ಬೆಂಗಳೂರು: ಆಪರೇಷನ್ ಸಿಂಧೂರ (Operation Sindoor) ನಡೆದ ನಂತರ ಕೇಂದ್ರ ಸರ್ಕಾರ ಯಾವುದೇ ಸರಿಯಾದ ಮಾಹಿತಿ ಕೊಡುತ್ತಿಲ್ಲ. ಕೇಂದ್ರ ಸರ್ಕಾರ ಸಂಸತ್ ಅಧಿವೇಶನ (Parliament Session) ಕರೆದು ಚರ್ಚೆ ಮಾಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಸರ್ವ ಪಕ್ಷ ನಿಯೋಗದಲ್ಲಿ ಎಐಸಿಸಿ ಕೊಟ್ಟ ಹೆಸರಿನ ಬದಲು ಶಶಿ ತರೂರ್ ಹೆಸರು ಸೇರಿಸಿರುವ ವಿಚಾರ ಅದನ್ನು ನಾವು ಬೆಂಬಲಿಸುತ್ತೇವೆ ಅಂತ ಹೇಳಿದ್ದೇವೆ. ಎರಡು ಬಾರಿ ಸರ್ವಪಕ್ಷ ಸಭೆ ಕರೆದು ಪ್ರಧಾನಿ ಯಾಕೆ ಹೋಗಿಲ್ಲ? ಪಾರ್ಲಿಮೆಂಟ್ ಯಾಕೆ ಕರೆಯುತ್ತಿಲ್ಲ? ನಿನ್ನೆ ಪಾಕಿಸ್ತಾನದ ಪ್ರಧಾನಿ ಭಾರತದ ಮುಖ್ಯಸ್ಥರು ಕದನ ವಿರಾಮ ಕೇಳಿದ್ರು ಅಂತಾ ಹೇಳಿದ್ದಾರೆ. ಪಾರ್ಲಿಮೆಂಟಿನಲ್ಲಿ ನಾವು ಜಯಭೇರಿ ಗಳಿಸಿದ್ದೇವೆ ಅಂತಾ ಘೋಷಣೆ ಮಾಡುತ್ತಾರೆ. ಇದರ ಬಗ್ಗೆ ಪಾರ್ಲಿಮೆಂಟಿನಲ್ಲಿ ಹೇಳಲು ಯಾಕೆ ಹೆದರಿಕೆ? ಈಗಲೂ ನಮ್ಮ ಸೈನಿಕರು ಹಾಗೂ ಕೇಂದ್ರ ಸರ್ಕಾರಕ್ಕೆ ಬೆಂಬಲ ಕೊಡುತ್ತೇವೆ ಎಂದರು. ಇದನ್ನೂ ಓದಿ: ಮುಜೀಬ್ ಬಯೋಪಿಕ್‌ನಲ್ಲಿ ಶೇಖ್ ಹಸೀನಾ ಪಾತ್ರದಲ್ಲಿ ನಟಿಸಿದ್ದ ಬಾಂಗ್ಲಾ ನಟಿ ಅರೆಸ್ಟ್
ಪಹಲ್ಗಾಮ್‌ಗೆ ಮೋದಿಯವರು (Narendra Modi) ಹೋಗಿದ್ರಾ? ಎಲ್ಲೆಲ್ಲಿ ಅವರಿಗೆ ಕೆಟ್ಟ ಹೆಸರು ಬರುತ್ತದೆ ಅಲ್ಲಿಗೆ ಹೋಗೋದಿಲ್ಲ. ಮಣಿಪುರಕ್ಕೆ ಹೋಗಿದ್ರಾ? ಇಲ್ಲಿವರೆಗೆ ಸಂತಾಪವಾದರೂ ಹೇಳಿದ್ರಾ? ಇಮೇಜ್ ಡ್ಯಾಮೇಜ್ ಆಗೋ ಕಡೆ ಅವರು ಹೊಗಲ್ಲ. ಆದಮ್‌ಪುರ್‌ಗೆ ಹೋಗಿದ್ದಾರೆ ಮೊನ್ನೆ. ಎನ್‌ಡಿಎ ಚೀಫ್ ಮಿನಿಸ್ಟರ್‌ಗಳಿಗೆ ಮಾತ್ರ ಬ್ರೀಫಿಂಗ್ ಎನ್ನುತ್ತಾರೆ. ಪಂಜಾಬ್, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಸಿಎಂ, ಯಾವ ಪಕ್ಷದವರು? ಇವರಿಗೆ ರಾಷ್ಟ್ರೀಯ ಭದ್ರತೆ ಇವೆಲ್ಲ ಮುಖ್ಯ ಅಲ್ಲ, ರಾಜಕೀಯವೇ ಮುಖ್ಯನಾ? ಇದಕ್ಕೆಲ್ಲಾ ಉತ್ತರ ಕೊಡಿ. ಪಾರ್ಲಿಮೆಂಟ್ ಕರೀರಿ, ಪ್ರೆಸ್‌ಮೀಟ್ ಮಾಡಲಿ ಇದಕ್ಕೆ ಸಾಮರ್ಥ್ಯ ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಸುಹಾಸ್ ಹತ್ಯೆ | ಬುರ್ಖಾಧಾರಿ ಮಹಿಳೆಯರನ್ನು ಯಾಕೆ ಬಂಧಿಸಿಲ್ಲ ಎಂದಿದ್ದ ಮಾಜಿ ಕಾರ್ಪೊರೇಟರ್ ವಿರುದ್ಧ FIR
ಬೆಂಗಳೂರು: ಸಂಸತ್ ಕಲಾಪವಿರುವ ಕಾರಣ ಬೆಂಗಳೂರಿನಲ್ಲಿ ನಡೆಯುತ್ತಿರುವ ಹೂಡಿಕೆದಾರರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದರು.ಇದನ್ನೂ ಓದಿ: ಶಾಸಕರ ಪುತ್ರ ಬಸವೇಶ್‌ನನ್ನು ಕೂಡಲೇ ಬಂಧಿಸಿ: ಎನ್.ರವಿಕುಮಾರ್ ಆಗ್ರಹ
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಂಸತ್ತಿನ ಅಧಿವೇಶನ ನಡೆಯುತ್ತಿರುವುದರಿಂದ ಬೆಂಗಳೂರಿನಲ್ಲಿ ಆರಂಭವಾಗಿರುವ ಕರ್ನಾಟಕ ಹೂಡಿಕೆದಾರರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ನಮ್ಮ ಸರ್ಕಾರವು ಆತ್ಮನಿರ್ಭರ ಭಾರತ ಪರಿಕಲ್ಪನೆಯ ಮೂಲಕ ವಿಕಸಿತ ಭಾರತ 2047ರ ಗುರಿ ಮುಟ್ಟುವ ನಿಟ್ಟಿನಲ್ಲಿ ಹೂಡಿಕೆಗಳಿಗೆ ಉತ್ತೇಜನ ನೀಡುವುದಕ್ಕೆ ಬದ್ಧವಾಗಿದೆ ಎಂದು ಹೇಳಿದರು.
