Tag: parliament

  • ಸಂಸತ್ತಿನಲ್ಲಿ ಭದ್ರತಾ ಲೋಪ – ಲೋಕಸಭಾ ಕಲಾಪ ನಡೆಯುವಾಗಲೇ ಮೇಲಿನಿಂದ ಜಿಗಿದ ಅನಾಮಿಕರು

    ಸಂಸತ್ತಿನಲ್ಲಿ ಭದ್ರತಾ ಲೋಪ – ಲೋಕಸಭಾ ಕಲಾಪ ನಡೆಯುವಾಗಲೇ ಮೇಲಿನಿಂದ ಜಿಗಿದ ಅನಾಮಿಕರು

    ನವದೆಹಲಿ: ಅಧಿವೇಶನ (Session) ನಡೆಯುತ್ತಿರುವಾಗಲೇ ಸಂಸತ್‌ನಲ್ಲಿ ಭದ್ರತಾ ಲೋಪ (Security Breach) ನಡೆದಿದೆ.

    ಲೋಕಸಭಾ ವೀಕ್ಷಕರ  ಗ್ಯಾಲರಿಯಿಂದ (Lok Sabha Visitors Gallery) ಇಬ್ಬರು ವ್ಯಕ್ತಿ ಮೇಲಿನಿಂದ ಜಿಗಿದಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಇಬ್ಬರನ್ನು  ಹಿಡಿದಿದ್ದಾರೆ.

    ಸಂಸತ್‌ ಮೇಲೆ ದಾಳಿ ನಡೆದು 22 ವರ್ಷವಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಹುತಾತ್ಮ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಲಾಗಿತ್ತು.

     

    ಈಗ ಬಂದಿರುವ ಮಾಹಿತಿ ಪ್ರಕಾರ  ಒಟ್ಟು ಎರಡು ಘಟನೆ ನಡೆದಿದೆ. ಇಬ್ಬರು ಅನಾಮಿಕ ವ್ಯಕ್ತಿಗಳು ಲೋಕಸಭೆ ಗ್ಯಾಲರಿಯಿಂದ ಜಿಗಿದು ಕಲರ್‌ ಬಾಂಬ್‌ ಸಿಡಿಸಿದರೆ, ಇಬ್ಬರು ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ.  ಈಗ ನಾಲ್ವರನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ.

    ಸಂಸತ್‌ ಒಳ ಪ್ರವೇಶಕ್ಕೆ ಪಾಸ್‌ ಇಲ್ಲದೇ ಯಾರನ್ನು ಬಿಡಲ್ಲ. ಹೀಗಿರುವಾಗ ಇಷ್ಟೊಂದು ದೊಡ್ಡ ಮಟ್ಟದ ಭದ್ರತಾ ಲೋಪ ನಡೆದಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

     

  • ಇನ್ನೊಂದು ತಿಂಗಳಲ್ಲಿ ಬಂಗಲೆ ಖಾಲಿ ಮಾಡ್ಬೇಕು – ವಿಧಾನಸಭೆಯಲ್ಲಿ ಗೆದ್ದ ಸಂಸದರಿಗೆ ಸೂಚನೆ

    ಇನ್ನೊಂದು ತಿಂಗಳಲ್ಲಿ ಬಂಗಲೆ ಖಾಲಿ ಮಾಡ್ಬೇಕು – ವಿಧಾನಸಭೆಯಲ್ಲಿ ಗೆದ್ದ ಸಂಸದರಿಗೆ ಸೂಚನೆ

    – ಶೋಭಾ ಕರಂದ್ಲಾಜೆಗೆ ಹೆಚ್ಚುವರಿ ಖಾತೆಯ ಹೊಣೆ

    ನವದೆಹಲಿ: ಪಂಚರಾಜ್ಯಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ಶಾಸಕರಾಗಿರುವ ಸಂಸದರು ಮತ್ತು ಕೇಂದ್ರ ಸಚಿವರಿಗೆ (Union Ministers) 30 ದಿನದಲ್ಲಿ ಮನೆ ಖಾಲಿ ಮಾಡುವಂತೆ ಲೋಕಸಭೆ ಕಾರ್ಯಲಯ ಹೇಳಿದೆ. ಸಂಸದ (BJP MPs) ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನಲೆ ಮನೆ ಖಾಲಿ ಮಾಡುವಂತೆ ಅದು ಸೂಚಿಸಿದೆ.

    ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಪಟೇಲ್, ಮಧ್ಯಪ್ರದೇಶದ ರಾಕೇಶ್ ಸಿಂಗ್, ಉದ್ಯಾ ಪ್ರತಾಪ್ ಸಿಂಗ್ ಮತ್ತು ರಿತಿ ಪಾಠಕ್, ರಾಜಸ್ಥಾನದಿಂದ ದಿಯಾ ಕುಮಾರಿ ಮತ್ತು ರಾಜ್ಯವರ್ಧನ್ ಸಿಂಗ್ ರಾಥೋಡ್ ಮತ್ತು ಛತ್ತೀಸ್‌ಗಢದಿಂದ ಗೋಮತಿ ಸಾಯಿ ಮತ್ತು ಅರುಣ್ ಸಾವ್. ರಾಜ್ಯಸಭಾ ಸಂಸದ ಕಿರೋಡಿ ಲಾಲ್ ಮೀನಾ ಕೂಡ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ (Om Birla) ಅಂಗೀಕರಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಬರ ಪರಿಹಾರಕ್ಕೆ ಇನ್ನೆರಡು ದಿನಗಳಲ್ಲಿ ಮಾನದಂಡ ಬಿಡುಗಡೆ: ಚೆಲುವರಾಯಸ್ವಾಮಿ

