Tag: Parlimentary session

  • ಇಂದಿನಿಂದ ಸಂಸತ್‌ ಚಳಿಗಾಲದ ಅಧಿವೇಶನ – ಅದಾನಿ ಹಗರಣ, ವಕ್ಫ್, ಮಣಿಪುರ ಗದ್ದಲ ಅಸ್ತ್ರ ಪ್ರಯೋಗ

    ಇಂದಿನಿಂದ ಸಂಸತ್‌ ಚಳಿಗಾಲದ ಅಧಿವೇಶನ – ಅದಾನಿ ಹಗರಣ, ವಕ್ಫ್, ಮಣಿಪುರ ಗದ್ದಲ ಅಸ್ತ್ರ ಪ್ರಯೋಗ

    – ನ.25 ರಿಂದು ಡಿ.20ರ ವರೆಗೆ ಕಲಾಪ,
    – 16 ಮಸೂದೆಗಳ ಮಂಡನೆಗೆ ಪಾರ್ಲಿಮೆಂಟ್ ಸಜ್ಜು

    ನವದೆಹಲಿ: ಇಂದಿನಿಂದ (ನ.25) ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದ್ದು, ಆಡಳಿತಾರೂಡ ಎನ್‌ಡಿಎ (NDA) ಮೈತ್ರಿಕೂಟ ಮತ್ತು ವಿಪಕ್ಷಗಳ ಇಂಡಿಯಾ (INDIA) ಮೈತ್ರಿಕೂಟ ನಡುವೆ ಭಾರೀ ವಾಕ್ಸಮರಕ್ಕೆ ವೇದಿಕೆಯಾಗುವ ಎಲ್ಲಾ ಸಾಧ್ಯತೆಗಳಿವೆ.

    ನ.25ರ ಸೋಮವಾರದಂದು ಸಂಸತ್ತಿನ ಚಳಿಗಾಲ ಅಧಿವೇಶನಕ್ಕೆ (Parliament Winter Session) ಚಾಲನೆ ಸಿಗಲಿದ್ದು, ಡಿ.20ರ ವರೆಗೆ ಕಲಾಪ ನಡೆಯಲಿದೆ. ಅಧಿವೇಶನದಲ್ಲಿ ಒಟ್ಟು 16 ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಇವುಗಳ ಪೈಕಿ ವಕ್ಫ್ (Waqf) ತಿದ್ದುಪಡಿ ಮಸೂದೆ ಮಂಡನೆ ಖಚಿತವಾಗಿದೆ. ಜೊತೆಗೆ ಸರ್ಕಾರದ ಇನ್ನೊಂದು ಪ್ರಮುಖ ಯೋಜನೆಯಾಗಿರುವ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ ಬಗ್ಗೆ ಸರ್ಕಾರ ಯಾವುದೇ ಪ್ರಸ್ತಾಪ ಮಾಡಿಲ್ಲ. ಆದರೆ ಅದನ್ನು ಕೂಡ ಯಾವುದೇ ಹಂತದಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಲಿವ್‌-ಇನ್‌ ಗೆಳತಿಯನ್ನ ಸುಟ್ಟು ಕೊಂದು ಬೆಂಕಿ ಅವಘಡ ಅಂತ ನಾಟಕವಾಡಿದ್ದ ಉದ್ಯಮಿ ಅಂದರ್‌

