Tag: parliament

  • ಬೆಲೆ ಏರಿಕೆ ವಿರೋಧಿಸಿ ಸದನದಲ್ಲಿ ಹಸಿ ಬದನೆಕಾಯಿ ತಿಂದ ಸಂಸದೆ

    ಬೆಲೆ ಏರಿಕೆ ವಿರೋಧಿಸಿ ಸದನದಲ್ಲಿ ಹಸಿ ಬದನೆಕಾಯಿ ತಿಂದ ಸಂಸದೆ

    ನವದೆಹಲಿ: ಬೆಲೆ ಏರಿಕೆ ವಿರೋಧಿಸಿ ತೃಣಮೂಲ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಲೋಕಸಭೆಯಲ್ಲಿ ಎದ್ದು ನಿಂತು ಹಸಿ ಬದನೆಕಾಯಿಯನ್ನು ತಿಂದಿದ್ದಾರೆ.

    ಮಳೆಗಾಲದ ಸಂಸತ್ ಅಧಿವೇಶನ ಶುರುವಾಗಿ ಎರಡು ವಾರ ಮುಗಿದ ನಂತರ ಸುಗಮ ಕಲಾಪ ನಡೆದಿದೆ. ಕಾಂಗ್ರೆಸ್‍ನ ನಾಲ್ವರು ಸಂಸದರ ಮೇಲಿನ ಅಮಾನತು ರದ್ದು ಬೆನ್ನಲ್ಲೇ ಸುಗಮ ಕಲಾಪಕ್ಕೆ ವಿಪಕ್ಷಗಳು ಅವಕಾಶ ಮಾಡಿಕೊಟ್ಟಿದೆ. ಇಂದು ಜಿಎಸ್‍ಟಿ ಹೇರಿಕೆ, ಹಣದುಬ್ಬರ ಮೇಲೆ ಚರ್ಚೆಗೆ ಕೇಂದ್ರ ಸರ್ಕಾರ ಕೊನೆಗೂ ಅವಕಾಶ ಮಾಡಿಕೊಟ್ಟಿದೆ. ಇವತ್ತು ಬೆಳಗ್ಗೆ ಕಲಾಪ ಶುರುವಾಗುತ್ತಲೇ ದರ ಏರಿಕೆ ಪ್ರಸ್ತಾಪಿಸಿ ಸಂಸತ್‍ನ ಉಭಯ ಸದನಗಳಲ್ಲೂ ವಿಪಕ್ಷಗಳು ಗದ್ದಲ ಎಬ್ಬಿಸಿದರು.

    ಹಣದುಬ್ಬರ, ತೈಲ ಬೆಲೆ ಏರಿಕೆ ಪ್ರಸ್ತಾಪಿಸಿದ ಕಾಂಗ್ರೆಸ್‍ನ ಮನೀಶ್ ತಿವಾರಿ, ಡಿಎಂಕೆಯ ಕನಿಮೋಳಿ, ಟಿಎಂಸಿಯ ಕಕೊಳಿ ಘೋಷ್ ದಸ್ತಿದಾರ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಕೊಳಿ ಘೋಷ್ ಅವರಂತೂ, ಹಸಿ ಬದನೆ ಕಚ್ಚಿ, ಜನ ಹಸಿ ತರಕಾರಿ ತಿನ್ನಬೇಕೆಂದು ಬಯಸ್ತಿದ್ಯಾ ಎಂದು ಆಕ್ರೋಶ ಹೊರಹಾಕಿದರು.

    ಇತ್ತೀಚಿಗೆ ಕಡಿಮೆ ಅವಧಿಯಲ್ಲಿಯೇ ಸಿಲಿಂಡರ್ ದರ ನಾಲ್ಕು ಬಾರಿ ಹೆಚ್ಚಾಗಿದೆ. ಒಂದೊಮ್ಮೆ 600 ರೂ. ಇದ್ದ ಗ್ಯಾಸ್ ಬೆಲೆ ಈಗ 1,100 ರೂಪಾಯಿ ದಾಟಿದೆ. ಸಾಮಾನ್ಯರಿಗೆ ಅಡುಗೆ ಮಾಡಿಕೊಳ್ಳುವುದು ಭಾರವಾಗಿದೆ. ನಾವು ಹಸಿ ತರಕಾರಿಗಳನ್ನು ತಿನ್ನಬೇಕೆಂದು ಸರ್ಕಾರ ಬಯಸುತ್ತದೆಯೇ ಎಂದು ಪ್ರಶ್ನಿಸಿದ ಅವರು, ಕಳೆದ ಕೆಲವು ತಿಂಗಳುಗಳಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆಗಳನ್ನು ನಾಲ್ಕು ಬಾರಿ ಹೆಚ್ಚಿಸಲಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

    ಬಡವರಿಗೆ ಹಾಗೂ ಸಾಮಾನ್ಯರಿಗೆ ತೊಂದರೆ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೂಡಲೇ ಸಿಲಿಂಡರ್ ದರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಪರ್ವತಮುಖಿಯಲ್ಲಿ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ ಐವರು – ನಾಗರಪಂಚಮಿಯಂದು ಸುಬ್ರಹ್ಮಣ್ಯಕ್ಕೆ ಪ್ರವೇಶವಿಲ್ಲ

    ಬಿಜೆಪಿಯ ನಿಶಿಕಾಂತ್ ದುಬೇ, ಕೇಂದ್ರದ ಕ್ರಮಗಳನ್ನು ಸಮರ್ಥನೆ ಮಾಡಿಕೊಂಡರು. ಶ್ರೀಲಂಕಾ, ಬಾಂಗ್ಲಾ, ಭೂತಾನ್, ಬಾಂಗ್ಲಾ ನೋಡಿ. ನಮ್ಮಲ್ಲಿನ ಬಡವರಿಗೆ ಎರಡು ಹೊತ್ತಿನ ಊಟವಾದರೂ ಸಿಗುತ್ತದೆ. ಅದಕ್ಕೆ ನಾವು ಪ್ರಧಾನಿ ಮೊದಿಗೆ ಧನ್ಯವಾದ ಹೇಳ್ಬೇಕು ಎಂದರು. ಇದನ್ನೂ ಓದಿ: ಕಸದ ಜೊತೆ ಡಂಪಿಂಗ್ ಯಾರ್ಡ್‍ಗೆ ಡಂಪ್ ಆದ ಗಾರ್ಬೇಜ್ ಆಟೋ – ಚಾಲಕ ಅಪಾಯದಿಂದ ಪಾರು

    Live Tv
    [brid partner=56869869 player=32851 video=960834 autoplay=true]

  • ಕಾಶ್ಮೀರಿ ಪಂಡಿತರ‍್ಯಾರು ಕಣಿವೆಯನ್ನು ತೊರೆದಿಲ್ಲ: ಕೇಂದ್ರ ಸಚಿವ

    ಕಾಶ್ಮೀರಿ ಪಂಡಿತರ‍್ಯಾರು ಕಣಿವೆಯನ್ನು ತೊರೆದಿಲ್ಲ: ಕೇಂದ್ರ ಸಚಿವ

    ನವದೆಹಲಿ: 2022ರ ಅವಧಿಯಲ್ಲಿ ಕಾಶ್ಮೀರಿ ಪಂಡಿತರು ಯಾರೂ ಕಣಿವೆಯನ್ನು ತೊರೆದಿಲ್ಲ ಎಂದು ಕೇಂದ್ರ ಸಚಿವ ನಿತ್ಯಾನಂದ ರೈ ತಿಳಿಸಿದರು.

