Tag: Parliament Winter Session

  • ಸಂಸತ್‌ನಲ್ಲಿ ಅಮ್ಮ-ಅಣ್ಣ-ತಂಗಿ; ಇಂದು ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ ಸ್ವೀಕಾರ

    ಸಂಸತ್‌ನಲ್ಲಿ ಅಮ್ಮ-ಅಣ್ಣ-ತಂಗಿ; ಇಂದು ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ ಸ್ವೀಕಾರ

    ನವದೆಹಲಿ: ಲೋಕಸಭೆಯ ಉಪ ಚುನಾವಣೆಯಲ್ಲಿ 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಅವರಿಂದು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರೊಂದಿಗೆ ತಮ್ಮ ತಾಯಿ ಸೋನಿಯಾ ಗಾಂಧಿ (Sonia Gandhi) ಮತ್ತು ಸಹೋದರ ರಾಹುಲ್ ಗಾಂಧಿ ಅವರೊಂದಿಗೆ ಸಂಸತ್ತಿನಲ್ಲಿ ಪಾಲ್ಗೊಳ್ಳಲಿದ್ದಾರೆ.

    ರಾಹುಲ್‌ ಗಾಂಧಿ  (Rahul Gandhi) ಅವರ ರಾಜೀನಾಮೆ ಬಳಿಕ ತೆರವಾದ ವಯನಾಡ್‌ ಕ್ಷೇತ್ರಕ್ಕೆ ಪ್ರಿಯಾಂಕಾ ಗಾಂಧಿ ಅವರು ಸ್ಪರ್ಧೆ ಮಾಡಿದ್ದರು. 6.22 ಲಕ್ಷ ಮತಗಳನ್ನು ಪಡೆಯುವ ಮೂಲಕ 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ರು. ಇದನ್ನೂ ಓದಿ: ರಾಹುಲ್ ದಾಖಲೆ ಬ್ರೇಕ್ – ಪ್ರಿಯಾಂಕಾಗೆ 4 ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವು

    ವಕ್ಫ್‌ ಮಸೂದೆ ಮಂಡನೆಗೆ ಗಡುವು ವಿಸ್ತರಣೆ ಸಾಧ್ಯತೆ:
    ಚಳಿಗಾಲ ಅಧಿವೇಶನದಲ್ಲಿ (Parliament Winter Session) ಈ ಬಾರಿ ವಕ್ಫ್‌ ಮಸೂದೆ ಮಂಡನೆ ಅಸಾಧ್ಯ ಎಂದು ಹೇಳಲಾಗುತ್ತಿದೆ. ಏಕೆಂದರೆ ವಕ್ಫ್ ಮಸೂದೆಯನ್ನು ಕೂಲಂಕಷವಾಗಿ ಪರಿಶೀಲಿಸಲು ರಚಿಸಲಾದ ಜಂಟಿ ಸಂಸದೀಯ ಸಮಿತಿ (JPC) ತನ್ನ ವರದಿ ಮಂಡಿಸಲು ನವೆಂಬರ್ 29ರ ವರೆಗೆ ಗಡುವು ವಿಸ್ತರಿಸುವ ಪ್ರಸ್ತಾಪ ಮಂಡಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

    ಸಂಸತ್‌ ಚಳಿಕಾಲದ ಅಧಿವೇಶನವು ಇದೇ ನವೆಂಬರ್‌ 25ರಿಂದ ಆರಂಭವಾಯಿತು. ಆರಂಭದಲ್ಲೇ ಮಣಿಪುರ ಮತ್ತು ಸಂಭಾಲ್‌ ಹಿಂಸಾಚಾರ ಪ್ರಕರಣಗಳನ್ನು ಪ್ರಸ್ತಾಪಿಸಿ ವಿಪಕ್ಷಗಳು ಗದ್ದಲ ಎಬ್ಬಿಸಿದವು, ಇದರಿಂದ ಕಲಾಪ ಮುಂದೂಡಲಾಯಿತು, 75ನೇ ಸಂವಿಧಾನ ದಿನಾಚರಣೆ ಅಂಗವಾಗಿ 2ನೇ ದಿನವೂ ಯಾವುದೇ ಸಭೆ ನಡೆಯಲಿಲ್ಲ. 3ನೇ ದಿನ ಎರಡೂ ಸದನಗಳನ್ನು ಒಂದು ಗಂಟೆ ಮುಂದೂಡಲಾಯಿತು. ಇದನ್ನೂ ಓದಿ: ಮೀಸಲಾತಿ ಲಾಭಕ್ಕಾಗಿ ಮರು ಮತಾಂತರ ಆಗೋದು ಸಂವಿಧಾನಕ್ಕೆ ಮಾಡುವ ವಂಚನೆ: ಸುಪ್ರೀಂ