    ಕೇಂದ್ರ ಸಚಿವ ಸ್ಥಾನಕ್ಕೆ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ರೇಣುಕಾ ಸಿಂಗ್ ಸರೂತಾ ನೀಡಿದ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅಂಗೀಕರಿಸಿದ್ದಾರೆ. ಖಾಲಿಯಾದ ಸಚಿವ ಸ್ಥಾನಗಳ ಪೈಕಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಉಸ್ತುವಾರಿಯನ್ನು ಅರ್ಜುನ್ ಮುಂಡಾ ಅವರಿಗೆ, ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಜವಬ್ದಾರಿಯನ್ನು ಶೋಭಾ ಕರಂದ್ಲಾಜೆ ಅವರಿಗೆ ವಹಿಸಲಾಗಿದೆ. ಇದನ್ನೂ ಓದಿ: ಮೂರು ರಾಜ್ಯಗಳ ಮುಖ್ಯಮಂತ್ರಿ ಆಯ್ಕೆಗೆ ವೀಕ್ಷಕರ ನೇಮಿಸಿದ ಹೈಕಮಾಂಡ್

    ಅಲ್ಲದೇ ಜಲ ಶಕ್ತಿ ಸಚಿವಾಲಯದ ರಾಜ್ಯ ಸಚಿವರ ಉಸ್ತುವಾರಿಯನ್ನು ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ, ಬುಡಕಟ್ಟು ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರ ಉಸ್ತುವಾರಿಯನ್ನು ಡಾ. ಭಾರತಿ ಪ್ರವೀಣ್ ಪವಾರ್ ದ್ರೌಪದಿ ಮುರ್ಮು ವಹಿಸಿದ್ದಾರೆ. ತಮ್ಮ ಖಾತೆಗಳ ಜೊತೆಗೆ ಹೆಚ್ಚುವರಿ ನಿಭಾಯಿಸಲು ನಿರ್ದೇಶಿಸಿದ್ದಾರೆ. ಇದನ್ನೂ ಓದಿ: ಸರ್ಕಾರದಲ್ಲಿ ಪೇ-ಸಿಎಂ, ಪೇ-ಡಿಸಿಎಂ ಹೆಸ್ರಲ್ಲಿ ಕಮಿಷನ್‌ ಹಗರಣ – ಸದನದಲ್ಲಿ ಯತ್ನಾಳ್‌ ಬಾಂಬ್‌

  • ಡಿ.13ಕ್ಕೂ ಮುನ್ನ ಸಂಸತ್ತಿನ ಮೇಲೆ ದಾಳಿ- ಮತ್ತೆ ಬೆದರಿಕೆ ವೀಡಿಯೋ ಹರಿಬಿಟ್ಟ ಪನ್ನುನ್

    ಡಿ.13ಕ್ಕೂ ಮುನ್ನ ಸಂಸತ್ತಿನ ಮೇಲೆ ದಾಳಿ- ಮತ್ತೆ ಬೆದರಿಕೆ ವೀಡಿಯೋ ಹರಿಬಿಟ್ಟ ಪನ್ನುನ್

    ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ (Khalistan Terrorists) ಗುರ್ಪತ್‌ವಂತ್ ಸಿಂಗ್ ಪನ್ನುನ್ (Gurpatwant Singh Pannun) ಡಿಸೆಂಬರ್ 13 ಅಥವಾ ಅದಕ್ಕೂ ಮೊದಲು ಭಾರತೀಯ ಸಂಸತ್ತಿನ (Parliament) ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿರುವ ವೀಡಿಯೋವನ್ನು ಬಿಡುಗಡೆ ಮಾಡಿದ್ದಾನೆ.

    ಪನ್ನುನ್ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ 2001ರ ಸಂಸತ್ ದಾಳಿಯ ಅಪರಾಧಿ ಅಫ್ಜಲ್ ಗುರುವಿನ ಪೋಸ್ಟರ್ ಕಂಡುಬಂದಿದೆ. ಅದರಲ್ಲಿ ‘ದೆಹಲಿ ಬನೇಗಾ ಖಲಿಸ್ತಾನ್’ (ದೆಹಲಿ ಖಲಿಸ್ತಾನ್ ಆಗಿ ಬದಲಾಗುತ್ತದೆ) ಎಂಬ ಶೀರ್ಷಿಯನ್ನೂ ನೀಡಲಾಗಿದೆ. ವೀಡಿಯೋದಲ್ಲಿ ಪನ್ನುನ್, ಭಾರತ ತನ್ನನ್ನು ಕೊಲ್ಲಲು ನಡೆಸಿದ ಸಂಚು ವಿಫಲವಾಗಿದೆ. ಅಲ್ಲದೇ ಭಯೋತ್ಪಾದಕರು ಸಂಸತ್ತಿನ ಮೇಲೆ ದಾಳಿ ನಡೆಸಿ ಡಿಸೆಂಬರ್ 13ಕ್ಕೆ 22 ವರ್ಷಗಳಾಗುತ್ತದೆ. ಇದೇ ದಿನ ಸಂಸತ್ತಿನ ಮೇಲೆ ದಾಳಿ ನಡೆಸಲಾಗುವುದು. ಇಲ್ಲವೇ ಅದಕ್ಕೂ ಮೊದಲೇ ದಾಳಿ ನಡೆಸುವುದಾಗಿ ಹೇಳಿಕೆ ನೀಡಿದ್ದಾನೆ.

    ಪ್ರಸ್ತುತ ಸೋಮವಾರದಿಂದ ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಡಿಸೆಂಬರ್ 22 ರವರೆಗೆ ಅಧಿವೇಶನ ನಡೆಯಲಿದೆ. ಇದೇ ಸಂದರ್ಭದಲ್ಲಿ ಪನ್ನುನ್ ಬೆದರಿಕೆ ಕರೆ (Threat Call) ಬಂದಿದ್ದು, ಈ ಹಿನ್ನೆಲೆ ಸಂಸತ್ ಭವನದ ಸುತ್ತ ಭದ್ರತಾ ಏಜೆನ್ಸಿಗಳು ಅಲರ್ಟ್ ಆಗಿವೆ. ಇದನ್ನೂ ಓದಿ: ರಜಪೂತ್‌ ಕರ್ಣಿ ಸೇನಾ ಮುಖ್ಯಸ್ಥನ ಹಣೆಗೆ ಗುಂಡಿಟ್ಟು ಹತ್ಯೆ – ರೊಚ್ಚಿಗೆದ್ದ ಬೆಂಬಲಿಗರಿಂದ ರಾಜಸ್ಥಾನ ಬಂದ್‌ಗೆ ಕರೆ

    ಮೂಲಗಳ ಪ್ರಕಾರ, ಭದ್ರತಾ ಏಜೆನ್ಸಿಗಳು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ನ ಕೆ-2 (ಕಾಶ್ಮೀರ-ಖಾಲಿಸ್ತಾನ್) ಭಾರತ ವಿರೋಧಿ ನಿರೂಪಣೆಯನ್ನು ಪ್ರಚಾರ ಮಾಡುವ ತಮ್ಮ ಕಾರ್ಯಸೂಚಿಯನ್ನು ಮುಂದುವರಿಸಲು ಪನ್ನುನ್‌ಗೆ ನಿರ್ದೇಶನಗಳನ್ನು ನೀಡಿದೆ ಎಂದು ಹೇಳಿದೆ.