    ಈ ನಡುವೆ ಸುಗಮ ಕಲಾಪದ ನಿಟ್ಟಿನಲ್ಲಿ ವಿಪಕ್ಷಗಳ ಸಹಕಾರ ಕೋರಲು ಸರ್ಕಾರ ಭಾನುವಾರ ಸರ್ವಪಕ್ಷಗಳ ಸಭೆ ಆಯೋಜಿಸಿತ್ತು. ಈ ವೇಳೆ ವಿಪಕ್ಷಗಳು, ಅಧಿವೇಶನದ ಅವಧಿಯಲ್ಲಿ ಅದಾನಿ ಹಗರಣದ (Adani Scam) ಕುರಿತು ತನಿಖೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿವೆ. ಇದರ ಜೊತೆಗೆ ಇತ್ತೀಚಿನ ಮಣಿಪುರ ಗಲಭೆ ವಿಷಯ, ಆಹಾರ ಧಾನ್ಯಗಳ ಬೆಲೆ ಏರಿಕೆ ಮತ್ತಿತರೆ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ. ಈ ಮೂಲಕ ಮುಂದಿನ ಅಧಿವೇಶನ ಯಾವ ರೀತಿಯಲ್ಲಿ ಸಾಗಬಹುದು ಎನ್ನುವ ಕುರಿತು ಸುಳಿವು ನೀಡಿದಂತಾಗಿದ್ದು, ಮೊದಲ ದಿನದಿಂದಲೇ ಕಲಾಪಗಳು ಕಾವೇರುವ ನಿರೀಕ್ಷೆಯಿದೆ.

    ಅದಾನಿ ವಿಷಯವೇ ಪ್ರಮುಖ ಅಸ್ತ್ರ:
    ಭಾರತದ ನಂ.1 ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಅವರು ತಮ್ಮ ಕಂಪನಿ ಉತ್ಪಾದಿಸಿದ ಸೌರ ವಿದ್ಯುತ್ ಮಾರಾಟಕ್ಕೆ ಕೆಲ ರಾಜ್ಯ ಸರ್ಕಾರಗಳ ಅಧಿಕಾರಿಗಳಿಗೆ 2,100 ಕೋಟಿ ರೂ. ಲಂಚ ನೀಡಿದ್ದರು ಎಂದು ಅಮೆರಿಕದಲ್ಲಿ ದೋಷಾರೋಪ ಹೊರಿಸಲಾಗಿದೆ. ಹೀಗಾಗಿ ಅದಾನಿಗೆ ಪ್ರಧಾನಿ ನರೇಂದ್ರ ಮೋದಿಯವರು ಶ್ರೀರಕ್ಷೆಯಾಗಿದ್ದಾರೆ ಎಂದು ಆರೋಪಿಸಿ ವಿಪಕ್ಷಗಳು ಗದ್ದಲ ಎಬ್ಬಿಸುವ ಸಂಭವವಿದೆ.

    ಮಂಡನೆ/ಅಂಗೀಕಾರ ಆಗಲಿರುವ ಮಸೂದೆ:
    1. ವಕ್ಫ್ ತಿದ್ದುಪಡಿ ಮಸೂದೆ
    2. ಕರಾವಳಿ ನೌಕಾಯಾನ ಮಸೂದೆ
    3. ಒಂದು ದೇಶ ಒಂದು ಚುನಾವಣೆ
    4. ಭಾರತೀಯ ವಾಯುಯಾನ ಮಸೂದೆ
    5. ಮರ್ಚಂಟ್ ಶಿಪ್ಪಿಂಗ್ ಮಸೂದೆ
    6. ಸಹಕಾರ ವಿವಿ ಸ್ಥಾಪನೆ ಮಸೂದೆ
    7. ಪಂಜಾಬ್ ನ್ಯಾಯಾಲಯಗಳ ಮಸೂದೆ
    8. ರೈಲ್ವೆ ತಿದ್ದುಪಡಿ ಮಸೂದೆ
    9. ಬ್ಯಾಂಕಿಂಗ್ ತಿದ್ದುಪಡಿ ಮಸೂದೆ ಇದನ್ನೂ ಓದಿ: ಗಲ್ಫ್, ಸಿಂಗಾಪುರಕ್ಕೆ ಹೋಲಿಸಿದರೆ ಭಾರತದಲ್ಲಿ ಚಿನ್ನ ಅಗ್ಗವಾಗಿರಲು ಕಾರಣವೇನು?