    ನಾಲ್ಕನೇ ದಿನವಾದ ಇಂದು ಅಧಿವೇಶನದಲ್ಲಿ ಬಿಜೆಪಿ ಹಲವು ಮಸೂದೆಗಳನ್ನು ಮಂಡಿಸುವ ಸಾಧ್ಯತೆಯಿದೆ. ಮುಖುವಾಗಿ ರೈಲ್ವೆ ಇಲಾಖೆ ಅಧಿಕಾರ ಹಾಗೂ ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸಲು ರೈಲ್ವೆ (ತಿದ್ದುಪಡಿ) ಮಸೂದೆ, 2024 ಮಂಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: 4ನೇ ಬಾರಿಗೆ ಜಾರ್ಖಂಡ್‌ ಸಿಎಂ ಆಗಿ ಇಂದು ಹೇಮಂತ್‌ ಸೊರೆನ್‌ ಪ್ರಮಾಣ ವಚನ ಸ್ವೀಕಾರ

  • ಸಂಸತ್‌ ಚಳಿಗಾಲದ ಅಧಿವೇಶನ – ಸುಗಮ ಕಲಾಪಕ್ಕೆ ವಿಪಕ್ಷಗಳಿಗೆ ಮೋದಿ ಮನವಿ

    ಸಂಸತ್‌ ಚಳಿಗಾಲದ ಅಧಿವೇಶನ – ಸುಗಮ ಕಲಾಪಕ್ಕೆ ವಿಪಕ್ಷಗಳಿಗೆ ಮೋದಿ ಮನವಿ

    – ಜನರಿಂದ ತಿರಸ್ಕರಿಲ್ಪಟ್ಟವರಿಂದ ಹಿಡಿತ ಸಾಧಿಸಲು ನಿರಂತರ ಪ್ರಯತ್ನ ಎಂದ ಪ್ರಧಾನಿ

    ನವದೆಹಲಿ: ಜನರಿಂದ ಪದೇ ಪದೇ ತಿರಸ್ಕರಿಸಲ್ಪಟ್ಟವರು ಸಂಸತ್ತು ಹಾಗೂ ಪ್ರಜಾಪ್ರಭುತ್ವವನ್ನು ಅಗೌರವಿಸುತ್ತಾರೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ (Narendra Modi) ಸುಗಮ ಕಲಾಪಕ್ಕೆ ವಿಪಕ್ಷಗಳಿಗೆ ಮನವಿ ಮಾಡಿದರು.

    ಇಂದಿನಿಂದ (ನ.25) ಸಂಸತ್ತಿನ ಚಳಿಗಾಲದ ಅಧಿವೇಶನ (Parliament Winter Session) ಪ್ರಾರಂಭವಾಗುತ್ತಿದ್ದು, ಎನ್‌ಡಿಎ (NDA) ಮೈತ್ರಿಕೂಟ ಮತ್ತು ವಿಪಕ್ಷಗಳ ಇಂಡಿಯಾ (INDIA) ಮೈತ್ರಿಕೂಟ ನಡುವೆ ಭಾರೀ ವಾಕ್ಸಮರಕ್ಕೆ ವೇದಿಕೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಆರೋಗ್ಯಕರ ಚರ್ಚೆಗಳಿಗೆ ಮನವಿ ಮಾಡಿದರು. ಇದನ್ನೂ ಓದಿ: ಲಿವ್‌-ಇನ್‌ ಗೆಳತಿಯನ್ನ ಸುಟ್ಟು ಕೊಂದು ಬೆಂಕಿ ಅವಘಡ ಅಂತ ನಾಟಕವಾಡಿದ್ದ ಉದ್ಯಮಿ ಅಂದರ್‌

    ಕಾಂಗ್ರೆಸ್‌ ಜನರ ಸಮಸ್ಯೆಗಳ ಬಗ್ಗೆ ಮಾತನಾಡುವುದೇ ಕಡಿಮೆ. ಪದೇ ಪದೇ ಜನರಿಂದ ತಿರಸ್ಕಾರಗೊಂಡವರು ಗೂಂಡಾಗಿರಿ ಮೂಲಕ ಸಂಸತ್ತಿನ ಮೇಲೆ ಹಿಡಿತ ಸಾಧಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಅಧಿವೇಶನದಲ್ಲಿ ಎಲ್ಲಾ ವಿಚಾರಗಳ ಕುರಿತು ಚರ್ಚೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಜನರ ಸಮಸ್ಯೆಗಳ ಪ್ರಾಮಾಣಿಕ ಚರ್ಚೆ ನಡೆಸಬೇಕಿದೆ. ಹೀಗಾಗಿ, ಎಲ್ಲರೂ ಕಲಾಪದಲ್ಲಿ ಭಾಗಿಯಾಗಬೇಕು, ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕೆಂದು ಹೇಳಿದರು. ಇದನ್ನೂ ಓದಿ: ಗಲ್ಫ್, ಸಿಂಗಾಪುರಕ್ಕೆ ಹೋಲಿಸಿದರೆ ಭಾರತದಲ್ಲಿ ಚಿನ್ನ ಅಗ್ಗವಾಗಿರಲು ಕಾರಣವೇನು?

