Tag: parliament

  • ಸಂಸತ್ ಕಲಾಪಕ್ಕೆ ಗೈರಾದವರ ವಿರುದ್ಧ ಮೋದಿ ಕೆಂಡಾಮಂಡಲ, ಪಟ್ಟಿ ನೀಡುವಂತೆ ಸೂಚನೆ

    ಸಂಸತ್ ಕಲಾಪಕ್ಕೆ ಗೈರಾದವರ ವಿರುದ್ಧ ಮೋದಿ ಕೆಂಡಾಮಂಡಲ, ಪಟ್ಟಿ ನೀಡುವಂತೆ ಸೂಚನೆ

    ನವದೆಹಲಿ: ಸಂಸತ್ ಕಲಾಪಕ್ಕೆ ಗೈರಾದ ಸಚಿವರು ಹಾಗೂ ಸಂಸದ ವಿರುದ್ಧ ಪ್ರಧಾನಿ ಮೋದಿ ಕೆಂಡಾಮಂಡಲರಾಗಿದ್ದು, ಸಂಸತ್ ಕಲಾಪಕ್ಕೆ ಗೈರಾದವರ ಪಟ್ಟಿಯನ್ನು ಸಂಜೆಯೊಳಗೆ ನೀಡುವಂತೆ ಸೂಚಿಸಿದ್ದಾರೆ.

    ಬಿಜೆಪಿ ಸಂಸದೀಯ ಪಕ್ಷದ ವಾರದ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಸಂಸತ್‍ಗೆ ಹಾಜರಾಗಿಯೂ ಕಲಾಪಕ್ಕೆ ಗೈರಾದವರ ಪಟ್ಟಿಯನ್ನು ಸಿದ್ಧಪಡಿಸುವಂತೆ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಸೂಚಿಸಿದ್ದಾರೆ.

    ಪ್ರಧಾನಿ ಮೋದಿ ಅವರು ಈ ಹಿಂದೆಯೇ ತಮ್ಮ ಸಂಸದರಿಗೆ ಈ ಕುರಿತು ಸಲಹೆ ನೀಡಿದ್ದರು. ಇದೀಗ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿಯೂ ಸಹ ಎಚ್ಚರಿಕೆ ನೀಡಿದ್ದು, ರಾಜಕಾರಣವನ್ನು ಮೀರಿ ಕೆಲಸ ಮಾಡುವ ಕುರಿತು ಸಲಹೆ ನೀಡಿದ್ದಾರೆ ಎಂದು ಸಭೆಯಲ್ಲಿ ಹಾಜರಿದ್ದ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

    ನೀರಿನ ಸಮಸ್ಯೆ ಒತ್ತು ನೀಡಿ, ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿ. ನಿಮ್ಮ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜನರೊಂದಿಗೆ ಸಂಪರ್ಕ ಬೆಳೆಸಿಕೊಳ್ಳಿ, ಪ್ರತಿ ದಿನ ನಿಮ್ಮ ಕಚೇರಿಯಲ್ಲಿ ಕುಳಿತು ಅಧಿಕಾರಿಗಳೊಂದಿಗೆ ಕ್ಷೇತ್ರದ ಸಮಸ್ಯೆಗಳ ಕುರಿತು ಚರ್ಚಿಸಿ ಎಂದು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ.

    ಸಂಸದರು ಕಡ್ಡಾಯವಾಗಿ ನಿಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಕೆಲವು ವಿಶಿಷ್ಟ ಕೆಲಸಗಳನ್ನು ಮಾಡಬೇಕು. ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ ಎಂದು ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಕುಟುಕಿದ್ದಾರೆ.

    ಕ್ಷಯ ಮತ್ತು ಕುಷ್ಠರೋಗವನ್ನು ತಡೆಗಟ್ಟಲು ಮಿಷನ್ ಮೋಡ್‍ನಲ್ಲಿ ಸಂಸದರು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ. ಈ ಹಿಂದೆಯೂ ಸಹ ಪ್ರಧಾನಿ ಮೋದಿ ಅವರು ಸಂಸತ್ ಕಲಾಪಕ್ಕೆ ಗೈರಾಗುವ ಸಂಸದರನ್ನು ತರಾಟೆ ತೆಗೆದುಕೊಂಡಿದ್ದರು. ಆದರೂ ಸಂಸದರು ಕಲಾಪಕ್ಕೆ ಗೈರಾಗಿದ್ದಾರೆ. ಹೀಗಾಗಿ ಮೋದಿ ಗೈರಾದವರ ಪಟ್ಟಿ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ.

    ಇತ್ತೀಚೆಗೆ ಅಧಿಕಾರಿ ಮೇಲೆ ಬ್ಯಾಟ್‍ನಿಂದ ಹಲ್ಲೆ ಮಾಡಿದ್ದ ಶಾಸಕ ಆಕಾಶ್ ವಿಜಯ್‍ವರ್ಗಿಯಾ ಅವರ ಗೂಂಡಾ ವರ್ತನೆಯನ್ನು ಉದಾಹರಣೆಯಾಗಿ ನೀಡಿ ತರಾಟೆಗೆ ತೆಗೆದುಕೊಂಡಿದ್ದರು. ಇದು ಯಾವ ರೀತಿಯ ವರ್ತನೆ, ಭಾಷೆಯ ಬಳಕೆ ಎಂಥಹದ್ದು, ಜನಪ್ರತಿನಿಧಿಗಳಾದವರು ಹೇಗಿರಬೇಕು ಎಂದು ಸಂಸದರಿಗೆ ಮೋದಿ ಕ್ಲಾಸ್ ತೆಗೆದುಕೊಂಡಿದ್ದರು. ಇಂತಹವರನ್ನು ಯಾವುದೇ ಮುಲಾಜಿಲ್ಲದೆ, ಯಾವ ನಾಯಕರ ಮಗನೆಂದೂ ನೋಡದೆ ಪಕ್ಷದಿಂದ ಹೊರಗೆ ಹಾಕಿ ಎಂದು ಗುಡುಗಿದ್ದರು.

  • ಸಂಸತ್ ಆವರಣದಲ್ಲಿ ಕಸ ಗುಡಿಸಿದ ಹೇಮಾ ಮಾಲಿನಿ, ಅನುರಾಗ್ ಠಾಕೂರ್

    ಸಂಸತ್ ಆವರಣದಲ್ಲಿ ಕಸ ಗುಡಿಸಿದ ಹೇಮಾ ಮಾಲಿನಿ, ಅನುರಾಗ್ ಠಾಕೂರ್

    – ಟ್ರೋಲ್ ಆದ ಹೇಮಾ ಮಾಲಿನಿ

    ನವದೆಹಲಿ: ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಹಾಗೂ ಸಂಸದೆ ಹೇಮಾ ಮಾಲಿನಿ ಸೇರಿದಂತೆ ಅನೇಕರು ಸಂಸತ್ ಆವರಣವನ್ನು ಸ್ವಚ್ಛಗೊಳಿಸಿದರು.