ಶೃಂಗಸಭೆಯಲ್ಲಿ ಭಾಗವಹಿಸಿರುವ ಎಲ್ಲರಿಗೂ ನನ್ನ ಹಾರ್ದಿಕ ಶುಭಾಶಯಗಳು. ಆವಿಷ್ಕಾರ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮಹತ್ವದ ಕೇಂದ್ರವಾಗಿರುವ ಕರ್ನಾಟಕವು ಭಾರತದ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದನ್ನು ಮುಂದುವರಿಸುತ್ತದೆ. ಈ ಸಮಾವೇಶವು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇದನ್ನೂ ಓದಿ: ಸಂಗಮೇಶ್ ಪುತ್ರನ ಬಂಧನ ಇನ್ನೂ ಯಾಕಾಗಿಲ್ಲ? ಶಾಸಕರ ಮಕ್ಕಳು ಏನು ಬೇಕಾದರೂ ಮಾಡಬಹುದಾ – ಛಲವಾದಿ ಪ್ರಶ್ನೆ
ನವದೆಹಲಿ: ʻಒಂದು ದೇಶ-ಒಂದು ಚುನಾವಣೆʼ ಮಸೂದೆಯನ್ನು (One Nation One Election Bill) ಪ್ರಸಕ್ತ ಅಧಿವೇಶನದಲ್ಲೇ ಮಂಡಿಸುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ʻಒಂದು ದೇಶ ಒಂದು ಚುನಾವಣೆʼ ಕುರಿತ ರಾಮನಾಥ್ ಕೋವಿಂದ್ ಸಮಿತಿಯ (Ram Nath Kovind Committee )ವರದಿಗೆ ಸಂಪುಟ ಈಗಾಗಲೇ ಅನುಮೋದನೆ ನೀಡಿದೆ. ಸರ್ಕಾರವು ಈಗ ಮಸೂದೆಯ ಬಗ್ಗೆ ಒಮ್ಮತವನ್ನು ರೂಪಿಸಲು ಬಯಸಿದೆ ಮತ್ತು ಅದನ್ನು ವಿವರವಾದ ಚರ್ಚೆಗಾಗಿ ಜಂಟಿ ಸಂಸದೀಯ ಸಮಿತಿ (JPC)ಗೆ ಕಳುಹಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ ಎನ್ನಲಾಗಿದೆ. ಇದನ್ನೂ ಓದಿ: ಎರಡೂವರೆ ತಿಂಗಳಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಪದೋನ್ನತಿ: ಮಧು ಬಂಗಾರಪ್ಪ
ಜಂಟಿ ಸಂಸದೀಯ ಸಮಿತಿ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಿದೆ. ಈ ಪ್ರಕ್ರಿಯೆಯಲ್ಲಿ ಇತರ ಮಧ್ಯಸ್ಥಗಾರರೂ ಭಾಗಿಯಾಗಲಿದ್ದಾರೆ. ದೇಶದಾದ್ಯಂತ ಇರುವ ಬುದ್ಧಿಜೀವಿಗಳು, ರಾಜಕೀಯ ತಜ್ಞರು ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭಾ ಸ್ಪೀಕರ್‌ಗಳನ್ನು ಚರ್ಚೆಗೆ ಕರೆಯಲಿದೆ. ಸಾಮಾನ್ಯ ಜನರ ಅಭಿಪ್ರಾಯವನ್ನೂ ಸಮಿತಿ ಸಂಗ್ರಹಿಸಲಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಕೃಷಿ ವಿಸ್ತೀರ್ಣಾಧಿಕಾರಿಯಿಂದ ಭಾರಿ ವಂಚನೆ – ಬರೋಬ್ಬರಿ 40 ಲಕ್ಷ ಪಂಗನಾಮ
ʻಒಂದು ರಾಷ್ಟ್ರ, ಒಂದು ಚುನಾವಣೆʼ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಸಂಸತ್ತಿನಲ್ಲಿ 3ನೇ ಎರಡರಷ್ಟು ಬಹುಮತದ ಅವಶ್ಯಕತೆಯಿದೆ. ರಾಜ್ಯಸಭೆಯ 245 ಸ್ಥಾನಗಳಲ್ಲಿ ಎನ್‌ಡಿಎ 112, ವಿರೋಧ ಪಕ್ಷಗಳು 85 ಸ್ಥಾನಗಳನ್ನು ಒಳಗೊಂಡಿವೆ. 3ನೇ ಎರಡರಷ್ಟು ಬಹುಮತಕ್ಕೆ ಸರ್ಕಾರಕ್ಕೆ ಕನಿಷ್ಠ 164 ಮತಗಳ ಅಗತ್ಯವಿದೆ. ಇನ್ನೂ ಲೋಕಸಭೆಯಲ್ಲಿ ಎನ್‌ಡಿಎ 545 ಸ್ಥಾನಗಳಲ್ಲಿ 292 ಸ್ಥಾನಗಳನ್ನು ಹೊಂದಿದೆ. 3ನೇ ಎರಡರಷ್ಟು ಬಹುಮತಕ್ಕೆ 364 ಮತಗಳ ಅಗತ್ಯವಿದೆ. ಪ್ರಸ್ತುತ ಚುನಾವಣಾ ವ್ಯವಸ್ಥೆಯು ಹಣ, ಸಮಯ ಹಾಗೂ ಶ್ರಮವನ್ನು ವ್ಯರ್ಥ ಮಾಡುತ್ತಿವೆ. ಹಾಗಾಗಿ ಒಂದು ರಾಷ್ಟ್ರ ಒಂದು ಚುನಾವಣೆ ಕಾನೂನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ತಿಳಿಸಿದೆ.