    ಸಂಸತ್ತಿನಲ್ಲಿ ಮಾತನಾಡಿದ ಅವರು, 2019ರ ಅಗಸ್ಟ್‌ನಲ್ಲಿ 320ನೇ ವಿಧಿಯನ್ನು ರದ್ದುಪಡಿಸಿದ ನಂತರ ಯಾವುದೇ ಕಾಶ್ಮೀರಿ ಪಂಡಿತರು ವಲಸೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.

    ಕಾಶ್ಮೀರಿ ಪಂಡಿತರ ಮೇಲೆ ಭಯೋತ್ಪಾದಕರಿಂದ ನಿರಂತರವಾಗಿ ನಡೆಯುತ್ತಿರುವ ಹತ್ಯೆಗಳ ಹಿನ್ನೆಲೆಯಲ್ಲಿ ಕಾಶ್ಮೀರಿ ಪಂಡಿತರು ಕಣಿವೆ ತೊರೆಯುತ್ತಿದ್ದೇವೆ ಎಂದು ಪಂಡಿತ ಕುಟುಂಬಗಳು ಕಾಶ್ಮೀರವನ್ನು ತೊರೆಯುತ್ತಿರುವ ವೀಡಿಯೋವೊಂದು ವೈರಲ್ ಆಗಿತ್ತು. ಜೊತೆಗೆ ಸರ್ಕಾರವು ಜನರನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ದೂರಿದ್ದರು. ಅಷ್ಟೇ ಅಲ್ಲದೇ ಅನೇಕರು ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡುವುದಾಗಿಯೂ ತಿಳಿಸಿದ್ದರು. ಇದನ್ನೂ ಓದಿ: ಹತ್ಯೆಯ ದಿನವೇ ಮುಸ್ಲಿಂ ಸ್ನೇಹಿತನ ಗೃಹಪ್ರವೇಶಕ್ಕೆ ಹೋಗಿದ್ದ ಪ್ರವೀಣ್ ನೆಟ್ಟಾರ್!

    ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ಪ್ರಧಾನಿ ಅಭಿವೃದ್ಧಿ ಪ್ಯಾಕೇಜ್(ಪಿಎಂಡಿಪಿ) ಅಡಿಯಲ್ಲಿ ಕೆಲಸ ಮಾಡುವ ಯಾವುದೇ ಕಾಶ್ಮೀರಿ ಪಂಡಿತರು ರಾಜೀನಾಮೆಯನ್ನು ನೀಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಸದನದಲ್ಲಿ ಕಾಗದ ಹಾರಿಸಿದ್ದ ಆಪ್ ಸಂಸದ ಅಮಾನತು

    Live Tv
    [brid partner=56869869 player=32851 video=960834 autoplay=true]

  • ಕಲಾಪ ಅಡ್ಡಿಪಡಿಸುವುದು, ನಂತರ ಸುಳ್ಳು ಹೇಳುವುದು, ಇಷ್ಟೇ ಕಾಂಗ್ರೆಸ್ ಅಜೆಂಡಾ: ಜೋಶಿ ಟೀಕೆ

    ಕಲಾಪ ಅಡ್ಡಿಪಡಿಸುವುದು, ನಂತರ ಸುಳ್ಳು ಹೇಳುವುದು, ಇಷ್ಟೇ ಕಾಂಗ್ರೆಸ್ ಅಜೆಂಡಾ: ಜೋಶಿ ಟೀಕೆ

    ನವದೆಹಲಿ: ಸಂಸತ್‍ನಲ್ಲಿ ಚರ್ಚೆ ನಡೆಯದಂತೆ ಅಡ್ಡಿಪಡಿಸುವುದು ನಂತರ ಹೊರಗೆ ಬಂದು ಸುಳ್ಳು ಹೇಳುವುದೇ ಕಾಂಗ್ರೆಸ್‍ನ ಸಿಂಗಲ್ ಪಾಯಿಂಟ್ ಅಜೆಂಡಾ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಪ್ರತಿಪಕ್ಷದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

    ರಾಜ್ಯಸಭೆ ಕಲಾಪದಲ್ಲಿ ಚರ್ಚೆಗೆ ಅವಕಾಶ ಕೊಟ್ಟಿಲ್ಲ ಎಂದು ಟ್ವೀಟ್ ಮಾಡಿದ ಕಾಂಗ್ರೆಸ್ ಪಕ್ಷದ ರಾಜ್ಯಸಭೆ ಸದಸ್ಯ, ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್, ಆಹಾರ ಪದಾರ್ಥಗಳ ಮೇಲಿನ ಜಿಎಸ್‍ಟಿ ದರ ಹೆಚ್ಚಳ ಒಮ್ಮತದ ನಿರ್ಧಾರವಲ್ಲ ಅಂತ ಟ್ವಿಟ್ಟರ್‌ನಲ್ಲಿ ಟೀಕಿಸಿದರು.

    ಈ ಬಗ್ಗೆ ಸುದೀರ್ಘ ಟ್ವೀಟ್ ಮಾಡಿರುವ ಜೈರಾಂ ರಮೇಶ್, ಜಿಎಸ್‍ಟಿ ಕೌನ್ಸಿಲ್‍ನಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಇದು ಸರ್ವಸಮ್ಮತದ ನಿರ್ಧಾರವಲ್ಲ. ಕೇಂದ್ರ ಹಣಕಾಸು ಸಚಿವರು, ರಾಜ್ಯಗಳ ಹಣಕಾಸು ಸಚಿವರ ಜೊತೆ ಚರ್ಚೆ ನಡೆಸಿಲ್ಲ ಎಂದು ಆಪಾದಿಸಿದರು. ಇದನ್ನೂ ಓದಿ: Sena Vs Sena: ಉದ್ಧವ್ ಶಿಬಿರಕ್ಕೆ ತಕ್ಷಣದ ಪರಿಹಾರವಿಲ್ಲ, ಆಗಸ್ಟ್ 1 ರಂದು ಮುಂದಿನ ವಿಚಾರಣೆ: ಕೋರ್ಟ್

    ಸರಣಿ ಟ್ವೀಟ್ ಮಾಡಿದ ಜೈರಾಮ್ ರಮೇಶ್‍ಗೆ ಟ್ವಿಟ್ಟರ್‌ನಲ್ಲೇ ತಿರುಗೇಟು ನೀಡಿದ ಅವರು, ಚರ್ಚೆಗೆ ನಾವು ಸಿದ್ಧ, ಸದನದಲ್ಲಿ ಯಾವುದೇ ವಿಷಯಗಳ ಚರ್ಚೆಗೆ ಸದನದ ನೀತಿ ನಿಯಮಾವಳಿಗಳಿವೆ. ಪ್ರತಿಪಕ್ಷಗಳು ಸಭಾಧ್ಯಕ್ಷರಿಗೆ ನೋಟಿಸ್ ಕೊಟ್ಟು ಚರ್ಚೆಗೆ ಅವಕಾಶ ಕೋರಬೇಕು. ಆ ಬಳಿಕ ಅದು ಕಲಾಪ ಸಲಹಾ ಸಮಿತಿಯಲ್ಲಿ ಚರ್ಚೆಯಾಗಿ ಸಮಯ ನಿಗದಿಯಾಗಬೇಕು. ಆದರೆ ಕಾಂಗ್ರೆಸ್‍ಗೆ ಚರ್ಚಿಸುವುದು ಬೇಕಿಲ್ಲ, ಸದನದೊಳಗೆ ಕಲಾಪಕ್ಕೆ ಅಡ್ಡಿಪಡಿಸುವುದು. ಸದನದ ಹೊರಗೆ ಬಂದು ಸುಳ್ಳು ಹೇಳುವುದೇ ಕಾಂಗ್ರೆಸ್ ಕೆಲಸ ಎಂದು ಕಿಡಿಕಾರಿದರು.

