡೆದ ಎರಡು ದಿನಗಳ ಕಾಲ ರಾಹುಲ್ ಗಾಂಧಿ ಹಾಗೂ ವೇಣುಗೋಪಾಲ್ ಕರೆಯನ್ನು ಪರಮೇಶ್ವರ್ ಸ್ವೀಕರಿಸಲೇ ಇಲ್ಲ. ಕೊನೆಗೆ ಸಚಿವ ಡಿ.ಕೆ.ಶಿವಕುಮಾರ್ ಸಂಧಾನದ ನಂತರ ವೇಣುಗೋಪಾಲ್ ಜೊತೆ ದೂರವಾಣಿಯಲ್ಲಿ ಪರಮೇಶ್ವರ್ ಮಾತನಾಡಿದ್ದಾರೆ. ಸಂಧಾನ ಆಗಿದ್ದರೂ ತಮ್ಮ ನಿಲುವಿಗೆ ಅಂಟಿಕೊಂಡಿದ್ದ ಪರಮೇಶ್ವರ್ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗೈರಾಗಿ ತಮ್ಮ ಅಸಮಾಧಾನವನ್ನು ತೋರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಸಂಪುಟ ವಿಸ್ತರಣೆಗೆ ಗೈರಾಗಿದ್ದು ಯಾಕೆ: ಪ್ರಶ್ನೆಗೆ ಡಿಕೆ ಶಿವಕುಮಾರ್ ಉತ್ತರಿಸಿದ್ರು

    https://www.youtube.com/watch?v=TnWLi3EWhu8

  • ಕಾಂಗ್ರೆಸ್ ಬಿಟ್ಟು ಹೋದವರಿಗೆ ಈ ಗೆಲುವು ತಕ್ಕ ಉತ್ತರ ನೀಡಿದೆ: ಪರಮೇಶ್ವರ್

    ಕಾಂಗ್ರೆಸ್ ಬಿಟ್ಟು ಹೋದವರಿಗೆ ಈ ಗೆಲುವು ತಕ್ಕ ಉತ್ತರ ನೀಡಿದೆ: ಪರಮೇಶ್ವರ್

    ತುಮಕೂರು: ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚನಾವಣೆಯ ಗೆಲುವು ಕಾಂಗ್ರೆಸ್ ಪಕ್ಷಬಿಟ್ಟು ಹೋದವರಿಗೆ ತಕ್ಕ ಉತ್ತರ ನೀಡಿದೆ ಎಂದು ಹೇಳುವ ಮೂಲಕ ಎಸ್‍ಎಂ ಕೃಷ್ಣ ಮತ್ತು ಶ್ರೀನಿವಾಸ್ ಪ್ರಸಾದ್ ಅವರಿಗೆ ಗೃಹ ಸಚಿವ ಪರಮೇಶ್ವರ್ ಟಾಂಗ್ ನೀಡಿದ್ದಾರೆ.

    ಉಪ ಚುನಾವಣೆಯ ಜಯದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಗೆಲವು ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ತಂದಿದ್ದು, ಮುಂದಿನ ಚುನಾವಣೆಗೆ ಹುರುಪು ತಂದಿದೆ. ಕಾಂಗ್ರೆಸ್ ಸರ್ಕಾರದ ಜನಪರ ಕೆಲಸವನ್ನು ನೋಡಿ ಜನ ಮನೀಡಿದ್ದಾರೆ ಎಂದು ತಿಳಿಸಿದರು.

    ಇದೇ ವೇಳೆ ಗೀತಾ ಮಹದೇವ ಪ್ರಸಾದ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುತ್ತೀರಾ ಎನ್ನುವ ಪ್ರಶ್ನೆಗೆ, ಗೀತಾ ಅವರಿಗೆ ಸಚಿವ ಸ್ಥಾನ ನೀಡುವುದು ಸಿಎಂ ಸಿದ್ದರಾಮಯ್ಯನವರಿಗೆ ಬಿಟ್ಟ ವಿಚಾರ ಎಂದು ಉತ್ತರಿಸಿದರು.

    ನಂಜನಗೂಡಿನಲ್ಲಿ ಬಿಜೆಪಿಯ ಶ್ರೀನಿವಾಸ್ ಪ್ರಸಾದ್ ವಿರುದ್ಧ ಕಳಲೆ ಕೇಶವಮೂರ್ತಿ ಜಯಗಳಿಸಿದ್ದರೆ, ಗುಂಡ್ಲುಪೇಟೆಯಲ್ಲಿ ನಿರಂಜನ್ ಕುಮಾರ್ ವಿರುದ್ಧ ಗೀತಾ ಮಹದೇವ್‍ಪ್ರಸಾದ್ ಜಯಗಳಿಸಿದ್ದಾರೆ.

