Tag: parlour

  • ಮಸಾಜ್‍ಗೆ ಬರ್ತಿದ್ದ ಗ್ರಾಹಕರ ನಗ್ನ ಫೋಟೋ ತೆಗೆದು ಪ್ರೇಮಿಗಳಿಂದ ಬ್ಲಾಕ್‍ಮೇಲ್

    ಮಸಾಜ್‍ಗೆ ಬರ್ತಿದ್ದ ಗ್ರಾಹಕರ ನಗ್ನ ಫೋಟೋ ತೆಗೆದು ಪ್ರೇಮಿಗಳಿಂದ ಬ್ಲಾಕ್‍ಮೇಲ್

    ನವದೆಹಲಿ: ಮಸಾಜ್ ಪಾರ್ಲರ್‌ಗೆ ಬರುತ್ತಿದ್ದ ಗ್ರಾಹಕರ ನಗ್ನ ಫೋಟೋ ತೆಗೆದು ಬ್ಲಾಕ್‍ಮೇಲ್ ಮಾಡಿ ಹಣ ಪೀಕುತ್ತಿದ್ದ ಪ್ರೇಮಿಯನ್ನು ಶುಕ್ರವಾರ ನವದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಶಾದಾಬ್ ಗೌಹರ್ ಹಾಗೂ ಆತನ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಹಕರೊಬ್ಬರು ಬುಧವಾರ ಗೌಹರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಗೌಹರ್ ನನ್ನ ನಗ್ನ ಫೋಟೋ ತೆಗೆದು ಬ್ಲಾಕ್‍ಮೇಲ್ ಮಾಡಿ ನನ್ನಿಂದ 3 ಲಕ್ಷ ರೂ. ಹಣ ಪಡೆದಿದ್ದಾನೆ ಎಂದು ದೂರಿದ್ದಾರೆ.

    ನಾನು ಇಂಟರ್‌ನೆಟ್ ನಲ್ಲಿ ಮಸಾಜ್ ಪಾರ್ಲರ್ ಹುಡುಕುತ್ತಿದ್ದೆ. ಈ ವೇಳೆ ನನಗೆ ಶಾಬಾದ್ ನಂಬರ್ ದೊರೆಯಿತು. ಆತ ಅರ್ಮಾನ್ ಮಲ್ಲಿಕ್ ಎಂದು ತನ್ನನ್ನು ತಾನು ಪರಿಚಯಿಸಿಕೊಂಡಿದ್ದನು. ಸೆಪ್ಟಂಬರ್ 8ರಂದು ಶಾಬಾದ್ ಮಸಾಜ್‍ಗೆಂದು ನನಗೆ ವೈಶಾಲಿಯಲ್ಲಿರುವ ಹೋಟೆಲ್ ರೂಮಿಗೆ ಕರೆದಿದ್ದನು. ಆಗ ಆತ ನನಗೆ ಮಸಾಜ್ ಮಾಡಿ 12 ಸಾವಿರ ಹಣವನ್ನು ಪಡೆದನು. ಮತ್ತೆ ಕೆಲವು ದಿನಗಳ ನಂತರ ಆತ ಅದೇ ಹೋಟೆಲ್ ರೂಮಿನಲ್ಲಿ ಮತ್ತೊಂದು ಮಸಾಜ್ ಸೆಶನ್‍ಗೆ ಕರೆದನು ಎಂದು ಗ್ರಾಹಕ ಹೇಳಿದ್ದಾರೆ.

    ನನ್ನನ್ನು ಹೋಟೆಲ್ ರೂಮಿಗೆ ಕರೆದ ನಂತರ ಶಾಬಾದ್ 20 ನಿಮಿಷ ನನಗೆ ಮಸಾಜ್ ಮಾಡಿದ್ದನು. ನಂತರ ರೂಮಿನ ಬಾಗಿಲು ಬಡಿಯುವ ಶಬ್ಧ ಕೇಳಿಸಿತ್ತು. ಆಗ ಶಾಬಾದ್ ಬಾಗಿಲನ್ನು ತೆಗೆದಾಗ ಇಬ್ಬರು ಯುವತಿಯರು ರೂಮಿಗೆ ಪ್ರವೇಶಿಸಿದ್ದರು. ಇಬ್ಬರು ಯುವತಿಯರು ರೂಮಿಗೆ ಪ್ರವೇಶಿಸಿದ ನಂತರ ಅವರು ನನ್ನ ಬಟ್ಟೆಗಳನ್ನು ತೆಗೆದು, ವ್ಯಾಲೇಟ್ ಹಾಗೂ ಮೊಬೈಲ್ ಕಸಿದುಕೊಂಡರು. ಬಳಿಕ ಶಾಬಾದ್ ನನ್ನ ಮೇಲೆ ಹಲ್ಲೆ ನಡೆಸಿ ನನ್ನನ್ನು ನಿಂದಿಸಿದನು.