  • ಗುರುವಾರ ದೆಹಲಿಯಲ್ಲಿ ಮೋದಿ, ರಾಜ್ಯದಲ್ಲಿ ಅಮಿತ್ ಶಾ ಉಪವಾಸ ಸತ್ಯಾಗ್ರಹ

    ಗುರುವಾರ ದೆಹಲಿಯಲ್ಲಿ ಮೋದಿ, ರಾಜ್ಯದಲ್ಲಿ ಅಮಿತ್ ಶಾ ಉಪವಾಸ ಸತ್ಯಾಗ್ರಹ

    ನವದೆಹಲಿ: ಈ ಬಾರಿ ಸಂಸತ್ ಅಧಿವೇಶನದಲ್ಲಿ ಪ್ರತಿಪಕ್ಷಗಳು ಗದ್ದಲ ಕೋಲಾಹಲ ನಡೆಸಿದ್ದರಿಂದ ಸಂಸತ್ತಿನ 23 ದಿನಗಳ ಕಲಾಪ ಹಾಳಾಗಿತ್ತು. ಇದನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಸಂಸದರ ಜೊತೆ ಗುರುವಾರ ಒಂದು ದಿನ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧಾರ ಮಾಡಿದ್ದಾರೆ.

    ದೇಶದಲ್ಲಿ ಶಾಂತಿ, ಕೋಮು ಸೌಹಾರ್ದತೆಯನ್ನು ಕಾಪಾಡುವಂತೆ ಆಗ್ರಹಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು, ಪಕ್ಷದ ಸಂಸದರ ಜೊತೆ ಸೋಮವಾರ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಇದಕ್ಕೆ ತಿರುಗೇಟು ಎನ್ನುವಂತೆ ಬಿಜೆಪಿಯೂ ಉಪವಾಸ ನಡೆಸಲು ಮುಂದಾಗಿದೆ.

    ಉಪವಾಸದ ದಿನ ತನ್ನ ದೈನಂದಿನ ಸರ್ಕಾರದ ಕೆಲಸಗಳನ್ನು ಎಂದಿನಂತೆ ಮೋದಿ ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ನಡೆಸುವುದರೊಂದಿಗೆ ಮೋದಿ ಸತ್ಯಾಗ್ರಹಕ್ಕೆ ಸಾಥ್ ನೀಡಲಿದ್ದಾರೆ.

    ಅಮಿತ್ ಶಾ ಗುರುವಾರ ಮತ್ತು ಶುಕ್ರವಾರ ಹುಬ್ಬಳ್ಳಿ, ಧಾರವಾಡ, ಗದಗ, ಬಾಗಲಕೋಟೆ, ಬೆಳಗಾವಿಯಲ್ಲಿ ಪ್ರವಾಸ ಮಾಡಲಿದ್ದಾರೆ. ಗುರುವಾರ ಬೆಳಗ್ಗೆ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕಾಂಗ್ರೆಸ್ ಸರ್ಕಾರದ ವಿಭಜನಕಾರಿ ರಾಜಕೀಯ ಖಂಡಿಸಿ ಆಯೋಜನೆಗೊಂಡಿರುವ ಧರಣಿ ಸತ್ಯಾಗ್ರಹದಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ.

    ಸಂಸತ್ ಬಜೆಟ್‍ನ ಈ ಬಾರಿಯ 23 ದಿನಗಳ ಕಲಾಪ ಅನುತ್ಪಾದಕವಾಗಿತ್ತು. ಇದಕ್ಕೆ ಕಾಂಗ್ರೆಸ್ ಕಾರಣ ಅಂತ ಬಿಜೆಪಿ ಕಿಡಿಕಾರಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದೆ. ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಮತ್ತು ಎನ್‍ಡಿಎ ಸಂಸದರು ದೇಶಾದ್ಯಂತ ನಿರಶನ ಕೈಗೊಳ್ಳಲಿದ್ದಾರೆ. ಪ್ರತಿಪಕ್ಷಗಳ ವಿರುದ್ಧ ಪ್ರಧಾನಿಯೊಬ್ಬರು ಉಪವಾಸ ಕೂರುತ್ತಿರುವುದು ಇದೇ ಮೊದಲಾಗಿದೆ.