    ಪ್ರತಿಯೊಬ್ಬ ಸಂಸದರಿಗೂ ಪ್ರಶ್ನೋತ್ತರ ಅವಧಿ ಬಹಳ ಮುಖ್ಯ. ಆದರೆ ಪ್ರತಿಪಕ್ಷ ಕಾಂಗ್ರೆಸ್ ಪ್ರಶ್ನೋತ್ತರ ಅವಧಿಯನ್ನೇ ನಡೆಸಲು ಅವಕಾಶವಾಗದಂತೆ ಸದನದ ಕಲಾಪಕ್ಕೆ ಅಡ್ಡಿ ಮಾಡುತ್ತಿದೆ ಎಂದು ಜೋಶಿ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

    ಟ್ವೀಟ್‍ನಲ್ಲಿ ಏನಿದೆ?
    ಆಹಾರ ಪದಾರ್ಥಗಳ ಮೇಲಿನ ಜಿಎಸ್‍ಟಿ ದರಗಳ ಕುರಿತು ಮುಕ್ತ ಮನಸ್ಸಿನಿಂದ ಚರ್ಚಿಸಲು ನಾವು ತಯಾರಿದ್ದೇವೆ. ಆದರೆ ಕೇಂದ್ರ ವಿತ್ತ ಸಚಿವರು ಕೋವಿಡ್‍ಗೆ ತುತ್ತಾಗಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಚೇತರಿಸಿಕೊಂಡ ತಕ್ಷಣ ಮತ್ತು ಸಂಸದೀಯ ಕಲಾಪ ಸಲಹಾ ಸಮಿತಿ ನಿರ್ಧರಿಸಿದ ತಕ್ಷಣ ವಿತ್ತ ಸಚಿವರು ಉತ್ತರಿಸುತ್ತಾರೆ.

    ಇಂದು ರಾಜ್ಯಸಭೆಯ ಗೌರವಾನ್ವಿತ ಸಭಾಧ್ಯಕ್ಷರು ಚರ್ಚೆಗೂ ಅವಕಾಶ ನೀಡೋದಾಗಿ ಹೇಳಿದರು. ಸದನದ ವಿಷಯ ಪಟ್ಟಿಯಂತೆ ಚರ್ಚೆಯ ಪ್ರಕ್ರಿಯೆಗಳು ಆರಂಭವಾಗಬೇಕು. ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಅವರಿಗೆ ಸದನದ ಪದ್ದತಿ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

    prahlad joshi

    ಕಾಂಗ್ರೆಸ್ ಪಕ್ಷದ ಉದ್ದೇಶ ಸಂಸತ್ತಿನ ಕಲಾಪ ಅಡ್ಡಿಪಡಿಸೋದು ಮಾತ್ರ, ಚರ್ಚೆ ನಡೆಸೋದಲ್ಲ. ವಾಸ್ತವವನ್ನು ಎದುರಿಸಲು ಸಾಧ್ಯವಾಗದ ಕಾರಣ ಸರ್ಕಾರದ ಉದ್ದೇಶದ ಬಗ್ಗೆ ಕಾಂಗ್ರೆಸ್ ಮುಖಂಡರು ಸುಳ್ಳು ಹೇಳುತ್ತಿದ್ದಾರೆ. ಕಲಾಪ ಅಡ್ಡಿಪಡಿಸುವುದು ಮತ್ತು ಪ್ರಪಂಚದ ಮುಂದೆ ಸುಳ್ಳು ಹೇಳುವುದು ಇದು ಕಾಂಗ್ರೆಸ್ ನೀತಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ:  16 ಗೇಟ್‍ಗಳನ್ನು ರಿಪ್ಲೇಸ್ ಮಾಡಲಾಗಿದ್ದು, ಇವತ್ತಿಗೂ 61 ಗೇಟ್ ಬದಲಿಸಬೇಕಾಗಿದೆ: ಸಿಎಂ 

    ಪ್ರಪಂಚದ ಬೇರೆ-ಬೇರೆ ರಾಷ್ಟ್ರಗಳಲ್ಲಿ ಹಣದುಬ್ಬರ ಎಲ್ಲಿಗೆ ತಲುಪಿದೆ ಎನ್ನುವುದು ಕಾಂಗ್ರೆಸ್‍ಗೂ ಗೊತ್ತಿದೆ. ಭಾರತ ಹಣದುಬ್ಬರವನ್ನು ಕಂಟ್ರೋಲ್ ಮಾಡುವಲ್ಲಿ ದಿಟ್ಟ ಹೆಜ್ಜೆಗಳನ್ನ ತೆಗೆದುಕೊಂಡಿದೆ. ಹೀಗಾಗಿ ಸದನದಲ್ಲಿ ಕಾಂಗ್ರೆಸ್ ಚರ್ಚಿಸಲು ತಯಾರಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.

    Live Tv
    [brid partner=56869869 player=32851 video=960834 autoplay=true]

  • ರಾಹುಲ್ ಗಾಂಧಿಗೆ ಟ್ವಿಟ್ಟರ್‌ನಲ್ಲಿ ಟಕ್ಕರ್ ಕೊಟ್ಟ ಪ್ರಹ್ಲಾದ್ ಜೋಶಿ

    ರಾಹುಲ್ ಗಾಂಧಿಗೆ ಟ್ವಿಟ್ಟರ್‌ನಲ್ಲಿ ಟಕ್ಕರ್ ಕೊಟ್ಟ ಪ್ರಹ್ಲಾದ್ ಜೋಶಿ

    ನವದೆಹಲಿ: ಸಂಸತ್‌ನಲ್ಲಿ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.

    ರಾಹುಲ್ ಗಾಂಧಿಗೆ ಟ್ವಿಟ್ಟರ್‌ನಲ್ಲಿ ತಿರುಗೇಟು ನೀಡಿರುವ ಪ್ರಹ್ಲಾದ್ ಜೋಶಿ, ಸಂಸತ್‌ನಲ್ಲಿ ಚರ್ಚೆಗೆ ಯಾವುದೇ ನಿರ್ಬಂಧಗಳು ಇಲ್ಲ. 1975 ರಲ್ಲಿ ಮಾತ್ರ ಜನರ ವಿಷಯ ಪ್ರಸ್ತಾಪಿಸಲು ಸಂಸತ್‌ನಲ್ಲಿ ನಿರ್ಬಂಧ ಇತ್ತು. ರಚನಾತ್ಮಕ ವಿರೋಧ ಪಕ್ಷಗಳ ಉತ್ತಮ ಚರ್ಚೆಗೆ ಯಾವಾಗಲೂ ಸ್ವಾಗತವಿರುತ್ತದೆ ಎಂದು ಟ್ವಿಟ್ಟರ್ ಮೂಲಕ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.