    ಯುವತಿಯೊಬ್ಬಳು ತನ್ನ ಬಟ್ಟೆ ಹರಿದುಕೊಂಡು ನನ್ನ ಮೇಲೆ ರೇಪ್ ಕೇಸ್ ಹಾಕಿಸುವುದಾಗಿ ಬೆದರಿಸಿದ್ದಳು. ಮೂವರು ಆರೋಪಿಗಳು ನನ್ನ ನಗ್ನ ಫೋಟೋ ತೆಗೆದು 10 ಲಕ್ಷ ರೂ. ಗಾಗಿ ಬ್ಲಾಕ್‍ಮೇಲ್ ಮಾಡಿದರು. ಆಗ ನನ್ನ ಕಾರಿನಲ್ಲಿದ್ದ 3 ಲಕ್ಷ ರೂ. ಅವರಿಗೆ ನೀಡಿದೆ. ಅವರು ಬಲವಂತವಾಗಿ ನನ್ನಿಂದ 4.5 ಲಕ್ಷ ರೂ.ಯ 4 ಚೆಕ್‍ಗಳಿಗೆ ಸಹಿ ಹಾಕಿಸಿಕೊಂಡರು. ಅಲ್ಲದೇ ಉಳಿದ ಹಣವನ್ನು ಬೇಗ ನೀಡಿಲ್ಲವೆಂದರೆ ನನ್ನ ನಗ್ನ ಫೋಟೋವನ್ನು ನನ್ನ ಕುಟುಂಬದವರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು.

    ಗ್ರಾಹಕ ಸಹಿ ಮಾಡಿದ ಚೆಕ್‍ಗಳ ಪೇಮೆಂಟ್ ಆಗದಂತೆ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಪೊಲೀಸರು ಶಾದಾಬ್ ಹಾಗೂ ಆತನ ಪ್ರಿಯತಮೆಯನ್ನು ಸಾಕೇತ್‍ನ ಮಾಲ್‍ನಲ್ಲಿ ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗ್ಳೂರಿನ ಐಸ್ ಕ್ರೀಂ ಗೆ ರಾಹುಲ್ ಗಾಂಧಿ ಫಿದಾ!

    ಬೆಂಗ್ಳೂರಿನ ಐಸ್ ಕ್ರೀಂ ಗೆ ರಾಹುಲ್ ಗಾಂಧಿ ಫಿದಾ!

    ಬೆಂಗಳೂರು: ಚುನಾವಣಾ ದಿನ ಹತ್ತಿರವಾಗುತ್ತಿದ್ದಂತೆಯೇ ರಾಜ್ಯಕ್ಕೆ ಆಗಮಿಸಿ ಪ್ರಚಾರ ಮಾಡುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಗರದಲ್ಲಿರೋ ದೊರೆಯುವ ಐಸ್ ಕ್ರೀಂ ಗೆ ಫಿದಾ ಆಗಿದ್ದಾರೆ.

    ಚುನಾವಣಾ ಪ್ರಚಾರಕ್ಕೆ ನಗರಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಅವರು, ಶಿವಾನಂದ ಸರ್ಕಲ್ ನಲ್ಲಿರುವ ರಿಚಿ ರಿಚ್ ಗೆ ಭೇಟಿ ನೀಡಿ, ಅಲ್ಲಿ ಐಸ್ ಕ್ರೀಂ ಸವಿದಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್ ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಮತ್ತೊಮ್ಮೆ ಬರುವುದಾಗಿ ತಿಳಿಸಿದ್ದಾರೆ.

    ಟ್ವೀಟ್ ನಲ್ಲೇನಿದೆ?: `ನನ್ನ ಇಷ್ಟು ದಿನದ ಚುನಾವಣಾ ಪ್ರಚಾರದ ಕೊನೆಯ ದಿನವನ್ನು ಕಳೆಯಲು ಬೆಂಗಳೂರಿನಲ್ಲಿರುವ ಐಸ್ ಕ್ರೀಂ ಪಾರ್ಲರ್ ಒಂದು ಒಳ್ಳೆಯ ಜಾಗವಾಗಿತ್ತು. ಇಲ್ಲಿ ದೊರೆಯುವ ಐಸ್ ಕ್ರೀಂ ತುಂಬಾನೇ ಟೇಸ್ಟಿಯಾಗಿದೆ. ಅಲ್ಲದೇ ಇಲ್ಲಿನ ಸಿಬ್ಬಂದಿ ಕೂಡ ಸ್ನೇಹ ಮನೋಭಾವದಿಂದ ಕೂಡಿದ್ದಾರೆ. ಈ ಪಾರ್ಲರ್ ನ ಮಾಲಕನನ್ನು ಮತ್ತು ಕೆಲ ಗ್ರಾಹಕರನ್ನು ಭೇಟಿ ಮಾಡಿ ಮಾಡಿದ್ದು, ಖುಷಿ ನೀಡಿದೆ. ಆದಷ್ಟು ಬೇಗ ಮತ್ತೆ ಇದೇ ಪಾರ್ಲರ್ ಗೆ ಭೇಟಿ ನೀಡುತ್ತೇನೆ ಅಂತ ಬರೆದುಕೊಂಡಿದ್ದಾರೆ.