    ಪನ್ನುನ್ ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಅಮೆರಿಕ ಮೂಲದ ಸಿಖ್ ಫಾರಿ ಜಸ್ಟಿಸ್‌ನ (ಎಸ್‌ಎಫ್‌ಜೆ) ಮುಖ್ಯಸ್ಥನಾಗಿದ್ದಾನೆ. ಮಾತ್ರವಲ್ಲದೇ ಭಾರತೀಯ ತನಿಖಾ ಸಂಸ್ಥೆಗಳಿಗೆ ಮೋಸ್ಟ್ ವಾಂಟೆಡ್ ವ್ಯಕ್ತಿಯಾಗಿದ್ದಾನೆ. ಇದನ್ನೂ ಓದಿ: ಮಹಾಪರಿನಿರ್ವಾಣ ದಿನ ಆಚರಣೆ – ಅಂಬೇಡ್ಕರ್ ಭಾವ ಚಿತ್ರಕ್ಕೆ ತಲೆಬಾಗಿ ನಮಸ್ಕರಿಸಿದ ಪ್ರಧಾನಿ ಮೋದಿ

  • ಕೆನಡಾ ಸಂಸತ್‍ನಲ್ಲಿ ಹಿಂದೂಧ್ವಜ ಹಾರಿಸಿದ ಕನ್ನಡಿಗ

    ಕೆನಡಾ ಸಂಸತ್‍ನಲ್ಲಿ ಹಿಂದೂಧ್ವಜ ಹಾರಿಸಿದ ಕನ್ನಡಿಗ

    ಒಟ್ಟಾವಾ: ಖಲಿಸ್ಥಾನಿಗಳ ಕಾರಣದಿಂದ ಭಾರತ-ಕೆನಡಾ (India- Canada) ನಡ್ವೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಕೆನಡಾದಲ್ಲಿರುವ ಖಲಿಸ್ಥಾನಿ ಉಗ್ರರು ಹಿಂದೂಗಳಿಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದೀಗ ಅಂತಹ ಕೆನಡಾದಲ್ಲಿ, ಅದರಲ್ಲೂ ಅಲ್ಲಿನ ಸಂಸತ್‍ನಲ್ಲಿಯೇ (Parliament) ಕನ್ನಡಿಗರೊಬ್ಬರು ದೀಪಾವಳಿ ಆಚರಿಸಿದ್ದಾರೆ.

    ಹೌದು. ಸಂಸದ ಚಂದ್ರ ಆರ್ಯ (MP Chandra Arya) ಅವರು ಪಾರ್ಲಿಮೆಂಟ್ ಹಿಲ್‍ನಲ್ಲಿ ದೀಪಾವಳಿ ಆಯೋಜಿಸಿದ್ದರು. ಈ ವೇಳೆ ಓಂ ಎಂದು ಬರೆದಿರುವ ಹಿಂದೂ ಧ್ವಜವನ್ನು ಹಾರಿಸಿದ್ದಾರೆ. ಈ ಕ್ಷಣಕ್ಕೆ ನೂರಾರು ಹಿಂದೂಗಳು ಸಾಕ್ಷಿಯಾಗಿದ್ದಾರೆ.

    ಪಾರ್ಲಿಮೆಂಟ್ ಹಿಲ್‍ನಲ್ಲಿ ದೀಪಾವಳಿ ಆಯೋಜಿಸಿದ್ದಕ್ಕೆ ನನಗೆ ಸಂತಸವಾಗಿದೆ. ಈ ಸಂದರ್ಭದಲ್ಲಿ ನಾವು ‘ಓಂ’ ಚಿಹ್ನೆ ಒಳಗೊಂಡ ಹಿಂದೂ ಧ್ವಜವನ್ನು (Hindu Flag) ಹಾರಿಸಿದೆವು. ಈ ಆಚರಣೆಗೆ ಕೆನಡಾದಲ್ಲಿರುವ 67 ಹಿಂದೂ ಮತ್ತು ಇಂಡೋ-ಕೆನಡಾ ಸಂಘಟನೆಗಳು ಬೆಂಬಲ ನಿಡಿದ್ದವು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನಿಂದಲೇ ರಾಮಮಂದಿರ ನಿರ್ಮಾಣ ಸಾಧ್ಯವಾಗಿದೆ: ಮೋದಿ

    ಮತ್ತೊಂದ್ಕಡೆ ಪ್ಯಾರೀಸ್ ಏರ್‍ಪೋರ್ಟ್‍ನಲ್ಲಿ 30 ಮುಸ್ಲಿಮವರು ಸಾಮೂಹಿಕವಾಗಿ ನಮಾಜ್ ಮಾಡಿರೋದು ವಿವಾದಕ್ಕೆ ಕಾರಣವಾಗಿದೆ. ಫ್ರಾನ್ಸ್ ರಾಜಕಾರಣಿಗಳು, ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಆದ್ರೆ, ಇದನ್ನು ಫ್ರಾನ್ಸ್ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ.

