Tag: parliament

  • ಕೇಂದ್ರ ಬಜೆಟ್ ಮೇಲೆ ಜಗತ್ತು ಕಣ್ಣಿಟ್ಟಿದೆ: ಮೋದಿ

    ಕೇಂದ್ರ ಬಜೆಟ್ ಮೇಲೆ ಜಗತ್ತು ಕಣ್ಣಿಟ್ಟಿದೆ: ಮೋದಿ

    ನವದೆಹಲಿ: ಜಾಗತಿಕ ಅನಿಶ್ಚಿತತೆಯ ನಡುವೆ ಭಾರತದ ಬಜೆಟ್ ಮೇಲೆ ಜಗತ್ತು ಕಣ್ಣಿಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು.

    ಈ ಬಾರಿಯ ಬಜೆಟ್ ಅಧಿವೇಶನಕ್ಕೂ (Parliament) ಮುನ್ನ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಳೆ (ಬುಧವಾರ) ಕೇಂದ್ರ ಬಜೆಟ್ ಮಂಡಿಸಲಿರುವ ವಿತ್ತ ಸಚಿವರು ಮಹಿಳೆಯಾಗಿದ್ದು, ಭಾರತ ಮಾತ್ರವಲ್ಲ, ಇಡೀ ವಿಶ್ವವೇ ನಮ್ಮ ಬಜೆಟ್ ಮೇಲೆ ಕಣ್ಣಿಟ್ಟಿದೆ. ನಿರ್ಮಲಾ ಸೀತಾರಾಮನ್ ಅವರು ಎಲ್ಲಾ ನಿರೀಕ್ಷೆಗಳನ್ನು ಪೂರೈಸುತ್ತಾರೆ ಎಂದು ಖಾತ್ರಿಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಂಸತ್ತಿನಲ್ಲಿ ಮೊದಲ ಬಾರಿಗೆ ಹೊಸ ಸಂಸದರು ಮಾತನಾಡುವಾಗ ಇಡೀ ಸಂಸತ್ತು ಅವರಿಗೆ ಗೌರವವನ್ನು ನೀಡಿ ವಿಶ್ವಾಸವನ್ನು ನೀಡುವ ವಾತಾವರಣವನ್ನು ಸೃಷ್ಟಿಸುವುದು ಸಂಸತ್ತಿನಲ್ಲಿ ಸಂಪ್ರದಾಯವಾಗಿದೆ. ಅದೇ ರೀತಿ ಇಂದಿನ ಭಾಷಣವು ರಾಷ್ಟ್ರಪತಿಯವರ ಮೊದಲ ಭಾಷಣವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರು ಮೊದಲ ಬಾರಿಗೆ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಬುಡಕಟ್ಟು ಸಮಾಜಕ್ಕೆ ಹೆಮ್ಮೆಯ ದಿನವಾಗಿದೆ ಎಂದು ಅಭಿಪ್ರಾಯ ಪಟ್ಟರು.

    ದೇಶ ಮೊದಲು ಎನ್ನುವುದೇ ನಮ್ಮೆಲ್ಲರ ಇರುವುದು ಉದ್ದೇಶವಾಗಿದೆ. ಸದನದಲ್ಲಿ ಪ್ರತಿ ವಿಷಯದ ಬಗ್ಗೆಯೂ ಉತ್ತಮವಾಗಿ ಚರ್ಚೆ ಮಾಡುತ್ತೇವೆ. ಎಲ್ಲ ಸಂಸದರು ಈ ಅಧಿವೇಶನದಲ್ಲಿ ಸಂಪೂರ್ಣ ಸಿದ್ಧತೆಯೊಂದಿಗೆ ಭಾಗವಹಿಸುತ್ತಾರೆ. ಈ ಅಧಿವೇಶನವು ನಮಗೆಲ್ಲರಿಗೂ ಮಹತ್ವದ್ದಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹಿಂದೂ ಸಮಾಜವನ್ನು ಅಶ್ಲೀಲ ಎನ್ನುವರು ಹಿಂದೂಗಳ ಮತ ಬೇಡವೆಂದು ಹೇಳಲಿ: ಕಟೀಲ್

    ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಬಜೆಟ್‌ ಅನ್ನು ಮಂಡಿಸಲಿದ್ದು, ಈ ವರ್ಷ, ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರ ಮೇಲ್ವಿಚಾರಣೆಯಲ್ಲಿ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗವು ಸಮೀಕ್ಷೆಯನ್ನು ಸಿದ್ಧಪಡಿಸಿದೆ. ಭಾರತದ ವಾರ್ಷಿಕ ಪೂರ್ವ-ಬಜೆಟ್ ಆರ್ಥಿಕ ಸಮೀಕ್ಷೆಯು 2023-24ರಲ್ಲಿ GDP ಬೆಳವಣಿಗೆಯನ್ನು 6-6.8% ಕ್ಕೆ ನಿಗದಿಪಡಿಸುವ ಸಾಧ್ಯತೆಯಿದೆ ಎಂದು ಮೂಲವನ್ನು ಉಲ್ಲೇಖಿಸಿದೆ. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್‍ಗೆ ಜೀವ ಬೆದರಿಕೆ- ವ್ಯಕ್ತಿ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸರ್ಕಾರ ಸುಳ್ಳು ಹರಡುತ್ತಿದೆ, ಸರ್ಜಿಕಲ್ ಸ್ಟ್ರೈಕ್‌ ವರದಿ ಎಲ್ಲಿದೆ – ದಿಗ್ವಿಜಯ್ ಸಿಂಗ್ ಪ್ರಶ್ನೆ

    ಸರ್ಕಾರ ಸುಳ್ಳು ಹರಡುತ್ತಿದೆ, ಸರ್ಜಿಕಲ್ ಸ್ಟ್ರೈಕ್‌ ವರದಿ ಎಲ್ಲಿದೆ – ದಿಗ್ವಿಜಯ್ ಸಿಂಗ್ ಪ್ರಶ್ನೆ

    ಶ್ರೀನಗರ: ಬಿಜೆಪಿ (BJP) ನೇತೃತ್ವದ ಕೇಂದ್ರ ಸರ್ಕಾರ ಕೇವಲ ಸುಳ್ಳನ್ನೇ ಬಿತ್ತರಿಸುತ್ತಿದೆ. 2016ರ ಸರ್ಜಿಕಲ್ ಸ್ಟ್ರೈಕ್‌ (Surgical Strike 2016) ಹಾಗೂ 2019ರಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಗಳ (Pulwama Terror Attack) ಬಗ್ಗೆ ಕೇಂದ್ರ ಸರ್ಕಾರ ಈವರೆಗೆ ಸಂಸತ್ತಿನಲ್ಲಿ ವರದಿ ಮಂಡಿಸಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ (Digvijaya Singh) ವಾಗ್ದಾಳಿ ನಡೆಸಿದ್ದಾರೆ.