    2024 ವರ್ಷದ ಕೊನೆಯ ದಿನಗಳು ನಡೆಯುತ್ತಿದ್ದು, ದೇಶವು 2025ರ ನೂತನ ವರ್ಷಕ್ಕೆ ತಯಾರಿ ನಡೆಸುತ್ತಿದೆ. ಸಂಸತ್ತಿನ ಈ ಅಧಿವೇಶನವು ಹಲವಾರು ವಿಧಗಳಲ್ಲಿ ವಿಶೇಷವಾಗಿದೆ. ಅತ್ಯಂತ ಮುಖ್ಯ ವಿಷಯವೆಂದರೆ ಸಂವಿಧಾನದ 75ನೇ ವರ್ಷದ ಆರಂಭ. ನಾಳೆ, ಸಂವಿಧಾನ ದಿನ. ಎಲ್ಲರೂ ಸಂವಿಧಾನದ 75 ನೇ ವರ್ಷವನ್ನು ಆಚರಿಸುತ್ತಾರೆ. 75ನೇ ವರ್ಷದ ಸಂವಿಧಾನದ ದಿನದ ಸಂದರ್ಭದಲ್ಲಿ ಅಧಿವೇಶನ ನಡೆಯುತ್ತಿದ್ದು, ಈ ಅಧಿವೇಶನದ ಕಲಾಪ ಸುಗಮವಾಗಿ ಸಾಗಲು ವಿರೋಧ ಪಕ್ಷಗಳು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.

    ಸಂಸತ್ತು ಮತ್ತು ನಮ್ಮ ಸಂಸದರು ನಮ್ಮ ಸಂವಿಧಾನದ ಪ್ರಮುಖ ಭಾಗಗಳು. ಸಂಸತ್ತಿನಲ್ಲಿ ಆರೋಗ್ಯಕರ ಚರ್ಚೆಗಳು ನಡೆಯಬೇಕು ಮತ್ತು ಹೆಚ್ಚು ಹೆಚ್ಚು ಜನರು ಚರ್ಚೆಗಳಲ್ಲಿ ಪಾಲ್ಗೊಳ್ಳಬೇಕು. ಸಂಸತ್ತಿನಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಆದ್ರೆ ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ಬೆರಳೆಣಿಕೆಯ ಜನರ ನಡುವೆ ಗೂಂಡಾಗಿರಿ ಸೃಷ್ಟಿಸುವ ಮೂಲಕ ಸಂಸತ್ತನ್ನು ನಿಯಂತ್ರಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಕುಟುಕಿದರು. ಇದನ್ನೂ ಓದಿ: ಮಧ್ಯಪ್ರದೇಶ | ಗೆಳೆಯನಿಗೆ ಥಳಿಸಿ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಟ್ರಕ್ ಚಾಲಕ

    ಭಾರತದ ಮತದಾರರು ಪ್ರಜಾಪ್ರಭುತ್ವಕ್ಕೆ ಸಮರ್ಪಿತರಾಗಿದ್ದಾರೆ, ಸಂವಿಧಾನ ಹಾಗೂ ಸಂಸದೀಯ ಕಾರ್ಯ ವ್ಯವಸ್ಥೆಯಲ್ಲಿ ಅವರಿಗೆ ನಂಬಿಕೆ ಇದೆ. ಸಂಸತ್ತಿನಲ್ಲಿ ಕುಳಿತಿರುವ ನಾವೆಲ್ಲರೂ ಜನರ ಭಾವನೆಗಳಿಗೆ ಅನುಗುಣವಾಗಿ ಬದುಕಬೇಕು ಮತ್ತು ಇದು ಈ ಸಮಯದ ಅಗತ್ಯವೂ ಆಗಿದೆ. ಅದನ್ನು ಸರಿದೂಗಿಸಲು ಇರುವ ಏಕೈಕ ಮಾರ್ಗವೆಂದರೆ ನಾವು ಪ್ರತಿ ವಿಷಯದ ವಿವಿಧ ಅಂಶಗಳನ್ನು ಸದನದಲ್ಲಿ ಅತ್ಯಂತ ಆರೋಗ್ಯಕರ ರೀತಿಯಲ್ಲಿ ಎತ್ತಿ ತೋರಿಸುವುದು ಎಂದು ಸಲಹೆ ನೀಡಿದ್ದಾರೆ.