  • ಮಹಿಳಾ ಮೀಸಲಾತಿ ಹೆಸರಲ್ಲಿ ಲಿಪ್‌ಸ್ಟಿಕ್‌, ಹೇರ್ ಸ್ಟೈಲ್ ಮಾಡಿಕೊಂಡವರು ಮುಂದೆ ಬರ್ತಾರೆ: RJD ನಾಯಕನ ವಿವಾದಿತ ಹೇಳಿಕೆ

    ಮಹಿಳಾ ಮೀಸಲಾತಿ ಹೆಸರಲ್ಲಿ ಲಿಪ್‌ಸ್ಟಿಕ್‌, ಹೇರ್ ಸ್ಟೈಲ್ ಮಾಡಿಕೊಂಡವರು ಮುಂದೆ ಬರ್ತಾರೆ: RJD ನಾಯಕನ ವಿವಾದಿತ ಹೇಳಿಕೆ

    ಪಾಟ್ನಾ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದನೆಗೊಂಡಿದ್ದ‌ ಮಹಿಳಾ‌ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದು, ಕೇಂದ್ರ ಸರ್ಕಾರ ಶುಕ್ರವಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. ಇದಾದ ಒಂದು ದಿನದ ಬಳಿಕ ರಾಷ್ಟ್ರೀಯ ಜನತಾ ದಳದ (RJD) ಹಿರಿಯ ನಾಯಕ ಅಬ್ದುಲ್‌ ಬಾರಿ ಸಿದ್ದಿಕಿ (Abdul Bari Siddiqui) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಬಿಹಾರದ ಮುಜಾಫರ್‌ ನಗರದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಮಹಿಳಾ ಮೀಸಲಾತಿ ಮಸೂದೆ (Women’s Reservation Bill) ಹೆಸರಿನಲ್ಲಿ ಲಿಪ್‌ಸ್ಟಿಕ್‌ ಮತ್ತು ಬಾಬ್ ಕಟ್ ಹೇರ್ ಸ್ಟೈಲ್ ಮಾಡಿಕೊಂಡ ಮಹಿಳೆಯರು ಮುಂದೆ ಬರುತ್ತಾರೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶದ ಚುನಾವಣೆ ಗಾಂಧಿ ಮತ್ತು ಗೋಡ್ಸೆ ಸಿದ್ಧಾಂತಗಳ ನಡುವಿನ ಹೋರಾಟ: ರಾಹುಲ್‌ ಗಾಂಧಿ

    ಲಿಪ್‌ಸ್ಟಿಕ್‌ ಹಾಗೂ ಬಾಬ್‌ ಕಟ್‌ ಹೇರ್‌ಸ್ಟೈಲ್‌ (Bob-Cut Hairstyles) ಮಾಡಿಕೊಂಡ ಮಹಿಳೆಯರು ಈ ಮೀಸಲಾತಿ ಹೆಸರಿನಲ್ಲಿ ಮುಂದೆ ಬರುತ್ತಾರೆ. ಆದ್ದರಿಂದ ಹಿಂದುಳಿದ ಸಮುದಾಯಗಳ ಮಹಿಳೆಯರಿಗೆ ಮಾತ್ರ ಸರ್ಕಾರ ಈ ಮೀಸಲಾತಿಯನ್ನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

    ಸಿದ್ದಿಕಿ ಹೇಳಿಕೆಗೆ ಬೆಂಬಲಿಗರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಮುಗಿಯುವವರೆಗೂ ದೂರದರ್ಶನ ಮತ್ತು ಸೋಶಿಯಲ್‌ ಮೀಡಿಯಾಗಳಿಂದ ದೂರವಿರುವಂತೆ ಅವರು ಸಲಹೆ ನೀಡಿದ್ದಾರೆ. ಆದ್ರೆ ತಮ್ಮ ವಾದವನ್ನು ಸಮರ್ಥಿಸಿಕೊಂಡಿರುವ ಸಿದ್ದಿಕಿ, ಹೊಸ ಕಾನೂನಿನ ಪ್ರಯೋಜನವನ್ನು ನಮ್ಮ ಜನರಿಗೆ ಅರ್ಥಮಾಡಿಸಲು ಗ್ರಾಮೀಣ ಭಾಷೆ ಬಳಸಿದ್ದೇನೆ, ಬೇರೆ ದುರುದ್ದೇಶವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂತ್ರಸ್ತ ಬಾಲಕಿ ದತ್ತು ಪಡೆಯಲು ಮುಂದಾದ ಅತ್ಯಾಚಾರ ಪ್ರಕರಣ ಭೇದಿಸಿದ ಪೊಲೀಸ್ ಅಧಿಕಾರಿ

    ಇನ್ನೂ ಸಿದ್ದಿಕಿ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಆರ್‌ಜೆಡಿ ನಾಯಕನ ಹೇಳಿಕೆ ಸಣ್ಣ ಮನಸ್ಥಿತಿಯನ್ನು ತೋರಿಸುತ್ತದೆ. ಕಾರಿಗೆ ಎರಡು ಚಕ್ರಗಳಿದ್ದಂತೆ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಮಹಿಳೆಯರು ಮತ್ತು ಪುರುಷರು ಒಟ್ಟಾಗಿ ಸಾರ್ವಜನಿಕ ಹಿತಾಸಕ್ತಿಯ ಕಾನೂನುಗಳನ್ನು ರಚಿಸುವ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ಆದ್ರೆ ಆರ್‌ಜೆಡಿ ನಾಯಕನ ಹೇಳಿಕೆ ಸಣ್ಣತನವನ್ನು ತೋರಿಸಿದೆ ಎಂದು ಕಿಡಿ ಕಾರಿದ್ದಾರೆ.

    ನಾವಿಂದು 21ನೇ ಶತಮಾನದಲ್ಲಿದ್ದೇವೆ. ಮಹಿಳೆಯರಿಗೆ ನೋವುಂಟು ಮಾಡುವ ಹೇಳಿಕೆಗಳನ್ನ ತಪ್ಪಿಸಬೇಕು. ಹಿಂದುಳಿದ ವರ್ಗದ ಮಹಿಳೆಯರೂ ಮುಂದೆ ಬರಬೇಕು. ಅದಕ್ಕಾಗಿ ಮೀಸಲಾತಿ ಮಸೂದೆ ಬಂದಿದೆ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕಿಸ್ತಾನದ ಸಂಸತ್ತು ವಿಸರ್ಜನೆ – ಸಾರ್ವತ್ರಿಕ ಚುನಾವಣೆಗೆ ಸಜ್ಜು

    ಪಾಕಿಸ್ತಾನದ ಸಂಸತ್ತು ವಿಸರ್ಜನೆ – ಸಾರ್ವತ್ರಿಕ ಚುನಾವಣೆಗೆ ಸಜ್ಜು

    ಇಸ್ಲಾಮಾಬಾದ್: ರಾಷ್ಟ್ರೀಯ ಪ್ರಕ್ಷುಬ್ಧತೆ ಹಾಗೂ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಪಾಕಿಸ್ತಾನದಲ್ಲಿ (Pakistan) ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಶಿಫಾರಸಿನ ಮೇರೆಗೆ ಸಂಸತ್ತನ್ನು ಬುಧವಾರ ತಡರಾತ್ರಿ ವಿಸರ್ಜಿಸಲಾಗಿದೆ. ಇದೀಗ ಸಾರ್ವತ್ರಿಕ ಚುನಾವಣೆಗೆ ವೇದಿಗೆ ಸಜ್ಜಾಗಿದೆ.