    ಸ್ವಚ್ಛ ಭಾರತ್ ಅಭಿಯಾನದ ನಿಮಿತ್ತ ಇಂದು ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಕೆಲ ಸಂಸದರು ಕಸ ಗುಡಿಸಿದರು. ಆದರೆ ಹೇಮಾ ಮಾಲಿನಿ ಅವರು ಕಸ ಗುಡಿಸಲು ಬಾರದೇ ಪೇಚಾಡಿದರು.

    ಮಹಾತ್ಮ ಗಾಂಧಿಯವರ 150ನೇ ಜನ್ಮದಿನದ ನಿಮಿತ್ತ ಸಂಸತ್ ಆವರಣದಲ್ಲಿ ಸ್ವಚ್ಛ ಭಾರತ್ ಅಭಿಯಾನ ನಡೆಸಲು ಸ್ಪೀಕರ್ ಅವರು ಅವಕಾಶ ನೀಡಿದ್ದು ಶ್ಲಾಘನೀಯ. ಮುಂದಿನ ವಾರ ನನ್ನ ಕ್ಷೇತ್ರವಾದ ಮಥುರಾಕ್ಕೆ ತೆರಳುತ್ತೇನೆ. ಅಲ್ಲಿಯೂ ಸ್ವಚ್ಛ ಭಾರತ್ ಅಭಿಯಾನ ಮಾಡುತ್ತೇನೆ ಎಂದು ಸಂಸದೆ ಹೇಮಾ ಮಾಲಿನಿ ಹೇಳಿದ್ದಾರೆ.

    ಕಸ ಗುಡಿಸಲು ಪೇಚಾಡಿದ ಹೇಮಾ ಮಾಲಿನಿ ಅವರನ್ನು ನೆಟ್ಟಿಗರು ಕುಟುಕಿದ್ದಾರೆ. ‘ಹೇಮಾ ಜಿ, ಚಲನಚಿತ್ರಗಳಲ್ಲಿ ಮಾಡಿದ್ದಕ್ಕಿಂತ ಇಂದು ಸಂಸತ್ ಆವರಣದಲ್ಲಿ ಮಾಡಿದ ನಟನೆ ಚನ್ನಾಗಿದೆ ಎಂದು ವಿಕಾಸ್ ವಿಕ್ರಂ ತಿವಾರಿ ಎಂಬವರು ವ್ಯಂಗ್ಯವಾಡಿದ್ದಾರೆ.

    ಹೇಮಾ ಮಾಲಿನಿ ಅವರೇ ನೀವು ಪೊರಕೆಯನ್ನು ಹಿಡಿಯುವುದನ್ನು ಮೊದಲು ಕಲಿಯಬೇಕು. ನಿಮ್ಮ ಮನೆಯಲ್ಲಿ ಕೆಲಸ ಮಾಡುವ ನೌಕರರ ಜೊತೆಗೆ ನೀವು ಮೊದಲು ಕೈಗೂಡಿಸಿ ಎಂದು ನೆಟ್ಟಿಗರು ಲೇವಡಿ ಮಾಡಿದ್ದಾರೆ.

  • ಕರ್ನಾಟಕಕ್ಕೂ ಎನ್ಆರ್ ಸಿ ವಿಸ್ತರಿಸಿ: ಕಲಾಪದಲ್ಲಿ ತೇಜಸ್ವಿ ಸೂರ್ಯ ಗುಡುಗು

    ಕರ್ನಾಟಕಕ್ಕೂ ಎನ್ಆರ್ ಸಿ ವಿಸ್ತರಿಸಿ: ಕಲಾಪದಲ್ಲಿ ತೇಜಸ್ವಿ ಸೂರ್ಯ ಗುಡುಗು

    ನವದೆಹಲಿ: ಕರ್ನಾಟಕಕ್ಕೂ ನ್ಯಾಷನಲ್ ರಿಜಿಸ್ಟ್ರೇಷನ್ ಆಫ್ ಸಿಟಿಜನ್(ಎನ್ಆರ್ ಸಿ) ವಿಸ್ತರಿಸುವಂತೆ ಸಂಸತ್‍ನಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

    ಸಂಸತ್ ಅಧಿವೇಶನದ ಶೂನ್ಯ ವೇಳೆಯಲ್ಲಿ ಮಾತನಾಡಿರುವ ತೇಜಸ್ವಿ ಸೂರ್ಯ, ಕರ್ನಾಟಕದಲ್ಲೂ ಅಕ್ರಮ ಬಾಂಗ್ಲಾ ವಲಸಿಗರ ಹಾವಳಿ ಹೆಚ್ಚಿದ್ದು, ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ವಿಸ್ತರಿಸಿದ್ದಾರೆ. ದಕ್ಷಿಣ ರಾಜ್ಯಗಳಲ್ಲೂ ಅಕ್ರಮ ಬಾಂಗ್ಲಾ ವಲಸಿಗರು ನುಸುಳಿದ್ದು, ಕರ್ನಾಟಕದಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ವಿವರಿಸಿದರು.

    40 ಸಾವಿರಕ್ಕೂ ಅಧಿಕ ಅಕ್ರಮ ಬಾಂಗ್ಲಾ ವಲಸಿಗರು ರಾಜ್ಯದಲ್ಲಿದ್ದಾರೆ ಎಂದು ಇತ್ತೀಚೆಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಅಲ್ಲದೆ, ಅಕ್ರಮ ವಲಸಿಗರು ಸ್ಥಳೀಯ ಸಂಸ್ಥೆಗಳ ಸಹಾಯದಿಂದ ಆಧಾರ್ ಕಾರ್ಡ್ ಹಾಗೂ ಮತದಾರರ ಚೀಟಿಯನ್ನು ಪಡೆದಿದ್ದಾರೆ. ಟೆರರ್ ಮಾಡ್ಯೂಲ್ ಬಾಂಗ್ಲಾದಿಂದ ನಿರ್ವಹಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ದೇಶದ ವಿವಿಧೆಡೆ ಸ್ಫೋಟಗಳಿಗೆ ಬಾಂಗ್ಲಾ ವಲಸಿಗರೇ ಕಾರಣ ಎನ್ನಲಾಗುತ್ತಿದೆ.