    ಸಂಸತ್ತಿನ ಸಮಯದ ಪರಿಣಾಮಕಾರಿ ಬಳಕೆ ಅವರ ನಡವಳಿಕೆಯ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಚಳಿಗಾಲದ ಅಧಿವೇಶನವು ಫಲಪ್ರದವಾಗಲಿ ಮತ್ತು ಭಾರತದ ಜಾಗತಿಕ ಸ್ಥಾನಮಾನಕ್ಕೆ ಉತ್ತೇಜನ ನೀಡುವಂತಾಗಲಿ ಎಂದು ನುಡಿದರು. ಇದನ್ನೂ ಓದಿ: ಇಂದಿನಿಂದ ಸಂಸತ್‌ ಚಳಿಗಾಲದ ಅಧಿವೇಶನ – ಅದಾನಿ ಹಗರಣ, ವಕ್ಫ್, ಮಣಿಪುರ ಗದ್ದಲ ಅಸ್ತ್ರ ಪ್ರಯೋಗ

    ಇಂದಿನಿಂದ (ನ.25) ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದೆ. ನ.25ರ ಸೋಮವಾರದಂದು ಸಂಸತ್ತಿನ ಚಳಿಗಾಲ ಅಧಿವೇಶನಕ್ಕೆ ಚಾಲನೆ ಸಿಗಲಿದ್ದು, ಡಿ.20ರ ವರೆಗೆ ಕಲಾಪ ನಡೆಯಲಿದೆ. ಅಧಿವೇಶನದಲ್ಲಿ ಒಟ್ಟು 16 ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಇವುಗಳ ಪೈಕಿ ವಕ್ಫ್ (Waqf) ತಿದ್ದುಪಡಿ ಮಸೂದೆ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

  • ಇಂದಿನಿಂದ ಸಂಸತ್‌ ಚಳಿಗಾಲದ ಅಧಿವೇಶನ – ಅದಾನಿ ಹಗರಣ, ವಕ್ಫ್, ಮಣಿಪುರ ಗದ್ದಲ ಅಸ್ತ್ರ ಪ್ರಯೋಗ

    ಇಂದಿನಿಂದ ಸಂಸತ್‌ ಚಳಿಗಾಲದ ಅಧಿವೇಶನ – ಅದಾನಿ ಹಗರಣ, ವಕ್ಫ್, ಮಣಿಪುರ ಗದ್ದಲ ಅಸ್ತ್ರ ಪ್ರಯೋಗ

    – ನ.25 ರಿಂದು ಡಿ.20ರ ವರೆಗೆ ಕಲಾಪ,
    – 16 ಮಸೂದೆಗಳ ಮಂಡನೆಗೆ ಪಾರ್ಲಿಮೆಂಟ್ ಸಜ್ಜು

    ನವದೆಹಲಿ: ಇಂದಿನಿಂದ (ನ.25) ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದ್ದು, ಆಡಳಿತಾರೂಡ ಎನ್‌ಡಿಎ (NDA) ಮೈತ್ರಿಕೂಟ ಮತ್ತು ವಿಪಕ್ಷಗಳ ಇಂಡಿಯಾ (INDIA) ಮೈತ್ರಿಕೂಟ ನಡುವೆ ಭಾರೀ ವಾಕ್ಸಮರಕ್ಕೆ ವೇದಿಕೆಯಾಗುವ ಎಲ್ಲಾ ಸಾಧ್ಯತೆಗಳಿವೆ.

    ನ.25ರ ಸೋಮವಾರದಂದು ಸಂಸತ್ತಿನ ಚಳಿಗಾಲ ಅಧಿವೇಶನಕ್ಕೆ (Parliament Winter Session) ಚಾಲನೆ ಸಿಗಲಿದ್ದು, ಡಿ.20ರ ವರೆಗೆ ಕಲಾಪ ನಡೆಯಲಿದೆ. ಅಧಿವೇಶನದಲ್ಲಿ ಒಟ್ಟು 16 ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಇವುಗಳ ಪೈಕಿ ವಕ್ಫ್ (Waqf) ತಿದ್ದುಪಡಿ ಮಸೂದೆ ಮಂಡನೆ ಖಚಿತವಾಗಿದೆ. ಜೊತೆಗೆ ಸರ್ಕಾರದ ಇನ್ನೊಂದು ಪ್ರಮುಖ ಯೋಜನೆಯಾಗಿರುವ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ ಬಗ್ಗೆ ಸರ್ಕಾರ ಯಾವುದೇ ಪ್ರಸ್ತಾಪ ಮಾಡಿಲ್ಲ. ಆದರೆ ಅದನ್ನು ಕೂಡ ಯಾವುದೇ ಹಂತದಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಲಿವ್‌-ಇನ್‌ ಗೆಳತಿಯನ್ನ ಸುಟ್ಟು ಕೊಂದು ಬೆಂಕಿ ಅವಘಡ ಅಂತ ನಾಟಕವಾಡಿದ್ದ ಉದ್ಯಮಿ ಅಂದರ್‌