    ರಾಹುಲ್‌ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ (BJP Government) ಸುಳ್ಳನ್ನೇ ಹರಡುತ್ತಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲಿ ತ್ರಿ ಸದಸ್ಯ ಪೀಠದಲ್ಲಿ ಹಿಜಬ್ ಪ್ರಕರಣದ ವಿಚಾರಣೆ ನಡೆಸಲಾಗುವುದು: ಸಿಜೆಐ

    2019ರಲ್ಲಿ ಪಾಕಿಸ್ತಾನ (Pakistan) ಮೂಲದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆ ನಡೆಸಿದ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಪುಲ್ವಾಮಾದಲ್ಲಿ ಹುತಾತ್ಮರಾದರು. ಆಗ ಸಿಆರ್‌ಪಿಎಫ್ ಅಧಿಕಾರಿಗಳು ಸಿಬ್ಬಂದಿಯನ್ನ ಏರ್‌ಲಿಫ್ಟ್ ಮಾಡಬೇಕೆಂದು ಪ್ರಧಾನಿ ಮೋದಿಗೆ (Narendra Modi) ಮನವಿ ಮಾಡಿದ್ದರು. ಆದ್ರೆ ಮೋದಿ ಅದಕ್ಕೆ ಒಪ್ಪಲಿಲ್ಲ. ಇಂತಹ ಲೋಪ ಹೇಗೆ ಸಂಭವಿಸಿತು? ಈವರೆಗೆ ಪುಲ್ವಾಮಾ ದಾಳಿಯ ಕುರಿತು ಒಂದೇ ಒಂದು ವರದಿಯನ್ನೂ ಸಂಸತ್ತಿನ ಮುಂದೆ ಇಟ್ಟಿಲ್ಲ ಎಂದು ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದರು.

    ಪುಲ್ವಾಮಾ ದಾಳಿ ಬಳಿಕ ಸರ್ಜಿಕಲ್ ಸ್ಟ್ರೈಕ್‌ ನಡೆಸಲಾಗಿದೆ ಎಂದು ಹೇಳಿಕೊಂಡರು. ಆದ್ರೆ ಪುರಾವೆಗಳನ್ನ ತೋರಿಸಲಿಲ್ಲ. ಕೇವಲ ಸುಳ್ಳುಗಳನ್ನೇ ಹರಡಿದರು ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: 21 ದ್ವೀಪಗಳಿಗೆ ಪರಮವೀರ ಚಕ್ರ ಪಡೆದ ಸೈನಿಕರ ಹೆಸರು – ಬೋಸ್ ರಾಷ್ಟ್ರೀಯ ಸ್ಮಾರಕದ ಮಾದರಿ ಅನಾವರಣಗೊಳಿಸಿದ ಮೋದಿ

    ಅಷ್ಟೇ ಅಲ್ಲದೇ 2016ರಲ್ಲಿ ಜಮ್ಮು ಮತ್ತು ಕಾಶ್ಮೀರದ ಉರಿ ಪಟ್ಟಣದಲ್ಲಿರುವ ಸೇನೆಯ 12 ಬ್ರಿಗೇಡ್ ಪ್ರಧಾನ ಕಚೇರಿಗಳ ಮೇಲೆ ನಾಲ್ವರು ಭಯೋತ್ಪಾದಕರು ಗ್ರೇನೆಡ್ ದಾಳಿ ನಡೆಸಿದರು. ಈ ದಾಳಿಯಲ್ಲಿ 18 ಯೋಧರು ಹುತಾತ್ಮರಾದರು. ಉರಿ ಭಯೋತ್ಪಾದಕ ದಾಳಿಯ 10 ದಿನಗಳ ಬಳಿಕ ಸರ್ಜಿಕಲ್ ಸ್ಟ್ರೈಕ್‌ ನಡೆಸಲಾಯಿತು. ಅದರ ವರದಿಯನ್ನೂ ಸಂಸತ್ತಿನಲ್ಲಿ ಮಂಡಿಸಿಲ್ಲ ಎಂದು ಹೇಳಿದ್ದಾರೆ.

    ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದ ರಜೌರಿಯ ಧಂಗ್ರಿ ಮತ್ತು ಜಮ್ಮುವಿನ ನರ್ವಾಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದರು. ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ನಂತರವೂ ಕಾಶ್ಮೀರದ ಕಣಿವೆಯಲ್ಲಿ ಭಯೋತ್ಪಾದನೆ ಇನ್ನೂ ಜೀವಂತವಾಗಿದೆ. 370ನೇ ವಿಧಿ ರದ್ದಾದ ನಂತರ ಇಲ್ಲಿನ ಪರಿಸ್ಥಿತಿ ಬೆಳಕಿಗೆ ಬರುತ್ತಿಲ್ಲ. ಉದ್ದೇಶಿತ ಹತ್ಯೆ ಹಾಗೂ ಬಾಂಬ್ ಸ್ಫೋಟಗಳು ಮತ್ತೆ ಶುರುವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    2022ರ ಸೆಪ್ಟೆಂಬರ್ 27ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಗೊಂಡ ಭಾರತ್ ಜೋಡೋ ಯಾತ್ರೆಯು ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಚರಿಸುತ್ತಿದೆ. ಇದೇ ತಿಂಗಳ ಜನವರಿ 30ರಂದು ಶ್ರೀನಗರದಲ್ಲಿ ಮುಕ್ತಾಯವಾಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜ.31 ರಿಂದ 66 ದಿನ ಸಂಸತ್ ಬಜೆಟ್ ಅಧಿವೇಶನ – ಪ್ರಹ್ಲಾದ್ ಜೋಶಿ

    ಜ.31 ರಿಂದ 66 ದಿನ ಸಂಸತ್ ಬಜೆಟ್ ಅಧಿವೇಶನ – ಪ್ರಹ್ಲಾದ್ ಜೋಶಿ

    ನವದೆಹಲಿ: ಕೇಂದ್ರ ಬಜೆಟ್ ಅಧಿವೇಶನ (Budget Session of Parliament) ಇದೇ ತಿಂಗಳ 31 ರಿಂದ ಆರಂಭವಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡಿರುವ ಸಚಿವರು, ಈ ಬಾರಿ 66 ದಿನಗಳ ಸಂಸತ್ ಅಧಿವೇಶನ ನಡೆಸಲು ಕಾರ್ಯಕ್ರಮ ಹಾಕಿಕೊಂಡಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: 8 ಗಂಟೆ ವಿಳಂಬ, ಕೊನೆ ಕ್ಷಣದಲ್ಲಿ ವಿಮಾನ ರದ್ದು – ಮತ್ತೊಮ್ಮೆ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾದ ಸ್ಪೈಸ್ ಜೆಟ್

    ಜನವರಿ 31ರಂದು ಆರಂಭಗೊಳ್ಳುವ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪಗಳು ಎಪ್ರಿಲ್ 6ರ ವರೆಗೆ ನಡೆಯಲಿದೆ. ಅಧಿವೇಶನದಲ್ಲಿ ಬಜೆಟ್ ಮಂಡನೆ, ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಸೇರಿದಂತೆ ಇತರ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ಜೋಶಿ ತಿಳಿಸಿದ್ದಾರೆ.