    ಕರಾವಳಿ ಹಾಗೂ ಚಿಕ್ಕಮಗಳೂರು ಭಾಗದಲ್ಲೂ ಸಹ ಬಾಂಗ್ಲಾ ವಲಸಿಗರು ಹೆಚ್ಚಿದ್ದು, ಹೀಗಾಗಿ ಇಡೀ ರಾಜ್ಯದ ಭದ್ರತೆಗೆ ಅಕ್ರಮ ಬಾಂಗ್ಲಾ ವಲಸಿಗರಿಂದ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಎನ್ಆರ್ ಸಿಯನ್ನು ಕರ್ನಾಟಕಕ್ಕೂ ವಿಸ್ತರಿಸಬೇಕೆಂದು ಒತ್ತಾಯಿಸಿದ್ದಾರೆ. ಇವರು ಭದ್ರತೆಗಷ್ಟೇ ಅಪಾಯಕಾರಿಯಲ್ಲ, ಸ್ಥಳೀಯರಿಂದ ಕೆಲಸ ಕಸಿದುಕೊಳ್ಳುವ ಮೂಲಕ ಆರ್ಥಿಕವಾಗಿಯೂ ಅಪಾಯಕಾರಿಯಗಿದ್ದಾರೆ ಎಂದು ತೇಜಸ್ವಿ ಸೂರ್ಯ ರಾಜ್ಯದಲ್ಲಿರುವ ಅಕ್ರಮ ವಲಸಿಗರಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಸಂಸತ್ ಗಮನ ಸೆಳೆದಿದ್ದಾರೆ.

  • ಜಗನ್ನಾಥ ಯಾತ್ರೆಯಲ್ಲಿ ನುಸ್ರತ್ ಜಹಾನ್- ನನ್ನ ಧರ್ಮ ಯಾವುದು ಅಂತ ನನಗೆ ಗೊತ್ತು

    ಜಗನ್ನಾಥ ಯಾತ್ರೆಯಲ್ಲಿ ನುಸ್ರತ್ ಜಹಾನ್- ನನ್ನ ಧರ್ಮ ಯಾವುದು ಅಂತ ನನಗೆ ಗೊತ್ತು

    -ಜನ್ಮದಿಂದಲೂ ಮುಸ್ಲಿಂ, ಈಗಲೂ ಮುಸ್ಲಿಂ
    -ಫತ್ವಾ ಹೊರಡಿಸಿದವ್ರಿಗೆ ಸಂಸದೆ ತಿರುಗೇಟು

    ಕೋಲ್ಕತ್ತಾ: ಹಲವು ಟೀಕೆ ಟಿಪ್ಪಣಿಗಳ ನಡುವೆಯೂ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ ಇಸ್ಕಾನ್ ಮಂದಿರದ ಜಗನ್ನಾಥ ಯಾತ್ರೆಯಲ್ಲಿ ಭಾಗಿಯಾದರು. ಈ ಮೂಲಕ ತಮ್ಮ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಧರ್ಮಗುರುಗಳು ಮತ್ತು ಟೀಕಾಕಾರರಿಗೆ ಖಡಕ್ ತಿರುಗೇಟು ನೀಡಿದರು.

    ಸಂಸದೆಯಾಗಿ ಆಯ್ಕೆಯಾಗಿರುವ ನಟಿ ನುಸ್ರತ್ ಜಹಾನ್ ಅವರನ್ನು ಇಸ್ಕಾನ್ ದೇವಾಲಯ ಮಂಡಳಿ ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಿತ್ತು. ಕೆಲವು ದಿನಗಳ ಹಿಂದೆ ನುಸ್ರತ್ ಜಹಾನ್ ಕೋಲ್ಕತ್ತಾ ಹಿಂದೂ ಉದ್ಯಮಿ ನಿಖಿಲ್ ಜೈನ್ ರನ್ನು ವಿವಾಹವಾಗಿದ್ದರು. ವಿವಾಹದ ಬಳಿಕ ಸೀರೆ ತೊಟ್ಟು, ಸಿಂಧೂರವಿಟ್ಟು, ಕೈ ಬಳೆ ಹಾಕಿ ನವ ವಧುವಿನಂತೆ ಸಂಸತ್ತಿಗೆ ಆಗಿಸಿ ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಬುರ್ಖಾ ಧರಿಸದೇ ಬಂದಿದ್ದಕ್ಕೆ ಕೆಲವು ಮುಸ್ಲಿಂ ಧರ್ಮಗುರುಗಳ ಕೆಂಗಣ್ಣಿಗೆ ನುಸ್ರತ್ ಜಹಾನ್ ಗುರಿಯಾಗಿದ್ದರು.

    ಯಾತ್ರೆಯಲ್ಲಿ ಭಾಗಿಯಾಗಿದ್ದ ವೇಳೆ ತಮ್ಮ ವಿರುದ್ಧ ಹೊರಡಿಸಲಾಗಿರುವ ಫತ್ವಾಗೆ ಪ್ರತಿಕ್ರಿಯಿಸಿದ ಸಂಸದೆ, ಆಧಾರರಹಿತ ವಿಚಾರಗಳತ್ತ ನಾನು ಗಮನ ನೀಡಲ್ಲ. ನನಗೆ ನನ್ನ ಧರ್ಮ ಯಾವುದು ಎಂಬುವುದು ಗೊತ್ತಿದೆ. ನಾನು ಜನ್ಮದಿಂದಲೂ ಮುಸ್ಲಿಂ, ಇಂದಿಗೂ ಮುಸ್ಲಿಂ ಧರ್ಮದಲ್ಲಿ ನಾನಿದ್ದೇನೆ. ಇದು ಧರ್ಮ ಮತ್ತು ನಂಬಿಕೆಯ ಪ್ರಶ್ನೆಯಾಗಿದ್ದು, ಕೆಲವರು ಈ ಕುರಿತು ತಮ್ಮನ್ನೇ ತಾವು ಪ್ರಶ್ನಿಸಿಕೊಳ್ಳುವುದು ಉತ್ತಮ ಎಂದು ತಿರುಗೇಟು ನೀಡಿದರು.

    ಪೂಜೆ ಸಲ್ಲಿಸಿದ ಸಂಸದೆ:
    ಯಾತ್ರೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಸಾಥ್ ನೀಡಿದ ನುಸ್ರತ್ ಜಹಾನ್ ಪೂಜೆ ಸಲ್ಲಿಸಿ ತೆಂಗಿನಕಾಯಿ ಒಡೆದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿಯೂ ನುಸ್ರತ್ ಜಹಾನ್ ಮಂಗಲಸೂತ್ರ, ಸಿಂಧೂರವಿಟ್ಟು ಆಗಮಿಸಿದ್ದರು. ಹಿಂದೂ ಮಹಿಳೆಯರಂತೆ ವೇಷಭೂಷಣ ತೊಟ್ಟಿದ್ದಕ್ಕೆ ಸ್ಥಳೀಯ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

    ನಾವು ಅಭಿವೃದ್ಧಿಯತ್ತ ಸಾಗುತ್ತಿರುವ ಹೊಸ ಭಾರತದ ನವ ನಾಗರೀಕರು. ಹಾಗಾಗಿ ಎಲ್ಲ ಧರ್ಮ ಮತ್ತು ಸಂಸ್ಕೃತಿಗೆ ಗೌರವ ನೀಡುವುದು ಅವಶ್ಯಕ. ಕೆಲವರು ಮತಗಳಿಗಾಗಿ ದೇವರನ್ನು ವಿಗಂಡನೆ ಮಾಡಲು ಹೊರಟಿದ್ದಾರೆ. ನಾನು ಮುಸ್ಲಿಂ ಮತ್ತು ಜಾತ್ಯಾತೀತ ಭಾರತದ ಮಹಿಳೆ. ದೇವರ ಹೆಸರಿನಲ್ಲಿ ಜನರನ್ನು ವಿಭಜಿಸುವುದು ನನ್ನ ಧರ್ಮ ಎಲ್ಲಿಯೂ ಹೇಳಿಲ್ಲ ಎಂದು ನುಸ್ರತ್ ಜಹಾನ್ ತಿಳಿಸಿದರು.