    ಈ ನಡುವೆ ಸುಗಮ ಕಲಾಪದ ನಿಟ್ಟಿನಲ್ಲಿ ವಿಪಕ್ಷಗಳ ಸಹಕಾರ ಕೋರಲು ಸರ್ಕಾರ ಭಾನುವಾರ ಸರ್ವಪಕ್ಷಗಳ ಸಭೆ ಆಯೋಜಿಸಿತ್ತು. ಈ ವೇಳೆ ವಿಪಕ್ಷಗಳು, ಅಧಿವೇಶನದ ಅವಧಿಯಲ್ಲಿ ಅದಾನಿ ಹಗರಣದ (Adani Scam) ಕುರಿತು ತನಿಖೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿವೆ. ಇದರ ಜೊತೆಗೆ ಇತ್ತೀಚಿನ ಮಣಿಪುರ ಗಲಭೆ ವಿಷಯ, ಆಹಾರ ಧಾನ್ಯಗಳ ಬೆಲೆ ಏರಿಕೆ ಮತ್ತಿತರೆ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ. ಈ ಮೂಲಕ ಮುಂದಿನ ಅಧಿವೇಶನ ಯಾವ ರೀತಿಯಲ್ಲಿ ಸಾಗಬಹುದು ಎನ್ನುವ ಕುರಿತು ಸುಳಿವು ನೀಡಿದಂತಾಗಿದ್ದು, ಮೊದಲ ದಿನದಿಂದಲೇ ಕಲಾಪಗಳು ಕಾವೇರುವ ನಿರೀಕ್ಷೆಯಿದೆ.

    ಅದಾನಿ ವಿಷಯವೇ ಪ್ರಮುಖ ಅಸ್ತ್ರ:
    ಭಾರತದ ನಂ.1 ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಅವರು ತಮ್ಮ ಕಂಪನಿ ಉತ್ಪಾದಿಸಿದ ಸೌರ ವಿದ್ಯುತ್ ಮಾರಾಟಕ್ಕೆ ಕೆಲ ರಾಜ್ಯ ಸರ್ಕಾರಗಳ ಅಧಿಕಾರಿಗಳಿಗೆ 2,100 ಕೋಟಿ ರೂ. ಲಂಚ ನೀಡಿದ್ದರು ಎಂದು ಅಮೆರಿಕದಲ್ಲಿ ದೋಷಾರೋಪ ಹೊರಿಸಲಾಗಿದೆ. ಹೀಗಾಗಿ ಅದಾನಿಗೆ ಪ್ರಧಾನಿ ನರೇಂದ್ರ ಮೋದಿಯವರು ಶ್ರೀರಕ್ಷೆಯಾಗಿದ್ದಾರೆ ಎಂದು ಆರೋಪಿಸಿ ವಿಪಕ್ಷಗಳು ಗದ್ದಲ ಎಬ್ಬಿಸುವ ಸಂಭವವಿದೆ.

    ಮಂಡನೆ/ಅಂಗೀಕಾರ ಆಗಲಿರುವ ಮಸೂದೆ:
    1. ವಕ್ಫ್ ತಿದ್ದುಪಡಿ ಮಸೂದೆ
    2. ಕರಾವಳಿ ನೌಕಾಯಾನ ಮಸೂದೆ
    3. ಒಂದು ದೇಶ ಒಂದು ಚುನಾವಣೆ
    4. ಭಾರತೀಯ ವಾಯುಯಾನ ಮಸೂದೆ
    5. ಮರ್ಚಂಟ್ ಶಿಪ್ಪಿಂಗ್ ಮಸೂದೆ
    6. ಸಹಕಾರ ವಿವಿ ಸ್ಥಾಪನೆ ಮಸೂದೆ
    7. ಪಂಜಾಬ್ ನ್ಯಾಯಾಲಯಗಳ ಮಸೂದೆ
    8. ರೈಲ್ವೆ ತಿದ್ದುಪಡಿ ಮಸೂದೆ
    9. ಬ್ಯಾಂಕಿಂಗ್ ತಿದ್ದುಪಡಿ ಮಸೂದೆ ಇದನ್ನೂ ಓದಿ: ಗಲ್ಫ್, ಸಿಂಗಾಪುರಕ್ಕೆ ಹೋಲಿಸಿದರೆ ಭಾರತದಲ್ಲಿ ಚಿನ್ನ ಅಗ್ಗವಾಗಿರಲು ಕಾರಣವೇನು?