ಇನ್ನೂ ಸಂಸತ್‌ನಲ್ಲಿ ಅದಾನಿ ವಿಚಾರದ ಚರ್ಚೆಗೆ ಪಟ್ಟು ಹಿಡಿದಿರುವ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಸದನದ ಹೊರಗೆ ಹೋರಾಟ ಮುಂದುವರೆಸಿವೆ. ಇವತ್ತು ಇನ್ನೊಂದು ಹೆಜ್ಜೆ ಮುಂದೆ ಹೋದ ರಾಹುಲ್ ಗಾಂಧಿ, ಅದಾನಿ-ಮೋದಿ ಮುಖವಾಡ ಧರಿಸಿದವರ ಅಣಕು ಸಂದರ್ಶನ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಬಿಜೆಪಿ ಕೌಂಟರ್ ಕೊಟ್ಟಿದೆ. ಭಾರತ ವಿರೋಧಿ ನಿಲುವು ಹೊಂದಿರುವ ಅಮೆರಿಕ ಉದ್ಯಮಿ ಸೊರೊಸ್ ಸಂಸ್ಥೆಯ ಜೊತೆ ಸೋನಿಯಾ ಗಾಂಧಿ ಕೈಜೋಡಿಸಿದ್ದಾರೆ ಎಂದು ಪುನರ್ ಆರೋಪ ಮಾಡಿದೆ.
ನವದೆಹಲಿ: ರಾಹುಲ್ ಗಾಂಧಿ ಒಳ್ಳೆಯ ಸ್ಟ್ಯಾಂಡಪ್ ಕಾಮಿಡಿಯನ್ ಆಕ್ಟ್ (Standup Comedian Acting) ಮಾಡಿದ್ದಾರೆ ಎಂದು ಮಂಡಿ ಕ್ಷೇತ್ರದ ಸಂಸದೆ ಕಂಗನಾ ರಣಾವತ್ (Kangana Ranaut) ಲೇವಡಿ ಮಾಡಿದ್ದಾರೆ.
ಲೋಕಸಭೆ ಮೊದಲ ದಿನದ ಅಧಿವೇಶನದ (Parliament Session) ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಂಗನಾ, ರಾಹುಲ್ ಗಾಂಧಿ ಒಳ್ಳೆಯ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಕ್ಟ್ ಮಾಡಿದ್ದಾರೆ. ಏಕೆಂದರೆ ನಮ್ಮ ಎಲ್ಲಾ ದೇವಾನುದೇವತೆಗಳನ್ನ ಬ್ರಾಂಡ್ ಅಂಬಾಸಿಡರ್ ಆಗಿ ಮಾಡಿಕೊಂಡಿದ್ದಾರೆ. ಶಿವನು ಆಶೀರ್ವಾದ ಮಾಡಿ ಎತ್ತಿದ ಕೈ ಕಾಂಗ್ರೆಸ್‌ನ ʻಕೈʼ ಎಂಬುದು ಅವರ ವಾದವಾಗಿತ್ತು. ಹಾಗಾಗಿ ನಾವು ಕೊನೇವರೆಗೂ ನಗುತ್ತಲೇ ಇದ್ದೆವು ಎಂದು ವ್ಯಂಗ್ಯವಾಡಿದ್ದಾರೆ.
ರಾಜಕುಮಾರ (ರಾಹುಲ್ ಗಾಂಧಿ) ಬಂದಾಗ ಪ್ರಧಾನಿ ಮೋದಿ ಸ್ವಾಗತಿಸಲಿಲ್ಲ ಎಂಬುದು ಅವರ ಪ್ರಮುಖ ದೂರು ಆಗಿತ್ತು. ಆದ್ದರಿಂದ ಅವರು ಎಂತಹ ಸ್ಟ್ಯಾಂಡ್‌ಅಪ್ ಕಾಮಿಡಿ ಮಾಡಿದರು ಅಂತಾ ನೀವು ಅರ್ಥಮಾಡಿಕೊಳ್ಳಬಹುದು ಎಂದರಲ್ಲದೇ ರಾಹುಲ್ ಗಾಂಧಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ರಾಹುಲ್ ಗಾಂಧಿ ಹಿಂದೂ ದೇವರು, ಹಿಂದೂ ಧರ್ಮ, ಹಿಂದೂ ಧರ್ಮ ಅನುಸರಿಸುವವರನ್ನು ಅವಮಾನಿಸಿದ್ದಾರೆ. ಹಿಂಸಾತ್ಮಕ ಭಾವನೆಯನ್ನು ಪ್ರಚೋಸಿದಿದ್ದಾರೆ. ಅವರು ತಮ್ಮ ಹೇಳಿಕೆಗಳಿಗಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದಕ್ಕೂ ಮುನ್ನ ಸಂಸತ್‌ನಲ್ಲಿ ರಾಷ್ಟ್ರಪತಿಗಳ (President Of India) ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ರಾಹುಲ್ ಗಾಂಧಿ, ಧಾರ್ಮಿಕ ಗುರುಗಳ ಫೋಟೋ ಪ್ರದರ್ಶಿಸಿ ಅವರ ತತ್ವಗಳನ್ನು ಪ್ರಸ್ತಾಪಿಸಿದರು. ನರೇಂದ್ರ ಮೋದಿ (Narendra Modi) ಪೂರ್ಣ ಹಿಂದೂ ಸಮಾಜ ಅಲ್ಲ, ಆರ್‌ಎಸ್‌ಎಸ್, ಬಿಜೆಪಿ ದೇಶದ ಸಂಪೂರ್ಣ ಹಿಂದೂಗಳ ಪ್ರತಿನಿಧಿಯಲ್ಲ ಎಂದು ಗುಡುಗಿದರಿ. ಈ ವೇಳೆ ಸದನದಲ್ಲಿ ಕೋಲಾಹಲ ಏರ್ಪಟ್ಟಿತು. ವಿಪಕ್ಷ ನಾಯಕರಾಗಿ ಮೊದಲ ಬಾರಿಗೆ ಮಾತನಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ನಿಯಮಗಳನ್ನು ಮೀರಿ ಮಾತನಾಡುವಂತಿಲ್ಲ ಎಂದು ಅಮಿತ್ ಶಾ (Amit Shah) ಆಕ್ಷೇಪ ವ್ಯಕ್ತಪಡಿಸಿದರು. ಧಾರ್ಮಿಕ ವಿಚಾರಗಳನ್ನು ಮಾತನಾಡುವಾಗ ಎಚ್ಚರಿಕೆ ವಹಿಸಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು. ಈ ನಡುವೆ ದೊಡ್ಡ ಮಟ್ಟದಲ್ಲಿ ಗದ್ದಲ ಏರ್ಪಟ್ಟಿತು.
ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ (Parliament Session) ಸೋಮವಾರ (ಜೂ.24) ಆರಂಭಗೊಂಡಿದ್ದು, ಹಂಗಾಮಿ ಸ್ಪೀಕರ್ ಆಗಿ ಬಿಜೆಪಿ ಸಂಸದ ಭರ್ತೃಹರಿ ಮಹತಾಬ್ (Bhartruhari Mahtab) ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಪ್ರಮಾಣ ವಚನ ಬೋಧಿಸಿದರು. ನಂತರ ಸಂಸತ್ ಭವನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ವಾರಣಾಸಿ ಕ್ಷೇತ್ರದ ಸಂಸರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಅಧಿವೇಶನದ ಮೊದಲ ದಿನವಾದ ಸೋಮವಾರ 280 ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದು, ಮಂಗಳವಾರ 264 ಹೊಸದಾಗಿ ಚುನಾಯಿತರಾದ ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೂನ್ 26 ರಂದು ಲೋಕಸಭಾ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯಲಿದೆ.
ಜೂನ್ 27 ರಂದು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿಗಳು ಭಾಷಣ ಮಾಡಲಿದ್ದಾರೆ. ರಾಷ್ಟ್ರಪತಿಗಳ ಭಾಷಣಕ್ಕೆ ಕೃತಜ್ಞತಾ ನಿರ್ಣಯದ ಮೇಲಿನ ಚರ್ಚೆ ಜೂನ್ 28 ರಂದು ಪ್ರಾರಂಭವಾಗುತ್ತದೆ. ಜುಲೈ 2 ಅಥವಾ 3 ರಂದು ಪ್ರಧಾನಿ ಮೋದಿ ಚರ್ಚೆಗೆ ಪ್ರತಿಕ್ರಿಯಿಸುವ ನಿರೀಕ್ಷೆಯಿದೆ. ಬಳಿಕ ಎರಡೂ ಸದನಗಳು ಮುಂದೂಡಿಕೆಯಾಗಲಿದ್ದು ಕೇಂದ್ರ ಬಜೆಟ್ ಮಂಡನೆಗಾಗಿ ಜುಲೈ 22 ರಂದು ಮತ್ತೆ ಸೇರಲಿವೆ.
Sharing my remarks at the start of the first session of the 18th Lok Sabha. May it be a productive one.https://t.co/Ufz6XDa3hZ
ಮೋದಿ ಪ್ರತಿಕ್ರಿಯೆ:
ಸಂಸತ್ ಪ್ರವೇಶಿಸುವ ಮುನ್ನ 18ನೇ ಲೋಕಸಭೆ ಅಧಿವೇಶನ ಮೊದಲ ದಿನದ ಹಿನ್ನೆಲೆ ಕಲಾಪಕ್ಕೂ ಮುನ್ನ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ, ಇದು ಅದ್ಭುತವಾದ ದಿನವಾಗಿದೆ. ಸ್ವಾತಂತ್ರ‍್ಯದ ನಂತರ ಮೊದಲ ಬಾರಿಗೆ, ನಮ್ಮದೇ ಹೊಸ ಸಂಸತ್ತಿನ ಕಟ್ಟಡದಲ್ಲಿ ಪ್ರಮಾಣ ವಚನ ಸಮಾರಂಭ ನಡೆಯುತ್ತಿದೆ. ಇದು ಹಳೆಯ ಸಂಸತ್ತಿನ ಕಟ್ಟಡದಲ್ಲಿ ನಡೆಯುತ್ತಿತ್ತು. ಈ ಮಹತ್ವದ ದಿನದಂದು, ಹೊಸದಾಗಿ ಚುನಾಯಿತರಾದ ಎಲ್ಲಾ ಸಂಸದರಿಗೆ ನಾನು ಹೃತ್ಪೂರ್ವಕ ಸ್ವಾಗತ ಕೋರುತ್ತೇನೆ ಎಂದು ಹೇಳಿದರು.
ಮುಂದುವರಿದು 18ನೇ ಲೋಕಸಭೆ ಕಲಾಪ ಆರಂಭವಾಗುತ್ತಿದ್ದು, ವಿಶ್ವದ ಅತಿದೊಡ್ಡ ಚುನಾವಣೆಯನ್ನು ಅತ್ಯಂತ ಅದ್ಧೂರಿ ಮತ್ತು ವೈಭವಯುತವಾಗಿ ನಡೆಸಲಾಯಿತು. ಈ ಚುನಾವನೆಯು ಬಹಳ ಮಹತ್ವದ್ದಾಗಿತ್ತು. ದೇಶದ ಜನರು ಸತತ 3ನೇ ಬಾರಿಗೆ ಸೇವೆ ಸಲ್ಲಿಸಲು ಸರ್ಕಾರಕ್ಕೆ ಅವಕಾಶ ನೀಡಿದ್ದಾರೆ ಎಂದು ಶ್ಲಾಘಿಸಿದರು.
ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದ ದೆಹಲಿ ಸೇವಾ ಮಸೂದೆ, ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ, ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಮಸೂದೆ ಮತ್ತು ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅನುಮೋದನೆ ನೀಡಿದ್ದು ಹೊಸ ಕಾನೂನುಗಳಾಗಿ ಮಾರ್ಪಟ್ಟಿವೆ.