  • ಭೀಕರ ಬರವಿದ್ರೂ ಫಾರಿನ್ ಟೂರ್ ಮೂಡಲ್ಲಿ ಗೃಹಸಚಿವರು & ಟೀಂ

    ಭೀಕರ ಬರವಿದ್ರೂ ಫಾರಿನ್ ಟೂರ್ ಮೂಡಲ್ಲಿ ಗೃಹಸಚಿವರು & ಟೀಂ

    ರಕ್ಷಾಕಟ್ಟೆಬೆಳಗುಳಿ
    ಬೆಂಗಳೂರು: ರಾಜ್ಯದ ಜನ ಭೀಕರ ಬರದಿಂದ ತತ್ತರಿಸುತ್ತಿದ್ದಾರೆ. ಕ್ಷೇತ್ರದ ಜನ ಕುಡಿಯಲು ನೀರಿಲ್ಲದೇ ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಜನರ ಜೊತೆಗಿದ್ದು ಸಮಸ್ಯೆ ಬಗೆ ಹರಿಸಬೇಕಾದವರು ಮಾತ್ರ ಫಾರಿನ್ ಟೂರ್ ಮೂಡ್‍ನಲ್ಲಿದ್ದಾರೆ.

    ಹೌದು. ಬರದ ಸಮಸ್ಯೆಗೆ ಪರಿಹಾರ ಹುಡುಕಬೇಕಿರುವ ಗೃಹಸಚಿವ ಜಿ.ಪರಮೇಶ್ವರ್, ಬೇಸಿಗೆ ಧಗೆಯಿಂದ ಸ್ವಲ್ಪ ಕೂಲ್ ಆಗಿ ಬರಲು ಕಾನ್ಫರೆನ್ಸ್ ಹೆಸರಲ್ಲಿ ತಮ್ಮ ಹಳೇ ಟೀಂನೊಂದಿಗೆ ಫಾರಿನ್ ಟೂರ್ ಹೊರಟಿದ್ದಾರೆ.

    2016ರ ಜೂನ್‍ನಲ್ಲಿ ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಗೃಹ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಸುಭಾಷ್ ಚಂದ್ರ, ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್, ಪ್ರವೀಣ್ ಸೂದ್ ಅವರನ್ನೊಳಗೊಂಡ ಇದೇ ಟಿಂನೊಂದಿಗೆ ಡಾ. ಜಿ ಪರಮೇಶ್ವರ್ 10 ದಿನಗಳ ಕಾಲ ಜರ್ಮನಿ ಸುತ್ತಿ ಬಂದಿದ್ದರು. ಟ್ರಿಪ್ ಮುಗಿದ ಬೆನ್ನಲ್ಲೇ ಪ್ರವೀಣ್ ಸೂದ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಪ್ರಮೋಷನ್ ಪಡೆದರು. ಮತ್ತೆ ಅದೇ ಟೀಂ ಜೊತೆ ಇದೇ ತಿಂಗಳ 7 ರಂದು ಸರ್ಕಾರಿ ಖರ್ಚಿನಲ್ಲಿ ಲಂಡನ್ ಫ್ಲೈಟ್ ಹತ್ತಲು ರೆಡಿಯಾಗಿದ್ದಾರೆ ಪರಮೇಶ್ವರ್.

    ಅವ್ರೇ ಯಾಕೆ?
    ರಾಜ್ಯದಲ್ಲಿ 150ಕ್ಕೂ ಹೆಚ್ಚು ಜನ ಐಪಿಎಸ್ ಅಧಿಕಾರಿಗಳಿರುವಾಗ ಪದೇ ಪದೇ ಡಾ.ಜಿ ಪರಮೆಶ್ವರ್ ತಮ್ಮ ಟೂರ್‍ಗಳಿಗೆ ಇದೇ ಟೀಂ ಅನ್ನು ಆಯ್ಕೆ ಮಾಡ್ತಿರೋದ್ಯಾಕೆ? ಜೊತೆಗೆ ಕೆಲಸ ಮಾಡಲು ಆಗುವುದಿಲ್ಲ ಎಂದು ಸ್ವಯಂ ನಿವೃತ್ತಿ ತಗೆದುಕೊಂಡ ಕೆಂಪಯ್ಯ ಅವರು ಫಾರಿನ್ ಕಾನ್ಫರೆನ್ಸ್ ಗಳ  ಮೇಲೆ ಇಷ್ಟೊಂದು ಒಲವು ತೋರುತ್ತಿರುವ ಬಗ್ಗೆಯೂ ಗೃಹ ಇಲಾಖೆಯಲ್ಲಿ ಈಗ ಪಿಸು ಪಿಸು ಮಾತು ಶುರುವಾಗಿದೆ.

    ಕರ್ತವ್ಯದ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿರುವ ಮಂತ್ರಿಗಳು ಮತ್ತು ಪೊಲೀಸ್ ಅಧಿಕಾರಿಗಳು ವರ್ಷಕ್ಕೆ ಎರಡೂ ಫಾರಿನ್ ಟೂರ್ ಮಾಡುತ್ತಿರುವುದು ಎಷ್ಟು ಸರಿ ಎನ್ನುವುದೇ ನಮ್ಮ ಪ್ರಶ್ನೆ.