Tag: parliament staff

  • ಬಜೆಟ್‌ ಅಧಿವೇಶನಕ್ಕೂ ಮುನ್ನ ಪಾರ್ಲಿಮೆಂಟ್‌ನ 402 ಸಿಬ್ಬಂದಿಗೆ ಕೊರೊನಾ ಪಾಸಿಟಿವ್‌

    ಬಜೆಟ್‌ ಅಧಿವೇಶನಕ್ಕೂ ಮುನ್ನ ಪಾರ್ಲಿಮೆಂಟ್‌ನ 402 ಸಿಬ್ಬಂದಿಗೆ ಕೊರೊನಾ ಪಾಸಿಟಿವ್‌

    ನವದೆಹಲಿ: ಬಜೆಟ್‌ ಅಧಿವೇಶನಕ್ಕೂ ಮುನ್ನ ಮುಂಜಾಗ್ರತಾ ಕ್ರಮವಾಗಿ ನಡೆಸಿದ ಕೋವಿಡ್‌ ಪರೀಕ್ಷೆಯಲ್ಲಿ ಸಂಸತ್‌ನ 402 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

    ಸಂಸತ್‌ನಲ್ಲಿ ಒಟ್ಟು 1409 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ಒಟ್ಟು ಸಿಬ್ಬಂದಿ ಪೈಕಿ 409 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇವರಿಗೆ ಓಮಿಕ್ರಾನ್‌ ತಗುಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಲು ಮಾದರಿಗಳನ್ನು ಜಿನೋಮ್‌ ಸೀಕ್ವಿನ್ಸಿಂಗ್‌ಗೆ ಕಳುಹಿಸಲಾಗಿದೆ. ಇದನ್ನೂ ಓದಿ: ನೀವು ಸರಿಯಾಗಿ ಮಾಸ್ಕ್ ಧರಿಸಿದ್ರೆ ಲಾಕ್‍ಡೌನ್ ಮಾಡಲ್ಲ: ಅರವಿಂದ್ ಕೇಜ್ರಿವಾಲ್

    ಸೋಂಕಿತ ಸಿಬ್ಬಂದಿಯಲ್ಲಿ 200 ಮಂದಿ ಲೋಕಸಭಾ, 69 ಮಂದಿ ರಾಜ್ಯಸಭಾ ಹಾಗೂ 133 ಮಂದಿ ಪಾರ್ಲಿಮೆಂಟ್‌ನ ಇತರೆ ಸಿಬ್ಬಂದಿಯಾಗಿದ್ದಾರೆ. ಎಲ್ಲರನ್ನೂ ಐಸೊಲೇಟ್‌ ಮಾಡಿ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ.

    CORONA-VIRUS.

    ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಶೇ.50 ಸಿಬ್ಬಂದಿ ಸಾಮರ್ಥ್ಯದ ಅಡಿಯಲ್ಲಿ ಸಿಬ್ಬಂದಿ ಕೆಲಸ ನಿರ್ವಹಿಸುವ ಕ್ರಮವಹಿಸಬೇಕು ಎಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಈಗಾಗಲೇ ನಿರ್ದೇಶನ ನೀಡಿದೆ. ಹೊಸ ರೂಪಾಂತರಿ ಓಮಿಕ್ರಾನ್‌ ತಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಸಿಬ್ಬಂದಿ ಹಾಜರಾತಿಗೆ ಇದ್ದ ಬಯೋಮೆಟ್ರಿಕ್‌ನಿಂದ ವಿನಾಯಿತಿ ನೀಡಿದೆ. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್, ಹೆಣ್ಣು-ಗಂಡೆಂಬ ಭೇದ ಕೊರೊನಾಗೆ ಇಲ್ಲ: ಆನಂದ್ ಸಿಂಗ್