ದೆಹಲಿ ಸೇವಾ ಕಾಯ್ದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ಬಳಿಕ ಆಪ್‌ಗೆ ಅತಿದೊಡ್ಡ ಹಿನ್ನಡೆಯಾಗಿದೆ. ಲೋಕಸಭೆಯಲ್ಲಿ (Parliament) ಬೆಂಬಲ ಇಲ್ಲದ ಹಿನ್ನೆಲೆ ರಾಜ್ಯಸಭೆಯಲ್ಲಿ ಇದನ್ನ ತಡೆಯಲು ಆಪ್ ಸರ್ಕಾರ ಬಹಳಷ್ಟು ಪ್ರಯತ್ನಿಸಿತ್ತು, ವಿರೋಧ ಪಕ್ಷಗಳ ವಿಶ್ವಾಸ ಗಳಿಸುವ ಪ್ರಯತ್ನ ಮಾಡಿತ್ತು. ಆದಾಗ್ಯೂ ಮಸೂದೆಯ ಪರ 131 ಸದಸ್ಯರು ಬೆಂಬಲ ನೀಡಿದರು, ವಿರುದ್ಧವಾಗಿ 102 ಸಂಸದರು ಮತ ಚಲಾಯಿಸಿದ್ದರು. ಇದನ್ನೂ ಓದಿ: ನನಗೆ ಸದ್ಯ ಮುಸ್ಲಿಂ ಮತಗಳು ಬೇಡ: 15 ವರ್ಷದ ನಂತ್ರ ಬೇಕು ಎಂದು ಅಸ್ಸಾಂ ಸಿಎಂ ಹೇಳಿದ್ದೇಕೆ?
ರಾಷ್ಟ್ರ ರಾಜಧಾನಿಯ ಅಧಿಕಾರಿಗಳ ಅಮಾನತು ಮತ್ತು ವಿಚಾರಣೆಗಳಂತಹ ಕ್ರಮಗಳು ಕೇಂದ್ರದ ನಿಯಂತ್ರಣದಲ್ಲಿರುತ್ತವೆ ಎಂದು ಈ ಕಾನೂನು ಪ್ರಸ್ತಾಪಿಸುತ್ತದೆ. ದೆಹಲಿಯಲ್ಲಿ ಆಡಳಿತ ಅಧಿಕಾರಗಳ ಮೇಲೆ ನಿಯಂತ್ರಣ ಹೊಂದಲು ಪ್ರಯತ್ನಿಸಿದ್ದ ಆಪ್ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿತ್ತು. ಪ್ರಕರಣದ ಸುಧೀರ್ಘ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಚುನಾಯಿತ ಸರ್ಕಾರಕ್ಕೆ ಆಡಳಿತ ಮೇಲೆ ಅಧಿಕಾರ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದ ಕೋರ್ಟ್, ಕಾನೂನು ಸುವ್ಯವಸ್ಥೆ ಮತ್ತು ಭೂಮಿಯನ್ನ ಹೊರತುಪಡಿಸಿ ಎಲ್ಲ ಆಡಳಿತದ ಮೇಲೆ ನಿಯಂತ್ರಣ ಸಾಧಿಸಲು ಅಧಿಕಾರ ನೀಡಿತ್ತು. ಇದನ್ನೂ ಓದಿ: ಅಪ್ರಾಪ್ತೆಯರ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ, ಗ್ಯಾಂಗ್ ರೇಪ್‌ಗೆ 20 ವರ್ಷ ಜೈಲು – ಲೋಕಸಭೆಯಲ್ಲಿ 3 ಮಸೂದೆ ಮಂಡಿಸಿದ ಅಮಿತ್ ಶಾ
ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಮೋದಿ (Narendra Modi) ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಮಸೂದೆಯನ್ನ ಸಂಸತ್ ನಲ್ಲಿ ಇಡಲಾಗಿತ್ತು. ಮಣಿಪುರ ಸಂಘರ್ಷ ಮೇಲೆ ವಿಪಕ್ಷಗಳ ಗದ್ದಲದ ನಡುವೆ ಈ ಬಿಲ್ ಅನ್ನು ಪಾಸ್ ಮಾಡಿಕೊಳ್ಳುವಲ್ಲಿಯೂ ಕೇಂದ್ರ ಸರ್ಕಾರ ಯಶಸ್ವಿಯಾಗಿದ್ದು, ಮತ್ತೆ ದೆಹಲಿ ಆಡಳಿತದ ಮೇಲೆ ನಿಯಂತ್ರಣ ಸಾಧಿಸಿದೆ. ಇದನ್ನೂ ಓದಿ: ಪಾಕ್, ಚೀನಾಕ್ಕೆ ಠಕ್ಕರ್ – ಶ್ರೀನಗರದಲ್ಲಿ ಮೇಲ್ದರ್ಜೆಗೆರಿಸಿದ MiG- 29 ಯುದ್ಧ ವಿಮಾನ ನಿಯೋಜನೆ
ನಿಯಮ ಉಲ್ಲಂಘಿಸಿದ್ರೆ 250 ಕೋಟಿ ದಂಡ:
ವೈಯಕ್ತಿಕ ಡೇಟಾ ಸಂರಕ್ಷಣಾ ಕಾನೂನು ನಾಗರಿಕರ ಡಿಜಿಟಲ್ ಗೌಪ್ಯತೆ ಕಾಪಾಡುವ ದೇಶದ ಮೊದಲ ಕಾನೂನು ಇದಾಗಿದೆ. ಖಾಸಗಿ ಸಂಸ್ಥೆಗಳು ಮತ್ತು ಸರ್ಕಾರವು ನಾಗರಿಕರ ಡೇಟಾ ಬಳಕೆಗೆ ಮಾರ್ಗಸೂಚಿಗಳನ್ನ ಹೊಂದಿಸುವ ಗುರಿಯನ್ನ ಹೊಂದಿದೆ. ವೈಯಕ್ತಿಕ ದತ್ತಾಂಶಗಳ ರಕ್ಷಣೆಯ ನಿಯಮಗಳನ್ನು ಉಲ್ಲಂಘಿಸಿದರೆ ಅಥವಾ ಮಾಹಿತಿ ಕಾಪಾಡುವಲ್ಲಿ ವಿಫಲರಾದರೆ ಕಂಪನಿಗಳು ದಂಡ ತೆರಬೇಕಾಗುತ್ತದೆ. ವಿವಿಧ ಲೋಪಗಳಿಗೆ 50 ಕೋಟಿಯಿಂದ 250 ಕೋಟಿ ರೂ.ವರೆಗೂ ದಂಡ ವಿಧಿಸಬಹುದು. ಡೇಟಾ ಉಲ್ಲಂಘನೆಗಾಗಿ ಎರಡಕ್ಕಿಂತ ಹೆಚ್ಚು ದಂಡದ ಪ್ರಕರಣಗಳ ನಂತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನ ನಿರ್ಬಂಧಿಸುವ ಅಧಿಕಾರವನ್ನೂ ಸರ್ಕಾರಕ್ಕೆ ನೀಡಲಿದೆ.
ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಹೊಸ ಕಾನೂನು, ಶಾಲಾ–ಕಾಲೇಜು ಪ್ರವೇಶಕ್ಕೆ, ಚಾಲನಾ ಪರವಾನಗಿ ಪಡೆಯಲು, ಸರ್ಕಾರಿ ನೌಕರಿಯ ನೇಮಕಾತಿಗೆ, ಮತದಾರರ ಪಟ್ಟಿ ಸಿದ್ಧಪಡಿಸಲು, ಆಧಾರ್ ಸಂಖ್ಯೆ ನೀಡಲು ಹಾಗೂ ವಿವಾಹ ನೋಂದಣಿ ಸಂದರ್ಭದಲ್ಲಿ ಜನನ ಪ್ರಮಾಣ ಪತ್ರವನ್ನ ಏಕೈಕ ದಾಖಲೆಯಾಗಿ ಬಳಸಲು ಈ ತಿದ್ದುಪಡಿ ಅವಕಾಶ ಮಾಡಿಕೊಡಲಿದೆ. ಕಾಯ್ದೆ ಪರಿಣಾಮವಾಗಿ ಜನನ ಮತ್ತು ಮರಣಗಳ ಕುರಿತು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ದತ್ತಾಂಶ ಸಂಗ್ರಹವಾಗಲಿದೆ. ಇದರ ಆಧಾರದಲ್ಲಿ ನಾಗರಿಕ ಸೇವೆ, ಸಾಮಾಜಿಕ ಸವಲತ್ತು, ಡಿಜಿಟಲ್ ನೋಂದಣಿಯ ಸಮರ್ಪಕ, ಪಾರದರ್ಶಕ ಜಾರಿ ಸಾಧ್ಯವಾಗಲಿದೆ.
ಜನ್ ವಿಶ್ವಾಸ್ ಕಾನೂನು ದಂಡಗಳನ್ನು ಪೆನಾಲ್ಟಿಗಳಾಗಿ ಪರಿವರ್ತಿಸುತ್ತದೆ. ಅಂದ್ರೆ ಶಿಕ್ಷೆಗಳನ್ನ ನಿರ್ವಹಿಸಲು ನ್ಯಾಯಾಲಯದ ಪ್ರಾಸಿಕ್ಯೂಷನ್ ಅಗತ್ಯವಿಲ್ಲ. ಇದು ಅನೇಕ ಅಪರಾಧಗಳಿಗೆ ಜೈಲು ಶಿಕ್ಷೆಯನ್ನು ತೆಗೆದುಹಾಕಿದೆ. ಅಲ್ಲದೇ ಪೋಸ್ಟ್ ಆಫೀಸ್ ಆಕ್ಟ್-1898ರ ಅಡಿಯಲ್ಲಿ ಎಲ್ಲಾ ಅಪರಾಧಗಳನ್ನ ತೆಗೆದುಹಾಕಲಾಗುತ್ತಿದೆ. ಯಾವುದೇ ಔಷಧಿ ಖರೀದಿಸಿದಾಗ, ಅದು ಕೆಲಸ ಮಾಡುತ್ತದೆ ಮತ್ತು ನಮಗೆ ಹಾನಿ ಮಾಡುವುದಿಲ್ಲ ಎಂದು ಸರ್ಕಾರವು ಪರಿಶೀಲಿಸಿದೆ ಎಂದು ನಾವು ಭಾವಿಸುತ್ತೇವೆ. ಆದರೆ ಪ್ರಾಸ್ತಾವಿಕ ತಿದ್ದುಪಡಿಗಳು ಗುಣಮಟ್ಟವಿಲ್ಲದ ಔಷಧಿಗಳಿಗೆ ಅವಕಾಶ ನೀಡುವುದರ ಜೊತೆಗೆ ಅಡ್ಡಪರಿಣಾಮಗಳಿಗೆ ಶಿಕ್ಷೆ ಕಡಿಮೆ ಮಾಡುತ್ತದೆ. ಇದು ದೊಡ್ಡ ಉದ್ಯಮಿಗಳಿಗೆ ಪ್ರಯೋಜನ ನೀಡುತ್ತದೆ ಆದರೆ ನಮ್ಮೆಲ್ಲರಿಗೂ ಹಾನಿ ಮಾಡುತ್ತದೆ. ಇದು ಅತಿ ಅಪಾಯಕಾರಿ ಕಾನೂನು ಎಂದು ಹಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ಮಣಿಪುರದ ಪರಿಸ್ಥಿತಿಯ (Manipur Violence) ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಮಾತನಾಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸುತ್ತಿವೆ. ಆದ್ರೆ ಈವರೆಗೂ ಪ್ರಧಾನಿ ಮೋದಿ ಮಾತನಾಡುವ ಗೋಜಿಗೆ ಹೋಗಿಲ್ಲ. ಇತ್ತ ಮಣಿಪುರದ ಬಗ್ಗೆ ಸದನದಲ್ಲಿ ಚರ್ಚೆಗೂ ಅವಕಾಶ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಂತಹದ್ದೊಂದು ನಿರ್ಧಾರಕ್ಕೆ ವಿಪಕ್ಷಗಳು ಬಂದಿವೆ.