    ಪಾಕ್ ಸಂಸತ್ತಿನ 5 ವರ್ಷಗಳ ಅವಧಿ ಪೂರ್ಣಗೊಳ್ಳಲು 3 ದಿನಗಳ ಮುಂಚಿತವಾಗಿ ಅದನ್ನು ವಿಸರ್ಜಿಸಲಾಗಿದೆ. ಆಗಸ್ಟ್ 12 ಸಂಸತ್ತಿನ ಅವಧಿ ಮುಕ್ತಾಯಗೊಳ್ಳುವ ದಿನವಾಗಿತ್ತು. ಪಾಕಿಸ್ತಾನದ ಸಂವಿಧಾನದ ಪ್ರಕಾರ ಸರ್ಕಾರದ ಅವಧಿ ಪೂರೈಸಿದ 60 ದಿನಗಳಲ್ಲಿ ಚುನಾವಣೆ ನಡೆಯಬೇಕು. ಅವಧಿಗೂ ಮುನ್ನ ವಿಸರ್ಜನೆ ಮಾಡಿದರೆ 90 ದಿನಗಳ ಕಾಲಾವಕಾಶ ಇರಲಿದೆ. ಇದೀಗ ಸಂಸತ್ತನ್ನು ಅವಧಿ ಪೂರ್ಣಗೊಳ್ಳುವ ಮೊದಲೇ ವಿಸರ್ಜನೆ ಮಾಡಿರುವುದರಿಂದ ಹೊಸ ಚುನಾವಣೆ ನಡೆಸಲು 90 ದಿನಗಳ ಕಾಲಾವಕಾಶ ಸಿಗಲಿದೆ.

    ಸಂಸತ್ತನ್ನು ವಿಸರ್ಜಿಸುವಂತೆ ನಾನು ಇಂದು ರಾತ್ರಿ ಅಧ್ಯಕ್ಷರಿಗೆ ಸಲಹೆ ನೀಡುತ್ತೇನೆ ಎಂದು ಷರೀಫ್ ಈ ಹಿಂದೆ ಸಂಸತ್ತಿಗೆ ತಿಳಿಸಿದ್ದರು. ಹಂಗಾಮಿ ಪ್ರಧಾನಿಯಾಗಿ ನಾಮನಿರ್ದೇಶನ ಮಾಡಲು ಎರಡೂ ಕಡೆಯಿಂದ ಶಿಫಾರಸು ಮಾಡಲಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಗುರುವಾರ ವಿರೊಧ ಪಕ್ಷಗಳ ನಾಯಕರೊಂದಿಗೆ ಚರ್ಚೆ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: 200ಕ್ಕೂ ಹೆಚ್ಚು ಮಂದಿ ಇಮ್ರಾನ್ ಖಾನ್‌ ಬೆಂಬಲಿಗರು ಅರೆಸ್ಟ್ – ಪಾಕ್‌ನಲ್ಲಿ ಭುಗಿಲೆದ್ದ ಆಕ್ರೋಶ

    ಆದರೆ ಚುನಾವಣಾ ಆಯೋಗ ಹೊಸ ಜನಗಣತಿಯ ಆಧಾರದ ಮೇಲೆ ನೂರಾರು ಕ್ಷೇತ್ರಗಳನ್ನು ಮರುವಿನ್ಯಾಸಗೊಳಿಸಲು ಪ್ರಾರಂಭಿಸುವುದರಿಂದ ಚುನಾವಣೆಗೆ ಇನ್ನಷ್ಟು ತಿಂಗಳು ವಿಳಂಬವಾಗುವ ಸಾಧ್ಯತೆಯಿದೆ.

    ಕಳೆದ ಬಾರಿ 2018ರ ಜುಲೈನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ಪಕ್ಷ ಗೆದ್ದಿತ್ತು. ಅವರು ಬಳಿಕ ಮೊದಲ ಬಾರಿಗೆ ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಕಳೆದ ವರ್ಷ ಅವಿಶ್ವಾಸ ನಿರ್ಣಯದಲ್ಲಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದರು. ಅಂದಿನಿಂದ ಭ್ರಷ್ಟಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರುವ ಅವರು ಜೈಲುಪಾಲಾಗಿದ್ದಾರೆ. ಇಮ್ರಾನ್ ಖಾನ್ 5 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಪಾಕ್‌ನಲ್ಲಿ ರಾಜಕೀಯ ಕೋಲಾಹಲ – ಜೈಲುಪಾಲಾದ ಕ್ರಿಕೆಟ್‌ ದಂತಕಥೆಯ ಜೀವಕ್ಕೆ ಇದೆಯಾ ಆಪತ್ತು? 