    ಅಧಿವೇಶನದ ಸಂದರ್ಭದಲ್ಲಿ, ಸಂಸತ್ತಿನ ಸ್ಥಾಯಿ ಸಮಿತಿ ಎದುರಿರುವ ಹಲವು ರಾಜ್ಯಗಳ ಅನುದಾನಗಳ ಬೇಡಿಕೆ ಕುರಿತು ನಿರ್ಣಯ ಕೈಗೊಳ್ಳಲು ಹಾಗೂ ವಿವಿಧ ಸಚಿವಾಲಯಗಳಿಗೆ ಸಂಬಂಧಪಟ್ಟ ವಿಷಯಗಳ ಕುರಿತು ವರದಿ ಸಿದ್ಧಪಡಿಸಲು ಫೆಬ್ರವರಿ 14 ರಿಂದ ಮಾರ್ಚ್ 12ರ ವರೆಗೆ ವಿರಾಮ ಪಡೆಯಲಾಗುವುದು ಎಂದು ಜೋಶಿ ಹೇಳಿದ್ದಾರೆ. ಇದನ್ನೂ ಓದಿ: ದೆಹಲಿ ಬಳಿಕ ಕರ್ನಾಟಕದಲ್ಲೂ ಆಪ್ `ಟಿಕೆಟ್ ಫಾರ್ ಸೇಲ್’ – ಸುಕೇಶ್ ಚಂದ್ರಶೇಖರ್ ಗಂಭೀರ ಆರೋಪ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜ.31ಕ್ಕೆ ಸಂಸತ್ ಅಧಿವೇಶನ; ಫೆ.1ಕ್ಕೆ ಕೇಂದ್ರ ಬಜೆಟ್ ಮಂಡನೆ

    ಜ.31ಕ್ಕೆ ಸಂಸತ್ ಅಧಿವೇಶನ; ಫೆ.1ಕ್ಕೆ ಕೇಂದ್ರ ಬಜೆಟ್ ಮಂಡನೆ

    ನವದೆಹಲಿ: ಈ ಬಾರಿ ಸಂಸತ್ ಬಜೆಟ್ ಅಧಿವೇಶನ (Parliament’s Budget Session) ಜನವರಿ 31 ರಿಂದ ಪ್ರಾರಂಭವಾಗಿ ಏಪ್ರಿಲ್ 6 ರಂದು ಮುಕ್ತಾಯವಾಗುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಈ ಬಗ್ಗೆ ಸರ್ಕಾರ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ನೀಡುವ ನಿರೀಕ್ಷೆ ಇದೆ.

    ಕೇಂದ್ರ ಬಜೆಟ್ 2023-24 (Union Budget 2023-24) ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಬಜೆಟ್ ಅಧಿವೇಶನದ ಮೊದಲ ಭಾಗ ಫೆಬ್ರವರಿ 10 ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಉತ್ತರ ಕರ್ನಾಟಕದ ನಡೆದಾಡುವ ದೇವರು ಸಿದ್ದೇಶ್ವರ ಶ್ರೀ

    ಬಜೆಟ್ ಅಧಿವೇಶನದ ಮೊದಲ ದಿನ ಸಂಸತ್ತಿನ ಉಭಯ ಸದನದಲ್ಲಿ ಆರ್ಥಿಕ ಸಮೀಕ್ಷೆಯನ್ನೂ ಮಂಡಿಸುವ ಸಾಧ್ಯತೆಯಿದೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಿ, ಅಧಿವೇಶನವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

    ಪ್ರತಿ ವರ್ಷ ಕೇಂದ್ರ ಬಜೆಟ್ ಅನ್ನು ಅಧಿವೇಶನಗಳಲ್ಲಿ ಮಂಡಿಸಲಾಗುತ್ತದೆ. ವರದಿಯ ಪ್ರಕಾರ, ಅಧಿವೇಶನದ 2ನೇ ಭಾಗವು ಮಾರ್ಚ್ 6 ರಂದು ಪ್ರಾರಂಭವಾಗಿ ಏಪ್ರಿಲ್ 6ಕ್ಕೆ ಕೊನೆಗೊಳ್ಳುವ ಸಾಧ್ಯತೆಯಿದೆ. ಇದನ್ನೂ ಓದಿ: 9 ದಿನದ ಬ್ರೇಕ್ ಬಳಿಕ ಜೋಡೋ ಯಾತ್ರೆ ಪುನರಾರಂಭ

    Live Tv
    [brid partner=56869869 player=32851 video=960834 autoplay=true]

  • ನೋಟು ನಿಷೇಧದ ಅಧಿಸೂಚನೆಯೇ ಕಾನೂನುಬಾಹಿರ: ನ್ಯಾ.ನಾಗರತ್ನ

    ನೋಟು ನಿಷೇಧದ ಅಧಿಸೂಚನೆಯೇ ಕಾನೂನುಬಾಹಿರ: ನ್ಯಾ.ನಾಗರತ್ನ

    ನವದೆಹಲಿ: 2016ರ ನವೆಂಬರ್ 8ರಂದು ಅಧಿಸೂಚನೆ ಹೊರಡಿಸಿ ಕೈಗೊಂಡ ನೋಟು ನಿಷೇಧ(Note Ban) ಕ್ರಮವು ಕಾನೂನುಬಾಹಿರವಾಗಿದೆ. ಆದರೆ 2016 ರಲ್ಲಿದ್ದ ಯಥಾಸ್ಥಿತಿಯನ್ನು ಈಗ ಪುನಃಸ್ಥಾಪಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ನ್ಯಾಯಮೂರ್ತಿ(Supreme Court) ನಾಗರತ್ನ ಅವರು ತಮ್ಮ ತೀರ್ಪಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕೇಂದ್ರ ಸರ್ಕಾರದ ಅಮಾನ್ಯೀಕರಣ(Demonetisation) ನಿರ್ಧಾರ ಸರಿ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಐತಿಹಾಸಿಕ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರ ಪೈಕಿ ನಾಲ್ವರು ಕೇಂದ್ರ ನಿರ್ಧಾರ ಸರಿ ಎಂದು ಹೇಳಿದರೆ ನ್ಯಾಯಮೂರ್ತಿ ನಾಗರತ್ನ(Justice BV Nagarathna) ಭಿನ್ನ ತೀರ್ಪು ನೀಡಿದ್ದಾರೆ. ನೋಟು ಅಮಾನ್ಯೀಕರಣ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂ ವಜಾಗೊಳಿಸಿದೆ.

    ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್, ಬಿ.ಆರ್.ಗವಾಯಿ, ಎ.ಎಸ್.ಬೋಪಣ್ಣ, ವಿ.ರಾಮಸುಬ್ರಮಣಿಯನ್ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಸಾಂವಿಧಾನಿಕ ಪೀಠವು 2022ರ ಡಿಸೆಂಬರ್ 7ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು.

    ನ್ಯಾ. ನಾಗರತ್ನ ತೀರ್ಪಿನಲ್ಲಿ ಏನಿದೆ?
    ನೋಟು ನಿಷೇಧದ ಕಾನೂನಾತ್ಮಕ ಅಂಶಗಳು ಸಂಸತ್ತಿನಲ್ಲಿ(Parliament ) ಚರ್ಚೆ ಆಗಬೇಕಿತ್ತು. ಸಂಸತ್ತು ಇಲ್ಲದೇ ಪ್ರಜಾಪ್ರಭುತ್ವ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಇಂತಹ ಪ್ರಮುಖ ನಿರ್ಧಾರ ಕೈಗೊಳ್ಳುವಾಗ ಸಂಸತ್ತನ್ನು ದೂರವಿಟ್ಟಿದ್ದು ಸರಿಯಲ್ಲ. ಇದನ್ನೂ ಓದಿ: ಕೇಂದ್ರ ಸರ್ಕಾರದ ನೋಟ್ ಬ್ಯಾನ್‌ ನಿರ್ಧಾರ ನ್ಯಾಯ ಸಮ್ಮತವಾಗಿದೆ: ಸುಪ್ರೀಂ ಕೋರ್ಟ್

    ನೋಟು ಅಮಾನ್ಯೀಕರಣದ ಬಗ್ಗೆ ವಿಶ್ವಾದ್ಯಂತದ ಇತಿಹಾಸವನ್ನು ಉಲ್ಲೇಖಿಸಿದ್ದೇನೆ. ಕೇಂದ್ರ ಸರ್ಕಾರವು ನೋಟು ನಿಷೇಧದ ಬಗ್ಗೆ ಆರ್‌ಬಿಐ(RBI) ಅಭಿಪ್ರಾಯವನ್ನು ಮಾತ್ರ ಕೇಳಿತ್ತು. ಆರ್‌ಬಿಐ ಸ್ವತಂತ್ರ ನಿರ್ಧಾರವನ್ನು ಜಾರಿಗೊಳಿಸಿಲ್ಲ. ಆರ್‌ಬಿಐ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದಾಗ, “ಕೇಂದ್ರ ಸರ್ಕಾರವು ಬಯಸಿದಂತೆ”, “500 ಮತ್ತು 1000 ನೋಟುಗಳನ್ನು ಹಿಂಪಡೆಯಲು ಸರ್ಕಾರ ಶಿಫಾರಸು ಮಾಡಿದೆ” ಎಂಬ ಪದಗಳು ಮತ್ತು ಪದಗುಚ್ಛಗಳ ಬಳಕೆಯನ್ನು ನಾನು ಗಮನಿಸಿದ್ದೇನೆ. ಆರ್‌ಬಿಐ ಸ್ವತಂತ್ರ ನಿರ್ಧಾರವನ್ನು ಜಾರಿಗೊಳಿಸದೇ ಇರುವುದು ಸರಿಯಲ್ಲ.

    RBI

    ಆರ್‌ಬಿಐ ಕಾಯಿದೆ ಪ್ರಕಾರ, ನೋಟು ಅಮಾನ್ಯೀಕರಣದ ಶಿಫಾರಸು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಂಡಳಿಯಿಂದ ಬರಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ನವೆಂಬರ್ 7 ರಂದು ಆರ್‌ಬಿಐಗೆ ಪತ್ರ ಬರೆದು ಅಂತಹ ಶಿಫಾರಸಿಗೆ ಸಲಹೆ ನೀಡಿದೆ.

    500 ಮತ್ತು 1000 ರೂ. ಎಲ್ಲಾ ಸರಣಿಯ ನೋಟುಗಳ ಅಮಾನ್ಯೀಕರಣದ ಸಂಪೂರ್ಣ ಕೆಲಸವನ್ನು 24 ಗಂಟೆಯಲ್ಲಿ ನಡೆಸಲಾಗಿದೆ. ಭಾರತದ ಆರ್ಥಿಕತೆ(Indian Economy) ಮತ್ತು ನಾಗರಿಕರ ಮೇಲೆ ಆಗುವ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಿದ ಬಳಿಕ ಆರ್‌ಬಿಐ ಸ್ವತಂತ್ರ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕಿತ್ತು.

    ಆರ್‌ಬಿಐ ಒಂದು ವೇಳೆ ನೋಟು ನಿಷೇಧ ನಿರ್ಧಾರವನ್ನು ಕೈಗೊಳ್ಳುವಂತೆ ಶಿಫಾರಸು ಮಾಡಿದರೂ ಸರ್ಕಾರ ಕೂಡಲೇ ನೋಟಿಫಿಕೇಶನ್‌ ಹೊರಡಿಸುವಂತಿಲ್ಲ. ಈ ನಿರ್ಧಾರ ಸಂಸತ್ತಿನ ಮೂಲಕ ಅಥವಾ ಸುಗ್ರೀವಾಜ್ಞೆಯ ಮೂಲಕ ನಡೆಯಬೇಕು. ಈ ಎಲ್ಲಾ ಕಾರಣದಿಂದ 2016 ನವೆಂಬರ್‌ 8ರ ನೋಟು ನಿಷೇಧದ ಅಧಿಸೂಚನೆ ಕಾನೂನಿಗೆ ವಿರುದ್ಧ ಮತ್ತು ಕಾನೂನುಬಾಹಿರವಾಗಿದೆ. ಆದರೆ 2016 ರಲ್ಲಿದ್ದ ಯಥಾಸ್ಥಿತಿಯನ್ನು ಈಗ ಪುನಃಸ್ಥಾಪಿಸಲು ಸಾಧ್ಯವಿಲ್ಲ.