ಅವಿಶ್ವಾಸ ನಿರ್ಣಯ ಮಂಡನೆಯಾದರೆ ಆ ಬಗ್ಗೆ ಚರ್ಚೆಯಾಗಬೇಕಾಗುತ್ತದೆ. ಇದು ಸರ್ಕಾರಕ್ಕೆ ಮುಜುಗರ ಸೃಷ್ಠಿಸಬಹುದು, ಹೀಗಾಗಿ ಮಣಿಪುರದ ಚರ್ಚೆಗೆ ಸರ್ಕಾರ ಒಪ್ಪಿಕೊಳ್ಳಬಹುದು ಎನ್ನುವ ಲೆಕ್ಕಚಾರ ಹಾಕಿರುವ ವಿಪಕ್ಷಗಳು ಇಂದಿನ ಸಭೆಯಲ್ಲೇ ಅವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ಮಾತುಕತೆ ನಡೆಸಿವೆ. ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಸಿಕ್ಕಿ ಬೀಳುತ್ತಲೇ 5,000 ರೂ. ಲಂಚವನ್ನು ಜಗಿದು ನುಂಗಿದ ಕಂದಾಯ ಅಧಿಕಾರಿ
ಸಂಸತ್ತಿನ ಮುಂಗಾರು ಅಧಿವೇಶನ ಮಂಗಳವಾರವಾದ ಇಂದು 4ನೇ ದಿನಕ್ಕೆ ಕಾಲಿಟ್ಟಿದ್ದು, ಮಣಿಪುರದಲ್ಲಿ ಜನಾಂಗೀಯ ಸಂಘರ್ಷ, ಗುಂಪೊಂದು ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡಬೇಕು. ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ಲೋಕಸಭೆಯಲ್ಲಿ ಹೇಳಿಕೆ ನೀಡಬೇಕು ಎಂದು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದು, ಅಧಿವೇಶನವು ಹಲವು ಬಾರಿ ಮುಂದೂಡಿಕೆ ಕಂಡಿದೆ.
– ಭಾರತ ಎಂದು ಹೆಸರಿದ್ದ ಮಾತ್ರಕ್ಕೆ ಅದು ಭಾರತವಾಗೋದಿಲ್ಲ ಎಂದ ಪ್ರಧಾನಿ
ನವದೆಹಲಿ: ಈಸ್ಟ್ ಇಂಡಿಯಾ ಕಂಪನಿ, PFI, ಇಂಡಿಯನ್ ಮುಜಾಹಿದೀನ್‌ನಲ್ಲೂ ಭಾರತ ಎನ್ನುವ ಪದವಿದೆ. ಭಾರತ ಎಂದು ಹೆಸರಿದ್ದ ಮಾತ್ರಕ್ಕೆ ಅದು ಭಾರತವಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದರು.
ಮಣಿಪುರದಲ್ಲಿ (Manipur) ನಡೆಯುತ್ತಿರುವ ಜನಾಂಗೀಯ ಸಂಘರ್ಷಕ್ಕೆ ಸಂಬಂಧಿಸಿದಂತೆ ಸಂಸತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದು, ಸಂಸತ್ ಅಧಿವೇಶನದಲ್ಲಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಸಂಸದೀಯ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ಮೋದಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಸಭೆಯಲ್ಲಿ ಬಿಜೆಪಿ ಸಂಸದರನ್ನ ಉದ್ದೇಶಿಸಿ ಮಾತನಾಡುತ್ತಾ, ಇಂತಹ ದಿಕ್ಕು ತೋಚದ ವಿರೋಧವನ್ನ ನಾನೆಂದೂ ನೋಡಿಲ್ಲ ಎಂದರಲ್ಲದೇ ಈಸ್ಟ್ ಇಂಡಿಯಾ ಕಂಪನಿ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಂತಹ ಹೆಸರುಗಳನ್ನ ಪ್ರಸ್ತಾಪಿಸಿ, ಕೇವಲ ದೇಶದ ಹೆಸರನ್ನು ಬಳಸಿಕೊಂಡು ಜನರನ್ನ ದಾರಿತಪ್ಪಿಸಲು ಸಾಧ್ಯವಿಲ್ಲ. ಜನರ ಬೆಂಬಲದೊಂದಿಗೆ 2024ರ ಚುನಾವಣೆಯಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಾಂವಿಧಾನಿಕ ಜವಾಬ್ದಾರಿ, ಹೊಣೆಗಾರಿಕೆಯಿಂದ ಮೋದಿ ಸರ್ಕಾರ ಓಡಿ ಹೋಗುವಂತಿಲ್ಲ: ಖರ್ಗೆ ಟೀಕೆ
ಮುಂದಿನ ಅವಧಿಯಲ್ಲಿ ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕ ದೇಶವಾಗಿ ಬೆಳೆಯಲಿದೆ. 2024ರ ಚುನಾವಣೆಯಲ್ಲೂ ಬಿಜೆಪಿ ಎನ್‌ಡಿಎ ಬೆಂಬಲದೊಂದಿಗೆ ಅಧಿಕಾರಕ್ಕೆ ಬರಲಿದೆ. ಪ್ರತಿಪಕ್ಷಗಳು ಚದುರಿಹೋಗಿವೆ ಮತ್ತು ಹತಾಶವಾಗಿವೆ. ನಾವು ಹೆಚ್ಚು ಕಾಲ ಅಧಿಕಾರದಲ್ಲಿ ಇರಬಾರದು ಎಂಬುದು ಪ್ರತಿಪಕ್ಷಗಳ ಧೋರಣೆ ಇದ್ದಂತೆ ಕಾಣುತ್ತಿದೆ ಎಂದು ಪ್ರಧಾನಿ ಹೇಳಿದರು.