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಮ್ಮ ಸಿಂಹ ರಾಹುಲ್‌ ಗಾಂಧಿ ಗೆದ್ದಿದ್ದಾರೆ – ಸಂಸತ್‌ ಸದಸ್ಯತ್ವ ಅನರ್ಹತೆ ವಾಪಸ್‌ ಬೆನ್ನಲ್ಲೇ ಸಿಹಿ ಹಂಚಿ INDIA ಒಕ್ಕೂಟ ಸಂಭ್ರಮ

    ನಮ್ಮ ಸಿಂಹ ರಾಹುಲ್‌ ಗಾಂಧಿ ಗೆದ್ದಿದ್ದಾರೆ – ಸಂಸತ್‌ ಸದಸ್ಯತ್ವ ಅನರ್ಹತೆ ವಾಪಸ್‌ ಬೆನ್ನಲ್ಲೇ ಸಿಹಿ ಹಂಚಿ INDIA ಒಕ್ಕೂಟ ಸಂಭ್ರಮ

    ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರ ಸಂಸತ್‌ ಸ್ಥಾನದ ಅನರ್ಹತೆಯನ್ನ ಲೋಕಸಭೆಯ ಸ್ಪೀಕರ್‌ ಓಂ ಪ್ರಕಾಶ್‌ ಬಿರ್ಲಾ ವಾಪಸ್‌ ಅವರಿಂದು ವಾಪಸ್‌ ಪಡೆದಿದ್ದಾರೆ. ನಾಲ್ಕು ತಿಂಗಳ ಬಳಿಕ ಇಂದು ಸಂಸತ್‌ ಕಲಾಪಕ್ಕೆ ರಾಹುಲ್‌ ಗಾಂಧಿ ಹಾಜರಾಗಲಿದ್ದಾರೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು INDIA ಒಕ್ಕೂಟದ ನಾಯಕರಿಗೆ ಸಿಹಿ ತಿನ್ನಿಸುವ ಮೂಲಕ ಸಂಭ್ರಮ ಹಂಚಿಕೊಂಡಿದ್ದಾರೆ.

    ಸೋಮವಾರ (ಆ.7) ಕಲಾಪ ಆರಂಭಗೊಳ್ಳುವುದಕ್ಕು ಮುನ್ನ ಪಕ್ಷದ ಕೊಠಡಿಯಲ್ಲಿ ನಡೆದ ಸರಳ ಸಭೆಯಲ್ಲಿ ಸಹಿ ಹಂಚಿ ಸಂಭ್ರಮಿಸಿದ್ದಾರೆ. ಈ ಕುರಿತು ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿರುವ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ಗಾಂಧಿ ಅವರನ್ನು ಸಂಸದರಾಗಿ ಮರುಸ್ಥಾಪಿಸುವ ನಿರ್ಧಾರ ಸ್ವಾಗತಾರ್ಹ. ಇನ್ನಾದರೂ ಬಿಜೆಪಿ (BJP) ಮತ್ತು ಮೋದಿ (Modi) ಸರ್ಕಾರ ತಮ್ಮ ಉಳಿದ ಅವಧಿಯಲ್ಲಿ ವಿಪಕ್ಷ ನಾಯಕರನ್ನ ಗುರಿಯಾಗಿಸುವ ಮೂಲಕ ಪ್ರಜಾಪ್ರಭುತ್ವ ಅವಮಾನಿಸುವ ಬದಲು ನಿಜವಾದ ಆಡಳಿತದ ಮೇಲೆ ಕೇಂದ್ರೀಕರಿಸಬೇಕು ಎಂದು ತಿರುಗೇಟು ನೀಡಿದ್ದಾರೆ.

    ಮತ್ತೊಬ್ಬ ಕಾಂಗ್ರೆಸ್‌ ನಾಯಕ ಪ್ರಮೋದ್‌ ತಿವಾರಿ, ಸತ್ಯಕ್ಕೆ ಜಯ ಸಿಕ್ಕಿದೆ. ಇದರಿಂದ ಭಾರತವೇ ಗೆದ್ದಂತಾಗಿದೆ. ನಮ್ಮ ಸಿಂಹ ರಾಹುಲ್‌ ಗಾಂಧಿ ಗೆದ್ದಿದ್ದು, ಮೋದಿ ಜೀ ಅವರಿಗೆ ಸೋಲು ಆರಂಭವಾಗಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಒಳನುಸುಳಲು ಪ್ರಯತ್ನಿಸುತ್ತಿದ್ದ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ಅನರ್ಹತೆ ವಾಪಸ್ ಪಡೆದ ಲೋಕಸಭೆ ಸ್ಪೀಕರ್:
    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಸಂಸತ್ ಸ್ಥಾನದ ಅನರ್ಹತೆಯನ್ನ ಲೋಕಸಭೆಯ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ವಾಪಸ್ ಪಡೆದಿದ್ದಾರೆ. ಈ ಮೂಲಕ ರಾಹುಲ್ ಗಾಂಧಿ ಅವರ ಸಂಸದೀಯ ಸದಸ್ಯತ್ವವನ್ನು ಮರುಸ್ಥಾಪಿಸಲಾಗಿದೆ. ಶುಕ್ರವಾರ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಸ್ಪೀಕರ್ ಈ ನಿರ್ಧಾರ ಕೈಗೊಂಡಿದ್ದಾರೆ. ಇದನ್ನೂ ಓದಿ: ಭಾರತ ಮಾತೆಯನ್ನು ವಿರೋಧಿಸುವವರ ಪ್ರಾಣ ತೆಗೆಯಲು ನಾವು ಹಿಂಜರಿಯಲ್ಲ: ಬಿಜೆಪಿ ನಾಯಕ

    ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಧಿಸಿದ್ದ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆದೇಶದ ವಿರುದ್ಧ ಜು.15 ರಂದು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ, ಪಿ.ಎಸ್ ನರಸಿಂಹ ಮತ್ತು ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಈ ವೇಳೆ ಸೂರತ್ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿತ್ತು. ಸುಪ್ರೀಂ ಆದೇಶ ಬೆನ್ನಲ್ಲೇ ಸೋಮವಾರ ಲೋಕಸಭೆಯ ಸ್ಪೀಕರ್ ಸದಸ್ಯತ್ವವನ್ನ ಮರಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಲೋಕಸಭೆ ಅಧಿವೇಶನಕ್ಕೆ ಹಾಜರಾಗಲಿದ್ದಾರೆ.