    ಆರ್ಥಿಕತೆಗೆ ಸಮಸ್ಯೆ ತರುತ್ತಿರುವ ಕಪ್ಪು ಹಣ, ಭಯೋತ್ಪಾದಕ ನಿಧಿ ಮತ್ತು ನಕಲಿ ನೋಟುಗಳನ್ನು ನಿಯಂತ್ರಿಸಲು ಈ ಕ್ರಮ ಸದುದ್ದೇಶವನ್ನು ಹೊಂದಿದೆ. ಉದ್ದೇಶ ಉತ್ತಮವಾಗಿದ್ದರೂ ಈ ಪ್ರಕ್ರಿಯೆ ಅನುಮಾನಾಸ್ಪದದಿಂದ ಕೂಡಿತ್ತು. ಅಮಾನ್ಯಗೊಳಿಸಲಾದ ಕರೆನ್ಸಿ ನೋಟುಗಳ ಮೌಲ್ಯದ ಸುಮಾರು ಶೇ.98 ರಷ್ಟು ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಾಯಿಸಿದ್ದರಿಂದ ಕಾನೂನುಬದ್ಧ ಟೆಂಡರ್‌ ಆಗಿಯೇ ಮುಂದುವರಿಯುತ್ತದೆ. ಅಲ್ಲದೇ 2000 ರೂ. ಹೊಸ ನೋಟುಗಳನ್ನು ಆರ್‌ಬಿಐ ಬಿಡುಗಡೆ ಮಾಡಿದೆ. ಇದರಿಂದಾಗಿ ಈ ನೋಟು ನಿಷೇಧದ ನಿರ್ಧಾರ ಪರಿಣಾಮಕಾರಿಯಾಗಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಲೈಂಗಿಕತೆಯ ಒಪ್ಪಿಗೆ ವಯಸ್ಸನ್ನು ಕಡಿಮೆ ಮಾಡಲ್ಲ: ಕೇಂದ್ರ ಸರ್ಕಾರ

    ಲೈಂಗಿಕತೆಯ ಒಪ್ಪಿಗೆ ವಯಸ್ಸನ್ನು ಕಡಿಮೆ ಮಾಡಲ್ಲ: ಕೇಂದ್ರ ಸರ್ಕಾರ

    ನವದೆಹಲಿ: ಲೈಂಗಿಕತೆಗೆ ಒಪ್ಪಿಗೆಯ ವಯಸ್ಸನ್ನು ಕಡಿಮೆ ಮಾಡುವ ಯಾವುದೇ ಯೋಜನೆಯನ್ನು ಕೇಂದ್ರ ಹೊಂದಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ತಿಳಿಸಿದರು.

    ಈ ವಯಸ್ಸನ್ನು 18 ರಿಂದ 16 ವರ್ಷಕ್ಕೆ ಬಸಲಾಯಿಸುವ ಕುರಿತು ರಾಜ್ಯಸಭೆಯಲ್ಲಿ (Rajya Sabha) ಸಿಪಿಐ ಸಂಸದ ಬಿನೋಯ್ ವಿಶ್ವಂ ಕೇಳಿದ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ (Smriti Irani) ಲಿಖಿತ ಉತ್ತರ ನೀಡಿದರು. ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ಪೋಸ್ಕೋ ಕಾಯಿದೆ 2012 ಅಡಿಯಲ್ಲಿ ವಯಸ್ಸು ನಿಗದಿಪಡಿಸಲಾಗಿದೆ. ಈ ಬಗ್ಗೆ ಪ್ರಶ್ನೆ ಉದ್ಭವಿಸುವುದೇ ಇಲ್ಲ ಎಂದು ತಿಳಿಸಿದರು.

    ವಿಶೇಷ ನ್ಯಾಯಾಲಯದ ಮುಂದೆ ಯಾವುದೇ ವಿಚಾರಣೆಯ ಇಂತಹ ಪ್ರಶ್ನೆ ಉದ್ಭವಿಸಿದರೆ, ಅಂತಹ ಪ್ರಶ್ನೆಯನ್ನು ನ್ಯಾಯಾಲಯವು ನಿರ್ಧರಿಸುತ್ತದೆ ಎಂದು ಹೇಳಿದರು. ಸರ್ಕಾರದ ನಿಲುವನ್ನು ದೃಢವಾಗಿ ಮಂಡಿಸಿದ ಕಾರಣ ಈ ಪ್ರತಿಕ್ರಿಯೆ ಮಹತ್ವ ಪಡೆದಿತ್ತು.

    ಡಿ.11ರಂದು ಸಿಜೆಐ ಡಿವೈ ಚಂದ್ರಚೂಡ್ ಅವರು ಪೋಕ್ಸ್ ಕಾಯ್ದೆ ಅನ್ವಯ ಒಪ್ಪಿಗೆಯ ವಯಸ್ಸಿನ ಬಗ್ಗೆ ಹೆಚ್ಚುತ್ತಿರುವ ಕಾಳಜಿಯ ಸರ್ಕಾರದ ನಿಲುವು ತಿಳಿಸುವಂತೆ ಸೂಚಿಸಿದ್ದರು. ಇದನ್ನೂ ಓದಿ: ಕಾಫಿನಾಡಲ್ಲಿ ಲವರ್ಸ್‌ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ – ಪ್ರೇಮಿಗಳ ಸಾವಿಗೆ ಮೂರನೇಯವಳು ಕಾರಣ?

    ಅಪ್ರಾಪ್ತ ವಯಸ್ಕರಲ್ಲಿ ವಾಸ್ತವಿಕವಾಗಿ ಸಮ್ಮತಿ ಇದೆಯೇ ಎಂಬುದನ್ನು ಕಾಯ್ಕೆ ಪರಿಗಣಿಸುವುದಿಲ್ಲ. 18 ವರ್ಷದೊಳಗಿನ ಮಕ್ಕಳ ಮೇಲೆ ನಡೆಯುವ ಎಲ್ಲಾ ಲೈಂಗಿಕ ಕ್ರಿಯೆಯನ್ನು ಅಪರಾಧ ಎಂದೇ ಕಾಯ್ದೆ ಹೇಳುತ್ತದೆ. ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ – ವಸತಿ ಶಾಲೆಯ ಪ್ರಾಂಶುಪಾಲ ಬಂಧನ

    Live Tv
    [brid partner=56869869 player=32851 video=960834 autoplay=true]