  • ನಿಖಿಲ್ ಆಯ್ಕೆಯಾಗಿದ್ದಕ್ಕೆ ಬೇಸರ, ಅಸಮಾಧಾನವಿಲ್ಲ- ಪ್ರಜ್ವಲ್

    ನಿಖಿಲ್ ಆಯ್ಕೆಯಾಗಿದ್ದಕ್ಕೆ ಬೇಸರ, ಅಸಮಾಧಾನವಿಲ್ಲ- ಪ್ರಜ್ವಲ್

    ನವದೆಹಲಿ: ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿ ನಿಖಿಲ್ ನೇಮಕವಾಗಿದ್ದಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಅಭಿನಂದನೆ ಸಲ್ಲಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿಢೀರ್ ಬೆಳವಣಿಗೆಯಲ್ಲಿ ನಿಖಿಲ್ ನನ್ನು ಯುವ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಇಂದು ಬೆಳಗ್ಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶರಣಗೌಡ ಕಂದಕೂರ್ ನೇಮಕಕ್ಕೆ ಪಕ್ಷ ತೀರ್ಮಾನಿಸಿತ್ತು. ಶರಣಗೌಡ ಕಂದಕೂರ್ ಅಧ್ಯಕ್ಷರಾಗಲು ನಿರಾಕರಿಸಿದ್ದಾರೆ. ಅಲ್ಲದೆ ನಿಖಿಲ್ ಗೆ ಜವಾಬ್ದಾರಿ ನೀಡುವಂತೆ ಶರಣಗೌಡ ಮನವಿ ಮಾಡಿದರು ಎಂದು ಹೇಳಿದರು.

    ಪಕ್ಷದಲ್ಲಿ ಹಲವರು ನಿಖಿಲ್‍ಗೆ ಜವಾಬ್ದಾರಿ ವಹಿಸಿವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಪಕ್ಷ ದಿಢೀರ್ ನಿರ್ಧಾರ ತೆಗೆದುಕೊಂಡಿದೆ. ಹೆಚ್.ಕೆ ಕುಮಾರಸ್ವಾಮಿ, ಮಧು ಬಂಗಾರಪ್ಪ ನೇಮಕದ ಬಗ್ಗೆ ಮಾಹಿತಿ ಇತ್ತು. ಆದರೆ ನಿಖಲ್ ನೇಮಕ ಬಗ್ಗೆ ಮಾಹಿತಿ ಇರಲಿಲ್ಲ ಎಂದರು.

    ನಾನು ಸಂಸತ್ ನಲ್ಲಿ ಇದ್ದಿದ್ದರಿಂದ ನಂಗೆ ಏನೂ ಮಾಹಿತಿ ಇರಲಿಲ್ಲ. ನನಗೆ ಬೇಸರ, ಅಸಮಾಧಾನ ಯಾವುದೂ ಇಲ್ಲ. ಪಕ್ಷ ವಹಿಸಿದ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತೇನೆ. ನಿಖಿಲ್ ಜೊತೆಗೆ ನಾನು ಕೈ ಜೋಡಿಸಿ ಕೆಲಸ ಮಾಡ್ತೇನೆ ಎಂದು ತಿಳಿಸಿದರು.

    ಇತ್ತ ಯುವ ಘಟಕದ ಅಧ್ಯಕ್ಷರಾದ ಬಳಿಕ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್, ಪಕ್ಷದ ಮುಖಂಡರು ಚಿಕ್ಕ ವಯಸ್ಸಿನಲ್ಲಿ ನನಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅದನ್ನು ನಾನು ಸಮರ್ಥವಾಗಿ ನಿರ್ವಹಿಸುತ್ತೇನೆ. ದೇವೇಗೌಡ ಅವರು ಇಳಿವಯಸ್ಸಿನಲ್ಲಿಯೂ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ನಾನು ಪಕ್ಷ ಕಟ್ಟಲು ಎಚ್.ಡಿ.ದೇವೇಗೌಡ ಅವರೇ ಸ್ಫೂರ್ತಿ. ಮಂಡ್ಯ ಬಿಟ್ಟು ನಾನು ಎಲ್ಲೂ ಹೋಗುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಮತದಾರರು ನನ್ನ ಪರವಾಗಿ ಮತ ಹಾಕಿದ್ದಾರೆ. ನನ್ನ ವಿರುದ್ಧ ಮತ ಹಾಕಿರುವ ಜನರ ಮನಸ್ಸು ಗೆಲ್ಲುವ ಕೆಲಸ ಮಾಡುತ್ತೇನೆ ಎಂದರು.

    ಕುಟುಂಬ ರಾಜಕಾರಣದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನಿಖಿಲ್ ಅವರು, ಕುಟುಂಬ ರಾಜಕಾರಣ ಎಲ್ಲಿ ಇಲ್ಲ ಹೇಳಿ? ಎಲ್ಲಾ ಕಡೆ ಕುಟುಂಬ ರಾಜಕಾರಣವಿದೆ. ಉತ್ತಮ ವಿಚಾರ ಇಟ್ಟುಕೊಂಡು, ಜನರ ಪರವಾಗಿ ಕೆಲಸ ಮಾಡುವ ವ್ಯಕ್ತಿ ಯಾರೇ ಇರಬಹುದು ಅವರಿಗೆ ಅವಕಾಶ ಕೊಡಬೇಕು. ಇದನ್ನು ನಾನು ಸ್ವಾಗತ ಮಾಡುತ್ತೇನೆ ಉಳಿದವರು ಸ್ವಾಗತ ಮಾಡಬೇಕು ಎಂದು ಹೇಳಿದರು.