    ರಾಹುಲ್ ಅವರು 2019ರ ಏಪ್ರಿಲ್ 13 ರಂದು ಕೋಲಾರದಲ್ಲಿ ನಡೆದ ಲೋಕಸಭಾ ಚುಣಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ್ದರು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಎಲ್ಲಾ ಕಳ್ಳರಿಗೆ ಮೋದಿ ಎಂಬ ಉಪನಾಮ ಏಕಿದೆ ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಅವರು, ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣದಲ್ಲಿ ರಾಹುಲ್ ಅವರು ಎರಡು ವರ್ಷ ಶಿಕ್ಷೆಗೆ ಗುರಿಯಾಗಿ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Breaking: ಅನರ್ಹತೆ ವಾಪಸ್ ಪಡೆದ ಲೋಕಸಭೆ ಸ್ಪೀಕರ್‌ – ಇಂದು ಸಂಸತ್ ಕಲಾಪಕ್ಕೆ ರಾಹುಲ್ ಗಾಂಧಿ

    Breaking: ಅನರ್ಹತೆ ವಾಪಸ್ ಪಡೆದ ಲೋಕಸಭೆ ಸ್ಪೀಕರ್‌ – ಇಂದು ಸಂಸತ್ ಕಲಾಪಕ್ಕೆ ರಾಹುಲ್ ಗಾಂಧಿ

    ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ (Rahul Gandhi) ಸಂಸತ್‌ ಸ್ಥಾನದ ಅನರ್ಹತೆಯನ್ನ ಲೋಕಸಭೆಯ ಸ್ಪೀಕರ್‌ (Lok Sabha Speaker) ಓಂ ಪ್ರಕಾಶ್‌ ಬಿರ್ಲಾ ವಾಪಸ್‌ ಪಡೆದಿದ್ದಾರೆ. ಈ ಮೂಲಕ ರಾಹುಲ್‌ ಗಾಂಧಿ ಅವರ ಸಂಸದೀಯ ಸದಸ್ಯತ್ವವನ್ನು ಮರುಸ್ಥಾಪಿಸಲಾಗಿದೆ. ಶುಕ್ರವಾರ ಸುಪ್ರೀಂ ಕೋರ್ಟ್‌ (Supreme Court) ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಸ್ಪೀಕರ್‌ ಈ ನಿರ್ಧಾರ ಕೈಗೊಂಡಿದ್ದಾರೆ.

    ಮಾನನಷ್ಟ ಪ್ರಕರಣದಲ್ಲಿ ಸೂರತ್ ಜಿಲ್ಲಾ ನ್ಯಾಯಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಬಳಿಕ ಜನಪ್ರತಿನಿಧಿ ಕಾಯ್ದೆಯಡಿ ಕಳೆದ ಮಾರ್ಚ್ ನಲ್ಲಿ ರಾಹುಲ್ ಗಾಂಧಿ ಅವರ ಲೋಕಸಭೆ ಸದಸ್ಯತ್ವ (Lok Sabha Membership) ಅನರ್ಹಗೊಳಿಸಲಾಗಿತ್ತು. ಇದನ್ನೂ ಓದಿ: ಭಾರತ ಮಾತೆಯನ್ನು ವಿರೋಧಿಸುವವರ ಪ್ರಾಣ ತೆಗೆಯಲು ನಾವು ಹಿಂಜರಿಯಲ್ಲ: ಬಿಜೆಪಿ ನಾಯಕ

    ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‍ನ ಸೂರತ್ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಧಿಸಿದ್ದ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಆದೇಶದ ವಿರುದ್ಧ ಜು.15 ರಂದು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ, ಪಿ.ಎಸ್ ನರಸಿಂಹ ಮತ್ತು ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಈ ವೇಳೆ ಸೂರತ್ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿತ್ತು.

    ಸುಪ್ರೀಂ ಆದೇಶ ಬೆನ್ನಲ್ಲೇ ಸೋಮವಾರ ಲೋಕಸಭೆಯ ಸ್ಪೀಕರ್‌ ಸದಸ್ಯತ್ವವನ್ನ ಮರಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಲೋಕಸಭೆ ಅಧಿವೇಶನಕ್ಕೆ ಹಾಜರಾಗಬಹುದಾಗಿದೆ. ಇದನ್ನೂ ಓದಿ: ಒಳನುಸುಳಲು ಪ್ರಯತ್ನಿಸುತ್ತಿದ್ದ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ರಾಹುಲ್ ಅವರು 2019ರ ಏಪ್ರಿಲ್ 13 ರಂದು ಕೋಲಾರದಲ್ಲಿ ನಡೆದ ಲೋಕಸಭಾ ಚುಣಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ್ದರು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಎಲ್ಲಾ ಕಳ್ಳರಿಗೆ ಮೋದಿ ಎಂಬ ಉಪನಾಮ ಏಕಿದೆ ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಅವರು, ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣದಲ್ಲಿ ರಾಹುಲ್ ಅವರು ಎರಡು ವರ್ಷ ಶಿಕ್ಷೆಗೆ ಗುರಿಯಾಗಿ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಹುಲ್‍ಗೆ ಇಂದು ಮರಳಿ ಸಿಗುತ್ತಾ ಸಂಸತ್ ಸದಸ್ಯತ್ವ?

    ರಾಹುಲ್‍ಗೆ ಇಂದು ಮರಳಿ ಸಿಗುತ್ತಾ ಸಂಸತ್ ಸದಸ್ಯತ್ವ?

    ನವದೆಹಲಿ: ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿಗೆ (Rahul Gandhi) ವಿಧಿಸಿರುವ 2 ವರ್ಷ ಜೈಲು ಶಿಕ್ಷೆಗೆ ಸುಪ್ರೀಂಕೋರ್ಟ್ (Supreme Court) ತಡೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಂಸದ ಸ್ಥಾನ ಅನರ್ಹತೆಯನ್ನು ತೆರವು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ಈ ಬಗ್ಗೆ ಇಂದು ಲೋಕಸಭೆ ಸ್ಪೀಕರ್ (Loksabha Speaker) ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ರಾಹುಲ್ ಗಾಂಧಿಗೆ ಸಂಸದ ಸ್ಥಾನ ಮರಳಿಸುವ ಕುರಿತು ಸ್ಪೀಕರ್ ಓಂ ಬಿರ್ಲಾ ಅವರು ಇಂದು ಅಧಿಕಾರಿಗಳೊಂದಿಗೆ ಸಮಾಲೋಚಿಸಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಮಾತ್ರವಲ್ಲದೇ ರಾಹುಲ್ ಗಾಂಧಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಇದ್ದ ತಡೆಯ ಆತಂಕ ಕೂಡ ನಿವಾರಣೆಯಾಗಿದೆ.