  • ದಯವಿಟ್ಟು ಸೋಲಿನ ಹತಾಶೆ ಹೊರಹಾಕಬೇಡಿ – ಸಂಸತ್‌ ಅಧಿವೇಶನಕ್ಕೂ ಮುನ್ನ ವಿಪಕ್ಷಗಳಿಗೆ ಮೋದಿ ಸಲಹೆ

    ದಯವಿಟ್ಟು ಸೋಲಿನ ಹತಾಶೆ ಹೊರಹಾಕಬೇಡಿ – ಸಂಸತ್‌ ಅಧಿವೇಶನಕ್ಕೂ ಮುನ್ನ ವಿಪಕ್ಷಗಳಿಗೆ ಮೋದಿ ಸಲಹೆ

    – ಇಂದಿನಿಂದ ಸಂಸತ್‌ ಚಳಿಗಾಲದ ಅಧಿವೇಶನ ಆರಂಭ

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಸಂಸತ್‌ ಭವನದಲ್ಲಿ ಸೋಮವಾರದಿಂದ (ಡಿ.4) ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೇರಿದಂತೆ ಇತರ ಕೇಂದ್ರ ಸಚಿವರು ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ.

    ನರೇಂದ್ರ ಮೋದಿ ಅವರು ಸಂಸತ್‌ ಭವನ ಪ್ರವೇಶಿಸುತ್ತಿದ್ದಂತೆ ಕೇಂದ್ರ ಸಚಿವರು ಸ್ವಾಗತ ಕೋರಿ ಬರಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ಮೋದಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇದನ್ನೂ ಓದಿ: Cyclone Michaung- ನೆಲ್ಲೂರಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಗೆ ಬಾಲಕ ದುರ್ಮರಣ

    4 ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಜನರು ನಕಾರಾತ್ಮಕತೆಯನ್ನ (ನೆಗೆಟಿವಿಟಿ) ತಿರಸ್ಕರಿಸಿದ್ದಾರೆ ಅನ್ನೋದು ತೋರಿಸುತ್ತೆ. ಈ ಸೋಲಿನ ಹತಾಶೆಯನ್ನು ಹೊರಹಾಕಬೇಡಿ ಎಂದು ಪ್ರತಿಪಕ್ಷಗಳಿಗೆ ಸಲಹೆ ನೀಡಿದ್ದಾರೆ.

    ಮುಂದುವರಿದು, ಎಲ್ಲ ಸಂಸದರು ಪೂರ್ವಸಿದ್ಧತೆಯೊಂದಿಗೆ ಸಂಸತ್ತಿಗೆ ಬರಬೇಕೆಂದು ನಾನು ವಿನಂತಿಸುತ್ತೇನೆ. ಚುನಾವಣಾ ಫಲಿತಾಂಶಗಳ ಹಿನ್ನೆಲೆಯಲ್ಲಿ, ನಾನು ಪ್ರತಿಪಕ್ಷಗಳಿಗೆ (Oppositions) ಇದೊಂದು ಸುವರ್ಣಾವಕಾಶವೆಂದೇ ಹೇಳುತ್ತೇನೆ. ಕಳೆದ 9 ವರ್ಷಗಳಿಂದ ಹೊಂದಿರುವ ನಕಾರಾತ್ಮಕತೆಯನ್ನು ಈಗಲಾದರೂ ತೊಡೆದುಹಾಕಬೇಕು. ಸಕಾರಾತ್ಮಕತೆಯಿಂದ (Positivity) ಮುಂದುವರಿಯಬೇಕು, ಹಾಗಾಗಿ ದಯವಿಟ್ಟು ಸಂಸತ್ತಿನಲ್ಲಿ ಸೋಲಿನ ಹತಾಶೆಯನ್ನು ಹೊರಹಾಕಬೇಡಿ ಎಂದು ಮನವಿ ಮಾಡಿದ್ದಾರೆ.