  • ಕರ್ನಾಟಕ ಸರ್ಕಾರ ಭ್ರಷ್ಟ ಎಂದ ತೇಜಸ್ವಿ ವಿರುದ್ಧ ಗುಡುಗಿದ ಪ್ರಜ್ವಲ್

    ಕರ್ನಾಟಕ ಸರ್ಕಾರ ಭ್ರಷ್ಟ ಎಂದ ತೇಜಸ್ವಿ ವಿರುದ್ಧ ಗುಡುಗಿದ ಪ್ರಜ್ವಲ್

    – ಸಂಸತ್‍ನಲ್ಲಿ ಸದ್ದು ಮಾಡಿತು ಐಎಂಎ ಹಗರಣ

    ನವದೆಹಲಿ: ಕರ್ನಾಟಕ ಸರ್ಕಾರ ಭ್ರಷ್ಟ ಸರ್ಕಾರ ಎಂದು ಆರೋಪಿಸಿದ್ದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಗುಡುಗಿದ್ದಾರೆ.

    ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಭಾಷಣ ಮಾಡಿದ ಪ್ರಜ್ವಲ್ ರೇವಣ್ಣ ಅವರು, ಕರ್ನಾಟಕದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಹೀಗಾಗಿ ಸಂಸತ್‍ನ ಎಲ್ಲ ಸದಸ್ಯರು ಕರ್ನಾಟಕ ಎದುರಿಸುತ್ತಿರುವ ನೀರಿನ ಸಮಸ್ಯೆ ಪರಿಹಾರಕ್ಕೆ ಶ್ರಮಿಸಬೇಕು ಎಂದು ಮನವಿ ಮಾಡಿಕೊಂಡರು.

    ಮಂಡ್ಯ ಭಾಗದ ರೈತರಿಗೆ ಎರಡು ಟಿಎಂಸಿ ನೀರು ಕೊಡಿ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇದುವರೆಗೂ 1,600 ರೈತರು ಸಾವನ್ನಪ್ಪಿದ್ದಾರೆ. ತಮಿಳುನಾಡು ಕೂಡ ನೀರು ಕೇಳುತ್ತಿದೆ. ಮಂಡ್ಯದ ಜನರಿಗೆ ಮಾನವೀಯತೆ ದೃಷ್ಟಿಯಿಂದ ನೀರು ಬಿಡಿ. ಕೇಂದ್ರ ಸಚಿವ ಸದಾನಂದಗೌಡ ಅವರ ಮೂಲಕ ಒತ್ತಾಯಿಸುತ್ತೇನೆ ಎಂದರು.

    ಸಂಸದರೊಬ್ಬರು ಕರ್ನಾಟಕ ಸರ್ಕಾರ ಸರ್ಕಾರ ಭ್ರಷ್ಟ ಸರ್ಕಾರ ಅಂತ ಹೇಳಿದ್ದಾರೆ. ಈ ಮೂಲಕ ಸಂಸತ್ ಅನ್ನು ದಾರಿ ತಪ್ಪಿಸುತ್ತಿದ್ದಾರೆ. ಐಎಂಎ ಹಗರಣದ ಸಂಬಂಧ ಕಾಂಗ್ರೆಸ್ ಒಬ್ಬ ನಾಯಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಲಾಗಿದೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು.

    ಈ ವೇಳೆ ಬಿಜೆಪಿ ನಾಯಕರು ಧ್ವನಿ ಏರಿಸಿದಾಗ ಪ್ರತಾಪ್ ಸಿಂಹ ಅವರೇ ನೀವು ಸುಮ್ಮನಿರೀ ಎಂದು ಪ್ರಜ್ವಲ್ ರೇವಣ್ಣ ಕಿಡಿಕಾರಿದರು.

    ಸಂಸದೆ ಶೋಭಾ ಕರಂದ್ಲಾಜೆ ಅವರು ರಾಜ್ಯ ಸರ್ಕಾರದ ಸಚಿವರು ಐಎಂಎ ಹರಣದಲ್ಲಿ ಭಾಗಿಯಾಗಿದ್ದಾರೆ. ಅವರನ್ನು ಯಾಕೆ ವಜಾ ಮಾಡುತ್ತಿಲ್ಲ. ನೀವು ಮಾಜಿ ಹಾಗೂ ಹಾಲಿ ಸಚಿವರನ್ನು ರಕ್ಷಣೆ ಮಾಡುತ್ತಿರುವಿರಿ ಎಂದು ಹೇಳಿ ತಿರುಗೇಟು ನೀಡಿದರು.

  • ನಮೋ ಹಾಡಿ ಹೊಗಳಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ತೇಜಸ್ವಿ

    ನಮೋ ಹಾಡಿ ಹೊಗಳಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ತೇಜಸ್ವಿ

    – ಮೊದಲ ಭಾಷಣದಲ್ಲಿಯೇ ‘ಕೈ’ ವಿರುದ್ಧ ಕಿಡಿ
    – ದಿನದ 24 ಗಂಟೆ ಮೋದಿ ಕೆಲಸ ಮಾಡ್ತಾರೆ

    ನವದೆಹಲಿ: ಸಂಸತ್ ಅಧಿವೇಶದ ತಮ್ಮ ಮೊದಲ ಭಾಷಣದಲ್ಲಿಯೇ ಬೆಂಗಳೂರು ದಕ್ಷಿಣದ ಯುವ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ರಾಜಕಾರಣ ಒಂದು ಕುಟುಂಬಕ್ಕೆ ಸೀಮಿತವಲ್ಲ ಎಂದು ಚಾಯ್ ವಾಲಾ ಮೋಜಿ ಜೀ ತಿಳಿಸಿಕೊಟ್ಟರು. ಸ್ವಂತ ಸಾಮಥ್ರ್ಯದ ಮೂಲಕ ಎರಡು ಬಾರಿ ಪ್ರಧಾನಿಯಾದರು ಹಾಗೂ ನಮ್ಮಂತ ಯುವಕರಿಗೆ ಅವಕಾಶ ನೀಡಿದರು. ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸಂಸತ್ ಪ್ರವೇಶ ಮಾಡಿದ್ದಾರೆ. ಆದರೆ ಯುಪಿಎ ಸರ್ಕಾರದ ಅವಧಿಯಲ್ಲಿ ಯುವಕರಿಗೆ ಅವಕಾಶವೇ ಸಿಗಲಿಲ್ಲ ಎಂದು ಆರೋಪಿಸಿದರು.

    ಐದು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಪರ ಪ್ರಚಾರ ಮಾಡಲು ಕರಪತ್ರಗಳನ್ನು ಹಂಚುತ್ತಿದ್ದೆ. ಗೋಡೆಗಳ ಮೇಲೆ ಘೋಷಣೆಗಳನ್ನು ಬರೆಯುತ್ತಿದ್ದೆ ಹಾಗೂ ಕೆಲವು ಕಾರ್ಯಕ್ರಮಗಳಲ್ಲಿ ಭಾಷಣ ಮಾಡುತ್ತಿದ್ದೆ. ನಾನು ಸಂಸತ್ ಪ್ರವೇಶ ಮಾಡುತ್ತೇನೆ ಅಂತ ಊಹೆ ಕೂಡ ಮಾಡಿಕೊಂಡಿರಲಿಲ್ಲ. ಆದರೆ ಇಂದು ಇಲ್ಲಿ ನಿಂತು ಭಾಷಣ ಮಾಡುತ್ತಿದ್ದೇನೆ. ಇದು ಬಿಜೆಪಿ ಯುವಕರಿಗೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ತೋರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟರು.

    ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಜಿಎಸ್‍ಟಿ ಸೇರಿದಂತೆ ಅನೇಕ ಬದಲಾವಣೆಗಳನ್ನು ಮೋದಿ ಜೀ ಜಾರಿಗೆ ತಂದರು. ಇದು ದೇಶದ ಅಭಿವೃದ್ಧಿಗೆ ಭಾರೀ ಅನುಕೂಲವಾಗಿದೆ. ಮೋದಿ ಅವರ ಕಾರ್ಯಗಳನ್ನು ಮೆಚ್ಚಿದ ಆಟೋ ಚಾಲಕ, ಟೆಕ್ಕಿ, ಎನ್‍ಆರ್ ಐ ಸೇರಿದಂತೆ ಅನೇಕರು ನಮೋ ಅಗೇನ್ ಎಂದು ಪ್ರಚಾರ ಮಾಡಿದರು ಎಂದರು.

    ಮೋದಿ ಅವರಿಂದ ಹಿಂದುತ್ವಕ್ಕೆ ಮತ್ತಷ್ಟು ಬಲ ಬಂದಿದೆ. ನಾನು ಹಿಂದೂ ಎಂದು ಹೇಳಿಕೊಳ್ಳಲು ಅನೇಕರು ಹೆಮ್ಮೆ ಪಡುತ್ತಾರೆ. ಮುಂದಿನ 5 ವರ್ಷದಲ್ಲಿ ದೇಶವು ಮತ್ತಷ್ಟು ಪ್ರಗತಿ ಹೊಂದಲಿದೆ. ಆದರೆ ಕೆಲ ವಿಪಕ್ಷ ನಾಯಕರು ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡಿದರು. ಫಲಿತಾಂಶದ ಬಳಿಕ ಹಾಗೂ ಈಗಲೂ ಇವಿಎಂ ಯಂತ್ರದಲ್ಲಿ ಮೋಸ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಅವರು ಹೀಗೆ ಮುಂದುವರಿಸಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 545 ಸ್ಥಾನಗಳಲ್ಲಿಯೂ ಗೆಲುವು ಸಾಧಿಸುತ್ತದೆ ಎಂದು ಹೇಳಿದರು.

    ದೇಶವೇ ಅಭಿವೃದ್ಧಿಯತ್ತ ಸಾಗುತ್ತಿದೆ. ಆದರೆ ನಮ್ಮ ರಾಜ್ಯ ಮಾತ್ರ ಹಿಂದೆ ಉಳಿಯುತ್ತಿದೆ. ಕರ್ನಾಟಕಕ್ಕೆ ತನ್ನದೆಯಾದ ವಿಶೇಷ ಇತಿಹಾಸವಿದೆ. ವಿಜಯನಗರ ಸಾಮ್ರಾಜ್ಯದ ಹಕ್ಕ-ಬುಕ್ಕ, ಕೃಷ್ಣದೇವರಾಯ, ಮೈಸೂರು ಮಹಾರಾಜ ಮನೆತನ ಅನೇಕ ರಾಜರು ಆಳ್ವಿಕೆ ನಡೆಸಿದ್ದಾರೆ. ಆದರೆ ಈಗ ಅತ್ಯಂತ ಭ್ರಷ್ಟ ಸರ್ಕಾರ ಆಡಳಿತ ನಡೆಸುತ್ತಿದೆ. ರಾಜ್ಯದಲ್ಲಿ ಹೊರ ಬೀಳುತ್ತಿರುವ ಹಗರಣಗಳಲ್ಲಿ ಆಡಳಿತ ಪಕ್ಷದ ನಾಯಕರು ಹೆಸರುಗಳು ಕೇಳಿಬರುತ್ತಿವೆ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತಿಲ್ಲ ಎಂದು ದೂರಿದರು.

    ನಮ್ಮ ಆಸೆ, ಅನುಭಗಳನ್ನು ಈಡೇರಿಸಲು ಬರುವಂತಹ ನವ ಸರ್ಕಾರದ ಕಡೆಗೆ ನಾವೆಲ್ಲರೂ ಒಲವು ತೋರಬೇಕಿದೆ. ಹೊಸ ಕರ್ನಾಟಕದ ಉದಯ ಯುವಕರ ಮೇಲಿದೆ ಎಂದು ತೇಜಸ್ವಿ ಸೂರ್ಯ ಅವರು ಸಂಸತ್‍ನಲ್ಲಿ ಕನ್ನಡದ ಕಹಳೆ ಮೊಳಗಿಸಿದರು.

  • ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

    ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

    – ಆರ್ಥಿಕ ಸದೃಢ 3 ರಾಷ್ಟ್ರಗಳಲ್ಲಿ ಭಾರತ ಒಂದಾಗಲಿ
    – ಮುಂದಿನ ಪೀಳಿಗೆಗೆ ನಾವು ನೀರು ಉಳಿಸಬೇಕು

    ನವದೆಹಲಿ: 17ನೇ ಲೋಕಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ರಮಾನಾಥ್ ಕೋವಿಂದ ಇಂದು ಮಾತನಾಡಿದರು. ಭಾರತವನ್ನು ಪ್ರಬಲ ಆರ್ಥಿಕ ಶಕ್ತಿ ಕೇಂದ್ರವನ್ನಾಗಿ ಮಾಡಲು ನೂತನ ಸರ್ಕಾರ ಕೆಲಸ ಮಾಡಬೇಕಿದ ಎಂದು ಹೇಳಿದರು.

    ನೂತನ ಮೋದಿ ಸರ್ಕಾರ ತ್ರಿಪಲ್ ತಲಾಖ್ ನಿಷೇಧ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ಮುಂದಿನ ಕಾರ್ಯ ನಿರ್ವಹಿಸಬೇಕಿದೆ. ದೇಶದ 75ನೇ ಸ್ವತಂತ್ರ ದಿನಾಚರಣೆಯ ವೇಳೆ ದೇಶ ಅಭಿವೃದ್ಧಿಯ ಕನಸು ಸಾಕಾರಗೊಳ್ಳುವಂತೆ ಮಾಡುವ ಮೂಲಕ ನಿಮ್ಮ ಕಾರ್ಯವನ್ನು ರೈತರು ಮತ್ತು ಸೈನಿಕರಿಗೆ ಅರ್ಪಿಸಬೇಕು.