ನವದೆಹಲಿ: ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಮಣಿಪುರ ಹಿಂಸಾಚಾರದ (Manipur Violence) ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ದೇಶದ ಜನತೆಗೆ ಭರವಸೆ ನೀಡುತ್ತೇನೆ. ಪ್ರಕರಣದ ತಪ್ಪಿತಸ್ಥರನ್ನ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಕಾನೂನು ತನ್ನ ಎಲ್ಲಾ ಶಕ್ತಿಯೊಂದಿಗೆ ತನ್ನ ಕ್ರಮ ತೆಗೆದುಕೊಳ್ಳುತ್ತದೆ. ಮಣಿಪುರದ ಸಹೋದರಿಯರ ಜೊತೆಗೆ ನಡೆದ ಘಟನೆ ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ರಾಜಸ್ಥಾನ, ಮಣಿಪುರ ಅಥವಾ ಛತ್ತೀಸ್‌ಗಢ ಆಗಿರಲಿ, ನಮ್ಮ ಎಲ್ಲಾ ಮಹಿಳೆಯರಿಗೆ ರಕ್ಷಣೆ ನೀಡಲು ಕಠಿಣ ಕಾನೂನು ಜಾರಿ ಮಾಡಲು ನಾನು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ತಿಳಿಸುತ್ತೇನೆ. ರಾಜಕೀಯಕ್ಕಿಂತ ಮಿಗಿಲಾಗಿ ಮಹಿಳೆಯರ ರಕ್ಷಣೆ ಬಗ್ಗೆ ನಾವು ಚಿಂತಿಸಬೇಕು ಎಂದು ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುಂಚಿತವಾಗಿ ಪ್ರಧಾನಿ ಮೋದಿ ಹೇಳಿದರು. ಇದನ್ನೂ ಓದಿ: 2002 ರ ಗುಜರಾತ್ ಗಲಭೆ ಪ್ರಕರಣ – ತೀಸ್ತಾ ಸೆಟಲ್ವಾಡ್‌ಗೆ ಸುಪ್ರೀಂ ಜಾಮೀನು
ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಮಣಿಪುರ ಸಿಎಂ ಬಿರೇನ್ ಸಿಂಗ್‌ಗೆ ದೂರವಾಣಿ ಮೂಲಕ ಮಾತನಾಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಸೂಚನೆ ಕೊಟ್ಟಿದ್ದಾರೆ.
ಮಣಿಪುರದ ಗುಡ್ಡಗಾಡು ಪ್ರದೇಶಗಳಲ್ಲಿ ಇಬ್ಬರು ಮಹಿಳೆಯರನ್ನ ಬೆತ್ತಲೆಯಾಗಿ ಮೆರವಣಿಗೆ ಮಾಡುವ ಎರಡು ತಿಂಗಳ ಹಳೆಯ ವೀಡಿಯೊ ಬುಧವಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದು ಪ್ರಕರಣ ಸಾಕಷ್ಟು ಗಂಭೀರತೆ ಪಡೆದುಕೊಂಡಿದೆ. ಈಗಾಗಲೇ ಆರೋಪಿಯನ್ನ ಬಂಧಿಸಲಾಗಿದೆ.
ನವದೆಹಲಿ: ಲಂಡನ್‌ನಲ್ಲಿ (London) ರಾಹುಲ್ ಗಾಂಧಿ (Rahul Gandhi) ನೀಡಿದ ಹೇಳಿಕೆ ಇಂದು ಸಂಸತ್ ಅಧಿವೇಶನವನ್ನು (Parliament Session) ಬಲಿ ತೆಗೆದುಕೊಂಡಿದೆ. ಎರಡನೇ ಅವಧಿಯ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಸದನ ಆರಂಭವಾಗುತ್ತಿದ್ದಂತೆ ಗದ್ದಲಕ್ಕೆ ವೇದಿಕೆಯಾಯಿತು.
ರಾಹುಲ್ ಗಾಂಧಿ ಲಂಡನ್‌ನಲ್ಲಿ ನೀಡಿದ ಹೇಳಿಕೆಯನ್ನು ಪ್ರಸ್ತಾಪಿಸಿದ ಬಿಜೆಪಿ (BJP) ನಾಯಕರು, ರಾಹುಲ್ ಗಾಂಧಿ ದೇಶದ ಜನರ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹಾಗೂ ಪಿಯೂಷ್ ಗೋಯಲ್ (Piyush Goyal) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೋದಿ ಅಂಡರ್‌ವರ್ಲ್ಡ್ ಡಾನ್‌ಗಳಿಗೆ ತಲೆಬಾಗಿ, ಕೈ ಮುಗಿದಿರೋದು ನಾಚಿಗೇಡಿನ ಸಂಗತಿ: HDK
ಬಿಜೆಪಿಗೆ ತಿರುಗೇಟು ನೀಡುವ ಪ್ರಯತ್ನ ಮಾಡಿದ ಕಾಂಗ್ರೆಸ್ (Congress) ನಾಯಕರು, ಅದಾನಿ ಕಂಪನಿಗಳ ಕುರಿತು ನೀಡಿದ ಹಿಂಡನ್ ಬರ್ಗ್ ಆಧರಿಸಿ ಜಂಟಿ ಸದನ ಸಮಿತಿ ರಚಿಸಬೇಕು. ಗ್ಯಾಸ್ ಸೇರಿದಂತೆ ಅಗತ್ಯ ಬೆಲೆಗಳ ಏರಿಕೆ ಹಾಗೂ ವಿಪಕ್ಷ ನಾಯಕರ ಮೇಲೆ ತನಿಖಾ ಸಂಸ್ಥೆಗಳ ದಾಳಿಯ ಬಗ್ಗೆ ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಚುನಾವಣೆ ಖರ್ಚಿಗಾಗಿ ವೈಎಸ್‌ವಿ ದತ್ತಗೆ 101 ರೂ. ನೀಡಿದ ಅಭಿಮಾನಿ
ಸದನ ಆರಂಭವಾಗುತ್ತಿದ್ದಂತೆ ಗದ್ದಲ ಏರ್ಪಟ್ಟ ಹಿನ್ನೆಲೆ ಮಧ್ಯಾಹ್ನ ಎರಡು ಗಂಟೆಗೆ ಕಲಾಪ ಮುಂದೂಡಲಾಯಿತು. ಭೋಜನ ವಿರಾಮದ ಬಳಿಕವೂ ಗದ್ದಲ ಮುಂದುವರಿದ ಕಾರಣ ಕಲಾಪವನ್ನು ನಾಳೆಗೆ ಮುಂದೂಡಲಾಯಿತು. ಇದನ್ನೂ ಓದಿ: ಮಾರ್ಚ್ 17ರಂದು ಸರಕು ಸಾಗಣೆ ವಾಹನಗಳು ಬಂದ್