    ಬೆಲೆ ಏರಿಕೆ ಬಗ್ಗೆ ಚರ್ಚೆಗೆ ಅವಕಾಶ ಇಲ್ಲ ಎಂದು ಟೀಕಿಸಿ ರಾಹುಲ್ ಗಾಂಧಿಯವರು ಟ್ವೀಟ್ ಮಾಡಿದ್ದ ಹಿನ್ನಲೆಯಲ್ಲಿ ಪ್ರಹ್ಲಾದ್ ಜೋಶಿಯವರು ಈ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿಯಾಗಿ ಕೃತಜ್ಞತೆ ಅರ್ಪಿಸಿದ ನೂತನ ರಾಜ್ಯಸಭಾ ಸದಸ್ಯೆ ಪಿ.ಟಿ. ಉಷಾ

    ರೂಪಾಯಿ ಮೌಲ್ಯ ಡಾಲರ್ ಎದುರು 80 ರೂ. ದಾಟಿದೆ. ಎಲ್‌ಪಿಜಿ ಸಿಲಿಂಡರ್ ಬೆಲೆ 1,000 ರೂ. ದಾಟಿದೆ. ಜೂನ್ ತಿಂಗಳಲ್ಲಿ 1.3 ಕೋಟಿ ನಿರುದ್ಯೋಗ ಇದೆ. ದವಸ ಧಾನ್ಯಗಳ ಮೇಲೂ ಜಿಎಸ್‌ಟಿ ಹಾಕಲಾಗಿದೆ. ಜನರ ವಿಷಯ ಪ್ರಸ್ತಾಪಿಸಲು ನಮ್ಮನ್ನು ಯಾರೂ ತಡೆಯಲಾಗಲ್ಲ. ಸರ್ಕಾರ ಉತ್ತರ ಕೊಡಲೇಬೇಕು. ಸಂಸತ್‌ನಲ್ಲಿ ಚರ್ಚೆ, ಪ್ರಶ್ನೆಗಳಿಂದ ಓಡಿ ಹೋಗುವುದು ಅಸಂಸದೀಯ ಪ್ರಧಾನ ಮಂತ್ರಿಗಳೇ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿ ಕಿಡಿಕಾರಿದ್ದರು.

    ಇದಕ್ಕೆ ತುರ್ತು ಪರಿಸ್ಥಿತಿಯ ದಿನಗಳ ಉದಾಹರಣೆ ನೀಡಿ ಉತ್ತರಿಸಿರುವ ಪ್ರಹ್ಲಾದ್ ಜೋಶಿ, ಕೇವಲ 1975 ರಲ್ಲಿ ಮಾತ್ರ ಜನರ ವಿಷಯ ಪ್ರಸ್ತಾಪಿಸಲು ನಿರ್ಬಂಧ ಹೇರಲಾಗಿತ್ತು. ಅದನ್ನು ಹೊರತುಪಡಿಸಿ ರಚನಾತ್ಮಕವಾಗಿ ವಿಚಾರ ಪ್ರಸ್ತಾಪಿಸಲು ವಿರೋಧ ಪಕ್ಷಕ್ಕೆ ಮುಕ್ತ ಅವಕಾಶವಿದೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮದರಸ ಟೆರರಿಸ್ಟ್‌ಗಳನ್ನು ತಯಾರು ಮಾಡುವ ಕೇಂದ್ರ: ಮುತಾಲಿಕ್

    Live Tv
    [brid partner=56869869 player=32851 video=960834 autoplay=true]

  • ಸಂಸತ್ತಿನಲ್ಲಿ ಮುಕ್ತ ಮನಸ್ಸಿನಿಂದ ಸಂವಾದ ನಡೆಸಿ, ಅನಗತ್ಯ ಚರ್ಚೆ ಬೇಡ: ಮೋದಿ

    ಸಂಸತ್ತಿನಲ್ಲಿ ಮುಕ್ತ ಮನಸ್ಸಿನಿಂದ ಸಂವಾದ ನಡೆಸಿ, ಅನಗತ್ಯ ಚರ್ಚೆ ಬೇಡ: ಮೋದಿ

    ನವದೆಹಲಿ: ಅಧಿವೇಶನವನ್ನು ಫಲಪ್ರದವಾಗಿಸಲು ಸಂಸದರೆಲ್ಲರೂ ಮುಕ್ತ ಮನಸ್ಸಿನಿಂದ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸುವಂತೆ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.

    ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗುವ ಮುನ್ನ ಮಾತನಾಡಿದ ಅವರು, ಸಂಸತ್ತಿನಲ್ಲಿ ಮುಕ್ತ ಮನಸ್ಸಿನಿಂದ ಸಂವಾದ ನಡೆಯಬೇಕು. ಅಗತ್ಯಬಿದ್ದರೆ ಚರ್ಚೆಯಾಗಬೇಕು. ಹಾಗೂ ಸದನದ ಘನತೆಯನ್ನು ಎತ್ತಿಹಿಡಿಯಲು ಎಲ್ಲಾ ಸಂಸದರು ಶ್ರಮಿಸಬೇಕು. ಈ ಅಧಿವೇಶನವನ್ನು ಸಾಧ್ಯವಾದಷ್ಟು ಎಲ್ಲಾ ಸಂಸದರು ಆಲೋಚಿಸಿ ವಿಷಯಗಳನ್ನು ಚರ್ಚಿಸಬೇಕು ಎಂದು ಎಂದು ತಿಳಿಸಿದರು.

    ಈ ಅವಧಿಯು ಬಹಳ ಮಹತ್ವದ್ದಾಗಿದ್ದು, ಇದು ಆಜಾದಿ ಕಾ ಅಮೃತ ಮಹೋತ್ಸವದ ಅವಧಿಯಾಗಿದೆ. ಆಗಸ್ಟ್ 15 ಮತ್ತು ಮುಂಬರುವ 25 ವರ್ಷಗಳಿಗೆ ವಿಶೇಷ ಮಹತ್ವವಿದೆ. ರಾಷ್ಟ್ರವು 100 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತದೆ. ಇದು ಸಂಕಲ್ಪ ಮಾಡುವ ಸಮಯವಾಗಿದೆ. ನಮ್ಮ ಪ್ರಯಾಣವನ್ನು ನಿರ್ಧರಿಸಿ ಎಂದರು. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ತಾಲೀಮು ನಡೆಸಿದ್ದು ಯಾಕೆ?

    ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಅನೇಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಹಾಗೇ ಅನೇಕರು ಜೈಲಿನಲ್ಲೇ ತಮ್ಮ ಜೀವನವನ್ನು ಕಳೆದರು. ಅವರೆಲ್ಲರನ್ನು ನೆನಪಿಸಿಕೊಂಡು, ಅವರ ಕನಸುಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವಂತೆ ತಿಳಿಸಿದರು. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ- ಮತ ಚಲಾಯಿಸಿದ ಪ್ರಧಾನಿ ಮೋದಿ

    ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಆಗಸ್ಟ್ 12ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ 18 ಅಧಿವೇಶನಗಳು ನಡೆಯಲಿವೆ. ರಾಷ್ಟ್ರಪತಿ ಚುನಾವಣೆ ಮತ್ತು ಉಪರಾಷ್ಟ್ರಪತಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಅಧಿವೇಶನ ಮಹತ್ವ ಪಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಸಂಸತ್‌ ಅಧಿವೇಶನದಲ್ಲಿ ಧರಣಿ ನಡೆಸುವಂತಿಲ್ಲ: ಆದೇಶ ಪ್ರಕಟ

    ಸಂಸತ್‌ ಅಧಿವೇಶನದಲ್ಲಿ ಧರಣಿ ನಡೆಸುವಂತಿಲ್ಲ: ಆದೇಶ ಪ್ರಕಟ

    ನವದೆಹಲಿ: ಅಸಂಸದೀಯ ಪದ ಬಳಕೆಯನ್ನು ನಿರ್ಬಂಧಿಸಿದ ಬೆನ್ನಲ್ಲೇ ಸೋಮವಾರದಿಂದ ಆರಂಭವಾಗಲಿರುವ ಸಂಸತ್‌ ಅಧಿವೇಶನದಲ್ಲಿ ಧರಣಿ ನಡೆಸುವುದನ್ನು ನಿಷೇಧಿಸಲಾಗಿದೆ. ಮುಂಗಾರು ಅಧಿವೇಶನಕ್ಕೆ ಮುಂಚಿತವಾಗಿ, ಸಂಸತ್ತಿನಲ್ಲಿ ಯಾವುದೇ ಧರಣಿಗೆ ಅವಕಾಶ ನೀಡುವುದಿಲ್ಲ ಹೊಸ ಆದೇಶದಲ್ಲಿ ತಿಳಿಸಲಾಗಿದೆ.