    ದೇಶದ ಜನತೆ ದೀರ್ಘ ಅವಧಿಯಿಂದ ಮೂಲಭೂತ ಸೌಲಭ್ಯಗಳನ್ನು ನಿರೀಕ್ಷಿಸುತ್ತಿದ್ದಾರೆ. ಆದ್ರೆ ಆ ಸ್ಥಿತಿ ಬದಲಾವಣೆಯತ್ತ ಸಾಗುತ್ತಿದೆ. ವಿಶ್ವದ ಅತಿದೊಡ್ಡ ಸದೃಢ ಮೂರು ದೇಶಗಳಲ್ಲಿ ಭಾರತ ಸಹ ಒಂದಾಗುವಂತೆ ನೂತನ ಸರ್ಕಾರ ಕಾರ್ಯ ನಿರ್ವಹಿಸಬೇಕೆಂದು ಗುರಿಯನ್ನು ನೀಡಿದರು.

    ಕಿಸಾನ್ ಸಮ್ಮಾನ್ ಯೋಜನೆ ದೇಶದ ಪ್ರತಿಯೊಬ್ಬ ರೈತರಿಗೆ ತಲುಪಿದೆ. ರೈತರಿಗೆ ಪಿಂಚಣಿ ನೀಡುವ ಕಾರ್ಯ ಸಹ ಆರಂಭಗೊಂಡಿದೆ. ಸಣ್ಣ ವ್ಯಾಪಾರಸ್ಥನ ಆರ್ಥಿಕ ಸುರಕ್ಷತೆಯನ್ನು ಗಮನದಲ್ಲಿರಿಸಿ ಮೊದಲ ಬಾರಿಗೆ ಸರ್ಕಾರವೊಂದು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. 3 ಕೋಟಿಗೂ ಅಧಿಕ ಸಣ್ಣ ವ್ಯಾಪಾರಸ್ಥರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.

    ಜಲ ಸಂರಕ್ಷಣೆ:
    ಮುಂದಿನ ಪೀಳಿಗೆಗಾಗಿ ನಾವು ನೀರು ಉಳಿಸುವ ಅಚಲ ನಿರ್ಧಾರ ಮಾಡಬೇಕು. ಸಂಸತ್ತಿನ ಅಧಿವೇಶನದಲ್ಲಿ ಜೂನ್ 14 ರಂದು ಬಿಡುಗಡೆಯಾದ ನೀತಿ ಆಯೋಗದ ವರದಿಯನ್ನು ಆಧಾರವಾಗಿ ಇಟ್ಟುಕೊಂಡು ಮಾತನಾಡಿದ ಅವರು, ಭಾರತ ತನ್ನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ನೀರಿನ ಬಿಕ್ಕಟ್ಟಿನಿಂದ ಬಳಲುತ್ತಿದೆ. ನಾವು ನಮ್ಮ ಮಕ್ಕಳಿಗೆ ಮತ್ತು ಮುಂದಿನ ಪೀಳಿಗೆಗೆ ನೀರನ್ನು ಉಳಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹೊಸ ಜಲಶಕ್ತಿ ಸಚಿವಾಲಯವನ್ನು ರಚಿಸುವುದು ನಿರ್ಣಾಯಕ ಹೆಜ್ಜೆಯಾಗಿದ್ದು, ಇದು ನೀರಿನ ಸಮಸ್ಯೆ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

    ಈ ವರದಿಯ ಪ್ರಕಾರ ಸುರಕ್ಷಿತ ನೀರಿನ ಕೊರೆತೆಯಿಂದಾಗಿ ಸುಮಾರು 60 ಕೋಟಿ ಜನರು ತೀವ್ರ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪ್ರತೀ ವರ್ಷ ಸುಮಾರು ಎರಡು ಲಕ್ಷ ಜನರು ಇದರಿಂದ ಸಾಯುತ್ತಿದ್ದಾರೆ ಎಂದು ವರದಿ ಹೇಳಿದೆ. ಸಂಯೋಜಿತ ನೀರು ನಿರ್ವಹಣಾ ಸೂಚ್ಯಂಕ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಬಿಡುಗಡೆ ಮಾಡಿದ ಈ ವರದಿ ಮುಂದಿನ ದಿನಗಳಲ್ಲಿ ಭಾರತದಲ್ಲಿ ನೀರಿನ ಸಮಸ್ಯೆ ತುಂಬ ಉಲ್ಬಣಗೊಳ್ಳಬಹುದು ಎಂದು ಅತಂಕ ವ್ಯಕ್ತಪಡಿಸಿದೆ.

    2030ರ ಹೊತ್ತಿಗೆ ದೇಶದಲ್ಲಿ ನೀರಿನ ಬೇಡಿಕೆಯು ಈಗ ಇರುವ ಬೇಡಿಕೆಗಿಂತ ಎರಡು ಪಟ್ಟು ಹೆಚ್ಚಾಗುತ್ತದೆ ಎಂದು ಊಹಿಸಲಾಗಿದೆ. ಇಂದು ಬಹಳ ಜನರಿಗೆ ನೀರಿನ ಕೊರೆತೆಯನ್ನು ಸೂಚಿಸುತ್ತದೆ ಮತ್ತು ದೇಶದ ಜಿಡಿಪಿಯಲ್ಲಿ ಶೇ. 6 ರಷ್ಟು ನಷ್ಟವಾಗುತ್ತದೆ ಎಂದು ಹೇಳಲಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಓವೈಸಿ ಪ್ರಮಾಣ ವಚನ ವೇಳೆ ಮೊಳಗಿದ ಜೈ ಶ್ರೀರಾಮ್ ಘೋಷಣೆ

    ಓವೈಸಿ ಪ್ರಮಾಣ ವಚನ ವೇಳೆ ಮೊಳಗಿದ ಜೈ ಶ್ರೀರಾಮ್ ಘೋಷಣೆ

    – ಜೈ ಭೀಮ್, ತಕ್ಬೀರ್ ಅಲ್ಲಾಹು ಅಕ್ಬರ್ ಎಂದ ಓವೈಸಿ
    – ಅಧಿವೇಶನದಲ್ಲಿ ಸದ್ದು ಮಾಡಿದ ಘೋಷಣೆಗಳು

    ನವದೆಹಲಿ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಅಧಿವೇಶದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಎದ್ದು ಬರುತ್ತಿದ್ದಂತೆ ಕೆಲ ಸಂಸದರು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ ಪ್ರಸಂಗ ಇಂದು ನಡೆದಿದೆ.

    ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಆಯ್ಕೆಯಾಗಿರುವ ಅಸಾದುದ್ದೀನ್ ಓವೈಸಿ ಅವರು ಇಂದು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಈ ವೇಳೆ ಅಧಿವೇಶನಲ್ಲಿ ಜೈ ಶ್ರೀರಾಮ್, ವಂದೇ ಮಾತರಂ ಘೋಷಣೆ ಭಾರೀ ಸದ್ದು ಮಾಡಿತು. ಇದರಿಂದಾಗಿ ಸ್ವಲ್ಪ ವಿಚಲಿತಗೊಂಡ ಓವೈಸಿ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ‘ಜೈ ಭೀಮ್’, ಜೈ ಮೀಮ್, ತಕ್ಬೀರ್ ಅಲ್ಲಾಹು ಅಕ್ಬರ್, ಜೈ ಹಿಂದ್ ಎಂದು ಕೂಗಿದರು. ಇದನ್ನೂ ಓದಿ: ಜೈ ಹಿಂದ್, ಜೈ ಬಂಗಾಳ್ – ದೀದಿ ಪಡೆಯಿಂದ ಮೋದಿಗೆ 10 ಸಾವಿರ ಅಂಚೆಪತ್ರ

    ಓವೈಸಿ ಅವರ ಪ್ರಮಾಣ ವಚನದ ಬಳಿಕವೂ ಸಂಸದರ ಘೋಷಣೆ ಜೋರಾಗಿಯೇ ಇತ್ತು. ಹೀಗಾಗಿ ಓವೈಸಿ ಸಹಿ ಮಾಡುವುದನ್ನೇ ಮರೆತಿದ್ದರು. ತಕ್ಷಣವೇ ಅಧಿಕಾರಿಗಳು ಅವರನ್ನು ಕರೆದು ಸಹಿ ಪಡೆದರು.  ಇದನ್ನೂ ಓದಿ: ಜೈ ಶ್ರೀರಾಮ್ ಹೇಳೋ ಬಿಜೆಪಿ ಬಾಬುಗಳೇ ಒಂದಾದ್ರೂ ರಾಮಮಂದಿರ ಕಟ್ಟಿದ್ರಾ?: ಮಮತಾ ಬ್ಯಾನರ್ಜಿ

    ಈ ಕುರಿತು ಪ್ರತಿಕ್ರಿಯೆ ನೀಡಿದ ಓವೈಸಿ ಅವರು, ನನ್ನನ್ನು ನೋಡಿದಾಗ ಅವರು ಇಂತಹ ವಿಷಯಗಳನ್ನು ನೆನಪಿಸಿಕೊಳ್ಳುತ್ತರುವುದು ಇದು ಒಳ್ಳೆಯದು. ಅಷ್ಟೇ ಅಲ್ಲದೆ ನನ್ನನ್ನು ನೋಡಿದಾಗ ಅವರಿಗೆ ಸಂವಿಧಾನ ಹಾಗೂ ಮುಜಾಫರ್ ಪುರ್ ನಲ್ಲಿ ಮಕ್ಕಳ ಸಾವಿನ ಘಟನೆ ಕೂಡ ನನೆಪಾಗುತ್ತದೆ ಎಂದು ಹೇಳಿದರು.

    ಜೈ ಶ್ರೀರಾಮ್ ಘೋಷಣೆ ಕೆಲ ದಿನಗಳ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಕೂಡ ವಿಚಲಿತಗೊಳಿಸಿತ್ತು. ಬಳಿಕ ಅದು ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಅಂಚೆ ಪತ್ರ ಕ್ರಾಂತಿಗೆ ಕಾರಣವಾಗಿತ್ತು.

  • ಪ್ರಮಾಣ ವಚನ ಸ್ವೀಕಾರ ಬಳಿಕ ಸಹಿ ಮಾಡೋದನ್ನ ಮರೆತ ರಾಹುಲ್

    ಪ್ರಮಾಣ ವಚನ ಸ್ವೀಕಾರ ಬಳಿಕ ಸಹಿ ಮಾಡೋದನ್ನ ಮರೆತ ರಾಹುಲ್

    ನವದೆಹಲಿ: 4ನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಸದನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಆದರೆ ಈ ವೇಳೆ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಹಿ ಮಾಡದೆ ಮುಂದೆ ಸಾಗಿದ ಘಟನೆ ನಡೆಯಿತು.

    17ನೇ ಲೋಕಸಭೆಯ ಮೊದಲ ಸಂಸತ್ ಅಧಿವೇಶನ ಇಂದು ಆರಂಭವಾಯಿತು. ಸಂಸತ್‍ಗೆ ರಾಹುಲ್ ತಡವಾಗಿ ಆಗಮಿಸಿದ್ದರು. ಇದಕ್ಕೂ ಮುನ್ನ ಹಲವು ನಾಯಕರು ರಾಹುಲ್ ಸಂಸತ್‍ಗೆ ಆಗಮಿಸದೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದ್ದರು.

    ಸಂಸತ್ ಆಗಮಿಸಿದ ರಾಹುಲ್ ಪ್ರಮಾಣ ವಚನ ಸ್ವೀಕರಿಸಿ ಮುಂದೇ ಸಾಗಿದರು. ಈ ಹಂತದಲ್ಲಿ ರಾಜ್‍ನಾಥ್ ಸಿಂಗ್ ಅವರು ರಾಹುಲ್‍ಗೆ ಸಹಿ ಮಾಡುವಂತೆ ತಿಳಿಸಿದರು. ಪುನಃ ಮರಳಿದ ರಾಹುಲ್ ಸಹಿ ಮಾಡಿ ಸ್ಪೀಕರ್ ಬಳಿ ತೆರಳಿ ಶುಭ ಕೋರಿದರು. ಬಳಿಕ ಪಕ್ಷದ ಮುಖಂಡ ಬಳಿ ತೆರಳಿ ಶುಭ ಕೋರಿದರು. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ಕೂಡ ಸಂಸತ್ ನಲ್ಲಿ ಹಾಜರಿದ್ದರು.

    ಪ್ರಮಾಣ ವಚನ ಸ್ವೀಕರಿಸುವ ಮುನ್ನ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, 4ನೇ ಬಾರಿಗೆ ಲೋಕಸಭಾ ಸಂಸತ್ ಸದಸ್ಯರಾಗಿ ಇಂದಿನಿಂದ ಕಾರ್ಯಾರಂಭ ಮಾಡುತ್ತಿದ್ದು, ಕೇರಳ ವಯಾನಾಡು ಜನತೆಗೆ ಧನ್ಯವಾದ. ಪ್ರಮಾಣ ವಚನ ಸ್ವೀಕರಿಸುವ ಮೂಲಕ ಹೊಸ ಇನ್ನಿಂಗ್ಸ್ ಶುರು ಮಾಡುತ್ತಿದ್ದೇನೆ. ಭಾರತದ ಸಂವಿಧಾನದಲ್ಲಿ ನಿಷ್ಠೆ ಮತ್ತು ನಂಬಿಕೆಯನ್ನು ಹೊಂದಿರುತ್ತೇನೆ ಎಂದು ತಿಳಿಸಿದ್ದರು.

    ರಾಹುಲ್ ಗಾಂಧಿ ಅವರು ಈ ಬಾರಿ 2 ಕ್ಷೇತ್ರಗಳಿಂದ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿ ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋಲುಂಡು, ಕೇರಳ ವಯನಾಡಿಯಲ್ಲಿ ಗೆಲುವು ಪಡೆದಿದ್ದರು.