    ಸೋಲಿನ ಹತಾಶೆಯಿಂದ ಪ್ರತಿಪಕ್ಷಗಳು ಸಂಸತಿನಲ್ಲಿ ಪ್ರತಿಭಟನೆಗಿಳಿಯಬಾರದು. ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳು ಮಹತ್ವದ ಪಾತ್ರ ಹೊಂದಿವೆ. ದೇಶವು ಅಭಿವೃದ್ಧಿಯ ಅರ್ಧದಾರಿಯಲ್ಲಿ ನಿಲ್ಲಲು ಬಯಸುವುದಿಲ್ಲ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: 3 ರಾಜ್ಯಗಳಲ್ಲಿ ಮೋದಿ ಪಡೆಗೆ ಭರ್ಜರಿ ಗೆಲುವು – ಗ್ಯಾರಂಟಿಯಿಂದಲೇ ತೆಲಂಗಾಣದಲ್ಲಿ ಗೆದ್ದ ಕಾಂಗ್ರೆಸ್

    ಸದನದಲ್ಲಿ ನಿಮ್ಮ ಸಹಕಾರ ತುಂಬಾ ಅಗತ್ಯ. ನೀವು ದೇಶಕ್ಕಾಗಿ ಧನಾತ್ಮಕ ಸಂದೇಶ ನೀಡಿದ್ರೆ, ಅದು ನಿಮಗೂ ಪ್ರಯೋಜನಕಾರಿ. ನೆಗೆಟಿವಿಟಿ ಪ್ರಜಾಪ್ರಭುತ್ವಕ್ಕೂ ಒಳ್ಳೆಯದಲ್ಲ. ನಿಮ್ಮ ಪ್ರತಿಕ್ರಿಯೆಗಳು ದ್ವೇಷ ಮತ್ತು ನಕಾರಾತ್ಮಕತೆಯಿಂದ ಕೂಡಿದ್ದರೆ ಮಾರಕವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಪರ-ವಿರೋಧ ಎರಡೂ ಸಮಾನ ಸಾಮರ್ಥ್ಯ ಹೊಂದಿರಬೇಕು ಎಂದು ತಿಳಿವಳಿಕೆ ನೀಡಿದ್ದಾರೆ.

  • ಸೇನಾ ವಾಹನಗಳಿಗೆ ಬೆಂಕಿ ಹಚ್ಚಿದ್ದಕ್ಕೆ ಆತ್ಮ ರಕ್ಷಣೆಗೆ ಗುಂಡಿನ ದಾಳಿ

    ಸೇನಾ ವಾಹನಗಳಿಗೆ ಬೆಂಕಿ ಹಚ್ಚಿದ್ದಕ್ಕೆ ಆತ್ಮ ರಕ್ಷಣೆಗೆ ಗುಂಡಿನ ದಾಳಿ

    – ನಾಗಾಲ್ಯಾಂಡ್ ಗುಂಡಿನ ದಾಳಿ ಬಗ್ಗೆ ಸ್ಪಷ್ಟನೆ ನೀಡಿದ ಅಮಿತ್ ಶಾ
    – ಅಮಿತ್ ಶಾ ಉತ್ತರ ನೀಡುತ್ತಿದ್ದಂತೆ ಸಭಾತ್ಯಾಗ ಮಾಡಿದ ವಿಪಕ್ಷಗಳು

    ನವದೆಹಲಿ: ನಾಗಾಲ್ಯಾಂಡ್‍ನಲ್ಲಿ ನಡೆದ ಗುಂಡಿನ ದಾಳಿ ವಿಚಾರವಾಗಿ ಚಳಿಗಾಲದ ಅಧಿವೇಶನದಲ್ಲಿ ಗೃಹ ಸಚಿವ ಅಮಿತ್ ಶಾ ಸ್ಪಷ್ಟನೆ ನೀಡುತ್ತಿದ್ದಂತೆ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದೆ.

    ನಾಗಾಲ್ಯಾಂಡ್‍ನ ಮೋನ್ ಜಿಲ್ಲೆಯ ತಿರು ಗ್ರಾಮದಲ್ಲಿ ನಾಗಾರಿಕರ ಗುಂಪು ಕಲ್ಲಿದ್ದಲು ಗಣಿಯಿಂದ ಕೆಲಸ ಮುಗಿಸಿ ಟ್ರಕ್‍ನಲ್ಲಿ ಹಿಂದಿರುಗುತ್ತಿತ್ತು. ಈ ವೇಳೆ ಅಲ್ಲಿ ಉಗ್ರರ ವಿರುದ್ಧ ಕಾರ್ಯಚರಣೆಗಿಳಿದಿದ್ದ ಪ್ಯಾರಾ ಕಮಾಂಡೋಗಳು ಇವರನ್ನು ತಪ್ಪಾಗಿ ತಿಳಿದು ಗುಂಡಿನ ದಾಳಿ ನಡೆಸಿತ್ತು. ಪರಿಣಾಮ ಘಟನೆಯಲ್ಲಿ 14 ಮಂದಿ ನಾಗರಿಕರು ಮೃತಪಟ್ಟಿದ್ದರು. ಈ ಬಗ್ಗೆ ವಿರೋಧ ಪಕ್ಷಗಳು ಅಧಿವೇಶನದಲ್ಲಿ ಅಮಿತಾ ಶಾ ಸ್ಪಷ್ಟನೆ ಕೊಡಬೇಕೆಂದು ಪಟ್ಟು ಹಿಡಿದಿದ್ದರು. ಇದನ್ನೂ ಓದಿ: ದಂಗೆಕೋರರು ಎಂದು ಭಾವಿಸಿ ಗುಂಡಿನ ದಾಳಿ-13 ಮಂದಿ ದುರ್ಮರಣ