  • ಸಲಿಂಗ ಸಂಬಂಧ ಸರಿ.. ಆದ್ರೆ ವಿವಾಹ ಒಪ್ಪುವಂಥದ್ದಲ್ಲ: ಸುಶೀಲ್ ಮೋದಿ

    ಸಲಿಂಗ ಸಂಬಂಧ ಸರಿ.. ಆದ್ರೆ ವಿವಾಹ ಒಪ್ಪುವಂಥದ್ದಲ್ಲ: ಸುಶೀಲ್ ಮೋದಿ

    ನವದೆಹಲಿ: ಸಲಿಂಗ ಸಂಬಂಧಗಳು ಸ್ವೀಕಾರಾರ್ಹವಾದರೂ ಅಂತಹ ವಿವಾಹಗಳು (Marriage) ಒಪ್ಪುವಂತಹದ್ದಲ್ಲ. ಅಂತಹ ವಿವಾಹಗಳಿಗೆ ಅವಕಾಶ ನೀಡುವುದರಿಂದ ವಿಚ್ಛೇದನ, ದತ್ತು ಸ್ವೀಕಾರ ಸೇರಿದಂತೆ ಹಲವು ಹಂತಗಳಲ್ಲಿ ಸಮಸ್ಯೆ ಉದ್ಭವಿಸಲಿದೆ ಎಂದು ಬಿಜೆಪಿ (BJP) ಸಂಸದ ಸುಶೀಲ್ ಕುಮಾರ್ ಮೋದಿ (Sushil Kumar Modi) ಹೇಳಿದ್ದಾರೆ.

    ಸಂಸತ್ತಿನ (Parliament) ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಕೆಲ ಎಡ- ಉದಾರವಾದಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಸಲಿಂಗ ವಿವಾಹದ ಕಾನೂನು (Law) ಮಾನ್ಯತೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಇಂಥ ಪ್ರಯತ್ನವನ್ನು ಸರ್ಕಾರ ತೀವ್ರವಾಗಿ ವಿರೋಧಿಸಬೇಕು. ದೇಶದ ಸಂಸ್ಕೃತಿಗೆ ಧಕ್ಕೆ ತರುವಂತಹ ಇಂಥ ನೀತಿಯ ಪರವಾಗಿ ನ್ಯಾಯಾಂಗವು ಯಾವುದೇ ತೀರ್ಪು ನೀಡಬಾರದು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ನನಗೆ ಗುಂಡು ಹೊಡೆದ್ರೂ ಟಿಪ್ಪು ಭಾವಚಿತ್ರ ಅಳವಡಿಸಲು ಬಿಡಲ್ಲ – ಯತ್ನಾಳ್

    ಯಾವುದೇ ಕಾನೂನುಗಳು ದೇಶದ ಸಂಪ್ರದಾಯದದೊಂದಿಗೆ ಹೊಂದಿಕೆಯಾಗಬಾರದು. ಭಾರತೀಯ ಸಮಾಜ ಹೇಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಇಲ್ಲಿನ ಜನರು ಹೇಗೆ ಅದನ್ನು ಸ್ವೀಕರಿಸಲು ಸಿದ್ಧರಿದ್ದಾರೆ ಎಂಬುದನ್ನು ನಿರ್ಣಯಿಸಬೇಕು. ಸಲಿಂಗ ಸಂಬಂಧವನ್ನು ಅಪರಾಧೀಕರಿಸಲಾಗಿದೆ. ಸಲಿಂಗ ದಂಪತಿಗೆ ಒಟ್ಟಿಗೆ ವಾಸಿಸಲು ಕಾನೂನು ಸ್ಥಾನಮಾನ ನೀಡುವುದು ಬೇರೆ ವಿಚಾರ. ಆದರೆ ಮದುವೆ ಪವಿತ್ರ ಸಂಬಂಧ. ಭಾರತವನ್ನು ಅಮೆರಿಕದಂತೆ (US) ಮಾಡಬೇಡಿ ಎಂದು ಅವರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: 1,050 ರೂ. LPG ಸಿಲಿಂಡರ್ ಇನ್ಮುಂದೆ 500 ರೂ.ಗೆ – ಗುಡ್‌ನ್ಯೂಸ್ ಕೊಟ್ಟ ರಾಜಸ್ಥಾನ ಸಿಎಂ

    ಭಾರತದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಅಥವಾ ಯಾವುದೇ ಕ್ರೋಢೀಕರಿಸದ ವೈಯಕ್ತಿಕ ಕಾನೂನಿನಲ್ಲಿ ಸಲಿಂಗ ವಿವಾಹವನ್ನು ಅಂಗೀಕರಿಸಲಾಗುವುದಿಲ್ಲ. ಸಲಿಂಗ ವಿವಾಹವು ದೇಶದಲ್ಲಿ ವೈಯಕ್ತಿಕ ಕಾನೂನುಗಳ ಸೂಕ್ಷ್ಮ ಸಮತೋಲನಕ್ಕೆ ಹಾನಿಯುಂಟು ಮಾಡುತ್ತದೆ. ಇಂತಹ ಮಹತ್ವದ ಸಾಮಾಜಿಕ ವಿಷಯದ ಬಗ್ಗೆ ಇಬ್ಬರು ನ್ಯಾಯಮೂರ್ತಿಗಳು ನಿರ್ಧರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟ ಸುಶೀಲ್ ಕುಮಾರ್, ಈ ವಿಷಯವು ಸಂಸತ್ತು ಮತ್ತು ಸಮಾಜದಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಗೆ ಒಳಪಡಬೇಕಿದೆ ಎಂದು ಸಲಹೆ ನೀಡಿದ್ದಾರೆ.

    ಸರ್ಕಾರವು, ನ್ಯಾಯಾಲಯದಲ್ಲಿ ಇಂಥ ಪ್ರಕರಣಗಳ ವಿರುದ್ಧ ತೀವ್ರವಾಗಿ ವಾದ ಮಂಡಿಸಬೇಕು ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರತ – ಚೀನಾ ಸಂಘರ್ಷ: ಸದನದಿಂದ ಹೊರನಡೆದ ಸೋನಿಯಾ ಗಾಂಧಿ

    ಭಾರತ – ಚೀನಾ ಸಂಘರ್ಷ: ಸದನದಿಂದ ಹೊರನಡೆದ ಸೋನಿಯಾ ಗಾಂಧಿ

    ನವದೆಹಲಿ: ಭಾರತ (India) – ಚೀನಾ (China) ಗಡಿ ಸಮಸ್ಯೆಯ ಕುರಿತು ಕೇಂದ್ರ ಸರ್ಕಾರ ಚರ್ಚಿಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ (Sonia Gandhi) ಸೇರಿದಂತೆ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್‍ನ ಸಂಸದರು ಬುಧವಾರ ಸದನದಿಂದ (Parliament) ಹೊರನಡೆದರು.

    ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ಮುಗಿದ ತಕ್ಷಣ ಭಾರತ- ಚೀನಾ ಗಡಿ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌದರಿ ಒತ್ತಾಯಿಸಿದರು. ಅಷ್ಟೇ ಅಲ್ಲದೇ 1962ರಲ್ಲಿ ಚೀನಾ ಯುದ್ಧ ನಡೆಯುವಾಗ ಅಂದಿನ ಪ್ರಧಾನಿ ದಿವಂಗತ ಪಂಡಿತ್ ಜವಾಹರಲಾಲ್ ನೆಹರು ಅವರು ಲೋಕಸಭೆಯಲ್ಲಿ ಭಾರತದ ಬಗ್ಗೆ ಚರ್ಚಿಸಲು ಅವಕಾಶ ನೀಡಿದ್ದರು. ಅಂದು ನೆಹರು ಅವರು 165 ಸಂಸದರಿಗೆ ಈ ಬಗ್ಗೆ ಮಾತನಾಡಲು ಅವಕಾಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾವು ಭಾರತ – ಚೀನಾ ಗಡಿ ಪರಿಸ್ಥಿತಿಯ ಬಗ್ಗೆ ಚರ್ಚೆಗೆ ಒತ್ತಾಯಿಸುತ್ತಿದ್ದೇವೆ ಎಂದು ತಿಳಿಸಿದರು.

    ಕಾಂಗ್ರೆಸ್ ನಾಯಕರ ಬೇಡಿಕೆಗೆ ಪ್ರತಿಕ್ರಿಯಿಸಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ವ್ಯವಹಾರ ಸಲಹಾ ಸಮಿತಿಯ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಸಭಾಧ್ಯಕ್ಷರು ವಿಷಯವನ್ನು ಮುಂದಕ್ಕೆ ಹಾಕಿದ್ದಕ್ಕೆ ಕಾಂಗ್ರೆಸ್ ಮತ್ತು ಟಿಎಂಸಿ ಪ್ರತಿಭಟಿಸಿ ಸದನದಿಂದ ಹೊರನಡೆದಿದ್ದಾರೆ. ಇದನ್ನೂ ಓದಿ: ದೆಹಲಿ ಏಮ್ಸ್‌ಗೆ ಕನ್ನ ಹಾಕಿದ್ದು ಚೀನಾ – ಡೇಟಾ ಈಗ ಸುರಕ್ಷಿತ

    ಟಿಎಂಸಿ ಸದಸ್ಯ ಸುದೀಪ್ ಬಂಡೋಪಾಧ್ಯಾಯ ಈ ಬಗ್ಗೆ ಮಾತನಾಡಿ, ಸರ್ಕಾರದ ಧೋರಣೆ ವಿರುದ್ಧ ಪ್ರತಿಭಟಿಸಿ ತಮ್ಮ ಪಕ್ಷದ ಸದಸ್ಯರು ಸಭಾತ್ಯಾಗ ನಡೆಸುತ್ತಿದ್ದಾರೆ ಎಂದು ಹೇಳಿದರು. ಇದಕ್ಕೂ ಮುನ್ನ ವಿವಿಧ ವಿಷಯಗಳ ವಿರುದ್ಧ ಪ್ರತಿಪಕ್ಷಗಳ ಸದಸ್ಯರು ಲೋಕಸಭೆಯಿಂದ ಹೊರನಡೆದಿದ್ದರು. ಇದನ್ನೂ ಓದಿ: ನಮ್ಮ ನೆಲ, ಜಲ, ಗಡಿ ವಿಚಾರ ಮುಖ್ಯ – ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

  • 35 ಗ್ರಾಂ ಬೆಳ್ಳಿಯಲ್ಲಿ ಮೂಡಿದ ಸಂಸತ್ ಭವನ

    35 ಗ್ರಾಂ ಬೆಳ್ಳಿಯಲ್ಲಿ ಮೂಡಿದ ಸಂಸತ್ ಭವನ

    ಕಾರವಾರ: ಕಲಾವಿದನ ಕೈಗೆ ಏನು ಸಿಕ್ಕರೂ ಅದಕ್ಕೊಂದು ರೂಪ ಕೊಡುವುದು ಕಲಾವಿದನ ಚಾಣಾಕ್ಷತೆಗೆ ಹಿಡಿದ ಕನ್ನಡಿಯಂತೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅಕ್ಕಸಾಲಿಗನೊಬ್ಬ ಕೇವಲ 35 ಗ್ರಾಂ ಬೆಳ್ಳಿಯಲ್ಲಿ ಸಂಸತ್ ಭವನವನ್ನು ನಿರ್ಮಾಣ ಮಾಡಿದ್ದು, ಇವರ ಅತೀ ಸೂಕ್ಷ್ಮ ಕೆತ್ತನೆ ಎಲ್ಲರನ್ನು ಬೆರಗಾಗಿಸುವಂತೆ ಮಾಡಿದೆ.

    ಹೌದು. ಈ ಅಪರೂಪದ ಕಲಾಕೃತಿಯನ್ನು ನಿರ್ಮಿಸಿದವರು ಮಿಲಿಂದ್ ಉದಯಕಾಂತ್ ಅಣ್ವೇಕರ್. ಕಾರವಾರ ನಗರದಲ್ಲಿ ಅಕ್ಕಸಾಲಿಗರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರತಿ ವರ್ಷ ಒಂದಲ್ಲಾ ಒಂದು ವಿಶೇಷ ಕಲಾಕೃತಿಯನ್ನು ರಚಿಸುತ್ತಾರೆ. ಇದನ್ನೂ ಓದಿ: 411 ಕೋಟಿ ರೂ. ಅನವಾಲ ಏತ ನೀರಾವರಿ ಯೋಜನೆಗೆ ಸಂಪುಟ ಅನುಮೋದನೆ

    ಈ ಬಾರಿ ಆಜಾದೀ ಕಾ ಅಮೃತ್ ಮಹೋತ್ಸವದ ಅಂಗವಾಗಿ ದೇಶದ ಪ್ರತಿಷ್ಠಿತ ಸಂಸತ್ ಭವನವನ್ನು ಇವರು ಕೇವಲ 35 ಗ್ರಾಮ್ ಬೆಳ್ಳಿಯನ್ನು ಬಳಸಿ ನಿರ್ಮಿಸಿದ್ದಾರೆ. ಇದರ ನಿರ್ಮಾಣಕ್ಕೆ ಐದು ದಿನ ತೆಗೆದುಕೊಂಡಿದ್ದು, ಎತ್ತರ ಎರಡು ಇಂಚು ಇದ್ದು ಅಗಲ 1.5 ಇಂಚು ಇದೆ. ಈ ಚಿಕ್ಕ ಕಲಾಕೃತಿಯ ಮೇಲೆ ತ್ರಿವರ್ಣ ಧ್ವಜ ಸಹ ಕೆತ್ತಲಾಗಿದ್ದು, ಇವರ ಕಲೆಗೆ ಎಂತವರೂ ಸೈ ಎನ್ನುವಂತಿದೆ.