    ಸಂಸತ್ತಿನ ಸದಸ್ಯರು ಯಾವುದೇ ಧರಣಿ ಅಥವಾ ಮುಷ್ಕರಕ್ಕೆ ಅದರ ಆವರಣವನ್ನು ಬಳಸುವಂತಿಲ್ಲ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

    “ಸದಸ್ಯರು ಯಾವುದೇ ಪ್ರತಿಭಟನೆ, ಧರಣಿ, ಮುಷ್ಕರ, ಉಪವಾಸ ಅಥವಾ ಯಾವುದೇ ಧಾರ್ಮಿಕ ಸಮಾರಂಭಗಳನ್ನು ನಡೆಸುವ ಉದ್ದೇಶಕ್ಕಾಗಿ ಸಂಸತ್ ಭವನದ ಆವರಣವನ್ನು ಬಳಸುವಂತಿಲ್ಲ” ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
    ಇದನ್ನೂ ಓದಿ: I2U2 ಶೃಂಗಸಭೆ – 6 ಕ್ಷೇತ್ರಗಳಲ್ಲಿ 4 ದೇಶಗಳು ಜಂಟಿಯಾಗಿ ಹೂಡಿಕೆ

    ಗುರುವಾರ ಲೋಕಸಭೆ ಕಾರ್ಯದರ್ಶಿಗಳು, ಅಸಂಸದೀಯ ಪದ ಬಳಕೆಗೆ ಸಂಬಂಧಿಸಿ ಹೊಸ ಬುಕ್‍ಲೆಟ್ ಬಿಡುಗಡೆ ಮಾಡಿದ್ದರು. ಅಸಂಸದೀಯ ಪದಗಳ ಪಟ್ಟಿಗೆ ಹೊಸದಾಗಿ ಹಲವು ಪದಗಳನ್ನು ಸೇರಿಸಲಾಗಿದೆ. ಅದರ ಪ್ರಕಾರ ಇನ್ನು ಮುಂದೆ ಜುಮ್ಲಾ ಜೀವಿ, ಕೋವಿಡ್ ಸ್ಪ್ರೆಡರ್, ಸ್ನೂಪ್‍ಗೇಟ್ ಪದಗಳನ್ನು ಸಂಸದರು ಸಂಸತ್ ಕಲಾಪದಲ್ಲಿ ಬಳಸುವಂತೆ ಇಲ್ಲ.

    ಅಷ್ಟೇ ಅಲ್ಲದೇ ನಾಚಿಕೆಗೇಡು, ಕಿರುಕುಳ, ಮೋಸ, ಭ್ರಷ್ಟ, ಡ್ರಾಮಾ, ಹಿಪೋಕ್ರಸಿ, ಸರ್ವಾಧಿಕಾರಿ ಎಂಬ ಪದಗಳನ್ನೂ ಬಳಸುವಂತೆ ಇಲ್ಲ. ಶಕುನಿ, ತಾನ್ ಶಾ, ವಿನಾಶ ಪುರುಷ್, ಖಲಿಸ್ತಾನಿ, ದ್ರೋಹಿ, ದ್ರೋಹ ಚರಿತ್ರೆ, ಚಮ್ಚಾ, ಚಮಚಾಗಿರಿ, ಹೇಡಿ, ಕ್ರಿಮಿನಲ್, ಮೊಸಳೆ ಕಣ್ಣೀರು, ಕತ್ತೆ, ಅಸಮರ್ಥ, ಗೂಂಡಾ, ಅಹಂಕಾರಿ, ಕತ್ತಲ ದಿನಗಳು, ದಾದಾಗಿರಿ, ಲೈಂಗಿಕ ಕಿರುಕುಳ, ನಂಬಿಕೆ ದ್ರೋಹಿ ಎಂಬ ಪದಗಳನ್ನು ಕೂಡ ಸಂಸತ್ ಭಾಷಣದ ವೇಳೆ ಸಂಸದರು ಬಳಕೆ ಮಾಡಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಇತಿಹಾಸದ ಪುಟ ಸೇರಲಿದೆ ನೂರು ವರ್ಷಗಳ ಇತಿಹಾಸವುಳ್ಳ ಸಂಸತ್ ಭವನ – ಕೊನೆಯ ಅಧಿವೇಶನಕ್ಕೆ ಸಿದ್ಧತೆ

    ಇತಿಹಾಸದ ಪುಟ ಸೇರಲಿದೆ ನೂರು ವರ್ಷಗಳ ಇತಿಹಾಸವುಳ್ಳ ಸಂಸತ್ ಭವನ – ಕೊನೆಯ ಅಧಿವೇಶನಕ್ಕೆ ಸಿದ್ಧತೆ

    ನವದೆಹಲಿ: ನೂರು ವರ್ಷಗಳ ಇತಿಹಾಸವುಳ್ಳ ಸಂಸತ್ ಭವನ ಶೀಘ್ರವೇ ಇತಿಹಾಸದ ಪುಟಗಳನ್ನು ಸೇರಲಿದೆ. ಹಾಲಿ ಸಂಸತ್ ಭವನದಲ್ಲಿ ಜುಲೈ 18 ರಿಂದ ಆಗಸ್ಟ್ 12 ರವರೆಗೆ ಮಳೆಗಾಲದ ಸಂಸತ್ ಅಧಿವೇಶನ ನಡೆಯಲಿದೆ. ಇದೇ ಕೊನೆಯ ಅಧಿವೇಶನ ಆಗಲಿದೆ.

    ಸೋಮವಾರದಿಂದ ಮಳೆಗಾಲದ ಸಂಸತ್ ಅಧಿವೇಶನ ಪ್ರಾರಂಭವಾಗುತ್ತಿದೆ. ಬಳಿಕ ಡಿಸೆಂಬರ್‌ನಲ್ಲಿ ನಡೆಯುವ ಚಳಿಗಾಲದ ಅಧಿವೇಶನವನ್ನು ಸೆಂಟ್ರಲ್ ವಿಸ್ತಾ ಭಾಗವಾಗಿ ಮೋದಿ ಸರ್ಕಾರ ನಿರ್ಮಿಸುತ್ತಿರುವ ನೂತನ ಸಂಸತ್ ಭವನದಲ್ಲಿ ನಡೆಸುವುದಾಗಿ ಈಗಾಗಲೇ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಘೋಷಿಸಿದ್ದಾರೆ. ಹಾಲಿ ಸಂಸತ್ ಭವನದಲ್ಲಿಯೇ ನೂತನ ರಾಷ್ಟ್ರಪತಿ ಚುನಾವಣೆ ಜುಲೈ 19 ರಂದು ನಡೆಯಲಿದೆ. ಆಗಸ್ಟ್ 6 ರಂದು ಉಪರಾಷ್ಟ್ರಪತಿ ಚುನಾವಣೆಯೂ ಇಲ್ಲಿಯೇ ನಡೆಯಲಿದೆ. ಇದನ್ನೂ ಓದಿ: ಹುಂಡಿ ಎಣಿಕೆಯಲ್ಲಿ ಕೋಟ್ಯಾಧೀಶನಾದ ಮಾದಪ್ಪ – ಎಣಿಕೆ ವೇಳೆ 500 ರೂ.ಗಳ 80 ನೋಟು ಕದ್ದು ಗುತ್ತಿಗೆ ನೌಕರ