    ಈ ಬಾರಿ ಬಜೆಟ್ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆಗಿಂತ ರಫೇಲ್ ವಿಮಾನ ಡೀಲ್, ಪಿಎನ್‍ಬಿ ಬ್ಯಾಂಕ್‍ಗೆ ದೋಖಾ ಮಾಡಿದ್ದ ನೀರವ್ ಮೋದಿ-ಮೆಹುಲ್ ಚೋಕ್ಸಿ, ಎಸ್‍ಸಿ,ಎಸ್‍ಟಿ ಕಾಯ್ದೆ, ಆಂಧ್ರಕ್ಕಾಗಿ ವಿಶೇಷ ಸ್ಥಾನಮಾನ, ಕಾವೇರಿ ಜಲಮಂಡಳಿ ರಚನೆ, ಸಿಬಿಎಸ್‍ಇ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯಗಳನ್ನು ಮುಂದಿಟ್ಟು ವಿಪಕ್ಷಗಳು ಅಡ್ಡಿಪಡಿಸಿದ್ದವು.

    ಬಜೆಟ್ ಅಧಿವೇಶನದ ಹೈಲೈಟ್ಸ್ ಏನು?
    * 18 ವರ್ಷಗಳಲ್ಲೇ ಅತ್ಯಂತ ಕಡಿಮೆ ಉತ್ಪಾದಕ ಬಜೆಟ್ ಅಧಿವೇಶನ
    * ಲೋಕಸಭೆ 33.6 ಗಂಟೆ, ರಾಜ್ಯಸಭೆ 55.2 ಗಂಟೆ ಮಾತ್ರ ಚರ್ಚೆ
    * ಬಜೆಟ್ ಮೊದಲ ಅಧಿವೇಶನದಲ್ಲಿ ಬಹುತೇಕ ಸಮಯ ಬಜೆಟ್ ಚರ್ಚೆಗೆ ಮೀಸಲು
    * ಶಾಸಕಾಂಗ ವ್ಯವಹಾರಗಳ ಸಂಬಂಧ ಒಟ್ಟಾರೆ 19 ಮಾತ್ರ ಚರ್ಚೆ

    * ಈ 19 ನಿಮಿಷದಲ್ಲಿ 14 ನಿಮಿಷ 2 ಸರ್ಕಾರಿ ಬಿಲ್ ಪಾಸ್, ಖಾಸಗಿ ಬಿಲ್ ಬಗ್ಗೆ ಚರ್ಚೆ ಆಗಿಲ್ಲ
    * ಬಜೆಟ್ ಎರಡನೇ ಅಧಿವೇಶನದಲ್ಲಿ 18 ನಿಮಿಷದೊಳಗೆ ಹಣಕಾಸು ಬಿಲ್ ಬಗ್ಗೆ ಚರ್ಚೆ
    * ಯಾವುದೇ ಸಂಸದರು ಭಾಗಿಯಾಗದೆ ಹಣಕಾಸು ಬಿಲ್ ಪಾಸ್
    * ರಾಜ್ಯಸಭೆಯಲ್ಲಿ 11 ಗಂಟೆ ಬಜೆಟ್ ಬಗ್ಗೆ ಚರ್ಚೆಯಾಗಿದೆ
    * 2 ಗಂಟೆ 31 ನಿಮಿಷ ಶಾಸಕಾಂಗ ವ್ಯವಹಾರಗಳ ಬಗ್ಗೆ ಚರ್ಚಿಸಿದೆ
    * ಇದರಲ್ಲಿ ಕೇವಲ 3 ನಿಮಿಷ ಸರ್ಕಾರಿ ಬಿಲ್, ಉಳಿದದ್ದು ಖಾಸಗಿ ಬಿಲ್ ಚರ್ಚೆಗೆ ಬಳಕೆ
    * ಒಟ್ಟಾರೆ ನೋಡೋದಾದ್ರೆ ಲೋಕಸಭೆ ಕೇವಲ 33.6%, ರಾಜ್ಯಸಭೆಯಲ್ಲಿ 53.2% ರಷ್ಟು ಸಮಯ ವಿನಿಯೋಗ