    ಈ ಹಿಂದೆ ಇವರು ಒಂದು ಗ್ರಾಂ ಗಿಂತಲೂ ಕಡಿಮೆ ಬಂಗಾರದಲ್ಲಿ 20 ಇಂಚು ಚೈನ್ ಅನ್ನು ನಿರ್ಮಿಸಿ ಲಿಮ್ಕಾ ದಾಖಲೆ ಮಾಡಿದ್ದರು. ಇದಲ್ಲದೇ 8 ಗ್ರಾಂ ಬಂಗಾರದ ಉಂಗುರದಲ್ಲಿ ತಾಜ್ ಮಹಲ್, ಹಂಪಿ ಕಲ್ಲಿನ ರಥ ನಿರ್ಮಾಣ ಮಾಡಿ ದಾಖಲೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಖರ್ಗೆ ಸಮ್ಮುಖದಲ್ಲಿ ನ್ಯಾಷನಲ್‌ ಹೆರಾಲ್ಡ್‌ ಕಚೇರಿ ಶೋಧ: ಅಧಿವೇಶನದ ಮಧ್ಯೆ ಸಮನ್ಸ್‌ ಜಾರಿಗೆ ಕಾಂಗ್ರೆಸ್‌ ಕಿಡಿ

    ಖರ್ಗೆ ಸಮ್ಮುಖದಲ್ಲಿ ನ್ಯಾಷನಲ್‌ ಹೆರಾಲ್ಡ್‌ ಕಚೇರಿ ಶೋಧ: ಅಧಿವೇಶನದ ಮಧ್ಯೆ ಸಮನ್ಸ್‌ ಜಾರಿಗೆ ಕಾಂಗ್ರೆಸ್‌ ಕಿಡಿ

    ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆ ಚುರುಕು ಮಾಡಿರುವ ಜಾರಿ ನಿರ್ದೇಶನಾಲಯ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಮತ್ತೊಮ್ಮೆ ಸಮನ್ಸ್ ನೀಡಿದೆ. ಅವರ ಸಮ್ಮುಖದಲ್ಲಿ ಯಂಗ್ ಇಂಡಿಯಾ ಕಚೇರಿಯಲ್ಲಿ ಶೋಧ ನಡೆಸಿದೆ. ಈ ವಿಚಾರ ಇಂದು ರಾಜ್ಯಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು.

    ವಿಚಾರಣೆಗೆ ಮುನ್ನ, ಮೇಲ್ಮನೆ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ, ಇಂದು ಮಧ್ಯಾಹ್ನ 12:30ಕ್ಕೆ ವಿಚಾರಣೆಗೆ ಹಾಜರಾಗಬೇಕೆಂದು ಸಮನ್ಸ್‌ ಜಾರಿ ಮಾಡಿದೆ. ಅಧಿವೇಶನದ ನಡುವೆ ಈ ರೀತಿಯ ಸಮನ್ಸ್ ಎಷ್ಟು ಸರಿ ಎಂದು ಪ್ರಶ್ನಿಸಿದರು. ಸೋನಿಯಾ, ರಾಹುಲ್ ನಿವಾಸಗಳನ್ನು ಪೊಲೀಸರು ಸುತ್ತುವರೆದಿರುವುದು ಎಷ್ಟರ ಮಟ್ಟಿಗೆ ಸಮಂಜಸ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿಗೆ 2-3 ತಿಂಗಳಲ್ಲಿ ಜಾಮರ್ ಅಳವಡಿಕೆ: ಆರಗ ಜ್ಞಾನೇಂದ್ರ

    ಈ ಆರೋಪಕ್ಕೆ ಇತರೆ ಸದಸ್ಯರು ದನಿಗೂಡಿಸಿದರೆ ಆಡಳಿತ ಪಕ್ಷದ ಸದಸ್ಯರು ಇದನ್ನು ಆಕ್ಷೇಪಿಸಿದರು. ಲೋಕಸಭೆಯಲ್ಲಿಯೂ ಇದೇ ವಾತಾವರಣ ಕಂಡುಬಂತು. ಗದ್ದಲ ಜಾಸ್ತಿಯಾದ್ದರಿಂದ ಕೊನೆಗೆ ಉಭಯ ಸದನಗಳ ಕಲಾಪ ನಾಳೆಗೆ ಮುಂದೂಡಲ್ಪಟ್ಟಿತು.

    ಸಂಸತ್ ಆವರಣದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಇಡಿ ಉಪಯೋಗಿಸಿಕೊಂಡು ವಿಪಕ್ಷಗಳ ಧ್ನಿವಯನ್ನು ಅಡಗಿಸಲು ಕೇಂದ್ರ ಪ್ರಯತ್ನಿಸುತ್ತಿದೆ. ನ್ಯಾಷನಲ್ ಹೆರಾಲ್ಡ್ ತನಿಖೆಯೇ ಬೆದರಿಕೆ ತಂತ್ರ. ಈ ಮೂಲಕ ನಮ್ಮನ್ನು ಸುಮ್ಮನಾಗಿಸಬಹುದು ಎಂದು ಮೋದಿ, ಶಾ ಭಾವಿಸಿದ್ದಾರೆ. ಆದ್ರೆ ಅವರಿಗೆ ನಾವು ಭಯಪಡುವ ಪ್ರಶ್ನೆಯೇ ಇಲ್ಲ. ಸತ್ಯವನ್ನು ಬ್ಯಾರಿಕೇಡ್‍ಗಳ ಮೂಲಕ ತಡೆಯಲು ಸಾಧ್ಯವಿಲ್ಲ ಎಂದು ಗುಡುಗಿದರು. ಕೇಂದ್ರ ಸಚಿವ ಪಿಯುಷ್ ಗೋಯೆಲ್, ಕಾಂಗ್ರೆಸ್ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

    ಬೆಲೆ ಏರಿಕೆ ವಿರೋಧಿಸಿ ಶುಕ್ರವಾರ ಕಾಂಗ್ರೆಸ್ ಸಂಸದರು ರಾಷ್ಟ್ರಪತಿ ಭವನ್ ಚಲೋ ಹಮ್ಮಿಕೊಂಡಿದ್ದು, ಭಾರೀ ಹೈಡ್ರಾಮಾ ನಡೆಯುವ ಸಂಭವ ಇದೆ.

    Live Tv
    [brid partner=56869869 player=32851 video=960834 autoplay=true]