    ಹಾಲಿ ಸಂಸತ್ ಭವನದ ನಿರ್ಮಾಣವನ್ನು 1921ರಲ್ಲಿ ಶುರು ಮಾಡಿ, 1927ರಲ್ಲಿ ಪೂರ್ಣಗೊಳಿಸಲಾಗಿತ್ತು. ಎಡ್ವಿನ್ ಲೂಟಿನ್ಸ್ ಮತ್ತು ಹೆರ್ಬೆಟ್ ಬೇಕರ್ ಎಂಬ ಆರ್ಕಿಟೆಕ್ಟ್‌ಗಳು ಇದರ ನಿರ್ಮಾಣದ ಹೊಣೆ ಹೊತ್ತಿದ್ದರು. ಡಿಸೆಂಬರ್ 10ರಂದು ಸೆಂಟ್ರಲ್ ವಿಸ್ತಾ ಭೂಮಿ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿ  ನೆರವೇರಿಸಿದ್ದರು. ಈಗಿರುವ ಸಂಸತ್ ಭವನವನ್ನು ನಿರ್ಮಿಸಿದ್ದು ಬ್ರಿಟೀಷರು. 1921ರಲ್ಲಿ ಭೂಮಿಪೂಜೆ ನೆರವೇರಿಸಿ, 1927ಕ್ಕೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗಿತ್ತು. ಆಗ ಇದಕ್ಕೆ 83 ಲಕ್ಷ ರೂಪಾಯಿ ವೆಚ್ಚ ಆಗಿತ್ತು. ಇನ್ನು ಹೊಸ ಸಂಸತ್ ಭವನ ಸುಮಾರು 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಇದನ್ನೂ ಓದಿ: ಸಂಸತ್ ಕಲಾಪದಲ್ಲಿ ಅಸಂಸದೀಯ ಪದಗಳಿಗೆ ಕತ್ತರಿ – ಈ ಪದಗಳು ಬ್ಯಾನ್

    Live Tv
    [brid partner=56869869 player=32851 video=960834 autoplay=true]

  • ಸಂಸತ್ ಕಲಾಪದಲ್ಲಿ ಅಸಂಸದೀಯ ಪದಗಳಿಗೆ ಕತ್ತರಿ – ಈ ಪದಗಳು ಬ್ಯಾನ್

    ಸಂಸತ್ ಕಲಾಪದಲ್ಲಿ ಅಸಂಸದೀಯ ಪದಗಳಿಗೆ ಕತ್ತರಿ – ಈ ಪದಗಳು ಬ್ಯಾನ್

    – ಸರ್ಕಾರಕ್ಕೆ ಪ್ರತಿಪಕ್ಷಗಳಿಂದ ಸವಾಲು

    ನವದೆಹಲಿ: ಇನ್ನುಮುಂದೆ ಲೋಕಸಭೆ, ರಾಜ್ಯಸಭೆ ಅಧಿವೇಶನಗಳಲ್ಲಿ ಜುಮ್ಲಾಜೀವಿ, ಬಾಲ ಬುದ್ಧಿ, ಕೋವಿಡ್ ಸ್ಪ್ರೆಡರ್‌, ನಾಚಿಕೆಗೇಡು, ದ್ರೋಹ, ಭ್ರಷ್ಟ, ಅಸಮರ್ಥ, ಸರ್ವಾಧಿಕಾರಿ ಅಂತಹ ಅಸಂಸದೀಯ ಪದಗಳನ್ನು ಬಳಸುವಂತಿಲ್ಲ ಎಂದು ಲೋಕಸಭೆಯ ಸೆಕ್ರಟೇರಿಯಟ್ ಬಿಡುಗಡೆಗೊಳಿಸಿದ ಕಿರು ಪುಸ್ತಕದಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.

    ಇದೇ ಜುಲೈ 18ರಿಂದ ಪ್ರಾರಂಭವಾಗಲಿರುವ ಮುಂಗಾರು ಅಧಿವೇಶನಕ್ಕೂ ಮುಂಚಿತವಾಗಿ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಗಿದೆ. ಇದನ್ನೂ ಓದಿ: ಉತ್ತರ ಕೊರಿಯಾದೊಂದಿಗಿನ ಸಂಬಂಧವನ್ನು ಕಡಿತಗೊಳಿಸಿದ ಉಕ್ರೇನ್

    ಲೋಕಸಭೆಯಲ್ಲಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 380ರ ಪ್ರಕಾರ, ಕಲಾಪದ ಸಂದರ್ಭದಲ್ಲಿ ಅಸಂಸದೀಯ ಪದಗಳನ್ನು ಬಳಸಿದರೆ ಸ್ಪೀಕರ್, ಅವರನ್ನು ಕಲಾಪದಿಂದ ಹೊರ ಹಾಕುತ್ತಾರೆ. ಈ ಬಗ್ಗೆ ಬಿಡುಗಡೆಯಾಗಿರುವ ಟಿಪ್ಪಣಿಯಲ್ಲಿ ಸೇರಿಸಲಾಗಿದೆ. ರಾಜ್ಯಸಭಾ ಅಧ್ಯಕ್ಷರು ಅಥವಾ ಲೋಕಸಭಾ ಸ್ಪೀಕರ್ ಅಧಿವೇಶನದ ವೇಳೆ ಸದನದಲ್ಲಿ ಮಾತನಾಡುವ ಮಾತುಗಳನ್ನು ಗಮನಿಸುತ್ತಾರೆ. ಕೆಲವೊಮ್ಮೆ ಸಭಾಪತಿಯವರು ಅಸಂಸದೀಯ ಪದಗಳನ್ನು ಕಡತದಿಂದ ತೆಗೆದು ಹಾಕುತ್ತಾರೆ. ಆದರೆ ಸಭಾಪತಿಗೆ ಯಾವುದೇ ಪದಗಳ ನಿರ್ಬಂಧ ಇರುವುದಿಲ್ಲ ಎಂದು ತಿಳಿಸಲಾಗಿದೆ.