    ಇಂದು ಅಮಿತ್ ಶಾ ಅಧಿವೇಶನದಲ್ಲಿ ಈ ಬಗ್ಗೆ ಸಂತಾಪ ಸೂಚಿಸಿ ಸ್ಪಷ್ಟನೆ ಕೊಡುತ್ತಿದ್ದಂತೆ ವಿರೋಧ ಪಕ್ಷಗಳಾದ ಕಾಂಗ್ರೆಸ್, ಡಿಎಂಕೆ, ಎಸ್‍ಪಿ, ಬಿಎಸ್‍ಪಿ, ಎನ್‍ಸಿಪಿ ಸಂಸದರು ಸಭಾತ್ಯಾಗ ಮಾಡಿದ್ದಾರೆ. ಇದನ್ನೂ ಓದಿ: ಗಡಿಭಾಗದಲ್ಲಿ ಜನಿಸಿದ ಮಗುವಿಗೆ ಬಾರ್ಡರ್ ಎಂದು ಹೆಸರಿಟ್ಟ ಹೆತ್ತವರು

    ಅಮಿತ್ ಶಾ ಹೇಳಿದ್ದೇನು?
    ನಾಗಾಲ್ಯಾಂಡ್ ಹತ್ಯೆಗೆ ಮೊದಲು ನಾನು ಸಂತಾಪ ಸೂಚಿಸುತ್ತೇನೆ. ಉಗ್ರರ ಇರುವಿಕೆಯ ಬಗ್ಗೆ ಮಾಹಿತಿ ಸಿಕ್ಕಿತ್ತು. ಹಾಗಾಗಿ ಕಮಾಂಡೋಗಳು ಅಡಗಿ ಕುಳಿತು ಶಂಕಿತ ಪ್ರದೇಶದಲ್ಲಿ ದಾಳಿಗೆ ಸಜ್ಜುಗೊಂಡಿದ್ದರು. ಅದೇ ಸಮಯಕ್ಕೆ ವಾಹನವೊಂದು ಅಲ್ಲಿಗೆ ಬಂದಿದೆ. ವಾಹನವನ್ನು ನಿಲ್ಲಿಸುವಂತೆ ಕಮಾಂಡೋಗಳು ಸೂಚಿಸಿದ್ದಾರೆ. ಅಷ್ಟೊತ್ತಿಗಾಗಲೇ ವಾಹನದಲ್ಲಿದ್ದವರು ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಸೇನೆ ದಾಳಿ ನಡೆಸಿದೆ.

    ಆ ಬಳಿಕ ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಗ್ರಾಮಸ್ಥರು ಸೇನೆಯನ್ನು ಸುತ್ತುವರೆದು ಎರಡು ವಾಹನಗಳಿಗೆ ಬೆಂಕಿ ಹಚ್ಚಿ ಸೇನಾ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಓರ್ವ ಯೋಧ ಸಾವನ್ನಪ್ಪಿದ್ದು ಹಲವು ಯೋಧರು ಗಾಯಗೊಂಡಿದ್ದಾರೆ. ಆತ್ಮರಕ್ಷಣೆಗಾಗಿ ಹಾಗೂ ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ಗುಂಡಿನ ದಾಳಿಯ ಮೊರೆ ಹೋಗಬೇಕಾಯಿತು. ಈ ವೇಳೆ 7 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಈಗಾಗಲೇ ಈ ಬಗ್ಗೆ ಸೂಕ್ತ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು(ಎಸ್‍ಐಟಿ) ರಚಿಸಿದ್ದು, 30 ದಿನಗಳಲ್ಲಿ ಎಸ್‍ಐಟಿ ವರದಿ ಕೊಡಲಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ನೇಪಾಲದಲ್ಲಿ ಮೊದಲ ಬಾರಿಗೆ ಓಮಿಕ್ರಾನ್ ಪ್ರಕರಣ ಪತ್ತೆ – ಇಬ್ಬರಿಗೆ ಸೋಂಕು