    ಏನಿದು ಪ್ರಕರಣ..?: ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‍ನ ಸೂರತ್ ಮ್ಯಾಜಿಸ್ಟ್ರೇಟ್ ಕೋರ್ಟ್ (Surat Magistrate Court) ವಿಧಿಸಿರುವ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಆದೇಶದ ವಿರುದ್ಧ ಜು.15 ರಂದು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ಪಿಎಸ್ ನರಸಿಂಹ ಮತ್ತು ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿತು. ಈ ವೇಳೆ ಸೂರತ್ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿದೆ. ಇದನ್ನೂ ಓದಿ: ಏನೇ ಬಂದರೂ ನನ್ನ ಕರ್ತವ್ಯ ಹಾಗೆಯೇ ಇರಲಿದೆ: ಸುಪ್ರೀಂ ತೀರ್ಪಿಗೆ ರಾಗಾ ಪ್ರತಿಕ್ರಿಯೆ

    ರಾಹುಲ್ ಅವರು 2019ರ ಏಪ್ರಿಲ್ 13 ರಂದು ಕೋಲಾರದಲ್ಲಿ ನಡೆದ ಲೋಕಸಭಾ ಚುಣಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ್ದರು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಎಲ್ಲಾ ಕಳ್ಳರಿಗೆ ಮೋದಿ ಎಂಬ ಉಪನಾಮ ಏಕಿದೆ ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಅವರು, ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣದಲ್ಲಿ ರಾಹುಲ್ ಅವರು ಎರಡು ವರ್ಷ ಶಿಕ್ಷೆಗೆ ಗುರಿಯಾಗಿ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ – ಎಸ್ಟಿ ಅನುದಾನ ಬಳಕೆ; ಸಂಸತ್‌ನಲ್ಲಿ ಬಿಜೆಪಿ ದಲಿತ ಸಂಸದರ ಪ್ರತಿಭಟನೆ

    ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ – ಎಸ್ಟಿ ಅನುದಾನ ಬಳಕೆ; ಸಂಸತ್‌ನಲ್ಲಿ ಬಿಜೆಪಿ ದಲಿತ ಸಂಸದರ ಪ್ರತಿಭಟನೆ

    ನವದೆಹಲಿ: ಕಾಂಗ್ರೆಸ್ (Congress) ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ (Congress Guarantee) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (SC-ST) ಅಭಿವೃದ್ಧಿಗೆ ಮೀಸಲಿಟ್ಟ ಹಣ ಬಳಿಕೆ‌ ಖಂಡಿಸಿ ಬಿಜೆಪಿ ಸಂಸದರು ಪ್ರತಿಭಟನೆ ನಡೆಸಿದರು. ಸಂಸತ್‌ನಲ್ಲಿರುವ ಗಾಂಧಿ ಪ್ರತಿಮೆ ಬಳಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ದಲಿತ ಸಂಸದರು ಪ್ರತಿಭಟನೆ ನಡೆಸಿದರು.

    ಪ್ರತಿಭಟನೆಯಲ್ಲಿ ರಾಜ್ಯ ಸಂಸದರಾದ ಮುನಿಸ್ವಾಮಿ, ಉಮೇಶ್ ಜಾಧವ್, ದೇವೇಂದ್ರಪ್ಪ, ಅಮರೇಶ ನಾಯಕ್ ಭಾಗಿಯಾಗಿದ್ದರು. ಇದೇ ವೇಳೆ ಹಲವು ರಾಜ್ಯಗಳ ಎಸ್ಸಿ-ಎಸ್ಟಿ ಸಮುದಾಯದ ಸಂಸದರು ಭಾಗಿಯಾಗಿ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಇದನ್ನೂ ಓದಿ: ಸಿದ್ದರಾಮಯ್ಯರಿಂದ ದಲಿತರಿಗೆ ಮಹಾ ಮೋಸ- ಕಾಂಗ್ರೆಸ್ ಪಕ್ಷ ವಂಚಕರ ಸಂತೆ: ಛಲವಾದಿ ನಾರಾಯಣಸ್ವಾಮಿ

     

    ಪ್ರತಿಭಟನೆ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್, ಅಹಿಂದ ಹೆಸರಿನಲ್ಲಿ ದಲಿತರ ಉದ್ಧಾರ ಮಾಡುವುದಾಗಿ ಹೇಳಿದ ಸಿದ್ದರಾಮಯ್ಯ ಅವರು ಎಸ್ಸಿ ಎಸ್ಟಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹೊಂದಿಸಲು ವಿಫಲವಾಗಿ ದಲಿತ ಅಭಿವೃದ್ಧಿಗೆ ಇಟ್ಟ ಹಣವನ್ನು ಬಳಕೆಗೆ ನಿರ್ಧರಿಸಿದೆ. ಇದರ ಪರಿಣಾಮವಾಗಿ ಎಸ್ಸಿ ಎಸ್ಟಿಗೆ ಅಭಿವೃದ್ಧಿ ಕೊರತೆಯಾಗಲಿದೆ. ಈ ಹಣ ವಾಪಸ್ ಪಡೆಯಬಾರದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಸಂಸದ ಮುನಿಸ್ವಾಮಿ ಮಾತನಾಡಿ, ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಟೀಂ ದಲಿತರಿಗೆ ಮೀಸಲಿಟ್ಟ ಹಣ ಬಳಕೆ ‌ಮಾಡುತ್ತಿದೆ.‌ ಗ್ಯಾರಂಟಿಗೆ ಬಳಕೆ ಮಾಡುತ್ತಿದೆ. ಈ ಮೂಲಕ ದಲಿತರಿಗೆ ಅವಮಾನ ಮಾಡುತ್ತಿದೆ. ಸರ್ಕಾರದ ನಿರ್ಧಾರದಿಂದ ದಲಿತರ ಕೇರಿಗಳ ಅಭಿವೃದ್ಧಿ ಕುಂಠಿತಗೊಳ್ಳಲಿದೆ. ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಡಬೇಕು. ಮತ್ತೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಅಣ್ಣ ಹೇಳಿದ್ದಾರೆ ತಮ್ಮ ಕೇಳುತ್ತಿರಬೇಕು: ಹೆಚ್‌ಡಿಕೆಗೆ ಡಿಕೆಶಿ ಟಾಂಗ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]