    ಸರ್ವಾಧಿಕಾರಿ, ಶಕುನಿ, ತಾನಾಶಾಹಿ, ಜೈಚಂದ್, ವಿನಾಶ್ ಪುರುಷ್, ಖಲಿಸ್ತಾನಿ, ಖೂನ್ ಸೆ ಖೇತಿ, ದೋಹ್ರಾ ಚರಿತ್ರ, ನಿಕಮ್ಮ, ನೌಟಂಕಿ, ಢಿಂಢೋರ ಪೀಟ್ನಾ, ಬೆಹ್ರಿ ಸರ್ಕಾರ್ ಮುಂತಾದ ಪದಗಳನ್ನೂ ಅಸಂಸದೀಯ ಎಂದು ಗುರುತಿಸಲಾಗಿದ್ದು, ಇಂತಹ ಪದಗಳನ್ನು ಬಳಸಿದರೂ ಕಡತದಿಂದ ತೆಗೆದುಹಾಕಲಾಗುತ್ತದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಕ್ಷಣಕ್ಷಣಕ್ಕೂ ವಿಷಮ ಸ್ಥಿತಿ – ಓರ್ವ ನಾಗರಿಕ ಸಾವು, 35 ಮಂದಿಗೆ ಗಾಯ

    ಪುಸ್ತಕದಲ್ಲಿ ಅಸಂಸದೀಯ ಎಂದು ಗುರುತಿಸಲಾದ ಪದಗಳಲ್ಲಿ ರಕ್ತಪಾತ, ರಕ್ತಸಿಕ್ತ, ದ್ರೋಹ, ವಂಚನೆ, ಚಮ್ಚಾ, ಚಮ್ಚಾಗಿರಿ, ಚೇಲಾಸ್, ಬಾಲಿಶ, ಹೇಡಿ, ಕ್ರಿಮಿನಲ್, ಮೊಸಳೆ ಕಣ್ಣೀರು ಸೇರಿದೆ. ಇವುಗಳ ಹೊರತಾಗಿ ಅವಮಾನ, ಕತ್ತೆ, ನಾಟಕ, ಕಣ್ಣೊರೆಸುವ ತಂತ್ರ, ಗೂಂಡಾಗಿರಿ, ಅಸಮರ್ಥ, ಸುಳ್ಳು, ಗದ್ದಾರ್, ಗಿರ್ಗಿಟ್, ಗಢಿಯಾಲಿ ಆಂಸು, ಅಪಮಾನ್, ಅಸತ್ಯ, ಅಹಂಕಾರ್, ಕಾಲಾ ದಿನ್, ಕಾಲಾ ಬಜಾರ್, ದಂಗ, ದಲಾಲ್, ದಾದಾಗಿರಿ, ಬೆಚಾರ, ಬಾಯ್‌ಕಟ್. ಲಾಲಿಪಾಪ್, ಸಂವೇದನಾಹೀನ್, ಲೈಂಗಿಕ ಕಿರುಕುಳ ಪದಗಳನ್ನೂ ಅಸಂಸದೀಯ ಎಂದು ಪರಿಗಣಿಸಲಾಗುವುದು ಎಂದು ಲೋಕಸಭಾ ಸೆಕ್ರಟೇರಿಯನ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

    ಈ ಕ್ರಮಕ್ಕೆ ಕಾಂಗ್ರೆಸ್ ಹಾಗೂ ಟಿಎಂಸಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಸಂಸದೆ ಮೆಹುವಾ ಮೊಯಿತ್ರಾ ಹಾಗೂ ಸಂಸದ ಡೆರಕ್ ನಾವು ಈ ಪದಗಳನ್ನು ಬಳಸುತ್ತೇವೆ, ಬೇಕಿದ್ದರೆ ಅಮಾನತು ಮಾಡಿ ಎಂದು ತಿರುಗೇಟು ನೀಡಿದ್ದಾರೆ.

    ಈ ಕುರಿತಂತೆ ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಟ್ವೀಟ್ ಮಾಡಿದ್ದು, ನಿಮ್ಮ ಟೀಕೆಗಳು ಸೃಜನಶೀಲವಾಗಿರಬೇಕು. ಇಲ್ಲದಿದ್ದರೆ ಸಂಸತ್ತಿನ ಅಧಿವೇಶನ ಪ್ರಯೋಜನವಾಗದು. ಜುಮ್ಲಾಜೀವಿ ಅನ್ನು ಜುಮ್ಲಾಜೀವಿ ಅನ್ನದೇ ಮತ್ತೆ ಇನ್ನೇನು ಹೇಳಬೇಕು? ಇಂತಹ ಪದಗಳನ್ನು ನಿಷೇಧಿಸುವುದು ಅನಿವಾರ್ಯವೇ ಎಂದು ಪ್ರಶ್ನಿಸಿದ್ದಾರೆ.

    ತೃಣಮೂಲ ಕಾಂಗ್ರೆಸ್ ಸಂಸದೆ ಮೆಹುವಾ ಮೊಯಿತ್ರಾ ಸಹ ಟ್ವೀಟ್ ಮಾಡಿದ್ದು, ಬಿಜೆಪಿ ಭಾರತವನ್ನು ಹೇಗೆ ನಾಶಪಡಿಸುತ್ತದೆ ಎಂಬುದು ಗೊತ್ತಾಗುತ್ತಿದೆ. ಅದಕ್ಕಾಗಿ ಪ್ರತಿ ಪಕ್ಷಗಳು ಬಳಸುವ ಪದಗಳನ್ನು ಆಯ್ಕೆ ಮಾಡಿ ನಿಷೇಧಿಸಿದೆ. ಇದು ನಾಚಿಗೇಡಿನ ಸಂಗತಿ. ದುರ್ಬಳಕೆ, ದ್ರೋಹ, ಭ್ರಷ್ಟ, ಬೂಟಾಟಿಕೆ, ಅಸಮರ್ಥ ಎಂಬ ಪದಗಳನ್ನು ನಾನು ಬಳಸುತ್ತೇನೆ, ನನ್ನನ್ನೂ ಬೇಕಿದ್ದರೆ ಅಮಾನತು ಮಾಡಿ. ಆದರೆ ನಾನು ಪ್ರಜಾಪ್ರಭುತ್ವಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನೇಪಾಳದಲ್ಲಿ ಮೊದಲ ಪೌರತ್ವ ತಿದ್ದುಪಡಿ ಅಂಗೀಕಾರ

    ನೇಪಾಳದಲ್ಲಿ ಮೊದಲ ಪೌರತ್ವ ತಿದ್ದುಪಡಿ ಅಂಗೀಕಾರ

    ಕಠ್ಮಂಡು: ರಾಜಕೀಯ ಒಮ್ಮತಗಳನ್ನು ರೂಪಿಸಲು ವಿಫಲವಾಗಿದ್ದ ಹಾಗೂ 2 ವರ್ಷಗಳಿಗೂ ಅಧಿಕ ಕಾಲ ಚರ್ಚೆಯಲ್ಲಿದ್ದ ದೇಶದ ಮೊದಲ ಪೌರತ್ವ ತಿದ್ದುಪಡಿ ಮಸೂದೆಯನ್ನು ನೇಪಾಳದ ಸಂಸತ್ತು ಅಂಗೀಕರಿಸಿದೆ.

    ನೇಪಾಳಿ ಪುರುಷರನ್ನು ವಿವಾಹವಾಗುವ ವಿದೇಶಿ ಮಹಿಳೆಯರು ಪೌರತ್ವವನ್ನು ಪಡೆಯಲು 7 ವರ್ಷಗಳು ಬೇಕಿತ್ತು. ಇದರಿಂದಾಗಿ ಅವರು ಶಿಕ್ಷಣ ಸೇರಿದಂತೆ ಎಲ್ಲಾ ಮೂಲಭೂತ ಸೇವೆಗಳಿಂದ ವಂಚಿತರಾಗುತ್ತಿದ್ದರು. ಈ ಎಲ್ಲದರ ಹಿನ್ನೆಲೆಯಲ್ಲಿ ಮಸೂದೆಯನ್ನು ತಿದ್ದುಪಡಿಗೊಳಿಸಬೇಕು ಎಂದು ಯೋಚಿಸಿದಾಗ ರಾಜಕೀಯ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಅದನ್ನು ಅಲ್ಲೇ ಕೈಬಿಡಲಾಗಿತ್ತು. ಇದನ್ನೂ ಓದಿ: ಭಾರೀ ಮಳೆಯಿಂದ ರೈಲು ರದ್ದು- ವಿದ್ಯಾರ್ಥಿಗೆ ಕಾರಿನ ಸೇವೆ ಒದಗಿಸಿದ ಭಾರತೀಯ ರೈಲ್ವೆ ಇಲಾಖೆ

    ಆದರೆ ಇದೀಗ ಗೃಹ ಸಚಿವ ಬಾಲಕೃಷ್ಣ ಖಂಡ್ ಅವರು ನೇಪಾಳದ ಮೊದಲ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದು, 2006ರಲ್ಲಿ ತಿದ್ದುಪಡಿ ಮಾಡಲು ಸಂಸತ್ತಿನಲ್ಲಿ ಮಸೂದೆಯನ್ನು ಮಂಡಲಾಗಿತ್ತು. ಅದರಂತೆ ಸಂವಿಧಾನದ ನಿರ್ದೇಶನದಂತೆ ಪೌರತ್ವವನ್ನು ಒದಗಿಸಲು ಸಹಕಾರ ನೀಡಿ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಈ ಮಸೂದೆ ಜಾರಿ ಆಯಿತು. ಇದನ್ನೂ ಓದಿ: ಶ್ರೀಲಂಕಾದಲ್ಲಿ ಕ್ಷಣಕ್ಷಣಕ್ಕೂ ವಿಷಮ ಸ್ಥಿತಿ – ಓರ್ವ ನಾಗರಿಕ ಸಾವು, 35 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಹೊಸ ಸಂಸತ್ ಭವನದಲ್ಲಿ 9,500 ಕೆಜಿ ಕಂಚಿನ ರಾಷ್ಟ್ರೀಯ ಲಾಂಛನ ಅನಾವರಣ – ಏನಿದರ ವಿಶೇಷ?

    ಹೊಸ ಸಂಸತ್ ಭವನದಲ್ಲಿ 9,500 ಕೆಜಿ ಕಂಚಿನ ರಾಷ್ಟ್ರೀಯ ಲಾಂಛನ ಅನಾವರಣ – ಏನಿದರ ವಿಶೇಷ?

    ನವದೆಹಲಿ: ಹೊಸ ಸಂಸತ್ ಭವನವಾದ ಸೆಂಟ್ರಲ್ ಮೇಲ್ಛಾವಣಿಯಲ್ಲಿ ಕಂಚಿನಿಂದ ನಿರ್ಮಿಸಲಾದ 9,500 ಕೆ.ಜಿ ತೂಕದ ಅಶೋಕ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದು ಅನಾವರಣಗೊಳಿಸಿದರು.

    ಏನಿದರ ವಿಶೇಷ?
    6.5 ಮೀಟರ್ ಎತ್ತರವಿರುವ ಈ ಲಾಂಛನವು 9,500 ಕೆ.ಜಿ.ತೂಕವಿದೆ. ಸಂಪೂರ್ಣ ಕಂಚಿನಿಂದ ತಯಾರಿಸಲ್ಪಟ್ಟಿದ್ದು, ಹೊಸ ಸಂಸತ್ ಕಟ್ಟಡದ ಮೇಲ್ಭಾಗದಲ್ಲಿ ನಿರ್ಮಿಸಲಾಗಿದೆ. ಲಾಂಚನಕ್ಕೆ ಸಹಕಾರಿಯಾಗಿ ನಿಲ್ಲುವಂತೆ 6,500 ಕೆಜಿ ತೂಕದ ಉಕ್ಕಿನ ಪೋಷಕ ರಚನೆಯನ್ನು ನಿರ್ಮಿಸಲಾಗಿದೆ. ಎಂಟು ವಿಭಿನ ಹಂತಗಳಲ್ಲಿ ತಯಾರಿಕಾ ಕಾರ್ಯ ನಡೆದಿದ್ದು, ರಾಷ್ಟ್ರೀಯ ಲಾಂಛನದ ಸ್ಕೆಚ್ ಮತ್ತು ಎರಕಹೊಯ್ದ ಪ್ರಕ್ರಿಯೆಯು ಕ್ಲೇ ಮಾಡೆಲಿಂಗ್/ಕಂಪ್ಯೂಟರ್ ಗ್ರಾಫಿಕ್‌ನಿಂದ ಕಂಚಿನ ವರೆಗೆ ಸಾಗಿದೆ. ಇದನ್ನೂ ಓದಿ: ಮದ್ಯದ ದೊರೆ ವಿಜಯ್‌ ಮಲ್ಯಗೆ 4 ತಿಂಗಳು ಜೈಲು: ಸುಪ್ರೀಂ ಕೋರ್ಟ್ ತೀರ್ಪು

    ಹೊಸ ಸಂಸತ್ ಭವನದ ಕೆಲಸವನ್ನು ಟಾಟಾ ಪ್ರಾಜೆಕ್ಟ್ಸ್‌ ಲಿಮಿಟೆಡ್‌ಗೆ ವಹಿಸಲಾಗಿದೆ. 60,000 ಚ.ಮೀ. ವಿಸ್ತೀರ್ಣದಲ್ಲಿ ನೂತನ ಸಂಸತ್ ಭವನ ನಿರ್ಮಾಣವಾಗುತ್ತಿದೆ. ಮಾಸ್ಟರ್ ಪ್ಲಾನ್ ಪ್ರಕಾರ, ಈಗಿರುವ ವೃತ್ತಾಕಾರದ ಸಂಸತ್ ಭವನದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆಯ ಹಿಂದೆ ಈ ಹೊಸ ತ್ರಿಕೋನ ಸಂಸತ್ ಭವನವನ್ನು ನಿರ್ಮಿಸಲಾಗುತ್ತಿದೆ. ಸಂಸತ್ತಿನ ಕಲಾಪದಲ್ಲಿ ಇದು 888 ಲೋಕಸಭಾ ಸದಸ್ಯರು, 384 ರಾಜ್ಯಸಭಾ ಸದಸ್ಯರ ಆಸನ ಸಾಮರ್ಥ್ಯವನ್ನು ಹೊಂದಿರಲಿದೆ. ಲೋಕಸಭೆಯ ಸಭಾಂಗಣದಲ್ಲಿ 1,272 ಆಸನಗಳನ್ನು ಸಿದ್ಧಪಡಿಸಲಾಗಿದೆ. ಇದರಿಂದ ಉಭಯ ಸದನಗಳ ಜಂಟಿ ಅಧಿವೇಶನವೂ ಸಾಧ್ಯವಾಗಲಿದೆ. ಇದನ್ನೂ ಓದಿ: ಗೋವಾದಲ್ಲೂ ಆಪರೇಷನ್ ಕಮಲ ಸದ್ದು – ಇಬ್ಬರು ಕಾಂಗ್ರೆಸ್ ಶಾಸಕರ ಅನರ್ಹತೆ ಕೋರಿ ಸ್ಪೀಕರ್‌ಗೆ ಮನವಿ

    ಹೊಸ ಸಂಸತ್ ಕಟ್ಟಡದ ಯೋಜನೆಯನ್ನು ಸೆಪ್ಟೆಂಬರ್ ತಿಂಗಳಲ್ಲಿ 2019 ರಲ್ಲಿ ಘೋಷಿಸಲಾಯಿತು. 2020ರ ಡಿಸೆಂಬರ್ 10ರಂದು ಪ್ರಧಾನಿ ನರೇಂದ್ರ ಮೋದಿಯವರು ಯೋಜನೆಯ ಅಡಿಗಲ್ಲು ಹಾಕಿದರು.

    Live Tv
    [brid partner=56869869 player=32851 video=960834 autoplay=true]